ನಮ್ಮ ಓದುಗರೊಬ್ಬರು ಸುವರ್ಣ ನ್ಯೂಸ್‌ನಲ್ಲಿ ಇತ್ತೀಚೆಗೆ ನಡೆದ ಚರ್ಚೆಯೊಂದರ ವಿಡಿಯೋ ಲಿಂಕ್ ಕಳಿಸಿದ್ದಾರೆ. ಇದು ಪ್ರಸಾರವಾಗಿರುವುದು ಜನಾರ್ದನ ರೆಡ್ಡಿಯನ್ನು ಸಿಬಿಐ ಪೊಲೀಸರು ಬಂಧಿಸಿದ ಸಂದರ್ಭದಲ್ಲಿ. ರಂಗನಾಥ್ ಭಾರದ್ವಾಜ್ ನಿರೂಪಕರಾಗಿರುವ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ವಕ್ತಾರ ವಿ.ಎಸ್.ಉಗ್ರಪ್ಪ, ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಹಾಗು ಅಂಕಣಕಾರ ಪ್ರತಾಪಸಿಂಹ ಪಾಲ್ಗೊಂಡಿದ್ದಾರೆ.
ಉಗ್ರಪ್ಪ ಮತ್ತು ಪ್ರತಾಪ ಸಿಂಹ ಇಬ್ಬರೂ ಉಗ್ರ ಸ್ವರೂಪ ಪ್ರದರ್ಶಿಸಿರುವುದನ್ನು ಇಲ್ಲಿ ಗಮನಿಸಬಹುದು. ಚರ್ಚೆಯ ಸಂದರ್ಭದಲ್ಲಿ ಬೇಕಾಬಿಟ್ಟಿ ಮಾತನಾಡಬೇಡಿ ಎಂದು ಉಗ್ರಪ್ಪನವರಿಗೆ ಪ್ರತಾಪಸಿಂಹ ತಾಕೀತು ಮಾಡುವುದರೊಂದಿಗೆ ಇಬ್ಬರ ಜಗಳ ಶುರುವಾಗುತ್ತದೆ.
ಜಗಳಗಳು ಇತ್ತೀಚಿಗೆ ಟಿವಿ ಸ್ಟುಡಿಯೋಗಳಲ್ಲಿ ಮಾಮೂಲಿಯಾಗಿದೆ. ದಿನೇಶ್ ಗುಂಡೂರಾವ್ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರುಗಳು ಪರಸ್ಪರ ಹೊಡೆದಾಡುವಷ್ಟು ಜಗಳ ಮಾಡಿಕೊಂಡಿದ್ದು ನಿಮಗೆ ನೆನಪಿರಬಹುದು. ಇತ್ತೀಚಿಗೆ ವಿ.ಸೋಮಣ್ಣ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಪರಸ್ಪರ ಅಸಹ್ಯ ಭಾಷೆ ಬಳಸಿ ಕಿತ್ತಾಡಿದ್ದೂ ನೆನಪಿರಬಹುದು. ಇಲ್ಲಿ ಜಗಳವಾಡಿದವರೆಲ್ಲ ರಾಜಕಾರಣಿಗಳು. ಆದರೆ ಈ ಪ್ರಕರಣದಲ್ಲಿ ಜಗಳ ನಡೆದಿರುವುದು ಒಬ್ಬ ಪತ್ರಕರ್ತ ಮತ್ತು ಒಬ್ಬ ರಾಜಕಾರಣಿಯ ನಡುವೆ ಆಗಿರುವುದರಿಂದ ಕುತೂಹಲಕ್ಕೆ ಕಾರಣವಾಗಿದೆ.
ಉಗ್ರಪ್ಪ ಜತೆ ಸಿಂಹ ಕದನ ಇದು ಮೊದಲ ಬಾರಿಯೇನೂ ಅಲ್ಲ. ಹಿಂದೆಯೇ ಇದೇ ವೇದಿಕೆಯಲ್ಲಿ ಹಾಕ್ಯಾಟ ನಡೆಸಿದ್ದಾರೆ. ಉಗ್ರಪ್ಪನವರಿಗೆ ಅದೆಲ್ಲ ಸಿಟ್ಟು ಒಂದೇ ಸಮನೆ ನೆತ್ತಿಗೇರಿ ಜಗಳಕ್ಕೆ ನಿಂತಿರಬೇಕು ಎನಿಸುತ್ತದೆ.
