Thursday, April 14, 2011

ಬೃಹತ್ ಬ್ರಹ್ಮಾಂಡದ ವಿರುದ್ಧ ಆಂದೋಲನದ ನೀಲನಕ್ಷೆ...


ಎಲ್ಲ ಟಿವಿ ಚಾನಲ್‌ಗಳಲ್ಲೂ ಜ್ಯೋತಿಷಿಗಳ ಆರ್ಭಟ ನಿರಂತರವಾಗಿ ಸಾಗಿದೆ. ಪರಸ್ಪರ ಫೈಟಿಂಗಿಗೆ ಬಿದ್ದ ಹಾಗೆ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮಗಳನ್ನು ಟಿವಿ ವಾಹಿನಿಗಳು ಎಗ್ಗಿಲ್ಲದೆ ಪ್ರಸಾರ ಮಾಡುತ್ತಿವೆ. ಜೀ ಟಿವಿಯಲ್ಲಿ ಬರುವ ನರೇಂದ್ರ ಶರ್ಮರ ಅವಾಂತರಗಳ ಕುರಿತು ಈ ಹಿಂದೆ ಬರೆದಿದ್ದೆವು. ನೀವೂ ಸಹ ಪ್ರತಿಕ್ರಿಯಿಸಿದ್ದಿರಿ. ಈ ವರ್ಷ ಇಡೀ ಪ್ರಪಂಚ ಮುಳುಗಿ ಹೋಗುತ್ತದೆ ಎಂದು ಹೇಳಿದ ಈ ಮಹಾನುಭಾವ, ಯುಗಾದಿಯ ದಿನ ಇಡೀ ವರ್ಷದ ಭವಿಷ್ಯ ಯಾರಿಗೆ ಹೇಗೆ ಇದೆ ಎಂದು ಹೇಳುತ್ತಾರೆ. ಎರಡನ್ನೂ ನಾಚಿಕೆಯಿಲ್ಲದಂತೆ ಚಾನಲ್ ಪ್ರಸಾರ ಮಾಡುತ್ತದೆ. ಜಗತ್ತೇ ನಾಶವಾದ ಮೇಲೆ ವರ್ಷ ಭವಿಷ್ಯ ಯಾಕೆ ಒದರುತ್ತ ಕೂತಿದ್ದೀರಿ ಎಂದು ಚಾನಲ್ ನವರು ಪ್ರಶ್ನಿಸಲಿಲ್ಲ. ನೋಡುವ ವೀಕ್ಷಕರಿಗೂ ಅದು ಹೊಳೆಯಲಿಲ್ಲ.

ವರ್ಷದ ತೊಡಕು ಮಾಡಬೇಡಿ, ಜೀವನವೆಲ್ಲ ತೊಡಕು ಆಗಿಬಿಡುತ್ತದೆ ಎಂದು ಈ ಸ್ವಾಮಿ ಮಾಂಸಾಹಾರಿಗಳನ್ನು ಹೆದರಿಸಿದರು. ಈತನ ಮಾತು ಕೇಳಿ ಎಷ್ಟು ಮಂದಿ ವರ್ಷದ ತೊಡಕು ಆಚರಿಸಿದರೋ, ಬಿಟ್ಟರೋ ಗೊತ್ತಿಲ್ಲ. ಆದರೆ ಬೀದಿಬೀದಿಯಲ್ಲಿ, ಮಾಂಸದಂಗಡಿಗಳಲ್ಲಿ ಈತನ ಸಹಸ್ರ ನಾಮಾರ್ಚನೆಯಂತೂ ನಡೆದ ಮಾಹಿತಿಯಿದೆ. ಮಾಂಸಾಹಾರ ಮಾಡಬೇಕೋ ಬೇಡವೋ ಎಂದು ಯುಗಾದಿ ಮರುದಿನ ಗಂಡಸರು-ಹೆಂಗಸರು ಮನೆಮನೆಯಲ್ಲಿ ಜಗಳವಾಡಿಕೊಂಡ ಮಾಹಿತಿಗಳೂ ಇವೆ.

ಬ್ರಹ್ಮಾಂಡ ಸ್ವಾಮಿಯೂ ಸೇರಿ ಎಲ್ಲ ಕಪಟ ಜ್ಯೋತಿಷಿಗಳನ್ನು ದೂರವಿಡಿ ಎಂದು ಎಲ್ಲ ಟಿವಿ ಚಾನಲ್‌ಗಳನ್ನೂ ಒತ್ತಾಯಿಸುವ, ಒತ್ತಡ ಹೇರುವ ಕೆಲಸಕ್ಕೆ ಇದು ಸಕಾಲ. ‘ಕಪಟ ಜ್ಯೋತಿಷಿಗಳನ್ನು ಟಿವಿ ಚಾನಲ್‌ಗಳಿಂದ ಓಡಿಸಿ ಎನ್ನುವ ಅಭಿಯಾನ ಆರಂಭಿಸೋಣ. ಏನೇನು ಮಾಡಬಹುದು ಎಂಬುದನ್ನು ನಿಮ್ಮ ಪ್ರತಿಕ್ರಿಯೆಗಳಿಂದಲೇ ಪಡೆದು ಇಲ್ಲಿ ಪಟ್ಟಿ ಮಾಡಿದ್ದೇವೆ. ಮತ್ತೆ ಮತ್ತೆ ನಿಮ್ಮ ಸಹಕಾರ ಯಾಚಿಸುತ್ತೇವೆ.

