ಹಮೀದ್ ಪಾಳ್ಯ ಸುವರ್ಣ ನ್ಯೂಸ್ ವಾಹಿನಿಯ ಸುದ್ದಿ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ಇದುವರೆಗೆ ಈ ಜವಾಬ್ದಾರಿ ಹೊತ್ತಿದ್ದ ಎಚ್. ಆರ್ ರಂಗನಾಥ್ ಸಂಪಾದಕೀಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ ಎಂಬ ಮಾಹಿತಿ ಇದೆ. ಈ ಬೆಳವಣಿಗೆ ಹಲವು ದಿನಗಳಿಂದ ಗಾಳಿಯಲ್ಲಿತ್ತು. ಇದೀಗ ಸುದ್ದಿಯಾಗಿದೆ.
ಈ ಸುದ್ದಿ ಹಮೀದ್ ಹಾಗೂ ರಂಗನಾಥ್ ರವರ ವೃತ್ತಿಜೀವನದ ಬಹುಮುಖ್ಯ ಘಟ್ಟವನ್ನು ಸೂಚಿಸುತ್ತದೆ. ಹಿಂದೆ ರಂಗನಾಥ್ ಸುವರ್ಣ ಸೇರಿದಾಗ, ಅಂದಿನ ಮುಖ್ಯಸ್ಥ ಶಶಿಧರ ಭಟ್ ಸಂಪಾದಕೀಯ ಸಲಹೆಗಾರರಾಗಿ ನೇಮಕಗೊಂಡಿದ್ದರು. ಅದು ಕೆಲವೇ ಕಾಲದವರೆಗೆ. ಈಗ ಕಾಲ ಚಕ್ರ ಮತ್ತೊಂದು ಸುತ್ತು ಮುಗಿಸಿದೆ.ಇದು ಹಮೀದ್ ಕಾಲ.
ನೋ ಡೌಟ್ ಹಮೀದ್ ಕನ್ನಡದ ಕೆಲವೇ ಕೆಲವು ಅತ್ಯುತ್ತಮ ಆಂಕರ್‌ಗಳಲ್ಲಿ ಒಬ್ಬರು. ಅವರನ್ನು ಪತ್ರಕರ್ತ ಎನ್ನುವುದಕಿಂತ, ಉತ್ತಮ ಆಂಕರ್ ಎಂದು ಗುರುತಿಸಿದ್ದೇ ಹೆಚ್ಚು. ಪತ್ರಕರ್ತನಾಗಿ, ಸುದ್ದಿ ಮುಖ್ಯಸ್ಥನಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ಸದ್ಯದ ಕುತೂಹಲ.
ರಂಗನಾಥ್ ಅವರ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿಯೆಂದರೆ ಅವರು ಜುಗಲ್ ಬಂದಿ ಮತ್ತು ಪಬ್ಲಿಕ್ ವಾಯ್ಸ್ ಕಾರ್ಯಕ್ರಮಗಳನ್ನು ಮುಂದುವರೆಸಲಿದ್ದಾರೆ. ಎರಡೂ ಕಾರ್ಯಕ್ರಮಗಳು ಸುವರ್ಣ ನ್ಯೂಸ್ ನಲ್ಲಿ ಜನಪ್ರಿಯವಾಗಿವೆ. ರಂಗನಾಥ್ ಇಲ್ಲದ ದಿನಗಳಲ್ಲಿ ಈ ಕಾರ್ಯಕ್ರಮಗಳು ಬೋರ್ ಹೊಡೆಸುತ್ತಿದ್ದವು. ಇತ್ತೀಚಿಗೆ ಜುಗಲ್ ಬಂದಿಯಲ್ಲಿ ರಂಗನಾಥ್ ಕಾಣಿಸಿಕೊಂಡಿದ್ದು ಕಡಿಮೆ. ಬೇರೆ ಯಾವುದೇ ಹೊಣೆಗಳು ಇಲ್ಲದೇ ಇರುವುದರಿಂದ ಇನ್ನು ಮುಂದೆ ಅವರು ಕಾಣಿಸಿಕೊಳ್ಳಬಹುದು.
