Tuesday, April 26, 2011

ಸಾಯಿಬಾಬಾ ಸಾವನ್ನು ಗೆಲ್ಲಲಿಲ್ಲ, ನಮಗೆ ಮೌಢ್ಯವನ್ನು ಗೆಲ್ಲಲಾಗಲಿಲ್ಲ...


ದೇವಮಾನವ ಸಾಯಿಬಾಬಾ, ಭಗವಾನ್ ಸಾಯಿಬಾಬಾ, ಅವತಾರ ಪುರುಷ ಸಾಯಿಬಾಬಾ, ಪವಾಡಪುರುಷ ಸಾಯಿಬಾಬಾ, ದೇವದೂತ ಸಾಯಿಬಾಬಾ... ಹೀಗೆ ಬರೆಯುತ್ತಿವೆ ನಮ್ಮ ಮಾಧ್ಯಮಗಳು. ಟಿವಿಗಳಂತೂ ಒಂದು ಕೈ ಮೇಲೇ. ನಮ್ಮ ಮೀಡಿಯಾ ಮಂದಿಗೆ ಸತ್ಯ ಸಾಯಿಬಾಬಾ ಅಥವಾ ಸತ್ಯ ನಾರಾಯಣರಾಜು ದೇವರೂ ಅಲ್ಲ, ದೇವದೂತನೂ ಅಲ್ಲ ಅನ್ನೋದು ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ. ಸಾಯಿಬಾಬಾ ನಮ್ಮ ನಿಮ್ಮಂತೆ ಹಸಿವು, ನಿದ್ರೆ, ಸಾವನ್ನು ಗೆಲ್ಲಲಾಗದ ಯಕಃಶ್ಚಿತ್ ಮನುಷ್ಯ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಆದರೂ ಮೀಡಿಯಾಗಳು ಇದನ್ನೆಲ್ಲ ಬಹಿರಂಗವಾಗಿ ಹೇಳಲಾರವು.

ಸಾಯಿಬಾಬಾರನ್ನು ಭಾರತದ ಮಹಾನ್ ಅಧ್ಯಾತ್ಮ ಗುರು ಎಂದು ಬಿಂಬಿಸಲಾಗುತ್ತಿದೆ. ಅಧ್ಯಾತ್ಮ ಅನ್ನುವುದು ಸಂಯುಕ್ತ ಪದ. ಅಧಿ+ಆತ್ಮ ಅಧ್ಯಾತ್ಮವಾಗುತ್ತದೆ. ಅಧಿ ಎಂಬ ಪದಕ್ಕೆ ಶ್ರೇಷ್ಠವಾದ, ಉನ್ನತವಾದ ಎಂಬ ಅರ್ಥಗಳಿವೆ. ಆತ್ಮ ಶ್ರೇಷ್ಠವಾಗುವುದು, ಉನ್ನತವಾಗುವುದು ಹೇಗೆ? ಅದು ನಮ್ಮ ಆಚರಣೆಗಳಿಂದ, ನಡವಳಿಕೆಗಳಿಂದ. ಸಾಯಿಬಾಬಾ ಸುಳ್ಳು ಪವಾಡಗಳ ಮೂಲಕ ಬೆಳೆದವರು. ಆತ್ಮಕ್ಕೆ, ಅಧ್ಯಾತ್ಮಕ್ಕೆ ಸುಳ್ಳಿನ ಹಂಗಿರುತ್ತದೆಯೇ?

ಅಧ್ಯಾತ್ಮ ಎಂಬುದಕ್ಕೆ ಲೌಕಿಕ ಬದುಕಿನ ವ್ಯವಹಾರಗಳ ಸೋಂಕೇ ಇಲ್ಲವೇ? ಇದ್ದರೆ ಅದು ಹೇಗಿರಬೇಕು? ಬಸವಣ್ಣನ ಭಕ್ತಿ ಮಾರ್ಗದಲ್ಲಿ ಹರಿದು ಬಂದ ಅಧ್ಯಾತ್ಮ ಯಾವುದು? ಬಸವಣ್ಣನ ಆಧ್ಯಾತ್ಮಿಕತೆಯಲ್ಲಿ ಸಾಮಾಜಿಕ ಕಳಕಳಿಯಿತ್ತು, ಆತ್ಮನಿರೀಕ್ಷಣೆಯಿತ್ತು, ಜೀವಕಾರುಣ್ಯವಿತ್ತು, ಬಸವಣ್ಣನ ದೃಷ್ಟಿಯಲ್ಲಿ ಅಧ್ಯಾತ್ಮ ಕೇವಲ ಖಾಸಗಿಯಾದ ವಿಷಯವಾಗಿರಲಿಲ್ಲ. ಅದು ವೈಯಕ್ತಿಕ ಮೋಕ್ಷವೊಂದನ್ನೇ ಗುರಿಯಾಗಿ ಇಟ್ಟುಕೊಂಡಿರಲಿಲ್ಲ. ಬಸವಣ್ಣನ ಅಧ್ಯಾತ್ಮಕ್ಕೆ ಸಾಮಾಜಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುವ ವ್ಯಾಪಕತೆಯಿತ್ತು. ಕಾಯಕ ಮತ್ತು ದಾಸೋಹದ ಮೂಲಕವೇ ಆತ್ಮೋನ್ನತಿಯ ಮಾರ್ಗವನ್ನು ತೋರಿದವರು ಬಸವಾದಿ ಶರಣರು. ವೈಯಕ್ತಿಕ ಮಟ್ಟದ ಆತ್ಮಶುದ್ಧಿ ಅವರಿಗಿತ್ತು. ತಮ್ಮ ಎಲ್ಲ ಕ್ರಿಯೆಗಳಲ್ಲೂ ಅವರು ಪರಿಶುದ್ಧರಾಗಿರಲು ಬಯಸುತ್ತಿದ್ದರು.

