ಸಂಪಾದಕೀಯಕ್ಕೆ ಇವತ್ತಿಗೆ ಸರಿಯಾಗಿ ಒಂದು ವರ್ಷ ತುಂಬಿತು. ಒಂದು ಕ್ಷಣ ತಿರುಗಿ ಒಮ್ಮೆ ನೋಡಿದಾಗ ಒಂದು ವರ್ಷ ಆಗೇ ಹೋಯ್ತಾ ಅನಿಸುವುದುಂಟು. ಹೀಗೊಂದು ಬ್ಲಾಗ್ ಮಾಡುವ ಯೋಚನೆ ಹುಟ್ಟಿದ್ದು ಅಚಾನಕ್ಕಾಗಿ. ಇಷ್ಟು ಗಂಭೀರವಾಗಿ ಮುಂದುವರೆಸಿಕೊಂಡು ಹೋಗುತ್ತೀವೆಂಬ ಖಚಿತ ವಿಶ್ವಾಸವೂ ಆಗ ಇರಲಿಲ್ಲ. ಆದರೆ ಇದು ತನ್ನ ಪಾಡಿಗೆ ತಾನು ಬೆಳೆದುಕೊಂಡು ಬಂತು.
ತನ್ನ ಪಾಡಿಗೆ ತಾನು ಬೆಳೆಯುತ್ತ ಬಂತು ಎನ್ನುವುದಕ್ಕಿಂತ ಇದನ್ನು ಬೆಳೆಸಿದ್ದೇ ನೀವು ಎಂದರೆ ತಪ್ಪಾಗಲಿಕ್ಕಿಲ್ಲ. ಇದೊಂದು ಸಂಪಾದಕೀಯಕ್ಕಾಗಿ ತುಂಬಾ ಜನರು ಕಾದು ಕುಳಿತಿದ್ದರೇನೋ ಎಂಬಂತೆ ಇದ್ದವು ಪ್ರತಿಕ್ರಿಯೆಗಳು. ನಿಮ್ಮ ಪ್ರತಿಕ್ರಿಯೆಗಳೇ ನಮ್ಮನ್ನು ಬೆಳೆಸುತ್ತಾ ಬಂದವು. ನಮ್ಮಿಂದ ಅಸಾಧ್ಯವಾದದ್ದು ಎಂದು ಭಾವಿಸಿದ್ದನ್ನೆಲ್ಲ ನೀವು ನಿರೀಕ್ಷಿಸಿದಿರಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಇದನ್ನು ರೂಪಿಸಲು ನಾವು ನಮ್ಮ ವ್ಯಾಪ್ತಿಯನ್ನೂ ಮೀರಿ ಹೆಣಗುತ್ತ ಬಂದೆವು. ಈಗ ನಿಂತು ಯೋಚಿಸಿದರೆ ಒಂದು ಧನ್ಯತಾ ಭಾವ, ಒಂದು ಸುದೀರ್ಘ ನಿಟ್ಟುಸಿರು.
ಸಾರ್ವಜನಿಕ ವಿಮರ್ಶೆ, ಟೀಕೆ, ಟಿಪ್ಪಣಿಗಳಿಂದ ಮೀಡಿಯಾ ಕ್ಷೇತ್ರವೊಂದು ಹೊರಗೆ ಉಳಿಯಬಾರದು ಎಂಬುದು ನಮ್ಮ ಕಾಳಜಿಯಾಗಿತ್ತು. ಆತ್ಮವಿಮರ್ಶೆ-ವಿಮರ್ಶೆಗಳಿಲ್ಲದ ಕ್ಷೇತ್ರಗಳು ಸರ್ವಾಧಿಕಾರದ ರೋಗವನ್ನು, ಮೂಲಭೂತವಾದಿ ಗುಣಗಳನ್ನು ಆವಾಹಿಸಿಕೊಂಡುಬಿಡುತ್ತವೆ. ಅದು ಸಮಾಜಕ್ಕೆ ಯಾವತ್ತೂ ಅಪಾಯಕಾರಿ. ಮೀಡಿಯಾವನ್ನು ಮೀಡಿಯಾಗಳೇ ವಿಮರ್ಶಿಸುವ ಆರೋಗ್ಯಕರ ಪರಿಪಾಠವೂ ಎಲ್ಲೂ ಕಾಣದ ಹಿನ್ನೆಲೆಯಲ್ಲಿ ನಾವು ಒಂದು ಸಣ್ಣ ಪ್ರಯತ್ನ ಶುರು ಮಾಡಿದೆವು.
ಒಂದು ಸಮಾಧಾನದ ಸಂಗತಿಯೆಂದರೆ ಎಷ್ಟೋ ಸಂದರ್ಭಗಳಲ್ಲಿ ನಾವು ಬರೆದದ್ದು, ನೀವು ಬರೆದದ್ದು ಸಂಬಂಧಪಟ್ಟವರನ್ನು ನೇರವಾಗಿ ತಲುಪಿದವು. ಕ್ರಿಯೆಗೆ ಪ್ರತಿಕ್ರಿಯೆಗಳು ಆರಂಭಗೊಂಡವು. ಸಣ್ಣಪುಟ್ಟ ಬದಲಾವಣೆಗಳು ನಮ್ಮ ಕಣ್ಣೆದುರಿಗೇ ಘಟಿಸಿದವು. ಸಂಪಾದಕೀಯದ ಚರ್ಚೆಗಳು ಮೀಡಿಯಾ ಸಂಸ್ಥೆಗಳ ಮ್ಯಾನೇಜ್ ಮೆಂಟ್ ಸಭೆಗಳಲ್ಲೂ ಚರ್ಚೆಯಾಗತೊಡಗಿದವು.
