ಸೋನಿಯಾ ಗಾಂಧಿ ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಕ್ಯಾನ್ಸರ್ ಆಗಿರಬಹುದು ಎಂಬುದು ಮೀಡಿಯಾ ಊಹೆ. ಕಾಂಗ್ರೆಸ್ ಪಕ್ಷ ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನೇನು ಒದಗಿಸಿಲ್ಲ. ಅವರು ಬೇಗ ಗುಣಮುಖರಾಗಲಿ. ಮನುಷ್ಯತ್ವ ಉಳ್ಳವರು ಹೇಳುವ ಮಾತು ಇದು.
ಆದರೆ ಸೋನಿಯಾ ಖಾಯಿಲೆ ಕುರಿತ ಸುದ್ದಿಗಳು ಹೊರಬರುತ್ತಿದ್ದಂತೆ ಅದಕ್ಕೆ ಫೇಸ್‌ಬುಕ್, ಟ್ವಿಟರ್‌ಗಳಂಥ ಸಾಮಾಜಿಕ ತಾಣಗಳಲ್ಲಿ ಬರುತ್ತಿರುವ ಪ್ರತಿಕ್ರಿಯೆಗಳು ಹೇಸಿಗೆ ಹುಟ್ಟಿಸುತ್ತವೆ. ಸೋನಿಯಾಗೇ ಆರೋಗ್ಯ ಚೆನ್ನಾಗೇ ಇದೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಹಣ ಮುಚ್ಚಿಡಲು ಹೋಗಿದ್ದಾರೆ ಎನ್ನುತ್ತವೆ ಕೆಲವು ಪ್ರಭೃತಿಗಳು. ಇಂಡಿಯಾದಲ್ಲಿ ಆಸ್ಪತ್ರೆಗಳು ವೈದ್ಯರುಗಳು ಇರಲಿಲ್ಲವೇ? ವಿದೇಶಕ್ಕೆ ಏಕೆ ಹೋಗಬೇಕಿತ್ತು ಎಂದು ಪ್ರಶ್ನಿಸುತ್ತಾರೆ ಇನ್ನಷ್ಟು ಮುಠ್ಠಾಳರು. ಕೆಲವರ ಫೇಸ್‌ಬುಕ್ ಸ್ಟೇಟಸ್‌ಗಳನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೂ ಹಿಂಜರಿಕೆಯಾಗುತ್ತದೆ. ಇದೇ ಒಂದು ಖಾಯಿಲೆಯಂತೆ ಒಬ್ಬರಿಂದ ಒಬ್ಬರಿಗೆ ಹರಡುತ್ತ ಎಲ್ಲ ಕಡೆಯೂ ಕೊಳಕು ಗಬ್ಬು ನಾರುತ್ತಿದೆ. ವಿಕಿಲೀಕ್ಸ್‌ನಲ್ಲಿ ಸ್ವಿಜ್ ಬ್ಯಾಂಕ್ ಅಕೌಂಟುಗಳನ್ನು ಹೊಂದಿರುವವರ ಪಟ್ಟಿ ಹೊರಬಂದಿದೆ ಎಂದು ಸುಳ್ಳೇಸುಳ್ಳು ಸುದ್ದಿಗಳನ್ನು ಸೃಷ್ಟಿಸಿ, ಅದರಲ್ಲಿ ಸೋನಿಯಾ, ಕುಮಾರಸ್ವಾಮಿಯವರ ಹೆಸರುಗಳನ್ನು ಸೇರಿಸಿ, ಅದನ್ನೇ ಆಧಾರವಾಗಿಟ್ಟುಕೊಂಡು ಚರ್ಚೆ ನಡೆಸುತ್ತಿದ್ದಾರೆ ಕೆಲವು ತರಲೆಗಳು.
ಸೋನಿಯಾ ಗಾಂಧಿ ಒಂದು ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗು ಈಗ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಯುಪಿಎ ಒಕ್ಕೂಟದ ಅಧ್ಯಕ್ಷರು. ಯಾರಿಗಾದರೂ ಅವರ ಅಥವಾ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷದ ಕುರಿತು ಸಿಟ್ಟು, ಆಕ್ರೋಶವಿದ್ದರೆ ಆರೋಗ್ಯಕರವಾಗಿ ಚರ್ಚಿಸುವ ಅವಕಾಶವಿರುತ್ತದೆ. ಡೆಮಾಕ್ರಸಿ ಇರುವುದೇ ಹಾಗೆ. ಆದರೆ ಒಬ್ಬ ಹೆಣ್ಣುಮಗಳ ಕುರಿತು, ಅದೂ ಆಕೆ ಅನಾರೋಗ್ಯದಿಂದ ಬಳಲುವಾಗ ಅದನ್ನೇ ಕೊಳಕಾಗಿ ವಿಶ್ಲೇಷಿಸುವ ಜನರಿಗೆ ಏನು ಹೇಳುವುದು. ಸೋನಿಯಾಗಿರುವ ಖಾಯಿಲೆ ದೇಹಕ್ಕೆ ಸಂಬಂಧಿಸಿದ್ದು, ಅದು ವಾಸಿಯಾಗುತ್ತದೆ. ಆದರೆ ಇಂಥವರ ಮನಸ್ಸುಗಳಲ್ಲೇ ಕ್ಯಾನ್ಸರ್, ಏಡ್ಸ್‌ಗಳಿವೆಯಲ್ಲ ಅದು ವಾಸಿಯಾಗುವುದು ಹೇಗೆ?
