Thursday, December 30, 2010

ವಿಶ್ವಾಸಾರ್ಹ ಪತ್ರಿಕೆಗೊಂದು ವಿಶ್ವಾಸಾರ್ಹತೆಯ ಸವಾಲು!

ಮಾನ್ಯ ಸಂಪಾದಕರೆ,
ನಿಮ್ಮದು ನಿಜಕ್ಕೂ ವಿಶ್ವಾಸಾರ್ಹವಾದ ಪತ್ರಿಕೆ. ವೈಯಕ್ತಿಕವಾಗಿ ನಿಮ್ಮ ಹಾಗು ನಿಮ್ಮ ಪತ್ರಿಕೆಯ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳಿಲ್ಲ. ಆದರೂ ನಿಮ್ಮದು ದೊಡ್ಡ ಸಂಸ್ಥೆ. ಅಲ್ಲೊಂದು ಇಲ್ಲೊಂದು ಭ್ರಷ್ಟ ಸಂತತಿ ಹಾಗೂ ಹೀಗೂ ಸ್ಥಾಪಿಸಿಕೊಳ್ಳುವುದು ಸಹಜ. ಈಗ ನಿಮ್ಮ ಗಮನಕ್ಕೆ ತರುತ್ತಿರುವುದೂ ಸಹ ಇಂಥದೇ ಸಂತತಿಯ ಕುರಿತು.

ವಿಜಯ ಕರ್ನಾಟಕವನ್ನು ನೋಡಿ, ಅಲ್ಲಿ ಕ್ಲೀನಿಂಗ್ ಕೆಲಸ ಚೆನ್ನಾಗಿಯೇ ನಡೆಯುತ್ತಿದೆ. ಅಂಥದ್ದು ನಿಮ್ಮಲ್ಲೂ ಮತ್ತೆಲ್ಲಾ ಮಾಧ್ಯಮ ಸಂಸ್ಥೆಗಳಲ್ಲೂ ಆಗಬೇಕು ಎಂಬುದೇ ನಮ್ಮ ಕಾಳಜಿ. ಇದು ಆಗದ ಹೊರತು ಪತ್ರಕರ್ತರಿಗೆ ಅಂಟಿರುವ ಭ್ರಷ್ಟಾಚಾರದ ರೋಗ ವಾಸಿಯಾಗುವುದಿಲ್ಲ. ವಾಸಿಯಾಗದೆ ಇದ್ದರೆ ಮುರುಘ ರಾಜೇಂದ್ರ ಶರಣರಂಥವರು ಪತ್ರಕರ್ತರನ್ನು ಕಿತ್ತು ತಿನ್ನುವ ನಾಯಿಗಳು ಎಂದು ಬೈಯುವುದೂ ತಪ್ಪುವುದಿಲ್ಲ. ನಿಮ್ಮದೇ ಪತ್ರಿಕೆಯ ಹಿರಿಯ ಪತ್ರಕರ್ತರು, ಹೌದು, ನಾವು ನಾಯಿಗಳೇ ಸರಿ ಎಂಬಂತೆ ಆತ್ಮನಿಂದನೆ ಮಾಡಿಕೊಳ್ಳುವುದೂ ತಪ್ಪುವುದಿಲ್ಲ. ಸದ್ಯಕ್ಕೆ ಪತ್ರಕರ್ತರನ್ನು ಕಿತ್ತು ತಿನ್ನುವ ನಾಯಿಗಳು ಎಂದು ಕರೆಯಲಾಗಿದೆ, ಮುಂದೆ ಹುಚ್ಚು ನಾಯಿಗಳು, ಕಂತ್ರಿ ನಾಯಿಗಳು, ಕಜ್ಜಿ ನಾಯಿಗಳು ಎಂದು ಕರೆಯುವಂತಾಗಬಾರದಲ್ಲವೆ?

ನಿಮ್ಮ ಗಮನಕ್ಕೆ ತರಲು ಬಯಸಿರುವ ವಿಷಯವನ್ನು ಪ್ರಸ್ತಾಪಿಸಬಯಸುತ್ತೇವೆ. ಇದು ಕಳೆದ ಆಗಸ್ಟ್ ತಿಂಗಳಲ್ಲಿ ನಡೆದದ್ದು. ಗುಲ್ಬರ್ಗ ದಕ್ಷಿಣ ವಿಧಾನಸಭಾ ಉಪಚುನಾವಣೆಯ ಸಂದರ್ಭದ ಕಥೆ ಇದು. ಈ ಕುರಿತು ನಿಮಗೆ ಒಟ್ಟು ಮೂರು ಪ್ರತ್ಯೇಕ ದೂರುಗಳು ಬಂದಿವೆ. ಆ ಕುರಿತು ನೀವು ತನಿಖೆ ಆರಂಭಿಸಿದ್ದೀರೋ ಇಲ್ಲವೋ ಎಂಬುದು ಇನ್ನೂ ಗೊತ್ತಾಗಬೇಕಿದೆ.

ಮೊದಲ ದೂರಿನ ಪ್ರಕಾರ ನಿಮ್ಮ ಬ್ಯೂರೋ ಮುಖ್ಯಸ್ಥರೊಬ್ಬರು ಜೆಡಿಎಸ್ ಅಭ್ಯರ್ಥಿಯ ಪುತ್ರನಿಂದ ಎರಡು ಲಕ್ಷ ರೂ.ಗಳನ್ನು ಚುನಾವಣಾ ಪ್ಯಾಕೇಜ್ ಹಣವಾಗಿ ಪಡೆದಿದ್ದಾರೆ. ಎರಡು ಲಕ್ಷ ರೂ.ಗಳಿಗೆ ಅವರು ರಿಲೀಸ್ ಆರ್ಡರ್ ಕೂಡ ಕೊಟ್ಟಿದ್ದಾರೆ. ಆದರೆ ಕೊಟ್ಟಿರುವುದು ಕೇವಲ ೯೭,೮೦೮ ರೂ.ಗಳಿಗೆ ರಸೀದಿ ಮಾತ್ರ. (ರಸೀದಿಗಳ ವಿವರ: ರಸೀದಿ ಸಂಖ್ಯೆ ೨೦೬ರಲ್ಲಿ ೧೨,೮೮೦ ರೂ, ರಸೀದಿ ಸಂಖ್ಯೆ ೨೧೩ರಲ್ಲಿ ೧೨,೮೮೦ ರೂ., ರಸೀದಿ ಸಂಖ್ಯೆ ೨೧೫ರಲ್ಲಿ ೧೧,೨೭೦ರೂ., ರಸೀದಿ ಸಂಖ್ಯೆ ೨೧೬ರಲ್ಲಿ ೧೨,೮೮೮ ರೂ., ಮತ್ತು ರಸೀದಿ ಸಂಖ್ಯೆ ೨೨೫ರಲ್ಲಿ ೪೭,೮೯೮ ರೂ.) ಉಳಿದ ಒಂದು ಲಕ್ಷಕ್ಕೂ ಮಿಕ್ಕಿದ ಹಣ ಏನಾಯಿತು?

ದೂರು ಹೇಳುವ ಪ್ರಕಾರ ನಿಮ್ಮ ಬ್ಯೂರೋ ಮುಖ್ಯಸ್ಥರು ಇಟ್ಟ ಡಿಮ್ಯಾಂಡ್ ೫ ಲಕ್ಷ ರೂಪಾಯಿಗಳದ್ದು. ಆದರೆ ಅಷ್ಟೊಂದು ಕೊಡಲು ಸಾಧ್ಯವಿಲ್ಲವೆಂದು ಅಭ್ಯರ್ಥಿಯ ಪುತ್ರ ಕೊಟ್ಟಿದ್ದು ಐನೂರು ರೂಪಾಯಿಗಳ ನಾಲ್ಕು ಬಂಡಲ್‌ಗಳು; ಎಂದರೆ ೨ ಲಕ್ಷ ರೂಪಾಯಿಗಳು.

ಒಂದು ಲಕ್ಷ ರೂಪಾಯಿ ನಿಮ್ಮ ಸಂಸ್ಥೆಗೆ ದೊಡ್ಡ ಹಣವೇನೂ ಅಲ್ಲ. ಆದರೆ ಈ ಅವ್ಯವಹಾರದಿಂದ ಪತ್ರಿಕೆಯ ವರ್ಚಸ್ಸಿಗೆ ಆಗುವ ಹಾನಿಯನ್ನು ಭರಿಸುವುದು ಹೇಗೆ? ಇದನ್ನು ನೀವೇ ಯೋಚಿಸಬೇಕು.

ಇನ್ನೊಂದು ಪ್ರತ್ಯೇಕ ದೂರನ್ನು ನೀಡಿರುವವರು ಕಾಂಗ್ರೆಸ್ ಪಕ್ಷದವರು. ಇದೇ ಚುನಾವಣೆಯ ಸಂದರ್ಭದಲ್ಲಿ ೭೦ ಸಾವಿರ ರೂಪಾಯಿಗಳನ್ನು ಇದೇ ಬ್ಯೂರೋ ಮುಖ್ಯಸ್ಥರು ಪಡೆದಿದ್ದಾರೆ ಎಂಬುದು ಅವರ ದೂರು. ಮೂರನೇ ದೂರು ಕೊಟ್ಟಿರುವವರು ಭಾರತೀಯ ಜನತಾ ಪಕ್ಷಕ್ಕೆ ಸಂಬಂಧಿಸಿದವರು. ಪಕ್ಷದ ಅಭ್ಯರ್ಥಿಯಿಂದ ಚುನಾವಣಾ ಪ್ಯಾಕೇಜ್ ಸುದ್ದಿಗಾಗಿ ೨ ಲಕ್ಷ ರೂಪಾಯಿಗಳನ್ನು ಪಡೆಯಲಾಗಿದೆ ಎಂಬುದು ದೂರಿನ ಸಾರಾಂಶ. ಹಣ ನೀಡಿಕೆ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಉದ್ಯೋಗಿಯೊಬ್ಬರೂ ಇದ್ದರು ಎಂದು ದೂರು ಹೇಳುತ್ತದೆ.

ದೂರು ಕೊಟ್ಟ ಎಲ್ಲರದೂ ಒಂದೇ ಬೇಡಿಕೆ. ತನಿಖೆ ಮಾಡಿ ಕ್ರಮ ಕೈಗೊಳ್ಳಿ ಎಂಬುದು. ತನಿಖೆ ನಡೆಸಲು ಅನುಕೂಲವಾಗುವಂತೆ ಹಣ ಕೊಟ್ಟವರ ಮೊಬೈಲ್ ಸಂಖ್ಯೆಗಳನ್ನೂ ಅವರು ನೀಡಿದ್ದಾರೆ. ಮಾತ್ರವಲ್ಲದೆ ಕೆಲವು ಕೆಲವು ಆಡಿಯೋ ಸಂಭಾಷಣೆಯ ಟೇಪ್ ಕೂಡ ತಮ್ಮ ಬಳಿ ಇರುವುದಾಗಿ ಹೇಳಿಕೊಂಡಿದ್ದಾರೆ.

