ಭ್ರಷ್ಟಾಚಾರ ವಿರುದ್ಧ ಬಾಬಾ ರಾಮದೇವ ಎಂಬುವವರು ಈಗ ಕತ್ತಿ ಝಳಪಿಸುತ್ತಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಾಳೆಯಿಂದ ಅವರ ಉಪವಾಸ ಸತ್ಯಾಗ್ರಹ ಶುರು. ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ಮುಟ್ಟುಗೋಲು ಹಾಕಿಕೊಂಡು ವಾಪಾಸು ತರಬೇಕು ಎಂಬುದು ಅವರ ಬೇಡಿಕೆ.
ಭ್ರಷ್ಟಾಚಾರ ವಿರೋಧಿಸುವುದು ಈಗೀಗ ಒಂದು ಫ್ಯಾಷನ್. ಭ್ರಷ್ಟಾಚಾರ ವಿರೋಧಿ ಹೋರಾಟಗಳನ್ನು ಬೆಂಬಲಿಸುವವರ ಪೈಕಿ ಸಾಕಷ್ಟು ಮಂದಿಗೆ ತಮ್ಮ ಕಳಂಕಗಳನ್ನು ತೊಳೆದುಕೊಳ್ಳುವ ಆತುರ. ಅಣ್ಣಾ ಹಜಾರೆ ಹೋರಾಟಕ್ಕೆ ವ್ಯಕ್ತವಾದ ಸಾರ್ವತ್ರಿಕ ಬೆಂಬಲವನ್ನು ಗಮನಿಸಿದ ಮೇಲೆ ಇಂಥದ್ದೇ ಬೆಂಬಲದ ನಿರೀಕ್ಷೆಯಲ್ಲಿ ರಾಮದೇವ ಉಪವಾಸಕ್ಕೆ ಕೂರುತ್ತಿದ್ದಾರೆ.
ರಾಮದೇವ ಅವರ ಚಳವಳಿಯ ಹಿನ್ನೆಲೆಯಲ್ಲಿ ಕಪ್ಪು ಹಣ ವಾಪಾಸು ಬಂದರೆ ದೇಶದ ಸಾಲವೆಲ್ಲ ತೀರಿಹೋಗುತ್ತೆ, ಐದು ವರ್ಷ ಪುಗಸಟ್ಟೆ ಪೆಟ್ರೋಲು ಕೊಡಬಹುದು, ಜನರು ಮಾಡಿದ ಸಾಲವನ್ನೆಲ್ಲ ಮನ್ನಾ ಮಾಡಬಹುದು, ಇತ್ಯಾದಿ ಇತ್ಯಾದಿ ತರ್ಕಗಳು ಹುಟ್ಟಿಕೊಂಡಿವೆ. ಮೊಬೈಲುಗಳ ಮೆಸೇಜು ಬಾಕ್ಸು, ಇ-ಮೇಲ್, ಟ್ವಿಟರ್, ಫೇಸ್‌ಬುಕ್, ಆರ್ಕುಟ್‌ಗಳಲ್ಲಿ ಈಗ ಇದೇ ಚರ್ಚೆ.
ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ ಮಾಡದಂತೆ ಕೇಂದ್ರ ಸರ್ಕಾರ ತನ್ನ ವಿಶೇಷ ಪ್ರಯತ್ನಗಳನ್ನು ಮಾಡುತ್ತಿರುವುದು, ಮಂತ್ರಿ ಮಂಡಲದ ಸದಸ್ಯರನ್ನು ವಿಮಾನ ನಿಲ್ದಾಣಕ್ಕೆ ಓಡಿಸಿ ಬಾಬಾ ಅವರೊಂದಿಗೆ ಮಾತುಕತೆ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದು, ಬಾಬಾ ಹೈಟೆಕ್ ಪೆಂಡಾಲಿನಲ್ಲಿ ಸತ್ಯಾಗ್ರಹ ನಡೆಸಲು ಅಣಿಯಾಗುತ್ತಿರುವುದು ಇದೆಲ್ಲವೂ ನಮ್ಮ ಮಾಧ್ಯಮಗಳಲ್ಲಿ ಹಾಟ್ ಹಾಟ್ ಸುದ್ದಿಗಳು. ಹಗರಣಗಳಲ್ಲಿ ಮುಳುಗೇಳುತ್ತಿರುವ ಕೇಂದ್ರ ಸರ್ಕಾರವನ್ನು ಯೋಗ ಕಲಿಸುವ ಗುರು, ಔಷಧಿ ಮಾರುವ ವ್ಯಾಪಾರಿಯೊಬ್ಬರು ಹೆದರಿಸುವಂತಾಗಿದೆ.
ಯಾಕೆ ರಾಮದೇವ್ ಉಪವಾಸ ಇಷ್ಟು ದೊಡ್ಡಮಟ್ಟದ ಪ್ರಚಾರ ಗಿಟ್ಟಿಸುತ್ತಿದೆ? ಯಾಕೆ ಕೇಂದ್ರ ಸರ್ಕಾರ ಇಷ್ಟೊಂದು ಹೆದರಿ ರಾಜಿಕಬೂಲಿಗೆ ಪ್ರಯತ್ನಿಸುತ್ತಿದೆ? ಅಣ್ಣಾ ಹಜಾರೆ ಸತ್ಯಾಗ್ರಹಕ್ಕೆ ದಕ್ಕಿದ ಬೆಂಬಲವೇ ರಾಮದೇವ್ ಸತ್ಯಾಗ್ರಹಕ್ಕೂ ದೊರೆಯುತ್ತದೆಯೇ? ಕೇಂದ್ರ ಸರ್ಕಾರ ಮುಂದೇನು ಮಾಡುತ್ತದೆ? ಇವೆಲ್ಲ ಕಾಲವೇ ಉತ್ತರಿಸಬೇಕಾದ ಪ್ರಶ್ನೆಗಳು.
ಬಾಬಾ ರಾಮದೇವ್ ಇತ್ತೀಚಿಗೆ ಬೆಂಗಳೂರಿಗೂ ಬಂದಿದ್ದರು. ಹಾಗೆ ಬಂದವರನ್ನು ಬೆಂಗಳೂರು ಪ್ರೆಸ್ ಕ್ಲಬ್ ಮಾಧ್ಯಮ ಸಂವಾದಕ್ಕೂ ಆಹ್ವಾನಿಸಿತ್ತು. ಸಂವಾದದ ಸಂದರ್ಭದಲ್ಲಿ ಬಿಸಿಬಿಸಿ ಪ್ರಶ್ನೋತ್ತರಗಳೂ ನಡೆದಿದ್ದವು. ಆ ಬಗ್ಗೆ ಪ್ರಜಾವಾಣಿ ಮತ್ತಿತರ ಪತ್ರಿಕೆಗಳಲ್ಲೂ ವರದಿಯಾಗಿತ್ತು. ಅದನ್ನು ಸ್ವಲ್ಪ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.
ತಾವು ಕ್ಯಾನ್ಸರ್, ಏಡ್ಸ್ ಸೇರಿದಂತೆ ಎಲ್ಲ ಖಾಯಿಲೆಗಳನ್ನೂ ಗುಣಪಡಿಸಿರುವುದಾಗಿ ರಾಮದೇವ್ ಈ ಸಂವಾದದಲ್ಲಿ ಘೋಷಿಸಿಕೊಂಡರು. ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆ: ಸಾಯಿಬಾಬಾ ಅವರ ಮೂತ್ರಪಿಂಡದ ಖಾಯಿಲೆಯನ್ನು ವಾಸಿ ಮಾಡಬಹುದಲ್ಲ?
ಪ್ರಶ್ನೆಗೆ ಏನೂ ಉತ್ತರಿಸಲು ತೋಚದೆ ಸುಮ್ಮನಿದ್ದ ರಾಮದೇವ ನಾನು ಮೊದಲೇ ಅವರನ್ನು ಭೇಟಿ ಮಾಡಿದ್ದರೆ ಪ್ರಯತ್ನ ಮಾಡುತ್ತಿದ್ದೆ ಎಂದು ನುಣುಚಿಕೊಂಡರು.
ಮಾತನಾಡುವಾಗ ರಾಮದೇವ್ ಒಂದು ಅಭಿಪ್ರಾಯವನ್ನು ಹೇಳಿದ್ದರು. ಮೈ ಯೇ ನಹೀ ಮಾನ್ತಾ ಹೂಂ ಕಿ ಭಾರತ್ ಏಕ್ ಸೆಕ್ಯುಲರ್ ದೇಶ್ ಹೈ. ಮೈ ಯೆ ಮಾನ್ತಾ ಹೂಂ ಕಿ ಭಾರತ್ ಆಧ್ಯಾತ್ಮಿಕ್ ದೇಶ್ ಹೈ. (ನಾನು ಈ ದೇಶವನ್ನು ಜಾತ್ಯತೀತ ರಾಷ್ಟ್ರ ಎಂದು ಒಪ್ಪುವುದಿಲ್ಲ, ಭಾರತವನ್ನು ಆಧ್ಯಾತ್ಮಿಕ ರಾಷ್ಟ್ರ ಎಂದು ಕರೆಯಲು ಬಯಸುತ್ತೇನೆ)
ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆ: ನೀವು ಸಂವಿಧಾನ ವಿರೋಧಿಯೇ?
ಅಲ್ಲ, ನಾನೆಲ್ಲಿ ಹಾಗೆ ಹೇಳಿದೆ?
ಭಾರತ ಜಾತ್ಯತೀತ ರಾಷ್ಟ್ರವೆಂದು ಸಂವಿಧಾನ ಹೇಳುತ್ತದೆ. ನೀವು ಅದನ್ನು ಒಪ್ಪೋದಿಲ್ಲವೆನ್ನುತ್ತೀರಿ. ಹಾಗಿದ್ದ ಮೇಲೆ ನೀವು ಸಂವಿಧಾನ ವಿರೋಧಿಯಾಗುವುದಿಲ್ಲವೆ?
ಸಂವಿಧಾನವನ್ನು ನಾವು ಆಗಾಗ ತಿದ್ದುಪಡಿ ಮಾಡುವುದಿಲ್ಲವೆ?
ಹೌದು, ಮಾಡುತ್ತೇವೆ. ಆದರೆ ಭಾರತ ಜಾತ್ಯತೀತ ರಾಷ್ಟ್ರವೆಂಬುದು ಸಂವಿಧಾನದ ಮೂಲ ಆಶಯ. ಅದನ್ನು ಬದಲಾಯಿಸುವುದು ಸಾಧ್ಯವಿಲ್ಲ. ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ, ಪ್ರಜಾತಾಂತ್ರಿಕ ಗಣರಾಜ್ಯ ಎಂದು ಸಂವಿಧಾನ ಘೋಷಿಸುತ್ತದೆ. ಇದೇ ಸಂವಿಧಾನದ ಮೂಲಮಂತ್ರ. ಅದನ್ನೇ ನೀವು ಒಪ್ಪೋದಿಲ್ಲ ಅಂತೀರಲ್ಲ?
