Wednesday, November 16, 2011

ವಿನೋದ್ ಮೆಹ್ತಾ ಆತ್ಮಕತೆ ಮತ್ತು ಅದರ ಅನುವಾದ

ನಲವತ್ತು ವರ್ಷಗಳ ಸುದೀರ್ಘ ಕೆಲಸದ ನಂತರವೂ ಒಂದೇ ಒಂದು ಪ್ರೊಮೋಷನ್ ಇಲ್ಲದೆ ಇರುವ ಪತ್ರಕರ್ತ ಬಹುಶಃ  ವಿನೋದ್ ಮೆಹ್ತಾ ಒಬ್ಬರೇ ಇರಬೇಕು. ಕಾರಣ ಇಷ್ಟೆ, ಅವರು ನಾಲ್ಕು ದಶಕಗಳ ಹಿಂದೆ ಪತ್ರಿಕೋದ್ಯಮಕ್ಕೆ ಕಾಲಿಟ್ಟದ್ದು ಸಂಪಾದಕರಾಗಿ. ಈಗಲೂ ಅದೇ ಸ್ಥಾನದಲ್ಲಿದ್ದಾರೆ. ಅವರು ಪತ್ರಿಕೆಗಳನ್ನು ಬೆಳೆಸಿದ ರೀತಿ, ಲಕ್ಷಾಂತರ ಓದುಗ ಸಮೂಹದ ಯೋಚನೆಗಳನ್ನು ಪ್ರಭಾವಿಸಿದ ಪರಿ ಮಾತ್ರ ರೋಚಕ.
ಅವರ ಆತ್ಮಕತೆ 'Lucknow Boy A Memoir' ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಒಮ್ಮೆ ಓದಲು ಶುರು ಹಚ್ಚಿದರೆ, ಪುಸ್ತಕ ಮುಗಿಸುವ ತನಕ ಅದನ್ನು ಬಿಡುವುದು ತೀರಾ ಕಷ್ಟ. ನೀವು ಪತ್ರಕರ್ತರಾಗಿದ್ದಲ್ಲಿ, ಓದುವ ಹವ್ಯಾಸ ಇದ್ದಲ್ಲಿ, ನೀವು ಓದಲೇಬೇಕಾದ ಪುಸ್ತಕ ಇದು.
ಇತ್ತೀಚೆಗೆ ಅತ್ಯಂತ ಹೆಚ್ಚು ಸುದ್ದಿಯಲ್ಲಿರುವ ಪತ್ರಕರ್ತರೊಬ್ಬರು ಆ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡುತ್ತೇನೆಂದು ಹೆದರಿಸಿದ್ದಾರೆ. ಮೆಹ್ತಾ ಮತ್ತು ‘ಆ ಪತ್ರಕರ್ತ’ರಿಗೂ ಅಜಗಜಾಂತರ ವ್ಯತ್ಯಾಸ. ಯಾವ ಕೋನದಿಂದ ನೋಡಿದರೂ, ಇಬ್ಬರನ್ನು ಒಂದೇ ಕಡೆ ನೆನೆಸಿಕೊಳ್ಳಲೂ ಸಾಧ್ಯವಿಲ್ಲ.
ಅವರ ತರ್ಜುಮೆಗಾಗಿ ಕಾಯದೆ, ಮೂಲ ಪ್ರತಿಯನ್ನೇ ಓದಿದರೆ ಸೂಕ್ತ ಎನಿಸುತ್ತದೆ. ಕಾರಣ ಇಷ್ಟೆ. ಅನುವಾದದಲ್ಲಿ ಮೂಲ ಭಾಷೆಯ ಸೊಗಡು, ಪನ್ ಎಲ್ಲವೂ ಮಾಯವಾಗಿಬಿಡುವ ಆತಂಕವಿದೆ. ಏಕೆಂದರೆ, ಅನುವಾದಕ್ಕೆ ಅನುಮತಿ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಳ್ಳುವ ಪತ್ರಕರ್ತರ ಅನುವಾದ ಕಲೆಗಾರಿಕೆ ಅವರ ಕೈಗೆಳಗೆ ಕೆಲಸ ಮಾಡುವ ಅನೇಕರಿಗೆ ಗೊತ್ತಿರುವ ಸಂಗತಿ. ಹೋಗಲಿ, ಹಟಕ್ಕೆ ಬಿದ್ದು (ಕಚೇರಿಯ ಬೇರೆ ಸಿಬ್ಬಂದಿ ಸಹಾಯವಿಲ್ಲದೆ) ಆ ಮಹಾಶಯರೇ ಸಂಪೂರ್ಣ ಕೃತಿಯನ್ನು ಕನ್ನಡಕ್ಕೆ ತಂದರೂ ಅದು ಮೂಲ ಕೃತಿಗೆ ನ್ಯಾಯ ಒದಗಿಸುತ್ತದೆ ಎಂದು ಹೇಳಲಾಗುವುದಿಲ್ಲ. ಏಕೆಂದರೆ, ಎರಡು ಮೂರು ದಿನಗಳ ಹಿಂದೆ, ಅವರು ತಮ್ಮ ಅಂಕಣವೊಂದರಲ್ಲಿ ಮೂಲ ಕೃತಿಯ ಒಂದೇ ಒಂದು ಪ್ಯಾರವನ್ನು ಅನುವಾದ ಮಾಡಲು ಹೋಗಿ ಎಡವಿದ್ದಾರೆ. ಹಸಿ ಹಸಿ ತಪ್ಪು ಮಾಡಿದ್ದಾರೆ.
ಇವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡದ್ದು, ಮೆಹ್ತಾ ಅವರು ಪತ್ರಕರ್ತರು ಉಡುಗೊರೆಗಳನ್ನು ಪಡೆಯಬೇಕೆ ಎನ್ನುವ ವಿಚಾರದ ಬಗ್ಗೆ ಬರೆದದ್ದನ್ನು. ಮೆಹ್ತಾ ಉಡುಗೊರೆಗಳನ್ನು ತಿರಸ್ಕರಿಸುತ್ತಾರೆ. ಇತರೆ ಪತ್ರಕರ್ತರೂ, ತಮ್ಮ ವೃತ್ತಿ ಸ್ವಾತಂತ್ರ್ಯ ಕಾಪಾಡಿಕೊಳ್ಳಲು ಹಾಗೇ ಮಾಡಬೇಕೆಂದು ಬಯಸುತ್ತಾರೆ. (ಈ ಪ್ರಸ್ತುತ ವಿಚಾರದ ಬಗ್ಗೆ ಮಾತನಾಡಲು ಅಥವಾ ಬರೆಯಲು ಈ ಅನುವಾದಕರು ಎಷ್ಟರ ಮಟ್ಟಿಗೆ ಅರ್ಹರು ಎಂಬುದು ಬೇರೆ ಮಾತು.)
ಈಗ ಮೂಲ ಕೃತಿ ಮತ್ತು ಅವರ ಅನುವಾದವನ್ನು ಗಮನಿಸೋಣ.
Should a journalist take freebies? No. Absolutely Not. Pay your way. For the four decades I’ve been editor, I can claim, hand on heart, that I have never visited a restaurant or stayed in a hotel or travelled in an airline without paying the full bill.
ಪತ್ರಕರ್ತರ ಅನುವಾದ: ಪತ್ರಕರ್ತರಾದವರು ಗಿಫ್ಟ್ ಗಳನ್ನು ಸ್ವೀಕರಿಸಬಹುದಾ? ಅದಕ್ಕೆ ಮೆಹ್ತಾ ಹೇಳೋದೇನೆಂದರೆ – ಬಿಲ್ ಕುಲ್ ಕೂಡದು. ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ನಾನು ಕಳೆದ ನಲವತ್ತು ವರ್ಷಗಳಿಂದ ಸಂಪಾಕನಾಗಿದ್ದೇನೆ, ಎದೆ ಮೇಲೆ ಕೈಯಿಟ್ಟು ಹೇಳುತ್ತೇನೆ, ಯಾವುದೇ ಹೋಟೇಲ್ ನಲ್ಲಾಗಲಿ, ನನ್ನ ಹಣ ಕೊಡದೇ ಉಳಿದಿಲ್ಲ. ಆಹಾರ ಸೇವಿಸಿಲ್ಲ. ಬಿಟ್ಟಿಯಾಗಿ ಯಾವ ವಿಮಾನದಲ್ಲೂ ಪಯಣಿಸಿಲ್ಲ.
(ಈ ಮೇಲಿನ ವಾಕ್ಯದಲ್ಲಿ ಅನುವಾದ ಲೋಪ ಇದೆ ಎಂದು ಹೇಳಲು ಇದನ್ನು ಉದಾಹರಿಸುತ್ತಿಲ್ಲ. ಆಫ್ ಕೋರ್ಸ್ ಮೆಹ್ತಾ ಹೃದಯ ಮುಟ್ಟಿ ಹೇಳಿದರೆ, ಅನುವಾದಕರು ಎದೆ ಮುಟ್ಟಿ ಹೇಳುತ್ತಾರೆ. ಅದರಲ್ಲಿ ಅಂತಹ ಪ್ರಮಾದವೇನಿಲ್ಲ ಬಿಡಿ. ಯಾರೂ ಲಿಟರಲಿ ಹೃದಯ ಮುಟ್ಟಿ ಹೇಳಲಾಗದು. ಆದರೆ ಈ ಅನುವಾದಕರು ಅದೇ ಎದೆಯನ್ನು ಮುಟ್ಟಿಕೊಂಡು ಈ ಮೇಲಿನ ಮಾತುಗಳನ್ನು ತಮ್ಮ ವಿಷಯದಲ್ಲಿ ಹೇಳಿಕೊಳ್ಳಲು ಸಾಧ್ಯವೆ?)
