Wednesday, August 24, 2011

ಲೋಕಪಾಲ್ Vs ಜನ ಲೋಕಪಾಲ್

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಅವರ ಹೋರಾಟ ಪುನರ್ ಆರಂಭಗೊಂಡಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಅಣ್ಣಾ ಮತ್ತವರ ತಂಡದ ಸುತ್ತ ನೆರೆದಿದ್ದ ಮತ್ತದೇ ನಗರವಾಸಿ ಮಧ್ಯಮವರ್ಗದ ಜನರೇ ಇವತ್ತೂ ಅವರನ್ನು ಸುತ್ತುವರಿದಿದ್ದಾರೆ. ಅವರಲ್ಲಿ ಬಹಳಷ್ಟು ಜನ ಅಣ್ಣಾ ಅವರ ತಂಡ ರೂಪಿಸಿರುವ ಜನಲೋಕಪಾಲ್ ಕರಡನ್ನಾಗಲಿ ಯುಪಿಎ ಸಕರ್ಾರ ಸಿದ್ಧಪಡಿಸಿರುವ ಲೋಕಪಾಲ್ ಕರಡನ್ನಾಗಲಿ ಓದಿರಲಿಕ್ಕಿಲ್ಲ. ಆದರೂ ಅವರ ದೃಷ್ಟಿಯಲ್ಲಿ ಅಣ್ಣಾ ತಂಡ ರೂಪಿಸಿರುವ ಜನಲೋಕಪಾಲ್ ಕರಡನ್ನು ಸಕರ್ಾರ ಜಾರಿಗೆ ತರಲೇಬೇಕು ಮತ್ತು ಮುಂದಿನ ದಿನಗಳಲ್ಲಿ ಈ ಕಾಯಿದೆಯಿಂದಾಗಿ ದೇಶದಲ್ಲಿ ಭ್ರಷ್ಟಾಚಾರ ಸಂಪೂರ್ಣ ನಿನರ್ಾಮವಾಗುತ್ತದೆ.
          ಈ ಮಧ್ಯಮ ವರ್ಗ ಒಂದು ರೀತಿಯ ಭ್ರಮೆಯಲ್ಲಿ ಬದುಕುತ್ತಿರುವಂತಿದೆ. ಒಮ್ಮೆಯೂ ರೈತರ, ಬಡವರ, ದೀನದಲಿತರ ಪರವಾಗಿ ಪ್ರತಿಭಟಿಸದ, ಬೀದಿಗಿಳಿಯದ ಈ ವರ್ಗ ಇವತ್ತು ಭ್ರಷ್ಟಾಚಾರ ನಿಮರ್ೂಲನೆಗೆ ತೊಡೆತಟ್ಟಿ ನಿಂತಿದೆ. ಜಾಗತೀಕರಣದ ಪ್ರಕ್ರಿಯೆಯಿಂದಾಗಿ ಸೃಷ್ಟಿಯಾಗಿರುವ ಈ ನೂತನ ವರ್ಗ ಉದ್ಯೋಗ, ಹಣ ಮತ್ತು ಸ್ಥಾನಮಾನಗಳು ಕಂಡಿರುವುದು ಎಷ್ಟು ನಿಜವೋ ಅದೇ ಜಾಗತೀಕರಣದಿಂದಾಗಿ ಇವತ್ತು ನಮ್ಮ ದೇಶದ ಇತಿಹಾಸದಲ್ಲೇ ಅತಿಹೆಚ್ಚು ಬಡವರು ಸೃಷ್ಟಿಯಾಗಿದ ್ದಾರೆಂಬುದರ ಬಗ್ಗೆ, ನಮ್ಮ ಸಕರ್ಾರ ದಮನಕಾರಿ ಅಂಶಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಬಗ್ಗೆ ಅಷ್ಟೇ ಕುರುಡಾಗಿರುವುದೂ ನಿಜ. ಮಾತ್ರವಲ್ಲ, ಈ ವರ್ಗಕ್ಕೆ ಪ್ರಜಾತಂತ್ರದ ಬಗ್ಗೆ ಕಾಳಜಿಯಾಗಲಿ, ತಾಳ್ಮೆಯಾಗಲಿ ಇಲ್ಲವೇ ಇಲ್ಲ. ಅದರಲ್ಲೂ ಮೀಸಲಾತಿ ಮತ್ತು ಪ್ರಾತಿನಿಧಿಕ ಸಿದ್ಧಾಂತದ ಬಗ್ಗೆ ಈ ವರ್ಗದಲ್ಲಿ ಅಸಹನೆ ತುಂಬಿತುಳುಕುತ್ತಿದೆ.
          ಇವತ್ತು ಭಾರತದ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗವಾದ, ಮುಖ್ಯವಾಗಿ ನಗರವಾಸಿಗಳಾದ ಈ ಮಧ್ಯಮ ವರ್ಗಕ್ಕೆ ರಾಜಕಾರಣಿಗಳನ್ನು ಕಂಡರಾಗುವುದಿಲ್ಲ. ಬದಲಾಗಿ ತಾವು ಕೆಲಸ ಮಾಡುವ ಕಾಪರ್ೊರೇಟ್ ಕಂಪನಿಗಳು ಹೇಗೆ ಕಾರ್ಯನಿರ್ವಹಿಸುತ್ತವೋ ಹಾಗೆಯೇ ದೇಶ ಕೂಡ ಇರಬೇಕೆಂದು ಭಾವಿಸುವ ವರ್ಗವಿದು. ಓರ್ವ ಬರಹಗಾರರು ಹೇಳಿರುವಂತೆ ``ಈ ವರ್ಗಕ್ಕೆ ಎಟಿಎಂ ಮೆಶೀನ್ನಿಂದ ಹಣ ಬರುವಷ್ಟೇ ಸುಲಭವಾಗಿ ಬದಲಾವಣೆಯೂ ಬರಬೇಕು. ಆದರೆ ಮೀಸಲಾತಿ, ಪ್ರಾತಿನಿಧ್ಯ ಎಂದೆಲ್ಲ  ಕೂತರೆ ಬದಲಾವಣೆ ಆಗುವುದಿಲ್ಲ'' ಎಂಬ ನಿಲುವು ಮಧ್ಯಮ ವರ್ಗದ್ದು. ಹಾಗೆಯೇ ಮತ್ತೊಬ್ಬ ಲೇಖಕರು ಗಮನಿಸಿರುವಂತೆ ``ಎಂದೂ ಚುನಾವಣೆ ಸಮಯದಲ್ಲಿ ತಮ್ಮ ಮತ ಚಲಾಯಿಸುವ ಗೋಜಿಗೆ ಹೋಗದ ಈ ವರ್ಗಕ್ಕೆ ರಾಜಕೀಯ ಬದಲಾವಣೆ ಮಾತ್ರ ಬೇಕು.''
          ಇವತ್ತು ಅಣ್ಣಾ ಹಜಾರೆ ಅವರ ಸುತ್ತ ಇರುವ ಈ ಜನರಲ್ಲಿ ಭ್ರಷ್ಟಾಚಾರದ ವಿರುದ್ಧ ಇರುವ ಆಕ್ರೋಶ ನಿಜವಾದದ್ದು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಶಯಗಳನ್ನು ಅರ್ಥ ಮಾಡಿಕೊಳ್ಳದೆ ತಮ್ಮ ಹೋರಾಟವು ದೇಶದಲ್ಲಿ ದೊಡ್ಡ ಕ್ರಾಂತಿಗೆ ನಾಂದಿ ಹಾಡುತ್ತದೆ ಎಂಬ ಭ್ರಮೆಯಲ್ಲಿ ಅವರೆಲ್ಲ ಇರುವುದೂ ಅಷ್ಟೇ ನಿಜ.