ಇದೇನೇ ಇರಲಿ, ರಂಗನಾಥ್ ಇಷ್ಟು ಬೇಗ ಸುವರ್ಣ ನ್ಯೂಸ್‌ನ ಮುಖ್ಯಸ್ಥನ ಹುದ್ದೆಯಿಂದ ಹಿಂದೆ ಸರಿಯಬೇಕಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಸುವರ್ಣಕ್ಕೆ ಕನ್ನಡಪ್ರಭದಿಂದ ವಲಸೆ ಬಂದಾಗ ರಂಗನಾಥ್ ಅತ್ಯುತ್ಸಾಹದಿಂದಲೇ ಕೆಲಸ ಆರಂಭಿಸಿದ್ದರು. ಅದುವರೆಗೆ ಟಿವಿ೯ಗೆ ಯಾವ ರೀತಿಯಲ್ಲೂ ಒಂದು ಸ್ಪರ್ಧೆ ಅನ್ನುವುದೇ ಇರಲಿಲ್ಲ. ರಂಗನಾಥ್ ವೃತ್ತಿಪರತೆ ಇಲ್ಲಿ ಕೆಲಸ ಮಾಡಿತು. ಸುವರ್ಣ ನ್ಯೂಸ್‌ಗೂ ವೀಕ್ಷಕರು ಹುಟ್ಟಿಕೊಂಡರು.
ಕಳೆದ ಆರೇಳು ತಿಂಗಳಿನಿಂದ ಕನ್ನಡ ಮಾಧ್ಯಮ ರಂಗದಲ್ಲಿ ವಿಪರೀತ ಬದಲಾವಣೆಗಳು ನಡೆದವು. ಸುವರ್ಣ ನ್ಯೂಸ್ ಪತ್ರಿಕೆ ಆರಂಭಿಸಿಬೇಕಿದ್ದ ರಾಜೀವ್ ಚಂದ್ರಶೇಖರ್, ಇದ್ದಕ್ಕಿದ್ದಂತೆ ಕನ್ನಡಪ್ರಭದ ಶೇರುಗಳನ್ನು ಕೊಂಡುಕೊಂಡರು. ಟೈಮ್ಸ್ ಸಂಸ್ಥೆಯಿಂದ ವಿಶ್ವೇಶ್ವರ ಭಟ್ ಹೊರಬಂದರು. ಕನ್ನಡಪ್ರಭಕ್ಕೆ ಸಂಪಾದಕರೂ ಆದರು. ಸುವರ್ಣ ನ್ಯೂಸ್‌ನ ಸಂಪಾದಕರಾಗಬೇಕಿದ್ದ ರವಿ ಹೆಗಡೆ ಉದಯವಾಣಿಗೆ ಸಂಪಾದಕರಾದರು. ಕನ್ನಡಪ್ರಭ ಮತ್ತು ಉದಯವಾಣಿಗಳ ಸಂಪಾದಕರಾಗಿದ್ದ ಶಿವಸುಬ್ರಹ್ಮಣ್ಯ ಹಾಗು ತಿಮ್ಮಪ್ಪ ಹೆಗಡೆ ಉದ್ಯೋಗ ಕಳೆದುಕೊಂಡರು.
ಈಗ ರಂಗನಾಥ್ ಸರದಿ. ರಂಗನಾಥ್ ಅವರು ಕಸ್ತೂರಿ ನ್ಯೂಸ್ ಚಾನಲ್‌ಗೆ ಮುಖ್ಯಸ್ಥರಾಗಿ ಹೋಗುತ್ತಾರೆ ಎಂಬ ವದಂತಿಗಳಿದ್ದವು. ಆದರೆ ಅವರು ಸದ್ಯಕ್ಕೆ ಸುವರ್ಣದಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಮುಂದೆ ಏನೇನಾಗುತ್ತದೋ ಯಾರು ಬಲ್ಲರು?
ಹಮೀದ್ ಪಾಳ್ಯ ಅವರಿಗೆ ನಮ್ಮ ಶುಭಾಶಯಗಳು.
