Saturday, September 17, 2011

ಬ್ರೆಕಿಂಗ್ ನ್ಯೂಸ್: ಗಣಿ ಕಪ್ಪ ಪಡೆದ ಪತ್ರಕರ್ತರ ನಿವಾಸಗಳ ಮೇಲೆ ದಾಳಿ


ಉದಯವಾಣಿಗೆ ರವಿ ಹೆಗಡೆ ಸಂಪಾದಕರಾಗಿ ಬಂದ ನಂತರ ಸುಳ್ ಸುದ್ದಿ ಎಂಬ ಕಾಲಂ ಪರಿಚಯಿಸಿದ್ದನ್ನು ನೀವು ನೋಡಿದ್ದೀರಿ. ಸಾಧಾರಣವಾಗಿ ಈ ಸುಳ್ ಸುದ್ದಿ ಪ್ರಯೋಗವಾಗುವುದು ರಾಜಕಾರಣಿಗಳ ಮೇಲೆ. ಮೀಡಿಯಾ ಮಂದಿಯ ಮೇಲೂ ಪ್ರಯೋಗವಾದರೆ ಹೇಗಿರುತ್ತೆ ಎಂದು ಊಹಿಸಿ ಕೆಲವು ಸುಳ್ಳು ಸುದ್ದಿ ಸೃಷ್ಟಿಸಿದ್ದೇವೆ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು ಯಾರೂ ಬೇಜಾರ್ ಮಾಡ್ಕೋಬೇಡಿ ಎಂದು ಮೊದಲೇ ವಿನಂತಿಸುತ್ತೇವೆ.

****

ಗಣಿ ಕಪ್ಪ ಪಡೆದ ಪತ್ರಕರ್ತರ ನಿವಾಸಗಳ ಮೇಲೆ ದಾಳಿ

ಅಕ್ರಮ ಗಣಿಗಾರಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಪೊಲೀಸರು ನಿನ್ನೆ ರಾತ್ರಿ ಏಕಾಏಕಿ ಬೆಂಗಳೂರಿನ ಕೆಲವು ಪ್ರತಿಷ್ಠಿತ ಪತ್ರಕರ್ತರ ನಿವಾಸಗಳು ಹಾಗು ಮಾಧ್ಯಮ ಸಂಸ್ಥೆಗಳ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಮಹತ್ವದ ದಾಖಲೆಗಳು ಹಾಗು ಅಪಾರ ಪ್ರಮಾಣದ ನಗ-ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ನೀಡಿರುವ ವರದಿಯಲ್ಲಿ ಅಡಕವಾಗಿರುವ ಯು.ವಿ.ಸಿಂಗ್ ಅವರ ತನಿಖಾ ವರದಿಯಲ್ಲಿ ಪತ್ರಕರ್ತರಿಗೂ ಜನಾರ್ದನ ರೆಡ್ಡಿಗೆ ಸಂಬಂಧಿಸಿದ ಬೇನಾಮಿ ಸಂಸ್ಥೆಯೊಂದು ಅಪಾರ ಪ್ರಮಾಣದ ಕಪ್ಪ ನೀಡಿರುವ ಕುರಿತು ಮಾಹಿತಿ ನೀಡಲಾಗಿತ್ತು. ಈ ಸಂಬಂಧ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಗಳಲ್ಲಿ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಯು.ವಿ.ವರದಿಯಲ್ಲಿ ಗಣಿ ಕಪ್ಪ ಪಡೆದ ಪತ್ರಕರ್ತರ ಇನಿಷಿಯಲ್ಸ್‌ಗಳನ್ನು ನಮೂದಿಸಲಾಗಿದ್ದು, ಈ ಪೈಕಿ ವಿ.ಭಟ್, ಆರ್.ಬಿ., ಸಂಜಯ್ ಸರ್ ಎಂಬ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಸಿಬಿಐ ಪೊಲೀಸರು ಯಶಸ್ವಿಯಾಗಿದ್ದು, ಈ ಎಲ್ಲರನ್ನು ಬಂಧಿಸಿ ಐಪಿಸಿ ಸೆಕ್ಷನ್ ೫೧೧ರ ಅಡಿಯಲ್ಲಿ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಲಾಗುತ್ತಿದೆ,