ಹಾಗಲ್ಲ, ಭಾರತ ಆಧ್ಯಾತ್ಮಿಕ ರಾಷ್ಟ್ರವಾಗದಿದ್ದರೆ, ನಾಸ್ತಿಕ ದೇಶವಾಗುವ ಅಪಾಯವಿದೆ.
ನಾಸ್ತಿಕರಾಗಿರುವುದು ತಪ್ಪೆ? ಜಗತ್ತಿನ ಶ್ರೇಷ್ಠ ನಾಸ್ತಿಕರಲ್ಲೊಬ್ಬನಾದ ಚಾರ್ವಾಕ ಈ ದೇಶವನೇ ಎಂಬುದು ನಿಮಗೆ ಗೊತ್ತಿಲ್ಲವೆ?
ರಾಮದೇವ ನಿರುತ್ತರ.
ಭ್ರಷ್ಟಾಚಾರದ ವಿರುದ್ಧ ನಿಮ್ಮ ಸಮರ ನಡೆಯುತ್ತಿದೆ. ನೀವು ಬೆಂಗಳೂರಿಗೆ ಬಂದಿದ್ದೀರಿ. ಕರ್ನಾಟಕದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ದೇಶದಲ್ಲೇ ನಂ.೧ ಸ್ಥಾನ ಕರ್ನಾಟಕಕ್ಕೆ. ಹೀಗಿರುವಾಗ ಕರ್ನಾಟಕದಲ್ಲಿ ನಡೆಯುತ್ತಿರುವ, ಸರ್ಕಾರವೇ ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ನಿಮ್ಮ ಅಭಿಪ್ರಾಯ?
ನಾನು ಎಲ್ಲ ರೀತಿಯ, ಎಲ್ಲ ಪಕ್ಷಗಳ ಭ್ರಷ್ಟಾಚಾರದ ವಿರೋಧಿ. ಕರ್ನಾಟಕದ ಕುರಿತು ವಿಶೇಷ ಟಿಪ್ಪಣಿಯನ್ನೇನೂ ನಾನು ಹೇಳುವುದಿಲ್ಲ.
ಮಠ-ಮಾನ್ಯಗಳಲ್ಲೇ ಇವತ್ತು ಕಪ್ಪು ಹಣ ತುಂಬಿಕೊಂಡಿದೆ. ಕಪ್ಪು ಹಣ ಇರುವವರಿಗೆ ಮಠಗಳೇ ತಮ್ಮ ಹಣ ಅಡಗಿಸಲು ಸುರಕ್ಷಿತ ತಾಣಗಳಾಗಿವೆ. ಈ ಬಗ್ಗೆ ನೀವೇನು ಹೇಳುತ್ತೀರಾ?
ರಾಮದೇವ ನಿರುತ್ತರ.
ನೀವು ಭಾರತ ಆಧ್ಯಾತ್ಮಿಕ ದೇಶ ಎನ್ನುತ್ತೀರಿ. ಭ್ರಷ್ಟಾಚಾರ ನಿರ್ಮೂಲನೆಗೆ ಅಧ್ಯಾತ್ಮದ ಬಳಿ ಪರಿಹಾರವಿಲ್ಲವೆ? ನಿಮ್ಮ ಆಧ್ಯಾತ್ಮಿಕ ಬೋಧನೆಗಳಿಂದ ಭ್ರಷ್ಟಾಚಾರಿಗಳನ್ನೇಕೆ ಬದಲಾಯಿಸಬಾರದು?
ರಾಮದೇವ ನಿರುತ್ತರ.
ನಾನು ವಿವಾದಕ್ಕೆ ಸಿಲುಕಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿ ರಾಮದೇವ ಮಾಧ್ಯಮಗೋಷ್ಠಿ ಮುಗಿಸುತ್ತಾರೆ.
ಇವರು ಬಾಬಾ ರಾಮದೇವ. ನಾನು ಇಷ್ಟು ಕೋಟಿ ಜನರಿಗೆ ಯೋಗ ಹೇಳಿಕೊಟ್ಟಿದ್ದೇನೆ. ಇಷ್ಟು ಕೋಟಿ ಜನರಿಗೆ ಚಿಕಿತ್ಸೆ ನೀಡಿದ್ದೇನೆ. ಇಷ್ಟು ಕೋಟಿ ಜನರಿಗೆ ನನ್ನ ಸೇವೆ ತಲುಪಿದೆ. ಹೀಗೆ ರಾಮದೇವ ಮಾತಾಡುವುದೆಲ್ಲ ಕೋಟಿಗಳ ಲೆಕ್ಕದಲ್ಲಿ. ಇವತ್ತಿನ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ರಾಮದೇವ ಅವರ ಸಂದರ್ಶನದಲ್ಲಿ ತಮ್ಮ ಸಂಸ್ಥೆಯ ವಾರ್ಷಿಕ ವಹಿವಾಟು ೧೧೦೦ ಕೋಟಿ ರೂ.ಗಳೆಂದು ಹೇಳಿಕೊಂಡಿದ್ದಾರೆ. ಇಷ್ಟೊಂದು ಹಣ ಕೆಲವೇ ವರ್ಷಗಳಲ್ಲಿ ಹೇಗೆ ಬಂತು ಎಂದು ಜನರು ಪ್ರಶ್ನಿಸುವುದು ಸ್ವಾಭಾವಿಕವೇ ಹೌದು. ಒಂದು ಜಾತಿ ಪ್ರಮಾಣ ಪತ್ರ ಮಾಡಿಸುವುದಕ್ಕೇ ಲಂಚ ಕೊಡಬೇಕಾದ ಪರಿಸ್ಥಿತಿಯಿರುವ ಈ ದೇಶದಲ್ಲಿ ಬಾಬಾ ಅವರು ಇಷ್ಟೊಂದು ದೊಡ್ಡ ವಹಿವಾಟು ಮಾಡುವ ಸಂದರ್ಭದಲ್ಲಿ ಯಾರ ಕೈಯನ್ನೂ ಬೆಚ್ಚಗೆ ಮಾಡಿಲ್ಲವೆಂದು ನಂಬುವುದು ಹೇಗೆ ಎಂದು ಜನಸಾಮಾನ್ಯರು ಕೇಳುವುದೂ ಸಹಜವೇ ತಾನೆ?
ರಾಮದೇವರು ನಿಜವಾಗಿಯೂ ಕ್ಯಾನ್ಸರ್‌ಗೆ, ಏಡ್ಸ್‌ಗೆ ಔಷಧ ಕಂಡುಹಿಡಿದಿದ್ದರೆ ಅದನ್ನು ಸಾಬೀತುಪಡಿಸಿ, ದೇಶದ ಎಲ್ಲ ಕ್ಯಾನ್ಸರ್, ಏಡ್ಸ್ ಆಸ್ಪತ್ರೆಗಳಲ್ಲಿ ಸಾಯುತ್ತ ಬಿದ್ದಿರುವ ಲಕ್ಷಾಂತರ ರೋಗಿಗಳನ್ನೇಕೆ ಗುಣಪಡಿಸಬಾರದು? ಇದೊಂದನ್ನು ಮಾಡಿದರೆ ಇಡೀ ದೇಶ ಮತ್ತು ಮುಂದಿನ ಪೀಳಿಗೆ ರಾಮದೇವ ಅವರಿಗೆ ಋಣಿಗಳಾಗಿ ಇರುವುದಿಲ್ಲವೆ?
ರಾಮದೇವರಿಗೆ ಈಗಾಗಲೇ ಬಿಜೆಪಿ, ಆರ್‌ಎಸ್‌ಎಸ್, ಅಣ್ಣಾ ಹಜಾರೆ ಹೀಗೆ ಹಲವು ವಲಯಗಳಿಂದ ಬೆಂಬಲ ಹರಿದುಬಂದಿದೆ. ನಾಳೆ ಕಾಂಗ್ರೆಸ್ಸೋ, ಜೆಡಿಎಸ್ಸೋ ಇನ್ನೊಂದೋ ಬೆಂಬಲ ಕೊಡಬಹುದು. ಸತ್ಯಾಗ್ರಹ ದೊಡ್ಡ ಮಟ್ಟದಲ್ಲಿ ನಡೆಯಲೂ ಬಹುದು. ಹೊಸ ರಾಜಕೀಯ ಪಕ್ಷ ರಚಿಸಲು ತುದಿಗಾಲಲ್ಲಿ ನಿಂತಿರುವ ರಾಮದೇವರಿಗೆ ಇದೊಂದು ದೊಡ್ಡ ಮಟ್ಟದ ಲಾಂಚಿಂಗ್ ಪ್ಯಾಡ್ ಕೂಡ ಆಗಬಹುದು.
ಆದರೆ ನಮ್ಮ ಪ್ರಶ್ನೆ ಸರಳವಾಗಿದೆ. ರಾಮದೇವ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು. ಅಧ್ಯಾತ್ಮ ಜನರ ಜೀವನ ದೃಷ್ಟಿ, ವಿಧಾನವನ್ನು ಬದಲಿಸಬೇಕು. ಮಾನವೀಯತೆಯನ್ನು ಬೋಧಿಸಬೇಕು. ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಸಾಮಾಜಿಕ ಶ್ರೇಣೀಕರಣದಿಂದ ದೇಶದ ಅಂತಃಸತ್ವವೇ ನಾಶವಾಗಿದೆ. ಎಲ್ಲರಿಗೂ ನೀರು-ನೆರಳು ಕೊಡಬೇಕಿದ್ದ ಧರ್ಮವೇ ಜನರನ್ನು ಶೋಷಿಸುವ ಸಲಕರಣೆಯಾಗಿದೆ. ಬಡತನ, ರೋಗರುಜಿನದಿಂದ ಜನ ನರಳುತ್ತಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಅಮಾಯಕ ಜನರು ಬೀದಿಪಾಲಾಗಿದ್ದಾರೆ. ರೈತರು-ಕೂಲಿಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತವನ್ನು ಆಧ್ಯಾತ್ಮಿಕ ರಾಷ್ಟ್ರವೆಂದು ಘೋಷಿಸುವ ರಾಮದೇವ ಭಾರತದ ಹೀನ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಲು ಏನನ್ನಾದರೂ ಮಾಡಿದ್ದಾರೆಯೇ? ಅಧ್ಯಾತ್ಮ ಜೀವಿಗಳ ಮೊದಲ ಕರ್ತವ್ಯವೇ ಸಮಾಜದ ಇಂಥ ಹೀನಾತಿಹೀನ ಕೊಳಕುಗಳನ್ನು ನಿರ್ಮೂಲನೆ ಮಾಡುವುದಲ್ಲವೆ?