ಮುಂದುವರಿದು ಮೆಹ್ತಾ ಹೇಳುತ್ತಾರೆ. Occasionally, the management makes a fuss and insists on waiving the charges. My escape from the crafty kindness is to joking protest, ‘This is an insult. If you are trying to bribe me, it has to be more than 6000 rupees’ (the usual bill at a five-star restaurant for two people) or ‘If you don’t let me pay I’ll never come again.”
ಅನುವಾದ: “ಈ ವಿಷಯವಾಗಿ ನನ್ನ ಮ್ಯಾನೇಜ್ ಮೆಂಟ್ ಕಿರಿಕಿರಿ ಮಾಡಿದ್ದುಂಟು. ಆಗ ನಾನು ನಗುನಗುತ್ತಲೇ ಪ್ರತಿಭಟಿಸಿದ್ದಿದೆ. “ಇದು ನಿಜಕ್ಕೂ ಅವಮಾನಕರ. ನೀವು ನನಗೆ ಲಂಚ ಕೊಡಬೇಕೆಂದು ನಿರ್ಧರಿಸಿದರೆ, ಆರೇಳು ಸಾವಿರ ರೂಪಾಯಿಗಿಂತ ಹೆಚ್ಚು ಕೊಡಿ. (ಪಂಚತಾರಾ ಹೋಟೆಲ್ ನಲ್ಲಿ ಇಬ್ಬರ ಊಟ-ತಿಂಡಿಗೆ ಇಷ್ಟೇ ಬಿಲ್ ಆಗುತ್ತದೆ.) ನನಗೆ ಹಣ ಕೊಡಲು ಒಪ್ಪದಿದ್ದರೆ ಇನ್ನೆಂದೂ ನಾನು ಹೊಟೇಲ್ ಗೆ ಹೋಗಲಾರೆ”.
ಈಗ ಸೂಕ್ಷ್ಮವಾಗಿ ಮೂಲ ಹಾಗೂ ಅನುವಾದವನ್ನು ಗಮನಿಸಿ. ಮೆಹ್ತಾ ಹೇಳ ಹೊರಟಿರುವುದು, ಹೊಟೇಲ್ ಖರ್ಚುಗಳ ಮನ್ನಾ ವಿಚಾರವಾಗಿ ಒತ್ತಾಯ ಮಾಡಿದಾಗ ಅವರು ತೀರಾ ಸಹಜ ತಮಾಷೆಯಿಂದಲೇ ಪ್ರತಿಭಟಿಸುತ್ತಾರೆ. “ಇದು ಅವಮಾನ. ನೀವು ನನಗೆ ಲಂಚ ಕೊಡುವ ಪ್ರಯತ್ನ ಮಾಡುವುದಾದರೆ, ನೀವು 6,000 ಕ್ಕಿಂತ ಹೆಚ್ಚು ಕೊಡಬೇಕಾಗುತ್ತದೆ. ನೀವು ನನಗೆ ಹಣ ಕೊಡಲು ಅವಕಾಶ ಮಾಡಿಕೊಡದಿದ್ದರೆ, ಮತ್ತೆಂದೂ ಇಲ್ಲಿಗೆ ಬರುವುದಿಲ್ಲ”.
ಆದರೆ ಹತ್ತಾರು ಪುಸ್ತಕಗಳನ್ನು ಅನುವಾದ ಮಾಡಿರುವ ಮಹಾಶಯರು ಅಸಂಬದ್ಧವಾಗಿ ‘ನಾನು ಇನ್ನೆಂದೂ ಹೋಟೆಲ್ ಗೆ ಹೋಗಲಾರೆ’ ಎಂದು ಅನುವಾದಿಸಿದ್ದಾರೆ. ಕನಿಷ್ಟ ತಮ್ಮ ಅಂಕಣಕ್ಕೆ ಅಗತ್ಯವಾದ ಅನುವಾದವನ್ನು ಅವರೇ ಮಾಡುತ್ತಾರೆಂದು ತಿಳಿಯೋದೆ ಆದರೆ, ಇದು ಅವರಿಂದಲೇ ಆಗಿರುವ ತಪ್ಪು ಗ್ರಹಿಕೆ ಮತ್ತು ತಪ್ಪು ಅನುವಾದ. ಇಂತಹ ಅನುವಾದ ಬೇಕಾ?

