Thursday, July 14, 2011

ಹೊಸ ಪತ್ರಿಕೆಯ ಹೆಸರು ವಿಜಯವಾಣಿ, ಅದು ಶುರುವಾಗೋದು ೧೧-೧೧-೧೧ರಂದು...

Vijay Sankeshwar new paper name VIJAYAVANI. Vani happens to be Sankeshwar's daughet-in-law. He purchased it from Venkateshmurthy,Tumkur for Rs.35 lakhs.
ಇವು ವಿಶ್ವೇಶ್ವರ ಭಟ್ಟರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸಾಲುಗಳು.

ನಿಜ, ಸಂಕೇಶ್ವರರ ಹೊಸ ಪತ್ರಿಕೆಯ ಹೆಸರು ವಿಜಯ ವಾಣಿ. ಇದೇ ಟೈಟಲ್ ಮೇಲೆ ಸಂಕೇಶ್ವರರು ಕಣ್ಣಿಟ್ಟು ಹಲವು ವರ್ಷಗಳೇ ಆಗಿತ್ತು. ಹಿಂದೆ ಉಷಾಕಿರಣವನ್ನು ಆರಂಭಿಸುವುದಕ್ಕೂ ಮುನ್ನ ಅವರ ಮುಂದಿದ್ದ ಹೆಸರೂ ಇದೇ. ಇದು ೧೯೬೭ರಲ್ಲಿ ಎಚ್.ಆರ್.ಗುಂಡೂರಾವ್ ಎಂಬುವವರ ಹೆಸರಲ್ಲಿ ರಿಜಿಸ್ಟರ್ ಆಗಿದ್ದ ಟೈಟಲ್. ಇದನ್ನು ನಡೆಸುತ್ತಿದ್ದವರು ವೆಂಕಟೇಶಮೂರ್ತಿ ಎಂಬ ಹಿರಿಯ ಪತ್ರಕರ್ತರು. ಸಂಕೇಶ್ವರರಿಗೆ ಸಂಬಂಧಿಸಿದವರು ಟೈಟಲ್ ಕೇಳಿದಾಗ ಅವರು ನಯವಾಗಿಯೇ ನಿರಾಕರಿಸಿದ್ದರು. ಹೀಗಾಗಿ ಸಂಕೇಶ್ವರರು ಉಷಾಕಿರಣ ಎಂಬ ಹೆಸರಿನಲ್ಲಿ ಪತ್ರಿಕೆ ಆರಂಭಿಸಿದ್ದರು.

ಈ ಬಾರಿ ಹೊಸ ಪತ್ರಿಕೆ ಆರಂಭಿಸುವಾಗ ಸಂಕೇಶ್ವರರು ಆನಂದ ಕರ್ನಾಟಕ ಟೈಟಲ್‌ನೊಂದಿಗೆ ಪತ್ರಿಕೆ ಆರಂಭಿಸಬಹುದು ಎಂಬ ಗುಸುಗುಸು ಕೇಳಿಬಂದಿತ್ತು. ಆ ಕುರಿತು ಆನಂದ ಕರ್ನಾಟಕದ ಸಂಪಾದಕರಾದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಸಂಪಾದಕೀಯಕ್ಕೆ ನೀಡಿದ್ದ ಸ್ಪಷ್ಟನೆಯನ್ನು ನೀವು ಗಮನಿಸಿರಬಹುದು.

ಈ ಬಾರಿಯೂ ತಮ್ಮ ಪತ್ರಿಕೆಯ ಹೆಸರಿನಲ್ಲಿ ವಿಜಯ ಎಂಬ ಹೆಸರು ಇರಲೇಬೇಕು ಎಂದು ಟೈಟಲ್‌ಗಳನ್ನು ಹುಡುಕಾಡಿದಾಗ ಮತ್ತೆ ತೊಡರಿಕೊಂಡಿದ್ದು ವಿಜಯವಾಣಿಯೇ. ಈ ಬಾರಿಯೂ ಹಲವು ವಿಘ್ನಗಳಿದ್ದವು. ಟೈಟಲ್ ಕೊಡಬೇಕೆ ಬೇಡವೇ ಎಂಬ ವಿಷಯದ ಕುರಿತು ವೆಂಕಟೇಶಮೂರ್ತಿಯವರ ಕುಟುಂಬದಲ್ಲೇ ಹಲವು ಬಗೆಯ ಅಭಿಪ್ರಾಯಗಳಿದ್ದವು. ಕಡೆಗೂ ಟೈಟಲ್ ಸಂಕೇಶ್ವರರಿಗೆ ದೊರಕಿದೆ. ಹೀಗಾಗಿ ವಿಜಯವಾಣಿಯೇ ಸಂಕೇಶ್ವರರ ಹೊಸ ಪತ್ರಿಕೆಯಾಗಲಿದೆ.