ಅಷ್ಟಕ್ಕೂ ಸಂವಿಧಾನದ ಮೂಲತತ್ತ್ವವನ್ನೇ ಒಪ್ಪದ ಇಂಥ ಮನುಷ್ಯರು ಪ್ರಜಾಪ್ರಭುತ್ವ ದೇಶದಲ್ಲಿ ಸತ್ಯಾಗ್ರಹ ನಡೆಸುತ್ತಾರೆ ಎನ್ನುವುದೇ ಅಪಹಾಸ್ಯದ ವಿಷಯ.
ಸ್ವಾಮಿಗಳು, ಸಂನ್ಯಾಸಿಗಳು, ಧರ್ಮಗುರುಗಳು ತಮ್ಮನ್ನು ದೇಶಕ್ಕಿಂತ, ದೇಶದ ಸಂವಿಧಾನಕ್ಕಿಂತ, ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ದೊಡ್ಡವರೆಂದು ಭಾವಿಸಿರುತ್ತಾರೆ, ಅಥವಾ ಹಾಗೆ ಭಾವಿಸಿದಂತೆ ವರ್ತಿಸುತ್ತಾರೆ. ಅದಕ್ಕಾಗಿಯೇ ಅವರು ಕಿರೀಟ, ಪಲ್ಲಕ್ಕಿ, ಸಿಂಹಾಸನಗಳಲ್ಲೇ ಮುಳುಗಿ ಕೊಳೆತು ಹೋಗಿದ್ದಾರೆ. ರಾಮದೇವ ತನ್ನನ್ನು ತಾನು ಸರಳ ಎಂದು ಹೇಳಿಕೊಂಡರೂ ಸ್ವಾಮಿತ್ವದ ಅಹಂ ಕಳೆದುಕೊಂಡ ಹಾಗೆ ಕಾಣುತ್ತಿಲ್ಲ. ಹೀಗಾಗಿಯೇ ದೇಶದ ಸಂವಿಧಾನದ ಮೂಲ ಅಂಶವನ್ನೇ ತಾನು ಒಪ್ಪುವುದಿಲ್ಲ ಎಂಬ ಹೇಳಿಕೆ ನೀಡುತ್ತಾರೆ.
೮೦೦ ಭಾಷೆಗಳಿರುವ, ೨೨ ಅಧಿಕೃತ ಭಾಷೆಗಳಿರುವ ಈ ಭಾಷಾ ವೈವಿಧ್ಯದ ದೇಶದಲ್ಲಿ ಹಿಂದಿಯನ್ನು ಜಪಾನಿ ಮತ್ತು ಚೀನೀ ಭಾಷೆಯ ಹಾಗೆ ದೇಶದಾದ್ಯಂತ ಬೆಳೆಸಬೇಕು ಎಂದು ರಾಮದೇವ ಹಗುರವಾಗಿ, ಬಾಲಿಷವಾಗಿ ಮಾತನಾಡುತ್ತಾರೆ. ದೇಶದ ಬಹುಭಾಷಾ, ಬಹುಸಂಸ್ಕೃತಿಯ ವಿನ್ಯಾಸವೇ ಗೊತ್ತಿಲ್ಲದ, ಸಂವಿಧಾನವನ್ನೂ ಒಪ್ಪದ ಇಂಥವರು ಸತ್ಯಾಗ್ರಹಕ್ಕೆ ಇಳಿದರೆ, ನಮ್ಮ ಮಾಧ್ಯಮಗಳು ವೈಭವೀಕರಿಸಿ ದೊಡ್ಡಮಟ್ಟದ ಪ್ರಚಾರ ನೀಡುತ್ತವೆ. ಜನಪರವಾದ ಇತರ ಚಳವಳಿಗಳಿಗೂ ನಮ್ಮ ಮೀಡಿಯಾ ಇದೇ ರೀತಿ ಪ್ರಚಾರ ನೀಡಿದ್ದಿದೆಯೇ?
ಇಂಥವರ ಸೊ ಕಾಲ್ಡ್ ಸತ್ಯಾಗ್ರಹವನ್ನು ಬೆಂಬಲಿಸಬೇಕೆ? ನಿರ್ಧಾರ ಭಾರತೀಯರದ್ದು.
ಸಂವಿಧಾನದ ಅಂಶಗಳಿಗೆ ತಾತ್ವಿಕ ವಿರೋಧವಿರುವುದು ಎಂಬ ಅಂಶದಿಂದ ನಿಮ್ಮ ಪ್ರಕಾರ ಸಂವಿಧಾನ ಗೌರವಿಸುವದಿಲ್ಲ ಎಂಬ ವಿಚಾರಕ್ಕೆ ಬರಬಹುದೇ? ಭ್ರಷ್ಟಾಚಾರದ ಹಣ ಹೊರಗೆ ಇದ್ದರೂ ಪರವಾಗಿಲ್ಲ, ಆದರೆ ಇಂತಹವರು ಸತ್ಯಾಗ್ರಹ ಮಾಡಬಾರದು. ಹೌದು ಭಾರತದಲ್ಲಿ ಭಾರತೀಯ ಭಾಷೆಗಳನ್ನು ಬಳಸಬೇಕು ಎನ್ನುವದು ಬಹುಸಂಸ್ಕೃತಿಯ ವಿರೋಧ. ಆದರೆ ಅದೇ ಇಂಗ್ಲಿಷ್ ಬಳಸಿದರೆ ಅದು ಇಂದಿನ ಅನಿವಾರ್ಯ. ಬಾಬಾ ರಾಮದೇವರ ಬಗ್ಗೆ ತಿಳಿಸಿಕೊಟ್ಟ ನಿಮಗೆ ಅಭಿನಂದನೆಗಳು. ಸತ್ಯಾಗ್ರಹಕ್ಕೆ ಬೆಂಬಲಿಸಬೇಕೇ ಬೇಡವೇ ಎನ್ನುವದು ಭಾರತೀಯರ ಹಣೆಬರಹ. ಅವರವರ ಕರ್ಮಕ್ಕೆ ಅವರೇ ಹೊಣೆಗಾರರು.
ReplyDeleteThe scene at Ramlila Maidan in Delhi reminds me the movie - Pipli Live. The TV crew follows every movement of the person who has expressed his wish to commit suicide in the movie. Similarly in Delhi, TV people are capturing every movement of Baba Ramdev, who wants to stage a fast unto death protest. In other words, this so called agitation might end up as another suicide, presuming that he does not give up the protest till then.
ReplyDelete‘Fasting’ has become a fashion and tool to attract attention. But these people ignore the questions on source of funding for the big tamasha. I was shocked and disturbed after watching a video clip on CNN-IBN in which Baba’s followers raise money from devotees. One of his associates asks a devotee to bring more people who can donate generously.
All this shows that Baba and his team have made up their mind to continue their agitation (fasting) at least for couple of days, no matter however the Centre tries to convince them. Ramadev is hesitant to give up the agitation at this moment as the media would raise questions later about the funds collected for the same.
Yes I agree, black money stashed in foreign banks should be brought back. It is an ethical, political and economic question. But, given the international understandings, India can not do anything unilaterally than assuring the protesters that the govt is serious in this issue.
ReplyDelete@ ಮಹೇಶ್ ಭಟ್ಟ,
ReplyDeleteತಾತ್ವಿಕ ವಿರೋಧ ಎಂದು ಯಾಕೆ ವಿಷಯವನ್ನು ಸಡಿಲಗೊಳಿಸಲು ಯತ್ನಿಸುತ್ತೀರಿ? ಒಂದು ವೇಳೆ ಭಾರತ ಸಾರ್ವಭೌಮ ರಾಷ್ಟ್ರವೆಂದು ನಾನು ಒಪ್ಪುವುದಿಲ್ಲ ಎಂದು ಬಾಬಾ ಹೇಳಿದ್ದರೂ ನೀವು ಅದನ್ನು ಹೀಗೆ ಹಗುರವಾಗಿ ತೆಗೆದುಕೊಳ್ಳುತ್ತಿದ್ದೀರಾ? ಭಾರತದ ರಾಷ್ಟ್ರಧ್ವಜವನ್ನು ಒಪ್ಪುವುದಿಲ್ಲ ಎಂದರೂ ಹೀಗೆ ಹೇಳುವಿರಾ? ಭಾರತ ಸಂವಿಧಾನದ ಮೂಲಭೂತ ಅಂಶವನ್ನೂ ಒಪ್ಪದವರು ದೇಶಪ್ರೇಮಿಗಳಾಗಲು ಸಾಧ್ಯವೆ?
ಕಪ್ಪುಹಣವನ್ನು ತರಬಾರದು ಎಂಬುದು ಯಾರ ಉದ್ದೇಶವೂ ಅಲ್ಲ. ಈ ಸಂಬಂಧ ಸತ್ಯಾಗ್ರಹ ಹೂಡುವವನು ಕಳಂಕಗಳಿಂದ ಮುಕ್ತನಾಗಿರಬೇಕು. ರಾಜಕೀಯ ಉದ್ದೇಶಕ್ಕಾಗಿ ಮಾಡುವ ಚಳವಳಿಯನ್ನು ದೇಶವಾಸಿಗಳೇಕೆ ಬೆಂಬಲಿಸಬೇಕು?
ಭಾರತೀಯ ಭಾಷೆಗಳನ್ನು ಬಳಸಬೇಕು ಎಂದು ಬಾಬಾ ರಾಮದೇವ್ ಹೇಳಿದ್ದರೆ ಒಪ್ಪಬಹುದಿತ್ತು. ಆದರೆ ಆತ ಹೇಳುತ್ತಿರುವುದು ಭಾರತೀಯ ಭಾಷೆಗಳಲ್ಲಿ ಒಂದಾದ ಹಿಂದಿಯನ್ನು ಮಾತ್ರ.
ಇಷ್ಟಾದ ಮೇಲೂ ಈತನ ಸತ್ಯಾಗ್ರಹವನ್ನು ಭಾರತೀಯರು ಬೆಂಬಲಿಸಿದರೆ ನೀವೇ ಹೇಳಿದಂತೆ ಅವರ ಹಣೆಬರಹ, ಅವರ ಕರ್ಮ.
