ಇಬ್ಬರೂ ಕದನಕ್ಕೆ ಬಿದ್ದಿದ್ದಾರೆ. ಕದನ ಎಂದರೆ ಅಂತಿಂಥದ್ದು ಅಲ್ಲ, ಥೇಟ್ ಎರಡು ಪ್ರಬಲ ರೌಡಿಗ್ಯಾಂಗುಗಳು ಎದುರಾಬದುರು ನಿಂತ ಹಾಗೆ ಕಾಣುತ್ತಿದೆ. ಇಬ್ಬರ ಮಧ್ಯೆ ವಿಶ್ವೇಶ್ವರ ಭಟ್ಟರೂ ಇದ್ದಾರೆ. ಭಟ್ಟರು ಹಿಂದೆಲ್ಲಾ ತಮ್ಮ ಪ್ರಿಯಮಿತ್ರ ಬೆಳಗೆರೆಯ ಮೇಲೆ ಪ್ರತಾಪಸಿಂಹನ ಹೆಗಲ ಮೇಲೇ ಬಂದೂಕಿಟ್ಟು ಹೊಡೆಯುತ್ತಿದ್ದುದುಂಟು. ಈಗ ಖುಲ್ಲಂ ಖುಲ್ಲಾ. ತನ್ನ ಸೇನಾಧಿಪತಿ ಸಿಂಹನನ್ನು ಹುರಿದುಂಬಿಸುತ್ತಿರುವುದಲ್ಲದೆ, ತಾವೇ ಹತಾರಗಳನ್ನು ಸಜ್ಜು ಮಾಡಿಕೊಂಡು ರಣರಂಗಕ್ಕೆ ಇಳಿದಿದ್ದಾರೆ.
ರವಿ ಬೆಳಗೆರೆ ಕನ್ನಡದ ಪ್ರತಿಭಾವಂತ ಬರಹಗಾರ. ಪಾವೆಂ ಹೇಳಿದ ಕಥೆಗಳು ತರಹದ ಉತ್ತಮ ಕಥೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟವರು. ಪತ್ರಿಕಾ ವೃತ್ತಿ ಅವರೊಳಗಿನ ಕಥೆಗಾರರನ್ನು ಕೊಂದುಹಾಕಿತು. ಆಮೇಲೆ ಅವರು ಬರೆದದ್ದೆಲ್ಲ ಅಗ್ಗದ ಜನಪ್ರಿಯತೆ, ಮಾರಾಟಕ್ಕಾಗಿ ಬರೆದ ಕೃತಿಗಳು. ಅವರ ಬರವಣಿಗೆಯ ಶೈಲಿಗೆ ಊರು ತುಂಬ ಅಭಿಮಾನಿಗಳು. ಸುತ್ತಲೂ ಅಣ್ಣ, ಬಾಸ್ ಎನ್ನುವ ಭಟ್ಟಂಗಿಗಳು.
ಪ್ರತಾಪ ಸಿಂಹ ಇತ್ತೀಚಿನ ತಲೆಮಾರಿನ ಹುಡುಗ. ಬಿಸಿ ರಕ್ತ, ಆವೇಶ, ಅತ್ಯುತ್ಸಾಹ. ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ಟರು ಕೊಟ್ಟ ಅವಕಾಶ, ಸ್ವಾತಂತ್ರ್ಯವನ್ನು ಬಳಸಿಕೊಂಡು ತನ್ನದೇ ಓದುಗರನ್ನು ಸೃಷ್ಟಿಸಿಕೊಂಡಾತ. ಈತನ ಬರವಣಿಗೆ ತುಂಬೆಲ್ಲ ಕೋಮುವಾದದ ನಂಜು, ಮುಸ್ಲಿಂ-ಕ್ರಿಶ್ಚಿಯನ್ನರ ವಿರುದ್ಧ ದ್ವೇಷದ ಒಡಲುರಿ. ಇಂಟರ್‌ನೆಟ್‌ನಲ್ಲಿ ಶ್ರದ್ದೆಯಿಂದ ಹುಡುಕಾಡಿ ಏನೇನನ್ನೋ ಹೆರಕಿ ತಂದು ತನ್ನ ವಾದಗಳನ್ನು ಸಮರ್ಥಿಸಿಕೊಳ್ಳುವ ಪ್ರತಾಪ ಜಾಣ ಲೇಖಕ. ಹೀಗಾಗಿಯೇ ಈತನಿಗೂ ಅಭಿಮಾನಿಗಳು. ಸುತ್ತಲೂ ಪ್ರತಾಪಣ್ಣ, ಪ್ರತಾಪಜೀ ಎನ್ನುವ ಭೋಪರಾಕು ಗಿರಾಕಿಗಳು.
