Thursday, March 17, 2011

ಪ್ಯಾಟೆ ಹುಡ್ಗೀರು: ನೋಟೀಸು ಕೊಟ್ಟರೆ ಸಾಕೆ? ಈ ಅಸಹ್ಯ ನಿಲ್ಲಬೇಡವೇ?


ಒಂದು ಸಮಾಧಾನದ ಸುದ್ದಿ ಬಂದಿದೆ. ಸುವರ್ಣ ಟಿವಿಯ ಪ್ಯಾಟಿ ಹುಡ್ಗೀರ್ ಹಳ್ಳಿ ಲೈಫ್ ಶೋನಲ್ಲಿ ಬಾಲಕನೊಬ್ಬನ್ನು ಹಿಂಸಿಸಿದ ಪ್ರಕರಣ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಪ್ರತಿಕ್ರಿಯಿಸಿದ್ದು, ಚಾನಲ್‌ಗೆ ನೋಟಿಸ್ ನೀಡಲು ನಿರ್ಧರಿಸಿದೆ.

ದಟ್ಸ್ ಕನ್ನಡ ಈ ಕುರಿತು ವಿವರವಾಗಿ ವರದಿ ಮಾಡಿದೆ. ಆಯೋಗದ ಸದಸ್ಯ ವಾಸುದೇವ್ ಶರ್ಮ ಪ್ರತಿಕ್ರಿಯೆ ನೀಡಿದ್ದು, ತಮಾಷೆಗಾಗಿ ಕೂಡಾ ಮಕ್ಕಳನ್ನು ಮಾನಸಿಕವಾಗಿ ಅಥವಾ ದೈಹಿಕವಾಗಿ ಹಿಂಸಿಸುವಂತಿಲ್ಲ. ಅದರಲ್ಲೂ ಲಕ್ಷಾಂತರ ಮಂದಿ ನೋಡುವ ರಿಯಾಲಿಟಿ ಶೋನಲ್ಲಿ ಈ ರೀತಿ ತೋರಿಸಿ ಯಾವ ಸಂಸ್ಕೃತಿ ಬೆಳೆಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ರಿಯಾಲಿಟಿ ಶೋ ಚಿತ್ರೀಕರಣವಾಗುತ್ತಿರುವ ಬಾಗಲ ಕೋಟೆ ಜಿಲ್ಲೆಯ ಕೆರಕಲ್ ಮಟ್ಟಿ ಗ್ರಾಮ ಪಂಚಾಯತಿ, ಮಕ್ಕಳ ಕಲ್ಯಾಣ ಸಮಿತಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಬಾಲಕನಿಗೆ ಚಿತ್ರಹಿಂಸೆ ನೀಡಿರುವ ಬಗ್ಗೆ ಸ್ಪಷ್ಟನೆಯನ್ನು ಕೋರಲಾಗಿದೆ. ಬಾಲಕನ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಈ ಬಗ್ಗೆ ತುರ್ತು ಚರ್ಚೆ ನಡೆಸಿ, ಮುಂದಿನ ಕ್ರಮ ಜರಗಿಸುವುದಾಗಿ ವಾಸುದೇವ ಶರ್ಮಾ ಹೇಳಿದ್ದಾರೆ.

ಇಷ್ಟಾದರೆ ಸಾಕೆ? ಈ ಅನೈತಿಕ ಕಾರ್ಯಕ್ರಮ ಮುಂದುವರೆಯಬೇಕೆ? ಆಯೋಗವೇನೋ ತನಿಖೆ ನಡೆಸುತ್ತದೆ. ಆದರೆ ಇಂಥ ಆಯೋಗಗಳಿಗೆ ನೀಡಿರುವ ಅಧಿಕಾರವಾದರೂ ಎಷ್ಟು? ಇದು ಕ್ರಿಮಿನಲ್ ಆರೋಪವಾದ್ದರಿಂದ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕಲ್ಲವೇ?

