Monday, April 11, 2011

ವನ್ಯ ಜೀವಿ ಛಾಯಾಗ್ರಾಹಕರು ಪಕ್ಷಿ ಪೀಡಕರೇ?


ಭಾನುವಾರದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಒಂದು ಲೇಖನ ವನ್ಯಜೀವಿ ಛಾಯಾಗ್ರಾಹಕರಿಗೆ ನೋವುಂಟು ಮಾಡಿದೆ. ಕ್ರಿಯಾಶೀಲ ಬ್ಲಾಗರ್, ಹವ್ಯಾಸಿ ಛಾಯಾಗ್ರಾಹಕ ಶಿವು ಕೆ. ತಮ್ಮ ಛಾಯಾಕನ್ನಡಿ ಬ್ಲಾಗ್‌ನಲ್ಲಿ ಈ ಕುರಿತು ಬರೆದು ಪ್ರತಿಭಟನೆ ದಾಖಲಿಸಿದ್ದಾರೆ.

ಫೋಟೋ ಸುಖ... ಹಕ್ಕಿ ದುಃಖ ಎಂಬ ಲೇಖನ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಗೊಂಡಿದೆ. ಪತ್ರಕರ್ತ ಡಿ.ಎಂ.ಘನಶ್ಯಾಮ ಇದನ್ನು ಬರೆದಿದ್ದಾರೆ. ಘನಶ್ಯಾಮ ಅವರು ಸಹ ಒಳ್ಳೆಯ ಛಾಯಾಗ್ರಾಹಕರು. ವರದಿಗಾರನ ವೃತ್ತಿಯಲ್ಲಿದ್ದರೂ ಕ್ಯಾಮರಾ ಕೈ ಬಿಡದಷ್ಟು ಸೆಳೆತ ಇಟ್ಟುಕೊಂಡವರು. ಚಿಕ್ಕಮಗಳೂರಿನಲ್ಲಿ ಅವರು ಇತ್ತೀಚಿನವರೆಗೆ ಕೆಲಸ ಮಾಡಿದ್ದರು. ಈಗ ತುಮಕೂರಿಗೆ ವರ್ಗವಾಗಿದೆ ಎಂಬ ಮಾಹಿತಿಯಿದೆ. ಹಿಂದಿನಿಂದಲೂ ಪ್ರಜಾವಾಣಿ ಮಾತ್ರವಲ್ಲದೆ ಸುಧಾ ಪತ್ರಿಕೆಯಲ್ಲೂ ಗಂಭೀರ, ಸಾಮಾಜಿಕ ಎಚ್ಚರದ ಲೇಖನಗಳನ್ನು ಬರೆಯುತ್ತ ಬಂದವರು.

ಶಿವು
ಆದರೆ  ಅವರು ಈ ಲೇಖನದಲ್ಲಿ ಪಕ್ಷಿಗಳ ಮಟ್ಟಿಗೆ ಹೆಸರು ಮಾಡುವ ಏಕೈಕ ಉದ್ದೇಶದಿಂದ ಬರುವ ಫೋಟೋಗ್ರಾಫರುಗಳೇ ದೊಡ್ಡ ಆಪತ್ತು. ಫೋಟೋ ಕ್ಲಿಕ್ಕಿಸುವ ಭರದಲ್ಲಿ ಇವರು ಮಾಡುವ ಅವಾಂತರ ಒಂದೆರಡಲ್ಲ ಎಂದು ಗಂಭೀರ ಆರೋಪವನ್ನೇ ಮಾಡಿದ್ದಾರೆ. ಆರೋಪ ನಿಜವೇ ಆಗಿದ್ದಲ್ಲಿ ಅವರು ಅದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಶಿವು ಅವರು ತಮ್ಮ ಪ್ರತಿಕ್ರಿಯೆಯಲ್ಲೂ ಇದನ್ನೇ ಹೇಳುತ್ತಿದ್ದಾರೆ.