ಇದೆಲ್ಲ ನಡೆಯುತ್ತಿದ್ದಂತೆ ನಮ್ಮ ಜವಾಬ್ದಾರಿಗಳೂ ಹೆಚ್ಚುತ್ತ ಹೋದವು. ಈ ಒಂದು ವರ್ಷದಲ್ಲಿ ನಾವು ಬರೆದ ಒಂದೇ ಒಂದು ಲೇಖನವನ್ನೂ ಡಿಲೀಟ್ ಮಾಡಿಲ್ಲ. ವೈಯಕ್ತಿಕ ತೇಜೋವಧೆ, ಕಪೋಲ ಕಲ್ಪಿತ ಆರೋಪಗಳು, ಪೂರ್ವಾಗ್ರಹ ಪೀಡಿತ ನಿಲುವುಗಳಿಂದ ಮುಕ್ತವಾಗಿಯೇ ಬರೆದ ಪರಿಣಾಮ ನಾವು ಬರೆದ ಯಾವುದನ್ನೂ ಹಿಂದಕ್ಕೆ ಪಡೆದುಕೊಳ್ಳುವಂಥ ಸಂದರ್ಭವೇ ಸೃಷ್ಟಿಯಾಗಲಿಲ್ಲ. ಈ ಎಚ್ಚರ ಮತ್ತು ಪ್ರಜ್ಞೆ ಇದ್ದ ಪರಿಣಾಮವಾಗಿಯೇ ಇದನ್ನು ನೀವು ನಿಮ್ಮದೆಂದು ಭಾವಿಸಿದಿರಿ. ಸದಾ ನಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರಿ.
ಮೀಡಿಯಾ ವಿಶ್ಲೇಷಣೆ ಒಮ್ಮೊಮ್ಮೆ ಮಗ್ಗುಲು ಬದಲಿಸಿ ಸಾಮಾಜಿಕ ಸಮಸ್ಯೆಗಳ ಕುರಿತ ಸಾಕಷ್ಟು ಚರ್ಚೆಗಳೂ ಇಲ್ಲಿ ನಡೆದಿವೆ. ಒಮ್ಮೊಮ್ಮೆ ಇದು ಪ್ರಜ್ಞಾಪೂರ್ವಕವಾಗಿಯೂ, ಮತ್ತೆ ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿಯೂ ನಡೆದಿದೆ. ಒಟ್ಟು ಫಲಿತ ಸಮಾಧಾನ ತಂದಿದೆ. ಕಪಟ ಜ್ಯೋತಿಷಿಗಳ ವಿರುದ್ಧ ನಡೆದ ಅಭಿಯಾನ, ಮಲ ಹೊರುವ ಪದ್ಧತಿ ವಿರುದ್ಧ ನಡೆದ ಜಾಗೃತಿ ಕಾರ್ಯ, ಮಡೆಸ್ನಾನ-ಪಂಕ್ತಿಬೇಧ-ಪ್ರಾಣಿಬಲಿ-ಭ್ರಷ್ಟಾಚಾರ ಇತ್ಯಾದಿ ವಿಷಯಗಳ ಕುರಿತ ಚರ್ಚೆಯೂ ಆರೋಗ್ಯಕರವಾಗಿ ನಡೆಯಿತು. ಕೆಲವೊಮ್ಮೆ ನಾವು ಬರೆದದ್ದನ್ನು ಆ ಕ್ಷಣಕ್ಕೆ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಓದುಗರು ಕ್ರಮೇಣ ಹೌದು, ನೀವು ಬರೆದಿದ್ದು ಸರಿಯಾಗಿತ್ತು ಎಂದು ಒಪ್ಪಿಕೊಂಡದ್ದನ್ನು ನಾವು ಗಮನಿಸಿದ್ದೇವೆ.
ಈ ಒಂದು ವರ್ಷದಲ್ಲಿ ಸಾವಿರಾರು ಮಂದಿ ಸಂಪಾದಕೀಯದ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ, ನಮ್ಮೊಂದಿಗೆ ಒಡನಾಡಿದ್ದಾರೆ. ಬಹುತೇಕರು ಮೀಡಿಯಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಲವಾರು ಮಂದಿ ಸಂಪಾದಕೀಯದಲ್ಲಿ ಬರೆದಿದ್ದಾರೆ. ಸಾಕಷ್ಟು ಮಂದಿ ಜಗಳವಾಡಿದ್ದಾರೆ. ಮುನಿಸಿಕೊಂಡು ಹೋದವರೂ ಇದ್ದಾರೆ. ಎಲ್ಲರ ಮೇಲೂ ನಮಗೆ ಪ್ರೀತಿ ಮತ್ತು ಪ್ರೀತಿಯಷ್ಟೇ ಇದೆ ಎಂದು ಪ್ರೀತಿಯಿಂದಲೇ ಹೇಳಲು ಬಯಸುತ್ತೇವೆ.