13 comments:

 1. ರಿಶೀಕೇಷNovember 16, 2011 at 1:38 PM

  ಯಾಕೆ ನೀವು ಆ ಸದರೀ ಪತ್ರಕರ್ತರ ಹೆಸರನ್ನು ಹೇಳದೆ ಸುಮ್ಮನೆ ಗಾಳಿಗೆ ಗುದ್ದು ಹಾಕುತ್ತೀರ?. ಅವರ ಹೆಸರನ್ನು ಹೇಳಲು ಧೈರ್ಯವಿಲ್ಲವೇ?.

  ಅನುವಾದ ಮಾಡುವಾಗ ಸಹಜವಾಗಿ ಮುಲಕೃತಿಯಲ್ಲಿರುವ ಭಾಷೆಯ ಸೊಗಡು ಅನುವಾದಿತ ಕೃತಿಯಲ್ಲಿರುವುದಿಲ್ಲ. ನಿಮಗೆ ಅದೆ ಏಕೆ ದೊಡ್ಡ ತಪ್ಪಿನ೦ತೆ ಕಾಣುತ್ತದೆ. ಇಲ್ಲಿ ಸ್ಪಷ್ಟವಾಗುವ ಸ೦ಗತಿಯೆ೦ದರೆ ಆ ಕೃತಿಯ ವಿಮರ್ಶೆಗಿ೦ತ ಆ ವ್ಯಕ್ರಿಯ ಮೇಲಿನ ದ್ವೇಶವೇ, ವೈರತ್ವವೇ ಹೆಚ್ಚಾಗಿ ಕಾಣುತ್ತದೆ.

  ಅವರು ಬರೆದದ್ದೆಲ್ಲಾ ಸತ್ಯ, ಶ್ರೇಷ್ಠ ಗುಣಮಟ್ಟದ್ದು ಎ೦ದು ಎಲ್ಲೂ ಹೇಳುತ್ತಿಲ್ಲ. ಆದರೆ ನಿಮ್ಮ ವಿಮರ್ಶೆ ಏಕಪಕ್ಷೀಯವಾಗಿದ್ದು ಅವರ ಬಗ್ಗೆ ನಿಮಗೆ ಇರುವ ಅಸಹನೆಯನ್ನು ಸಾರುತ್ತಿದೆ.