ಇಷ್ಟೆಲ್ಲ ಆದರೂ ಬೇರೆ ಮೀಡಿಯಾಗಳು ಸುಮ್ಮನಿರುವುದೇಕೆ? ತಪ್ಪು ಮಾಡಿರುವುದೂ ಒಂದು ಮೀಡಿಯಾ ಎಂಬ ಕಾರಣಕ್ಕಾಗಿಯೇ?

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಎಂಬ ರಿಯಾಲಿಟಿ ಶೋನ ಎರಡನೇ ಆವೃತ್ತಿ ಈಗ ನಡೆಯುತ್ತಿದೆ. ಮೊದಲ ಆವೃತ್ತಿಯ ನಂತರ ಇದೇ ಪ್ರಕಾರದ ಬೇರೆ ರಿಯಾಲಿಟಿ ಶೋಗಳನ್ನು ಸುವರ್ಣ ಟಿವಿ ನಡೆಸಿತ್ತು. ಆದರೆ ಟಿಆರ್‌ಪಿಯಲ್ಲಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕ್ಲಿಕ್ ಆಗಿದ್ದರಿಂದ ಈಗ ಎರಡನೇ ಆವೃತ್ತಿ ನಡೆಸುತ್ತಿದೆ.

ಎರಡನೇ ಆವೃತ್ತಿಗಾಗಿ ಕಾರ್ಯಕ್ರಮದ ನಿರ್ಮಾಪಕರು ಆಯ್ದುಕೊಂಡಿದ್ದು ಬಾಗಲಕೋಟೆಯ ಕೆರಕಲಮಟ್ಟಿ ಗ್ರಾಮ. ಇದು ರಿಯಾಲಿಟಿ ಶೋ ಆದರೂ, ಇಲ್ಲಿ ಎಲ್ಲವೂ ಸ್ಕ್ರಿಪ್ಟ್‌ನಂತೆಯೇ ನಡೆಯುತ್ತದೆ. ಎಲ್ಲ ರಿಯಾಲಿಟಿ ಶೋಗಳೂ ವೀಕ್ಷಕರ ಕಣ್ಣಿಗೆ ಮಣ್ಣೆರಚುತ್ತಲೇ ಬಂದಿವೆ. ಈ ಶೋನಲ್ಲಿ ನಡೆಯುತ್ತಿರುವುದು ಒಂದೊಂದು ಅನಾಹುತವಲ್ಲ.

ಶೋನಲ್ಲಿ ಉತ್ತರ ಕರ್ನಾಟಕದ ಹೆಣ್ಣಮಕ್ಕಳು ಸ್ವಭಾವತಃ ಒರಟು ಎಂದು ಬಿಂಬಿಸಲಾಗಿದೆ. ನಗರಗಳಲ್ಲಿ ಬೆಳೆದ ಹೆಣ್ಣುಮಕ್ಕಳನ್ನು ಹಳ್ಳಿಯ ಮನೆಗಳಲ್ಲಿ ಬಿಟ್ಟು ಅವರನ್ನು ಗೋಳುಹುಯ್ದುಕೊಳ್ಳಲಾಗುತ್ತದೆ. ತಪ್ಪು ಮಾಡಿದರಿಗೆ ಕೊಡುವ ಶಿಕ್ಷೆಯೋ ಕ್ರೂರ. ತಪ್ಪು ಮಾಡಿದ ಒಬ್ಬಾಕೆಯನ್ನು ವಯಸ್ಸಾದ ಹಳ್ಳಿ ಮಹಿಳೆಯೊಬ್ಬಳು ಹೊಡೆಯುವ, ಉರಿಯುವ ಕೊಳ್ಳಿಯಿಂದ ತಿವಿಯಲು ಬರುವ ದೃಶ್ಯಗಳು ಪ್ರಸಾರವಾಗಿವೆ. ಒಂದು ಹೆಣ್ಣುಮಗಳಿಗೆ ಬಲವಂತವಾಗಿ ಒಂದು ಕಪ್‌ನಷ್ಟು ಗಂಜಲವನ್ನು ಕುಡಿಸಲಾಗಿದೆ. ಹಸಿ ಮೀನನ್ನು ಇಡಿಯಾಗಿ ತಿನ್ನಿಸಲಾಗಿದೆ. ಮೆಣಸಿನಕಾಯಿಯನ್ನು ತಿನ್ನಿಸಿದ ಪರಿಣಾಮವಾಗಿ ಒಬ್ಬಾಕೆ ಆಸ್ಪತ್ರೆ ಸೇರಬೇಕಾಯಿತು. ಒಬ್ಬಾಕೆಗೆ ಕೊಟ್ಟ ಶಿಕ್ಷೆ ಏನು ಗೊತ್ತೆ? ಇಡೀ ದಿನ ಒಂದು ಹಸುವಿನ ಜತೆ ಇರಬೇಕು. ಅದು ಸೆಗಣಿ ಹಾಕಿದಾಗ ಅದು ಕೆಳಕ್ಕೆ ಬೀಳದಂತೆ ಕೈಯಲ್ಲಿ ಹಿಡಿಯಬೇಕು! ಎಂಥ ಸ್ಯಾಡಿಸ್ಟ್‌ಗಳಿರಬೇಕು ಇವರು?

