ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ. ನಿರೀಕ್ಷೆಯಂತೆ ಮಾಧ್ಯಮಗಳ ಕುರಿತೂ ಒಂದು ಗೋಷ್ಠಿ ಏರ್ಪಾಡಾಗಿದೆ. ಗೋಷ್ಠಿ ನಡೆಯುತ್ತಿರುವುದು ೧೨ರಂದು ಗಾಂಧಿಭವನದಲ್ಲಿ ಮಧ್ಯಾಹ್ನ ೨-೩೦ಕ್ಕೆ. ಸಮೂಹ ಮಾಧ್ಯಮ: ಸಾಮಾಜಿಕ ಕಾಳಜಿ ಎಂಬುದು ಗೋಷ್ಠಿಯ ವಿಷಯ. ಗೋಷ್ಠಿಯಲ್ಲಿ ಕನ್ನಡ ಮಾಧ್ಯಮಗಳ ಘಟನಾನುಘಟಿಗಳೇ ಭಾಗವಹಿಸುತ್ತಿದ್ದಾರೆ. ಒಂದೊಳ್ಳೆಯ ಚರ್ಚೆಯನ್ನು ನಿರೀಕ್ಷಿಸಬಹುದಾಗಿದೆ.
ಸದ್ಯದ ಸನ್ನಿವೇಶದಲ್ಲಿ ಮಾಧ್ಯಮಗಳ ಸಾಮಾಜಿಕ ಕಾಳಜಿ ಕುರಿತು ಚರ್ಚೆಯಾಗಲೇಬೇಕಾದ ಹಲವಾರು ವಿಷಯಗಳಿವೆ. ಇದು ಭಾಗವಹಿಸುವ ಗಣ್ಯ ಪತ್ರಕರ್ತರಿಗೂ ಗೊತ್ತಿದೆ. ಹಾಗಿದ್ದಾಗ್ಯೂ ಪ್ರಮುಖ ವಿಷಯಗಳು ಮರೆಯಾಗದಿರಲಿ ಎಂಬುದು ನಮ್ಮ ಅಪೇಕ್ಷೆ. ಈ ಹಿನ್ನೆಲೆಯಲ್ಲಿ ಕೆಲವು ಗಂಭೀರ ಅಂಶಗಳ ಕುರಿತು ಕೆಲವು ಟಿಪ್ಪಣಿಗಳನ್ನು ಮಾಡಲು ಪ್ರಯತ್ನಿಸಿದ್ದೇವೆ. ಈ ಕುರಿತು ದಯವಿಟ್ಟು ಚರ್ಚೆ ಮಾಡಿ ಎಂದು ಈ ಎಲ್ಲರಲ್ಲೂ ನಾವು ವಿನಂತಿಸಿಕೊಳ್ಳುತ್ತೇವೆ.
ಅಗ್ಗದ ಜನಪ್ರಿಯತೆಯ ಹಂಗು ಬೇಕೆ?
ಇವತ್ತು ಸುದ್ದಿಯೂ ಕೂಡ ಮಾರಾಟದ ಸರಕು. ಪತ್ರಿಕೆ-ಚಾನಲ್‌ಗಳೂ ಕೂಡ ಅಪ್ಪಟ ಉದ್ಯಮಗಳು. ಹೀಗಾಗಿ ಸಾಮಾಜಿಕ ಕಾಳಜಿ ಹಿನ್ನೆಲೆಗೆ ಸರಿದಿದೆ. ವಿಶೇಷವಾಗಿ ಟೀವಿ ಮಾಧ್ಯಮವಂತೂ ದಾರಿ ತಪ್ಪಿ ನಿಂತಿದೆ. ಯಾವುದು ಟಿಆರ್‌ಪಿ ತಂದುಕೊಡುತ್ತದೋ ಅದಷ್ಟೇ ಸುದ್ದಿ ಎನ್ನುವಂತಾಗಿದೆ. ಇದು ದಿನೇ ದಿನೇ ಅಪಾಯಕಾರಿ ಹಂತ ತಲುಪುತ್ತಿದೆ. ಟಿಆರ್‌ಪಿಯ ಕಾರಣಕ್ಕಾಗಿ ಮನೆಮನೆಯ ಜಗಳ ಟಿವಿ ಪರದೆಗಳ ಮೇಲೆ ಬಂದಿದೆ. ತಪ್ಪು ಮಾಡಿದವರನ್ನು ಸಾರ್ವಜನಿಕವಾಗಿ ಶಿಕ್ಷಿಸುವ ಪರಿಪಾಠ ಟಿವಿಗಳಿಂದಲೇ ಜನಪ್ರಿಯವಾಗಿದೆ. ಸಮೂಹ ಮಾಧ್ಯಮಗಳಿಗೆ ಈ ಜನಪ್ರಿಯತೆಯ ಹಂಗು ಬೇಕೆ?