****

ಕಸ್ತೂರಿ ವರದಿಗಾರರಿಗೆ ದೇವೇಗೌಡರ ಕುಟುಂಬ ಕುರಿತ ಮಾಹಿತಿ ಶಿಬಿರ

ದೇವೇಗೌಡರ ಪೂರ್ಣ ಕುಟುಂಬದ ಸಮಗ್ರ ವಿವರಗಳು, ಅವರ ನಡೆನುಡಿಗಳು, ಅವರು ಕ್ಯಾಮೆರಾಗಳಿಗೆ ಚೆನ್ನಾಗಿ ಕಾಣುವಂತೆ ಮಾಡುವ ಬಗೆ ಈ ಕುರಿತು ಅಧ್ಯಯನ ಶಿಬಿರವೊಂದನ್ನು ಕಸ್ತೂರಿ ವರದಿಗಾರರಿಗಾಗಿ ಏರ್ಪಡಿಸಲಾಗಿತ್ತು.

ಜೆಡಿಎಸ್ ರಾಜ್ಯ ವಕ್ತಾರ ವೈ.ಎಸ್.ವಿ.ದತ್ತ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ದೇವೇಗೌಡರ ಕುಟುಂಬವನ್ನು ಚಾನಲ್‌ನಲ್ಲಿ ವಿಜೃಂಭಿಸಲು ಅಗತ್ಯವಾಗಿರುವ ಕೌಶಲ್ಯದ ಕುರಿತು ಮಾಹಿತಿ ಒದಗಿಸಿದರು.

ಎಚ್.ಡಿ.ಕುಮಾರಸ್ವಾಮಿಯವರ ಮನೆ, ಕಾರು, ಆಫೀಸು ಎಲ್ಲೆಡೆ ಕಸ್ತೂರಿ ಚಾನಲ್‌ನ ಕ್ಯಾಮೆರಾಗಳನ್ನು ಸಿಸಿ ಟಿವಿ ಮಾದರಿಯಲ್ಲಿ ಶಾಶ್ವತವಾಗಿ ಸ್ಥಾಪಿಸುವ ಮೂಲಕ ೨೪ ಗಂಟೆ ಕವರೇಜ್ ಸುಲಭವಾಗಿ ಮಾಡಬಹುದು ಎಂಬ ಸಲಹೆಯನ್ನು ಕೆಲವು ವರದಿಗಾರರು ಈ ಸಂದರ್ಭದಲ್ಲಿ ನೀಡಿದರು ಎಂದು ಗೊತ್ತಾಗಿದೆ.

****

ರಾಜೀವ್ ಚಂದ್ರಶೇಖರ್‌ಗೆ ಪವಾಡಗಳಲ್ಲಿ ನಂಬಿಕೆ

ರಾಜ್ಯಸಭಾ ಸದಸ್ಯ, ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿರುವ ರಾಜ್ಯದ ಏಕೈಕ ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ಪವಾಡಗಳಿಗೆ ನಂಬಿಕೆ ಇದೆಯಂತೆ. ಇದನ್ನು ಸ್ವತಃ ರಾಜೀವ್ ಚಂದ್ರಶೇಖರ್ ಅವರೇ ಬಹಿರಂಗಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುವರ್ಣ ನ್ಯೂಸ್ ಹಾಗು ಕನ್ನಡಪ್ರಭದೊಂದಿಗೆ ಮಾತನಾಡಿದ ರಾಜೀವ್ ಚಂದ್ರಶೇಖರ್ ಅವರು ಈ ಹಿಂದೆ ರಾಜ್ಯಸಭಾ ಸದಸ್ಯರಾಗಿ ಚುನಾವಣೆಗೆ ಸ್ಪರ್ಧಿಸಿದ್ದಾಗ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದ್ದಾರೆ.