ಆದರೆ ಇವತ್ತು ಆಧ್ಯಾತ್ಮಿಕ ನಾಯಕರಿಗೆ ಆತ್ಮಶುದ್ಧಿ ಇದೆಯೇ? ಇವತ್ತು ಅಧ್ಯಾತ್ಮ ಕೂಡ ಮಾರಾಟದ ಸರಕು. ಬಾಬಾ ರಾಮದೇವ್, ರವಿಶಂಕರ್ ಗುರೂಜಿ, ಗಣಪತಿ ಸಚ್ಚಿದಾನಂದ ಸ್ವಾಮಿ, ಕೇರಳದ ಅಮ್ಮ... ಹೀಗೆ ಅಧ್ಯಾತ್ಮವನ್ನೇ ಬಿಜಿನೆಸ್ ಮಾಡಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಆ ಮೂಲಕವೇ ಸಾವಿರಾರು ಕೋಟಿ ರೂಪಾಯಿ ಗಳಿಸಿದವರಿದ್ದಾರೆ. ಆಧ್ಯಾತ್ಮಿಕ ಗುರುಗಳಿಗೆ ನಮ್ಮ ಸರ್ಕಾರಗಳು ತಲೆಬಾಗುತ್ತವೆ. ತರೇಹವಾರಿ ಟ್ಯಾಕ್ಸುಗಳಿಂದ ಮುಕ್ತರಾದವರು ಇವರು. ಆಸ್ತಿ, ಬಂಗಾರ, ಹಣ ಎಷ್ಟು ಮಾಡಿದ್ದಾರೆಂಬುದು ಸತ್ತ ನಂತರವೇ ಬಹಿರಂಗವಾಗಬೇಕು; ಒಮ್ಮೊಮ್ಮೆ ಅದೂ ಆಗುವುದಿಲ್ಲ.

ಭಾರತೀಯ ಪರಂಪರೆಯಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡಿದವರಿಗೆ ಪವಾಡಗಳನ್ನು ಕಟ್ಟುವುದು ನಡೆದುಕೊಂಡುಬಂದ ರೀತಿ. ಮೌಢ್ಯ-ಕಂದಾಚಾರಗಳ ವಿರುದ್ಧ ಜೀವನಪೂರ್ತಿ ಸೆಣೆಸಿದ ಬಸವಣ್ಣನವರಿಗೇ ಪವಾಡಗಳನ್ನು ಆರೋಪಿಸಲಾಯಿತು. ಇವತ್ತಿಗೂ ಬಸವಣ್ಣನ ಪವಾಡಗಳನ್ನು ನಂಬುವವರಿದ್ದಾರೆ. ನಾನು ದೇವನೂ ಅಲ್ಲ, ದೇವದೂತನೂ ಅಲ್ಲ ಎಂದು ಘೋಷಿಸಿದ ಬುದ್ಧನಿಗೆ ಭಗವಾನ್ ಎಂಬ ಹೆಸರನ್ನು ಸೇರಿಸಿದವರು ನಾವು. ತನ್ನನ್ನು ಪವಾಡಪುರುಷನೆಂದು ನಂಬಿಬಂದಾಕೆಗೆ ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸೂಚಿಸುವ ಮೂಲಕ ಬುದ್ಧ ತಾನು ಅತಿಮಾನವನಲ್ಲ ಎಂಬುದನ್ನು ಸ್ಪಷ್ಟವಾಗಿಯೇ ಹೇಳಿ, ಪವಾಡಗಳನ್ನು ಧಿಕ್ಕರಿಸಿದ. ಆದರೂ ನಮಗೆ ಈತ ಈಗ ಭಗವಾನ್ ಬುದ್ಧ!

ನೀವು ಯಾವುದೇ ಮಠ-ಪೀಠಗಳಿಗೆ ಹೋಗಿ ನೋಡಿ. ಮಠ ಕಟ್ಟಿದ ಗುರು, ಆನಂತರ ಬಂದು ಹೋದ ಮಠಾಧೀಶರ ಮೇಲೆ ಪವಾಡಗಳನ್ನು ಕಟ್ಟಲಾಗಿರುತ್ತದೆ. ಪವಾಡಗಳನ್ನು ಕಟ್ಟದ ಹೊರತು ಮಠಕ್ಕೆ ದೈವೀ ಕಳೆ ಬರಲಾರದು ಎಂಬುದು ಭಕ್ತರ ನಂಬುಗೆ ಇದ್ದಿರಬೇಕು. ಹೀಗಾಗಿ ತಮ್ಮ ಗುರುಗಳಿಗೆ ಅವರು ಪವಾಡಗಳನ್ನು ಕಟ್ಟಿದರು. ಸಾಮಾನ್ಯ ಮನುಷ್ಯರು, ಜನನಾಯಕರನ್ನು ಒಂದೇ ದೇವರನ್ನಾಗಿಸಿದರು ಅಥವಾ ದೇವಮಾನವರನ್ನಾಗಿಸಿದರು.