ಸುದ್ದಿಯಲ್ಲೂ ತಾರತಮ್ಯ ಸರಿಯೇ?
ಒಂದು ಬಡಕುಟುಂಬದ ಹುಡುಗಿ ಅತ್ಯಾಚಾರ, ಕೊಲೆಗೆ ಒಳಗಾದರೆ ಅದು ಎಲ್ಲೋ ಮೂಲೆಯಲ್ಲಿ ಪ್ರಕಟಗೊಂಡು ಮರೆಯಾಗಿಬಿಡುತ್ತದೆ. ಆದರೆ ದೊಡ್ಡ ಕುಟುಂಬದ, ದೊಡ್ಡ ಉದ್ಯೋಗದ, ದೊಡ್ಡ ಸಮಾಜದ ಹೆಣ್ಣುಮಗಳಿಗೆ ಇದೇ ಆದರೆ, ಅದು ವರ್ಷಗಟ್ಟಲೆ ಸುದ್ದಿಯಲ್ಲಿರುತ್ತದೆ. ಈ ತಾರತಮ್ಯ ಏಕೆ? ಜೀವಗಳಿಗೆ ಪತ್ರಕರ್ತರು ಹೀಗೆ ಪ್ರತ್ಯೇಕವಾಗಿ ಬೆಲೆ ಕಟ್ಟುವುದು ಸರಿಯೇ?
ಮಾಧ್ಯಮಸಂಸ್ಥೆಗಳ ಮಾಲಿಕತ್ವ ರಾಜಕಾರಣಿಗಳ ಕೈಗೆ
ಇವತ್ತು ಮಾಧ್ಯಮ ಸಂಸ್ಥೆಗಳ ಮಾಲಿಕತ್ವವನ್ನು ಪಡೆಯುವುದರತ್ತ ರಾಜಕಾರಣಿಗಳು ಚಿತ್ತ ಹರಿಸಿದ್ದಾರೆ. ಈಗಾಗಲೇ ಕರ್ನಾಟಕದ ಕೆಲವು ಮಾಧ್ಯಮಗಳ ರಾಜಕಾರಣಿಗಳ ತೆಕ್ಕೆಗೆ ಬಂದಿವೆ. ಇನ್ನಷ್ಟು ಇದೇ ಹಾದಿಯಲ್ಲಿವೆ. ರಾಜಕಾರಣಿಗಳು ಮಾಧ್ಯಮ ಸಂಸ್ಥೆಗಳನ್ನು ಕೊಂಡುಕೊಳ್ಳುವ ಉದ್ದೇಶ ಬಹಳ ಸ್ಪಷ್ಟವಾಗಿ ಸುದ್ದಿಯ ಮೇಲೆ ನಿಯಂತ್ರಣ ಹೊಂದುವುದು. ಈ ಟ್ರೆಂಡ್ ಹೀಗೇ ಮುಂದುವರೆದರೆ ಅಪಾಯಕಾರಿಯಾದ ಸನ್ನಿವೇಶ ಸೃಷ್ಟಿಯಾಗಿ, ಪತ್ರಕರ್ತರು ನೇರವಾಗಿ ರಾಜಕಾರಣಿಗಳ ಪರಿಚಾರಕರಾಗಬೇಕಾಗುತ್ತದೆ. ಇದು ಬೇಕೆ?