ಇಲ್ಲಿ ಪ್ರಶ್ನೆಗಳು ಸಾವಿರ ಇದೆ. ದುಡ್ಡಿನ ಆಸೆಗಾಗಿ ಶೋಗೆ ಬಂದಿರುವ ಹುಡುಗಿಯರಿಗೆ ಹಿಂಸೆ ಕೊಡಿಸಿರುವುದು ಹಳ್ಳಿಯ ಹೆಣ್ಣುಮಕ್ಕಳಿಂದ. ಅದೇನು ಆ ಹೆಣ್ಣುಮಕ್ಕಳು ತಾವೇ ತಾವಾಗಿ ಕೊಟ್ಟ ಹಿಂಸೆಯಲ್ಲ. ಎಲ್ಲವೂ ಕಾರ್ಯಕ್ರಮದ ನಿರ್ದೇಶಕರ ಆಣತಿಯಂತೆ ನಡೆದಿರುತ್ತದೆ. ಹೀಗೆ ಹಳ್ಳಿ ಹೆಣ್ಣಮಕ್ಕಳನ್ನು ಒರಟರಂತೆ ಚಿತ್ರಿಸುವುದು ಯಾವ ನ್ಯಾಯ?

ಯಾವ ರೀತಿಯ ಆಹಾರ ಸೇವಿಸಬೇಕು ಎಂಬುದು ಅವರವರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು. ಹೀಗಿರುವಾಗ ಹಸಿ ಮೀನನ್ನು ತಿನ್ನಿಸುವುದು ಎಷ್ಟು ಸರಿ? ಮಾಂಸಾಹಾರಿಗಳಾದರೂ ಹಸಿ ಮೀನನ್ನು ತಿನ್ನಲು ಒಪ್ಪುತ್ತಾರೆಯೇ? ಗಂಜಲವನ್ನು ಬಲವಂತವಾಗಿ ಕುಡಿಸುವುದು ಸರಿಯೆ?

ಈ ಕಾರ್ಯಕ್ರಮ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆ. ಬಾಲಕನನ್ನು ಬೆತ್ತಲೆಗೊಳಿಸಿದ ಘಟನೆ ಕೇವಲ ಆ ಹುಡುಗನಿಗೆ ನೀಡಿದ ಹಿಂಸೆ ಮಾತ್ರವಲ್ಲ, ಅದನ್ನು ನೋಡಿದ ಎಲ್ಲ ವೀಕ್ಷಕರಿಗೂ ಕೊಟ್ಟ ಹಿಂಸೆ. ಇದನ್ನು ನೋಡಿರಬಹುದಾದ ಮಕ್ಕಳ ಮನಸ್ಸುಗಳಿಗೆ ಎಂಥ ಆಘಾತವಾಗಿರಬಹುದು ಎಂಬುದನ್ನೂ ನಾವು ಗಮನಿಸಬೇಕಾಗುತ್ತದೆ.