ಸತ್ಯ ಸಾಯಿಬಾಬಾ ಕೋಮುವಾದಿಯಾಗಿರಲಿಲ್ಲ. ಧರ್ಮಸಹಿಷ್ಣುತೆ ಅವರಿಗಿತ್ತು. ಹೀಗಾಗಿಯೇ ಅವರಿಗೆ ಎಲ್ಲ ಧರ್ಮಗಳ ಅನುಯಾಯಿಗಳಿದ್ದರು. ಸಾಮಾಜಿಕ ಸೇವೆ ಮಾಡುವ ಉತ್ಸಾಹ ಅವರಿಗಿತ್ತು. ತಮಗೆ ಬಂದ ಭಕ್ತರ ಕೊಡುಗೆಗಳನ್ನು ಅವರು ಬಡಬಗ್ಗರ ಅನುಕೂಲಕ್ಕಾಗಿ ಬಳಸಿದರು. ಎಲ್ಲವೂ ನಿಜ. ಆದರೆ ಇದಕ್ಕಾಗಿ ಅವರು ಕಂಡುಕೊಂಡಿದ್ದು ಕಪಟದ, ಮೋಸದ ಮಾರ್ಗ. ವಿಭೂತಿ, ಉಂಗುರ, ವಾಚುಗಳನ್ನು ಸೃಷ್ಟಿಸಿಕೊಡುವ ಅಗ್ಗದ ಇಂದ್ರಜಾಲವನ್ನು ಬಳಸಿ ಅವರು ಭಕ್ತರನ್ನು ಸೆಳೆದುಕೊಂಡರು. ಅವರ ಅಮಾಯಕ ಭಕ್ತರನ್ನು ಹೊರತುಪಡಿಸಿ, ಉಳಿದ ಎಲ್ಲರಿಗೂ ಮಿಗಿಲಾಗಿ ಸ್ವತಃ ಸಾಯಿಬಾಬಾ ಅವರಿಗೂ ಇದು ಗೊತ್ತಿತ್ತು. ಡಾ.ಎಚ್.ನರಸಿಂಹಯ್ಯ ಅವರು ಒಡ್ಡಿದ ಸವಾಲನ್ನು ಅವರು ಸ್ವೀಕರಿಸಲಿಲ್ಲ. ತುಂಬುತೋಳಿನ ನಿಲುವಂಗಿ ಧರಿಸುತ್ತಿದ್ದ ಸಾಯಿಬಾಬಾ ಅವರಿಂದ ಕುಂಬಳಕಾಯಿ ಸೃಷ್ಟಿಸುವುದು ಸಾಧ್ಯವಾಗಲಿಲ್ಲ.

ಭಾರತದ ಇತರ ಆಧ್ಯಾತ್ಮಿಕ ನಾಯಕರುಗಳಿಗೆ ಅವರ ಭಕ್ತರು ಪವಾಡಗಳನ್ನು ಆರೋಪಿಸಿದರು. ಆದರೆ ಸತ್ಯ ಸಾಯಿಬಾಬಾ ತಾವೇ ಪವಾಡಪುರುಷ ಎಂದು ಘೋಷಿಸಿಕೊಂಡರು. ಮಹಾತ್ಮರಿಗೆ ಅವತಾರಗಳನ್ನು ಸಹ ನಾವೇ ಹೇರುತ್ತ ಬಂದಿದ್ದೇವೆ. ಆದರೆ ಸಾಯಿಬಾಬಾ ತಮ್ಮನ್ನು ತಾವು ಶಿರಡಿ ಸಾಯಿಬಾಬಾ ಅವರ ಅವತಾರ ಎಂದು ಕರೆದುಕೊಂಡರು. ಹೀಗೆ ತಮ್ಮನ್ನು ತಾವು ಅವತಾರ ಪುರುಷ, ಪವಾಡ ಪುರುಷ ಎಂದು ಕರೆದುಕೊಂಡ, ಅದರಿಂದ ಯಶಸ್ಸು-ಕೀರ್ತಿ ಗಳಿಸಿದ ಆಧುನಿಕ ಕಾಲದ ಮೊದಲ ಧರ್ಮಗುರು ಸಾಯಿಬಾಬಾ ಅವರಿರಬೇಕು. ಸಾಯಿಬಾಬಾ ಅವರಿಂದ ಪ್ರೇರಿತರಾಗಿ ಈಗ ದೇಶದ ತುಂಬೆಲ್ಲ ಇಂಥ ಪವಾಡಪುರುಷರು ಸೃಷ್ಟಿಯಾಗಿದ್ದಾರೆ.

ಆದರೆ ಕಪಟ, ಮೋಸದಿಂದಲೇ ಜನರನ್ನು ವಂಚಿಸುವವರು ಆಧ್ಯಾತ್ಮಿಕ ನಾಯಕರಾಗುವುದು ಹೇಗೆ ಸಾಧ್ಯ? ತಾನು ವಂಚನೆಯ ಮೂಲಕವೇ ಭಕ್ತರನ್ನು ಸೆಳೆಯುತ್ತೇನೆ ಎಂದು ಗೊತ್ತಿರುವ ಗುರುಗಳು ಆಧ್ಯಾತ್ಮಿಕ ಸಾಧನೆ ಮಾಡುವುದಾದರೂ ಹೇಗೆ? ಆತ್ಮ ಶುದ್ಧಿ ಇಲ್ಲದಿದ್ದರೆ ಅಧ್ಯಾತ್ಮ ಒಲಿಯುವುದೆ?

ಸತ್ಯ ಸಾಯಿಬಾಬಾ ನಮ್ಮ ನಿಮ್ಮಂತೆಯೇ ಖಾಯಿಲೆ, ನೋವು ಅನುಭವಿಸಿ ಈಗ ತೀರಿಹೋಗಿದ್ದಾರೆ. ಅವರ ಪವಾಡಗಳು ಅವರ ಇಹವನ್ನೇ ರಕ್ಷಿಸಲಿಲ್ಲ. ಇನ್ನು ಪರರನ್ನು ರಕ್ಷಿಸುತ್ತಿದ್ದವೆಂದು ನಂಬುವುದು ಹೇಗೆ? ಪವಾಡಗಳಿದ್ದರೆ ತಾನೇ ರಕ್ಷಿಸುವುದು? ಈಗ ಪ್ರಶಾಂತಿ ನಿಲಯದಲ್ಲಿ ನಡೆಯುತ್ತಿರುವುದು ಅವರು ಸಂಗ್ರಹಿಸಿಟ್ಟ ಆಸ್ತಿಗಾಗಿ ಕದನ. ಲಕ್ಷ ಕೋಟಿ ಹಣ ಸಣ್ಣ ಮಾತೇ?

