Friday, January 28, 2011

ಪ್ರಜಾವಾಣಿ ಕಣ್ಣಲ್ಲಿ ಯಡಿಯೂರಪ್ಪನವರೇ ಕೃಷ್ಣದೇವರಾಯ!

ನಿಗದಿಗಿಂತ ಎರಡೂವರೆ ಗಂಟೆ ತಡವಾಗಿ ಉತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವ ಶ್ರೀರಾಮುಲು ಹಂಪಿಯ ಪೇಟ ತೊಡಿಸಿ, ವಿಜಯ ಖಡ್ಗವನ್ನು ನೀಡುತ್ತಿದ್ದಂತೆಯೇ, ಒಂದು ಕ್ಷಣ ಯಡಿಯೂರಪ್ಪ ಅವರೂ, ವೀರಯೋಧನೂ ಆಗಿ, ಗಂಡರಗಂಡ, ವೀರರಮಣ ಎಂದೇ ಕರೆಯಿಸಿಕೊಂಡಿದ್ದ ಕೃಷ್ಣದೇವರಾಯನಂತೆ ಕಂಗೊಳಿಸಿದರು...


ಇವತ್ತಿನ ಪ್ರಜಾವಾಣಿಯ ರಾಜ್ಯ-ರಾಷ್ಟ್ರೀಯ ಪುಟದ (ಪುಟ-೮ಬಿ) ಬೆರಗು ಮೂಡಿಸಿದ ಹಂಪಿ ಉತ್ಸವದ ಬೆಡಗು ಎಂಬ ವರದಿಯ ಸಾಲುಗಳು ಇವು.

ವರದಿಗಾರಿಕೆಯ ಪ್ರಾಥಮಿಕ ಪಾಠಗಳನ್ನು ಕಲಿತ ಟ್ರೈನಿಗಳೂ ಕೂಡ ಬರೆಯದಂಥ ವಾಕ್ಯಗಳನ್ನು ಸಿದ್ಧಯ್ಯ ಹಿರೇಮಠ ಬರೆದಿದ್ದಾರೆ. ಅದನ್ನು ಪ್ರಕಟಿಸಿ, ಪ್ರಜಾವಾಣಿ ಪಾವನವಾಗಿದೆ.

ಈ ವರದಿಗಾರನಿಗೆ ಯಡಿಯೂರಪ್ಪ ಕೃಷ್ಣದೇವರಾಯನಂತೆ ಕಂಡಿರಬಹುದು, ಹೀಗೆ ಕಾಣಿಸುವುದಕ್ಕೂ ಅವರವರದ್ದೇ ಆದ ಕಾರಣಗಳಿರುತ್ತದೆ. ಆ ಕುರಿತು ನಮ್ಮ ಆಕ್ಷೇಪಣೆಗಳೇನೂ ಇಲ್ಲ.

ಆದರೆ ಇಂಥ ಕಾಲ್ಪನಿಕ, ಉತ್ಪ್ರೇಕ್ಷಿತ ಉಪಮೆಗಳನ್ನು ಪತ್ರಿಕಾ ವರದಿಗಾರ ಬರೆಯಕೂಡದು ಎಂಬ ಪ್ರಾಥಮಿಕ ಪಾಠವನ್ನು ಅವರಿಗೆ ಯಾರೂ ಹೇಳಿಕೊಡಲಿಲ್ಲವೆ? ತಮ್ಮ ವರದಿಗಾರರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸುವ, ನಂತರ ತಿಂಗಳುಗಟ್ಟಲೆ ತರಬೇತಿ ನೀಡುವ ಪ್ರಜಾವಾಣಿಯ ಹಿರಿಯ ತಲೆಗಳಾದರೂ ಅವರಿಗೆ ಇದನ್ನು ಹೇಳಿಕೊಟ್ಟಿರಲಿಲ್ಲವೇ?

ಪ್ರಜಾವಾಣಿಯಲ್ಲಿ ನಡೆಯುತ್ತಿರುವ ವಿಚಿತ್ರಗಳನ್ನು ಗಮನಿಸಿ. ಇಲ್ಲಿ ಒಬ್ಬ ಅಂಕಣಕಾರ ವರದಿ ಬರೆದಂತೆ ಅಂಕಣ ಬರೆಯುತ್ತಾರೆ, ವರದಿಗಾರ ವರದಿಯನ್ನು ಆಸ್ಥಾನಕವಿಯಂತೆ ಬರೆಯುತ್ತಾನೆ.