ಅಂದಹಾಗೆ, ಕನ್ನಡಪ್ರಭಕ್ಕೆ ಕೆ.ವಿ.ಪ್ರಭಾಕರ್ ಮತ್ತು ರಾಘವೇಂದ್ರ ಭಟ್ ಸೇರ್ಪಡೆಯಾಗಿದ್ದಾರೆ. ಇಬ್ಬರೂ ವಿಜಯ ಕರ್ನಾಟಕದಲ್ಲಿದ್ದರು. ಭಟ್ಟರ ಹಳೆಯ ಒಡನಾಡಿಗಳು. ಕೆ.ವಿ.ಪ್ರಭಾಕರ್ ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷರೂ ಹೌದು. ಇಬ್ಬರೂ ಈಗ ವಿಕ ತೊರೆದು ಕಪ್ರ ಸೇರಿಕೊಂಡಿದ್ದಾರೆ. ಈ ಸುದ್ದಿಯನ್ನು ವಿಶ್ವೇಶ್ವರ ಭಟ್ಟರು ತಮ್ಮ ವೆಬ್ ಸೈಟ್ ನಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಅಲ್ಲಿಗೆ ಭಟ್ಟರೊಂದಿಗೆ ಜತೆಗೂಡಿದವರ ಸಂಖ್ಯೆ ಈಗ ಆರಕ್ಕೆ ಏರಿದೆ.

Shubhashayagalu Hameed. We are with you, we know you can perform very well.
ReplyDeleteHa..arharige sikka avakasha....adre, Rangnath kasturi newzsge yavag hogtaro..?!
ReplyDeleteJournalism ...Like Politics ...? Stupied things very sad [worst] development in media . hey ram... / ok JAIRAM . :-)
ReplyDeletelokesh mosale
www.lokeshmosale.com
ಹಾ...ಅರ್ಹರಿಗೆ ಸಿಕ್ಕ ಅವಕಾಶ....ಶುಭವಾಗಲಿ. ಆದ್ರೆ, ರಂಗನಾಥ್ ಅವ್ರು ಕಸ್ತೂರಿ ನ್ಯೂಜ್ಗೆ ಯಾವಾಗ್ ಹೋಗೋದು...?!
ReplyDeletehe is a nice guy..well deserved.
ReplyDeleteಸರ್ ಈ ನ್ಯೂಸ್ ನಿಜಾನಾ??
ReplyDelete@ ಸಂಪಾದಕೀಯ, ನನ್ನ ಕಿವಿಗಳನ್ನ-ಕಣ್ಣುಗಳನ್ನ ನಂಬಲಾಗುತ್ತಿಲ್ಲ.. ಇದು ನಿಜವೇ ಆಗಿದ್ದರೆ ಅದಕ್ಕಿಂತ ಸಂತೋಷದ ಸಂಗತಿ ಬೇರೆ ಇಲ್ಲ.ಒಬ್ಬ ಸಭ್ಯ ಮತ್ತು ಅರ್ಹ ವ್ಯಕ್ತಿಗೆ ಇಂತಹ ಗೌರವ ಸಂದಿರುವುದು ನಿಜಕ್ಕೂ ಸಂತಸದ ಸಂಗತಿ.. ಹಮೀದ್ ಪಾಳ್ಯಗೆ ಅಭಿನಂದನೆಗಳು ಸಿಹಿಸುದ್ದಿ ನೀಡಿದ ನಿಮಗೂ.
ReplyDeleteall the best sir
ReplyDeleteGood good.. :) Congrats Hameed. You are one of the best & sensible anchors in Kannada. All the best.
ReplyDeleteidanna ivattu namba bahude??
ReplyDeleteQuite interesting.
ReplyDeleteBJP high command will take a queue from Rajeev Chandrashekhar regarding replacing of Yaddy as chief minister...
They r not ready to go in a dignified way..they deserve arda chandra
ಕ್ಯಾಮೆರಾಗೆ ಮುಖ ಕೊಟ್ಟು, ಡೆಸ್ಕ್‌ನ ಮಂದಿ ಬರೆದುಕೊಟ್ಟಿದ್ದನ್ನು ಓದುಗರ ಮುಂದಿಡುವುದೊಂದೇ ನಮ್ಮ ಕೆಲಸ. ಅದೇ ಉತ್ಕೃಷ್ಟ ಮಟ್ಟದ ಸೃಜನಶೀಲತೆ ಎಂದುಕೊಂಡ ಹಾಗೂ ಪ್ರತಿದಿನ ಟಿವಿಯಲ್ಲಿ ಮುಖತೋರಿಸಿದ ಕಾರಣಕ್ಕಾಗಿಯೇ ಬಳುವಳಿಯಾಗಿ ಬರುವ ಅನಿವಾರ್ಯ "ಪ್ರಸಿದ್ಧಿ"ಗೆ ಅಮಲೇರಿದಂತಾಗುವ ಸುದ್ಧಿವಾಚಕರ ನಡುವೆ ಹಮೀದ್‌ರ ಈ ಸಾಧನೆ ನಿಜಕ್ಕೂ ಶ್ಲಾಘನೀಯ. ಕೇವಲ, ಸುದ್ಧಿವಾಚಕನಾಗಿ ಬಂದು ಒಂದು ಪ್ರತಿಷ್ಠಿತ ಚಾನಲ್‌ನ ಮುಖ್ಯಸ್ಥನಾಗಿ ಚುಕ್ಕಾಣಿ ಹಿಡಿಯುವುದು ಅಷ್ಟು ಸುಲಭವೇ? ಕನ್ನಡ ಪತ್ರಿಕೋದ್ಯಮಕ್ಕೆ ಹೊಸದೊಂದು ಹಾದಿ ಹಾಕಿಕೊಟ್ಟು ಹಮೀದ್ ಅವರಿಗೆ ವಂದನೆಗಳು.
