Monday, June 6, 2011

ಮೂರ್ಖ ಕಾಂಗ್ರೆಸ್, ಧೂರ್ತ ಬಿಜೆಪಿ, ಮತಿಹೀನ ಚಳವಳಿ ನಾಯಕ, ಮತ್ತು ಅಸಹಾಯಕ ನಾಗರಿಕರು....


ಕಾಂಗ್ರೆಸ್ ಪಕ್ಷ ತನ್ನ ಗೋರಿಯನ್ನು ತಾನೇ ತೋಡಿಕೊಂಡಿದೆ. ಇನ್ನು ಅದರಲ್ಲಿ ಇಳಿದು ಶಾಶ್ವತವಾಗಿ ಮಲಗಿಕೊಳ್ಳುವುದೊಂದೇ ಅದಕ್ಕೆ ಬಾಕಿ ಉಳಿದಿರುವುದು.

ಬಾಬಾ ರಾಮದೇವ ಮತ್ತವರ ಸಂಗಡಿಗರು ನಡೆಸುತ್ತಿದ್ದ ಚಳವಳಿಯ ಪೆಂಡಾಲಿಗೆ ರಾತ್ರೋರಾತ್ರಿ ಸಾವಿರಾರು ಪೊಲೀಸರನ್ನು ನುಗ್ಗಿಸಿ ನಡೆಸಿದ ಸರ್ಕಾರದ ಕಾರ್ಯಾಚರಣೆ ಅಮಾನುಷ. ಈಗಾಗಲೇ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿ, ಕೇಂದ್ರ ಸರ್ಕಾರಕ್ಕೆ ನೋಟೀಸು ಕೊಟ್ಟೂ ಆಗಿದೆ. ಇಷ್ಟಾದರೂ ಅಮಾನವೀಯ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುವುದು ಬೇಜಬ್ದಾರಿತನ ಎಂದು ಕಾಂಗ್ರೆಸ್ ಮುಖಂಡರಿಗೆ ಅನ್ನಿಸದಿರುವುದೇ ಆಶ್ಚರ್ಯ.

ಪೊಲೀಸು, ಮಿಲಿಟರಿ ಕಾರ್ಯಾಚರಣೆಗಳು ಎಲ್ಲೇ ನಡೆದರೂ ಹೀಗೇ ಇರುತ್ತವೆ. ಹಾವೇರಿ ಗೋಲಿಬಾರ್‌ನಲ್ಲಿ ಇಬ್ಬರು ರೈತರನ್ನು ಸುಟ್ಟು ಕೊಂದ ಪ್ರಕರಣದಿಂದ ಹಿಡಿದು, ಮಣಿಪುರದಲ್ಲಿ ಅಮಾಯಕ ಯುವತಿ ಮನೋರಮಾ ದೇವಿಯನ್ನು ರಾತ್ರಿ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಗುಂಡಿಟ್ಟುಕೊಂಡ ನಮ್ಮದೇ ಮಿಲಿಟರಿಯ ಕ್ರೌರ್ಯದವರೆಗೆ ಈ ಎಲ್ಲ ಕಾರ್ಯಾಚರಣೆಗಳು ಒಂದೇ ತೆರನಾದದ್ದು. ಇಂಥ ಕಾರ್ಯಾಚರಣೆಗಳಿಗೆ ಮಾನವೀಯತೆಯೆಂಬುದೇ ಇರುವುದಿಲ್ಲ. ತಾವು ಲಾಠಿಯಿಂದ, ಬೂಟಿನಿಂದ ಕಡೆಗೆ ಬಂದೂಕಿನಿಂದ ಹೊಡೆಯುತ್ತಿರುವುದು ಮಹಿಳೆಯರಿಗೋ, ಮಕ್ಕಳಿಗೋ, ವೃದ್ಧರಿಗೋ ಎಂಬುದು ಪೊಲೀಸರಿಗೆ ಮುಖ್ಯವಲ್ಲ. ರಾಮಲೀಲಾ ಮೈದಾನದಲ್ಲಿ ನಡೆದ ಅನಾಹುತದಲ್ಲಿ ಯಾರೂ ಪ್ರಾಣ ಕಳೆದುಕೊಂಡಿಲ್ಲ. ಅಷ್ಟರ ಮಟ್ಟಿಗೆ ದೆಹಲಿ ಪೊಲೀಸರು ಸಂಯಮ ವಹಿಸಿರುವುದೇ ಒಂದು ಪವಾಡ.

ರಾಮಲೀಲಾ ಮೈದಾನದಲ್ಲಿ ಯೋಗ ಶಿಬಿರಕ್ಕೆ ಅನುಮತಿ ಪಡೆಯಲಾಗಿತ್ತು, ಚಳವಳಿಗಲ್ಲ. ಹೀಗಾಗಿ ರಾಮದೇವ ಸತ್ಯಾಗ್ರಹವನ್ನು ಕೊನೆಗೊಳಿಸಬೇಕಾಯಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹೇಳಿಕೊಂಡರು. ರಾಮದೇವ ಅಲ್ಲಿ ಸತ್ಯಾಗ್ರಹ ನಡೆಸಲು ಹೊರಟಿದ್ದು ಸರ್ಕಾರಕ್ಕೆ ಗೊತ್ತಿರಲಿಲ್ಲವೇ? ಗೊತ್ತಿದ್ದರೆ ಒಂದು ದಿನ ಸತ್ಯಾಗ್ರಹಕ್ಕೆ ಅವಕಾಶ ನೀಡಿದ್ದು ಯಾಕೆ ಎಂದರೆ ಅವರ ಬಳಿ ಉತ್ತರವಿಲ್ಲ. ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ, ಬೇಕಿದ್ದರೆ ಜಂತರ್ ಮಂತರ್‌ನಲ್ಲಿ ಮಾಡಿ ಎಂದು ಮೊದಲೇ ಹೇಳಬಹುದಿತ್ತಲ್ಲವೇ?

ಹಾಗೆ ನೋಡಿದರೆ ಇಂಥ ತಾಂತ್ರಿಕ ಕಾರಣಗಳನ್ನು ಒಡ್ಡಿ ಉಪವಾಸ ನಿಲ್ಲಿಸಿದೆವು ಎಂದು ಹೇಳಿಕೊಳ್ಳುವುದೇ ಕಪಟ. ಬೆಂಗಳೂರು ಪೊಲೀರು ನಗರದಲ್ಲಿ ಪ್ರತಿಭಟನೆ ನಡೆಸುವ ಸಂಘ-ಸಂಸ್ಥೆಗಳಿಗೆ ಒಂದು ನಿಯಮಾವಳಿಗಳನ್ನು ರೂಪಿಸಿದ್ದಾರೆ. ಅದನ್ನು ಒಪ್ಪಿದವರಿಗೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆ. ಈ ನಿಯಮಾವಳಿಗಳನ್ನು ಗಮನಿಸಿದರೆ, ಯಾವ ಸಂಘಟನೆಯೂ ಪ್ರತಿಭಟನೆಯೇ ಮಾಡುವಂತಿಲ್ಲ. ಪ್ರತಿಭಟನೆ ಮಾಡಿದವರ ಮೇಲೆ ಒಂದಲ್ಲ ಒಂದು ಕಾರಣ ಕೊಟ್ಟು ಮೊಕದ್ದಮೆ ಹೂಡಲು ಅವಕಾಶ ಇದ್ದೇ ಇರುತ್ತದೆ. ಹಾಗೆ ಮಾಡುವುದು ಸರಿಯೇ? ಸತ್ಯಾಗ್ರಹ ಕೊನೆಗೊಳಿಸಲು ನೀವು ಕೊಡುವ ಸಮರ್ಥನೆಯಾದರೂ ಗಟ್ಟಿಯಾಗಿರಬಾರದೆ?

ಕಾಂಗ್ರೆಸ್ ಮುಖಂಡರು ಬಾಬಾ ರಾಮದೇವ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿದ್ದಾರೆ. ಈ ಆರೋಪಗಳಲ್ಲಿ ಕೆಲವು ಅಥವಾ ಎಲ್ಲವೂ ನಿಜವೇ ಆಗಿರಬಹುದು ಎಂದಿಟ್ಟುಕೊಳ್ಳೋಣ. ಯಾಕೆ ಇಷ್ಟು ದಿನಗಳಾದರೂ ರಾಮದೇವ ವಿರುದ್ಧ ಒಂದು ತನಿಖೆ ಮಾಡಲು ಇವರಿಗೆ ಸಾಧ್ಯವಾಗಲಿಲ್ಲ? ರಾಮದೇವ ಮಾತ್ರವಲ್ಲ ದೇಶದ ಧರ್ಮಗುರುಗಳು ಆದಾಯ ತೆರಿಗೆ ವಿನಾಯಿತಿ ಪಡೆದು ಬಿಜಿನೆಸ್ ನಡೆಸುತ್ತಿರುವುದು, ಸಾವಿರಾರು ಕೋಟಿ ರೂಪಾಯಿ ಕೂಡಿಟ್ಟುಕೊಂಡಿರುವುದು ಸರ್ಕಾರಕ್ಕೆ ಗೊತ್ತಿಲ್ಲವೇ? ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಒಬ್ಬ ರಾಮದೇವ ತಿರುಗಿಬಿದ್ದಾಗ ಮಾತ್ರ ಇದೆಲ್ಲ ನೆನಪಾಗುತ್ತದೆಯೇ? ಈಗಲೂ ಕಾಲ ಮಿಂಚಿಲ್ಲ, ವ್ಯಾಪಾರ ವಹಿವಾಟು ನಡೆಸುವ ಎಲ್ಲ ಧಾರ್ಮಿಕ ಸಂಸ್ಥೆಗಳನ್ನು ಆದಾಯ ತೆರಿಗೆ ವ್ಯಾಪ್ತಿಯಡಿ ತರುವ ತಾಕತ್ತು ಡಾ.ಮನಮೋಹನ ಸಿಂಗ್ ಸರ್ಕಾರಕ್ಕಿದೆಯೇ?

ರಾಮದೇವರು ಕಪ್ಪುಹಣದ ವಿರುದ್ಧ ತೀವ್ರವಾಗಿ ಮಾತನಾಡಲು ಆರಂಭಿಸಿದ್ದು ಜನವರಿ ತಿಂಗಳಿನಿಂದ. ಕಪ್ಪುಹಣದ ಕುರಿತು ಸರಿಯಾದ ನಿರ್ಧಾರವನ್ನೇ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಸಹ ವಾಗ್ದಾಳಿ ನಡೆಸಿತ್ತು. ಕಳೆದ ಚುನಾವಣೆ ಪೂರ್ವದಲ್ಲೇ ಬಿಜಪಿ ನೇತಾರ ಎಲ್.ಕೆ.ಅಡ್ವಾನಿ ಕಪ್ಪುಹಣದ ಪ್ರಸ್ತಾಪ ಮಾಡಿದ್ದರು. ಈಗ ರಾಮದೇವ ಎದುರು ಮಂಡಿಯೂರಿ ನಿಂತು ಕಪ್ಪುಹಣ ವಾಪಾಸು ತರುವ ಸಂಬಂಧ ಕಾನೂನು ರಚಿಸುತ್ತೇವೆ ಎಂದು ಹೇಳಿದ ಕೇಂದ್ರ ಸರ್ಕಾರ ಇzನ್ನು ಮೊದಲೇ ಮಾಡಿದ್ದರೆ ಗಂಟೇನು ಹೋಗುತ್ತಿತ್ತು?

