Tuesday, September 27, 2011

ಸಾಹಿತ್ಯ ಓದದ ಪತ್ರಕರ್ತ ಜ್ಞಾನಪೀಠದ ಜಡ್ಜ್ ಮೆಂಟ್ ಕೊಟ್ಟ ವೈಚಿತ್ರ್ಯ!


ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ನಂತರ ಭೈರಪ್ಪನವರ ಅಭಿಮಾನಿಗಳಲ್ಲಿ ಒಮ್ಮೆಲೆ ನಿರಾಶೆ, ಅಸಹನೆ, ಕೋಪ ಭಾವನೆಗಳು ಮೂಡಿದವು. ಇಂಧದೇ ಭಾವನೆಗಳಿಗೆ ಕೆಲವರು ಬರಹ ರೂಪ ಕೊಟ್ಟು ಕೆಂಡಕಾರಿದರು. ಪಾಟೀಲ ಪುಟ್ಟಪ್ಪನವರು ಮಾನಸಿಕ ಸಮತೋಲನ ಕಳೆದುಕೊಂಡವರಂತೆ ಮಾತನಾಡಿದರು. ಇದೇ ಧಾಟಿಯಲ್ಲಿ ಅಂಕಣ ಬರೆದವರು ಸ್ಟಾರ್ ಆಫ್ ಮೈಸೂರು ಪತ್ರಿಕೆ ಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ. ಇದು ಚುರುಮುರಿ ಬ್ಲಾಗ್‌ನಲ್ಲೂ ಪ್ರಕಟಗೊಂಡಿದೆ. ಸೀಮಿತವಾದ ಅಧ್ಯಯನದ ಆಧಾರದ ಮೇಲೆಯೇ ಗಂಭೀರವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಪತ್ರಕರ್ತರು ನಿಷ್ಣಾತರು ಎನ್ನುವ ಆರೋಪಕ್ಕೆ ಗಣಪತಿ ಬರಹ ಪಕ್ಕಾ ಉದಾಹರಣೆ.

ಬರಹದ ಆರಂಭದಲ್ಲಿಯೇ ಮಹಾತ್ಮಗಾಂಧಿಗೆ ನೊಬೆಲ್ ಪ್ರಶಸ್ತಿ ಬಾರದಿರುವುದನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸುತ್ತಾರೆ. ಕೊನೆ ಸಾಲುಗಳಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗದ ಭೈರಪ್ಪನವರನ್ನು ಮಹಾತ್ಮ ಗಾಂಧಿಗೆ ಹೋಲಿಸಿ ತಮ್ಮ ಭೋಳೆತನವನ್ನು ಪ್ರದರ್ಶನಕ್ಕಿಡುತ್ತಾರೆ. ಪಾಟೀಲ ಪುಟ್ಟಪ್ಪನವರ ಮಾತನ್ನು ಸಂಪೂರ್ಣವಾಗಿ ಒಪ್ಪುವ ಗಣಪತಿ, ಮೊದಲೇ ತಮ್ಮ ಓದಿನ ಮಿತಿಯನ್ನು ಸ್ಪಷ್ಟಪಡಿಸುತ್ತಾರೆ. ನಾನೇನು ಕನ್ನಡ ಪ್ರಧ್ಯಾಪಕನಲ್ಲ ಅಥವಾ ಕನ್ನಡ ಸಾಹಿತ್ಯ ಜಗತ್ತನ್ನು ಆಳವಾಗಿ ಅಧ್ಯಯನ ಮಾಡಿದವನೂ ಅಲ್ಲ. ಹಾಗಂತ ನಾನೇನು ದಡ್ಡನಲ್ಲ, ಕನ್ನಡದ ಪ್ರಮುಖ ಪುಸ್ತಕಗಳ ಬಗ್ಗೆ ಪ್ರಕಟವಾಗುವ ವಿಮರ್ಶೆಗಳನ್ನು, ಪ್ರತಿಕ್ರಿಯೆಗಳನ್ನು ಆಗಾಗ ಓದಿದ್ದೇನೆ ಮತ್ತು ಕೆಲವು ಕೃತಿಗಳನ್ನು ಓದಿದ್ದೇನೆ, ಇದು ಅವರ ಹೇಳಿಕೆ.

ಈ ಮಾತಿನಲ್ಲಿ ಅವರು ಕಂಬಾರರ ಅಥವಾ ಭೈರಪ್ಪನವರ ಯಾವುದೇ ಕೃತಿಯನ್ನು ಓದಿರುವುದಾಗಿ ಹೇಳುವುದಿಲ್ಲ. ವಿಮರ್ಶೆ ಅಥವಾ ಪ್ರತಿಕ್ರಿಯೆಗಳನ್ನು ಓದಿರಬಹುದು. ವಿಶಿಷ್ಟ ಅಂದರೆ ತಾವು ಓದಿರುವ ವಿಮರ್ಶೆ, ಪ್ರತಿಕ್ರಿಯೆಗಳ ಆಧಾರದ ಮೇಲೆಯೇ ಸುದೀರ್ಘ ಅಭಿಪ್ರಾಯ ಮಂಡಿಸುವ ದಾರ್ಷ್ಟ್ಯ ಅವರದು. ಗಣಪತಿಯವರ ಪ್ರಕಾರ ಭೈರಪ್ಪನವರಿಗೆ ಕಂಬಾರರಿಗಿಂತ ಮೊದಲು ಜ್ಞಾನಪೀಠ ದೊರಕಬೇಕಿತ್ತು. ಪ್ರಶಸ್ತಿ ಆಯ್ಕೆ ಸಮಿತಿ ಮೊದಮೊದಲು ಯಾವುದೇ ಪಂಥದ ಪ್ರಾಬಲ್ಯವಿಲ್ಲದೆ ಕೆಲಸ ನಿರ್ವಹಿಸಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಯ್ಕೆ ಸಮಿತಿ ಎಡಪಂಥೀಯ ಆಲೋಚನೆ ಕಡೆಗೆ ವಾಲಿರುವ ಕಾರಣ ಭೈರಪ್ಪನವರಿಗೆ ಪ್ರಶಸ್ತಿ ಲಭಿಸಲಿಲ್ಲವಂತೆ.

ಇನ್ನೂ ಮುಂದೆ ಹೋಗಿ, ಮುಂದೊಂದು ದಿನ ಆಯ್ಕೆ ಸಮಿತಿ ಭೈರಪ್ಪನವರನ್ನು ಆಯ್ಕೆ ಮಾಡದಿರುವುದಕ್ಕೆ ಪಶ್ಚಾತ್ತಾಪ ಪಡಬಹುದು ಎಂದೂ ಗಣಪತಿ ಎಚ್ಚರಿಸಿದ್ದಾರೆ. ನೊಬೆಲ್ ಸಮಿತಿ ಗಾಂಧಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡದ್ದಕ್ಕೆ ಪರಿತಪಿಸುವಂತೆ, ಜ್ಞಾನಪೀಠ ಆಯ್ಕೆ ಸಮಿತಿಯೂ ಪರಿತಪಿಸಬೇಕಾಬಹುದು ಎನ್ನುತ್ತಾರೆ ಅವರು. ಭೈರಪ್ಪನವರು ಈ ಮಟ್ಟಿನ ಹೊಗಳಿಕೆಗೆ ಎಷ್ಟು ಅರ್ಹರು ಎನ್ನುವುದು ಬೇರೆ ಪ್ರಶ್ನೆ. ಆದರೆ, ಅವರ ಸಾಹಿತ್ಯ ಓದದೆ, ಅದರ ಒಳ ಹುನ್ನಾರಗಳನ್ನು ಗ್ರಹಿಸದೆ, ಹೀಗೆ ಏಕಾಏಕಿ ಗಾಂಧಿಗೆ ಹೋಲಿಸುವುದು ಸುಮ್ಮನೆ ಮಾತೆ? ಬಹುಶಃ ಅರ್ಧಂಬರ್ಧ ತಿಳಿದುಕೊಂಡ ಪತ್ರಕರ್ತ ಮಾತ್ರ ಹೀಗೆ ಮಾಡಬಲ್ಲ. ಇಂತಹ ಅನೇಕರು ನಮ್ಮ ಮಧ್ಯೆ ಇದ್ದಾರೆ.

ಕೆ.ಬಿ.ಗಣಪತಿಯವರ ವಿತಂಡವಾದ ಮಾತು ಬಾಲಿಷ ಚಿಂತನೆಗಳಿಗೆ ಈ ಕೆಳಗಿನ ಸಾಲುಗಳು ಉದಾಹರಣೆಯಾಗಬಹುದು. ಈ ಸಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ:


It is believed that S.L. Bhyrappa is branded as one with rightist orientation or as being a pro-Hindu in his writings. If this is so, one can also brand U.R. Anantha Murthy, Girish Karnad and Kambar as those with leftist orientation and as being anti-Hindu. 
Does it mean that being a rightist and pro-Hindu is a disqualification to deserve a Jananpith award while being a leftist and anti-Hindu is a qualification to deserve it?