ಇಬ್ಬರಿಗೂ ಕದನ ಯಾಕೆ ಹುಟ್ಟಿಕೊಳ್ತು ಅನ್ನೋದು ನಿಗೂಢ. ಭಟ್ಟರಿಗೂ ಬೆಳಗೆರೆಗೂ ಗಾಢ ಸ್ನೇಹವಿದ್ದ ದಿನಗಳಲ್ಲೂ ಪ್ರತಾಪ ಆಗಾಗ ವಿಜಯ ಕರ್ನಾಟಕದಲ್ಲಿ ರವಿ ಬೆಳಗೆರೆಯನ್ನು ಕುಟುಕುತ್ತಿದ್ದ. ಬೆಳಗೆರೆ ಬಿಟ್ಟಾರೆಯೇ? ಅವರೂ ಸಹ ತಮ್ಮ ಹಾಯ್ ಬೆಂಗಳೂರಿನಲ್ಲಿ ಪೀಪಿ ಸಿಮ್ಮ, ಕಾಂಡೋಮ್ ಸಿಮ್ಮ, ಪಿಟ್ಟು ಸಿಮ್ಮ ಇತ್ಯಾದಿಯಾಗಿ ಗೇಲಿಗಳನ್ನು ಮಾಡಿಯೇ ಮಾಡಿದರು.
ಇವರಿಬ್ಬರ ಜಗಳಕ್ಕೆ ಅಕ್ರಮ ಗಣಿಗಾರಿಕೆಯ ಧೂಳೂ ಮೆತ್ತಿಕೊಂಡಿದೆ. ಬಳ್ಳಾರಿ ರೆಡ್ಡಿಗಳ ವಿರುದ್ಧ ಪ್ರತಾಪ ಸಿಂಹ ಮೈನಿಂಗ್ ಮಾಫಿಯಾ ಎಂಬ ಪುಸ್ತಕ ಬರೆದರೆ, ರವಿ ಬೆಳಗೆರೆ ರೆಡ್ಡಿಗಳ ವಿರೋಧಿಗಳಾಗಿರುವ ಲಾಡ್‌ಗಳ ವಿರುದ್ಧ ಅನಿಲ್ ಲಾಡ್ ಮತ್ತು ೪೦ ಮಂದಿ ಕಳ್ಳರು ಎಂಬ ಪುಸ್ತಕ ಬರೆದರು. ಬೆಳಗೆರೆಯ ಖಾಸ್‌ಬಾತ್‌ಗಳು ಪುಸ್ತಕದಂಗಡಿಗಳಲ್ಲಿ ಸೇಲಾಗುವಷ್ಟೇ ವೇಗದಲ್ಲಿ ಪ್ರತಾಪಸಿಂಹನ ಬೆತ್ತಲೆ ಜಗತ್ತೂ ಸೇಲ್ ಆಗುತ್ತದೆ. ಇಬ್ಬರಿಗೂ ವೃತ್ತಿ ಮಾತ್ಸರ್ಯ ಬಂತಾ? ಅದಕ್ಕೇ ಈ ಹೊಡಿಬಡಿ ಕದನವಾ?
ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕ ಬಿಟ್ಟ ನಂತರದ ಬೆಳವಣಿಗೆಗಳು ಎಲ್ಲರಿಗೂ ಗೊತ್ತೇ ಇದೆ. ಬೆಳಗೆರೆ ಮೊದಲ ಸಂಚಿಕೆಯಲ್ಲಿ ಪ್ರತಾಪ್ ಸಿಂಹನನ್ನು ಗುರಿಯಾಗಿಸಿಕೊಂಡು ಬರೆದರು, ವಿಶ್ವೇಶ್ವರ ಭಟ್ಟರನ್ನು ಸಮರ್ಥಿಸಿಕೊಂಡರು. ನಂತರದ ಸಂಚಿಕೆಗಳಲ್ಲಿ ವಿಶ್ವೇಶ್ವರ ಭಟ್ಟರನ್ನು ಸೇರಿಸಿಯೇ ಹಣಿದರು. ಪ್ರತಾಪ ಕೊರ್ಟಿನಲ್ಲಿ ಕೇಸು ಜಡಿದು ತನ್ನ ವಿರುದ್ಧ ಮಾನನಷ್ಟವಾಗುವಂತೆ ಬರೆಯಕೂಡದು ಎಂಬ ಆದೇಶವನ್ನೂ ತಂದುಬಿಟ್ಟ.