ಇಲ್ಲಿನ ಲೇಖನಗಳಲ್ಲಿ ಒಂದಕ್ಷರವೂ ತಪ್ಪಾಗಿರಬಾರದು ಎಂದು ನಿರೀಕ್ಷಿಸುವವರಿದ್ದಾರೆ. ಸಣ್ಣ ತಪ್ಪಾದರೂ ಕಾಲಕಾಲಕ್ಕೆ ತಿದ್ದುತ್ತಾ ಬಂದವರೂ ಇದ್ದಾರೆ. ಬ್ಲಾಗ್ ಶುರು ಮಾಡಿದ ಸಂದರ್ಭದಿಂದ ಇದುವರೆಗೆ ನಮ್ಮನ್ನು ಹುರಿದುಂಬಿಸುತ್ತ ಬಂದ ಕನ್ನಡದ ವೆಬ್ ಸೈಟ್‌ಗಳು, ಬ್ಲಾಗರ್‌ಗಳ ಪ್ರೀತಿಯೂ ದೊಡ್ಡದು. ಅವರನ್ನು ನೆನೆಯದೇ ಇದ್ದರೆ ಅಪಚಾರವಾದೀತು.
ಬಹುಶಃ ಮೀಡಿಯಾ ಕುರಿತು ಈ ಒಂದು ವರ್ಷದಲ್ಲಿ ಸಾಕಷ್ಟು ಮಾತನಾಡಿದ್ದೇವೆ. ಪದೇಪದೇ ಹೇಳಿದ್ದನ್ನೇ ಹೇಳುವುದರಲ್ಲಿ ಅರ್ಥವೂ ಇರುವುದಿಲ್ಲ. ಇನ್ನು ಇತರ ಕ್ಷೇತ್ರಗಳ ಕುರಿತೂ ಇಲ್ಲಿ ಬರೆಯುತ್ತಾ ಹೋಗಬೇಕು ಎಂದು ಯೋಜಿಸುತ್ತಿದ್ದೇವೆ. ಆದರೆ ನಮ್ಮ ಮುಖ್ಯ ಆದ್ಯತೆ ಮೀಡಿಯಾ ಆಗಿರುತ್ತದೆ ಎಂಬುದಂತೂ ಸ್ಪಷ್ಟ.
ಸಂಪಾದಕೀಯದ ಗಂಭೀರ ಲೇಖನಗಳನ್ನು ಪುಸ್ತಕರೂಪದಲ್ಲಿ ತರುವ ಯೋಜನೆಯೂ ಇದೆ. ಇದಕ್ಕಾಗಿ ಪ್ರಕಾಶಕರ ಬೆಂಬಲವನ್ನು ಯಾಚಿಸುತ್ತಿದ್ದೇವೆ. ಪ್ರಕಾಶಕರು ಮುಂದೆ ಬಂದಲ್ಲಿ ಈ ಕಾರ್ಯವೂ ನಡೆಯಲಿದೆ.
ಸದ್ಯಕ್ಕೆ ಇಷ್ಟನ್ನು ಮಾತ್ರ ಹೇಳಿ ವಿರಮಿಸುತ್ತಿದ್ದೇವೆ. ಒಳ್ಳೆಯದಿರಲಿ, ಕೆಟ್ಟದ್ದಿರಲಿ, ನಮ್ಮ ಬಗ್ಗೆ ನಾವೇ ಹೇಳಿಕೊಳ್ಳುವುದು ಮುಜುಗರದ ವಿಷಯ. ನಿಮಗೇನನ್ನಿಸುತಿದೆ? ಮರೆಯದೇ ಹೇಳಿ ಹೋಗಿ. ಒಂದು ಸಾಲಾದರೂ ಬರೆದು ಹೋಗಿ. ಈ ಬಾಂಧವ್ಯ ಹೀಗೇ ಮುಂದುವರೆಯಲಿ ಎಂದು ಮತ್ತೆ ಮತ್ತೆ ಕೋರುತ್ತೇವೆ.
ಎಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು.
ನಿಮ್ಮ ಬ್ಲಾಗ್ ಇಷ್ಟವಾಗಿದೆ...
ReplyDeleteಕೆಲವೊಂದು ಲೇಖನ ಬಹಳ ಇಷ್ಟವಾಗಿದೆ..
ಇಷ್ಟವಾಗದೇ ಇರುವ ಲೇಖನ ಬಹಳ ಕಡಿಮೆ..
ವಿವಾದಿತ ವಿಷಯಗಳೇ ಹೆಚ್ಚಾಗಿ ಇರುತ್ತದೆ..
ಇದು ಕಂಪ್ಲೇಂಟು ಹೌದು...
ಕಾಂಪ್ಲಿಮೆಂಟೂ ಹೌದು...
ಮುಂದುವರೆಸಿ... ಜೈ ಹೋ !!
oh wow !!ಆಗಲೇ ಒಂದು ವರ್ಷ ಪೋರೈಸಿಬಿಟ್ರಾ?? ಇತ್ತೀಚಿಗೆ ನಾಲ್ಕು ತಿಂಗಳಿಂದ ಸಂಪಾದಕೀಯ ಓದಿಲ್ಲ. otherwise me and hubby were regular readers!!
ReplyDeletecongrats!!also this is my very first comment here!!
:-)
malathi S
ಕ್ಷಮಿಸಿ...