-ಸಂಜೀವ್ ಕುಲಕರ್ಣಿ
ಭಾರತದ ಸಾರ್ವಭೌಮತ್ವವನ್ನು ಒಪ್ಪದವರು, ರಾಷ್ಟ್ರಧ್ವಜವನ್ನು ಒಪ್ಪದವರನ್ನೂ ಭಾರತೀಯ ಪ್ರಜೆಗಳೆಂದು ಭಾವಿಸಿ, ಅಪರಿಮಿತ ತೆರಿಗೆ ಹಣದಿಂದ ಸಲಹುತ್ತಿರುವದು ನಮ್ಮ ಕಣ್ಣೆದುರಿಗೇ ಸಾಕಷ್ಟು ಉದಾಹರಣೆಗಳಿವೆ. ಇರಲಿ
ReplyDeleteಹೌದು, ಭಾರತ ಜಾತ್ಯತೀತ ರಾಷ್ಟ್ರ. ಆದರೂ ನಾವು ಸಲ್ಲಿಸುವ ಪ್ರತಿಯೊಂದು ಅರ್ಜಿಯಲ್ಲೂ ಜಾತಿ,ಧರ್ಮ ಕಾಲಂ ಇರಲೇಬೇಕು. ಸಂವಿಧಾನಕ್ಕೆ ಅಪಚಾರವಲ್ಲ. ಜನರು ಬಯಸಿದರೂ ಸಂವಿಧಾನವನ್ನು ಬದಲಾಯಿಸಲು ಅವಕಾಶವಿರಬಾರದು. ಸಂವಿಧಾನದ ಅಂಶಗಳು ಯಾವುದೇ ರೀತಿಯಲ್ಲಿ ಚರ್ಚಿಸಲ್ಪಡಬಾರದು. ಕುರುಡಾಗಿ ಒಪ್ಪಿಕೊಳ್ಳಬೇಕು. ಯಾಕೆ ಸಂವಿಧಾನವೇ ಸಂವಿಧಾನವನ್ನು ಬದಲಾಯಿಸುವ ಅವಕಾಶ ನೀಡಿದೆ? ಸಂವಿಧಾನಕ್ಕೆ ಯಾಕೆ ನೂರೆಂಟು ತಿದ್ದುಪಡಿಗಳನ್ನು ಮಾಡಿದ್ದಾರೆ? ಕೇವಲ ಹಿಂದಿ ಮಾತ್ರ ಬೇಕು ಉಳಿದ ಭಾರತೀಯ ಭಾಷೆಗಳು ಬೇಡ ಎನ್ನುವ ಹೇಳಿಕೆಯನ್ನು ಬಾಬಾ ರಾಮದೇವರು ಯಾವಾಗ ಮಾಡಿದ್ದಾರೆ?
He is a megalomaniac. He just want to make some headlines.Thats all.Before trying to clean corporate India Let him clean the religious institutions first.
ReplyDelete-Prasada Keshava
ಭ್ರಷ್ಟಾಚಾರ ಎಂತೆಂಥವರಿಗೆ ದಾಳವಾಗುತ್ತೆ ಅನ್ನುವುದಕ್ಕೆ ರಾಮ್ ದೇವ್ ಸಾಕ್ಷಿ. ಈ ದೇಶದ ಸಂವಿಧಾನವನ್ನೇ ಒಪ್ಪದ ಸನ್ಯಾಸಿಯೊಬ್ಬ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕೂ ನಮ್ಮ ಸಂವಿಧಾನ ಅವಕಾಶ ಮಾಡಿಕೊಡುತ್ತಲ್ಲಾ...
ReplyDelete-Hulikunte Murthy
ಭ್ರಷ್ಟಾಚಾರದ ವಿರುದ್ದ ಹೋರಾಟದಲ್ಲಿ ನಾವು ರಾಮದೇವ ಬಾಬಾನನ್ನ ಬೆಂಬಲಿಸುವ ಸಂದಿಗ್ಥತೆಯಲ್ಲಿದ್ದೇವೆ. http://pratispandana.wordpress.com/2011/06/03/baba-ramdev-satyagraha-to-bring-black-money-back/
ReplyDelete-Ganesh K Davangere
@ ಮಹೇಶ್ ಭಟ್ಟ,
ReplyDeleteಭಾರತದ ಸಾರ್ವಭೌಮತೆಯನ್ನು ಒಪ್ಪದವರು, ರಾಷ್ಟ್ರಧ್ವಜವನ್ನು ಒಪ್ಪದವರನ್ನೂ ತೆರಿಗೆ ಹಣದಿಂದ ಸಲಹುತ್ತಿರುವುದರಿಂದ ತಾವು ಜಾತ್ಯತೀತತೆಯನ್ನು ಒಪ್ಪದ ದ್ರೋಹಿಗಳನ್ನೂ ಒಪ್ಪಿಕೊಳ್ಳುತ್ತೀರೇ? ಅಬ್ಬಾ!
ಅರ್ಜಿಯಲ್ಲಿ ಜಾತಿ ನಮೂದಿಸುವುದಕ್ಕೂ ಜಾತ್ಯತೀತ ರಾಷ್ಟ್ರ ಎನ್ನುವುದಕ್ಕೂ ಏನು ಸಂಬಂಧ. ಜಾತ್ಯತೀತ ಎಂಬ ಶಬ್ದಕ್ಕೆ ಸಂವಿಧಾನದಲ್ಲಿ ಏನು ಅರ್ಥ-ಉಲ್ಲೇಖವಿದೆ ಎಂದು ಗಮನಿಸಿದವರಿಗೆ ಈ ಗೊಂದಲ ಇರಲಾರದು.
ಸಂವಿಧಾನಕ್ಕೆ ತಿದ್ದುಪಡಿ ಬೇಡವೆಂದು ಯಾರೂ ಹೇಳಿಲ್ಲ. ಇಂಥ ತಿದ್ದುಪಡಿಗಳು ನೂರೆಂಟು ಆಗಿದೆ. ಆದರೆ ಸಂವಿಧಾನದ ಮೂಲ ಆಶಯಗಳನ್ನೇ ಒಪ್ಪದವರು ಯಾವ ಸೀಮೆಯ ದೇಶಭಕ್ತರು?
ಜಪಾನಿ, ಚೀನಿ ಭಾಷೆಗಳಂತೆ ದೇಶದ ಎಲ್ಲೆಡೆ ಹಿಂದಿಯನ್ನು ವ್ಯಾಪಕಗೊಳಿಸಬೇಕು ಎಂಬ ರಾಮದೇವ್ ಅವರ ಹೇಳಿಕೆ ಸಿಎನ್ಎನ್ ಐಬಿಎನ್ ನಲ್ಲಿ ಪ್ರಸಾರವಾಗಿದೆ. ಅದರ ಲಿಂಕ್ ಕೂಡ ಸಂಪಾದಕೀಯದವರು ಕೊಟ್ಟಿದ್ದಾರೆ. ಯಾರಿಗೆ ಗೊತ್ತಿಲ್ಲವೋ ಅವರು ಗಮನಿಸಬಹುದು.
ನನ್ನ ಮನದಲ್ಲಿ ಇದ್ದ೦ತಹ ಹಲವಾರು ಸ೦ಗತಿಗಳು ನಿಮ್ಮ ಲೆಖನ ವ್ಯಕ್ತಪಡಿಸುತ್ತದೆ,, ಸ್ವಲ್ಪ ಸಮಯದ ಮು೦ಚೆ ನನ್ನ ಗೆಳೆಯರೊ೦ದಿಗೆ ಇದರ ಬಗ್ಗೆಯೆ ಚಚಿ೯ಸುತ್ತಿದ್ದೆ,, ನ೦ಗ್ಯಾಕೋ ಇವರ ಸತ್ಯಾಗ್ರಹದ ಹಿ೦ದೆ ಯಾವುದೊ (ಸ್ವಹಿತ) "Intention " ಇದೆ ಅನ್ನಿಸುತ್ತೆ.
ReplyDelete-ಅವಿನಾಶ್ ಕನ್ನಮ್ಮನವರ್
ನೋಡಿ ಈ ಸಮಯದಲ್ಲಿ ಅವರು ಎಷ್ಟೇ ಕೆಟ್ಟವರಾಗಿದ್ದರು ಅವರ ಪರವಾಗಿ ಮಾತಾಡುವುದು ನಮ್ಮ ಕರ್ತವ್ಯ. ಕಪ್ಪುಹಣ ವಾಪಸ್ಸು ಬರಲಿ ಆಮೇಲೆ ನೋಡೊನ ರಾಮದೇವ್ ಕುಲ, ಜಾತಕ ಎಲ್ಲಾ.
ReplyDeleteನೀವು ಈ ಲೇಖನ ಬರೆಯುವ ಮೊದಲು ಇವತ್ತಿನ ಕನ್ನಡ ಪ್ರಬ ಓದಿದ್ದ್ದರೆ ಚೆನ್ನಾಗಿತ್ತು
-ರಾಘವ್ ಗೌಡ
Everybody knows baba ramdev has politican intentions behind his hunger strike plus he wants to identify himself with ANNA HAZARE in movement against coruption. Whatever may b his intentions, we need to support the cause not the person, government should bring black money back to INDIA.So my advise to u is instead of using your energy against ramdev use it for the cause.
ReplyDelete-Shreyas Shrigandh
Ramdev Baba does not know the meaning of Secularism in the Indian context. Because he is not ready to understand the importance of Bhakti Pant. Bhakti Pant Saints always fought against Caste System. They struggled a lot to make the medieval India a secular center in a Socio spiritual sense.
ReplyDelete‘One God, One Universe and Undividable Humankind’ was the essence of Bhakti Pant Saints writings.
Dohas of Kabir, Abhangs of Tumaram, Padas of Dasas and Vachanas of Sharanas stand for secularism in real sense. But Ramadev Baba, who is a believer of Manuvadi Adhyatma, can not understand the importance of Bhakti Movements in India. Mahatma Gandi belongs to Vashnavi Bhakti Pant. Babasaheb Ambedkar belongs to Kabir Bhakti Panth family. Buddhism and Bhakti Pant concepts are main indigenous sources of Indian Constitution. That is the reason Manuvadi Ramdev Baba unable to accept the Secular qualities of the Indian Constitution.
Monotheistic Lord Basava told, ‘God is within’. His fight was against Castes. He denied Gender, Racial, Caste and Class discriminations. He denied Vedas which are very important to Ramdev Baba. Guru Nanakji told “Ek Omkar” (One God, One Universe), Mahatma Kabir and Sant Tukaram were the great rebels of Bhakti Pant. Entire Bhakti pant of India never believed in Caste System and Varnashram System of Sanatana (Hidnu) Dharama. Sant Sena Maharaj, Sant Rabidas, Sant Namdev, Sant Chokamela, Guru Govinda Bhat, Sant Meera, Sant Lalleshwari and many other Saints stood against the cruel Caste and Varna System of Hindu Dharma.
Lord Mahaveer and Lord Buddha never expressed the names of any God. They had no any business with Hinduism. Vaidiks created Dashavatar after the Maha Parinirvana of Lord Buddha and made him 9th Avatara of Lord Vishnu!
While dining Secularist stand of Indian Constitution, Ramdev Baba is supporting Religious Corruption. Denying the rights of Dalits and Shudras, exploiting them in the name of religion, creating religious dogmas to put them down economically, socially, culturally and religiously is the Religious Corruption. More than 80% of Dalits and Shudras suffered since time immemorial because of Religious Corruption. They never enjoyed their rights. They never dreamt of equality and equal opportunity. The Constitution gave them awareness against this kind of Religious Corruption.
