Wednesday, May 18, 2011

ರಂಗಣ್ಣ ಇಲ್ಲದ ರಾಜಕಾರಣ ಬಿಕ್ಕಟ್ಟು ಮತ್ತು ಖಾಲಿತಲೆಯ ನಿರೂಪಕರು...


ರಾಜ್ಯ ರಾಜಕಾರಣದಲ್ಲಿ ಭರ್ಜರಿ ವಿದ್ಯಮಾನಗಳು. ಸರ್ಕಾರ ವಜಾಗೊಳಿಸಲು, ವಿಧಾನಸಭೆ ಅಮಾನತ್ತಿನಲ್ಲಿಡಲು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಕೇಂದ್ರ ಸರ್ಕಾರಕ್ಕೆ ನೀಡಿರುವ ಶಿಫಾರಸಿನಿಂದಾಗಿ ಕ್ಷಣಕ್ಷಣಕ್ಕೂ ತರೇಹವಾರಿ ಸುದ್ದಿಗಳು, ಬ್ರೆಕಿಂಗ್ ನ್ಯೂಸುಗಳು. ಕರ್ನಾಟಕದ ಮಾಧ್ಯಮಗಳಿಗೆ ಬಿಡುವಿಲ್ಲದ ಕೆಲಸ. ಸುದ್ದಿ ಚಾನಲ್‌ಗಳಂತೂ ಎಡೆಬಿಡದೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.

ಆದರೆ, ಕನ್ನಡ ಸುದ್ದಿ ಚಾನಲ್‌ಗಳು ಇಂಥ ವಿದ್ಯಮಾನಗಳನ್ನು ವರದಿ, ವಿಶ್ಲೇಷಣೆ ಮಾಡುವಲ್ಲಿ ಇನ್ನೂ ಸಮರ್ಥವಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಇಂಥ ಬಿಕ್ಕಟ್ಟನ್ನು ಸರಿಯಾಗಿ ಅರ್ಥಮಾಡಿಕೊಂಡೇ ಇರದ ಸುದ್ದಿ ನಿರೂಪಕರು, ಸುತ್ತಮುತ್ತ ನಿಂತವರು ಹೇಳಿದ್ದನ್ನೇ ನಂಬಿ ವರದಿ ಮಾಡುವ ವರದಿಗಾರರಿಂದ ಏನನ್ನು ನಿರೀಕ್ಷಿಸಲು ಸಾಧ್ಯ? ಸಂವಿಧಾನದ ೩೫೬ನೇ ಪರಿಚ್ಛೇದ ಅಂದರೆ ಏನು ಎಂದು ಗೊತ್ತಿಲ್ಲದವರು ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಏನನ್ನು ವರದಿ ಮಾಡಲು, ಏನನ್ನು ವಿಶ್ಲೇಷಿಸಲು ಸಾಧ್ಯ?

ಎಚ್.ಆರ್.ರಂಗನಾಥ್ ನಿರ್ಗಮನದ ನಂತರ ಸುವರ್ಣ ನ್ಯೂಸ್ ಸಪ್ಪೆಯಾಗಿದೆ ಎಂದು ಹಿಂದೆಯೇ ಹೇಳಿದ್ದೆವು. ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಮಾತು ಇನ್ನಷ್ಟು ಪರಿಣಾಮಕಾರಿಯಾಗಿ ಸಾಬೀತಾಯಿತು. ಇಂಗ್ಲಿಷ್ ಸುದ್ದಿವಾಹಿನಿಗಳ ಪತ್ರಕರ್ತರು ತೋರುವ ವೃತ್ತಿಪರತೆಯನ್ನು ರಂಗನಾಥ್ ಸುವರ್ಣದಲ್ಲಿ ತಂದಿದ್ದರು. ಕರ್ನಾಟಕದ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು ಇಂಗ್ಲಿಷ್ ಚಾನಲ್‌ಗಳ ಮೊರೆಹೊಗುತ್ತಿದ್ದವರನ್ನು ರಂಗನಾಥ್ ಸೆಳೆದಿದ್ದರು. ಈ ಬಾರಿ ರಂಗನಾಥ್ ಇಲ್ಲದ ಸುವರ್ಣ ನ್ಯೂಸ್ ಇಂಥ ವೃತ್ತಿಪರತೆಯನ್ನು ಕಳೆದುಕೊಂಡಿದ್ದು ವಿಷಾದನೀಯ. ಕನ್ನಡ ವೀಕ್ಷಕರೂ ಸಿಎನ್‌ಎನ್ ಐಬಿಎನ್, ಎನ್‌ಡಿಟಿವಿ, ಟೌಮ್ಸ್ ನೌ ಗಳನ್ನು ನೋಡಿ ಸುದ್ದಿ ದಾಹವನ್ನು ತಣಿಸಿಕೊಳ್ಳಬೇಕಾಯಿತು.

ಹಮೀದ್ ಪಾಳ್ಯ ಮತ್ತು ಗೌರೀಶ್ ಅಕ್ಕಿ ಉತ್ತಮ ನಿರೂಪಕರು ಎಂಬುದೇನೋ ನಿಜ. ಆದರೆ ರಾಜಕೀಯ, ಕಾನೂನು ವಿಶ್ಲೇಷಣೆಯಲ್ಲಿ ಅವರು ಇನ್ನೂ ಎಳಸು ಎಂಬುದು ಸಾಬೀತಾಯಿತು. ಇಬ್ಬರಲ್ಲೂ ಆತ್ಮವಿಶ್ವಾಸದ ಕೊರತೆ ಕಾಣಿಸಿತು. ಬಹಳಷ್ಟು ಸಂದರ್ಭಗಳಲ್ಲಿ ಹಮೀದ್ ಅವರು ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಅವರನ್ನೇ ಅವಲಂಬಿಸಬೇಕಾಯಿತು. ಪ್ರಶಾಂತ್ ದಿಲ್ಲಿ ವಿದ್ಯಮಾನಗಳನ್ನು ಚೆನ್ನಾಗೇನೋ ವಿಶ್ಲೇಷಿಸಿದರು. ಆದರೆ ರಂಗನಾಥ್ ಇದ್ದಿದ್ದರೆ ಅವರಿಂದ ಇನ್ನಷ್ಟು ಹೊರತೆಗೆಸಬಹುದಿತ್ತು ಅನಿಸಿತು.

ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜಕಾರಣಿಗಳು, ಕಾನೂನು ಪಂಡಿತರ ಜತೆಗಿನ ಚರ್ಚೆಯ ಸಂದರ್ಭದಲ್ಲೂ ಸಹ ರಂಗನಾಥ್ ಠೊಳ್ಳಾಗಿರುವ, ಬುರುಡೆ ಬಿಡುವ ಮಾತುಗಾರರನ್ನು ಬಹಳ ಸುಲಭವಾಗಿ ಬೆತ್ತಲಾಗಿಸುತ್ತಿದ್ದರು. ತಿಳಿವಳಿಕೆ ಇರುವ ಪ್ರಬುದ್ಧರಿಂದ ಸಂದರ್ಭಕ್ಕೆ ಅಗತ್ಯವಾದ, ಸನ್ನಿವೇಶವನ್ನು ಕಟ್ಟಿಕೊಡಬಲ್ಲ ಉತ್ತರಗಳನ್ನು ಹೊರತೆಗೆಸುತ್ತಿದ್ದರು. ಖಚಿತವಾದ ಪ್ರಶ್ನೆಗಳನ್ನು ಎಸೆಯುವ, ದಾರಿ ತಪ್ಪುವ ಉತ್ತರಗಳನ್ನು ನಿರ್ದಾಕ್ಷಿಣ್ಯವಾಗಿ ತುಂಡರಿಸುವ ಜಾಣ್ಮೆ ಮತ್ತು ಧೈರ್ಯವೂ ಅವರಿಗಿತ್ತು. ತಮ್ಮದೇ ವೃತ್ತಿಪರತೆಯನ್ನು ಅವರು ಎಲ್ಲ ಸಿಬ್ಬಂದಿಯಿಂದಲೂ ಬಯಸುತ್ತಿದ್ದರು. ಒಮ್ಮೆಮ್ಮೆ ಲೈವ್ ಕಾರ್ಯಕ್ರಮಗಳಲ್ಲಿ ಅವರು ತಮ್ಮ ವರದಿಗಾರರಿಗೆ ನೀಡುತ್ತಿದ್ದ ಸೂಚನೆಗಳು ಅವರಿಂದ ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ವೀಕ್ಷಕರಿಗೂ ಅರ್ಥ ಮಾಡಿಸುತ್ತಿದ್ದವು. ಎಚ್.ಡಿ.ದೇವೇಗೌಡ, ಸಿದ್ಧರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಎಸ್.ಬಂಗಾರಪ್ಪ, ಡಿ.ಬಿ.ಚಂದ್ರೇಗೌಡ, ರಮೇಶ್ ಕುಮಾರ್.. ಹೀಗೆ ಘಟನಾನುಘಟಿ ನಾಯಕರುಗಳೊಂದಿಗೆ ರಂಗನಾಥ್ ಅತ್ಯಂತ ಆತ್ಮವಿಶ್ವಾಸದಿಂದ ಚರ್ಚೆಗಳನ್ನು ನಡೆಸಬಲ್ಲವರಾಗಿದ್ದರು. ಆದರೆ ರಂಗನಾಥ್ ಇಲ್ಲದ ಸುವರ್ಣದಲ್ಲಿ ಇದೆಲ್ಲವೂ ಈಗ ಕಣ್ಮರೆಯಾಗಿದೆ.

ಬೇರೆ ಚಾನಲ್‌ಗಳಲ್ಲಿ ಇದಕ್ಕಿಂತ ಭಿನ್ನವಾದ ಪರಿಸ್ಥಿತಿ ಏನಿಲ್ಲ. ಇದ್ದಿದ್ದರಲ್ಲಿ ಟಿವಿ೯ನಲ್ಲಿ ಲಕ್ಷ್ಮಣ್ ಹೂಗಾರ್ ವಿಶ್ಲೇಷಣೆಗಳು ವಿಷಯದ ಆಳವನ್ನು ತಲುಪುತ್ತಿದ್ದವು. ಟಿವಿ೯ ರಾಜಕಾರಣಿಗಳ ಬೈಟ್‌ಗಳು, ಗ್ರಾಫಿಕ್ ಗಳು, ಪ್ರತಿಭಟನೆಗಳ ಚಿತ್ರಗಳು ಇತ್ಯಾದಿಗಳನ್ನೇ ಹೆಚ್ಚು ನೆಚ್ಚಿಕೊಂಡ ಹಾಗೆ ಕಂಡಿತು.

ಸಮಯ ಟಿವಿಯಲ್ಲಿ ಶಶಿಧರ ಭಟ್ಟರು ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿದರಾದರೂ ಉಳಿದ ತಂಡದಿಂದ ಅವರಿಗೆ ತಕ್ಕ ಬೆಂಬಲ ದೊರೆತ ಹಾಗೆ ಕಾಣಲಿಲ್ಲ. ವಿಶೇಷವಾಗಿ ಅವರ ವರದಿಗಾರರು ಇನ್ನೂ ಪಕ್ವವಾಗಿಲ್ಲ. ಭಟ್ಟರು ಪ್ರಶ್ನೆ ಎಸೆಯುತ್ತಿದ್ದಂತೆ ನರ್ವಸ್ ಆಗುವ ವರದಿಗಾರರಿಂದ ಏನನ್ನು ನಿರೀಕ್ಷಿಸಬಹುದು?

ಜನಶ್ರೀಯಲ್ಲಿ ಅನಂತ್ ಚಿನಿವಾರ್ ಅವರ ನಿರ್ವಹಣೆ, ಅವರು ಬಳಸುವ ಭಾಷೆ ಸೊಗಸು. ತಮ್ಮ ವರದಿಗಾರರೊಂದಿಗೆ ಅವರು ಸಂವಹಿಸುವ ರೀತಿ ರಂಗನಾಥ್ ಅವರನ್ನು ನೆನಪಿಗೆ ತರುತ್ತದೆ. ಚರ್ಚೆಯ ಸಂದರ್ಭದಲ್ಲಿ ತುಂಬ ಮುಖ್ಯವಾದ ಪ್ರಶ್ನೆಗಳನ್ನು ಅವರು ಕೇಳುತ್ತಿದ್ದರು. ಒನ್ಸ್ ಎಗೇನ್, ಅವರಿಗೂ ಸಹ ತಕ್ಕ ಸಿಬ್ಬಂದಿ ಬೆಂಬಲದ ವ್ಯವಸ್ಥೆ ಇದ್ದ ಹಾಗೆ ಕಾಣಲಿಲ್ಲ.