೨ಜಿ ಹಗರಣ, ಕಾಮನ್ವೆಲ್ತ್ ಹಗರಣಗಳಿಂದ ಹಿಡಿದು ಇತ್ತೀಚಿನ ದಯಾನಿಧಿ ಮಾರನ್ ಬಿಎಸ್‌ಎನ್‌ಎಲ್ ಹಗರಗಳವರೆಗೆ ಕಳಂಕಗಳನ್ನೇ ಹೊತ್ತುಕೊಂಡಿರುವ ಯುಪಿಎ ಸರ್ಕಾರಕ್ಕೆ ಆಡಳಿತದಲ್ಲಿ ಬಿಗಿ ತರುವ ಮನಸ್ಸಿಲ್ಲದೆ ಜಡ್ಡುಬಿದ್ದಿದೆ. ಸಂಸದೀಯ ಪ್ರಜಾಸತ್ತೆಯನ್ನು ರಕ್ಷಿಸುವ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದೆ. ಇಲ್ಲದಿದ್ದಲ್ಲಿ ಪ್ರಣಬ್ ಮುಖರ್ಜಿಯಂಥ ಹಿರಿಯ ಸಚಿವರನ್ನೂ ಸೇರಿದಂತೆ ನಾಲ್ಕು ಕ್ಯಾಬಿನೆಟ್ ಸಚಿವರನ್ನು ರಾಮದೇವ ಅವರ ಜತೆಗೆ ಸಂಧಾನಕ್ಕೆಂದು ವಿಮಾನ ನಿಲ್ದಾಣಕ್ಕೆ ಕಳುಹಿಸುತ್ತಿರಲಿಲ್ಲ.

****

ಇಡೀ ಪ್ರಹಸನದ ಲಾಭ ಪಡೆದುಕೊಳ್ಳುತ್ತಿರುವುದು ಭಾರತೀಯ ಜನತಾ ಪಕ್ಷ. ಅದಕ್ಕೆ ಈಗ ನಾಯಕರ ಕೊರತೆ. ಇರುವ ನಾಯಕರಲ್ಲೇ ಕಚ್ಚಾಟ. ನರೇಂದ್ರ ಮೋದಿಯನ್ನು ಇತರ ಮಿತ್ರಪಕ್ಷಗಳು ಒಪ್ಪಿಕೊಳ್ಳುವುದಿಲ್ಲ. ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ದೇಶವ್ಯಾಪಿ ಆಂದೋಲನ ನಡೆಸುವ, ಜನಜಾಗೃತಿ ಮೂಡಿಸುವ ಅವಕಾಶ ಆ ಪಕ್ಷಕ್ಕಿತ್ತು. ಆದರೆ ಕರ್ನಾಟಕದಲ್ಲಿ ಅವರ ಪಕ್ಷದ ಆಡಳಿತವೇ ದೇಶದ ನಂ. ೧ ಭ್ರಷ್ಟಾಚಾರವನ್ನು ನಡೆಸುತ್ತಿದೆ. ಭ್ರಷ್ಟ ಮುಖ್ಯಮಂತ್ರಿಯನ್ನು ಕಿತ್ತುಹಾಕುವ ಧೈರ್ಯ ಬಿಜೆಪಿ ಹೈಕಮಾಂಡ್‌ಗೆ ಇಲ್ಲ. ಕರ್ನಾಟಕದ ವಿದ್ಯಮಾನ ನನಗೆ ಸಮಾಧಾನ ತಂದಿಲ್ಲ ಎಂದು ಎಲ್.ಕೆ.ಅಡ್ವಾನಿ ಹೇಳಿಕೊಂಡರೂ ಅವರಿಂದ ಏನೂ ಮಾಡಲಾಗುತ್ತಿಲ್ಲ. ಯಡಿಯೂರಪ್ಪ ತಂದು ಸುರಿಯುವ ಪಾರ್ಟಿ ಫಂಡು ಕಪ್ಪೋ ಬಿಳಿಯೋ ನೋಡದೆ ತಬ್ಬಿಕೊಳ್ಳುವ ನಿತಿನ್ ಗಡ್ಕರಿ ಮಾತ್ರ ಕರ್ನಾಟಕದಲ್ಲಿ ಅತ್ಯುತ್ತಮ ಸರ್ಕಾರವಿದೆ ಎಂದು ಮಾತನಾಡಿ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ ಅವರಿಗೆ ದೊರಕಿದ್ದು ಬಾಬಾ ರಾಮದೇವ. ಭ್ರಷ್ಟಾಚಾರದ ವಿರುದ್ಧ ಜನರು ಹೇಗೂ ಸಿಟ್ಟಿಗೆದ್ದಿದ್ದಾರೆ. ರಾಜಕೀಯ ಪಕ್ಷವಾಗಿ ಇದನ್ನು ವಿರೋಧಿಸಿದರೆ ಯಡಿಯೂರಪ್ಪ ತರಹದವರು ಮೊಸರಲ್ಲಿ ಕಲ್ಲಾಗುತ್ತಾರೆ. ಹೀಗಾಗಿ ರಾಮದೇವರೇ ಇದಕ್ಕೆ ಸೂಕ್ತ ಎಂದು ಬಿಜೆಪಿಗೆ ಅನಿಸಿರಬಹುದು. ರಾಮದೇವರ ಬೆನ್ನಿಗೆ ನಿಂತುಬಿಟ್ಟಿತು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಪ್ಪು ಹಣ ತರುವ ವಿಷಯ ಅಡ್ವಾನಿ ತಲೆಗೇಕೆ ಹೊಳೆದಿರಲಿಲ್ಲ? ಅಥವಾ ಆ ಪಕ್ಷದವರೂ ಎಂದೂ ಆ ವಿಷಯವನ್ನು ಎತ್ತದೇ ಇರಲು ಕಾರಣವೇನು? ಕಪ್ಪು ಹಣದ ಸಮಸ್ಯೆ ನಿನ್ನೆ ಮೊನ್ನೆ ಸೃಷ್ಟಿಯಾಗಿದ್ದೇನಲ್ಲ. ಆಗ ಯಾಕೆ ಇವರು ಸುಮ್ಮನಿದ್ದರು?

ಒಂದೆಡೆ ಯುಪಿಎ ತನ್ನ ಸ್ವಯಂಕೃತಾಪರಾಧದಿಂದ ಜನಬೆಂಬಲ ಕಳೆದುಕೊಳ್ಳುತ್ತಿದ್ದರೆ, ಆ ಬೆಂಬಲವನ್ನು ತನ್ನ ಕಡೆಗೆ ವಾಲಿಸಿಕೊಳ್ಳುವ ಯಾವ ಶಕ್ತಿಯೂ ಬಿಜಪಿ ನಾಯಕರಲ್ಲಿರಲಿಲ್ಲ. ಹೀಗಾಗಿ ಅವರಿಗೆ ರಾಮಜನ್ಮಭೂಮಿಯಂಥ ಹೊಸ ವಿವಾದ ಬೇಕಾಗಿತ್ತು. ಒಲಿದು ಬಂದಿದ್ದು ರಾಮದೇವ. ಜೈ ಶ್ರೀರಾಂ.

ಭ್ರಷ್ಟಾಚಾರ, ಕಪ್ಪು ಹಣದ ಬಗ್ಗೆ ಬಿಜೆಪಿಗೆ ಅಷ್ಟೊಂದು ಸಿಟ್ಟಿದ್ದರೆ ಮೊದಲು ಕರ್ನಾಟಕದ ಯಡಿಯೂರಪ್ಪ ಸರ್ಕಾರವನ್ನು ಕಿತ್ತೊಗೆಯುವ ಪ್ರಾಮಾಣಿಕತೆಯನ್ನು ತೋರಬೇಕು. ತಮ್ಮ ಪಾರ್ಟಿ ಫಂಡ್‌ಗೆ ಯಾರಿಂದಲೂ ಕಪ್ಪುಹಣವನ್ನು ಸ್ವೀಕರಿಸುವುದಿಲ್ಲ ಎಂದು ಪ್ರಮಾಣ ಮಾಡಬೇಕು. ತನ್ನ ಪಕ್ಷಕ್ಕೆ ಹಣ ಕೊಡುವವರ ಪಟ್ಟಿಯನ್ನು ಆಯಾ ಕಾಲಕ್ಕೆ ಬಿಡುಗಡೆ ಮಾಡಬೇಕು. ಇದು ಬಿಜೆಪಿಗೆ ಮಾತ್ರ ಅನ್ವಯಿಸುವ ಮಾತಲ್ಲ, ಎಡಪಕ್ಷಗಳೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಕಪ್ಪು ಹಣ ಸ್ವೀಕರಿಸುವುದಿಲ್ಲ ಎಂದು ಘೋಷಿಸುತ್ತವೆಯೇ?

****

ಇನ್ನು ಬಾಬಾ ರಾಮದೇವ. ಒಬ್ಬ ಚಳವಳಿಗಾರನಿಗೆ ಇರಬೇಕಾದ ಕಾಮನ್ ಸೆನ್ಸ್ ಇಲ್ಲದ ನಾಯಕ ಇವರು. ರಾಮಲೀಲಾ ಮೈದಾನದಲ್ಲಿ ರಾಮದೇವರು ನಡೆಸಿದ್ದು ಚಳವಳಿಯಲ್ಲ, ಹುಚ್ಚಾಟ.

ಚಳವಳಿಗೆ ಬೇಕಾದ್ದು ಎಸಿ, ಏರ್ ಕೂಲರ್‌ಗಳು, ಐಶಾರಾಮಿ ವ್ಯವಸ್ಥೆ ಅಲ್ಲ; ಸರ್ಕಾರದಿಂದ ಕಾರ್ಯಸಾಧುವಾದಂಥ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಜಾಣತನ ಎಂಬುದನ್ನು ಇವರು ಅರಿತಿರಲಿಲ್ಲ. ರಾಮದೇವರು ಇಟ್ಟ ಬೇಡಿಕೆಗಳೇ ಹಾಸ್ಯಾಸ್ಪದವಾಗಿದ್ದವು. ಪ್ರಧಾನಿಯನ್ನು ನೇರವಾಗಿ ಚುನಾಯಿಸಬೇಕು, ೫೦೦, ೧೦೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕು ಇತ್ಯಾದಿ ಕಾರ್ಯಸಾಧುವಲ್ಲದ ಬಾಲಿಷ ಬೇಡಿಕೆಗಳು. ಒಂದು ವೇಳೆ ಪ್ರಧಾನಿ ನೇರ ಆಯ್ಕೆಯ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದಾದರೂ ಅದು ಚಳವಳಿಯ ವ್ಯಾಪ್ತಿಯ ವಿಷಯವಲ್ಲ, ಜನಪ್ರತಿನಿಧಿಗಳು ಒಟ್ಟಾರೆಯಾಗಿ ನಿರ್ಧರಿಸಬೇಕಾದ ವಿಷಯ. ಇಂಥ ಸಾಮಾನ್ಯ ಸಂಗತಿಗಳೂ ಗೊತ್ತಿಲ್ಲದ ಬಾಬಾ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು.