ಇಂಥ ಅಸಹ್ಯ ಬೇಕೆ?

ಈ ಅಸಹಾಯಕ ಸಂದರ್ಭದಲ್ಲೂ ಮೌನೇಶ್ ವಿಶ್ವಕರ್ಮ ತಾವು ನೋಡಿದ್ದನ್ನು ದಾಖಲಿಸಿ, ಸುದ್ದಿ ಮಾಡಿದ್ದಾರೆ. ಅದನ್ನು ವಾರ್ತಾಭಾರತಿ ಪ್ರಕಟಿಸಿದೆ. ಅದರ ಪರಿಣಾಮವಾಗಿಯೇ ಮಕ್ಕಳ ಆಯೋಗ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಮೌನೇಶ್ ಹಾಗು ವಾರ್ತಾಭಾರತಿಗೆ ಅಭಿನಂದನೆಗಳು.

ಈ ವಿಷಯವನ್ನು ವೆಬ್ ಸೈಟ್, ಬ್ಲಾಗ್, ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಚರ್ಚಿಸಿದ ಎಲ್ಲರಿಗೂ ಅಭಿನಂದನೆಗಳು. ಇಂಥ ಸಂದರ್ಭಗಳಲ್ಲಿ ಸಾತ್ವಿಕ ಆಕ್ರೋಶವನ್ನಾದರೂ ವ್ಯಕ್ತಪಡಿಸುವ ವೈಯಕ್ತಿಕ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದಿರೋಣ. ಮನುಷ್ಯತ್ವವನ್ನೇ ಮರೆತ ಸಿನಿಕರಿರುವ ಈ ಕಾಲದಲ್ಲಿ ಇಷ್ಟೊಂದು ಜೀವಗಳು ಆ ಬಾಲಕನ ಪರವಾಗಿ ಚಡಪಡಿಸಿರುವುದೇ ಸಮಾಧಾನದ ಸಂಗತಿ, ಇದು ಹೊಸ ವಿಶ್ವಾಸವನ್ನು ನಮ್ಮಲ್ಲಿ ಮೂಡಿಸಲಿ.

19 comments:

  1. ಮೌನೇಶ್ ಮತ್ತು ವಾರ್ತಾಭಾರತಿಯ ಜತೆಗೆ ನಿಮಗೂ ಅಭಿನಂದನೆಗಳು. ಹಿಂದಿನ ಲೇಖನ ಓದಿ ಎಷ್ಟು ಆಘಾತವಾಗಿತ್ತೊ, ಈ ಲೇಖನ ಓದಿ ಅದಕ್ಕಿಂತ ಹೆಚ್ಚಿಗೆ ಆಘಾತವಾಯಿತಲ್ಲದೆ ರೋಷವುಕ್ಕಿತು ಕೂಡಾ. ನಮ್ಮ ನಾಡಿನ ವೀಕ್ಷಕರ ಬುದ್ಧಿಯೇ ಮಂದವಾದಂತಿದೆ. ’ಟೀವಿಯಲ್ಲಿ ಬಂದದ್ದೆಲ್ಲ ತೀರ್ಥವಲ್ಲ’ ಎಂಬ ಅರಿವು ಯಾವ ಕಾಲಕ್ಕೆ ನಮ್ಮವರಿಗೆ ಬರುತ್ತದೊ? ಫಿಕ್ಟೀಶಿಯಸ್ ಧಾರಾವಾಹಿಗಳ ಮೌಲ್ಯಗಳಬಗ್ಗೆ, ಪಾತ್ರಗಳ ಬಗ್ಗೆ ಮ್ಯಾಗಜೀನುಗಳಲ್ಲಿ ಬರೆದು ಚರ್ಚೆ ಮಾಡುವ ಪ್ರೇಕ್ಷಕರು ಇದರ ಬಗ್ಗೆ ಕುರುಡಾಗಿರುವದು ಯಾಕೆಂದೇ ಅರ್ಥವಾಗದು!! ಇನ್ನುವರೆಗು ಒಂದು ಚ್ಯಾನೆಲ್ ಕೂಡ ಈ ವಿಷಯ ಚರ್ಚೆ ಮಾಡಿಲ್ಲ. ಆಹ್! ಮರೆತಿದ್ದೆ, ಮೂಢನಂಬಿಕೆಗಳನ್ನು ಪ್ರಚಾರ ಮಾಡುವದರಿಂದ, ಇಂಥಹ ದರಿದ್ರ ಟ್ರೆಂಡುಗಳಿಗೆ ಕ್ರಿಯೇಟಿವಿಟಿಯ ಹೆಸರು ಕೊಡುವದರಿಂದ ಪುರುಸೊತ್ತು ಸಿಕ್ಕಿದರೆ ತಾನೆ?
    ಇದು ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯೆ ನೂರನೆ ವರ್ಷ ಬೇರೆಯಂತೆ!!