Ramadev Baba should give the clear picture of his Yoga and Medicine business to the public and he should tell the truth of his background! I expect the comments from the followers of Ramdev Baba.
ಈ ಬಾಬಾ ಕಡಿಮೆ ಇಲ್ಲ ಸ್ವಾಮೀ...ವಿದೇಶದಲ್ಲಿ ಇವರಿಗೆ ಎಷ್ಟು ಎಕರೆ ಜಮೀನು ಇದೆ ಅಂತ ಹುಡುಕಿ ನೋಡಿ....ಇಡೀ ಕಪ್ಪು ಹಣ ವಾಪಾಸ್ ತರಿಸೋಕೆ ಸಾಧ್ಯಾನೇ ಇಲ್ಲ....ಇಂದಿನ ಎಲ್ಲಾ ರಾಜಕೀಯ ಪಕ್ಷಗಳಿಗೂ ಬಂಡವಾಳ ಹರಿಸುವವರ ದುಡ್ಡೇ ಅಲ್ಲಿ ಸ್ವಿಸ್ಸ್ ಬ್ಯಾಂಕ್ ನಲ್ಲಿ ಇರೋದು..ಅಂತಹದರಲ್ಲಿ ಯಾರು ತಾನೇ ಅದನ್ನು ವಾಪಾಸ್ ತರಿಸ್ತಾರೆ...ಈ ಬಾಬಾ ಗೆ ಅಣ್ಣ ಹಜಾರೆ ನೋಡಿ ಆಸೆಯಾಗಿದೆ...ಅದಕ್ಕೆ ಏಕು ಪೂಕು ಗೊತ್ತಿಲ್ದೇ ಉಪವಾಸ ಅಂತ ಕುತಿರೋದು....ಅದಕ್ಕೆ ಈ ಮೀಡಿಯಾ ದವರು ತುಪ್ಪ ಸುರಿಯೋದು..ಇವೆಲ್ಲ ಇವರಿವರ ಬೇಳೆ ಬೇಯಿಸಿಕೊಳ್ಳಲು ಆಡುವ ಶುದ್ದ ನಾಟಕ...ಅದನ್ನು ನೋಡಿ ತಾಳ ಹಾಕೋರು ಮೂರ್ಖ ಜನರು....
ReplyDeleteI agree with:ರಾಘವ್ ಗೌಡ.
ReplyDeleteನೋಡಿ ಈ ಸಮಯದಲ್ಲಿ ಅವರು ಎಷ್ಟೇ ಕೆಟ್ಟವರಾಗಿದ್ದರು ಅವರ ಪರವಾಗಿ ಮಾತಾಡುವುದು ನಮ್ಮ ಕರ್ತವ್ಯ. ಕಪ್ಪುಹಣ ವಾಪಸ್ಸು ಬರಲಿ ಆಮೇಲೆ ನೋಡೊನ ರಾಮದೇವ್ ಕುಲ, ಜಾತಕ ಎಲ್ಲಾ.
ನೀವು ಈ ಲೇಖನ ಬರೆಯುವ ಮೊದಲು ಇವತ್ತಿನ ಕನ್ನಡ ಪ್ರಬ ಓದಿದ್ದ್ದರೆ ಚೆನ್ನಾಗಿತ್ತು
Whatever may be the person's personality, we should support the strike not the person.So why this unnecessary article here?
ReplyDeleteಇಲ್ಲಿ ಕೆಲವರ ಪ್ರತಿಕ್ರಿಯೆಗಳನ್ನು ಗಮನಿಸಿದರೆ ವ್ಯಕ್ತಿಯ ವ್ಯಕ್ತಿತ್ವ, ಹಿನ್ನೆಲೆ ಯಾವುದೂ ಮುಖ್ಯವಲ್ಲ. ಉದ್ದೇಶ ಸರಿಯಿದ್ದರೆ ಎಲ್ಲರೂ ಸಪೋರ್ಟ್ ಮಾಡಬೇಕು. ಎಂಥ ಬೌದ್ಧಿಕ ದಾರಿದ್ರ್ಯ ಬಂತು ದೇಶದ ಜನರಿಗೆ.
ReplyDeleteನಾಳೆ ಅಜ್ಮಲ್ ಕಸಬ್, ಸಾಧ್ವಿ ಪ್ರಗ್ಯಾ ಸಿಂಗ್, ಕರೀಂ ಲಾಲಾ ತೆಲಗಿ, ಉಮೇಶ್ ರೆಡ್ಡಿ ತರಹದವರೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದರೆ ನಾವು ಅವರಿಗೆ ಪೆಂಡಾಲು ಹಾಕಬೇಕು, ಜೈಕಾರ ಹಾಕಬೇಕು.
ಜನರಿಗೆ ತಮ್ಮ ಮೇಲೆ ತಮಗೇ ವಿಶ್ವಾಸ ಕಳೆದುಹೋಗಿದೆ. ಅದಕ್ಕಾಗಿ, ಅವರು ಬಾಬಾ ರಾಮದೇವ್ರಂತಹ ನಕಲಿಗಳ ಚಳವಳಿಯನ್ನೂ ನಂಬುವಂತಾಗಿದೆ.
ಹೋದ ವಾರ ಈತನ ಸಂದರ್ಶನವನ್ನು NDTVಯಲ್ಲಿ ನೋಡಿದ್ದೆನು. ಆವಾಗಲೇ ಈತನ ಉದ್ದೇಶ ಅರ್ಥವಾಗಿತ್ತು. ಇವನ ಈ ಪರಿಯ ಮಂಗನಾಟಕ್ಕೆ ನೀರೆರೆದಿದ್ದು ಕಾಂಗ್ರೆಸ್ಸ್ ಪಕ್ಷವೇ. ಜನರಿಂದ ಚುನಾಯಿತರಾದ ಸರಕಾರದ ಹಿರಿಯ ಮಂತ್ರಿಗಳು ಒಬ್ಬ ಸಾಮಾನ್ಯ ಬಾಬಾನ ಹತ್ತಿರ ಹೋದದ್ದೇಕೆ? ಈ ಪ್ರಜಾಪ್ರಭುತ್ವದಲ್ಲಿ ಯಾರೇ ಆಗಲಿ ಸತ್ಯಾಗ್ರಹದ ಹಕ್ಕಿದೆ. ಮಾಡಿಕೊಳ್ಳಲಿ. ಅದಕ್ಕೆ ಹೆದರಿಕೆ ಯಾಕೆ? ಇಂದಿರಾ ಗಾಂಧಿಯಂಥ ಲೀಡರ್ ಇದ್ದ ಕಾಂಗ್ರೆಸ್ ಪಾರ್ಟಿಗೆ ಈ ಗತಿ ಬರಬಾರ್ದಿತ್ತು. ಕಪ್ಪು ಹಣ ಹೊರಗೆ ಬರಬೇಕು. ಇದರಲ್ಲಿ ಎರಡು ಮಾತಿಲ್ಲ. ಆದರೆ ಈ ಹೋರಾಟದಲ್ಲಿ ಬಾಬಾ ರಾಜಕೀಯ ಉದ್ದೇಶ ಹೊಂದಿದ್ದಾರೆ ಎಂದು ಅವರ ಮಾತು- ಕೃತಿಗಳಿಂದ ಎಂಥವರಿಗೂ ಅರ್ಥವಾಗುತ್ತೆ. UPA ಎಷ್ಟೇ ಕೆಟ್ಟ ಆಡಳಿತ ಕೊಟ್ಟಿದ್ದರೂ ಅದನ್ನು ಚುನಾವಣೆಯಲ್ಲಿ ಮನೆಗೆ ಕಳಿಸೋಣ. ಆದರೆ ಹಾದಿ ಬೀದಿಯಲ್ಲಿ ಹೋಗುವ ಬಾಬಾನಂಥವರು ನಮ್ಮಿಂದ ಚುನಾಯಿತರಾದ ಸರಕಾರವನ್ನು ಈ ರೀತಿ ಕುಣಿಸುವದನ್ನು ಸರಿ ಎನಿಸುವದಿಲ್ಲ. ಈ ಬಾಬಾ ತನ್ನನ್ನು ತಾನೇ ಅಣ್ಣಾ ಹಜಾರೆ ಎಂದು ತಿಳಿದುಕೊಂಡಿದ್ದಾನೆ. ಇವನ ಈ ರೀತಿಯ ರಾಜಕೀಯ ಎಂಟ್ರಿಯ ಉದ್ದೇಶವನ್ನು ವಿಫಲಗೊಳಿಸಬೇಕು.ಇಲ್ಲದಿದ್ದರೆ ಮತ್ತೊಬ್ಬ ಲಾಲೂನ ಪ್ರವೇಶವಾಗುತ್ತದೆ.
ReplyDeleteWaste ..........!!!!!
ReplyDeleteಸಂಪಾದಕೀಯದಿಂದ ಇಷ್ಟು ಕೆಟ್ಟ ಲೇಖನ ನಿರೀಕ್ಷಿಸಿರಲಿಲ್ಲ. ಅಷ್ಟಕ್ಕೂ ಹಜಾರೆ, ಸ್ವಾಮಿ ರಾಮದೇವ ಭೃಷ್ಟಾಚಾರ/ಕಪ್ಪು ಹಣದ ವಿರುದ್ಧ ಸಮರ ಸಾರಿದ್ದಾರೆ. ಮೊದಲು ಆ ಉದ್ದೇಶ ಈಡೇರಲಿ. ಅದನ್ನು ಬೆಂಬಲಿಸೋಣ. ತಾವು ಏನೂ ಮಾಡದೆ ಸುಮ್ಮನೆ ಎಲ್ಲರಲ್ಲೂ ಕುತಂತ್ರ ಹುಡುಕುತ್ತಾ ಕೂರುವುದು ಬುದ್ಧಿಜೀವಿ ಲಕ್ಷಣ. ಸಂಪಾದಕೀಯ ಅಂಥದ್ದಲ್ಲ ಅಂತ ಎಲ್ಲರಿಗೂ ಗೊತ್ತು. ಅದ್ದರಿಂದ ಇಂಥ ಲೇಖನ ಸಂಪಾದಕೀಯಕ್ಕೆ ಸರಿ ಹೋಗುವುದಿಲ್ಲ.