ಬಹುತೇಕ ಇಂಥ ವರಸೆಯ ಪ್ರಚಾರದಲ್ಲಿ ತೊಡಗಿರುವವರು ತಥಾಕಥಿತ ದೇಶಭಕ್ತರು. ದೇಶಭಕ್ತರದ್ದೇ ಪಾರ್ಟಿಯಾದ ಭಾರತೀಯ ಜನತಾ ಪಕ್ಷದ ಮುಖಂಡರು ಕಳೆದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರ ವಿದೇಶೀ ಮೂಲವನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸಿದ್ದರು. ಬಿಜೆಪಿಯ ಬಹುತೇಕ ಘಟಾನುಘಟಿ ಮುಖಂಡರೆಲ್ಲ ಇಟಾಲಿಯನ್ ಸೋನಿಯಾ ಕೈಗೆ ಅಧಿಕಾರ ಕೊಡಬೇಡಿ ಎಂದೇ ಭಾಷಣ ಮಾಡಿದ್ದರು. ಆದರೆ ಜನರು ಬೇರೆಯದೇ ತೀರ್ಮಾನ ಮಾಡಿದ್ದರು. ಇನ್ನೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಅದೇ ಯುಪಿಎ ಒಕ್ಕೂಟವನ್ನು ಅಧಿಕಾರಕ್ಕೆ ತಂದಿದ್ದರು. ಬುದ್ಧಿವಂತ ದೇಶಭಕ್ತರು ಸೋನಿಯಾ ಭಾರತೀಯಳೇ ಅಲ್ಲ ಎಂದು ಬಿಂಬಿಸಲು ಎಷ್ಟೆಲ್ಲಾ ಹರಸಾಹಸ ನಡೆಸಿದರೂ ಅದು ಫಲ ಕೊಡಲಿಲ್ಲ. ಯಾಕೆಂದರೆ ದೇಶದ ಜನಸಾಮಾನ್ಯರು ಈ ತರ್ಕವನ್ನು ಒಪ್ಪಲಿಲ್ಲ.
ನಿಜ, ಯುಪಿಎ ಸರ್ಕಾರ ಈಗ ಹಗರಣಗಳಲ್ಲಿ ಮುಳುಗಿ ಹೋಗಿದೆ. ೨ಜಿ, ಕಾಮನ್ವೆಲ್ತ್‌ನಿಂದ ಹಿಡಿದು ಭ್ರಷ್ಟಾಚಾರದ ಹಲವಾರು ಪ್ರಕರಣಗಳಲ್ಲಿ ಅದು ಸಿಕ್ಕುಬಿದ್ದಿದೆ. ಅದಕ್ಕೆ ಯುಪಿಎ, ಕಾಂಗ್ರೆಸ್ ಬೆಲೆ ತೆರಲೇಬೇಕು. ಈಗಾಗಲೇ ಸಾಕಷ್ಟು ಭ್ರಷ್ಟರು ಜೈಲು ಸೇರಿದ್ದಾರೆ. ಇನ್ನಷ್ಟು ಮಂದಿ ಮುಂದೆಯೂ ಹೋಗುತ್ತಾರೆ. ಒಂದು ವೇಳೆ ಸೋನಿಯಾ ಮತ್ತವರ ತಂಡವೂ ಎಲ್ಲ ಹಗರಣಗಳಲ್ಲಿ ಭಾಗಿಯಾಗಿದ್ದರೆ ಅವರನ್ನು ಜನರೇ ತಿರಸ್ಕರಿಸುತ್ತಾರೆ.
ಹಾಗೆಂದ ಮಾತ್ರಕ್ಕೆ ಕ್ಯಾನ್ಸರ್‌ನಂಥ ಖಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಸತ್ತೇ ಹೋಗಲಿ ಎಂದು ಬಯಸುವವರ ಮನಸ್ಥಿತಿಗೇನಾಗಿದೆ? ಸೋನಿಯಾ ಅವರ ಅರೆನಗ್ನ ಚಿತ್ರಗಳನ್ನು ಸೃಷ್ಟಿಸಿ ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿರುವವರು ನಿಜವಾಗಿಯೂ ಹೆಣ್ಣಮಕ್ಕಳನ್ನು ಪೂಜಿಸುವ, ಗೌರವಿಸುವ ಪರಂಪರೆಗೆ ಸೇರಿದವರಾ? ಇಂಥ ವಿಕೃತರೆಲ್ಲ ತಮ್ಮನ್ನು ತಾವು ದೇಶಭಕ್ತರು, ಧರ್ಮಭಕ್ತರು ಎಂದು ಹೇಳಿಕೊಳ್ಳುವುದಾದರೂ ಹೇಗೆ?
ಸೋನಿಯಾಗಾಂಧಿಯೋ, ವಾಜಪೇಯಿಯೋ, ದೇವೇಗೌಡರೋ ಯಾರೇ ಅನಾರೋಗ್ಯಕ್ಕೆ ಒಳಗಾದರೂ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುವುದು ಮನುಷ್ಯತ್ವದ ಕ್ರಿಯೆ. ಇಂಥ ಸಂದರ್ಭದಲ್ಲೂ ಹೇಟ್ ಕ್ಯಾಂಪೇನ್‌ಗಳನ್ನು ನಡೆಸುತ್ತ ಕೊಳಕು ಮಾತುಗಳನ್ನಾಡುವವರು ನಿಜವಾದ ಅರ್ಥದಲ್ಲಿ ರೋಗಗ್ರಸ್ಥರು. ಅವರು ಬೇಗ ಗುಣಮುಖರಾಗಬೇಕಿದೆ. ಗುಣಮುಖರಾಗಲಿ ಎಂಬುದು ನಮ್ಮ ಹಾರೈಕೆ.
