Thursday, January 27, 2011

ಅಷ್ಟಕ್ಕೂ ಈ ಜನಶ್ರೀ ಚಾನಲ್ ಶುರುವಾಗೋದು ಯಾವಾಗ?


ಇಂಡಿಪೆಂಡೆನ್ಸ್ ಡೇ ಮುಗೀತು, ದಸರಾ ಬಂದು ಹೋಯ್ತು, ರಾಜ್ಯೋತ್ಸವವೂ ಆಯ್ತು, ದೀಪಾವಳಿಯೂ ಉರಿದು ಹೋಯ್ತು. ಉಳಿದಿದ್ದು ನ್ಯೂ ಇಯರ್, ನಂತರ ಸಂಕ್ರಾಂತಿ ಎಲ್ಲವೂ ಆಗಿ ಹೋದವು. ಚಾನೆಲ್ ಮಾತ್ರ ಶುರುವಾಗಲಿಲ್ಲ.
ಇದು ಜನಾರ್ದನ ರೆಡ್ಡಿ-ಶ್ರೀರಾಮುಲು ಅವರ ಜನಶ್ರೀ ಕಥೆ. ಜನಶ್ರೀ ಹೆಸರಿನಲ್ಲೇ ಜನಾರ್ದನ ರೆಡ್ಡಿ, ಶ್ರೀರಾಮುಲು ಇಬ್ಬರೂ ಇದ್ದಾರೆ. ಇಬ್ಬರೂ ಸದ್ಯದ ಕರ್ನಾಟಕ ರಾಜಕಾರಣದಲ್ಲಿ, ಉದ್ಯಮದಲ್ಲಿ ಓಡುತ್ತಿರುವ ಕುದುರೆಗಳು. ರೆಡ್ಡಿಗಳು ಕಳೆದ ಕೆಲವು ವರ್ಷಗಳಲ್ಲಿ ಕೈ ಇಟ್ಟಿದ್ದೆಲ್ಲ ಚಿನ್ನ.

ಆದರೆ ನಸೀಬು ಒಂದೇ ತರ ಇರಲ್ಲ ನೋಡಿ. ಸದ್ಯಕ್ಕೆ ಅವರ ಟೈಮು ಸರಿ ಇದ್ದಂತೆ ಕಾಣುತ್ತಿಲ್ಲ. ಒಂದೆಡೆ ಕರ್ನಾಟಕದ ಬಿಜೆಪಿ ಸರ್ಕಾರವೇ ಈಗಲೋ ಆಗಲೋ ನೆಗೆದುಬೀಳುವಂತಿದೆ. ಆಂಧ್ರದಲ್ಲಿ ರೆಡ್ಡಿಗಳಿಗೆ ಗಾಡ್‌ಫಾದರ್‌ನಂತಿದ್ದ ವೈಎಸ್‌ಆರ್ ಹೆಲಿಕಾಪ್ಟರಿನ ಸಮೇತ ಸುಟ್ಟುಹೋದರು; ಜೊತೆಜೊತೆಗೆ ರೆಡ್ಡಿಗಳ ರಾಜಕೀಯ ಮಹತ್ವಾಕಾಂಕ್ಷೆಗಳೂ ಭಸ್ಮವಾಗುತ್ತಿವೆ.  ಅಕ್ರಮ ಗಣಿಗಾರಿಕೆ ಕುರಿತ ಸಿಬಿಐ ತನಿಖೆ ಆಂಧ್ರಸೀಮೆಯಿಂದ ಶುರುವಾಗಿ ರೆಡ್ಡಿಗಳ ಮನೆ ಬಾಗಿಲಿಗೆ ಬಂದು ನಿಂತಿದೆ. ರೆಡ್ಡಿಗಳ ಫ್ರೆಂಡು, ಪಾರ್ಟನರ್ ವೈಎಸ್‌ಆರ್ ಪುತ್ರ ಜಗನ್ ಕಾಂಗ್ರೆಸ್‌ನಿಂದ ಹೊರಬಿದ್ದು ಹೊಸಪಾರ್ಟಿ ಕಟ್ಟುವ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ.