ಮಾನ್ಯ ಕೆ.ಬಿ.ಗಣಪತಿಯವರ ಪ್ರಕಾರ ಗಿರೀಶ್ ಕಾರ್ನಾಡರು ಮತ್ತು ಯು.ಆರ್.ಅನಂತಮೂರ್ತಿಯವರು ಎಡಪಂಥೀಯ ವಿಚಾರಧಾರೆಯುಳ್ಳವರು ಮಾತ್ರವಲ್ಲ, ಅವರು ಹಿಂದೂ ವಿರೋಧಿಗಳು! ಇಂಥ ತೀರ್ಮಾನಕ್ಕೆ ಗಣಪತಿ ಹೇಗೆ ಬಂದರು? ಇದನ್ನು ಅವರು ಗೊತ್ತುಮಾಡಿಕೊಂಡಿದ್ದು ಯಾವ ಶಾಲೆಯಲ್ಲಿ ಓದುವಾಗ? ಅಥವಾ ಸೆಕ್ಯುಲರಿಸ್ಟರೆಲ್ಲ ಹಿಂದೂ ವಿರೋಧಿಗಳೇ ಆಗಿರುತ್ತಾರೆ ಎಂಬ ಗಟ್ಟಿಯಾದ ನಿಲುವು ಗಣಪತಿಯವರದಿರಬಹುದೇ? ಇದಕ್ಕೆ ಆಧಾರಗಳಾದರೂ ಏನು? ಕನಿಷ್ಠ ಪಕ್ಷ ಗಣಪತಿಯವರು ಕಾರ್ನಾಡರ ಒಂದು ನಾಟಕ ಅಥವಾ ಅನಂತಮೂರ್ತಿಯವರ ಒಂದು ಕಾದಂಬರಿಯನ್ನಾದರೂ ಓದಿರಬಹುದೇ? ಓದಿಲ್ಲದಿದ್ದರೆ ಯಾಕೆ ಇಂಥ ಅಸಹ್ಯಗಳನ್ನೆಲ್ಲ ಬರೆಯುತ್ತಾರೆ?

43 comments:

  1. KB Ganapatige kanishtha mattada saamanya tiLivaLike illa. nanna ondu pustaka bidugadeya sabhege prakashakarinda invite aagidda aata nanna pustakada bagge ondE maatannU hELalaagade, bandidda innobba atiThiya baggeyE maataadi apahaasyakke Idaagidda avivEku. inthavarindalE ella patrakartara baggeyU janarige gaurav hOguttide. ajnaana mattu avivEka pradarshana EE 'star of Mysore' na copyright.

    ReplyDelete
  2. ನಮ್ಮಲ್ಲೊಂದು ವಿಚಿತ್ರ ಆದರೆ ತುಂಬ ಕೆಟ್ಟ ಪರಿಸ್ಥಿತಿ ಬೆಳೆಯತೊಡಗಿದೆ.
    ಯಾವುದೇ ಲೇಖಕನಿರಬಹುದು ಅಥವಾ ಚಿಂತಕನಿರಬಹುದು,ಆತ ಸ್ವಲ್ಪ
    ಪ್ರಸಿದ್ಧಿಗೆ ಬರುತ್ತಿದ್ದಂತೆಯೇ ಆತನ ವಿಚಾರಧಾರೆಗಳನ್ನು,ಬರಹಗಳನ್ನು
    ಯಾವುದೋ ಒಂದು 'ಇಸಂ'ಗೆ ಸೇರಿಸಿಬಿಡುತ್ತೇವೆ.ಸ್ವತಃ ಆ ವ್ಯಕ್ತಿಗೆ ಅದು
    ಇಷ್ಟವಿದೆಯೋ ಅಥವಾ ಇಲ್ಲವೋ,ನಾವು ಮಾತ್ರ ಪಾಂಗಿತವಾಗಿ ಆತನಿಗೆ
    ಯಾವುದೋ ಒಂದು ರೈಟೋ,ಲೆಫ್ಟೋ ಏನೋ ಒಂದು ಲೇಬಲ್ಲು ಅಂಟಿಸಿ
    ಕೃತಾರ್ಥರಾಗಿ ಬಿಡುತ್ತೇವೆ.. ಇಷ್ಟಕ್ಕೂ ಬರಹಗಾರರೊಬ್ಬರ ಚಿಂತನೆಗಳನ್ನು
    ಯಾವುದೇ ಪೂರ್ವಾಗ್ರಹವಿಲ್ಲದೇ ಓದಬಹುದಾದ ಪರಿಸ್ಥಿತಿಯನ್ನು ನಮಗೇಕೆ
    ಸೃಷ್ಟಿಸಿಕೊಳ್ಳಲಾಗುತ್ತಿಲ್ಲ?
    ಭೈರಪ್ಪ ಹಿಂದೂವಾದಿ,ಅನಂತಮೂರ್ತಿ ಎಡಪಂಥೀಯ,ಇವರು ಅವರು,ಅವರು ಇವರು...ಇವೆಲ್ಲ ಅವರವರ ಬರಹಗಳಿಗಿಂತ ಅಷ್ಟು ಮುಖ್ಯವೇ?

    ReplyDelete
  3. dislike.... everyone has rights to express themselves. If Ganapathy has written that he has not read it its his modesty... and not everyone needs to read everything. People read what they like.
    If you have read Bhyrappa you would have known the facts better. I know this posting will not even be displayed here. Looks like you are next in the queue for the PEETHA.

    ReplyDelete
  4. ganapati avaranthavarannu neglect madode maddu...

    ReplyDelete
  5. yes i read the above said article from K B Ganapathi. same link is copied here. Appreciate Sampadakeeya Karnataka for your intervention article. Dr.Chandra shekar Kambar is truly deserved for this Jnanapith Award . pls note: ಒಬ್ಬ ಲೇಖಕ ಶ್ರೇಷ್ಟ ಲೇಖಕನಾಗದಿದ್ದರೂ ಪರವಾಗಿಲ್ಲ ಕನಿಷ್ಟ ಮಾನವತಾವಾದಿಯಾಗಿರಬೇಕು. ಅಂದರೆ ಸರ್ವರಿಗೂ ಸಮ ಬಾಳು ಸಮ ಪಾಲು ಎನ್ನುವ ಜೀವಪರ ತತ್ವದಲ್ಲಿ ನಂಬುಗೆ ಇರಬೇಕು.!!"
    -Lijomon

    ReplyDelete
  6. ಕೆಲವೊಂದು ಪತ್ರಕರ್ತರೇ ಹಾಗೆ,ಏನಾದರೊಂದು ಬರೆಯಬೇಕು,ಏನಾದರೊಂದು ಹೇಳುತ್ತಿರಬೇಕು.ಅಧ್ಯಯನಗಳು ಆ ಬಗ್ಗೆಯ ಮಾಹಿತಿಗಳು ಇವನ್ನು ಇಟ್ಟುಕೊಂಡು ಬರೆಯಬೇಕೆಂಬ ಕನಿಷ್ಠ ತಿಳುವಳಿಕೆ ಮರೆಯಾಗುತ್ತಿರುವದು ವಿಪರ್ಯಾಸ.ಯಾವುದನ್ನು ಓದಿಲ್ಲ ಅಂದಾದ ಮೇಲೆ ವಿಮರ್ಶೆ ಬರೆಯುವ ಅಗತ್ಯ ಆದರು ಏನು? ಬೇರೆ ವಿಶ್ಯಗಳಿಲ್ಲ್ವೆ ಲೇಖನ ಬರೆಯುವ ಚಪಲಕ್ಕೆ.
    -Raghavendra Thekkar

    ReplyDelete
  7. Arhateyannu hudukikondu gourava hoguttade.arharadavarige prashasti sikkide.yarobbara sankatakke prashasti gourava kammiyaguvudilla
    -Chanakya Dheeraj

    ReplyDelete
  8. vyakthiya vesha nodi bele kattuvanthaha neecha kattupaadu tholaga bekaagirodu avashyaka kruthiya moolaka karthr shrestanaguvanthaha kaala moodi barali endu aashisona............
    -Basheer Kinya

    ReplyDelete
  9. ಬೈರಪ್ಪ ಅಭಿಮಾನಿಗಳಿಗೆ ಬೇಸರ ತರುವುದು ಸಹಜ ಆದರೆ ಕಂಬಾರನ್ನು ತೆಗುಲುವುದು ಸರಿಯಲ್ಲ
    ಒಬ್ಬ ವ್ಯಕ್ತಿನ ಇನ್ನೊಬ್ಬ ವ್ಯಕ್ತಿಗೆ compare ಮಾಡೋದು ಯಾವುದೇ ರೀತಿಯಲ್ಲೂ ಅಸಹ್ಯ
    ಮುಂದೆ ಬೈರಪ್ಪರವರಿಗೆ ಬರಲಿ ಅಂತ ದೊಡ್ಡ ಮಟ್ಟದಲ್ಲಿ ಲಾಬಿ ಮಾಡೋಣ!!
    ಈಗ ಕಂಬಾರರಿಗೆ ಶುಭಾಶಯ ಹೇಳೋಣ!!