ReplyDeleteಹಮೀದ್ ಪಾಳ್ಯ ನಿಜಕ್ಕೂ ಸೂಕ್ತ ವ್ಯಕ್ತಿ. ಉತ್ತಮ ಆಯ್ಕೆ.
ReplyDelete-ಉಲ್ಲಾಸ
ಬರೆದುಕೊಟ್ಟಿದ್ದನ್ನು ಓದುಗರ ಮುಂದಿಡುವುದೊಂದೇ ನಮ್ಮ ಕೆಲಸ. ಅದೇ ಉತ್ಕೃಷ್ಟ ಮಟ್ಟದ ಸೃಜನಶೀಲತೆ ಎಂದುಕೊಂಡ ಹಾಗೂ ಪ್ರತಿದಿನ ಟಿವಿಯಲ್ಲಿ ಮುಖತೋರಿಸಿದ ಕಾರಣಕ್ಕಾಗಿಯೇ ಬಳುವಳಿಯಾಗಿ ಬರುವ ಅನಿವಾರ್ಯ "ಪ್ರಸಿದ್ಧಿ"ಗೆ ಅಮಲೇರಿದಂತಾಗುವ ಸುದ್ಧಿವಾಚಕರ ನಡುವೆ ಹಮೀದ್‌ರ ಈ ಸಾಧನೆ kalavalakaari..
ReplyDeletewell done Malayalee media Mogul Rajeev !
Can it happen in Kerala ? No. only in Kannada.
ಹಮೀದ್ ಪಾಳ್ಯಗೆ ಅಭಿನಂದನೆಗಳು .
ReplyDeletejagannath shirlal
if a person is really strong and dedicated to his work , then why should he carry his babies all around his journey? why he feels so insecure? why he builds his own secured wall around him..? why mr vishveshvar bhatt or anybody should feel insecure in his own system?
ReplyDeleteJugalbandi really needs ranganath, bcoz he s the only tv journalist who knows the history of karnataka politics. he gives the refrns from 60s! amazing.
ReplyDeleteabout hameed: he deserves it though he is comparitively a bit young for that post & responsibility. he i a kind of dedicated type, honest to work.
I thought news channel is really for Journos,who writes the articles after going through its sources.I haven't seen Hameed as a Journo,You are right in calling him Best anchor not the Journo.
ReplyDeleteMay be visual media needs good anchor who can capture the audiance and real good jounos can be in the desk to write.I feel a head of a news chaneel has to be a good at making VARADI and ear for other suggestion.
Let us wish Hameed all the best and hope he will take Suvarna to greater heights
He is not a suitable person.
ReplyDeleteFinally....now one can watch suvarna tv news without having to suffer Ranganath's self-righteous snides. He is the best example of how an overdose of superiority complex cannot last for ever. As regards his knowledge of karnataka history and 'professionalism', well in Kannada journalism's 'alida oorige ulidavane gowda' he might come across as great but it is a pain to watch his mannerisms and half-baked analyses on screen. Hameed Palya comes across so decent and he manages any progrmme well. So what if he does not know as much history as Ranga is said to 'know'.
ReplyDeleteall are 'CREATIVE' people in Kannada TV journalism...who will document what & how they created it all..