ರಾಜಕೀಯವಾಗಿಯೂ ರೆಡ್ಡಿಗಳು ಸ್ವತಃ ಬಳ್ಳಾರಿಯಲ್ಲೇ ಏಟು ತಿಂದಿದ್ದಾರೆ. ಜಿಪಂ ಚುನಾವಣೆಗಳಲ್ಲಿ ರೆಡ್ಡಿಗಳಿಗೆ ಸರಿಯಾದ ಹೊಡೆತವೇ ಬಿದ್ದಿದೆ. ಹಾಗೂ ಹೀಗೂ ಆಪರೇಷನ್ ಕಮಲ ಮಾಡಿ ಗದ್ದುಗೆ ಹಿಡಿದರೂ, ರೆಡ್ಡಿಗಳ ಪಾಲಿಗೆ ಈ ಹಿಂಬಾಗಿಲ ಜಯ, ಜಯವಲ್ಲ.

ಹೀಗಿರುವಾಗ ಚಾನೆಲ್ ಕಥೆ ಏನಾಯ್ತು ಎಂದರೆ ಜನಶ್ರೀಯಲ್ಲಿ ಸೇರಿಕೊಂಡಿರುವ ಪತ್ರಕರ್ತರ ಮುಖಗಳಲ್ಲಿ ನಿಸ್ತೇಜ ಕಳೆ. ಮೊದಮೊದಲು ದಸರಾಗೆ ಶುರು, ದೀಪಾವಳಿಗೆ ಸಿಡಿತೀವಿ ನೋಡಿ, ಸಂಕ್ರಾಂತಿ ಎಳ್ಳುಬೆಲ್ಲದೊಂದಿಗೆ ಬರ‍್ತೀವಿ ಎನ್ನುತ್ತಿದ್ದ ಹುಡುಗ-ಹುಡುಗಿಯರು ಈಗೀಗ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ ಕಣ್ರೀ ಎಂದು ನಿರುತ್ಸಾಹದಿಂದ ಗೊಣಗುತ್ತಿದ್ದಾರೆ.
ಇನ್ನೂ ಚಾನೆಲ್ ಅಪ್ರೂವಲ್ ಆಗಿಲ್ಲ, ಸ್ಯಾಟಲೈಟ್‌ದು ಏನೇನೋ ಪ್ರಾಬ್ಲಮ್ಮು, ಸೆಂಟ್ರಲ್ ಗವರ್ಮೆಂಟು ಬೇಕಂತ ಆಟ ಆಡಿಸ್ತಾ ಇದೆ... ಇತ್ಯಾದಿ ಇತ್ಯಾದಿ ಕಪೋಲಕಲ್ಪಿತ ಮಾತುಗಳು ಚಾನೆಲ್ ಹುಡುಗರಲ್ಲೇ ವಿನಿಮಯವಾಗುತ್ತಿದೆ.

ಸದ್ಯಕ್ಕೆ ಜನಶ್ರೀಯಲ್ಲಿ ಅನಂತ ಚಿನಿವಾರ್ ಬಾಸ್. ಚಿನಿವಾರ್ ಪ್ರತಿಭಾವಂತ ಪತ್ರಕರ್ತ, ಸೂಕ್ಷ್ಮಮತಿ. ಆದರೆ ಇಷ್ಟು ದೊಡ್ಡ ಟೀಮನ್ನು ನಿಯಂತ್ರಿಸುವುದು ಅವರಿಂದ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಚಿನಿವಾರ್ ಹಿಂದೆ ತಮ್ಮ ಟೀಮಿನೊಂದಿಗೆ ರಾಜ್ ನ್ಯೂಸ್ ಎಂಬ ಶುರುವಾಗದ ಚಾನೆಲ್‌ಗೆ ಹೋಗಿ ಪಟ್ಟಪಾಡು ದೇವರಿಗೇ ಪ್ರೀತಿ. ಕಡೆಗೆ ಚಿನಿವಾರ್ ತಂಡ ಸಂಬಳಕ್ಕೂ ಜಗಳವಾಡಿ ಅಲ್ಲಿಂದ ಹೊರಬರಬೇಕಾಯಿತು.

