Friday, April 8, 2011

ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ... ಎದ್ದು ನಿಂತಿದ್ದೇವೆ..


ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ...

ದಿಢೀರಂತ ಎದ್ದು ಕೂತಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕಿನಿಂದ ಹಿಡಿದು ದಿಲ್ಲಿಯ ಜಂತರ್‌ಮಂತರ್‌ವರೆಗೆ ನಮ್ಮದೇ ಹಿಂಡು, ಕೈಯಲ್ಲಿ ರಾಷ್ಟ್ರಧ್ವಜ, ಎದೆಯಲ್ಲಿ ದೇಶಪ್ರೇಮ. ಮೊಂಬತ್ತಿ ಹಿಡಿದು ನಾವು ಹೊರಟವೆಂದರೆ ಸಾಕು ಮೀಡಿಯಾಗಳ ಸಾಲುಸಾಲು ಓಬಿ ವ್ಯಾನುಗಳು. ನಾವು ಭ್ರಷ್ಟಾಚಾರದ ವಿರುದ್ಧ ಗಾಂಧಿಗಿರಿ ನಡೆಸುವವರು, ದಂಗೆ ಎದ್ದವರು. ಎರಡನೇ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದವರು...

ಇಷ್ಟು ವರ್ಷ ನಮಗೆ ಗಡದ್ದು ನಿದ್ದೆ ನೋಡಿ. ನಿದ್ರಿಸಿದ್ದು ಸಾಕಾಯಿತು, ಈಗ ಎದ್ದು ನಿಂತಿದ್ದೇವೆ, ದೇಶಸೇವೆಗಾಗಿ. ಹಾಗೆ ನೋಡಿದ್ರೆ ಇದೊಂದು ವಿಷಯದಲ್ಲಿ ಮಾತ್ರ ನಮಗೆ ನಿದ್ದೆ. ಬೇರೆ ಎಲ್ಲೆಡೆ ನಾವು ಜಾಗೃತರಾಗಿರುತ್ತೇವೆ, ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತೇವೆ. ನಮಗೆ ಆಚರಿಸಲು ಒಂದು ಈವೆಂಟು ಬೇಕು ಅಷ್ಟೆ. ಕಡಲೆಕಾಯಿ ಪರಿಷೆ, ಕೇಕ್ ಶೋ, ಉಕ್ಕಿನ ಹಕ್ಕಿಗಳ ಏರ್ ಶೋ, ಸಾಹಿತ್ಯ ಸಮ್ಮೇಳನ ಇತ್ಯಾದಿ ಏನೇ ನಡೆದರು ಮಕ್ಕಳು ಮರಿಗಳೊಂದಿಗೆ ನಾವು ಹಾಜರ್. ಅಷ್ಟೇ ಏಕೆ ಬ್ರಹ್ಮಾಂಡದ ನರೇಂದ್ರ ಶರ್ಮ ಡೋಂಗಿ ಪ್ರವಚನ ಕೊಡುತ್ತಾನೆ ಎಂದರೂ ನಾವು ಕಿಕ್ಕಿರಿದು ನೆರೆಯುತ್ತೇವೆ. ನಾವೇ ಗಣಪತಿ, ಜೀಸಸ್ ಹಾಲು ಕುಡಿದರೆಂದು ಪುಕಾರು ಹಬ್ಬಿಸಿ ಜಾತ್ರೆ ಮಾಡಿದವರು. ನಾವೇ ನಮ್ಮ ನಮ್ಮ ಮನೆಗಳ ಮೇಲೆ ನಾಳೆ ಬಾ ಎಂದು ಭೂತಪ್ರೇತಗಳನ್ನುದ್ದೇಶಿಸಿ ಬರೆದುಕೊಂಡವರು. ನಾವು ಎಲ್ಲ ಕಡೆಯಲ್ಲೂ ಇದ್ದೇವೆ. ಸಮೂಹ ಸನ್ನಿ ಎಂದರೆ ನಮಗೆ ಬಲು ಪ್ರೀತಿ. ಅಲ್ಲೆಲ್ಲ ನಾವಿರುತ್ತೇವೆ. ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ...

ಇಷ್ಟು ವರ್ಷ ಬೇಕಾಯ್ತು ನೋಡಿ ಅಣ್ಣಾ ಹಜಾರೆಯವರ ಹೋರಾಟದ ಬದುಕನ್ನು ಅರ್ಥಮಾಡಿಕೊಳ್ಳಲು. ಆತ ಹಳ್ಳಿಯೊಂದರಲ್ಲಿ ಮಾಡಿದ ಜೀವಂತ ಪವಾಡ ಅರಿತುಕೊಳ್ಳಲು ಇಷ್ಟು ಕಾಲ ಬೇಕಾಯ್ತು. ಇಷ್ಟು ವರ್ಷ ನಾವು ಬೂದಿ, ಉಂಗುರ ಮಂತ್ರಿಸಿ ಕೊಡುವ ಪವಾಡ ನಡೆಸುವ ಬಾಬಾಗಳ ಹಿಂದೆ ಇದ್ದವರು. ಈಗಲೂ ಅಂಥವರಿಗೆ ನಾವೇ ಆಶ್ರಯದಾತರು. ಈಗ ಅಣ್ಣಾ ಹಜಾರೆಯ ಮಾತು ಬಂದಿದೆ. ಹಿಂದೆ ಮಸುಕು ಮಸುಕಾಗಿ ಈ ಹೆಸರನ್ನು ಕೇಳಿದ್ದ ನೆನಪು. ಆದರೆ ಈಗ ನಮಗೆ ಆತನಲ್ಲಿ ಇನ್ನೊಬ್ಬ ಗಾಂಧಿ ಕಾಣಿಸುತ್ತಿದ್ದಾರೆ. ನಾವು ಒಕ್ಕಟ್ಟಾಗಿ ಚೀರುತ್ತಿದ್ದೇವೆ, ಅಣ್ಣಾ ಹಜಾರೆ ಜಿಂದಾಬಾದ್.