ಮುಂದೆ ಪ್ರೇಮಸಾಯಿಯಾಗಿ ಕರ್ನಾಟಕದ ಕಾವೇರಿ ನದಿ ತಟದಲ್ಲಿ ಹುಟ್ಟುತ್ತೇನೆ ಎಂದು ಸಾಯಿಬಾಬಾ ಹೇಳಿದ್ದರಂತೆ. ನಮ್ಮ ಮೀಡಿಯಾಗಳು ಬಾಬಾ ಸತ್ತ ದಿನ ಹುಟ್ಟಿದ ಮಕ್ಕಳ ಡೀಟೇಲುಗಳನ್ನು ಹುಡುಕಿ ಹುಡುಕಿ ಬರೆಯುತ್ತಿವೆ.

ಸಾಯಿಬಾಬಾ ಇನ್ನಿಲ್ಲವಾದ ಮೇಲಾದರೂ ನಾವು ಭಾರತೀಯರು ಪವಾಡಪುರುಷರನ್ನು ಧಿಕ್ಕರಿಸುವ ಕೆಲಸ ಮಾಡಬೇಕಿದೆ. ಸಾಯಿಬಾಬಾ ಅವರೇನೋ ಜನೋಪಯೋಗಿ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡರು. ಆದರೆ ಎಲ್ಲರೂ ಅಂಥವರೇ ಇರಬೇಕಿಲ್ಲ. ದೇವರ ದೂತ, ಜಗನ್ಮಾತೆಯ ಪುತ್ರ ಇತ್ಯಾದಿ ಹೇಳಿಕೊಂಡು ವಂಚಿಸುವವರನ್ನು ಸಾರ್ವಜನಿಕವಾಗಿ ಬಯಲಿಗೆಳೆಯುವ ಕೆಲಸ ಆಗಬೇಕಿದೆ. ಮೀಡಿಯಾಗಳು ಸಾಯಿ ಮೇನಿಯಾವನ್ನು ಹೀಗೇ ಮುಂದುವರೆಸಿದರೆ ನೂರಾರು ಮಂದಿ ಪ್ರೇಮಸಾಯಿಗಳು ಹುಟ್ಟಿಕೊಂಡಾರು! ಭಾರತ ಬೂದಿಬಾಬಾಗಳ, ವಾಮಾಚಾರಿಗಳ, ವಂಚಕ ಜ್ಯೋತಿಷಿಗಳ ಸ್ವರ್ಗವಾಗುವುದು ಬೇಡ.

ಪ್ರಜ್ಞೆ ಮತ್ತು ಎಚ್ಚರ ಎಲ್ಲರಲ್ಲೂ ಇರಲಿ ಎಂದು ಆಶಿಸೋಣ.

29 comments:

 1. ಮೇನಿಯಾಗಳಿಂದ ಸಾಮಾನ್ಯ ಜನರನ್ನು ಎಚ್ಚರಿಸಬೇಕಾದ ಮಾದ್ಯಮಗಳೇ ಸಾಯಿ ಮೇನಿಯಾಕ್ಕೆ ಓಳಗಾಗಿರುವ ಸಂದರ್ಭದಲ್ಲಿ ಸಂಪಾದಕೀಯ ಹೊಸ ದಿಕ್ಕಿನಲ್ಲಿ ಮತ್ತು ವಾಸ್ತವದ ನೆಲೆಗಟ್ಟಿನಲ್ಲಿ ಚಿಂತಿಸಿರುವುದು ಸರಿಯಾಗಿದೆ.

  ReplyDelete
 2. ayyoo.. reee.. enri neevu??
  you have written as if there is no difference b/w narendra sharma and satya sai baba..!!
  If you have viewed satya sai baba without atleast 1% prejudice, you would not have written this piece of crap..

  ReplyDelete
 3. ಸಾಯಿಬಾಬ ಸಾವನ್ನು ಗೆಲ್ಲಲಿಲ್ಲ, ನಮಗೆ ಮೌಡ್ಯವನ್ನು ಗೆಲ್ಲಲಾಗಲಿಲ್ಲ.............ಅಕ್ಷರ ಸಹ ಸತ್ಯ....ಸಂಪಾದಕೀಯ ತುಂಬಾನೇ ಚೆನ್ನಾಗಿದೆ, ಅವರ ಕಪಟ ಮೋಸದ ಮಾರ್ಗ, ವಿಭೂತಿ ಉಂಗುರ, ವಾಚು...ಕೊಡಲಾಗದ ಕುಂಬಳಕಾಯಿ ಬದಿಗಿಟ್ಟು, ಸರ್ಕಾರಗಳು ಮಾಡಲಾಗದ್ದನ್ನು ಮಾಡಿ ತೋರಿದ್ದು ಎಷ್ಟೋ ಉತ್ತಮ ಬದುಕಿರೋ ಇನ್ನು ಎಷ್ಟೋ ಕೋಮುವಾದಿ, ಅಡ್ಡ ಕಸುಬಿ ಸ್ವಾಮಿಜಿಗಳಿಗಿಂತ, ಮಠಧೀಶರಿಗಿಂತ ಪವಾಡ ಪುರುಷರಿಗಿಂತ ಸಾವಿರ ಪಾಲು ಉತ್ತಮ

  ReplyDelete
 4. neevoo kooDa heege bareyalu aaguttiruvudu hesaru hELade bareyuttiruvudarimdalE saadhyavaagide. ildidre nimmannu niDtiralillaa ee jana.