ಎಲ್ಲ ದೂರುಗಳನ್ನು ಗಮನಿಸಿದರೆ ‘ದಾಲ್ ಮೇ ಕುಚ್ ಕಾಲಾ ಹೈ ಎಂದು ಅನ್ನಿಸುತ್ತದೆ. ಯಾರೋ ವೈಯಕ್ತಿಕ ದ್ವೇಷದಿಂದ ನೀಡಿರುವ ದೂರುಗಳ ಹಾಗೆ ಇವು ಕಾಣುವುದಿಲ್ಲ. ಎಲ್ಲೆಲ್ಲಿ ಎಷ್ಟು ಹಣವನ್ನು ಕೊಡಲಾಗಿದೆ, ಹಣ ಸ್ವೀಕರಿಸಲು ಯಾವ ಯಾವ ಸ್ಥಳಗಳನ್ನು ನಿಗದಿಪಡಿಸಲಾಗಿತ್ತು ಎಂಬುದನ್ನೂ ಸಹ ದೂರಿನಲ್ಲಿ ಬರೆಯಲಾಗಿದೆ.

ತಾವು ಕ್ರಮ ಕೈಗೊಳ್ಳದೇ ಹೋದಲ್ಲಿ ರಾಜ್ಯದ ಪ್ರಮುಖ ಪತ್ರಕರ್ತರಿಗೆ, ಲೋಕಾಯುಕ್ತರಿಗೆ, ಪ್ರಮುಖ ರಾಜಕೀಯ ಮುಖಂಡರಿಗೂ ದೂರಿನ ಪ್ರತಿಯನ್ನು ಕಳುಹಿಸುವುದಾಗಿ ದೂರುದಾರರು ಹೇಳಿಕೊಂಡಿದ್ದಾರೆ.

ಇದು ನಿಜಕ್ಕೂ ನಿಮ್ಮ ಸಂಸ್ಥೆಯ ವರ್ಚಸ್ಸಿಗೆ ಘಾಸಿಯಾಗುವಂಥದ್ದು. ಇಂಥದ್ದನ್ನು ಗಂಭೀರವಾಗಿ ಪರಿಗಣಿಸಬೇಕಾದ್ದು ನಿಮ್ಮ ಜವಾಬ್ದಾರಿಯೇ ಆಗಿದೆ. ನಿಮ್ಮ ತನಿಖೆಯಲ್ಲಿ ನಿಮ್ಮ ಬ್ಯೂರೋ ಮುಖ್ಯಸ್ಥರು ನಿರ್ದೋಷಿ ಎಂದು ಸಾಬೀತಾದರೆ ಸಂತೋಷ. ಆದರೆ ತನಿಖೆಯಂತೂ ನಡೆಯಲೇಬೇಕಲ್ಲವೆ?

ಇದನ್ನು ಹೇಗೆ ನಿಭಾಯಿಸುತ್ತೀರೋ ನೋಡಿ.

ಅಭಿಮಾನ ಹಾಗು ಗೌರವಪೂರ್ವಕವಾಗಿ
ನಿಮ್ಮ ಪತ್ರಿಕೆಯ ಓದುಗರು

Wednesday, December 29, 2010

ಟೈಮ್ಸ್ ಒಡೆಯರಿಗೆ ಕೃಷ್ಣಪ್ರಸಾದ್ ಕಳಿಸಿದ್ದ ಕೊನೆಯ ಮೇಲ್...

ಇದೊಂದು ವಿಶೇಷ ಪತ್ರ. ಕೃಷ್ಣಪ್ರಸಾದ್ ಅವರು ವಿಜಯ ಟೈಮ್ಸ್‌ನಿಂದ ಹೊರ ಬರುವುದಕ್ಕೆ ಮುನ್ನ ವಿಪಿಎಲ್ ಅಧ್ಯಕ್ಷ ಚಿನ್ನನ್ ದಾಸ್ ಅವರಿಗೆ ಕಳಿಸಿದ ಮೇಲ್ ಇದು. ಇದಾದ ನಂತರ ಕೃಷ್ಣಪ್ರಸಾದ್ ರಾಜೀನಾಮೆಯನ್ನೂ ಕೊಟ್ಟರು. ನಂತರ ಅವರನ್ನು ವಿನೋದ್ ಮೆಹ್ತಾ ತಮ್ಮ ಔಟ್ ಲುಕ್ ಪತ್ರಿಕೆಗೆ ಸಂಪಾದಕರನ್ನಾಗಿ ನೇಮಿಸಿದರು.

ಪತ್ರಿಕಾ ಸಂಸ್ಥೆಗಳ ಲಾಬಬಡುಕತನ, ಚಿತ್ರವಿಚಿತ್ರ ಮಾರ್ಕೆಂಟಿಗ್ ಸ್ಟ್ರಾಟೆಜಿಗಳು, ಸಂಪಾದಕೀಯ ಮಂಡಳಿ ಕುರಿತಾದ ಟೇಕನ್ ಫಾರ್ ಗ್ರಾಂಟೆಡ್ ನಿಲುವುಗಳು ಪತ್ರಿಕೆಗಳ ಸಂಪಾದಕರನ್ನು ಹೇಗೆ ಹಣಿದು ಹಾಕುತ್ತವೆ ಎಂಬುದು ಊಹೆಗೂ ನಿಲುಕದ ವಿಷಯ. ವಿಜಯ ಸಂಕೇಶ್ವರರಿಂದ ವಿಜಯ ಕರ್ನಾಟಕ, ವಿಜಯ ಟೈಮ್ಸ್ ಮತ್ತು ಉಷಾಕಿರಣ ಪತ್ರಿಕೆಗಳನ್ನು ಕೊಂಡ ಟೈಮ್ಸ್ ಸಂಸ್ಥೆಗೆ ಅಕ್ಕರೆ ಇದ್ದದ್ದು ವಿಜಯ ಕರ್ನಾಟಕದ ಮೇಲೆ ಮಾತ್ರ. ಯಾಕೆಂದರೆ ಅದು ಆದಾಯ ತಂದುಕೊಡುತ್ತಿತ್ತು. ಇನ್ನುಳಿದ ಎರಡು ಪತ್ರಿಕೆಗಳ ಕುರಿತು ಮಲತಾಯಿ ಧೋರಣೆ. ಹೀಗೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ನಡೆ ಆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರನ್ನು ನೈತಿಕವಾಗಿ ಕುಗ್ಗಿಸುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ.

ವಿಜಯ ಟೈಮ್ಸ್ ಕೃಷ್ಣಪ್ರಸಾದರ ಸಂಪಾದಕತ್ವದಲ್ಲಿ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದರೂ ಅದನ್ನು ಮುಂದುವರೆಸಲು ಸಂಸ್ಥೆಗೆ ಆಸಕ್ತಿಯಿರಲಿಲ್ಲ. ಬೆಂಗಳೂರು ಮಿರರ್ ಎಂಬ ಡೈಲಿ ಟ್ಯಾಬ್ಲಾಯ್ಡ್ ಸಾಹಸಕ್ಕೆ ಕೈ ಹಾಕಲಾಯಿತು. ಅತ್ತ ಉಷಾಕಿರಣವನ್ನು ನಿರ್ದಯವಾಗಿ ಕೊಂದು, ಟೈಮ್ಸ್ ಆಫ್ ಇಂಡಿಯಾ ಕನ್ನಡವನ್ನು ಆರಂಭಿಸಿ, ಅದನ್ನೂ ಮುಗಿಸಿ ಈಗ ವಿಜಯ ನೆಕ್ಸ್ಟ್ ಎಂಬ ವಿಚಿತ್ರ ಪ್ರಯೋಗವನ್ನು ಟೈಮ್ಸ್ ಒಡೆಯರು ನಡೆಸುತ್ತಿದ್ದಾರೆ.

ಇಲ್ಲಿ ಕೃಷ್ಣಪ್ರಸಾದ್ ಖುಲ್ಲಂಖುಲ್ಲಾ ತಮಗೆ ಅನ್ನಿಸಿದ್ದನ್ನೆಲ್ಲ ಹೇಳಿದ್ದಾರೆ. ಇದು ಒಂದು ಮ್ಯಾನೇಜ್‌ಮೆಂಟ್ ಹಾಗು ಓರ್ವ ಸಂಪಾದಕನ ನಡುವಿನ ಖಾಸಗಿ ಪತ್ರವಾಗಿ ಉಳಿಯದೆ, ಇವತ್ತಿನ ಮಾಧ್ಯಮ ಸಂಸ್ಥೆಗಳ ಮತ್ತು ಅವುಗಳನ್ನು ನಡೆಸುವವರ ನಡುವಿನ ಒಳಸಂಘರ್ಷಗಳ ದಾಖಲೆಯಂತೆ ಕಂಡು ಬರುತ್ತದೆ. ಓದುಗರನ್ನು ಹೇಗೆ ಮಾರುಕಟ್ಟೆಯ ಸರಕುಗಳಂತೆ ನೋಡಲಾಗುತ್ತದೆ ಮತ್ತು ಅವರನ್ನು ಎಷ್ಟು ಲಘುವಾಗಿ ಪರಿಗಣಿಸಲಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿ. ಸಂಪಾದಕೀಯದ ಓದುಗರ ಕುತೂಹಲಕ್ಕಾಗಿ ಕೃಷ್ಣಪ್ರಸಾದ್ ಬರೆದಿದ್ದ ಪತ್ರದ ಪೂರ್ಣಪಾಠವನ್ನು ಇಲ್ಲಿ ನೀಡಿದ್ದೇವೆ.

ಹತಾಶೆ, ವ್ಯಂಗ್ಯ, ಸಿಟ್ಟು, ಅಸಹಾಯಕತೆ ಎಲ್ಲವನ್ನೂ ತೋರ್ಪಡಿಸಿಕೊಳ್ಳುತ್ತಲೇ, ನಾಳೆ ಕೂತು ಮಾತಾಡಿ ಎಲ್ಲ ಸರಿ ಮಾಡಬಹುದೇನೋ ಎಂಬ ಕೃಷ್ಣಪ್ರಸಾದ್ ಆಶಾವಾದ ಫಲಪ್ರದವಾಗಲಿಲ್ಲ ಎಂಬುದು ಬೇರೆ ವಿಷಯ. ಓದಿ ನಿಮಗೇನನ್ನಿಸುತ್ತದೋ ಹೇಳಿ.


Dear Chinnen

Trust this finds you in good cheer.

I have received your emails conveying the ‘decision’ to turn Vijay Times into a tabloid; to change its name to Bangalore Mirror; to change its content into a city-specific showbiz-sport-entertainment mix; and to bundle it with The Times of India.

I am also in receipt of your email suggesting that the number of editions be cut to five from ten, that the supplements be dropped everywhere except Bangalore, and the editorial mix of VT be transformed “immediately” to that of Mirror in its broadsheet format.

I have orally conveyed where I stand on each of these issues in our meeting on Tuesday, January 23, 2006, at the V V Puram office, but I believe there is nothing lost in putting these views on paper because the logic behind these moves deserves far more debate, discussion and transparency than VPL has been able to muster or demonstrate.

***

My views on the size of the paper are well documented; there is nothing secretive about it for you to conspiratorially suggest as you did that “the editor is perceived as not being aligned with a tabloid.”

I was not squeamish then nor am I squeamish now about admitting that a sleazy tabloid without a worldview doesn’t enthuse me one bit. But, I hope, I do not have to remind you who else too had similar feelings and who suggested that I come up with such a note.

As I mentioned in a three-page note in August 2006, I believe the tabloid size is not appropriate because:

a) Bangalore and Karnataka don’t have a culture of English tabloids,

b) Making VT a tabloid could drive away existing readers,

c) Making VT a tabloid could nullify the perceived benefits of the acquisition, and

d) Making VT a tabloid could seriously limit its own growth potential.

