Monday, March 14, 2011

ಏನೇನೂ ಮಾಡೋದು ಬೇಡ, ಕನಿಷ್ಠ ಓದುಗರಿಗೆ ಉತ್ತರದಾಯಿಗಳಾಗಿ...


ನೋಡ್ತಾ ಇರಿ, ಏನೇನ್ ಮಾಡ್ತೀವಿ ಅಂತಿದೆ ಕನ್ನಡಪ್ರಭ. ಅದು ಈಗ ಸಿಕ್ಕಾಪಟ್ಟೆ ಪಾಪ್ಯುಲರ್ ಸ್ಲೋಗನ್ ಆಗಿಹೋಗಿದೆ. ಈ ವಾಕ್ಯವನ್ನು ಅವರವರ ಭಕುತಿಗೆ, ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಬಹುದು. ಕೆಲವರಿಗೆ ಅದು ತುಂಬಾ ಸೀರಿಯಸ್ಸಾದ ಸ್ಟೇಟ್‌ಮೆಂಟು, ಹಲವರಿಗೆ ತಮಾಶೆಯ, ಗೇಲಿಯ ವಿಷಯ. ಮತ್ತೆ ಕೆಲವರಿಗೆ ಧಮಕಿಯ ಹಾಗೆ ಕೇಳಿಸುತ್ತಿದ್ದರೆ, ಇನ್ನೂ ಕೆಲವರಿಗೆ ರೋಮಾಂಚನಕಾರಿ ಉದ್ವೇಗವನ್ನು ತಂದುಕೊಟ್ಟಿದೆ.

ಅದು ಸರಿ, ಕನ್ನಡ ಮಾಧ್ಯಮರಂಗ ನಿಜಕ್ಕೂ ಏನೇನ್ ಮಾಡಬೇಕು? ನಾವು, ನೀವು ಸೇರಿ ಒಂದು ಪಟ್ಟಿಯನ್ನು ಮಾಡಿದರೆ, ಇವರೆಲ್ಲಾ ಅದನ್ನು ಒಪ್ಪಿಕೊಳ್ಳುತ್ತಾರಾ? ಎಲ್ಲವನ್ನೂ ಬೇಡ, ಕೆಲವನ್ನಾದರೂ ಒಪ್ಪಿಕೊಳ್ಳುತ್ತಾರಾ?

ನಿಜವಾಗಲೂ ಇರುವ ಸಮಸ್ಯೆ ಉತ್ತರದಾಯಿತ್ವದ್ದು. ಮೀಡಿಯಾಗಳು ಉತ್ತರದಾಯಿಗಳಾಗಿವೆ ಎಂದು ನಿಮಗನ್ನಿಸುತ್ತದೆಯೇ? ಕನಿಷ್ಠ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸುವವರು, ದೂರವಾಣಿ ಕರೆ ಮಾಡಿ ಮಾತನಾಡುವವರು ಇದ್ದಕ್ಕಿದ್ದಂತೆ ಈ ವಾಹಿನಿಗಳನ್ನೇ ನೇರವಾಗಿ ಪ್ರಶ್ನಿಸುವುದನ್ನು ನಾವು ಆಗಾಗ ನೋಡುತ್ತಾ ಇರುತ್ತೇವೆ.

ಆದರೆ ಪತ್ರಿಕೆಗಳು? ಪತ್ರಿಕೆಗಳು ಎಂದಾದರೂ ಇಂಥ ಓದುಗರ ವಿಮರ್ಶೆಗೆ, ಟೀಕೆಗಳಿಗೆ ಒಡ್ಡಿಕೊಂಡಿದ್ದನ್ನು ಗಮನಿಸಿದ್ದೀರಾ? ಒಡ್ಡಿಕೊಂಡಿದ್ದರೂ ಅದು ತುಂಬಾ ಅಪರೂಪವಲ್ಲವೇ? ಹಾಗೆ ನೋಡಿದರೆ ಅಂತರ್ಜಾಲ ಮಾಧ್ಯಮದಲ್ಲಿ ಓದುಗರಿಗೆ ತಮಗೆ ಸರಿಯಲ್ಲ ಅನ್ನಿಸಿದ್ದನ್ನು ಪ್ರಶ್ನಿಸುವ ಸ್ವಾತಂತ್ರ್ಯವಿರುತ್ತದೆ. ಒಮ್ಮೊಮ್ಮೆ ಈ ಸ್ವಾತಂತ್ರ್ಯ ದುರುಪಯೋಗವಾಗುವದೂ ಉಂಟು. ಆದರೆ ಪ್ರಶ್ನಿಸುವ ಕೆಲಸವಂತೂ ಇಲ್ಲಿ ನಿರಂತರವಾಗಿರುತ್ತದೆ. ಆದರೆ ಪತ್ರಿಕೆಗಳಲ್ಲಿ?