ಜನಶ್ರೀಯಲ್ಲಿ ಸಂಬಳಕ್ಕೇನು ಕೊರತೆಯಿಲ್ಲ. ಇಲ್ಲಿ ಆಫರ್ ಮಾಡಲಾದ ಸಂಬಳವನ್ನು ನೆಚ್ಚಿಕೊಂಡೇ ಟಿವಿ೯, ಈಟಿವಿಯಿಂದ ಸಾಕಷ್ಟು ಮಂದಿ ಸಾಲುಮೇರೆ ವಲಸೆ ಬಂದಿದ್ದಾರೆ. ಇತ್ತೀಚಿಗಷ್ಟೆ ಸುವರ್ಣ ನ್ಯೂಸ್‌ನಿಂದ ಹೊರಗೆ ಬಂದಿರುವ ರಂಗನಾಥ ಭಾರದ್ವಾಜ್ ಕೂಡ ಜನಶ್ರೀಗೆ ಸೇರಿಕೊಳ್ಳುವ ಸಾಧ್ಯತೆಯಿದೆ. ಇದೆಲ್ಲ ಸರಿ. ಆದರೆ ಎಷ್ಟು ದಿನ ಟ್ರಯಲ್ ಪ್ರೋಗ್ರಾಮ್ ಮಾಡೋದು? ಯಾರೂ ನೋಡದ ಸುದ್ದಿಯನ್ನು ಎಷ್ಟು ದಿನ ಓದೋದು? ಕಾರ್ಯಕ್ರಮಗಳು, ಪ್ರೆಸ್‌ಮೀಟುಗಳಿಗೆ ಲೋಗೋ ಹಿಡಿದು ಹೋಗುವ ಹುಡುಗರನ್ನು ಜನರು ವಿಚಿತ್ರವಾಗಿ ನೋಡ್ತಾರಲ್ಲವೆ?

ಪತ್ರಕರ್ತರು ಗುಮಾಸ್ತರ ಥರ ಅಲ್ಲ. ಅದರಲ್ಲೂ ಟಿವಿ ಪತ್ರಕರ್ತರು ಇವತ್ತು ಸ್ಟಾರ್ ವ್ಯಾಲ್ಯೂ ಇರುವವರು. ಜನರನ್ನು ತಲುಪದೇ ಹೋದರೆ ಅವರು ಎಷ್ಟೇ ದುಡ್ಡು ಕೊಟ್ರೂ ಕೆಲಸ ಮಾಡುವವರಲ್ಲ. ಕೆಲಸ ಮಾಡಿದರೂ ವೃತ್ತಿಯೆಡೆಗಿನ ಪ್ಯಾಷನ್ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.

ಜನಶ್ರೀ ಬೇಗ ಶುರುವಾಗಲಿ, ಅಲ್ಲಿರುವ ಹುಡುಗ-ಹುಡುಗಿಯರ ಮೊಗದಲ್ಲಿ ಮಂದಹಾಸ ಮೂಡಲಿ.


