Monday, March 5, 2012

ನಮ್ಮ ಮೀಡಿಯಾ ತೋರಿಸದ ಕೆಲವು ದೃಶ್ಯಗಳು ಇಲ್ಲಿವೆ ನೋಡಿ...



ಕರ್ನಾಟಕದ ಇತಿಹಾಸದಲ್ಲಿ ಮಾರ್ಚ್ ೨ ಕರಾಳ ನೆನಪುಗಳನ್ನು ಉಳಿಸಿಹೋಗಿದೆ. ಮಾಧ್ಯಮದವರ ಮೇಲೆ ಕೆಲನ್ಯಾಯವಾದಿಗಳ ಗೂಂಡಾಗಿರಿ. ನಂತರ ನ್ಯಾಯವಾದಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಈಗ ಮುಗಿದುಹೋದ ಕಹಿ ಅಧ್ಯಾಯ. ಮಾಧ್ಯಮ ಮಂದಿಯ ಮೇಲೆ ನಡೆದ ಭೀಕರ ಹಲ್ಲೆಯ ದೃಶ್ಯಗಳನ್ನು ನಾವು ಎಲ್ಲ ನ್ಯೂಸ್ ಚಾನಲ್ ಗಳಲ್ಲೂ ನೂರಾರು ಬಾರಿ ನೋಡಿದ್ದೇವೆ, ಇನ್ನೂ ನೋಡುತ್ತಲೇ ಇದ್ದೇವೆ. ಆದರೆ ಎರಡನೇ ಹಂತದಲ್ಲಿ ನ್ಯಾಯವಾದಿಗಳ ಮೇಲೆ ನಡೆದ ದೌರ್ಜನ್ಯದ ದೃಶ್ಯಗಳನ್ನು ಎಲೆಕ್ಟ್ರಾನಿಕ್ ಮೀಡಿಯಾ ತೋರಿಸುವ ಧೈರ್ಯ ಪ್ರದರ್ಶಿಸಲಿಲ್ಲ. ಹೀಗಾಗಿ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವು ವಕೀಲರುಗಳು ತಮ್ಮ ಮೊಬೈಲುಗಳಲ್ಲಿ ಹಿಡಿದ ಚಿತ್ರಗಳನ್ನೇ ಸಂಗ್ರಹಿಸಿ ಅಡ್ವೊಕೇಟ್ ಬೆಂಗಳೂರು ಎಂಬ ಹೆಸರಿನಲ್ಲಿ ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ. ವಾಯ್ಸ್ ಓವರ್ ನಲ್ಲಿ ಹೇಳಲಾಗುವ ಮಾಹಿತಿಗಳಲ್ಲಿ ಉತ್ಪ್ರೇಕ್ಷೆ ಇದೆ ಎಂದು ನಿಮಗನ್ನಿಸಬಹುದು. ಆದರೆ ವಿಡಿಯೋ ನಿಜಕ್ಕೂ ಭಯಾನಕವಾಗಿದೆ, ಆಘಾತಕಾರಿಯಾಗಿದೆ. ಅದು ಎಲ್ಲದಕ್ಕೂ ಸಾಕ್ಷಿ ಹೇಳುತ್ತಿದೆ. ಇಷ್ಟಾಗಿಯೂ ಈ ದ್ವೇಷ, ರೊಚ್ಚು, ಸೇಡು ಎಲ್ಲ ಮುಗಿದುಹೋಗಲಿ, ದೌರ್ಜನ್ಯಕ್ಕೆ ಒಳಗಾದ ಪತ್ರಕರ್ತ, ನ್ಯಾಯವಾದಿ ಮತ್ತು ಪೊಲೀಸರಿಗೆ ನ್ಯಾಯ ದೊರಕಲಿ ಎಂದು ಆಶಿಸುವುದಷ್ಟೆ ನಮ್ಮ ಈ ಕ್ಷಣದ ವಿನಂತಿ.