ನಮಗೆ ಹೋರಾಟ, ಚಳವಳಿ ಇದೆಲ್ಲ ಅಪರಿಚಿತ ಶಬ್ದಗಳು ಕಣ್ರೀ. ಹಿಂದೆಲ್ಲ ಒಂದು ಹೋರಾಟದ ಮೆರವಣಿಗೆ ಹೋದರೆ ಮುಸಿಮುಸಿ ನಗುತ್ತಿದ್ದವರು ನಾವು, ಇದೆಲ್ಲ ಕೆಲಸವಿಲ್ಲದವರು ಮಾಡುವ ಪ್ರಹಸನ ಎಂದೇ ಭಾವಿಸಿದ್ದವರು. ಪ್ರತಿಭಟನೆ ಮಾಡೋರೆಲ್ಲ ಪುಂಡರು-ಪೋಕರಿಗಳು ಎಂದೇ ಭಾವಿಸಿದವರು ನಾವು. ನಮಗೆ ಸಮಸ್ಯೆಗಳು ಉದ್ಭವಿಸಿದಾಗಲೆಲ್ಲ ಈ ಪ್ರತಿಭಟನಾಕಾರರು ಎಲ್ಲಿ ಸತ್ತು ಹೋದರೋ ಎಂದು ಬೈದುಕೊಂಡವರು.

ಏನೇನೋ ನಡೆದು ಹೋದರೂ ನಾವು ಕದಲಲಿಲ್ಲ. ಈಗ ಎದ್ದು ನಿಂತಿದ್ದೇವೆ. ಸಾವಿರ ಸಾವಿರ ರೈತರು ಇದೇ ನಾಡಿನಲ್ಲಿ ಬದುಕಲಾಗದೆ ಆತ್ಮಹತ್ಯೆ ಮಾಡಿಕೊಂಡರು ಸತ್ತರು. ನಮಗೆ ಅದು ಸುದ್ದಿಯೂ ಅನಿಸಲಿಲ್ಲ. ರೈತರು ಸತ್ತ ಮೇಲೆ ಕೂಲಿಕಾರ್ಮಿಕರು ಏನಾಗಲು ಸಾಧ್ಯ? ಅವರೂ ಸತ್ತರು, ಲೆಕ್ಕ ಯಾರ ಬಳಿಯಲ್ಲೂ ಇಲ್ಲ. ರೈತರ ಜಮೀನನ್ನು ಕಿತ್ತು ನಮ್ಮದೇ ಸರ್ಕಾರಗಳು ದೊಡ್ಡ ದೊಡ್ಡ ಕಾರ್ಪರೇಟ್ ಸಂಸ್ಥೆಗಳಿಗೆ ಕೊಟ್ಟಾಗಲೂ ನಾವು ಕೊಸರಾಡಲಿಲ್ಲ, ಮಿಸುಕಾಡಲಿಲ್ಲ. ನಮ್ಮದೇ ಸಹೋದರರಂಥ ದೀನದಲಿತರಿಗೆ ಮಲ ತಿನ್ನಿಸಿದಾಗ, ಉಚ್ಚೆ ಕುಡಿಸಿದಾಗ, ಜೀವಂತ ಸುಟ್ಟು ಹಾಕಿದಾಗ ನಾವು ಮಾತನಾಡಲೇ ಇಲ್ಲ. ರೈತರು ಬಂದು ಬೀದಿಯಲ್ಲಿ ಟೊಮೋಟೋ, ಹಸಿಮೆಣಸಿನ ಕಾಯಿ ಚೆಲ್ಲಿದಾಗ ಯಾಕೆ ಹಾಗೆ ಮಾಡಿದರೆಂದೂ ನಾವು ತಲೆಕೆಡಿಸಿಕೊಳ್ಳಲಿಲ್ಲ. ನಾವು ಮಂದಿರ-ಮಸೀದಿ ಎಂದು ನಮ್ಮಲ್ಲೇ ಹೊಡೆದಾಡಿಕೊಂಡು ಸತ್ತೆವು, ನಮ್ಮದೇ ದೇಶದಲ್ಲಿ ಬಾಂಬುಗಳು ಸಿಡಿದವು. ಅವುಗಳಿಗೆ ನೂರಾರು ಮಂದಿ ಸತ್ತರು. ಸತ್ತವರಲ್ಲಿ, ಸಾಯಿಸಿದವರಲ್ಲಿ ಎಲ್ಲಾ ಧರ್ಮದವರೂ ಇದ್ದರು. ನಮ್ಮ ಕೋಮುದ್ವೇಷಕ್ಕೆ ನಾವೇ ಬಲಿಯಾಗಿಹೋದೆವು. ಇದು ಸರಿಯಲ್ಲ ಎಂದು ನಮಗೆ ಆಗ ಅನ್ನಿಸಿರಲಿಲ್ಲ. ಆದರೆ ಹಾಗಂತ ನಮ್ಮನ್ನು ಯಾರೂ ದೂಷಿಸಬೇಡಿ, ಕಡೆಗಾದರೂ ನಾವು ಎಚ್ಚೆತ್ತಿದ್ದೇವೆ, ನಮ್ಮ ದೇಶಭಕ್ತಿಯನ್ನು ಪ್ರಶ್ನಿಸಬೇಡಿ.