  ReplyDelete
 2. ಸಂಪಾದಕೀಯಕ್ಕೆ,
  "ವಿಶ್ವೇಶ್ವರ ಭಟ್ಟರು ವಿನೋದ ಮೆಹ್ತಾ ಅವರಿಗೆ ಸರಿಸಮ ಅಲ್ಲ.." ಅಂತ ಹೇಳೋದು ಇಲ್ಲಿ ಯಾಕೋ ಅಸಂಬದ್ಧ ಅನಿಸಿತು.ಯಾರೂ ಯಾರಿಗೂ ಸರಿಸಮ ಆಗೋಕೆ ಸಾಧ್ಯವೇ ಇಲ್ಲ ಅನಿಸುತ್ತೆ.ಹಾಗೆ ನೋಡಿದರೆ,ವಿನೋದ ಮೆಹ್ತಾ ಇನ್ಯಾರಿಗೋ ಸರಿಸಮ ಆಗಲು ಸಾಧ್ಯವಾಗಲಿಕ್ಕಿಲ್ಲ.ಆದರೆ ಪ್ರಶ್ನೆ ಇರೋದು,ಭಟ್ಟರು ಅನುವಾದಿಸಿದ ರೀತಿ ಮತ್ತು ಅನುವಾದಿಸುತ್ತಿರುವ ರೀತಿ ಸರಿಯೋ,ತಪ್ಪೋ ಅನ್ನೋದು ಮಾತ್ರ.ಖಂಡಿತ ಈ ಅನುವಾದವು ಜಾಳುಜಾಳಾಗಿದೆ.ಬಹುಶಃ ಅವಸರದ ಸಂತೆಯಲ್ಲಿ ಮೂರು ಮೊಳ ನೇಯ್ದ ಪರಿಣಾಮವಿದ್ದಿರಬಹುದು..
  ಅನುವಾದವೂ ಕೂಡ ಮೂಲ ಪ್ರಾಮಾಣಿಕತೆಯನ್ನೇ ಬಯಸುತ್ತದೆ ಅನ್ನುವದರಲ್ಲಿ ಎರಡು ಮಾತಿಲ್ಲ.ಅದನ್ನು ಒಪ್ಪಿಕೊಳ್ಳೋದು,ಬಿಡೋದು ಅನುವಾದಕರ ಮರ್ಜಿ ಅನಿಸುತ್ತೆ...

  ReplyDelete
 3. You should bring this to the notice of Vinod Mehta

  ReplyDelete
 4. ಸರಿಯಾಗಿ ಹೇಳಿದ್ರಿ ಬಾಸ್..ಇಂತಹ ಅನುವಾದದಲ್ಲಿ ವಿಶೇಷ ಕರಾಮತ್ತು ತೋರಿಸುವಈ ಪತ್ರಕರ್ತ. ಪತ್ರಕರ್ತರು ಹಣ ಸ್ವೀಕರಿಸುವ ಬಗ್ಗೆ ಮಾತನಾಡುವ ಹಕ್ಕು ಕಳೆದುಕೊಂಡು ಬಿಟ್ಟಿದ್ದಾರೆ. ಮೊದಲು ಹಣ ತೆಗೆದುಕೊಳ್ಳುವ ಚಾಳಿ ಬಿಟ್ಟು ನಂತರ ಬರೆದರೆ ಉತ್ತಮ
  ವಿನಾಯಕ