ReplyDelete..ಹಾಗೂ ಸ್ವಾಮಿ ರಾಮದೇವ ತಪ್ಪು ಮಾಡಿದ್ದರೆ ಅವರು ಬೀಸಿದ ಜಾಲಕ್ಕೆ ಅವರೇ ಬೀಳುತ್ತಾರೆ. ಇವತ್ತು ವಿದೇಶಗಳಲ್ಲಿನ ಕಪ್ಪುಹಣದ ವಿರುದ್ಧ ಸಮರ. ಗೆದ್ದ ಮೇಲೆ ಮಠಗಳಲ್ಲಿನ ಕಪ್ಪು ಹಣದ ಮೇಲೆ ಯುದ್ಧ. ಅಣ್ಣಾ, ಬಾಬಾ ಶುರು ಹಚ್ಚಿದ್ದಾರೆ ನಾವೆಲ್ಲಾ ಮುಂದುವರಿಸೋಣ...
ramadeva nanta brashta vyaktige jikara helabeke? edu namma kalada dodda duranta. maha sullugaranada ramadevanige dikkaravirali. jana ottavillade sayuttiddare ,jathi karankkagi prathi deena nooraru jana sayuttiddare a vishayagala bagge ramadevanige mathanadalu diryavedeye?
ReplyDeletemurali kati
Black money is stored inside India in the name of religion in religious institutions,like Mathas,Ashrams of so called Babas,Gurujis,Swamis and Ammas,and also many centres of religion ,which are excluded from any constitutional rules and regulations including endowment acts.They are the 'Safety lockers of political parties.'Why a mass movement can be initiated for this purpose in our country?Why our media which depict Ramdev as hero ,are cleverly avoiding this issue in their editorials ,columns,discussions,interviews? Are such media are also supporting black money hidden in saffron places?Which is 'hidden',which is 'black'and what is the agenda?
ReplyDeleteSariyaagi barediddeeri. Dayamaadi Neevondu patrike praarambisi Kannada Patrikodyama Ulisuva kelasa maadi.
ReplyDeleteIvattina Udayavani Manipal aavruttiya entane putada lekhana koodaa Odi.
http://epaper.udayavani.com/Display.aspx?Pg=H&Edn=MN&DispDate=6/4/2011
1100 ಕೋಟಿ ವಹಿವಾಟಿನ ಸಂಸ್ಥೆಯೊಂದರ ದೊರೆಯ ಮಾತುಗಳನ್ನು ಕೇಳಲು ಯಾಕೋ ಸಂದೇಹವಾಗುತ್ತಿದೆ. ಇಷ್ಟು ಸಾವಿರ ಕೋಟಿಗಳಲ್ಲಿ ಕಪ್ಪು ಹಣವೆಷ್ಟು, ಬಿಳಿಹಣವೆಷ್ಟು ಎಂಬದನ್ನು ದೇಶದ ಜನರೆದುರು ಈ ಲ್ಯಾಪ್ ಟ್ಯಾಪ್ ಸ್ವಾಮಿ ಬಿಚ್ಚಿಟ್ಟರೆ ಒಳ್ಳೆಯದು. ಈ ಬಗೆಯ ಏಕಮುಖಿ ಸಂಪತ್ತಿನ ಕ್ರೂಢೀಕರಣವೇ ಬ್ರಹ್ಮಾಂಡ ಭ್ರಷ್ಟತೆಯ ಬೇರುಗಳಿಗೆ ನೀರೆರೆಯುತ್ತಿರುವಾಗ ಸಂಪತ್ತಿನ ಮೂಲದ ಪ್ರಶ್ನೆಗಳಿಗೆ ಉತ್ತರ ಕೊಟ್ಟು ನಂತರ ಭ್ರಷ್ಟತೆಯ ಬಗ್ಗೆ ಮಾತನಾಡುವುದು ಒಳಿತು. ಅಣ್ಣಾ ಹಜಾರೆಯವರ ಹಿನ್ನೆಲೆಯಲ್ಲಿ ಈ ಬಗೆಯ ಸಂಪತ್ತು ಇರಲಿಲ್ಲವಾಗಿ ದೇಶದ ಜನರು ಅವರ ಬೆನ್ನಿಗಿದ್ದರು. ಆದರೆ ಸದ್ಯಕ್ಕೆ ರಾಮದೇವರ ಹಿಂದೆ ಯಾರಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ ಯಾವೊಂದು ದೊಡ್ಡಮಟ್ಟದ ಜನಪ್ರಿಯ ಸಿದ್ದಾಂತವಾಗಲೀ, ವ್ಯಕ್ತಿಯಾಗಲೀ ಜನಮಾನಸದಲ್ಲಿ ಸ್ಥಾನ ಗಿಟ್ಟಿಸಿಕೊಂಡಾಗ ಅದನ್ನು ತನ್ನದೆಂದು ಹೇಳಿಕೊಳ್ಳುತ್ತ ಅದನ್ನು ನಾಚಿಕೆ ಮಾನ ಮರ್ಯಾದೆ ಇಲ್ಲದೆ ಲಪಟಾಯಿಸುವ ಒಂದು ಹೈಜಾಕರ್ಸ್ ಗಳ ಕೂಟ ಈ ದೇಶದಲ್ಲಿದೆ.ಹಜಾರೆಯವರ ಜನಪ್ರಿಯತೆಯನ್ನೇ ಅನುಕರಿಸುವ ಇಂತಹ ರಾಮದೇವ್ ಸದ್ಯಕ್ಕೆ ಈ ಗುಂಪಿನ ಹೈಜಾಕ್ ಟೂಲ್ ಆಗಿ ಬಳಕೆ ಆಗುತ್ತಿದ್ದಾರೆ. ಧಾರ್ಮಿಕತೆಯೇ ದೇಶದ ಭವಿಷ್ಯ ಎನ್ನುವ ಈ ಮನುಷ್ಯನ ಮತ್ತು ಇವರ ಬೆನ್ನ ಹಿಂದೆ ಕದ್ದು ಕುಳಿತಿರುವವರ ತಂತ್ರಗಾರರ ಕೂಟ ತಮ್ಮ ಉದ್ದೇಶದಲ್ಲಿ ಯಶಸ್ವಿಯಾದರೆ, ಇವರು ಮತ್ತೊಂದು ತಾಲಿಬಾನ್ ಪಡೆ ಕಟ್ಟುತ್ತಾರೆಯೇ ಹೊರತು ಭ್ರಷ್ಟಾಚಾರ ಮುಕ್ತ ದೇಶವನ್ನಲ್ಲ. ಆದ್ದರಿಂದ ಇಂತಹ ಲ್ಯಾಪ್ ಟಾಪ್ ಬಾಬಾಗಳು ಮತ್ತು ಇವರ ಹಿಂದಿರುವ "ಕದ್ದುಕೊಂಡು ಓಡಿಹೋಗುವ ಬ್ಯುಸಿನೆಸ್"ಗಳಲ್ಲಿ ಖ್ಯಾತರಾದ ಗುಳ್ಳೇನರಿಗಳ ಗುಂಪನ್ನು ಅನುಮಾನದಿಂದಲೇ ನೋಡಬೇಕಿದೆ. ಟಿ.ಕೆ. ದಯಾನಂದ
ReplyDeleteThis comment has been removed by a blog administrator.
ReplyDeleteಈವತ್ತಿನ ಕನ್ನಡಪ್ರಭ ಓದಿದರೆ ಈ ಸ೦ಪದಕೀಯ ಹೀಗೆ ಬರೆಯುತ್ತಿರಲಿಲ್ಲ ಅ೦ತ ಒಬ್ಬರು ಇಲ್ಲಿ ಪ್ರತಿಕ್ರಿಯಿಸಿದ್ದಾರೆ.
ReplyDeleteಕನ್ನಡ ಪ್ರಭ ಮಾತ್ರ ಯಾಕೆ ಓದಬೇಕು. ಔಟ್ ಲುಕ್, ಟೈಮ್ಸ್ ಒಫ್ ಇ೦ಡಿಯಾ, ಬುಸಿನೆ ಸ್ ಸ್ಟಾ೦ಡಾರ್ಡ್ ಕೂಡಾ ಓದಿ ಆಗ ಬಾಬಾನ ನಿಜ ಬಣ್ಣ ಗೊತ್ತಾಗುತ್ತದೆ. ಇ೦ಗ್ಲೀಶ್ ಪತ್ರಿಕೆಯವರೆಲ್ಲಾ ಹಾಗೆ ಅ೦ತ ಕನ್ನಡ ಪ್ರಭ ತೀರ್ಪು ಕೊಟ್ಟಿದೆ. ಇ೦ಗ್ಲಿಸ್ ಪತ್ರಿಕೆಯವರ ಮೇಲೆ ಸ೦ಶಯೈದ್ದರೆ ಉದಯವಾಣಿಯ ಮಣಿಪಾಲ ಆವೃತ್ತಿಯ ಇ೦ದಿನ ಕಾಲ೦ ಕೂಡಾ ಓದಿ. ದಿನೇಶ್ ಅಮಿನ್ ಮಟ್ಟು ಕೆಲ ದಿನಗಳ ಹಿ೦ದೆ ಬರೆದ ಕಾಲ್೦ ಕೂಡಾ ಓದಿ.
`11,00 crore rupees empire in six years! Has Baba Ramdev declared his assets? Is there a hawala dimension to his riches? Will corporates fund Ramdev if he went on fast to cleanse corporate corruption? will RSS support him in that? by the way, Ramdev had said he would start a political party. Is RSS his ally?
ReplyDeleteAs the support base of RSS politics is fast declining, is the sangh parivar using Baba Ramadev's crusade to extend space for their politics? By propping up Ramdev, is RSS diverting the attention of the country from its terror links?"
-Basavaraj Itnal
ಒಂದು ದಿನ ಈತನ ಟಿ.ವಿ. ಚಾನಲ್ ನಲ್ಲಿ ಮಾಂಸಾಹಾರ ತಿನ್ನುವವರೆಲ್ಲಾ ನಾಯಿಗಳಂತೆ, ಯಾಕೆಂದರೆ ನಮ್ಮ ಹಲ್ಲುಗಳು ಮಾಂಸ ತಿನ್ನಲು ಸಹಕಾರಿಯಾಗಿಲ್ಲ. ನಾಯಿ ತರಹದ ಪ್ರಾಣಿಗಳಿಗೆ ಕೋರೆ ಹಲ್ಲುಗಳಿದ್ದು ಅವು ಮಾಂಸ ತಿನ್ನುತ್ತವೆ. ಈಗ ಹೇಳಿ ನಾವು ಮನುಷ್ಯರಾಗಿರಬೇಕೋ ನಾಯಿಗಳಾಗಿರಬೇಕೋ? ಎಂದು ಸಭಿಕರಿಗೆ ಪ್ರಶ್ನೆ ಕೇಳುತ್ತಿದ್ದ. ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕನ್ನೇ ಗೇಲಿ ಮಾಡುವ, ಮಾನವೀಯತೆಯೇ ಇಲ್ಲದ ಈ ತಗಡು ಸ್ವಾಮಿ ಮಾಡುವ ಎಲ್ಲ ಕೆಲಸಗಳಿಗೂ ನನ್ನ ವಿರೋಧ.