ಮೊನ್ನೆ ಶಶಿಧರ ಭಟ್ಟರು ತಮ್ಮ ಫೇಸ್‌ಬುಕ್‌ನ ವಾಲ್‌ನಲ್ಲಿ ಉತ್ತಮ ನಿರೂಪಕರು ಸಿಗುತ್ತಿಲ್ಲ, ಉತ್ಸಾಹ ಇರುವವರು ಮುಂದೆ ಬನ್ನಿ ಎಂದು ವಿನಂತಿಸಿದ್ದರು. ಇದು ಕೇವಲ ಸಮಯ ಟಿವಿ ಒಂದರ ಸಮಸ್ಯೆ ಅಲ್ಲ. ಎದುರಿನ ಮಾನಿಟರ್ ಮೇಲೆ ಬರುವ ಸುದ್ದಿ ಸಾಲುಗಳನ್ನು ಓದಲು ತಯಾರಿರುವ ಸಾಲುಸಾಲು ನಿರೂಪಕರು ನಮ್ಮ ಚಾನಲ್‌ಗಳಲ್ಲಿದ್ದಾರೆ. ಇವರುಗಳ ಪೈಕಿ ನೂರಕ್ಕೆ ೯೦ಕ್ಕೂ ಹೆಚ್ಚು ಮಂದಿಗೆ ತಾವೇ ಸ್ವತಃ ನಾಲ್ಕು ಸಾಲು ಸೃಷ್ಟಿಸಿ ಮಾತನಾಡಲು ಬರುವುದಿಲ್ಲ. ಇಂಥವರು ರಾಜಕೀಯ ಬಿಕ್ಕಟ್ಟು, ಸಾಂವಿಧಾನಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹೇಗೆ ತಾನೇ ಕಾರ್ಯಕ್ರಮಗಳನ್ನು ನಡೆಸಿಕೊಡಬಲ್ಲರು? ನ್ಯೂಸ್ ಚಾನಲ್‌ಗಳು ಎದುರಿಸಬೇಕಿರುವ, ಉತ್ತರ ಕೊಟ್ಟುಕೊಳ್ಳಲೇಬೇಕಿರುವ ಸೀರಿಯಸ್ ಆದ ಪ್ರಶ್ನೆ ಇದು.

ಅಂದ ಹಾಗೆ, ಎಚ್.ಆರ್.ರಂಗನಾಥ್ ಯಾವುದಾದರೂ ನ್ಯೂಸ್ ಚಾನಲ್‌ಗೆ ಬರುವಂತಾಗಲಿ. ನಾವು ಇಂಗ್ಲಿಷ್ ಚಾನಲ್‌ಗಳನ್ನು ನೋಡುವ ಕಷ್ಟವನ್ನು ಅವರು ತಪ್ಪಿಸುವಂತಾಗಲಿ.

33 comments:

  1. WHILE DISCUSSING KERALA POLL RESULT ಹಮೀದ್ ಪಾಳ್ಯ TOLD(NOON TIME) THAT KERALA CM VS ACHUTANANDAN LOST IN HIS ASSEMBLY CONSTITUENCY. I JUST TURNED TO NDTV.
    PLEASE, DON'T SUGGEST KANNADA LET THEM SEE ENGLISH.

    ReplyDelete
  2. As u unthreaded the reality of the news narrators, many lacked accuracy with regard to the present political situation. it seems many plunge into media world for fashion not for passion and commitment. it glares in every situation through many channels. this is to be looked after well in the days to come by the heads of the media institutes.

    ReplyDelete
  3. we really miss u RAGANNA. I hate Ranga as person, his deeds etc. But, I like him as an anchor, like thousand other people.
    There are good newsmen, anchors, journalists out there. But, poor pay package, castiesm, bucketism,immature chiefs, corruption etc -are issues baring them to join or thrown out them of media field.
    eg. why Raviraj Valalambe, a flawless political correspondent, resigned ? Nobody asked. There are a few such people are preparing to quit KANNADA MEDIA industry !

    ReplyDelete
  4. Why this sorry state of affair of KANNADA tv journaldim ?
    you people should ask people like Ranganna, G.N.Mohan, Manjunath- why you are out of the ring and what are 'sins' committed by you ?

    ReplyDelete
  5. When HR ranganath was there in suvarna , weakness and loopholes of Hameed and Gaurish akki were not visible. esp in political and legal issues. Ranganna was covering up. now both are naked with their weaknesses. Hameed rarely visible on the screen. No involvement, no strength no confidence in his talk. Sorry to say Hameed Gave up. Proved he is only an anchor.

    ReplyDelete
  6. ನೀವು ಹೇಳೋದು ನೂರಕ್ಕೆ ನೂರು ನಿಜ. ಇವತ್ತು ರಾಜ್ಯಪಾಲರ ಒಂದು ಪತ್ರಿಕಾ ಹೇಳಿಕೆ ಪ್ರಕಟಗೊಂಡಿದೆ. ಅವರು ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರ ಕುಸಿದು ಬಿದ್ದಿದೆ ಎಂಬ ಕಾರಣಕ್ಕೆ ಸರ್ಕಾರ ವಜಾಗೊಳಿಸಲು ಶಿಫಾರಸು ಮಾಡಿದ್ದಾರೆ. ಅನುಚ್ಛೇದ 356 (1) ಇದನ್ನು ಸ್ಪಷ್ಟವಾಗಿ ಹೇಳುತ್ತದೆ. ಈ ಅಂಶವನ್ನು ನಮ್ಮ ಮೀಡಿಯಾದ ಪ್ರಭೃತಿಗಳು ಗಮನಿಸಲೇ ಇಲ್ಲ. ಎಲ್ಲರೂ ಮೆಜಾರಿಟಿ ಬಗ್ಗೆಯೇ ಹೇಳುತ್ತಾ ಬಂದರು. ಅಲ್ಪಮಟ್ಟದ ಕಾನೂನು ಜ್ಞಾನ ಇದ್ದಿದ್ದರೆ ಈ ಅಂಶವನ್ನು ಗಮನಿಸಿ, ರಾಜ್ಯಪಾಲರು ಯಾಕೆ ಈ ಶಿಫಾರಸು ಮಾಡಿರಬಹುದು ಎಂಬುದನ್ನು ವೀಕ್ಷಕರ ಮುಂದೆ ಇಡಬಹುದಿತ್ತು.

    ReplyDelete
  7. ರಾಜ್ಯದ ಮುದ್ರಣ ಮತ್ತು ದೃಶ್ಯ ಮಾದ್ಯಮಗಳಿಗೆ ಬಿಜೆಪಿ ಮೇನಿಯಾ ಬಂದಂತಿದೆ. ಸತ್ಯವನ್ನು ಮರೆಮಾಚಿ ರಾಜ್ಯ ರಾಜಕೀಯ ವಸ್ತುಸ್ಥಿತಿಯನ್ನು ಮರೆಮಾಚಲಾಗುತ್ತಿದೆ.

    ReplyDelete
  8. "Shaksarellaru Rashtrpati bhavankke teraliddare" - annodunne - Estu sati, estu boru baro haage eegina Nirpakaru helataare andre.. avaru Enu Home work maadiralla annodu gottagutte.. helidde helodu.. matte matte - studiio dinda nu same prashnegalu...

    ondond sati...olle comedy ansutte.. e newsgallana nodidaaga..