ಭಟ್ಟರು, ಪ್ರತಾಪರೂ ರಾಂಗುರಾಂಗಾಗಿದ್ದಾರೆ. ತಿರುಗಿ ಬೈದು ಸೇಡು ತೀರಿಸಿಕೊಳ್ಳೋಣವೆಂದರೆ ಕೈಯಲ್ಲಿ ಪತ್ರಿಕೆಯಿಲ್ಲ. ಹೀಗಾಗಿ ತಮ್ಮ ಅವಳಿ ವೆಬ್‌ಸೈಟುಗಳಲ್ಲೇ ಬೆಳಗೆರೆಯ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಆ ಎರಡು ಸೈಟುಗಳೂ ಬೆಳಗೆರೆಯ ಸಹಸ್ರನಾಮಾರ್ಚನೆಗೇ ಮೀಸಲಾಗಿ ಬಿಟ್ಟಿವೆ. ಪ್ರತಾಪ ಸಿಂಹನಂತೂ ಬೆಳಗೆರೆಯ ವಿರುದ್ಧ ಒಂದು ಪುಸ್ತಕ ಬರೆಯಲು ಕೂತಿದ್ದಾನಂತೆ. ಆ ಪುಸ್ತಕದಲ್ಲಿ ಬೆಳಗೆರೆಗೆ ನೂರಾ ಒಂದು ಪ್ರಶ್ನೆಗಳನ್ನು ಕೇಳಲಾಗುವುದಂತೆ. ಉತ್ತರ ಕೊಡದಿದ್ದರೆ ಆತನೇ ಉತ್ತರ ನೀಡುತ್ತಾನಂತೆ. ಈ ಉಗ್ರ ಪ್ರತಾಪಕ್ಕೆ ಭಟ್ಟರ ಕುಮ್ಮಕ್ಕೂ ಇದೆ. ಈ ಪುಸ್ತಕಕ್ಕೆ ನಿಮ್ಮದೇ ಮುನ್ನುಡಿನಾ ಅಂತ ಅವರ ಅಭಿಮಾನಿಗಳು ಕೇಳಿದರೆ ಕವರ್ ಪೇಜ್ ಡಿಜೈನೂ ನನ್ನದೇ ಎಂದಿದ್ದಾರೆ ಭಟ್ಟರು.
ಅತ್ತ ಬೆಳಗೆರೆ ಪ್ರತಾಪನನ್ನು ಹಡಬೆ ನಾಯಿ ಇತ್ಯಾದಿಯಾಗಿ ಸಂಬೋಧಿಸುತ್ತಿದ್ದರೆ, ಇತ್ತ ಪ್ರತಾಪ ನಿಮ್ಮ ಅಪ್ಪ ಯಾರು ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಪ್ರಶ್ನೆ ಮಾಡುತ್ತ ಕುಳಿತಿದ್ದಾರೆ. ಭಟ್ಟರು ಗಂಜೀಕೇಂದ್ರ ಸೇರುತ್ತಾರೆ ಎಂದು ಬೆಳಗೆರೆ ಬರೆದರೆ, ಸದ್ಯ ನಾನು ಮಾಂಸದ ಅಂಗಡಿ ಸೇರುತ್ತಿಲ್ಲ ಎಂದು ಭಟ್ಟರು ತಿರುಗೇಟು ನೀಡುತ್ತಿದ್ದಾರೆ.
ಈ ಜಗಳದಲ್ಲಿ ಯಾರು ಗೆದ್ದರೂ ಸೋತರೂ ಕನ್ನಡದ ಮಾಧ್ಯಮ, ಸಾಂಸ್ಕೃತಿಕ ಜಗತ್ತಿಗೇನು ಪ್ರಯೋಜನವಿಲ್ಲ ಎನ್ನುವುದು ಬೇರೆ ಮಾತು. ಇದು ಅಂಥ ಆರೋಗ್ಯಕರ ಕದನದ ಹಾಗೇನೂ ಕಾಣುತ್ತಿಲ್ಲ. ಆದರೆ ಯಾವುದೋ ಕಮರ್ಷಿಯಲ್ ಸಿನಿಮಾದ ಕ್ಲೈಮ್ಯಾಕ್ಸಿನಂತೆ ಕಾಣುತ್ತಿರುವುದಂತೂ ನಿಜ.
ಈ ಅಪ್ಪಟ ಬೀದಿ ಕಾಳಗದ ಕುರಿತಾಗಿ ಈ ಇಬ್ಬರು ಲೇಖಕರ ಫ್ಯಾನ್ ಫಾಲೋಯಿಂಗ್‌ಗಳನ್ನು ಹೊರತುಪಡಿಸಿದರೆ ಬೇರೆ ಯಾರೂ ಅಂಥ ಕುತೂಹಲವನ್ನೇನು ಇಟ್ಟುಕೊಂಡಿಲ್ಲ. ಪುಕ್ಕಟೆ ಮನರಂಜನೆ ಸಿಗಲಿ ಬಿಡಿ ಎಂದು ಉಳಿದವರು ಕಾದು ನೋಡುತ್ತಿದ್ದಾರೆ.