ಮರೆತಿದ್ದ ಮಾತು: ಪತ್ರಕರ್ತರು ಜನರನ್ನು ತಲುಪದೇ ಹೋದರೆ ಕಂಗಾಲಾಗಿ ಹೋಗಿಬಿಡುತ್ತಾರೆ ಎಂದೆವಲ್ಲ. ಅದಕ್ಕೆ ವಿಜಯ ಕರ್ನಾಟಕದಿಂದ ಹೊರಬಂದ ಪ್ರತಾಪಸಿಂಹ ಉದಾಹರಣೆ. ಲಾಲ್‌ಚೌಕದ ವಿದ್ಯಮಾನ, ಜಿಲ್ಲಾಧಿಕಾರಿ ಜೀವಂತ ದಹನ... ಇತ್ಯಾದಿ ಇತ್ಯಾದಿ ಘಟನೆಗಳೆಲ್ಲ ನಡೆಯುತ್ತಿರುವಾಗ ನಂಗೆ ಬರೆಯಲು ಕಾಲಂ ಇಲ್ಲ. ನಾನು ಹುಚ್ಚನಾಗುತ್ತಿದ್ದೇನೆ ಎಂಬ ಪ್ರಾಮಾಣಿಕ ಅನಿಸಿಕೆಯನ್ನು ಪ್ರತಾಪಸಿಂಹ ತಮ್ಮ ಫೇಸ್‌ಬುಕ್ ಗೋಡೆಗೆ ಅಂಟಿಸಿದ್ದಾನೆ. ೧೦ನೇ ತಾರೀಖಿನವರೆಗೆ ತಡೆದುಕೋ, ನಿಂಗೊಂದು ಕಾಲಂ ಸಿಗುತ್ತೆ ಎಂದು ಭಟ್ಟರು ಸಮಾಧಾನಪಡಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಒಂದು ಹುಚ್ಚರಾಸ್ಪತ್ರ್ರೆ ನಾನು ಕಟ್ಟಿಸಿಕೊಡಲೇ ಎನ್ನುತ್ತ ರವಿ ಬೆಳಗೆರೆ ಮೀಸೆಯಡಿಯಲ್ಲೇ  ಖಿಲ್ಲನೆ ನಕ್ಕರು ಎಂಬುದು ಮಾತ್ರ ಶುದ್ಧಕುಹಕ.

7 comments:

  1. Janashree has many problems.
    * As u have said, Chinivar is good writer. But not a good administrator. He can't take a team along with him.
    * Chinivar being smooth hearted jopurno, can't fight the TRP war for 24X7 and can't bear the tension.
    * Sanjay Betageri/ Murthy,/Desai doesn't know anything about news.
    * Even if Ranganath Bharadwaj joins Janashree, nothing will happen. He is just a orator not an plan maker. Moreover, he needs minimum 6 days leave in week for his headache and Film shooting.
    * The others people in the channel doesn't know the ABCD of 24X7 news channel.
    * They may be sound technically, but editorial wise they have to rebuild everthing from scratch.