    ReplyDelete
  2. ಇದೊಂದು ಅಸಹ್ಯಕರ ಘಟನೆ. Media is losing it's sensitivity in the name of entertainment.

    ReplyDelete
  3. Media lost the Purpose, now selling itself as worst WHORE.

    ReplyDelete
  4. ನ್ಯಾಯಾಲಯದ ತೀರ್ಪು ಬರುವ ವರೆಗೆ ಕಾನೂನು ಬಲ್ಲವರು ಈ ಕಾರ್ಯಕ್ರಮದ ಪ್ರಸಾರವನ್ನು ನಿಲ್ಲಿಸಲಾರೇ? ಕಾರ್ಯಕ್ರಮದ ನಿರೂಪಕ, ನಿರ್ದೇಶಕ, ಛಾಯಾಗ್ರಾಹಕ, ಘಟನೆಯಲ್ಲಿ ಭಾಗಿಗಳಾದವರಿಗೆ ಶಿಕ್ಷೆ ಏನು? ಯಾವಾಗ? ವೀಡಿಯೋಗೆ ಹಾಡನ್ನು ಸೇರಿಸಿದ ಸ೦ಕಲನಕಾರ, ಪ್ರಸಾರಮಾಡಿದ ವಾಹಿನಿ, ಪ್ರಸಾರಕ್ಕೆ ಅನುಮತಿ ನೀಡಿದ ಮೇಲ್ವಿಚಾರಕ ಮು೦ತಾದವರಿಗೆ ವಿಧಿಸಬೇಕಾದ ಶಿಕ್ಷೆ ಯಾವುದು? ಇಷ್ಟಕ್ಕೂ ಆಯೋಗ ನೋಟೀಸು ಕೊಟ್ಟು ಕೈ ತೊಳೆದುಕೊ೦ಡಿದೆಯೆ? ಇದರಲ್ಲಿ ಜನಸಾಮನ್ಯರು ವಹಿಸಬಹುದಾದ ಪಾತ್ರವೇನು? ಇದರ ಬಗ್ಗೆ ಚರ್ಚೆ ಆಗಲಿ, ಇಷ್ಟಕ್ಕೂ ೨೪/೭ ವಾರ್ತಾವಾಹಿನಿಗಳು ಏನು ಮಾಡುತ್ತಿವೆ?

    ReplyDelete
  5. kaasu kotre elru sagani kooda thinthare(manushyara sagani)

    ReplyDelete
  6. All is money - no humanity .... Money can make man anything - man is only behind money... time to change..

    ReplyDelete
  7. ee show ge hudgiru innenthavaru?
    Avru duddigoskara enbekadru madoke ready iddara?

    ReplyDelete
  8. Besides, the programme projects women in the village as rude and inhuman. The prejudices of the Suvarna crew about people of north Karnataka are at work. I can't imagine an old woman ill-treat guests.
    The intellectuals should come forward and criticise this trend.

    ReplyDelete
  9. people who talk about other s corruption are the most corrupted people of this society. Media had lost its sensitivity long back. but now it has lost its sense also. really sad.