We can find any excuse to consider the tabloid form again now, and I fully respect the management’s prerogative to do so, but I manfully stand four-square behind each of those points—and my fears are more than borne out by the crashing failure of Mid-Day in its third entry into Bangalore.

So, if there is a strong rationale to summarily cut the size of VT, then it is majestically invisible to me and, I am sure, many of my colleagues.

Merely the fact that such serious papers as The Times, London, or the Wall Street Journal have gone tabloid isn’t sufficient justification. We need to convince the world that there is a compelling reason for VT to become one itself in Bangalore (and Karnataka).

***

While we can squabble about who is going to be proved wrong on the issue of size till the cows come home, this note is about something bigger: which is the perfunctory and disdainful manner in which VT has been treated thus far, and the ruthless ease with which an alive, breathing newspaper has been strangled—and is now being readied to be killed.

The decision to change VT’s name, size, format and content are being painted now as if every editorial and marketing option to make it a commercial success has been explored and as if these are the last-ditch efforts to keep the paper afloat. But I will argue that not a single editorial and/or marketing option has been tried in seven months.

What we are seeing, on the other hand, is a fait accompli— and very convenient post-facto excuses are being offered which turns common sense on its head.

Hear me out.

For seven months now, I have watched with shock, shame and surprise, the whole thing come apart, as even the most basic of facilities have been stalled, denied or given the short shrift, by mind-numbing bureaucracy and jargon-filled marketing mumbo-jumbo.

1) Water cooler promised for the staff: not provided

2) A coffee vending machine: not provided

3) A coat of paint for the office: not provided

4) Telephones for the staff: not provided

5) Air-conditioners for the office: not provided

6) A decent canteen for the staff: not provided

7) Working computers which do not crash: not provided

8) Error-free business cards: not provided

9) A set of decent chairs to sit on: not provided

10) A trained receptionist to take calls or a secretary for the editor: not provided.

And so on and so forth.

All that’s just on the infrastructure front, but as anybody would admit, these factors affect morale, motivation and functioning as they have.

On the editorial front, the story gets even more pathetic, and even more revealing of the unfolding gameplan, such as it may be.

1) We haven’t had content support

2) We haven’t had library/archival support

3) We haven’t had syndication support

4) We haven’t had design and graphics support

5) We haven’t had photography support

6) We haven’t had brand support

7) We haven’t had advertising/promotional support

8) We haven’t had training support

9) We haven’t had support retaining people or recruiting people

10) We haven’t had team-building, motivation, creativity support

The only support that VT has been privileged to have is of the magnificent Franklyn James & Co [of the circulation department], who have slogged it out to add numbers. And all we have had from most of the rest has been jargon-filled emails “assuring you of our fullest support” as if one wing of the organisation is doing a favour to the other.

# A simple payment method for contributors which could ease our editorial burden? Six months in coming.

# A clearance for an ordinary invoice for a mutual fund NAV provider? Three months in coming.

# Clearance of pending cell phone bills of key staffers? One month in coming, and an embarrassing disconnection.

If, in spite of all this, Vijay Times has been the most talked about newspaper in Bangalore in these last six months, if VT has broken more stories than any other paper, if VT has generated buzz, it is because of two reasons. One, the quality of the rest of the competition. Modesty prevents me from naming the other one.

All that Vijay Times staffers have got since the takeover is a t-shirt that was given to them on the so-called Integration Day on August 18.

Everything has been as it was before the company was bought over. If not, worse. Indeed, that we couldn’t even remember the anniversary day of the paper and greet the staff in person tells a very significant story of how human resources—the most valuable resource in a paper—has been dealt with.

# A get-together? No.

# A party? No.

# A bonding exercise? No.

***

The other “decisions” to cut the number of editions or cut the number of supplements, or to realign the supplements to generate more revenue, have been gone through and agreed upon so many times since July last, that it isn’t funny and it doesn’t bring any glory to decision-making.

But if there is a key reason why the decision to tabloidise a broadsheet like VT in the manner of Mumbai Mirror meets with such circumspection, it is because there is still no convincing answer to the key question.

Which is, what is wrong with Vijay Times now?

In this, there is a key difference from, say, the Usha Kirana experiment. That paper sold in the low thousands and had no hope in hell of making it.

On the other hand, there is nothing—nothing at all—to suggest that Vijay Times in its current broadsheet avatar won’t make it. In fact, a circulation of 1.5 lakh in four years, despite the competition in Bangalore, shows that something is right with it. In contrast, Times of India, Bangalore, sold 8,000 for the first 10-12 years of its existence.

Yes, VT runs up a monthly loss of Rs 60+ lakh. But, as per your own assertions recently, that has come down from Rs 1.43 crore. Moreover, didn’t we discuss a strategy that would ensure breakeven by March?

World over, newspapers are made first and then profits are made. But by strangling Vijay Times of its most basic infrastructure needs and requirements, we are clearly putting the commercial cart before the editorial horse.

I concede that is the promoters’ prerogative, but why?

Without giving it a good chance to succeed, without creating the conditions for it to succeed, we are eliminating a newspaper which has racked up good numbers, emerged as a strong local voice, put the fear of god in Deccan Herald & Co and which has shown that it can sail into readers’ hearts on its own steam—quite unlike Mumbai Mirror which rides piggyback on Times of India, and has met with considerable resistance after readers were given a choice not to take it recently.

I will be the first to suggest that it is healthy to get rid of the unhealthy, like the Illustrated Weekly or Dharmayug—but it is very unhealthy to get rid of the healthy, like Vijay Times.

It amounts to, pardon my saying it, murder.

By seeking to tabloidise a newspaper that has made the important interesting and shown that there is an audience for a serious yet lively paper, we are cocking a snook at the aware and intelligent Karnataka newspaper reader, with whom this paper has built up a rapport.

More importantly, when everybody who is somebody in the organisation speaks in hushed tones of the monumental losses (rumoured to be around Rs 100-120 crore) that Mumbai Mirror ran up last year, to think of turning an editorially successful VT into a clone of it, tells its own story.

Yes, the name is a problem with advertisers and agencies, but who hasn’t agreed with changing that?

***

In these circumstances, I find it astonishing that there should be talk of “immediately” transforming the editorial mix of VT into that of Mirror in the broadsheet form. The question that pops into my mind each time I see emails to this effect is: are they kidding, or they unaware of what they have done to VT?

We have lost dozens of people, and some of our best and brightest (and there aren’t many) have served notice. We have lost reporters, sub-editors, design personnel, in Bangalore and elsewhere, in the main paper and the supplements. The fact that the paper came out every morning used to be a miracle last September; now it is a major miracle.

Just who is going to make this transformation happen “immediately”?

Magicians and hypnotists?

The abysmal staff situation has been brought to the notice of all several times. Again, what we have received by way of a response is jargon-filled mumbo-jumbo. As naturally a night follows day, 48 hours prior to the visit of the head honchos from Delhi, we are made to spring into action with spreadsheets of those who should stay, those who should go, etc. But what have we been doing in the interregnum?

What precisely have we done in these seven months to make existing people feel comfortable? What comforting signals have we sent to outsiders who are looking at joining VT? What have we done to fill trainees with hope? How can we have a situation where key people in the organisation proudly talk of the role that “doubt and uncertainty” play in helping the management achieve its objective, such as it may be?

By communicating the idea of VT’s “transformation” without even taking long-time staffers into confidence; by sowing and spreading rumours; by dismissing honest people’s backbreaking efforts as a “dead product”; by keeping young people hanging about their future; we have completely demoralised, demolished and destroyed the newsroom atmosphere in VT.

What has this newspaper (and its readers) done to deserve this?

What have this newspaper’s wonderful employees, who stuck around even when the cheques were not arriving in time, done to deserve this? How must it feel, after the recent skulduggery in absentia, for a man who has been here for four years to say in exasperation, “we haven’t known six continuous months of stability”?

I heard one of the staffers—a fine, competent, loyal employee—say last week that “even the truck operators ran this paper better”. Is this all that a 169-year-old organisation, “one of the six great newspapers”, with all its accumulated and assumed wisdom and expertise, can bring to the table?

All this makes depressing—maybe even infuriating—reading, but that’s the whole idea.

It doesn’t hurt to hear this.

Whatever “transformation” has taken place today at Vijay Times—a fact that becomes visible by looking at critical and popular reader response, competitors’ reactions, or indeed circulation numbers—is not because of the editorial, marketing or monetary muscle of The Times of India group, but mostly in spite of it.

I believe a bit of that must be secured and used before the death knell is sounded for Vijay Times. I believe that we must give it a decent chance to succeed. That’s the least we can owe to the employees who have stuck with through thick and thin. That’s the least we can do to the readers who have stayed with us. Yes, it might not fetch us pots of profits by tomorrow morning, but Rome wasn’t built in a day.

The typical answer to this one is, “Oh, there is no time, Deccan Chronicle is around the corner.” But, why does Deccan Chronicle cause such palpitations only in the hearts of otherwise invincible managers?

***

In Vijay Times, as I have pointed out several times before, Bennett, Coleman & Co has a fine chance to show that it’s not a one-trick pony—that it can buy, create and run a different newspaper that is at once profitable and critically acclaimed. That like the New York Times, which runs Boston Globe, it has different strokes for different folks.

Unfortunately, by endlessly looking over the shoulders, by blindly apeing and copying every trick that has been tried before, by being tied to the girth of the Times, by arrogantly refusing to acknowledge that the reader might be right in picking up VT, we seem to have taken the easy option, the low road.
If it’s not too late, may I humbly suggest that we debate some of these issues tomorrow?
Warm regards
Krishna Prasad

ಅಭಿನಂದನೆಗಳು ಕೃಷ್ಣಪ್ರಸಾದ್...

ನಿನ್ನೆಯಷ್ಟೆ ಟಿವಿ೯ ಸುದ್ದಿವಾಹಿನಿ ಕಳಪೆ ಖಾರದಪುಡಿ ಬಗ್ಗೆ ತಾವು ನಡೆಸಿದ ಕಾರ್ಯಾಚರಣೆಯನ್ನು ಬಿತ್ತರಿಸುತ್ತಿತ್ತು. ಅದೇ ಹೊತ್ತಿಗೆ ಔಟ್ ಲುಕ್ ಪತ್ರಿಕೆ ಸಂಪಾದಕ ಕೃಷ್ಣಪ್ರಸಾದ್ ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ಸುದ್ದಿಯೂ ಬಂತು.

ಟಿವಿ ೯ ಖಾರದಪುಡಿಗೂ, ಕೃಷ್ಣ ಪ್ರಸಾದ್‌ಗೂ ಏನು ಸಂಬಂಧ ಅಂತೀರಾ?

ಈಗ ನೂರಾರು ಟಿವಿ ಚಾನೆಲ್‌ಗಳು. ಪ್ರತಿ ಚಾನೆಲ್ ಬಳಿಯೂ ಅತ್ಯಾಧುನಿಕ ತಂತ್ರಜ್ಞಾನದ ಸಾಮಾಗ್ರಿಗಳಿವೆ. ಇವರು ವಾರಕ್ಕೊಂದು ಇಂತಹ ಕಾರ್ಯಚರಣೆ ನಡೆಸಿದರೆ ಏನೂ ಆಶ್ಚರ್ಯವಿಲ್ಲ. ಆದರೆ ತೊಂಭತ್ತರ ದಶಕದಲ್ಲಿ, ಅಂದು ಲಭ್ಯವಿದ್ದ ಉಪಕರಣಗಳ ಸಹಾಯದಿಂದ ಕ್ರಿಕೆಟ್ ಜಗತ್ತನ್ನೇ ಬೆಚ್ಚು ಬೀಳಿಸಿದ ಬೆಟ್ಟಿಂಗ್ ಹಗರಣವನ್ನು ಮೊದಲು ಬಯಲು ಮಾಡಿದ್ದು ಕೃಷ್ಣ ಪ್ರಸಾದ್ ಮತ್ತು ಅನಿರುದ್ಧ ಬಹಲ್. ಅದೇ ಮುಂದೆ ಐತಿಹಾಸಿಕ ಮಹತ್ವದ ತೆಹಲ್ಕಾ ಕುಟುಕು ಕಾರ್ಯಚರಣೆಗೆ ದಾರಿಯಾಯಿತು.