ಟ್ವಿಟರ್, ಫೇಸ್ ಬುಕ್ ಕೀಳು ಅಭಿರುಚಿ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ ತಾಣಗಳಾಗಿ ರೂಪ ಪಡೆಯುತ್ತಿವೆ. ಯಾರ ಬಗ್ಗೆ, ಏನು ಬೇಕಾದರೂ ಬರೆದು ಎಲ್ಲರೂ ಓದುವಂತೆ ಮಾಡುವ ಸಾಧ್ಯತೆ ಈ ತಾಣಗಳಿಗಿದೆ. ಆ ಸಾಧ್ಯತೆ ದುರುಪಯೋಗವಾಗುತ್ತಿರುವುದು ವಿಪರ್ಯಾಸ. ನೀವು ಹೇಳಿರುವಂತೆ ಹುಸಿ ದೇಶಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಹೇಟ್ ಕ್ಯಾಂಪೇನ್ ನಲ್ಲಿ ತೊಡಗಿಸಿಕೊಂಡಿದ್ದಾರೆ.
ReplyDeleteಸೋನಿಯಾ ಗಾಂಧಿಯವರಲ್ಲಿ ಒಬ್ಬಳು ಜವಾಬ್ದಾರಿಯುತ, ವಾತ್ಸಲ್ಯಮಯಿ ತಾಯಿಯನ್ನು ನಾನು ಗುರುತಿಸಿದ್ದೇನೆ. ತಾಯಿಯಾದವಳು ಎಂದೂ ಯಾರಿಗೂ ಕೆಡುಕನ್ನು ಬಯಸಲಾರಳು. ಅಂಥವರನ್ನು ವಿಕೃತ, ರೋಗಗ್ರಸ್ಥ ಮನಸ್ಥಿತಿಯವರು ಮಾತ್ರ ಸಾರಾಸಗಟಾಗಿ ದೂಷಿಸಲು, ಅವಮಾನಿಸಲು ಸಾಧ್ಯ. ಸಾವಿನ ಹೊಸ್ತಿಲಲ್ಲಿಯೂ ಕ್ರೌರ್ಯ ಮೆರೆಯುವವರು ಕನಿಕರಕ್ಕೆ ಮಾತ್ರ ಅರ್ಹರು
ReplyDeleteಬೇಸರವಾಗುತ್ತದೆ.ಹಿಂದು ಧರ್ಮ ಪ್ರವಾಹಪತಿತರ ಕರ್ಮ ಎಂದಿದ್ದರು ಶಂ.ಬಾ.ಜೋಶಿ.ಅದೀಗ ಒಂಥರ ಮನೋವಿಕಾರಿಗಳ, ಹೃದಯಹೀನರ ಕರ್ಮವಾಗುತ್ತಿದೆ.ಸಂಸ್ಕಾರ,ಸಂಸ್ಕೃತಿಗಳ ಬಗ್ಗೆ ಮಾತಾಡುವ ಸಂಘ ಪರಿವಾರ ತನ್ನ ಸಂತಾನ ಏನಾಗುತ್ತಿದೆ ಎಂದು ಯೋಚಿಸುತ್ತದೆಯೆ ಎಂದರೆ, ಗುಜರಾತಿನಲ್ಲಿ ಹಿಂದುವಾದಿಗಳು ನಡೆಸಿದ ನರಮೇಧವನ್ನು "ಹಿಂದು ಜಾಗೃತಿ" ಎಂದು ವ್ಯಾಖ್ಯಾನಿಸಿದ ಅಶೋಕ್ ಸಿಂಘಾಲ್ ನಂಥವರು ನೆನಪಾಗಿ, ಇದು ಇಷ್ಟೆ ಎನ್ನಿಸುತ್ತದೆ.ಭವಿಷ್ಯದಲ್ಲಿ ಭಾರತ ನುಚ್ಚು ನೂರಾದರೆ ಅದರ ಬೀಜಗಳು ಹಿಂದು ಮಹಾಸಭಾದ ಹುಟ್ಟಿನಲ್ಲಿವೆ ಎನ್ನುವದನ್ನು ಚರಿತ್ರೆ ದಾಖಲಿಸುತ್ತದೆ.
ReplyDelete"ಅವರನ್ನು ಜನರೇ ತಿರಸ್ಕರಿಸುತ್ತಾರೆ."
ReplyDeleteನಿಮ್ಮ ನಿರೀಕ್ಷೆ ನಿಜವಾಗಲೆಂಬ ಸದಾಶಯ! ಅದೇ... ಭಾಗಿಯಾಗಿದ್ದರೆ....
ಬರೆದವರು ರೋಗಗ್ರಸ್ಥರೆಂಬುದೇನೋ ನಿಜ. ಆದರೂ ತಾವೂ ಬಿಜೆಪಿ ವಿಷಯ ಪ್ರಸ್ತಾಪಿಸಿದ್ದರ ಉದ್ದೇಶ ಅರ್ಥವಾಗಲಿಲ್ಲ. ಲೇಖನ ಓದಿದೊಡನೆ ಎಲ್ಲೋ ತಾವು ಬಿಜೆಪಿಯವರೇ ಇದ್ದನ್ನು ಮಾಡಿದ್ದಾರೆ ಎಂದು ಹೇಳಲು ಬಯಸಿರುವಂತಿದೆ .
ReplyDelete@ ಸಂಪಾದಕೀಯ
ReplyDeleteನಿಮಗೆ ಸೋನಿಯಾಳ ಮೇಲೆ ಏಕಿಷ್ಟು ಪ್ರೀತಿ? ಬಹುಶಃ ನಿಮಗೆ ಸೋನಿಯಾಳ ಇನ್ನೊಂದು ಕರಾಳ ಮುಖ ಪರಿಚಯವಿದ್ದಂತಿಲ್ಲ.