ಹಾಗೆ ನೋಡಿದರೆ ಉಗ್ರಪ್ಪನವರು ರಾಜ್ಯದಲ್ಲಿರುವ ರಾಜಕಾರಣಿಗಳ ಪೈಕಿ ನೈತಿಕ ಚಾರಿತ್ರ್ಯ ಇಟ್ಟುಕೊಂಡಿರುವ ಬೆರಳೆಣಿಕೆಯ ಜನರ ಪೈಕಿ ಒಬ್ಬರು. ಎಂಜಲು ಕಾಸಿಗೆ ಕೈ ಚಾಚಿದವರಲ್ಲ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಸರಳವಾಗಿಯೇ ಇದ್ದರು, ಈಗಲೂ ಹಾಗೇ ಇದ್ದಾರೆ. ಗಣಿಕಳ್ಳ ಬಳ್ಳಾರಿ ರೆಡ್ಡಿಗಳ ವಕ್ತಾರನಂತಿರುವ ಪತ್ರಕರ್ತನೋರ್ವ ಹಿಂದೆ ಉಗ್ರಪ್ಪನವರನ್ನು ಸಂಪರ್ಕಿಸಿ ತನ್ನ ಗಣಿಗೆಳೆಯರೊಂದಿಗೆ (ಅಣ್ಣ-ತಮ್ಮಂದಿರು) ರಾಜಿ ಮಾಡಿಸಿ ಡೀಲಿಂಗ್ ನಡೆಸುವ ಪ್ರಯತ್ನ ನಡೆಸಿ ಹಚ್ಯಾ ಎಂದು ಓಡಿಸಿಕೊಂಡಿದ್ದ. ಇಂಥ ಆಮಿಷಗಳಿಗೆ ಉಗ್ರಪ್ಪ ಬಲಿಯಾದವರಲ್ಲ.
ಉಗ್ರಪ್ಪ ಜತೆ ಜಗಳಕ್ಕೆ ನಿಂತ ಪ್ರತಾಪ ಸಿಂಹ ಈಗೀಗ ಟಿವಿ ಸ್ಟುಡಿಯೋದಲ್ಲಿ ಕಾಣಿಸುತ್ತಿರುವವರು. ಇನ್ನೂ ಅವರು ಈ ಕೆಲಸದಲ್ಲಿ ಮಾಗಿದ ಹಾಗೆ ಕಾಣುತ್ತಿಲ್ಲ. ಅಂಕಿಅಂಶಗಳಿಗೆ ಸೀಮಿತವಾದ ಜ್ಞಾನ, ತುಸು ಎಳಸೆನ್ನುವ ವಿಚಾರ ಮಂಡನೆ. ಕ್ಷೀಣ ಧ್ವನಿಯಲ್ಲಿ ಕಾನ್ವೆಂಟ್ ಮಕ್ಕಳ ಹಾಗೆ ಗಿಳಿಪಾಠ ಒಪ್ಪಿಸುವವರಂತೆ ಮಾತನಾಡುವುದು ಅವರ ಸಮಸ್ಯೆ.
ಉಗ್ರಪ್ಪ ಮತ್ತು ಪ್ರತಾಪ ಸಿಂಹರ ನಡುವೆ ಜಗಳ ತಾರಕಕ್ಕೇರಿದಾಗ ಕೆಲವು ಅನಿರೀಕ್ಷಿತ ಮಾತುಗಳೂ ತೂರಿ ಬಂದವು. ಮಾತಿಗೆ ಮಾತು ಬೆಳೆದ ಸಂದರ್ಭದಲ್ಲಿ ಉಗ್ರಪ್ಪ ಒಂದು ಮಾತನ್ನು ಹೇಳಿದ್ದನ್ನು ಗಮನಿಸಿ: ಇವರು ಯಾರ‍್ಯಾರು ಏನೇನು ಮಾಡ್ತಿದ್ದಾರೆ ಅಂತ ನನಗೂ ಗೊತ್ತಿದೆ, ಸಂದರ್ಭ ಬಂದಾಗ ಬಿಡಿಸಿಡೋಣ. ಈ ಸಂದರ್ಭದಲ್ಲಿ ಬೇಡ.
ಉಗ್ರಪ್ಪ ಇಂಥ ಮಾರ್ಮಿಕವಾದ ಮಾತುಗಳನ್ನು ಆಡುತ್ತಿದ್ದಂತೆ ರಂಗನಾಥ ಭಾರದ್ವಾಜ್ ಮಧ್ಯೆ ಪ್ರವೇಶಿಸಿ ಮಾತು ಎಲ್ಲಿಂದ ಎಲ್ಲಿಗೋ ಹೋಗೋದು ಬೇಡ ಎಂದು ಅದನ್ನು ಅಲ್ಲೇ ತಡೆಯಲು ಯತ್ನಿಸಿದರು.