ಆಪ್ತರ ವಲಯದಲ್ಲಿ ಕೆಪಿ ಎಂದೇ ಖ್ಯಾತರಾದ ಕೃಷ್ಣ ಪ್ರಸಾದ್ ಟ್ರೆಂಡ್ ಸೆಟ್ಟರ್. ಔಟ್‌ಲುಕ್ ಪತ್ರಿಕೆ ಜೊತೆ ಅವರದು ಹಳೆ ಸಂಬಂಧ. ಪತ್ರಿಕೆ ಆರಂಭವಾದಾಗಿನಿಂದಲೂ ಅದರೊಟ್ಟಿಗೆ ಗುರುತಿಸಿಕೊಂಡಿದ್ದಾರೆ. ಕೆಲಕಾಲ ಪತ್ರಿಕೆ ವಿಶೇಷ ಸಂಚಿಕೆಗಳ ಉಸ್ತುವಾರಿ ವಹಿಸಿದ್ದರು. ೨೦೦೮ ರ ಸೆಪ್ಟೆಂಬರ್‌ನಲ್ಲಿ ಔಟ್‌ಲುಕ್ ಸಂಪಾದಕರಾಗಿ ಅವರನ್ನು ನೇಮಿಸಲಾಯಿತು. ಪತ್ರಿಕೆ ಈ ವರ್ಷ ಹೊರತಂದ ವಾರ್ಷಿಕ ವಿಶೇಷ ಸಂಚಿಕೆ ದೇಶಾದ್ಯಂತ ಮಾಧ್ಯಮ ಕಚೇರಿಗಳಲ್ಲಿ ಚರ್ಚೆಯ ವಸ್ತು. ಇಂದಿನ ಮಾಧ್ಯಮ ಕ್ಷೇತ್ರದ ಎಡವಟ್ಟುಗಳು, ಹೆಗ್ಗಳಿಕೆಗಳು ವಿಸ್ತೃತವಾಗಿ ಈ ಸಂಚಿಕೆಯಲ್ಲಿ ಚರ್ಚೆಯಾಗಿವೆ. ಮಾಧ್ಯಮ ಕ್ಷೇತ್ರದ ಆಸಕ್ತರೆಲ್ಲಾ ಓದಲೇಬೇಕಾದ, ಸಂಗ್ರಹಯೋಗ್ಯ ಸಂಚಿಕೆ ರೂಪಿಸಿದ ಯಶಸ್ಸು ಕೆಪಿಗೆ ಸಲ್ಲಬೇಕು.

ಇತ್ತೀಚೆಗಿನ ನೀರಾ ರಾಡಿಯಾ ಪ್ರಕರಣದಲ್ಲಿ ರಾಡಿ ಎಬ್ಬಿಸಿದ ಟೇಪುಗಳನ್ನು ಮೊದಲು ಪ್ರಕಟಿಸಿದ ಎರಡು ವಾರಪತ್ರಿಕೆಗಳಲ್ಲಿ ಔಟ್‌ಲುಕ್ ಕೂಡಾ ಒಂದು. ಮಾಧ್ಯಮ ಕ್ಷೇತ್ರದ ದಲ್ಲಾಳಿಗಳನ್ನು ಈವರೆಗೆ ಈ ಮಟ್ಟಿಗೆ ಚರ್ಚೆಯ ವಸ್ತು ಮಾಡಿದ ಉದಾಹರಣೆ ಬೇರೆ ಇಲ್ಲ. ಈ ಎಲ್ಲಾ ಕಾರಣಗಳಿಗಾಗಿ ಪ್ರೆಸ್‌ಕ್ಲಬ್ ಆಯ್ಕೆ ಮಹತ್ವದ್ದು.

ಕೆಪಿ ವಿಜಯ ಟೈಮ್ಸ್ ಪತ್ರಿಕೆಗೆ ಕೆಲಕಾಲ ಸಂಪಾದಕರಾಗಿ ದುಡಿದಿದ್ದರು. ಅವರ ಕಾಲದಲ್ಲಿ ಪತ್ರಿಕೆಯ ಪ್ರಸರಣ ಸಂಖ್ಯೆಯೂ ಹೆಚ್ಚಿತ್ತು. ಟೈಮ್ಸ್ ಆಫ್ ಇಂಡಿಯಾ ಸಂಸ್ಥೆ ವಿಜಯ ಟೈಮ್ಸ್ ಪತ್ರಿಕೆಯನ್ನು ಟ್ಯಾಬ್ಲಾಯ್ಡ್ ರೂಪಕ್ಕೆ ಮಾರ್ಪಾಡಿಸಲು ಹೊರಟಾಗ ಕೆಪಿ ಪತ್ರಿಕೆಯಿಂದ ಹೊರ ನಡೆದಿದ್ದರು.

ಕೃಷ್ಣಪ್ರಸಾದ್ ಅವರ ಕ್ರಿಯೇಟಿವಿಟಿಗೆ  ಚುರುಮುರಿ ಬ್ಲಾಗ್ ಸಾಕ್ಷಿ. ಚುರುಮುರಿ ಹೆಸರಿನಲ್ಲಿ ಅತ್ಯಂತ ಜನಪ್ರಿಯ ಬ್ಲಾಗ್ ರೂಪಿಸಿದ ಕೀರ್ತಿ ಅವರದು. ಸಮಕಾಲೀನ ರಾಜಕಾರಣ, ಸಮಾಜ, ಆರ್ಥಿಕತೆ, ಚಳವಳಿ ಎಲ್ಲವೂ ಇಲ್ಲಿ ಚರ್ಚಿತವಾಗುತ್ತವೆ.

ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಈ ಬಾರಿ ಕೃಷ್ಣಪ್ರಸಾದ್ ಹಾಗು ಅಥ್ಲೀಟ್ ಅಶ್ವಿನಿ ಅಕ್ಕುಂಜೆ ಅವರಿಗೆ ಜಂಟಿಯಾಗಿ ಕೊಡುತ್ತಿದೆ. ಎರಡೂ ಒಳ್ಳೆಯ ಆಯ್ಕೆಗಳೇ. ಹಾಗೆಯೇ ವಾರ್ಷಿಕ ಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಿರುವ ಖಾದ್ರಿ ಅಚ್ಯುತನ್, ಈ ಸಂಜೆ ವೆಂಕಟೇಶ್ ಹಾಗು ಟಿ.ಜೆ.ಎಸ್ ಜಾರ್ಜ್ ಕೂಡ ಅತ್ಯಂತ ಅರ್ಹರು.

ಕೊನೆ ಕುಟುಕು: ಎಲ್ಲಾ ಸರಿ, ಆದರೆ ಪ್ರೆಸ್ ಕ್ಲಬ್ ಈ ಬಾರಿ ಪ್ರಶಸ್ತಿ ವಿತರಣೆ ಹಾಗು ಹೊಸ ವರ್ಷಾಚರಣೆಯನ್ನು ಅರಮನೆ ಮೈದಾನದಲ್ಲಿ ಕಾರ್ಪರೇಟ್ ಶೈಲಿಯಲ್ಲಿ ಆಚರಿಸುತ್ತಿರುವುದು ಹಲವರ ಹುಬ್ಬೇರಿಸಿದೆ. ಕ್ಲಬ್ ಸದಸ್ಯರಿಗೆ ನೀಡಲಾದ ಊಟದ ಮೆನು ನೋಡಿದರೆ ಹೊಟ್ಟೆ ಭರ್ತಿಯಾಗುತ್ತದೆ. ಇಂಥ ವೈಭವ ಬೇಕಿತ್ತೆ ಎಂಬ ಪ್ರಶ್ನೆ ಪ್ರೆಸ್‌ಕ್ಲಬ್‌ನ ಹಸಿರು ಹುಲ್ಲುಗಾವಲಲ್ಲಿ ಎದ್ದು ಅಲ್ಲೇ ಚಳಿಯಲ್ಲಿ ಕರಗಿ ಹೋಗುತ್ತಿದೆ.

Tuesday, December 28, 2010

ಕೆಟ್ಟ ಮತ್ತು ಒಳ್ಳೆಯ ಅಂಕಣಕಾರರು

ವಿಜಯ ಕರ್ನಾಟಕದ ಅಂಕಣಕಾರರ ಕುರಿತು ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ವಿಶ್ವೇಶ್ವರ ಭಟ್ಟರು ಹೊಸ ಹೊಸ ಅಂಕಣಕಾರರನ್ನು ಸೃಷ್ಟಿಸಿದರು. ಅವರ ಪೈಕಿ ಒಳ್ಳೆಯ ಅಂಕಣಕಾರರೂ ಇದ್ದರು, ಕೆಟ್ಟ ಅಂಕಣಕಾರರೂ ಇದ್ದರು. ಆದರೆ ಹೆಚ್ಚು ಚರ್ಚಿತವಾದವರು ಕೆಟ್ಟ ಅಂಕಣಕಾರರು. ಅದರಲ್ಲೂ ಸೋನಿಯಾ ಗಾಂಧಿಯವರನ್ನು ಬಾಯಿಗೆ ಸಿಕ್ಕಂತೆ ಬೈದವರೆಲ್ಲ ಏಕಾಏಕಿ ಚಲಾವಣೆಗೆ ಬಂದರು. ರಾಹುಲ್ ಗಾಂಧಿಯನ್ನು ಇಟಾಲಿಯನ್ ಬ್ರೀಡ್ ಎಂದು ಬರೆದ ತಕ್ಷಣ ನೋಡ್ರೀ, ಈ ಹುಡುಗನ ಬರವಣಿಗೆಯಲ್ಲಿ ಎಂಥ ಫೋರ್ಸ್ ಇದೆ ಎಂಬಂಥ ಮಾತುಗಳು ಕೇಳಿ ಬರತೊಡಗಿದವು.

ಕೆಲವು ಅಂಕಣಕಾರರಂತೂ ಇಂಟರ್‌ನೆಟ್ ಹುಳಗಳು. ಇಂಟರ್‌ನೆಟ್‌ನಲ್ಲಿ ಸಿಕ್ಕಿದ್ದೆಲ್ಲವನ್ನು ಪರಮಪ್ರಸಾದ ಎಂದುಕೊಂಡು ಬರೆದರು. ಮಾಹಿತಿ ಸರಿಯಿದೆಯೋ ಇಲ್ಲವೋ ಎಂಬುದನ್ನು ಕೌಂಟರ್ ಚೆಕ್ ಮಾಡಿಕೊಳ್ಳುವ ತಾಳ್ಮೆಯೂ ಅವರಿಗಿರಲಿಲ್ಲ. ವಿಜಯ ಕರ್ನಾಟಕದ ಅಂಕಣಕಾರರು ತಮಗೆ ಭಟ್ಟರು ನೀಡಿದ ಸ್ವಾತಂತ್ರ್ಯವನ್ನು ಎಷ್ಟು ದುರ್ಬಳಕೆ ಮಾಡಿಕೊಂಡರೆಂದರೆ, ಮುಸ್ಲಿಮರು, ಕ್ರಿಶ್ಚಿಯನ್ನರಷ್ಟೇ ಅಲ್ಲದೆ ಪ್ರಗತಿಪರರು, ಬುದ್ಧಿಜೀವಿಗಳು ಅವರಿಗೆ ಆಹಾರವಾದರು. ವಿ.ಪಿ.ಸಿಂಗ್ ತೀರಿಹೋದಾಗ ಅವರು ಹುಟ್ಟಿದ್ದರಿಂದಲೇ ದೇಶಕ್ಕೆ ನಷ್ಟವಾಯಿತು ಎಂದು ಒಬ್ಬಾತ ಬರೆದು ಜೈಸಿಕೊಂಡುಬಿಟ್ಟ.