೧. ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿರುವ ನರೇಂದ್ರ ಸ್ವಾಮಿ ಈಗಾಗಲೇ ಲಕ್ಷಾಂತರ ಅಮಾಯಕ, ಮುಗ್ಧ ಜನರನ್ನು ದಾರಿ ತಪ್ಪಿಸಿದ್ದಾರೆ. ಹೆಣ್ಣು ಮಕ್ಕಳ ಉಡುಪು, ನಡವಳಿಕೆ, ಉದ್ಯೋಗ ಇತ್ಯಾದಿ ಎಲ್ಲ ವಿಷಯಗಳಲ್ಲೂ ಮೂಗು ತೂರಿಸಿ, ಅವರ ಆತ್ಮಸ್ಥೆರ್ಯವನ್ನು ಉಡುಗಿಸುವ ಯತ್ನ ನಡೆಸಿದ್ದಾರೆ. ಕೆಲವು ಹಿಂದುಳಿದ ಜಾತಿಗಳ ವಿಷಯದಲ್ಲೂ ಲಘುವಾಗಿ ಮಾತನಾಡಿ ಅವರ ಮನ ನೋಯಿಸಿದ್ದಾರೆ. ಈತ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದೆ, ಪ್ರಳಯ, ಸುನಾಮಿ, ಭೂಕಂಪ ಇತ್ಯಾದಿಗಳ ಕುರಿತು ಲಂಗು ಲಗಾಮಿಲ್ಲದಂತೆ ಮಾತನಾಡುತ್ತ ರಾಜ್ಯದ ಜನರನ್ನು ಮೌಢ್ಯದ ಅಂಧಕಾರಕ್ಕೆ ತಳ್ಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ದಯಮಾಡಿ ಈ ಕಾರ್ಯಕ್ರಮದ ಪ್ರಸಾರವನ್ನು ನಿಲ್ಲಿಸಿ ಎಂದು ನಾವು ಜೀ ಟಿವಿ ಸಂಸ್ಥೆಯವರಿಗೆ ಮನವಿ ಮಾಡೋಣ. ಎಷ್ಟು ಜನರು ಸಾಧ್ಯವೋ ಅಷ್ಟು ಜನರು ಈ ಪತ್ರ ಚಳವಳಿಯಲ್ಲಿ ಪಾಲ್ಗೊಳ್ಳಬಹುದು. ಬರೆಯುವಾಗ ನಮ್ಮ ಭಾಷೆ ಸಭ್ಯವಾಗಿರಲಿ, ಕನ್ವಿನ್ಸಿಂಗ್ ಆಗಿರಲಿ ಎಂಬುದು ವಿನಂತಿ.
ಜೀ ಟಿವಿಯ ಇಮೇಲ್ ವಿಳಾಸ ಈ ಕೆಳಕಂಡಂತಿದೆ.
feedbackzeekannada@zeenetwork.com
ಜೀ ಟಿವಿಯ ವಿಳಾಸ ಈ ಕೆಳಕಂಡಂತಿದೆ.

ZEE KANNADA
#39 United Mansions,
3rd Floor, M.G.Road,
Bengalooru - 560 001
Tel: +91 - 80 - 66109999
Fax: +91 - 80 - 2555 9432


೨. ಬ್ರಹ್ಮಾಂಡ ಕಾರ್ಯಕ್ರಮದಿಂದ ನಾಗರಿಕ ಸಮಾಜದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ವಿವರಿಸಿ ರಾಜ್ಯದ ಪ್ರಮುಖ ಸಂಘಟನೆಗಳಿಗೆ ಒಂದು ಪತ್ರ ಬರೆದು, ಈ ಬಗ್ಗೆ ವ್ಯಾಪಕ ಮಾಹಿತಿ ಹಂಚುವ ಕಾರ್ಯವನ್ನು ಮಾಡೋಣ. ಈ ಕೆಲಸವನ್ನು ಸಂಪಾದಕೀಯವೇ ಮಾಡುತ್ತದೆ. ಇತರರೂ ಸಹ ತಮಗೆ ಗೊತ್ತಿರುವ ಸಂಘಟನೆಗಳ ಮುಖಂಡರಿಗೆ ಈ ವಿಷಯವನ್ನು ಹರಡಿದರೆ ಅನುಕೂಲವಾಗುತ್ತದೆ.

೩. ನರೇಂದ್ರ ಶರ್ಮ ನಡೆಸುವ ಸಾರ್ವಜನಿಕ ಸಂವಾದ ಕಾರ್ಯಕ್ರಮಗಳಿಗೆ ತೆರಳಿ ಅಲ್ಲಿ ಪ್ರತಿಭಟಿಸುವ ಸಲಹೆಯನ್ನು ಹಲವರು ನೀಡಿದ್ದಾರೆ. ಇದು ಒಳ್ಳೆಯ ನಡೆಯಾಗಬಹುದು. ನರೇಂದ್ರ ಶರ್ಮ ಜತೆ ಬಹಿರಂಗ, ನೇರಪ್ರಸಾರ ಮುಕ್ತ ಸಂವಾದಕ್ಕಾಗಿ ನಾವು ಜೀ ಟಿವಿಯವರನ್ನು ಕೋರಬಹುದು. ಒಂದು ವೇಳೆ ಅಂಥ ಅವಕಾಶವನ್ನು ಅವರು ನೀಡಿದರೆ, ನರೇಂದ್ರ ಸ್ವಾಮಿಯವರ ನಿಜಬಣ್ಣವನ್ನು ಬಯಲು ಮಾಡಬಹುದು.

೪. ಈ ಕಾರ್ಯಕ್ರಮದಿಂದ ಆಗುತ್ತಿರುವ ಅನಾಹುತಗಳ ಕುರಿತು ವಿವರಿಸಿ, ಕಾರ್ಯಕ್ರಮ ಸ್ಥಗಿತಗೊಳಿಸಲು ರಾಜ್ಯ-ಕೇಂದ್ರ ಸರ್ಕಾರಗಳಿಗೆ, ಗೃಹ-ವಾರ್ತಾ ಇಲಾಖೆಗಳಿಗೆ, ಪ್ರಸಾರ ಭಾರತಿ, ಪ್ರೆಸ್ ಕೌನ್ಸಿಲ್‌ಗೆ ಮತ್ತು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆಯೋಣ.

೪. ಪತ್ರಿಕೆಗಳಲ್ಲಿ ಈ ಕುರಿತು ಲೇಖನಗಳನ್ನು ಬರೆಯುವ ಮೂಲಕ ಎಚ್ಚರ ಮೂಡಿಸಬಹುದು ಎಂಬುದು ಹಲವರ ಅಭಿಪ್ರಾಯ. ಆ ಕೆಲಸವನ್ನೂ ನಾವು ಮಾಡುತ್ತ ಹೋಗೋಣ. ಈಗಾಗಲೇ ಹಲವು ಪತ್ರಿಕೆಗಳಲ್ಲಿ ಈ ಕುರಿತು ಲೇಖನಗಳು ಬಂದಿವೆ. ಜತೆಗೆ ಬ್ಲಾಗರ್‌ಗಳೂ ಸಹ ಈ ಕುರಿತು ಲೇಖನಗಳನ್ನು ಬರೆಯಲು ವಿನಂತಿಸುತ್ತೇವೆ. ಈಗಾಗಲೇ ಬರೆದಿರುವವರು ತಮ್ಮ ಬ್ಲಾಗ್‌ಗಳ ಕೊಂಡಿಯನ್ನು ನೀಡಿದರೆ ಅನುಕೂಲವಾಗುತ್ತದೆ.

೫. ಈ ಅವೈಜ್ಞಾನಿಕ ಕಾರ್ಯಕ್ರಮಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ವಕೀಲರನ್ನು ಸಂಪರ್ಕಿಸುವ ಕೆಲಸವನ್ನೂ ಆರಂಭಿಸೋಣ.

೬. ಆನ್‌ಲೈನ್ ಪಿಟಿಷನ್ ಒಂದನ್ನು ಮಾಡುವ ಕುರಿತು ನಮ್ಮ ಓದುಗರು ಹೇಳಿದ್ದಾರೆ. ಇದೂ ಸಹ ಉಪಯುಕ್ತ ಸಲಹೆ. ಈ ಹಿಂದೆ ಇಂಥ ಆನ್ ಲೈನ್ ಪಿಟಿಷನ್ ಗಳನ್ನು ಮಾಡಿದವರು ಸಹಕಾರ ನೀಡಲು ಮನವಿ.