  Anand

  ReplyDelete
 5. ನಿಜವಾದ ಸತ್ಯಸಂಗತಿ ಯನ್ನು ಒಳಗೊಂಡಿರುವ ಲೇಖನವಿದು. ಜಡತೆಯಿಂದ ಮೈಮರೆತಿರುವ ಜನತೆಗೆ ಚಾಡಿ ಏಟು ನೀಡಿ ಎಚ್ಚರಿಸಬೇಕಾಗಿದೆ. ಇದೇ ಸತ್ಯ ಸಾಯಿಬಾಬಾ ಒಮ್ಮೆ ಹೇಳಿದ್ದರು. ನಾನು ನನ್ನ ೯೬ ರ ವಯಸ್ಸಿನ ತನಕ ಇರುತ್ತೇನೆ ಆ ತನಕ ನನ್ನನ್ನು ಯಾವುದೇ ಖಾಹಿಲೆ ಭಾಧಿಸಲಾರದು. ನಂತರ ಮಂಡ್ಯ ಜಿಲ್ಲೆಯ ಕಸ್ತೂರಿ ಎಂಬಾಕೆಯ ಬಸಿರಿನಿಂದ ಪುನಃ ಅವತರಿಸಿ ಬರಲಿದ್ದೇನೆ! ನಿರೀಕ್ಷೆ ಮಾಡಿ ೨೦೨೩ ತನಕ! ಈಗ ಏನಾಯಿತು? ಬಾಬಾ ೮೫ ಕ್ಕೆ ಅಂತ್ಯವಾಗಿದ್ದಾರೆ. ಯಾರ ಹತ್ತಿರವೂ ಎಷ್ಟೇ ಹಣವಿರಲಿ ಅದೆಂತಹದೆ ಪವಾಡ ಕಲಿತಿರಲಿ ದೇಶ, ವಿದೇಶದ ಸಾಮಾನ್ಯ ಜನತೆಯನ್ನು ಮಂಕು, ಮರುಳು ಮಾಡಬಹುದು... ಆದರೆ ಪ್ರಕೃತಿ ನಿಯಮವನ್ನು ಮಂಕು ಮಾಡುತ್ತೇನೆ, ವಿಭೂತಿ ಕೊಡುತ್ತೇನೆ.. ಎಂದು ಯೋಚಿಸಿದ್ದ ಬಾಬ ತಪ್ಪಿದರು. ಸಾವನ್ನು ಗೆದ್ದವರು ಯಾರೂ ಇಲ್ಲ ಎಂಬುದಕ್ಕೆ ಈ ಬಾಬಾನೇ ಸಾಕ್ಷಿ. ತನ್ನನ್ನು ತಾನು ದೇವನೆಂದೇ ಅಚಲವಾಗಿ ನಂಬಿಕೊಂಡಿದ್ದ ಈತ ಸಾವೆಂಬ ಸತ್ಯ ಒಂದು ದಿನ ಬಂದೇ ಬರುತ್ತದೆ ಎಂಬ ಸಾಮಾನ್ಯ ಜ್ಞಾನವನ್ನೂ ಅರಿಯದಿರುವುದು ವಿಶೇಷ. ಅವರು ಸ್ನಾನಗ್ರಹದಲ್ಲಿ ಬಿದ್ದು ಪಾರ್ಶ್ವವಾಯು ಪೀಡಿತರಾದ ದಿನವೇ ದೊಡ್ಡ ಮನಸ್ಸು ಮಾಡಿ ಜೀವಂತವಾಗಿ ಸಮಾಧಿಯ ಒಳಗೆ ಹೊಕ್ಕಿದ್ದರೆ ಅವರು ಪ್ರಪಂಚದಲ್ಲೆಲ್ಲೆಡೆ ಖಂಡಿತವಾಗಿಯೂ ದೇವರಸ್ಥಾನ ಗಳಿಸುತ್ತಿದ್ದರು. ಅದೊಂದು ನಿಜವಾದ ಪವಾಡವೇ ಆಗಿರುತ್ತಿತ್ತು. ಆದರೆ ಮೊಜುಮಸ್ತಿ, ಸಂಸಾರದ ಕ್ಷಣಿಕ ಸುಖವನ್ನೇ ತನ್ನ ಸರ್ವಸ್ವವನ್ನೇ ಆಗಿರಿಸಿಕೊಂಡು ತನ್ನ ಜೀವ ಸಾಗಿಸಿದ್ದ ಅವರು ಜೀವಂತ ಸಮಾಧಿಯಾಗುವುದೇ... ಅಸಾಧ್ಯ!!

  ReplyDelete
 6. howdu halavu vichaaagalalli prajnavantaru soluttiddaare.. avare toduva hondakke avare beeluttiddaare. idannu nodi..namma patrike prakatisida olleya sampaadakeeya= http://vbepaper.com/epapermain.aspx?queryed=9&eddate=4%2f25%2f2011

  ReplyDelete
 7. ತುಂಬಾ ಚೊಕ್ಕಟವಾಗಿ ಬರೆದಿದ್ದೀರಿ

  ReplyDelete
 8. @Anand: Very true. If we have to judge sai baba we need 2 clear and different visions first is the cheap, irrational methods he used to attract people and fetched fame, money eternal devotion and dedication. If you can forget/forgive that it's amazing the way he's utilized his resources to give so much facilities to needy people.

  Chetan

  ReplyDelete
 9. E baraha sakaalikavaagide.
  ella madhyamagalU saayi Bajaneyalli kulitiruvaaga, neevu adarallina apaswarada bagge matanaaduttiddiri.

  Its really good.

  Indians wants this much of clarity in there mind.

  Girish

  ReplyDelete
 10. ಹಲವಾರು ರಾಜಕಾರಣಿಗಳು ಭಾರತದ ಸಂಪತ್ತನ್ನು ಲೂಟಿ ಮಾಡಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದು ಸಾಯಿ ಆಶ್ರಮಗಳಂತಹ ಸಂಸ್ಥೆಗಳಿಗೆ ದಾನವಾಗಿ ಕೊಂಚ ಹಣವನ್ನು ಕೊಟ್ಟು ತಮ್ಮ ಪಾಪ ತೊಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಇಂತಹ ರಾಜಕಾರಣಿಗಳಿಗೆ ತಮ್ಮ ಪಾಪ ಪ್ರಘ್ನೆಯ ಅರಿವು ಬರುವುದು ಬಾಬ ಆಶ್ರಮ ಅಥವಾ ಇನ್ಯಾವುದೇ ಪುಣ್ಯ ಕ್ಶೇತ್ರಗಳಿಗೆ ಭೇಟಿ ನೀಡಿದಾಗ ಮಾತ್ರ.