ಕೊನೆ ಕುಟುಕು: ರವಿ ಬೆಳಗೆರೆ ಮತ್ತು ಪ್ರತಾಪ ಸಿಂಹ ಇಬ್ಬರೂ ರಿವಾಲ್ವರ್ ಲೈಸೆನ್ಸ್ ಹೊಂದಿದ್ದಾರೆ. ಇಬ್ಬರೂ ರಿವಾಲ್ವರ್ ಹೊತ್ತುಕೊಂಡೇ ಹೊರಗಡೆ ಓಡಾಡುತ್ತಾರೆ. ಇಬ್ಬರ ಜಗಳ ಮಾತಿಗೆ, ಬರಹಕ್ಕೆ ಸೀಮಿತವಾಗಿರಲಿ ಎಂದು ಹಾರೈಸೋಣ.
Paapigalu..
ReplyDelete@ಸಂಪಾದಕೀಯ, ಇವರಿಬ್ಬರ ಕದನದಲ್ಲಿ ಅಸಹ್ಯ ಎನಿಸುವ ಸತ್ಯಗಳು ಹೊರಬರುತ್ತಿವೆ, ಪತ್ರಕರ್ತರ ಈಗೋ ಮತ್ತು ಅಹಂ ಬೀದಿಗೆ ಬಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ. ಇವರಿಬ್ಬರ ಕದನದಲ್ಲಿ ಭಟ್ಟರ ಪ್ರವೇಶವಾಗಿರುವುದು, ರವಿ-ಭಟ್ಟರು-ಪ್ರತಾಪಸಿಂಹ ರ ಬಗೆಗೆ ನಾವಂದುಕೊಂಡದ್ದೆಲ್ಲ ಸುಳ್ಳು, ಭಾವನೆಗಳೆಲ್ಲ ದೂರ ದೂರ ಎನಿಸಲಾರಂಭಿಸಿದೆ. ಒಂದಂತೂ ಸತ್ಯ ಸಮಾಜದಲ್ಲಿ ಬೇರೆ ಯಾರಾದರೂ ಹೇಗಾದರೂ ಜಗಳ ಮಾಡಿಕೊಳ್ಳಲಿ ಪತ್ರಕರ್ತರು ಮಾತ್ರ ಬೀದಿಗೆ ಬಂದರೆ ಕೆಸರೆರಚಾಟ ಅಲ್ಲ ....... ಎರಚಾಟ ಎನಿಸುತ್ತೆ so ಇನ್ನು ಮುಂದಾದರೂ ವೈಯುಕ್ತಿಕ ಕದನಗಳು ಬೀದಿಗೆ ಬಾರದಿರಲಿ, ಸಾರ್ವಜನಿಕ ಅಸಹ್ಯ ಸೃಷ್ಟಿಸಿಕೊಳ್ಳದಿರಲಿ.
ReplyDeleteಫ್ಯಾನ್ ಫಾಲೋಯಿಂಗ್‌ಗಳನ್ನು ಹೊರತುಪಡಿಸಿದರೆ ಬೇರೆ ಯಾರೂ ಅಂಥ ಕುತೂಹಲವನ್ನೇನು ಇಟ್ಟುಕೊಂಡಿಲ್ಲ ಅಂತ ನಿಮಗೆ ಹೇಗೆ ಗೊತ್ತು? ಕುತೂಹಲ ಇಲ್ಲದಿದ್ದ ಮೇಲೆ ಮತ್ಯಾಕೆ ನೀವು ಎರಡೂ ಕಡೆ ಇಣುಕಿ ಹುಡುಕಿ ವರದಿ ಬರೆಯುತ್ತಿದ್ದೀರಿ? ನಿರ್ಲಕ್ಷಿಸಬಹುದಿತ್ತಲ್ಲ.
ReplyDeleteonce upon a time we used to think, these people are Great souls..who dare to tell any thing and every thing. but now a days we feel that these are Gataar souls..! Really pity for them. They are not healthy, they need help!
ReplyDeleteBettalaadaru naachikeyilladavaru..!
ReplyDeleteJournalists are also ordinary human beings! they too have some thing to let out,and come out from their frustration,and bottled up emotions.! They are using their weapons and showing their true faces! that s all.!
ReplyDeleteಇದುವರೆಗೆ ಕರ್ನಾಟಕ ರಾಜ್ಯದಲ್ಲಿ ರಾಜಕಾರಣಿಗಳು ರಾಡಿ ಎರಚಿಕೊಂಡ ಸುದ್ದಿಗಳನ್ನು ಪತ್ರಕರ್ತರು ವರದಿ ಮಾಡುತಿದ್ದರು.
