Friday, January 21, 2011

ಮೀಡಿಯಾಗಳಲ್ಲೂ ಸಾಮಾಜಿಕ ನ್ಯಾಯ ಇರಬೇಕಲ್ಲವೆ?


ಇವತ್ತಿನ ಕನ್ನಡಪ್ರಭ ಮುಖಪುಟದ ಒಂದು ಸುದ್ದಿಯ ಶೀರ್ಷಿಕೆ: ಖಾಸಗಿ ಕಂಪನಿಗಳಲ್ಲಿ ಎಸ್‌ಸಿ, ಎಸ್‌ಟಿಗಳಿಗೆ ಜಾಗವೇ ಇಲ್ಲ.

ನಿಜ, ಖಾಸಗಿ ಸಂಸ್ಥೆಗಳಲ್ಲಿ ದಲಿತರಿಗೆ ಕೊಡಲಾಗುವ ಅವಕಾಶ ಅಷ್ಟಕ್ಕಷ್ಟೆ. ಇದು ಗೊತ್ತಿರುವ ವಿಷಯವೇ. ಈ ಕುರಿತ ಅಂಕಿಅಂಶಗಳನ್ನು ಕನ್ನಡಪ್ರಭ ಪ್ರಕಟಿಸಿದೆ.

ಆದರೆ ಮೀಡಿಯಾಗಳೆಂಬ ಖಾಸಗಿ ಸಂಸ್ಥೆಗಳು ಏನು ಮಾಡುತ್ತಿವೆ? ಮೀಡಿಯಾಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಏನಾದರೂ ಅರ್ಥ ಉಳಿದಿದೆಯೇ? ಬಹುಸಂಸ್ಕೃತಿಗಳ ಈ ನೆಲದಲ್ಲಿ ಸಣ್ಣಪುಟ್ಟ ಸಮುದಾಯಗಳ, ತಿರಸ್ಕೃತ ಸಮಾಜಗಳ ಅಭಿವ್ಯಕ್ತಿಯನ್ನು ಧ್ವನಿಸುವಂಥವರು ಮೀಡಿಯಾಗಳಲ್ಲಿ ಎಷ್ಟು ಮಂದಿ ಇದ್ದಾರೆ? ಬಹುಸಂಖ್ಯಾತ ಜನರ ಸಂವೇದನೆಗಳೆಲ್ಲ ನಮ್ಮ ಮೀಡಿಯಾಗಳಿಗೆ ನಗಣ್ಯ ಆಗಿರುವುದು ನಿಜವಲ್ಲವೆ?

ಸುಮ್ಮನೆ ಕನ್ನಡ ಮಾಧ್ಯಮಲೋಕದತ್ತ ಒಂದು ನೋಟ ಚೆಲ್ಲಿ. ಕನ್ನಡ ಮೀಡಿಯಾಗಳಲ್ಲಿ ಇರುವ ದಲಿತರ ಸಂಖ್ಯೆ ಎಷ್ಟು? ಸಂಪಾದಕರುಗಳಲ್ಲಿ ಬ್ರಾಹ್ಮಣೇತರರ ಸಂಖ್ಯೆ ಎಷ್ಟು? ಮುಸಲ್ಮಾನ ವರದಿಗಾರರು ಇದ್ದಾರೆಯೇ? ಇದ್ದರೆ ಅವರ ಪ್ರಮಾಣ ಎಷ್ಟು? ತಿಗಳ, ಕೊರಚ, ಕಮ್ಮಾರ, ಹೊಲೆಯ, ಮಾದಿಗ, ದೊಂಬರ, ಹಕ್ಕಿಪಿಕ್ಕಿ,... ಹೀಗೆ ನಾನಾ ಹಿಂದುಳಿದ ವರ್ಗಗಳ ಹುಡುಗ/ಹುಡುಗಿಯರು ಪತ್ರಿಕೋದ್ಯಮದಲ್ಲಿ ಎಲ್ಲಾದರೂ ಸಿಕ್ತಾರ?

ಯಾರಾದರೂ ಈ ಕುರಿತು ಒಂದು ಅಧ್ಯಯನ ನಡೆಸಿದ್ದಾರಾ?