ಆಕೆಯ ಇನ್ನೊಂದು ಬದಿಯ ಪರಿಚಯ ಮಾಡಿಕೊಳ್ಳಬೇಕಾದರೆ ಜನತಾಪಾರ್ಟಯ ವೆಬ್ ಸೈಟಿನಲ್ಲಿರುವ ಡಾ|| ಸುಬ್ರಹ್ಮಣ್ಯಂಸ್ವಾಮಿಯವರ ಲೇಖನಗಳನ್ನು ಓದಿ
ಅದರ ಕೆಲವು ಲಿಂಕ್ ಗಳನ್ನು ಹಾಗು ಯುಟ್ಯೂಬಿನ ಲಿಂಕ್ ಗಳನ್ನು ಕೊಟ್ಟಿದ್ದೇನೆ
http://www.janataparty.org/sonia.html
http://www.youtube.com/watch?v=1mjdFujlVwo&feature=related
http://www.youtube.com/watch?v=z5As3uAc0vU&feature=related
http://youtu.be/yvi2OwHC2i0
http://www.youtube.com/watch?v=6vX64jdbJh0
http://bengalunderattack.blogspot.com/2009/04/kgb-paid-money-to-sonia-rahul-rajiv.html
http://en.wikipedia.org/wiki/Rahul_Gandhi#Swiss_Bank_Accounts
http://www.bharat-swabhiman.com/forum/viewtopic.php?f=6&t=188
http://www.janataparty.org/pressdetail.asp?rowid=58
ಎಸ್. ಗುರುಮೂರ್ತಿಯವರ ಲೇಖನವನ್ನು ನೋಡಿ
http://expressbuzz.com/Opinion/Columnists/who-will-probe-first-familys-billions/62676.html
ದೇಶದ ಪ್ರಧಾನಿಯನ್ನೇ ಕೈಗೊಂಬೆ ಮಾಡಿಕೊಂಡಿರುವ ಮಹಿಳೆಯ ಬಗ್ಗೆ ಜನಸಾಮಾನ್ಯರು ಏನು ತಾನೆ ಮಾಡಬಲ್ಲರು? ಅವರು ಆಕೆಯ ಬಗ್ಗೆ ಒಂದಿಷ್ಟು ಬರೆಯುತ್ತಿದ್ದಾರೆ ಅಷ್ಟೆ. ಇಷ್ಟಕ್ಕೆ ನೀವು ಅಂತರಜಾಲ ತಾಣದಲ್ಲಿ ಬರುತ್ತಿರುವ ವಿಮರ್ಶೆಗಳಿಗೆ ನೀವು ಹೇಸಿಗೆ ಹುಟ್ಟಿಸುತ್ತಿವೆ ಎನ್ನುತ್ತಿದ್ದೀರಿ, ಇದು ನಾಚಿಕೆಗೇಡು.
ದರಿದ್ರ ಮನಸ್ಸಿನ ವಿಕೃತರು ಮಾತ್ರ ಇಂಥಹ ಕೆಲಸಗಳನ್ನು ಮಾಡುವುದು...
ReplyDeleteಇಂತಹ ಮತಿಹೀನರಿಗೆ ಧಿಕ್ಕಾರ......
ಇದೊಂದು ವ್ಯವಸ್ಥಿತ ಸಂಚು. ಈ ಹಿಂದೆಯೊ ಮಾನ್ಯ ಪ್ರಧಾನ ಮಂತ್ರಿಗಳನ್ನು, ಕೇಂದ್ರ ಸಚಿವರುಗಳನ್ನು, ಸೋನಿಯಾಜಿ ಅವರನ್ನು ಖಳರಂತೆ ಬಿಂಭಿಸುವ ಹಲವಾರು ವಿಡಿಯೊ ಕ್ಲಿಪ್`ಗಳನ್ನು, ಚಿತ್ರಗಳನ್ನು ಮತ್ತು ಬರಗಳನ್ನು 'ಪೇಸು, ಟ್ವಿಟ್ಟು, ಬ್ಲಾಗು...' ಇತ್ಯಾದಿ ಅಸಾಮಾಜಿಕ ತಾಣಗಳಲ್ಲಿ ಹಂಚುತ್ತಾ ವಿಕೃತ ಆನಂದ ಪಡುತ್ತಿರುವುದು ಕಂಡು, ಇಂತಹ ವಿಕೃತ ಹುಸಿ ಭಕ್ತರ ಬಗ್ಗೆ ಹೇಸಿಗೆ ಎನಿಸಿತು. ಟೀಕಿಸುವಾಗಲೂ ಸಭ್ಯತೆ ಮೀರಬಾರದು, ನೈತಿಕತೆಯ ಅರಿವು ಅಷ್ಟೇ ಮುಖ್ಯ. ಅಯ್ಯೊ ಬಿಡಿ, ಇವರ ಬಗ್ಗೆ ಮಾತನಾಡಿದರೆ, ಕೊಚ್ಚೆಯಲ್ಲಿ ಬಿದ್ದು ಮೇಲೆ ಬರುವ ಹಂದಿಯ ಮೇಲೆ ನೀರು ಚೆಲ್ಲಿ ತೊಳೆದಂತೆ, ಕೊಚ್ಚೆ ಸಿಡಿಸಿಕೊಂಡಂತೆ, ಹಂದಿ ತನ್ನ ಕೆಲಸ ಮುಂದುವರೆಸಿದಂತೆ... ಅಯ್ಯೊ ಪಾಪ!! ಸುರೇಶ್ ಕಾಂತ
ReplyDeleteThis comment has been removed by the author.