ಹಿಂದೆ ವಡ್ಡರ್ಸೆ ರಘುರಾಮಶೆಟ್ಟರು ಮುಂಗಾರು ಪತ್ರಿಕೆಯನ್ನು ನಡೆಸುತ್ತಿದ್ದಾಗ, ಓದುಗರ ಜತೆ ಮುಖಾಮುಖಿಯಾಗುವ ವಿಶೇಷ ಪ್ರಯೋಗವೊಂದನ್ನು ಮಾಡಿದ್ದರು. ಓದುಗರಿಂದಲೇ ಪ್ರಶ್ನೆಗಳನ್ನು ಆಹ್ವಾನಿಸಿ, ಅವುಗಳಿಗೆ ಉತ್ತರ ಕೊಡುವ ಪರಿಪಾಠವನ್ನು ಆರಂಭಿಸಿದ್ದರು. ಪತ್ರಿಕೆಯ ನೀತಿ-ನಿಲುವು, ಒಪ್ಪು-ತಪ್ಪುಗಳ ಕುರಿತು ಓದುಗರು ನೇರವಾಗಿ ಪ್ರಶ್ನಿಸಬಹುದಿತ್ತು. ಇವುಗಳಿಗೆ ವಡ್ಡರ್ಸೆ ಅವರೇ ಉತ್ತರ ಕೊಡುತ್ತಿದ್ದರು. ಈಗ ಇಂಡಿಯನ್ ಎಕ್ಸ್‌ಪ್ರೆಸ್ ಸೇರಿರುವ ಪ್ರಭು ಚಾವ್ಲಾ ಕೂಡ ಇಂಥ ಒಂದು ಪ್ರಯೋಗವನ್ನು ನಡೆಸುತ್ತಿದ್ದಾರೆ.

ಕನ್ನಡ ಪತ್ರಿಕೆಗಳು ಇಂಥ ಕೆಲಸವನ್ನು ಆರಂಭಿಸಬಹುದಲ್ಲವೇ?

ಓದುಗರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳಲು ಪ್ರಸರಣಾ ಸಂಖ್ಯೆಯೊಂದೇ ಮಾನದಂಡ ಎಂದು ಬಹಳಷ್ಟು ಮಂದಿ ಪತ್ರಕರ್ತರು ಭಾವಿಸಿದ್ದಾರೆ. ಆದರೆ ಅದು ಅರೆಸತ್ಯ. ಜನರಿಗೆ ಆಪ್ತವಾಗಬಹುದಾದ, ಇಷ್ಟವಾಗಬಹುದಾದ ಪತ್ರಿಕೆಗಳು ಇವತ್ತಿನ ಮಾರುಕಟ್ಟೆ ಪ್ರಪಂಚದಲ್ಲಿ ಸೋತ ಉದಾಹರಣೆಗಳೂ ಇವೆ. ಅದಕ್ಕೆ ಮಾರುಕಟ್ಟೆ ವಿಭಾಗದ ವೈಫಲ್ಯವೂ ಕಾರಣವಾಗಿರಬಹುದು. ನಿಜಕ್ಕೂ ಶ್ರೇಷ್ಠವಲ್ಲದ ಪತ್ರಿಕೆ ಕೇವಲ ಮಾರುಕಟ್ಟೆ ತಂತ್ರದಿಂದಲೇ ಜನರನ್ನು ಅತಿ ಹೆಚ್ಚು ತಲುಪಬಹುದು. ನಮ್ಮ ಪತ್ರಿಕೆಗಳು ಓದುಗರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಇರುವ ಸಾಧ್ಯತೆಯೂ ಇದೆಯಲ್ಲವೆ?