೭. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ದೂರು ದಾಖಲಿಸುವ ಸಲಹೆಯೂ ಬಂದಿದೆ. ಈತ ಪ್ರಳಯದ ಭೀತಿಯನ್ನು ಹರಡುತ್ತಿರುವ ಪ್ರವಚನಗಳಿರುವ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಪಡೆದು ನಾವು ಸುಲಭವಾಗಿ ಈ ಕೆಲಸವನ್ನು ಮಾಡಬಹುದು.

೮. ಚಾನಲ್ ಮುಂಭಾಗ ಪ್ರತಿಭಟನೆ ಮಾಡುವ ಸಲಹೆಯೂ ಬಂದಿದೆ. ಇದು ಅತ್ಯಂತ ಅನಿವಾರ್ಯವಾದ ಕ್ರಿಯೆ. ಮೊದಲ ಹಂತದ ಎಲ್ಲ ಪ್ರಯತ್ನಗಳೂ ವಿಫಲವಾದರೆ ಇದನ್ನೇ ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ.

೯. ನಾವು ನಡೆಸುವ ಎಲ್ಲ ಚಟುವಟಿಕೆಗಳನ್ನು ಪರಸ್ಪರರ ಗಮನಕ್ಕೆ ತರುವ ದೃಷ್ಟಿಯಿಂದ ಫೇಸ್‌ಬುಕ್ ನಲ್ಲಿ ಒಂದು ಗುಂಪನ್ನು ಸೃಷ್ಟಿಸಿ, ಅದರಲ್ಲೇ ಈ ಸಂಬಂಧದ ಎಲ್ಲ ಮಾಹಿತಿಗಳನ್ನು ಶೇರ್ ಮಾಡೋಣ. ಕಪಟ ಜ್ಯೋತಿಷಿಗಳನ್ನು ಟಿವಿ ಚಾನಲ್ ಗಳಿಂದ ಓಡಿಸಿ ಎಂದು ಈ ಗುಂಪಿಗೆ ಹೆಸರಿಡಲು ಯೋಚಿಸಿದ್ದೇವೆ. ಇದಕ್ಕಿಂದ ಪರಿಣಾಮಕಾರಿಯಾದ ಹೆಸರನ್ನು ಯಾರಾದರೂ ಸೂಚಿಸಿದರೆ ಅದನ್ನು ಬಳಸಬಹುದು. ಈ ಗುಂಪಿಗೆ ಎಷ್ಟು ಸಾಧ್ಯವೋ ಅಷ್ಟು ಜನರನ್ನು, ತಮ್ಮ ಎಲ್ಲ ಗೆಳೆಯ-ಗೆಳತಿಯರನ್ನು ಸೇರಿಸಿದರೆ ಹೆಚ್ಚು ಮಂದಿಯನ್ನು ನಾವು ತಲುಪಬಹುದು.

೧೦. ಫೇಸ್‌ಬುಕ್‌ನ ಗೆಳೆಯರಿಗೆ ಒಂದು ವಿನಂತಿ. ಸಾಕಷ್ಟು ಮಂದಿ ನಮ್ಮ ಎಲ್ಲ ಪೋಸ್ಟ್‌ಗಳನ್ನು ಕಾಳಜಿಯಿಂದ ನಿಮ್ಮ ವಾಲ್‌ನಲ್ಲಿ, ವಿವಿಧ ಗ್ರೂಪ್‌ಗಳಲ್ಲಿ ಶೇರ್ ಮಾಡುತ್ತ ಬಂದಿರುವುದನ್ನು ನಾವು ಗಮನಿಸಿದ್ದೇವೆ. ನಾವು ವಿನಂತಿಸದೆಯೇ ನೀವು ಅದನ್ನು ಮಾಡುತ್ತಾ ಬಂದಿದ್ದೀರಿ. ಈ ಬಾರಿ ಈ ಪೋಸ್ಟ್ ಅನ್ನು ಹೆಚ್ಚು ಜನರಿಗೆ ತಲುಪಿಸುವ ದೃಷ್ಟಿಯಿಂದ ನಿಮ್ಮ ನಿಮ್ಮ ಫೇಸ್‌ಬುಕ್ ಮತ್ತು ನೀವು ಒಳಗೊಂಡಿರುವ ಗ್ರೂಪ್ ಗಳಲ್ಲಿ ಶೇರ್ ಮಾಡಿ ಎಂದು ವಿನಂತಿಸುತ್ತೇವೆ. ಹಾಗೆಯೇ ಇತರ ಸಾಮಾಜಿಕ ತಾಣಗಳನ್ನು ಬಳಸುವವರೂ ಸಹ ಈ ಲೇಖನವನ್ನು ಹೆಚ್ಚು ಜನರಿಗೆ ತಲುಪಿಸಬೇಕೆಂದು ವಿನಂತಿಸುತ್ತೇವೆ.

ಇದಿಷ್ಟು ಸದ್ಯದ ಆಲೋಚನೆಗಳು. ಇನ್ನಷ್ಟನ್ನು ನೀವು ಸೇರಿಸಬಹುದು. ಏನೇನು ಪ್ರಗತಿ ಆಗಿದೆ ಎಂಬುದನ್ನು ನಿರಂತರವಾಗಿ ನಿಮ್ಮ ಗಮನಕ್ಕೆ ತರುತ್ತಾ ಬರುತ್ತೇವೆ. ವಿಶ್ವಾಸವಿರಲಿ.

91 comments:

 1. dayavittu inta programs na bann maadi !! avaicharika prgramms barakudadhu !!

  ReplyDelete
 2. idhakke nammelllara bembala idhe.... olleya prayathna madiddhiri.....

  ReplyDelete
 3. Bruhat sharmana bogale bramhanda
  (aakaara vikaara, maatu bari suLLu)

  ReplyDelete
 4. Viewership hechchaguttadeyendu TV channelgaloo, mattu pratishthita TV channel torisuttideyendu noduva janariruvaaga intaha kaaryakramagalu bittaragolluttale iruttave.Idakke kone modalilla. Channelgalu olleya gunamattada, rachanaatmakavaada haagu bodhaprada kaaryakramagalannu torisuva nittinalli policy badalaavane maadikollabekashte.

  ReplyDelete
 5. ಒಳ್ಳೆ ಕೆಲಸ. ನಿಮ್ಮ ಜೊತೆ ನಾವಿದ್ದೇವೆ...ಮುಂದುವರಿಸಿ...

  ReplyDelete
 6. ಒಳ್ಳೆ ಕೆಲಸ. ನಿಮ್ಮ ಜೊತೆ ನಾವಿದ್ದೇವೆ...
  thats only by karnataka people...