    ReplyDelete
  10. ಬೈರಪ್ಪ ಅಭಿಮಾನಿಗಳಿಗೆ ಬೇಸರ ತರುವುದು ಸಹಜ ಆದರೆ ಕಂಬಾರನ್ನು ತೆಗುಲುವುದು ಸರಿಯಲ್ಲ. ಒಬ್ಬ ವ್ಯಕ್ತಿನ ಇನ್ನೊಬ್ಬ ವ್ಯಕ್ತಿಗೆ compare ಮಾಡೋದು ಯಾವುದೇ ರೀತಿಯಲ್ಲೂ ಅಸಹ್ಯ. ಮುಂದೆ ಬೈರಪ್ಪರವರಿಗೆ ಬರಲಿ ಅಂತ ದೊಡ್ಡ ಮಟ್ಟದಲ್ಲಿ ಲಾಬಿ ಮಾಡೋಣ!! ಈಗ ಕಂಬಾರರಿಗೆ ಶುಭಾಶಯ ಹೇಳೋಣ!!
    -Pradeep CS

    ReplyDelete
  11. ಏನೇ ಹೇಳಿ .. ಕಂಬಾರರಿಗಿಂತ ಭೈರಪ್ಪನವರು ಜ್ಞಾನಪೀಠಕ್ಕೆ ಹೆಚ್ಚು ಅರ್ಹರು .. ಇದು ಎಲ್ಲರಿಗು ತಿಳಿದಿರುವ ವಿಷಯ... ಅದನ್ನು ಅವರಿಗೆ ಬಾರದಂತೆ ತಪ್ಪಿಸುತ್ತಿರುವ ಸಾಹಿತ್ಯ ಬಳಗದ ಒಂದು ಪಂಗಡಕ್ಕೆ ನನ್ನ ಧಿಕ್ಕಾರ !!!

    ReplyDelete
  12. ಯಾಕೋ..ಈ ಸಾಲು ನೆನಪಿಗೆ ಬಂತು.. " ಹಾಡು ಹಕ್ಕಿಗೆ ಬೇಕೇ.. ಬಿರುದು ಬಿಮ್ಮಾನಾ....? "

    ReplyDelete
  13. kambaarariginta byrappa hechu arha eMbudu avivEkada maatu. haage nOdidare bYrappa tamma vYdika budDi mattu mahiLeyara bagegina pakshapaata niluvininda prasasti padeyuv arhateyanne kaLedukoMdiddaare.

    ReplyDelete
  14. "ಏನ್ರಿ ಇದು ಅಸಹ್ಯ, ರಾಜಕೀಯ ರಂಗಕ್ಕೂ ಸಾಹಿತ್ಯ ರಂಗಕ್ಕೂ ವ್ಯತ್ಯಾಸವೇ ಇಲ್ಲವೇ?
    -ಶೇಷಾಚಲ

    ReplyDelete
  15. ಕಂಬಾರರಿಗೆ ಬಂದಿದ್ದಕ್ಕೆ ಖುಷಿ ಪಡೋಣ. ಬೈರಪ್ಪನವರಿಗೆ ಬರಬೇಕಾಗಿತ್ತು ಎಂದು ಹೇಳೋಣ. ಅವರಿಗೂ ಬರಲಿ ಎಂದೂ ಹಾರೈಸೋಣ. ಆದರೆ ಕಂಬಾರರಿಗಿಂತ ಬೈರಪ್ಪನವರ ಸಾಹಿತ್ಯ ಶ್ರೇಷ್ಠ ಎಂದಾಗಲೀ, ಅಥವಾ ಕಂಬಾರರಿಗಿಂತ ಭೈರಪ್ಪ ಹೆಚ್ಚು ಅರ್ಹ ಎಂದಾಗಲೀ ವಾದಿಸುವುದು ಇಬ್ಬರಿಗೂ ಅಪಚಾರ ಮಾಡಿದಂತೆ. ಈಗ ಕನ್ನಡಕ್ಕೆ ಬಂದಿದೆ. ನಾಳೆ ಬೈರಪ್ಪನವರಿಗೆ ಬರಲಿ. ಆಗಲೂ ಸಂತೋಷ ಪಡೋಣ. ಅದನ್ನು ಬಿಟ್ಟು ವಿಕೃತ ಮನಸ್ಸಿನವರಂತೆ, ಕೆಬಿ.ಗಣಪತಿಯಂತೆ, ಪಾಪು ಅವರಂತೆ ನಮ್ಮನ್ನುಅವಹೇಳನ ಮಾಡಿಕೊಳ್ಳುವುದು ಯಾಕೆ.

    ReplyDelete
  16. Kannada saahitya baree 'boosa' kanree! neevu yaake adara bagge ashtondu talebisi madikoltiddeera?!
    Honnur, Mangalooru

    ReplyDelete
  17. ಹನುಮಂತ ಅವರು ಪ್ರಸ್ತಾಪಿಸಿದ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅದು ಲಕ್ಷ್ಮಣ ಕೊಡಸೆ ಅವರ ಕಾಲಂ ಗಳ ಸಂಕಲನ 'ಹಾಯಿದೋಣಿ' ಬಿಡುಗಡೆ. ಪ್ರಕಾಶಕರು ಗಣಪತಿ ಅವರನ್ನು ಅಧ್ಯಕ್ಷತೆಗೆ ಕರೆದಿದ್ದರು. ನಾಣ್ಯಶಾಸ್ತ್ರ ತಜ್ಞ ನರಸಿಂಹಮೂರ್ತಿ ಪುಸ್ತಕ ಬಿಡುಗಡೆ ಮಾಡಿ ಅಂಕಣ ಬರಹದ ಸಾಹಿತ್ಯಿಕ ಮೌಲ್ಯವನ್ನು ಪ್ರಸ್ತಾಪಿಸಿದರೆ, ಅಧ್ಯಕ್ಷರಾಗಿದ್ದ ಗಣಪತಿ ತಮ್ಮ ಭಾಷಣವನ್ನು ನರಸಿಂಹಮೂರ್ತಿ ಅವರೊಡಗಿನ ಒಡನಾಟಕ್ಕೆ ಮೀಸಲಿಟ್ಟರು. ಒಮ್ಮೆಯೂ ಕೊಡಸೆ ಅವರ ಹೆಸರನ್ನು ಕೂಡ ಪ್ರಸ್ತಾಪಿಸಲಿಲ್ಲ. ಕೊಡಸೆ ಅವರು ಎರಡು ವರ್ಷ ಮೈಸೂರಿನಲ್ಲಿ ವರದಿಗಾರರ ಕೂಟದ ಸ್ಥಾಪಕ ಅಧ್ಯಕ್ಷರಾಗಿದ್ದರಂತೆ. ಆ ಅಭಿಮಾನಕ್ಕೆ ಮೈಸೂರಿನಲ್ಲಿ ಕಾರ್ಯಕ್ರಮ ಏರ್ಪಡಿಸಿ ಸಂಪಾದಕ ಅಂತ ಗಣಪತಿಯನ್ನು ಕರೆದಿದ್ದರೆ ಅವರ ವರ್ತನೆ ಅಷ್ಟು ಕೆಟ್ಟದಾಗಿತ್ತು. ಅಂಥವರಿಂದ ಸಾಹಿತ್ಯದ ಬಗ್ಗೆ ಒಳ್ಳೆಯ ಮಾತನ್ನು ನಿರೀಕ್ಷಿಸುವುದು ಹೇಗೇ?

    ReplyDelete
  18. ಹಾಗೊಮ್ಮೆ ಭ್ಹೈರಪ್ಪನವರಿಗೆ ಪ್ರಶಸ್ತಿ ಬಂದು ಕಂಬಾರರ ಅಭಿಮಾನಿಗಳು ಅದಕ್ಕೆ ನಿರಾಶೆ ವ್ಯಕ್ತಪ್ದಿಸಿದ್ದಿದ್ದರೆ ಸಂಪಾದಕೀಯವು ಅದನ್ನು ಖಂಡಿತವಾಗಿಯೂ ವಿರೋಧಿಸುತ್ತಿರಲಿಲ್ಲ. ಯವುದೇ ಒಬ್ಬ ವ್ಯಕ್ತಿಯು ಹೀಗೆ ನಿರಾಶೆ ವ್ಯಕ್ತಪಡಿಸುವುದು ಸಹಜ. ಅದಕ್ಕೆ ಅನೇಕ ಕಾರಣಗಳು ಇರುತ್ತದೆ. ಅದರಲ್ಲಿ ಮೊದಲ್ನೆಯದು ಅಭಿಮಾನ,ಎರಡನೆಯದು ತಾನು ನಂಬಿರುವ ಸಿದ್ದಾಂತ ಹೀಗೆ ಹಲವಾರು ಕಾರಣಗಳು.ಈ ರೀತಿ ಅಸಹನೆ ವ್ಯಕ್ತಪಡಿಸಿದವರು ಭೈರಪ್ಪನವರ ಅಭಿಮಾನಿಗಳೆ ಹೊರತು ಸ್ವತಹ ಭೈರಪ್ಪನವರು ಎಲ್ಲಿಯು ತನ್ನ ಅಸಹನೆಯನ್ನು ವ್ಯಕ್ತಪಡಿಸಿಲ್ಲ. ಹಾಗೊಮ್ಮೆ ಅವರು ಈ ರೀತಿಯಾಗಿ ಎಲ್ಲಾದರೂ ಹೇಳಿಕೆ ನೀಡಿದ್ದರೆ ಖಂಡಿತವಾಗಿಯೂ ಸಂಪಾದಕೀಯದ ಮುಖಾಂತರ ಚರ್ಚಿಸೋಣ. ಯಾವುದೋ ಒಂದು ಪತ್ರಿಕೆಯಲ್ಲಿ ಭೈರಪ್ಪನವರ ಅಭಿಮಾನಿಯೊಬ್ಬರು ಬರೆದದ್ದನ್ನು ಹಿಡಿದುಕೊಂಡು ಅದರ ಮುಖಾಂತರ ಭೈರಪ್ಪನವರನ್ನು ಅವಮಾನ ಮಾಡುತ್ತಿರುವುದು ಸಂಪಾದಕೀಯಕ್ಕೆ ಶೋಭೆ ತರುವುದಿಲ್ಲ. ಕಂಬಾರರಿಗೆ ಅಭಿನಂದನೆಗಳು .