ಸರ್ಕಾರದ ಜತೆ ಮೊದಲೇ ಒಂದು ಸಂಧಾನಕ್ಕೆ ಬಂದು, ತನ್ನ ಒಪ್ಪಿಗೆ ಪತ್ರವನ್ನೂ ಕೊಟ್ಟು, ಸಂಜೆ ಐದು ಗಂಟೆಗೆ ಸತ್ಯಾಗ್ರಹ ಕೊನೆಗೊಳಿಸುವುದಾಗಿ ಹೇಳಿದ್ದ ರಾಮದೇವರು ತನಗೆ ಹರಿದು ಬಂದ ವ್ಯಾಪಕ ಬೆಂಬಲವನ್ನು ಕಂಡು ಮಾತುತಪ್ಪಿದರು. ಇಡೀ ಸತ್ಯಾಗ್ರಹವನ್ನು ಅಪ್ಪಟ ಬಾಲಿವುಡ್ ಸಿನಿಮಾ ಶೈಲಿಯಲ್ಲಿ ನಡೆಸುವ ಉದ್ದೇಶ ಅವರರಾಗಿತ್ತೇನೋ? ಹೀಗಾಗಿ ಅವರು ಸರ್ಕಾರದ ಜತೆಗಿನ ಸಂಧಾನದ ವಿಷಯವನ್ನು ತಮ್ಮ ಬೆಂಬಲಿಗರಿಗೂ ಹೇಳದೆ, ಅಮಾಯಕವಾಗಿ ನಂಬಿ ಬಂದ ಸಾವಿರಾರು ಸಂಖ್ಯೆಯ ಸತ್ಯಾಗ್ರಹಿಗಳಿಗೂ ಹೇಳದೆ ಸಸ್ಪೆನ್ಸ್ ಆಗಿಟ್ಟರು. ಪ್ರಹಸನ ನೋಡುವ ಜನರ ಕುತೂಹಲ ತಣಿದುಹೋದರೆ ಮುಂದಿನದ್ದರ ಕುರಿತು ಆಸಕ್ತಿ ಉಳಿದಿರುತ್ತದೆಯೇ?

ಚಳವಳಿಗಾರನಿಗೆ ತನ್ನ ಚಳವಳಿಯ ಉದ್ದೇಶ ಮತ್ತು ಗುರಿಗಳಷ್ಟೆ ಮುಖ್ಯವಾಗಿರಬೇಕೆ ಹೊರತು ತನಗೆ ಬೇಕಾದ ಹಾಗೆ ಚಳವಳಿಯನ್ನು ನಿರ್ದೇಶಿಸುವ ಕಲಾವಂತಿಕೆಯಲ್ಲ. ಚಳವಳಿ ನಟನೆಯೂ ಅಲ್ಲ, ಚಳವಳಿಗಾರ ನಟನೂ ಅಲ್ಲ. ಇಂಥ ನಾಟಕಗಳನ್ನು ನಡೆದರೆ ಅದನ್ನು ಚಳವಳಿ ಎನ್ನುವುದೂ ಕಷ್ಟ.

ತಾವು ಸರ್ಕಾರಕ್ಕೆ ಬರೆದುಕೊಟ್ಟ ಪತ್ರವನ್ನು ಸಚಿವ ಕಪಿಲ್ ಸಿಬಲ್ ಬಹಿರಂಗಗೊಳಿಸಿದರು ಎಂಬ ಕಾರಣಕ್ಕೆ ರಾಮದೇವರು ಸಿಟ್ಟಿಗೆದ್ದರು, ಚಂಡಿ ಹಿಡಿದರು. ಅಲ್ಲಿಗೆ ಕಪ್ಪುಹಣ ಸಂಬಂಧಿಸಿದ ಚಳವಳಿ ಸರ್ಕಾರ ಮತ್ತು ರಾಮದೇವರ ನಡುವಿನ ಇಗೋ ಸಂಘರ್ಷವಾಗಿ ಮಾರ್ಪಾಡಾಗಿಹೋಯಿತು. ಸರ್ಕಾರದ ಪತ್ರ ನನ್ನ ಕೈ ಸೇರಲಿ, ಆಮೇಲೆ ಸತ್ಯಾಗ್ರಹ ಮುಗಿಸುತ್ತೇನೆ ಎಂದು ಮೀಡಿಯಾಗಳ ಸಮ್ಮುಖದಲ್ಲಿ ಸಂಜೆ ಹೊತ್ತಿಗೆಲ್ಲ ರಾಮದೇವರು ಹೇಳಿದರು. ಪತ್ರ ಕೈ ಸೇರಿದ ಮೇಲೂ ರಾಮದೇವರು ಎದ್ದೇಳುವ ಮನಸ್ಸು ಮಾಡಲಿಲ್ಲ.

ರಾಮದೇವರಿಗೆ ತಮ್ಮ ಶೋ ಇನ್ನೊಂದು ದಿನ ಮುಂದುವರೆಸುವ ಆಸೆಯಿತ್ತೇನೋ? ಜಗತ್ತಿನ ಮಾಧ್ಯಮಗಳೆಲ್ಲವೂ ರಾಮದೇವರನ್ನು ಲೈವ್ ಟೆಲಿಕಾಸ್ಟ್‌ನಲ್ಲಿ ತೋರಿಸುತ್ತಿದ್ದವು. ರಾಮದೇವರ ರಾಜಕೀಯ ಉದ್ದೇಶಗಳಿಗೆ ಇದಕ್ಕಿಂತ ದೊಡ್ಡ ಜಾಹೀರಾತು ಬೇಕಿತ್ತೆ? ರಾಮದೇವರನ್ನು ಬೇರೆ ಶಕ್ತಿಗಳೂ ನಿಯಂತ್ರಿಸುತ್ತಿದ್ದವೇನೋ? ಅವುಗಳನ್ನು ಮೀರಿ ನಿರ್ಧಾರ ಕೈಗೊಳ್ಳುವ ಶಕ್ತಿಯನ್ನೂ ಅವರು ಕಳೆದುಕೊಂಡಿದ್ದಿರಬೇಕು. ನಾಳೆ ಮಾಡಬೇಕಾದ ಘನಘೋರ ಭಾಷಣದ ಸಿದ್ಧತೆಗಳನ್ನು ಮನಸ್ಸಿನಲ್ಲೇ ಮಾಡಿಕೊಳ್ಳುತ್ತ ಅವರು ಮಲಗಿದರು, ಪೊಲೀಸರು ಬಂದು ಸುತ್ತುವರೆದರು.

ಪೊಲೀಸರು ತಮ್ಮನ್ನು ಬಂಧಿಸಲು ಬಂದಾಗಲಾದರೂ ರಾಮದೇವರು ಸೆನ್ಸಿಬಲ್ ಆಗಿ ನಡೆದುಕೊಳ್ಳಬಹುದಿತ್ತು. ಪ್ರಾಯಶಃ ದೇಶದ ಯಾವುದೇ ಚಳವಳಿಗಾರನೂ ಪೊಲೀಸರ ಜತೆ ರಾಮದೇವರು ಆಡಿದ ಆಟಗಳಂಥದ್ದನ್ನು ಆಡಿರಲಾರರು. ಸತ್ಯಾಗ್ರಹಿಗಳು ಮಾಡುವ ಕೆಲಸ ಇದಲ್ಲ. ಪೊಲೀಸರು ತಮ್ಮನ್ನು ಬಂಧಿಸಲು ಬಂದಿದ್ದಾರೆ ಎಂಬುದು ಖಚಿತವಾಗುತ್ತಿದ್ದಂತೆ ಬಂಧನಕ್ಕೆ ಒಳಗಾಗಲು ಅವರು ಸಿದ್ಧರಾಗಬೇಕಿತ್ತು. ಬಂಧನ, ಜೈಲು ಇತ್ಯಾದಿಗಳು ಚಳವಳಿಗಾರರಿಗೆ ಹೊಸತೇನೂ ಅಲ್ಲ. ಅದೂ ಸಹ ಪ್ರತಿಭಟನೆಯ ಒಂದು ಭಾಗವೇ.

ರಾಮದೇವರು ಹಾಗೆ ಮಾಡಲಿಲ್ಲ. ಪೊಲೀಸರಿಂದ ತಪ್ಪಿಸಿಕೊಳ್ಳಲು ಬಯಸಿದರು. ಮಹಿಳೆಯರ ವೇಷ ಧರಿಸಿ ಓಡಿಹೋಗುವ ವಿಚಿತ್ರ ತಂತ್ರವನ್ನು ಅನುಸರಿಸಿದರು. ಮೈದಾನದಲ್ಲಿ ಸಾವಿರಾರು ಜನ ಬೆಂಬಲಿಗರು ಇರುವಾಗ ಒಬ್ಬ ನಾಯಕ ಹೀಗೆ ಬೇಜವಾಬ್ದಾರಿಯಿಂದ ವರ್ತಿಸುವುದು ಎಷ್ಟು ಸರಿ? ಅದರಲ್ಲೂ ಮಹಿಳೆಯರು ಮಕ್ಕಳು ಇದ್ದ ಆ ಸ್ಥಳದಲ್ಲಿ ಜನರನ್ನು ಉದ್ರೇಕಿಸಿ, ಗೊಂದಲದಲ್ಲಿ ಕೆಡವಿ ಅವರು ಸಾಧಿಸಿದ್ದಾರೂ ಏನು?

ರಾಮದೇವರ ದುಡುಕು ನಿರ್ಧಾರಗಳಿಂದಾಗಿ, ಆತುರದ, ಅವಿವೇಕದ ನಡೆಗಳಿಂದಾಗಿ ಅಮಾಯಕ ಬಡಪಾಯಿ ಸತ್ಯಾಗ್ರಹಿಗಳು ಏಟು ತಿಂದರು. ಪೊಲೀಸರಿಗೆ ಸತ್ಯಾಗ್ರಹಿಗಳೂ ಒಂದೇ, ಕ್ರಿಮಿನಲ್‌ಗಳೂ ಒಂದೇ. ಎಲ್ಲರನ್ನೂ ಒಂದೇ ರೀತಿ ನೋಡುವ ವ್ಯವಸ್ಥೆ ಅದು. ಬಡಪಾಯಿಗಳು ಕಣ್ಣಲ್ಲಿ ಅಶ್ರುವಾಯು ತುಂಬಿಕೊಂಡು, ಮೈಮೇಲೆ ಲಾಠಿ ಏಟು ತಿಂದು ಪೊಲೀಸ್ ದೌರ್ಜನ್ಯವನ್ನು ಎದುರಿಸಬೇಕಾಯಿತು.