ReplyDeleteಆದರೆ ಈಗ ರಾಜಕಾರಣಿಗಳ ಬದಲಿಗೆ ಸ್ವತಃ ರಾಡಿ ಎರಚುವ ಕೆಲಸ ಪತ್ರಕರ್ತರು ಮಾಡುತಿದ್ದಾರೆ .
(ಕರ್) ನಾಟಕ ಮಂಡಳಿಯ ನೂತನ ಪ್ರಸಂಗ : ವಿಶ್ವೇಶ್ವರ -ರವಿ-ಪ್ರತಾಪ ಕಾಳಗ !
- ಪ.ರಾಮಚಂದ್ರ
ರಾಸ್ ಲಫ್ಫಾನ್, ಕತಾರ್.
ಸಂಪಾದಕೀಯದ ಓದುಗರಲ್ಲಿ ಪ್ರೀತಿಯ ಮನವಿ
ReplyDeleteನಿಮ್ಮ ಕಮೆಂಟ್‌ಗಳು ಯಾವುದೇ ವ್ಯಕ್ತಿಯನ್ನು ನಿಂದಿಸುವ, ತೇಜೋವಧೆ ಮಾಡುವ ಹಾಗೆ ಇರದಿರಲಿ. ಪ್ರತಿಕ್ರಿಯಿಸುವಾಗ ಸಂಯಮ ಇರಲಿ. ಟೀಕೆ ವಸ್ತುನಿಷ್ಠವಾಗಿರಲಿ.
ಈ ಪೋಸ್ಟ್‌ಗೆ ಬಂದ ಹತ್ತಾರು ಕಮೆಂಟ್‌ಗಳನ್ನು ಅನಿವಾರ್ಯವಾಗಿ ಡಿಲೀಟ್ ಮಾಡಿದ್ದೇವೆ. ಹೀಗೆ ಡಿಲೀಟ್ ಮಾಡುವುದು ನಮಗೆ ಕಷ್ಟದ ಕೆಲಸವೇ ಸರಿ. ದಯಮಾಡಿ ಹೇಳುವುದನ್ನು ಸಭ್ಯ ಭಾಷೆಯಲ್ಲಿ ಹೇಳಿ
ಸಹಕರಿಸಿ
Dear Sampadakeeya team
ReplyDeleteNimma bhaashe matthu vichaara eradu sabhyavaagive.Ibbaralli yaaranno bembalisadhe, avara avivekagalanna , Odhugara kharchinalli (patrikeyalli baidhaadi)vayukthika tevalu theerisikollodhanna chennagi kindle maadidhiri.
Innadru tilkolli mundevu
Dear Sampadakiyaa..
ReplyDeleteSimple ಆಗಿ ತುಂಬಾ ಚೆನ್ನಾಗಿದೆ ಮೂಡಿ ಬಂದಿದೆ ನಿಮ್ಮ article. ಇಷ್ಟ ಆಯಿತು.
????ಪ್ರತಾಪ ಸಿಂಹನಂತೂ ಬೆಳಗೆರೆಯ ವಿರುದ್ಧ ಒಂದು ಪುಸ್ತಕ ಬರೆಯಲು ಕೂತಿದ್ದಾನಂತೆ. ಆ ಪುಸ್ತಕದಲ್ಲಿ ಬೆಳಗೆರೆಗೆ ನೂರಾ ಒಂದು ಪ್ರಶ್ನೆಗಳನ್ನು ಕೇಳಲಾಗುವುದಂತೆ.????
ReplyDeleteಸಂಪಾದಕೀಯ,
ಆತ ತಾನು ’ರವಿ ಬೆಳಗೆರೆ’ಯ ವಿರುದ್ಧ ಬರೆಯುತ್ತಿರುವುದು, ಆತನಿಗೇ ಪ್ರಶ್ನೆ ಕೇಳುತ್ತಿರುವುದು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಅದು ನಿಜವೋ ಸುಳ್ಳೋ ಬೇರೆ ಮಾತು. ಆದರೆ ನಿಮ್ಮ ಈ ಮಾತಿನ ಬಗ್ಗೆ ಈ ಕ್ಷಣದಲ್ಲಿ ಪುರಾವೆ ಒದಗಿಸಿ ನೋಡೋಣ. ಯಾರೋ ಪ್ರೆಸ್ ಕ್ಲಬ್ಬಿನಲ್ಲಿ ಕೂತು ಗುಂಡುಹಾಕುತ್ತಾ ಮಾತಾಡುವಂತೆ ಬರೆದರೆ ನಿಮ್ಮ ಬರವಣಿಗೆಯ ವಸ್ತುನಿಷ್ಠತೆಗೆ ಬೆಲೆ ಇರುವುದಿಲ್ಲ. ಗಾಳಿಸುದ್ದಿಗಳನ್ನು ವರದಿಗಳಂತೆ ಬರೆದು ವಿಮರ್ಶಿಸಿದರೆ ಹತ್ತರಲ್ಲಿ ಹನ್ನೊಂದಾಗುತ್ತೀರಿ ಅಷ್ಟೆ.