    ReplyDelete
  19. Sampadakeeya is becoming biased these days. It is a bitter truth that Kambar doesn't deserves it.

    ReplyDelete
  20. "Sri Kambar was my lecturer at L.B.College Sagar during 1965 - 1969. There is no doubt that Kambar is a unique poet and deserves "Jnana peetha" award. Bhyrappa is also unique in his field of writing. Though not today, he may get the award tomorrow. There is no point in grumbling and saying that Bhyrappa should have got the award. While saying so, the Abhimaanigalu of bhyrappa are sounding thast the awartd should not have been goven to Kambar. This type of saying and comparisons are inhuman and un-intellectual."
    -Ramesh Megaravalli

    ReplyDelete
  21. ಸಂಪಾದಕರೆ ರೋಗಗ್ರಸ್ತ ಮನಸು ಎಲ್ಲಿದ್ರೂ ಅದರಿಂದ ಹರಡೋದು ರೋಗವೇ ಹೊರತು ಅದಕ್ಕೆ ಬೇಕಿರೋ ಮದ್ದಲ್ಲ, ಅದ್ಯಾಕೋ ಇತ್ತೀಚಿಗೆ ಇಂತ ಸುದ್ದಿಗಳ ಹಿಂದೆ ಬಿಳ್ತಾ ಇರೋದನ್ನ ನೋಡಿದ್ರೆ ಖಾಲಿ ಅಗ್ತಾ ಇದ್ದಿರೇನೋ ಅನಿಸುತ್ತೆ ಬೇಸರ ಮಾಡ್ಕೋಬೇಡಿ

    ReplyDelete
  22. ಕನ್ನಡ ಸಾಹಿತ್ಯ ಸಾಗರ ಎಷ್ಟೊಂದು ವಿಶಾಲವಾಗಿದೆ ಎಂದರೆ , ಜ್ನಾನಪೀ ಠ ವೇ ಆರ್ಹತೆ ಯ ಮಾನ ದಂಡ ವಾದಲ್ಲಿ ಅದಕ್ಕೇ ಅರ್ಹ ರಾಗಿಯೂ ಅದನ್ನು ಪಡೆಯದ ಮಹಾನುಭಾವರ ದಂಡೇ ಕನ್ನಡದಲ್ಲಿದೆ.ನನ್ನ ಅಲ್ಪಮತಿಗೆ ತೋರಿದ ಕೆಲ ಹೆಸರುಗಳು ..ಡಿ.ವಿ.ಜಿ. , ರಾಜರತ್ನಂ, K.S.ನರಸಿಂಹ ಸ್ವಾಮಿ. ಶ್ರೀರಂಗ, ಪೂಚಂತೇ , ಶಿವರುದ್ರಪ್ಪ ,....ಮುಂ. .. ಹೀಗಿರುವಾಗ ಅವರಿಗೆ ಸಿಕ್ಕಿದೆ ಇವರಿಗೆ ಸಿಕ್ಕಿಲ್ಲ ಎಂದು ಕೂಗಾಡುವದು ಸಣ್ಣತನ .ಕಂಬಾರರಿಗೆ ಸಿಕ್ಕಿದೆ , ಖುಷಿ ಪಡೋಣ . ಭೈರಪ್ಪನವರಿಗೆ ಸಿಕ್ಕಿಲ್ಲ. ಹಾಗಂತ ಕಂಬಾರರನ್ನು ಹಳಿಯುವದು ಮಾನಸಿಕ ನೀಚತನದ ಪರಮಾವಧಿ. ಭೈರಪ್ಪನವರಿಗೆ ಸಿಗಬೇಕಿತ್ತು .ಅರ್ಹತೆ ಒಂದೇ ಮಾನ ದಂಡ ವಾದಲ್ಲಿ ಅವರ * ಪರ್ವ * ವೊಂದೇ ಸಾಕು ಅದನ್ನು ಪಡೆಯಲು.. ಕಂಬಾರರೂ ನಮ್ಮವರೇ,ಭೈರಪ್ಪನೂ ನಮ್ಮವರೇ, ಎಲ್ಲರೂ ಕನ್ನಡ ತಾಯ ತೇರ ನೆಳೆಯುವವರೇ. ಎಲ್ಲಾರೂ ನಮ್ಮವರೇ ಅಂದುಕೊಂಡು ಮುಂದೆ ಸಾಗಿದರೆ ಜೀವನ ಸುಂದರ ಮತ್ತು ಸರಳ. ..
    -Pramod Naik

    ReplyDelete
  23. "ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠಕ್ಕೆ ಭೈರಪ್ಪನವರು ಯೋಗ್ಯರೇ ಅದರ ಬಗ್ಗೆ ಎರಡನೇ ಮಾತಿಲ್ಲ ಕಂಬಾರರು ಸಹ ಈ ಪ್ರಶಸ್ತಿಗೆ ಅರ್ಹ ಸಾಹಿತಿಯೇ ಪ್ರಶಸ್ತಿ ಬಂದಿರುವ ಈ ಸಮಯದಲ್ಲಿ ಇಲ್ಲ ಸಲ್ಲದ ಮಾತುಗಳು ಅನಾವಶ್ಯಕ ಪಾಟೀಲ್ ಪುಟ್ಟಪ್ಪರಂತಹ ಕೆಲವು ಪೂರ್ವಗ್ರಹ ಪೀಡಿತ ಸಾಹಿ(ಯಿ)ತಿಗಳು ಸುಮ್ಮನೆ ಬಡಬಡಿಸುತ್ತಿದ್ದಾರೆ ಈ ಸಂಧರ್ಭದಲ್ಲಿ ಸಾಕ್ಷಾತ್ ಭೈರಪ್ಪನವರೇ ಈಗ ಸುಮ್ಮನಿದ್ದನವನನ್ನು ದೇವರು ಗೆಲ್ಲಾ ಅನ್ನೋ ಮಾತಿಗೆ ತಕ್ಕಂತೆ ಸುಮ್ಮನಿದ್ದಾರೆ ದಯಾಮಾಡಿ ಇದು ಮುಗಿದ ಕತೆ ಹಾಗಾಗಿ ಎಲ್ಲರೂ ಒಮ್ಮೆಲೆ ಕಂಬಾರರಿಗೆ ಶುಭಹಾರೈಸಿ ಕನ್ನಡ ನಾಡಿಗೆ ಯಾರಿಗೆ ಪ್ರಶಸ್ತಿ ಬಂದರೂ ಖುಷಿ ಪಡೋಣ ಜೈ ಕರ್ಣಾಟಕ"
    -Bindu Javagal

    ReplyDelete
  24. "ಸಾಹಿತ್ಯದ ಉದ್ದೇಶ ಮನೋರಂಜನೆಯ ಜೊತೆಗೆ ವ್ಯಕ್ತಿಯ ಚಿಂತನೆಗಳಿಗೆ ಸಾಣೆ ಹಿಡಿದು ಮಾನವತಾವಾದದೆಡೆಗೆ ಕರೆದೊಯ್ಯುವುದು.http://hingyake.blogspot.com/2011/09/blog-post_27.html"

    -Ashok Kr

    ReplyDelete
  25. Does it mean that being a rightist and pro-Hindu is a disqualification to deserve a Jananpith award while being a leftist and anti-Hindu is a qualification to deserve it?

    There is no wrong in this sentence. Can you show one example wherein Leftists, secularists supporting one hindu cause? What you can show is leftists/secularists opposition to evil rituals of Hinduism. Is there any other example other than this? Has any secularist/leftist condemned any violence carried out by minorities? Has anyone sit for dharana in front of gandhi statue in Bangalore for the cause of attack on Hindus?

    After a certain period journalists starts living and believing that whatever they say is noble word and they can analyse anything. Same attitude is exhibiting by Sampadakeeya also! Now you got impression that you can comment on anything on this earth and doing the same thing!! Please introspect yourself...

