ಕನ್ನಡಪ್ರಭದ ಜೊತೆಗಿನ ಕರುಳಬಳ್ಳಿಯನ್ನು ಕಡೆಗೂ ಕಡಿದುಕೊಂಡಿದ್ದೇನೆ. ರಾಜೀನಾಮೆ ಅಂಗೀಕಾರ ಆಗಿದೆ.
ಮನಸ್ಸು ಭಾರ. ಒಳಗೇ ಸುಡುವ ದುಗುಡ.... ಇಪ್ಪತ್ತಾರು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ನನ್ನನ್ನು ನೆಲೆ ನಿಲ್ಲಿಸಿ ನೀರು ಗೊಬ್ಬರ ಎರೆದ ನನ್ನ ಕನ್ನಡಪ್ರಭ... ಮೈಸೂರು ವಿ.ವಿ.ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಮೊದಲ ವರ್ಷ ಇಂಟರ್ನ್‌ಶಿಪ್ ಮಾಡಲು ಬಂದಾಗಲೇ ವಿಶೇಷ ವರದಿಯನ್ನು ನನ್ನ ಕೈಯಿಂದ ಬರೆಯಿಸಿ ಮುಖಪುಟದಲ್ಲಿ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಉದ್ಯೋಗ ನೀಡ್ತೇವೆ ಬರ್ತೀಯಾ ಎಂದು ಕರೆದು ತಬ್ಬಿಕೊಂಡು ಸದಾ ಬೆನ್ನು ತಟ್ಟಿದ ಕನ್ನಡಪ್ರಭ...
ಖಾದ್ರಿ ಶಾಮಣ್ಣ, ಕೆ.ಸತ್ಯನಾರಾಯಣ, ವೈಯೆನ್ಕೆ, ಅವರಿಂದ ಮೊದಲಾಗಿ ರಾಮಪ್ರಸಾದ್, ಗರುಡನಗಿರಿ ನಾಗರಾಜ, ಹಿರಿಯಣ್ಣ ಡಿ.ಮಹದೇವಪ್ಪ, ನಾಡಿಗೇರ ಶ್ರೀಕಾಂತ, ಪಟ್ಟಾಭಿರಾಮನ್, ಕಳಾವರ ನರಸಿಂಹಶೆಟ್ಟಿ, ಭಾಷ್ಯಂ ಸಂಪತ್ತಯ್ಯಂಗಾರ್, ಸಂಪಿಗೆ ಸುಬ್ಬಣ್ಣ, ಮೇನಕಾ ಆಫೀಸಿನಲ್ಲೊಂದು ಸುಪ್ರಭಾತದ ಚಪ್ಪಲ್ಲಿ ಸೀತಾರಾಂ, ಟಿ.ಜಿ.ಅಶ್ವತ್ಥನಾರಾಯಣ, ಮರಡಿಹಳ್ಳಿ ಶ್ರೀಧರಮೂರ್ತಿ ಶ್ರೀಹರ್ಷ, ಜಿ.ಎಸ್.ಸದಾಶಿವ, ಪಾರ್ಥಸಾರಥಿ, ಜಯರಾಮ ಅಡಿಗ, ಶಶಿಧರ ಭಟ್, ರವಿ ಬೆಳಗೆರೆ, ಪ.ಸ.ಕುಮಾರ್, ಎಚ್.ಆರ್.ರಂಗನಾಥ್, ರವಿ ಹೆಗಡೆ, ಶಿವಸುಬ್ರಹ್ಮಣ್ಯ, ಮಲ್ಲಿಕಾರ್ಜುನಯ್ಯ, ಮನೋಹರ ಯಡವಟ್ಟಿ, ಎಸ್ಕೆ ಶ್ಯಾಮಸುಂದರ್, ಉದಯ ಮರಕಿಣಿ, ಜೋಗಿ, ಸುಧಾಕರ ದರ್ಭೆ, ಶಿವಶಂಕರ್ ಅವರಿದ್ದ ಕನ್ನಡಪ್ರಭ....