ಇಂಥ ಪ್ರಶ್ನೆಗಳನ್ನು ಎತ್ತಿದ ತಕ್ಷಣ ಮೀಡಿಯಾಗಳಲ್ಲೂ ಜಾತಿ ಲೆಕ್ಕಾಚಾರನಾ? ಎಂದು ಟೀಕಿಸುವವರು ಇದ್ದೇ ಇರುತ್ತಾರೆ. ಹೀಗೆ ಹೇಳುವವರು ಒಳಗಿಂದೊಳಗೆ ಮಹಾನ್ ಜಾತಿವಾದಿಯಾಗಿರುತ್ತಾರೆ. ಅರಮನೆ ಮೈದಾನದಲ್ಲಿ ನಡೆಯುವ ಗಾಯತ್ರಿ ಸಹಸ್ರನಾಮ ಉತ್ಸವಕ್ಕೆ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ಪ್ರಚಾರ ಎತ್ತಿನ ಹಬ್ಬಕ್ಕೋ, ಮಾರಮ್ಮನ ಜಾತ್ರೆಗೋ ಯಾಕೆ ಸಿಕ್ಕುವುದಿಲ್ಲ? ಈ ಬಗ್ಗೆ ಯಾರಾದರೂ ಗಂಭೀರವಾಗಿ ಚಿಂತಿಸಿದ್ದಾರೆಯೇ?

ರಾಜ್ಯದ ಸಮಸ್ತರನ್ನು ಪ್ರತಿನಿಧಿಸಬೇಕಿರುವ ಪತ್ರಿಕೆ, ಮಾಧ್ಯಮಗಳು ಕೆಲವೇ ಕೆಲವು ಜಾತಿಗಳ ಸ್ವತ್ತಾಗಿರುವುದು ಅಪಾಯಕಾರಿ. ಜಾತಿ ಈ ದೇಶದಿಂದ ತೊಲಗಬೇಕು ಎಂಬುದು ಆದರ್ಶ, ಜಾತಿ ಇದೆ ಎಂಬುದು ಸತ್ಯ ಮತ್ತು ವಾಸ್ತವ. ಪ್ರತಿ ಜಾತಿಗೂ ಒಂದು ಭಿನ್ನ ಸಾಮಾಜಿಕ ಹಿನ್ನೆಲೆ ಇದೆ. ಮಾಧ್ಯಮ ಕೂಡಾ ಎಲ್ಲರನ್ನೂ ಪ್ರತಿನಿಧಿಸುವಂತಾದಾಗ ಮಾತ್ರ ಅದು ನಿಜ ಅರ್ಥದಲ್ಲಿ ಸಮೂಹ ಮಾಧ್ಯಮ.

ಈಗ ಮಾಧ್ಯಮ ರಂಗದಲ್ಲಿ ಅವಕಾಶ ಗಿಟ್ಟಿಸಿರುವವರು ಅನರ್ಹರು ಎಂಬ ಅಭಿಪ್ರಾಯ ನಮ್ಮದಲ್ಲ. ಆದರೆ ಇತರ ಸಮುದಾಯಗಳ ಅರ್ಹರನ್ನು ಹುಡುಕಿ ತಂದು ಅವಕಾಶ ನೀಡದೇ ಹೋದಲ್ಲಿ ಸಂವಿಧಾನದ ನಾಲ್ಕನೇ ಅಂಗ ಎನಿಸಿಕೊಳ್ಳುವ ಮಾಧ್ಯಮ ರಂಗ ಹೆಚ್ಚು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಕಾರ್ಯನಿರ್ವಹಿಸುವುದು ಅಸಾಧ್ಯ.

ಈ ಬಗ್ಗೆ ಹೆಚ್ಚು ಆಲೋಚನೆಗೆ ಹಚ್ಚುವ ಲೇಖನವೊಂದನ್ನು ಭಾರತದ ಪ್ರತಿಭಾವಂತ ಪರ್ತಕರ್ತ ಸಿದ್ಧಾರ್ಥ ವರದರಾಜನ್ ಈಗ್ಗೆ ಐದು ವರ್ಷಗಳ ಹಿಂದೆ ದಿ ಹಿಂದೂ ಪತ್ರಿಕೆಯಲ್ಲಿ ಬರೆದಿದ್ದರು. ಈ ಲೇಖನ ಇಂದಿನ ಮಾಧ್ಯಮರಂಗ ನಿರ್ವಹಿಸಬೇಕಿರುವ ಜವಾಬ್ದಾರಿಯನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ವರದರಾಜನ್ ಸದ್ಯ ದಿ ಹಿಂದೂ ಪತ್ರಿಕೆಯ ದೆಹಲಿ ಬ್ಯೂರೋ ಮುಖ್ಯಸ್ಥ. ಈ ಹಿಂದೆ ಇವರ ಸ್ಥಾನದಲ್ಲಿದ್ದ ಹರೀಶ್ ಖರೆ ಈಗ ಪ್ರಧಾನ ಮಂತ್ರಿಯವರ ಮಾಧ್ಯಮ ಸಲಹೆಗಾರರು. ವರದರಾಜನ್ ಹಿಂದೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಅವರ ಆಸಕ್ತಿಯ ಕ್ಷೇತ್ರ ಹಲವು - ಮುಖ್ಯವಾದದ್ದು ವಿದೇಶಾಂಗ ವ್ಯವಹಾರ.