ReplyDeleteಜವಾಬ್ದಾರಿ ಸ್ಥಾನದಲ್ಲಿರುವ ಮಾಧ್ಯಮಗಳೇ ರಾಖಿ ಸಾವಂತ್ ಮತ್ತು ಸ್ವಾಮಿ ಬಾಬಾ ರಾಮದೇವ್ ರ ಕಾಲ್ಪನಿಕ ಹನಿಮೂನ್ ಬಗ್ಗೆ ರೋಚಕತೆಯಿಂದ ಪ್ರಕಟಿಸುತ್ತಿರುವಾಗ, ಜನಸಾಮಾನ್ಯರು ತಾನೇ ಏನು ಮಾಡಿಯಾರು? ...ನೈತಿಕತೆ ಮೇಲಿನಿಂದ ಪ್ರಾರಂಭವಾಗಬೇಕು! ...ಪ್ರವೀಣ್ ಕುಮಾರ್ ಶೆಟ್ಟಿ
ReplyDeleteತಮ್ಮನ್ನು ತಾವು ದೇಶಭಕ್ತರು, ಧರ್ಮಭಕ್ತರು ಎಂದು ಹೇಳಿಕೊಳ್ಳುವ ಕೆಲವು ವಿಕೃತರು ಖಾಯಿಲೆಬಿದ್ದ ಜೀವ ಸೋನಿಯಾಗಾಂಧಿಯ ಅರೆನಗ್ನ ಚಿತ್ರಗಳನ್ನು ಅಪ್ ಲೋಡ್ ಮಾಡುತ್ತ ತಾವು ಸ್ಯಾಡಿಸ್ಟ್ ಗಳಿಗೆ ಏನೂ ಕಮ್ಮಿಯಿಲ್ಲ ಎಂದು ನಿರೂಪಿಸುತ್ತಿದ್ದಾರೆ. ಕ್ರಿಟಿಕ್ ನಾವೂ ಮಾಡುತ್ತೇವೆ, ಆದರೆ ಕರಂದ್ಲಾಜೆಗೆ ಟೂಪೀಸ್ ಹಾಕಿ, ಸುಷ್ಮಾನ ಸ್ವಿಮ್ ಸೂಟ್ ನಲ್ಲಿ ನಿಲ್ಲಿಸಿ ಖುಷಿಪಡುವಷ್ಟು ವಿಕೃತ ಮನಸ್ಥಿತಿ ನಮಗ್ಯಾರಿಗೂ ಇಲ್ಲ. ಆದಷ್ಟು ಬೇಗ ಕೆಲ ಸನ್ಮಾನ್ಯ ವಿಕೃತರಿಗೆ ತಲೆಯಲ್ಲಿ ಮಿದುಳು ಮೊಳೆಯಲಿ, ಅವರೂ ಎರಡು ಕಾಲಿನ ಮನುಷ್ಯರಂತೆ ವರ್ತಿಸಲಿ ಎಂಬುದು ಜನಪರ ಆಶಯವುಳ್ಳವರ ನಿರೀಕ್ಷೆ. ಟಿ.ಕೆ. ದಯಾನಂದ
ReplyDeleteHey Ram!?!?!!?
ReplyDelete-Manik Bhure
ಪ್ರತಿಕ್ರಿಯೆ ನೋಡಿ 1ಮಾತು ಹೇಳಬೇಕು ಅಂತನ್ಸುತ್ತೆ; ಯಾರು ಏನು ಹೇಳ್ತಾರೋ ಹೇಳಲಿ ಬಿಡಿ ಅವರ ಮನಸ್ಸಿನ ಸಕೃತಿ/ವಿಕೃತಿ ಹೊರಗೆ ಬಂದನಂತರ ತಾನೆ ತನ್ನರಿವೇ ತನಗೆ ಗುರುವಾದಾಗ ಈ ಥರಾ ಉಪದೇಶ ಮಾಡುವ ನಿಮ್ಮ ಇಲ್ಲವೇ ವಿಕೃತ ಎಂದು ನೀವು ಕರೆದಿರುವವರ ಮನಸ್ಥಿತಿ ಸರಿಹೋಗುತ್ತೆ. ವಿಮರ್ಶೆ ಮಾಡಿದವರನ್ನು ವಿಕೃತರು ಎಂದು ಹೇಳುವ ನೀವು ಒಂದೊಮ್ಮೆ ರಾಜ್ಯದ ಕೆಲ ಮಾಧ್ಯಮದವರು ಮಾಡ್ತಿರೋ ಚೇಷ್ಟೆ ನೋಡಿ.. ಆ ಕುರಿತು ಏನು ಹೇಳ್ತೀರಿ...! ವಿಮರ್ಶೆ ಸ್ವಿಕರಿಸುವ ಮನೋಭಾವ ಬೆಳೆಯಲಿ ರಚನಾತ್ಮಕ ಟೀಕೆಗಳಿರಲಿ ಅಂತಾ ಆಶಿಸೋಣವೇ...
ReplyDeleteಸಾಯಿಬಾಬಾರವರ ಕೊನೆಗಾಲದಲ್ಲಿ ಸಂಪತ್ತಿನ ಲೆಕ್ಕಾಚಾರದಲ್ಲಿ ಮುಳುಗಿ ತೇಲಿದವರು ನಾವಲ್ಲವೇ?
ReplyDeleteಹಾಗಾಗಿ,
"ಸೋನಿಯಾಗಾಂಧಿಯೋ, ವಾಜಪೇಯಿಯೋ, ದೇವೇಗೌಡರೋ ಯಾರೇ ಅನಾರೋಗ್ಯಕ್ಕೆ ಒಳಗಾದರೂ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುವುದು ಮನುಷ್ಯತ್ವದ ಕ್ರಿಯೆ."
ಎನ್ನುವ ಪ್ರಗತಿಪರರ ಮಾತಿಗೆ ಅರ್ಥವೇನು?
I feel pity for both sides. First she is suffering from cancer and making false propaganda not only against Sonia but against anyone is wrong.