ದೇಶಭಕ್ತಿ ಅಂದ್ರೆ ನಮಗೆ ನೆನಪಾಗುವುದು ಕ್ರಿಕೆಟ್ಟು ಕಣ್ರೀ. ಅದರಲ್ಲೂ ನಮ್ಮ ಬಿಸಿಸಿಐ ತಂಡ ಪಾಕಿಸ್ತಾನದ ತಂಡದ ಮೇಲೆ ಗೆದ್ದರೇ ನಮ್ಮ ದೇಶಭಕ್ತಿ ಸಾರ್ಥಕವಾಗೋದು. ಕ್ರಿಕೆಟ್‌ನ ದೈತ್ಯರಾದ, ಸತತ ಮೂರು ಸರ್ತಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಮೇಲೆ ನಮ್ಮ ತಂಡ ಗೆದ್ದಾಗ ನಾವು ಒಂದೇ ಒಂದು ಪಟಾಕಿ ಹೊಡೆಯದೆ ಸುಮ್ಮನಿದ್ದೆವು. ಆಮೇಲೆ ನೋಡಿದ್ರಾ, ಪಾಕಿಸ್ತಾನ ಮೇಲೆ ಗೆದ್ದಾಗ ನಮ್ಮ ದೇಶಭಕ್ತಿ ಹೇಗೆ ಎದ್ದು ನಿಲ್ತು ಅಂತಾ. ವಿ ಸೆಲೆಬ್ರೇಟೆಡ್ ಇನ್ ಪ್ಯಾಷನ್. ರಾತ್ರಿ ಇಡೀ ಕುಡಿದೆವು, ಕೈಯಲ್ಲಿ ಬಾವುಟ. ರಸ್ತೆರಸ್ತೆಯಲ್ಲೂ ನಮ್ಮ ಕಿರುಚಾಟ, ಜಯಘೋಷ. ಶ್ರೀಲಂಕಾ ಮೇಲೆ ಫೈನಲ್ ನಡೆದು ರಾವಣಾಸುರರ ಮೇಲೆ ರಾಮನ ಬಳಗ ಗೆದ್ದಾಗ (ಹೀಗಂತ ಬರೆದದ್ದು ನಮ್ಮ ಮೀಡಿಯಾಗಳು) ಅವನ್ಯಾರೋ ಯುವರಾಜಸಿಂಗ್ ರಾಷ್ಟ್ರಬಾವುಟವನ್ನೇ ಹೊದ್ದು ಅದರಲ್ಲೇ ಮೂಗು ಮುಸುಡಿ ಒರೆಸಿಕೊಂಡು ವಿಜೃಂಭಿಸುತ್ತಿದ್ದ. ನಾವು ಅವನ ಅನುಯಾಯಿಗಳು. ಕುಡಿದು ತಟ್ಟಾಡುತ್ತಲೇ ಬಾವುಟ ಹಿಡಿದು ರಸ್ತೆಯಲ್ಲಿ ಪೆರೇಡು ನಡೆಸಿದೆವು. ಬಾಯಲ್ಲಿ ಹೊಲಸು ಮಾತು, ಬೈಗುಳ. ಆದರೂ ನಮ್ಮ ರಾಷ್ಟ್ರಭಕ್ತಿಯನ್ನು ಯಾವುದೇ ಕಾರಣಕ್ಕೂ ಅನುಮಾನಿಸಬೇಡಿ.

ಅಸಲಿಗೆ ನಮಗೆ ಲೋಕಪಾಲ್ ಮಸೂದೆ ಅಂದ್ರೆ ಏನು ಅಂತಾನೇ ಗೊತ್ತಿಲ್ಲ. ಜನಲೋಕಪಾಲ್ ಅಂದ್ರೂನು ಗೊತ್ತಿಲ್ಲ. ತಿಳಿದುಕೊಂಡು ನಮಗೆ ಏನೂ ಆಗಬೇಕಾಗೂ ಇಲ್ಲ. ಸುಮ್ಮಸುಮ್ಮನೆ ಈ ಪ್ರಶ್ನೆ ಕೇಳಿಕೊಂಡರೆ ನಮಗೆ ನಾವು ಸಿನಿಕರಾಗಿಬಿಡುತ್ತೀವಿ ನೋಡಿ. ಅದಕ್ಕೆ ಆ ಕಡೆ ಯೋಚಿಸುತ್ತಿಲ್ಲ ನಾವು. ನಮಗೆ ಇಮ್ಮೀಡಿಯಟ್ಟಾಗಿ ಭ್ರಷ್ಟಾಚಾರ ಸಂಪೂರ್ಣ ತೊಲಗಿಬಿಡಬೇಕು. ಅದಕ್ಕಾಗಿ ನಾವು ಅಣ್ಣಾ ಹಜಾರೆಯವರ ಬೆನ್ನಿಗೆ ನಿಂತುಬಿಟ್ಟಿದ್ದೇವೆ.

ಅಣ್ಣಾ ಆಂದೋಲನಕ್ಕೆ ಈಗ ಯಾರ‍್ಯಾರು ಬೆಂಬಲ ಕೊಡ್ತಿದ್ದಾರೆ ನೋಡಿದ್ರಾ? ಭ್ರಷ್ಟಾಚಾರದ ಭೀಕರ ರೂಪಗಳನ್ನು ಪ್ರದರ್ಶಿಸಿದವರೆಲ್ಲ ಅಣ್ಣಾ ಹಜಾರೆಗೆ ಜೈ ಅನ್ನುತ್ತಿದ್ದಾರೆ. ಆ ಕಡೆಯೂ ನಮ್ಮ ಗಮನವಿಲ್ಲ. ಬೆಂಬಲ ಯಾರು ಕೊಟ್ಟರೆ ಏನು ಅಲ್ಲವೇ?

ಒಮ್ಮೊಮ್ಮೆ ನಾವೂ ಕೂಡ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇವೆ ಅನಿಸುವುದುಂಟು. ಇದೇ ಪೊಲಿಟಿಷಿಯನ್ಸ್ ಬಂದು ವೋಟು ಕೇಳಿದಾಗ ಮೂಗುತಿ, ಬೆಳ್ಳಿ ದೀಪ ಪಡೆದವರು ನಾವೇ ಅಲ್ಲವೇ? ನಮ್ಮನೇಲಿ ಒಟ್ಟು ಎಂಟು ವೋಟು. ಬರೋಬ್ಬರಿ ಎಂಟು ಸಾವಿರ ಮಡಗಿ ಹೋಗಿ ಎಂದು ಹೇಳಿದವರೂ ನಾವೇ ಅಲ್ಲವೇ? ಯಾವ ಸರ್ಕಾರಗಳ ವಿರುದ್ಧ ನಾವು ಗುಟುರು ಹಾಕುತ್ತಿದ್ದೇವೋ ಅವರನ್ನೆಲ್ಲ ಚುನಾಯಿಸಿ ಕಳುಹಿಸಿದವರೂ ನಾವೇ ಅಲ್ಲವೇ?

ಅದಷ್ಟೇ ಏಕೆ? ಈಚೀಚಿಗೆ ಲಂಚ ಕೊಡುವುದೂ ನಮಗೆ ಘನತೆಯ ವಿಷಯ, ನಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳುವ ವಿಧಾನ. ಕೊಡುವವರೇ ಇಲ್ಲದಿದ್ದರೆ ತೆಗೆದುಕೊಳ್ಳುವವರು ಎಲ್ಲಿರುತ್ತಿದ್ದರು? ನಮಗೆ ಆ ಕ್ಷಣಕ್ಕೆ ನಮ್ಮ ಕೆಲಸಗಳಾಗಬೇಕು ಅಷ್ಟೆ. ಅದಕ್ಕಾಗಿ ನಾವು ಲಂಚ ಕೊಟ್ಟವರು. ಲಂಚ ಕೊಡುವುದೂ ಭ್ರಷ್ಟಾಚಾರ ಮಾಡಿದಂತೆಯೇ ಅಂತ ನಮಗೆ ಅನ್ನಿಸಿದ್ದಿಲ್ಲ. ಆದರೂ ನಮ್ಮನ್ನೂ ಸಹ ಭ್ರಷ್ಟಾಚಾರಿಗಳು ಅನ್ನೋದು ಇಟ್ಸ್ ಅನ್‌ಫೇರ್ ಯು ನೋ.