ವರದರಾಜನ್ ಅವರದೊಂದು ಬ್ಲಾಗ್ ಕೂಡ ಇದೆ. ಅವರು ವಿದೇಶದಲ್ಲಿ ಕಲಿತವರು ಮತ್ತು ಕಲಿಸಿದವರು. ಭಾರತದ ಬೇರುಗಳನ್ನು ಚೆನ್ನಾಗಿ ಬಲ್ಲವರು. ಇವರ ಸಹೋದರ ಟುಂಕು ವರದರಾಜನ್ ಅಮೆರಿಕಾ ಮೂಲದ ನ್ಯೂಸ್ ವೀಕ್ ಪತ್ರಿಕೆ ಅಂತಾರಾಷ್ಟ್ರೀಯ ಸಂಪಾದಕ. ಒಮ್ಮೆ ವರದರಾಜನ್ ಅವರ ಬ್ಲಾಗ್  Reality, one bite at a timeಗೆ ಹೋಗಿ ಬನ್ನಿ.


12 comments:

  1. Social Justice in Media- Really very good subjected to discuss, debate, reserch, Being a media person i always thinking of it. I am in this field for last 15 years, what i experienced is monopoly of upper cast. since begining Brahmin Community is ruling this field. 'aghoshita meesalaati' (reservation) just count how many editors, bureau chiefs, chief reorters are in media belongs to Non-Brahmin Community? very few. both vernacular as well as english media, visual or print Brahmins are dominating, they dont want to non brahmins come to this field. if they come they are curbed. they r ruling indian media. thas why pejawar, raghaveshwar, all astrologers, vaastu pundits, getting publicity. very few people from other community strugguling for existance... I would like bring your kind notice that Not only MEDIA, even all most all BANKS of India, LICs, AIR, DOORDARSHAN, SOFTWARE COMPANIES ARE RULED BY SAME COMMUNITY. NOT BY THEIR TALENT, BY THEIR BIRTH, CASTE, THREAD, THATS WHY I CALL IT AS ''AGHOSHITA MEESALAATI' AND THREADISM... ONE OF MY FRIEND USE TO MAKE JOKE 'GIVE ME THREE STRINGS OF THREAD, I WILL EASILY GET JOB IN MEDIA'

    ReplyDelete
  2. ತಾವು ಹೇಳಿದ್ದು ನಿಜ, ನಾನು ಕಳೆದೊ೦ದು ಒ೦ದು ವಷ೯ದಿ೦ದ ನೊಡ್ತಾ ಇದಿನೀ,, ವಿಜಯ ಕನಾ೯ಟಕದಲ್ಲಿ, ಬರೀ ಭಟ್ಟರು, ಹೆಗಡೆಗಳು, ಆಚಾರಿಗಳದ್ದೇ ಪೌರೋಹಿತ್ಯವಾಗಿ ಬಿಟ್ಟಿತ್ತು, ಇನ್ನು ಮೇಲೆ ಯಾದ್ರು ಟೈಮ್ಸ್ ಗ್ರುಪ್ಪಿನ ಆಡಳಿತ ಮ೦ಡಳಿಯಿ೦ದ ಬದಲಾವಣೆ ಬರಬಹುದೇನೋ...??

    ReplyDelete
  3. Private sectors look for talent, capacity, ability and requirement, not for caste. ಖಾಸಗಿ ಕಂಪನಿಗಳಲ್ಲಾಗಲೀ, ಮೀಡಿಯಾದಲ್ಲಾಗಲೀ ಉದ್ಯೋಗದಲ್ಲಿರುವವರು, ಒಳ್ಳೆಯ ಸ್ಥಾನದಲ್ಲಿರುವವರ್ಯಾರೂ ಜಾತಿ ಹೆಸರಿನಿಂದ ಬಂದವರಲ್ಲ. Really private companies are building a casteless environment everywhere in India.