    ReplyDelete
  26. Re swami, mysore mitra mattu star of mysore agenda enu antha mysore patrakartharegella gottu. kbg avara abrakadabra adra kannada roopantra chumantrana oduttale nidde maddidavaru navu. pakka capitalist agero kbgge bareyo tevalu. adake avaru bareuttale irutare, adre yaru oddade idre ayutu. -mysore journalist

    ReplyDelete
  27. "ಆಯ್ಕೆ ಸಮಿತಿ ಎಡಪಂಥೀಯ ಆಲೋಚನೆ ಕಡೆಗೆ ವಾಲಿರುವ ಕಾರಣ" ಎನ್ನುತ್ತಿದ್ದಂತೆ ನಿಮಗೆ ಉರಿಬಿದ್ದು ಹೋಗಿರುವಂತೆ ಕಾಣುತ್ತಿದೆಯಲ್ಲ? ನೇರಮಾತಿಗೆ ಖ್ಯಾತರಾಗಿದ್ದ ಶಿವರಾಮ ಕಾರಂತರು ಅನಂತಮೂರ್ತಿಯವರಿಗೆ ಪ್ರಶಸ್ತಿ ಬಂದಾಗ ಹೇಳಿದ್ದನ್ನು ನೆನಪಿಸುತ್ತೇನೆ: ಇಂತವರಿಗೆಲ್ಲ ಪ್ರಶಸ್ತಿ ಕೊಟ್ಟರೆ ಆ ಪ್ರಶಸ್ತಿಗೆ ಬೆಲೆಯೆ ಉಳಿಯುವುದಿಲ್ಲ. ಟೈಮ್ಸ್ ಗ್ರೂಪ್ ಮತ್ತು ಅವರು ಸ್ಥಾಪಿಸಿದ ಜ್ಞಾನಪೀಠ ವಿಶ್ವಸ್ಥ ಮಂಡಳಿ (Trust) ಎಡಕ್ಕೆ ವಾಲಿದೆ ಎಂದು ಯಾರೂ ಸಿದ್ದಮಾಡುವ ಅಗತ್ಯ ಇಲ್ಲ. ಅದನ್ನು ಅವರೇ ಹೇಳಿಕೊಂಡಿದ್ದಾರೆ ಬೇಕಾದಷ್ಟುಸಾರಿ. ಜ್ಞಾನಪೀಠ ಆಯ್ಕೆಸಮಿತಿ ಎಡಕ್ಕೆ ವಾಲಿರುವುದು ಸಾರ್ವತ್ರಿಕ ಸತ್ಯ ಯಾರ್ಯಾರನ್ನೋ ಬಯ್ಯುವ ಬದಲು, ಸ್ವಲ್ಪ ಓದಿ. ಅಥವಾ ನೀವೇ ಹೇಳಿದಂತೆ ನಿಮಗೆ ಒಪ್ಪಿಗೆ ಯಾಗದಿದ್ದರೆ ಓದದೇ ಇರುವ ಸ್ವಾತಂತ್ರ್ಯ ನಿಮಗಿದೆಯಲ್ಲ!!

    ReplyDelete
  28. ಗಣಪತಿ ಅವರು ತಮ್ಮದಲ್ಲದ ಕ್ಷೇತ್ರದ ಬಗ್ಗೆ ಮಾತನಾಡಿ ತಪ್ಪು ಮಾಡಿದ್ದರೆ. ಆದರೆ ಇದನ್ನೇ ನೆಪ ಮಾಡಿಕೊಂಡು ಸಂಪಾದಕೀಯ ಬೈರಪ್ಪನವರ ಅಭಿಮಾನಿ ಓದುಗರ ಬಗ್ಗೆ ಲಘುವಾಗಿ ಪ್ರಸ್ತಾಪಿಸಿರುವುದು ಸರಿಯಲ್ಲ. ಅಭಿಮಾನಿಗಳಿಗೆ ಸ್ವಲ್ಪ ಬೇಸರವಾಗಿದ್ದರು, ಅದು ತಪ್ಪಲ್ಲ.
    ಒಂದು ವೇಳೆ ಜ್ಞಾನಪೀಠ ಏನಾದರು ಬೈರಪ್ಪನವರಿಗೆ ಬಂದಿದ್ದರೆ......
    ಹತ್ತಾರು ಪಾಪುಗಳು, ನೂರಾರು ಗಣಪತಿಗಳು ಪ್ರತಿಕ್ರಯಿಸುತ್ತಿದ್ದದ್ದು ಸುಳ್ಳಲ್ಲ . ಇಂತಹ ಪಾಪು-ಗಣಪತಿ ಚಿಂತನೆಗಳಿಗೆ ಅನಂತ ಮೂರ್ತಿ, ಗೌರಿಯಂತವರು ನೇತೃತ್ವ ನೀಡುತ್ತಿದ್ದರೆನೋ. ಕನ್ನಡದ ಸಾಹಿತಿಗೆ(ಯಾರಿಗೆ ಆದರು ಸೈ) ಪ್ರಶಸ್ತಿ ಬಂದಿದೆ ಎಂದು ಶ್ರೀಸಾಮಾನ್ಯರು ಖುಷಿ ಪಡುತ್ತಾರೆ. ದೊಡ್ಡವರಲ್ಲ !

    ReplyDelete
  29. ಜ್ಞಾನಪೀಠ ಬಂದವರು ಮಾತ್ರ ಶ್ರೇಷ್ಠರು ಅನ್ನೋ ವಾದ ಎಲ್ಲೂ ಇಲ್ಲ. ಹಾಗಂತ ಗಾಂಧಿಯೊಂದಿಗೆ ಭರಪ್ಪ ಅವರನ್ನು ಹೋಲಿಕೆ ಮಾಡುವುದ ಸರಿಯಲ್ಲ. ಗಣಪತಿಯವರು ತಿಳಿಯದೇ ಬರೆಯುವುದು ಶುದ್ಧ ತಪ್ಪು.. ಯುವ ಪತ್ರಕರ್ತರಿಗೆ ನಿಮ್ಮಂತವರ ಮಾರ್ಗದರ್ಶನದ ಸೋಂಕು ತಟ್ಟಿದರೆ ಅವರು ಕನ್ನಡವನ್ನು ಇನ್ನಷ್ಟು ಹದಗೆಡಿಸಿ, ಮೂಲೆಗೆ ತಳ್ಳಿಬಿಡುತ್ತಾರೆ. ಅವರು ಹಿಂದೂ ವಿರೋಧಿ, ಇವರು ಹಿಂದೂ ಪರ ಅಂತೆಲ್ಲಾ ಬರೆದಿದ್ದಾರಲ್ಲಾ.. ನೀವು ಕನ್ನಡ ಸಾಹಿತ್ಯದ ಬಗ್ಗೆ ಏನನ್ನೂ ತಿಳಿಯದೆ ಮಾತನಾಡಿದ್ದು ಕನ್ನಡ ವಿರೋಧಿ ಧೋರಣೆಯಲ್ಲವೇ..? ಹಾಗಾದರೆ ನೀವು ಕನ್ನಡ ವಿರೋಧಿ! ಇದನ್ನು ಒಪ್ಪಿಕೊಳ್ಳಿ ನೋಡೋಣಾ?

    ReplyDelete
  30. ಯಾಕೋ ಸಂಪಾದಕೀಯದ ಬರವಣಿಗೆಯ ಧಾಟಿ ಹಾದಿ ತಪ್ಪುತ್ತಿದೆ ಎನಿಸುತ್ತಿದೆ.
    ಈ ಲೇಖನ ಓದಿದರೆ ಒಂದು ನಿರ್ದಿಷ್ಟ ವಲಯದ ಸಾಹಿತ್ಯವನ್ನು ನೆಚ್ಚಿಕೊಂಡು ಉಳಿದುದೆನ್ನು ತೆಗುಳುತ್ತಿರುವಂತೆ ಕಾಣುತ್ತದೆ.
    ಒಂದೇ ಕಡೆ ವಾಲದೇ ಮೊದಲಿನಂತೆ ತಟಸ್ಥ ರೀತಿಯಲ್ಲಿ ಬರೆಯಿರಿ.....

    ReplyDelete
  31. "No literature of creative kind should be evaluated on the basis of its ideology. It happens only in a totalitarian or a communist country. It should be
    evaluated on its pure literary quality — style, technic, use of language, rhetoric and above all, artistic merit.

    Ulysses of James Joyce is considered literature for the same reason."

    ಮುಂದುವರಿದು,

    "Having said this, I should hasten to add that I have absolutely no intention to diminish the literary capabilities of either Chandrashekar Kambar, U.R.
    Anantha Murthy or Girish Karnad. The last mentioned two are indeed intellectuals in their own right while Kambar has earned a niche for himself as a folk
    writer par-excellence."

    ಈ ಸಾಲುಗಳನ್ನು ಬಹುಶಃ ಸಂಪಾದಕರು ಗಮನಿಸಿಲ್ಲವೆನಿಸುತ್ತದೆ. ಒಂದು ವೇಳೆ ಗಮನಿಸಿದ್ದರೆ ಇಂತಹ ಬಾಲಿಶ ಲೇಖನ ಸಂಪಾದಕೀಯದಲ್ಲಿ ಪ್ರಕಟವಾಗುತ್ತಿರಲಿಲ್ಲ! ಈ ಲೇಖನ ಸಂಪಾದಕೀಯದ one-sided view ಗೆ ಒಂದು ಉತ್ತಮ ನಿದರ್ಶನ.
    ಜಯ್ ಕಂಬಾರ! ಜಯ್ ಕನ್ನಡಮ್ಮ!
    -ಶ್ರೀ