ಅಸಲಿಗೆ ಉಗ್ರಪ್ಪ ಏನನ್ನು ಹೇಳಬಯಸಿದ್ದರು? ಯಾರ‍್ಯಾರು ಏನೇನು ಮಾಡಿದ್ದೇವೆ ಹೇಳಿ ಬಿಡಿ ಎಂದು ಪ್ರತಾಪಸಿಂಹ ಯಾಕೆ ಒತ್ತಾಯಿಸಲಿಲ್ಲ? ಉಗ್ರಪ್ಪ ಎಲ್ಲವನ್ನು ಬಿಡಿಸಿ ಹೇಳುವ ಸಂದರ್ಭ ಯಾವಾಗ ಬರುತ್ತದೆ?
That's all we knew it.
ReplyDeleteRead Prajavani everyday.
Ugrappa saralavagiddaru anthiralla, avaru virodha pakshada nayakaragiddaga 'Endeavour' car mathrave beku antha hata hidididdu thamege marethu hoyithe, Ugrappanavaru thavu en mathadthidini antha gothilde thiklu thara press meets madirodu navu nodilwe?
ReplyDeleteElladakku sakshi ide ide anthane press meet madida avaru, avara eshtu aaropagalige sakshi kottidare?
Avra gani varadiyalli Anil Lad, Dharma Singh .... avarugala hesaru serisidra?
hege heltha hodre ugrappanavara sakashtu bandavala siguthe, antha rajakariniyinda andu ashtannallade berenannu nirikshisiralilla.
Adre nivu ee tharada vishaya hidkondu time pass madthidira anisuthe
ಹೌದು.ಇದು ಪ್ರಸಾರವಾಗುತ್ತಿರುವಾಗ ನಾನೂ ಗಮನಿಸಿದ್ದೆ.ಇಲ್ಲೊಂದು ವಿಷಯ ಗಮನಿಸಿ.
ReplyDeleteಉಗ್ರಪ್ಪ ತಾನು ಏನು ಹೇಳೋದಕ್ಕೆ ಬಯಸಿದ್ದರೋ,ಅದನ್ನೆಲ್ಲ ಆ ಸಂಧರ್ಭದಲ್ಲೇ ಹೇಳಿದ್ದರೆ ಅದು ಪ್ರಸಾರವಾಗುತ್ತಿತ್ತೆ?ಅವರು ಹೇಳಬಯಸಿದ್ದು ಪ್ರತಾಪಸಿಂಹರ ಬಗ್ಗೆ.ಆತ ಕನ್ನಡಪ್ರಭದ ಪತ್ರಕರ್ತ.ಸುವರ್ಣನ್ಯೂಸ್ ಕೂಡ ಕೂಡ ಕನ್ನಡಪ್ರಭದ ಒಂದು ಭಾಗವೇ ಸರಿ.ಹಾಗೊಂದು ವೇಳೆ ಉಗ್ರಪ್ಪ "ಯಾರ್ಯಾರು ಏನೇನು ಮಾಡಿದ್ದಾರೆ" ಎಂಬುದನ್ನು ನೇರವಾಗಿ ಹೇಳಿದ್ದರೆ ಅದು ಅಷ್ಟೇ ನೇರವಾಗಿ ಪ್ರಸಾರವಾಗುತ್ತಿತ್ತೆ ಎಂಬುದು ಬಹುಮುಖ್ಯ ಪ್ರಶ್ನೆ..
ಹಾಗಾಗಿದ್ದರೆ ಅದು ಮತ್ತೊಂದು ಘಟನೆಗೆ ಮುನ್ನುಡಿ ಹಾಡುತ್ತಿತ್ತು.ಹಾಗಾಗಿ ಭಾರದ್ವಾಜ್ ಜಾಣತನದಿಂದ ಅದನ್ನು ಜಾರಿಸಿದರೆಂದು ಹೇಳಬಹುದು.
Every discussion should be presented in all the ways which might have many dimensions..