          ಇಂತಹ ಭ್ರಮೆ ಜನರಲ್ಲಿ ಹೆಚ್ಚಾಗುವಂತೆ ಕೇಂದ್ರ ಸಕರ್ಾರ ನಡೆದುಕೊಂಡಿದೆ. ಆರಂಭದಲ್ಲಿ ಅಣ್ಣಾ ಅವರಿಗೆ ಸಿಕ್ಕ ಜನಬೆಂಬಲವನ್ನು ಕಂಡು ದಂಗಾದ ಕೇಂದ್ರ ಸಕರ್ಾರ ತನ್ನ ಕೈಲಾಗದ್ದನ್ನು ಮಾಡುವುದಾಗಿ ಅಣ್ಣಾ ತಂಡಕ್ಕೆ ಭರವಸೆ ನೀಡಿತು. ಅಣ್ಣಾ ತಂಡದ ಈ ಯಶಸ್ಸನ್ನು ಕಂಡು ತಾವೂ ಲಾಭ ಪಡೆದುಕೊಳ್ಳಲು ಮುಂದಾದ ಬಾಬಾ ರಾಮದೇವ್ ಎಂಬ ಢೋಂಗಿ ಸ್ವಾಮಿ ಮತ್ತು ಆತನ ಬೆನ್ನಿಗೆ ನಿಂತಿದ್ದ ಚೆಡ್ಡಿಗಳನ್ನು ಬಗ್ಗುಬಡಿಯಲು ಪೊಲೀಸರಿಂದ ಲಾಠಿಪ್ರಹಾರ ನಡೆಸಿ ತನ್ನ ಸವರ್ಾಧಿಕಾರಿ ಗುಣವನ್ನು ಪ್ರದಶರ್ಿಸಿತು. ಇದಾದನಂತರ ಅಣ್ಣಾ ತಂಡದೊಂದಿಗೆ ಲೋಕಪಾಲ್ ಕರಡು ಕುರಿತಂತೆ ನಡೆದ ಸಭೆಗಳಲ್ಲಿ ಸರಿಯಾಗಿ ಚಚರ್ೆ ನಡೆಸದೆ ಅಣ್ಣಾ ತಂಡವನ್ನು ಅವಹೇಳನ ಮಾಡುವುದರಲ್ಲೇ ಮಗ್ನವಾಗಿತ್ತು. ಕೊನೆಗೆ ಬೇಕಾಬಿಟ್ಟಿಯಾಗಿ  ಕರಡನ್ನು ರಚಿಸಿ ``ಇದನ್ನು ಬೇಕಿದ್ದರೆ ಒಪ್ಪಿಕೊಳ್ಳಿ ಇಲ್ಲವೆಂದರೆ ಬಿಡಿ'' ಎಂಬ ಧೋರಣೆಯನ್ನು ತೋರಿತು.
          ಈ ಎಲ್ಲ ಗೊಂದಲಗಳ ಮಧ್ಯೆ ಅಣ್ಣಾ ತಂಡ ಮತ್ತು ಸರಕಾರಿ ತಂಡ ರೂಪಿಸಿರುವ ಕರಡಿನ ಬಗ್ಗೆ ಸರಿಯಾದ ಚಿಂತನೆ, ಚರ್ಚೆ, ಅಧ್ಯಯನ ಸಾಧ್ಯವೇ ಆಗಿಲ್ಲ. ಈ ಎರಡೂ ಕಡೆಯವರು ಮತ್ತು ಇತರರು ಏನನ್ನು ಹೇಳುತ್ತಿದ್ದಾರೆ ಎಂದು ಯಾರೂ ಕೇಳಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಆದ್ದರಿಂದ ``ಪ್ರಧಾನಮಂತ್ರಿಯನ್ನು ಯಾಕೆ ಸೇರಿಸಬಾರದು?'', ``ಅಣ್ಣಾ ತಂಡ ಹೇಳುತ್ತಿರುವುದೆಲ್ಲ ಸರಿ ಇದೆಯಲ್ಲವಾ?'' ಎಂಬ ಗೊಂದಲಗಳು ಜನರಲ್ಲಿ ಮನೆ ಮಾಡಿವೆ. ಆದ್ದರಿಂದ ಈ ಅಣ್ಣಾ ತಂಡ ಮತ್ತು ಸಕರ್ಾರ ರೂಪಿಸಿರುವ ಕರಡುಗಳ ಪ್ರಮುಖ ಅಂಶಗಳತ್ತ ಗಮನ ಹರಿಸುವುದು ಅವಶ್ಯಕವಾಗಿದೆ.
          ಮೊದಲಿಗೆ ಯುಪಿಎ ಸಕರ್ಾರ ರೂಪಿಸಿರುವ ಕರಡನ್ನೇ ತೆಗೆದುಕೊಳ್ಳೋಣ. ಯುಪಿಎ ಸಕರ್ಾರ ಈ ಮಸೂದೆಯನ್ನು ಮೊದಲು ಪ್ರಸ್ತಾಪಿಸಿದಾಗ ಭ್ರಷ್ಟಾಚಾರ ಮಾಡಿದ ಪ್ರಧಾನಿಯನ್ನೂ ಬಲಿ ಹಾಕಬಲ್ಲಂಥ ಕರಡು ಇದು ಎಂದು ಪ್ರಚಾರ ಮಾಡಿತ್ತು. ಆದರೆ ಅಂತಹ ಅಂಶ ಈ ಕರಡಿನಲ್ಲಿ ಇಲ್ಲವೇ ಇಲ್ಲ ಮಾತ್ರವಲ್ಲ ಇದೊಂದು ಕಣ್ಣೊರೆಸುವ ತಂತ್ರವಾಗಿದೆ.
ನಮ್ಮ ಅಂಕಣಕಾರ ಶಿವಸುಂದರ್ ಅವರು ಈ ಹಿಂದೆ ಬರೆದಿದ್ದಂತೆ ಸಕರ್ಾರ ರೂಪಿಸಿರುವ ಲೋಕಪಾಲ್ ಮಸೂದೆ ಪ್ರಕಾರ:
          * ಲೋಕಪಾಲ್ ಸಂಸ್ಥೆ ತಾನೇ ಖುದ್ದಾಗಿ ಯಾರಮೇಲೂ ತನಿಖೆ ನಡೆಸುವಂತಿಲ್ಲ. ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷ ಯಾರ ಬಗ್ಗೆ ದೂರು ಕೊಡುತ್ತಾರೋ ಅವರ ಬಗ್ಗೆ ಮಾತ್ರ ತನಿಖೆ ನಡೆಸಬಹುದು. ಇವೆರಡೂ ಸ್ಥಾನಗಳಿಗೆ ಆಳುವ ಪಕ್ಷದ ಪ್ರತಿನಿಧಿಯೇ ಆಯ್ಕೆಯಾಗುತ್ತಾರಾದ್ದರಿಂದ ಸ್ಪೀಕರ್ ಅಥವಾ ಪ್ರಧಾನಿಯ ಬಗ್ಗೆ ಇರಲಿ, ತಮ್ಮದೇ ಪಕ್ಷದ ಸದಸ್ಯನ ಬಗ್ಗೆ ತನಿಖೆ ನಡೆಸುವಂತೆ ಅವರು ಆಗ್ರಹಿಸುವುದನ್ನು ಊಹಿಸಲೂ ಸಾಧ್ಯವಿಲ್ಲ. ಹೆಚ್ಚೆಂದರೆ ಆ ಮಸೂದೆ ವಿರೋಧಿ ಪಕ್ಷಗಳನ್ನು ಮಟ್ಟ ಹಾಕುವ ಆಯುಧಗಳಾಗುತ್ತದೆಯಷ್ಟೆ.