ಕಾರ್ಡ್‌ಬೋರ್ಡ್ ಗೋಡೆಯ ಆ ಬದಿಯಲ್ಲಿ ವಿ.ಎನ್.ಸುಬ್ಬರಾವ್, ಇ.ರಾಘವನ್, ಟಿ.ಜೆ.ಎಸ್. ಜಾರ್ಜ್, ಕೆ.ಎಸ್. ಸಚ್ಚಿದಾನಂದಮೂರ್ತಿ, ಅರಕಲಗೂಡು ಸೂರ್ಯಪ್ರಕಾಶ್, ಇಂಟೂರಿ ಚಂದ್ರಮೌಳಿ, ಗಿರೀಶ್ ನಿಕಮ್, ಕೆ.ವಿ.ರಮೇಶ್, ರಾಮಕೃಷ್ಣ ಉಪಾಧ್ಯಾಯ, ನಚ್ಚಿ ಅರ್ಥಾತ್ ನರಸಿಂಹ ಚಕ್ರವರ್ತಿ, ಶ್ರೀನಿವಾಸ ಸಿರ್ನೂರ್ಕರ್, ಬಾಲು, ಮುಂತಾದ ಇಂಡಿಯನ್ ಎಕ್ಸ್‌ಪ್ರೆಸ್ ಹಿರಿಯರು- ಸಂಗಾತಿಗಳ ಸಹವಾಸವನ್ನು ಕಟ್ಟಿ ಕೊಟ್ಟ ಕನ್ನಡಪ್ರಭ....
ದಿಲ್ಲಿಗೆ ಹರಸಿ ಕಳಿಸಿ ನನ್ನ ದಿಗಂತಗಳನ್ನು ವಿಸ್ತರಿಸಿದ ಕನ್ನಡಪ್ರಭ....ನೆರೆಯ ನಾಡಿನ ರಾಜಧಾನಿಯಲ್ಲಿ ಕನ್ನಡ ಛಾನೆಲ್‌ನ ಸುದ್ದಿ ವಿಭಾಗದ ಸೂತ್ರ ಹಿಡಿದು ಭ್ರಮ ನಿರಸನಗೊಂಡ ದಿನಗಳಲ್ಲಿ ತಾಯಿಯಂತೆ ಕರೆದು ಮತ್ತೆ ಮಡಿಲಿಗಿರಿಸಿಕೊಂಡ ಕನ್ನಡಪ್ರಭ... ಇತ್ತೀಚಿನ ವರ್ಷಗಳಲ್ಲಿ ಅನೇಕ ಪ್ರತಿಭಾವಂತ ಸಹೋದ್ಯೋಗಿಗಳನ್ನು ಒದಗಿಸಿಕೊಟ್ಟು ಅವರಿಂದ ಕಲಿಯಲು ಅವಕಾಶ ಮಾಡಿಕೊಟ್ಟ ಕನ್ನಡಪ್ರಭ.....
ಇಂತಪ್ಪ ಕನ್ನಡಪ್ರಭ ಇಂದು ಬದಲಾವಣೆಯ ಗಾಳಿಗೆ ಒಡ್ಡಿಕೊಂಡಿದೆ. ಅದರ ಜೀವಕೋಶಗಳ ಡಿಎನ್‌ಎ ವಿನ್ಯಾಸಕ್ಕೆ ಹೊಸ ರೂಪ. ಹೊಸ ಹೊರಳು. ಅಂಗಳದಲ್ಲಿ ಹರಿದ ಹೊಸ ನೀರು.. ಬೀಸಿದ ಹೊಸ ಗಾಳಿ....ಹೊತ್ತಿರುವ ಹೊಸ ಕಾವು ಬೆಳಕನ್ನೂ ನೀಡಲಿ.
ನಾಡಿನ ಪತ್ರಿಕೋದ್ಯಮದ ಪ್ರಖರ ಸಾಕ್ಷಿಪ್ರಜ್ಞೆಯಿಂತಿರುವ ನಮ್ಮ ಹೆಮ್ಮೆಯ ಕೆ.ಸತ್ಯನಾರಾಯಣ ಇನ್ನೂ ಕನ್ನಡಪ್ರಭದಲ್ಲಿ ಬರೆಯುತ್ತಿದ್ದಾರೆ. ಹಳೆಯ ಕನ್ನಡಪ್ರಭದ ಅಳಿದುಳಿದ ಈ ಏಕೈಕ ಹೆಗ್ಗುರುತು ಇನ್ನೂ ಅಳಿಸಿಲ್ಲ. ಟಿ.ಜೆ.ಎಸ್. ಜಾರ್ಜ್ ಅವರ ಅಂಕಣಕ್ಕೆ ಹೊಸ ಹುಮ್ಮಸ್ಸಿನ ಡಿಸ್ಪ್ಲೇ ಕೂಡ ಗಮನಾರ್ಹ.