ಒಂದು ಸಣ್ಣ ಉದಾಹರಣೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ. ಪತ್ರಕರ್ತರನ್ನು ಓದುಗರು ಪ್ರಶ್ನಿಸಬೇಕು ಎಂದು ಪ್ರಜಾವಾಣಿ ಸಹಸಂಪಾದಕ ಪದ್ಮರಾಜ ದಂಡಾವತಿ ವಿಶ್ವಕನ್ನಡ ಸಮ್ಮೇಳನದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ದಂಡಾವತಿಯವರಿಗೆ ಪತ್ರಿಕೆಗಳ ಬೆಲೆಯ ಕುರಿತೇ ತಕರಾರಿದೆ. ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಪತ್ರಿಕೆಗಳನ್ನು ೩೦ ರೂಪಾಯಿ ಕೊಟ್ಟು ಓದುಗರು ಕೊಂಡುಕೊಳ್ಳುತ್ತಾರೆ. ಆದರೆ ಇರುವ ಮೂರು ರೂಪಾಯಿ ಬೆಲೆಯನ್ನೇ ಇಳಿಸಿ ಎನ್ನುತ್ತಾರೆ. ಪತ್ರಿಕೆಯ ಉತ್ಪಾದನಾ ವೆಚ್ಚವನ್ನಾದರೂ ಓದುಗರು ಕೊಡುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದರಿಂದಾಗಿ ಏನಾಗುತ್ತದೆ ಎಂದು ಯಾರಾದರೂ ಪ್ರಶ್ನಿಸಬಹುದು. ಇದರಿಂದ ಕನಿಷ್ಠ ಮ್ಯಾನೇಜ್‌ಮೆಂಟ್‌ಗಳ ಜಾಹೀರಾತು ದಾಹವಾದರೂ ಕಡಿಮೆಯಾಗಬಹುದು, ಕಾಸಿಗಾಗಿ ಸುದ್ದಿ ತರಹದ ಅನೈತಿಕ ಮಾರ್ಗಗಳಿಗೆ ಪತ್ರಿಕೆಗಳು ಮೊರೆ ಹೋಗುವುದು ತಪ್ಪುತ್ತದೆ ಎಂಬುದು ನಮ್ಮ ಅನಿಸಿಕೆ.

ಆದರೆ ದಂಡಾವತಿಯವರು ಹೇಳುತ್ತಿರುವ ವಿಷಯಗಳ ಕುರಿತು ಎಲ್ಲಿ ಚರ್ಚೆ ನಡೆಯುತ್ತಿದೆ? ಪತ್ರಿಕೆಗಳು ತಮ್ಮ ಉತ್ಪಾದನಾ ವೆಚ್ಚಕ್ಕೆ ಸರಿಯಾಗಿ ಅಂದರೆ ಸುಮಾರು ೧೦ ರೂಪಾಯಿ ಬೆಲೆ ನಿಗದಿಪಡಿಸಿದರೆ ಜನರು ಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿಬಿಡುತ್ತಾರೆಯೇ? ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಹಾಲಿನ ದರ ದುಪ್ಪಟ್ಟಾಗಿದೆ, ವಿದ್ಯುತ್ ಬೆಲೆ ಗಗನ ಮುಟ್ಟಿದೆ, ಪೆಟ್ರೋಲ್ ದರ ಕೈಗೆ ನಿಲುಕುತ್ತಿಲ್ಲ. ಹಾಗಂತ ಜನರು ಕಾಫಿ, ಟೀ ಕುಡಿಯುವುದನ್ನು ಬಿಟ್ಟಿದ್ದಾರೆಯೇ? ವಿದ್ಯುತ್ ಉಪಯೋಗ ನಿಲ್ಲಿಸಿದ್ದಾರೆಯೇ? ವಾಹನಗಳನ್ನು ಓಡಿಸುವುದನ್ನು ಬಿಟ್ಟಿದ್ದಾರೆಯೇ? ಹಾಗಿದ್ದ ಮೇಲೆ ಪತ್ರಿಕಾ ಸಂಸ್ಥೆಗಳು ಯಾಕೆ ಬೆಲೆ ಏರಿಸದೆ, ಅಡ್ಡದಾರಿಗಳನ್ನೇ ನೆಚ್ಚಿಕೊಂಡಿವೆ?