ಸುದ್ದಿಗಾಗಿ ಕಾಸು, ಎಷ್ಟು ನೈತಿಕ?
ಕಾಸಿಗಾಗಿ ಸುದ್ದಿ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ಕನ್ನಡದ ಬಹುತೇಕ ಪತ್ರಿಕೆಗಳು ಕಾಸಿಗಾಗಿ ಸುದ್ದಿಯನ್ನು ಪ್ರಕಟಿಸುತ್ತಿವೆ. ಮಾಧ್ಯಮರಂಗದ ಅಂತಃಸತ್ವವನ್ನೇ ಇದು ಹಾಳುಗೆಡವಿದೆ. ಜಾಹೀರಾತುದಾರರೂ ಸಹ ಇಂದು ಸುದ್ದಿಯಲ್ಲೂ ಫೇವರ್ ಬಯಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಕಾಸಿಗಾಗಿ ಸುದ್ದಿ ಕುರಿತು ಕುರಿತು ಕನ್ನಡ ಮಾಧ್ಯಮ ರಂಗ ತನ್ನ ಸ್ಪಷ್ಟ ನಿಲುವನ್ನು ಪ್ರಕಟಪಡಿಸಬೇಕಲ್ಲವೇ?
ಮೀಡಿಯಾ ಕಚೇರಿಗಳಲ್ಲೂ ಸಾಮಾಜಿಕ ನ್ಯಾಯ ಬೇಡವೇ?
ಮೀಡಿಯಾ ಕಚೇರಿಗಳಲ್ಲಿ ಜಾತೀಯತೆ ತಾಂಡವವಾಡುತ್ತಿದೆ. ಬಹಳಷ್ಟು ಸಮುದಾಯಗಳಿಗೆ ಇಲ್ಲಿ ಪ್ರಾತಿನಿಧ್ಯವೇ ಇಲ್ಲ. ಸಣ್ಣಪುಟ್ಟ ಸಮುದಾಯಗಳಂತೂ ಕಾಣಿಸಿಕೊಳ್ಳುವುದೇ ಇಲ್ಲ. ಎಲ್ಲ ಸಮುದಾಯಗಳ ಪಾಲ್ಗೊಳ್ಳುವಿಕೆ ಇಲ್ಲದೇ ಹೋದರೆ ಮೀಡಿಯಾಗಳು ಪರಿಪೂರ್ಣವಾಗಿ ಸಮಾಜವನ್ನು ಧ್ವನಿಸಲು ಸಾಧ್ಯವೇ? ಮೀಡಿಯಾ ಕಚೇರಿಗಳಲ್ಲೂ ಸಾಮಾಜಿಕ ನ್ಯಾಯ ಬೇಡವೇ?
ನೊಂದ ಹೆಣ್ಣುಮಕ್ಕಳ ಹೆಸರು, ಫೋಟೋ ಪ್ರಕಟಿಸುವುದು ಸರಿಯೇ?