    ReplyDelete
  4. ಹಕ್ಕಿಪಿಕ್ಕಿಯೊಬ್ಬನಿಗೆ ಸರಿಯಾಗಿ ವರದಿ ಮಾಡಿ ಒಳ್ಳೆಯ ಭಾಷೆಯಲ್ಲಿ ಬರೆಯಲು ಬಂದರೆ ಅವನನ್ನು ಯಾವ ಮೀಡಿಯಾ ಬೇಕಾದರೂ ಸೇರಿಸಿಕೊಳ್ಳುತ್ತದೆ. ಅದು ಜಾತಿ ನೋಡುವುದಿಲ್ಲ. ಆ ರೀತಿ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅವರವರ ಕೆಲಸ ಮತ್ತು ಸಾಮಾಜಿಕವಾಗಿ ಅವರನ್ನು ಮೇಲೆತ್ತುವುದರಲ್ಲಿ ಸರ್ಕಾರದ ಪಾತ್ರವೂ ಇರಬೇಕು. ಅದನ್ನು ಮೀಡಿಯಾಗಳಾಗಲೀ, ಖಾಸಗಿ ಕಂಪನಿಗಳಾಗಲೀ ಮಾಡುವುದು ಸಾಧ್ಯವಲ್ಲ. ಅವುಗಳ ಕಾರ್ಯಕ್ಷೇತ್ರವೇ ಬೇರೆ. ಕಂಪನಿಗಳದ್ದು ವ್ಯಾಪಾರ, ಜನಸೇವೆಯಲ್ಲ.

    ReplyDelete
  5. ಸಂಪಾದಕಿಯವೇ, ಖಾಸಗಿ ಸಂಸ್ಥೆಗಳ ವಿಚಾರ ಬಿಟ್ಟು ಬಿಡಿ ಸ್ವಾಮಿ ಸರಕಾರಿ ಸಂಸ್ಥೆಗಳಲ್ಲಿ ದಲಿತರಿಗೆ ನಿಜವಾದ ದಲಿತರಿಗೆ ಉದ್ಯೋಗ ದೊರಕುತ್ತದೆಯೇ. ಕೊರಗನೂ ಎಸ್.ಟಿ. ಮರಾಥಟಿ ನಾಯಕ್ ಜನಾಂಗವೂ ಎಸ್. ಟಿ ಆಗಿ ಒಂದೇ ರೀತಿಯಲ್ಲಿ ಸರಕಾರಿ ಸವಲತ್ತುಗಳಿಗೆ ಹಕ್ಕುದಾರರಾದರೆ ಹೋರಾಡಿ ಪಡೆದೂ ಗೊತ್ತಿಲ್ಲದೆ ಕೊರಗರು ಹೇಗೆ ಸರಕಾರಿ ನೌಕರಿಯಲ್ಲಿ ಇರಲು ಸಾಧ್ಯಸ್ವಾಮಿ? ಕೊರಗರಲ್ಲಿ ವಿದ್ಯಾವಂತರೇ ಇಲ್ಲ. ಇರುವವರಿಗೂ ಸರಕಾರಿ ಮಿಸಲಾತಿ ಲಭ್ಯವಾಗುವುದಿಲ್ಲ. ಕೊರಗರು ಸಂಬಂಧ ಪಟ್ಟ ಇಲಾಖೆಗೆ ತಲುಪುವ ಮೊದಲೇ ಆ ನೌಕರಿ ಇತರರ ಪಾಲಾಗುತ್ತದೆ.

    ReplyDelete
  6. ಜಾತಿ ಭಾರತಕ್ಕೆ ಅಂಟಿರುವ ಒಂದು ದೊಡ್ಡ ಶಾಪ. ಈ ಪದ್ಧತಿ ತೀರ ಅವಮಾನಕರ ಮತ್ತು ಅಮಾನವೀಯ. ಇಂದಿಗೂ ಈ ಪದ್ಧತಿ ಅಲ್ಲಿ ಇಲ್ಲಿ ರೂಡಿಯಲ್ಲಿ ಇರುವುದನ್ನು ನೋಡಿದರೆ ಹೇಸಿಗೆ ಆಗುತ್ತೆ. ಬರಿ ಬ್ರಾಹ್ಮಣರು ಮಾತ್ರ ಅಲ್ಲ, ಎಲ್ಲ ವರ್ಗದವರು ಇದನ್ನು ಬಹಳ ಗಟ್ಟಿಯಾಗಿ ಮನಸಿನಲ್ಲಿ ಇಟ್ಟುಕೊಂಡು ಆಚರಣೆಯೂ ಮಾಡುತ್ತ ಇದಾರೆ.