This comment has been removed by the author.
ReplyDeleteರವಿ ಬೆಳಗೆರೆ ಮತ್ತು ಪ್ರತಾಪ ಸಿಂಹ ಇಬ್ಬರೂ ರಿವಾಲ್ವರ್ ಲೈಸೆನ್ಸ್ ಹೊಂದಿದ್ದಾರೆ. ಇಬ್ಬರೂ ರಿವಾಲ್ವರ್ ಹೊತ್ತುಕೊಂಡೇ ಹೊರಗಡೆ ಓಡಾಡುತ್ತಾರೆ. ಇಬ್ಬರ ಜಗಳ ಮಾತಿಗೆ, ಬರಹಕ್ಕೆ ಸೀಮಿತವಾಗಿರಲಿ ಎಂದು ಹಾರೈಸೋಣ ಎಂಬ ತಮ್ಮ ಕೊನೆಯ ಕುಟುಕು ಸೂಪರ್ ...
ReplyDeleteನಾನು ಇವರಿಬ್ಬರ ಜಗಳಗಳನ್ನು ಪತ್ರಿಕೆಗೆ ಮಾತ್ರ ಮೀಸಲು ಎಂದು ತಿಳಿದಿದ್ದೆ, ಆದರೆ ಇದು ಅಂತರ್ಜಾಲದಲ್ಲೂ ನಡೆಯುತ್ತಿದೆಯಲ್ಲ!
ReplyDeleteಆದರೆ ನಮ್ಮ ಕನ್ನಡ ಓದುಗರಿಗೆ ಈ ಮೂವರು ಬೇಕು, ಯಾಕಂತೀರಾ? ನಮ್ಮ ಕೈ ಬೆರಳುಗಳು ಸಮವಾಗಿಲ್ಲವಲ್ಲ! ಅದಕ್ಕೆ. ಇದು ಪ್ರಜಾಪ್ರಭುತ್ವ ಇಲ್ಲಿ ಯಾರಿಗೆ ಯಾರು ಇಷ್ಟವಾಗುತ್ತಾರೋ ಅವರಿಗೆ ಅವರೆ ಹಿತವರು!?
ಅದೇನೋ ನಿಮಗೂ ತ್ರಿವಿಕ್ರಮರ ಕುಸ್ತಿಯಲ್ಲಿ ಬಹಳ ಇಂಟರೆಸ್ಟ ಇದೆಯಂತ ಕಾಣಿಸುತ್ತದೆ?
U might not have read the recent update of the Simha and Bhat's blog. As they mentioned in the writeup, one techie named Luvis has entered the scene to wage a struggle against the editor of the leading weekly..however, luvis has also written an article on this..adding salt to the fire...its nice to see them splashing mud each other one who were close pals sometime back..at least in this way we may expect some non-communal news as a break...
ReplyDeletepratap simha.. that boy who is cutting a sorry figure of himself trying to rally the good for nothings and some women(?) with fake profiles to sing in his praise on fb? Those fools are making him a circus simha and the chap is happy about it.When there is a wall and the person who it should belong to does not take care dogs and bitches come and piddle on the wall. go look at his wall on fb. it is so filthy. Compare Belagere's wall. I am not his admirer. He is another showman.But his readers seem to be cultured
ReplyDeleteರವಿ ಬೆಳಗೆರೆ ಮತ್ತು ಪ್ರತಾಪ ಸಿಂಹ ಇಬ್ಬರೂ ರಿವಾಲ್ವರ್ ಲೈಸೆನ್ಸ್ ಹೊಂದಿದ್ದಾರೆ. ಇಬ್ಬರೂ ರಿವಾಲ್ವರ್ ಹೊತ್ತುಕೊಂಡೇ ಹೊರಗಡೆ ಓಡಾಡುತ್ತಾರೆ. ಇಬ್ಬರ ಜಗಳ ಮಾತಿಗೆ, ಬರಹಕ್ಕೆ ಸೀಮಿತವಾಗಿರಲಿ ಎಂದು ಹಾರೈಸೋಣ ಎಂಬ ತಮ್ಮ ಕೊನೆಯ ಕುಟುಕು ಸೂಪರ್ ...
ReplyDeleteಸೂಪರ್ matra alla encouraging also...But, younger can only pose to photos cant shoot...