ಇಂಥ ಎಲ್ಲ ವಿಷಯಗಳ ಕುರಿತಾಗಿ ಮಾಧ್ಯಮಸಂಸ್ಥೆಗಳು ತಮ್ಮ ಅನ್ನದಾತರಾದ ಓದುಗರೊಂದಿಗೆ ಒಂದು ಅರ್ಥಪೂರ್ಣ ಸಂವಾದ ನಡೆಸಿವೆಯೇ? ಓದುಗರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಯತ್ನಿಸಿವೆಯೇ? ಹೋಗಲಿ, ಪತ್ರಿಕೆಗಳ ಮಾಲಿಕರ ವಿಷಯ ಬೇಡ, ಪತ್ರಕರ್ತರಾದರೂ ಇಂಥ ವಿಷಯಗಳ ಕುರಿತು ಓದುಗರ ಜತೆ ಸಂವಾದ ನಡೆಸಲು ಮುಂದಾಗಬೇಡವೇ?

ರಘುರಾಮಶೆಟ್ಟರು ನಡೆಸಿದ ಪ್ರಯೋಗವನ್ನು ಕನ್ನಡ ಪತ್ರಿಕೆಗಳ ಸಂಪಾದಕರು ಯಾಕೆ ಮಾಡಬಾರದು? ಹೀಗೆ ಓದುಗರಿಗೆ ತಾವು ಉತ್ತರದಾಯಿಗಳು ಎಂದು ಪ್ರಕಟಪಡಿಸುವುದರಿಂದ ಪತ್ರಿಕೆಗಳ ವಿಶ್ವಾಸಾರ್ಹತೆಯೂ ಹೆಚ್ಚಾಗುತ್ತದೆಯಲ್ಲವೆ? ಓದುಗರ ಒಳಗೊಳ್ಳುವಿಕೆಯಿಂದಾಗಿ ಅವರಿಗೂ ಒಂದು ರೀತಿಯ ಕಂಫರ್ಟ್ ದೊರೆಯುತ್ತದಲ್ಲವೇ?

****
ಇಷ್ಟನ್ನು ಹೇಳುತ್ತ, ನಮ್ಮ ಓದುಗರೊಂದಿಗೆ ತಿಂಗಳಿಗೊಮ್ಮೆ ಸಂವಾದ ನಡೆಸುವ ಆಲೋಚನೆಯನ್ನು ಮುಂದಿಡುತ್ತಿದ್ದೇವೆ. ಇದು ಪ್ರಶ್ನೋತ್ತರದ ಮಾದರಿಯಲ್ಲಿರದೆ ಆಪ್ತ ಸಂವಹನದ ಹಾಗಿರಲಿ ಎಂಬುದು ನಮ್ಮ ಬಯಕೆ.

ನಿಮಗೆ ಏನನ್ನಿಸುತ್ತದೋ ಅದನ್ನು ಕೇಳಿ, ಹೇಳಿ. ಉತ್ತರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ.

ಕೆಲವರು ತಮ್ಮ ಕಮೆಂಟ್‌ಗಳಲ್ಲೇ ಪ್ರಶ್ನೆಗಳನ್ನು ಮಾಡಿದ್ದಾರೆ. ಅಪರೂಪಕ್ಕೊಮ್ಮೊಮ್ಮೆ ಉತ್ತರಿಸಲು ಪ್ರಯತ್ನಿಸಿದ್ದೇವೆ. ಆದರೆ ಈ ಕ್ರಿಯೆ ಪ್ರತಿಕ್ರಿಯೆಗಳು ತುಂಬಾ ಸಮಯವನ್ನು ಬೇಡುತ್ತದೆ. ಅಷ್ಟು ಸಮಯ ನಮಗೆ ನಿಜಕ್ಕೂ ಇಲ್ಲ ಎಂದು ವಿನಯದಿಂದ ಹೇಳಬಯಸುತ್ತೇವೆ. ನಿಮ್ಮ ಮಾತುಗಳನ್ನು ಮೇಲ್ ಮಾಡಿದರೆ ಒಳಿತು. ನಿಮ್ಮ ಹೆಸರನ್ನು ಪ್ರಕಟಿಸುವುದು ಬೇಡ ಎಂದರೆ ಪ್ರಕಟಿಸುವುದಿಲ್ಲ.