          * ಈ ಲೋಕಪಾಲ್ ಸಂಸ್ಥೆಗೆ ಕನಿಷ್ಟ ಒಂದು ಪೊಲೀಸ್ ಸ್ಟೇಷನ್ನಿಗೆ ಇರುವ ಅಧಿಕಾರವೂ ಇಲ್ಲ. ಇದು ಯಾರ ಬಗ್ಗೆಯೂ ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್) ಅನ್ನೂ ದಾಖಲಿಸಿಕೊಳ್ಳುವಂತಿಲ್ಲ. ಅದು ಏನಿದ್ದರೂ ಒಂದು ಸಲಹಾ ಸಮಿತಿಯ ಮಾದರಿಯದ್ದು. ತನ್ನ ವಿಚಾರಣೆಯ ವರದಿಯನ್ನು ಅದು ಸಂಬಂಧಪಟ್ಟ ಸಂಸ್ಥೆಗೆ ಕೊಡಬೇಕು. ಆ ಸಂಸ್ಥೆ ಆ ವರದಿಯನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಲೂಬಹುದು.
          * ಕ್ಯಾಬಿನೆಟ್ ಮಂತ್ರಿಗಳ ಬಗೆಗಿನ ತನಿಖಾ ವರದಿಯ ಬಗ್ಗೆ ಅಂತಿಮ ತೀಮರ್ಾನ ತೆಗೆದುಕೊಳ್ಳುವ ಪರಮಾಧಿಕಾರ ಪ್ರಧಾನಿಗೆ ಇರುತ್ತದೆ ಮತ್ತು ಪ್ರಧಾನಿ ಅಥವಾ ಇತರ ಸಂಸತ್ ಸದಸ್ಯರ ಮೇಲಿನ ದೂರಿನ ಮೇಲೆ ತೀಮರ್ಾನ ತೆಗೆದುಕೊಳ್ಳುವ ಪರಮಾಧಿಕಾರ ಸಂಸತ್ತಿಗೆ ಇರುತ್ತದೆ. ಹೀಗೆ ಇಲ್ಲಿಯೂ ಭಕ್ಷಕರ ಕೈಯಲ್ಲೇ ನ್ಯಾಯ ರಕ್ಷಣೆಯ ಜವಾಬ್ದಾರಿಯನ್ನು ನೀಡಲಾಗಿದೆ.
          * ಈ ಲೋಕಪಾಲ್ ಪರಿಧಿಯಿಂದ ರಕ್ಷಣಾ ಇಲಾಖೆ ಮತ್ತು ವಿದೇಶಾಂಗ ಇಲಾಖೆಯನ್ನು ಹೊರಗಿಡಲಾಗಿದೆ. ಎಲ್ಲರಿಗೂ ಗೊತ್ತಿರುವಂತೆ ಪ್ರತಿವರ್ಷ ರಕ್ಷಣಾ ಇಲಾಖೆಗೆ ಕೇಂದ್ರ ಸಕರ್ಾರ ಬಜೆಟ್ಟಿನಲ್ಲಿ ಹೆಚ್ಚು ಹಣವನ್ನು ನೀಡುತ್ತದೆ. ಹಾಗೆಯೇ ಈಗಾಗಲೇ ಬೋಫೋಸರ್್ ಮತ್ತು ಶವಪೆಟ್ಟಿಗೆ ಹಗರಣಗಳು ಸಾಬೀತು ಪಡಿಸಿರುವಂತೆ ಈ ರಕ್ಷಣಾ ಇಲಾಖೆಯಲ್ಲಿ ಹಲವಾರು ಹಗರಣಗಳು ನಡೆಯು ತ್ತವೆ. ಆದರೂ ಈ ಇಲಾಖೆಯನ್ನು ಲೋಕಪಾಲರ ಪರಿಧಿಗೆ ತಂದಿಲ್ಲ.
          * ಈ ಲೋಕಪಾಲಕ್ಕೆ ನಿವೃತ್ತ ನ್ಯಾಯಮೂತರ್ಿ ಗಳು ಮಾತ್ರ ಸದಸ್ಯರಾಗಬಹುದು. ಅವರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ವಿರೋಧ ಪಕ್ಷಗಳು ಇರುತ್ತಾವಾದರೂ ಅಂತಿಮ ತೀಮರ್ಾನ ಆಳುವ ಸಕರ್ಾರದ್ದೇ ಆಗಿರುತ್ತದೆ. ಹೀಗಾಗಿ ನಿವೃತ್ತಿಯ ನಂತರದ ಆಶ್ರಯಕ್ಕಾಗಿ ವೃತ್ತಿಯಲ್ಲಿರುವಾಗಲೇ ನ್ಯಾಯ ಮೂತರ್ಿಗಳು ಆಳುವ ಸಕರ್ಾರದ ಪರ ವಾಲುವ ಸಾಧ್ಯತೆ ಇದ್ದೇ ಇರುತ್ತದೆ.
ಇದೆಲ್ಲದರ ಅರ್ಥ ಯುಪಿಎ ಸಕರ್ಾರ ಮಂಡಿಸಿರುವ ಲೋಕಪಾಲ್ ಮಸೂದೆ ಹಲ್ಲಿಲ್ಲದ ಹಾವು ಮಾತ್ರವಲ್ಲ ಅದಕ್ಕೆ ಭುಸುಗುಡುವುದೂ ಕಷ್ಟ.
ಈಗ ಸಕರ್ಾರಿ ತಂಡ ರಚಿಸಿರುವುದಕ್ಕೆ ಪ್ರತಿಯಾಗಿ ಹಜಾರೆ ಮತ್ತು ಅವರ ತಂಡ ರೂಪಿಸಿರುವ ಜನಲೋಕಪಾಲ್ ಕರಡು ಏನನ್ನುತ್ತದೆ ಎಂದು ನೋಡೋಣ. ಲೋಕಪಾಲ್ನಲ್ಲಿ ನ್ಯಾಯಮೂತರ್ಿಗಳು ಮಾತ್ರವಲ್ಲದೆ ಜನಪ್ರತಿನಿಧಿಗಳು ಇರಬೇಕೆಂದೂ, ಲೋಕಪಾಲಕ್ಕೆ ಯಾರ ಬಗ್ಗೆಯಾದರೂ ತಾನೇ ಸ್ವಯಂ ತನಿಖೆ ಮಾಡುವ ಹಾಗೂ ಶಿಕ್ಷಿಸುವ ಅಧಿಕಾರವೂ ಇರಬೇಕೆಂದೂ ಅವರ ಕರಡು ಆಗ್ರಹಿಸುತ್ತದೆ.
ಇದರ ಇತರೆ ಪ್ರಮುಖ ಅಂಶಗಳು ಹೀಗಿವೆ:
          * ಲೋಕಪಾಲ್ ಸಂಸ್ಥೆ ಸಂಪೂರ್ಣವಾಗಿ ಸ್ವತಂತ್ರ ವಾಗಿದ್ದು ಯಾರಿಗೂ ಉತ್ತರದಾಯಿ ಆಗಿರುವುದಿಲ್ಲ. ಇದರ ಅರ್ಥ ನಮ್ಮ ಸಂಸತ್ತು ಮತ್ತು ನ್ಯಾಯಾಂಗಕ್ಕೆ ಇರುವ ಸ್ವಾತಂತ್ರಕ್ಕಿಂತ ಹೆಚ್ಚು ಸ್ವಾತಂತ್ರ್ಯ ಮತ್ತು ಅಧಿಕಾರ ಲೋಕಪಾಲ್ ಸಂಸ್ಥೆಗೆ ಇರುತ್ತದೆ. ನಮ್ಮ ಪ್ರಜಾತಂತ್ರ ದೇಶದಲ್ಲಿ ಈ ಲೋಕಪಾಲ್ ಯಾರಿಗೂ ವಿವರಣೆ ಅಥವಾ ಉತ್ತರ ಕೊಡಬೇಕಿಲ್ಲ ಎಂದರೆ ಅದು ಪ್ರಜಾತಂತ್ರದ ಆಶಯಗಳಿಗೆ ವಿರುದ್ಧವಾಗಿರುತ್ತದೆ. ಅದೆಷ್ಟು ಸರಿ?