ಈಗ ನೋಡಿ ನಮ್ಮ ಬೆಂಬಲಕ್ಕೆ ಮೀಡಿಯಾಗಳು ನಿಂತುಬಿಟ್ಟಿವೆ. ಏನು ಕವರೇಜು, ಏನು ಘೋಷಣೆ? ಭ್ರಷ್ಟಾಚಾರ ವಿರುದ್ಧ ನಮ್ಮ ಅಭಿಯಾನ ಎಂದೇ ಮೀಡಿಯಾಗಳು ಹೇಳಿಕೊಳ್ಳುತ್ತಿವೆ. ಡಿ.ರಾಜನನ್ನು ಮಂತ್ರಿ ಮಾಡಿ ಎಂದು ದಳ್ಳಾಳಿ ಕೆಲಸ ಮಾಡಿದ ಬರ್ಖಾದತ್ ಎನ್‌ಡಿಟಿವಿಯಲ್ಲಿ ಆವೇಶಭರಿತವಾಗಿ ಮಾತನಾಡುತ್ತಿದ್ದರೆ ನಮ್ಮ ನರನಾಡಿಗಳಲೆಲ್ಲ ಭ್ರಷ್ಟರ ವಿರುದ್ಧ ಸಿಟ್ಟು ಹರಿಯುತ್ತದೆ. ಅತ್ತ ನೀರಾ ರೇಡಿಯೋ ಟೇಪು ಹಗರಣದಲ್ಲಿ ಕೇಳಿಬಂದ ಮತ್ತೊಂದು ಹೆಸರು ಪ್ರಭುಚಾವ್ಲಾ ಹೊಸ ಸಂಡೇ ಪೇಪರ್ ಮಾಡಿಕೊಂಡು ಇಂಡಿಯನ್ ಎಕ್ಸ್‌ಪ್ರೆಸ್ ಉದ್ಧಾರ ಮಾಡುತ್ತಿದ್ದಾರೆ. ಇಲ್ಲೂ ಅಷ್ಟೆ. ಸುಳ್ಳು ಅಫಿಡೇವಿಟ್ಟು ಕೊಟ್ಟು ಬಿಡಿಎ ಸೈಟು ಹೊಡೆದುಕೊಂಡವರು, ಬಿಡಿಎ ಸೈಟಿಗಾಗಿ ಹೆಂಡತಿಗೆ ಸುಳ್ಳೇ ಸುಳ್ಳು ಡೈವೋರ್ಸು ಕೊಟ್ಟವರೆಲ್ಲ ಕನ್ನಡ ಮೀಡಿಯಾಗಳಲ್ಲಿದ್ದಾರೆ. ಟ್ರಾನ್ಸ್‌ಫರ್ ದಂಧೆ ನಡೆಸುವವರು, ಅಧಿಕಾರಿಗಳ ಬಳಿ ಮಾಮೂಲಿ ಫಿಕ್ಸು ಮಾಡಿಕೊಂಡವರು, ಬ್ಲಾಕ್‌ಮೇಲು ಮಾಡುವವರು ಎಲ್ಲರೂ ಇದ್ದಾರೆ. ಎಲ್ಲರೂ ಸೇರಿಯೇ ಇವತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ಅವರೊಬ್ಬರಿದ್ದಾರೆ ಉದ್ಯಮಿ ಕಂ ಮೀಡಿಯಾ ಕಿಂಗ್. ಸದ್ಯಕ್ಕೆ ಎರಡು ಚಾನಲ್‌ಗಳನ್ನು ನಡೆಸುತ್ತಿದ್ದಾರೆ. ಈಗ ಅವರು ಅಣ್ಣಾ ಹಜಾರೆಯವರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ. ಅವರ ಮೀಡಿಯಾಗಳು ಕೂಡ ಭ್ರಷ್ಟಾಚಾರ ವಿರೋಧಿ ರಥಗಳನ್ನು ತಯಾರುಮಾಡಿ ಊರೂರು ಸುತ್ತಿಸುತ್ತಿವೆ. ಆದರೆ ಆ ಉದ್ಯಮಿ ರಾಜ್ಯಸಭೆಗೆ ಆಯ್ಕೆಯಾಗುವಾಗ ಶಾಸಕರನ್ನು ಖರೀದಿ ಮಾಡಿಯೇ ಮತಗಳನ್ನು ಗಳಿಸಿದ್ದು. ಯಾರ‍್ಯಾರಿಗೆ ಎಷ್ಟು ಎಷ್ಟು ಕೊಟ್ಟೆ ಎಂದು ಅವರು ಹೇಳಿಯಾರೆ? ಕೋಟಿಗಟ್ಟಲೆ ಹಣ ಲಂಚ ತಿನ್ನಿಸಿ ರಾಜ್ಯಸಭೆಗೆ ಹೋದವರು ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟುತ್ತಾರೆ, ನಾವು ಅದನ್ನೆಲ್ಲ ಮನ್ನಿಸಿ ಅವರ ಮೀಡಿಯಾ ಸಂಸ್ಥೆಗಳು ನಡೆಸುವ ಆಂದೋಲನದಲ್ಲಿ ಭಾಗವಹಿಸುತ್ತೇವೆ.