ಅಂದ ಹಾಗೆ ಬನ್ನಿ ಜೊತೆಗೆ ಕೆಲಸ ಮಾಡೋಣ ಎಂದು ಗೌರವಾನ್ವಿತ ಹಿರಿಯರೊಬ್ಬರು ದಿಲ್ಲಿಗೆ ಫೋನ್ ಮಾಡಿ ಕರೆದ ಹೊತ್ತಿನಲ್ಲಿ ಬದಲಾವಣೆಯ ಚಿತ್ರದ ರೂಪ ರೇಖೆಗಳು ನಿಚ್ಚಳ ಆಗಿರಲಿಲ್ಲ. ಹೀಗಾಗಿ ನಾನು ಹೊರಬಿದ್ದದ್ದು ಬದಲಾವಣೆ ವಿರುದ್ಧ ಎಂಬ ತಾಂತ್ರಿಕ ವ್ಯಾಖ್ಯಾನಕ್ಕೆ ನಿಲುಕುವುದಿಲ್ಲ.
ನುರಿತ ಹಿರಿಯ ಕಸಬುದಾರ ಇ.ರಾಘವನ್ ಚುಕ್ಕಾಣಿ ಹಿಡಿದಿರುವ ವಿಜಯ ಕರ್ನಾಟಕ ನನ್ನ ಸದ್ಯದ ಹೊಸ ನಾವೆ.
(ಇದು ಉಮಾಪತಿಯವರು ಫೇಸ್‌ಬುಕ್‌ನಲ್ಲಿ ಬರೆದದ್ದು. ನಿಷ್ಕಲ್ಮಶ ಮನಸ್ಸುಗಳಿಗೆ ಒಂದು ಸಂಸ್ಥೆಯೊಂದಿಗಿನ ಭಾವನಾತ್ಮಕ ನಂಟು ಹೇಗಿರುತ್ತದೆ ಎಂಬುದಕ್ಕೆ ಇದು ಉದಾಹರಣೆ. ಉಮಾಪತಿಯವರು ತಮ್ಮ ಹೊಸ ನಾವೆಯ ಮೂಲಕ ಹೊಸ ಲೋಕವನ್ನು ನಮಗೆ ಪರಿಚಯಿಸುತ್ತ ಹೋಗಲಿ ಎಂದು ಆಶಿಸುತ್ತಾ, ಅವರಿಗೆ ಶುಭ ಕೋರುತ್ತೇವೆ.)
Saturday, March 19, 2011
ಕನ್ನಡಪ್ರಭ ನೆನೆದು ಉಮಾಪತಿಯವರು ಬರೆದ ವಿದಾಯ ಪತ್ರ...
Subscribe to:
Post Comments (Atom)
ತುಂಬಿದ ಕೊಡ ತುಳುಕುವುದಿಲ್ಲ. ಇದು, ಶ್ರೀ ಉಮಾಪತಿ ಅವರ ಅನಿಸಿಕೆ ಓದಿದ ನಂತರ ಮೂಡಿದ ಅನಿಸಿಕೆ.ನಾನು ಪತ್ರಿಕೋದ್ಯಮದಲ್ಲಿ ತುಂಬಾ ಇಷ್ಟಪಡುವ ವ್ಯಕ್ತಿಗಳಲ್ಲಿ ಒಬ್ಬರು. ಒಂದು ಸಂಸ್ಥೆಯನ್ನು ಬಿಡುವ ಹೊತ್ತಿನಲ್ಲಿ ವಿನಾಕಾರಣ, ಮನಸ್ಸಿನ ಅಸಹನೆಗಳನ್ನು ಪ್ರಶ್ನೋತ್ತರವೋ, ಇನ್ನೊಂದು ರೀತಿಯಲ್ಲಿಯೋ ಹೊರಹಾಕುವ ಈ ದಿನಗಳಲ್ಲಿ ಕೆಲಸ ಮಾಡಿದ ಎಲ್ಲರನ್ನೂ ನೆನೆನೆಸಿಕೊಳ್ಳುತ್ತಾ, ಗೌರವಾನ್ವಿತ ಬೀಳ್ಕೊಡುಗೆಯನ್ನು ಸ್ವತಃ ಪಡೆದುಕೊಂಡ ಉಮಾಪತಿ ಅವರು ಅನುಕರಣೀಯ.