ಬೆಳಗೆರೆ ಬರೆಯುವುದು ಯಕಶ್ಚಿತ್ ಒ೦ದು ಟ್ಯಾಬ್ಲಾಯಿಡಿನಲ್ಲಿ. ಆದರೆ ಸಿಮ್ಮ ಬರೆಯುತ್ತಿದ್ದದ್ದು ಕನ್ನಡದ ನ೦ಬರೆ ೧ ಮುಖ್ಯವಾಹಿನಿ ದಿನಪತ್ರಿಕೆಯಲ್ಲಿ. ಆತನ ಅರೆಪಕ್ವ ಚಿ೦ತನೆಗಳನ್ನು (ideology ಯನ್ನು ಬೇಕಾದರೆ ಇನ್ನೊ೦ದು ರೀತಿಯ ನಿಲುವು ಅ೦ತ ಬಿಟ್ಟುಬಿಡೋಣ), ಅಸತ್ಯಗಳಿ೦ದ ಕೂಡಿದ ಲೇಖನಗಳನ್ನು (ಉದಾಹರಣೆಗೆ ಮೀಸಲಾತಿಯ ಬಗ್ಗೆ ಆತ ಬರೆದ ಕಾಲಮ್ಮು) ಬೆ೦ಬಲಿಸಿದ ಸ೦ಪಾದಕ ವಿಶ್ ಭಟ್ಟರು ಕನ್ನಡ ಪತ್ರಿಕೊದ್ಯಮ ’ಹೀರೊ’ ಪತ್ರಕರ್ತರಾದದ್ದು ಕನ್ನಡದ ದುರ೦ತ. ಹೀಗಲ್ಲಪ್ಪಾ ಬರೆಯುವುದು ಅ೦ತ ಸಿಮ್ಮನಿಗೆ ತಿಳಿಹೇಳದೆ ಭಟ್ಟರು ತಮ್ಮ ಅಜ್ನಾನದ ಪ್ರದರ್ಶಿಸುವುದರ ಜತೆ ಸಿಮ್ಮನನ್ನು ದಾರಿಕೆಡಿಸಿದರು.
ReplyDeleteWe are not bothered to know about these journalists ego or personal grudge on each other. We just read the articles written by them and then forget. But unfortunately now it is evident that no one is perfect since they are busy throwing mud on each other.I pity them. May the almighty give them strenth to correct themselves..!
ReplyDeleteThis is how i describe Pratap's rage against Ravi
ReplyDelete"J" factor. Why should one be open on somebody’s achievement? People think that he is intellectual impotent why should they be bothered about what has been written on the so called "Raddi Paper".
Lets be honest. People using a daily like VK for personal war against somebody, get benefits from Govt just because he is a Hindu (Why PS could not get his site in Congress Govt's rule") are greater Hippocrates than a
person using his own paper for his benefits. Coming to popularity why Hi Bangalore is still number one weekly tabloid in Karnataka, I know Pratap's answer but remember the same people read "Bettale Jagattu" as well.
These type of rage against Ravi is not new to his readers (Where is "Karnataka Dootha" now?). If you really want conquer Ravi do it by your work. War in any other form is not going to tarnish his popularity any more
"ಪ್ರತಾಪ ಸಿಂಹ ಇತ್ತೀಚಿನ ತಲೆಮಾರಿನ ಹುಡುಗ.... ಈತನ ಬರವಣಿಗೆ ತುಂಬೆಲ್ಲ ಕೋಮುವಾದದ ನಂಜು, ಮುಸ್ಲಿಂ-ಕ್ರಿಶ್ಚಿಯನ್ನರ ವಿರುದ್ಧ ದ್ವೇಷದ ಒಡಲುರಿ."
ReplyDeleteಇಲ್ಲಿಗೆ ಗೊತ್ತಾಯಿತು ಬಿಡಿ ನಿಮ್ಮ ವಿಚಾರಗಳು. ಅದೇ ಒಬ್ಬ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಲೇಖಕ ಹಿಂದೂಗಳ ಬಗ್ಗೆ ಏನಾದರು ಬರೆದಿದ್ದರೆ ತಮ್ಮಂತ ಬುದ್ಧಿಜೀವಿಗಳು ಎಲ್ಲವನ್ನು ಮುಚ್ಚಿಕೊಂಡು ಕೂರ್ತಿದ್ರಿ. ಅಲ್ವೇ?