ReplyDeleteBut why the royal family hiding all the details about her illness?everything is kept in secret including her stay in HOSPITAL
Secondly,criticising Sonia and patriotism is some what different sir...dont mixup the two issues....
Thirdly even at any point of time had this Sonia raised any voice against nude portrayal of Hindu god..godesses..by Hussain?
Congress suffered much always because of its own faults and wrongs..Gandhi family is not an exclusion to it...
When Sonia shows her taste and standard allowing people like DIGVIJAY SINGH to utter anything against anybody...i firmly do believe that its her fate to become a target for false propaganda at her bad time.
I as a human being,believing in democracy pray with almighty for her speedy recovery
ಜಿ.ಎಸ್. ಶ್ರೀನಾಥರೇ ನಿಮ್ಮ ಬಗ್ಗೆ ಕನಿಕರವಾಗುತ್ತಿದೆ.
ReplyDeleteI pitty the Editor. As an journalist you need to be neutral and judge the issue. I think you are a congress man. being as an INDIAN see to the issue i agree that RSS or other persons are making some wrong comments but not all obligations are wrong. many are with proof and yes Sonia Ji has done some good things in bringing good policy but she is not soo clean as you projected here. if you think properly Sonia and congress men have made mistakes which INDIA is suffering and will suffer. think twice before you write some thing on some body here.
ReplyDeleteSonia'S SO CALLED SACRIFICE OF GIVING UP PRIME MINISTER SHIP in 2004.Ha ha what a comedy...
ReplyDeleteAccording to a Provision in the Citizenship Act a Foreign National who becomes a Citizen of India, is bounded by the same restrictions, which an Indian would face, If he/she were to become a Citizen of Italy.
(Condition based on principle of reciprocity)
[READ ANNEXURE- 1&2]
Now Since you can't become a PM in Italy, Unless you are born there.
Likewise an Italian Citizen can't become Indian PM, unless He/She is not born here!
Dr. SUBRAMANIYAM SWAMI (The Man who Exposed the 2G Scam) sent a letter to
the PRESIDENT OF INDIA bringing the same to his Notice. [READ LETTER TO THE PRESIDENT IN ANNEXURE -3]
PRESIDENT OF INDIA sent a letter to Sonia Gandhi to this effect, 3:30 PM, May 17th, 2004.
Swearing Ceremony was scheduled for 5 PM the same Day.
Manmohan Singh was brought in the Picture at the last moment to Save Face!!
Rest of the SACRIFICE DRAMA which she choreographed was an EYE WASH!!!
In fact Sonia Gandhi had sent, 340 letters, each signed by different MP to the PRESIDENT KALAM, supporting her candidacy for PM.
One of those letters read, I Sonia Gandhi, elected Member from Rai Bareli, hereby propose Sonia Gandhi as Prime Minister.
So SHE was Pretty INTERESTED! Until She came to know the Facts!
So She didn't make any Sacrifice, It so happens that SONIA GANDHI couldn't
have become the PM of INDIA that time.
Hope Sampadakeeya would get well soon. It is suffering from A serious mental illness.
ReplyDeleteOpen your eyes wide open to see what Sonia did all these years. And in connection with cancer issue a congress led newspaper "Tehlka" reported(plotted) at first.
Please buy a kiwi polish as soon as she would return from US, you would have had your job fixed.
ಸಂಪಾದಕೀಯ
ReplyDeleteನಿಜವಾಗಿಯೂ ನಿಮ್ಮ ನಡೆ ಸರಿಯಾಗಿದೆ. ಆದರೆ ಅಲ್ಲೇ ನಿಮ್ಮ ಹುಳುಕು ಅಥವಾ ವೀಕ್ ನೆಸ್ ಎದ್ದು ಕಾಣುತ್ತಿದೆ. ಅದೇನೆಂದರೆ ಸಮಾಜದೆಡಗಿನ ನಿಮ್ಮ ಕುರುಡುತನ ಅಥವಾ ನಿಮ್ಮ ಕಾಂಗ್ರೆಸ್ ಅಥವಾ ಸೋನಿಯಾ ಪ್ರೀತಿ. ಮಧ್ಯದಲ್ಲಿ ನೀವು ಎಷ್ಟೇ ಪ್ರಯತಿಸಿದರೂ ಅದು ಎದ್ದು ಕಾಣುತಿತ್ತು.
ಹಾಗೆಯೇ ಇಲ್ಲಿನ ಕಾಮೆಂಟ್ ಗಳಲ್ಲಿ ಕೆಲವನ್ನು ಬಿಟ್ಟು ನಾನು ಕಂಡಿದ್ದು ಕೇವಲ ನೀವು ಹೇಳಿದೆಲ್ಲಾ ಸರಿ ಎಂಬ ಭಾವನೆ ಅಷ್ಟೆ.
ಮನುಶ್ಯತ್ವ ಇರದ Doggy Singh ಅನ್ನು ಪಕ್ಷದ ವಕ್ತಾರನಂತೆ ಇಟ್ಟುಕೊಂಡಿದ್ದು ಯಾವ ಪುರುಷಾರ್ಥಕ್ಕಾಗಿ?
ReplyDeleteಮನುಶ್ಯತ್ವ ವನ್ನು ಹೇಳುವ ನೀವು ಇಟಲಿಯ God Father ಗಳನ್ನು ಮರೆತಂತಿದೆ.
ನಾವು ಭಾರತೀಯರು ಬ್ರಿಟೀಷರು ಹೋದರು ಅಂದ ಮಾತ್ರಕ್ಕೆ ಇಟಲಿಯವರಿಗೆ ಏನು ಅನ್ನಬಾರದೆ?
ಈ ಲೆಖನ ಬರೆದ ಮಹಾನುಭಾವರು ಯಾರೋ ?