ಅತ್ಯಾಚಾರ, ಲೈಂಗಿಕ ಕಿರುಕುಳದಂಥ ಹಿಂಸೆಯನ್ನು ಅನುಭವಿಸಿದ ಹೆಣ್ಣುಮಕ್ಕಳ ಹೆಸರನ್ನು ಬರೆಯಬಾರದು ಎಂಬುದು ಪತ್ರಕರ್ತರು ಪಾಲಿಸಿಕೊಂಡು ಬಂದ ನೈತಿಕ ನಡಾವಳಿ. ಪ್ರೆಸ್‌ಕೌನ್ಸಿಲ್‌ನಂಥ ಸಂಸ್ಥೆಗಳು ಸಹ ಈ ವಿಷಯದಲ್ಲಿ ಹಲವು ಬಾರಿ ಮಾರ್ಗದರ್ಶನ ಮಾಡಿವೆ. ಆದರೆ ಇತ್ತೀಚಿಗೆ ಈ ಪರಿಪಾಠವನ್ನು ಗಾಳಿಗೆ ತೂರಲಾಗಿದೆ. ಟಿವಿ ಮಾಧ್ಯಮಗಳಂತೂ ನೊಂದ ಮಹಿಳೆಯ ಮುಖವನ್ನು ಮಾಸ್ಕ್ ಕೂಡ ಮಾಡದೆ ಆಕೆಯ ಭವಿಷ್ಯವನ್ನು ಹಾಳುಗೆಡವುತ್ತಿವೆ. ಇದು ಸರಿಯೇ?
ಕೋಮುವಾದದ ವಿಷಪ್ರಾಶನ ಬೇಕೆ?
ಕೆಲವು ಪತ್ರಿಕೆಗಳು ಇತ್ತೀಚಿನ ದಿನಗಳಲ್ಲಿ ಕೋಮುವಿಷವನ್ನು ಉಣಬಡಿಸುವ ಲೇಖನ, ಅಂಕಣಗಳನ್ನು ಮೇಲಿಂದ ಮೇಲೆ ಪ್ರಕಟಿಸಿ, ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡವುತ್ತಿವೆ. ಇದು ಅವುಗಳಿಗೆ ಅಗ್ಗದ ಜನಪ್ರಿಯತೆಯನ್ನೂ ತಂದುಕೊಡುತ್ತಿದೆ. ಕೆಲವು ಪತ್ರಿಕೆಗಳಂತೂ ಬುದ್ಧಿಜೀವಿ, ಸಾಹಿತಿ, ಜಾತ್ಯತೀತ ಮತ್ತಿತರ ಶಬ್ದಗಳಿಗೆ ಕಳಂಕ ಹಚ್ಚುವ ಯತ್ನ ನಡೆಸುತ್ತಿವೆ. ಕನ್ನಡದ ಪ್ರಮುಖ ಪತ್ರಿಕೆಯೊಂದು ಪ್ರಕಟಿಸಿದ ಲೇಖನವೊಂದರಿಂದಾಗಿ ಕೋಮು ದಳ್ಳುರಿ ಹತ್ತುರಿದು, ಇಬ್ಬರ ಸಾವಿಗೂ ಕಾರಣವಾಗಿತ್ತು. ಪತ್ರಕರ್ತರಿಗೆ ಒಂದು ನೀತಿಸಂಹಿತೆ ಬೇಡವೇ?
ಪ್ರಶಸ್ತಿ, ಕೆಟಗರಿ ಸೈಟಿನ ಹುಚ್ಚು ಬಿಡಿಸಬೇಡವೇ?
ಪತ್ರಕರ್ತರನ್ನು ತಮ್ಮ ಕೈವಶ ಮಾಡಿಕೊಳ್ಳಲೆಂದೇ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ, ಜಿ ಕೆಟಗರಿ ಬಿಡಿಎ ಸೈಟು ಇತ್ಯಾದಿಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ. ಕೆಲವು ಪತ್ರಕರ್ತರಿಗಂತೂ ಬಿಡಿಎ ಸೈಟು ಗಳಿಸುವುದೇ ಜೀವಮಾನದ ದೊಡ್ಡ ಗುರಿಯೆನ್ನಿಸಿದೆ. ಕೆಲವರು ಜಾಣತನದಿಂದ ತಂದೆ, ತಾಯಿ, ಪತ್ನಿ, ಸಹೋದರ ಹೀಗೆ ಬೇರೆಯವರ ಹೆಸರಲ್ಲಿ ಸೈಟು ಗಿಟ್ಟಿಸುತ್ತಿದ್ದಾರೆ. ಸಾಕಷ್ಟು ಮಂದಿ ಸುಳ್ಳು ಅಫಿಡೆವಿಟ್ ಕೊಟ್ಟು ಸಿಕ್ಕಿ ಬಿದ್ದಿದ್ದಾರೆ. ಈ ಅನೈತಿಕ ದಂಧೆಯನ್ನು ತಡೆಗಟ್ಟುವುದು ಹೇಗೆ?