    ReplyDelete
  9. ಸಾಮಾನ್ಯವಾಗಿ ಪತ್ರಕರ್ತರಿಗೆ, ರಾಜಕೀಯ ಬಿಕ್ಕಟ್ಟು, ಬಜೆಟ್ ಮಂಡನೆ ಯ ವಿಷಯ ಗಳು ಅವರ ವೃತ್ತಿಗೆ, ಪಾಂಡಿತ್ಯ ಕ್ಕೆ ಸವಾಲೆನಿಸುವ ಮತ್ತು ಆಪ್ತ ವೆನಿಸುವ ವಿಷಯಗಳು. ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ವಿಷಯ ವನ್ನು ಶಾಸ್ತ್ರಿಯ ವಾಗಿ , ಗಂಭೀರವಾಗಿ ಪ್ರಸ್ತುತ ಪಡಿಸಬಹುದಿತ್ತು. But Hameed palya is not showing involvement. we do not see any passion. ರಾಜಭವನ ದ ಎದುರು, ಬಿಜೆಪಿ ಶಾಸಕರು, ರಾಜ್ಯ ಪಾಲ ರ ಭೇಟಿಗಾಗಿ ಸಾಲುಗಟ್ಟಿ ನಿಂತದ್ದು ಹಮೀದ್ ಗೆ ಕೇವಲ " ಮುಜುಗರದ ಸನ್ನಿವೇಶ" ವಾಗಷ್ಟೇ ಕಂಡಿತು. ಅದನ್ನೇ ಹತ್ತಾರು ಸಲ ಹೇಳಿದರು. ಅದರ ಹಿಂದಿನ political , legal ಅಥವಾ ಆಡಳಿತಾತ್ಮಕ ವಿಚಾರಗಳು , ಜಿಜ್ಞಾಸೆಗಳು, ಇತ್ಯಾದಿಗಳ ಪ್ರಸ್ತಾಪವನ್ನೇ ಮಾಡಲಿಲ್ಲ. forget about article 356, supreme court verdict, and other legal issues !.
    jaya prakash shetti , lakshman hoogar, ananth chinivar, shashidhar bhatt, even shivprasad are handling the issue in a better manner. and raviraj valalambe, ajith, subhash hoogar who were best are missing now. where are they? any idea?

    ReplyDelete
  10. It is really a BJP mania. medias are not giving real picture. may be in oct there was a speculation that Gouvernour might be wrong . but now court verdict clearly says that what had speaker did was completely wrong,and unconstitutional. "If supreme court says something then it is final." so it means that we have to set clock back to oct 2010. is not it?

    ReplyDelete
  11. ನಾನು ಅರ್ಥ ಮಾಡಿಕೊಂಡ ಮಟ್ಟಿಗೆ ಹೇಳೋದಾದ್ರೆ, ಎಲ್ಲ ಮೀಡಿಯಾ ಪ್ರಭುಗಳು ಸರ್ಕಾರದ ಪರ ಲಾಬಿ ನಡೆಸುವಂತೆ ಕಾಣುತಿತ್ತು ಕನ್ನಡ ದೃಶ್ಯ ಮಾಧ್ಯಮಗಳ ವರಸೆ (TV9 ಹೊರತು ಪಡಿಸಿ). ಇದೆ ಸಂದರ್ಭದಲ್ಲಿ ಕಂಡಿತವಾಗಿಯು ರಂಗಣ್ಣನ ಮಿಸ್ಸಿಂಗ್ ಎದ್ದು ಕಾಣುತಿತ್ತು. ರಂಗಣ್ಣ ಮತ್ತೆ ಬರಲಿ ಟಿವಿ ಮಾಧ್ಯಮಕ್ಕೆ ಎಂಬುದು ನಮ್ಮ ಹಾರೈಕೆ.

    ReplyDelete
  12. If supreme court says something then it is final.
    -----------------------------------------------
    Supreme court slamed P M on C V C case why he dint resign ?

    ReplyDelete
  13. Governors must never act as if they have a political agenda. Frankly, Bhardwaj in Ktaka has been a disaster- Sagarika ghose in twitter

    Look who commented like this ? The person who is left are close to congress .

    Every one can see he has agenda behind that report , He gave appointment to Y S V Dutta on sunday at 2 pm but not state law minister what the hell ? Shame on You H R Bhardwaj .

    ReplyDelete
  14. ರಾಜ್ಯಪಾಲರು ಮೊದಲ ಬಾರಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಗೆ ಮಾಡಿದ ಶಿಫಾರಸು ಸರಿಯಾಗಿತ್ತು. ಆಗಲೇ ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸಬೇಕಿತ್ತು. poor congress people.. ಅಂಜಿದರು. ಮೊನ್ನೆ ಸುಪ್ರೀಂ ಕೋರ್ಟ್ ತೀರ್ಪು ಬಂದಾದ ಮೇಲೆ ಕೊಟ್ಟ ವರದಿಯನ್ನಾದರೂ ಪುರಸ್ಕರಿಸದೆ ತಪ್ಪು ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿ ಏಳುತ್ತಿರುವ ಯಡ್ಡಿ ಅಂಡ್ ಕಂಪನಿಯಿಂದ ಕರ್ನಾಟಕಕ್ಕೆ ಮುಕ್ತಿಯೇ ಇಲ್ಲದಂತಾಗಿದೆ. ಇವರನ್ನು ಸಮರ್ಥಿಸಿಕೊಳ್ಳುವ ತಲೆತಿರುಕರೂ ಇರುವುದು ವಿಪರ್ಯಾಸ. ಭಾರದ್ವಾಜ್ ಅವರನ್ನು ದೂಷಿಸುವವರಿಗೆ ಕಾನೂನಿನ ಜ್ಞಾನ ಇಲ್ಲ, ಮನುಷ್ಯತ್ವ ಮೊದಲೇ ಇಲ್ಲ. ಮೀಡಿಯಾಗಳಲ್ಲಿ ಸರ್ಕಾರಿ ಪ್ರಯೋಜಿತ ವರದಿಗಳೇ ಕಾಣಿಸುತ್ತಿವೆ.

    ReplyDelete
  15. ರಂಗಣ್ಣ ಇಲ್ಲದೆ ಸುವರ್ಣ ನ್ಯೂಸ್ ನೋಡೋದಿಕ್ಕೆ ಆಗ್ತಾ ಇಲ್ಲ.. ಅವ್ರು ಎಲ್ಲಿದಾರೆ ಅಂತ ಸ್ವಲ್ಪ ಚೆಕ್ ಮಡಿ ಹೇಳಿ... ಆ ರೀತಿಯ ಕಡಕ್ ಶೈಲಿ, ನಿರೂಪಣೆ, ವಿಷಯ ಜ್ಞಾನ, ಯಾರಲ್ಲೂ ಕಾಣಿಸ್ತಾ ಇಲ್ಲ...

    ReplyDelete
  16. Ranganath was ok, but not exceptionally good.

    ReplyDelete
  17. 1. This blog is not for political view.
    2. The blogger's worry is not having proper anchor to handle some critical situation. Don't give your political views. My request to blogger is not to publish such comments.
    3. Meanwhile I am also missing Ranganath and like anchors.
    4. Any job should be passion not fashion.
    5. Show your commitments to the job and then you will enjoy it. You will get satisfaction after doing such a job.
    6. If you are doing for money, for boss or just to survive in this world(like bucketing) then at the end of the day it will not earn anything for you in long course.
    7. Do some home work, this is not exam (read for 35 and get pass), this is life. Read, get knowledge and then come infront of camera. Then see the difference.