  ReplyDelete
 5. ಸಂಪಾದಕೀಯ ದವರೆ,
  ವಿ ಭಟ್ರು ಭಾನಯಾನ ವನ್ನ ನಾನು ಓದಿ, ತಲೆ ಕೆರ್ಕೊಂಡು ಕೊನೆಗೆ ಮೂಲ ಲೇಖನ ಓದಬೇಕಾಯಿತು. ಆದರೆ ಅವರ ಎಲ್ಲಾ ಲೇಖನ ಗಳು ನೀವು ಹೇಳುವಷ್ಟು ಕೆಟ್ಟದ್ದು ಇಲ್ಲ. ನಿಮಗೆ ಅವರನ್ನು ಟೀಕಿಸಲು ಒಂದು ಕಾರಣ ಬೇಕಿತ್ತು ಅಂತ ತೋರುತಿದೆ ಅಷ್ಟೇ.
  ಕೇವಲ ಕೆಲವರನ್ನು ಗುರಿಯಾಗಿಸಿ ಅವಹೇಳನ ಕಾರಿಯಾಗಿ ಬರೆಯೋಕೆ ಬೇರೆ ಬ್ಲಾಗು ಗಳು ಇದ್ದಾವೆ. ನಿಮ್ಮದು ಅದೇ ದಾರಿಯಲ್ಲಿ ಹೋಗದೆ ಇರಲಿ.
  (ಅಂದ ಹಾಗೆ ನಾನು Lucknow Boy A Memoir ಮೂಲ ಲೇಖನ ಓದುತ್ತಾ ಇದ್ದೇನೆ. ಚೆನ್ನಾಗಿದೆ. )
  - ಬಾಲು.

  ReplyDelete
 6. hoteuriya barahara digen thinni

  thanks

  ReplyDelete
 7. with what i read from above paragraphs - yes, the translator has missed the punch and sarcasm towards mgmt in that joke, and Translator has totally communicated it in a different way - that apparently tells - as if he demanded for more jokingly - That;s wrong - the intent is " If we go to hotel - i will pay the bill - else i wont come "... mistakes happen .. but i did not undertand " Vishesh Karammattu " - if translator is doing that then it is - putting meaningless gold wrrapers around a book - which may or may not be good...

  ReplyDelete
 8. I agree with Rishekesh..

  Yake mosaralli kallu hudukuttira? yake hotte uri? aa hotte uri nimmanne sudatte sir.. neevu avaru belada ettarakke hogi. adralli kushi iratte. sumne heege madta idre halagodu neeve.. avaralla

  ReplyDelete
 9. Wonderful book indeed. Pl write on the book?
  Let the personal bias and the translations part remain at the other corner...
  Kallare

  ReplyDelete
 10. ಅವರು ಎರಡು ವಾರ "ವಿನೋದ್ ಮೆಹ್ತಾ" ಬಗ್ಗೆ ಬರೆದರು...!!!!..ನಿಮಗೆ ಏನು ಆಗಿದೆಯೋ ಗೊತ್ತಿಲ್ಲ....!!!
  "ಸ್ವಾಮಿ ಒಂದು ಕೃತಿ ಕನ್ನಡಕ್ಕೆ ಬಾಶಾಂತರ ಗೊಂಡರೆ...!!!!.ಕೆಲವೊಂದ ಕಡೆ ಕೆಲವು ವ್ಯತಾಸಗಳಾಗುತ್ತವೆ...!!!.ಹಾಗು ಪ್ರತಿಯೊಂದು ಭಾಷೆಗೂ ತನ್ನದೇ ಆದ ಭಾವನೆಗಳಿವೆ...!!. ಹಾಗೆ ಬಾಷಾಂತರಗೊಂಡ ಕೃತಿಯಲ್ಲಿ ಸ್ವಲ್ಪ ವ್ಯತಾಸವಾಗುವುದು ಸಹಜ...!!!' ಕನ್ನಡದ ಎಲ್ಲರೂ ENGLISH ಪುಸ್ತಕಗಳನ್ನು ಓದುವುದಿಲ್ಲ...!!!. ಇಂತಹ ಸಂದರ್ಬದಲ್ಲಿ ಹೆಸರಾಂತ ಪತ್ರಕರ್ತರೊಬ್ಬರು ಆ ಪುಸ್ತಕವನ್ನು ಕನ್ನಡಕ್ಕೆ ತರುತ್ತೆನಂದರೆ ನಿಮ್ಮ ತಕರಾರು ಯಾಕೋ....!!!!. ಹಾಗು ನಿಮ್ಮ ಇ ಲೇಖನದ ಉದ್ದೇಶವೇನೋ ತಿಳಿಯುತ್ತಿಲ್ಲ....!!!!"