ಅಂದ ಹಾಗೆ ವಿಜಯವಾಣಿಯ ಆರಂಭಕ್ಕೂ ಒಂದು ಮುಹೂರ್ತ ನಿಗದಿಯಾಗಿರುವ ಬಗ್ಗೆ ವರ್ತಮಾನವಿದೆ. ನಮಗೆ ಗೊತ್ತಾದ ಪ್ರಕಾರ ಹನ್ನೊಂದು ಹನ್ನೊಂದು ಹನ್ನೊಂದರಂದು ಪತ್ರಿಕೆಯ ಮೊದಲ ಪ್ರತಿ ಹೊರಗೆ ಬರಲಿದೆ. ಇದೊಂದು ವಿಶೇಷ ದಿನ. ಸಾವಿರ ವರ್ಷಕ್ಕೆ ಒಮ್ಮೆ ೧೧-೧೧-೧೧ ಅಂಕಿಗಳ ಡೇಟು ಬರುತ್ತದೆ. ಹೀಗಾಗಿ ಈ ವಿಶೇಷ ದಿನದಂದು ಪತ್ರಿಕೆ ಆರಂಭಿಸುವ ಆಲೋಚನೆ ಸಂಕೇಶ್ವರರಿಗಿದೆ ಎಂಬ ಮಾಹಿತಿ ಇದೆ.

ಈಗಾಗಲೇ ನಿಯೋಜಿತ ಪ್ರಧಾನ ಸಂಪಾದಕ ತಿಮ್ಮಪ್ಪ ಭಟ್ಟರು ಬೆಂಗಳೂರಿನ ವಿಆರ್‌ಎಲ್ ಕಚೇರಿಯಿಂದಲೇ ಕೆಲಸ ಕಾರ್ಯ ಆರಂಭಿಸಿದ್ದಾರೆ. ಒಟ್ಟು ಹತ್ತು ಆವೃತ್ತಿಗಳು ಆರಂಭವಾಗುವುದೂ ಬಹುತೇಕ ಖಚಿತವೇ. ಆದರೆ ಗಂಗಾವತಿ ಆವೃತ್ತಿಯ ಬದಲು ಕೊಪ್ಪಳ, ಶಿವಮೊಗ್ಗದ ಬದಲು ದಾವಣಗೆರೆ ಆವೃತ್ತಿ ಆರಂಭಿಸಲು ಯೋಜನೆಯಲ್ಲಿ ಸಂಕೇಶ್ವರರು ಇದ್ದಾರೆ ಎಂಬ ಮಾಹಿತಿಯಿದೆ.

ವಿಜಯ ಸಂಕೇಶ್ವರ್ ತಮ್ಮ ಹೊಸ ಪತ್ರಿಕೆಯ ಮೂಲಕ ಕನ್ನಡ ಪತ್ರಿಕಾ ರಂಗದಲ್ಲಿ ಇನ್ನೊಂದು ಸುತ್ತಿನ ದರ ಸಮರ ಆರಂಭಿಸುವುದು ಸರಿಯೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಒಂದು ಪೋಲ್ ನಡೆಸಿದ್ದು ನಿಮಗೆ ಗೊತ್ತು. ಇದರ ಫಲಿತಾಂಶ ಅಚ್ಚರಿಯದು. ಸರಿ ಎಂದು ಹೇಳುವವರ ಸಂಖ್ಯೆ ಶೇ.೭೦ರಷ್ಟು. ಶೇ.೨೬ರಷ್ಟು ಮಂದಿ ಮಾತ್ರ ಇದು ಸರಿಯಲ್ಲ ಎಂದಿದ್ದಾರೆ. ಶೇ.೪ರಷ್ಟು ಮಂದಿ ಗೊತ್ತಿಲ್ಲ ಎಂದಿದ್ದಾರೆ.