    ಇದರಿಂದ ಬಿಡುಗಡೆ ಆಗಬೇಕಾದರೆ ಪ್ರತಿಯೊಬ್ಬನು ಶ್ರಮಿಸ ಬೇಕು. ಮತ್ತೆ ಇದರ ಬಗ್ಗೆ ಹೋರಾಡಲೇ ಬೇಕು. ಈ ಹೋರಾಟ ಬ್ರಾಹ್ಮಣರ ವಿರುದ್ದ ಹೋರಾಟವಾಗ ಬಾರದು ... ಇಡಿ ಸಮಾಜದ ವಿರುದ್ದ ಆಗಬೇಕು. ಕಾಸಗಿ ಊದ್ಯಮದ ವಿರುದ್ದ ಆಗಬಾರದು..... ಈಡಿ ಊದ್ಯಮದ ಅವಕಾಶಗಳ ವಿರುದ್ದ ಆಗಬೇಕು.....

    ರೆಸೆರವೆಶನ್ ಒಂದು ಮಾರ್ಗ, ಆದರೆ ಅದು ಮಾತ್ರ ಸಾಕಾಗೋಲ್ಲ. ಸಾಮಾಜಿಕ ಪರಿವರ್ತನೆ ಬೇಕು. ಜಡ್ಡುಗಟ್ಟಿರುವ ಸಮಾಜ ಬದಲಾಗ ಬೇಕು.