ಅದೆಲ್ಲ ಹಾಗಿರಲಿ ಬಿಡಿ, ನಾವು ವೈಯಕ್ತಿಕ ಮಟ್ಟದಲ್ಲಾದರೂ ಶುದ್ಧ ನೈತಿಕತೆಯನ್ನು ಅನುಸರಿಸಿದವರಲ್ಲ. ಇನ್ನೂ ಡೌರಿಗಳಿಲ್ಲದೆ ನಮ್ಮ ಮನೆಗಳ ಮದುವೆಗಳು ನಡೆಯೋದಿಲ್ಲ. ಡೌರಿ ಕೂಡ ಲಂಚದ ಹೀನಾತಿಹೀನ ರೂಪ ಅನ್ನೋದನ್ನು ನಾವು ಇನ್ನೂ ಒಪ್ಪಿಕೊಂಡಿಲ್ಲ. ಸರ್ಕಾರಿ ಅಧಿಕಾರಿ ಗಂಡನ್ನು ಹುಡುಕುವಾಗಲೂ ನಾವು ಸೆಲೆಕ್ಟಿವ್ ಆಗಿರ‍್ತೇವೆ. ನಮಗೆ ಮೇಷ್ಟ್ರು, ಪಾಷ್ಟ್ರು ಆಗಿಬರೋದಿಲ್ಲ, ಮೇಲ್ ಕಮಾಯಿ ಇದೆಯೋ ಇಲ್ಲವೋ ಎಂಬುದನ್ನು ನೋಡಿಯೇ ನಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುತ್ತೇವೆ. ನಮ್ಮ ಮಕ್ಕಳಿಗೆ ಫ್ಯೂಚರ್‌ನಲ್ಲಿ ತೊಂದರೆಯಾಗಬಾರದು ನೋಡಿ.

ನಮಗೆ ಸರ್ಕಾರಿ ಕಚೇರಿಗಳಲ್ಲಿ ಕ್ಯೂಗಳಲ್ಲಿ ನಿಂತು ಅಭ್ಯಾಸವಿಲ್ಲ. ನಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತೆ ನೋಡಿ. ಅದಕ್ಕಾಗಿ ಸಂಬಂಧಪಟ್ಟವರ ಕೈ ಬಿಸಿ ಮಾಡುತ್ತೇವೆ. ನಮ್ಮ ಕೆಲಸ ಆಗಿ ಹೋಗುತ್ತವೆ. ಹಾಗಂತ ಇಂಥ ಸಣ್ಣಪುಟ್ಟ ಲಂಚ ಕೊಡೋದ್ರಿಂದ ದೇಶ ಕೆಟ್ಟುಹೋಗಿದೆ ಎಂದು ನಾವು ನಂಬೋದಿಲ್ಲ ಬಿಡಿ.

ಈಗ ಅಣ್ಣಾ ಹಜಾರೆ ಉಪವಾಸಕ್ಕೆ ಕೂತಿದ್ದಾರೆ. ನಾವು ಮೆರವಣಿಗೆ ಹೊಂಟಿದ್ದೇವೆ. ಫ್ರೀಡಂ ಪಾರ್ಕ್ ಸುತ್ತ ಬಹುಶಃ ನಾಳೆಯಿಂದ ಬತ್ತಾಸು, ಖರ್ಜೂರ, ರೆಡಿಮೇಡ್ ಶರ್ಟುಗಳು, ತರಕಾರಿ ಹೆಚ್ಚುವ ಉಪಕರಣಗಳು, ಪೀಪಿ-ಬಲೂನುಗಳು ಮಾರಾಟಕ್ಕೆ ಬಂದರೂ ಆಶ್ಚರ್ಯವಿಲ್ಲ. ಹಾಗಾದಲ್ಲಿ ನಾವು ನಮ್ಮ ಮಕ್ಕಳು ಮರಿಗಳನ್ನೂ ಇಲ್ಲಿಗೆ ಕರೆದುಕೊಂಡುಬರಬಹುದು. ದೇಶಸೇವೆಯ ಜತೆಗೆ ಶಾಪಿಂಗೂ ನಡೆದುಹೋಗುತ್ತದೆ.

ಅಣ್ಣಾ ಹಜಾರೆಯವರಿಗೆ ಜಯವಾಗಲಿ, ಭ್ರಷ್ಟಾಚಾರ ತೊಲಗಲಿ.

ವಿ ದ ಪೀಪಲ್ ಆಫ್ ಇಂಡಿಯಾ ಈಗ ಎದ್ದು ನಿಂತಿದ್ದೇವೆ. ಮೊಂಬತ್ತಿಗಳು ನಮ್ಮ ಕೈಗಳಲ್ಲಿ ಕರಗಿ ಹೋಗುತ್ತಿವೆ.

30 comments:

 1. tumba suukta maarmika lekhana.namma ella unmaadagalante iduu ondu.JP chaluvaliyalli bhaagavahisida praamaanika naagarikarige adu hege durupayoga aayitu endu gottu.naale karnaatakadalli upachunavane.adu yaake mattu hege nadeyttiide ennuva bagge mombattigalu uriyuvudilla.bhaavanegala sarakina maaraatada angadiyalli desha seve tumbaa agga.

  ReplyDelete
 2. I liked it very much. That to be these provoking words.. I must say this to writer.. U have a amazing hold on Language...

  ReplyDelete
 3. Anna Hazareyavarige bembalavagi nillona.Istu varshadinda bhootaakaaravagi beledu ninta bhristacharavannu niyantrisuvudu sulabhada matenalla.Idu ondalla ondu roopadalli khandita pratyakshavagi nammannu kaadabahudu.Ee andolanavannu satata jeevantavagirisuva javabudaari yara koraligerisuvudu?Anna hazare estukaala jeevisalu saadhya?Bennelebulla NGO samstegalu ee andolanakke sthiravaadasphoorti, margadarshana needabeku.Horatu obbaninda ee mahaamaariyannu haddubastinallidalu sadhyavilla.Deshavidi setedu nintare maatra idu saadhya.

