Tuesday, October 11, 2011

ಐಆರ್‌ಎಸ್ ಸರ್ವೆ ಕರ್ನಾಟಕ: ವಿಜಯ ಕರ್ನಾಟಕ ಈಗಲೂ ನಂ.೧


ಐಆರ್‌ಎಸ್ ಸರ್ವೆ ಬೆಂಗಳೂರು ಫಲಿತಾಂಶವನ್ನು ಕಳೆದ ಪೋಸ್ಟ್‌ನಲ್ಲಿ ಗಮನಿಸಿದ್ದಿರಿ. ಒಟ್ಟಾರೆ ಕರ್ನಾಟಕದ ಫಲಿತಾಂಶದ ವಿವರಗಳು ಇಲ್ಲಿವೆ. ಯಥಾಪ್ರಕಾರ ವಿಜಯ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ವಿಜಯ ಕರ್ನಾಟಕದ ಅಂದಾಜು ಓದುಗರ ಸಂಖ್ಯೆ ೩೪.೩೮ ಲಕ್ಷ. ಕಳೆದ ತ್ರೈಮಾಸಿಕದಲ್ಲಿ ಈ ಸಂಖ್ಯೆ ೩೪.೭ರಷ್ಟಿತ್ತು. ಒಟ್ಟಾರೆಯಾಗಿ ಕಳೆದ ವರ್ಷವೊಂದರಲ್ಲಿ ವಿಜಯ ಕರ್ನಾಟಕ ಓದುಗರ ಸಂಖ್ಯೆ ಶೇ. ೫.೨ರಷ್ಟು ಏರಿದೆ.

ಎರಡನೇ ಸ್ಥಾನದಲ್ಲಿ ಇರುವ ಪ್ರಜಾವಾಣಿ ಕರ್ನಾಟಕದಾದ್ಯಂತ ಪ್ರಸಾರದಲ್ಲಿ ಗಣನೀಯ ಏರಿಕೆಯನ್ನು ದಾಖಲಿಸಿದೆ. ಆದರೆ ಕಳೆದ ತ್ರೈಮಾಸಿಕದಲ್ಲಿ ಶೇ.೧ರಷ್ಟು ಓದುಗರನ್ನು ಕಳೆದುಕೊಂಡಿದೆ ಕಳೆದ ಪ್ರಜಾವಾಣಿ ಅಂದಾಜು ಓದುಗರ ಸಂಖ್ಯೆ ೩೩.೬೯ ಲಕ್ಷ. ಹಿಂದಿನ ತ್ರೈಮಾಸಿಕದಲ್ಲಿ ಇದು ೩೪.೦೩ ಲಕ್ಷವಾಗಿತ್ತು.

ಮೂರನೇ ಸ್ಥಾನದಲ್ಲಿರುವ ಕನ್ನಡಪ್ರಭದ ಕಳೆದ ತ್ರೈಮಾಸಿಕದಲ್ಲಿ ಅಲ್ಪ ಏರಿಕೆಯನ್ನು ಕಂಡಿದೆ. ಓದುಗರ ಅಂದಾಜು ಸಂಖ್ಯೆ ಈಗ ೧೩.೫೪ ಲಕ್ಷ. ಹಿಂದಿನ ತ್ರೈಮಾಸಿಕದಲ್ಲಿ ಇದು ೧೩.೩೪ ಲಕ್ಷವಾಗಿತ್ತು. ಕಳೆದ ವರ್ಷದಲ್ಲಿ ಕನ್ನಡಪ್ರಭದ ಓದುಗರ ಸಂಖ್ಯೆ ಹೆಚ್ಚಳವಾಗಿದ್ದು, ೮.೬೨ ಲಕ್ಷ ಓದುಗರಿದ್ದ ಪತ್ರಿಕೆ ಸಾಕಷ್ಟು ಏರಿಕೆ ಕಂಡಿದೆ.

ನಾಲ್ಕನೇ ಸ್ಥಾನದಲ್ಲಿರುವ ಸಂಯುಕ್ತ ಕರ್ನಾಟಕದ ಓದುಗರ ಸಂಖ್ಯೆ ಈಗ ೧೧.೭೬ ಲಕ್ಷ. ಕಳೆದ ತ್ರೈಮಾಸಿಕದಲ್ಲಿ ಈ ಸಂಖ್ಯೆ ೧೩.೦೬ ಲಕ್ಷವಾಗಿತ್ತು. ಅಂದರೆ ಪತ್ರಿಕೆ ಗಣನೀಯ ಸಂಖ್ಯೆಯಲ್ಲಿ ತನ್ನ ಓದುಗರನ್ನು ಕಳೆದುಕೊಂಡಿದೆ. ಆದರೂ ಕಳೆದ ವರ್ಷ ಶೇ. ೧೯.೫ರಷ್ಟು ಬೆಳವಣಿಗೆ ಸಾಧಿಸಲು ಪತ್ರಿಕೆ ಯಶಸ್ವಿಯಾಗಿದೆ.