ಪ್ರತಾಪ ಸಿಂಹ ಬರವಣಿಗೆಯಲ್ಲಿ ಬಹಳ ಕೊಪೊದ್ರಿಕ್ತರಾಗಿ ಬರೀತಾರೆ ಆದ್ರೆ ಅವರು ಮಾತು ಬಹಳ ವಕ್ರವಾಗಿ ಮಾತಾಡ್ತಾರೆ ಅದು ತಪ್ಪು , ಈಗ ನೋಡಿ ಜನಶ್ರೀ ಸಂಪಾದಕರಾದ ಅನಂತ ಚಿನಿವಾರ್ ಮಾತು ಬಹಳ ಚೆನ್ನಾಗಿರುತ್ತೆ ಮತ್ತು ಯಾವಾಗಲು ನಿದಾನವಾಗಿ ವಿಷಯದ ಬಗ್ಗೆ ಹೆಚ್ಚು ಹೆಚ್ಚು ಗಮನ ಕೊಡ್ತಾರೆ
ReplyDeleteನಾವು ಇದನ್ನೇ ಬಯಸ್ತೀವಿ ಪ್ರತಾಪ್ ಸಿಂಹ ಅವರಿಂದ
All the Best Pratap Simha.
ಉಗ್ರಪ್ಪ ಅವರು ಹೇಳಲು ಹೊರಟಿದ್ದು, ಭ್ರಷ್ಟ - ಗೋ ಮುಖ ವ್ಯಾಘ್ರ ಪತ್ರಕತರ ಹಗರಣಗಳನ್ನ. ಉಗ್ರಪ್ಪರೇ, ನಿಮ್ಮ ಬಳಿಯಿರುವ ಭ್ರಷ್ಟ ಪತ್ರಕತರ ಹಗರಣಗಳನ್ನು ಬಹಿರಂಗ ಮಾಡಿ.
ReplyDeleteದುರ್ವಾಸಪುರದಲ್ಲಿ ನಾರಣಪ್ಪನ ಶವ ಕೊಳೆಯುತ್ತಿದೆ. ಕೊಳೆತ ಶವದ ದುರ್ವಾಸನೆ. ಶವದ ಸಂಸ್ಕಾರವಾಗಿಲ್ಲ. ಧರ್ಮ ಸೂಕ್ಷ್ಮ ಬಗೆಹರಿದಿಲ್ಲ......
ReplyDeleteRegarding Shimoga Journalists KHB Site Scam Hello Shivamoga published onemore Story
ReplyDeletevisit........................
www.helloshivamogakannadadaily.wordpress.com
idu kelavu vekthigalanna hiyaliso mado vedike agide!!
ReplyDeleteಇಂಟರ್‌ನೆಟ್ ಇಂದ.. ಕದ್ದು.. ಬರೆಯೋದಕ್ಕೂ.. ಸ್ವಂತ ಯೋಚನೆ ಇಲ್ಲದೇ ಮಾತಾಡ್ಕೂ.. ವತ್ಯಾಸ ಇದೆ.. ರಾಜಾ.... ಇಲ್ಲಿ ನೇರಾ ನೇರ. ... ಸಿಕ್ಕ ಹಾಕೊಂಡು ಬಿಡ್ತೀಯಾ... ಹೋಗಲಿ ಬಿಡು.. ಇಗ್ನೋರ್ ದಿಸ್ ಕಮೆಂಟುಉ....
ReplyDeleteಸಂಪಾದಕರೇ, ಶಿವಮೊಗ್ಗ ಪತ್ರಕತರ ಕೆಹೆಚ್ ಬಿ ಸೈಟ್ ಹಗರಣದ ಬಗ್ಗೆ ಸಮಗ್ರ ಮಾಹಿತಿಗಾಗಿ ಈ ವೆಬ್ ಸೈಟ್ ವೀಕ್ಷಿಸಿ. ನಾನು ವೀಕ್ಷಿಸಿದ್ದೇನೆ. www.helloshivamogakannadadaily.wordpress.com
ReplyDeleteಪ್ರತಾಪನ ಪ್ರಲಾಪಗಳನ್ನು ಉಗ್ರಪ್ಪ ಮಾತ್ರವಲ್ಲ ಬೇರ್ಯಾರು ಸಹಿಸಲಸಾದ್ಯ. ಮಾತೆತ್ತಿದರೆ ನನ್ನ ಬಿಜೆಪಿ ಎಂದು ಬಿಜೆಪಿ ಪರ ವಕಾಲತ್ತು ವಹಿಸೋದು ಮತ್ತೆ ಅದೇ ಪಕ್ಷದ ಕಳಂಕಿತ ಸಚಿವರ ಮೇಲೆ ಆರೋಪಗಳ ಪಟ್ಟಿಕೊಟ್ಟು ದ್ವಂದ್ವ ಮೆರೆಯೋದು. ಆತ ಯಾವುದೇ ಚರ್ಚೆಯಲ್ಲ ಪಾಲ್ಗೊಂಡರೂ ಇಂತಹದ್ದೇ ಮರುಕಳಿಸುತ್ತದೆ. ವಿಪರ್ಯಾಸವೆಂದರೆ ಭಾರದ್ವಜ್ ಅವರನ್ನು ಕಂಟ್ರೋಲ್ಗೆ ತೆಗೆದುಕೊಂಡು ನಿರ್ಧೇಶಿಸೋದು. ಇದನೆಲ್ಲ ಸರ್ವರೂ ಸಹಿಸಬೇಕಾಗಿರೋದು ದುರಂತ. ಯಾರನ್ನೂ ಆಹ್ವಾನಿಸದೇ ಸುವರ್ಣ ಸಂಸ್ಥೆಯ ಘಟಾನುಘಟಿಗಳೇ ವಾದ ವಿವಾದ ಮಾಡಿಕೊಳ್ಳುವ ಕಾಲ ದೂರವಿಲ್ಲ. ಅವರೇನೇನು ಮಾಡ್ತಾರೋ ...ನಾವೇನು ನೋಡ್ಬೇಕೋ..ಇನ್ನು ನೀವೇನೇನು ಬರಿಬೇಕೋ ???
