Sunday, March 6, 2011

ಭಟ್ಟರೇ, ಇದು ಕ್ರಿಯೇಟಿವಿಟಿ ಅನ್ನಿಸಿಕೊಳ್ಳಲ್ಲ...


....ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್ ಮಾಡುವಾಗ ಕೀಪರ್‌ಗೆ ಮೊದಲು ಕಾಣುವುದು ಎದುರಿಗಿರುವ ಸ್ಟಂಪ್, ನಂತರ ಕಾಣುವುದು ಆಟಗಾರರ ಪೃಷ್ಠ. ಹೀಗೆ ಆಟಗಾರರ ಹಿಂಭಾಗವನ್ನು ನೋಡುತ್ತ ನೋಡುತ್ತ ತನ್ನ ಮನಸ್ಸನ್ನೇ ಬದಲಾಯಿಸಿಕೊಂಡ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಸ್ಟೀವನ್ ಡೇವಿಸ್ ತಾನು ಸಲಿಂಗಕಾಮಿ ಎಂದು ಸ್ಪಷ್ಟಪಡಿಸಿದ್ದಾರೆ.....

ಇಂಥ ಕೀಳು ಅಭಿರುಚಿಯ ಸಾಲುಗಳು ಒಂದು ದಿನಪತ್ರಿಕೆಯಲ್ಲಿ ಪ್ರಕಟವಾಗಬಹುದಾ? ಟ್ಯಾಬ್ಲಾಯ್ಡುಗಳೂ ಬರೆಯಲು ಹಿಂದೆ ಮುಂದೆ  ನೋಡುವ ಇಂಥ ಸಾಲುಗಳು ಪ್ರಕಟವಾಗಿರುವುದು ಕನ್ನಡಪ್ರಭ ಪತ್ರಿಕೆಯಲ್ಲಿ. ಇದು ಪ್ರಕಟವಾಗಿರುವುದು ಮಾ.೧ರ ಕನ್ನಡಪ್ರಭ ಸಂಚಿಕೆಯಲ್ಲಿ.

ಸಲಿಂಗ ಕಾಮವನ್ನು ಅಪರಾಧವಲ್ಲ ಎಂದು ನಮ್ಮ ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿದೆ. ಆದರೂ ಸಲಿಂಗ ಕಾಮವನ್ನು ಖಂಡತುಂಡವಾಗಿ ವಿರೋಧಿಸುವವರೇ ಬಹುಸಂಖ್ಯೆಯಲ್ಲಿರುವ ನಾಡು ನಮ್ಮದು. ಅದನ್ನು ಒಪ್ಪುವ ಕೆಲವೇ ಕೆಲವರು ನಮ್ಮ ಸಮಾಜದಲ್ಲಿ ಇರಬಹುದು. ಆದರೆ ಆದರ ಕುರಿತು ವರದಿ ಮಾಡುವಾಗ ಇಂತಹ ಭಾಷೆಯನ್ನು ಅದೂ ಮನೆಮಂದಿಯೆಲ್ಲರೂ ಓದುವ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಬಳಸಿದ್ದನ್ನು ಒಪ್ಪುವವರು ಮಾತ್ರ ಬಹುಶ: ಯಾರೂ ಇರಲಾರರು.

ಬಹುಶ: ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ರ ಗಮನಕ್ಕೂ ಇಂದು ಬಂದಿರದೇ ಪ್ರಕಟವಾಗಿರುವ ಸಾಧ್ಯತೆ ಇದೆ. ಆದರೆ ವರದಿಗಾರ ಅತ್ಯುತ್ಸಾಹದಿಂದ ಬರೆದಿರಬಹುದಾದ ಈ ವರದಿಯನ್ನು ಗಮನಿಸಲು ಮೇಲ್‌ಸ್ತರದ ಸಂಪಾದಕೀಯ ಸಿಬ್ಬಂದಿ ಇರಲಿಲ್ಲವೇ?

ಕನ್ನಡಪ್ರಭಕ್ಕೆ ಬಂದ ವಿಶ್ವೇಶ್ವರ ಭಟ್ಟರು ತಮ್ಮ ಕ್ರಿಯೇಟಿವಿಟಿಯ ಪ್ರಯೋಗವನ್ನು ಅಲ್ಲಿ ಮಾಡುತ್ತಿದ್ದಾರೆ. ಓದುಗರಿಂದ ಶೀರ್ಷಿಕೆಗಳನ್ನು ಆಹ್ವಾನಿಸಿ, ಅವುಗಳಲ್ಲೇ ಒಂದನ್ನು ಆಯ್ಕೆ ಮಾಡಿ ಪ್ರಕಟಿಸಿದ್ದು ಒಂದು ವಿಶೇಷ ಪ್ರಯೋಗ. ಆದರೆ ಕ್ರಿಯೇಟಿವಿಟಿಯ ಹೆಸರಿನಲ್ಲಿ ಡಬ್ಬಲ್ ಮೀನಿಂಗ್ ನುಸುಳಿ ಬಂದರೆ ಅದನ್ನು ಮಾನವಂತರು ಸಹಿಸುವುದಿಲ್ಲ ಎಂಬುದನ್ನು ಭಟ್ಟರು ಗಮನಿಸಬೇಕು.