ಮಾಧ್ಯಮರಂಗದ ಭ್ರಷ್ಟಾಚಾರಕ್ಕೆ ಮದ್ದು ಎಲ್ಲಿ?
ಮಾಧ್ಯಮರಂಗದಲ್ಲಿ ಭ್ರಷ್ಟಾಚಾರವಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿರುವ ವಿಷಯ. ಪತ್ರಕರ್ತರ ಭ್ರಷ್ಟಾಚಾರದ ಕುರಿತು ಲೋಕಾಯುಕ್ತರಿಗೆ ದೂರು ಹೋಗುವಷ್ಟು ಇದು ಬೆಳೆದು ನಿಂತಿದೆ. ನೈತಿಕ ಪೊಲೀಸುಗಿರಿ ಮಾಡುವ ಪತ್ರಕರ್ತರು ಭ್ರಷ್ಟಾಚಾರದಿಂದ ಮುಕ್ತರಾಗಿರಬೇಕು ಎಂದು ಸಮಾಜ ಬಯಸುತ್ತದೆ. ಮಾಧ್ಯಮರಂಗದ ಭ್ರಷ್ಟಾಚಾರಕ್ಕೆ ಮದ್ದು ಎಲ್ಲಿ?
ಇವೆಲ್ಲವೂ ನಮಗೆ ಈ ಕ್ಷಣಕ್ಕೆ ತೋಚಿದ್ದು. ನಿಮಗನ್ನಿಸಿದ್ದನ್ನೂ ಹೇಳಿ. ವಿಶ್ವಕನ್ನಡ ಸಮ್ಮೇಳನದ ಮಾಧ್ಯಮಗೋಷ್ಠಿ ಯಶಸ್ವಿಯಾಗಲಿ, ಅದು ಮಾಧ್ಯಮರಂಗಕ್ಕೆ ಒಂದು ಹೊಸದಿಕ್ಕನ್ನು ತೋರಿಸುವಂತಾಗಲಿ.
Matters dealt in here need to be seriusly considered if the 4th estate wants to keep up its credibility or what is left of it after Radia tape revealations
ReplyDeleteಸಂಪಾದಕೀಯದ ಪ್ರಸ್ತಾವನೆ ಸರಿಯಾಗಿದೆ.., ಇಂತಹ ವಿಚಾರಗಳು ಪ್ರತೀ ವರ್ಷ ನಡೆಯುವ ಕಾರ್ಯನಿರತ ಪತ್ರಕರ್ತರ ವಿಚಾರ ಸಂಕೀರ್ಣಗಳಲ್ಲಿ ಹಾಗೂ ಪತ್ರಕರ್ತರ ಸಮಾವೇಶಗಳಲ್ಲಿ ಚರ್ಚೆಯಾಗಬೇಕೆಂದು ಬಯಸುವವರಲ್ಲಿ ನಾನೂ ಒಬ್ಬ,ಅದರೆ ಅಲ್ಲಿ ಅದಕ್ಕೆ ಬದಲಾಗಿ ಬೇರೆಯದೇ ವಿಚಾರಗಳು ಚರ್ಚೆಗೆ ಬರುತ್ತವೆ. ಅತಿಥಿಗಳಾಗಿ ಭಾಗವಹಿಸುವವರು ಪುಕ್ಕಟ್ಟೆ ಸಲಹೆಗಳನ್ನು ಕೊಟ್ಟು ತೆರಳುತ್ತಾರೆ ಗಂಭೀರವಾಗಿ ವಿಚಾರ ಮಂಥನಗಳು ನಡೆಯುವುದಿಲ್ಲ ಇದು ಮಾಧ್ಯಮ ಲೋಕದ ದುರಂತವೇ ಸರಿ. ವಿಶ್ವ ಕನ್ನಡ ಸಮ್ಮೇಳನದಲ್ಲಿ ಮಾಧ್ಯಮದ ಕುರಿತ ಚರ್ಚೆ ಬಂದಾಗ ಸಂಪಾದಕೀಯದ ಪ್ರಸ್ತಾವನೆಗಳು ಹೆಚ್ಚು ಪ್ರಸ್ತುತವೆನಿಸುತ್ತವೆ... ಕಾದು ನೋಡೋಣ
ReplyDeletekevala charche aadare saake..?