  ReplyDelete
 7. I recently came to know he has badly commented on japanese for the Tsunami disaster as they eat snakes, it is nagadosha like that, such a stupid comment, ZEE tv should have moral and social responsibility before telecasting this kind of programmes

  ReplyDelete
 8. ಜನಗಳು ಇನ್ನೂ ಈ ಮೌಡ್ಯತೆಯಿಂದ ಹೊರಬರದಿದ್ದರೆ ಹೇಗೆ?

  ReplyDelete
 9. neevu anaavashyakavagi avanige negetive publicity kodta iddiri. mediagalu yavudanna egnore madabeku anno jnana irabeeku. illadiddare MUTHALIK rathro rathri INTERNATIONAL LEVEL HERO maadidanthaguthade.

  with concern over society i posting this, plz publish

  ReplyDelete
 10. ee programme english nalliddare ellaroo nambutiddaru, nasa astondu hana karchu maduttha iddaroo, japananallina durnathada bagge tilidirallilla, thumba abhyasa,parinathi,hondida jyothishigalige govt. hana kharchu madidare ivaru innu thumba sadisabahudittu, adhare english janara mathu keli naavu nammavarannu bittu,anyarannu nambutteve, be positive,goodluch,jai ho jyothisshi

  ReplyDelete
 11. it is really good sign. adastu bega intha kalla swamijigalanna channel galinda dura irisi. we all support this.

  ReplyDelete
 12. ಬೃಹತ್ ಬ್ರಹ್ಮಾ೦ಡದ ನರೇ೦ದ್ರ ಶರ್ಮ ಉಪಯೋಗಿಸುವ ಮು೦ಡೇವು,ನಾಚಿಕ್ಕೆಟ್ಟೋವು ಹಾಗು ಇ೦ಥ ಹಲವು ಪದಗಳು ನೋಡುಗರಿಗೆ ಇರುಸು ಮುರುಸು ಉ೦ಟುಮಾಡುವುದಲ್ಲದೆ, ಅವರ ಸ೦ಸ್ಕಾರವನ್ನು ತೋರಿಸುತ್ತದೆ...ತನ್ನನ್ನು ತಾನು ದೇವರು ಎ೦ಬ ಮಟ್ಟಕ್ಕೆ ಬಿ೦ಬಿಸಿಕೊಳ್ಳುವ ಇವರಿಗೆ ಹೇಗೆ ಮಾತಾಡಬೇಕು ಎ೦ಬ ಸಾಮಾನ್ಯ ಪ್ರಜ್ಞೆಯೂ ಇಲ್ಲ...ಇದನ್ನು ಹಾಗೆ ಪ್ರಸಾರ ಮಾಡುತ್ತಿರುವ ಜ಼ೀ ಚಾನಲ್ ಅವರಿಗೂ ಇದರ ಬಗ್ಗೆ ಅರಿವಿಲ್ಲದಿರುವುದು ನಾಚಿಕೆಗೇಡಿನ ಸ೦ಗತಿ.

  ReplyDelete
 13. yes.. e mental galigelannella nambo e madhyamadavrindane nam dhesha halagogiddu.. nam deshadha madhyama sari illa mana maryadhe ella bit kulthidhe

  ReplyDelete
 14. ಈ ದರಿದ್ರ ಜ್ಯೋತಿಷಿಯ ಗ್ರಹಚಾರ ಬಿಡಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ಬೆಂಬಲ ಇದೆ.
  ~ಅಪಾರ

  ReplyDelete
 15. Yes first ask him is he perfect in all angles and whether he knows his own bhavishya before telling others.
  Uma

  ReplyDelete
 16. Zee kannada channel must and should stop this non sense programm...all peoples are diverting their mind coz of this show..media is there to give good things to peoples not like this bullshit shows...plz plz stop this show and let live peoples peacefully...

  ReplyDelete
 17. simply superb article, continue your awareness

  ReplyDelete
 18. ಅವಿನಾಶ ಕನ್ನಮ್ಮನವರ್April 14, 2011 at 9:00 PM

  ಕಾಯುತ್ತಿರುವೆವು ಇದಕ್ಕಾಗಿ!! "ಗ್ರಿನ್-ಪೀಸ್ ಸ೦ಘಟನೆಯ ತರಹದ ಪ್ರತಿಭಟನೆಗಳನ್ನು ಆಯೋಜಿಸೋಣ. for more details try key words as "Greenpeace inspirational act / inspiring act" in :youtube"

  ReplyDelete
 19. bahaLa bahaLa oLLeya kelasa idu.. ee manushyana maatininda maneyalli parasparara mele anumaana paDuvanthe aaguttade.. naavoo nimmoTTigiddeve.. all the best..

  ReplyDelete
 20. HI ,
  Thank you for the sampadakeya,

  What I say is.....
  these TV channels are doing business, any one among us or your relatives might be working in this channels.. It's their Hottepadu..
  Instead of scratching your head for this issue....... Spread the message or motivate the society to watch the Doordarshan channels.
  Because DD is the only channel who works for people of india... with out any politics,religious matter etc... this channel can be watched by sitting with our familly...
  it suits for all the age groups...
  just click this http://webcast.gov.in/live/
  you will experience the worth of the DD

  ReplyDelete
 21. ಫಲಜ್ಯೋತಿಷ್ಯ ಹೇಳುವ ಎಲ್ಲಾ ಜ್ಯೋತಿಷಿಗಳೂ ಕಪಟ ಜ್ಯೋತಿಷಿಗಳೇ. ಜಾತಕ ತೆಗೆದುಕೊಂಡು ಹೋಗಿ-ಜ್ಯೋತಿಷಿಯೋಬ್ಬನ ಮುಂದೆ ತಲೆತಗ್ಗಿಸಿ ಕೂತು-ಜಾತಕ ಆತನ ಮುಂದಿಟ್ಟು-ಜಾತಕದಲ್ಲಿ ಮುಂದೇನು ಕಾದಿದೆ??-ಎಂದು ಬಾಯಿ ಕಳೆದುಕೊಂಡು ಕೇಳುವುದನ್ನು ನಾವು ಮೊದಲು ಬಿಡಬೇಕು.

  ಏನಂತೀರಿ???

  ReplyDelete
 22. guru.. firstu idannaella nambo jannake odibeku.. amele avnige...

  ReplyDelete
 23. if anyone knows this Bramhandasharma Mobile number Please Share here.
  Mohan

  ReplyDelete
 24. Brahath Bramnanda programme must be stopped. In this regard I give complete support. Even request my other friends to be part of this.

  ReplyDelete
 25. he is a lier..let him go hell first

  ReplyDelete
 26. Nevu este awareness create madudru namma janake artha agolla.

  ReplyDelete
 27. really good suggestions and good step

  ReplyDelete
 28. Mugdha janarannu mosa madi havara bavishya chennagi madikothare... nam TV channel mathu noduva vikshakarege buddi eilla. ealli varegu topi hakisekolloru eirutharo hallivaregu eintha topi hakoru eiruthare

  ReplyDelete
 29. stop this nonsense on TV. ZEE tv people need to think about it.