ReplyDeleteಉಗ್ರಪ್ಪ ಅವರಿಗೆ ಸಂಪಾದಕೀಯ ಸರ್ಟಿಫಿಕೇಟ್ ಕೊಟ್ಟಿರುವುದು ಕುತೂಹಲಕಾರಿ.
ReplyDeleteSir, how come you miss Ugrappa's letter to
ReplyDeleteV Bhat on Pratap Simha...
ಹೂ.. ಅವರಿಬ್ಬರೂ ಹಂಗೆ ಅಲ್ಲಿ ಜಗಳ ಆಡಿದ್ರೆ.. ಹಾಯ್ ಬೆಂಗಳೂರು... ಪ್ರತಾಪನ ಬಗ್ಗೆ ಬರೆದು ಭಟ್ಟರನ್ನ ಬೈದಿದೆ..
ReplyDeleteಎಲ್ಲಿಯದೋ ಮೋಡ ಎಲ್ಲಿಯೋ ಮಳೆ....
ಸಂಪಾದಕೀಯ ಮಹಾಶಯರು ಯಾರುಯಾರನ್ನೋ ಹಣಿಯಲು ನೋಡುತ್ತಾರೆ. ಅವರಿಗೆ ಆಗದವರ ಬಗ್ಗೆ ಇಲ್ಲಿ ಮಾಹಿತಿ ತೂರಿ ಬಿಡುತ್ತಾರೆ. ಏನೆನು ಪ್ರತಿಕ್ರಿಯೆಗಳು ಬರುತ್ತವೆ? ಯಾವ ರೀತಿಯಲ್ಲಿ ಸಾರ್ವಜನಿಕ ಅಭಿಪ್ರಾಯಗಳು ರೂಪುಗೊಳ್ಳುತ್ತವೆ ಎಂಬುದನ್ನು ಗಮನಿಸುತ್ತಾರೆ. ಮೂಲತಃ ಇದು ಸಾರ್ವಜನಿಕ ಅಭಿಪ್ರಾಯ ರೂಪಿಸುವ ಕಲೆ. ಅವರ ಈ ಜಾಣತನಕ್ಕೆ ಮೆಚ್ಚಬೇಕು. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ. ನಡೆಯಲಿ. ನೋಡ್ತಾ ಇರ್ತಿವಿ ನಾವು, ಏನೇನ್ ಮಾಡ್ತೀರೊ ಅಂತ!
ReplyDeleteಸಂಪಾದಕೀಯ ಹೇಗೆ ಉಗ್ರಪ್ಪನವರಿಗೆ ಸರ್ಟಿಫಿಕೆಟ್ ಕೊಟ್ಬಿಟ್ರು? ಉಗ್ರಪ್ಪ ಎಲ್ಲ ಕಾಂಗ್ರೆಸ್ ಮುಖಂಡರುಗಳು, ಕಾರ್ಯಗಳನ್ನ ಸಪೋರ್ಟ್ ಮಾಡ್ಕೊಂಡಿದ್ದಾರೆ. ಅಂದ್ರೆ ಅಲ್ಲಿ biased ಆಗಿರೋರು ಯಾರು ಅಂತಾಯ್ತು? ಈ ಲೇಖನ ಇನ್ನೊಂದು ನಿಮ್ಮ biased ಮನಸ್ತಿತಿಗೆ ಉದಾರಣೆ.
ReplyDelete