ಆದರೆ ಹೀಗೆ ಅಗ್ಗದ ಜನಪ್ರಿಯತೆಗಾಗಿ ಹಿಂದೂ ಫಾಸಿಸ್ಟರಿಗೆ ಪ್ರಿಯವಾಗುವಂತೆ ಬರೆಯುವ ಗೋಜಿಗೆ ಹೋಗದೆ, ಅದೇ ವಿಜಯ ಕರ್ನಾಟಕದಲ್ಲಿ ಅಶೋಕ್ ರಾಮ್, ಲೋಕೇಶ್ ಕಾಯರ್ಗ ಅಂಥವರೂ ಬರೆಯುತ್ತಿದ್ದಾರೆ. ಹರಿಯುವ ಪ್ರವಾಹದಲ್ಲಿ ಅವರು ಕೊಚ್ಚಿಹೋಗಬಹುದಿತ್ತು. ಆದರೆ ಅವರು ಹಾಗೆ ಕೊಚ್ಚಿ ಹೋಗದೆ ತಮ್ಮತನ ಉಳಿಸಿಕೊಂಡರು, ವಿವೇಕದಿಂದ ಬರೆದರು.

ಇವತ್ತಿನ ವಿಜಯ ಕರ್ನಾಟಕ ಗಮನಿಸಿ. ಲೋಕೇಶ್ ಕಾಯರ್ಗ ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕನೆಂಬ ಅನುಮಾನಕ್ಕೆ ಗುರಿಯಾಗಿ, ಹಿಂಸೆ ಅನುಭವಿಸಿದ ಹನೀಫ್ ಕುರಿತಾಗಿ ತುಂಬ ಸೆನ್ಸಿಬಲ್ ಆಗಿ ಬರೆದಿದ್ದಾರೆ. ಹನೀಫ್ ಬಗ್ಗೆ ಬರೆಯುವಾಗ ಚಿಕ್ಕಮಗಳೂರಿನ ವೈದ್ಯರೊಬ್ಬರ ಬವಣೆಗಳನ್ನು ನೆನಪಿಸಿದ್ದಾರೆ. ಹನೀಫ್ ಒಂದು ವೇಳೆ ಇಂಥ ಸಮಸ್ಯೆಯನ್ನು ಭಾರತದಲ್ಲೇ ಅನುಭವಿಸಿದ್ದರೆ ಏನಾಗುತ್ತಿತ್ತು ಎಂಬ ತೀಕ್ಷ್ಣ ಒಳನೋಟ ಅವರ ಅಂಕಣದಲ್ಲಿದೆ.

ಇವತ್ತು ವಿಜಯ ಕರ್ನಾಟಕದಿಂದ ಸಾಕಷ್ಟು ಮಂದಿ ಅಂಕಣಕಾರರಿಗೆ ಕೊಕ್ ನೀಡಲಾಗಿದೆ. ಹೀಗೆ ಗೇಟ್‌ಪಾಸ್ ಪಡೆದವರು ಬಹುತೇಕರು ಮತೀಯವಾದವನ್ನು ಪ್ರಚೋದನಾಕಾರಿಯಾಗಿ ಮಂಡಿಸುತ್ತಿದ್ದವರು. ಈ ರೀತಿಯ ಕ್ಷಣಿಕ ಉನ್ಮಾದಗಳನ್ನು ಕೆರಳಿಸುವವರು ಭಾರತದಂತ ಸಮಾಜದಲ್ಲಿ ಹೆಚ್ಚು ಕಾಲ, ಬಾಳುವವರಲ್ಲ. ಅವರಿಗೆ ಸಾರ್ವಕಾಲಿಕ ಮಾನ್ಯತೆ ದಕ್ಕುವುದೂ ಇಲ್ಲ.

ಕಡೇ ಕುಟುಕು: ದಿನಪತ್ರಿಕೆಯೊಂದರ ಅಂಕಣಕಾರರು ಹೊಸದಾಗಿ ಅಂಕಣ ಬರೆಯಲು ಆರಂಭಿಸಿದವರು. ಪಾಪ, ಅವರಿಗೆ ವಾರಕ್ಕೊಂದು ಅಂಕಣ ಬರೆಯುವುದೇ ದೊಡ್ಡ ಸಮಸ್ಯೆ. ಹೀಗಾಗಿ ಅವರು ಒಂದು ಸಬ್ಜೆಕ್ಟ್ ಗುರುತಿಸಿಕೊಳ್ಳುತ್ತಾರೆ. ನಂತರ ಪತ್ರಿಕೆಯ ವರದಿಗಾರರಿಗೆ ಸಂಬಂಧಪಟ್ಟ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳ ಪ್ರಿಂಟ್ ಔಟ್ ಕೊಡಿ ಎಂದು ಆಜ್ಞಾಪಿಸುತ್ತಾರೆ. ಎಲ್ಲ ಪ್ರಿಂಟ್ ಔಟ್ ಕೈಗೆ ಸೇರಿದ ನಂತರ ವರದಿಯಂಥ ಅಂಕಣ ಬರೆದು ಉಸ್ಸಪ್ಪಾ ಎನ್ನುತ್ತಾರೆ.

Monday, December 27, 2010

ಪತ್ರಕರ್ತರು ಮತ್ತು ನಾಯಿಗಳು...

ಇವರು ಕಾವಲು ನಾಯಿಗಳಾಗಬೇಕಿತ್ತು. ಆದರೆ, ನಾಯಿಗಳಾಗಿದ್ದಾರೆ. ಹರ್ಕೊಂಡು ತಿನ್ನುತ್ತಿದ್ದಾರೆ. ವಸೂಲಿ ವೀರರಾಗಿದ್ದಾರೆ. ಭ್ರಷ್ಟಾಚಾರದಲ್ಲಿ ರಾಜಕಾರಣಿಗಳನ್ನೂ ಮೀರಿಸುತ್ತಾರೆ... 

ಹೀಗೆಂದವರು ಚಿತ್ರದುರ್ಗದ ಮುರುಘರಾಜೇಂದ್ರ ಶರಣರು.

ಈ ಮಾತಿಗೆ ಇಬ್ಬರು ಹಿರಿಯ ಪತ್ರಕರ್ತರು ವಿಭಿನ್ನ ವರಸೆಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು ಪ್ರಜಾವಾಣಿಯ ಸಹಸಂಪಾದಕ ಪದ್ಮರಾಜ ದಂಡಾವತಿ, ಮತ್ತೊಬ್ಬರು ಈಗಷ್ಟೇ ಸಮಯ ಚಾನಲ್ ಸೇರಿರುವ ಶಶಿಧರ ಭಟ್ಟರು. ಇಬ್ಬರೂ ತದ್ವಿರುದ್ಧವಾಗಿ ಬರೆದಿದ್ದಾರೆ. ಇಬ್ಬರೂ ಬೇರೆ ಬೇರೆ ನೆಲೆಯಲ್ಲಿ ನಿಂತು ಮಾತನಾಡಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ, ಪ್ರತಿಕ್ರಿಯೆಗೆ ಭಿನ್ನ ಭಿನ್ನ ಆಯಾಮಗಳೂ ಇರುತ್ತವೆ. ಇಬ್ಬರ ಲೇಖನಗಳು ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿವೆ.

ಪದ್ಮರಾಜ ದಂಡಾವತಿಯವರು ಮುರುಘರಾಜೇಂದ್ರ ಶರಣರ ಬೆನ್ನಿಗೆ ನಿಂತಿದ್ದಾರೆ. ಅವರನ್ನು ಬೆಂಬಲಿಸಿರುವುದು ಮಾತ್ರವಲ್ಲ, ಪತ್ರಕರ್ತರ ಕ್ಷಮೆ ಕೋರಿದ್ದೂ ತಪ್ಪು ಎಂಬಂತೆ ಮಾತನಾಡಿದ್ದಾರೆ.

ದಂಡಾವತಿಯವರದು ಹಳೆ ಕಾಲದ ತಾತಂದಿರ, ಅಜ್ಜಿಯಂದಿರ ಶೈಲಿ. ‘ನಮ್ಮ ಕಾಲ ಹಿಂಗಿತ್ತು ಕಣ್ರೀ, ಈಗ ಹೆಂಗಾಯ್ತು ನೋಡಿ ಎನ್ನುವ ಹಳಹಳಿಕೆ. ಸಮಾಜ ಬದಲಾದಂತೆ ಪತ್ರಕರ್ತರು, ಪತ್ರಿಕಾ ವೃತ್ತಿಯ ಪರಿಭಾಷೆಗಳೂ ಬದಲಾಗಿವೆ. ಇದನ್ನು ಭ್ರಷ್ಟಾಚಾರಕ್ಕೆ ಸೀಮಿತಗೊಳಿಸಿ ಹೇಳುವ ಹಾಗೂ ಇಲ್ಲ.

ಹಾಗೆಂದ ಮಾತ್ರಕ್ಕೆ ಪತ್ರಿಕಾ ಸಮೂಹ ಸಂಪೂರ್ಣ ಭ್ರಷ್ಟವಾಗಿದೆ ಎಂಬ ನಿರ್ಣಯಕ್ಕೆ ಬರುವುದೂ ಸಾಧ್ಯವಿಲ್ಲ. ಭ್ರಷ್ಟರಾಗಿರುವವರು ಕೆಲವೇ ಕೆಲವು ಪರ್ಸೆಂಟ್ ಜನ. ಸ್ವತಃ ಪ್ರಜಾವಾಣಿಯಂಥ ಪತ್ರಿಕೆಯ ನೇತೃತ್ವ ವಹಿಸಿರುವ ದಂಡಾವತಿಯವರಿಗೆ ಇದು ಗೊತ್ತಿಲ್ಲದ ವಿಷಯವೇನೂ ಅಲ್ಲ. ಆದರೂ ಅವರು ಯಾಕೆ ಇಡೀ ಪತ್ರಿಕಾಸಮೂಹವನ್ನುದ್ದೇಶಿಸಿ ಮುರುಘಾ ಶರಣರು ಹೇಳಿದ ಮಾತುಗಳನ್ನು ಸಮರ್ಥಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಆತ್ಮಾವಲೋಕನ ಬೇಕು ನಿಜ, ಆದರೆ ದಂಡಾವತಿಯವರದು ಆತ್ಮಾವಲೋಕನದ ಗೆರೆಯನ್ನು ದಾಟಿ ಆತ್ಮನಿಂದನೆಯ ಬಡಬಡಿಕೆಗಳಂತೆ ಕಾಣುತ್ತದೆ.
ಶರಣರು ಇಡೀ ಪತ್ರಿಕಾ ಸಮೂಹವನ್ನು ಕಟಕಟೆಗೆ ನಿಲ್ಲಿಸಿದರೆ, ದಂಡಾವತಿಯವರು ಕರಿಕೋಟು ತೊಟ್ಟುಕೊಂಡು ಶರಣರ ಪರ ವಕಾಲತ್ತಿಗೆ ನಿಂತಿದ್ದಾರೆ.