ಸಮಾಜ,ದೇಶ, ಭೂಮಿ ಪ್ರತಿ ಆರೋಗ್ಯ, ಪೂರ್ಣತೆಯ ಪ್ರತಿ ಚಿಂತನೆ ಮಾಡೋಣವೆ. ಇಬ್ಬರ ಜಗಳ, ಇಬ್ಬರ ಸ್ನೇಹ ಪೂರ್ಣತೆಯತ್ತ ಸಾಗಲಿ
ReplyDelete೪ ರಿಂದ ೬ ಸಂಖ್ಯೆಯೆ ಶರೀರದ ರೋಗ ೯೦% ಬಾಗದ ಜನರಿಗೆ ನಿಶ್ಚಿತ. ೧೦೦೦ ಸಂಖ್ಯೆಯ ಜೀವನದ ರೋಗಗಳು ಈ ಚಿಕ್ಕ ಚಿಕ್ಕ ರೋಗಗಳನ್ನು ಪೂರ್ಣ ಅರೋಗ್ಯದತ್ತ ತೆಗೆದುಕೊಂಡು ಹೋಗಣವೆ? ೬೦ ವರ್ಷದ ನಂತರ ಅರುವು ಮೆರವು ಅಂತ ಅಗತ್ತೆ. ಆದರೆ ಇದು ಯಾವಲಾದರೂ ನನಗೂ, ನಿನಗೂ ಬರಬಹುದು. ಇದಕ್ಕಾಗಿ ವಿಶೇಷ ಕೆಲಸ ಮಾಡಲು ಇಬ್ಬರನ್ನು ಹುರಿದುಂಬಿಸೋಣ.
ಇಬ್ಬರ ಲೇಖನಗಳನ್ನು ಓದಿದ್ದೇನೆ. ಇಬ್ಬರ ಬಗ್ಗೆಯೂ ವಯಕ್ತಿಕವಾಗಿ ಗೌರವವಿತ್ತು... ಆದರೆ ಇಷ್ತೊಂದು ಒದಿದವರು ತಮ್ಮ ವಯಕ್ತಿಕ ಜಗ್ಗಾಟ-ಬಡಿದಾಟಗಳಲ್ಲಿ ಸಾಮಾನ್ಯರಿಗಿಂತಾ ಕೆಳಮಟ್ಟದಲ್ಲಿರುವುದು ಬೆಸರವನ್ನುಂಟು ಮಾಡಿದೆ...
ReplyDeleteಲೇಖನ ಚೆನ್ನಾಗಿದೆ. ಒಂದೇ ದಿಕ್ಕಿಗೆ ಬಾಣ ಹೊಡೆಯುತ್ತಿದ್ದ ಈ ಇಬ್ಬರೂ ಎದುರು ಬದರು ನಿಂತಿದ್ದಾರೆ. ಇದನ್ನೇ ಬಳಸಿಕೊಂಡು ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳಲು ಪೀಪಿ ಸಿಮ್ಮ ಪ್ರಯತ್ನಿಸುತ್ತಿದ್ದರೆ ಹಾಸಿಗೆಯೊಳಗೆ ಸೇರಿರುವ ಸುಂಡಿಲಿಯನ್ನ ಸದೆಬಡಿಯಲು ರವಿ ಬೆಳಗೆರೆ ಹರಸಾಹಸ ಮಾಡುತ್ತಿದ್ದಾರೆ. ಇದರ ಮಧ್ಯೆ ಮೂಕವಾಗಿದ್ದು ಬೆಳೆಗೆರೆಯವರ ಸಾಹಿತ್ಯ. 'After 50 ' ಯಲ್ಲಿ ಹೆಚ್ಚೆಚ್ಚು ಸಾಹಿತ್ಯ ಹರಿಸೋ ತಾಕತ್ತಿರುವ ರವಿಯವರು ಸುಂಡಿಲಿಯನ್ನ ಆದಷ್ಟು ಬೇಗ ಚಿವುಟಿಹಾಕಲಿ.
ReplyDeleteirli bidi sir avara avara vishya namagyake...
ReplyDeleteneeve barediva haage idu ellarigu gottiruva vishaya alve...
Ravibelagere & Prathapa simha ra book ge neevu eegalindale prachara koduttiruvudu avarige anukula alve
The discussion here again suporting one side, I feel here 'Sampadakeeya' creating the fan following. I've read all the books and almost all articles of Prathap, even though I can say we see RSS background in his articles but its almost true, of course truth is always bitter. And if we think about his comments on Belagere, its again facts, we are seeing Belagere since long time how he changes his words and his articles also only for showing his presence in the field. Now I dont understand why you discouraging both of them ,let them to continue their work, we can see some truth come out. And about that book which you've mentioned that prathap is planning to write, I never heard from him about that, so please try to give the facts rather than imaginary articles.
ReplyDeleteತುಂಬಾ ಚೆನ್ನಾಗಿ ಬರೆದಿದ್ದೀರಿ. ಹೀಗೇ ಮುಂದುವರೆಸಿ...
ReplyDeleteya super
ReplyDelete