ಉಳಿದಿರುವ ಪ್ರಶ್ನೆ ಒಂದೇ. ವಿಜಯವಾಣಿಯ ಮುಖಬೆಲೆ ಎಷ್ಟಿರುತ್ತದೆ. ಈ ಪತ್ರಿಕೆ ನಡೆಸುವ ಬೆಲೆಸಮರಕ್ಕೆ ಯಾರ‍್ಯಾರು ಬಲಿಯಾಗುತ್ತಾರೆ? ಕಾದು ನೋಡೋಣ.

16 comments:

  1. ಅಲ್ರೀ ಸಂಪಾದಕರೆ...
    ಯಾವ ದೊಣ್ಣೆ ನಾಯಕನ ಯಾವ್ ದೊಡ್ಡ ಪತ್ರಿಕೆ ಬಂದರೆಷ್ಟು ಬಿಟ್ರೆಷ್ಟು. ವರ್ತಮಾನದ ತಲ್ಲಣಗಳ ಬಗ್ಗೆ ಹೆಚ್ಚಿನ ಮಹತ್ವ ಕೊಟ್ಟು ಆ ಕುರಿತು
    ನಿಮ್ಮ ನಿಲುವನ್ನು ಮಂಡಿಸಿ. ಐಶ್ವರ್ಯ ರೈಳ ಇನ್ನು ಹುಟ್ಟದ ಮಗುವಿನ ಬಗ್ಗೆ ತಲೆಕೆಡಿಸಿಕೊಂಡಿರುವ ಮೂರನೇ ದರ್ಜೆ ಮಾಧ್ಯಮಗಳಿಗೂ ನಿಮಗೂ ಏನೂ ವ್ಯತ್ಯಾಸ ಹೇಳಿ? ಹೆಚ್ಚು ಸಭ್ಯರು ಓದುವರೆಂಬ ನಂಬಿಕೆ ಇರುವ ನಿಮ್ಮ ಬ್ಲಾಗ್ನಲ್ಲಿ ಇಂಥ ಚಿಲ್ಲರೆ ವಿದ್ಯಾಮಾನಗಳಿಗೇಕೆ ಅಂಥ ಮಹತ್ವ ಕೊಡುತ್ತೀರಿ? ನಿಮ್ಮ ಧೋರಣೆಗಳೇ ಕೆಲವೊಮ್ಮೆ ಅರ್ಥವಾಗುವುದಿಲ್ಲ.

    ವಿಶ್ವಾಸವಿರಲಿ
    -ಕೆ.ಎಲ್.ಚಂದ್ರಶೇಖರ್ ಐಜೂರ್

    ReplyDelete
  2. 11/11/2111 .... nooru varShakkomme.. saavira varshakkalla..