    ReplyDelete
  32. ಸಾಹಿತ್ಯದ ಬಹಳ ಮುಖ್ಯ ಗುಣ ನಿರಂತರ ಪ್ರಗತಿಶೀಲತೆ. ಓರ್ವ ಉತ್ತಮ ಸಾಹಿತಿಯ ಉತ್ತಮ ಗುಣ ಎಂದರೆ ಆತನಲ್ಲಿ ಪ್ರಗತಿಶೀಲತೆಯೆಡೆಗೆ ನಿರಂತರ ತುಡಿತ ಇರುತ್ತದೆ. ಆತ ಪ್ರತಿಗಾಮಿ ಮೌಲ್ಯಗಳನ್ನು ತನ್ನ ಸಾಹಿತ್ಯದಲ್ಲಿ ಎತ್ತಿ ಹಿಡಿಯುವ ಕೆಲಸ ಮಾಡುವುದಿಲ್ಲ. ಸಾಹಿತಿಗಳು ಚಿಂತನಶೀಲರಾಗಿರುವುದರಿಂದಾಗಿ ಪ್ರತಿಗಾಮಿ ಮೌಲ್ಯಗಳನ್ನು ವಿರೋಧಿಸುವುದು ಅವರ ಪ್ರಧಾನ ಲಕ್ಷಣವಾಗಿರುತ್ತದೆ. ಹೀಗಾಗಿ ಅವರನ್ನು ಎಡಪಂಥೀಯರು ಎಂದು ಕರೆಯುವುದು ಸಮಂಜಸವಲ್ಲ. ಹೆಚ್ಚಿನ ಸಾಹಿತಿಗಳೂ ಪ್ರಗತಿಶೀಲ ತುಡಿತ ಹೊಂದಿದವರೇ ಆಗಿರುತ್ತಾರೆ. ಹೀಗಾಗಿ ಸಹಜವಾಗಿಯೇ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿಯೂ ಪ್ರಗತಿಶೀಲತೆಯನ್ನು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವವರೆ ಇರುತ್ತಾರೆ, ಹಾಗೆ ಇರಬೇಕು ಕೂಡ. ಕನ್ನಡದ ಈವರೆಗಿನ ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ನೋಡಿದರೆ ಇದರಲ್ಲಿ ಪ್ರತಿಗಾಮಿ ಎನಿಸುವ ಚಿಂತನೆಯುಳ್ಳವರು ಯಾರೂ ಇಲ್ಲ. ಎಲ್ಲರೂ ಮಾನವೀಯ ಮೌಲ್ಯಗಳನ್ನು, ಪ್ರಗತಿಶೀಲತೆಯನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ ಎತ್ತಿ ಹಿಡಿರುವುದು ಕಂಡು ಬರುತ್ತದೆ. ಕುವೆಂಪು, ಕಾರಂತ, ಅನಂತಮೂರ್ತಿ, ಕಾರ್ನಾಡ್, ಕಂಬಾರರಂತೂ ಪ್ರಖರ ವೈಚಾರಿಕತೆಯನ್ನು ತಮ್ಮ ಕೃತಿಗಳಲ್ಲಿ ತೋರಿದವರೇ ಆಗಿದ್ದಾರೆ. ಇವರಲ್ಲೂ ಕುವೆಂಪು ಹಾಗೂ ಕಾರಂತರು ಕೃತಿಗಳಲ್ಲಿ ವೈಚಾರಿಕತೆಗೆ ಪ್ರಾಧಾನ್ಯತೆ ನೀಡಿದ್ದಾರೆ. ಹೀಗಾಗಿಯೇ ಇವರ ಕೃತಿಗಳು ಸದಾ ಕಾಲಕ್ಕೂ ನಿಲ್ಲಬಲ್ಲ ಕೃತಿಗಳು ಎನ್ನಲು ಅಡ್ಡಿಯಿಲ್ಲ.

    ಹೆಚ್ಚು ಜನ ಓದಿದ ಮಾನದಂಡದಲ್ಲಿ ಅಥವಾ ಜನಪ್ರಿಯ ಸಾಹಿತಿಯ ಮಾನದಂಡದಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡುವುದಿಲ್ಲ. ಜನಪ್ರಿಯತೆಯ ಆಧಾರದಲ್ಲಿ ಅಥವಾ ಹೆಚ್ಚು ಜನ ಓದಿದ್ದಾರೆ ಎಂಬ ಆಧಾರದಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದಾದರೆ ಸಾಪ್ತಾಹಿಕಗಳಲ್ಲಿ ಧಾರಾವಾಹಿಗಳನ್ನು ಬರೆಯುವ ಸಾಹಿತಿಗಳಿಗೆ ಜ್ಞಾನಪೀಠ ನೀಡಬೇಕಾಗಿತ್ತು. ಈ ನಿಟ್ಟಿನಿಂದ ನೋಡಿದರೆ ಯಂಡಮೂರಿ ವೀರೇಂದ್ರನಾಥ್ ಅವರಂತಹ ಜನಪ್ರಿಯ ಸಾಹಿತಿಗೆ ಜ್ಞಾನಪೀಠ ಸಿಗಬೇಕಿತ್ತು, ಸಿಕ್ಕಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುವುದು ಸಮಂಜಸವಾಗುವುದೇ ಎಂದು ಪ್ರಜ್ಞಾವಂತರು ಯೋಚಿಸಬೇಕು. -ಆನಂದ ಪ್ರಸಾದ್

    ReplyDelete
  33. ಇಲ್ಲಿ ಭೈರಪ್ಪ ಅಥವಾ ಕಂಬಾರರಿಗೆ ಜ್ಞಾನಪೀಠ ಸಿಕ್ಕಬೇಕಿತ್ತು ಎಂಬುದು ವಾದವಲ್ಲ.ಇಂಥ ಪದಗಳು ನಮ್ಮ ಅಸಹ್ಯವನ್ನು ಹೊರಹಾಕುತ್ತವೆ. ಕಂಬಾರರಿಗೆ ಬಂದಿದೆ ಎಂಬುದಕ್ಕೆ ಈಗ ನಾವು ಖುಶಿಪಡೋಣ. ಭೈರಪ್ಪನವರು ಜ್ಞಾನಪೀಠಕ್ಕೆ ಅರ್ಹರು ಎಂಬುದರಲ್ಲಿ ಸಂಶಯ ಇಲ್ಲ. ಮುಂದೆ ಬಂದೆ ಬರುತ್ತೆ. ಆದ್ರೆ ಇವರಿಗೆ ಮೊದ್ಲು ಬರಬೇಕಿತ್ತು ಎಂಬ ವಾದಕ್ಕೆ ಅರ್ಥವೇ ಇಲ್ಲ.

    ReplyDelete
  34. ಹ ಹ ...ಸ್ವಾಮೀ ..ಬೈರಪ್ಪನವರಿಗೆ ಜ್ಞಾನಪೀಠ ಬರಬೇಕೋ ಬೇಡವೋ ಹೇಳುವುದು ನಂಗೆ ಗೊತ್ತಿಲ್ಲ.ಬಹುಶಃ ಅದಕ್ಕೆ ಸಿಕ್ಕಾಪಟ್ಟೆ ಅಧ್ಯಯನ ಬೇಕು.
    ಆದರೆ ಅನಂತಮೂರ್ತಿ ಮತ್ತೆ ಗಿರೀಶ್ ಕಾರ್ನಾಡ್ ಹಿಂದೂ ವಿರೋಧಿ ಮನೋಭಾವದವರು ಅನ್ನುವುದು ಅಂಗೈ ಹುಣ್ಣಿನಷ್ಟೇ ಸ್ಪಷ್ಟ.ಅದರಲ್ಲೂ ಅನಂತಮೂರ್ತಿ ಸಾಹಿತ್ಯಲೋಕದ ರಾಜಕಾರಣಿ ಅಂತ ಜಗಜ್ಜಾಹೀರು ಆಗಿರೋ ವಿಷಯ.ಅದನ್ಯಾಕೆ ಒಪ್ಪಿಕೊಳ್ಳಬಾರದು??

    ReplyDelete
  35. ಮಾನ್ಯರೆ, ಒಬ್ಬ ಸಾಮಾನ್ಯ ಪತ್ರಕರ್ತನ ಬರಹಕ್ಕೆ ಇಷ್ಟೊಂದು ಮಹತ್ವ ನೀಡುವ ಅಗತ್ಯವಿಲ್ಲ ಎನ್ನುವುದು ನನ್ನ ಖಚಿತ ನಿಲುವು. ಯಾರನ್ನೂ ಮತ್ತಿನ್ಯಾರಿಗೋ ಹೋಲಿಸುವುದು ಮುರ್ಖತನ. ಹಾಗೆ ಹೋಲಿಕೆ ಮಾಡುವುದು ಅವರವರಿಗೆ ಮಾಡುವ ಅವಮಾನ ಕೂಡ ಹೌದು. ಅವರಿಗೆ ಅವರೇ ಸರಿ ಸಾಟಿ ಎನ್ನುವ ಪ್ರಾಥಮಿಕ ತಿಳುವಳಿಕೆ ಅಗತ್ಯವಾಗಿ ಇರಬೇಕು. ಇಷ್ಟಿದ್ದೂ ತೌಲನಿಕ ಅಧ್ಯಯನ ಮಾಡುವ ಪದ್ಧತಿ ನಮ್ಮಲ್ಲಿ ರೂಢಿಯಲ್ಲಿದೆ. ಆದರೆ ಅದೂ ಸಾಕಷ್ಟು ಮಿತಿಗಳನ್ನು ಹೊಂದಿದೆ, ಸಮಕಾಲೀನ ಅಥವಾ ವಿಷಯ ವಸ್ತುವಿನ ದೃಷ್ಟಿಯಿಂದ ಮಾತ್ರವೇ ತುಲನೆ ಸಾಧ್ಯ ಅದನ್ನು ಹೊರತಾಗಿ ಬೇರೆ ಯಾವುದೇ ದೃಷ್ಟಿಯಿಂದ ಅದನ್ನು ನೋಡಲು ಸಾಧ್ಯವೇ ಇಲ್ಲ.