ReplyDeleteಸೋನಿಯಾ ಗಾಂಧಿ ಮತ್ತು ಅವರ ಪಕ್ಷ ಭ್ರಷ್ಟರಿಂದಲೇ ತುಂಬಿಕೊಂಡಿದೆ ನಿಜ ಆದರೆ ಒಂದು ಪಕ್ಷ ಮತ್ತು ಒಂದು ಧರ್ಮವನ್ನು ದ್ವೆಷಿಸುವುದೇ ದೇಶ ಭಕ್ತಿ ಅಂದುಕೊಂಡಿರುವ ಇಂಟರ್ನೆಟ್ ದೇಶ ಭಕ್ತರಿಗೆ ಒಬ್ಬ ಮಹಿಳೆ ಯಾವ ದೇಶಕ್ಕೆ ಸೇರಿದ್ದರೋ ಭಾರತದಲ್ಲಿ ಅವಳಿಗೆ ಸಮಾನ ಗೌರವವಿದೆ ಎಂಬ ಕನಿಷ್ಠ ಜ್ಞಾನವೋ ಇಲ್ಲ ಅನಿಸುತ್ತಿದೆ. ಯಾರಾದರು ಈ ರೀತಿಯಲ್ಲಿ ಇವರ ತಾಯಿ , ತಂಗಿಯರಿಗೆ ಹಿಯಾಳಿಸಿದರೆ ಇವರು ಸುಮ್ಮನಿರುತ್ತಾರ ?
ReplyDeleteದೇಶ ಭಕ್ತಿಯ ನಾಟಕವಾಡಿ ಅಧಿಕಾರಕ್ಕೆ ಬಂದು ಕರ್ನಾಟಕದ ಸಂಪತ್ತನ್ನು ಲೂಟಿ ಮಾಡಿ, ದಿನಕ್ಕೆ ನಾಲ್ಕು ಷೋ ಇರುವ ಸಿನಿಮಾ ತರಹ ಅಧಿಕಾರಕ್ಕಾಗಿ ನಾಯಿಗಳಂತೆ ಬೀದಿಯಲ್ಲಿ ಕಚ್ಚಾಡುತ್ತಿರುವ ನಕಲಿ ದೇಶ ಭಕ್ತರು ಬೇರೆಯವರಿಗೆ ಬುದ್ಧಿ ಹೇಳುವ ಅಗತ್ಯವಿಲ್ಲ ಅನಿಸುತ್ತದೆ. ಅದೇ ರೀತಿ ಇವರ ನಾಟಕವನ್ನು ನೋಡಿ ಮೂಕರಂತೆ ಕೂತಿರುವ ಇವರ ಮಾತೃ ಸಂಘಟನೆಯ ನಕಲಿ ದೇಶ ಭಕ್ತಿ ಜನರಿಗೆ ಗೊತ್ತಾಗಿದೆ. ಇನ್ನೂ ಇವರು ಹೊಸ ನಾಟಕದ ಬಗ್ಗೆ ಯೋಚಿಸಿದರೆ ಒಳಿತು.
Rahul Roy
ಅದ್ಸರಿ ನನಗೆ ಇಲ್ಲಿ ಒಂದು ಅರ್ಥ ಆಗದೆ ಇರೋದು ಅಂದ್ರೆ ಯಾರೋ FACEBOOK , Twitter ಗಳಲ್ಲಿ ಬರೆದರೆ ಅವರನ್ನು ದೇಶಭಕ್ತರು ಎಂದು ವ್ಯಂಗ್ಯವಾಡಿ ಧರ್ಮವನ್ನು ಎಳೆತಂದಿರುವದು?ಅವರು ಯಾವ ಧರ್ಮದವರು,ಯಾವ ಪಕ್ಷದವರು ಎಂಬುದರ ಬಗ್ಗೆ ನಿಖರ ಮಾಹಿತಿಗಳಿವೆಯೇ? ಮುಖ್ಯವಾಗಿ Anonymous ಹೆಸರಿನಲ್ಲಿ ಬಂದು ಮೋದಿಗೆ, ಹಿಂದೂ ಧರ್ಮದ ಬಗ್ಗೆ ಅನಾವಶ್ಯಕವಾಗಿ ಕಿಡಿಕಾರುವ ಜನರಿಗೆ ಅಸಹ್ಯ ಖಾಯಿಲೆ ಅಂಟುಗೊಂಡಿರುವದಂತೂ ಹೌದು. ದಯವಿಟ್ಟು ತಮ್ಮ ಪೂರ್ವಗ್ರಹ ಮನಸ್ತಿತಿಯನ್ನು ಪಕ್ಕಕ್ಕಿಟ್ಟು ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಬೇಕಾಗಿ ವಿನಂತಿ.
ReplyDeleteಗೆಳೆಯ/ಗೆಳತಿಯರೆ,
ReplyDeleteಸೋನಿಯಾಜಿ ಬೇಗ ಗುಣಮುಖರಾಗಲಿ ಎಂಬ ಹಾರೈಕೆಯೊಂದಿಗೆ.... ನಾನು ಕೂಡ ದೇಶಭಕ್ತ ಸಂಘಟನೆ ಒಡನಾಟ ಹೊಂದಿರುವವನು. ನಿಮ್ಮ ಲೇಖನ ಓದಿದ ಬಳಿಕ, ಸೋನಿಯಾ ಕುರಿತು ಯಾರು ವಿಕೃತವಾಗಿ ಬರೆದಿರಬಹುದು ಎಂದು ಫೇಸ್ ಬುಕ್, ಬ್ಲಾಗ್ ಹಾಗೂ ಇಂಟರ್ನೆಟ್ ಜಾಲಾಡಿದೆ. ಎಲ್ಲಿಯೂ ನೀವು ಹೇಳಿದಂತ ಲೇಖನಗಳು ಸಿಗಲಿಲ್ಲ. ಅವು ಇದ್ದರು ನನಗೆ ಸಿಗದೇ ಇರುವ ಚಾನ್ಸ್ ಇರುತ್ತೆ ಬಿಡಿ. ಆದರೆ, ಸೋನಿಯಾಜಿ ಬಗ್ಗೆ ವಿಕೃತವಾಗಿ ಬರೆದಿದ್ದರೆ ಎನ್ನುತಲೇ, ನೀವು ಇನ್ನೊಂದು ರೀತಿಯ ವಿಕ್ರುತವನ್ನು ಮೆರೆದಿದ್ದಿರಿ !ಇದೊಂದು ರೀತಿ, ನಿಮ್ಮನ್ನು ಆತ ಸೂ... ಮಗ ಎಂದು ಬೈದ ಎಂದು ಧೀರೇಂದ್ರ ಗೋಪಾಲ್ಗೆ ಆತನ ಸಹಚರ ಹೇಳಿದಂತಿದೆ !