ಹಾಗೆ ನೋಡಿದರೆ ವಿಶ್ವೇಶ್ವರ ಭಟ್ಟರ ವೆಬ್‌ಸೈಟ್‌ನ ಕೇಳ್ರಪ್ಪೋ ಕೇಳಿ ಅಂಕಣದಲ್ಲೂ ಇಂಥ ಅಸಹ್ಯಗಳು ನುಸುಳಿದ್ದವು. ಆ ಕುರಿತು ನಾವು ಹಿಂದೆಯೇ ಬರೆದಿದ್ದೆವು.

ಈ ಕೆಲವು ಪ್ರಶ್ನೋತ್ತರಗಳನ್ನು ಗಮನಿಸಿ:

ಪ್ರಶ್ನೆ: ಪ್ರತಾಪ ಸಿಂಹ ನಿಜಕ್ಕೂ ಚಡ್ಡಿನಾ?
ಉತ್ತರ: ಆತ ಚಡ್ಡಿ ಹೌದೋ ಅಲ್ಲವೋ ಎಂಬುದನ್ನು ನೀವೇ ನಿರ್ಧರಿಸಬೇಕು. ಆದರೆ ಅವನು ತನ್ನ ಅಂಕಣದಲ್ಲಿ ಎಲ್ಲರ ಚಡ್ಡಿಯನ್ನು ಬಿಚ್ಚುವುದರಿಂದ ಬೆತ್ತಲೆ ಜಗತ್ತು ಅಂತ ಹೆಸರಿಟ್ಟುಕೊಂಡಿದ್ದಾನೆ.

ಪ್ರಶ್ನೆ: ರವಿ ಕಂಡಿದ್ದು ಎಂಬ ಪುಸ್ತಕ ಬರೆಯುತ್ತಿದ್ದೇನೆ, ನಿಮ್ಮ ಸಲಹೆ?
ಉತ್ತರ: ಇನ್ನೂ ಕವರ್ ಪೇಜ್ ಮಾಡಿಸಿರದಿದ್ದರೆ, ರವಿ(ಕೆ)ಯಲ್ಲಿ ಕಂಡಿದ್ದು ಎಂದು ಬದಲಿಸು.

ಪ್ರಶ್ನೆ: ನೀವು ಯಾವತ್ತೂ ಹೆಂಡತಿಯರ ಬಗ್ಗೆಯೇ ವಕ್ರತುಂಡೋಕ್ತಿಯಲ್ಲಿ ಬರೆಯುತ್ತೀರಲ್ಲಾ ಯಾಕೆ?
ಉತ್ತರ: ವಕ್ರ ಆಗಿರುವವರ ಬಗ್ಗೆ ಇನ್ನೆಲ್ಲಿ ಬರೆಯಲಿ?

ನಿಜ, ಇವು ನಗು ತರಿಸುತ್ತದೆ. ಆದರೆ, ನಗು ತರಿಸುವಂಥದ್ದೆಲ್ಲ ಶ್ರೇಷ್ಠವಾದ ಹಾಸ್ಯವಲ್ಲ. ಹಾಸ್ಯಕ್ಕೆ ಸಭ್ಯತೆಯ ಚೌಕಟ್ಟಿದ್ದರೆ ಚಂದ. ಖಾಸಗಿಯಾಗಿ ಆಡುವ ತಮಾಶೆ ಮಾತುಗಳನ್ನು ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ ಬರೆಯುವುದು ಒಳ್ಳೆಯ ಆಲೋಚನೆ ಅಲ್ಲ. ಯಾಕೆಂದರೆ ಪತ್ರಿಕೆ, ಬ್ಲಾಗುಗಳ ಓದುಗರು ಎಲ್ಲರೂ ಇಂಥ ಅಭಿರುಚಿಯನ್ನು ಒಪ್ಪುವವರಲ್ಲ.

ಭಟ್ಟರು ಈ ಕುರಿತು ಸೀರಿಯಸ್ಸಾಗಿ ಯೋಚಿಸುವರೇ?

