ವಿಜಯ ಕರ್ನಾಟಕದ ಮಾಜಿ ಸಂಪಾದಕ ವಿಶ್ವೇಶ್ವರ ಭಟ್ಟರ ಹೊಸ ವೆಬ್‌ಸೈಟು ಕಡೆಗೂ ಅಧಿಕೃತವಾಗಿ ಲಾಂಚ್ ಆಗಿದೆ. ಇದು ಅವರ ಅಭಿಮಾನಿ ಸಮೂಹಕ್ಕೆ ಒಳ್ಳೆಯ ಸುದ್ದಿ. ಆದರೆ ದುರದೃಷ್ಟವೆಂದರೆ ಭಟ್ಟರ ವೆಬ್‌ಸೈಟಿನಿಂದ ಹೊರಡುತ್ತಿರುವುದು ದ್ವೇಷದ ಗಬ್ಬು ವಾಸನೆ. ಭಟ್ಟರಂಥ ಸೂಕ್ಷ್ಮಮತಿಯ ಪತ್ರಕರ್ತರು ಯಾರದೋ ಕೈಗಳಿಗೆ ಸಿಕ್ಕ ಆಟಿಕೆಯಾಗಿ ಹೋದರಾ ಎಂಬ ಅನುಮಾನವೂ ಈ ಸೈಟನ್ನು ಗಮನಿಸಿದರೆ ಗೊತ್ತಾಗುತ್ತದೆ.
ಭಟ್ಟರ ಸೈಟಿನಲ್ಲಿ ಯಶವಂತ ಸರ್‌ದೇಶಪಾಂಡೆಯ ಹೊಸ ಸಿನಿಮಾದ ಘೋಷಣೆಯನ್ನು ಬ್ರೇಕಿಂಗ್ ನ್ಯೂಸ್ ಎಂಬ ವಿಭಾಗದಲ್ಲಿ ಪ್ರಕಟಿಸಲಾಗಿದೆ. ಇದು ನೇರಾನೇರವಾಗಿ ರವಿಬೆಳಗೆರೆಗೆ ಹೊಡೆ ಬಾಣ ಎಂಬುದು ಗೊತ್ತಾಗುತ್ತದೆ. ಇದೊಂದು ಭಾವನಾತ್ಮಕ, ಚೇತೋಹಾರಿ, ಕರ್ಣ ಇಂಪಿನ ಚಿತ್ರ ಎಂಬ ವಾಕ್ಯದಲ್ಲೇ ಭಟ್ಟರ ಸೆಂಟಿನ ಘಮ ಹೊರಡುತ್ತದೆ. ತಮ್ಮ ನಡುವಿನ ಜಗಳಕ್ಕೆ ಹೀಗೆ ಮಕ್ಕಳನ್ನೂ ಸಹ ಎಳೆದು ತರಬೇಕಾ? ಪತ್ರಕರ್ತರ ನಡುವಿನ ಸಂಘರ್ಷ ತೀರಾ ಇಷ್ಟು ವೈಯಕ್ತಿಕ ಮಟ್ಟಕ್ಕೆ ಇಳಿಯಬೇಕಾ?
ಕೇಳ್ರಪ್ಪೋ ಕೇಳಿ ಎಂಬ ಅಂಕಣದಲ್ಲಿ ಭಟ್ಟರನ್ನು ಓದುಗರು ಪ್ರಶ್ನೆ ಕೇಳಬಹುದಂತೆ. ಇಲ್ಲಿ ಕೇಳಿರುವ ಪ್ರಶ್ನೆಗಳಿಗೆ ಭಟ್ಟರು ಕೊಟ್ಟಿರುವ ಉತ್ತರಗಳು ಬಾಲಿಷ ಮಾತ್ರವಲ್ಲ ಮೂರನೇ ದರ್ಜೆಯವು. ಒಂದು ಪ್ರಶ್ನೆ ಮತ್ತು ಉತ್ತರವನ್ನು ಉದಾಹರಣೆಗೆ ಗಮನಿಸಿ:
ಪ್ರತಾಪ ಸಿಂಹ ನಿಜಕ್ಕೂ ಚಡ್ಡಿನಾ?
- ಆತ ಚಡ್ಡಿ ಹೌದೋ ಅಲ್ಲವೋ ಎಂಬುದನ್ನು ನೀವೇ ನಿರ್ಧರಿಸಬೇಕು. ಆದರೆ ಅವನು ತನ್ನ ಅಂಕಣದಲ್ಲಿ ಎಲ್ಲರ ಚಡ್ಡಿಯನ್ನು ಬಿಚ್ಚುವುದರಿಂದ ಬೆತ್ತಲೆ ಜಗತ್ತು ಅಂತ ಹೆಸರಿಟ್ಟುಕೊಂಡಿದ್ದಾನೆ.