  ReplyDelete
 30. Dont want like this programmes, just throw him out he has changed all ready 2 channels,
  bhrutht haeganna swamy

  ReplyDelete
 31. ನಿಮ್ಮ ಜೊತೆ ನಾವಿದ್ದೇವೆ.

  ReplyDelete
 32. Indeed its time a moovement initiated to shut the mouth of these humbugs / Bogale Astrologers. Of course viwers can have their discretion to watch or not to watch.But we have a large uneducated, gullible class of viewers who become easy prey for such nonsensical views profounded by the ilks of Narendra swami or the RTnagar Guroojis.Hence there is a need to educate our people about the hazards of extending their ears to such nasty make believe statements.

  ReplyDelete
 33. thanks to all....navu kooda nimmodige iddeve....jai karnataka mathe.......

  ReplyDelete
 34. thanks to all...so naavu kooda nimondige iddeve......jai karnataka mathe jai hind.

  ReplyDelete
 35. ಈ ಬ್ರಹ್ಮಾಂಡ ಶರ್ಮ ಎಂತಹ ಹೀನ , ನೀಚ ಮನಸ್ಸಿನವನು ಎಂದರೆ, ಒಮ್ಮೆ ಈತ ಹೇಳಿದ್ದ, - "ನಮ್ಮ ದೇಶವನ್ನು ಎಸ್ಟೋ ವರ್ಷ ಗಳಿಂದ ಇಬ್ಬರು ಮುಂಡೆಯರು ಆಳುತ್ತಿದಾರೆ. ಮುಂಡೆಯರು ಅಮಂಗಳ, ಅದಕ್ಕೆ ನಮ್ಮ ದೇಶ ಹೀಗಿದೆ, ಈಗ ಆಗುತ್ತಿರುವ ಎಲ್ಲ ಅನಾಹುತ ಗಳಿಗೂ ಈ ಇಬ್ರು ಮುಂಡೆಯರು ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದೇ ಕಾರಣ. ಒಬ್ಳು ಇಂದಿರಾ ಗಾಂಧಿ, ಇನ್ನೊಬ್ಳು ಸೋನಿಯಾ ಗಾಂಧಿ" ಅಂದಿದ್ದ. ಇವನನ್ನು ಏನು ಮಾಡಬೇಕು? ಯೋಚಿಸಿ.

  ReplyDelete
 36. Olleya kelasa.... Avanige sariyagi buddi kalisabeku. Sumne eneno heltane.

  ReplyDelete
 37. Good move.
  Gnana manushya aatmashairyavanna hechchisa beku. Adu itararigu margadarshiyagabeku. Heege hedariso kayakakkalla.
  Illi gnana da hesarinalli... belakiginta andhakara hechchagi haraduta ide.
  Hedarisi bhakti huttisokkagalla kevala bhaya huttutte annodananna gurugalu aritukobeku. Lokakalyanada kade gamana harisabeku.

  ReplyDelete
 38. An astounding initiative. Lets together stop such programs which are really creating lot of confusion and wrongful fear in lot of people across Karnataka.

  ReplyDelete
 39. ಒಳ್ಳೆ ಕೆಲಸ. ನಿಮ್ಮ ಜೊತೆ ನಾವಿದ್ದೇವೆ...ಮುಂದುವರಿಸಿ.

  ReplyDelete
 40. ಈ ರೀತಿ ಅವರನ್ನು ವಿರೋಧಿಸುವ ಮೂಲಕ, ಹೋರಾಟದಲ್ಲಿ ಕೈ ಜೋಡಿಸಿ ಎಂದು ಸಾಮಾಜಿಕ ತಾಣಗಳಲ್ಲಿ ಮನವಿ ಮಾಡುವ ಮೂಲಕ ಬಿಟ್ಟಿ ಪ್ರಚಾರ ಕೊಡುತ್ತಿರುವ ಹಾಗಿದೆ. ನಾಲ್ಕು ಜನಕ್ಕೆ ಗೊತ್ತಿದ್ದವ ಈಗ 400 ಜನಕ್ಕೆ ಗೊತ್ತಾದ್ದ ಹಾಗಾಯ್ತು. ಆದ್ದರಿಂದ ಹೇಳಬೇಕು ಅಂದ್ರೆ, ಇಂಥದ್ದನ್ನೆಲ್ಲಾ ನೆಗ್ ಲೆಕ್ಟ್ ಮಾಡುವುದೇ ಲೇಸು...

  ReplyDelete
 41. good work continue

  ReplyDelete
 42. ಭಾರೀ ಬ್ರಂಹಾಂಡವನ್ನು ದಂಡಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ಬೆಂಬಲವಿದೆ.

  ReplyDelete
 43. Nanagantu ee manushyana Mukha Nodidarene anumaana barutte.... dayavittu ee karyakramana nillisi!!!!!! nammellara support nimagide....

  ReplyDelete
 44. Better we will give him some other work... then this guy will look after his work and will not trouble others...

  I think ZEE Kannada has to think innovatively to give some better programs rather than This BRUHAT Akruthiya Bramhanda....

  ReplyDelete
 45. olle kelsa madtha iddira sir neevu,
  bere chanel galinda shift aagi eega zee kannada dalli bartavre eevru, sum sumne janagalige bheethi tumbthavre, adu eshtara mattakke andre ondu sari sanje 7 gantege ellaru henmaklu oora devaranna pooje madidre pralaya agola antha full suddi madi yella madiru,
  adre edella sadyana sir? dayavittu intorge sariyagi buddi kalsi, navu nimma jotheli iddivi.

  ReplyDelete
 46. nanage alpa svalpa jyothishya tiLide. aadaroo khada khanditha vaagi heLabahudu, ivaru jyotishyada tadviruddhavaagi nadithaa idaare. ivarannu tegedu haakidare, jyothishyakke naavu olle sahaya maadida haage aagothe.

  innondu thara nodidare, namage ivara kaaryakrama nodidare thumba haasyaaspada antha anisothe. adakke entertainment value ge ivara program mundhe varisokke bidabahudu anthanoo ansothe. kelavu sala avara "so called predictions" keLi hotte hunnu aaguva haake nakkidivi.

  avivekigalu nammalli yaavagalu hinge dvandhva huttisuthaare.

  ReplyDelete
 47. dear friends,ethara ondhu salahey keluthiruwa nemage nanna vandhanegalu, mathe ethara obba bundle jothishi yanna zee kannada dhawaru bruhuth bharmanda programmanu thkashna nillesabeku.hedhara virudha navu horadabekidey.nanna support nemage yawagalu eruthadey.

  ReplyDelete
 48. Good idea... he is misleading ppl.. it should be banned!

  ReplyDelete
 49. He is a fraud and he was the person behind MAHAKALA SARPAYAGA. He swallowed cre together in that. We are all supporting for this movement.