ವರದಿಗಾರನಿಗೆ ಯಡಿಯೂರಪ್ಪ ಸಾಕ್ಷಾತ್ ಕೃಷ್ಣದೇವರಾಯನಂತೆ ಕಂಡು, ಕಂಗೊಳಿಸಿದಂತೆ, ಜನಾರ್ದನರೆಡ್ಡಿ ಸಾಕ್ಷಾತ್ ಮದಕರಿ ನಾಯಕನಂತೆಯೂ, ಶ್ರೀರಾಮುಲು ಸಂಗೊಳ್ಳಿ ರಾಯಣ್ಣನಂತೆಯೂ ಕಾಣಿಸಿರಬಹುದು. ಆದರೆ ಅದನ್ನೂ ಆತ ಬರೆಯದೆ ಇರುವುದು ಓದುಗರಾದ ನಮ್ಮ ಭಾಗ್ಯ, ಪ್ರಜಾವಾಣಿಯ ಪುಣ್ಯ.

ಹಿಂದೆ ಜನಾರ್ದನರೆಡ್ಡಿ ಯಡಿಯೂರಪ್ಪನವರನ್ನು ಕೃಷ್ಣದೇವರಾಯನ ಅಪರಾವತಾರ ಎಂದು ಹೊಗಳಿದ್ದರು. ನಂತರ ಮುದುಕ-ಕಂಸ ಇತ್ಯಾದಿ ಬೈಗುಳಗಳೂ ಅವರ ಬಾಯಿಂದಲೇ ಬಂದವು. ರಾಜಕಾರಣಿಗಳು ಪರಸ್ಪರರನ್ನು ಹೀಗೆ ಅಸಹ್ಯವಾಗಿ ಹೊಗಳುವುದು, ತೆಗಳುವುದು ಮಾಮೂಲು. ಆದರೆ ಪತ್ರಿಕಾ ವರದಿಗಾರರಿಗೆ ಮುಖ್ಯಮಂತ್ರಿಗಳೋ ಇನ್ನ್ಯಾರೋ ಕೃಷ್ಣದೇವರಾಯನಂತೆ ಕಂಡು, ಕಂಗೊಳಿಸುವುದನ್ನು ಹೇಗೆ ಸ್ವೀಕರಿಸುವುದು? ಹೈಪ್ರೊಫೈಲ್ ಪತ್ರಕರ್ತರೇ ತುಂಬಿರುವ ಎಂಜಿ ರಸ್ತೆಯ ಕಚೇರಿಯಲ್ಲಿ ಈ ಕುರಿತು ಒಂಚೂರು ಚರ್ಚೆ ನಡೆಯಬಾರದೇ?

ಪ್ರಜಾವಾಣಿಯ ಇನ್ನೊಂದು ವರದಿಯನ್ನು ಗಮನಿಸಿ: ಹಂಪಿ ಉತ್ಸವ: ಗಮನ ಸೆಳೆದ ಶೋಭಾಯಾತ್ರೆ. ಇಲ್ಲಿ ಶೋಭಾಯಾತ್ರೆ ಅಂದರೆ ಏನು? ಈ ಪದವನ್ನು ಯಾರು, ಯಾಕೆ ಬಳಸುತ್ತಾ ಬಂದಿದ್ದಾರೆ? ಸರ್ಕಾರ ನಡೆಸುವ ಕಾರ್ಯಕ್ರಮಗಳ ಮೆರವಣಿಗೆಗೂ ಶೋಭಾಯಾತ್ರೆ ಎಂದು ಕರೆಯುವ ಪರಿಪಾಠ ಯಾವಾಗ ಆರಂಭವಾಯಿತು?

ಕೊನೆ ಕುಟುಕು: ಮೊನ್ನೆ ಪ್ರಜಾವಾಣಿ ಸಹಸಂಪಾದಕ ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮದ ಎರಡು ಸಂಪುಟಗಳು ಬಿಡುಗಡೆಯಾದವು. ಪ್ರಜಾವಾಣಿಯಲ್ಲಿ ಈ ಕುರಿತ ವರದಿಯೂ ಪ್ರಕಟವಾಯಿತು. ಪುಸ್ತಕ ಬಿಡುಗಡೆಯಾಗುವ ಸಂದರ್ಭದಲ್ಲಿ ತಮ್ಮ ಸಹಸಂಪಾದಕರು ಸಾಕ್ಷಾತ್ ಶೇಕ್ಸ್‌ಪಿಯರ್‌ನಂತೆ ಕಾಣಿಸಿದರು ಎಂದು ವರದಿಗಾರ ಬರೆಯಲಿಲ್ಲ, ಥ್ಯಾಂಕ್ ಗಾಡ್!