ಇದೇ ಅಂಕಣದಲ್ಲಿ ರವಿ ಬೆಳಗೆರೆ ಜತೆಗಿನ ಸ್ನೇಹವನ್ನು ಭಟ್ಟರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದರೆ ಭಟ್ಟರು ಆಪ್ತಕಾಲ ಎಂಬ ಇನ್ನೊಂದು ಅಂಕಣದಲ್ಲಿ ಬರೆದಿರುವ ನಾಗರ ಹಾವು-ಸಗಣಿ ಹುಳದ ಲೇಖನ ಬೇರೆಯದನ್ನೇ ಹೇಳುತ್ತಿದೆ.
ಇದುವರೆಗೆ ಭಟ್ಟರ ಸೈಟಿನಲ್ಲಿ ಕಾಣಿಸಿಕೊಂಡಿರುವ ಕಮೆಂಟುಗಳೋ ತಾಯಿ ರಾಜರಾಜೇಶ್ವರಿಗೇ ಪ್ರೀತಿ.
ವಿಜಯ ಕರ್ನಾಟಕ ಬಿಟ್ಟ ನಂತರ ಭಟ್ಟರು ದೊಡ್ಡ ಸದ್ದಿನೊಂದಿಗೆ ಹಿಂದಿರುಗುತ್ತಾರೆ ಎಂಬ ನಂಬಿಕೆ ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಮಾಧ್ಯಮ ಕ್ಷೇತ್ರದ ಕುರಿತು ಕುತೂಹಲ ಇಟ್ಟುಕೊಂಡ ಬಹಳಷ್ಟು ಮಂದಿಗೆ ಇತ್ತು. ಆದರೆ ವೆಬ್‌ಸೈಟ್‌ನ ಒಂದು ಸಣ್ಣ ಪ್ರಯತ್ನವನ್ನೂ ಸಹ ಅವರು ಸರಿಯಾಗಿ ನಿರ್ವಹಿಸದೆ ಎಡವಿದ್ದಾರೆ.
ಭಟ್ಟರಿಗೆ ಗೊತ್ತಿರುವ ಒಂದು ವಿಚಾರ ಅವರಿಗೆ ನೆನಪಿಸುವುದು ಒಳ್ಳೆಯದು ಎನಿಸುತ್ತದೆ. ದ್ವೇಷದ, ಸೇಡಿನ ಒಡಲಲ್ಲಿ ಹುಟ್ಟುವ ಯಾವುದೇ ಸಾಹಿತ್ಯ, ಕಲೆ ಗಬ್ಬು ನಾರುತ್ತವೆ. ಅದನ್ನು ಅವರವರೇ ಆಘ್ರಾಣಿಸಿಕೊಂಡು ನರಳಬೇಕು.
ವಾಸನೆ ಸೃಷ್ಟಿಕರ್ತರು ನೀವೇ ಆದ್ದರಿಂದ ನೀವು ಅದನ್ನು ಆಸ್ವಾದಿಸಬಹುದು. ಆದರೆ ಅದು ಬೇರೆಯವರ ಪಾಲಿಗೆ ಸಹನೀಯವಾಗಿರುವುದಿಲ್ಲ.
IF at all the memory of mi ne is thick, the same kind of mud-slining between Ravi Belagere and A weekly-magazine editor who was once a close friend of the former went for a long with the latter stop writing on Ravi. By the time, readers fed up with that kind of writing. However, mud-splashing of V.Bhat-Belagere might also meet the same end. they were made for each other once up on a time and now they have turned out to be enenmies. All is Not well!!! Jai HOOOO
ReplyDeleteಭಟ್ಟರಿಗೆ ಇಂಥಹದ್ದೆಲ್ಲ ಬೇಕಿರ್ಲಿಲ್ಲ ಬಿಡಿ, ಒಬ್ಬ ಸಂವೇದನೆ ಇರುವ ಕ್ರಿಯಾಶೀಲತೆಯಿರುವ ಮನುಷ್ಯನಿಂದ ಛೇ! ತನ್ನ ವ್ಯಕ್ತಿತ್ವವನ್ನು ತಾನೇ ಹಾಳು ಮಾಡಿಕೊಳ್ಳುವ ಮಟ್ಟಕ್ಕೆ ಭಟ್ಟರು ಇಳಿಯದಿರುವುದು ಲೇಸು.
ReplyDeleteಹೀಗಾಗುತ್ತಿರುವುದು ಭಟ್ಟರ ಮುಖವಾಡ ಕಳಚಿಬಿದ್ದ ದರ್ಶನವ? ಇಷ್ಟು ದಿನದ ಸೋಗುಗಳು ಈಗೇನಾಗಿವೆ? ಈಗ ಅನ್ನಿಸುತ್ತಿದೆ ಪ್ರತಾಪ್ ಸಿಂಹ ಒಬ್ಬ ಪಾನ್ ಅಷ್ಟೇ, ಭಟ್ಟರ dirty workಗೆ, ರಾಷ್ಟ್ರೋತ್ಥಾನ ಅಜೆಂಡಾಗೆ.