    ReplyDelete
  10. The anchor looks like a criminal from any part of Bangalore concrete forest. His behavior remembers Hitler regime

    ReplyDelete
  11. ನೋಟೀಸ್ ಆಗಿರೋದು ಓಳ್ಳೆದು. ಆದರೆ ಅದರ ಪರಿಣಾಮ ಆಗಬೇಕಿದೆ. ಚಿಕ್ಕಪುಟ್ಟದಕೆಲ್ಲ ಪ್ರತಿಭಟನೆ ಮಾಡೋರು..ಈ ಬಗ್ಗೆ ಮೌನ.

    ReplyDelete
  12. ದಯವಿಟ್ಟು, ಆ ಶೋದ ನಿರ್ದೇಶಕರ ಹಾಗೂ ಅದನ್ನು ಆಯೋಜಿಸುತ್ತಿರುವವರ ಮೊಬೈಲ್‌ ನಂಬರ್‌ ಅನ್ನು ಇಲ್ಲಿ ನೀಡಿದರೆ ಒಳ್ಳೆಯದು. ಅವರೊಂದಿಗೆ ಫೋನ್‌ನಲ್ಲಿ ನೇರವಾಗಿ ಮಾತನಾಡಬೇಕು ಅನ್ನಿಸುತ್ತಿದೆ. ಬ್ಲಾಗ್‌ನಲ್ಲಿ ಕಾಮೆಂಟ್‌ ಹಾಕಿದ ಮಾತ್ರಕ್ಕೆ ಆ ದಪ್ಪ ಚರ್ಮದ ವ್ಯಕ್ತಿಗಳಿಗೆ ಅರ್ಥವಾಗೋಲ್ಲ. ನನ್ನ ಅಸಮಾಧಾನವನ್ನು ನೇರವಾಗಿ ಅಭಿವ್ಯಕ್ತಿಸಬೇಕು ಎನ್ನಿಸುತ್ತಿದೆ.ದಯವಿಟ್ಟು ಯಾರಾದರೂ ಅವರ ಮೊಬೈಲ್‌ ನಂಬರ್‌ ಅನ್ನು ನೀಡಿ. - ಅರುಣ್‌

    ReplyDelete
  13. ಕಳೆದ ವರ್ಷ ಸೆಪ್ಟಂಬರದಲ್ಲಿ ನನ್ನ ಬ್ಲಾಗ್ ’ಮೌನಕಣಿವೆ’ಯಲ್ಲಿ ’ರಿಯಾಲಿಟಿ ಶೋಗಳಲ್ಲಿ ವೈನೋದಿಕ ಹಿಂಸೆ’ ಎಂಬ ಲೇಖನ ಬರೆದಿದ್ದೆ. ಅದರಲ್ಲಿ ಈ ಶೋ ಆಯೋಜಿಸುತ್ತಿರುವವರ ಬಗ್ಗೆ ಕೆಲವು ವಿವರಗಳಿವೆ. ಆಸಕ್ತಿ ಇರುವವರು ಅದನ್ನು ನೋಡಬಹುದು

    ReplyDelete
  14. ನಿಜಕ್ಕೂ ನೀವು ಅಭಿನಂದನಾರ್ಹರು ....ರಿಯಾಲಿಟಿ ಶೋ ಗಳು ಎಷ್ಟು ರಿಯಲ್ ಎಂಬುದನ್ನು ನಾನು ಅನುಭವಿಸಿದ್ದೇನೆ...ಮತ್ತು ಇಂಥ ಶೋ ಗಳಿಂದ ಯಾರಿಗೆ ಮತ್ತು ಹೇಗೆ ಲಾಭ??/ಎಂಬುದನ್ನು ವಿಕ್ಷಕರಾದ ನಾವು ಒಮ್ಮೆ ಆದರೂ ಆಲೋಚಿಸಬೇಕು. ಪ್ಯಾಟೆ ಹುದುಗೀರ್ದು ಈ ಗೋಳಾದರೆ..ಹಳ್ಳಿ ಹುಡುಗರನ್ನು ಪ್ಯಾಟೆಗೆ ಕರೆದು ಮಾಡಿದ ಇನ್ನೊಂದು ಡ್ರಾಮಾ ಇನ್ನು ಕಣ್ಣ ಮುಂದಿದೆ..ಅರೆಬೆತ್ತಲೆ ಹುಡುಗೀರು ಅವರ ಸುತ್ತ ಮುತ್ತ ಓಡಾಡೋದು..ಆ ಹುಡುಗರಿಗೂ ಮುಜುಗರ ಉಂಟುಮಾಡಿತ್ತು....ಆಯೋಗವು ಕೈಗೊಳ್ಳುವ ಕ್ರಮ ಮುಂದಿನ ಇಂಥ ಶೋ ಗಳಿಗೆ ಒಂದು ಬೇಲಿ ಹಾಕುವಲ್ಲಿ ಸಫಲವಾಗಲಿ ಎಂಬ ಆಶಯವಿದೆ