    ReplyDelete
  3. ಬೆಲೆ ಸಮರದ ಮೂಲಕ ಪತ್ರಿಕೆ ನಡೆಸುವುದರ ಹಿಂದೆ ರಾಜಕೀಯ ಧೋರಣೆಗಳಿರುತ್ತವೆ. ಇದು ಒಂದು ರೀತಿಯಲ್ಲಿ ವೋಟಿಗೆ ನೋಟು ತರಹವೇ ಜನರನ್ನು ಭ್ರಷ್ಟಗೊಳಿಸಿ ರಾಜಕೀಯ ಮೇಲುಗೈ ಪಡೆಯುವ ತಂತ್ರದ ರೀತಿಯಲ್ಲಿ ಅನೈತಿಕ ಮಾರ್ಗವೇ ಆಗಿದೆ. ಜನ ಕಡಿಮೆ ಬೆಲೆಗೆ ವಸ್ತುಗಳನ್ನು ನೀಡಿದರೆ ಕೊಳ್ಳಲು ಮುಗಿಬೀಳುತ್ತಾರೆ. ಹೀಗಾಗಿ ಪತ್ರಿಕೆಯ ಬೆಲೆ ಸಮರದ ಕುರಿತು ಕೇಳಿದ ಅಭಿಪ್ರಾಯಕ್ಕೆ ೭೦% ಜನ ಪರವಾಗಿದ್ದಾರೆ. ಅಂದರೆ ನಮ್ಮ ಸಮಾಜದಲ್ಲಿ ೭೦% ಜನ ಭ್ರಷ್ಟಾಚಾರವನ್ನು ಬೆಂಬಲಿಸುತ್ತಾರೆ ಎಂದಾಯಿತು. ೨೬% ಶೇಕಡಾ ಜನ ಮಾತ್ರ ನೈತಿಕ ದೃಢತೆ ಹೊಂದಿದ್ದಾರೆ ಎಂದು ಕಾಣುತ್ತದೆ. ಗುರಿ ಮಾತ್ರವಲ್ಲ ಗುರಿ ತಲುಪುವ ಮಾರ್ಗವೂ ಪರಿಶುದ್ಧವಾಗಿರಬೇಕು ಎಂಬ ಗಾಂಧೀಜಿಯವರ ಮಾತಿಗೆ ಇಂದು ಯಾವ ಬೆಲೆಯೂ ಇಲ್ಲ.
    ಬೆಲೆ ಸಮರ ನಡೆಸಿ ಸಂಕೇಶ್ವರರು ಅದನ್ನು ನಿಲ್ಲಿಸಿ ಪುನ: ಪತ್ರಿಕೆಯ ಬೆಲೆಯನ್ನು ಹೆಚ್ಚಿಸಿದ್ದು ಏನನ್ನು ಸೂಚಿಸುತ್ತದೆ? ಬೆಲೆ ಸಮರವನ್ನು ಯಾವಾಗಲೂ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂದಲ್ಲವೇ? ಪತ್ರಿಕೆಯ ನಿಜವಾದ ವೆಚ್ಚವನ್ನು ನ್ಯಾಯೋಚಿತ ಮಾರ್ಗದಲ್ಲಿ ಭರಿಸಲು ಸಾಧ್ಯವಾಗದೆ ಸಣ್ಣ ಪತ್ರಿಕೆಗಳು ಹಾಗೂ ಮೌಲ್ಯಾಧಾರಿತ ಪತ್ರಿಕೆಗಳು ಬೆಲೆ ಸಮರದಿಂದ ಹೆಚ್ಚಿನ ಪರಿಣಾಮ ಎದುರಿಸುತ್ತವೆ. ಇದು ಮೌಲ್ಯಾಧಾರಿತ ರಾಜಕೀಯ ಪಕ್ಷಗಳು ಹಾಗೂ ಕಪ್ಪು ಹಣವಿಲ್ಲದ ರಾಜಕೀಯ ಪಕ್ಷಗಳು ವೋಟಿಗಾಗಿ ನೋಟು ನೀಡಲು ಸಾಧ್ಯವಾಗದೆ ಅಥವಾ ಅದಕ್ಕೆ ಆಸ್ಪದ ನೀಡದೆ ಹಿನ್ನಡೆ ಅನುಭವಿಸುವಂತೆ ಪತ್ರಿಕೆಗಳ ಕಥೆಯೂ ಆಗುತ್ತದೆ. ಈ ಬೆಲೆ ಸಮರದಲ್ಲಿ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಪತ್ರಿಕೆಗಳು ಭ್ರಷ್ಟ ಹಾದಿ ಹಿಡಿಯಲೇ ಬೇಕಾಗುತ್ತದೆ. ಒಂದೋ ಪತ್ರಿಕೆಗಳು ಕಪ್ಪು ಹಣವನ್ನು ಅವಲಂಬಿಸಬೇಕಾಗುತ್ತದೆ ಅಥವಾ ಜಾಹೀರಾತಿಗಾಗಿ ಮೌಲ್ಯಗಳನ್ನು ಬಲಿ ಕೊಡಬೇಕಾಗುತ್ತದೆ. ಇದು ಬೆಲೆ ಸಮರದ ಅಂತಿಮ ಪರಿಣಾಮ. ಆದರೆ ಸಂಪೂರ್ಣ ಭ್ರಷ್ಟಗೊಂಡ ನಮ್ಮ ಸಮಾಜದಲ್ಲಿ ಇಂತಹ ಮಾತಿಗೆ ಇಂದು ಯಾವ ಬೆಲೆಯೂ ಇಲ್ಲ. ಕಾಲಾಯ ತಸ್ಮೈ ನಮ:

    ReplyDelete
  4. ಕೂಸು ಹುಟ್ಟುವ ಮುನ್ನ ಕುಲಾವಿ ಯಾಕ್ರೀ ?