ನಮಗೆ ಮೀಡಿಯಾಗಳ ಕುರಿತು ಎಲ್ಲವೂ ಗೊತ್ತಿದೆ ಎಂದೇನೂ ಅಲ್ಲ. ನಮಗೆ ಗೊತ್ತಿಲ್ಲದ್ದನ್ನು ನೀವು ಹೇಳಿ, ನಮಗೆ ಗೊತ್ತಿರುವುದನ್ನು ನಾವು ಹೇಳುತ್ತೇವೆ. ಸಂವಾದವನ್ನು ಅರ್ಥಪೂರ್ಣವಾಗಿ ನಡೆಸೋಣ.

ಕೊನೆಕುಟುಕು: ವಿಶ್ವಕನ್ನಡ ಸಮ್ಮೇಳನದ ಸಮೂಹ ಮಾಧ್ಯಮ ಗೋಷ್ಠಿಯಲ್ಲಿ ಕಾಣೆಯಾಗಿದ್ದು ಕನ್ನಡ ಅಂತರ್ಜಾಲ ಮಾಧ್ಯಮ. ಗೋಷ್ಠಿ ಆಯೋಜಿಸಿದವರಿಗೆ ಅಂತರ್ಜಾಲವೂ ಒಂದು ಮಾಧ್ಯಮ ಎಂಬುದು ಗೊತ್ತೇ ಇಲ್ಲವೇನೋ?

14 comments:

  1. I don t think people will buy and read news papers if its cost is raised to 10 rs or more. Because now itself most of the people do not read news paper because, as they say either they do not have that much time. or they find it is easier to get news via net than papers. News via net is less time consuming with more options available. apart from this most of the people have chosen electronic news media,(news chnls on tv) because they find it easier. News papers have already become retired man s stuff.

    ReplyDelete
  2. This is a good move. Sure to be welcomed by the readers. Who will do it first?

    ReplyDelete
  3. @ Anonymous- Good move for what? for suicide? it is just like asking who will come and suicide first?! Journalists are good at business also, they never commit suicide!

    ReplyDelete
  4. new media ಅಂದ್ರೆ ಅಂತರ್ಜಾಲ ಮಾಧ್ಯಮ ಕಣ್ರೀ. ನಿಮ್ಮಲ್ಲೇ ಎಲ್ಲೋ ಓದಿದ ಹಾಗಿತ್ತು, ಫೇಸ್ ಬುಕ್, ಟ್ವಿಟರ್ ಎಲ್ಲಾ ಚರ್ಚೆ ಆಯ್ತು ಅಂತ..

    ReplyDelete
  5. kannada prabha dalli ankanagalu jasthi hagthive. hosa badalavani nittinalli v bhat kelsa shuru madiddare nodbeku enen madtharo.
    innu hosa balavane anthidda udayavanili yako enenu kanthilla. ravi mostly hublige hogirbeku. adre circulation down anthe ade badlavane na antha...?

    ReplyDelete
  6. mR. DANDAVATHE BECOME A PRO-OWNER EDITOR THAN PRO-READER EDITOR.
    HE DID SOME COST CUTTING EXERCISE IN PV. MANY OTHER EDITORS OF TV CHANNEL DID SAME IN LAST DECADE.
    EXCEPT V.BHAT, MOST EDITORS ARE AGAINST JOURNALISTS INTERESTS.