ಯಾವ ರಾಜಕೀಯ ಪಕ್ಷದ ಪ್ರಾಥಮಿಕ ಸದಸ್ಯನೂ ಅಲ್ಲದ ತಮ್ಮನ್ನು ಅರ್ಹತೆಯ ಆಧಾರದಲ್ಲಿ, ದೇಶಕ್ಕೆ ಮಹತ್ತರ ಸೇವೆ ಸಲ್ಲಿಸಬಹುದೆಂಬ ನಂಬಿಕೆ ಆಧಾರದಲ್ಲಿ ಶಾಸಕರು ಮತ ಚಲಾಯಿಸಿ ಆಯ್ಕೆ ಮಾಡಿದರು. ಇದು ಪವಾಡವಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು. ದೇಶದ ಯಾವುದೇ ನಾಗರಿಕನೂ ಯಾವ ರಾಜ್ಯದಲ್ಲಿ ಬೇಕಾದರೂ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಬಹುದು. ಇದಕ್ಕೆ ತಾವೇ ಉದಾಹರಣೆ ಎಂದು ಅವರು ಹೇಳಿದರು.

ಅಪರಿಚಿತನಾಗಿದ್ದ ನನ್ನನ್ನು ದೇಶದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಆಯ್ಕೆ ಮಾಡಿದ ಶಾಸಕರ ಬಲದಿಂದಲೇ ತಾವು ಭ್ರಷ್ಟಾಚಾರ ವಿರೋಧಿ ಆಂದೋಲನದ ನೇತಾರರಾಗಿ ಹೊರಹೊಮ್ಮಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಗಣಿ ಕಪ್ಪ ಪಡೆದವರ ಪಟ್ಟಿಯಲ್ಲಿ ಜುಪಿಟರ್ ಏವಿಯೇಷನ್ ಸಂಸ್ಥೆಯೂ ಇರುವ ಆರೋಪದ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

****

ಹೀಗೂ ಉಂಟೆ ನಾರಾಯಣಸ್ವಾಮಿಗೆ ಅತೀಂದ್ರಿಯ ಶಕ್ತಿ ಪ್ರಾಪ್ತಿ

ಟಿವಿ೯ ವಾಹಿನಿಯಲ್ಲಿ ಹೀಗೂ ಉಂಟೆ ಕಾರ್ಯಕ್ರಮವನ್ನು ವರ್ಷಗಳಿಂದ ನಡೆಸುತ್ತಿರುವ ನಾರಾಯಣಸ್ವಾಮಿಯವರಿಗೆ ಕೆಲವು ಅತೀಂದ್ರಿಯ ಶಕ್ತಿಗಳು ಪಾಪ್ತಿಯಾಗಿದೆ ಎಂದು ತಿಳಿದು ಬಂದಿದೆ.

ಅಲೌಕಿಕ, ಅತೀಂದ್ರಿಯ ಶಕ್ತಿಗಳಿರುವ ಸ್ಥಳಗಳಿಗೆ ಭೇಟಿ ಮಾಡಿ, ಅತಿಮಾನವರನ್ನು ಸಂದರ್ಶಿಸಿದ ಪರಿಣಾಮವಾಗಿ ಅವರಿಗೆ ಈ ಎಲ್ಲ ಶಕ್ತಿಗಳು ಆವಾಹನೆಯಾಗಿದ್ದು, ಸ್ಪರ್ಶ ಮಾತ್ರದಿಂದಲೇ ಏಡ್ಸ್, ಕ್ಯಾನ್ಸರ್‌ನಂಥ ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿಯನ್ನು ಗಳಿಸಿದ್ದಾರೆ.

ವಿಷಯ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಜನರು ಸಾಗರೋಪಾದಿಯಲ್ಲಿ ನಾರಾಯಣಸ್ವಾಮಿ ಅವರ ಮನೆಯತ್ತ ಧಾವಿಸುತ್ತಿದ್ದು, ಸಮಸ್ಯೆ-ಕಾಯಿಲೆಗಳಿಂದ ನರಳುತ್ತಿರುವ ಜನರು ಪರಿಹಾರ ದೊರೆಯಬಹುದೆಂಬ ನಂಬಿಕೆಯಿಂದ ಮನೆಯ ಬಳಿಯೇ ಠಿಕಾಣಿ ಹೂಡಿದ್ದಾರೆ.