ಆ ಜನರು ಮುಂಜಾನೆಯವರೆಗೆ ಎಲ್ಲಿಗೆ ಹೋದರು? ಆ ಕೆಟ್ಟ ರಾತ್ರಿಯನ್ನು ಹೇಗೆ ಕಳೆದರು? ಯಾವ ರಸ್ತೆಗಳ ಮೇಲೆ ಮಲಗಿದರು? ಅವರ ನೋವಿಗೆ ಮುಲಾಮಾದರೂ ಎಲ್ಲಿದೆ?

ಬಾಬಾ ರಾಮದೇವರು ಈಗ ಒಂದು ಲಕ್ಷ ಜನರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದರು ಎಂದು ತಮ್ಮ ಮಾಮೂಲಿ ವರಸೆಯ ಲಕ್ಷ, ಕೋಟಿ ಲೆಕ್ಕದ ಮಾತುಗಳನ್ನು ಆಡಿ ಕಣ್ಣೀರಿಡುತ್ತಿದ್ದಾರೆ. ವಿಶೇಷ ವಿಮಾನದಲ್ಲಿ ಹರಿದ್ವಾರಕ್ಕೆ ತಂದುಬಿಟ್ಟ ಪೊಲೀಸರು ತಮ್ಮನ್ನು ಎನ್‌ಕೌಂಟರ್ ಮಾಡಿ ಸಾಯಿಸಲು ಸಂಚು ನಡೆಸುತ್ತಿದ್ದರು ಎಂದು ಬಡಬಡಿಸುತ್ತಿದ್ದಾರೆ. ಮತ್ತು ನಿರೀಕ್ಷಿತವಾಗಿಯೇ ಅವರು ಸೋನಿಯಾ ಗಾಂಧಿಯವರ ವಿದೇಶಿ ಮೂಲವನ್ನು ಕೆದಕಿ ಮಾತನಾಡಿದ್ದಾರೆ.

ಆ ರಾತ್ರಿ ಪೊಲೀಸರು ಬಂದಾಗಲೇ ಒಬ್ಬ ಚಳವಳಿ ನಾಯಕನಂತೆ ರಾಮದೇವರು ವರ್ತಿಸಿದ್ದರೆ ಈ ಅನಾಹುತ ನಡೆಯುತ್ತಿತ್ತೆ?

****

ದೇಶದ ಮಾಧ್ಯಮಗಳು ಇಡೀ ಪ್ರಕರಣವನ್ನು ನಿರ್ವಹಿಸಿದ ರೀತಿ ಅವಿವೇಕತನದ್ದು. ಇಡೀ ದಿನ ರಾಮಲೀಲ ಮೈದಾನದ ವಿದ್ಯಮಾನಗಳನ್ನು ಲೈವ್ ಆಗಿ ತೋರಿಸಿದ್ದು ಮುಠ್ಠಾಳತನ. ಮಾಧ್ಯಮಗಳಿಗೆ ಬಹುಶಃ ಸತ್ಯಾಗ್ರಹ ಒಂದೇ ದಿನಕ್ಕೆ ಮುಗಿಯುವುದು ಬೇಕಿರಲಿಲ್ಲ. ಇನ್ನೊಂದಿಷ್ಟು ದಿನ ಎಳೆದಾಡುವ, ಆಡಿದ ಮಾತುಗಳನ್ನೇ ಆಡುವ ಉತ್ಸಾಹ ಅವುಗಳಿಗೆ ಇದ್ದಿರಬೇಕು.

ದೇಶದಲ್ಲಿ ಸಾವಿರಾರು ಚಳವಳಿಗಳು, ಆಂದೋಲನಗಳು ನಡೆದಿವೆ. ಎಲ್ಲ ಸಂದರ್ಭದಲ್ಲೂ ಮೀಡಿಯಾ ಹೀಗೇ ವರ್ತಿಸಿದ್ದಿದೆಯೇ? ಯಾಕೆ ಮೀಡಿಯಾಗಳಿಗೆ ಮಧ್ಯಮ, ಮೇಲ್ಮಧ್ಯಮ ವರ್ಗದ ಜನತೆಯ ಸಮಸ್ಯೆಗಳು ಮಾತ್ರ ಮುಖ್ಯವಾಗುತ್ತವೆ? ಬಡವರ, ನಿರ್ಗತಿಕರ ಇಶ್ಯೂಗಳ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುವುದಿಲ್ಲ? ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಪ್ರಚಾರ ಅಗತ್ಯ, ಅದನ್ನು ಒಪ್ಪಿಕೊಳ್ಳೋಣ. ಆದರೆ ಇತರ ಇಶ್ಯೂಗಳ ಬಗ್ಗೆ ಮೌನ ಯಾಕೆ?

****

ಭ್ರಷ್ಟಾಚಾರದಂಥ ವಿಷಯದ ಕುರಿತು ಮಾತನಾಡುವ ನೈತಿಕತೆಯನ್ನೂ ಹೊಂದಿಲ್ಲದ ಮೂರ್ಖ, ಧೂರ್ತ ಕಾಂಗ್ರೆಸ್, ಬಿಜೆಪಿಗಳು, ಇಂಥ ಸಂದರ್ಭದಲ್ಲೂ ಖಚಿತವಾಗಿ ಮಾತನಾಡಲು, ಜನರ ಆಂದೋಲನವನ್ನು ಕೈಗೆತ್ತಿಕೊಳ್ಳಲು ಅಶಕ್ತವಾಗಿರುವ ಎಡಬಿಡಂಗಿ ಎಡಪಕ್ಷಗಳು, ಅಪಕ್ಷ, ಅರಾಜಕ, ಅಪ್ರಬುದ್ಧ ಚಳವಳಿ ನಾಯಕರು, ಜವಾಬ್ದಾರಿ ಇಲ್ಲದ ಮೀಡಿಯಾ... ಎಲ್ಲವೂ ಸೇರಿ ಒಂದು ಇಂಡಿಯಾ ನಲುಗುತ್ತಿದೆ.

ನಾವು ಅಸಹಾಯಕ ಪ್ರೇಕ್ಷಕರು, ಎಲ್ಲರನ್ನೂ ಎಲ್ಲವನ್ನೂ ನೋಡಿ ಸುಮ್ಮನಿದ್ದೇವೆ.

30 comments:

  1. ಸಂಪಾದಕಿಯಕ್ಕೆ ಒಂದು ಚಿಕ್ಕ ಸ್ಪಷ್ಟನೆ..

    "ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಪ್ಪು ಹಣ ತರುವ ವಿಷಯ ಅಡ್ವಾನಿ ತಲೆಗೇಕೆ ಹೊಳೆದಿರಲಿಲ್ಲ? "

    ಕಪ್ಪು ಹಣದ ಮಾಹಿತಿ ಜಗತ್ತಿಗೆ ದೊರಕಿದ್ದೇ ೨೦೦೮ರಲ್ಲಿ. ಜರ್ಮನಿ LGT ಬ್ಯಾಂಕಿನ ಮಾಜಿ ಅಧಿಕಾರಿಗೆ ದುಡ್ಡುಕೊಟ್ಟು ೧೫೦೦ ವ್ಯಕ್ತಿಗಳ ಹೆಸರನ್ನು ತರಸಿಕೊಂಡಾಗ. ಅಲ್ಲಿವರೆಗೂ ಜಗತ್ತಿನ ಪ್ರಮುಖ್ ರಾಷ್ಟ್ರಗಳಿಗೆ ಮಾಹಿತಿಯನ್ನು ಬ್ಯಾಂಕುಗಳು ಬಿಟ್ಟುಕೊಟ್ಟಿರಲಿಲ್ಲ. NDA ಸರ್ಕಾರಕ್ಕೆ ಅದು ಸಾಧ್ಯವಾಗಿರಲಿಲ್ಲ. ಹೆಚ್ಚಿನ ಮಾಹಿತಿಗೆ http://goo.gl/acAGJ

    ReplyDelete
  2. ತೇಜಸ್ವಿಯವರು ಒಂದು ಕಡೆ ಹೇಳುತ್ತಾರೆ.. "ಐಡಿಯಾಲಜಿಗೆ ಕೆಲಸ ಮಾಡೋರಿಗೂ, ಚೆಂಗೂಲಿಗೆ ಕೆಲಸ ಮಾಡೋರಿಗೂ ವ್ಯತ್ಯಾಸ ಇರುತ್ತೆ ಕಣ್ರಯ್ಯ" ಅಂತ. ಈ ಮಾತು ಎಷ್ಟೋ ವರ್ಷಗಳ ನಂತರ ರಾಷ್ಟ್ರಮಟ್ಟದಲ್ಲಿ ನಿಜವಾಗಿಹೋಯಿತು. ಐಡಿಯಾಲಜಿ ಯಾರದ್ದು, ಚೆಂಗೂಲಿ ಆಟ ಯಾರದ್ದು ಎಂಬುದು ಈಗ ಬಟಾಬಯಲು. ಇವರು ಸರಿ ಅಂತ ಅವರು, ಅವರು ಸರಿ ಅಂತ ಇವರು.. ಹೀಗೆ ಎಲ್ಲರೂ ಒಂದೊಂದು ನಿಲುವಿನ ಆಯಕಟ್ಟಿನ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ತಮ್ಮ ತಮ್ಮವರ ಚಿಂತನಾ ಸೈಜಿಗೆ ತಕ್ಕಂತೆ ಬರೀಮಾತುಗಳನ್ನು ಇಟ್ಟಾಡಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ಲೇಖನ ಪ್ರಕಟವಾಗಿದ್ದು ಅತ್ಯಂತ ಸಮಯೋಚಿತವಾಗಿದೆ. ಕಾಂಗ್ರೆಸ್, ಬಿಜೆಪಿ, ರಾಮದೇವ, ಎಡಪಕ್ಷಗಳು, ತಮ್ಮ ಕಷ್ಟದಿಂದ ಪಾರುಮಾಡಲು "ಹೀರೋ"ಗಳನ್ನು ಎದುರುನೋಡುವ ನಾಗರೀಕರು,ಎಲ್ಲರ ದೋಸೆಯಲ್ಲೂ ದೊಗರು ಬಿದ್ದಿರುವುದನ್ನು ಈ ಲೇಖನ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದೆ. ಇದನ್ನು ಓದಿಯಾದ ಮೇಲೆಯೂ ನಮ್ಮ ನಿಲುವಿನ ಆಯಕಟ್ಟಿನ ಜಾಗಗಳಲ್ಲಿ ವಾದಿಸುತ್ತ ಕೂರದೇ, ಅಂಗೈಯಲ್ಲೇ ಇರುವ ಕೆಂಡದಂತಹ ಸತ್ಯವನ್ನು ಒಪ್ಪಿಕೊಳ್ಳುವುದೇ ಒಳಿತು. ಟಿ.ಕೆ. ದಯಾನಂದ

    ReplyDelete
  3. correct Rakesh Joshi heliddu sari ide, neevu blog bareyuva munna swalpa study mdabekittu annisutte, otherwise good written. BJP govt iddaga adu summane gaali suddi agittu, 2008 was the year when whole world came to know about it.