ReplyDeleteನೆಡೆದು ಬಂದ ಹಾದಿಯನ್ನೊಮ್ಮೆ ನೆನಪು ಮಾಡಿಕೊಳ್ಳುವ ಅಪರೂಪದ ವ್ಯಕ್ತಿತ್ವಗಳು ಇಂದಿಗೂ ಇದ್ದಾವೆ ಎಂಬುದಕ್ಕೆ ಉಮಾಪತಿ ಅವರೊಂದು ನಿದರ್ಶನ. ಬಹುಶಃ ಇಂತಹವರ ಇರುವಿಕೆಯೇ ಒಂದಷ್ಟು ಪತ್ರಿಕೋಧ್ಯಮದ ಮಾನ ಕಾಪಾಡಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಉಮಾಪತಿಯವರ ಹೊಸ ನಾವೆ ಸುಗಮವಾಗಿ ಸಾಗಲಿ.
ReplyDeleteಇಂತಹವರ ಇರುವಿಕೆಯೇ ಒಂದಷ್ಟು ಪತ್ರಿಕೋಧ್ಯಮದ ಮಾನ ಕಾಪಾಡಿದೆ ಎಂದರೆ ಅತಿಶಯೋಕ್ತಿ ಆಗಲಾರದು..
ReplyDeleteಕೆಲಸ ಮಾಡಿದ ಎಲ್ಲರನ್ನೂ ನೆನೆನೆಸಿಕೊಳ್ಳುತ್ತಾ, ಗೌರವಾನ್ವಿತ ಬೀಳ್ಕೊಡುಗೆ..
ನನಗೆ ಉಮಾಪತಿ ಗೊತ್ತಿಲ್ಲ ಜನಪದರು ಮಾತನಾಡಿದ್ದು ಕೇಳಿದ್ದೇನೆ ಇದು ಓದಿ ಖುಷಿ ಅಯಿತು...
P. ramesh
Thanks Sampadakeeya for this post & all the very best to the good old Mr.Umapathi.
ReplyDeleteತುಂಬಾ ಆಪ್ತ ಬರಹ. ಈ ಆಪ್ತತೆಯ ಭರದಲ್ಲಿ ಅವರು ಹೇಳಲೇಬೇಕಾದ್ದನ್ನು ಮುಚ್ಚಿಟ್ಟಿದ್ದಾರೆ ಎನ್ನುವುದೂ ಸತ್ಯ. ಅದು ಅವರ ಜಾಣತನ!
ReplyDeleteUnda maneya runa nenedaddu avara dodda manassenisutte.. yarannoo haliyade ellarannoo , yellavannoo kritajnateyinda smarisiddu avara vyaktitvakke hidida kannadi... konegoo VBige tanna kurchi needi, tanu avara kurchiya mele kulitu bittiddaralla annuvude achchariya sangati!
ReplyDeletevery good letter by umapati in kannada. this should be published on all papaers and websites. sampadakeya can publish this article on that`s kannada.com
ReplyDelete@anonymous ಇಲ್ಲಿ ಬೇಕಾಗಿರುವುದು ಜಾಣತನ, ಪೆದ್ದತನ ಅಲ್ಲ
ReplyDeleteಉತ್ತಮ ಬರಹ ಉಮಾಪತಿ ಸಾರ್ .. ಜೊತೆಗೆ ನಿಮ್ಮ
ReplyDeleteದಿಲ್ಲಿಗೆ ಹರಸಿ ಕಳಿಸಿ ನನ್ನ ದಿಗಂತಗಳನ್ನು ವಿಸ್ತರಿಸಿದ ಕನ್ನಡಪ್ರಭ....ನೆರೆಯ ನಾಡಿನ ರಾಜಧಾನಿಯಲ್ಲಿ ಕನ್ನಡ ಛಾನೆಲ್‌ನ ಸುದ್ದಿ ವಿಭಾಗದ ಸೂತ್ರ ಹಿಡಿದು ಭ್ರಮ ನಿರಸನಗೊಂಡ ದಿನಗಳಲ್ಲಿ ತಾಯಿಯಂತೆ ಕರೆದು ಮತ್ತೆ ಮಡಿಲಿಗಿರಿಸಿಕೊಂಡ ಕನ್ನಡಪ್ರಭ... ಇತ್ತೀಚಿನ ವರ್ಷಗಳಲ್ಲಿ ಅನೇಕ ಪ್ರತಿಭಾವಂತ ಸಹೋದ್ಯೋಗಿಗಳನ್ನು ಒದಗಿಸಿಕೊಟ್ಟು ಅವರಿಂದ ಕಲಿಯಲು ಅವಕಾಶ ಮಾಡಿಕೊಟ್ಟ ಕನ್ನಡಪ್ರಭ.....