ಸಾಧಾರಣವಾಗಿ ವನ್ಯ ಜೀವಿ ಛಾಯಾಗ್ರಾಹಕರು ಅಗ್ಗದ ಪ್ರಚಾರಕ್ಕಾಗಿ ಪಕ್ಷಿಗಳಿಗೆ ಹಿಂಸೆ ಕೊಡುವಮಟ್ಟಿಗೆ ಪಾತಾಳಕ್ಕೆ ಇಳಿದಾರೆಂದು  ನಮಗೆ  ಈವರೆಗೆ ಅನ್ನಿಸಿರಲಿಲ್ಲ.  ವನ್ಯ ಜೀವಿ ಛಾಯಾಗ್ರಾಹಕರು ಸ್ವಭಾವತಃ ವನ್ಯಜೀವಿ ಪ್ರಿಯರೇ ಆಗಿರುತ್ತಾರೆ. ಹಿಂಸಾವಿನೋದಿಗಳು ಇವರಲ್ಲೂ ಕೆಲವರಿರಬಹುದು  ಎಂದೇ ನಾವು ಭಾವಿಸಿದ್ದೆವು.  ಒಂದುವೇಳೆ ಘನಶ್ಯಾಮ ಹೇಳುತ್ತಿರುವುದು ನಿಜವೆನ್ನುವುದಾದರೆ ಅದು ಆತಂಕದ ವಿಷಯ.

ಹೇಗೂ ಜೇನುಗೂಡಿಗೆ ಕಲ್ಲು ಬಿದ್ದಾಗಿದೆ. ಸ್ವತಃ ಘನಶ್ಯಾಮ ಅವರೇ ಈ ವಿಷಯದ ಕುರಿತು ಇನ್ನಷ್ಟು ಬೆಳಕು ಚೆಲ್ಲಿದರೆ (ಸಾಪ್ತಾಹಿಕ ಪುರವಣಿಯಲ್ಲೇ) ಎಲ್ಲರ ದೃಷ್ಟಿಯಿಂದ ವಿಶೇಷವಾಗಿ ಬಡಪಾಯಿ ಪಕ್ಷಿಗಳ ದೃಷ್ಟಿಯಿಂದ ಒಳ್ಳೆಯದು.

 ಘನಶ್ಯಾಮ ಬರೆದಿರುವ ಮೂಲ ಲೇಖನ ಪ್ರಜಾವಾಣಿಯ ಸಾಪ್ತಾಹಿಕದಲ್ಲಿದೆ. ಒಮ್ಮೆ ಗಮನಿಸಿ.
http://220.227.178.12/prajavani/web/include/story.php?news=1591&section=54&menuid=13
 ಹಾಗೆಯೇ ಶಿವು ಅವರ ಪ್ರತಿಕ್ರಿಯೆ ಓದಲು ಈ  ಕೆಳಗಿನ ಲಿಂಕ್ ಬಳಸಿ.
http://chaayakannadi.blogspot.com/2011/04/blog-post_10.html
ನಿಮ್ಮ ಅಭಿಪ್ರಾಯ ಹೇಳಲು ಮರೆಯಬೇಡಿ.

12 comments:

 1. ವನ್ಯ ಜೀವಿ ಛಾಯಾಗ್ರಾಹಕರು ಪಕ್ಷಿ ಪೀಡಕರೇ?