ReplyDeleteಪದೇ ಪದೇ ಶಿವಸುಬ್ರಹ್ಮಣ್ಯ ಮತ್ತು ತಿಮ್ಮಪ್ಪಭಟ್ಟರು ಕೆಲಸ ಕಳೆದುಕೊಂಡ್ರು ಅಂತ ಹೇಳ್ತೀರಲ್ಲ; ಅವರೇನು ಸ್ವತಃ ಕೆಲಸ ಬಿಟ್ಟು ಹೋದ್ರಾ? ಎಲ್ಲಾ ಪತ್ರಕರ್ತರ ಬಗ್ಗೆ ಚರ್ಚಿಸುತ್ತೀರಲ್ಲ; ಅವರ ತಪ್ಪಾದ್ರೂ ಏನು? ಅವರಿಗೆ ಆದ ಅನ್ಯಾಯವನ್ನು ಯಾಕೆ ನೀವು ಪ್ರತಿಭಟಿಸಲಿಲ್ಲ. ಇವತ್ತು ಸಂಪಾದಕೀಯ ಒಂದುವರೆ ಲಕ್ಷ ಹಿಟ್ಸ್್ಗಿಂತಲೂ ಹೆಚ್ಚಿದೆ. ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆಗಳು ಆಗಿವೆ. ರಿಯಾಲಿಟಿಯಿಂದಿಡಿದು, ಜ್ಯೋತಿಷಿಗಳ ಬುರುಡೆ ಕಾರ್ಯಕ್ರಮಗಳ ವಿರುದ್ಧವು ಸೆಡೆದು ನಿಂತು ಜಾಗೃತಿ ಮೂಡಿಸಿದೆ.
ReplyDeleteಆದರೆ ಇವತ್ತು ಚಡ್ಡಿ ಬಿಚ್ಚಿ ನಿಲ್ಲುವ ಪತ್ರಕರ್ತರು, ಬಕೀಟ್ ಹಿಡಿಯುವ ಪತ್ರಕರ್ತರು ಹೆಚ್ಚಾಗಿ ಕಾಣುತ್ತಿದ್ದಾರೆ. ಅಂತವರೇ ಮುಂದಿನ ಸಾಲಿನಲ್ಲಿ ರಾರಾಜಿಸುತ್ತೀದ್ದಾರೆ. ಅಂತವರಿಗೆ ಒಳ್ಳೆಯ ಸಂಬಳ, ಜೊತೆಗೆ ಹೊಂದಿಷ್ಟು ಗಿಂಬಳ. ..... ಸಾಕು ಅನ್ಸುತ್ತೆ... I hate journalism. ಇಂತವರ ಬಗ್ಗೆ ಸಂಪಾದಕೀಯ ಕಣ್ಣು ಮುಚ್ಚಿ ಕುಂತೂ ಬಿಡುತ್ತೆ ಅಲ್ವ?
ಹಮೀದ್ ಪಾಳ್ಯರ ಮಾತುಗಳು, ಕಾರ್ಯಕ್ರಮದ ನಿರೂಪಣಾ ಶೈಲಿ ನಿಜಕ್ಕೂ ಚೆಂದ. ಅವರಿಗೆ ಅಭಿನಂದನೆಗಳು, ಸಂಪಾದಕೀಯ ಬ್ಲಾಗ್್ಗೂ ಅರ್ಧ ಅಭಿನಂದನೆಗಳು....
- ಹೋರಾಟದ ಅಸ್ತ್ರ
ಹಮೀದ್ ಗೆ ಅಭಿನಂದನೆಗಳು. ಕನ್ನಡ ಮಾಧ್ಯಮಲೋಕದ ಈ ಖೋ-ಖೋ ಆಟ ಬಲೇ ಜೋರಿನಿಂದ ಸಾಗಿದೆ. ಮುಂದೆ ಯಾರಿಗೆ ಯಾರು ಖೋ ಕೊಡುತ್ತಾರೋ ಅಂತ ಕುತೂಹಲದಿಂದ predict ಮಾಡುತ್ತ ಕೂರುವಂತಾಗಿದೆ.