ಈ ಸಾಲುಗಳಂತೂ ಸೂಪರ್. ಉಮಾಪತಿಯವರ ಈ ಲೇಖನ ಕನ್ನಡ ಪ್ರಭದ ಬಗ್ಗೆ ಅವರಿಗಿದ್ದ ಅದಮ್ಯ ಪ್ರೀತಿಯನ್ನು ತೋರಿಸುತ್ತದೆ. ಬೆಸ್ಟ್ ಆಫ್ ಲಕ್ ಉಮಾಪತಿ ಸಾರ್. ನಿಮ್ಮ ಆದರ್ಶಗಳು ನಮಗೆ ಮಾದರಿಯಾಗಿರಲಿ ..
avara haleyadu ivarige hosadu,ivara haleyadu avarige hosadu.kutu saguvavarige yeradu donigalu..... haleyade
ReplyDeleteSir. Umapathy is one of the few journalists who can authentically write about many inter-state issues.there was a rumour in the media circle that he would not work for KP due to some reasons. Ethics, principles are important for many. Umapathi is one among them. Lots of wishes to him. Vijayeebhava....
ReplyDeleteNimma Lekana changi ide. jotege UMAPATHY Avaru barediruva Raajiname patravu Chanagi ide. Umapathy avarige VK yalli Olleyadagalli, Umapathy avarige VK Management ooleya stana-maana koodalli. ALL THE BEST UMAPATHY Inu ನಾನು ಪತ್ರಿಕೋದ್ಯಮದಲ್ಲಿ ಇಷ್ಟಪಡುವ ವ್ಯಕ್ತಿಗಳಲ್ಲಿ Mysore na AMSHI Prasanakumar kuda ಒಬ್ಬರು. AMSHI kuda more then 18 year inda Kannadaprabha dalli iddare, avrige olleyadagali.
ReplyDeleteಕನ್ನಡಪ್ರಭಕ್ಕೆ ರಾಜೀನಾಮೆ ನೀಡಿರುವ ಡಿ.ಉಮಾಪತಿ ಅವರು ತಮ್ಮ ಪತ್ರದಲ್ಲಿ ತಮ್ಮೊಂದಿಗೆ ದುಡಿದ ಅನೇಕ ಸಹೋದ್ಯೋಗಿಗಳನ್ನು ನೆನಪಿಸಿಕೊಂಡಿದ್ದಾರೆ. ಆದರೆ, ಇನ್ನೂ ಅನೇಕ ಅವರ ಆಪ್ತಮಿತ್ರರಾದ ಸಹೋದ್ಯೋಗಿಗಳನ್ನೇ ಅವರು ಮರೆತಿರುವುದು ದುರದೃಷ್ಟಕರ. ಕನ್ನಡಪ್ರಭದಲ್ಲಿ ಅವರೊಂದಿಗೆ ಸುಮಾರು 25 ವರ್ಷ ದುಡಿದು ನಂತರ ಉದಯವಾಣಿಯಲ್ಲಿ ಸಂಪಾದಕರೂ ಆಗಿದ್ದ ತಿಮ್ಮಪ್ಪ ಭಟ್, ಸುಮಾರು 20 ವರ್ಷ ಅವರೊಂದಿಗೆ ಕೆಲಸ ಮಾಡಿದ ಸಂಪಾದಕರಾಗುವ ಅರ್ಹತೆ ಇರುವ ಶ್ರೀವತ್ಸ ನಾಡಿಗ್, ಸುಮಾರು 13 ವರ್ಷ ಕನ್ನಡಪ್ರಭದಲ್ಲಿ ವರದಿಗಾರರಾಗಿ ಹೆಸರು ಮಾಡಿದ ಶ್ರಮಜೀವಿ, ಪ್ರತಿಭಾವಂತ ಕೂಡ್ಲಿ ಗುರುರಾಜ, ತಮ್ಮ ವಿಭಿನ್ನ ಶೈಲಿಯ ಬರವಣಿಗೆಗೆ ಹೆಸರಾದ ವರದಿಗಾರ ದಯಾಶಂಕರ ಮೈಲಿ, ಸಜ್ಜನ ಅಂಶಿಪ್ರಸನ್ನಕುಮಾರ್ ಅಂಥವರನ್ನು ಉಮಾಪತಿ ಈ ಸಂದರ್ಭದಲ್ಲಿ ನೆನೆಯಬೇಕಿತ್ತು
ReplyDeleteಕೊಳೆಯೋ ಹಂತದಲ್ಲಿ..ಕಳೆ ತೆಗೆಯೋ ಕೆಲಸ ಆರಂಭವಾಗಿರೋದು `ಮಾಧ್ಯಮ'ಗಳ ಭಾಗ್ಯ!