  ReplyDelete
 4. ನಿಮ್ಮ ಲೇಖನ ಈ ಹೊತ್ತಿಗೆ ಸೂಕ್ತ. ನಿಮಗೆ ಅಭಿನಂದನೆಗಳು.ಮೀಡಿಯಾಗಳು ಸದಾ ಸುದ್ದಿಯಾಗಿ ಹಾತೊರೆಯುತ್ತವೆ. ಹೀಗೆ ಇದೊಂದು ಸುದ್ದಿ. ಓಬಿ ವ್ಯಾನ್ ತಂದವರೆ, ನೇರ ಪ್ರಸಾರಕ್ಕೆ ನಿಂತು ಬಿಟ್ಟರು. ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಎಲ್ಲರದೂ ಉದ್ದುದ್ದ ಭಾಷಣವೇ.
  ಕನ್ನಡದ ಮಾಧ್ಯಮವನ್ನೆ ಗಮನಿಸೋಣ. ಟಿವಿ9, ಸುವರ್ಣ ಹಾಗೂ ಜನಶ್ರೀ ಹೋರಾಟಕ್ಕೆ ಬೆಂಬಲ ಕೊಟ್ಟು ಜಾತಾ ನಡೆಸಿದವು. ಇವರಲ್ಲಿ ಯಾರಿಗೆ ಭ್ರಷ್ಟಾಚಾರದ ವಿರುದ್ದ ಮಾತನಾಡುವ ನೈತಿಕತೆ ಇದೆ?
  ನೀವು ಸರಿಯಾಗಿಯೇ ಕೇಳಿದ್ದೀರಿ. ಸುವರ್ಣ ಮಾಲೀಕರು ರಾಜ್ಯಸಭೆಗೆ ಆಯ್ಕೆಯಾಗಿದ್ದು ಹೇಗೆ? ಜನಶ್ರೀ ಮಾಲೀಕರು ಯಾವ ಮಟ್ಟಿಗೆ ಸಾಚ?
  ಕೆಲ ಚಾನೆಲ್ಗಳಂತೂ ಆಂದೋಲನಕ್ಕೆ ಬೆಂಬಲ ಆಹ್ವಾನಿಸುವ ನೆಪದಲ್ಲಿ ಲಕ್ಷಾಂತರ ಎಸ್ಎಂಎಸ್ ಸಂಗ್ರಹಿಸಿ ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಇದೂ ಚಾನೆಲ್ಗಳ ಧನದಾಹಿ ಗುಣ ಅಲ್ಲವೆ?
  ಇನ್ನೂ ಪ್ರತಿಊರುಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಶಾಲಾ ಕಾಲೇಜು ಕಟ್ಟಿ ದುಬಾರಿ ಡೊನೇಷನ್ ಸುಲಿಯುವ, ವರದಕ್ಷಿಣೆಗಾಗಿ ಸೊಸೆಯಂದಿರನ್ನು ಪೀಡಿಸುವವರೇ ಹೆಚ್ಚು ಮಂದಿ. ಅವರೆಲ್ಲರಿಗೂ ಬುದ್ಧಿ ಬರುವುದು ಯಾವಾಗ?
  - ಬಿರಿಯಾನಿ ಕರಿಯಣ್ಣ

  ReplyDelete
 5. hats up to sampadakeeya team..!!!
  nijavaaglu tumba..tumba chennagiro haagu vastavikatege tumba hattiravada lekhana.. melina commentigaru helidante balsida "bhashe", neediruva "metaphore" galu... yella utkrushtavagide..
  anna hazareyante neevu madyamadallina brashtara bagge arivu moodisi.. nimma jote naaviddeve..ooduga "doregalu" athava "beloved readers" galu

  ReplyDelete
 6. ಈಗ ನಡೆಯುತ್ತಿರೋ ಈ ಜನ ಸಾಮಾನ್ಯರ ಆಂದೋಲನ ಒಂದು ಭಾವನಾತ್ಮಕ ಕೂಗಾಟದಂತೆ ಕಾಣುತ್ತಿದೆ. ಈತ್ತೀಚೆಗೆ ಎಲ್ಲಿ ಏನೇ ನಡೆದರೂ ಹೇರಳವಾಗಿ ಜನ ಸೇರ್ತಾರೆ. ಎಲ್ಲವನ್ನು ಒಂದು event ಮಾಡುತಾರೆ. ದೋಸೆ ಕ್ಯಾಂಪ್ ಗೂ ಅಸ್ಟೇ ಜನ, ಬ್ರಹ್ಮಾಂಡ ಸ್ವಾಮಿಯ ಯ ಸಮಾವೇಶ ಕ್ಕೂ ಅಸ್ಟೇ ಜನ! ಸಾಹಿತ್ಯ ಸಮ್ಮೇಳನ, , ಜಾತ್ರೆ, ಮೇಳ, ದೇವಸ್ಥಾನ, ಸಂಕಷ್ಟಹರ ಗಣಪತಿ ಪೂಜೆ, , super mall, ಆಂದೋಲನ, ಚಳುವಳಿ, ಎಲ್ಲವಕ್ಕೂ equal participation.! ಒಟ್ಟಿನಲ್ಲಿ ಜನರಿಗೆ ತಮ್ಮ bottled up emotions ನ ಹೊರಗೆ ಹಾಕೋಕೆ ಒಂದು event ಬೇಕು. time pass ಗೆ ಒಂದು occasion ಬೇಕು. ಹಾಗಾಗಿದೆ ನಮ್ಮ ಪರಿಸ್ಥಿತಿ.

  ReplyDelete
 7. Nijvagi nammannu alochanege odduva lekhana idu. thanks to the writer and thanks to sampadakeeya. Lokpal masude,janalokapal bagge aenu tilidukollade, kurimande haage nuggi onde barige bhrashtachaara nirmoolane agbeku anno murkharu navagiddeve .isella harata nadsta iro mediagaladru LOKPAL MASUDE aenu? adaralli aenide aennuvadanna janarigi tilisbekagithu.

  ReplyDelete
 8. don't trivialize the matter with uncalled for sarcasm. the great event needs a dignified approach.

  ReplyDelete
 9. It is not trivialisation,it is a sincere effort to expose the abusing of the feeling of Indian citizens in the fake umbrella of people's movement.All corrupt people use this opportunity to safeguard their corrupt deeds.Politicians,Businessmen,Film actors ,Swamis and the so called people of positions escape from their misdeeds.'Corruption'should be dealt in concrete micro level ,not as abstract with slogans .Any attempt to expose corruption in our micro level is a 'great'event.Karnataka state has become a known corrupt state in the country.What is the role of people's movement in combating it -is a question.We should be prepared to face embarrassing questions ,rather than taking a holy bath in sweeping abstract slogans.

  ReplyDelete
 10. Well taken.. the fact of matter is Indian has seen the dramatic growth rate by all of our efforts.. somewhere we lost our fundamental principles and self respect.. and forgotten how we lived our past..In India we are surviving only because of the intellectual property.. In modern India there is no mid-to-long term perspective, everybody wants to live for that moment.. "Aj Ke liye Kuch Karde" It will not sustain for sure.

  Further one of the biggest bottleneck for India's growth is LACK OF UNIFIED THINKING. There are no common interests, objectives.. Every where there will be opposition, at work, home, society..