    ReplyDelete
  4. ಮಿಸ್ಟರ್ ರಾಕೇಶ್ ಜೋಶಿಯವರೆ, ಕಪ್ಪು ಹಣ ವಿದೇಶಿ ಬ್ಯಾಂಕ್ನಲ್ಲಿ ಭಾರತೀಯರದ್ದು ಇದೆ ಅಂತ ಬಿ.ಜೆ.ಪಿ.ಗೆ ಗೊತ್ತಿಲ್ಲದೇ ಇರಲಿಕ್ಕಿಲ್ಲ, ಬುದ್ದಿವಂತರಾಗಿದ್ದಾರೆ ಭಾರತೀಯರದ್ದು ಎಷ್ಟಿದೆ ಅಂತ ತಿಳಿಯಬಹುದಿತ್ತು, ಯಾಕೆ ಸಾರ್ ಅದಾಗ್ಲಿಲ್ವ, ಮತ್ತೆ ಯಾಕೆ ಕೊರಗ್ತೀರ, ತಾವು ಒಳ್ಳೆದಿದ್ರೆ ಬೇರೆ ಎಲ್ಲಾ ಒಳ್ಳೆದಾಗಿರ್ತಾರೆ, ತಾವೇ ಕಳ್ಳರಾದ್ರೆ, ಬೇರೆಯವರನ್ನ ದೂರಿ ಏನು ಪ್ರಯೋಜನ, ಕೈಲಾಗದಿದ್ದದಕ್ಕೆ ಮೈ ಇಡಿ ಪರಚಿಕೊಂಡರಂತೆ.
    ಏನೇ ಆದರು ಮೊನ್ನೆ ನಡೆದಂತ ದೌರ್ಜನ್ಯ ಬಹಳ ತಪ್ಪು, ಆದರು ಇದಕ್ಕೆ ಹೊಣೆ ಸರ್ಕಾರವು ಮತ್ತು ಬಾಬಾ ರಾಮದೇವ್ ಆಗಿರುತ್ತಾರೆ, ಒಬ್ಬ ಹೊಣೆಗೇಡಿ ನಾಯಕನಿಂದ ನೀವು ಏನು ಗಳಿಸುತ್ತೀರ, ಮಾತಿಗೆ ತಕ್ಕಂತೆ ನಡೆಯಲಾಗದಿದ್ದವ, ಜೀವಕ್ಕೆ ಹೆದರಿ ಹೆಣ್ಣಿನ ಚೂಡಿದಾರ್ ಧರಿಸಿ ಹೆಣ್ಣಿನೊಂದಿಗೆ ತನ್ನನ್ನು ತಾನು ಬಚ್ಚಿತ್ತುಕೊಂಡವ ಇವರನ್ನ ನಾಯಕರೆನ್ನುತ್ತರೆಯೇ?,ನಾವು ಕೂಡ ಅಂದಿನ ಲೈವ್ ಟೆಲಿಕಾಸ್ಟ್ ವೀಕ್ಷಿಸಿದವ್ರೆ ಆದರೆ ಎಲ್ಲೂ ಕೂಡ ಲಾಟಿ ಚಾರ್ಜ್ ಮಾಡಿದ್ದು ಕಂಡಿಲ್ಲ, ಜನರನ್ನ ಚದುರಿಸುವಾಗ ಜನ ಹೆದರಿಕೆಯಿಂದ ಓಡಿ ಬಿದ್ದಿರಬಹುದು, ಅಲ್ಲದೆ ಬಾಬಾ ರಾಮದೇವ್ ಅವರ ಪ್ರಚೋದನಕಾರಿ ಹೇಳಿಕೆಯಿಂದ ಜನ ಹೆದರಿಕೆಯಿಂದ, ಕುಪಿತರಾಗಿ ಪೋಲಿಸ್ ಕೈಯಲ್ಲಿ ಜಗಳಕ್ಕೆ ಸಿಕ್ಕೀದ್ದು ಇದೆ, ಸಾವಿರಗಟ್ಟಲೆ ಜನರಿರುವಾಗ ರಾತ್ರೆ ೧೨ ಘಂಟೆಯ ಕಾರ್ಯಾಚರಣೆ ಭಯಾನಕ ಅದರಿಂದಲೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಯಿತು.

    ReplyDelete
  5. 1.Congress is a fool. Is it so? If Yes, Then this fool is ruling us since 50 years.. It is making us fool for every reason. Can anybody think how this so called 'fool' had ruled us already and ruling us now also? Can anybody think How much fool are we Indians?!..
    2. BJP is a bit weak, ineffective in its campaign, even though it had 'returning of black money' in its agenda during this election..But could not do anything until Anna Hazare and Baba Ramdev has started Campaign.. Means it is only public who can fight, after all we are living in Democratic country. We people have highest power.
    3. Ramdev has started the momentum against corruption. We, Indians are followers, If leader is gone, then campaign is gone. In the sense, If Ramdev is gone, campaign is gone. The so called 'Fool'then will win the game. If so, then Who are the sufferers? Congress, BJP, Ramdev or We ourselves?.... The Cause is to bring black money and stop corruption. Being an Indian, One should support this campaign, not Baba Ramdev. One thing every one should remember is campaign is not to support, judge, criticize an Individual, Baba Ramdev or any party, Congress or BJP etc. It is against corruption. Then why the hell one should worry, judge or criticize anybody?...
    4. We, the people are not helpless, we are not followers of so called 'fools', we are not just listeners of all critics, we are not politicians to make critics to 'ALL',
    We are Public, We are the rulers, we are the controllers of our own rulers, we decide what is needed for us from politicians, we are against corruption, against black money.
    So let us stop criticizing 'ALL', let us unite together and fight against corruption....

    ReplyDelete
  6. Satyagraha yaake filmy style alli irabeku? Nelada mele, bisilalli kulitare matra satyagrahave? satyagraha maduvavaru manushyarallave? Avarella nammavare allave? Avaru maneyolago, horago, maaligeya melo kulitare yarigenu? satyagrahada "kaarana" Mukhyavallave? Saaviraru janariruvaga, ventillation bahala Mukhya,45 degree C bisilalli janara jivakke apaya barabahudu..toilet vyavasthe madiddu saha thappe? aspathre madiddu saha thappe? satyagrahada hesaralli nammavara pranakke apaaya odduvudu sariye? Avarella upawas maaduvaga, thonderayagabaradu emba olleya uddeshavannu thavu 'murkh congress' helida mathugallannu keli, neevu saha murkharaguvade? Bahala viparyasa hagoo hasyaspadavagide thamma mathu................
    sadhavadare uttara kodi sampadakeeya mahashayare.. Bareyuvadu sulabha, uttariduvadu kashtha..

    ReplyDelete
  7. 1.) Y baba kept the negotions secret?
    2)Y did he gave in writing and continued fast.?Stunt.?
    3) I will make a call to the govt and I have a good news for you all now…….Govt his slave.?
    4)He wants non british type of rulling.? PM shd be elected from public.? What does he know about constitution 4th standard school drop out !!!!!!
    4)Technical education in regional languages. I studied in kannada and I know the importance of english. Again is he a expert in education field,>?
    5)Y he did nt surrender when police came? Y did He hide himself in the crowd.?
    6)Y did he question about Sonia’s foreign origin.? RSS agenda.??
    7)Y babri convicted was on the stage ? Anna did nt allow uma bharathi like leaders to share the stage.?
    8)Pejavara joined this movement,funny……he appreciates Yeddi’s corruption because he gives money to his matha?
    8)People of india voted MP’s to make law. I feel insulted when the govt listens to someone like Baba/Anna. Please desolve the parliment and go home.
    ——–
    DONT THINK CIVIL ACTIVISTS ARE VERY GOOD PEOPLE. HOW COME NITTE EDUCATION TRUST(OWNED BY SANTHOSH HEGDE’S FAMILY) IS CHARGING CRORES OF RUPEES FOR MANAGEMENT SAETS IN MEDICAL.? THAS IS SHISHTACHAR.?
    ——–
    FRIENDS IN DEMOCRACY WHAT PEOPLE WANTS MATTERS NOT WHAT HAZARE/BABA/XYZ.?
    ANNA HIMSELF TELL THAT HE WILL LOOSE DEPOSIT IF HE CONTESTS.? THAT MEANS PEOPLE DOES NOT WANT HIM>?
    ——–
    THIS GOVT SHOWED CONCERN FOR BABA/ANNA. GOVT IS NOT HIS SLAVE HE SHOULD THINK THAT (baba).
    ——–
    ABOUT BRASHTACHAAR ,ADVANI’S CONCERN WAS VERY APPRECIATIVE. Y DONT HE COME TO KTAKA ONCE.??SPEAKER/CM STILL IN POWER.? FOOLED US BY USING RAMA, NW TRYING TO FOOLS US BY USING RAMADEV ? HE IS CVERY MUCH CONCEREND ABOUT MATHA’S BEHAN’S. WHAT ABOUT MANY WHO DIED IN SANJOTHA/BABRI MASJID ROITS ???
    ——-
    PEOPLE ARE STILL SUPREMO IN DEMOCRACY!! C WHAT HAPPENED IN TN??? I DO NOT WANT SOME XYZ TO MAKE LAW OTHER THAN SOME ONE ELECTED BY ME.
    ——-
    We are calling for a fast to death in my office for better hikes…. Please join me guys.
    ——-Republic of India or Republic of Fasts.——–
    -Tilak

    ReplyDelete
  8. untill unless we stop giving bribe nothing will be changed.....................

    ReplyDelete
  9. We are the people who feeds the corruption. The one baba cannot stop curruption. Before bringing the black money we should stop corruption from the base.Unless we stop corruption from its base, no use bringing the black money back.The money will distributed to the top politition and the official from top to bottom . If anyone want stop the corruption then it should begin from village panchayat to parliament house. By only accusing the central government for corruption is not solutions for the current situation. The each every citizens of the country are the responsible the massive corruption. So let us begin from the bottm. It wiil be easier instead making strong bills on official papers. If the existings laws are implemented effectively .

    ReplyDelete
  10. ಭ್ರಷ್ಟಾಚಾರದ ವಿರುದ್ದ ಹೋರಾಡಲು ನಮ್ಮಲ್ಲೇ ಒಂದು ಆಯುದವಿದೆ!!! ಅದನ್ನು ಉಪಯೋಗಿಸಿ ನಾನು (ಕಾಟಾಚಾರಕ್ಕೆ ಟಾರ್ ಹಾಕಿದ) ನಮ್ಮೂರ ರಸ್ತೆಗೆ (ಸಾದಾರಣ) ಸರಿಯಾಗಿ (ಒಂದು ವರ್ಷ ಬಿಟ್ಟು) ಟಾರ್ ಹಾಕಿಸಿದೆ.ಅದೇ 'ಮಾಹಿತಿ ಹಕ್ಕು' ಕಾಯ್ದೆ.ನಿಮ್ಮಲ್ಲಿ ಎಷ್ಟು ಜನ ಅದನ್ನು ಉಪಯೋಗಿಸಿದ್ದೀರಿ??