ReplyDeleteidanna doddadagi print maadisi ella patrikaa kacheriyalli flex madisi haakisa beku... atyuttama prashnegalu...
ReplyDeleteಇಲ್ಲಿ ನೀವು ಎತ್ತಿರುವ ಪ್ರಶ್ನೆಗಳು ನೂರಕ್ಕೆ ನೂರರಷ್ಟು ಪ್ರಸ್ತುತವೇನೋ ಹೌದು. ಆದ್ರೆ ನಮ್ಮ ಸಂಸತ್ತಿನಲ್ಲಿ ನಡೆಯೋ ಚರ್ಚೆಗಳೇ ಒಂದು ತಾರ್ಕಿಕ ಅಂತ್ಯ ಕಾಣುವುದಿಲ್ಲ. ಹಾಗಿರುವಾಗ ಸಮ್ಮೇಳನದಲ್ಲಿ ನಡೆಯೋ ಚರ್ಚೆಗಳಿಂದ ಏನಾದ್ರೂ ಉಪಯೋಗವಾಗುವುದು ಸಾಧ್ಯವೇ ಇಲ್ಲ ಅನ್ನಿಸುತ್ತದೆ. ಇನ್ನು ರಾಜಕಾರಣಿಗಳು ಮಾಧ್ಯಮಗಳ ಮೇಲೆ ಹಿಡಿತ ಸಾಧಿಸುವ ವಿಷಯವನ್ನ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮಾಲೀಕ ಯಾರಾದರೇನು ನಮಗೆ ಸಂಬಳ ಸಿಕ್ರೆ ಸಾಕಪ್ಪ ಅನ್ನುವಲ್ಲಿಗೆ ಪತ್ರಕರ್ತರ ಮನಸ್ಥಿತಿ ಬಂದು ತಲುಪಿದೆ. ಅದು ಹೊಟ್ಟೆಪಾಡಿನ ಅನಿವಾರ್ಯತೆ. ಎನಿವೇಸ್... ನಿಮ್ಮ ಸಲಹೆಗಳನ್ನ ಯಾರಾದ್ರೂ ಚರ್ಚೆಗೆ ಎತ್ತಿಕೊಳ್ತಾರಾ ಕಾದು ನೋಡೋಣ
ReplyDeleteidu kevala drushya madyama mattu mudrana madyamakke matra seemitave?
ReplyDeletekannada portals hagu blagigarige idu anvayisuvudillave?
kelavondu blagigaru samanateya hesarinalli ondu dharmadavaranne target maduttiruvarege anvayisuvudillave??
ಆ ಗೋಷ್ಠಿ ಉಳಿದೆಲ್ಲ ಗೋಷ್ಠಿಗಳಿಗಿಂತ ಭಿನ್ನವಾಗಬೆಕು. ಚರಿತ್ರೆಯಾಗಬೇಕು.ಆ ಗಂಡೆದೆ ಆ ಗೋಷ್ಠಿಯಲ್ಲಿ ಭಾಗವಹಿಸುವವರಲ್ಲಿ ಎಷ್ಟು ಜನರಲ್ಲಿದೆ ಎಂಬುದು ನನ್ನ ಕುತೂಹಲ.