  ಭಾರತದ ರಾಷ್ಟ್ರಪತಿಯಾದಿಯಾಗಿ ಹಲವಾರು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಗಣ್ಯರು ಸಾಯಿ ಬಾಬಾ ಅಂತಹವರ ಭಕ್ತರು ಅಥವಾ ಅನುಯಾಯಿಗಳಾಗಿದ್ದಾರೆ. ಸಾಮಾನ್ಯ ಪ್ರಜೆಗಳು ಇಂತಹವರನ್ನು ನೋಡಿ ಅನುಸರಿಸುತ್ತಾರೆ ಅಥವಾ ಅನುಕರಿಸುತ್ತಾರೆ. ಪರಿಸ್ಥಿತಿ ಹೀಗಿರುವಾಗ ತಾವು ಕೇವಲ ಬಾಬಾರಂತಹವರನ್ನು ಮಾತ್ರ ದೂಷಿಸಿದರೆ ತಪ್ಪಾಗುತ್ತದೆ.

  ಬಾಬಾರವರ ಪವಾಡಗಳನ್ನು ನಂಬಿದವರು ಕೇವಲ ಅವಿದ್ಯಾವಂತರಲ್ಲ ಭಾರತದ ಸೋ ಕಾಲ್ಡ್ ಘ್ನಾನಿಗಳೂ ಇದ್ದಾರೆ. ಸ್ವತಹ ಬಾಬಾರವರಿಗೂ ತಾನು ಪವಾಡ ಪುರುಷ ಅಲ್ಲ ಏಂಬ ಅರಿವು ಇದ್ದಿರಬಹುದು. ಆದರೆ ಅವರೇನಾದರೂ ಅದನ್ನು ಎಲ್ಲರ ಮುಂದೆ ಒಪ್ಪಿಕೊಂಡಿದ್ದರೆ ಇಂತಹ ಓಂದು ಸಾಮ್ರಾಜ್ಯದ ಒಡೆಯನಾಗಲು ಸಾಧ್ಯವಾಗುತ್ತಿರಲಿಲ್ಲ.

  ReplyDelete
 11. ಮನುಷ್ಯ ಮನುಷ್ಯನನ್ನು ಅರಿಯದ ಜಗತ್ತಿನಲ್ಲಿ ಬಾಬಾ ನಂತ ಅನೇಕ ಮಂದಿ ನೆಲೆ ಊರಿ ತಮ್ಮ ಸಾಮ್ರಾಜ್ಯವನ್ನು ಸಲಿಸಾಗಿ ಸೃಷ್ಟಿಸಿ ಕೊಳ್ಳುತಿದ್ದಾರೆ .ಇಂತಹ ಮೌಡ್ಯವನ್ನು ದೂರ ಮಾಡಲು ಮೊದಲು ಮಾನವರಾಗಬೇಕು ನಂತರ ವಿಜ್ಞಾನವನ್ನು ತಿಳಿಯಬೇಕು . ಆದರೆ ಎರಡು ತಿಳಿದವರು ಬಾಬಾ ನಂತಹ ಅನೇಕ ಮಂದಿಗೆ ದಾಸರಾಗಿರುವುದು ವಿಷಾದದ ಸಂಗತಿ .

  ReplyDelete
 12. This article is an eye opener. Many thanks to SAMPADAKEEYA. Any visible thing belongs to the material world. Baba and the products of his miracles are also belong to the material world. Any scientist or a mircle man is unabale to produce an atom even. These people can produce something with the help of the given matter. Once Late M.P. Prakash told me that Baba gave a diamond ring to Late J.H. Patel. Then I asked Prakash, how can Satya Sai Baba is able to give it without the help of a goldsmith?

  ReplyDelete
 13. Sampadakeeya's stand on this issue deserves support. The recent trend in media is not to question blind believes and pseudo saints. Baba is a man who deserves appreciation for his social service. But the means, as pointed out by Sampadakeeya, he adopted deserve severe criticism. Years ago, media people would hesitate to write about babas, dhongi sansyasis and kapata jotishis. But these days, mainstream media including Prajavani, have lost ability to differentiate between good and bad. This is unbecoming of journalism. Otherwise Prajavani would have not have promoted Somayaji's column to that extent.

  ReplyDelete
 14. ನೀವು ಬಾಬಗಳ / ಅಮ್ಮಗಳ ಬಗ್ಗೆ ಹೇಳಿರುವುದು ನಿಜ..... ಆದ್ಯಾತ್ಮದ ಬಗ್ಗೆ ನಿಮ್ಮ ಅನುಭವ ಕಡಿಮೆ.....

  ReplyDelete
 15. saibabara nija svaroopada arivagabekadare Tal brooke ennuvavfaru barediruva the avatar of the night mattu ravi belegere barediruva baba bed room hatya kanda odabeku. jotege avara dhongitanagalannu challenge maduva abraham kovoor avara lekhanagalu.