****


ಮುರುಗೇಶ್ ನಿರಾಣಿ ವಿರುದ್ಧ ಸುದ್ದಿ ಬರೆಯದಂತೆ ಕಟ್ಟಪ್ಪಣೆ

ತಮ್ಮ ಕುಟುಂಬ ಸದಸ್ಯರು ಇತರ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ಯಾವುದೇ ಕಾರಣಕ್ಕೂ ಕೈಗಾರಿಕಾ ಸಚಿವ ಮುರುಗೇಶ್ ನಿರಾನಿ ವಿರುದ್ಧ ಯಾವುದೇ ಸುದ್ದಿ ಬರೆಯಕೂಡದು. ಈ ಸಂಬಂಧ ಕುಟುಂಬ ಸದಸ್ಯರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕು ಎಂದು ಸಮಯ ಟಿವಿ ಪ್ರಧಾನ ಸಂಪಾದಕ ಜಿ.ಎನ್.ಮೋಹನ್ ತಮ್ಮ ಸಿಬ್ಬಂದಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಕಟ್ಟಪ್ಪಣೆ ಮಾಡಿದ್ದಾರೆ.

ಸಮಯ ಟಿವಿ ಸಿಬ್ಬಂದಿ ಇತರ ಪತ್ರಿಕೆ/ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದು ಒಂದು ವೇಳೆ ನಿರಾಣಿ ವಿರುದ್ಧ ಸುದ್ದಿ ಬರೆದಲ್ಲಿ ಅವರನ್ನು ನೀರು-ನೆರಳಿಲ್ಲದ ಜಾಗಗಳಿಗೆ ವರ್ಗಾವಣೆ ಮಾಡುವ ಮೂಲಕ ರಾಜೀನಾಮೆ ಕೊಡುವಂತೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿ ತಮ್ಮ ಕುಟುಂಬ ಸದಸ್ಯರಿಗೆ ಸೂಕ್ತವಾದ ನಿರ್ದೇಶನ ಕೊಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮುರುಗೇಶ್ ನಿರಾಣಿ ವಿರುದ್ಧ ಉದಯವಾಣಿಯಲ್ಲಿ ವರದಿ ಬರೆದ ತಪ್ಪಿಗೆ ಆ ವರದಿಗಾರನ ಪತ್ನಿ ಸಮಯ ಟಿವಿ ತೊರೆದ ಪ್ರಕರಣವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

****

ಬ್ರಹ್ಮಾಂಡ ನರೇಂದ್ರ ಸ್ವಾಮಿಗೆ ದೇವಸ್ಥಾನ ಕಟ್ಟಿದ ಭಕ್ತವೃಂದ

ಜೀ ಟಿವಿ ವಾಹಿನಿಯಲ್ಲಿ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ನಡೆಸುವ ನರೇಂದ್ರ ಶರ್ಮ ಅವರಿಗೆ ಅವರ ಭಕ್ತವೃಂದ ಬೃಹತ್ ದೇವಸ್ಥಾನವೊಂದನ್ನು ನಿರ್ಮಿಸುತ್ತಿದೆ. ದೇವಸ್ಥಾನದಲ್ಲಿ ಕೇವಲ ನರೇಂದ್ರ ಶರ್ಮ ಅವರನ್ನು ಪೂಜಿಸಲಾಗುವುದು.

ನರೇಂದ್ರ ಶರ್ಮ ಅವರ ಬೃಹತ್ ವಿಗ್ರಹವೊಂದನ್ನು ಚೆನ್ನೈನಲ್ಲಿ ತಯಾರಿಸಲಾಗುತ್ತಿದ್ದು, ಶರ್ಮರ ಆಕಾರಕ್ಕೆ ತಕ್ಕ ವಿಗ್ರಹ ಸಿದ್ಧಪಡಿಸಲು ಕೊಂಚ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜಗನ್ಮಾತೆಯ ಅವತಾರವಾಗಿರುವ ನರೇಂದ್ರ ಶರ್ಮ ಅವರ ಈ ದೇಗುಲದಲ್ಲಿ ಜೀ ವಾಹಿನಿ ಒಂದು ಶಾಶ್ವತ ಸ್ಟುಡಿಯೋ ನಿರ್ಮಿಸಲಿದ್ದು, ದೇವಸ್ಥಾನದಲ್ಲಿ ನಡೆಯುವ ಸಂಪೂರ್ಣ ಚಟುವಟಿಕೆಗಳನ್ನು ನೇರಪ್ರಸಾರದಲ್ಲಿ ಭಿತ್ತರಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ದೇವಸ್ಥಾನದ ಉದ್ಘಾಟನೆಯನ್ನು ಬದುಕು ಜಟಕಾ ಬಂಡಿ ಖ್ಯಾತಿಯ ಮಾಳವಿಕಾ ಅವಿನಾಶ್ ನೆರವೇರಿಸುವ ಸಾಧ್ಯತೆಗಳಿವೆ.