          * ನಮ್ಮ ದೇಶದಲ್ಲಿ ಇವತ್ತು ಕೇಂದ್ರ ಮತ್ತು ರಾಜ್ಯ ಸಕರ್ಾರಗಳಲ್ಲಿ 77 ಲಕ್ಷ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರ ಮೇಲೆ ನಿಗಾ ಇಡುವ ಅಧಿಕಾರವು ಕೇವಲ ಹನ್ನೊಂದು ಜನರಿರುವ ಲೋಕಪಾಲ್ ಸಂಸ್ಥೆಗೆ ಇರುತ್ತದೆ. ಮೇಲುನೋಟಕ್ಕೇ ಇದು ಅಸಾಧ್ಯ ಎಂದು ಯಾರಿಗೆ ಬೇಕಾದರೂ ಅರ್ಥವಾಗುತ್ತದೆ.
          * ಪ್ರಜಾತಂತ್ರದ ಆಶಯವೇ ಎಲ್ಲ ವರ್ಗ,  ಜಾತಿ, ಸಮು ದಾಯಗಳಿಗೆ ಸಮಾನ ಪ್ರಾತಿನಿಧ್ಯ ಒದಗಿಸುವುದು. ಆದರೆ ಈ ಜನ ಲೋಕಪಾಲ್ ಸಂಸ್ಥೆ ಅಂತಹ ಯಾವ ಆಶಯವನ್ನೂ ತನ್ನ ಕರಡಿನಲ್ಲಿ ವ್ಯಕ್ತಪಡಿಸಿಲ್ಲ. ಬದಲಾಗಿ ಈ ದೇಶದ ಅತಿ ಬುದ್ಧಿವಂತರೂ, ಜ್ಞಾನಪೀಠ ಪ್ರಶಸ್ತಿ ವಿಜೇತರೂ, ನೊಬೆಲ್ ಪ್ರಶಸ್ತಿ ಪಡೆದಿರುವವರೂ ಇತ್ಯಾದಿ `ಮೇಧಾ ವಿ'ಗಳು ಮಾತ್ರ ಇರಬಹುದಾದ ಸಂಸ್ಥೆಯಾಗಿ ಜನಲೋಕಪಾಲ್ಅನ್ನು ಕಲ್ಪಿಸಿಕೊಳ್ಳಲಾಗಿದೆ. ಅಂದರೆ ಪರೋಕ್ಷವಾಗಿ ಈ ದೇಶದ ಬಹುಸಂಖ್ಯಾತ ಜನರನ್ನು ತನ್ನೊಳಗೆ ತರುವ ಆಶಯವನ್ನೇ ಇದು ಹೊಂದಿಲ್ಲ.
          * ಇವತ್ತು ಕಾಪರ್ೊರೇಟ್ ಕಂಪನಿಗಳೂ ಜನಲೋಕಪಾಲ್ ಕರಡನ್ನು ಬೆಂಬಲಿಸುತ್ತಿರುವುದರ ಹಿಂದೆ ಒಂದು ಮಸಲತ್ತು ಅಡಗಿದೆ. ಅದೇನೆಂದರೆ ಈ ಜನಲೋಕಪಾಲ್ ಸಂಸ್ಥೆಗೆ ನಮ್ಮ ಶಾಸಕಾಂಗ, ನ್ಯಾಯಾಂಗ ಮತ್ತು ಕಾಯರ್ಾಂಗದ ಮೇಲೆ ನಿಗಾ ಇಡುವ ಸ್ವಾತಂತ್ರವಿರುತ್ತದೆಯೇ ಹೊರತು ಬಂಡವಾಳಶಾಹಿ ಕಂಪನಿಗಳ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಅಂದರೆ ಈ ಕಾಯ್ದೆಯಿಂದಾಗಿ ಕಾಪರ್ೊರೇಟ್ ಕಂಪನಿಗಳಿಗೆ ಲಾಭವಾಗಲಿದೆ. ಈಗ ಅವರ ಬೆಂಬಲ ಯಾಕೆ ಎಂದು ಅರ್ಥವಾಯಿತೇ?!
          * ನಮ್ಮ ಪ್ರಜಾಸತ್ತೆಯಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾಯರ್ಾಂಗಗಳಿಗೆ ಅಧಿಕಾರವನ್ನು ನೀಡಲಾಗಿದ್ದರೂ ಅವುಗಳ ಮೇಲೆ ಜನರ ಪ್ರಾತಿನಿಧಿಕ ಉಸ್ತುವಾರಿ ಇರುವ ಸಾಂಕೇತಿಕ ರಚನೆಗಳಾದರೂ ಇವೆ. ಆದರೆ ಜನಲೋಕಪಾಲ್ ಕರಡಿನಲ್ಲಿ ಅದು ತನ್ನನ್ನು ಈ ಮೂರು ಸಂಸ್ಥೆಗಳಿಗೂ ಮೇಲಿರುವ ಪರಮೋಚ್ಛ ಸಂಸ್ಥೆಯಾಗಿ ಕಲ್ಪಿಸಿ ಕೊಳ್ಳುತ್ತದೆ. ಆದರೆ ಅದಕ್ಕೆ ಪ್ರತಿಯಾಗಿ ಜನತೆಯ ಪ್ರಾತಿನಿಧಿಕ ಉಸ್ತುವಾರಿಯನ್ನಾದರೂ ತನ್ನ ಮೇಲೆ ಇರಿಸಿಕೊಳ್ಳುವ ಯಾವುದೇ ಸೂಚನೆಯನ್ನು ಒಪ್ಪಿಕೊಳ್ಳುತ್ತಿಲ್ಲ.
ಇದೆಲ್ಲದರ ಆರ್ಥ ಏನೆಂದರೆ ಇತ್ತ ಸಕರ್ಾರಿ ತಂಡ ರಚಿಸಿರುವ  ಲೋಕಪಾಲ್ ಕರಡಿಗೆ ಹಲ್ಲುಗಳಿಲ್ಲದಿದ್ದರೆ, ಅತ್ತ ಅಣ್ಣಾ ತಂಡ ರಚಿಸುರುವ ಜನಲೋಕಪಾಲ್ ಕರಡು ಒಂದು ರಾಕ್ಷಸನನ್ನು ಸೃಷ್ಟಿಸುವ ಎಲ್ಲ ಲಕ್ಷಣಗಳನ್ನು ಹೊಂದಿದೆ....
ನಮ್ಮ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಅದ್ಭುತವಾಗಿದೆ ಎಂಬುದನ್ನು ಯಾರೂ ಒಪ್ಪುವುದಿಲ್ಲ. ಆದರೆ ಈ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸಲು ಇವತ್ತು ಅಣ್ಣಾ ಹಜಾರೆ ಅವರ ತಂಡ ಹಾಗು ನಮ್ಮ ಮಧ್ಯಮವರ್ಗ ಆಗ್ರಹಿಸುತ್ತಿರುವಂತೆ ಒಂದು ಸ್ವತಂತ್ರ ಸಂಸ್ಥೆಯನ್ನು ಸೃಷ್ಟಿಸಿ, ಅದಕ್ಕೆ ಮಿತಿ ಇಲ್ಲದ ಅಧಿಕಾರವನ್ನು ನೀಡಿ, ಅದು ಯಾರಿಗೂ ಉತ್ತರದಾಯಿ ಅಲ್ಲ ಎನ್ನುವುದು ಇತ್ತ ಪ್ರಜಾಸತ್ತೆಯೂ ಅಲ್ಲ, ಅತ್ತ ಎಲ್ಲ ದೋಷಗಳನ್ನು ನಿವಾರಿಸಬಲ್ಲ ಮಾಯಾ ದಂಡವೂ ಅಲ್ಲ. ಅಣ್ಣಾ ಹಜಾರೆಯವರು ಪ್ರಾಮಾಣಿಕರು ನಿಜ. ಆದರೆ ಅವರ ತಂಡ ರಚಿಸಿರುವ ಕರಡಿನಲ್ಲಿರುವ ದೋಷಗಳಿಗೆ ಅಣ್ಣಾ ಕುರುಡರಾಗಿದ್ದಾರೆ....
- ಗೌರಿ ಲಂಕೇಶ