    ReplyDelete
  15. it really very bad thing did by the media people. Like films also Certification must issue foe TV programme also

    Take very strict action against the DIRECTOR & HEAD of the particular progromme.

    ReplyDelete
  16. its really very bad program.it doesn't have any reality in show.but one thing is sure that participants are looking for winning so those nonsense things or shows are going on the media.

    ReplyDelete
  17. ಟಿಆರ್ ಪಿ ನೆಪದಲ್ಲಿ ಅನಾರೋಗ್ಯಕರ ವಾದದ್ದನ್ನ ತೋರಿಸುವ ರಿಯಾಲಿಟಿ ಶೋ ಗಳಿಗೆ ನಿಷೇಧ ಆಗಬೇಕಿದೆ.. ಈ ಬ ಗ್ಗೆ ಪದೇ ಪದೇ ಚರ್ಚೆಗಳಾಗುತ್ತಿದ್ದರು ಸಹಾ ಯಾವುದೇ ಕ್ರಿಯೆ ಅನುಷ್ಠಾನಕ್ಕೆ ಬಂದಂತಿಲ್ಲ. ಈ ಪ್ಯಾಟೆ ಹುಡ್ಗೀರ್.......2 ನಲ್ಲಿ ಹುಡುಗಿಯರಿಗೆ ಕೊಡುವ ಶಿಕ್ಷೆ ಅತ್ಯಂತ ಅಮಾನವೀಯ ಎನ್ನಿಸುತ್ತಿದೆ.. ಯಾರು ಏನೇ ಚರ್ಚೆ ಮಾಡಿದ್ರು ಕುತೂಹಲಕ್ಕೆ ಇನ್ನು ಜಾಸ್ತಿ ಜನ ಶೋ ನೋಡ್ತಾರೆ ಅನ್ನೋದು ಮಾತ್ರ ಸುಳ್ಳಲ್ವಲ್ಲ?

    ReplyDelete
  18. bari nam tv show navru trp bagge matra tale kedsko ta idre, atta politicians galu avr bagge ne tale kedsko ta idre iga navu sumne idre hege heli. adre innondu mukya henu andre namge ella gottidrenu sumne idre innu nav yavaga eccetko beku heli. idu obbarainda ago kelsa alla so banni hellaru kai jodisona intadannu matta akona
    jai hind, jai karnataka

    ReplyDelete
  19. ಚಾನೆಲ್ ಗಳು ಜಾಸ್ತಿ ಆಗುತ್ತಿರುವ ಹಗೆ , ಅದರಲ್ಲಿ ಬರುವ ಕಚದ ಪ್ರೊಗ್ರಾಮ್ ಗಳು ಜಾಸ್ತಿ ಆಗುತ್ತ ಇವೆ ..
    ಮೊದಲು ಅದರ ಮೇಲೆ ಕಡಿವಾಣ ಹಾಕ ಬೇಕು .!!
    QUALITY ಪ್ರೊಗ್ರಾಮ್ ಕೊಡೊ ಚನೆಲ್ಗಲೇ ಇಲ್ಲದಾಗಿವೆ ...... ಇವಾಗ ..

    ReplyDelete