9 comments:

  1. so, u r anti BJP anta confirm

    ReplyDelete
  2. @above, +1 ,
    I was expecting very unbiased opinions in this website..
    You have highly disappointed.. :(
    Will stop visiting if this continues..

    ReplyDelete
  3. ಪ್ರಜಾವಾಣಿ ಎಡಪಂಥೀಯ ವಿಚಾರಧಾರೆಯ ಪತ್ರಿಕೆ ಎನ್ನುವುದು ಎಲ್ಲರಿಗೆ ಗೊತ್ತಿರುವ ಸಂಗತಿ.ಅಂಥಹ ಪತ್ರಿಕೆಯಲ್ಲಿ ಬಲಪಂಥೀಯ ವಿಚಾರಧಾರೆಯ ಪಕ್ಷದಿಂದ ಆಯ್ಕೆ ಆಗಿರುವ ಮುಖ್ಯಮಂತ್ರಿಗಳನ್ನು ಹೊಗಳಿ ಬರೆದರೆ ಸಂಪಾದಕೀಯಕ್ಕೆ ಅದೇಕೆ ಕಿರಿಕಿರಿಯಾಗಬೇಕು ಅರ್ಥವಾಗುತ್ತಿಲ್ಲ.ಅಲ್ಲದೆ ಇಂದು ಸುದ್ದಿಗಳಲ್ಲೇ ವಿಶ್ಲೇಷಣೆ ನಡೆಯುವುದು ಕೇವಲ ಪ್ರಜಾವಾಣಿಗೆ ಸೀಮಿತವೇನಲ್ಲ .ಮುಖ್ಯಮಂತ್ರಿಗೆ ಪೇಟ ತೊಡಿಸಿದರು,ನಂತರ ಕಾರ್ಯಕ್ರಮ ಮುಂದುವರಿಯಿತು ಅಂತ ಸಪ್ಪೆಯಾಗಿ ವರದಿ ಮಾಡಬೇಕಿತ್ತು ಅಂತ ಆಜ್ಞೆ ಹೊರಡಿಸಿದನ್ಥಿದೆ ನಿಮ್ಮ ಟೀಕೆ.
    ಪ್ರಜಾವಾಣಿ ಕೂಡ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ.ಬಿಜೆಪಿ ಬಗ್ಗೆ ಸಂಪಾದಕೀಯಕ್ಕೆ ಇರುವ ತಿರಸ್ಕಾರ ಎಲ್ಲೇ ಬರಹದಲ್ಲೂ ಎದ್ದು ಕಾಣುತ್ತಿದೆ.ಬಿಜೆಪಿ ನಿಮಗೆ ಇಷ್ಟ ಇಲ್ಲದಿದ್ದರೂ ರಾಜ್ಯದ ಜನರು ವೋಟು ನೀಡಿ ಗೆಲ್ಲಿಸಿದ ಪಕ್ಷ ಅದು.ಹಾಗಾಗಿ ಮುಖ್ಯಮಂತ್ರಿಗೆ ನೀಡಬೇಕಾದ ಗೌರವ ನೀಡಿ ಬಳ್ಳಾರಿ ವರದಿಗಾರ ಸುದ್ದಿ ಕಳಿಸಿದ್ದಾನೆ.ನೀವು ಅವನನ್ನೇ ತರಾಟೆಗೆ ತೆಗೆದುಕೊಂಡರೆ ಹೇಗೆ ?
    ಸಂಪಾದಕೀಯ ಬ್ಲಾಗ್ ಆರಂಭವಾಗಿರುವುದು ಬಿಜೆಪಿ ವಿರುಧ್ಹ ಪ್ರಚಾರ ಮಾಡಲು ಅಲ್ಲ ಎಂದು ಭಾವಿಸಿರುವ ಜನರು ಹಲವರು ಇದ್ದರೆ.ಹಾಗಾಗಿ ರೈತನ ಹೆಸರು ಹೇಳಿ ಇಡೀ ರಾಜ್ಯದಲ್ಲಿ ಬೇನಾಮಿ ಹೆಸರುಗಳಲ್ಲಿ ಆಸ್ತಿ ಮಾಡಿರುವ ದೇವೇಗೌಡ ಅವರ ಕುಟುಂಬದ ಬಗ್ಗೆಯೂ ಸಂಪಾದಕೀಯ ಬೆಳಕು ಚೆಲ್ಲುವಂತೆ ಆಗಲಿ.ಏಕೆಂದರೆ ಬಿಜೆಪಿ ಅಧಿಕಾರದಿಂದ ಇಳಿದ ಕೂಡಲೇ ಅಧಿಕಾರದ ಕನಸು ಕಾಣುತ್ತಿರುವ ಜೆ. ಡಿ ಎಸ್ ಬಗ್ಗೆಯೂ ಜನರನ್ನು ಎಚ್ಚರಿಸುವ ಘನ ಕಾರ್ಯ ನಿಮ್ಮಿಂದಾಗಲಿ.