28 comments:

  1. ದರಿದ್ರ ಸ್ವಯಂಘೋಷಿತ ಬುದ್ದಿಜೀವಿಯ expected ಕಾಮೆಂಟ್ಸ್. ಇಂತದನೆಲ್ಲ ಹಾಕ್ತಿರಲ್ಲ ನೀವು ಏನು ಸ್ವಯಂಘೋಷಿತ ಬುದ್ದಿಜೀವಿಯ ಅಂತ ಅನುಮಾನ ಬರ್ತಾ ಇದೆ...

    ReplyDelete
  2. Anna Hazare Zindabad!

    ReplyDelete
  3. ಪ್ರಶಾಂತAugust 25, 2011 at 6:47 AM

    ಇದು ಲಂಕೇಶ್ಅವರು ಬರೆದಿರುವ ಲೇಖನದಂತೆ ಇಲ್ಲವೇ ಇಲ್ಲ!

    ReplyDelete
  4. " ಅವರಲ್ಲಿ ಬಹಳಷ್ಟು ಜನ ಅಣ್ಣಾ ಅವರ ತಂಡ ರೂಪಿಸಿರುವ ಜನಲೋಕಪಾಲ್ ಕರಡನ್ನಾಗಲಿ ಯುಪಿಎ ಸಕರ್ಾರ ಸಿದ್ಧಪಡಿಸಿರುವ ಲೋಕಪಾಲ್ ಕರಡನ್ನಾಗಲಿ ಓದಿರಲಿಕ್ಕಿಲ್ಲ. " ---> ಹುಚ್ಚು ಮನಸ್ಸಿನ ಹತ್ತು ಮುಖಗಳು!!

    ReplyDelete
  5. http://www.annahazare.org/pdf/Jan%20lokpal%20bill%20by%20Expert%20(Eng).pdf

    ReplyDelete
  6. 1) Why are you saying " only middle class is supporting it " ... leave it, i wont be blaming me of deivide/classify and break the purpose..
    How can lower class( finacial) think of participating here, when they are struggling for their daily bread !? and higher class busy with their bank balances...

    2) * ಇವತ್ತು ಕಾಪರ್ೊರೇಟ್ ಕಂಪನಿಗಳೂ ಜನಲೋಕಪಾಲ್ ಕರಡನ್ನು ಬೆಂಬಲಿಸುತ್ತಿರುವುದರ ಹಿಂದೆ ಒಂದು ಮಸಲತ್ತು ಅಡಗಿದೆ. ಅದೇನೆಂದರೆ ಈ ಜನಲೋಕಪಾಲ್ ಸಂಸ್ಥೆಗೆ ನಮ್ಮ ಶಾಸಕಾಂಗ, ನ್ಯಾಯಾಂಗ ಮತ್ತು ಕಾಯರ್ಾಂಗದ ಮೇಲೆ ನಿಗಾ ಇಡುವ ಸ್ವಾತಂತ್ರವಿರುತ್ತದೆಯೇ ಹೊರತು ಬಂಡವಾಳಶಾಹಿ ಕಂಪನಿಗಳ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಅಂದರೆ ಈ ಕಾಯ್ದೆಯಿಂದಾಗಿ ಕಾಪರ್ೊರೇಟ್ ಕಂಪನಿಗಳಿಗೆ ಲಾಭವಾಗಲಿದೆ. ಈಗ ಅವರ ಬೆಂಬಲ ಯಾಕೆ ಎಂದು ಅರ್ಥವಾಯಿತೇ?! THen why are these departments present ET,CBI,Economic fraud/Crime investingation, corporate laws, Labour laws, Customs, STPI... ? I believe its false..please review your comment... You know what happened to Satyam company scam the CEO is in Jail....

    3) * ನಮ್ಮ ದೇಶದಲ್ಲಿ ಇವತ್ತು ಕೇಂದ್ರ ಮತ್ತು ರಾಜ್ಯ ಸಕರ್ಾರಗಳಲ್ಲಿ 77 ಲಕ್ಷ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರ ಮೇಲೆ ನಿಗಾ ಇಡುವ ಅಧಿಕಾರವು ಕೇವಲ ಹನ್ನೊಂದು ಜನರಿರುವ ಲೋಕಪಾಲ್ ಸಂಸ್ಥೆಗೆ ಇರುತ್ತದೆ. ಮೇಲುನೋಟಕ್ಕೇ ಇದು ಅಸಾಧ್ಯ ಎಂದು ಯಾರಿಗೆ ಬೇಕಾದರೂ ಅರ್ಥವಾಗುತ್ತದೆ. - This applies to every Department - Lot of recruitment is pending in all govt departments..not only this.. and its not 11 people - it will have more officers.. ( Yes, you can argue here, we are creating more bribe takers - cant help my insecurity from govt officials here :) )


    * ಪ್ರಜಾತಂತ್ರದ ಆಶಯವೇ ಎಲ್ಲ ವರ್ಗ, ಜಾತಿ, ಸಮು ದಾಯಗಳಿಗೆ ಸಮಾನ ಪ್ರಾತಿನಿಧ್ಯ ಒದಗಿಸುವುದು. ಆದರೆ ಈ ಜನ ಲೋಕಪಾಲ್ ಸಂಸ್ಥೆ ಅಂತಹ ಯಾವ ಆಶಯವನ್ನೂ ತನ್ನ ಕರಡಿನಲ್ಲಿ ವ್ಯಕ್ತಪಡಿಸಿಲ್ಲ. ಬದಲಾಗಿ ಈ ದೇಶದ ಅತಿ ಬುದ್ಧಿವಂತರೂ, ಜ್ಞಾನಪೀಠ ಪ್ರಶಸ್ತಿ ವಿಜೇತರೂ, ನೊಬೆಲ್ ಪ್ರಶಸ್ತಿ ಪಡೆದಿರುವವರೂ ಇತ್ಯಾದಿ `ಮೇಧಾ ವಿ'ಗಳು ಮಾತ್ರ ಇರಬಹುದಾದ ಸಂಸ್ಥೆಯಾಗಿ ಜನಲೋಕಪಾಲ್ಅನ್ನು ಕಲ್ಪಿಸಿಕೊಳ್ಳಲಾಗಿದೆ. ಅಂದರೆ ಪರೋಕ್ಷವಾಗಿ ಈ ದೇಶದ ಬಹುಸಂಖ್ಯಾತ ಜನರನ್ನು ತನ್ನೊಳಗೆ ತರುವ ಆಶಯವನ್ನೇ ಇದು ಹೊಂದಿಲ್ಲ.