20 comments:

  1. Even I felt very bad, when I saw this article in KP.

    Bhattara modala ankana (06th March) in KP is not that interesting..

    I'm eagerly waiting for his 'Noorentu Maatu'

    ReplyDelete
  2. Sometimes immature blabbers pass as expressions of creativity. When has he written something interesting except one column on why Indians are bad in public space?

    ReplyDelete
  3. ಇದು ಸರಿಯಲ್ಲ. ಭಟ್ಟರು ಸರಿಪಡಿಸಬೇಕು. ಸೃಜನಶೀಲತೆ ಅವಹೇಳನದ ಮಟ್ಟಿಗೆ ಜಾರಬಾರದು. ಸಂಪಾದಕೀಯಕ್ಕೆ ಧನ್ಯವಾದ!!

    ReplyDelete
  4. Bhattaranna echharisiddhakke thanks. Janapriyavaago aaturadhalli kapra moulyagalanna kaledhu kolladhirali

    ReplyDelete
  5. <<<<>>>>>>
    ಅಯ್ಯೊ ದೊರೆಯೆ, ಅದೇನು ಇಂಗ್ಲೀಷೊ ಅದೇನು ಕಥೆಯೊ ಬರಿಯೋದು ಬರೀತೀರ ತಾಳ್ಮೆಯಿಂದ ಕನ್ನಡದಲ್ಲಿ ಉತ್ತರ ಕೊಡೊಕಾಗಲ್ವ!.
    ವಿಶ್ವ.ಅರ್.

    ReplyDelete
  6. I don't think usage of such language is wrong in Daily paper...more over that is not a gossip news as the paper says...


    I do not know why u people unnecessary find fault in such silly issues... I do not think this will effect neither VB image nor KP...

    just chill!

    ReplyDelete
  7. bhattara creativity 'ge' yenagide.. vk yalli bareyuttidda column anne column hesaru badalisi kp yalli bareyuttiddare.. adu kooda intersting aagi illa.. sarakugalella mugiyite..?
    haage vk ya "sahaja" kp yalli mattondu hesaralli pratyakshavagiddale.. aa lekhana kooda chennagillaa...
    bhatre yake heege..? hogalu battarugala maatu nambi bhatre neevu halagabedi.. originality irali.. yenteeraa..?

    ReplyDelete
  8. ಛೇ ... ಅಸಹ್ಯಕರ ಮತ್ತು ಅಶ್ಲೀಲ ಪದಗಳು ಒಂದು ಸುಸಂಸ್ಕೃತ ಪತ್ರಿಕೆಗೆ ಎಂದೂ ಶೋಭೆ ತರಲಾರವು. ಕ.ಪ್ರ. ಇನ್ನಾದರೂ ಇಂತಹ ಶೀರ್ಷಿಕೆ ಮತ್ತು ಲೇಖನಗಳು ಪ್ರಕಟವಾಗದಂತೆ ಎಚ್ಚರಿಕೆ ವಹಿಸಬೇಕಿದೆ .

    ReplyDelete
  9. ಸಾರ್ ಸಂಪಾದಕೀಯ ದವರೆ,
    ನೀವು ಹೀಗೆಲ್ಲ ಭಟ್ಟ ರ ತಪ್ಪು ಗಳನ್ನು ಎತ್ತಿ ತೋರಿಸಿದರೆ ಹಸುಮನದ ಮಾನ್ಯರಿಗೆ ಬೇಸರ ವಾಗುತ್ತೆ. ಇದರ ಮೇಲೆ ಬ್ಲಾಗ್ ಅಥವ ಒಂದು ಕವನವನ್ನು ಬರೀಬಹುದು. ಎಚ್ಚರ. ಸಾಮನ್ಯ ಬ್ಲಾಗಿಗ ಬರೆದರೆ, ಏನು ಬ್ಲಾಗ್ ಬರೀತಾರಪ್ಪ ಮುಂದಿನ ಪೀಳಿಗೆ ನಮ್ಮಿಂದ ಏನು ಕಲಿತುಕೊ ಬಹುದು ಯೋಚನೆ ಮಾಡಿ ಅಂತಾರೆ, ಆದರೆ ಭಟ್ಟರು ಬರೆದರೆ ಗಪ್ ಚುಪ್. ಎಲ್ಲ ಕಲಿಕಾಲ.
    -ಸುಂದರ್

    ReplyDelete
  10. ಬೊಳ೦ಬು ಅವರೇ

    ಹಾಗದರೆ ಸುಸ೦sಕೃತ ರೀತಿಯಲ್ಲಿ ಬರೆಯುವುದು ಬೇಡ ಹೀಗೇ ಕೆಳಮಟ್ಟದಲ್ಲಿ ಬರೆಯುತ್ತಿರಲಿ ಅ೦ತ ನಿಮ್ಮ ಅನ್ನಿಸಿಕೆಯೇ