  ReplyDelete
 16. ಒಳ್ಳೆ ಬರಹ, ಧನ್ಯವಾದಗಳು

  ReplyDelete
 17. God Article.. Eye Opener. Thanks

  ReplyDelete
 18. ಮಾ.ಸು.ಮಂಜುನಾಥApril 26, 2011 at 8:01 PM

  ಸರ್ಕಾರ ಮಾಡಬಹುದಾದ ಕೆಲಸವನ್ನ ಬಾಬಾ ಮಾಡಿದ್ದಾರೆ.ಕಪಟತನದಿಂದಲೇ ಸಮಾಜಮುಖಿ ಕಾರ್ಯಗಳನ್ನ ಮಾಡಿದ ಬಾಬಾ ನಮ್ಮ ನೀಚ ರಾಜಕಾರಣಿಗಳಿಗಿಂತ ಎಷ್ಟೋ ಮೇಲು.ಆಧ್ಯಾತ್ಮ ಅವರು ಬಳಸಿಕೊಂಡ ಅಸ್ತ್ರವಷ್ಟೆ.ಮಾನವಾಗಿ ತೆರಿಗೆ ಕಟ್ಟಲು ಹಿಂಜರಿಯುವ ಜನ ದೇವರು ದೇವಮಾನವರು ಎಂದಾಕ್ಷಣ,,,,, ಮುಚ್ಚಿಕೊಂಡು ಕೊಟ್ಟುಹೋಗುತ್ತಾರೆ,ಇಂತಹವರಿಂದ ಕಿತ್ತುಕೊಂಡ ಹಣ ಸದ್ಬಳಕೆಯಾಯ್ತಲ್ಲ ಎಂಬುದೇ ಸಮಾಧಾನ,ಬಾಬರನ್ನ ದೇವರಾಗಿ ನೋಡಿದ ಶ್ರೀಮಂತರು ಮೋಸ ಹೋಗಿರಬಹುದು ಆದರೆ ಖಂಡಿತ ಏನೂ ಮಾಡಲಾಗದೆ,ಕುಡಿಯಲು ನೀರಿಲ್ಲದೆ ಕುಳಿತಿದ್ದರಲ್ಲ ಜನ ಅವರಿಗೆ ಖಂಡಿತ ಅವರು ದೇವರಿಗಿಂತ ಹೆಚ್ಚು,ವೈಜ್ಣಾನಿಕವಾಗಿ ನೋಡುವುದನ್ನ ಬಿಟ್ಟು ನಮ್ಮ ದೇಶದ ಸ್ಥಿತಿಗತಿಯನ್ನ ಅರ್ಥಮಾಡಿಕೊಂಡವರಿಗೆ ಬಾಬಾ ಖಂಡಿತ ಕೆಡುಕರಲ್ಲ.

  ReplyDelete
 19. Sachin says Baba is world to me.. what a foolish statement..why don't people understand there is nothing beyond ourself.. power is within us.. why do we want these so called GODMEN..?? God has become a product and these people are marketing him.. people especially educated, intellectuals are fools to fall into this business.. people please wake up..!

  ReplyDelete
 20. Why India is so much Corrupt..? its because of people like you who always try to search some wrong in everything. Sampadakeeya or TV9 or any media is like that. Have you ever written any good thing about anybody..?? NO. Because you know only to critisise people. Sai Baba might have called himself anything but he has made atleast attempt to give education, hospitals etc. What can you do..?? only critisize.
  You call yourself as a writer then write good thing about what people do instead of trying to find about bad things. If you spread good messages people also will try to do good. Please grow up Sampadakeeya otherwise its just shame on all your articles. Try finding good things in people instead of point bad things always. Then only our India will grow.

  ReplyDelete
 21. ಎಲ್ಲರೂ ನಿಮ್ಮಂತೆಯೇ ಯೋಚಿಸಿದರೆ ಪ್ರಪಂಚ ಹೇಗಿರಬಹುದು ಹೇಳಿ ಗುರುಗಳೇ? ಬುದ್ಧ, ಭಗವಾನ್ ಅಲ್ಲ ಅನಿಸಿಬಿಟ್ಟರೆ, ಜನರು ನಂಬಿಕೆಗಳನ್ನು (ಮೂಢವೋ, ಅಲ್ಲವೋ) ಬಿಟ್ಟರೆ, ನಿಮ್ಮಂತೆಯೇ ಯೋಚಿಸಿದರೆ how boring? ಅಲ್ವಾ? ನಮ್ಮ ಬದುಕು ಬಹಳ ಹಸನಾಗಿದೆ ಸ್ವಾಮೀ.. ದಿನದ್ದೋ, ತಿಂಗಳಿದ್ದೋ ಖರ್ಚಿಗೆ ಹಣ ಸಿಗುತ್ತದೆ ಬದುಕು ಆರಾಮಾಗಿದೆ. ಎಷ್ಟೋ ಜನ ಬದುಕು ಬೇಡದೆ ಹೋದವರುಂಟು.. ಬಾಬಾರ ಒಂದು ನಗು, ಒಂದು ನೋಟ ಅಂಥಹ ಎಷ್ಟೋ ಜನರಿಗೆ ಮತ್ತೆ ಬದುಕಲು ಕಾರಣ ನೀಡಿದ್ದುಂಟು. ಮತ್ತೆ ಎದ್ದು ಸಾಧಿಸಿದವರುಂಟು. ಬಡ ಬಗ್ಗರಿಗೆ ಉಚಿತ ಕ್ಯಾನ್ಸೆರ್, ಹೃದ್ರೋಗ ಆಸ್ಪತ್ರೆಗಳಲ್ಲಿ ಸುಶ್ರೂಷೆ ಸಿಕ್ಕಿದೆ.
  ಬುದ್ಧ ತಾನು ದೇವರಲ್ಲ ಎಂದು ಹೇಳಿರಬಹುದು. ನಿಮಗೆ ಸ್ವಂತ ವಿಚಾರವಿದೆ, ಅದಕ್ಕೆ ಆ ಕೋನದಿಂದ ಬುದ್ಧನನ್ನು ನೋಡುತ್ತೀರಿ, ಬುದ್ಧನ ಭಗವಾನ್ ಅಲ್ಲ ಎನ್ನುತ್ತೀರಿ. ಆದರೆ, ಬುದ್ಧನಿಂದಾಗಿ ಬದುಕಿದವರಿಗೆ ಅವನು ಯಾವತ್ತೂ ಭಗವಾನ್. ಹೋಗಲಿ ಬಿಡಿ, ಕಷ್ಟದಲ್ಲಿದ್ದ ಯಾರನ್ನೋ ನೀವೇ ಕಾಪಾಡಿದರೆ "ದೇವರಂತೆ ಬಂದು ಕಾಪಾಡಿದ" ಅನ್ನಲ್ಲವೇ? ಹಾಗೆಯೇ ಬುದ್ಧ, ಬಸವಣ್ಣ, ಅಮ್ಮ ಎಲ್ಲ ದೇವರಾಗಿರಬಹುದಲ್ಲವೇ? ಬುದ್ಧನನ್ನು, ಬಸವಣ್ಣನನ್ನು ಬಾಬಾರನ್ನು, ಮತ್ತಿತ್ತರರನ್ನು ತರ್ಕಿಸುವುದು ಎಷ್ಟು ಸರಿ? ಆಧ್ಯಾತ್ಮ ಗುರುಗಳು ಹೀಗೆ ಇರಬೇಕು ಎನ್ನುವುದು ಎಷ್ಟು ಸರಿ? ಹಾಗೆ ನೋಡಿದರೆ ಎಲ್ಲವೂ ಮಾರಾಟದ ಸರಕೆ ಅಲ್ಲವೇ? ಕೊಡು ಕೊಳ್ಳುವಿಕ್ಕೆ ಇದ್ದದ್ದೇ ಅಲ್ಲವೇ? ಹಣದ ವಿನಿಮಯ ಇದ್ದರೆ ಮಾತ್ರ ಮಾರಾಟವೇ? ನೀವು ತಾರ್ಕಿಕವಾಗಿ ಯೋಚಿಸಿ ಯಾವುದನ್ನು ಮೌಡ್ಯ ಎನ್ನುತೀರೋ psychologically ಅದು ಮೌಡ್ಯ ಅನಿಸಲ್ಲ. ನೀವು ಹೇಳುವ ಮೌಡ್ಯವನ್ನು ಗೆಲ್ಲುವುದು ಎಲ್ಲರಿಂದ ಸಾಧ್ಯವೂ ಇಲ್ಲ.