  We believe that, Indian culture is unique.. but our culture should not only be restricted to religious rituals.. we should demonstrate the right behavior and attitude.

  I always think, that we all are good in propagating our mother tongue or the sates language .. but hardly people know to behave in right manner.. Y do we need Kannada Rakshana Vidike or some thing like that.. Objective is to maintain supremacy..

  Hats off to Anna.. we finally are going to have some tool against corruption .. but the real ownership lies with each and everyone. We need to change the MINDSET, GO BACK TO BASICS AND TAKE OWNERSHIP.. Jai Ho..

  ReplyDelete
 11. ತುಂಬಾ ಸಂತೋಷವಾಯಿತು ಅಂಕಣ ಓದಿ..... ನಮ್ಮ ಸಮಾಜವನ್ನು ಸೊಗಸಾಗಿ ಬಿಚ್ಚಿಟ್ಟಿದಿರಿ.... ಕೆಲವು ಸಾಲುಗಳು ಸರಿಯಾಗಿ ನನ್ನ ಮುಕಕ್ಕೆ ಮಂಗಳಾರತಿ ಮಾಡಿದೆ..... ಈಗ ನಿದ್ದೆಯಿಂದ ಯೆದ್ದಿದೇನೆ ...... ಅಣ್ಣನಿಗೆ ಜಯವಾಗಲಿ

  ReplyDelete
 12. ಈ ಲೇಖನವನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಯಿತು. ತುಂಬಾ ಅಪ್ರಿಯವಾದ ಸತ್ಯಗಳನ್ನು ಹೇಳಿದ್ದೀರಿ. ಭ್ರಷ್ಟಾಚಾರ ವಿರುದ್ಧ ಹೋರಾಟ ಅಷ್ಟು ಸರಳವಲ್ಲ, ವೈಯಕ್ತಿಕ ಮಟ್ಟದಿಂದಲೇ ಈ ಆಂದೋಲನ ಆರಂಭವಾಗಬೇಕು ಎನ್ನುವ ಈ ಲೇಖನದ ಆಶಯ ಒಪ್ಪುವಂಥದ್ದು. ಆತ್ಮವಿಮರ್ಶೆಗೆ ದಾರಿ ಮಾಡಿಕೊಡುವ ಮಾರ್ಮಿಕ ಲೇಖನಕ್ಕೆ ಥ್ಯಾಂಕ್ಸ್.

  ReplyDelete
 13. Sampadakeeya blognalli tumba aparoopakke kanisikonda olleya lekhana. thanks

  ReplyDelete
 14. ಸತ್ಯಾ ಎಸ್April 9, 2011 at 4:12 PM

  ಇದು ಸಂಪಾದಕೀಯದ ಅತ್ಯುತ್ತಮ ಲೇಖನ.
  ಇದು ಜನಲೋಕಪಾಲ್ ಮಸೂದೆಗಾಗಿ ಮಾತ್ರ ಎದ್ದ ಜನ ಬೆಂಬಲ ಅಲ್ಲ, ಒಟ್ಟು ಭ್ರಷ್ಟಾಚಾರದ ವಿರುದ್ದ ಎದ್ದ ಜನ ಬೆಂಬಲ ಎನ್ನುವುದು ಸತ್ಯ. ಆದ್ದರಿಂದಲೇ ಈ ಅಂದೋಲನಕ್ಕೆ ಹೆಚ್ಚು ಬಲ ಇರುವುದು. ಈಗ ಆಗಬೇಕಿರುವುದು ಈ ಜನಾಂದೋಳನವನ್ನು ಸ್ಥಳೀಯಗೊಲಿಸುವುದು. ಇದು ಹಲವು ಸ್ಥರಗಳಲ್ಲಿ ಆಗಬೇಕಿದೆ. ಅದರಲ್ಲಿ ಪ್ರತಿ ವ್ಯಕ್ತಿ ತನ್ನ ವೈಯಕ್ತಿಕ ನೆಲೆಯಲ್ಲಿ ನಡೆಸುವ ಪ್ರತಿಭಟನೆಯೂ ಅಷ್ಟೇ ಮುಖ್ಯವಾದದ್ದು. ಈ ಒಂದು ಅಂದೋಲನ ನನ್ನ ಹೋರಾಟಕ್ಕೆ ಬಲ ನೀಡಿದೆ.
  ನಿಮ್ಮ ಲೇಖನ ನನ್ನಂತವರಿಗೆ ಬೆಂಬಲ ನೀಡಿದೆ.

  ReplyDelete
 15. hats off sampdakeeya!!!! what a post! am really falling short of words to aprecite the thoughts. who are you sir??? drawing me crazy with your superb narration every single time you post on blog:-) whoever you may be, if i am to rate the best writer and a crtic and the blend of two, it would be the'SAMPADAKEEYA' you need no fan following, no star before your name,no publicity, no personal attcks,the clean,informative,thought provoking,self less posts,that is what making you stand out of all media and prove youself the best!!! all due credits and support,love,regards you deserve, keeep your work ahead!!!

  ReplyDelete
 16. tv9 mattu suvarna mundevu ANNA HAZAREyantha naija deshabhakthanige jai kaara hakuva badalu, avara bharstacharada virudda horatavannu haijack maadalu yatnisiddare... tamma channel na banner haakikondu prachara TRP padeyuva badalu, tamma channel na aantharika corruption bagge athma vimarshe maadikollali

  ReplyDelete
 17. ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಈ ಬಗ್ಗೆ ಮಾತನಾಡುತ್ತಾರೆ. ನೈತಿಕತೆ ಬಗ್ಗೆ ಭಾಷಣ ಮಾಡುವ ರಾಜಕಾರಣಿಗಳು, ಇವತ್ತಿಗೂ ಅದರ ಅರ್ಥ ತಿಳಿದುಕೊಂಡಿದ್ದಾರಾ? ಇದಕ್ಕೆ ರಾಜಕಾರಣಿಗಳಷ್ಟೆ ಅಲ್ಲ; ಅಧಿಕಾರಿಗಳು ಶಾಮೀಲು... ಪ್ರಜಾಪ್ರಭುತ್ವದ ಅರ್ಥವನ್ನು ಕಂಡುಕೊಳ್ಳುವ ಸಮಯ ಬಂದಿದೆ. ಅಲ್ಲೂ ಎಡವದಿದ್ದರೆ ಸಾಕು......
  - ದನಿಧ್ವನಿ