ಶರಣರು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅದಕ್ಕೆ ಅವರು ಪ್ರಚಾರವನ್ನೇಕೆ ನಿರೀಕ್ಷಿಸಬೇಕು? ಪತ್ರಕರ್ತರಿಗೆ ದುಡ್ಡು ಕೊಟ್ಟು ಕರೆಸಿಕೊಳ್ಳುವ ಅಭ್ಯಾಸವನ್ನೇಕೆ ಬೆಳೆಸಿಕೊಳ್ಳಬೇಕಿತ್ತು? ಕಾರು ಕೊಟ್ಟು ಕಳಿಸುವ ತೆವಲು ಯಾಕೆ ಬೇಕಿತ್ತು? ಶರಣರೇನು ರಾಜಕಾರಣಿಗಳೇ? ಚುನಾವಣೆಗೆ ನಿಲ್ಲಬೇಕೆ? ಇಲ್ಲವಾದಲ್ಲಿ ಅವರಿಗೆ ಪ್ರಚಾರದ ಹಂಗೇಕೆ? ಅಷ್ಟಕ್ಕೂ ಸ್ವಾಮೀಜಿ ಎಂದರೇನು? ಎಲ್ಲವನ್ನೂ ತೊರೆದು ನಿಂತವರಲ್ಲವೇ? ಒಬ್ಬ ನಿಜವಾದ ಸಂನ್ಯಾಸಿ ಪ್ರಚಾರ ಹುಚ್ಚಿಗೆ ಸಿಕ್ಕುಬಿದ್ದರೆ ಆತನ ಸಂನ್ಯಾಸಕ್ಕೇನು ಬೆಲೆಬಂತು? ಇಂಥ ಪ್ರಶ್ನೆಗಳನ್ನು ಕರಿಕೋಟು ಧರಿಸಿದ ದಂಡಾವತಿಯವರು ಶರಣರನ್ನೂ ಕೇಳಬಹುದಿತ್ತು, ಕೇಳಲಿಲ್ಲ.

ಇನ್ನು ಶಶಿಧರ ಭಟ್ಟರು ಬೇರೆಯದೇ ಆದ ವರಸೆಯಲ್ಲಿ ಬರೆದಿದ್ದಾರೆ. ಅವರಿಗೆ ಶರಣರ ಮೇಲೆ ಕೋಪ ಬಂದಂತಿದೆ. ಹೀಗಾಗಿ ತುಸು ಹೆಚ್ಚಾಗಿಯೇ ಹರಿಹಾಯ್ದಿದ್ದಾರೆ. ಆದರೆ ಈ ರೀತಿಯ ಕೋಪ ಶರಣರಿಗೆ, ಅವರಂಥವರಿಗೆ ತಾಕುವುದು ಮುಖ್ಯ. ಯಾಕೆಂದರೆ ಸಾರಾಸಗಟಾಗಿ ಒಂದು ಸಮೂಹವನ್ನು ನಿಂದಿಸುವ ಮುನ್ನ ಅಲ್ಲಿ ಪ್ರಾಮಾಣಿಕರೂ ಇರುತ್ತಾರೆ, ನಿಜವಾದ ವೃತ್ತಿಪರತೆಯನ್ನು ಮೈಗೂಡಿಸಿಕೊಂಡ ಸಜ್ಜನರೂ ಇರುತ್ತಾರೆ ಎಂಬುದನ್ನು ಶರಣರು ಅರಿತುಕೊಳ್ಳಲು ಇಂಥ ಪ್ರತಿಕ್ರಿಯೆಗಳು ಅನುವು ಮಾಡಿಕೊಡುತ್ತದೆ. ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದು, ಪದವಿ ಕಳೆದುಕೊಳ್ಳುವ ಭೀತಿಯಲ್ಲಿದ್ದ ಯಡಿಯೂರಪ್ಪನವರನ್ನು ಸಮರ್ಥಿಸಿದ ಮುರುಘಾ ಶರಣರಿಗೆ ಪತ್ರಕರ್ತರನ್ನು ಭ್ರಷ್ಟರೆಂದು ಹಣಿಯಲು ನೈತಿಕ ಧೈರ್ಯ ಎಲ್ಲಿಂದ ಬಂತು ಎಂಬ ಬಹುಮುಖ್ಯವಾದ ಪ್ರಶ್ನೆಯನ್ನು ಭಟ್ಟರು ಎತ್ತಿದ್ದಾರೆ.

ಇಬ್ಬರೂ ಮರೆತ ಕೆಲವು ಮಾತುಗಳಿವೆ. ಇವತ್ತು ಪತ್ರಕರ್ತರಿಗೆ ಮುನ್ನ ಅವರು ಪ್ರತಿನಿಧಿಸುವ ಸಂಸ್ಥೆಗಳ ಮ್ಯಾನೇಜ್‌ಮೆಂಟ್‌ಗಳೇ ಭ್ರಷ್ಟವಾಗಿವೆ. ಸರ್ಕಾರದ ಪರವಾಗಿರಿ, ವಿರುದ್ಧವಾಗಿರಿ ಎಂದು ಸ್ಪಷ್ಟವಾಗಿ, ನೇರವಾಗಿ ಸೂಚಿಸುವ ಮಾಧ್ಯಮ ಸಂಸ್ಥೆಗಳ ಧಣಿಗಳಿದ್ದಾರೆ. ತುಂಡು ಜಮೀನಿಗಾಗಿ (ತುಂಡು ಎಂದರೆ ಎಕರೆಗಟ್ಟಲೆ) ಸರ್ಕಾರದ ಮುಖ್ಯಸ್ಥರ ಹಿಂದೆ ಬಾಲ ಅಲ್ಲಾಡಿಸುತ್ತ, ಇಡೀ ಪತ್ರಿಕೆಯನ್ನೇ ಸರ್ಕಾರದ ಸುಪರ್ದಿಗೆ ಕೊಡುವ ಮಹಾನುಭಾವರಿದ್ದಾರೆ.

ಈಗೀಗ ಮಾಧ್ಯಮ ಸಂಸ್ಥೆಗಳನ್ನು ಆರಂಭಿಸುತ್ತಿರುವವರೆಲ್ಲ ರಾಜಕಾರಣಿಗಳು. ಭ್ರಷ್ಟಾಚಾರವಿಲ್ಲದೆ ಬದುಕಿ ಅಭ್ಯಾಸವಿಲ್ಲದವರು.
ಒಲೆ ಹೊತ್ತಿ ಉರಿದರೆ ನಿಲಬಹುದು, ಧರೆ ಹೊತ್ತಿ ಉರಿದರೆ ನಿಲಬಹುದೆ?

ಇಬ್ಬರೂ ಪತ್ರಕರ್ತರು ಈ ಪ್ರಶ್ನೆಯನ್ನೂ ಕೇಳಿದ್ದರೆ ಚೆನ್ನಾಗಿತ್ತು. ಆದರೆ ಅವರ ಅನಿವಾರ್ಯ ಸಂಕಟಗಳನ್ನೂ ಅರ್ಥ ಮಾಡಿಕೊಳ್ಳೋಣ, ಬಿಡಿ.

ಏನದರೂ ಇರಲಿ. ಮುರುಘಾ ಶರಣರು ನೀಡಿದಂಥ ಹೇಳಿಕೆಗಳಂಥವರು ಹೊರಬಂದಾಗ ಪತ್ರಕರ್ತರು ಸುಮ್ಮನಿರುವುದೇ ಹೆಚ್ಚು. ಹೀಗಿರುವಾಗ ಈ ಇಬ್ಬರು ಹಿರಿಯರು ಮಾತನಾಡಿದ್ದಾರೆ. ಅವರನ್ನು ಅಭಿನಂದಿಸೋಣ.

ಚಿತ್ರ ವಿಮರ್ಶೆಗಳನ್ನು ನಿಲ್ಲಿಸಿ, ಪ್ಲೀಸ್..

ಆತ ವಿರೋಧ ಪಕ್ಷದ ನಾಯಕ. ಆದರೂ ಆತ ಮುಖ್ಯಮಂತ್ರಿಯ ಹಾಗೆ ಜನತಾ ದರ್ಶನ ಮಾಡುತ್ತಾನೆ. ಜನತಾ ದರ್ಶನದಲ್ಲಿ ಜನರು ಒಬ್ಬ ರೌಡಿಯಿಂದಾಗುತ್ತಿರುವ ಉಪಟಳದ ಬಗ್ಗೆ ದೂರು ಹೇಳುತ್ತಾರೆ. ವಿರೋಧ ಪಕ್ಷದ ನಾಯಕ ಸಿಟ್ಟಿಗೆದ್ದು ಆ ರೌಡಿಯನ್ನು ಒಂದು ದಿನದಲ್ಲೇ ಎನ್‌ಕೌಂಟರ್ ಮಾಡುವುದಾಗಿ ಘೋಷಿಸುತ್ತಾನೆ.

ತದನಂತರ ವಿರೋಧ ಪಕ್ಷದ ನಾಯಕನ ಪ್ರೆಸ್‌ಮೀಟ್. ಹೀರೋ ಎನ್‌ಕೌಂಟರ್ ಬಗ್ಗೆ ಪ್ರಶ್ನೆ ಕೇಳುತ್ತಾನೆ. ನೀವು ಎನ್‌ಕೌಂಟರ್ ಮಾಡೋದು ಗ್ಯಾರೆಂಟಿ ತಾನೇ ಎಂದು ಅನುಮಾನದಿಂದ ಕೇಳುತ್ತಾನೆ. ಖಂಡಿತಾ ಮಾಡಿಸ್ತೀನಿ ಎಂದು ವಿರೋಧಪಕ್ಷದ ನಾಯಕ ಸಮಾಧಾನಿಸುವ ಪ್ರಯತ್ನ ಮಾಡುತ್ತಾನೆ.
ಇದು ಶಿವರಾಜ ಕುಮಾರ್ ಅಭಿನಯದ ಮೈಲಾರಿ ಚಿತ್ರದ ದೃಶ್ಯ.
ನಿರ್ದೇಶಕ ಚಂದ್ರುಗೆ ರಾಜಕಾರಣ ಅಂದ್ರೆ ಏನು ಅಂತ ಗೊತ್ತಿಲ್ಲ, ಪತ್ರಿಕೋದ್ಯಮ ಅಂದ್ರೂನೂ ಏನೇನೂ ಗೊತ್ತಿಲ್ಲ. ಕಾನೂನು, ನ್ಯಾಯಾಲಯಗಳ ಕುರಿತು ಕನಿಷ್ಠ ತಿಳಿವಳಿಕೆಯೂ ಇಲ್ಲ. ಚಿತ್ರವನ್ನು ಯಾರಾದ್ರೂ ಮಾನವಹಕ್ಕು ಹೋರಾಟಗಾರರು ನೋಡಿದರೆ ಥಿಯೇಟರ್‌ನಲ್ಲೇ ತಲೆ ಚೆಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು, ಅವರ ಮಾನವ ಹಕ್ಕು ಹರಣವಾದರೆ ಆಶ್ಚರ್ಯವಲ್ಲ.

