Wednesday, October 19, 2011

ಶಾಲಿವಾಹನನೂ, ಬಬ್ರುವಾಹನನೂ ಒಂದಾದ ಪುರಾಣ ಪುಣ್ಯ ಕಥೆ...


ಬೇಜಾರು ಕಣ್ರೀ. ಮೀಡಿಯಾ ಬಗ್ಗೆ, ರಾಜಕಾರಣ ಬಗ್ಗೆ ಬರೆದೂ ಬರೆದೂ ಬೇಜಾರು. ಅದಕ್ಕೆ ಸುಮ್ಮನೆ ಒಂದು ಮಕ್ಕಳ ಕಥೆ ಬರೆದಿದ್ದೇವೆ. ಓದಿ ಖುಷಿಯಾದರೆ ಗುಡ್ ಅನ್ನೋ ಬಟನ್ ಒತ್ತಿ ಹೋಗಿ. ಚೆನ್ನಾಗಿಲ್ಲ ಅಂದ್ರೆ ಬ್ಯಾಡ್ ಅನ್ನಿ. ಬೇಜಾರು ಮಾಡಿಕೊಳ್ಳಲ್ಲ...

ಒಂದೂರಿನಲ್ಲಿ ಒಬ್ಬ ಪಾಳೇಗಾರ ಇದ್ದ. ಅವನ ಹೆಸರು ಶಾಲಿವಾಹನ ಅಂತ ಇಟ್ಟುಕೊಳ್ಳಿ. ಪಾಳೇಗಾರನಿಗೆ ಪಕ್ಕದ ಊರಿನ ಮತ್ತೊಬ್ಬ ಪಾಳೇಗಾರ ಕ್ಲೋಸ್ ಫ್ರೆಂಡು. ಅವನ ಹೆಸರು ಬಬ್ರುವಾಹನ.  ಇಬ್ಬರೂ ಆಗಾಗ ಭೇಟಿ ಮಾಡ್ಕೊಂಡು ಹರಟೆ ಹೊಡಿಯೋರು, ನಾಟಕ ನೋಡೋರು, ಒಟ್ಟಿಗೆ ಕೂತ್ಗಂಡು ಊಟ ಮಾಡೋರು. ಇಬ್ಬರೂ ಸೇರ‍್ಕಂಡು ಖಂಡಾಪಟ್ಟೆ ಆಸ್ತಿನೂ ಮಾಡ್ತಾ ಇದ್ರು.

ಶಾಲಿವಾಹನನಿಗೆ ಒಬ್ಬ ಸೇನಾಧಿಪತಿ ಇದ್ದ. ಯಾವಾಗಲೂ ಸೊಂಟದಲ್ಲಿ ಬಾಕು ಇಟ್ಟುಕೊಂಡೇ ತಿರುಗಾಡುತ್ತಿದ್ದ. ಸಿಕ್ಕಸಿಕ್ಕವರನ್ನೆಲ್ಲ ತಿವಿಯೋದೇ ಅವನ ಕೆಲಸ. ಅವನ ಹೆಸರು ಗರುಡವಾಹನ ಅಂತ. ಏನಾಯ್ತಪ್ಪ ಅಂದ್ರೆ ಈ ಗರುಡವಾಹನನಿಗೂ ಬಬ್ರುವಾಹನನಿಗೂ ಆಗಿ ಬರಲೇ ಇಲ್ಲ. ಇಬ್ಬರೂ ಪಟಾಪಟಾಂತ ಪರಸ್ಪರ ಕಪಾಳಕ್ಕೆ ಹೊಡೆದುಕೊಳ್ತಾ ಇದ್ರು. ಜಗಳ ಮಾಡಕ್ಕೆ ಇಂಥದ್ದು ಅಂತ ಒಂದು ಕಾರಣನೂ ಬೇಕಾಗಿರಲಿಲ್ಲ. ಸುಮ್ ಸುಮ್‌ನೆ ಜಗಳ ಆಡೋರು. ಹಿಂಗೆಲ್ಲಾ ಆಗ್ತಾ ಇರುವಾಗ ಶಾಲಿವಾಹನ ಮಾತ್ರ ಸುಮ್ನೆ ಮೀಸೆ ಮರೆಯಲ್ಲೇ ನಗ್ತಾ ಇರ‍್ತಿದ್ದ. ಜಗಳ ಬಿಡಿಸೋಕ್ಕೂ ಹೋಗ್ತಾ ಇರ‍್ಲಿಲ್ಲ.