  ReplyDelete
 50. ನರೇಂದ್ರಬಾಬು ಅವರು ಹೇಳುತ್ತಿರುವುದು ಕೇವಲ ಜ್ಯೋತಿಷ್ಯ ಜೀವನಕ್ಕೆ ಹತ್ತಿರವಾದ ವಿಚಾರಗಳನ್ನಷ್ಟೇ ಅವರು ಪ್ರಸ್ಥಾಪಿಸುತ್ತಿರುವಾಗ ಅವರ ವಿರುದ್ಧ ಸುಖಾ ಸುಮ್ಮನೆ ಹರಿಹಾಯುವುದು ಸರಿಯಾದುದಲ್ಲ.

  ReplyDelete
 51. ಒಳ್ಳೆ ಕೆಲಸ. ನಿಮ್ಮ ಜೊತೆ ನಾವಿದ್ದೇವೆ...ಮುಂದುವರಿಸಿ...

  ReplyDelete
 52. This is Idiotic. Most of the people follow him blindly. It should be banned.

  ReplyDelete
 53. In India laws relating to media is liberal other wise person like Narendra sharma should be sent to prison for ten years.

  ReplyDelete
 54. bruhat (BOGALE) brahmaanda moole illada naaligege brahmandave saakshi

  ReplyDelete
 55. ಮೊದಲು ಈ ಕೆಲಸ ಆಗಬೇಕಿದೆ. ನಿಮ್ಮ ಜೊತೆಗೆ ನಾವಿದ್ದೇವೆ. ದಯವಿಟ್ಟು ಕಾರ್ಯೋನ್ಮುಖರಾಗಿ.

  ReplyDelete
 56. Good Olle kelsa madtidiri... ondu vishya... intha moudyagalige jothu beelabaradu, janranna daari tappisbardu anno uddeshadinda namma JANASRI tv channelnalli jyothishyavanne kaibittidivi... monne ugadiyandoo kooda PANCHANGA SHRAVANA madade vibhinna discussion madidvi... kevala mooru varshada hinde hegalige ondu joligeyantha bag nethakkondu ondu sanna avakashakke bedta idda ee aasami kasthuri channel madida tappininda idee samajana dikku tappista idane... jyothishyada program prasara madodu ondu reetili tappalla... adre adara moolaka moudyagalanna bittodu tappu.. innadru ZEE echchetkollali... nimma horatakke nanna bembala ide.

  ReplyDelete
 57. Nijavaglu olle kelsa ne madtha idiri
  addru entha jotishya helo jotisigallanna desha dindane odosbidabeku anatha annsuthe alwa. addru hage madakke agalla alwa.
  adakkagi zee tv navarige ondu manavi entha karyakrama galanna nillisibidi antha manavai madona alwa. yeno nange annsita erodu kanri
  mathe inna ondu vishya yen helidre evarinda tumba hudugiru halagtidaaare kanri. astakku nan hendatine nan matu keltilla ri .nijagalu kanri
  plsss nanjothe yallarigu olledaaagli antha kelkoltidini kanri plzzz nange help madi

  ReplyDelete
 58. One Friday morning when i on Kannada news channel there was astrology program running. Astrologer said that today is a pleasant day for the people of this world, afternoon Tusnami hits Japan. thousand people died, destroyed half of japan. Where is this Stupid astrology stands now..???

  ReplyDelete
 59. bari zee alla yalaa vahiniyalu nilisidare valitu

  ReplyDelete
 60. he has made lot of properties in an around bangalore.......and having house in RMV extention........Nevu este awareness create madudru namma janake buddi barolla.

  ReplyDelete
 61. Its a good thought...
  this shld've started before only...
  but whenever may be i'll give full support for this superb programme to eradicate this type of foolish programme & dongi swamijis

  ReplyDelete
 62. ಯಾಕೆ ಈ ಪರಿ ಡಿಸ್ಕಶನ್ ಅಂತ ತಿಳಿಯೋಕಂತಲೇ ಕೆಲವು ಎಪಿಸೋಡ್ಸ್ ನೋಡಿದೆ. ಕೈಯಲ್ಲಿ ಏನೋ ಹಿದಕೊಂಡು ಕೋಡಂಗಿ ಥರ ಮಾತಾಡೋ ಈ ಮನುಷ್ಯನ್ನ ಉಪೇಕ್ಷೆ ಮಾಡಬಹುದು ನಿಜ. ಬಟ್, ಇಂಥವರು ಗ್ಯಾಂಗ್ರಿನ್ ಇದ್ದಹಾಗೆ. ಉಪೇಕ್ಷೆ ಮಾಡಿದರೆ ಹಬ್ಬಿಕೊಳ್ತಾರೆ, ಕೊಳೆಸಿಬಿಡ್ತಾರೆ. ಈ ನಕಲಿ ಜ್ಯೋತಿಷಿ ಬಾಯ್ತುಂಬ ಹೆಣ್ಣುಮಕ್ಕಳನ್ನ ಹೀಗಳೆಯೋದನ್ನ ನೋಡೋಕಾಗ್ತಿಲ್ಲ. ಈತನ ಮಾತು ಸಾಂಸಾರಿಕ ತಟವಟಕ್ಕೆ ಕುಮ್ಮಕ್ಕು ಕೊಡ್ತಿವೆ. ಮಹಿಳೆ, ಮಾಂಸಾಹಾರ ಮೊದಲಾದ ಬಗ್ಗೆ ಕೀಳಾಗಿ ಮಾತಾಡಿ ಕೆಲವು ಸಮುದಾಯಗಳಿಗೆ ಅವಮಾನ ಮಾಡ್ತಿದಾರೆ ಈ ಮಹಾಶಯ. ಪ್ಲೀಸ್ ಈ ಥರದ ಪ್ರೋಗ್ರಾಮ್ಸ್ ನಿಲ್ಸೋಕೆ ಹೇಳೀ :( . ಸಖತ್ ಚಿಂತೆ ಮತ್ತು ಹಿಂಸೆ ಆಗ್ತಿದೆ. ನಮಮ್ ಅದ್ಭುತವಾದ ಜ್ಯೋತಿಷ್ಯ ವಿಜ್ಞಾನವನ್ನ ಈ ಥರದವರು ಕೊಚ್ಚೆಗುಂಡೀಲಿ ಹಾಕಿ ಅದರ ಬಗ್ಗೆ ಹೇವರಿಕೆ ಹುಟ್ಟೋ ಹಾಗೆ ಮಾಡ್ತಾರೆ ಅನ್ನೋದು ದೊಡ್ಡ ನೋವು. ಎಲ್ಲಕ್ಕಿಂತ ಬೇಜಾರು ಈ ಮನುಷ್ಯ ಮುಂಡೆ ಗಿಂಡೆ ಅಂತೆಲ್ಲ ಮಾತಾಡಿ ಅಸಹ್ಯ ಹುಟ್ಟಿಸ್ತಾರೆ. ಇವೆಲ್ಲ ನಿಲ್ಲೋತನಕ ದನಿ ತಗ್ಗಿಸೋದು ಬೇಡ ಅಲ್ವ?
  - ಚೇತನಾ ತೀರ್ಥಹಳ್ಳಿ

  ReplyDelete
 63. nijavagalu bogale bramhanda........................!!!!!!!! dayavitu avana maatu kele halaga bedi.!!!!!!!