    ReplyDelete
  18. @ಸಂಪಾದಕೀಯ, ಇಲ್ಲಿ ವಿವೇಕ್ ಹೇಳ್ತಿರೋದು ಸರಿಯಾಗಿದೆ... ಕಳೆದ ಬಾರಿಯೂ ಇಂತಹುದೇ ಸನ್ನಿವೇಶ ಸೃಷ್ಟಿಯಾದ ನಂತರದಲ್ಲಿ ಮಾದ್ಯಮದ ಎಷ್ಟು ಮಂದಿ 'ಪ್ರಶಸ್ತಿ'ಗೆ ಭಾಜನರಾದರು ಎಂಬುದು ಯಾರಿಗೂ ತಿಳಿಯದ ವಿಚಾರವೇನಲ್ಲ.ಮಾದ್ಯಮ ಲೋಕದಲ್ಲಿ ವಿದ್ಯಮಾನಗಳ ಅರಿವು ಇಲ್ಲದ ಮಂದಿ ಬಹಳಷ್ಟು ಜನ ಇದ್ದಾರೆ. ಒಂದು ವಿಚಾರದ ಬಗ್ಗೆ ಮಾತನಾಡಲು ಅದಕ್ಕೆ ಪೂರಕವಾದ ವಿಚಾರಗಳನ್ನು ಅರಿಯುವುದು ಅವಶ್ಯವೇ ಆಗಿದೆ.ಆದರೆ ನೇಮಕಾತಿ ಸಂಧರ್ಭದಲ್ಲಿ ಪದವಿಯನ್ನ ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಾರೆಯೇ ವಿನಹ ಆತನಿಗೆ ಪ್ರಾಪಂಚಿಕ ಅರಿವು ಏನಿದೆ, ರಾಜಕೀಯ, ಸಾಮಾಜಿಕ, ಸಂವಿಧಾನಿಕ ಇತ್ಯಾದಿ ಅರಿವು ಇದೆಯೇ ಆತನ ಸಾಮರ್ಥ್ಯವೇನು ಎಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಇದು ಇವತ್ತಿನ ದುಸ್ಥಿತಿಗೆ ಕಾರಣ. 'ಗ್ರಹಿಕೆ' ಮತ್ತು 'ಸಂವೇದನೆ', ಕ್ರಿಯಾಶೀಲತೆ ಇವತ್ತಿನ ಪತ್ರಕರ್ತರ ದೊಡ್ಡ ಕೊರತೆ. ಬಹಳ ದಿನಗಳ ನಂತರ ಈ ವಿಚಾರದ ಕುರಿತು ಗಮನ ಸೆಳೆದ ಸಂಪಾದಕೀಯಕ್ಕೆ ಧನ್ಯವಾದಗಳು. ಇನ್ನು ರಂಗನಾಥ್ ಇವರ ವಿಚಾರ ತೀಕ್ಷಣತೆ ಓಕೆ ಆದರೆ ಅತಿಯಾದ ಮಾತು,ತೆರೆಯ ಮೇಲಿನ ಪ್ರದರ್ಶನ ಮಾತ್ರ ರೇಜಿಗೆ ಹುಟ್ಟಿಸಿತ್ತು.Anchor ಗಳು ವಿಚಾರವನ್ನ ಚರ್ಚೆಗೆ ತರುವಷ್ಟು ಪ್ರಬುದ್ದತೆಯನ್ನು ಹೊದಿದವರಾರು ಕಾಣುತ್ತಿಲ್ಲ. ಇದ್ದುದರಲ್ಲಿ ಲಕ್ಷ್ಮಣ್ ಹೂಗಾರ್ ಓಕೆ.

    ReplyDelete
  19. @ anny
    ಇವರನ್ನು ಸಮರ್ಥಿಸಿಕೊಳ್ಳುವ ತಲೆತಿರುಕರೂ ಇರುವುದು ವಿಪರ್ಯಾಸ. ಭಾರದ್ವಾಜ್ ಅವರನ್ನು ದೂಷಿಸುವವರಿಗೆ ಕಾನೂನಿನ ಜ್ಞಾನ ಇಲ್ಲ, ಮನುಷ್ಯತ್ವ ಮೊದಲೇ ಇಲ್ಲ. ಮೀಡಿಯಾಗಳಲ್ಲಿ ಸರ್ಕಾರಿ ಪ್ರಯೋಜಿತ ವರದಿಗಳೇ ಕಾಣಿಸುತ್ತಿವೆ.
    ------------------------------------------
    Houdu houdu Supreme court advocate ada soli sorbajee , mukhal rahotgi mathu hesrantha lawyers yella thale thirakru neevu matra samaja udarakaru :)

    ReplyDelete
  20. Ranganna is an irritating personality on screen. Simply donot praise him. ರಂಗಣ್ಣ ಇಲ್ಲದೇ ಕನ್ನಡ ವೀಕ್ಷಕರು ಇಂಗ್ಲೀಷ್ ಚಾನಲ್ ನೋಡಬೇಕಾಯಿತು ಅಂತೆಲ್ಲಾ ಹೇಳುವುದು ನಿಮ್ಮ ಮೂಗಿನ ನೇರದ ಮಾತಾಗುತ್ತದೆ ಅಷ್ಟೆ.

    ReplyDelete
  21. ನಿಜ, ಟಿವಿ9ನಲ್ಲಿ ಲಕ್ಷ್ಮಣ್ ಹೂಗಾರ್ ಒಬ್ಬ ಸಮರ್ಥವಾಗಿ ಬೆಳೆಯುತ್ತಿರುವ ವಿಶ್ಲೇಷಕ ಎಂಬುದನ್ನು ಗಮನಿದ್ದೇನೆ.. ಸುವರ್ಣ ನ್ಯೂಸ್ನ ಗೌರೀಶ್ ಅಕ್ಕಿ ಅವರು ಒಳ್ಳೆಯ ನಿರೂಪಕರೇನೋ ನಿಜ; ಆದರೆ ರಂಗನಾಥ್ರಂಥವರಿಂದ ಆ ಧೈರ್ಯ - ತೋಳನಂಥಾ ಸೂಕ್ಷ್ಮತೆ- ಹರಿತವಾದ ಪ್ರತ್ಯುತ್ಪನ್ನಮತಿತ್ವ ಮತ್ತು ಒಂದು ಮಟ್ಟದ ಅಗ್ರೆಸಿವ್ನೆಸ್ಗಳನ್ನು ವಿಶೇಷವಾಗಿ ರಾಜಕೀಯ ವಿಶ್ಲೇಷಕನೊಬ್ಬ ಹೀರಿಕೊಳ್ಳಲೇಬೇಕು ಎಂಬುದನ್ನೂ ಗಮನಿಸಿದರೆ ಚೆನ್ನ. ಹಾಗೆ ನೋಡಿದರೆ,ಒಂದು ರೀತಿಯ ಮೃದುವಾದ ಅಪ್ರೋಚೇ ಗೌರೀಶ್ ಅವರ ಬಲ ಮತ್ತು ಮಿತಿ ಎರಡೂ! ಹಮೀದ್ ಪಾಳ್ಯರ ಬಗ್ಗೆ ಖುಷಿಯಿದೆ. ಆದರೂ ರಂಗನಾಥ್ ಕೂತು ಹೋದ ಜಾಗವಲ್ಲವೇ?..... ಏನೋ ಕಾಣೆ ಕಾಣೆ....
    - ದಿನೇಶ್ ಕುಕ್ಕುಜಡ್ಕ