    ReplyDelete
  5. ಪ್ರಿಯ ಐಜೂರ್,
    ಇದು ಮೀಡಿಯಾ ಸಂಬಂಧಿ ಬ್ಲಾಗ್. ಹತ್ತು ಆವೃತ್ತಿಗಳ ಜತೆಗೆ ಆರಂಭವಾಗುತ್ತಿರುವ ಒಂದು ಹೊಸ ಪತ್ರಿಕೆಯ ಜತೆಗೆ ನೂರಾರು ಪತ್ರಕರ್ತರು ಹೆಣೆದುಕೊಂಡಿರುತ್ತಾರೆ.
    ಪತ್ರಕರ್ತರಲ್ಲದವರಿಗೆ ಇದು ಮಹತ್ವದ ವಿಷಯವಲ್ಲದಿರಬಹುದು. ಆ ಕುರಿತು ನಮ್ಮ ತಕರಾರು ಏನೇನೂ ಇಲ್ಲ. ಇತರರಿಗೆ ಮಹತ್ವವಲ್ಲದ ಆದರೆ ಮಾಧ್ಯಮ ಲೋಕಕ್ಕೆ ಸಂಬಂಧಿಸಿದ ಸಾಕಷ್ಟು ಲೇಖನಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಅದು ನಾವೇ ಆಯ್ದುಕೊಂಡ ಹಾದಿ. ನೀವು ಮೂರನೇ ದರ್ಜೆವರು ಎಂದು ಮೂದಲಿಸಿದ್ದೀರಿ. ನಮಗೆ ಈ ದರ್ಜೆಗಳ ವರ್ಗೀಕರಣದಲ್ಲಿ ನಂಬಿಕೆಯಿಲ್ಲ. ನಿಮ್ಮ ಕಲ್ಪನೆಯ ಮೊದಲನೇ ದರ್ಜೆಗೆ ಬಂದು ನಿಲ್ಲುವ ಆಕಾಂಕ್ಷೆಯೂ ನಮಗಿಲ್ಲ.
    ಹಾಗೆಯೇ ನೀವು ಬಯಸುವ ವರ್ತಮಾನದ ತಲ್ಲಣಗಳ ಕುರಿತು ನಾವು ಆಗಾಗ ಬರೆಯುತ್ತಿರುತ್ತೇವೆ. ಮೂರ್ನಾಲ್ಕು ದಿನಗಳ ಹಿಂದೆ ಆಲೂರು ತಾಲ್ಲೂಕಿನ ಹಳ್ಳಿಯೊಂದರಲ್ಲಿ ಇಬ್ಬರು ಮಲದ ಗುಂಡಿ ಶುದ್ಧಗೊಳಿಸಲು ಹೋಗಿ ಮೃತಪಟ್ಟ ಘಟನೆಯ ಕುರಿತು ಬರೆದಿದ್ದೆವು. ನೀವು ಅಂಥ ಲೇಖನಗಳಿಗೂ ಪ್ರತಿಕ್ರಿಯಿಸಿದರೆ ಸಂತೋಷವಾಗುತ್ತದೆ.

    ReplyDelete
  6. ಐಜೂರ್‌ ಅವರೇ ನಿಮ್ಮ ಪ್ರಶ್ನೆ ಅಸಮರ್ಪಕ ಎಂದು ಹೇಳಬಯಸುತ್ತೇನೆ. ಇಂತಹ ಅಧಿಕ ಪ್ರಸಂಗದ ಮಾತುಗಳನ್ನು ಬಿಟ್ಟು ವಿಚಾರಪೂರ್ಣ ಚರ್ಚೆ ಮಾಡಿ. ಎಲ್ಲಿಯ ಐಶ್ವರ್ಯ ಇನ್ನೆಲ್ಲಿಯ ಪತ್ರಿಕಾ ಮಾಧ್ಯಮ. ಯಾವುದಕ್ಕೋ ಥಳಕು ಹಾಕಿ ನಗೆಗೀಡಾಗಬೇಡಿ.