ReplyDeleteafter the death of one baba another baba is raising his head both are cancerous to the society
ReplyDeleteನಿಮ್ಮ ಅಭಿಪ್ರಾಯಕ್ಕೆ ಉತ್ತರಿಸುವ ಅಧಿಕಾರ ನಮಗಿಲ್ಲ..ಅದು ನಿಮ್ಮ ಅಭಿಪ್ರಾಯ...ನಿಮ್ಮಿಷ್ಟ..ಆದರೆ ಒಂದು ಮಾತಂತೂ ಸತ್ಯ...ನಾವು ಒಪ್ಪದ ಕಾರಣ ಅದನ್ನ ಗೌರವಿಸುವುದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು..ಶಾಲೆಯ ಪ್ರಿನ್ಸಿಪಾಲ್ ಮಾಡುವ ಪ್ರಿನ್ಸಿಪಲ್ ಗಳನ್ನು ನಾವು ಒಪ್ಪಲಿಲ್ಲ ಅಂದ ಮಾತ್ರಕ್ಕೆ ಅವರನ್ನಾಗಲೀ ಅಥವಾ ಅವರ ರೂಲ್ಸ್ ಗಳನ್ನಾಗಲೀ ಗೌರವಿಸುವುದಿಲ್ಲ ಎಂದರ್ಥವಲ್ಲ.ದೇಶದ ಸಂವಿಧಾನ ನಮಗೆ ಒಪ್ಪುವುದೋ ಬಿಡುವುದೋ ಅದನ್ನ ಪಾಲಿಸುವುದು, ಗೌರವಿಸುವುದು ನಮ್ಮ ಕರ್ತವ್ಯ..ಅದನ್ನ ರಾಮದೇವ್ ಅವರು ಪಾಲಿಸುತ್ತಿದ್ದಾರೆ...ಲೈಸೆನ್ಸ್ ಪಡೆಯಲು ಎಷ್ಟೇ ಕಷ್ಟವಿದ್ದರೂ, ನಮಗೆ ಇಷ್ಟವಿಲ್ಲದಿದ್ದರೂ ಅದನ್ನ ಪಡೆದೇ ಗಾಡಿ ಓಡಿಸುವವರು ನಾವು..ಇಲ್ಲಿ ಒಪ್ಪಲಿಲ್ಲ ಅಂದ ಮಾತ್ರ ಗೌರವಿಸುವುದಿಲ್ಲ ಎಂಬುದು ಎಷ್ಟು ಸರಿ...ಸಂವಿಧಾನದ ಹೆಸರಿನಲ್ಲಿ ಲೂಟಿ ಮಾಡುವವರೂ ಸಂಸತ್ತಿನಲ್ಲೇ ಕೂತಿದ್ದಾರೆ....ಬೇರೆಯವರಿಗೆ ಒಳ್ಳೆಯದನ್ನು ಮಾಡಲು ಯೋಗ್ಯತೆ ಇಲ್ಲದಿದ್ದರೂ ಪರವಾಗಿಲ್ಲ ಕೆಟ್ಟದನ್ನು ಮಾಡಬೇಡಿ ಎಂಬುದು ಮಾನವ ಸಂವಿಧಾನದ ಮೂಲ ತತ್ವ...ಅದನ್ನು ಮೊದಲು ನೀವು ಪಾಲಿಸಿ...ನಂತರ ಬೇರೆಯವರಿಗೆ ಬುದ್ಧಿವಾದ ಹೇಳಲು ಹೋಗಿ...ಒಳ್ಳೆಯದನ್ನು ಬರೆಯಲು ಸಾಧ್ಯವಾಗಿದ್ದರೂ ಪರವಾಗಿಲ್ಲ ಕೆಟ್ಟದ್ದನ್ನು ಬಿತ್ತಬೇಡಿ...
ReplyDeleteಇಂತದಕ್ಕೆಲ್ಲ ಭಾರತ ಮಾತೆ ಸಾಕ್ಷಿ ಯಾಗಬೇಕಲ್ಲ. ಕ್ಷಮಿಸಿ, ಭಾರತ ಮಾತೆ ಅಂದ್ರೆ ಜಾತ್ಯಾತೀತತೆಗೆ ದಕ್ಕೆ ಬರಬಹುದು. ಅದಕ್ಕೆ ಇಂತದಕ್ಕೆಲ್ಲ ...ನಾವೆಲ್ಲಾ.... ಸಾಕ್ಷಿ ಯಾಗಬೇಕಲ್ಲ.
ReplyDeleteಭಾರತದ ಸಾರ್ವಭೌಮತ್ವ ಹಾಗು ಸಂವಿಧಾನ ವನ್ನೇ ಒಪ್ಪದ, ಭಾರತದ ರಾಷ್ಟ್ರಧ್ವಜವನ್ನೇ ಸುಡುವ ಜನರನ್ನು ಖಂಡಿಸದ ಜನ ಬಾಬಾ ರ ಬಗ್ಗೆ, ಅವರ ಹಿನ್ನಲೆ ಬಗ್ಗೆ, ಅವರ ರಾಷ್ಟ್ರ ಪ್ರೇಮದ ಬಗ್ಗೆ, ಅವರಾಡಿದ ಮಾತುಗಳ ಬಗ್ಗೆ ಖಂಡಿಸುವ ಪರಿ ಕಂಡು ಏನೆನ್ನ ಬೇಕೋ? ಸಂಸತ್ತಿ ನ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವಿನ ಬಗ್ಗೆ ಕನಿಕರ ಇರುವಷ್ಟು ಯೋಗ ಗುರುವಿನ ಮೇಲೆ ಇಲ್ಲವೇ?
ReplyDeleteಇವತ್ತು ಟೀವಿ ೯ ನಲ್ಲಿ ರಾಮ್ ದೇವ್ ಬಗ್ಗೆ ವಾಕರಿಕೆ ಬರುವಷ್ಟು ಹೊಗಳಿಕೆಯ ಸ್ಟೋರಿಯೊಂದು ಪ್ರಸಾರವಾಗಿತ್ತು. ಆತ ವೀರನಂತೆ! ಗಂಡೆದೆಯ ಗುಂಡಿಗೆ ಹೊಂದಿದ ಸಾಧಕನಂತೆ! ಥೂ! ನಮ್ಮ ಚಾನೆಲ್ ಗಳ ಬೌದ್ಧಿಕ ದಿವಾಳಿತನಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಛೆ! ಎಷ್ಟೊಂದು ಜನರ ಹಾದಿ ತಪ್ಪಿಸುವ ಕಾರ್ಯಕ್ರಮವಿದು! ರಾಮ್ ದೇವ್ ನ ಕೇಸರಿ ಅಜೆಂಡಾವನ್ನಾಗಲೀ, ಗೊಡ್ಡು ಸನಾತನ ಸಿದ್ಧಾಂತದ ಪ್ರತಿಪಾದನೆಯನ್ನಾಗಲಿ, ಅತಿಯಾದ ವ್ಯಾವಹಾರಿಕ ಕನ್ನಿಂಗ್ ನೆಸ್ಸನ್ನಾಗಲಿ,ರಾಜಕೀಯ ಮಹತ್ವಾಕಾಂಕ್ಷೆಯನ್ನಗಲೀ........ ಹೀಗೆ ಯಾವೊಂದನ್ನೂ ಅರ್ಥ ಮಾಡಿಕೊಳ್ಳಲಾರದಷ್ಟು ಪೆದ್ದು ಗೂಬೆಗಳಾ ನಮ್ಮ ಚಾನೆಲ್ ಗಳು? ಅಣ್ಣಾ ಹಜಾರೆಯವರ ಪ್ರಾಮಾಣಿಕ ಹೋರಾಟದ ನೆಲೆಯನ್ನು ದಿನಬೆಳಗಾಗುವಷ್ಟರಲ್ಲಿ ಕೊಚ್ಚಿ ನಿವಾಳಿಸಿ ಒಗೆಯಹೊರಟಿರುವ ಈ ರಾಮ್ ದೇವನ ರಾಕ್ಷಸಿ ಅಬ್ಬರ, ರಾಜಕಾರಣಿಗಳ ಆಷಾಢಭೂತಿತನಕ್ಕಿಂತಂತಲೂ ಅಪಾಯಕಾರಿಯಾದದ್ದೆಂದು ಯಾಕಿವರಿಗೆ ಅರ್ಥವಾಗುತ್ತಿಲ್ಲ?!! ಉಪವಾಸ ನಾಟಕದ ಮೊದಲ ದಿನದ ಆತನ ಅಬ್ಬರದ ಹೇಳಿಕೆಗಳ ಹಿಂದಿದ್ದ ಮರ್ಮವನ್ನು ಅರ್ಥ ಮಡಿಕೊಳ್ಳುವುದಕ್ಕೆ ವಿಶೇಷ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ! ಒಂದಂತೂ ನಿಜ: ಇಡೀ ದೇಶ ಯಾವುದೋ ಒಂದು ಲಹರಿಯಲ್ಲಿದೆ.. ಭ್ರಷ್ಟಾಚಾರ ವಿರೋಧ, ಉಪವಾಸ ಸತ್ಯಾಗ್ರಹ, ಅಣ್ಣಾ ಹಜಾರೆ,.......... ಇಲ್ಲಿಯವರೆಗೂ ಎಲ್ಲವೂ ನೆಟ್ಟಾಗಿದ್ದವು. ಆ ನಂತರ ದಿನಗಳಲ್ಲಿ ಹಜಾರೆಯವರಲ್ಲಿ ದೂರಗಾಮಿ ಹೋರಾಟವೊಂದಕ್ಕೆ ಬೇಕಾಗಿದ್ದ ಪ್ರಬಲ ಆಳದ್ರುಷ್ಟಿಯ ಇತಿಮಿತಿಗಳೂ ಗೋಚರಿಸುವುದಕ್ಕೆ ಆರಂಭವಾದಲ್ಲಿಂದ- ಈಗಿನ ಬಾಬಾ ರಾಮ್ ದೇವ್ನ ಆಟಾಟೋಪದವರೆಗೂ ಎಲ್ಲೋ ಏನೋ ಎಡವಟ್ಟಗಿರುವುದರ ಸೂಚನೆ ಕಾಣಸಿಕ್ಕಿದಂತಿದೆ. ಈ ಮಧ್ಯೆ ಮಾಧ್ಯಮಗಳೂ ಜವಾಬ್ದಾರಿಯಿಂದ ವರ್ತಿಸದಿದ್ದಲ್ಲಿ ಇಡೀ ದೇಶ ಸಾಮಾಜಿಕ-ಸಾಂಸ್ಕ್ರುತಿಕ-ರಾಜಕೀಯ ಸುನಾಮಿಗೆ ಸಿಕ್ಕಿ ನರಳುವ ಅಪಾಯವಂತೂ ಇದ್ದೇ ಇದೆ.