ReplyDeleteಇನ್ನು ಭಟ್ಟರ ಇವತ್ತಿನ ಸ್ಥಿತಿಗೆ ಕಾರಣ ಅವರ ನಷೆಯೇರಿದ ಅಹಂ ಮತ್ತು self glorification.. ವಿಜಯ ಕರ್ನಾಟಕ ನಡೆಯುತ್ತಿರುವುದೇ ನನ್ನಿಂದ, ನಾನಿಲ್ದಿದ್ರೆ ಈಗ VK ಬಾಗಿಲು ಜಡಿಬೇಕು ಅನ್ನುವ ಹುಚ್ಚು ಭ್ರಮೆಯಲ್ಲಿದ್ದ ಹಾಗಿದೆ ಭಟ್ಟರು. so, ಅಲ್ಲಿಂದ ಕಿತ್ತು ಬರುವ ಒಂದು ಓದುಗ ವರ್ಗಕ್ಕೆ ಈಗ ತಮ್ಮದೇ ಆಲ್ಟರ್‌ನೆಟಿವ್ ಕೊಡಲು ಹೊರಟಿದ್ದಾರೆ ಭಟ್ಟರು - ವಿಶ್ವ ಕರ್ನಾಟಕ! ಅಂತ ಗುಸುಗುಸು. ಅದೂ tabloid ಅಂತೆ daily ಅಂತೆ VK ಯೊಂದಿಗೆ ಕನ್ನಡದ ಪತ್ರಿಕೋದ್ಯಮವನ್ನು shallow ಮಾಡಿಬಿಟ್ಟ ಹೆಗ್ಗಳಿಕೆಗೆ ಪಾತ್ರರಾದ ಭಟ್ಟರು ಈಗ daily tabloid ತರ್ತಿದಾರಂತೆ! ಕನ್ನಡಕ್ಕಿದು ಬೇಕಿದೆಯ?
ಇನ್ನು ವಿಶ್ವ ಕರ್ನಾಟಕ. the name itself is very narcissist.. ಆತ್ಮರತಿಯ ಅಮಲು. ಭಟ್ಟರ ಪತನಕ್ಕೆ ಕಾರಣವಾಗಿದ್ದೂ ಇದೆ ಅಮಲು. ಈಗಲಾದರೂ ಭಟ್ಟರು ಆತ್ಮಾವಲೋಕನ ಮಾಡಿಕೊಂಡು, ಅಮಲನ್ನೆಲ್ಲವನ್ನು ಇಳಿಸಿಕೊಂಡು ಹಿಂದೆ ಆದ ತಪ್ಪುಗಳನ್ನು ಸರಿತಿದ್ದಿಕೊಂಡು ಜನರ ಮುಂದೆ ವಿಧೇಯನಾಗಿ ಬಂದರೆ, ಕನ್ನಡ ಪತ್ರಿಕೋದ್ಯಮಕ್ಕೆ ಇಗಲೂ ಭಟ್ಟರು ದೊಡ್ಡ asset.. ಇಲ್ಲವ?
ಹಿಂದೊಮ್ಮೆ ಜೆ.ಎಚ್. ಪಟೇಲ್ ಲಂಕೇಶ್ ಪತ್ರಿಕೆಯ ೨೦ ವರ್ಷದ ಕಾರ್ಯಕ್ರಮಕ್ಕೆ ಹೋಗಿ ಹೀಗೆ ಹೇಳಿದ್ದರಂತೆ - ಈ ಹೋಟೆಲ್ಗಳಲ್ಲಿ ಟೇಬಲ್ ಒರೆಸೋ ಹುಡುಗ್ರು ಬೆಳಿಗ್ಗೆ ಎದ್ದು ಹೊಸದೊಂದು ಬಟ್ಟೆ ಹಿಡ್ಕೊಂಡು ನಿಂತಿರ್ತಾರೆ. ತಿಂದಾದ ಮೇಲೆ ಆ ಬಟ್ಟೆಯಿಂದ ಟೇಬಲ್ ಅನ್ನು ಹೀಗೆ ಒರೆಸಿದರೆ ಸಾಕು ಟೇಬಲ್ ಥಳ ಥಳ. ಬರ್ತಾಬರ್ತಾ ಎಷ್ಟೋ ಟೇಬಲ್ಲುಗಳ ಗಲೀಜನ್ನು ಕ್ಲೀನ್ ಮಾಡಿದ ಆ ಬಟ್ಟೆ ಎಷ್ಟರ ಮಟ್ಟಿಗೆ ಬದಲಾಗಿರುತ್ತೆ ಅಂದ್ರೆ ಸಂಜೆಯಷ್ಟೊತ್ತಿಗೆ ಆ ಬಟ್ಟೆಯಲ್ಲಿ ಟೇಬಲ್ ಒರೆಸಿದರೆ ಟೇಬಲ್ ಗಲೀಜಾಗೊಗುತ್ತೆ. ಸದ್ಯ ಲಂಕೇಶ್ ಕೂಡ ಹಾಗೆ ಆಗೋಗಿದೆ. ಅ ಬಟ್ಟೆಯನ್ನ ಒಗೆದು ಶುಚಿ ಮಾಡಬೇಕು.