    ಭಾರತ್

    ReplyDelete
  7. ಇದು ಅತ್ಯಂತ ಸೂಕ್ಷ್ಮವಾದ ಮತ್ತು ಗಂಭೀರವಾದ ವಿಚಾರವೂ ಹೌದು. ಈ ಮೊದಲು ಪ್ರತಿಕ್ರಿಯಿಸಿರುವ ಅನಾಮಧೇಯರು ವ್ಯಕ್ತಪಡಿಸಿರುವ ವಿಚಾರಗಳು ಶೇ.100ರಷ್ಟು ಸತ್ಯವಾದ ವಿಚಾರಗಳೇ ಆಗಿವೆ. ಇವತ್ತು ಖಾಸಗಿ ವಲಯದಲ್ಲಿ ಸಮಾನ ಅವಕಾಶಗಳು ಇತರರಿಗೂ ಸಿಗಬೇಕು ಎಂಬ ಚರ್ಚೆ ಬಂದಾಗ ಸಹಜವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವವನ 'ಜಾತಕ'ವನ್ನು ಮೊದಲಾಗಿ ಪರಿಶೀಲಿಸಿ, ನಂತರ ಖಾಸಗಿ ವಲಯದಲ್ಲೂ ಮೀಸಲಾತಿ ಬೇಕಂತೆ ಎಂಬ ಕುಹಕ ಮಾಡುವ ಕೀಳು ವ್ಯಕ್ತಿತ್ವದ ಜನ ಮಾದ್ಯಮ ಲೋಕದಲ್ಲಿ ಸಾಕಷ್ಟು ಇದ್ದಾರೆ. 'ಮಾದ್ಯಮ' ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತೀಕ,ಇಲ್ಲಿ ಪ್ರಾಜ್ಞರು ಮತ್ತು ಜಾಗೃತ ಮನಸ್ಥಿತಿಯ ಮಂದಿ (ಕ್ಷಮಿಸಿ ಈಗ ಅಂತಹವರ ಸಂಖ್ಯೆ ಬೆರಳೇಣಿಕೆಯಷ್ಟು!)ಇರುತ್ತಾರೆಂಬುದು ಸಾರ್ವಜನಿಕ ವಲಯದ ಭಾವನೆ. ಹೀಗಿರುವಾಗ ಸ್ವಯಂ ನಿಯಂತ್ರಣಕ್ಕೊಳಪಡುವ ಮಾಧ್ಯಮ ಲೋಕದ ಒಡೆಯರು/ಮುಖ್ಯಸ್ಥರುಗಳು ಜಾತ್ಯಾತೀತವಾಗಿ ಸಮಾನ ಅವಕಾಶಗಳನ್ನ ನೀಡಬೇಕಾಗುತ್ತದೆ, ಇಲ್ಲಿ ಪ್ರತಿಭೆಯನ್ನು ಹೊರತು ಪಡಿಸಿ ಜಾತಿಯನ್ನು ಓರೆಗೆ ಹಚ್ಚುವ ಪ್ರಯತ್ನ ಮಾಡಬಾರದು ನಿಜ ಆದರೆ ಸಧ್ಯದ ಸ್ಥಿತಿಯಲ್ಲಿ ಅಂತಹ ಮನಸ್ಸುಗಳೇ ಆಯಕಟ್ಟಿನ ಸ್ಥಾನಗಳಲ್ಲಿ ಸ್ಥಾಪಿತವಾಗಿರುವುದರಿಂದ ಹಿಂದುಳಿದವರನ್ನ, ದಲಿತರನ್ನು ಸಹಾ ಅರ್ಹತೆಯ ಆಧಾರದ ಮೇಲೆ ಆರಿಸಿ ಅವಕಾಶ ನೀಡಿ ಎಂದು ಕೇಳಬೇಕಾಗುತ್ತದೆ, ಅಷ್ಟೇ ಅಲ್ಲ ಖಾಸಗಿ ವಲಯದಲ್ಲೂ ದಲಿತರಿಗೆ ಇಷ್ಟೆ ಶೇಕಡಾವಾರು ಅವಕಾಶ ನೀಡಬೇಕೆಂಬ ಸ್ಪಷ್ಟ ಮಾರ್ಗಸೂಚಿಯೂ ಇದೆ ಆದರೆ ಅವುಗಳು ಪಾಲನೆಯಾಗುತ್ತಿಲ್ಲ ಮತ್ತು ಆ ಕುರಿತು ಧ್ವನಿಗಳು ಬರುತ್ತಿಲ್ಲವೆಂಬುದು ಅಷ್ಟೇ ಸತ್ಯ ಇದು ವಿಷಾಧನೀಯಕರ ಸಂಗತಿಯೂ ಹೌದು. ಇನ್ನು ಅಜಯ್ ಅವರ ಅಭಿಪ್ರಾಯವನ್ನು ಒಪ್ಪಬಹುದಾದರೂ ಅದು ಪೂರ್ಣವಾಗಿ ಸತ್ಯವನ್ನು ಧ್ವನಿಸಲಾರದು, ಏಕೆಂದರೆ ಮಾಧ್ಯಮಲೋಕದಲ್ಲಿ ಸ್ಥಾಪಿತವಾಗಿರುವ ಬಹುತೇಕ ಹಿತಾಸಕ್ತಿಗಳು ಆಂತರಿಕವಾಗಿ ಜಾತಿವ್ಯವಸ್ಥೆಯನ್ನು ಪೋಷಿಸುತ್ತಿವೆ ಅದಕ್ಕೆ ಉದಾಹರಣೆ ಕಣ್ಣೆದುರಿಗೆ ಇದೆ ಸೂಕ್ಷ್ಮವಾಗಿ ಗಮನಿಸಬೇಕಷ್ಟೆ.
    -ಅರಕಲಗೂಡು ಜಯಕುಮಾರ್

    ReplyDelete
  8. Ajay refuses to understand the situation.
    why talented, capable,capable and most importantly non-corrupt SC,ST,OBC candidates fails to get jobs in media houses etc
    At the same time mediocre 'minority' people occupies plum posts in media houses even though cos are owned by others.
    How they get promotion,pay hike ? especially In VK, SK etc
    Why the owners appointing these people in the first place

    ReplyDelete
  9. From the time immemorial, in Indian media houses there has been rare opportunities for SCs, lesser room for STs and very low number with regard to OBCs. I just want to bring you to your notice the very fact that how "an individual" (who i know very well for a long time) menatally suffered a lot when one of our frineds explained him the reality that to not to tell his caste for the fear that the candidate may not be given an opportunity for the purpose. There are media houses who want to know the caste of a perticular candidate through some other means. I personally doubt, how far the SC/ST and minority and OBCs are given in the the news paper that carried the news on the issue? Thanks to Sampaadakeeya for raising the issue. however, i hope this is discussed in the mainstream media. Avadhi also should take up the issue.