    ReplyDelete
  22. ನಮಗೆ ನಿರೂಪಣೆ ಮಾಡಲು ಆಸಕ್ತಿಯೇನೋ ಇದೆ. ಆದರೆ ಈ ಪತ್ರಿಕೋದ್ಯಮದಲ್ಲೂ ಜಾತಿಗೆ ಮಣೆಹಾಕುತ್ತಿರುವವರ ಮಧ್ಯೆ ನಮಗೆ ಅವಕಾಶ ಸಿಗುತ್ತಿಲ್ಲ.ನಾನೀ ಮಾತನ್ನು ಕೇವಲ ಮಾತಿಗೆ ಹೇಳುತ್ತಿಲ್ಲ ಹಲವಾರು ಬಾರಿ ನಿರೂಪಕ ಸ್ಥಾನಕ್ಕೆ ಅರ್ಜಿ ಹಾಕಿ ಪ್ರಯತ್ನಿಸಿ ವಿಫಲನಾಗಿ ಬೇಸತ್ತು ಹೇಳುತ್ತಾ ಇದ್ದೀನಿ.ನಿಜವಾಗಲೂ ನನಗೆ ಒಂದು ಅವಕಾಶ ನೀಡಿದರೆ ಒಬ್ಬ ಒಳ್ಳೆಯ ನಿರೂಪಕನಾಗುವ ಅರ್ಹತೆಯು ನನ್ನಲ್ಲಿದೆ.

    ReplyDelete
  23. @ dinesh kukkujadka- yes gaurish akki s approach is different. he is more towards art and literature. he can handle social issue in a better manner. so he handles political crisis as a present generation social problem , its impact etc. in that case CHIEF should decide who should handle what. and the CHIEF himself is not impressive these days. His jugalbandi has become fish market now a days. has no control over guest s irrelevant talk. No need of justifying him by saying that "ಆದರೂ ರಂಗನಾಥ್ ಕೂತು ಹೋದ ಜಾಗವಲ್ಲವೇ?"- once some body takes some seat, or responsibility they should give proper justice to that.

    ReplyDelete
  24. yes. i agree with you- dinesh kukkujadka

    ReplyDelete
  25. We need a reporter like H.R. Ranganath. I do not understand why Suvarna Channel has not been able to retain this talented news analyst. Suvarna news is known by H.R. Ranganth. This is my request to H.R. Ranganath that wherever u r, please come to the limelight in any of the channels. We miss u lot sir....I used to watch suvarna channel only because of u...sir..Please make a reentry again...sir...This is the voice of karnataka..

    ReplyDelete
  26. "ಖಾಲಿತಲೆಯ ನಿರೂಪಕರು.." - Title is superb. anchors do not do any homework, do not show any commitment , passion towards their job. do not have subject knowledge. these are clearly visible on screen. Do they think audience are stupids?

    ReplyDelete
  27. ರಂಗನಾಥ ಪರ ಲಾಬಿ ಮಾಡುವಂತಿದೆ ಈ ಪೋಸ್ಟ್. ರಂಗನಾಥ ಏನೂ ಆದರ್ಶ ೆಎನ್ನುವಂಥ ನಿರೂಪಕರಲ್ಲ. ಒಬ್ಬ ಗೊಣಗುವ, ಇಡೀ ಜಗತ್ತಿಗ ತಾನೇ ಉತ್ತಮ ಮನುಷ್ಯ ಉಳಿದವರೆಲ್ಲರೂ ಕೆಲಸಕ್ಕೆ ಬಾರದವರು ಎಂಬ ಧೋರಣೆ ಅವರದ್ದು.

    ReplyDelete
  28. yes I do agree with this blog... Now I am switching to Times Now or IBN channel to learn karnataka politics developments... they do good discussion....

    When Ranganath was there I used to watch Suvarna News which was giving helpful and meaningful info rather bullshit....

    Even I could understand Governor sent recomondation not based on Majority but something else... but tv channels (including TV9) saying something...

    Though Laxman does good reporting... but he seems to be pro Congress... not a parallel discussion so avoiding TV9.....

    Not understanding people forgetting or not remembering Deepak Thimmaih when he is doing good job in Current Live.. but Udaya News is not giving him much scope... still he is there...

    Hope Ranganath will back but not with the politically motivated news channel like Kasturi Newz... if so any how we are going to reject Highly politically motivated channel along with our Fav Rangnna...

    ReplyDelete
  29. ನೂರಕ್ಕೆ ನೂರರಷ್ಟು ಸತ್ಯದ ಮಾತನ್ನು ಹೇಳಿದೆ ಸಂಪಾದಕೀಯ....ರಂಗನಾಥ್ ಸರ್ ನಷ್ಟು ಅದ್ಭುತವಾಗಿ ರಾಜಕೀಯ ವಿಶ್ಲೇಷಣೆ ಯನ್ನು ಯಾರೂ ಮಾಡಲಾರರು...ರಂಗಣ್ಣ ಆದಷ್ಟು ಬೇಗ ನ್ಯೂಸ್ ಚಾನೆಲ್ ನಲ್ಲಿ ಕಾಣಿಸಿಕೊಳ್ಳಲಿ ಎಂಬುದೇ ನಮ್ಮ ಬಯಕೆ....