    ReplyDelete
  11. ವಿದೇಶಿ ಬ್ಯಾಂಕುಗಳಲ್ಲಿನ ಕಪ್ಪುಹಣದ ಬಗ್ಗೆ ಭಾರತದಲ್ಲಿ ಮೊದಲ ಬಾರಿಗೆ ದನಿ ಎತ್ತಿದ್ದು ಬಾಬಾ ರಾಮದೇವರಲ್ಲ. ಅದು ಆಜ಼ಾದಿ ಬಚಾವೋ ಆಂದೋಲನದ ದಿ. ರಾಜೀವ್ ದೀಕ್ಷಿತ್ ಅವರು. ಪ್ರಾಮಾಣಿಕ ಮುಗ್ಧ ರಾಜೀವ್ ದೀಕ್ಷಿತರ ಈ ಮಾತು ೨೦೦೦ನೇ ಇಸವಿಯ ಸುಮಾರಿನಲ್ಲೇ ಮೂಡಿ ಬಂದಿತ್ತು. ಇದಕ್ಕೆ ಸಾಕ್ಷಿಯಾಗಿ ಅಂದಿನಿಂದ ಅವರ ಜೊತೆಗಾರರಾಗಿದ್ದ ಶ್ರೀ ಹೀರಾಲಾಲ್ ಶರ್ಮ. ಶ್ರೀ ಹರಿಚಂದ್ರ, ಶ್ರೀ ಭಗವಾನ್ ಸಿಂಗ್ ಮೊದಲಾದವರು ಇದ್ದಾರೆ. ಅದನ್ನು ರಾಜಕೀಯಕ್ಕೆ ಬಳಸಿದ್ದು ಮಾತ್ರಾ ರಾಮದೇವ್.

    ReplyDelete
  12. Hi Anonymous,

    I admire your writing and as we all know you are a journalist. Your post talks about three ppls, Congress , Ramadev and BJP. You have trashed mainly Ramadev, fine it is left to your vision. Why didn't Sampadakeeya wrote anything about Ramadev when you think he was making false assuring that he can cure cancer, AIDS etc even before he came out to media with Black Money issue in Jan.., just the way you did for Bhramanada Guru.

    Anyhow, Wahtever the matter is like.. Ramadev was/is afraid of police custody and he wore ladies dress to escape, fine. Leave it. It is not Govt is ruling by b**** less ppl who is attacking the ppl (Women/children/old age ppl)in the midnight with tear gas. Usage of tear gas is one of the idiotic thing anyone can do at the time of sleeping.

    Would the govt had done the same sort of attacking or swooping into the filed in the mid-night with thousands of forces to quell the crowd or protesters if we replace Ramadev with some Muslim/Christian leader. (- I'm Not against religion, but Govt is -)

    - Vinay V

    ReplyDelete
  13. ಕೇಂದ್ರದ UPA ಭ್ರಷ್ಟಾಚಾರದ ಆರೋಪ ಎದುರಿಸಿದರೂ ಕೂಡ ಹಲವಾರು ಜನರನ್ನು ಜೈಲಿಗೆ ಅಟ್ಟಿ ನೈತಿಕತೆ ತೋರಿಸಿದೆ.ಅದೇ ಈ ಉಸರವಳ್ಳಿ ಬಿಜೆಪಿಯವರು ನಮ್ಮ ಯಡ್ಡಿಯನ್ನು ತಲೆ ಮೇಲೆ ಕೂರಿಸ್ಕೊಂಡು ಮೆರೆಸ್ತಾರೆ..ಭ್ರಷ್ಟಾಚಾರದಲ್ಲಿ ಹೆಸರು ಮಾಡಿದ ಕರ್ನಾಟಕ ಬಿಜೆಪಿ ಸರ್ಕಾರದಲ್ಲಿ ಯಾರು ಜೈಲಿಗೆ ಹೋಗಿದ್ದಾರೆ ಸ್ವಾಮೀ?? ಕಪ್ಪು ಹಣ ಎಂದು ಕೂಗುವ ಬಿಜೆಪಿ ಯ ಪಾರ್ಟಿ ಫಂಡ್ ಗೆ ಹರಿದು ಬರುವ ಹಣವೆಲ್ಲಾ ಬಿಳಿ ಹಣವೇ??

    ಇನ್ನೂ ಆ ಕಳ್ಳ ಬಾಬ ಅವನ ಬೇಳೆ ಬೇಯಿಸಿಕೊಳ್ಳಲು ಇಲ್ಲ ಸಲ್ಲದ ನಾಟಕ ಮಾಡ್ತಾನೆ.

    ಇನ್ನು ನಮ್ಮ ಮೀಡಿಯಾ ಗಳು ಇಲಿ ಹೋದರೆ ಹುಲಿ ಹೋಯ್ತು ಎಂದು ಹೇಳುವ ಇವರ ದರಿದ್ರ ಜಾಯಮಾನ.ಭಾರತದ ೧೨೩ ಕೋಟಿ ಜನಸಂಖ್ಯೆಯಲ್ಲಿ ಈ ಕಳ್ಳ ಬಾಬ ಗೆ ಸಪೋರ್ಟ್ ಮಾಡಿದ ಜನ ಎಷ್ಟು ಎಂದು ಮೊದಲು ಸಮೀಕ್ಷೆ ನಡೆಯಲಿ.ನಾಲಕ್ಕು ಮತ್ತೊಂದು ಜನ ಮಾಡಿದ ಪ್ರತಿಭಟನೆ,ಸತ್ಯಾಗ್ರಹವನ್ನೇ ತೋರಿಸಿ ಇಡೀ ದೇಶ ಇವರ ಬೆಂಬಲಕ್ಕಿದೆ ಎಂದು ಹೇಳುವ ಮೀಡಿಯಾದವರು ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ ಅಷ್ಟೇ...

    ಲಾಸ್ಟ್ ಪಂಚ್-
    .ಭ್ರಷ್ಟಾಚಾರದ ಸುಳಿಯಲ್ಲಿ ಸಿಕ್ಕಿ ನಲುಗುತ್ತಿರುವ UPA
    .ಇವರನ್ನೂ ಮೀರಿಸಿ ಭ್ರಷ್ಟರಾಗಿರುವ ವಿರೋಧ ಪಕ್ಷ ಬಿಜೆಪಿ
    .ಭ್ರಷ್ಟ ಬಾಬಾಗಳು
    .ದುಷ್ಟ ಮೀಡಿಯಾಗಳು
    ಒಟ್ಟಿನಲ್ಲಿ ಭಾರತದ ಜನ ಇವರ ಕೈಲಿ ಸಿಕ್ಕಿ ನಲುಗುತ್ತಿದ್ದಾರೆ

    ReplyDelete
  14. ತುಂಬಾ ಒಳ್ಳೆಯ ಲೇಖನ. ನಮ್ಮ ಮನಸಿನಲ್ಲಿ ಇದ್ದುದನ್ನೇ ಹೇಳಿದ್ದೀರಿ. ಹಿಂದೆ ಭಾ.ಜ. ಪ. ಅಧಿಕಾರದಲ್ಲಿದ್ದಾಗ ಕಪ್ಪು ಹಣದ ವಿಷಯದಲ್ಲಿ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಭಾರತೀಯರ ಕಪ್ಪು ಹಣ ವಿದೇಶಿ ಬ್ಯಾಂಕುಗಳಲ್ಲಿ ಇರುವ ವಿಷಯ ೨೦೦೮ ರವರೆಗೆ ತಿಳಿದಿರಲಿಲ್ಲ ಎಂಬುದು ಸಮಂಜಸವಲ್ಲ. ದಶಕಗಳ ಹಿಂದೆಯೇ ವಿದೇಶಗಳಲ್ಲಿ ಕಪ್ಪು ಹಣ ಇರುವ ವಿಷಯ ಹೇಳಲಾಗುತ್ತಿದೆ. ಇದು ಮಾತ್ರವಲ್ಲ, ಭಾ. ಜ. ಪ. ಅಧಿಕಾರದಲ್ಲಿದ್ದಾಗ ಲೋಕಪಾಲ್ ಮಸೂದೆ ಬಗ್ಗೆ ಯಾಕೆ ಕ್ರಮ ಕೈಗೊಳ್ಳಲಿಲ್ಲ? ೨೦೦೯ ರ ಚುನಾವಣೆಯಲ್ಲಿ ಭಾ. ಜ. ಪ. ಕಪ್ಪು ಹಣ ತರುವ ವಿಷಯವನ್ನೇ ಪ್ರಧಾನ ಚುನಾವಣಾ ವಿಷಯವನ್ನಾಗಿ ಮಾಡಿದ್ದರೂ ಜನ ಏಕೆ ಅವರಿಗೆ ಮೂರನೇ ಎರಡು ಬಹುಮತ ಕೊಟ್ಟು ಅಧಿಕಾರಕ್ಕೆ ತರಲಿಲ್ಲ? ಅಂದರೆ ಜನರಿಗೆ ಭಾ. ಜ. ಪ. ದ ಮೇಲೆ ನಂಬಿಕೆ ಇರಲಿಲ್ಲ ಎಂಬುದು ಇದರಿಂದ ಗೊತ್ತಾಗುವುದಿಲ್ಲವೇ? ಕಪ್ಪು ಹಣದ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಲು ಭಾ.ಜ.ಪ. ರಾಮದೇವರ ಮೂಲಕ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಷ್ಟು ಮಾತ್ರವಲ್ಲ ದೇಶದಲ್ಲಿ ಪುರೋಹಿತಶಾಹೀ ಆಡಳಿತವನ್ನು ಪುನಃ ಸ್ಥಾಪಿಸುವ ಸಂಘ ಪರಿವಾರದ ಗುಪ್ತ ಅಜೆಂಡಾವೂ ರಾಮದೇವರ ಮೂಲಕ ನಡೆಯುತ್ತಿದೆ. ಇದನ್ನು ದೇಶದ ಪ್ರಜ್ಞಾವಂತರು ವಿರೋಧಿಸದಿದ್ದರೆ ಸಂವಿಧಾನವನ್ನೂ ಪುರೋಹಿತಶಾಹಿ ಸಂವಿಧಾನವಾಗಿ ಬದಲಾಯಿಸಲು ಸಂಘ ಪರಿವಾರ ಪ್ರಯತ್ನಿಸಲಿದೆ. ಹಿಂದೆಯೇ ಈ ಪ್ರಯತ್ನ ನಡೆದಿತ್ತು, ಅದಕ್ಕೆ ಜನ ಬೆಂಬಲ ಸಿಕ್ಕಿರಲಿಲ್ಲ ಅಷ್ಟೇ.

    ReplyDelete
  15. Congress in VERY much experienced in Deviating the Issues. When Ramdev become threaten to Congress they started investigation about Origin of Ramdev, Crores of Rupees which ramdev having etc.. But no congress person has told about the issue which ramdev is talking about. Congress should talk in Subjective manner. not deviating the issues...