ReplyDeleteನೀವು ಪ್ರಾಮಾಣಿಕವಾಗಿ ಈ ವಿಷಯದ ಬಗ್ಗೆ ಚರ್ಚೆ ನಡೆಯುತ್ತದೆ ಅನ್ನುವ ವಿಶ್ವಾಸದಿಂದ ಕೆಲವು ಸಲಹೆ ನೀಡಿದ್ದೇರಿ.ನಿಮ್ಮ ವಿಶ್ವಾಸಕ್ಕೆ ನನಗಂತೂ ಅಚ್ಚರಿಯಾಗಿದೆ.ಏಕೆಂದರೆ ಯಾವ ಪತ್ರಕರ್ತ ಇಂದು ಹೆಚ್ಚು ಹಣ ಮಾಡುವ ಸಾಮರ್ಥ್ಯ ಹೊಂದಿದ್ದಾನೋ ಅವರನ್ನೇ ಆಯ್ಕೆ ಮಾಡಿ ಪ್ರಮುಖ ಪತ್ರಿಕೆ ಅಥವಾ channel ಗಳ ಪ್ರಮುಖರನ್ನಾಗಿ ನೇಮಿಸಲಾಗುತ್ತಿದೆ. ಪತ್ರಕರ್ತರು ಎಷ್ಟು ಹಣ ಮಾಡಿದರೂ ಅಡ್ಡಿಲ್ಲ, ರಾಜಕಾರಣಿಗಳು ಮಾತ್ರ ಶುದ್ಧ ಇರಬೇಕು ಅಂತ ಹೇಳುವವರೇ ಇಂದು ಕನ್ನಡ ಮಾಧ್ಯಮ ಜಗತ್ತನ್ನು ಮಾಫಿಯಾಗಳಂತೆ ಹಿಡಿದಿಟ್ಟಿದ್ದಾರೆ .ಹಾಗಾಗಿ ನೀವು ಈಗ ಪ್ರಸ್ತಾಪಿಸಿರುವ ವಿಷಯಗಳು ಕನ್ನಡ ಸಮ್ಮೇಳನದಲ್ಲಿ ಚರ್ಚೆಯಾಗುತ್ತದೆ ಅಂತ ಹೇಳುವ ವಿಶ್ವಾಸ ಯಾರಿಗೂ ಇಲ್ಲ.
ReplyDeleteif they wish some more topics can be discussed..like
ReplyDelete1 Why every media(esp. electronic medias) should be stereotyped in its programme? why they can t think something different? why don t they introduce some new angle to their expression?
2 Why there is no scope for international news in our state news channels? our journalists are not capable of handling international news? are they not aware of international political crisis,wars, revolutions, etc? why our audience are kept away from world news?
3 Why there is no news on weather anywhere at all!? why these kannada news channels are ignoring weather news? it may be local weather news or world weather news. our journalist are not interested in weather news? or do you think it is not a news at all? if you give weather news , it may help our formers a lot. you should discuss wind, rain, cyclone, M
ansoon etc. Are you not capable? bring experts.
4 Why there is no news on stock market? about its ups and downs , its economics? do you think it is not a news at all? or are you not capable of handling economics?
5 Journalism is a area of wide range. It should involve all kind of news. but unfortunately today journalists are concentrating only on local political issues, or film based news, or some unworthy social issues, crime news,religious news, astrology, etc.(it is applies very well to kannada news channels)
6 Journalism is not only a business of writing articles in your favorite subjects. If you people are not good enough to handle science subjects you should conduct a programme from the person of that specific area. But unfortunately you people are ignoring other fields in which you are not interested in or not capable in handling. Absence of stock market news and its analysis is best eg for this attitude of yours.
6 change your mindset , bring experts, be open.
journalism and media is not only a arts subject but it is also a science, economics.
good questions and its are very important for our good society.