****

ರವಿ ಬೆಳಗೆರೆಗೆ ಅಭಿನವ ಕೃಷ್ಣದೇವರಾಯ ಪ್ರಶಸ್ತಿ

ಓಬಳಾಪುರಂ ಮೈನಿಂಗ್ ಕಂಪೆನಿ ವಿಜಯನಗರದ ಅರಸರಾಗಿದ್ದ ಕೃಷ್ಣದೇವರಾಯರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಘೋಷಿಸಿದ್ದು ಮೊದಲ ವರ್ಷದ ಪ್ರಶಸ್ತಿಯನ್ನು ಹಾಯ್ ಬೆಂಗಳೂರ್ ಸಂಪಾದಕ ರವಿ ಬೆಳಗೆರೆಯವರಿಗೆ ಕೊಡಮಾಡಲು ನಿರ್ಧರಿಸಿದೆ.

ಪ್ರಶಸ್ತಿಯು ಒಂದು ಕೋಟಿ ರೂಪಾಯಿ ನಗದು, ಒಂದು ವಜ್ರಖಚಿತ ಕಿರೀಟ, ಚಿನ್ನದ ಸಿಂಹಾಸನ ಹಾಗು ಒಂದು ಚಿನ್ನದ ಖಡ್ಗವನ್ನು ಒಳಗೊಂಡಿರುತ್ತದೆ.

ಜನಾರ್ದನ ರೆಡ್ಡಿಯನ್ನು ಸಿಬಿಐ ಪೊಲೀಸರು ಬಂಧಿಸಿದಾಗ ರೆಡ್ಡಿಯಿಂದ ಕಪ್ಪ ತಿಂದವರೂ ಸೇರಿದಂತೆ ಎಲ್ಲರೂ ವಿರುದ್ಧವಾಗಿ ಬರೆದಾಗ ರವಿ ಬೆಳಗೆರೆ ಒಬ್ಬರೇ ರೆಡ್ಡಿ ಸೋದರರನ್ನು ಸಮರ್ಥಿಸಿಕೊಂಡು ಬರೆದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಗೊತ್ತಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಸರಳವಾಗಿ ಹೈದ್ರಾಬಾದ್‌ನ ಸಿಬಿಐ ಹೆಡ್ ಕ್ವಾರ್ಟರ‍್ಸ್‌ನಲ್ಲಿ ನಡೆಯಲಿದೆ.

****

13 comments:

 1. ಹಾ ಹಾ ಖತರ್ನಾಕ್ ನ್ಯೂಸ್....

  ReplyDelete
 2. ದಿಟ್ಟತನದ ಪರಮಾವದಿ! he he he....

  ReplyDelete
 3. ಸಂಪಾದಕರೇ ಸಖತ್ ಆಗಿದೆ... ಮುಂದೆ ಇದು ನಿಜವಾದರೂ ಆಗಬಹುದು... ಇದೆಲ್ಲಾ ಸರಿ,
  SHIMOGA ಪತ್ರಕರ್ತರ KHB ನಿವೇಶನ ಹಗರಣದ ಬಗ್ಗೆ ಏನಾದರೂ BREAKING NEWS ಪ್ರಕಟಿಸಿ ಸ್ವಾಮಿ...
  ಈ ಹಗರಣವೀಗ ರಾಜ್ಯಾದ ಪತ್ರಿಕಾ ವಲಯದಲ್ಲಿ ಬಿಸಿ ಬಿಸಿ ಚಚರ್ೆಗೆ ಕಾರಣವಾಗಿದೆ. ಈ ಬಗ್ಗೆ ಬರೀ ಅಂತೆ -ಕಂತೆಗಳೇ ಬರುತ್ತಿವೆ. ಯಾವುದು ಸರಿ, ತಪ್ಪು ಎಂಬುವುದು ತಿಳಿಯದಾಗಿದೆ.
  'ಸಂಪಾದಕೀಯ' ಟೀಮ್ KHB ನಿವೇಶನ ಹಗರಣದ ಬಗ್ಗೆ ತನಿಖಾ ವರದಿ ಪ್ರಕಟಿಸಿದರೇ, ವಾಸ್ತಾವಾಂಶ ಬಯಲಿಗೆ ಬರಲಿದೆ.