    ReplyDelete
  7. Even I think that my generation does not have time or patience to read news paper.........
    I read news paper at the end of the day because of lack of time -a student

    ReplyDelete
  8. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಹಾಲಿನ ದರ ದುಪ್ಪಟ್ಟಾಗಿದೆ, ವಿದ್ಯುತ್ ಬೆಲೆ ಗಗನ ಮುಟ್ಟಿದೆ, ಪೆಟ್ರೋಲ್ ದರ ಕೈಗೆ ನಿಲುಕುತ್ತಿಲ್ಲ. ಹಾಗಂತ ಜನರು ಕಾಫಿ, ಟೀ ಕುಡಿಯುವುದನ್ನು ಬಿಟ್ಟಿದ್ದಾರೆಯೇ? ವಿದ್ಯುತ್ ಉಪಯೋಗ ನಿಲ್ಲಿಸಿದ್ದಾರೆಯೇ? ವಾಹನಗಳನ್ನು ಓಡಿಸುವುದನ್ನು ಬಿಟ್ಟಿದ್ದಾರೆಯೇ? ಹಾಗಿದ್ದ ಮೇಲೆ ಪತ್ರಿಕಾ ಸಂಸ್ಥೆಗಳು ಯಾಕೆ ಬೆಲೆ ಏರಿಸದೆ, ಅಡ್ಡದಾರಿಗಳನ್ನೇ ನೆಚ್ಚಿಕೊಂಡಿವೆ?


    ಸಂಪಾದಕೀಯ ಬರೆಯುತ್ತಿರುವವರು ಔಟ್‌ ಆಫ್ ಮೈಂಡ್‌ ಅಂದುಕೊಂಡಿದ್ದೆ... ಅದರ ತೀವ್ರತೆ ಮೇಲಿನ ಸಾಲುಗಳನ್ನ ಓದಿದ ಮೇಲೇನೆ ತಿಳಿದದ್ದು...

    ಹಾಲು, ವಿದ್ಯುತ್ ಮತ್ತು ಪೆಟ್ರೋಲ್‌ ಜೀವನದ ಮೂಲಭೂತ ಅವಶ್ಯಕತೆಗಳು ಆದರೆ ಪತ್ರಿಕೆಗಳು ಅಲ್ಲ ಅನ್ನೋದೂ ಸಹ ನಿಮ್ಮ ಗೋಚರವಾಗಿಲ್ಲವಾ ಅಪ್ರತಿಮ ಮೇಧಾವಿಗಳೇ? ಇಷ್ಟು ಮಾತ್ರದ ಸಾಮಾನ್ಯ ಜ್ಞಾನ ಇಲ್ಲದ ನೀವು ಮಾಧ್ಯಮ ವಲಯದಲ್ಲಿ ಕ್ರಾಂತಿ ಮಾಡಲು ಬಂದಿರುವುದು ವಿಪರ್ಯಾಸವೇ ಸರಿ! pity on you...

    ReplyDelete
  9. Kannada patrikegalu `uttadayitva'vannu belesikollabeku. Sakastu TV vahinigalu kshana kshanakku `breaking news' prasara maduttiruvaaga ade mudrita `halasalu' suddigallnu odalu nijavaada oduga istapaduvudilla. Innu patrikagallnnu bellam beligge tegedare mukhakke raachuva suddigalu `kole, sulige, dharode'galadde. bellam beliggeye B.P. erisuva manassige `kahi' `kirikiri' untu maduva intha suddigallannu yaava `sahrudaya oduga'odalu istapaduttane? Samajada ganya vyaktigala vicharapoorna lekhanagaliddare patrike `kondu' oduva manassaguttade. Kevala prasara sakhye erisuvudakkagiye illa sallada suddigalannu, krurate, himse mattu aggada `jahiraatu'galannu pratibimbisuva patrikegalannu kondu oduva manassadaru hege bandeetu?

    ReplyDelete
  10. Hello Sampadakiya..

    Can you take the risk of publishing the names of the different authors of the books, vivekananda kruti shreni from vol 1 to vol 9 ? As we all know these books are not written by vivekananda himself. many people invaded into it. is it worth reliable? and one more thing is,fact related to the death of the vivekananda is still a mystery.
    mere copy pasting the pages is just nothing but like blind belief..or as you say always, Agnaana, Andhashraddhe, Mooda nambike..moudya..and so on.