    ಅದಿರಲಿ, ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ಜೀವಪರ ಚಿಂತನೇ ಮುಖ್ಯವೇ ಹೊರತು ಜೀವ ವಿರೋಧಿಯಲ್ಲ. ನಮ್ಮ ಕೆಲಸಗಳು ಪ್ರಗತಿಪರವಾಗಿ ಇರಬೇಕೆ ವಿನಃ ಪ್ರತಿಗಾಮಿತನದಿಂದ ಕೂಡಿರಬಾರದು. ನಾನೂ ಉದ್ದೇಶಪೂರ್ವಕವಾಗಿ ಭೈರಪ್ಪನವರನ್ನು ಓದುವುದನ್ನು ಬಿಟ್ಟಿದ್ದೇನೆ. ಆರಂಭದಲ್ಲಿ ಒಂದಿಷ್ಟು ಕಾದಂಬರಿ ಓದಿದ್ದರೂ ಅದರಲ್ಲಿ ಅಂಚು ಒಂದನ್ನು ಬಿಟ್ಟು ಉಳಿದ ನಾಯಿ ನೆರಳು, ಸಾರ್ಥ, ತಂತು ಯಾವುದನ್ನೇ ತೆಗೆದುಕೊಂಡರು ಅಲ್ಲಿ ಜನಿವಾರದ ವೈಭವಿಕರಣ ಕಾಣುತ್ತದೆ. ಅಂಚು ಆ ಕಾರಣಕ್ಕೆ ಭಿನ್ನಃ ಅನ್ನಿಸಿದರೂ ಅಲ್ಲಿನ ಕಥಾ ನಾಯಕಿ ತನ್ನ ವಿಧವೆಯ ಪಟ್ಟದಿಂದ ಹೊರಬರುವುದು ಇರಲಿ, ತನ್ನ ಕಾಮದ ಆಶೆಯನ್ನು ಬಚ್ಚಿಟ್ಟುಕೊಂಡು ಹೆಣಗುವುದೇ ಸಂಪ್ರದಾಯ ಎನ್ನುವ ಸಂದೇಶದ ನಿರೂಪಣೆ ಮಾಡುತ್ತಾರೆ. ಅದು ಯಾವ ಸಾರ್ಥಕತೆಯ ಉದ್ದೇಶ ಅವರಲ್ಲಿ ಇದೆ ಎನ್ನುವುದು ಬಿಡಿಸಿ ಹೇಳಬೇಕಿಲ್ಲ. ವೈಧಿಕತೆಯ ವೈಭವಿಕರಣ ತಿಳಿಯಲು ಇದನ್ನು ಓದಬೇಕೆ ಎಂಬ ಕಾರಣಕ್ಕೆ ಅವರ ತಂಟೆಗೆ ಹೋಗುತ್ತಿಲ್ಲ.

    ಆದರೆ ಕಂಬಾರ ಹಾಗಲ್ಲ ಅವರ ಬರಹದಲ್ಲಿ ಜೀವಂತಿಕೆ ಇದೆ. ಮನುಷ್ಯನ ಮನಸ್ಸಿನಲ್ಲಿನ ತುಮಲಗಳು ಸಹಜವಾಗಿ ಅನಾವರಣಗೊಳ್ಳುತ್ತವೆ. ಕನಸಿನ ಲೋಕದ ನಿರ್ಮಾಣಕ್ಕೆ ಮಾವೋನನ್ನು ಆಹ್ವಾನಿಸುವ ಅವರು, ಅದರ ನಿರಂಕುಶತೆಯಿಂದಲೂ ದೂರ ಇರಬೇಕು ಎನ್ನುವುದನ್ನು ಹೇಳುತ್ತಾರೆ. ಅವರು, ಜೋಕುಮಾರ ಸ್ವಾಮಿಯಾಗಲಿ, ಸಂಗ್ಯಾ ಬಾಳ್ಯಾದಲ್ಲಿ ಆಗಲಿ ಈ ಸಮಾಜದ ಪಾರಧಾನ್ಯ ವ್ಯವಸ್ಥೆಯನ್ನು ಪ್ರಶ್ನಿಸುವುದು ಅದ್ಭುತವಾದದ್ದು, ಅತಿ ಸೂಕ್ಷ್ಮವಾಗಿ ಕಥಾ ನಾಯಕಿ ಗಂಡ ನಿರ್ವಿರ್ಯ ಎನ್ನುವುದುನ್ನು ಅವರು ಹೇಳುವ ಮೂಲಕ ಮತ್ತೊಂದು ಸಂಬಂಧಕ್ಕೆ ಭೂಮಿಕೆಯನ್ನು ಹಾಕಿಕೊಡುತ್ತಾರೆ. ಹಾಗಾಗಿ ನಮಗೆ ಸಂಗ್ಯಾನ ಗಂಗಿ ಹಾದರ ಮಾಡಿದಳು ಅನ್ನಿಸುವುದಿಲ್ಲ. ಆ ಮೂಲಕ ಪುರುಷ ಪ್ರಧಾನ ಸಮಾಜ ಕೂಡ ನಿರ್ವಿವಾಗಿದೆ ಅದನ್ನು ವಿರೋಧಿಸುವ ಮೂಲಕ ಸೃಷ್ಟಿಯ ಪರ ಬದುಕು ನಿರ್ಮಾಣ ಆಗಬೇಕು ಎನ್ನುವುದು ತುಂಬ ಅರ್ಥಪೂರ್ಣ. ಹೀಗಿರುವಾಗ ಕಂಬಾರರಂತಹ ಜೀವ ಚಿಂತಕರಿಗೆ ಪುರಸ್ಕರಿಸುವ ಸಂದರ್ಭದಲ್ಲಿ ಅಪಸ್ವರ ಎತ್ತುವುದು ಅಧಿಕ ಪ್ರಸಂಗವಲ್ಲದೇ ಮತ್ತೆ ಬೇರೆ ಇನ್ನೇನು ಅಲ್ಲ. ನಮಸ್ಕಾರಗಳು.

    ReplyDelete
  36. ಭೈರಪ್ಪನವರಿಗೆ ’ಜ್ಞಾನಪೀಠ’ವಷ್ಟೇ ಅಲ್ಲ, ನೊಬೆಲ್ ಪುರಸ್ಕಾರವೂ ಬರಲಿ ಎಂದು ಹಾರೈಸೋಣ. ಆದರೆ ಕಂಬಾರರು ಜ್ಞಾನಪೀಠಕ್ಕೆ ಅರ್ಹರಲ್ಲಿ ಎನ್ನಲು ಈ ಗಣಪತಿ ಅಥವಾ ಪಾಪು ಯಾವ ಸೀಮೆ ತೊಪ್ಪಲು? ಅಸಲಿಗೆ ಈ ಪಾಪು ಪತ್ರಕರ್ತರಿಗೆ ನೀಡುವ ಟೀಯೆಸ್ಸಾರ್ ಪ್ರಶಸ್ತಿಗೆ ಎಷ್ಟು ಅರ್ಹರು? ಯಾವ ಘನಂಧಾರಿ ಬದಲಾವಣೆಗಳು ಅವರು ಮೂರೂ ಮತ್ತೊಂದು ಜನ ಓದುವ ‘ಪ್ರಪಂಚ’ ಹಾಗೂ ‘ವಿಶ್ವವಾಣಿ’ಗಳಿಂದ ಆಗಿವೆ? ಕ್ಯಾಲಿಫೋರ್ನಿಯಾದಲ್ಲಿ ಪತ್ರಿಕೋದ್ಯಮ ಕಲಿತು ಬಂದೆ ಎಂದು ಎದೆಯುಬ್ಬಿಸಿ ಹೇಳುವ ಪಾಪು ಅವರ ಪತ್ರಿಕೆಗಳು ಜರ್ನಲಿಸಮ್ ಸ್ಕೂಲಿನ ಪ್ರಥಮ ತರಗತಿ ವಿದ್ಯಾರ್ಥಿಗಳು ಹೊರಡಿಸುವ ಪತ್ರಿಕೆಯಷ್ಟೂ ಚೆನ್ನಾಗಿಲ್ಲ. ಇನ್ನು ‘ನಾಡೋಜ’, ‘ಪಂಪ’, ‘ರಾಜ್ಯೋತ್ಸವ’ ಪ್ರಶಸ್ತಿಗಳನ್ನು ಹೊಡೆದುಕೊಂಡಿರುವ ಪಾಪು ಅವರ ಕನ್ನಡ ಸೇವೆ ಏನು ಎಂದು ಕೇಳುವ ಕಾಲ ಬಂದಿದೆ. ಡಾ.ರಾಜ್‍ಕುಮಾರ್ ಸಂಚಲನೆಗೊಳಿಸಿದ ಗೋಕಾಕ್ ಚಳುವಳಿಯ ಯಶಸ್ಸನ್ನು ತಮ್ಮದಾಗಿಸಿಕೊಂಡ ಪಾಪು, ಜಾತಿ ರಾಜಕಾರಣ ಮಾಡಿಯೇ ಲಾಭ ಮಾಡಿಕೊಂಡವರು. ರಾಜ್ಯಸಭಾ ಸದಸ್ಯರಾಗಿ, ವಿಧಾನಪರಿಷತ್ ಸದಸ್ಯರಾಗಿ ಇವರು ಕನ್ನಡಿಗರಿಗೆ ಯಾವ ಉಪಕಾರ ಮಾಡಿದ್ದಾರೆ, ಅಲೋಯನ್ಸ್‌ಗಳನ್ನು ಜೇಬಿಗೆ ತುಂಬಿಸಿಕೊಳ್ಳುವುದರ ಹೊರತಾಗಿ. ಇಷ್ಟಕ್ಕೂ ಅವರ ಮುದ್ರಣಾಲಯದಲ್ಲಿ ಎಂಥ ಪುಸ್ತಕಗಳು ಮುದ್ರಿತವಾಗುತ್ತಿದ್ದವು ಎಂಬುದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರನ್ನು ಕೇಳಿದರೆ ಗೊತ್ತಾಗುತ್ತದೆ. ಪಾಪು ಇನ್ನಾದರೂ ಪ್ರಚಾರದ ತೆವಲಿಗೆ ಬೀಳುವುದನ್ನು ನಿಲ್ಲಿಸಲಿ ಎಂಬುದೇ ನಮ್ಮ ಕೋರಿಕೆ. ಇಂಥ ಪಾ(ಕಂಪ)ಪ್ಪುಗಳಿಂದ ಮೂರು ಕಾಸಿನ ಪ್ರಯೋಜನವಿಲ್ಲ. - ಸಕಲೇಶಪುರ ಉಮಾಪತಿ