    ReplyDelete
  30. ನೀವಿದನ್ನು ಪ್ರಕಟಿಸುವುದಿಲ್ಲ. ಆದರೆ ಒಮ್ಮೆ ಓದಿಬಿಡಿ. ನೀವು ಈ ತನಕ ಬರೆದ ಲೇಖನಗಳಲ್ಲೇ ವಾಕರಿಕೆ ಬರುವ ಲೇಖನ ಅ೦ತ ಒ೦ದಿದ್ದರೆ ಅದು ಇದು. ರ೦ಗನಾಥ್ ಬೆ೦ಗಳೂರಿನ ಇತರ ಕೆಲ ಪತ್ರಕರ್ತರಿಗಿ೦ತ ಬುಧ್ದಿವ೦ತರು ಮತ್ತು ಸ್ವಲ್ಪ ಹೆಚ್ಚು ಓದಿದವರು ಎನ್ನುವುದರಲ್ಲಿ ಸ೦ಶಯ ಇಲ್ಲ. ಆದರೆ ನಿಮ್ಮ ಹೊಗಳಿಕೆ ಒ೦ದು ರೀತಿಯಲ್ಲಿ ಭಟ್ಟ೦ಗಿತನದ೦ತೆ ಕಾಣಿಸುತ್ತದೆ. ರ೦ಗನಾಥ್ ಅವರ ಟಿವಿ ಕಾರ್ಯಕ್ರಮಗಳನ್ನು ನೋಡುತಿದ್ದರೆ ಕನ್ನಡ ಟಿವಿ ಜರ್ನಲಿಸ೦ ಇದೇನು ಶಾಪವೋ ಅ೦ತ ಅನ್ನಿಸುತಿತ್ತು. ಇದು ಹಲವಾರು ಜನರ ಅನಿಸಿಕೆ. ಇ೦ತ ಅಭಿಪ್ರಾಯಗಳನ್ನು ಕೇಳಿದ ನ೦ತರವೇ ಅದನ್ನು ಪರಾಂಬರಿಸಲು ನಾನು ಅವರ ಕಾರ್ಯಕ್ರಮ ನೋಡಲು ಪ್ರಾರ೦ಬಿಸಿದೆ. ಇ೦ಗ್ಲಿಶ್ ನಿರೂಪಕರಿಗೆ ಸಮನಾಗಿ ಅವರು ರಾಜಕೀಯ ವಿಶ್ಲೇಷಣೆ ನಡೆಸುತ್ತಿದ್ದರು ಎ೦ಬುದು ನಿಮ್ಮ ಅಭಿಪ್ರಾಯ ಇರಬಹುದು. ಯಾವ ಇ೦ಗ್ಲೀಷ್ ನಿರೂಪಕರನ್ನು ಮನಸ್ಸಲ್ಲಿಟ್ಟುಕೂ೦ಡು ಇದನ್ನು ಬರೆದಿರಿ? ಅರ್ನಾಬ್ ಗೊಸ್ವಾಮಿ ಎ೦ಬ ಪರಮ ಅಹ೦ಕಾರಿ ಮತ್ತು ಏಕಪಕ್ಷೀಯ ವಾದ ಮ೦ಡಿಸುವ ಇ೦ಗ್ಲಿಷ್ ನಿರೂಪಕನ poor cousin ಆಗಿ ಕ೦ಡು ಬರುತಿದ್ದರು ರ೦ಗನಾಥ್. ಜ್ನಾನ ಅ೦ದರೆ ಅಹ೦ಕಾರವಲ್ಲ. ವಿಶ್ಲೇಷಣೆ ಎ೦ದರೆ snide remarks ಮಾತ್ರವಲ್ಲ. Pontification ಅಲ್ಲ. After him deluge ಎ೦ಬ ಲೂಯಿ ದೊರೆಗಳ ರೀತ್ಯ ನಿಮ್ಮ ವಾದ ನೀವು ರ೦ಗನಾಥ್ ಅವರಿಗೆ ಯಾವುದೊ ಕಾರಣಕ್ಕಾಗಿ ಋಣಿಯಾಗಿರುವ೦ತಿದೆ. ಯಾರಿಗೂ ತಿಳಿಯದ ವಿಷಯವೊ೦ದನ್ನು ಎತ್ತಿ ಅದರಲ್ಲಿ ಅನುಕೂಲಕರವಾದ ಸುಳ್ಳನ್ನು ತುರುಕಿಸಿದರೆ ಕನ್ನಡದ ನೋಡುಗರಿಗೆ, ಓದುಗರಿಗೆ ಅರ್ಥವಾಗುವುದಿಲ್ಲ (ಅರ್ಥವಾಗದವರು ಅವರನ್ನು ignore ಮಾಡುತ್ತಾರೆ) ಎ೦ಬ ತತ್ವದ ಮೇಲೆ ಪತ್ರಿಕೋದ್ಯಮ ಮಾಡುತ್ತಿರುವವರ ಸಾಲಿನಲ್ಲೇ ಇನ್ನೋರ್ವ ನಿಮ್ಮ ರ೦ಗಣ್ಣ. ಅಳಿದೂರಿಗೆ ಉಳಿದವನೇ ರ೦ಗ. ಕನ್ನಡ ಟಿವಿ ಯಾಕೆ ಪತ್ರಿಕೊದ್ಯಮದಲ್ಲೂ ಸ೦ವೇದನಾ ಶೀಲ , ಬೇಡಾ ಸ್ವಲ್ಪ ಓದಿಕೊ೦ಡವರ ಸ೦ಖ್ಯೆ ಕಡಿಮೆ ಇದೆ. aadare ಕ್ಷಮಿಸಿ. ನೀವು ಹೇಳುವ ಖಾಲಿ ತಲೆಯ ನಿರೂಪಕರು ನೀಡುತ್ತಿರುವುದಕ್ಕಿ೦ತ ಹೆಚ್ಚಿನ ಒಳನೋಟಗಳನ್ನೇನೂ ರ೦ಗನಾಥ್ ಈ ವರೆಗೆ ನೀಡಿಲ್ಲ. (ನಾನು ಕ೦ಡ ಮಟ್ಟಿಗೆ). ಆಳವಾದ ವಿಶ್ಲೇಷಣೆ, ಸೂಕ್ಷ್ಮವಾದ ಒಳನೋಟಗಳಿರುವ ವ್ಯಕ್ತಿಯ ಅಹ೦ ಅನ್ನು ಸಹಿಸಿಕೊಳ್ಳಬಹುದು. ಆದರೆ ಅಪಕ್ವತೆ ಮತ್ತು ಅಹ೦ಕಾರಗಳ ಕಾ೦ಬಿನೇಶನ್ ಇದೆಯಲ್ಲಾ. ಅದನ್ನು ಸಹಿಸುವುದಕ್ಕೆ ಸಭ್ಯರಿಗೆ ಬಹಳ ಕಷ್ಟ. ಅದಕ್ಕಿ೦ತ ಖಾಲಿ ತಲೆಯವರೇ ಮೇಲು. ಕರ್ನಾಟಕದ ಪ್ರಸ್ತುತ ಸಾ೦ವಿದಾನಿಕ ಬಿಕ್ಕಟ್ಟು ರಾಷ್ಟ್ರ ಮಟ್ಟದ ಇ೦ಗ್ಲಿಷ್ ನಿರೂಪಕರಿಗೆ, ಕಾನೂನು ಪ೦ಡಿತರಿಗೇ ಅರ್ಥವಾಗಿಲ್ಲ. ಇ೦ತಹ ಸ೦ಧರ್ಭದಲ್ಲಿ ರ೦ಗನಾಥ ಏನಾದರೂ ಇದ್ದಿದ್ದರೆ ತಾನೇ ಸುಪ್ರ್ರೀ೦ ಕೋರ್ಟ್ ನ ಸ೦ವಿದಾನಿಕ ಪೀಠ ಅ೦ತ ಪರ್ಮಾನು ನೀಡುತಿದ್ದರು. ಕನ್ನಡಿಗರನ್ನು ಈ ಬಿಕ್ಕಟ್ಟಿನಿ೦ದ ಪಾರುಮಾಡಿದ ರಾಜಿವ್ ಚ೦ದ್ರಶೇಖರ್ ಅವರಿಗೆ ಧನ್ಯವಾದಗಳು