ತನ್ನ ವಿರುದ್ಧವಾಗಿ ಬರೆದ ಪತ್ರಕರ್ತನ ಮನೆಗೆ ನುಗ್ಗಿ ವಿರೋಧಪಕ್ಷದ ನಾಯಕನೇ ಆತನನ್ನು ಕೊಲ್ಲುತ್ತಾನೆ. ಮಾತ್ರವಲ್ಲ ಆತನ ಹೆಂಡತಿ ಹಾಗು ಪುಟ್ಟ ಮಗುವನ್ನೂ ಕೊಲ್ಲುತ್ತಾನೆ. ರೊಚ್ಚಿಗೆದ್ದ ಇಬ್ಬೊಬ್ಬ ಪತ್ರಕರ್ತ (ಶಿವರಾಜ ಕುಮಾರ್) ಬೀದಿಯಲ್ಲಿ ಅಟ್ಟಾಡಿಸಿಕೊಂಡು ವಿರೋಧಪಕ್ಷದ ನಾಯಕನನ್ನು ಕೊಲ್ಲುತ್ತಾನೆ. ಪತ್ರಕರ್ತನಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಕಡೆಗೆ ಪತ್ರಕರ್ತ ಬರೆದ ಮಹೋನ್ನತ ಕೃತಿ(!)ಯನ್ನು ಓದಿ ಮೆಚ್ಚುವ ರಾಷ್ಟ್ರಪತಿಗಳು ಆತನ ಗಲ್ಲು ಶಿಕ್ಷೆ ರದ್ದುಗೊಳಿಸುವುದು ಮಾತ್ರವಲ್ಲ, ಸಂಪೂರ್ಣ ಶಿಕ್ಷೆಯನ್ನೇ ರದ್ದುಗೊಳಿಸಿ ಬಿಡುಗಡೆಗೊಳಿಸುತ್ತಾರೆ.

ಈ ಸಿನಿಮಾವನ್ನು ಕಾನೂನು-ಕಟ್ಲೆ ಬಗ್ಗೆ ಪ್ರಾಥಮಿಕ ಜ್ಞಾನವಿರುವ ಸಾಮಾನ್ಯ ನೋಡುಗ ನೋಡಿದರೂ ಗಾಬರಿಬಿದ್ದು ಹೋಗುತ್ತಾರೆ. ಸಿನಿಮಾ ಹೀರೋ ಪತ್ರಕರ್ತ ಎಂಬ ಕಾರಣಕ್ಕೆ ಪತ್ರಕರ್ತರು ನೋಡಿದರೆ ಕೂದಲು ಕಿತ್ತುಕೊಂಡು ಆಚೆಗೆ ಬರಬೇಕು.

ಚಿತ್ರ ಹೀಗಿರುವಾಗ ಪತ್ರಿಕೆಗಳಲ್ಲಿ ಬರುವ ಭಾನುವಾರದ ಚಿತ್ರವಿಮರ್ಶೆಗಳು ಹೇಗಿದ್ದವು? ವಿಜಯ ಕರ್ನಾಟಕ, ಕನ್ನಡಪ್ರಭಗಳಲ್ಲಿ ಮೈಲಾರಿಯನ್ನೂ ಅದರ ಜನಕ ಚಂದ್ರುವನ್ನೂ ಹಾಡಿ ಹೊಗಳಲಾಗಿದೆ. ಅವರ ಪ್ರಕಾರ ಸಿನಿಮಾ ಅದ್ಭುತ, ಅತ್ಯದ್ಭುತ! ಮಾಸ್‌ಗೆ ಇಷ್ಟವಾಗುವ ಕ್ಲಾಸ್ ಚಿತ್ರ!.

ಇದು ಮಾಸೂ ಅಲ್ಲ, ಕ್ಲಾಸೂ ಅಲ್ಲ ಪೂರ್ತಿ ಬೋಗಸ್ಸು ಎಂದು ಬರೆದಿರುವುದು ಪ್ರಜಾವಾಣಿ ಮಾತ್ರ. ನಿರ್ದೇಶಕನ ಬಾಲಿಷತನವನ್ನು ನೇರಾನೇರ ಟೀಕಿಸಿ, ಚಿತ್ರದ ಠೊಳ್ಳುತನವನ್ನು ಪ್ರಜಾವಾಣಿ ಬಿಡಿಸಿಟ್ಟಿದೆ.
ಪ್ರಜಾವಾಣಿ ಹೊರತುಪಡಿಸಿ ಬೇರೆ ಪತ್ರಿಕೆಗಳಲ್ಲಿ ಬರುವ ಚಿತ್ರ ವಿಮರ್ಶೆಯನ್ನು ನೋಡಿ ಸಿನಿಮಾ ಮಂದಿರಕ್ಕೆ ಪ್ರೇಕ್ಷಕರು ಹೋದರೆ ಅವರ ಪಾಡು ಹೇಳತೀರದು. ಹೊಗಳೋದಕ್ಕೆ ಏನಾದ್ರೂ ಒಂದು ಡೈಲಾಗು ಸಿಕ್ಕರೂ ಅದನ್ನು ವಿಜೃಂಭಿಸಲಾಗುತ್ತದೆ. ತಪ್ಪುಗಳನ್ನೆಲ್ಲ ಮುಚ್ಚಿಟ್ಟು ಇಲ್ಲದ ಗುಣಗಳನ್ನು ಹುಡುಕಿ ವೈಭವೀಕರಿಸಲಾಗುತ್ತದೆ. ಇದು ಯಾಕೆ ಅಂದರೆ ಈ ಪತ್ರಿಕೆಗಳಿಗೆ ಸಿನಿಮಾ ವಲಯದಿಂದ ಬರುವ ಜಾಹೀರಾತುಗಳು ಬೇಕು. ಅದಕ್ಕಾಗಿ ಅವರು ನಿರ್ಮಾಪಕರನ್ನು ಎದುರು ಹಾಕಿಕೊಳ್ಳಲಾರವು.
ಈ ಪತ್ರಿಕೆಗಳಲ್ಲಿ ಬಂದ ವಿಮರ್ಶೆಯ ತುಣುಕುಗಳನ್ನು ಜಾಹೀರಾತು ಫಲಕಗಳಲ್ಲಿ ಅಳವಡಿಸಿ ಪ್ರೇಕ್ಷಕರನ್ನು ಸೆಳೆಯುವ ಯತ್ನವೂ ಸಿನಿಮಾ ಮಂದಿಯಿಂದ ನಡೆಯುತ್ತಿದೆ.

ಜನರನ್ನು ಹೀಗೆ ದಾರಿ ತಪ್ಪಿಸುವ ಬದಲು ಕನಿಷ್ಠ ಪ್ರಾಯೋಜಿತ ವರದಿ ಎಂಬ ಹೆಸರಿನಲ್ಲಾದರೂ ಇಂಥ ವಿಮರ್ಶೆ, ವರದಿಗಳನ್ನು ಮಾಡಬಹುದು. ಆದರೆ ಪತ್ರಿಕೆಗಳ ಜಾಹೀರಾತು ವಿಭಾಗದ ಒತ್ತಡಕ್ಕೆ ಕಟ್ಟುಬಿದ್ದು, ವರದಿಗಾರರಿಂದ ಹಸಿಸುಳ್ಳುಗಳನ್ನು ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿ ಬರೆಸಲಾಗುತ್ತದೆ.

ಒಂದು ಸಲಹೆ: ನಿಜ, ಜಾಹೀರಾತು ಮುಖ್ಯ. ನಿಮ್ಮ ವಿಮರ್ಶೆಗಳಲ್ಲಿ ಯಾವ ಸಿನಿಮಾವನ್ನೂ (ಜಾಹೀರಾತು ತರುವ) ನಿಜವಾದ ಅರ್ಥದಲ್ಲಿ ವಿಮರ್ಶೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಆತ್ಮವಂಚನೆ ಏಕೆ? ಭಾನುವಾರದ ಚಿತ್ರ ವಿಮರ್ಶೆಯನ್ನೇ ನಿಲ್ಲಿಸಿಬಿಡಿ. ವರದಿಗಾರರ ಆತ್ಮಗೌರವವೂ ಉಳಿಯುತ್ತದೆ. ಪತ್ರಿಕೆಯ ರೆಪ್ಯುಟೇಷನ್ ಕೂಡ ಉಳಿಯುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಪತ್ರಿಕೆಗಳ ವಿಮರ್ಶೆಗಳನ್ನು ಓದಿ ದಾರಿ ತಪ್ಪಿ ಸಿನಿಮಾ ಮಂದಿರಗಳಿಗೆ ಹೋಗುವ ಪ್ರೇಕ್ಷಕರ ಪರದಾಟವೂ ನಿಲ್ಲುತ್ತದೆ.
ಇದೇ ಸರಿಯಾದ ಮಾರ್ಗವಲ್ಲವೆ?

Saturday, December 25, 2010

ಕೆಲವು ಸೆನ್ಸಿಬಲ್ ಪ್ರತಿಕ್ರಿಯೆಗಳು...

Ashok Shettar said...

Media in Karnataka is on the rise. Undesirable tendencies seem to on the rise too.Let me hope your initiative provides a forum for the media minds to interact freely so that the credibility and integrity of the print and electronic media does not deteriorate any further.

Lalitha S Bhat said...
It's a blunder, no doubt. But after reading the reports about Anatha Murthy's talk in some other news papers, i'm totally confused about "nationalism" and "patriotism" !!! He said that we should not support patriotism but should support nationalism. His terms are too tough for a 'paamara' like me....could anyone pls help me to understand this? Does it mean that i should stop loving my nation?

vimarshaki said...
Good blog. Keep it up. Vimarshaki wishes you all the best. Try to keep an eye on the misdeeds of these journalsits. We shall work together to fight these evil elements in media.


Ramjan Darga said...
Prajavani always stood for Secularism, Plural culture and Democracy under the guidance and leadership of Mr. K.N. Harikumar, who was my role model. Now I wonder, what is going on in Prajavani! I always cherish the great heritage of Prajavani. Prajavani was my comrade. Great poet of the then Soviet Union late Mykovasky called a bus his comrade, because it carries common people. Prajavani was my comrade because it was voice of the common people. We must see, it should not become a voice of the ruling class.


ಪ.ರಾಮಚಂದ್ರ ಹೇಳಿದ್ದು...
ಇದುವರೆಗೆ ಕರ್ನಾಟಕದ ಮುಖಮಂತ್ರಿಗಳ ಜಿ-ಕೆಟಗರಿ ಡಿನೋಟಿಫಿಕೇಷನ್ ಮಾತ್ರ ತಿಳಿದಿದ್ದ ನಾಡಿನ ಹಾಗೂ ವಿದೇಶದ ಕನ್ನಡ ಜನತೆಗೆ ಪ್ರಜಾವಾಣಿಯ ಜೆ ಕೆಟಗರಿ ಡಿನೋಟಿಫಿಕೇಷನ್ ಬಗ್ಗೆ ತಿಳಿಸಿದ ಸಂಪಾದಕೀಯದ -ಸಂಪಾದಕರಿಗೆ ವಂದನೆಗಳು.