  ReplyDelete
 64. I dont think channel people will listen to our voice

  ReplyDelete
 65. BOGUS BRAHMANDA!!!! sri sri sri narendra bandla babu bari bogale!!!!!!!!!!!!! hez deceivin de ppl aroun im!!!

  ReplyDelete
 66. ಭವಿಷ್ಯ ಕೇಳುವುದು, ಪ್ರಸದ ಕೇಳುವುದು ಇವುಗಳೆಲ್ಲ ಮನುಷ್ಯನನ್ನು ದುರ್ಭಲನನ್ನಾಗಿ ಮಾಡುತ್ತವೆ. ಇವನ್ನು ಖಂಡಿಸಬೇಕು ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಇದೆ

  ReplyDelete
 67. Namma jana fisrt buddi kalibaeku....t.v channel avru astae....trp goskara en program baekadru maadtare.....

  ReplyDelete
 68. He is lier!!!!
  actually he is film actor,he acted in Vishnusena,Uppi Dada MBBS and some other movies in side roles.

  Now he is swamiji, odibeku enthvarige!!!!!
  may be he not getting roles in sandalwood.

  ReplyDelete
 69. He is lier!!!!
  I think all you know he is film actor,he acted in most of kannada movies Vishnusena,UPPIDADA MBBS and some other movies appered in side roles.
  Now he is Swamiji!!!!,KAL SWAMIJI
  Zee entertainment must ban his program.

  ReplyDelete
 70. Vinaasha kaale vipareeta buddhi antaaralla....Haagide ellara reactions...

  Ishta iddare avana program nodri... Illa andre channel change maadkolli...

  ReplyDelete
 71. prashiblr@rediffmail.com - facebook idApril 19, 2011 at 11:03 AM

  sri sri bramma-anda gurugalu...sakshath agnyana aparavathara... sathamana kanda dadda sikamani...

  ReplyDelete
 72. ನೋಡುಗರಿಗೆ ಮುಜುಗರ ಹುಟ್ಟಿಸುವ ಇಂತಹ ಕಾರ್ಯಕ್ರಮಗಳನ್ನು ಚಾನೆಲ್ನವರೇ ಇಷ್ಟು ಹೊತ್ತಿಗೆ ನಿಲ್ಲಿಸಬೇಕಿತ್ತು. ಆದರೆ TRP ಭೂತ ಬಿಡಬೇಕಲ್ಲ.
  ಎಷ್ಟೋ ಮಂದಿ ಮುಗ್ಧರ ದಾರಿ ತಪ್ಪಿಸುತ್ತಿರುವ ಇಂಥ ಕಪಟ ಸ್ವಾಮಿಯನ್ನು ಸಾರ್ವಜನಿಕರ ಎದುರಿಗೆ ನಿಲ್ಲಿಸಿ ಅವರಿಂದಲೇ ಪಾಠ ಕಲಿಸಬೇಕು. ಅದಕ್ಕೂ ಮೊದಲು ಅವನು ಹೇಳುವುದು ಅವೈಜ್ಞಾನಿಕ ಎಂಬುದನ್ನು ಜನರಿಗೆ ತಿಳಿಸಬೇಕು.
  ನಿಮ್ಮ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ.

  ReplyDelete
 73. Good Mode of attack and plan.

  i got shocked when, my fellow neighbours, who are well educated youngsters, are in sort of believing this fools prophecies..

  Lets force Zee channel to get this show off the air.

  ReplyDelete
 74. H N Narsimayya iddidre sariyaagi evana jaataka bidisiroru...

  Intavarrnnaa ignore maad beku..aadare.., jana idanna olle hedigalu, daddara tara nambataare...

  Che.. hennu maakkaligella e tara baayige bandge annodu.... namma sanskriti alla.. Zee kannada davaru idanna swalpa artha maadkondre..olledu..

  ReplyDelete
 75. naxalitra vamsha appa nimdu..bhugatha kranthi madoke hortidiri..golibaar adre bloggers, face bookiegalu saythare bidi..narendra sharmange sufaari kodi annodu pukkate salahe ashte!!!

  -anamika

  ReplyDelete
 76. There are many programs like this in TV9, Suvarna etc.. all this should be banned... and also programs like Crime stroy in TV9 should be banned..

  ReplyDelete
 77. ivaranna virodisuvavaru eshtu jana iddaro ashte abhimanigalu iddare.....kelavomme ava helodu tappu anisidaru mattondu kshanadalli bhaktaragi hogtare....We must understand that, He is playing a psychological game....idarinda horabarodu janarige kashta sadhya aagabahudu.....aadrinda Zee kannadakke patra mukhena aa karya kramada viruddhada dhaniyanna talupisodu olleyade...

  ReplyDelete
 78. @anamika - naanu anddiddu - bari maatadodu artical bareyodu bere - aadre en maadbeku annodaanna e articalnalli heliddare - i liked it, aste, summne maatdi kai bittare en saadhisidange aagutte...

  katte purana illi maadidahange aagutte...

  Bhugat krantinu illa, naxlisammu alla ,all it needs is participation of ppl who really think this show is making a bad impact on society aste..  btw - nammuru nahturam ghodse huttidaa hanagandi grama.. :)

  ReplyDelete
 79. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಇದೆ. ಝೀ ಕನ್ನಡಕ್ಕೆ ಮೇಲ್ ಕಳಿಸಿದ್ದೇನೆ ಹಾಗು ನನ್ನ ಬ್ಲಾಗಿನಲ್ಲೂ ಹಾಕಿದ್ದೇನೆ.

  ReplyDelete
 80. true but who will stop these type of programmes..................