    ಇನ್ನೊ೦ದು ಪ್ರತಿಕ್ರಿಯೆಯಲ್ಲಿ "ಕ್ರಿಕೆಟಿಗನ ಬಗ್ಗೆ ಬರೆದದ್ದು ನಿಜ ವಿಷಯ. ಇದು ಗಾಸಿಪ್ ಅಲ್ಲ. ಸ೦ಪಾದಕೀಯ ಹುಳುಕು ಹುಡುಕುತ್ತದೆ" ಅ೦ತ ತೀರ್ಪು ಕೊಡಲಾಗಿದೆ. ಕ್ರಿಕೆಟಿಗನ ವಿಚಾರ ಬಿಟ್ಟು ಬಿಡಿ. ಅವರ ಬ್ಲಾಗ್ ನಲ್ಲಿ ಬರೆದದನ್ನು ನೋಡಿದ ನ೦ತರವೂ ನಿಮಗೆ ಭಟ್ಟರ (ಅಥವಾ ಹಾಗೆ ಬರೆಯುವ ಯಾರೇ ಆದರೂ ಅವರ) ಮಟ್ಟ ಎ೦ತದ್ದು ಅ೦ತ ತಿಳಿಯದೇ ಹೊಗಿದ್ದು ವಿಷಾದಕರ.

    ReplyDelete
  11. What is new in it? It has been his brand of journalism always, I thought. Sampaadakeeya seems to be opening its eyes only now!!

    ReplyDelete
  12. I don y people always searchin to degrade VB or KP or Pratap..!!? Don they have good qualities? Even they wrote, writing n will write good columns every day. Y cant u people highlight those things..!!?

    ReplyDelete
  13. ಸೆಕ್ಸ್ ಬಗ್ಗೆ ನಮ್ಮಲ್ಲಿ ಬರೆದರೆ ಅದು ಥರ್ಡ್ ಕ್ಲಾಸ್ ಪೇಪರ್ ಅನ್ನೋ ಮಾತಿತ್ತು
    ಆದರೆ ಸೆಕ್ಸ್ ಅನ್ಣೊಂದು ಒಂದು ಸೈನ್ಸ್ ಅನ್ನೋದು ಭಟ್ಟರ ವಾದ
    ಪ್ರತಾಪ್ ಸಿಂಹ ಅವರು ಸೆಕ್ಸ್ ಬಗ್ಗೆ ಒಂದು ಅಂಕಣ ಬರೆದಿದ್ರೂ , ಇದೆ ಲಲ್ಲವಿಕೆ ಯಲ್ಲಿ ಬ್ರಾ ಬಗ್ಗೆ ಅದರ ಉಪಯೋಗಗಳ ಬಗ್ಗೆ ಬರೆದಿದ್ರೂ
    ಅದನ್ನ ಮೆಚ್ಚಿ ನಟಿ ತಾರಾ ಅವರು ಚೆನ್ನಾಗಿದೆ ಅಂತ ಪ್ರತಿಕ್ರಯಿಸಿದ್ರು.

    ಹಾಗೆ ಇಲ್ಲಿ ಇಂಗ್ಲೆಂಡ್ ಆಟಗಾರನ ಹೇಳಿಕೆಯನ್ನು ಯತವತ್ತಾಗಿ ಬರೆದಿದ್ದಾರೆ . ಆದ್ರೆ ಇದು ಕಾಮಾ ಉತ್ತೇಜಿಸುವಂತ ಅಂಕಣ ಅಲ್ಲ ಅಲ್ಲವೇ??

    ಕಾಮ ಉತ್ತೇಜಿಸುವಂತ ಯಾವುದೇ ರೀತಿಯಲ್ಲೂ ಬರೆದರೆ ಅದು ತಪ್ಪು ಅದನ್ನ ನೀವು ಕೀಳು ಮಟ್ಟದ್ದು ಅಂತ ಹೇಳಬಹುದು

    ಅದುಬಿಟ್ಟು ಸೆಕ್ಸ್ ಅಂದರೆ ಚೀಪ್ ಅಂತ ಹೇಳೋದು ಮೌಡ್ಯದ ಪರಮಾವಧಿ ಅಲ್ಲವೇ???

    ReplyDelete
  14. ಭಟ್ಟರು ಬರೆದದ್ದು ಸರಿ ಇದೆ. ಸಂಪಾದಕೀಯಕ್ಕೆ ಧಿಕ್ಕಾರ!!!!!