    ReplyDelete
  16. ಈ ಲೇಖನ ವಸ್ತುಸ್ಥಿತಿಯನ್ನು ತೆರೆದಿಡುವ ಮೂಲಕ ಜನರಲ್ಲಿ ಅರಿವು ಮೂಡಿಸುತ್ತದೆ. ಶೀರ್ಷೀಕೆ ಕೂಡ ಅಷ್ಟೇ ಸೂಕ್ತವಾಗಿದೆ.
    ಸುರೇಶ್ ಕಾಂತ ಬಿ.

    ReplyDelete
  17. ಯಾವುದೇ ಆಪಾದನೆಗಿಂತ, ಆಗ್ರಹಕ್ಕಿಂತ ಇತ್ತೀಚಿನ ದಿನಮಾನಸಗಳಲ್ಲಿ ಅದರ ಹಿಂದಿರುವ ವ್ಯಕ್ತಿಗಳ ಬಗ್ಗೆಯೇ ಅತಿ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಒಂದು ದೃಷ್ಠಿಯಲ್ಲಿ ಅದು ಸರಿ ಅನಿಸಿದರೂ..ಎಲ್ಲೋ ಒಂದುಕಡೆ ಗಂಬೀರ ವಿಚಾರಗಳನ್ನು ಹೊಸಕಿಹಾಕುವ ದುಷ್ಟಯತ್ನ, ಹುನ್ನಾರ ಅನಿಸುವುದಿಲ್ಲವೇ...?
    ಎಲ್ಲಾ ರಾಜಕೀಯ ಪಕ್ಷಗಳನ್ನು ದೂಷಿಸುವ ಮಂದಿ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಬಡಾಯಿಕೊಚ್ಚುತ್ತಾರೆ. ಒಂದು ವಿಪರ್ಯಾಸವೆಂದರೆ ಯಾವುದನ್ನೂ ಒಪ್ಪದ ಎಲ್ಲವನ್ನೂ ತೆಗಳುವ ಮನಸ್ಥಿತಿಯವರಿಂದಾಗಿ ಈ ಎಲ್ಲಾ ಅವಘಡಗಳು ಸೃಷ್ಟಿಯಾಗುತ್ತಿವೆ. ಅಣ್ಣಾ ಹಜಾರೆಯನ್ನು ಮೊನ್ನೆ ಮೊನ್ನೆ ಹೊಗಳುತಿದ್ದ ಮಂದಿ ಬಾಬಾಗೆ ಬೆಂಬಲಸೂಚಿಸಿದ ಕಾರಣಕ್ಕೆ ತೆಗಳಲಾರಂಭಿಸಿದ್ದಾರೆ. ಬಾಬಾ ಪ್ರತಿಭಟನೆ ಕಾವು ಹತ್ತಿದ್ದರೆ..ಅದನ್ನೂ ಈ ಮೊಸರಲ್ಲಿ ಕಲ್ಲು ಹುಡುಕುವ ಮಂದಿ ಸಹಿಸುತ್ತಿರಲಿಲ್ಲ.ಹಾಗೆಯೇ..ಪ್ರತಿಭಟನೆಯನ್ನು ಮೊಟಕುಗಳಿಸದ ಯುಪಿಎ ಸರ್ಕಾರದ ಕ್ರಮವನ್ನು ಎತ್ತಾಡುತ್ತಾರೆ. ಒಂದು ಸ್ಪಷ್ಟವಾಗಬೇಕಿದೆ. ಕೇಂದ್ರ ಸರ್ಕಾರ ಮತ್ತು ಬಾಬಾ ಎರಡನ್ನು ದೂಷಿಸುವವರ ಉದ್ಧೇಶ ಏನೆಂದು..?

    ReplyDelete
  18. ಬಾಬಾ ರಾಮದೇವ್ ತಮ್ಮ ಕಪ್ಪು ಹಣದ ವಿರುದ್ಧ ಹೋರಾಟದಲ್ಲಿ ಒಂದು ರಾಜಕೀಯ ಪಕ್ಷ ಹಾಗೂ ಪ್ರತಿಗಾಮಿ ಸಂಘಟನೆಗಳನ್ನು ಜೊತೆಗೆ ತೆಗೆದುಕೊಂಡದ್ದು ಈ ಹೋರಾಟ ದಿಕ್ಕು ತಪ್ಪುವಂತೆ ಹಾಗೂ ಜನಬೆಂಬಲ ಚೋರಾಗುವಂತೆ ಮಾಡಿದೆ. ಈಗ ಹೆಚ್ಚಾಗಿ ಈ ಹೋರಾಟದಲ್ಲಿ ಕಂಡುಬರುತ್ತಿರುವುದು ದೇಶದ ಪ್ರತಿಗಾಮಿ ಸಂಘಟನೆಗಳು ಹಾಗೂ ಪ್ರತಿಗಾಮಿ ರಾಜಕೀಯ ಪಕ್ಷಗಳೇ ಆಗಿವೆ. ಹೀಗಾಗಿ ಹೋರಾಟ ತನ್ನ ಗಾಂಭೀರ್ಯವನ್ನು ಕಳೆದುಕೊಂಡಿದೆ. ದೆಹಲಿಯಲ್ಲಿ ಸತ್ಯಾಗ್ರಹ ನಿರತರ ಮೇಲೆ ದೌರ್ಜನ್ಯ ನಡೆಸಿದ್ದು ತಪ್ಪಾದರೂ ಇದೇ ರೀತಿಯ ದೌರ್ಜನ್ಯವನ್ನು ಎಲ್ಲ ರಾಜಕೀಯ ಪಕ್ಷಗಳ ಆಡಳಿತಗಳೂ ಮಾಡಿವೆ, ಮಾಡುತ್ತಿವೆ. ಉದಾಹರಣೆಗೆ ನಂದಿಗ್ರಾಮ, ನೊಯಿಡಾ ರೈತರ ಹೋರಾಟ, ಕೊಪ್ಪಳ, ಚಾಮರಾಜನಗರ, ದಾವಣಗೆರೆ, ಹಾವೇರಿ ಮೊದಲಾದ ಕಡೆ ಚಳುವಳಿ ನಿರತರ ಮೇಲೆ ಪೋಲೀಸ್ ದೌರ್ಜನ್ಯ ನಡೆದಾಗ ಯಾವ ಮಾಧ್ಯಮಗಳೂ ಸರಕಾರಗಳನ್ನು ಬ್ರಿಟಿಷರಿಗೆ ಹೋಲಿಸಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಮಾಧ್ಯಮಗಳಿಗೆ ಬ್ರಿಟಿಷರ ದೌರ್ಜನ್ಯ ನೆನಪಾಗಿದೆ. ಭಾ.ಜ.ಪ. ದ ಒಬ್ಬ ನಾಯಕರಂತೂ ದೆಹಲಿಯ ಘಟನೆಯನ್ನು ಜಲಿಯನ್ವಾಲಾಭಾಗ್ ಘಟನೆಗೆ ಹೋಲಿಸಿದ್ದಾರೆ. ಜಲಿಯನ್ವಾಲಾಭಾಗ್ ನಲ್ಲಿ ಬ್ರಿಟಿಷರು ಹೊರಹೋಗುವ ಒಂದೇ ದಾರಿಯನ್ನು ಮುಚ್ಚಿ ಗುಂಡು ಹಾರಿಸಿದ್ದರು. ದೆಹಲಿಯಲ್ಲಿ ಹಾಗೇನೂ ಅದಂತೆ ಕಾಣಲಿಲ್ಲ. ಭಾರತದ ಹೆಚ್ಚಿನ ಮಾಧ್ಯಮಗಳಲ್ಲಿ ಪುರೋಹಿತಶಾಹಿಗಳೇ ಆಯಕಟ್ಟಿನ ಜಾಗಗಳಲ್ಲಿ ತುಂಬಿಕೊಂಡಿದ್ದಾರೆ. ಹೀಗಾಗಿ ಮಾಧ್ಯಮಗಳು ಪುರೋಹಿತಶಾಹಿಗೆ ಯಾವುದು ಅನುಕೂಲವೋ ಅದನ್ನೇ ಎತ್ತಿಹಿಡಿಯುವುದನ್ನು ನಾವು ಕಾಣಬಹುದು. ಕಪ್ಪು ಹಣದ ಚಳುವಳಿಯ ವಿಷಯದಲ್ಲೂ ಮಾಧ್ಯಮಗಳ ಕಣ್ಣು ಕುರುಡಾಗಲು ಇದೇ ಕಾರಣ.

    ReplyDelete
  19. @ದೆಹಲಿಯಲ್ಲಿ ಹಾಗೇನೂ ಅದಂತೆ ಕಾಣಲಿಲ್ಲ. ಭಾರತದ ಹೆಚ್ಚಿನ ಮಾಧ್ಯಮಗಳಲ್ಲಿ ಪುರೋಹಿತಶಾಹಿಗಳೇ ಆಯಕಟ್ಟಿನ ಜಾಗಗಳಲ್ಲಿ ತುಂಬಿಕೊಂಡಿದ್ದಾರೆ. ಹೀಗಾಗಿ ಮಾಧ್ಯಮಗಳು ಪುರೋಹಿತಶಾಹಿಗೆ ಯಾವುದು ಅನುಕೂಲವೋ ಅದನ್ನೇ ಎತ್ತಿಹಿಡಿಯುವುದನ್ನು ನಾವು ಕಾಣಬಹುದು. ಕಪ್ಪು ಹಣದ ಚಳುವಳಿಯ ವಿಷಯದಲ್ಲೂ ಮಾಧ್ಯಮಗಳ ಕಣ್ಣು ಕುರುಡಾಗಲು ಇದೇ ಕಾರಣ.

    nice joke .

    ReplyDelete
  20. Some demands made by Baba Ramdev are not wrong. Banning 500 and 1000 rupee notes will help reducing black money. Most black money is due to payment in cash. With ban on 500 and 1000 rupee notes carrying lot of cash will be difficult. This will help reduce black money. Look at most countries, they dont have bills (notes) above 100.

    ReplyDelete
  21. ಕಪ್ಪುಹಣ- ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾರುಗಳಲ್ಲಿ...