ReplyDeleteಒಬ್ಬರು ಪತ್ರಕರ್ತರು ಇದ್ದರು. ಸಾಹಿತ್ಯದಲ್ಲಿ ಇನ್ನಿಲ್ಲದ ಆಸಕ್ತಿ. ಸುದ್ದಿಯನ್ನು ಚೆನ್ನಾಗಿ ಬರೆಯುತ್ತಿದ್ದರು. ಕೆಲಸದ ಜೊತೆಗೆ ಸಹಜವಾಗಿ ಅವರ ಸಂಪಾದಕರ ಮೇಲೆ ಅತೀವ ನಿಷ್ಠೆ. ಸಂಪಾದಕರು ಕೆಲಸ ಬಿಟ್ಟರು. ಈ ನಿಷ್ಠ ಪತ್ರಕರ್ತ ಕೂಡಾ ಬಿಟ್ಟು, ಅವರನ್ನೇ ಹಿಂಬಾಲಿಸಿದ. ಆ ಸಂಪಾದಕರೋ ನಾಜೂಕು ಮನುಷ್ಯ. ನಿಷ್ಠ ಪತ್ರಕರ್ತನನ್ನು ತಾನು ಸೇರಿದ ಸಂಸ್ಥೆಗೆ ಸೇರಿಸಿದರು. ಇನ್ನೊಂದು ದಿನ ಸಂಪಾದಕ ಮಹಾಶಯ ಆ ಪತ್ರಿಕೆಯನ್ನು ಬಿಟ್ಟರು. ಈ ಪತ್ರಕರ್ತ ಕೂಡಾ ಬಿಟ್ಟ. ಈ ಬಾರಿ ಇತಿಹಾಸ ಪುನರಾವರ್ತನೆ ಆಗಲಿಲ್ಲ. ಪತ್ರಿಕೆಗಳ ಇನ್ಪ್ರಿಂಟ್ಸ್ಗಳನ್ನು ಗಮನಿಸಿದರೆ, ಎರಡು ಮೂರು ಪತ್ರಿಕೆ ದಾಟಿದ ಸಂಪಾದಕ ಮಹಾಶಯ ಈಗ ಯಾವುದೇ ಪತ್ರಿಕೆಯಲ್ಲಿ ಇದ್ದಂತಿಲ್ಲ. ಇನ್ನು ಆ ಪತ್ರಕರ್ತ ಎಲ್ಲಿದ್ದಾರೋ ಗೊತ್ತಿಲ್ಲ.
ReplyDeleteಇದು, ನಿಷ್ಠೆಗೆ ದೊರೆತ ಮನ್ನಣೆ. ಕಡೆಗೂ ಪತ್ರಕರ್ತನ ಸಮಸ್ಯೆಗಳನ್ನು, ಸಂಸಾರದ ತಾಪತ್ರಯಗಳ ರಕ್ಷಣೆಗೆ ನಿಷ್ಠೆ ನೆರವಿಗೆ ಬರಲಿಲ್ಲ.
ಸಂಪಾದಕ ನಿಷ್ಠೆಯಿಂದಾಗಿ ವಿಕದಿಂದ ಇಬ್ಬರು ಕಪ್ರಗೆ ವಲಸೆ ಬಂದುದು ನೋಡಿ ಇದೆಲ್ಲಾ ನೆನಪಾಯಿತು. ಅಂಥ ಸಂಪಾದಕ, ಅಂಥ ಪತ್ರಕರ್ತ ಸಾಕಷ್ಟು ಜನರು ಇದ್ದಾರೆ. ಹೀಗಾಗಿ, ಇಲ್ಲಿ ಹೆಸರು ಉಲ್ಲೇಖಿಸುವ ಯತ್ನ ಮಾಡಿಲ್ಲ.
ಅಷ್ಟಕ್ಕೂ ಅಂತಿಮವಾಗಿ ಕಾಡುವ ಪ್ರಶ್ನೆ: ಇವರು, ತಾವು ಮಾಡುವ ಸಂಸ್ಥೆಗೆ, ಓದುಗರಿಗೆ ನಿಷ್ಠರಾಗುವುದು ಯಾವಾಗ? ಅವರ ಬರಹಗಳಲ್ಲಿ ಕಾಣುವ ಆದರ್ಶಗಳಲ್ಲಿ, ನೀತಿಗಳಲ್ಲಿ ಸ್ವಲ್ಪವನ್ನಾದರೂ ಅವರು ಸ್ವಂತ ಬದುಕಿನಲ್ಲಿ ಪಾಲಿಸುವುದು ಬೇಡವೆ? ನಾಚಿಕೆಯಾಗಬೇಕು ಅವರ ನಿಷ್ಠೆಗೆ
congrats hamwweed. good luck..