  ನಿಜಕ್ಕೂ ಇದು ಅಚ್ಚರಿ ತರುವ ವಿಚಾರ , ಆದ್ರೆ ಲೇಖನ ಬರೆದ ಲೇಖಕರು ಎಲ್ಲಾ ವನ್ಯಜೀವಿ,ಪರಿಸರ ,ಪಕ್ಷಿಪ್ರಿಯ ಛಾಯಾಗ್ರಾಹಕರು ತಮಗೆ ಬೇಕಾದ ಹಾಗೆ ಚಿತ್ರತೆಗೆಯಲು ಪಕ್ಷಿಗಳನ್ನು ಹಿಂಸಿಸಿ ತೊಂದರೆ ಕೊಡುತ್ತಿರುವರೆಂಬ ವಿಚಾರವನ್ನು ಏಕಪಕ್ಷೀಯವಾಗಿ ಬರೆದಂತೆ ಕಾಣುತ್ತದೆ. ಹಾಗು ನಮ್ಮ ದೇಶಕ್ಕೆ ವಲಸೆ ಬರುವ ಹಕ್ಕಿಗಳ ಬಗ್ಗೆ ನೀಡಿರುವ ಮಾಹಿತಿಯಲ್ಲೂ ಸ್ಪಷ್ಟತೆ ಕಾಣುತ್ತಿಲ್ಲ . ವನ್ಯಜೀವಿ ,ಪಕ್ಷಿ ಪ್ರಿಯ ಛಾಯಾಗ್ರಾಹಕರು ಅವುಗಳ ಬಗ್ಗೆ ಇರುವ ಪ್ರೀತಿಯಿಂದ ಕಾಡು ಸುತ್ತಿ ಗಂಟೆಗಟ್ಟಲೆ ಕಾದು ಛಾಯಾಚಿತ್ರ ಸೆರೆ ಹಿಡಿಯುತ್ತಾರೆ. ಪ್ರಾಣಿ/ಪಕ್ಷಿಗಳನ್ನು ಹಿಂಸೆ ಮಾಡಿ ಛಾಯಾಚಿತ್ರ ತೆಗೆಯುವವ ಖಂಡಿತಾ ವನ್ಯಜೀವಿ/ ಪಕ್ಷಿಪ್ರಿಯ ಛಾಯಾಗ್ರಾಹಕ ಆಗಿರಲಾರ , ಒಟ್ಟಾರೆ ಲೇಖನ ಓದುಗರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂಬುದು ನೆಚ್ಚಿನ ಪ್ರಜಾವಾಣಿಯನ್ನು ಬಹಳ ವರ್ಷಗಳಿಂದ ಓದುತ್ತಾ ಬಂದಿರುವ ನನ್ನ ಅನಿಸಿಕೆ.ಮೆಚ್ಚಿನ ಪ್ರಜಾವಾಣಿ ನೀನೂ ಹೀಗೆ ಆಗುತ್ತಿರುವೆಯಾ ಎಂಬ ಮಾತನ್ನು ನೋವಿನಿಂದ ಕೇಳಬೇಕಾಗಿದೆ.

  ReplyDelete
 2. ಕಥೆ ಮುಗಿಯಿತು.........
  ಪ್ರಜಾವಣಿಗೆ ಕಲ್ಲು ಎಸೆಯಲು ಇನ್ನೊಂದು ಅವಕಾಶ ಸಿಕ್ಕಿತಲ್ಲ? ಆ ಲೇಖಕ ಎಲ್ಲ ಛಾಯಾಗ್ರಾಹಕರಿಗೂ ಬೈದಿದ್ದಾನೆಯೇ? ಅಥವಾ ಕುಂಬಳಕಾಯಿ ಕಳ್ಳ... ಎನ್ನುವಂತೆ ಛಾಯಾಗ್ರಾಹಕರು ಆ ಲೇಖನ ತಮ್ಮನ್ನು ಉದ್ದೇಶಿಸಿಯೇ ಬರೆದಿದ್ದು ಅಂತ ತಿಳಿದುಕೊಳ್ಳಬೇಕೇ? ಈ ಎಲ್ಲ ಆಯಾಮ ಗಮನಿಸುವುದನ್ನು ಬಿಟ್ಟು ಒಮ್ಮೆಲೇ ಬರೆದವನ ಮೇಲೆ ಮುಗಿ ಬೀಳುವುದು ಎಷ್ಟು ಸರಿ?
  'ಹೇಗೂ ಜೇನುಗೂಡಿಗೆ ಕಲ್ಲು ಬಿದ್ದಾಗಿದೆ' ಎಂಬ ಮಾತೇ ಇನ್ನೊಬ್ಬರ ಮೇಲೆ ಕಲ್ಲು ಎಸೆಯಲು ಸಿದ್ಧವಾಗಿರುವ ವರ್ತನೆ ಬಹಿರಂಗಪಡಿಸಿದೆ.
  - ಪುರುಷೋತ್ತಮ

  ReplyDelete
 3. ಖ್ಯಾತ ಪಕ್ಷಿ ತಜ್ಞ ಸಲೀಂ ಅಲಿ ಗುಬ್ಬಿ ಕುಟುಂಬವೊಂದನ್ನು ಅಧ್ಯಯನ ಮಾಡುವುದಕ್ಕೋಸ್ಕರ ಒಂದರ ಹಿಂದೆ ಒಂದರಂತೆ ಏಳೆಂಟು ಗಂಡು ಪಕ್ಷಿಗಳನ್ನು ಕೊಂದ ಘಟನೆ ಅವರ ಬಗೆಗಿನ ಯಾವುದೋ ಪುಸ್ತಕದಲ್ಲಿ ಓದಿದ ನೆನಪು. ಪಕ್ಷಿ ಪ್ರೀತಿ ಅಂದರೆ ಇದೇನಾ ಅಂತ ಆಗ ನನ್ನ ಮನಸ್ಸಿನಲ್ಲಿ ಮೂಡಿದ್ದು ನಿಜ.