  ReplyDelete
 11. ಅವರ ಮಾತಿನ ಅರ್ಥ ಇದು. ಒಂದೊಂದ್ಸಲ ಹೊಟೆಲಿನವರು ನೀವು ದುಡ್ಡು ಕೊಡಹೇಕಾಗಿಲ್ಲ, ನಿಮ್ಮ ವಾಸ್ತವ್ಯ ಉಚಿತ ಅಂತೆಲ್ಲ ರಗಳೆ ಮಾಡೋದುಂಟು. ಆಗೆಲ್ಲ ನಾನು ತಮಾಷೆಯಾಗಿ ಪ್ರತಿಭಟಿಸುತ್ತಾ ಆರು ಸಾವಿರ ರುಪಾಯಿ ಚಿಲ್ಲರೆ ಮೊತ್ತದ ಆಮಿಷವನ್ನೆಲ್ಲ ತೋರಿಸಬೇಡಿ. ಕೊಡೋದಾದರೆ ದೊಡ್ಡ ಮೊತ್ತ ಕೊಡಿ ಅಂತಲೋ, ನೀವು ದುಡ್ಡು ತಗೊಳ್ಳದೇ ಹೋದ್ರೆ ಇನ್ಮುಂದೆ ನಿಮ್ಮ ಹೊಟೆಲಿಗೆ ಕಾಲಿಡೋಲ್ಲ ಅಂತಲೋ ಹೇಳೋದುಂಟು.
  (Occasionally, the management makes a fuss and insists on waiving the charges. My escape from the crafty kindness is to joking protest, ‘This is an insult. If you are trying to bribe me, it has to be more than 6000 rupees’ (the usual bill at a five-star restaurant for two people) or ‘If you don’t let me pay I’ll never come again.”)

  ReplyDelete
 12. ಪ್ರಶಾಂತNovember 21, 2011 at 12:41 PM

  I do agree with Rishekesh.
  I liked the KP article on it.

  ReplyDelete
 13. ಹೆ ಹೆ ಗೂಗಲ್ ಟ್ರಾನ್ಸ್ಲೇಟ್ ಉಪಯೋಗಿಸಿ ಕೂಡಾ ಈಗ ಅನುವಾದ ಮಾಡಬಹುದು. ಒಂದು ಸ್ಯಾಂಪಲ್ ನೋಡಿ ;)

  "ಕೆಲವೊಮ್ಮೆ, ನಿರ್ವಹಣೆ ಒಂದು fuss ಮಾಡುತ್ತದೆ ಮತ್ತು ಆರೋಪಗಳನ್ನು waiving ಪಟ್ಟು ಹಿಡಿಯುತ್ತಾಳೆ. ವಂಚನೆಯ ದಯೆ ಇಂದ ನನ್ನ ತಪ್ಪಿಸಿಕೊಳ್ಳಲು ಜೋಕಿಂಗ್ ಪ್ರತಿಭಟನೆ ಮಾಡುವುದು, 'ಇದು ಅವಮಾನ ಮಾಡಿದಂತೆ. ನೀವು ನನಗೆ ಲಂಚ ಪ್ರಯತ್ನಿಸುತ್ತಿರುವ, ಅದು ಹೆಚ್ಚು 6000 ರೂಪಾಯಿ ಮಾಡಬೇಕು '(ಎರಡು ಜನರಿಗೆ ಪಂಚತಾರಾ ಹೋಟೆಲಿನಲ್ಲಿ ಸಾಮಾನ್ಯ ಬಿಲ್) ಅಥವಾ' ನೀವು ನನಗೆ ಪಾವತಿ ಅವಕಾಶ ಇದ್ದರೆ ಮತ್ತೆ ಮತ್ತೆ ಬರುತ್ತವೆ ಇಲ್ಲ."

  ReplyDelete