ಅರಕಲಗೂಡು ಜಯಕುಮಾರ್  ಹೇಳಿದ್ದು...
ರಾಜ್ಯದ ಇತರೆಲ್ಲ ಪತ್ರಿಕೆಗಳ ನಡುವೆ ಪ್ರತಿಷ್ಠೆ ಮತ್ತು ಒಂದು ತೂಕ ಇಟ್ಟುಕೊಂಡಿದ್ದ ಪ್ರಜಾವಾಣಿ ಇಂತಹ ಸಂಕುಚಿತ ಧೋರಣೆ ಪ್ರದರ್ಶಿಸುತ್ತದೆ ಎಂಬುದು ಅರಗಿಸಿಕೊಳ್ಳಲಾಗದ ಸಂಗತಿ. ಪತ್ರಿಕೆಗಳು ಪತ್ರಕರ್ತರ ಮನಸ್ಥಿತಿಯಂತೆ ನಡೆಯಬಾರದು, ಅದು ಯಾವತ್ತಿದ್ದರೂ ಸರ್ವರ ಪ್ರತಿನಿಧಿಯಾಗಿರುತ್ತದೆ ಮತ್ತು ಜನರ ಪತ್ರಿಕೆಯಾಗಿರುತ್ತದೆ ಎಂಬುದನ್ನು ಮರೆಯಬಾರದು. ಆದರೆ ಪ್ರಜಾವಾಣಿ ಇಂತಹ ಧೋರಣೆ ಪ್ರದರ್ಶಿಸಿದ್ದರೆ ಅದಕ್ಕೆ ಕಾರಣ ಅದನ್ನು ನಿರ್ವಹಿಸುವವರ ಮನಸ್ಥಿತಿ ಕಾರಣವಾಗಿರುತ್ತೆ,ಇದು ಪತ್ರಿಕಾ ಧರ್ಮಕ್ಕೆ ವಿರುದ್ಧವಾದುದು, ಅಂತಹ ಜನರಿಗೆ ಧಿಕ್ಕಾರವಿರಲಿ.

ವೈಯಕ್ತಿಕ ತೇಜೋವಧೆಗೆ ಇಳಿಯದ, ವಿಚಾರಪೂರ್ಣವಾದ, ಆರೋಗ್ಯಕರ ಚರ್ಚೆಗೆ ಹಾದಿ ಮಾಡಿಕೊಡುವ ಇಂಥ ಕಮೆಂಟ್‌ಗಳಿಗೆ ಸ್ವಾಗತ.-ಸಂ

Friday, December 24, 2010

ಚರ್ಚೆಯಾಗುತ್ತಿದೆ....

ರಂಜಾನ್ ದರ್ಗಾ ಅವರ ಹೆಸರನ್ನು ಪ್ರಜಾವಾಣಿಯಲ್ಲಿ ಪ್ರಶಸ್ತಿ ಪಟ್ಟಿಯಿಂದ ಕೈ ಬಿಟ್ಟು ಪ್ರಕಟಿಸಿರುವ ಕುರಿತಂತೆ ದರ್ಗಾ ಅವರ ಫೇಸ್‌ಬುಕ್‌ನಲ್ಲಿ ನಡೆದಿರುವ ಚರ್ಚೆಯ ವಿವರಗಳು ಇಲ್ಲಿವೆ.

Today Nidumamidi Sadbhavana Awards published. Except Prajavani, other papers published my name. Owner and Editor of Prajavani Mr K.N. Shanth Kumar and Associate Editor Mr. Padmaraj Dandvati started this new type of journalism in Karnataka. Once I criticized orally Mr. Dandavati, because of his pro BJP stand in his column. From that day onwards, Prajavani is not at all carrying my news items. Freedom of press?
December 20 at 11:42am ·  · 

  • Rajesab Nadaf likes this.

    • Hoo Pattanshetti 
      Firstly, Congratulations.


      Something similar happened to me 2 weeks ago.
      I couldn't help laughing when Vijay Karnataka named me as Hugara Pattanshettya in the list of State films awards. And the same thing was carried in many of their other ve...See More

      December 20 at 11:51am ·  ·  1 person

    • Vishnu Kumar congratulation sir,,,,,,,,,,
      December 20 at 12:18pm ·  ·  1 person

    • Mudgal Venkatesh congrats, regret to note the politics in press too...
      December 20 at 12:48pm ·  ·  1 person

    • Radha Krishna Itz celbration tym. Rest of thngs apart. Congrats
      December 20 at 1:11pm via Facebook Mobile ·  ·  1 person

    • Kumara Raitha ನಿಡುಮಾಮಿಡಿ ಪ್ರಶಸ್ತಿ ಪಡೆದಿರುವುದಕ್ಕೆ ಅಭಿನಂದನೆ
      December 20 at 2:08pm ·  ·  1 person

    • Kumara Raitha ನಾನು ಬಾಲ್ಯದಿಂದಲೂ ಓದುತ್ತಾ-ಬೆಳೆಯುತ್ತಾ ಬಂದಿರುವುದು ಪ್ರಜಾವಾಣಿ ಜೊತೆಗೆ. ಪತ್ರಿಕೆ ಚುಕ್ಕಾಣಿ ಹಿಡಿದವರು ಇಂಥ ಧೋರಣೆ ತಳೆದಿರುವುದನ್ನು ಕೇಳಿ ಕೆಡುಕೆನ್ನಿಸುತ್ತಿದೆ
      December 20 at 2:18pm ·  ·  1 person

    • Padyana Ramachandra 
      ಅಭಿವ್ಯಕ್ತಿ ಸ್ವಾತಂತ್ರದ ಭಾಗವಾಗಿರುವ ಪತ್ರಿಕಾ ಸ್ವಾತಂತ್ರದ ವಿಚಾರಗಳ ಬಗ್ಗೆ ನಾಡಿನ ಹಾಗೂ ವಿದೇಶದ ಕನ್ನಡಿಗರ ಅವಲೋಕನೆಗೆ ಮಾಧ್ಯಮವೊಂದರ ನಿಲುವಿನೊಂದಿಗೆ ಅನುವು ಮಾಡಿದ ನಿಡುಮಾಮಿಡಿ ಪ್ರಶಸ್ತಿ ವಿಜೇತ ಶ್ರೀ. ರಂಜಾನ್ ದರ್ಗಾ ಅವರಿಗೆ ಅಭಿನಂದನೆಗಳು.


      -ಪ.ರಾಮಚಂದ್ರ,
      ರಾಸ್ ಲಫ್ಫಾನ್, ಕತಾರ್...See More

      December 20 at 3:19pm ·  ·  1 person

    • Krishna Nayak Hichkad ಅಭಿನಂದನೆಗಳು.
      December 20 at 4:14pm ·  ·  1 person

    • Rajesab Nadaf Congrats sir !!!
      December 20 at 4:41pm ·  ·  1 person

    • Bharath Chandra Shekar Jairam Congrats sir!!
      December 20 at 5:08pm ·  ·  1 person

    • Ramjan Darga Thanks for the affection you all have shown. Your wishes are more than any award to me.
      December 20 at 6:40pm · 

    • Naveen Sunag abhinandanegalu darga sahebare.
      December 20 at 6:54pm ·  ·  1 person

    • Laxman Hoogar kolaku yellidru kolake tane commrade. basava dharmada prasarakarad tamage nidumamidi prashasti bandide. abhinandane.
      December 20 at 7:10pm via Facebook Mobile ·  ·  2 people

    • Ramjan Darga Thanks Comrade, Prajavani always stood for Secularism, Plural culture and Democracy under the guidance and leadership of Mr. K.N. Harikumar, who was my role model. Now I wonder, what is going on in Prajavani! I always cherish the great heritage of Prajavani. Prajavani was my comrade. Great poet of the then Soviet Union late Mykovasky called a bus his comrade, because it carries common people. Prajavani was my comrade because it was voice of the common people. We must see, it should not become a voice of the ruling class.
      December 20 at 7:28pm ·  ·  1 person

    • Ashraf Manzarabad Sakleshpura 
      ಪ್ರಶಸ್ತಿಗಾಗಿ ಅಭಿನಂದನೆಗಳು ರಂಜಾನ್ ದರ್ಗಾ ಸಾರ್...ಫೇಸಸ್ ಬುಕ್ಕಿನ ಪತ್ರಕರ್ತರ ಗುಂಪಿನಲ್ಲಿ ಈ ಹಿಂದೆಯೇ ಪ್ರಜಾವಾಣಿಯ ಕುರಿತು ಕರವೇ ನಲ್ನುಡಿಯ ಪ್ರಧಾನ ಸಂಪಾದಕ ದಿನೂ ಸ.ಚಂ ಹೀಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.


      ಮುಖ್ಯಮಂತ್ರಿಗಳ, ಮಂತ್ರಿಗಳ ಅವ್ಯವಹಾರಗಳು, ಹಗರಣಗಳ ಕುರಿತಂತೆ ಕಳೆದ ...See More

      December 20 at 11:11pm · 

    • Yuvaraj Patil Congratulations!! and it is amazing to see straight talking in the murky world filled with political correctness as norm of the day.
      December 20 at 11:31pm · 

    • Nagshetty Shetkar heartly congatulation!sir. i call it is not at all a starange thing in India. i want to remember you the tale of indian frogs, those not at all succeed and never let to succeed. any we we are not capable to turn every ones mind set.
      Tuesday at 12:52am ·  ·  1 person

    • Noorjahan Jagalur Basheer Congratulations sir. Felt very happy to know about the award. ನೀವು ಹಾಗು ಇತರ ಪ್ರಶಸ್ತಿ ಪುರಸ್ಕೃತರು ಬಿತ್ತಿರುವ ಸದ್ಭಾವನೆ ಎಂಬ ಬೀಜ ಬೆಳೆದು ಹೆಮ್ಮರವಾಗಲಿ. ಸದಾಚಾರವೇ ಸ್ವರ್ಗ, ಸಮರಸವೇ ಜೀವನ ಎಂಬ ತಮ್ಮ ಆಶಯ ಈಡೇರಲಿ. ನಮಗೆ ಹೀಗೆ ಸಿಹಿ ಸುದ್ದಿಗಳು ಸಿಗುತ್ತಿರಲಿ :) :) :)
      Tuesday at 1:44am ·  ·  1 person

    • Ramjan Darga Thanks Noor. Waiting for your arrival.
      Tuesday at 11:11am · 

    • Gavi Byali Congratulations Sir...
      Wednesday at 10:06pm · 

    • Ramjan Darga Thanks Gavi
      Yesterday at 7:27am · 

    • Triveni Rao ರಂಜಾನ್ ದರ್ಗಾ ಅವರಿಗೆ ಅಭಿನಂದನೆಗಳು
      Yesterday at 11:02am · 

    • Rekha Hegde Congratulations sir. I am very happy for you.
      17 hours ago · 

    • Ramjan Darga Thanks Triveni Madame, Ramesh and Rekha.
      14 hours ago · 

    • Shridhar Prabhu 
      In our society, freedom of speech is a figure of speech. The only freedom we have is the freedom of trade.


      "Bourgeoisie has resolved personal worth into exchange value, and in place of the numberless indefeasible chartered freedoms, has set...See More

      4 hours ago · 

    • Ami Tha ಅಭಿನ0ದನೆಗಳು ಸಾರ್,
      4 hours ago · 

    • Shridhar Prabhu Hope person in question remembers this sentence during his JNU days!
      4 hours ago · 

    • Thufail Muhammad Congratulations Darga, I am really confused as to how I should lodge my protest. I know you have spent your entire career with these people and the treatment meted out to you is highly condemnable. I am thinking of telling my paper boy to stop dropping the paper from tomorrow. But you hardly have any choice when you are left with only rotten apples. I expect the right-thinking people in the PV and DH to take up this issue and express their outrage.