    ReplyDelete
  31. @ anonymous- ಅರ್ನಾಬ್ ಗೊಸ್ವಾಮಿ ಪರಮ ಅಹ೦ಕಾರಿ ಮತ್ತು ಏಕಪಕ್ಷೀಯ ವಾದ ಮ೦ಡಿಸುವ ಇ೦ಗ್ಲಿಷ್ ನಿರೂಪಕ. you are hundred percent correct. but the comparison you have made is wrong. Ranganna is very much different from him. ಅರ್ನಾಬ್ ಗೊಸ್ವಾಮಿ is really a combination ofಅಪಕ್ವತೆ ಮತ್ತು ಅಹ೦ಕಾರ and with high tempo,and hyper tensed attitude. ranganna s ಅಹ೦ಕಾರ was positive and healthy. more over it was notಅಹ೦ಕಾರ but ಅಹ೦. one should have such ego.and ranganna deserves it. persons who are capable, intelligent, with having enough level of self realization will always have such ಅಹ೦. why not? it is positive always. In ranganna s case there was not any ಅಪಕ್ವತೆ. you should have watched his shows on politics. not public voice programme. actually the public voice was the show which ruined every thing.
    to make the issue simple you can just take this egs of 2 persons who possess that kind of positive , healthy ego or ಅಹ೦. one is minister suresh kumar and other is actor director ravichandran.

    even now if "some body" says "ಅದಕ್ಕಿ೦ತ ಖಾಲಿ ತಲೆಯವರೇ ಮೇಲು." then it shows "his" ಅಹ೦ಕಾರ and intolerance towards other s intelligence. and suggests that "he" is more comfortable with ಖಾಲಿ ತಲೆಯವru. because he wants to console his own ego.

    ReplyDelete
  32. I would agree with the anonymous above that he is more intelligent than an average Bangalore journalit but he thinks himself of too much without having to offer anything great except his sharp toungue. The fact that so many of us here are commening on this post shows there is something in that person but I do not think it is positive. Vatal Nagaraj is also an above average politician. Someone compares his ego to Suresh Kumar's and i was surprised. I do not think Suresh Kumar is as silly as Ranga nor is he so arrogant. Suresh Kumar's articles in VK and KP have very poor standards of analysis and are more emotional than substantive. That apart I do not think there is any comparison of these two people's ego...It was sickening to see Ranga call Suresh Kumar as "Suresh" "Suresh" in his programme...follwing English style and without knowing that the English way of addressing someone senior in first name does agree with Kannada...anyway, he is one of the better read kannada journalists, undoubtedly...

    ReplyDelete
  33. ನಿಮ್ಮ ಸಂಪಾದಕೀಯದಲ್ಲಿ ಕನ್ನಡಪ್ರಭದ ಮಾಜಿ ಎಡಿಟರ್ ರಂಗನಾಥ್ ಅವರ ಕಾರ್ಯವೈಖರಿಯನ್ನು ಹೊಗಳಿ ಬರೆದಿದ್ದೀರಿ.ತಮ್ಮ ಮೂಗಿನ ನೇರಕ್ಕೆ ಮಾತನಾಡುವ ರಂಗನಾಥ್ ಬೇರೆಯವರ ಬುದ್ಧಿವಂತಿಕೆ,ಜ್ಞಾನಕೌಶಲ್ಯವನ್ನು ಮಾತಿನಲ್ಲೇ ಅಡಗಿಸಲು ಪ್ರಯತ್ನಿಸುತ್ತಾರೆಂಬುದರಲ್ಲಿ ಎರಡುಮಾತಿಲ್ಲ. ಸುವರ್ಣ ಚಾನೆಲ್‌ನಲ್ಲಿ ಅವರು ಸಾಧಿಸಿದ್ದಾದರೂ ಏನು ಎಂದು ಅವಲೋಕನ ಮಾಡಿದಾಗ, ಟಿವಿ 9ನ ಕಾರ್ಯಕ್ರಮಗಳನ್ನು ಹೆಕ್ಕಿ ತೆಗೆದು ಅದರಲ್ಲಿ ಬದಲಾವಣೆ ಮಾಡಿದ ಕಾರ್ಯಕ್ರಮಗಳನ್ನೇ ಬಿತ್ತರಿಸುವ ಮೂಲಕ ಒಂದಷ್ಟು ಟಿಆರ್‌ಪಿ ರೇಟಿಂಗ್ ಬರುವಂತೆ ಮಾಡಿದ್ದಾರೆಂಬುದನ್ನು ಬಿಟ್ಟರೆ ಅದರಲ್ಲಿ ಸ್ವಂತಿಕೆಯನ್ನು ತಂದಿಲ್ಲ. ರಂಗನಾಥ್ ಅಲ್ಪಸ್ವಲ್ಪ ಕಾನೂನು ಮತ್ತು ರಾಜಕೀಯ ಜ್ಞಾನವನ್ನು ಹೊಂದಿರಬಹುದು.
    ಇನ್ನು ಕನ್ನಡ ಚಾನೆಲ್‌ಗಳಲ್ಲಿ ರಾಜಕೀಯ ವಿದ್ಯಮಾನಗಳ ವರದಿ, ವಿಶ್ಲೇಷಣೆ ಮಾಡುವುದಕ್ಕೆ ಪತ್ರಕರ್ತರು ಸಿಗುವುದಿಲ್ಲ ಎಂದು ಕೊರಗುವುದು ಸರಿಯಲ್ಲ. ಟಿವಿ ಚಾನೆಲ್‌ಗಳು, ಪತ್ರಿಕೆಗಳು ಕೇವಲ ವಿದ್ಯಾರ್ಹತೆ ಇರುವ ವ್ಯಕ್ತಿಗಳಿಗೇ ಸ್ಥಾನಮಾನ ನೀಡಿ ಮುಂದೆ ತರುವುದರಿಂದ ಕಡಿಮೆ ವಿದ್ಯಾರ್ಹತೆ ಹೊಂದಿದ್ದರೂ ರಾಜಕೀಯ, ಕಾನೂನಿನ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿರುವ ಪತ್ರಕರ್ತರನ್ನು ಹೆಕ್ಕಿತೆಗೆಯುವ ಕೆಲಸವನ್ನು ಮಾಡಿದರೆ ಈ ಸಮಸ್ಯೆ ಪರಿಹಾರವಾಗಬಹುದು.

    ReplyDelete