13 comments:

  1. true face of police and media

    ReplyDelete
  2. Tayiya Mole Haalu Vishavadare yarige Doorabeku?
    Kanoonu Heluvavare Heege Madidare gati yenu ?
    Edu Nachikegedu Mattu Khandaniya Sangati.
    -Manik bhure

    ReplyDelete
  3. ಪತ್ರಕರ್ತರನ್ನ ಕ್ಯಾಮೆರಾ ಸಮೇತ ಮಾರು ದೂರ ಓಡಿಸಿ , ಆಮೇಲೆ ನಮ್ಮ ಮೇಲಿನ ದೌರ್ಜನ್ಯ ಸೆರೆ ಹಿಡಿಯಲಿಲ್ಲ ಅಂತ ಅಳುವುದು ಎಲ್ಲಿಯ ನ್ಯಾಯ :D . ಅವರನ್ನ ಅಲ್ಲೇ ಇರಲು ಬಿಟ್ಟಿದ್ದರೆ ಬಹುಶ ರೆಕಾರ್ಡ್ ಮಾಡಿ ಹಾಕುತ್ತಿದ್ದರೆನೋ??
    ಪಾಪ ಬೆಂಗಳೂರಿನ ಸಂಚಾರ ನಾಡಿಯನ್ನ ಅಖಂಡ ೭ ತಾಸು ಒತ್ತಿ ಹಿಡಿದುಕೊಂಡಿದ್ದಾಗ, ಈ ದೌರ್ಜನ್ಯ ಮಾನವೀಯತೆ ಅನುಕಂಪ ಇವೆಲ್ಲ ಇದೆ ನ್ಯಾಯವಾದಿಗಳಿಗೆ ಅಸ್ಪ್ರಶ್ಯ ಪದಗಳಾಗಿದ್ದವಲ್ಲವೇ??. ಈಗ ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಮರ್ಯಾದೆಗೇಡು.ಥು.

    ReplyDelete
    Replies
    1. LAWYERS GALIGE ONDU KIVI MAATU, LAWYERS MEDIADAVARIGE MANASSIGE BANDANTE HODEDIRUVUDU 1ST HALF NALLI, MEEDIAYAVARIGE AAREETI HODEYALU MEDIADAVARU MAADIDA TAPPADAROOO YENU????? 1ST HALF NALLI MAADIRUVA HALLE YAARAADROOO KANDISUVANTAHUDE SARI, AADARE MEDIADALLI BANDANTAHA LAWYERS HALLE MAADIRUVA DHRUSHYA NODI, YAVA YAVA LAWYERS GOONDAGALANTE VARTHISUTTHIDDARRO AVARANNU KOODALI BANDHISI POLICE KRAMA TIGEDUKOLLABEKITTU, LAWYERS GALELLA GOONDAGALALLA, YAARU YAARU HALLE MAADIDAARO, YAARU YAARU DAPPA KALU HIDIDU VAHANAGALIGE JAKAM MAADIDDAROO AVRU MAATRA GOODA LAWYERS, MADYAMADAVARA MELE EEE REETHI HALLE MAADALU MADYAMADAVARU MAADIDA TAPPADAROO YENU?????? MATHE LAWYERS MELE LAATY CHARGE MAADIDDU, HALLE MAADIRUVUDU POLICE NAVARU, MAADYAMADAVARU YELLADAROOO LAWYERS MELE HALLI MAADIDDARA??????? JANUARY NALLI NADEDADDU KOODA POLICE V/S LAWYERS SANGARSHA, YARO KELVARU LAWYERS MAADIDA TAPPIGAAGI IDEEEE LAWYERS SAMUDAYAVE TALE TAGGISABEKADA PARISTHITHI BANDIDE, DAYAVITTU LAWYERS ASSOCIATION NA HIRIYARUGALU, TAMMA SAMUDAYADALLIRUVA KELAVE KELAVU BISI RAKTADA LAWYERS GALIGE BUDDI MAATU HELI AVARANNU HADDUBASTINALLITTU KONDARE NIMAGOOO KSHEMA SARVAJANIKARIGOO KSHESMA, MATHONDU KIVIMAATU, MADYAMADAVARO HAAGOOO VAKEELARU KULITU MUKTHA MANASSININDA (EGOISAM BITTU) EEE SAMSYETE SHASHWATHA PARIHARA KANDUKOLLUVU OLLEYADU.

      Delete
    2. please watch this

      http://www.youtube.com/watch?v=YGvx1ywTBDQ&context=C3d7d418ADOEgsToPDskLMFYZL3KPfwS4BBDvYf9zE

      Delete
  4. s media and police are cheaters they are law breakers we are the law makers media and police are given false msg to public now public will come to see wht exactly happens media and police attacked the lawyers and judges

    ReplyDelete
  5. 1st half nalli madyamadavara mele nadeda halleya nantara policenavaru lawyers navara mele laatii charge (neevu heluttiruva dhourjanya) nadediruvudu, idu policeru paristiti tahabandige taralu nadesiruv krama, aadare eee karikotu lawyers 1st half nalli beedi naayigalige hodeyuva reethi mediadavara mele hodediddaralla adakke yenittu karana ???????? dayavittu tilisi,
    madyamadavara mele halle maadiruvudu laywers, lawyers mele laati charge maadiruvudu police navaru, laywers navaru madyamadavarige attadisikondu hodediruvagaara lawyers gala 2nd half suddhi tilisalilla anta keluvudu yaava nyaya nyayavaadigale????