    ReplyDelete
  7. ಅಲ್ರೀ ಮಿಸ್ಟರ್ ಸಭ್ಯ ಓದುಗ ಐಜೂರ್,
    ನಾನು ಜರ್ನಲಿಸಂನಲ್ಲಿ ಎಂಎ ಮಾಡಿಕೊಂಡು ಕೆಲಸಕ್ಕಾಗಿ ಕಾದು ಕುಳಿತಿದ್ದೇನೆ. ದೊಣ್ಣೆ ನಾಯಕ ಬಂದು ದೊಡ್ಡ ಪತ್ರಿಕೆ ಮಾಡಲಿ ಎಂಬುದು ನನ್ನಂಥವರ ಆಸೆ. ಇದು ನಿಮಗೆ ಅಥವಾ ಆರಂಕಿ - ಏಳನ್ಕಿ ವೇತನ ಪಡೆಯುತ್ತಿರುವ ವಿವಿಗಳ ಮೆಸ್ತ್ರುಗಳಿಗೆ ತಲ್ಲಣ ಮೂಡಿಸದೆ ಇರಬಹುದು. ಆದರೆ ನಮಗೆ ಹೊಸ ಪತ್ರಿಕೆ ಹುಟ್ಟುವುದು ಅನ್ನದ ಪ್ರಶ್ನೆ. ವರ್ತಮಾನದ ತಲ್ಲಣಗಳ ಬಗ್ಗೆ ಗುತ್ತಿಗೆ ಪಡೆದವರಂತೆ ಪ್ರತಿಕ್ರಯಿಸಿದ್ದಿರಿ. ಸಭ್ಯ -ಅಸಭ್ಯ, ಮೊದಲ ದರ್ಜೆ, ಮೂರನೇ ದರ್ಜೆ ... ಏನಿದು ನಿಮ್ಮ ಚಿಂತನೆ. ಇದನ್ನೇ ಸುಬ್ಬಣ್ಣ ಶ್ರೇಷ್ಟತೆಯ ವ್ಯಸನ ಎಂದಿದ್ದು !
    - ನಿರುದ್ಯೋಗಿ ಪತ್ರಕರ್ತ

    ReplyDelete
  8. ಪ್ರಿಯ ಸಂಪಾದಕೀಯ,
    ನನಗೆ ವಿಶೇಷ ಸೋಜಿಗ ಮೂಡಿಸುವುದು ಈ ಸಂಕೇಶ್ವರರು ಪತ್ರಿಕೆಗಳನ್ನು ಕೂಡ ಮಾರುಕಟ್ಟೆಯ ಒಂದು ಸರಕಿನಂತೆ ಮಾರುವುದು. ಮೊದಲು ಪತ್ರಿಕೆಯನ್ನು ಹುಟ್ಟು ಹಾಕುವುದು ನಂತರ ಬೆಲೆ ಸಮರದಂಥ ಮಾರ್ಗಗಳನ್ನು ಅನುಸರಿಸಿ ಬೇರೆ ಪತ್ರಿಕೆಗಳಿಗಿಂತ ಪ್ರಸಾರ ಹೆಚ್ಚಿಸುವುದು. ನಂತರ ಬೇರೆಯವರಿಗೆ ಮಾರಿ ಹೊಸ ಪತ್ರಿಕೆ ಆರಂಭಕ್ಕೆ ಯೋಚಿಸುವುದು. ಇದು ಚಿಕ್ಕ ಕೋಳಿ ಮರಿಗಳನ್ನು ತಂದು ದೊಡ್ಡದು ಮಾಡಿ ಮಾರುವುದಕ್ಕಿಂತ ಹೇಗೆ ಭಿನ್ನ?
    ಜನರಿಗೆ ಖಂಡಿತಾ ಕಡಿಮೆ ಬೆಲೆಯ ಪತ್ರಿಕೆಗಿಂತ ನಿಖರ ಮಾಹಿತಿಯನ್ನು ನೀಡುವ ಪತ್ರಿಕೆಯ ಮೇಲೆ ಹೆಚ್ಚು ವಿಶ್ವಾಸ. ಇವತ್ತಿಗೂ ಕೇರಳದಲ್ಲಿ ಬೆಲೆ ಹೆಚ್ಚಾಗಿದೆ ಎಂದು ಯಾವ ಪತ್ರಿಕಯೂ ಸೊರಗಿಲ್ಲ. ದರ ಸಮರ ನಡೆದೇ ಇಲ್ಲ. ಓದುಗರ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿದೆ.
    ಜಾಹೀರಾತುನಿಂದ ಬರುವ ಹಣ ನೆಚ್ಚಿ ನಡೆಸುವ ಪತ್ರಿಕೆಯೊಂದು ಜಾಹಿರಾತು ಕಂಪೆನಿ ಕೆಡುಕು ಮಾಡಿದಾಗ ಅದರ ವಿರುದ್ಧ ಬರೆಯುವ ನೈತಿಕತೆ ಇರುತ್ತದೆಯೇ... ಬರೆಯುತ್ತಾ ಹೋದರೆ ಪುಟಗಳು ಸಾಲುವುದಿಲ್ಲ.
    ಹಾಗೆಂದು ವಿಕ ದರ ಸಮರಕ್ಕಿಳಿದಾಗ ತಮ್ಮ ಮೇಲೆಯೇ ವಿಶ್ವಾಸ ಕಳೆದುಕೊಂಡು ಬೆಲೆ ಇಳಿಸಿದ ಇತರೆ ಪತ್ರಿಕೆಗಳ ಮಾಲಕರು ಕೂಡ ಒಂದರ್ಥದಲ್ಲಿ ಈ ಪ್ರಸಂಗದ ಭಾಗವಾಗಿಯೇ ಇರುತ್ತಾರೆ.