    You are only saying " spshta padisilla " - but now you are defining who all it should.. nobels,gyaanapeetas - isnt it wrong.. if it is not clear,it needs to be defined.. E apvaad yaake..?


    You article reminds me - ade Madhayma warg - Aaarakkeerabardu.. moorakkilibardu.. hange iri anno haagide..

    ReplyDelete
  7. ಕಾರ್ಪೋರೇಟ್ ಕಂಪನಿಗಳು.. ಸರ್ಕಾರ.. ಮತ್ತು ಭ್ರಷ್ಟಾಚಾರದ ಬಗ್ಗೆ ಒಂದು ಮಾತು..

    ಕೊಟ್ಟವ್ನಿಗೂ ಬಾರಿಸಿ.. ಇಸ್ಕೊಂಡವ್ನಿಗೂ.. ಇಕ್ಕಿ.. ಅವನು ಯಾವ ಕೋಡಂಗಿನೆ ಇರಲಿ ಈರಭದ್ರನೇ ಇರಲಿ....

    ಅಂತ ಕಾನೂನು ಬರಬೇಕು..

    - ತೇಜಸ್ವಿ

    ReplyDelete
  8. Another discouraging article!pull others leg who is trying to do something good for the nation , we Indians are known for this. ಒಮ್ಮೆಯೂ ರೈತರ, ಬಡವರ, ದೀನದಲಿತರ ಪರವಾಗಿ ಪ್ರತಿಭಟಿಸದ, ಬೀದಿಗಿಳಿಯದ ಈ ವರ್ಗ ಇವತ್ತು ಭ್ರಷ್ಟಾಚಾರ ನಿಮರ್ೂಲನೆಗೆ ತೊಡೆತಟ್ಟಿ ನಿಂತಿದೆ, endhu baredideera, ,Janlokpalnantaha sansthe intaha janarige sahaya naduthade endu neevu yake andukolluvudilla.

    ReplyDelete
  9. The middle class people are supporting Anna Hazare because they are fed up of corruption. They are fighting against cossuprion rather than for JanLokpal.

    ReplyDelete
  10. ಸ್ವಯಂ ಘೋಷಿತ "ಬುಧ್ಧಿ ಜೀವಿಗಳಿವರು", ವಿರೋಧಿಸುವುದರಲ್ಲೇ ಖುಷಿಪಡುವವರು.
    ಅಣ್ಣಾ ಟೀಮ್ ವೆಬ್ ಸೈಟ್ ನಲ್ಲಿ ಸಲಹೆ ಕೇಳಿದಾಗ ಗೌರಿ ಲಂಕೇಶ್ ಏನಾದ್ರೂ ಸಲಹೆ ಕೊಟ್ಟಿದ್ರಾ ಎಂದು ತಿಳಿಯುವ ಕುತೂಹಲ ನನಗೆ

    ReplyDelete
  11. "ಕಳೆದ ಏಪ್ರಿಲ್ ತಿಂಗಳಲ್ಲಿ ಅಣ್ಣಾ ಮತ್ತವರ ತಂಡದ ಸುತ್ತ ನೆರೆದಿದ್ದ ಮತ್ತದೇ ನಗರವಾಸಿ ಮಧ್ಯಮವರ್ಗದ ಜನರೇ ಇವತ್ತೂ ಅವರನ್ನು ಸುತ್ತುವರಿದಿದ್ದಾರೆ. ಅವರಲ್ಲಿ ಬಹಳಷ್ಟು ಜನ ಅಣ್ಣಾ ಅವರ ತಂಡ ರೂಪಿಸಿರುವ ಜನಲೋಕಪಾಲ್ ಕರಡನ್ನಾಗಲಿ ಯುಪಿಎ ಸಕರ್ಾರ ಸಿದ್ಧಪಡಿಸಿರುವ ಲೋಕಪಾಲ್ ಕರಡನ್ನಾಗಲಿ ಓದಿರಲಿಕ್ಕಿಲ್ಲ."

    ಓದಿರಬಹುದು/ಓದದೆ ಇರಬಹುದು, ಆದರೆ ಅಲ್ಲಿಗೆ ಬರುವ ಜನರಿಗೆಲ್ಲಾ ಒಂದಂತು ಗೊತ್ತು, ಅಣ್ಣಾ ಅವರ ಕರಡು ಮಸೂದೆ ಪ್ರಬಲವಾದ ಮಸೂದೆಯೆಂದು. ಇಲ್ಲಿಯವರೆಗೆ ಬ್ರಷ್ಟಾಚಾರ ಯಾವ ಎಗ್ಗೂ ಇಲ್ಲದೆ ಮುಂದುವರೆಯುತ್ತಿರುವ ರೀತಿ ನೋಡಿ ರೋಸಿಹೋಗಿರುವ ಜನರಿಗೆ ಅದರಿಂದ ಬ್ರಷ್ಟಾಚಾರದ ವಿರುದ್ದ ಹೋರಾಡಲು ನೂರಾನೆಯ ಬಲ ಬರುವುದು ಸಿದ್ದ. ಅಷ್ಟು ಸಾಕು. ಹಾಗೆಯೇ ಅಲ್ಲಿಗೆ ಬರುವ ಜನಗಳು ಯಾರೂ ಯಾವುದೇ ರಾಜಕೀಯ ಸಭೆಗೆ ಬರುವ ಜನರಂತೆ, ದಿನಕ್ಕೆ ಒಂದು ಊಟ, ೩೫೦ ರೂಪಾಯಿಗಳನ್ನೂ ಕೊಟ್ಟು ಕರೆತನ್ದಿರುವನ್ತಹವರಲ್ಲ. ಹಾಗೆಯೇ ಯಾರೂ ಒತ್ತಾಯದಿಂದ ಅಲ್ಲಿಗೆ ಜನರನ್ನು ಬರಲು ಪ್ರಚೋದಿಸಿಲ್ಲ. ಹೀಗಿರುವಾಗ ಯಾರಿಗ್ಯಾಕೆ ಇದರಲ್ಲಿ ತೊಂದರೆ ಕಾಣಿಸಬೇಕು?

    "ನಮ್ಮ ದೇಶದಲ್ಲಿ ಇವತ್ತು ಕೇಂದ್ರ ಮತ್ತು ರಾಜ್ಯ ಸಕರ್ಾರಗಳಲ್ಲಿ 77 ಲಕ್ಷ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರ ಮೇಲೆ ನಿಗಾ ಇಡುವ ಅಧಿಕಾರವು ಕೇವಲ ಹನ್ನೊಂದು ಜನರಿರುವ ಲೋಕಪಾಲ್ ಸಂಸ್ಥೆಗೆ ಇರುತ್ತದೆ. ಮೇಲುನೋಟಕ್ಕೇ ಇದು ಅಸಾಧ್ಯ ಎಂದು ಯಾರಿಗೆ ಬೇಕಾದರೂ ಅರ್ಥವಾಗುತ್ತದೆ."

    ಇದು ನಿಮ್ಮ ತಪ್ಪು ಗ್ರಹಿಕೆ. ಲೋಕಪಾಲ್ ನ ಕೆಳಗೆ ರಾಜ್ಯಗಳ ಲೋಕಾಯುಕ್ತ ಬರಬೇಕು. ರಾಜ್ಯ ಸರ್ಕಾರದ ನೌಕರರು ಲೋಕಾಯುಕ್ತದ ಕೆಳಗೆ ಬರುತ್ತಾರೆ.

    "ಆದರೆ ಅದಕ್ಕೆ ಪ್ರತಿಯಾಗಿ ಜನತೆಯ ಪ್ರಾತಿನಿಧಿಕ ಉಸ್ತುವಾರಿಯನ್ನಾದರೂ ತನ್ನ ಮೇಲೆ ಇರಿಸಿಕೊಳ್ಳುವ ಯಾವುದೇ ಸೂಚನೆಯನ್ನು ಒಪ್ಪಿಕೊಳ್ಳುತ್ತಿಲ್ಲ."