ಒಂದು ದಿವ್ಸ ಏನಾಯ್ತು ಅಂದ್ರೆ, ಶಾಲಿವಾಹನ ಏನೇನೋ ಸಮಸ್ಯೆ ಮಾಡಿಕೊಂಡು ಅವನ ಪಾಳೇಪಟ್ಟಿನ ಜನರೆಲ್ಲ ತಿರುಗಿಬಿದ್ರು. ಶಾಲಿವಾಹನ ಊರು ಬಿಡಬೇಕಾಗಿ ಬಂತು. ಜತೆಗೆ ಸೇನಾಧಿಪತಿ ಗರುಡವಾಹನನೂ ಅವನ ಸಕಲ ಕಾಲಾಳುಗಳೂ ಊರು ಬಿಟ್ಟರು. ಸಿಕ್ಕಿದ್ದೇ ಛಾನ್ಸು ಅಂತ ಬಬ್ರುವಾಹನ ಒಂದೇ ಸಮನೆ ದಾಳಿ ಶುರು ಮಾಡಿದ. ಸ್ನೇಹಿತ ಅಂತಾನೂ ಮುಖಮೂತಿ ನೋಡದೆ ಶಾಲಿವಾಹನನಿಗೂ, ಗರುಡವಾಹನನಿಗೂ ಚಚ್ಚತೊಡಗಿದೆ. ಪಾಪ, ಯುದ್ಧ ಮಾಡಣ ಅಂದ್ರೆ ಪಾಳೇಪಟ್ಟೆ ಇಲ್ಲ ಶಾಲಿವಾಹನನಿಗೆ.

ಆಮೇಲೆ ಶಾಲಿವಾಹನ ಏನೇನೋ ಮಾಡಿ, ಏನೋ ಒಂದು ಪಾಳೇಪಟ್ಟು ರೆಡಿ ಮಾಡ್ಕಂಡ. ಹಿಂದಿನ ಪಾಳೇಪಟ್ಟಿನಷ್ಟು ದೊಡ್ಡದಲ್ಲದಿದ್ದರೂ ಏನೋ ಒಂದು ಲೆವೆಲ್ಲಿಗೆ ಪರವಾಗಿಲ್ಲ ಅನ್ನಿಸುವಂಥ ಪಾಳೇಪಟ್ಟು ಅದು. ಒಂದು ಸಲ ಕೈಗೆ ಅಧಿಕಾರ ಸಿಕ್ಕಿದ್ದೇ ತಡ ಶಾಲಿವಾಹನನೂ, ಗರುಡವಾಹನನೂ ಒಟ್ಟಾಗಿ ಸೇರಿ ಬಬ್ರುವಾಹನನ ಮೇಲೆ ಯುದ್ಧ ಅನೌನ್ಸ್ ಮಾಡಿದ್ರು. ಭೀಕರ ಕಾಳಗ ಶುರುವಾಗಿ ಹೋಯ್ತು. ಯಾವ ಪರಿ ಜಗಳ ಆಡುದ್ರು ಅಂದ್ರೆ ಜನ ಎಲ್ಲ ಕ್ಯಾಕರಿಸಿ ಉಗಿದು, ಆಡ್ಕೊಂಡು ನಗೋ ಹಂಗೆ ಆಯ್ತು.

ಹಿಂಗೇ ಕಾಲ ಹೋಗ್ತಾ ಇರಬೇಕಾದ್ರೆ, ಬಬ್ರುವಾಹನ ಪಟ್ಟಕ್ಕೆ ಬಂದ ೧೬ನೇ ವರ್ಷದ ಆಚರಣೆ ಬಂತು. ಇಂಥ ಸಂದರ್ಭದಲ್ಲಿ ಬಬ್ರುವಾಹನನಿಗೆ ತನ್ನ ಗೆಳೆಯ ಶಾಲಿವಾಹನನ ಮೇಲೆ ಸಿಕ್ಕಾಪಟ್ಟೆ ಲವ್ ಬಂದು ಬಿಟ್ಟಿತು. ಸೀದಾ ಬಂದು ಶಾಲಿವಾಹನನನ್ನು ತಬ್ಬಿಕೊಂಡು ನೋಡು ಗೆಳೆಯಾ, ನಾನು ಈ ಲೆವೆಲ್ಲಿಗೆ ನನ್ನ ಪಾಳೇಪಟ್ಟು ಬೆಳೆಸೋದಿಕ್ಕೆ ನೀನೂ ಒಂದು ಕಾರಣ. ತುಂಬಾ ಥ್ಯಾಂಕ್ಸು ಕಣೋ ಅಂದ. ಅದೆಲ್ಲ ಸರಿ, ನೀನು ಅನ್ಯಾಯವಾಗಿ ನನ್ನ ಮೇಲೆ ಯುದ್ಧ ಮಾಡಿ ಮಾನಸಿಕವಾಗಿ ಘಾಸಿಗೊಳಿಸಿಬಿಟ್ಟಲ್ಲ ಯಾಕೆ ಅಂತ ಶಾಲಿವಾಹನ ಕೇಳಿದ. ಏನ್ ಬಿಡೋ ಮರಾಯ. ಒಂದು ವರ್ಷದ ಜಗಳ ಇದು, ಈ ಪುಟಗೋಸಿ ಜಗಳಕ್ಕೆ ನಮ್ಮ ೧೬ ವರ್ಷದ ಸ್ನೇಹ ಬಲಿಯಾಗಬೇಕಾ ಅಂತೇನೋ ಎಮೋಷನಲ್ ಆಗಿ ಮಾತನಾಡತೊಡಗಿದ ಬಬ್ರುವಾಹನ.