ReplyDeleteಅಭಿನಂದನೆ ಹೇಳೋಕೆ ಮರೆತುಬಿಟ್ಟಿದ್ದೆ...
ಹುಟ್ಟು ಹಬ್ಬದ ಶುಭಾಶಯಗಳು...
ಅಭಿನಂದನೆಗಳು ಸಂಪಾದಕೀಯ...!!
nijavagiyu karnatakada sandarbada halavaru chrchegalalli sampadakiya mundalathva vahiside kelavu sandarbagalalli prabhavavannu biride e prakriye nirantharavagirali
ReplyDeleteಜೀವ ಚೈತನ್ಯ ಚಿಮ್ಮುವುದೆಂದರೆ ಇದೇನಾ, ಅಂಥ ಚೈತನ್ಯ ನಿಮ್ಮಲ್ಲಿ ಸದಾ ಚಿಮ್ಮುತ್ತಲೇ ಇರಲಿ ಹೀಗೆ ಮತ್ತಷ್ಟು ಮಗದಷ್ಟು ವಸಂತಗಳವರೆಗು.
ReplyDeleteಪ್ರಿಯರೆ,
ReplyDeleteಇದೊಂದು ಸಂತೋಷದ ವಿಷಯ.ಸಾಮಾಜಿಕ ಕಳಕಳಿಯ ಬಗ್ಗೆ ಒಂದು ಉಚ್ಚಮಟ್ಟದ ನಿಲುವು ತಾಳಲು 'ಸಂಪಾದಕೀಯ' ಯಾವಾಗಲೂ ಹಿಂದೆ ಮುಂದೆ ನೋಡಿದ್ದಿಲ್ಲ.ಇಲ್ಲಿಯವರೆಗೂ 'ಸಂಪಾದಕೀಯ'ದಲ್ಲಿ ಅನೇಕ ಚರ್ಚೆಗಳು,ವಾದ-ವಿವಾದಗಳು ಹಾಗೂ ಸೆನ್ಸಿಬಲ್ ಅನ್ನಿಸುವಂಥ ಲೇಖನಗಳು ಬಂದು ಹೋಗಿವೆ.ಎಲ್ಲಿಯವರೆಗೂ ನೀವು ಸಮಾಜಮುಖಿ,ಜೀವನ್ಮುಖಿ ಅನಿಸುವಂಥ tone ಅನ್ನು ಹೊರಡಿಸುತ್ತಿರುತ್ತೀರೋ-ಅಲ್ಲಿಯವರೆಗೂ ನಿಮ್ಮ ಅನಾಮಿಕತೆಯನ್ನು ಬಹುಶಃ ಯಾರೂ ಪ್ರಶ್ನಿಸುವದಿಲ್ಲ.ಯಾಕೆಂದರೆ ಒಳ್ಳೆಯ ಕಾರ್ಯಗಳನ್ನು ಯಾವ ಮರದ ಅಡಿಯಲ್ಲಿ ಮರೆಮಾಚಿ ಮಾಡಿದರೂ ಯಾರೂ ಪ್ರಶ್ನಿಸುವದಿಲ್ಲ.ಒಂದು ವರ್ಷದ ಅವಧಿ ಪೂರೈಸಿದ ಈ ಘಳಿಗೆಯಲ್ಲಿ 'ಸಂಪಾದಕೀಯ' ಬಳಗಕ್ಕೆ ಶುಭ ಹಾರೈಕೆಗಳು ಹಾಗೂ ಅಭಿನಂದನೆಗಳು.
ಒಂದು ವರ್ಷ ಕಳೆದದ್ದು ಗೊತ್ತೇ ಆಗಲಿಲ್ಲ. ನಿಮ್ಮ ಕೆಲಸ ಹೀಗೆ ಮುಂದುವರೆಸಿ. :)
ReplyDeleteಜನಪರ ನಿಲುವಿನ ನಿಮ್ಮ ವಾದಸರಣಿಗಳನ್ನು ಬೆಂಬಲಿಸುತ್ತ ಮೊದಲಿಂದಲೂ ಅವರಿವರೊಡನೆ ಜಗಳಾಡಿಕೊಂಡೇ ಬಂದೆ ಕಣ್ರೀ ಸಂಪಾದಕೀಯ. ಯಾವತ್ತೂ ನಿಮ್ಮ ವಾದದ ಪರವಾಗಿ ನಿಂತದ್ದು ತಪ್ಪಾಗಲಿಲ್ಲ. ನಿಮ್ಮ ಜನಪರ ಮಂಡನೆಗಳು ಮತ್ತು ಮಾಧ್ಯಮಲೋಕದ ಅವಲೋಕನಗಳು ಇವತ್ತಿನ ಮೀಡಿಯಾ ಕ್ಷೇತ್ರ ಯಾವ ಪಾತಾಳಕ್ಕೆ ಬಂದು ಕೂತಿದೆ ಅನ್ನೋದನ್ನ ಅದ್ಭುತವಾಗಿಯೇ ಬಿಡಿಸಿಟ್ಟಿದೆ. ಮಾಧ್ಯಮದೊಳಗಿದ್ದು, ಅದು ನನ್ನ ಆಶಯಗಳನ್ನು ಕೊಲ್ಲುತ್ತದೆ ಎಂದು ಭಯಗೊಂಡು ಹೊರಗೆ ನಿಂತ ನನ್ನಂತಹ ಅದೆಷ್ಟೋ ಜೀವಗಳು ಮಾತಾಡಲಿಕ್ಕೆ ಇದ್ದುದನ್ನು ನೀವು ಮಾತನಾಡಿದಿರಿ. ಒಂದು ವರ್ಷವೇ ಆಗಿ ಹೋಯಿತಾ? ಇನ್ನಷ್ಟು ಮೊನಚಾದ ಅವಲೋಕನ ಮತ್ತು ಮೀಡಿಯಾ ತಪಾಸಣೆಗಳು ನಿಮ್ಮಿಂದ ಹೊರಬರುತ್ತವೆ ಎಂಬ ಭರವಸೆ ನನ್ನನ್ನೂ ಸೇರಿದಂತೆ ಇವತ್ತಿನ ಯುವಸಮೂಹಕ್ಕಿದೆ. ಕಂಗ್ರಾಟ್ಸ್.