    ReplyDelete
  4. ಜವಾಬ್ದಾರಿಯುತ ಸಂಸ್ಥೆಗಳ ನಿರ್ಲಕ್ಷ್ಯದಿಂದ ರ್‍ಯಾಂಕ್, ರ್‍ಯಾಲಿ ಎಂಬ ಪದಗಳು ಕನ್ನಡ ಬರವಣಿಗೆಯಲ್ಲಿ ರ್ಯಾಂಕ್ , ರ್ಯಾಲಿ ಎಂದು ಈಗ ಸರ್ವ ಸಾಮಾನ್ಯವಾಗಿದೆ.

    ಮುಂದೊಂದು ದಿನ ಮೆರವಣಿಗೆ ಬದಲಿಗೆ ಶೋಭಾಯಾತ್ರೆ ಎಂದೇ ಬರೆಯಬೇಕು ಎನ್ನುವ ಕರ್ನಾಟಕ ಸರ್ಕಾರದ ಸುತ್ತೋಲೆಯ ಆದೇಶ ಬಂದರೆ ಆಶ್ಚರ್ಯವಿಲ್ಲ.

    ಕಾಲಾಯ ತಸ್ಮೈ ನಮಃ.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್

    ReplyDelete
  5. They don't want impartial posts from you.
    They mark Some post are anti Yaddy, anti BJP, anti Parivar...They can't accept it. Because of they either fascist or Stalinist...
    They take as it is and think it over

    ReplyDelete
  6. ರೈತನ ಹೆಸರು ಹೇಳಿ ಇಡೀ ರಾಜ್ಯದಲ್ಲಿ ಬೇನಾಮಿ ಹೆಸರುಗಳಲ್ಲಿ ಆಸ್ತಿ ಮಾಡಿರುವ ದೇವೇಗೌಡ ಅವರ ಕುಟುಂಬದ ಬಗ್ಗೆಯೂ ಸಂಪಾದಕೀಯ ಬೆಳಕು ಚೆಲ್ಲುವಂತೆ ಆಗಲಿ...
    Is it media blog or political blog. Readers cant understand with sun glass

    ReplyDelete
  7. I thought some of the above comments are from Parivar boys. Not at all..These are all from M.G.Road Keshava Krupa. PV boys are doing this. In this post nothing about Yaddy or BJP. Only about PV report & use of words. Why you are taking it as Yaddy or BJP issue. Please, be mature. Regularly attend sangha and learn...

    ReplyDelete
  8. I read many people condemning Sampaadakeeya for this article. But, i feel, a Journalist should be responsible, when he uses words like this. This is not something to be considered as leftist or rightist principles, instead, this is to be considered as Favoring/ showing Favoritism... A journalist Should not be doing this..

    ReplyDelete
  9. @Rohini, There is no leftist left in Karnataka ! These people can't understand who is a communist, leftist, socialist, Maoist...His job is very tough. It is more than a 'Sanyasi'.
    A hint of difference with BJP means Leftist ?!
    Becoming a leftist is not as easy as a SWAMY !
    Difference opinion or opposing unethical or corruption does not make a person leftist...Poor guys
    And, it shows standard of KANNADA journalism

    ReplyDelete