    ಭ್ರಷ್ಟಾಚಾರ, ಕಪ್ಪುಹಣ, ಬಾಬಾರಾಮದೇವ್ ಸತ್ಯಾಗ್ರಹ... ಇತ್ಯಾದಿ ಈಗ ಸುದ್ದಿಯಲ್ಲಿರುವುದರಿಂದ ಇದನ್ನು ಇಲ್ಲಿ ದಾಖಲಿಸುತ್ತಿದ್ದೇನೆ (ವಿಜಯ ಕರ್ನಾಟಕ ಪತ್ರಿಕೆಯಲ್ಲಿ 27 ಫೆಬ್ರವರಿ 2011ರಂದು ಪರಾಗಸ್ಪರ್ಶ ಅಂಕಣದಲ್ಲಿಯೂ ಇದನ್ನು ವಿವರಿಸಿದ್ದೆ)-

    ಎಪ್ಪತ್ತೈದು ಲಕ್ಷ ಕೋಟಿ ಎಂಬ ಒಂದು ಸಂಖ್ಯೆಯ ವಿಚಾರ ತಿಳಿಸುತ್ತೇನೆ ಈಗ. ಈ ಸಂಖ್ಯೆಯನ್ನು ಬರೆಯಲು 75ರ ಬಲಗಡೆಯಲ್ಲಿ ಹನ್ನೆರಡು ಸೊನ್ನೆಗಳು ಬೇಕು. 75 ಲಕ್ಷ ಕೋಟಿ ಏನು ಗೊತ್ತೇ? ವಿದೇಶೀ ಬ್ಯಾಂಕ್‌ಗಳಲ್ಲಿ ಭಾರತೀಯರ ಹೆಸರಿನಲ್ಲಿರುವ ಕಪ್ಪುಹಣ ರೂಪಾಯಿಗಳಲ್ಲಿ! ಬಹುಶಃ ಸಂಖ್ಯೆಯ ರೂಪದಲ್ಲಿ ಅಂಥ ದೊಡ್ಡ ಮೊತ್ತವೆಂದೇನೂ ಅನಿಸುವುದಿಲ್ಲ. 2ಜಿ ಸ್ಪೆಕ್ಟ್ರಂ ಹಗರಣದ ಮೊತ್ತ ಸುಮಾರು 2 ಲಕ್ಷ ಕೋಟಿ ರೂಪಾಯಿಗಳು ಎಂದು ಓದಿದ ನೆನಪು. ಅದರ ಮೂವತ್ತೇಳುವರೆ ಪಟ್ಟು ಇದೆ ಈ ಮೊತ್ತ. ಸರಿ, ಈಗ ಇದಕ್ಕೆ ಒಂದು ಪ್ರತಿಮೆ ಕಟ್ಟೋಣ. ನಿಜಕ್ಕೂ ಎಷ್ಟೊಂದು ದೊಡ್ಡ ಮೊತ್ತವಿದು ಎಂದು ಮನದಟ್ಟಾಗುವಂತಿರಬೇಕು ಪ್ರತಿಮೆ. 75 ಲಕ್ಷ ಕೋಟಿ ರೂಪಾಯಿಗಳು ಸ್ವಿಸ್ ಬ್ಯಾಂಕ್‌ನಿಂದ ಹೊರಬಂದು ಹಾರ್ಡ್ ಕ್ಯಾಷ್ ಆಗಿ ಭಾರತಕ್ಕೆ ಬಂತು ಅಂತಿಟ್ಕೊಳ್ಳೋಣ. ಸಾವಿರ ರೂಪಾಯಿಗಳ ಗರಿಗರಿ ನೋಟುಗಳು. ಒಂದು ನೋಟಿನ ಉದ್ದ 18 ಸೆ.ಮೀ, ಅಗಲ 8 ಸೆ.ಮೀ. ನೂರು ನೋಟುಗಳ ಕಟ್ಟು ಮಾಡಿದರೆ ಅದರ ದಪ್ಪ ಸುಮಾರು 1.7 ಸೆ.ಮೀ ಎಂದು ‘ನೋಟ್’ ಮಾಡಿಟ್ಟುಕೊಳ್ಳೋಣ. ಈಗ ಒಂದು ಲಾರ್ಜ್ ಸೈಜ್ ಸೂಟ್‌ಕೇಸಿನ ಅಳತೆಗಳನ್ನು ನೋಡೋಣ. 71 ಸೆ.ಮೀ ಉದ್ದ, 53 ಸೆ.ಮೀ ಅಗಲ, 24 ಸೆ.ಮೀ ಎತ್ತರ. ಒಂದು ಸೂಟ್‌ಕೇಸ್‌ನೊಳಗೆ ಒಟ್ಟು 360 ಕಟ್ಟುಗಳು ತುಂಬಿಕೊಳ್ಳುತ್ತವೆ. ಒಂದು ಕಟ್ಟಿನಲ್ಲಿ ಒಂದು ಲಕ್ಷ ರೂಪಾಯಿ, ಆದ್ದರಿಂದ ಒಂದು ಸೂಟ್‌ಕೇಸ್‌ನಲ್ಲಿ ಒಟ್ಟು 3.6 ಕೋಟಿ ರೂಪಾಯಿ. ಒಂದು ಅಂಬಾಸಿಡರ್ ಕಾರಿನ ಡಿಕ್ಕಿಯಲ್ಲಿ ನಾಲ್ಕು ಸೂಟ್‌ಕೇಸ್‌ಗಳು ಹಿಡಿಸುತ್ತವೆ ಅಂತಿರಲಿ. ಹಾಗಾಗಿ ಒಂದು ಕಾರಿನಲ್ಲಿ ಒಟ್ಟು 14.4 ಕೋಟಿ ರೂಪಾಯಿಗಳು. ವಿದೇಶೀ ಬ್ಯಾಂಕ್‌‌ಗಳಿಂದ ಹೊರಬಂದ ಅಷ್ಟೂ ಮೊತ್ತವನ್ನು ತುಂಬಲು 5,20,833 ಕಾರುಗಳು ಬೇಕು. ಒಂದು ಕಾರಿನ ಉದ್ದ ಸುಮಾರು ನಾಲ್ಕೂಕಾಲು ಮೀಟರ್ ಅಂತಿಟ್ಟುಕೊಳ್ಳೋಣ. ಒಂದರಹಿಂದೆ ಒಂದರಂತೆ ಈ ಎಲ್ಲ ಕಾರುಗಳು ಹೊರಟರೆ, ನಡುವೆ ತಲಾ ಮುಕ್ಕಾಲು ಮೀಟರ್ ಗ್ಯಾಪ್ ಅಂತಿಟ್ಟುಕೊಂಡರೂ ಮೆರವಣಿಗೆ ಸುಮಾರು 3000 ಕಿ.ಮೀಗಿಂತಲೂ ಹೆಚ್ಚು ಉದ್ದವಾಗುತ್ತದೆ. ಅಂದರೆ "ಆಸೇತುಹಿಮಾಲಯ" ಅಥವಾ, "ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ" ಸರಳರೇಖೆ ಎಳೆದರೆ ಅಷ್ಟು ಉದ್ದ!

    ReplyDelete
  22. ಶ್ರೀವತ್ಸ ಜೋಶಿಯವರೇ, ಧನ್ಯವಾದ ನಿಮಗೆ. ಕಪ್ಪು ಹಣದ ಗಾತ್ರ, ಅದರ ಸಮಸ್ಯೆಯ ಗಾತ್ರ ಮತ್ತು ನಮ್ಮೆಲ್ಲರ ಮೌಢ್ಯದ ಗಾತ್ರ ಎಲ್ಲವನ್ನೂ ಎಂಥ ಮನುಷ್ಯನಿಗೂ ಅರ್ಥವಾಗುವಂತೆ ಹೇಳಿದ್ದೀರಿ.

    ReplyDelete
  23. ಬಾಬಾ ರಾಮದೇವಗಂತೂ ಅರ್ಹತೆಯಿಲ್ಲ. ನನಗೂ ಈ ಕಮೆಂಟ್ ಬರೆಯಲು ಅರ್ಹತೆ ಇದೆಯೋ ಇಲ್ಲವೋ ಗೊತ್ತಿಲ್ಲ.

    ReplyDelete
  24. "ಮೂರ್ಖ ಕಾಂಗ್ರೆಸ್, ಧೂರ್ತ ಬಿಜೆಪಿ, ಮತಿಹೀನ ಚಳವಳಿ ನಾಯಕ, ಮತ್ತು ಅಸಹಾಯಕ ನಾಗರಿಕರು...."
    "ನಾವು ಅಸಹಾಯಕ ಪ್ರೇಕ್ಷಕರು, ಎಲ್ಲರನ್ನೂ ಎಲ್ಲವನ್ನೂ ನೋಡಿ ಸುಮ್ಮನಿದ್ದೇವೆ."

    During freedom fight or be it civic revolution - all these controversies, hangamas have happened.. its a process - each party trying supress other by every means - there have been all these analysis

    Sampaadakiya - make your stand point clear. are you with on going agitations or just an observers commenting whos whats wrong why wrong..

    ReplyDelete
  25. Many ppl comment for their own like political party.. This article was detailing on some of the real issues. I dont think there's need to comment for a single Political party.. Honestly, our Tax money is there in many foreign banks.. Let's think on this direction, rather than on fight with biased ideas !!!
    Have a look at the last line of this article also: "In all the drama, we have forgotten what he's asking for: that black money stashed away in foreign banks be brought back to India,..."
    http://in.news.yahoo.com/blogs/boxpopuli/ramdev-dhongi-baba-080416795.html

    ReplyDelete
  26. Ayyoo hego anna horatadinda jan Lokapal bill brtitu. adannu halumadida BA(GU)BA.

    ReplyDelete
  27. ಕಪ್ಪು ಹಣ ನೋಟುಗಳಲ್ಲೇ ಆಗಬೇಕೆಂದೇನೂ ಇಲ್ಲ. ಇಂದು ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಎಲೆಕ್ಟ್ರೋನಿಕ್ ಟ್ರಾನ್ಸ್ಫರ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಒಂದು ಅಕೌಂಟ್ನಿಂದ ಇನ್ನೊದು ಅಕೌಂಟಿಗೆ ಬದಲಾಯಿಸಲು ಸಾಧ್ಯ. ಹೀಗಿರುವಾಗ ೧೦೦೦, ೫೦೦ ರೂಪಾಯಿ ನೋಟುಗಳ ನಿಷೇಧದಿಂದ ಏನು ಪ್ರಯೋಜನ?

    ReplyDelete
  28. @srivatsa - thanks for enlightening - now we can think what all the owners of that HUGE amount of money can do to protect it !!

    ReplyDelete
  29. ಕಮೆಂಟಿಗರೆಲ್ಲಿರಿಗು ಕಾಪ್ಪು ಹಣದ ಬಗ್ಗೆ ಚಿಂತೆಯಿಲ್ಲ, ಆದರೆ ರಾಜಕೀಯ ಪಕ್ಷ, ವ್ಯಕ್ತಿ, ಇತ್ಯಾದಿ.. ಇತ್ಯಾದಿ.. ಗಳಲ್ಲಿಯೇ ಆಸಕ್ತಿ ಇದ್ದಂತಿದೆ. ಇದಕ್ಕೆ ಸಂಪಾದಕೀಯ ಕೂಡ ಹೊರತಾಗಿಲ್ಲ, ಇದೆಂಥಹ ಸನ್ನಿವೇಶ!?
    ಭಾರತೀಯ ಪ್ರಜೆಗಳ ಮೊದಲು ಕಪ್ಪು ಹಣವನ್ನು ಮರಳಿ ತರುವ ಬಗ್ಗೆ ಯೋಚಿಸಿ, ಮುಂದಿನದು ಆಮೇಲೆ

    ReplyDelete
  30. Good post, good title. but one small correction. It is not Stupid congress. It cannot be stupid congress!. The supreme leader of the congress knows well about the psychology of baba ramdev! And more over "that person" knows, "whom to handle how and when?!"

    ReplyDelete