    ಇದೂ ಕೂಡ. ಯಾವುದೇ ಸಾಮಾನ್ಯ ನಾಗರೀಕ ಕೂಡ ಲೋಕಪಾಲರನ್ನು ತೆಗೆಯಿರಿ ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು.

    "ಇದೆಲ್ಲದರ ಆರ್ಥ ಏನೆಂದರೆ ಇತ್ತ ಸಕರ್ಾರಿ ತಂಡ ರಚಿಸಿರುವ ಲೋಕಪಾಲ್ ಕರಡಿಗೆ ಹಲ್ಲುಗಳಿಲ್ಲದಿದ್ದರೆ, ಅತ್ತ ಅಣ್ಣಾ ತಂಡ ರಚಿಸುರುವ ಜನಲೋಕಪಾಲ್ ಕರಡು ಒಂದು ರಾಕ್ಷಸನನ್ನು ಸೃಷ್ಟಿಸುವ ಎಲ್ಲ ಲಕ್ಷಣಗಳನ್ನು ಹೊಂದಿದೆ...."

    ನಮ್ಮ ಉಚ್ಚ ನ್ಯಾಯಾಲಯ ಯಾವುದೇ ಕಾನೂನನ್ನು ರದ್ದು ಮಾಡಬಹುದು. ಯಾವುದೇ ವ್ಯಕ್ತಿಯನ್ನು ಸೆರೆಮನೆಗೆ ತಳ್ಳಬಹುದು/ನೇಣುಗಂಬ ಹತ್ತಿಸಬಹುದು. ಯಾರೂ ಕೂಡ ಇದನ್ನು ವಿರೋಧಿಸಿಲ್ಲ. ಹಾಗೆಯೇ ಲೋಕಪಾಲ್ ಗೂ ಕೂಡ ಸುಮ್ಮನೆ ಹೆದರುವ ಅವಶ್ಯಕತಇಲ್ಲ. ಅದಕ್ಕೂ ಅದರದ್ದೇ ಆದ ಕಡಿವಾಣಗಳಿವೆ.

    Guruprasad

    ReplyDelete
  12. Now I understand that u have read the Govt. Jokepal Bill.
    Also make sometime to read JanLokPal Bill.
    Then U will understand that, Janlokpal Bill never say for " ಒಂದು ಸ್ವತಂತ್ರ ಸಂಸ್ಥೆಯನ್ನು ಸೃಷ್ಟಿಸಿ, ಅದಕ್ಕೆ ಮಿತಿ ಇಲ್ಲದ ಅಧಿಕಾರವನ್ನು ನೀಡಿ, ಅದು ಯಾರಿಗೂ ಉತ್ತರದಾಯಿ ಅಲ್ಲ ಎನ್ನುವುದು ಇತ್ತ ಪ್ರಜಾಸತ್ತೆಯೂ ಅಲ್ಲ, ಅತ್ತ ಎಲ್ಲ ದೋಷಗಳನ್ನು ನಿವಾರಿಸಬಲ್ಲ ಮಾಯಾ ದಂಡವೂ ಅಲ್ಲ"

    Get well soon dude. I feel pity on u and ur writings.

    ReplyDelete
  13. ದೊಡ್ಡ ತಪ್ಪೇನೆಂದರೆ "ನಗರವಾಸಿ=ಮಧ್ಯಮ ವರ್ಗ" - ಎಂಬ ಭಾವನೆಯಲ್ಲಿ ಲೇಖನ ಬರೆದಿರುವುದು. ಮದ್ಯಮವರ್ಗದ ಜನ ಹೆಚ್ಚಿರುವುದು ಹಳ್ಳಿಗಳಲ್ಲೇ.

    ReplyDelete
  14. by abusing the middle class people, Gowri wanted 2 become great intellect. now days it become fashion. I think gowri belongs to upper middle class lady.
    -nagarajaiah

    ReplyDelete
  15. what non-sense...first, get your facts right...

    ReplyDelete
  16. ಗುಂಪಲ್ಲಿ ಗೋವಿಂದಾ ಎನ್ನುವಂತಾಗಿದೆ. ಅಣ್ಣಾ ಸತ್ಯಗ್ರಹದ ಒಳ ಹುನ್ನಾರಗಳನ್ನು ಅರಿತೂ ಸುಖಾಸುಮ್ಮನೆ ನಿರಂತರ ಹಾ(ಹೋ)ರಾಟ ನಡೆಸುತ್ತರುವುದು ನಿಜಕ್ಕೂ ನಾಚಿಕೆಗೇಡು. ಗೌರಿ ಅವರ ದೃಷ್ಟಿಕೋನ ಸರಿಇದೆ. ಸಂಪಾದಕೀಯ ನಿಲುವು ಮೆಚ್ಚುವಂತಹದ್ದು.

    ReplyDelete
  17. What is the solution madam.. I never see any agitation you won in your life. Whats your doing? is your media helps to change people or government or you trying like that.

    First try atleast 2 days fast then you feel the hungry & HORRIBLE FEELINGS... 74 year old man fast from 11 days and nobody trying to solve the problem..

    putting all false story here...
    Irresponsible people neither support nor help simply blaming others..

    They will support only KUMARANNA FAST..

    Damid!

    ReplyDelete
  18. ಈ ಮಧ್ಯಮ ವರ್ಗ ಒಂದು ರೀತಿಯ ಭ್ರಮೆಯಲ್ಲಿ ಬದುಕುತ್ತಿರುವಂತಿದೆ. ಒಮ್ಮೆಯೂ ರೈತರ, ಬಡವರ, ದೀನದಲಿತರ ಪರವಾಗಿ ಪ್ರತಿಭಟಿಸದ, ಬೀದಿಗಿಳಿಯದ ಈ ವರ್ಗ ಇವತ್ತು ಭ್ರಷ್ಟಾಚಾರ ನಿಮರ್ೂಲನೆಗೆ ತೊಡೆತಟ್ಟಿ ನಿಂತಿದೆ.-----ಇದು ಪಕ್ಕಾ ರಾಜಕೀಯ ಪ್ರೇರಿತ ಬರಹ, ಯಾವ ಪ್ರತಿಭಟನೆಯನ್ನು ಯಾವುದಕ್ಕೆ ಹೋಲಿಸಿ ಖಂಡಿಸಿದ್ದಾರೆ!!! ಅಚ್ಚರಿಯಾಗುತ್ತೆ,

    ReplyDelete
  19. Why Sampadakeeya is not writing on Lokayukta report on corruption in media houses?