  ReplyDelete
 18. ಇದು ಒಳ್ಳೆಯ ಬರಹ. ಒಂದು ಪ್ರಾಮಾಣಿಕ ಪ್ರಶ್ನೆ , ಸಂಪಾದಕರಿಗೆ, ಹಾಗೂ ಇಲ್ಲಿ ಕಾಮೆಂಟ್ ಹಾಕಿರೋ ನಮ್ಮ ದೇಶವಾಸಿಗಳಿಗೆ-ನಿಮ್ಮಲ್ಲಿ ಯಾರು ಇದುವರೆಗೂ ಒಂದು ಬಾರಿಯಾದರೂ ಲಂಚ ಕೊಡದೆ, ಅಧಿಕಾರ ದುರ್ಬಳಕೆ ಮಾಡದೆಯೇ ತಮ್ಮ ಕೆಲಸಗಳನ್ನ ಮಾಡಿಸಿಕೊಂಡ್ಡಿದ್ದಿರ?

  ನನಗೆ ಅನ್ನಿಸಿರೋ ಹಾಗೆ ಒಬ್ಬರು ಕೂಡ ಇರಲಿಕ್ಕಿಲ್ಲ :-(

  ReplyDelete
 19. 20 YEARS BACK i APPLIED FOR REGULARISATION OF AGRICULTURAL LAND CULTIVATED BY ME. TILL TODAY THE FILE NOT MOVED AN INCH. IF I APPLIED FOR MINING LEASE IN FOREST LAND...

  ReplyDelete
 20. For all the good folks getting worked up about this drama being enacted at Jantar Mantar..I have this question. Did you notice that Rajmata Sonia has supported Anna Hazare against her own government that she is heading by proxy...do you see the irony of this? Did you observe that the panel proposed by Anna Hazare does not contain even a single opposition member in it and is constituted solely by ruling party members and some NGO's with dubious credentials? I am not trying to dampen your enthusiasm here...but before you wish for something, think about what you are wishing for.

  ReplyDelete
 21. Any body who can see through this stage managed drama should have titled this post as "We the common SHEEPLE of india...eddu nintheddeve :)

  ReplyDelete
 22. i like the word " samooha sanni " We are so used to it.. namage iro devarugalu saladu antha aradya daivagalu bere beku.. criket stars, film stars, dongi swamigalu, dongi rajakaranigalu , bogale jyothishigalalli devaranna kanthivi. avranna hoglidde hogliddu. media kooda idralli hinde belolla( after all they need some news) navu ad astu yaar adru hinde iroke try madthivi....yake andre namge munde bandu abyasa illa nodi :)

  ReplyDelete
 23. Good Article, Though has an abated sarcasam towards public, quiet effective... But i wonder why are we adding other toppings to this..
  like dowry, media, film industry, publicity..

  Let me tell , you i was there at Freedom park , for 3 days - When ever there was deaviation in topic while somebody spoke he was thrashed out.. to my astonishment - some one is talking about - Software indusitries, IT tekkis.. etc etc.. the other started talking about terrorism.. etc...etc.. and now here we are bringing - dowery, that , this etc etc..

  LET ME TELL YOU IN CLEAR AND LOUD - Gandhijis Only Moto Only focus was on Freedom of india ( A proper defention of what he wanted - Thats why he sat fasting 21 days.. One GOAL and a Clear VISION.. Lets have that NOW too. August 15 is the deadline - How of many of you are ready to FAST if things dont turn up After that ?

  ReplyDelete
 24. @kiran i apreciate your motto as well, but lets be practical, during thosed days the only motto of gandhi was freedom and he could achieve it succesfully as there were no other ill forces which were stopping him from his motto!!! now the condition is different,we all know that we can't achieve anything by fasting!! our vision is anti corruption, and which is bound by all ill forces like dowry,media, film industry etc...our motto can't be achieved overnight, so if the root causes are gradually abolished we can aim up to the top, when we are bound by so many problems well within root, our motto would be an illusion ever...!! don't you think so??

  ReplyDelete
 25. Dear Ashu, In my humble opinion
  everything sounds impractical till it is done..
  believe and start beliving - thats when it can be achieved
  for analougous - our parents just believed that we will be something someday and invested in our educations.
  Yes, Nothing cant be changed over night - It needs persistance, patience and practicipation
  Everyone can choose their own ways of achieving the GOAL - Corruption free nation!
  Lets not much dwell on - what abaandons us from our GOAL, like Randy paush says - "Brick walls are there for a reason. The brick walls are not there to keep us out. The brick walls are there to show how badly we want something. Because the brick walls are there to stop the people who don’t want something badly enough "
  Nivu kuda nimma wayna choose maadi, and keep going in that it can be, protest,fasting, educating,social awarness, reporting corruption to lokayukta or rebeling out.

  Its your nation, Its your pride - It is your " Democratic republic of India "

  ReplyDelete
 26. It is very good .....

  ReplyDelete
 27. It time now, need to get back to actions on this

  ReplyDelete
 28. I don't know why the government and media are concentrating on Anna hazare and his fasting while the concentration should be on the movement by the people with great emphasis on "Freedom from corruption". Democracy has turned out to be "Big people protecting big people". Its time to change ....

  ReplyDelete
 29. I am going to Freedom Park this evening, interested Ppl please join Jai Hindh !

  ReplyDelete
 30. So my nightmare has come true...

  Like i had feared ppl are attaching irrelevant things on this issue..

  We were never united nor will be.. be at good cause or if you neighbours house on fire...

  After reading many Articals,FB, comments.. This is what i am feeling.. Every supporter or group is just being classified.. on cast/religion/upper class/ IT / BT / Buddijivi/Dadda Jivi/ Social Group/ Hegemony/ Anti congress/ Anti BJP/ Anti Democracy / Anti constitutiona /your versioin / My version / socialist/ young /old/ Communist / Media..

  " Now, dont give the taunt of This Democratic country - and i can express my views " -
  Its about collective opinion / Collective Progress of Nation... and WE WILL NEVER BE DOING, AS WE ARE DEMOCRATIC INDIANS and WE ARE PRETTY GOOD bringing DISUNITY even between FEVICOL KA JOD !! isnt it ?!

  ReplyDelete