    ReplyDelete
  11. `ಉತ್ತರದಾಯಿತ್ವ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಹೊಣೆಗಾರಿಕೆ' ಇವೆಲ್ಲವು ಬರೀ ವೇದಿಕೆಯ ಮೇಲಿನ ಶಬ್ದಗಳಾಗಿವೆ. ಆ ಸಂವಾದದಲ್ಲಿ ಭಾಗವಹಿಸಿದ ಹಲವು ಹಿರಿಯರಿಗೆ ಆ ಪದಗಳ ಕನಿಷ್ಠ ಅರ್ಥವೂ ಗೊತ್ತಿಲ್ಲ... ಅಲ್ಲ ಗೊತ್ತಿಲ್ಲದಂತೆ ತಮ್ಮನ್ನು ತಾವು `ಡಿಸೈನ್' ಮಾಡಿಕೊಂಡಿರುತ್ತಾರೆ. ಏನೇನೋ ಸಾಧನೆಯ ಕನಸುಗಳನ್ನು ಹೊತ್ತು ಮಾಧ್ಯಮದಂಗಳಕ್ಕೆ ಬಂದ ಕಿರಿಯರಿಗೆ ಇಂಥವರಿಂದ ಅದೆಂಥ ಮಾರ್ಗದರ್ಶನ ಸಿಕ್ಕೀತು...?
    ತಮ್ಮ ಕನಿಷ್ಠ ಜವಾಬ್ದಾರಿಯ ಅರಿವಿಲ್ಲದೆ ` ತಾನು ಮಾತ್ರ ಹಿಡಿಯಬಾರದ ಹಾದಿ ಹಿಡಿಯುತ್ತೇನೆ. ಉಳಿದವರು ಸರಿಯಾಗಿರಿ' ಎಂಬ ಮನಸ್ಥಿತಿಯ ಗೊಣಗಾಟದ ಹಿರಿಯರು ಅಥವಾ ಕೃಫಾಪೋಷಿತರು ಮೊದಲು ತಮ್ಮ ಹೊಣೆಗಾರಿಕೆ ತಿಳಿದು ಕಿರಿಯರಿಗೆ, ಆರೋಗ್ಯಮನಸ್ಕರಿಗೆ ಜಾಗ ತೆರವು ಮಾಡಿಕೊಡಲಿ. ಹೊಸ ಆಲೋಚನೆಯ ಸಂಚಲನದಲ್ಲಿ ನ್ಯಾಯ, ಹೊಣೆಗಾರಿಕೆ ಎಲ್ಲವೂ ಕ್ರಮವಾಗಿ ಸರಿಯಾಗುತ್ತದೆ.ಆಗ ಮಾಧ್ಯಮ ಧೈರ್ಯವಾಗಿ ಸಾಮಾಜಿಕರೆದುರು ಉತ್ತರಿಸುವಂಥಾಗುತ್ತದೆ.

    ReplyDelete
  12. Very good discussion. Thanks everybody.

    ReplyDelete
  13. ನೋಡ್ತಾ ಇರಿ, ಏನೇನ್ ಮಾಡ್ತೀವಿ!!!!! Yenooo madolla!!!. Vbhat is converting Kannada Prabha into Old Vijaya Karantaka. That's all... All ready layout, font is looking like vijayakarnataka. With pratap simha's article its very clear it will become vijaya karnataka very soon. So many years of effort of Kadhri Shammana, Y.N.K., K.Satya etc.. in building Kannada Prabha will just go waste in 3 months.
    Jai Vijaya Karnataka Prabha!!

    ReplyDelete
  14. ಪ್ರಶಾಂತMarch 22, 2011 at 3:29 PM

    ಯಾರು ಏನು ಮಾಡ್ತಾರೆ ಅನ್ನುವುದನ್ನ ಕಾಲವೇ ನಿರ್ಧರಿಸುತ್ತದೆ. ಏನಾದರೂ ಬರೆಯುವ ಮೊದಲು ಸ್ವಲ್ಪ ತಾಳ್ಮೆ ಇರಲಿ.

    ReplyDelete