ReplyDelete-Daya Anand
Good sir
ReplyDelete-Prakash Raju Urs
hearty cangrats to you & team,,,,,,,keep going
ReplyDelete-Lohith Kumar
"ಬಹುಶಃ ಮೀಡಿಯಾ ಕುರಿತು ಈ ಒಂದು ವರ್ಷದಲ್ಲಿ ಸಾಕಷ್ಟು ಮಾತನಾಡಿದ್ದೇವೆ. ಪದೇಪದೇ ಹೇಳಿದ್ದನ್ನೇ ಹೇಳುವುದರಲ್ಲಿ ಅರ್ಥವೂ ಇರುವುದಿಲ್ಲ. ಇನ್ನು ಇತರ ಕ್ಷೇತ್ರಗಳ ಕುರಿತೂ ಇಲ್ಲಿ ಬರೆಯುತ್ತಾ ಹೋಗಬೇಕು ಎಂದು ಯೋಜಿಸುತ್ತಿದ್ದೇವೆ. ಆದರೆ ನಮ್ಮ ಮುಖ್ಯ ಆದ್ಯತೆ ಮೀಡಿಯಾ ಆಗಿರುತ್ತದೆ ಎಂಬುದಂತೂ ಸ್ಪಷ್ಟ"...That's right...
ReplyDelete-Ashok Shettar
Good sir.
ReplyDelete-Sangamesh Vastrad
nice
ReplyDelete-Ramu Ramappa
ಅಭಿನ೦ದನೆಗಳು.
ReplyDeleteನಮ್ಮ ಪ್ರೀತಿ ನಿಮಗೂ ಸಲ್ಲುತ್ತದೆ. ನಿಮ್ಮ ನಿಲುವು ಅ೦ಕಣಗಳು, ಪೂರ್ವಗ್ರಹ ಪೀಡಿತವಾಗದೆ, ನಿಷ್ಪಕ್ಷಪಾತವಾಗಿರಲಿ. ನಿಮ್ಮ ಈ ಬ್ಲಾಗ೦ಗಳವು ಇನ್ನೂ ಹೆಚ್ಚಿನ ಕೀರ್ತಿ, ಪ್ರಸಿದ್ದಿ ಪಡೆಯಲಿ, ಪ್ರಾಮಣಿಕವಾಗಿರಲಿ.
ಮತ್ತೊ೦ದು ವರುಷಕ್ಕೆ (ವರ್ಷಗಳಿಗೆ) ಶುಭ ಹಾರೈಕೆಗಳೊ೦ದಿಗೆ.
ರಿಶೀಕೇಷ
ಅಭಿನಂದನೆಗಳು,
ReplyDeleteಹೀಗೆ ಲೇಖನಗಳು ಮುಂದುವರೆಯುತ್ತಿರಲಿ
ಜನ್ಮದಿನದ ಶುಭ ಹಾರೈಕೆಗಳು...
ReplyDeleteಮನುಷ್ಯರಿಗಾಗಿ.. ನಿರ್ಮಿಸಿರುವ ಈ ಬ್ಲಾಗಿಗೆ ವರ್ಷ ತುಂಬಿದೆ. ಈ ಶುಭಗಳಿಗೆಯಲ್ಲಿ ನಿಮಗೆಲ್ಲ ಶುಭಕಾಮನೆಗಳು...
ReplyDeletecongraaaaaaats, and happy b'day Sampadakiya .
ReplyDeleteFor me who is a not from media background , reading this blog gives much more than news, and news papers.
i have also grown with this
keep it up. and thank you
Manjunath
ಪಕ್ಕಾಎಡಚರು ಎನ್ನುವುದನ್ನು ಬಿಟ್ಟರೆ ಸಂಪಾದಕಿಯದ ಬಗ್ಗೆ ಮತ್ತೇನೂ ತಕರಾರಿಲ್ಲ.
ReplyDeleteಮಾಧ್ಯಮಗಳು ಹೇಳಿದ್ದೆ ವೇದವಾಕ್ಯ, ಅದೇ ಸತ್ಯ, ಅದೇ ಸರಿ ಎಂಬ ಮೊಢನಂಬಿಕೆ ಹೆಚ್ಚುತ್ತಿದ್ದ ಸಮಯದಲ್ಲಿ ಸಂಪಾದಕೀಯದ ಜನನವು ಬಹಳ ಅಗತ್ಯವಿತ್ತು.