  ReplyDelete
 81. ಜ್ಯೋತಿಷ್ಯ ಒ೦ದು ವಿಜ್ನಾನ ಇದನ್ನು ವಿಜ್ನಾನವಾಗಿ ಅಭಾಸ ಮಾಡಿ ಇದರಮೂಲಕ ಹಲವಾರು ವ್ಯಯಕ್ತಿಕ ಮತ್ತು ಸಾಮುದಾಯಿಕ ಸಮಸ್ಯೆಗಳಿಗೆ ಪರಿಹಾರವನ್ನು ಕ೦ಡುಕೊಳ್ಳಬಹುದು ಇದನ್ನು ದೃಷ್ಟಿಯಲ್ಲಿ ಇಟ್ಟುಕೊ೦ಡು ನಮ್ಮ ಹಿರಿಯರು ಜ್ಯೋತಿಷ್ಯವನ್ನು ಒ೦ದು ಮನೋವಿಜ್ನಾನವಾಗಿ ಬೆಳೆಸಿದರು. ಇದರಿ೦ದ ಹಲವಾರುಜನರ ಸಮುದಾಯದ ಮಾನಸಿಕ ಸಮಸ್ಯೆಗಳು ಆರ್ಥಿಕ ಸಮಸ್ಯೆಗಳು ಪರಿಹಾರವಾಗಿದೆ. ಈ ದೃಷ್ಟಿಯಿ೦ದ ಜ್ಯೋತಿಷ್ಯ ಶಾಸ್ತ್ರವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವುದರಿ೦ದ ಜನಸಾಮಾನ್ಯರಿಗೆ ನಿಜವಾದ ಉಪಯೋಗವಿದೆ. ಆದರೆ ಜ್ಯೋತಿಷ್ಯದಿ೦ದ ಮೂಡನ೦ಬಿಕೆಗಳನ್ನು ಬೆಳೆಸಬಾರದು ಮತ್ತು ಜನರನ್ನು ಹೆದರಿಸಬಾರದು. ಬರಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಮಾನಸಿಕವಾಗಿ ಅವರನ್ನು ದೃಡಮಾಡಬೇಕು. ಇದು ನಿಜವಾದ ಜ್ಯೋತಿಷಿಯ ಕೆಲಸ. ಇದನ್ನು ಬಿಟ್ಟು ಮತ್ತ್ಲ್ಲವನ್ನೂ ಮಾಡುತ್ತಿರುವವರನ್ನು ನಾವು ಬಹಿಷ್ಕರಿಸಬೇಕು

  ReplyDelete
 82. ನಮ್ಮ ಸಂಸ್ಕೃತಿ , ನಮ್ಮ ಅಚಾರ ಇವನ್ನೆಲ್ಲ, ಸ್ವಾರ್ಥಕ್ಕೆ ಬಳಸಿಕೊಂಡು ನಮ್ಮ ತಾಣವನ್ನು ಹಾಳು ಮಾಡಿಕೊಂಡು
  ಯಾವತ್ತು ನಮ್ಮ ದೇಶದಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಯಾರು ಕೇಳದೆ . ಪ್ರತಿ ಕ್ಷಣ ಸುಳ್ಳಿನ ಕಂತೆಗಳು, ಹೆಣ್ಣಿನ ವರ್ತನೆ , ನಡು ಬೀದಿಯಲ್ಲಿ ವ್ಯಭಿಚಾರ
  ಹಣಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ದವಿರುವ ಈ ಕಾಲಘಟ್ಟದಲ್ಲಿ ಒಬ್ಬ ನರೇಂದ್ರ ಶರ್ಮ ರಂಥಹ ಒಬ್ಬ ಮನುಷ್ಯ ಕೊನೆಯ ಪಕ್ಷ ಎಚ್ಚರಿಕೆ ಮಾತುಗಳನ್ನು ಹೇಳುತ್ತಿದ್ದಾರೆ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಯಲ್ಲಿ ಯಾರಿಗೂ ಭಯವೆ ಇಲ್ಲ . ಇಂತದರಲ್ಲಿ ನರೇಂದ್ರ ಶರ್ಮ ರಂಥಹ ಒಬ್ಬರ ಮಾತುಗಳು ಇವತ್ತಿನ ದಿನಗಳಲ್ಲಿ ಪ್ರಸ್ತುತ ಅಂತ ಅನ್ನಿಸುತ್ತಿದೆ.

  ನಮ್ಮ ಭಾರತದ ಸಂಸ್ಕೃತಿ ಬಹಳ ಉನ್ನತವಾದುದು. ಅದನ್ನು ಕಾಪಾಡಿಕೊಳ್ಳಬೇಕು.
  ರಾಜು, ದಾವಣಗೆರೆ
  rajunamasthe@gmail.com

  ReplyDelete
 83. I dont understand why people take his suggestions very seriously. I purely watch that program as a comedy show

  ReplyDelete
 84. Hi all,
  I request to all TV channel please stop such stupid things and don't try to fool the people using such stupid program and run a program like people should came out of these stupid things

  thanks

  ReplyDelete
 85. hello boss whatever u doing is correct.ee swamige common sense illa, and he dnt no how to talk in front of media. he is scolding us like anything. who the hell is he? i felt as he is one of dangerous insect that is trying to spread superstitious beliefs in our country through media. he dnt no abt his own astro, then how can he predict abt whole world.. whtver the statements gvn by this swami r all wrong. in an episode he suggested to go to darga which is near savadatti. that episode was live in tv, and this swamy told we must meet the fakeer and take his blessings.. and he told the age of that fakeer is more than 100yrs.. later i came to know that the fakeer is a fake person and he ran out of darga n this was put up in news paper.... ok wat ever Zee media is my favorite n just want to suggest not to support fake peoples like this swamy......

  ReplyDelete
 86. See...all of us need to have good intellect to decide what is correct and what is wrong??? When Benni hin can came to Bangalore, people amassed there believing in his miraculous powers, but what happend??? Recently some predictions were shown in TV channels that the world will end by May 25 2011, did this happen? Why TV channels are provoking people by organizing controversial discussions viz, Sathya sai death etc.

  ReplyDelete
 87. ಬೃಹತ್ ಬ್ರಹ್ಮಾ೦ಡದ ನರೇ೦ದ್ರ ಶರ್ಮ ಉಪಯೋಗಿಸುವ ಮು೦ಡೇವು,ನಾಚಿಕ್ಕೆಟ್ಟೋವು ಹಾಗು ಇ೦ಥ ಹಲವು ಪದಗಳು ನೋಡುಗರಿಗೆ ಇರುಸು ಮುರುಸು ಉ೦ಟುಮಾಡುವುದಲ್ಲದೆ, ಅವರ ಸ೦ಸ್ಕಾರವನ್ನು ತೋರಿಸುತ್ತದೆ...ತನ್ನನ್ನು ತಾನು ದೇವರು ಎ೦ಬ ಮಟ್ಟಕ್ಕೆ ಬಿ೦ಬಿಸಿಕೊಳ್ಳುವ ಇವರಿಗೆ ಹೇಗೆ ಮಾತಾಡಬೇಕು ಎ೦ಬ ಸಾಮಾನ್ಯ ಪ್ರಜ್ಞೆಯೂ ಇಲ್ಲ...ಇದನ್ನು ಹಾಗೆ ಪ್ರಸಾರ ಮಾಡುತ್ತಿರುವ ಜ಼ೀ ಚಾನಲ್ ಅವರಿಗೂ ಇದರ ಬಗ್ಗೆ ಅರಿವಿಲ್ಲದಿರುವುದು ನಾಚಿಕೆಗೇಡಿನ ಸ೦ಗತಿ ಈ ದರಿದ್ರ ಜ್ಯೋತಿಷಿಯ ಗ್ರಹಚಾರ ಬಿಡಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ಬೆಂಬಲ ಇದೆ

  ReplyDelete