ಉದಯವಾಣಿ ಪತ್ರಿಕೆ ಕಳೆದ ತ್ರೈಮಾಸಿಕದಲ್ಲಿ ಕಳೆದುಕೊಂಡದ್ದನ್ನು ಈ ತ್ರೈಮಾಸಿಕದಲ್ಲಿ ಗಳಿಸಿಕೊಳ್ಳಲು ಯಶಸ್ವಿಯಾಗಿದೆ. ಶೇ.೧೦.೩ರಷ್ಟು ಓದುಗರ ಸಂಖ್ಯೆ ಹೆಚ್ಚಿದ ಪರಿಣಾಮ ಈಗ ಅದರ ಪ್ರಸಾರ ಸಂಖ್ಯೆ ೯.೮೫ ಲಕ್ಷವಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷ ಶೇ. ೨೪ರಷ್ಟು ಬೆಳವಣಿಗೆ ಸಾಧಿಸಲು ಪತ್ರಿಕೆ ಯಶಸ್ವಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ನಂತರದ ಸ್ಥಾನಗಳಲ್ಲಿದ್ದು, ಸಂಜೆವಾಣಿ, ಬೆಂಗಳೂರು ಮಿರರ್ ಮತ್ತು ತರುಣ್ ಭಾರತ್ ಪತ್ರಿಕೆಗಳು ಕಡೆಯ ಮೂರು ಸ್ಥಾನಗಳಲ್ಲಿವೆ.

5 comments:

 1. As per the survey : Kannada Prabha: 13.54 lakh in IRS Q2 2011 and 8.62 lakh in IRS Q2 2010. Vijaya Karnataka : 34.38 lakh in IRS Q2 2011 and 32.68 lakh in IRS Q2 2010.... So I can say Vishweshwar Bhat did tremendous Job in Kannada Prabha. Congrats Bhat, Pratap & Thayagu Sir.

  ReplyDelete
 2. well done Bhat sir, Pratap and others in Kannada prabha. Keep up the good work. People are expecting lot more good work from you guys

  ReplyDelete
 3. ಲೇಖನ ಅಪೂರ್ಣವಾಗಿದೆ ಅನ್ನಿಸುತ್ತದೆ ಏಕೆಂದರೆ, ವಾರ್ಷಿಕ ವರದಿಯ ಪ್ರಕಾರ ವಿ.ಕ (+ 5.20%) ಪ್ರಜಾವಾಣಿ ಗೊತ್ತಿಲ್ಲ. ಕನ್ನಡಪ್ರಭ (+57.08%), ಉದಯವಾಣಿ (+24%), ಸಂಯುಕ್ತ ಕರ್ನಾಟಕ ಗಣನೀಯ ಸಂಖ್ಯೆಯಲ್ಲಿ ತನ್ನ ಓದುಗರನ್ನು ಕಳೆದುಕೊಂಡಿದ್ದರೂ, ಆದರೂ ಕಳೆದ ವರ್ಷ ಶೇ. ೧೯.೫ರಷ್ಟು ಬೆಳವಣಿಗೆ ಸಾಧಿಸಲು ಹೇಗೆ ಸಾಧ್ಯ?

  - ನಿಮ್ಮ ಹಿಂದಿನ ಲೇಖನದ ಜೊತೆಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕನ್ನಡ ಪತ್ರಿಕೆಯನ್ನು ಓದುವವರು ಕಡಿಮೆಯಾದರೆ ರಾಜ್ಯದ ಇತರೆ ಭಾಗಗಳಲ್ಲಿ ಇದು ಹೆಚ್ಚಾಗಿದೆ. ಇದಕ್ಕೆ ಕಾರಣ ಬಹುಶಃ ಕನ್ನಡಿಗರು ಕನ್ನಡ ಪತ್ರಿಕೆಯನ್ನು ಬಿಟ್ಟು ಆಂಗ್ಲ ಭಾಷೆಯ ಪತ್ರಿಕೆಯತ್ತ ಮುಖ ಮಾಡಿರಬಹುದು, ಕಾರಣ ಕೆಲವು ಪತ್ರಿಕೆಗಳು ಉಚಿತವಾಗಿ ಹಂಚುತ್ತಿವೆ,ಅಥವ ಭಾರಿ ಕಡಿಮೆ ಬೆಲೆಗೆ ಮಾರುತ್ತಿವೆ , ಪತ್ರಿಕೆ ಓದಿದ ನಂತರ ರದ್ದಿಗೆ ಹಾಕಿದರೆ ಕೊಂಡ ಬೆಲೆಗಿಂತ ಹೆಚ್ಚಿನ ಬೆಲೆ ಸಿಗುತ್ತಿದೆ.

  - ಈ ಆಂಗ್ಲ ಪತ್ರಿಕೆಗಳು ಬೆಂಗಳೂರಿನ ಹೊರಭಾಗದತ್ತ ಗಮನ ಹರಿಸಿಲ್ಲ, ಅಥವ ಅಲ್ಲಿನ ಜನರಿಗೆ ಕೊಂಡಬೆಲೆಗಿಂತ ಹೆಚ್ಚಿಗೆ ಬರಬಹುದು ಎನ್ನುವುದು ಗೊತ್ತಿಲ್ಲ.

  - ಬಹುಶಃ ವಿಜಯ ಸಂಕೇಶ್ವರರ ಹೊಸ ಕನ್ನಡ ಪತ್ರಿಕೆ ಬರುವವರೆಗೂ ಆಂಗ್ಲ ಪತ್ರಿಕೆಗಳ ಮಾರಾಟ ಇದೇ ರೀತಿ ಇರಬಹುದು, ನಂತರ?.....

  ReplyDelete
 4. ಈ ವಿಕ ನಲ್ಲಿ ಬರೀ ಜಾಹೀರಾತು. ಅದೇಗೆ ಅದು ಟಾಪೋ ನನಗೆ ಗೊತ್ತಿಲ್ಲ. ಬಹುಶಃ ಜನ ಜಾಹೀರಾತನ್ನ ಜಾಸ್ತಿ ಓದ್ತಾರೆ ಅನ್ಸುತ್ತೆ.

  ReplyDelete
 5. haage tv channel bagge tilisi sir

  ReplyDelete