ReplyDeleteಮಾಧ್ಯಮಗಳ ಹಿಂದಿರುವ ರಾಜಕೀಯ ಲೆಕ್ಕಾಚಾರಗಳು, ಕಾಪೊ೯ರೇಟ್ ಲಾಬಿ ಹಾಗೂ ಲಾಭಗಳು, ಕೋಮು ತತ್ವ ಸಿದ್ದಾಂತಗಳು, ಸ್ಥಾಪಿತ ಹಿತಾಸಕ್ತಿಗಳು,
ಕನಾ೯ಟಕದ ಮುಗ್ಧ ಜನರಿಗೆ ಮನವರಿಕೆ ಮಾಡಿಸುವುದು ಅಗತ್ಯವಿತ್ತು.
ಸಂಪಾದಕೀಯವು ಈ ಕೆಲಸವನ್ನು ಸಮಥ೯ವವಾಗಿ ಮಾಡಿದೆ. ಪ್ರಜಾಸತ್ತೆಗೆ, ಪತ್ರಿಕೋದ್ಯಮಕ್ಕೆ ಸರಿಯಾದ ಅಥ೯ ಬರಬೇಕಾದರೆ ಸಂಪಾದಕೀಯದಂತಹ ಇನಿಶಿಏಟಿವ್ಸ್
ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಆದರೆ ಒಂದು ಸಣ್ಣ ದೂರು, ಕೆಲವೊಮ್ಮೆ ವಾರಗಳು ಕಳೆದರೂ ಅಪ್ ಡೇಟ್ ಆಗಲ್ಲ. ಕನಿಷ್ಠ ಮೊರು-ನಾಲ್ಕು ದಿವಸಕ್ಕೊಮ್ಮೆಯಾದರು ಆಗಬೇಕಂತ ಕಳಕಳಿಯ ವಿನಂತಿ.
ಅಭಿನಂದನೆಗಳು, ಶುಭ ಹಾರೈಕೆಯೊಂದಿಗೆ,
ಇಷ್
ಸಂಪಾದಕೀಯ !! ಕೆಲವರಿಗೆ ಚರ್ಚೆಯ ವೇದಿಕೆ ಯಾಗಿದ್ದು, ಇನ್ನು ಕೆಲವರ ನಿದ್ದೆ ಕೆಡಿಸಿದ್ದು ಸುಳ್ಳಲ್ಲ. ಹೆಚ್ಹಾಗಿ ಮೀಡಿಯಾ ವಿಷಯಗಳೇ ಇದ್ದರೂ, ಕೆಲವು ಕಣ್ಣು ತೆರಿಸುವಂಥ ಅನಿಷ್ಟ ಪದ್ಧತಿ ಆಚರಣೆಗಳ ವಿಶ್ಲೇಷಣೆ, ಅಣ್ಣಾ ಹಜಾರೆ, ಲೋಕಪಾಲ್ ಬಿಲ್ ಕುರಿತಾದ ಲೇಖನಗಳು ನನ್ನ all time favorite :), ಇದು ಕೇವಲ ಒಂದು ಮೆಟ್ಟಿಲಷ್ಟೇ, you have a long way to travel sampadakeeya, we all are with you, HAPPY BIRTHDAY :)
ReplyDeleteಮುರಳೀಧರ ಉಪಾಧ್ಯ ಹಿರಿಯಡಕ- ಅಭಿನಂದನೆಗಳು-
ReplyDeletemupadhyahiri.blogspot.com
kannadablogkondi.blogspot.com
ಮನುಷ್ಯನ ಮೂಲಭೂತ ನಂಬಿಕೆ ಮಾನವೀಯತೆ. ಆ ಮನವಿಯತೆಯ ಪರವಾಗಿರುವ ನಿಮಗೆ ಮೊದಲ ವರ್ಷದ ಯಶಸ್ಸಿನ ಶುಭಾಶಯಗಳು.
ReplyDeleteಗಿರೀಶ್.ಜಿ.ಕೆ
go on sir.
ReplyDelete-Asha Bhat
Nimmondige navu sada iruvevu.... hege munduvaresi sir.........Shubhvagali yellarigu
ReplyDelete-Ravikumar Narayana
Happy Birthday ಸಂಪಾದಕೀಯ...ನಿಮ್ಮ ಪ್ರತಿಯೊಂದು ಒಳ್ಳೆ ಕೆಲಸಕ್ಕೆ ಬೆಂಬಲವಾಗಿ ನಾವಿರುತ್ತೇವೆ...
ReplyDeleteKeep Rocking....
ಇಂತಿ ನಿಮ್ಮ......