    ReplyDelete
  37. ಎಲ್ಲೋ ಮೂಲೆಯಲ್ಲಿರುವ ಒಂದು ಪತ್ರಿಕೆಯ ಬರಹವನ್ನು ಗುರಿಯಾಗಿಟ್ಟುಕೊಂಡು ಬ್ಲಾಗ್ ಬರೆದಿದ್ದೀರಲ್ಲ, ಏನ್ ಹೇಳಬೇಕು ನಿಮಗೆ. ಪ್ರಶಸ್ತಿ ಬಂದಾಗ ನೀವು ಒಂದು ಲೇಖನ ಬರೆದಿದ್ದರೆ ಅದಕ್ಕೊಂದು ಅರ್ಥ ಇರುತಿತ್ತು. ಇಲ್ಲೂ ನಿಮ್ಮ ಎಡಬುದ್ದಿ ಯನ್ನು ತೋರಿಸಿಬಿಟ್ಟಿದ್ದೀರಿ. ನೀವು ಯಾವುದೇ ರೀತಿಯಲ್ಲಿ ಬರೆದರೂ ಅಲ್ಲೊಂದು ಹಿಂದೂ ವಿರೋಧಿ ಭಾವನೆ ಮೂಡುವ ಹಾಗೆ ಬರೆಯುತ್ತೀರ ಅಂತ ಪ್ರತಿಯೊಬ್ಬರು ಹೇಳುತ್ತಾರೆ. ಗಿರೀಶ್ ಕಾರ್ನಾಡ್ ಮತ್ತು ಅನಂತ ಮೂರ್ತಿ ಏನು ಅಂತ ಎಲ್ಲರಿಗೂ ಗೊತ್ತಾಗಿದೆ ಜತೆಗೆ ನೀವು ಸಹ ಅವರಂತವರ ಬಾಲ ಬಡುಕರು ಎಂದು ಪ್ರತಿಬಾರಿ ಬ್ಲಾಗ್ ಮೂಲಕ ತಿಳಿಸಿಕೊಡ್ತಿದ್ದೀರಾ. ಒಬ್ಬ ಪತ್ರಕರ್ತ ಯಾವುದೇ ಸಿದ್ದಾಂತವನ್ನ ನೆಚ್ಚಿಕೊಂಡರೂ ಸಹ ತನ್ನ ಪಾಡಿಗೆ ತಾನು ವರದಿಗಾರಿಕೆ ಮಾಡುತ್ತಿರುತ್ತಾನೆ. ಆದರೆ ನೀವು ಹಾಗಲ್ಲ ನಿಮ್ಮದೇ ವರ್ಶನ್ ನಲ್ಲಿ ಹೇಳೋಕೆ ಹೋಗ್ತಿರಾ. ಕನ್ನಡಪ್ರಭದ ಭಟ್ಟರ ಹಾಗೆ. ವರದಿ ಅಲ್ಲ ಅದು ಜಡ್ಜಮೆಂಟ್ ಮತ್ತು ನಿರ್ದೇಶನ..
    ನೀವು ಬದಲಾಗಲ್ಲ ಬಿಡಿ..........
    ರಾಜ್.

    ReplyDelete
  38. ಕೆ ಬಿ ಗಣಪತಿ "ಚಂದ್ರಶೇಖರ್ ಕಂಬಾರ"ರಿಗೆ ಜ್ಞಾನ ಪೀಠ ಪ್ರಶಸ್ತಿ ಬಂದದ್ದರ ಬಗ್ಗೆ ಬರೆದ ಬರವಣಿಗೆ ಅವರ ವೈಯುಕ್ತಿಕ ಚಿಂತನೆಯ ಮಟ್ಟ ಹೇಗಿದೆ ಎಂಬುದನ್ನು ತೋರುತ್ತದೆ. ಅಷ್ಟಕ್ಕೂ ಅವರಿಗನಿಸಿದ್ದನ್ನು ಬರೆಯಲು ಅವರು ಸ್ವತಂತ್ರರು, ಇಷ್ಟವಿದ್ದವರು ಓದಬಹುದು ಇಷ್ಟವಿಲ್ಲದವರು ಬಿಡಬಹುದು ಎಂಬ ವಾದವೂ ಸರಿಯಾದುದಲ್ಲ. ಒಂದು ಪ್ರಮುಖ ಪತ್ರಿಕೆಯ ಸಂಪಾದಕ ಹೆಚ್ಚು ಪ್ರಜ್ಞಾವಂತಿಕೆಯಿಂದ ವಿಷಯದ ಕುರಿತು ಅವಲೋಕಿಸಿ ಬರೆಯಬೇಕಾಗುತ್ತದೆ (ಸಂಪಾದಕ ಮಾತ್ರವಲ್ಲ ಪತ್ರಕರ್ತರು ಕೂಡಾ) ಪತ್ರಿಕೆಗಳು ಭಾವನೆಗಳನ್ನು ಪ್ರಚೋದಿಸುವ ಮತ್ತು ಅಭಿಪ್ರಾಯ ರೂಪಿಸುವ ಪರಿಣಾಮಕಾರಿ ಮಾದ್ಯಮ ಹೀಗಿರುವಾಗ ಬರವಣಿಗೆ ಯಾರೇ ಬರೆದರೂ ಜವಾಬ್ದಾರಿ ಇದೆ ಎಂಬುದನ್ನು ಮರೆಯ ಬಾರದಷ್ಠೇ ಹಾಗೆಯೇ ಕಂಬಾರರಿಗೆ ಪ್ರಶಸ್ತಿ ಬಂದಿರುವ ಹೊತ್ತಿನಲ್ಲಿ ಬೈರಪ್ಪನವರಿಗೆ ಸಿಗಲಿಲ್ಲ ಎಂದು ಕಂಬಾರರ ವಿರುದ್ದ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಇಬ್ಬರೂ ಜ್ಞಾನಪೀಠಕ್ಕೆ ಅರ್ಹರೇ ಆಗಿದ್ದಾರೆ. ಆದರೆ ದಡ್ಡ ಶಿಖಾಮಣಿಗಳು ಗುಂಪುಗಾರಿಕೆ ಮಾಡಿಕೊಂಡು ವಿನಾಕಾರಣ ಅಸಹ್ಯ ಸೃಷ್ಟಿಸುತ್ತಿದ್ದಾರಷ್ಟೆ.

    ReplyDelete
  39. Munchinindalu ondu prashne haage jeevanta ide. Jnanapeetakke maanadanda enu? Chandrashekhara kambara avara yaavudella saadhane pariganisiddaare? Prashne yaaru bekaadroo maadabahudalwa? Byrappanavarige bandiddare Avara yaava saadhanege ee gowrava anta yochisuva prameya khandita iralilla. Ganapati tamm abhiprayave bareebaaradu annodakke naavyaru? Kade paksha avaralli praamanikate ide. Naanu saahitya odilla anta oppikondidaare. Saradi muridide. Byrappanavarinda jnanapeeta vanchitavaagide. Idu aa prashastiginta byrappanavaranna ettaradalli nilliside.

    ReplyDelete
  40. Sampadakeeya group - let your work continue....

    ReplyDelete
  41. This is not the first time Star of Mysore is supporting right wing ideologue. KBG was while Yeddyrappa looting our state very much in support of him. He even warned BJP high command that BJP may loose its significance in Karnataka if Yeddyrappa is removed from the CM post. There is no need to surprise for him supporting our Byrappa.

    ReplyDelete
  42. sampadakeeya namaskara.
    Idakke commets bareyalu nidhaniside kaarana bhyrappanavar hesaru bandare 15 dinavadaru adara charje iruvude./ dayavittu idakke pratiyagi agni sridhar mattu nidumamidi sree avara vijara haakabhudallave?!

    ReplyDelete
  43. yaarige prashasti bandre an labha, nasta, kannada shalegalu mucchtta eveyall. adakke parihaar huduka beeku. yaradu para- virodha laabi angatya, vishaya mukya agbeku

    ReplyDelete