  ReplyDelete
 4. The purpose of wildlife photography is defined to get fame, award, money and self satisfaction, as this is not agreed by photographer himself, it will be difficult to define. If one photograph has excellent degree the next expected should be better than excellent, so the competition excels in getting better picture, this spoils the objective of wildlife photography. Getting closer to wildlife to get better picture is not quality, giving freedom to wildlife is the essence. If for example we have people running all around our bedroom, toilet, and kitchen without our permission we will feel the same way. we don't want better pictures at the cost of disturbance even the slightest one.

  Rajkumar.D

  ReplyDelete
 5. Chitra tegeyuvudarinda hakkigalige chitrahimseyaadare antaha chaayaachitragraahakarannu niyantrisabeku. Idaralli yenoo tappilla. Hakkigala samaadhaana kedisi ivaru chitra serehidyuvudu beda.Hage madidalli adu khandaneeya.

  ReplyDelete
 6. Avaru yarigo andare shivu yake hegalu mutti nodikollabeku?
  ghanasham lekhana samayochitavaagide.
  Shivu lekhana kaalu eleyale beku andukondu bareda haagide.

  Girish

  ReplyDelete
 7. Ghanashyam avara lekhana prabuddha haagu samayochitavagide. itteechina dinagalalli hakkigalige haagu kaadu praanigalige inthaha 'paparazi'gala kaata jaastiyaagide. lekhakaru ella wildlife photographers annu doorilla. kevala hakkigalannu attisikondu hogi photo tegeyuva laabha baduka, taalmegettavarannu maatra taraatege tegedukondiddaare. lekanadalli bareda bar headed goose ondu jaatiya migratory birds nija. photographer obbanige nijavagi irabekaadu taanu chitrisuttiruva vastuvina bagge kaalji haagu nishkalmasha preeti embudannu dhairyavaagi heliddare. haageye avaru udaaharane needida vyaktigalu kooda prajnvaantha haagu visva vikhyaata wildlife photographers aagiddare. eradu varshadinda wildlife photography maaduttiruva nanage lekhana tumba mechchuge aayitu. wildlife photographers yaaru kooda ee lekanavannu avamaana endu tiliyabekaagillavendu toruttade. koneyalli lekhakaru olleya photo ondara guna lakshagalannu haagu prajnaavantha photographers avara manobhaavagalannu bimbisiddaare. innaadaru award haagu hesarigaagi photo tegeyuva hucchu kadimeyaagi rekkemitrara bagge kutuuhala, kaalaji haagu kakkulaati irali endu aashisuva..

  -- Bhagyashree

  ReplyDelete
 8. First of all author did not mentioned all wildlife photographers are disturbing wildlife animals or birds. In fact there are some tips which are useful for armature photographers.  I was reading shivu’s blog and in one his article he proudly explained how he violated photography rules inside the theater where photography was forbidden. He also justified it was for the sake of taking good night photography without using flash. After reading that article, I assume for the sake of good photography, some people may don’t mind disturbing birds or animals while taking pictures.