ReplyDeletesampadakiyadalli kelavara baggeye charche nadeyuttide. selected approach. idarinda matte dari tappisuva kelasa. kelavaru illadiddare kannada patrikodyamada astitvave iruvudillaveno emba bhavane blog odugarige bandaroo ashcharyavilla.
ReplyDeleteit is a bad news for me.bcs i like h r ranghanath.pls rangahnath sir dont go anywhere from suvarna news.
ReplyDeletejournalism nalliruva sampadakaremba doddannavarige innadaru buddi barutta? halavu pramanik varadigararannu bhattangigal maatu keli suka summane kelasdind kittogedavarige elladaru irali olleyadagli...bhattangiglige jai ho...
ReplyDeleteWhat a relief to the viewers!
ReplyDeleteಹಮೀದ್ ಅವರಿಗೆ ಅಭಿನಂದನೆಗಳು. ಇನ್ನು ಮುಂದೆ ಸುವರ್ಣ ಹೇಗೆ ರೂಪುಗೊಳ್ಳುತ್ತದೆ ನೋಡೋಣ. ಏನೇ ಆದರು ರಂಗನಾಥ್ ಅವರು ಸುವರ್ಣ ಚಾನೆಲ್ಗೆ ಒಂದು ಸ್ಥಾನ ತಂದು ಕೊಟ್ಟರು. ಅವರ ದ್ವನಿ, ಸ್ಟೈಲ್ ಕೆಲವರಿಗೆ ಇಷ್ಟ ಆಗ್ತಿರ್ಲಿಲ್ಲ. ಆದರೆ ಅವರ ರಾಜಕೀಯ ಜ್ಞಾನ, ಕರ್ನಾಟಕದ ಬಗ್ಗೆ ಇರುವ ತಿಳುವಳಿಕೆ ಬಹಳ ಅಪರೂಪ. ಕನ್ನಡಪ್ರಭದಲ್ಲೂ ಒಳ್ಳೆಯ ಕೆಲಸ ಮಾಡಿದ್ದರು ಎಂದು ನನ್ನ ಅನಿಸಿಕೆ.
ReplyDeleteಓಹ್ ಇದು ಒಳ್ಳೆದಾಯ್ತು.. ಆಲ್ ದಿ ಬೆಸ್ಟ್ ಹಮೀದ್ .
ReplyDeleteconrgulations hamid sir
ReplyDeleteall the best hameed., ranganath started well aaadare swalpa dina aada nanthara suvarna news nalli 24/7 baree avare aavarisikondidru, bereyavaru kulitiddaru saha, kelisikollabekitthu ashte, it was a real pain to see people with knowledge sitting idle and listening to ranganath, i have seen couple of times hameed and goureesh were being made to look as bystanders., time for ranganath tobecome the captain of kasturi news
ReplyDeleteನೀವು ಏನೇ ಹೇಳಿ ಸುವರ್ಣ ನ್ಯೂಸ್ ಸಪ್ಪೆಯಗಿಬಿಟ್ಟಿದೆ ರಂಗಣ್ಣ ಇಲ್ಲದೆ....
ReplyDeleteವಾಹ್, ಇದು ಸಂತಸದ ವಿಚಾರ.. ಒಬ್ಬ ಅರ್ಹ ಸಜ್ಜನ, ಸಭ್ಯ, ಹಾಗೂ ಒಳ್ಳೆಯ ವ್ಯಕ್ತಿ ಅವರು.
ReplyDeleteಬಹು ಮುಖ್ಯವಾಗಿ ಅವರ ಸ್ಫುಟವಾದ ಕನ್ನಡವನ್ನು ಇಂದಿನ ಅನೇಕರು ಅನುಕರಿಸ ಬೇಕಾದ್ದು ಅತ್ಯವಶ್ಯಕ.
ನಲ್ಮೆಯಿಂದ,
ಶಮ, ನಂದಿಬೆಟ್ಟ
ಸುವರ್ಣ ನ್ಯೂಸ್ ಸಪ್ಪೆಯಗಿಬಿಟ್ಟಿದೆ ರಂಗಣ್ಣ ಇಲ್ಲದೆ....At the same time no number of good panelist discussing issues. In the days of Ranganna only Datta, CTRavi, BLshankar & VR sudarshan available for him. He dont want people with command over subjects and straightforward like Raviverma kumar, CS dwarki, HS Dore etc ..
ReplyDelete