    ReplyDelete
  10. Prajavani Owners themselves are from Eediga caste which I presume comes under one of the reserved categories ( OBC?) . I do not understand what stops them from recruiting people from their own and other backward caste groups?

    ReplyDelete
  11. @ anonymous, there are sizable number of Ediga journalists are in the field. No dearth of candidates. But, they, including like others OBC,ST,SCs as well,are unable to withstand the torture of vested interests.
    Coming to Prajavani, there are unwritten reservation for minorities & SCs not for OBC or Idiga.

    ReplyDelete
  12. ಸಂಪಾದಕೀಯ ಬ್ಲಾಗ್ನಲ್ಲಿ ಪತ್ರಿಕೆಗಳಲ್ಲೂ ಸಾಮಾಜಿಕ ನ್ಯಾಯದ ಅಗತ್ಯವಿದೆ ಏನು ಹುಕುಂ ಹೊರಡಿಸಿರುವುದು ಅಚ್ಚರಿ ಮೂಡಿಸಿತು.ಸ್ವಾಮಿ ! ಈಗಾಗಲೇ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಜಾರಿಗೆ ಬಂದ ನಂತರ ಅದರಿಂದ ಲಾಭವಾಗಿರುವುದು ಕೇವಲ ಮುಂದುವರಿದ ದಲಿತರು ,ಪರಿಶಿಷ್ಟರಿಗೆ ಮಾತ್ರ ಎನ್ನುವುದು ಸಂಪಾದಕೀಯಕ್ಕೆ ತಿಳಿಯದೆ ಇರೋದು ದುರಂತ.
    ಇರಲಿ, ನನಗೆ ಗೊತ್ತಿರುವಂತೆ ಯಾವುದೇ ಮಾಧ್ಯಮಗಳಲ್ಲಿ ಜಾತಿ ಆಧಾರದ ಮೇಲೆ ನೇಮಕಾತಿ ಆಗುವುದಿಲ್ಲ.ಅರ್ಜಿ ಕರೆಯುವಾಗ ಯಾವ ಮಾಧ್ಯಮವೂ ಜಾತಿಯನ್ನು ಉಲ್ಲೇಖಿಸುವಂತೆ ಸೂಚಿಸಿರುವ ಉದಾಹರಣೆ ಇಲ್ಲ.ನಂತರ ಪತ್ರಿಕೆಗಳಲ್ಲಿ ಜಾತಿ ಆಧಾರದ ಮೇಲೆ ಪ್ರಾಮುಖ್ಯತೆ ದೊರೆತಿರಬಹುದು.ಅರ್ಹತೆ ಇಲ್ಲದೆ ಸರ್ಕಾರೀ ನೌಕರಿಯಂತೆ ಮಾಧ್ಯಮಗಳಲ್ಲೂ ಮೀಸಲಾತಿ ಜಾರಿಗೆ ಬಂದರೆ ಮಾಧ್ಯಮಗಳನ್ನು ದೇವರೇ ಕಾಪಾಡಬೇಕು.
    ಗಾಯತ್ರಿ ಜಪದಂತಹ ಕಾರ್ಯಕ್ರಮಕ್ಕೆ ಸಿಗುವ ಪ್ರಚಾರ ಯಾವುದೊ ಗ್ರಾಮೀಣ ಸೊಗಡಿನ ಸುದ್ದಿಗೆ ಸಿಗದು ಎನ್ನುವುದು ನಿಜವಾದರೂ , ಗಾಯತ್ರಿ ಜಪದಂಥಹ ಕಾರ್ಯಕ್ರಮಗಳಿಗೆ ಮಹತ್ವ ಇಲ್ಲ ಎನ್ನುವ ನಿಲುವು ಸಲ್ಲದು.ಜಾತೀಯತೆ ಯಾವುದೊ ಕೆಲವು ಮಾಧ್ಯಮಗಳಲ್ಲಿ ಜಾರಿಯಲ್ಲಿರಬಹುದು.ಅದಕ್ಕೆ ಎಲ್ಲ ಮಾಧ್ಯಮಗಳನ್ನೂ ಒಂದೇ ರೀತಿ ನೋಡುವುದು ಸಂಪಾದಕೀಯದ ಹಳದಿ ಕಣ್ಣಿನ ದೋಷ ಎನ್ನದೇ ಬೇರೆ ಮಾರ್ಗವಿಲ್ಲ. .

    ReplyDelete