  - Rajesh

  ReplyDelete
 9. shivu . Ganashayma avara lekhana vannu artha maadikolli ."ಲೇಖನದಲ್ಲಿ ಪಕ್ಷಿಗಳ ಮಟ್ಟಿಗೆ ಹೆಸರು ಮಾಡುವ ಏಕೈಕ ಉದ್ದೇಶದಿಂದ ಬರುವ ಫೋಟೋಗ್ರಾಫರುಗಳೇ ದೊಡ್ಡ ಆಪತ್ತು. ಫೋಟೋ ಕ್ಲಿಕ್ಕಿಸುವ ಭರದಲ್ಲಿ ಇವರು ಮಾಡುವ ಅವಾಂತರ ಒಂದೆರಡಲ್ಲ ಎಂದು ಗಂಭೀರ ಆರೋಪವನ್ನೇ ಮಾಡಿದ್ದಾರೆ. ಆರೋಪ ನಿಜವೇ ಆಗಿದ್ದಲ್ಲಿ ಅವರು ಅದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಶಿವು ಅವರು ತಮ್ಮ ಪ್ರತಿಕ್ರಿಯೆಯಲ್ಲೂ ಇದನ್ನೇ ಹೇಳುತ್ತಿದ್ದಾರೆ." nimage gottiRuvanthe yesto wildlife photographers yendu KaresiKolluva Janara chitraGalannu NOdidare VanyaGiviGala Pidaka RaagiDdare Yendu GottaguvudiLLave...?" ಆರೋಪ ನಿಜವೇ ಆಗಿದ್ದಲ್ಲಿ ಅವರು ಅದಕ್ಕೆ ಸಾಕಷ್ಟು ಪುರಾವೆಗಳನ್ನು ಒದಗಿಸಬೇಕಾಗುತ್ತದೆ." yendu saacha tana Merediddiri....!!shivu Nimage Yake JAana Kurudu ? Ghana shama avaru PURAVE turisa bekilla KELAVARA chitra Gale heluttave PURAVEgalannu...!!!! Prajavaani ge ganashayama rige HAAGU charche nadesutiruve Nimage ABInadane galu.
  LOKESH MOSALE
  www.lokeshmosale.com

  ReplyDelete
 10. Blogger shivu.k said...

  ಲೋಕೇಶ್ ಮೊಸಳೆಯವರೆ,

  ಲೇಖನ ನನಗೆ ಅರ್ಥವಾಗಿದೆ. ನೀವು ಒಮ್ಮೆ ಸಾಮಾನ್ಯ ಓದುಗನಾಗಿ ಈ ಸಾಲುಗಳ ಅರ್ಥಮಾಡಿಕೊಳ್ಳಿ.

  "ಪಕ್ಷಿಗಳ ಮಟ್ಟಿಗೆ ಹೆಸರು ಮಾಡುವ ಏಕೈಕ ಉದ್ದೇಶದಿಂದ ಬರುವ ಫೋಟೊಗ್ರಾಫರುಗಳೇ ದೊಡ್ಡ ಅಪತ್ತು. ಫೋಟೊ ಕ್ಲಿಕ್ಕಿಸುವ ಭರದಲ್ಲಿ ಇವರು ಮಾಡುವ ಅವಾಂತರ ಒಂದೆರಡಲ್ಲ, ನೇಚರ್ ಹಿಸ್ಟರಿ ಮತ್ತು ಪಕ್ಷಿಗಳ ಬದುಕಿನ ಮೂಲ ಜ್ಞಾನವನ್ನು ಸಂಪಾದಿಸಿಕೊಳ್ಳುವ ವ್ಯವಧಾನವಿಲ್ಲದ ಇಂಥವರಿಂದ ಪಕ್ಷಿಜಗತ್ತಿಗೆ ಆಪತ್ತು ಕಟ್ಟಿಟ್ಟ ಬುತ್ತಿ."

  ಯಾವುದೇ ಮಾಹಿತಿ ಮತ್ತು ಆಧಾರವಿಲ್ಲದೆ ಸಾರ್ವಜನಿಕವಾಗಿ ಬರೆದಿರುವ ಈ ಸಾಲುಗಳು ಸಹಜವಾಗಿ ಸಾರ್ವಜನಿಕರಲ್ಲಿ ವನ್ಯ ಛಾಯಾಗ್ರಹಕರ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ರೂಪಿಸುವುದಿಲ್ಲವೇ?