    ReplyDelete
  20. ಮದ್ಯಮ ವರ್ಗದ ಬಗ್ಗೆ ಒಂಚೂರೂ ಗೊತ್ತಿಲ್ಲದೇ ಇಲ್ಲಿ ಜರೆದಿರುವ ರೀತಿಯಲ್ಲೇ ಗೌರಿ ಲಂಕೇಶರನ್ನು ಜರೆಯಬೇಕೆನಿಸುತ್ತದೆ. ಎ.ಸೀ. ಕೋಣೆಯಲ್ಲಿ ಕುಳಿತು ಬಡವರ ಬಗ್ಗೆ ಹೋರಾಟ ಮಾಡುವ ಜನರು, ಮಧ್ಯಮ-ವರ್ಗ ಬಡವರ ಬಗ್ಗೆ ಕಾರುಣ್ಯ ತೋರುತ್ತಿಲ್ಲ ಎನ್ನುತ್ತಾರೆ. ಸರಕಾರೀ ಲೋಕಪಾಲ ಸರಿಯಿಲ್ಲ ಎಂದು ತಿಳಿದಿರುವ ನೀವು/ನಿಮ್ಮಂತವರು ನೀವು ಜನ ಲೋಕಪಾಲ ತಿದ್ದುಪಡಿಗೆ ಸಹಕರಿಸಿದ್ದೀರ ಗೌರಿಯವರೇ? ಏನೂ ಪ್ರಯೋಜನವಿಲ್ಲದ, ಪುಸ್ತಕದಲ್ಲಿ ಬಲಶಾಲಿಯಾಗಿರುವ "ಮಾದರಿ ಪ್ರಜಾಪಭುತ್ವ"ಕ್ಕಿಂತ, ಸೌಮ್ಯ ಸರ್ವಾಧಿಕಾರ (ನೀವಂದಂತೆ ರಾಕ್ಷಸ) ಮೇಲು ಎನಿಸುತ್ತದೆ ನನಗೆ. ಇದೇ ಮಧ್ಯಮ ವರ್ಗ ಬುದ್ಧಿ ಜೀವಿಗಳ ಬಗ್ಗೆ ಅತಿಯಾದ ದ್ವೇಷವನ್ನು ಹೊಂದಿದೆ. ಏಕೆಂದರೆ, ಅವರು ಮಾಡಿದ ಹೋರಾಟ ಏನೂ ಬದಲಾವಣೆ ತಂದಿಲ್ಲ ಸಮಾಜದಲ್ಲಿ. ಪ್ರಶಸ್ತಿ, ಸನ್ಮಾನ, ಮನ್ನಣೆಗೋಸ್ಕರ ಮಾಡುವ ಹೋರಾಟ ಯಾವ ಬಡವರ/ಮಧ್ಯಮ ವರ್ಗದ ಬವಣೆ ತೀರಿಸೀತು ಅಲ್ಲವೇ?

    ReplyDelete
  21. ಗೌರಿ ಲಂಕೇಶ್ ಅವರೇ ನಿಮಗೊಂದು ಸಲಹೆ. ನಿಮ್ಮ ಚಿಂತನೆ ಇಮೆಚ್ಯೂರ್ ರೀತಿಯಲ್ಲಿದೆ ಎಂಬುದು ನನ್ನ ಅನಿಸಿಕೆ. ಮಧ್ಯಮ ವಗ೯ ಇದುವರೆಗೂ ಯಾವುದೇ ಚಳವಳಿಯಲ್ಲಿ ಧುಮುಕಿಲ್ಲ. ಈಗ ಭ್ರಷ್ಟಾಚಾರ ಹೋಗುತ್ತೆ ಎಂಬ ಭ್ರಮೆಯಲ್ಲಿ ಬದುಕುತ್ತಿದೆ ಎಂದು ಬರೆದಿದ್ದೀರಲ್ಲಾ, ನಿಮಗೆ ಏನನ್ನಬೇಕು. ನಿಮ್ಮ ಮಾತನ್ನೇ ತೆಗೆದುಕೊಳ್ಳೋಣ, ಸರಿ ಇದುವರೆಗೆ ಬಂದಿರಲಿಲ್ಲ. ಈಗ ಬಂದಿದ್ದಾರಲ್ಲ. ನಿಮಗೆ ಗೊತ್ತಿರಲಿ ಈ ದೇಶದಲ್ಲಿ ಭ್ರಷ್ಟತೆಯ ಕಪಿ ಮುಷ್ಠಿಗೆ ಹೆಚ್ಚಾಗಿ ಸಿಲುಕಿರುವವರು ಈ ಮದ್ಯಮವಗ೯ವೇ. ಅದು ಭ್ರಷ್ಟಾಚಾರ ಎಂಬುದು ಗೊತ್ತಿರುತ್ತೆ. ಆದರೆ ಧ್ವನಿಯೇ ಇರುವುದಿಲ್ಲ. ಅಂತ ನೊಂದವರ ಪಾಲಿಗೆ ಅಣ್ಣಾ ಹೀರೋ ಆಗಿದ್ದಾರೆ. ಆಗಲಿ ಬಿಡಿ, ಈಗ ಹೋರಾಟ ಆರಂಭವಾಗಿದೆ ಎಂದಿಟ್ಟುಕೊಳ್ಳಿ. ಹಾಗೆಯೇ ಸ್ವೀಕರಿಸಿ... ಹೀಗೆಕೇ ಸಿನಿಕತನದಿಂದ ಚಿಂತಿಸುತ್ತೀರಿ.

    ಬಿಂದು ಮಾಧವ

    ReplyDelete
  22. Please give very Bad and Worst options for these kind of articles. It will be very helpful

    ReplyDelete
  23. Corrupation in publice can lokpal clean it
    send this email address
    anand.kabburi881@gmail.com

    ReplyDelete
  24. ನನಗಂತೂ ಈ ಗೌರಿಯವರ ವಾದದಲ್ಲಿ ತುಂಬಾ ತಪ್ಪು ಕಾಣಿಸ್ತಿದೆ.ಇಅವರುಗಳ ಪ್ರತೀ ವಾದದಲ್ಲೂ 'ಸಾಮಾಜಿಕ ನ್ಯಾಯ ಬಂದೇ ಬರುತ್ತೆ.ಯಾರಿಗೂ ಉತ್ತರದಾಯಿಯಲ್ಲದ ವ್ಯವಸ್ಥೆ ಎನ್ನುವ ಇವರು, ಇದೇ ಮಾತನ್ನು ನksಅಲೈಟ್ಸ್ ಗೂ ಹೇಳಿದ್ದಾರ? ನಂಗೆ ಓದಿದ ನೆನಪಿಲ್ಲ..ಇನ್ನೂ ತುಂಬಾ ಇದೆ.

    ReplyDelete
  25. estella chinte madoru yake janalokapalnfnu vppikollabaradu?

    ReplyDelete
  26. bhrastachara vonde samasyeyalla. summane gullebisuva anna gang ethare samasyegallannu mucchidalu prayatnisuttide. petrol, gas, aharadhanyagala bele arike adru thuti bicchada anna gang mownavagiddeke.
    kariyanna

    ReplyDelete
  27. ಇದರಲ್ಲಿ ಒಂದು ಅಂಶ ಒಪ್ಪುತ್ತೆನೆ ಒಮ್ಮೆಯೂ ರೈತರ, ಬಡವರ, ದೀನದಲಿತರ ಪರವಾಗಿ ಪ್ರತಿಭಟಿಸದವರು ಇಂದು ಬೀದಿಗಿಳಿದು ಈ ಮಧ್ಯಮ ವರ್ಗ ಇವತ್ತು ಭ್ರಷ್ಟಾಚಾರ ನಿಮೂ೵ಲನೆಗೆ ತೊಡೆತಟ್ಟಿ ನಿಂತಿದೆ.ಆದಿರಲಿ ಮೇಡಂ ನಮ್ಮ ರೈತರು ತಾನು ಬೆಳೆದ ಬೆಳೆಗೆ ಬೆಂಬಲವಿಲ್ಲದೆ ಪ್ರತಿಭಟಿಸಿದಾಗ ನಿಮ್ಮಂತ educated ನಮ್ಮ ಅಂತ uneducated ಅವರುಗಳಿಗೆ ಎಂದು ಬೀದಿಗಿಳಿದು ಬೆಂಬಲ ಸೂಚಿಸಿದ್ದೀವಿ? ನಾವುಗಳೇ ಇಷ್ಟೇ ಅನ್ನಿಸೂತ್ತೇ ಅಲ್ವಾ!!!!!

    ReplyDelete
  28. L P G (liberalization privatization globalization )policy led to the growth of more corruption ...

    ReplyDelete