  ReplyDelete
 4. ಎಕ್ಸ್ ಲೆಂಟ್ ಜಾಬ್ 4ಮ್ ಸಂಪಾದಕೀಯ ಟೀಮ್ ಇದಕ್ಕಾಗಿ ನಿಮಗೆ ಖಚಿತವಾಗಿಯೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಅಗತ್ಯವೇ ಇಲ್ಲ ಈ ಸುದ್ದಿಯೊಂದೇ ಸಾಕು ನಿಮಗೆ ಈ ಪ್ರಶಸ್ತಿ ನೀಡಲು ಏನಂತೀರಿ? ನಿಜಕ್ಕೂ ಅತ್ಯಂತ ಮನಮುಟ್ಟುವ ಅಪ್ಪಟ ಅರ್ಧಸತ್ಯ ಒಳಗೊಂಡಿರುವ ಬೊಂಬಾಟ್ ಸುಳ್ ಸುದ್ದಿಯಿದು... ;-)

  ReplyDelete
 5. dappa charmadavarige ee tivit saakaagudilleno

  basu

  ReplyDelete
 6. ಸಂಪಾದಕರೇ....
  ಶಿವಮೊಗ್ಗ ಪತ್ರಕರ್ತರ KHB ನಿವೇಶನ ಹಗರಣದ ಬಗ್ಗೆ ಬರೆಯಿರಿ....
  ಕೆಲ ಅರ್ಹ ಪತ್ರಕರ್ತರಿಗೆ ನಿವೇಶನ ಸಿಕ್ಕಿಲ್ಲ.ಆದರೆ ಅಧಿಕಾರಿಗಳು, ರಾಜಕಾರಣಿಗಳು, ಮಹಿಳಾ ಪೊಲೀಸ್ಗೆ ನಿವೇಶನ ಸಿಕ್ಕಿದೆ. ಸಖತ್ ಗೋಲ್ಮಾಲ್ ಆಗಿದೆ.

  ReplyDelete
 7. ಸಕತ್ ಹಾಟ್ ನ್ಯೂಸ್ ಕಣ್ರೀ!

  ReplyDelete
 8. while reading i burnt my mouth, Damn cool,
  on engineers day, well recognized ‘A’ college publish a video on life history of v.bhat in library!(as role model to students) And they advertize shima photo in notice board as ‘proud alumni’ (he is old degree student of this college)

  ReplyDelete
 9. BRAKING NEWS: JOURNALIST ARRESTED WHO WROTE FAKE NEWS IN HIS BLOGSBRAKING NEWS: JOURNALIST ARRESTED WHO WROTE FAKE NEWS IN HIS BLOGS

  ReplyDelete
 10. Estu Khare Helidirappa.
  Ellavannu Khare Heli Matte
  Evanna Sulla Suddi yak Antiriiiiii...!!!??
  Manik Bhure

  ReplyDelete
 11. Dear friends, EE suddi (patrakartara bagge) kevala hasya suddiya mattadalle ulidu bittiruvudu matra samakaleena duranthave sari.
  patrakartaru endare svargadinda ilidu bandilla endu ellariguu gottide.judiciary yanne vicharanege olapadisuttiruva ee sandarbhadalli keelu mattakkilidiruva patrakartarige vinayiti koduttiruvudu naachike gedina vishaya.

  ReplyDelete
 12. Super Breaking News
  But madhyama bhrashtacharada bagge svalpa heli svami

  ReplyDelete
 13. Breaking News Chennagide
  but Media Curruption bagge svalpa mahiti kodi svamy

  ReplyDelete