  12 April, 2011

  Ganashama avara vattu abipraya sariyagide nijavaagide . hanavide yendu dodda dodda lense kondu wildlife photographers yendu pose koduva....ನೇಚರ್ ಹಿಸ್ಟರಿ ಮತ್ತು ಪಕ್ಷಿಗಳ ಬದುಕಿನ ಮೂಲ ಜ್ಞಾನ gotillade tirugutiruva nuRaaru poseVIrarannu nivu sadaa nodutillave .? InThaVarinda ಪಕ್ಷಿಜಗತ್ತಿಗೆ ಆಪತ್ತು ಕಟ್ಟಿಟ್ಟ ಬುತ್ತಿ." edu nijavallave....? ondu photoGraphs gaagi obba forest OFFICER Kokkare Bellurinalli Nest pakka MAchan kattisiralillave...? aaga nest bittu pelicans hogiddavalla....? Madduru samepa photographs maadalu machan katti Marada kombe yannu kadisi ddanne nimma friends gale photographs maadiddare....!!!NImage edu Gottalla Avara bahumaanita chitragalannu nive nodiddiralla ...? ನೈಜ ಕಾಳಜಿ, ಕಳಕಳಿ ಇರುವ ಛಾಯಾಚಿತ್ರಗ್ರಾಹಕರು ಬಹಳಷ್ಟಿದ್ದಾರೆ. aadare Parisara pritiYinda kelasa maadutiruva photographers...galesthu....? award gaagi eruvavarestu...? Just relax mood photographers yestiddare...? Nimagee... gotide. Tigers den nalli photos tegeda...Leopard Kill hattira Barutade yendu edi dina kaada forest officer ....kate nimage gotirabekalla forest adikaarigale ondu photo kagi hage nadedu kondare...."just for change....HOBBy relax...photographer galige kaadu hakki imp aagide . allava...? Naguvinahalli BeeEaters KAthe yenaagutide Nive NOOdi banni...
  lokesh mosale

  ReplyDelete
 11. nam jana ne hege nodi yaradru satya helidre sumne avr mel koog adthare, na kuda thumba wild life photographers hege madodu nodidini, nodi yar enadru heli nijvaglu namm photography anno hosa prapnchadali kal idthiro nam antha young photographers ge idela ond kivi maathu, esht dodd avar adru nu kalyodu life full ide iruthe, Shivu avare nijvaglu danyavadagalu inthaha ond awareness bardu nam antha avarige kottidake, na ela photographers gu kelkolod ishte yaradru photography bagge ond kivi math helidre swalpa kivi kottu alisi, prapanchadali yavdu great ala yavdu worst ala, hag nodidre elru best photographers a avar avar drushti ali, thap idre kshamisi idu puut hudagana ashaya ashte.