    ReplyDelete
  2. ಮರೆತಿದ್ದ ಮಾತಿನ ಬಗ್ಗೆ: ಬರೆಯಲಾಗದವನು ಮೈಯ್ಯೆಲ್ಲಾ ಪರಚಿಕೊಂಡ ಎನ್ನುವಂತೆ ಗಂಭೀರ ಬರಹಗಾರರಾಗಿದ್ದ ವಿಶ್ವೇಶ್ವರ ಭಟ್, ರಾಧಾಕೃಷ್ಣ ಭಡ್ತಿ ಹಾಗೂ ಪ್ರತಾಪ್ ಸಿಂಹ ತಮ್ಮ ತಮ್ಮ ಬ್ಲಾಗುಗಳ ಮೂಲಕ ರವಿ ಬೆಳಗೆರೆಯವರನ್ನು ಲೇವಡಿ ಮಾಡಲು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಅವರಿಗೆ ಓದುಗರ ಬಗ್ಗೆ ಬದ್ಧತೆಯಿದ್ದಿದ್ದರೆ ತಮ್ಮ ಬ್ಲಾಗ್ ಮೂಲಕ ಬೆತ್ತಲೆ ಜಗತ್ತು ಅಂಕಣವನ್ನು ಮುಂದುವರಿಸಬಹುದಿತ್ತು. ಹಾಗೂ ಫೇಸ್‍ಬುಕ್ ಮೂಲಕ ಆ ಬರಹಕ್ಕೆ ಸಾಕಷ್ಟು ಪ್ರಚಾರ ನೀಡಬಹುದಿತ್ತು. ಪ್ರಸ್ತುತ ಘಟನೆಗಳ ಬಗ್ಗೆ ಸ್ಪಂದಿಸುವ ನಿಜವಾದ ಕಾಳಜಿಯಿದ್ದಿದ್ದರೆ ಬೆತ್ತಲೆ ಜಗತ್ತು ಅಂಕಣ ಮುಂದುವಿರಿಸುತ್ತಿದ್ದರು, ಬರೆಯಲು ಅವಕಾಶವಿಲ್ಲದೆಯೆ ಹುಚ್ಚು ಹಿಡಿದಂತಾಗುತ್ತಿದೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಿರಲಿಲ್ಲ. ಅಷ್ಟೊಂದು ಅಂಕಣಗಳನ್ನು ಬರೆಯುತ್ತಿದ್ದ ವಿಶ್ವೇಶ್ವರ ಭಟ್ಟರು ತಮ್ಮ ಬ್ಲಾಗಿನಲ್ಲಿ ಕೇವಲ ತಮ್ಮ ಮಾಜಿ ಸ್ನೇಹಿತನನ್ನು ಲೇವಡಿ ಮಾಡುವಂತಹ ಪ್ರಶ್ನೋತ್ತರಗಳು, ಬ್ರೇಕಿಂಗ್ ನ್ಯೂಸ್‍ಗಳು, ವೀಕ್ಷಕರ ಪತ್ರಗಳನ್ನು ಬರೆಯುತ್ತಿದ್ದಾರೆ. ಭಡ್ತಿಯವರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಗಿಂಡಿಮಾಣಿಯ ಮೂಲಕ ಕೊಳಚೆ ನೀರನ್ನು ಸಿಂಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಉದ್ಯೋಗವಿಲ್ಲದ ಬಡಗಿಯ ಕೈಗೆ ಉಳಿ ಕೊಟ್ಟಲ್ಲಿ ಏನು ಮಾಡುತ್ತಿದ್ದನೋ ಅದನ್ನೇ ಈ ಪತ್ರಕರ್ತರು ಮಾಡುತ್ತಿದ್ದಾರೆ. ಆಶ್ಚರ್ಯದ ವಿಷಯವೆಂದರೆ ವಿಶ್ವೇಶ್ವರ ಭಟ್ಟರ ಪುಸ್ತ್ಕಕಗಳನ್ನು ರವಿ ಬೆಳಗೆರೆ ಬಿಡುಗಡೆ ಮಾಡುತ್ತಿದ್ದರೆ, ರವಿ ಬೆಳಗೆರೆಯವರ ಪುಸ್ತಕಗಳನ್ನು ವಿಶ್ವೇಶ್ವರ ಭಟ್ಟರು ಲೋಕಾರ್ಪಣೆ ಮಾಡುತ್ತಿದ್ದರು. ಸಾರ್ವಜನಿಕವಾಗಿ ಹಾಗೂ ಪತ್ರಿಕೆಗಳ ಮುಖೇನ ಪರಸ್ಪರ ಹೊಗಳಿಕೊಳ್ಳುತ್ತಿದ್ದರು. ಆಗೆಲ್ಲಾ ಇಂದು ಬರೆಯುತ್ತಿರುವ ಸತ್ಯಗಳು ಅವರಿಗೆ ಗೋಚರಿಸಿರಲಿಲ್ಲವೆ? ಇಂಥ ಬರಹಗಳ ಮೂಲಕ ಇವರೆಲ್ಲರೂ ಯಾರನ್ನು ಮೂರ್ಖರನ್ನಾಗಿಸುತ್ತಿದ್ದಾರೆ? ಇಷ್ಟಕ್ಕೂ ಸಾಮಾನ್ಯ ಓದುಗರಿಗೆ ಇವರ ಜಗಳ ಎಷ್ಟರ ಮಟ್ಟಿಗೆ ಪ್ರಸ್ತುತ? ನಿಜಕ್ಕೂ ಓದುಗರು ಸಂಪಾದಕರ್ಯಾರು ಎಂದು ತಿಳಿದೇ ಪತ್ರಿಕೆಗಳನ್ನು ಕೊಳ್ಳುತ್ತಾರೆಯೆ? ಸಂಪಾದಕರ ಹಿಂದೆ ಓದುಗರೂ ತಮ್ಮ ಒಲವನ್ನು ಬದಲಾಯಿಸುತ್ತಾರೆಯೆ? ಪತ್ರಿಕೆಗಳನ್ನೂ ಬದಲಾಯಿಸುತ್ತಾರೆಯೆ?