ಕೆಲವರಿಗೆ ಇದೊಂದು ರೋಗ. ಬೇರೆಯವರಿಗೆ ನೀತಿ ಬೋಧನೆ ಮಾಡಲು ಹೊರಟವ, ಮೊದಲು ಅನೀತಿ ಹುಡುಕಾಡುತ್ತಾನೆ. ಅದು ಇದ್ದರೆ ಸರಿ. ಇಲ್ಲದಿದ್ದರೆ, ತಾನೇ ಒಂದನ್ನು ಸೃಷ್ಟಿಸಿ, ನೀತಿ ಮಾತಿಗೆ ನಿಲ್ಲುತ್ತಾನೆ.
ನಿಮ್ಮದು ಇದೆ ರೀತಿ ಎಡವಟ್ಟು ಅಗಿರಬಹುದು. ವಾಸ್ತವವಾಗಿ, ಇಲ್ಲಿ ಸೋನಿಯಾ ಟೀಕಿಸಿರುವ ಯಾರು ಕೂಡ, ಅವರ ಆರೋಗ್ಯದ ಬಗ್ಗೆ ತಪ್ಪು ಅಭಿಪ್ರಾಯ ದಾಖಲಿಸಿಲ್ಲ. ಆದರೆ, ನೀವು ಲೇಖನದಲ್ಲಿ ನಕಲಿ ದೇಶಭಕ್ತರು ಎಂದು ಪದೇ ಪದೇ ಕಾಲೆಳಿಯುವ ಮೂಲಕ. ಪ್ರದರ್ಶಿಸಿರುವ ವಿಕ್ರುತತೆಯ ವಿರುದ್ಧ, ತಮ್ಮ ಕೋಪ-ತಾಪ ಪ್ರದರ್ಶಿಸಿದ್ದಾರೆ !
ನಿಜವಾಗಿಯೂ ಕಾಯಿಲೆಯಲ್ಲಿ ಮಲಗಿರುವವರನ್ನು ಟೀಕಿಸುವ ರೋಗಪೀಡಿತ ಮನಸ್ಸುಗಳು ಇರುತ್ತೇವೆ ಎಂಬುದನ್ನು ಯಾರು ನಿರಾಕರಿಸುವುದಿಲ್ಲ. ಆದರೆ ಇಂತವರು ದೇಶಭಕ್ತ ವಲಯದಲ್ಲೂ ಇರುತ್ತಾರೆ, ಸಂಪಾದಕೀಯ ವರ್ಗದಲ್ಲೂ, ಪ್ರಗತಿಪರರಲ್ಲೂ, ವಿಚಾರವಾದಿ ಗುಂಪಲ್ಲು... ಎಲ್ಲೆಲ್ಲು ಇರುತ್ತಾರೆ. ಆದರೆ ಅವರ ಸಂಖ್ಯೆ ಕಡಿಮೆ ಇರುತ್ತೆ. ಹಾಗಾಗಿ ಅವರನ್ನು ನಿರ್ಲಕ್ಷಿಸುವುದು ವಿವೇಕ. ಎಲ್ಲರಿಗೂ ಗೊತ್ತಾಗುವಂತೆ ಬೈಯುವುದು ಅವಿವೇಕ.
-ಪಾರ್ವತಿ ಚೀರನಹಳ್ಳಿ, ಮೈಸೂರು
I like it Parvathi! and ppl who kept saying "internet deshbhaktaru" - Hello Swmami - Freedom fightu jagrutavaagiddue - karapatragalinda..eega adu.. Internet roopdallide - Tilakoli !
ReplyDelete- Kiran
ಸಂಪಾದಕೀಯ ... ನಿಮ್ಮ ಎಲ್ಲಾ ಪೋಸ್ಟ್ ಗಳ ವ್ಯಾಲ್ಯೂ ಈ ಒಂದೇ ಪೋಸ್ಟ್ ನಿಂದ ಢಮಾರ್ ? You surely could hold your pseudo-secular mindset ...... talking BJP and other political parties and suddenly ಯಾರಾದ್ರೂ ಸೋನಿಯಾ ಬಗ್ಗೆ ಬರೆದರೆ ನಿಮಗೆ ಹೇಸಿಗೆ ಹುಟ್ಟಿಸುತ್ತದೆ ..... ಈ ಗೋಮುಖವ್ಯಾಘ್ರತನ ಕಂಡು ನಮಗೆ ಹೇಸಿಗೆಯಾಗುತ್ತಿದೆ ......
ReplyDeleteIf you really want to talk about politics ... go join politics .... if you are already on the payroll of a party then get a hike ... becos u r doing a good job
neevu yako congress party inda sariyagi sambhavane padedanthe kanutte :-)
ReplyDelete