ReplyDeleteAmazing! above mentioned 6 points are really true! What the hell is going on around us?! whom we call journalists today are not a journalists at all. either they are writers, or poets, or simple B A or B sc degree holders! And what they givings us is their "crisis of their mind!"- their views, their opinions..their perceptions..! and this cannot not be called as NEWS!
ReplyDeleteIt has become like this, "What they feed us that is food!" Because they cannot handle science, Mathematics, economics, and weather strategies..! Because of this, our people or you can say our society deprived of worldly knowledge. This is really pathetic. this is their social concern.. !
Hello Journalists,
ReplyDeleteIf you bring experts , then appoint them as also a journalists(of specific area) This is how most of our international news channels work and elaborate their capability. Be positive, Be open .
Every man has limitations, but your limitations should not become obstacles for us or for society.
ಇಲ್ಲಿ ಕೆಲವರು ಚರ್ಚೆಯಿಂದ ಸಮಸ್ಯೆ ಬಗೆಹರಿಯುತ್ತದೆಯೇ ಎಂಬ ಪ್ರಶ್ನೆ ಎತ್ತಿದ್ದಾರೆ.., ಇದು ಸಮಂಜಸವೂ ಹೌದು ಆದರೆ ಪ್ರಶ್ನೆಗಳು ಬಂದರೆ, ವಿಚಾರಗಳು ಚರ್ಚೆಯಾದರೆ ಅದಕ್ಕೊಂದು ರೂಪ ಕೊಡುವ ಪ್ರಯತ್ನಗಳು ಆಗಬಹುದೇನೋ ಎನ್ನುವ ದೂರಾಲೋಚನೆಯಷ್ಟೇ.., ಪತ್ರಕರ್ತರದ್ದು ಒಂದು ಅಸಂಘಟಿತ ವಲಯ ಬೆರಳೇಣಿಕೆಯಷ್ಟು ಮಂದಿ 'ಪ್ರಭಾವಿಗಳು'ಹೊರತು ಪಡಿಸಿ ಉಳಿದವರದ್ದೆಲ್ಲ ನಮಗೇಕಪ್ಪಾ ಬೇಕು ಈ ಉಸಾಬರಿ ಎನ್ನುವಂತಿರುತ್ತಾರೆ. ಹಾಗಾಗಿ ಇವತ್ತಿಗೂ ಪತ್ರಕರ್ತರ ಯಾವ ಹಕ್ಕೊತ್ತಾಯಗಳು ಕಾಣಬರುತ್ತಿಲ್ಲ ಇದು ದುರಂತವಲ್ಲದೇ ಮತ್ತೇನು? ಧ್ವನಿಯೆತ್ತಿದರೆ, ಪ್ರಶ್ನೆಗಳನ್ನೆತ್ತಿದರೇ ಕೆಲಸಕ್ಕೆ ಸಂಚಾಕಾರ ಎಂಬ ಧೋರಣೆಗೆ ಬಂಡವಾಳ ಶಾಹಿಯ ಹೆದರಿಕೆಯಲ್ಲದೇ ಮತ್ತೇನು?
ReplyDeleteJust check once who are in discussion panel.
ReplyDeleteThey are all based at Bangalore. Did anybody from Hubli, Mangalore or Mysore not there to present their thought?
Media means Bangalore?
Alla swamy, monne thaane bengalurinalli kannada sahithya sammelana nadedu, sahasraary kannadaabhimaanigalu palgondu bhaasheya bagge charchisalillave....? Haagadre eega nadediruvudu karnatakada horagina kannadigarige antha thaane...? Adara badalu ka.sa.pa jothegoodi arthapurnavaagi onde sammelana maadidre saakallve....!belagaviyalli samagra charche ada maathrakke sarakara ella nirnayagalannu jaarige thandubiduthadeye....? Ella bogus, prachaarakkaagi swamy. kevala bengalurinavarige agra thaamboola dorethiddu, kela kshetra(journalism)gala kelavarannu goshtigalige ahwanisiddaare, yaava nyaya swamy idu. bere ganyaru ivarige kaanalilllave...?
ReplyDelete