ಏನಪ್ಪಾ ಅಂದ್ರೆ, ಈ ಶಾಲಿವಾಹನನೂ, ಬಬ್ರುವಾಹನನೂ ಒಟ್ಟಿಗೆ ಗೆಳೆಯರಾಗಿದ್ದಾಗ ಯಾರ‍್ಯಾರದೋ ಸಹವಾಸ ಮಾಡಿ ಅನೈತಿಕ ಮಾರ್ಗದಿಂದ ಪಾಳೇಪಟ್ಟು ಬೆಳೆಸಿಕೊಂಡಿದ್ದರು. ಅದೆಲ್ಲವೂ ಮಹಾರಾಜರಿಗೆ ಗೊತ್ತಾಗಿ ಹೋಗಿತ್ತು. ಇಬ್ಬರ ಮೇಲೂ ಮಹಾರಾಜರು ಕಣ್ಣಿಟ್ಟುಬಿಟ್ಟಿದ್ದರು. ಮಹಾರಾಜರೇನೂ ಏಟು ಕೊಟ್ಟರೆ ಇಬ್ಬರಿಗೂ ಕೊಡುತ್ತಾರೆ. ಹೀಗಾಗಿ ಇಬ್ಬರಿಗೂ ಭಯ ಶುರುವಾಗಿ ಹೋಗಿತ್ತು.

ಹೀಗಾಗಿ ಬಬ್ರುವಾಹನ ಸ್ನೇಹದ ಪ್ರಸ್ತಾಪ ತಂದ ಕೂಡಲೇ ಶಾಲಿವಾಹನನೂ ಒಪ್ಪಿಕೊಂಡು, ಹಾಳಾಗ್ ಹೋಗ್ಲಿ ಬಿಡು. ನನ್ ತಂಟೆಗೆ ನೀನು ಬರಬೇಡ, ನಿನ್ ತಂಟೆಗೆ ನಾನು ಬರಲ್ಲ. ನಮ್ಮ ಗರುಡವಾಹನನ ಕಡೆ ಕಣ್ಣೆತ್ತಿನೂ ನೋಡಬೇಡ. ಒಟ್ಟಿಗೆ ಯಾವಾಗ್ಲಾದ್ರೂ ಸೇರಣ, ದ್ರಾಕ್ಷಾರಸ ಕುಡಿಯೋಣ ಅಂದು ಕೈಕುಲುಕೇಬಿಟ್ಟ.

ಆಮೇಲೆ ಅವರೆಲ್ಲ ಒಟ್ಟಿಗೆ ಸುಖವಾಗಿ ಬಾಳಿದರು.

(ಈ ಕಥೆ ಸಂಪೂರ್ಣ ಕಾಲ್ಪನಿಕ. ಕಥೆಯಲ್ಲಿನ ಪಾತ್ರಗಳು ನಿಜಜೀವನದ ಪಾತ್ರಗಳಿಗೆ ಹೋಲುತ್ತಿದ್ದರೆ ಅದೊಂದು ಪವಾಡ)

18 comments:

 1. ಓಹೋ...ಆಹಾ...ಹಿಹೀ...
  ಇಲ್ಲಿ ವಿರುದ್ಧ ದಿಕ್ಕಿನ ಎರಡು ರಾಹು ಖೇತುಗಳ ಸಮಾಗಮ...!
  ಪರಸ್ಪರ ಕೆಸರೆರಚಿಕೊಂಡವರು...ಕೊಸರಾಡಿದವರು ಮುಸುಕಿನ ಗುದ್ದಾಟಕ್ಕೆ ತೆರೆ ಎಳೆದರೋ...ಭೇಷ್...!
  ಶಾಲಿವಾಹನ-ಬಬ್ರುವಾಹನರಿಗೆ ಪಾಠ ಪಠಿಸಿದ ಗುರುಗಳ ವಿಳಾಸ ಕೊಡಿ ಪ್ಲೀಸ್.
  ಇವರೀರ್ವರಿಗೂ ನಾಚಿಕೆ-ಮಾನ-ಮರ್ಯಾದೆ ಪದಗಳ ಅರ್ಥ ಗೊತ್ತೇ...?
  ಸಂಪಾದಕೀಯದ ಮಕ್ಕಳ ಕಥೆಯನ್ನು ಬೆಳೆಯುತ್ತಿರುವ ಯಾವ ಮಕ್ಕಳು ಓದದಿರಲಿ. ಓದಿದರೂ ಮಕ್ಕಳಿಗೆ ಅರ್ಥವಾಗದಿರಲಿ.

  ReplyDelete
 2. ಎಂಚಿನ ಸಾವು ಮಾರಯ್ರೆ

  ReplyDelete
 3. Those two persons are in more news in this week :)

  ReplyDelete
 4. this story is very very realistic. This compromise formula is evident NO REFERENCE about Kolegere in Bhanabhatta column , no mention of pittu in Keli. superb

  ReplyDelete
 5. ಕತೆ ಸೂಪರ್ ಸಂಪಾದಕರೆ...ಆದರೆ climax ಓದುವಾಗ ಕಾಡುವ ಕಟ್ಟ ಕಡೆಯ ಪ್ರಶ್ನೆ '''ಹೀಗೂ ಉಂಟೇ??''''

  ReplyDelete
 6. Hi Babhruvahana. So finally you re-started pacifying pratapa of Garudavahana and Prabha of Shalivahana.

  Nice bit. Write something like this. Surrogate, but hard hitting. Thank you

  ReplyDelete
 7. Ganda hendira jagaladalli koosu badavaythu..

  ReplyDelete
 8. ಯಾರಿಗೆ ಹೇಳೋಣ ನಮ್ಮಾಪ್ರಾಬ್ಲಮ್ಉ... ???

  ಯಾವನಿಗೊತ್ತು...??? :) :)

  ReplyDelete
 9. ಹಿಂಗಾದರೆ ಇಂತವರ ಕೈಯಲ್ಲಿ.. ಕನ್ನಡಿಗರಾ ಹಿರಿಮೆ , ಕೀರ್ತಿ.. , ಸಂತೋಷ.. ಅರ್ಖ ಚಾಂದ್ರಾರ್ಕ ವಾಗಿ ಬೆಳಗಿದಂತೆಯ.. ಸರಿ....

  ReplyDelete
 10. ಈ ನಡುವೆ ಸಂಸ್ಥಾನದ ದೊರೆ ತನ್ನ ಪಟ್ಟ ಕಳಕೊಂಡರು. ಹಸನ್ಮುಖಿ ನಂಬಿಗಸ್ಥನೊಬ್ಬ ಸಿಂಹಾಸನವೇರುವಂತೆ ನೋಡಿಕೊಂಡರು.

  ಅದಾದ ಕೆಲವೇ ದಿನಗಳಲ್ಲಿ ಮುಖ್ಯ ದಂಡನಾಯಕರೊಬ್ಬರನ್ನು ಗುಪ್ತಚರವಲಯದವರು ಪಕ್ಕದರಾಜ್ಯದ ಕಾರಾಗೃಹಕ್ಕೊಯ್ದರು. ದುರ್ಘಟನೆಗಳು (ಪ್ರಜೆಗಳಪಾಲಿಗೆ ಒಳ್ಳೆಯವೇ ಘಟನೆಗಳು) ಮುಂದುವರಿಯುತ್ತಲೇಹೋದವು.

  ಅದೊಂದುದಿನ ದೊರೆಯೂ "ಬೊಲೆರೋವಾಹನ"ನಾಗಿ ಕಾರಾಗೃಹಕ್ಕೆ ತಳ್ಳಲ್ಪಟ್ಟ!...
  ಕಥೆ ಮುಂದುವರಿಯುವುದು...

  ReplyDelete
 11. ಅದ್ಯಾಕೋ ಗೊತ್ತಿಲ್ಲಾ.. ಒಂದಾಂದ್ಮೇಲ್ ಒಂದು ಡೈಲೋಗ್ ಬರ್ತಾ ಇದೆ...