    ಸಾತ್ವಿಕ್

    ReplyDelete
  9. hatatrige hosa beluka.hosabarige hosa havakash holeyadagali.

    ReplyDelete
  10. naavu ondu patrike maadiddeve. putta prayatna. kastapattu, istapattu maadiddeve. NAAVIKA team jothe tie-up aagi horatandiddeve. iruva ella cinema magazine galigintha swalpa bhinnavaagi koduva yatna maadiddeve.....
    namma magazine hesaru
    CINEGANDHA

    by
    VINAYAKRAAM KALAGAARU
    EXECUTIVE EDITOR
    CINEGANDHA
    cinema magazine
    www.cinegandha.com

    ReplyDelete
  11. ಸಂಪಾದಕೀಯ ಮಹಾಶಯರೆ,
    ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳು ಏನು ಮಾಡುತ್ತಿವೆ ಎಂದು ಸ್ವಲ್ಪ ಕ್ಷಕಿರಣ ಹಾಯಿಸಬಹುದೇ?

    ReplyDelete
  12. ವಿಜಯವಾಣಿಗೆ ಅಭಿನಂದನೆಗಳು. ದರ ಸಮರಕ್ಕಿಂತ ಮೊದಲು ಜನರ ಭಾವನೆಗಳ ಅನುಗುಣವಾಗಿ ತಲುಪಿಸಬೇಕು ಹಾಗೂ ಪತ್ರಿಕೆ ಸೀಮಿತ ಮಾರುಕಟ್ಟೆ ಅಲ್ಲದೆ ವಿಸ್ಕೃತವಾಗಿ ಬೆಳಯಬೇಕು

    ReplyDelete
  13. ವಿಜಯವಾಣಿ ಬರುವುದು ಒಳ್ಳೆಯದೇ ಆದರೆ ಆ ಪತ್ರಿಕೆಗೆ ನೈತಿಕತೆ ಇದ್ದರೆ ಒಳ್ಳೆಯದು ಅಲ್ಲವೆ.........ಕೇವಲ ಹಣಕ್ಕಾಗಿ ಪತ್ರಿಕೆಗಳನ್ನು ಆರಂಭಿಸುವುದಲ್ಲ ಸಮಾಜದಲ್ಲಿ ರಾಕ್ಷಸನನ್ನು ಕೊಂದು ರಾಮ ರಾಜ್ಯವನ್ನು ನೀವೂ ಕಟ್ಟುವುದಾದರೆ ನಾವು ಕೂಡ ನಿಮ್ಮ ಜೊತೆಗೆ ಹೋರಾಡಲು ಸದಾ ಸಿಧ್ದ......

    ReplyDelete
  14. thats good for all establishing journalists

    ReplyDelete
  15. ಹೊಸ ಪತ್ರಿಕೆಗಳು ಬಂದ್ರೆ ಹಳೇ ಪತ್ರಿಕೆಗಳಿಗೆ ಏನು ನಷ್ಟವಾಗುತ್ತದೆ...? ಏನು ಆಗಲ್ಲಂತ ನನಗನಿಸುತ್ತೆ. ನಿಮ್ಮ ಅಭಿಪ್ರಾಯದಂತೆ ಹೊಸ ಹೊಸ ಪತ್ರಿಕೆಗಳು ಬರಬೇಕು. ಹೊಸ ಮಗುವಿನ ಜನನವಿದ್ದಂತೆ. ಪತ್ರಿಕೆಗಳ ಜನಮನಗಳ ನಾಡಿಯಾಗಬೇಕು. ಸಂಭ್ರಮಕ್ಕೇನು ಹುಟ್ಟಿದ ಮಗುವಿನ ಹೆಸರಲ್ಲಿ ಎಲ್ಲರೂ ಕೂಡಿ ಸಂತೋಷ ಹಂಚಿಕೊಳ್ಳೋಣ.

    ReplyDelete