    ReplyDelete
  6. Why this media is turing towards dirty work, some of them are justifying the police work, look at the videos there are not just beating the lawyers but also they are breaking the cars and adovacates bykes, like cut throat gundas, there is any difference between Gundas and police in the video? some of the media peoples are still justifying the police act, in that case you are not fit to work as media person...

    ReplyDelete
  7. Why this media is turing towards dirty work, some of them are justifying the police work, look at the videos there are not just beating the lawyers but also they are breaking the cars and adovacates bykes, like cut throat gundas, there is any difference between Gundas and police in the video? some of the media peoples are still justifying the police act, in that case you are not fit to work as media person...

    ReplyDelete
  8. ಲಾಯರ್‌ಗಳು ಸುಳ್ಳು ಹೇಳುವುದು ಇಲ್ಲೂ ಬಿಟ್ಟಿಲ್ಲ. ಪೊಲೀಸರು ಸಾಧಾರಣ ಲಾಠಿಚಾರ್ಜ್‌ ಮಾಡಿರುವುದು ನಿಜ. ಆದರೆ ಅವರು ಇವರ ತಲೆ ಒಡೆದಿರುವುದರ ವೀಡಿಯೋ ಎಲ್ಲಿ ? ಇವರು ತಲೆ ಒಡೆಸಿಕೊಂಡಿದ್ದು ನ್ಯಾಯಾಲಯದ ಪಕ್ಕದ ಕಾಲೇಜು ಮೈದಾನಕ್ಕೆ ನುಗ್ಗಿ ಅಲ್ಲಿನ ವಿದ್ಯಾರ್ಥಿಗಳನ್ನು ಕೆಣಕಿ ಅವರಿಂದ ಹೊಡೆತ ತಿಂದು ತಲೆ ಒಡೆಸಿಕೊಂಡಿದ್ದಾರೆ. ಅದನ್ನೂ, ಪೊಲೀಸರ ಲಾಠಿಚಾರ್ಜ್‌ ದೃಶ್ಯವನ್ನೂ ಒಂದಾದ ನಂತರ ಒಂದು ತೋರಿಸಿ ನಮ್ಮನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ. ಪೊಲೀಸರೇ ತಲೆಗೆ ಹೊಡೆಯುವ ದೃಶ್ಯ ಯಾಕಿಲ್ಲ ? ಆಗ ಲಾಯರ್‌ಗಳ ಮೊಬೈಲ್ ಎಲ್ಲಿ ಹೋಗಿದ್ದವು ? ಕಾರುಗಳಿಗೆ ಬೆಂಕಿ ಇಟ್ಟವರು ಇವರೇ ಅಲ್ಲವೇ ? ಇವರಲ್ಲದಿದ್ದರೆ ಬೇರೆಯವರು ಇಟ್ಟದ್ದನ್ನು ಅಲ್ಲೇ ಇದ್ದ ಇವರು ಯಾಕೆ ಮೊಬೈಲ್‌ನಲ್ಲಿ ಚಿತ್ರೀಕರಿಸಲಿಲ್ಲ ?
    ಪುಂಡಾಟ ಆಡಿದ ನ್ಯಾಯವಾದಿಗಳ ಮೇಲೆ ಲಾಠಿಚಾರ್ಜ್‌ ಮಾಡದೇ ಪೂಜೆ ಮಾಡಬೇಕಾ ? ಇವರೇನು ದೇವಲೋಕದ ಸುಪುತ್ರರಾ ? ಪೊಲೀಸರಿಗೂ ಸ್ವಲ್ಪ ಸ್ವಾಭೀಮಾನವಿದೆ. ಅವರು ಮಾಡಿದ್ದು ಸರಿಯಾಗಿಯೇ ಇದೆ. ಇನ್ನಾದರೂ ಇವರು ತಮ್ಮ ಅಹಂಭಾವ ಬಿಟ್ಟು ಬುದ್ದಿ ಕಲಿಯಲಿ.