  ಆಆ.. ಹಾ.. ಅಪ್ಪಾಜೀ ಆ ಪರಮ.. ಶತೃೂವಿನೊಡಿಗೆ... ಸ್ನೇಹ ಮಾಡು ಎಂದು ಹೇಳುತ್ತಿದ್ದಿರ..... ಸಾಧ್ಯವಿಲ್ಲ....

  ನೋಡು ಕುಮಾರ ಈ ಕರುಣಾಡಿನ.. ಅಡಿಪತ್ಯ ನಿನ್ನ ಕೈ ತಪ್ಪಿ ಹೋಗ್ಬಾರ್ದೂ ಅಂದರೆ.. ನೀನು ಇದನ್ನು ಮಾಡಲೇಬೇಕು.. ನೆನಪಿಡು.. ಶತ್ರವಿನ ಶತ್ರು ನಿನ್ನ ಮಿತ್ರ..


  ಆಯ್ತು.. ಅಪ್ಪಜೀ... ಈ ಅಪ್ಪಜೀ.. ಈ ಸತಿ ನಾದ್ರೂ ನಿಮ್ಮ ಮಾತು ಕೇಳಿ ಉದ್ದಾರ ಆಗುತೇನೇ ಎಂದು ಕೊಂಡಿದೆನೇ.. ಲಾಸ್ಟ್ ಟಿಮೊ ಪ್ರಜೆ ಗಳ ಮಾತು ಕೇಳಿದ್ದರೆ.. ಇವಂತ್ತು ನಾನು ಆ ಮೆಟ್ರೋ ರೈಲನ್ನ ಬಿಟ್ಟಿರತಿದ್ದೆ......

  ReplyDelete
 12. Superrrrr

  ಈ ಹೊಸ ನಾಮಕರಣ ಮಾಡಿದ್ದೀರಲ್ಲಾ ಅದಕ್ಕೇನಾದರೂ ಬೇರೆ ಒಳ ಅರ್ಥ ಇದ್ದರೆ ಸ್ವಲ್ಪ ತಿಳಿಸಿ

  ReplyDelete
 13. ವಾಲ್ ಸ್ಟ್ರೀಟ್ ಮುತ್ತಿಗೆ ಹೋರಾಟದ ಬಗ್ಗೆ ನಿಜಕ್ಕೂ ಅದ್ಬುತ ಲೇಖನ ಬರೆದಿದ್ದೀರಿ ಧನ್ಯವಾದಗಳು.ನಮ್ಮಂತ ಲಕ್ಷಾಂತರ ಯುವಕರ ಮನಸ್ಸಿನ ಭಾವನೆಗಳನ್ನು ಪ್ರತಿಬಿಂಭಿಸುತ್ತಿರುವ ಈ ಹೋರಾಟದ ಇತಿಮಿತಿಗಳನ್ನು ಗುರುತಿಸಿರುವುದು ನಿಜಕ್ಕೂ ಶ್ಲಾಘನೀಯ. ಜಾಗತಿಕ ಮಟ್ಟದಲ್ಲಿ ಎಗ್ಗಿಲ್ಲದೇ ಲೂಟಿ ನಡೆಸುತ್ತಿರುವ ಕಾರ್ಪೋರೆಟ್ ಶಕ್ತಿಗಳ ವಿರುದ್ಧ ಜಾಗತಿಕ ಮಟ್ಟದಲ್ಲಿಯೇ ಹೋರಾಟ ನಡೆಯುತ್ತಿರುವ ಒಂದು ಸ್ವಾಗತಾರ್ಹ ಬೆಳವಣಿಗೆ. ನಿಜಕ್ಕೂ ನಿಮ್ಮ ಲೇಖನ ಸ್ಪರೂರ್ತಿದಾಯಕ.

  ReplyDelete
 14. ಅದೆಲ್ಲಾ ಸರಿ, ಗಿಂಡಿಮಾಣಿ ಕಥೆ?

  ReplyDelete
 15. ಅಂತೂ ಒಂದು ವಿಷ್ಯ ಗೊತ್ತಾತು ಬಿಡ್ರಿ. ನಿಮಗೆ ರಾಜಕಾರಣ ಬೆರೆಸದೆ ಒಂದು ಮಕ್ಕಳ ಕಥೆನೂ ಬರೆಯೋಕೆ ಬರಂಗಿಲ್ಲ ಬಿಡ್ರಿ.!

  ReplyDelete
 16. shalivaahan tann baanagalannu muchhi etjonda babruvaahana tann kolakannu muchhikonda garuda gharjisalilla

  ReplyDelete