ReplyDeleteಬಂದೇ ಬರತಾವ ಕಾಲ...ಅನ್ನೋ ಹಾಗೆ ಎಲ್ಲರಿಗೂ ಒಳ್ಳೇದಾಗ್ಲಿ. ಆದ್ರೆ... `ಜಾತಿವ್ಯವಸ್ಥೆಯ ಭದ್ರಕೀಲಿ ಕೈ'ಯಂತೆ ಎಲ್ಲಾ (?) ಪತ್ರಿಕೆಗಳ , ವಾಹಿನಿಗಳ ಮುಖ್ಯಸ್ಥರ ಸ್ಥಾನ ಅಲಂಕರಿಸುವವರು ಸ್ವಜನ ಪಕ್ಷಪಾತಕ್ಕೆ ಈಡಾಗದೆ ನಿಜವಾದ ಪ್ರತಿಭೆಗಳಿಗೆ, ಬದ್ಧತೆಯಿರುವವರಿಗೆ,ಸಾಮರ್ಥ್ಯ ಇರುವವರಿಗೆ ಇನ್ನೂ ಹೆಚ್ಚಿನ ಮನ್ನಣೆ ನೀಡುವಂಥಾದರೆ ಮಾಧ್ಯಮ ರಂಗಕ್ಕೊಂದು ಹೊಸ ಆಯಾಮ ದೊರೆಯುವುದರೊಂದಿಗೆ ಹೊಸ ಸಂಚಲನ ಉಂಟಾಗುತ್ತದಲ್ಲವೇ...
ಅಂದ ಹಾಗೆ ಇನ್ನೊಂದು ವಿಷಯ.. ಎಷ್ಟೇ ಕೆಲಸ ಮಾಡಿದ್ರೂ ಲಿಂಗ ತಾರತಮ್ಯ ಈ ಕಾಲದಲ್ಲೂ ಅದೂ ಜನಜಾಗೃತಿ ಮೂಡಿಸುವ ಮಾಧ್ಯಮಗಳಲ್ಲಿ ಹೆಚ್ಚು ವಜೃಂಭಿಸುವುದೇಕೆ.. ಉತ್ತರ ಹೇಳುವಿರಾ..? ಗೊತ್ತಿದ್ದೂ ಹೇಳದಿದ್ದರೆ ತಲೆ....ಹುಷಾರ್!