  By,

  Avinash.s

  ReplyDelete
 12. ಆತ್ಮಿಯರೇ
  ಪ್ರಜಾವಾಣಿ ಯ ಸಾಪ್ತಾಹಿಕ ದಲ್ಲಿ ಘನಶಂ ರವರ ಪಕ್ಷಿ ವನ್ಯ ಪ್ರಾಣಿಗಳ ಛಾಯಾಗ್ರಹಣ ಕುರಿತಾದ ಲೇಕನ ನಿಜವಾಗಿಯೂ ಎಲ್ಲರ ಕಣ್ಣು ತೇರೆಸುತದೆ,ಅವರ ಬರವಣಿಗೆ ಉದ್ದಕು ವನ್ಯ ಜೀವಿ ಪ್ರೇಮ ಇತ್ತು ,ಅವರು ಹೇಳಿದ ಎಲ್ಲ ವಿಚಾರಗಳು ಸತ್ಯ ,ನಾನು ಎಸ್ಟೋ ಸಲಿ ಕಣ್ಣಾರೆ ಕಂಡಿದೇನೆ ,ಪಕ್ಕ್ಷಿ ಗಳನು ಬೆದರಿಸಿ ,ತೊಂದರೆ ನೀಡಿ ಛಾಯಾಚಿತ್ರ ಗಾರರು ಫೋಟೋ ಕ್ಲಿಕ್ ಮಾಡಿದಿದನ್ನ ನೋಡಿದೀನಿ ,ನಾನು ಎಸ್ಟೋ ಸಲಿ ಜಗಳ ಮಾಡಿದಿನಿ ,ನಾನು ಕಂಡಂತೆ ಘನಶಂ ಒಬ್ಬ ವನ್ಯ ಜೀವಿ ಪ್ರೇಮಿ ,ಅವರು ಮಲೆನಾಡಿನ ಅರಣ್ಯ ಗಳ್ಳಲ್ಲಿ ಅಲೆದಾಡಿ ,ಕಾಡಿನಲ್ಲಿ ವನ್ಯ ಪ್ರಾಣಿಗಳಿಗೆ ತೊಂದರೆ ಆದರೆ ಸಾಕು ಅವುಗಳ ರಕ್ಷಣೆ ಗೆ ಮುಂದಾಗು ತಿದರು ,ಅರಣ್ಯ ವನ್ಯ ಜೀವಿ ಸಂರಕ್ಷಣೆಗೆ ಅವರು ಅನೇಕ ಲೇಕನ ಗಳನು ಬರೆದ್ದಿದ್ದಾರೆ .ಅವರನು ಅವಮಾನಿಸಿದ ಶಿವೂ ಅವರ ಬರವಣಿಗೆ ಯನ್ನು ಖಂಡಿಸುತೇನೆ ,ಅವರು ಕಛೇರಿಯಲಿ ಕೂತು ಬರೆಯುತಾರೆ ಯಂಬ ವಾದ ಸರಿಯಾದುದಲ್ಲ ,ಶಿವೂ ಅವರ ಬರವಣಿಗೆ ಸರಿ ಇಲ್ಲ ,ಮತ್ತೆ ಶಿವೂ ಅವರು ಪ್ರಜಾವಾಣಿ ಪತ್ರಿಕೆ ಬಗ್ಗೆ ಲಗುವಾಗಿ ಮಾತನಾಡಿದ್ದಾರೆ ,ಇದು ಅವರು ಪತ್ರಿಕೆ ಬಗ್ಗೆ ತೋರಿಸುತಿರುವ ಅವರ ಮನಸ್ಥಿತಿ ಗೊತ್ತಗುತದೆ .ಘನಶಂ ಅವರಿಗೆ ಬಾಯಿಗೆ ಬಂದಂತೆ ಬೈದು ಬರೆದಿರುವ ಶಿವೂ ಅವರ ಮನಸ್ಥಿತಿ ನನಗೆ ಅರ್ಥವಾಗುತ್ತಿಲ್ಲ ,ಇಲ್ಲಿ ಅರೋಗ್ಯ ಕರ ಚೆರ್ಚೆ ಅಗಬೇಕಿತು ಆದರೆ ಶಿವೂ ತಿರ ಕೆಳ ಅಂತದ ಮತ್ತು ವೈಕ್ತಿಕ ವಾಗಿ ವಿಚಾರ ಗಳನು ಪ್ರಸ್ತಾಪಿ ಸಿದ್ದಾರೆ .ಪಕ್ಷಿ ಇತರೆ ಛಾಯಾಚಿತ್ರ ಗರ ಬಗ್ಗೆ ಮತ್ತು ಪಕ್ಕ್ಷಿ ಛಾಯಾಗ್ರಹಣ ದ ಬಗ್ಗೆ ಘನಶಂ ಅವರ ಲೇಕನ ಅನೇಕ ಉಪಯುತ್ಕ್ತ ಮಾಹಿತಿ ಗಳನು ಹೋದಗಿಸಿದೆ .ಜೊತೆ ಗೆ ಪಕ್ಷಿ ಮತ್ತು ವನ್ಯ ಜೀವಿ ಛಾಯಾಗ್ರಹಣದ ಸಮಯ ದಲ್ಲಿ ಯಾವ ರೀತಿ ಇರಬೇಕೆಂದು ತಿಳಿಸಿ ಕೊಟ್ಟಿದೆ .