ಈಗ ಭಟ್ಟರ ವಿಷಯದಲ್ಲಾಗಿರುವುದೂ ಅದೇ. ಬಟ್ಟೆ ಗಬ್ಬು ವಾಸನೆ ಹೊಡೆಯುತ್ತಿದೆ. ಅದರಿಂದ ಏನೇ ಮಾಡಕ್ಕೆ ಹೋದರೂ ಆಗೋದು ಗಲೀಜೆ! ಈಗ ಈ ಬಟ್ಟೆಯನ್ನು ಒಗೀಬೇಕು. ಭಟ್ಟರೇ ಅದನ್ನು ಮಾಡಿದರೆ ಉತ್ತಮ. ಇಲ್ದಿದ್ರೆ ಜನ ಒಗೀತಾರೆ. ಅದು ಭಟ್ಟರೇ ಆಗಿರಬಹುದು ಇಲ್ಲ ಬೆಳೆಗೆರೆಯೇ ಆಗಿರಬಹುದು ಅವರ ಆತ್ಮರತಿಯ ಅಸಹ್ಯವನ್ನು ಜನ ತುಂಬಾ ದಿನ ತಡೆಯೋಲ್ಲ ನೆನಪಿರಲಿ.
ದ್ವೇಷದ, ಸೇಡಿನ ಒಡಲಲ್ಲಿ ಹುಟ್ಟುವ ಯಾವುದೇ ಸಾಹಿತ್ಯ, ಕಲೆ ಗಬ್ಬು ನಾರುತ್ತವೆ. ಅದನ್ನು ಅವರವರೇ ಆಘ್ರಾಣಿಸಿಕೊಂಡು ನರಳಬೇಕು. ವಾಸನೆ ಸೃಷ್ಟಿಕರ್ತರು ನೀವೇ ಆದ್ದರಿಂದ ನೀವು ಅದನ್ನು ಆಸ್ವಾದಿಸಬಹುದು. ಆದರೆ ಅದು ಬೇರೆಯವರ ಪಾಲಿಗೆ ಸಹನೀಯವಾಗಿರುವುದಿಲ್ಲ.
ReplyDeleteಈ ಮಾತು ರವಿ ಬೆಳಗೆರೆಗೂ ಅನ್ವಯಿಸುತ್ತದೆ
This comment has been removed by the author.
ReplyDeleteSampadakeeya, u r also doing the same thing. U r just writing against VB.. :D Ur projecting him as of u r so good..
ReplyDeleteThis comment has been removed by the author.
ReplyDeleteವಿ.ಭಟ್ಟರು ಹೆಣ್ಣುಮಕ್ಕಳ ಬಗ್ಗೆ ಹೊಂದಿರುವ ಕೀಳು ಅಭಿಪ್ರಾಯವನ್ನು ಬಿಂಬಿಸುವ ಪ್ರಶ್ನೋತ್ತರವೂ ಅವರ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ ನೋಡಿ
ReplyDeleteಲಕ್ಷ್ಮಿ, ಬೆಂಗಳೂರು
ನೀವು ಯಾವತ್ತೂ ಹೆಂಡತಿಯರ ಬಗ್ಗೆಯೇ ವಕ್ರತುಂಡೋಕ್ತಿಯಲ್ಲಿ ಬರೆಯುತ್ತೀರಲ್ಲಾ ಯಾಕೆ?
- ವಕ್ರ ಆಗಿರುವವರ ಬಗ್ಗೆ ಇನ್ನೆಲ್ಲಿ ಬರೆಯಲಿ?
ನೀವು ಲೇಖನಲ್ಲಿ ಹೇಳಿದ್ದು ಸರಿಯಾಗಿಯೇ ಇದೆ. ಇದಕ್ಕೆ ಪೂರಕವಾಗಿ ನಿಲುಮೆಯಲ್ಲೊಂದು ಲೇಖನ ಓದಿದ್ದೆ http://nilume.wordpress.com . ಧನ್ಯವಾದ
ReplyDeletethe whole circus seems to be by ravi belagere to malign vb and pratap. the worst thing has to meet an end sooner the better rb shud quit doing such nonsense things
ReplyDelete