ಪತ್ರಕರ್ತರ ನಡವಳಿಕೆಗಳೆಲ್ಲ ಸಂಶಯಾಸ್ಪದವಾಗುತ್ತಿರುವ ಈ ಕಾಲದಲ್ಲಿ ಆ ವೃತ್ತಿಯ ಘನತೆ ಗೌರವಗಳನ್ನು ಕಾಪಾಡಿಕೊಂಡು ಹೋಗುತ್ತಿರುವ ಬೆರಳೆಣಿಕೆಯ ಪತ್ರಕರ್ತರಲ್ಲಿ ಉಮಾಪತಿ ಕೂಡಾ ಒಬ್ಬರು. ತಮ್ಮ ವರದಿಗಳ ಮೊದಲ ಹಂತದಲ್ಲಿ ಜನರ ಸಂವೇದನೆಗಳಿಗೆ ಸೂಕ್ಷ್ಮವಾಗಿ ಧ್ವನಿಯಾಗುವ ಅವರು ನಿಧಾನವಾಗಿ ಸಾರ್ವಜನಿಕರ ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯಾಗುತ್ತಾರೆ. ಅವರ ವರದಿಗಳು ನಮ್ಮ ಸಂವೇದನೆಗಳನ್ನು ಹರಿತಗೊಳಿಸಿವೆ. ಅವರನ್ನು ಬಹಳ ವರ್ಷಗಳಿಂದ ಹತ್ತಿರದಿಂದ ಬಲ್ಲ ನನಗೆ, ಅವರು ಕನ್ನಡ ಪ್ರಭ ಬಿಟ್ಟ ವಿಚಾರ ಕೇಳಿ ಆಶ್ಚರ್ಯವಾಗಲಿಲ್ಲ. ಯಾಕೆಂದರೆ ಕನ್ನಡ ಪ್ರಭ ಈಗ ಮೊದಲಿನಂತೆ ಇಲ್ಲವಲ್ಲ?
ReplyDeleteಉಮಾಪತಿಯವರ ದಿಟ್ಟ ನಿರ್ಧಾರಕ್ಕೆ ಅಭಿನಂದನೆಗಳು
hattu varshagala kaala kannadaprabhadalliddu eega vijaya karnatakadaaliruva vasantha nadiger, innu kannada prabhadale iruava d m bhatt avarannu umapathya neneya bekittu
ReplyDeleteದೆಹಲಿಯಲ್ಲಿ ನಾನು ಕಂಡ ಹಲವಾರು ಪತ್ರಕರ್ತರಲ್ಲಿ ಉಮಾಪತಿ ನಮ್ಮ ಅಚ್ಚುಮೆಚ್ಚಿನವರು. ಸಂವೇದನಾಶೀಲ,ಅತ್ಯಂತ ಸಂಕೋಚದ ಅವರು ತಮ್ಮ ಸುತ್ತಲಿನ ವಲಯದಲ್ಲಿ ಭಿನ್ನವಾಗಿ ಗುರುತಿಸಲ್ಪಡುವ ವ್ಯಕ್ತಿತ್ವವುಳ್ಳವರು. ’ನನ್ನ ಕನ್ನಡಪ್ರಭ’ಎನ್ನುವ ಅವರ ಮಾತೇ ಅವರೆಷ್ಟು ಭಾವನಾತ್ಮಕವಾಗಿ ಕನ್ನಡಪ್ರಭದೊಂದಿಗೆ ಹೆಣೆದುಕೊಂಡಿದ್ದರು ಎಂಬುದು ಅರ್ಥವಾಗುತ್ತದೆ. ತುಂಬಾ ಆಪ್ತವಾದ ಬರಹ ಉಮಾಪತಿ ಸರ್. ನಿಮ್ಮ ಆಳವಾದ ಅನುಭವ ಮತ್ತು ಒಳನೋಟಗಳಿಂದ ’ವಿಜಯ ಕರ್ನಾಟಕಕ್ಕೆ ಹೊಸ ಆಯಾಮ ಸಿಗಲಿ, ನೀವು ವಿ.ಕ. ಪ್ರತಿನಿಧಿಯಾಗಿ ದೆಹಲಿಯಲ್ಲೇ ಇರಿ ನಮ್ಮೊಂದಿಗೆ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ. ಅಭಿನಂದನೆಗಳು.
ReplyDeleteModalinindaloo Umapathy nishturavaadi, thamage anisiddu nirbhayavaagi helalu avarige yaava anjike, sankocha illa. Hosa badukinalli avarige shubhavaagali.
ReplyDeleteನನ್ನ ಬಗೆಗೆ ಒಳ್ಳೆಯ ಮಾತನಾಡಿ ಬೆನ್ನು ತಟ್ಟಿ ಪ್ರೀತಿ ತೋರಿರುವ ಎಲ್ಲ ಹಿರಿಯ ಕಿರಿಯ ಮಿತ್ರರಿಗೆ ಕೖತಜ್ಞತೆಗಳು. ತಮ್ಮ ಸದ್ಭಾವನೆಯನ್ನು ಹೀಗೆಯೇ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
ReplyDeleteಆದರಗಳೊಂದಿಗೆ
ಡಿ.ಉಮಾಪತಿ