    - ಆರ್.ವಿ.ರಂಗನಾಥ, ಹೊಳಲ್ಕೆರೆ

    ReplyDelete
  3. ಜನಶ್ರೀ ಟೀವಿ ಚಾನೆಲ್ ಎಂದು ಬರುತ್ತದೆ ಎಂಬ ಕುತೂಹಲ ಕೇವಲ ಜರ್ನಲಿಸ್ಟುಗಳಾದ ನಿಮಗೆ ಇದೆಯೇ ಹೊರತು ನಮ್ಮಂಥ ಸಾಮಾನ್ಯ ಟೀವಿ ವೀಕ್ಷಕನಿಗೆ ಖಂಡಿತವಾಗಿಯೂ ಇಲ್ಲ. ಹೇಳಿ ಕೇಳಿ, ಇದು ವಿವಾದಾತ್ಮಕ ರಾಜಕಾರಣಿಯ ಮಾಲಿಕತ್ವದ್ದು. ಅಂದ ಮೇಲೆ ಅವರ ವಿರುದ್ಧದ ಆಪಾದನೆಗಳನ್ನು ನಿರಾಕರಿಸುವಂಥ ರಾಜಕೀಯ ನಿಲುವು ಇರುತ್ತದೆ, ಸಂದೇಹವೇ ಇಲ್ಲ. ರಂಗನಾಥ ಭಾರದ್ವಾಜ ಅವರು ಬಂದ ಕೂಡಲೇ ದೊಡ್ಡ ಸಂಚಲನವೇನೂ ಆಗುವುದಿಲ್ಲ. ಈ ಟೀವಿ ಅವರು ಬಿಟ್ಟ ಮೇಲೆ ನಿಂತು ಹೋಗಲಿಲ್ಲ, ಟೀವಿ ೯ ಅವರು ಬಿಟ್ಟರೆಂದು ಬಾಗಿಲು ಮುಚ್ಚಲಿಲ್ಲ. ಸುವರ್ಣ ಸುದ್ದಿ ಚಾನೆಲ್ ವೀಕ್ಷಕರೇನೂ ಅವರಿಲ್ಲವೆಂದು ಕಣ್ಣೀರು ಸುರಿಸುವುದಿಲ್ಲ.

    ಉಳಿದಂತೆ ಪತ್ರಿಕೆಗಳಿಂದ, ಇತರ ಚಾನೆಲ್‍ಗಳಿಂದ ಹೆಚ್ಚಿನ ಸಂಬಳದ ಆಸೆಗೆ ಕೆಲಸ ಬದಲಾಯಿಸುವವರಿಗೆ ಮಾತ್ರ ಹೊಸ ಚಾನೆಲ್ ಆಗಮನ ಖುಷಿ ತರುತ್ತಿರಬಹುದು.

    - ನೊಣವಿನಕೆರೆ ಶ್ರೀನಿವಾಸಯ್ಯ, ಶಾಲಾ ಶಿಕ್ಷಕ, ಬೆಂಗಳೂರು

    ReplyDelete
  4. yes. really true. Laymen like us are really not interested in Janaashree news chnl. we do not expect any miracle from that new , upcoming news chnl. It is an another business for them. may be this is the factor which pricking its management.and they are delaying its launch.
    Any way for journalists, it is an another company to get salary for their degree.

    ReplyDelete
  5. visleshane, vimarshege olapadada suddi.

    ReplyDelete
  6. They may be sound technically, but editorial wise they have to rebuild everything from scratch...
    Chinivar is not at all a team builder.He miserably failed earlier also like Raj TV, Suvarna TV etc Some of his hand picked boys from ETV/Udaya tv are good for nothing. There is a single name worth mentioning there including Chinivar. It is high time to Ravi Belegere or Hameed Palya to take over...
    Dooms days nearing for for Reddys..
    beware the Ides of March

    ReplyDelete
  7. janasree is comeing from 14th Feb 2011 as my frends

    ReplyDelete