Sunday, October 16, 2011

ಗಣಿ ವರದಿ: ದಿನೇಶ್ ಕುಕ್ಕುಜಡ್ಕ ಬರೆದ ಕಾರ್ಟೂನ್


2 comments:

 1. ಸಂಪಾದಕರೇ,
  'ಸಂಪಾದಕೀಯ'ದಲ್ಲಿ ಬಂದ ಶಿವಮೊಗ್ಗ ಪತ್ರಕರ್ತರ KHB ನಿವೇಶನ ಹಗರಣದ ಸಣ್ಣ ವರದಿ ಪ್ರಸ್ತುತ ರಾಜ್ಯಾದಾದ್ಯಂತ ದೊಡ್ಡ ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. ಇದೀಗ ಈ ಹಗರಣ ಹೊಸ ತಿರುವು ಪಡೆದುಕೊಂಡಿದೆ. ಲೋಕಾಯುಕ್ತರು ಕೂಡ ತನಿಖೆಯನ್ನು ಚುರುಕುಗೊಳಿಸಿದ್ದಾರೆ.(ಲೋಕಾಯುಕ್ತ ದೂರು ಸಂಖ್ಯೆ: comp/lok/BD/174/2011 ಹಾಗೂ comp/lok/BD/125/2010)
  ಈ ನಡುವೆ ಕೆಹೆಚ್ ಬಿ ಅಧಿಕಾರಿಗಳು ಲೋಕಾಯುಕ್ತ ಕುಣಿಕೆಯಿಂದ ಪಾರಾಗಲು, ಕಳೆದ ಭಾನುವಾರದ (16-10-2011)ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಿವೇಶನ ಮಂಜೂರಾಗಿರುವ ಪತ್ರಕರ್ತರ ಹೆಸರನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ತಕರಾರು ಇದ್ದರೆ ಸಲ್ಲಿಸುವಂತೆ ಸರ್ವಜನಿಕರಿಗೆ ಸೂಚಿಸಿದ್ದಾರೆ.
  ಕೆಹೆಚ್ ಬಿಯವರ ಈ ಜಾಹೀರಾತು ಪ್ರಕಟಣೆಯಲ್ಲಿ ಸರ್ಕಾರಿ ನೌಕರರು, ಉದ್ಯಮಿಗಳು, ಪತ್ರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಲ್ಲದವರ ಹೆಸರುಗಳೇ ಹೆಚ್ಚಿರುವ ಶಂಕೆ ವ್ಯಕ್ತವಾಗುತ್ತಿದೆ. ಹಾಗೆಯೇ ಈಗಾಗಲೇ ಮನೆ, ನಿವೇಶನಗಳನ್ನು ಹೊಂದಿರುವ ಪತ್ರಕರ್ತರು ಕೂಡ ಈ ಮಾಹಿತಿಯನ್ನು ಮರೆಮಾಚಿ ಮತ್ತೊಮ್ಮೆ ಕೆಹೆಚ್ ಬಿ ನಿವೇಶನಕ್ಕೆ ಅರ್ಜಿ ಹಾಕಿರುವುದು ಬೆಳಕಿಗೆ ಬಂದಿದೆ.
  ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಹರ್ಷ ಕುಮಾರ್ ಕುಗ್ವೆ ಅವರ ಶಂಕೆ ನಿಜವಾಗಿದೆ. ಈ ಬಗ್ಗೆ 'ಸಂಪಾದಕೀಯ'ವು ಸಮಗ್ರ ಮಾಹಿತಿಯನ್ನು ಕಲೆ ಹಾಕಬೇಕು. ಶಿವಮೊಗ್ಗ ಪತ್ರಕರ್ತರ KHB ನಿವೇಶನ ಹಗರಣದ ಕುರಿತು ವರದಿಯನ್ನು ಪ್ರಕಟಿಸಬೇಕು. ಈ ಮೂಲಕ ಪತ್ರಿಕೋದ್ಯಮದ ಭ್ರಷ್ಟಾಚಾರದ ಮತ್ತೊಂದು ಮಗ್ಗಲನ್ನು ಓದುಗರಿಗೆ ಪರಿಚಯ ಮಾಡಿಸಿಕೊಡಬೇಕು ಎಂಬುವುದು ಈ ಹಿರಿಯ ಪತ್ರಕರ್ತನ ವಿನಮ್ರ ಮನವಿಯಾಗಿದೆ.

  ReplyDelete