    ReplyDelete
  9. ಆರಂಭ ಶೂರತ್ವದ ಫಲವಿದು.ಯುದ್ಧಕ್ಕಿಳಿದ ಮೇಲೆ ಗಾಯವಾಗಬಾರದೆಂದರೆ ಹೇಗೆ ಸ್ವಾಮಿ?!
    ಪ್ರಕಾಶ್ ಶೆಟ್ಟಿ

    ReplyDelete
  10. ಇಬ್ಬರ ಜಗಳ ಮೂರನೇ ಯಾವ್ನಿಗೆ ಲಾಭ ಅಂತ ಕೆಲ್ಳಿದ್ದೆ ! ಆದ್ರೆ ೪ ನೇಯಾವನಿಗೆ ( ರಾಜಕಾರಣಿ) ಲಾಭ , ೫ ನೇ ಅವನಿಗೆ ಮೋಸ,ದುಖ:,ವ್ಯಥೇ (ಸಾಮಾನ್ಯ ಪ್ರಜೆ ನನ್ನ ತರ) - ಇನ್ನುಳಿದ ಮೂರು ಜನ್ರಿಗೆ ಜಗಳ ( ಮಾಡೋಕ್ಕೆ ಕೆಲಸ ಇಲ್ವಾ ಅಥ್ವಾ ಟೈಮ್ ವೆಸ್ಟು.. ಅಥ್ವಾ ಹಿಂಗೆ ಪ್ಯಾದೆಗಳು) ಇನ್ನೂ ಆರನೆಯಾವನೂ.. i want this advertisment at this sequecne man... ಪಾಪ ಸಂಪಾದಕ್ರು what a difficult jobu i say .. raja...

    ReplyDelete
  11. ಒಬ್ಬರು ಕಾನೂನು ಪಾಲಿಸಲಿಕ್ಕೆ ಇರುವವರು, ಮತ್ತೊಬ್ಬರು ಕಾನೂನು ವಾದಿಸಲಿಕ್ಕೆ ಇರುವವರು, ಇವರಿಬ್ಬರಲ್ಲದೆ ಕಾನೂನು ಆಡಳಿತ ಯಾವ ರೀತಿಯಲ್ಲಿದೆ ಎಂಬುದನ್ನು ನಿಷ್ಪಕ್ಷಪಾತವಾಗಿ ಸಮಾಜದ ಮುಂದಿಡಲಿಕ್ಕೆಂದು ಮತ್ತೊಬ್ಬರು - ಹೀಗೆ ಮೂರು ಪ್ರಮುಖ ಕ್ಷೇತ್ರಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಇತ್ತೀಚಿನ ಈ ಘಟನೆಯನ್ನು ನೋಡಿದರೆ ಈ ಮೂರೂ ಗುಂಪುಗಳು ಕೋಮು ಗಲಭೆ ಅಥವ ಜಾತಿ ಗಲಭೆಗಳ ಸಂದರ್ಭದಲ್ಲಿ ಕಂಡು ಬರುವ ಉನ್ಮಾದಿಗಳಂತೆ ವರ್ತಿಸಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಬೆಳವಣಿಗೆ. ಆಯಾ ವೃತ್ತಿಯಲ್ಲಿ ಹಿರಿಯರೆನಿಸಿಕೊಂಡವರಾದರೂ ತಮ್ಮ ವೃತ್ತಿ ಧರ್ಮ ಹೀಗಲ್ಲಾ ಹೀಗೆ ಅಂತಾ ಕಿರಿಯರಿಗೆ ತಿಳಿಹೇಳುವ ಒಂದಾದರೂ ಗಟ್ಟಿದನಿ ಈ ಇಡೀ ಪ್ರಕರಣದಲ್ಲಿ ಕೇಳಿ ಬರದೇ ಹೋಗಿದ್ದು ದೊಡ್ಡ ದುರಂತವೇ ಸರಿ. ಇದು ನಮ್ಮ ಪ್ರಜಾಪ್ರಭುತ್ವ ಹಿಡಿದಿರುವ ಹಾದಿಯ ಸೂಚಕ ಎಂದರೆ ಸರಿಯಾಗಬಹುದು.
    ಇಂಥಾ ಸಂದರ್ಭದಲ್ಲಿ ಸಂಪಾದಕೀಯದ ಪ್ರಯತ್ನ ಶ್ಲಾಘನೀಯವಾದುದು. ಆದರೆ ಇಲ್ಲೂ ಅದೇ ಪೂರ್ವಗ್ರಹ ಪೀಡಿತ ವಾದಗಳು ಕಂಡು ಬರುತ್ತಿರುವುದು ಈ ಸಮಸ್ಯೆಯ ಗಂಭೀರತೆಯನ್ನಷ್ಟೇ ತೋರಿಸುತ್ತದೆ.

    ReplyDelete