  ReplyDelete
 22. ಸಕಾಲಿಕ ಲೇಖನ. ಟಿ.ವಿ. ಯಲ್ಲಿ ಬೆಂಗಳೂರಿನ ಯಾವುದೊ ಒಂದು ಕಡೆ ಸಾಯಿ ಬಾಬ ತೀರಿಕೊಂಡ ದಿನ ಅವರ ಫೋಟೋ ದಿಂದ ವಿಭೂತಿ ಬರುತ್ತಿದ್ದದ್ದನ್ನು 'ಬ್ರೆಕಿಂಗ್ ನ್ಯೂಸ್ ' ಆಗಿ ತೋರಿಸುತ್ತಿದ್ದರು. ಅವರ ಮನೆ ಒಂದು ರೀತಿ ಪ್ರೇಕ್ಷಣೀಯ ಸ್ಥಳವಾಗಿತ್ತು!!ವಿಜಯ ಕರ್ನಾಟಕವಂತೂ ಬಾಬ ಸುದ್ದಿಗೆ ಬಹಳಷ್ಟು ಜಾಗ ಮೀಸಲಾಗಿಟ್ಟಿತ್ತು. (ಬೇರೆ ಪೇಪರ್ ಗಳ ಬಗ್ಗೆ ಗೊತ್ತಿಲ್ಲ. )


  ನಾನು ರಾಮ್ ದೇವ್ ಬಾಬ ಇತರ ಬಾಬಾಗಳಂತೆ ಅಲ್ಲ ಎಂದು ಅಂದುಕೊಂಡಿದ್ದೆ!! ಅವರದ್ದೂ ಈ ಪರಿಯೇ?

  ReplyDelete
 23. Sai Baba Tricks Completely Exposed,

  http://www.facebook.com/video/video.php?v=1318767015307

  ReplyDelete
 24. swalpa kann bittu, yellow glass tegdu ee article ellaroo odi
  http://blogs.timesofindia.indiatimes.com/randomaccess/entry/sai-baba-s-one-real-miracle-that-no-one-can-question

  ReplyDelete
 25. despite the conspiracies or tantrums surrounding him... He was a good man, 27,000 Cr rupees of social work is no Joke, ofcourse it may not be his hard earned money - but the ablitiy to mobilize that much amount for good causes and that too with highest transparency is beyond imagination...for a governing body.

  if we see these thugs - kalmaadi, raja or like our politicians , who collected flood relief funds and used it for party expenses...., and no records, account books were ever produced in front of public...

  let him rest peace - lets talk a little good things about him
  so that the coming generation realizes the meaning of being in help of others....

  ReplyDelete
 26. its good to see such an article. though baba is cedited with many good things but he himself never came out of "PAWAADA VALAYA". if he has stopped no body would have given him respect.--UMESH DESAI

  ReplyDelete
 27. nija baba kayali kumbala kayi barisalu sadhya viladirabhahudhu,

  adhare avaru duddu madikondu videshake prayana belasalila, mathe avara bhashanadhali yahude prochodhanakari helikegalu iralilla,

  baba oba, manava, adhare avaru thumba janake oleyadanu madidhare,

  adhake avaru sathaga seridha janarane nodi.
  avara hestu janaranu sampadhisidhara anodhanu.

  adharunu, avara maya mantra yahudhu educated people galu nambodila, ada kevala odu tricks asthe..

  anthu inthu e baba odharu , inu esthu jana baba barutharo

  ReplyDelete
 28. ಕೊನೆಗೂ ಸಾಯಿ! ಪವಾಡಗಳ ವಿರುದ್ಧ ಬರೆದ ಲೇಖನ ನೋಡಿ ತುಂಬಾ ಸಂತೋಷವಾಯಿತು. ಎಲ್ಲ ಪತ್ರಿಕೆಗಳಲ್ಲಿ, ಟಿ.ವಿ. ಯಲ್ಲಿ ಬಾಬಾ ಗುಣಗಾನ ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಧನ್ಯವಾದಗಳು.

  ReplyDelete