    ReplyDelete
  15. The storyt itself is scrap.
    We need to advice VB to watch cricket with open eyes to see how and where batsmen stands and where wicket keeper stands/sits. Forget his Ass even he cant cover the wicket with his bat also.

    And If anybody have litle knowledge of cricket can say the job of an wicket keeper.
    Imagine he has to concentrate on the bowl that is coming at more than 100 km per hour and he has to catch it the moment batsmen miss the bowl, else he will give a free four run to batsmen team!

    In such a case can wicket keeper thinks other than catching the bowl??

    ReplyDelete
  16. ಪ್ರದೀಪ್ ರವರೇ.., ಸಂಪಾದಕೀಯ ಸೆಕ್ಸನ್ನು ಚೀಪ್ ಎಂದು ಎಲ್ಲಿಯೂ ಹೇಳಿಲ್ಲ.. ಆದರೆ ಸಲಿಂಗ ಕಾಮ ವಿಕೃತ ಕಾಮದ ಕೆಟಗರಿಗೆ ಸೇರುತ್ತದೆಯೇ ಹೊರತು ಅದು ಸಹಜ ಲೈಂಗಿಕತೆಯಲ್ಲ.. ಅಂತಹ ಅಸಹಜ ಲೈಂಗಿಕ ವಿಕೃತಿಯ ಬಗ್ಗೆ ಬರೆಯುವ ಜರೂರತ್ತಾದರೂ ಏನಿತ್ತು ಎಂಬುದಷ್ಟೆ ಇಲ್ಲಿಯ ಪ್ರಶ್ನೆ.. ಭಟ್ಟರು ತಮ್ಮ ಸೋಕಾಲ್ಡ್ ಕ್ರಿಯೇಟಿವಿಟಿಯನ್ನು ಸೆಕ್ಸೆಂಬ ಸೈನ್ಸಿನ ಬಗ್ಗೆ ಬರೆದರೆ ಕೇಳುವರಾರಿದ್ದಾರೆ..

    ReplyDelete
  17. ಇಷ್ಟು ದಿನ ಸಂಪಾದಕೀಯವನ್ನು ಪ್ರಜಾ ವಾಣಿ ವಿರೋದಿ ಮತ್ತು ಕನ್ನಡ ಪ್ರಭ ಪರ ಎಂದು ತಿಳಿದಿದ್ದೆ... ಇಂದು ಯಾಕೋ ಆ ಅಭಿಪ್ರಾಯ ಸುಳ್ಳು ಎಂದೆನಿಸಿತು...
    ಪತ್ರಿಕೋದ್ಯಮದ ತಪ್ಪುಗಳನ್ನು ಎತ್ತಿ ತೋರಿಸಿ ಅವರ ತಿದ್ದುವಿಕೆಗೆ ಸಹಕರಿಸುವ ಕೆಲಸ ಸಾಗುತ್ತಿರಲಿ. ಇತ್ತೀಜೆಗೆ ಕನ್ನಡ ಪ್ರಭ ಮತ್ತು ಪ್ರಜಾವಾಣಿ ಪತ್ರಿಕೆಗಳು ಆರ್ ಎಸ್ಸೆಸ್ ಪರವಾಗಿ ನಿಲುವು ತೋರುವ ಪತ್ರಿಕೆಗಳು ಎಂದು ಅನ್ನಿಸುತ್ತಿವೆ. ಸಂಶಯವಿದ್ದರೆ ಇವೆರಡೂ ಪತ್ರಿಕೆಗಳನ್ನು ಕೂಲಂಕುಷವಾಗಿ ನೋಡಿ. ನಿಮ್ಮಿಂದ ಕನ್ನಡ ಪತ್ರಿಕೆಗಳು ಏಳಿಗೆಯಾಗುವುದಾದರೆ ಆಗಲಿ.

    ReplyDelete
  18. ಪ್ರಿಯರೆ...........
    ನಾವು ಮಾಡೋದನ್ನು ಬೇರೆಯವರು ಹೇಳಿದರೆ ಅದು ಅಶ್ಲೀಲ...........!!!????

    ReplyDelete
  19. ಕಪ್ರ ದಲ್ಲೇ ಹಾಕಿದ್ದಾರಲ್ಲಾ.. 'ನೋಡ್ತಿರಿ ಏನೇನ್ ಮಾಡ್ತಿವಿ.. ' ಅಂತ... ಇನ್ನು ಇವರು ಎಷ್ಟು ಜನರ ತಲೆಗೆ ಚಡ್ಡಿ ತೊಡಿಸ್ತರೋ..?

    ReplyDelete