ಅವರಿಗೆ ಅಭಿನಂದನೆಗಳು ,ಚಿಕ್ಕಮಾಗಳೂರು ಜಿಲ್ಲೆ ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ ಬಗ್ಗೆ ಅವರಿಗೆ ಇರುವ ಕಾಳಜಿ ಗೆ ನಾನು ಅಭಿನಂದಿಸುತೇನೆ .ಶಿವೂ ಅವರೇ ನೀವು ಅವರಿಗೆ ಅವಮಾನ ವಗೊತರ ಹೇಳಿದಿರ ,ಇದು ಸರಿ ಯದ ಚೆರ್ಚೆ ಮತ್ತು ವಿಮರ್ಶೆ ಅಲ್ಲವೆ ಅಲ್ಲ ,ನಾನು ಒಬ್ಬ ವನ್ಯ ಜೀವಿ ಸಂರಕ್ಷಣ ಕಾರ್ಯಕರ್ತ ,ನಾನು ಅನೇಕ ಒಳ್ಳೆ ವನ್ಯ ಜೀವಿ ಛಾಯಗ್ರಹಕ ರನು ನೋಡಿದೇನೆ ಹಾಗೆ ಕೆಟ್ಟ ವನ್ಯ ಜೀವಿ ಛಾಯಾಗ್ರಹಕರನು ನೋಡಿದೇನೆ .ಒಬ್ಬ ವನ್ಯ ಜೀವಿ ಛಾಯಾಗ್ರಾಹಕ ಮೊದಲು ವನ್ಯ ಜೀವಿಗಳ ಬಗ್ಗೆ ಮತ್ತು ಅರಣ್ಯ ಗಳ ಬಗ್ಗೆ ತಿಳಿದುಕೊಳ್ಳಬೇಕು ,ಇ ಎಲ್ಲ ಅಂಶ ಗಳ್ಳನ್ನು ಘನಶಂ ಅವರ ಲೇಕನದಲ್ಲಿ ,ಮೂಡಿಬಂದಿದೆ,ಅವರು ಇ ಲೇಖನ ವನ್ಯ ಜೀವಿ ಛಾಯಾಗ್ರಾಹಕರಿಗೆ ತುಂಬ ಉಪಯುಕ್ತ ವಗುತದೆ .ಶಿವೂ ಅವರಿಗೆ ತಮ್ಮ ತಪ್ಪು ಒಂದು ದಿನ ಅರಿವಾಗುತ್ತೆ ಅಂತ ಅಂದುಕೊಂಡಿದೇನೆ ,ಘನಶಂ ಒಬ್ಬ ವರದಿಗಾರ ಮಾತ್ರ ಅಲ್ಲ ಪರಿಸರ ವನ್ಯ ಜೀವಿ ಪ್ರೇಮಿ ಕೂಡ ,ಹಾಗೆ ಅವರು ಕಚೇರಿಗೆ ಅಂಟಿ ಕೊಂಡು ಕೆಲಸ ಮಾಡುವ ವರದಿಗಾರ ಅಲ್ಲವೆ ಅಲ್ಲ ,ತಿರುಗಾಡಿ ,ಬೆಟ್ಟ ಗುಡ್ಡ ಅರಣ್ಯ ದಲ್ಲಿ ಸಂಚಾರ ಮಾಡಿ ಸುದ್ದಿ ಸಂಗ್ರಹ ಮಾಡುವಂತ ಬಲು ಅಪರೂಪದ ವರದಿಗಾರ ನಾ ಕಂಡಂತೆ ,ಅವರ ಲೇಕನ ತುಂಬಾ ಅರ್ಥ ಪೂರ್ಣ ವಗಿರುತಾದೆ.ಮಕ್ಕಳಿಂದ ಮುದುಕರ ವರಗೆ ಎಲ್ಲರು ಓದಿ ಕುಷಿ ಪಡುತಾರೆ ,ಅವರು ಚಿಕ್ಕಮಾಗಳೂರುಗೆ ಬಂದಗಿನಿಂದ ಒಳ್ಳೆ ಹೆಸರು ಕೆಲಸ ಮಾಡಿ ಪತ್ರಿಕೆ ಯ ಸಿರ್ಕುಲೆಸ್ಯಾನ್ ಜಾಸ್ತಿ ಯಾಗುವಂತೆ ಮಾಡಿದೆ ಅವರ ಕೈ ಲೇಖನ ದ ಮೂಡಿ.ಲೇಖನ ಗಳನು ಒಳ್ಳೆ ರೀತಿಯಲ್ಲಿ ಅರೋಗ್ಯ ಕರ ವಾಗಿ ಚೆರ್ಚೆ ಮಾಡಬೇಕು ಆಗ ಮಾತ್ರ ಉತ್ತಮ ಪಲಿತಾಂಶ ಸಿಗುತದೆ.
  ವೀರೇಶ್ ಜಿ
  ವನ್ಯಜೀವಿ ಸಂರಕ್ಷಣ ಕಾರ್ಯಕರ್ತ
  ಚಿಕ್ಕಮಗಳೂರು

  ReplyDelete