ಪ್ರಜೆ
ಡಿಯರ್ ಸಂಪಾದಕೀಯ,
ReplyDeleteಶುಭಾಶಯಗಳು. ಈ ಬ್ಲಾಗ್ ನ ರೆಗುಲರ್ ರೀಡರ್ ನಾನು. ಮಾಧ್ಯಮದ ಆಗುಹೋಗುಗಳನ್ನು ಚರ್ಚಿಸಲು ಒಂದು ವೇದಿಕೆ ಸೃಷ್ಟಿಸಿದ ನಿಮಗೆ ಅಭಿನಂದನೆ. ನಿಮ್ಮ ಅನೇಕ ಬರಹಗಳು ಓದುಗರನ್ನು ಮೂಕವಿಸ್ಮಿತರನ್ನಾಗಿಸುವಷ್ಟು ಸ್ಪಷ್ಟತೆಯಿಂದ ಕೂಡಿವೆ. ಓದುಗರೂ ಕೂಡ ತಮ್ಮ ಗೊಂದಲಗಳನ್ನು ಇಲ್ಲಿಯ ಲೇಖನಗಳಿಂದ ಪರಿಹರಿಸಿಕೊಂಡಿರಬಹುದು. ಇವತ್ತಿಗೂ ನನಗೆ ಅಚ್ಚರಿ ಮತ್ತು ಕುತೂಹಲ ಹುಟ್ಟಿಸುವ ವಿಚಾರ ಎಂದರೆ ನೀವು ಯಾರು? ಇಂತಹ ಜಾಣ್ಮೆ, ಆಳ ಅಧ್ಯಯನ ಇದ್ದಾಗ್ಯೂ ನೀವು ಇಲ್ಲಿಯ ಬರಹಗಳಿಗೆ ಕ್ರೆಡಿಟ್ ಪಡೆಯಲು ಬಯಸದೇ ಇರುವ ನಿಮ್ಮ ಆಲೋಚನೆ ನನ್ನಂತಹವರಿಗೆ ನಿಮ್ಮ ಬಗ್ಗೆ ಹೆಚ್ಚು ಹೆಮ್ಮೆ ತಂದಿದೆ.
- ಭೂಮಿ ಬಾನು
ಶುಭಾಶಯಗಳು ಸಂಪಾದಕೀಯ,
ReplyDeleteಪ್ರತಿದಿನ ಸಂಪಾದಕೀಯವನ್ನು ಓದುತ್ತಿದ್ದೀನಿ,ತುಂಬಾ ಉತ್ತಮವಾದ ಆಶಯಗಳೊಂದಿಗೆ ಲೇಖನಗಳು ಮೂಡಿಬರುತ್ತಿವೆ,ಹ್ಯಾಟ್ಸ್ ಆಫ್ ಮತ್ತೊಮ್ಮೆ ನಿಮಗೆ.
- ಮಾ.ಸು.ಮಂಜುನಾಥ
ಹಾರ್ದಿಕ ಅಭಿನಂದನೆಗಳು!
ReplyDelete"ವೈಯಕ್ತಿಕ ತೇಜೋವಧೆ, ಕಪೋಲ ಕಲ್ಪಿತ ಆರೋಪಗಳು, ಪೂರ್ವಾಗ್ರಹ ಪೀಡಿತ ನಿಲುವುಗಳಿಂದ ಮುಕ್ತವಾಗಿಯೇ ಬರೆದ ಪರಿಣಾಮ ನಾವು ಬರೆದ ಯಾವುದನ್ನೂ ಹಿಂದಕ್ಕೆ ಪಡೆದುಕೊಳ್ಳುವಂಥ ಸಂದರ್ಭವೇ ಸೃಷ್ಟಿಯಾಗಲಿಲ್ಲ." Super! I like it! :-)
best of luck
ReplyDeleteಅಲ್ಪ ಸ್ವಲ್ಪ ಭ ಜ ಪಾ ವಿರೋಧಿ ಗಳು ಎನ್ನುವದು ಬಿಟ್ಟರೆ ಬೇರೆ ..ಏನು ಸಂಶಯ ವಿಲ್ಲ..ಸಂಪಾದಕೀಯ ಪ್ರಸ್ತಾಪಿಸುವ ವಿಷಯ ಗಳು ಸಮಾಜ ದ ಜ್ವಲಂತ ಸಮಸ್ಯೆ ಗಳಿಗೆ ಜನರು ವಿಚಾರ ಮಾಡುವಂತೆ ಒತ್ತಡ ಹಾಕುವದು ಸುಳ್ಳಲ್ಲ...ನಿಜವಾಗಿ ತಮ್ಮ ಪ್ರಯತ್ನ ಕ್ಕೆ ಹ್ಯಾಟ್ಸ್ ಆಫ...ವಿಶ್ ಯು ವೆರಿ ಹ್ಯಾಪಿ ಬರ್ತ್ ಡೇ...
ReplyDeleteವಿಠಲ ರಾವ್ ಕುಲಕರ್ಣಿ ಮಲಖೇಡ್
ನಿಜಕ್ಕೂ ಸಂಪಾದಕೀಯ ನಿಷ್ಠುರ ಪ್ರಶ್ನೆಗಳನ್ನು ಎತ್ತಿದೆ, ಹಾಗೆಯೇ ಅಂತಹ ಪ್ರಶ್ನೆ ಮಾಡುವಂತಹ ಮನೋಧರ್ಮವನ್ನು ರೂಪಿಸಿದೆ ಅದಕ್ಕಾಗಿ ಅಭಿನಂದನೆಗಳು. ಮುಂದೆಯೂ ಸಂಪಾದಕೀಯದ ಕತ್ತಿಯಂಚಿನ ದಾರಿ ಸಾಗಲಿ, ಸಂಪಾದಕೀಯ ಮತ್ತಷ್ಟು ಮೊನಚಾಗಲಿ, ಸಾಣೆಕಲ್ಲುಗಳಾಗಿ ನಾವೆಲ್ಲರೂ ಇರುತ್ತೇವೆ.
ReplyDeleteಸಂಪಾದಕೀಯದ ಪ್ರಥಮ ಹುಟ್ಟು ಹಬ್ಬಕ್ಕೆ ಶುಭಾಶಯಗಳು. ಸಂಪಾದಕೀಯವು ಮಾಧ್ಯಮ ಕ್ಷೇತ್ರದ ವಿಮರ್ಶೆಯ ಜೊತೆಗೆ ಸಮಕಾಲೀನ ಪ್ರಾಮುಖ್ಯತೆಯ ಇತರ ವಿಚಾರಗಳ ಬಗ್ಗೆಯೂ (ಸಾಹಿತ್ಯಿಕ, ಸಾಂಸ್ಕೃತಿಕ, ವೈಚಾರಿಕ ಇತ್ಯಾದಿ) ಗಮನ ಹರಿಸುವುದು ಒಳ್ಳೆಯದು. ಸಂಪಾದಕೀಯವು ಪ್ರಗತಿಶೀಲತೆ ಹಾಗೂ ಮಾನವೀಯ ಮೌಲ್ಯಗಳನ್ನು ಸದಾ ಎತ್ತಿ ಹಿಡಿಯುತ್ತಿರಲಿ.-ಆನಂದ ಪ್ರಸಾದ್
ReplyDeleteHello
ReplyDeleteHappy birthday .
One thing I appriciate in you is your social concern and less spelling mistakes in your writing. Keep it up
Abhinandhanegalu sir...
ReplyDeleteBanangaladhalli minchuva dhruva thareyannu kandanthayitthu!
Nimma barahagalannu mooru thingalinindha gamanisuthidhene. Nimma halavaaru lekhanagalannu KARAVALI ALE patrikeyalli vodhi, nimama blog'na khayam vodhuganadhe. Matthomme abhinandhanegalu sir. Nimma madhyama shuddhi kaaryadha prayathna nirantharavagirali!(thusu thadavaagi prathikriyisidhene besarisuvudhilla thane?!)
-B.S.HRUDHAYA BELUVAI
ಕನಿಷ್ಠ ವಾರಕ್ಕೆ ಎರಡಾದರೂ ಲೇಖನ ಬರೆಯಿರಿ. ಉತ್ತರ ಬರೆಯಲು ಕನ್ನಡ ಫಾಂಟ್ ಅವಕಾಶ ಇದ್ದರೆ ಒಳ್ಳೆಯದು.
ReplyDeleteಅಭಿನಂದನೆಗಳು..
ReplyDeleteಸಂಪಾದಕೀಯ ಎಂಬುದಕ್ಕೆ ನಿಜವಾದ ಅಥಱ ಕೊಡಲು ಹೆಣಗುತ್ತಿದ್ದೀರಿ. ನಾವೂ ಹೆಗಲು ಕೊಡಲು ಸಿದ್ಧರಿದ್ದೇವೆ,ನಮ್ಮ ಸಂಪಾದಕೀಯಕ್ಕೆ-ಸಹ್ಯಾದ್ರಿ ನಾಗರಾಜ್
ಜನ್ಮದಿನದ ಶುಭಾಷಯಗಳು...
ReplyDeleteತುಂಬು ಹೃದಯದ ಅಭಿನಂದನೆಗಳು.. ಸಂತೋಷದದ ಸಂಗತಿ...
ReplyDeleteವಸ್ತು ನಿಷ್ಟ ವಿಮರ್ಶೆ ಇರಲಿ...
ಪತ್ರಿಕೋದ್ಯಮದ ಓರೆ ಕೊರೆ ಗಲ್ಲನ್ನು ತಿದ್ದಿಗೊಳ್ಳುವತ್ತ.. ಸಾಗಲಿ...
ಕರ್ನಾಟಕದ ಪತ್ರಿಕೋಡೈಮಾದಲ್ಲಿ.... ಒಂದು ಹೊಸ ಆಯಾಮ ಸ್‌ರಸ್ಟೀ ಆಗಲಿ...
ಕನ್ನಡಿಗರ ಏಳಿಗೆ ಯನ್ನು ಗುರಿಯಾಗಿಸಿಕೊಳ್ಳಲ್ಲಿ....
ಪುಸ್ತಕ ಕೂಡ ಪ್ರಕಟಿಸಿ....
ಇದು ಕೇವಲ್ ಅಂತ್ರಜಲಿಗರಿಗಲ್ಲದೇ.. ಪೇಪರ್ ಓದುವವರಿಗೂ ಕೂಡ ಇದು ತಲುಪಲಿ....
ಶುಭಾಶಯಗಳು.
ನಿಮ್ಮ ತೋರು ಬೆರಳ ತುತ್ತತುದಿಯ ನಿಷ್ಠುರತೆ ನನಗೆ ಪ್ರೀತಿ! ಬೆರಳ ಹಿಂದೆ ಎಷ್ಟೊಂದು ಮನುಷ್ಯರು!!....ಅಭಿನಂದನೆಗಳು ಮತ್ತು ಶುಭಾಶಯಗಳು.
ReplyDeletebest luck sir:):) nimma ee olle prayathnakke namma benbala mathu subha araike idde iruthe:):):)
ReplyDeleteಅಭಿನಂದನೆಗಳು..
ReplyDeletegood
ReplyDeletegood congrats
ReplyDelete