ReplyDeletebanda mathobba baba.... janarannu manga madalu.... adannu nambalu innu salpa jana.... babananne bagavan yndu namida ee janarige kavi thotta oyakthi yenu madidaru sariye
ReplyDeleteಸ್ವಾಮೀ ಅಯ್ಯಾ ಬಾಬಾ ರಾಮದೇವ್ ಸಿಕ್ಕಾಪಟ್ಟೆ ಕಾಳಧನ ಮಾಡಿಟ್ಟಿದೆ...ಅದನ್ನು ಮುಟ್ಟುಗೋಲು ಹಾಕಿ ಪೆಟ್ರೋಲ್ ಬೆಲೆ ಇಳಿಸಿ.ಅಣ್ಣ ಹಜಾರೆ ಇದರಲ್ಲಿ ಭಾಗವಸಿಸಬಾರದೆಂದು ನನ್ನ ಕಳಕಳೀಯ ಮನವಿ.
ReplyDeleteರಾಮದೇವ್ ಬಾಬಾ ಸಂಘದ ಮನುಷ್ಯ ಏಕೆಂದರೆ
ReplyDelete೧) ಅವರ ಹೆಸರಲ್ಲಿ ರಾಮ್ ಇದೆ.
೨) ಅವರು ಯೋಗ ಕಲಿಸುತ್ತಾನೆ.
೩) ಸ್ವದೇಶೀ ಎನ್ನುತ್ತಾನೆ.
೪) ಕೇಸರಿ ಬಣ್ಣ ದ ಉಡುಗೆ ತೊಡುತ್ತಾನೆ.
೫) ಮರದಿಂದ ಮಾಡಿದ ಚಪ್ಪಲಿ ಧರಿಸುತ್ತಾನೆ.
೬) ಜನರು ಶಕ್ತಿ ಶಾಲಿ ಗಳಾಗಿ ಎನ್ನುತ್ತಾನೆ.
೭) ಜನರು ಭಯೋತ್ಪಾದನೆ ವಿರುದ್ದ ಹೋರಾಡಿ ಎನ್ನುತ್ತಾನೆ ಅಂದ್ರೆ ಇತ
ಅಲ್ಪ ಸಂಖ್ಯಾ ವಿರೋಧಿ ಇರಬಹುದು..
ಅಂದರೆ ಇತ ಕೋಮುವಾದಿ ಎಂದು ಸಿದ್ದ ಮಾಡಲು ಇಷ್ಟು ಸಾಕಲ್ಲವೇ..?
ವಿಠಲ್ ರಾವ್ ಕುಲಕರ್ಣಿ ಮಲಖೇಡ್
http://nilume.wordpress.com/2011/06/05/%E0%B2%B0%E0%B2%BE%E0%B2%AE%E0%B2%A6%E0%B3%87%E0%B2%B5%E0%B3%8D%E0%B2%AE%E0%B3%80%E0%B2%A1%E0%B2%BF%E0%B2%AF%E0%B2%BE-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%B8%E0%B2%82%E0%B2%AA/
ReplyDeleteಸಾಧ್ಯವಾದರೆ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಸಹಕರಿಸಿ ,ಯಶಸ್ವೀಗೊಳಿಸಿ.....ಇಲ್ಲಿ ಯಾರೂ ಒಳ್ಳೆಯವರಲ್ಲ...ಕಡಿಮೆ ಕೆತ್ತದುದನ್ನು ಹುಡುಕುವ ಪ್ರಯತ್ನ ಮಾಡಬೇಕು ನಾವು...ರಾಮ್ ದೇವ್ ಅವರು ಸಂಪಾದಿಸಿದ್ದರು ಎನ್ನಲಾದ ಆಸ್ತಿಯೆಲ್ಲಾ ಕೆಟ್ಟ ಹಾದಿಯಿಂದ ಅಥವಾ ದಂಧೆಯಿಂದ ಅಲ್ಲ ಎಂಬುದು ಗಮನವಿರಲಿ....ಇಂತಹ ದಾರಿ ತಪ್ಪಿಸುವ ಲೇಖನವನ್ನು ಸಂಪಾದಕೀಯದಲ್ಲಿ ಪ್ರಕಟಿಸಬೇಡಿ!!!
ReplyDeleteನಾನು ರವೀಂದ್ರ ಅವರ ಅಭಿಪ್ರಾಯವನ್ನು ಒಪ್ಪುತ್ತೇನೆ: http://sampadakeeya.blogspot.com/2011/06/blog-post_7885.html?showComment=1307161372420#c3929955644721923750
ReplyDeleteಸಂವಿಧಾನವಿದೆಯೆಂದ ಮಾತ್ರಕ್ಕೆ ಅದರ ಸುಧಾರಣೆಯನ್ನು ಯೋಚಿಸದೆ ಕಣ್ಣು ಮುಚ್ಚಿ ಗೌರವಿಸುವುದು ತರವಲ್ಲ. ನಂದರ ಕಾಲದಲ್ಲಿ ಚಾಣುಕ್ಯನೂ ಒಬ್ಬ ರಾಷ್ಟ್ರದ್ರೋಹಿಯೇ. ಆದರೆ, ಸಮಾಜದ ಹಿತಾಸಕ್ತಿಗೆ ಮೀರಿದ ಸಂವಿಧಾನ, ಕಾನೂನು ಯೋಗ್ಯವಲ್ಲವೆಂದು ಅವನಿಗೆ ತಿಳಿದಿತ್ತು. ಇನ್ನು 'ಬುದ್ಧಿಜೀವಿ'ಗಳು ಅವನನ್ನು ಈಗಲೂ ಅವನೊಬ್ಬ ದ್ರೋಹಿಯೆಂದೇ ಪರಿಗಣಿಸಿದರೂ, ಯಾವುದು ಯೋಗ್ಯ ಯಾವುದು ಅಯೋಗ್ಯ ಎಂಬುದು ಇವರಂತೆ, ಜನಸಾಮಾನ್ಯರಿಗೂ ಇರುತ್ತದೆಂದು ತಿಳಿದರೆ ಒಳ್ಳೆಯದು.
ಯಾರೋ ಮಾಹಾನುಭಾವರು ಬರೆದಿದ್ದಾರೆ! ಕಸಬ್, ಉಮೇಶ್‌ರೆಡ್ಡಿ ಸತ್ಯಾಗ್ರಹಕ್ಕೆ ಇಳಿದರೆ, ಅವರನ್ನೂ ಬೆಂಬಲಿಸಬೇಕೇ ಎಂದು?!ಈ ರೀತಿ ಯೋಚಿಸುವುದು ನಿಜವಾದ ವಿಪರ್ಯಾಸ. ಇಂತಹವರಿಗೆ, ಈಗಾಗಲೇ ಅಭಯಹಸ್ತ ನೀಡಿರುವುದು ಸಂವಿಧಾನ ಬದ್ಧ ಕೇಂದ್ರ ಸರ್ಕಾರವೇ!
Bomb plant maadida Mattennanavar namma leader allave ?
ReplyDeleteNaale Yaddy kooda corruption viruddha horadabahudu.
ನಾವು ತುಂಬಾ ಇಷ್ಟ ಪಡುವ ಸಂಪಾದಕೀಯ ಬ್ಲಾಗ್ ನಲ್ಲಿ ಈ ರೀತಿಯ ಲೇಖನ ಮೂಡಿ ಬಂದದ್ದು ಖೇದಕರ.
ReplyDeleteಬೇರೆಯವರ ಬೌದ್ಧಿಕ ದಿವಾಳಿತನವನ್ನು ಕೆದಕುವ ಮುನ್ನ ನಿಮ್ಮ ಪೂರ್ವಾಗ್ರಹ ಪೀಡಿತ ಮನವನ್ನೊಮ್ಮೆ ಪರಾಮರ್ಷೆಗೆ ಒಳಪಡಿಸಿಕೊಳ್ಳಿರಿ. ’ಸಂಪಾದಕೀಯ’ದಿಂದ ಇಂತಹ ಲೇಖನ ನಿರೀಕ್ಷಿಸಿರಲಿಲ್ಲ.
ReplyDeleteರಾಮ್ದೇವ್ ಬಾಬ, ಅಣ್ಣ ಹಜಾರೆ ಅವರಷ್ಟು ವಿಶ್ವಾಸಾರ್ಹರಲ್ಲ, ನಿಜ. ಸಂಪಾದಕೀಯದ ಮೂಲ ಉದ್ದೇಶ ನಮ್ಮ ಮಾಧ್ಯಮಗಳ ಆಗು ಹೋಗುಗಳ ಬಗ್ಗೆ ಚರ್ಚೆ ಮತ್ತು ಆ ನಿಟ್ಟಿನಲ್ಲಿ ಸುಧಾರಣೆಯ ಸಣ್ಣ ಪ್ರಯತ್ನ. ಬಾಬರವರ ಬಗ್ಗೆ ಚರ್ಚೆಗೆ ಸಂಪಾದಕೀಯ ಯೋಗ್ಯ ವೇದಿಕೆ ಅಲ್ಲ. ಆದರೂ ನೀವು ಆ ವಿಷಯವನ್ನು ಇಲ್ಲಿ ಪ್ರಸ್ತುತಪಡಿಸಿದ್ದೀರಿ. ಇರಲಿ, ಈಗೇನು ಹೇಳುತ್ತೀರಿ? ಬಾಬರವರವರನ್ನು ರಾತ್ರೋ ರಾತ್ರಿ ಬಂಧಿಸಿದ್ದು ವ್ಯಕ್ತಿಯ ಮೂಲಭೂತ ಸ್ವಾತಂತ್ರವನ್ನೇ ಕಸಿದುಕೊಂಡತಲ್ಲವೇ? ತಮ್ಮ ನಿಲುವೇನು? ಅದರ ಚರ್ಚೆಗೂ ವೇದಿಕೆ ಕಲ್ಪಿಸಿಕೊಡುತ್ತೀರೋ?
ReplyDeleteಸಂವಿದಾನವನ್ನು ಕಾಪಾಡಬೇಕಾದ ಸರಕಾರವೇ ಈ ರೀತಿ ರಾತ್ರಿ ವೇಳೆ ಅಮಾನುಷ ವರ್ತನೆ ತೋರುತ್ತಿರುವಾಗ, ಉಳಿದವರ ಕತೆ ಏನು ಹೇಳಿ ಸ್ವಾಮಿ ನಿಮ್ಮಂತಹ ಸ್ವಘೋಷಿತ ಬುದ್ದಿಜೀವಿಗಳು.
ReplyDeleteಸ್ವಾಮಿ,
ReplyDeleteಬಾಬಾ ಮೋಸಗಾರ ಓಕೇ, ಕಾಂಗ್ರೆಸ್ ದೊಡ್ಡ ಮೋಸಗಾರ ಪಕ್ಷ ಓಕೇ ಹಾಗಾದ್ರೆ ಸಾಚಾ ವ್ಯಕ್ತಿ ಗಳು ಪ್ರತಿಭಟಿಸೋ ಶಕ್ತಿ ಇಲ್ಲವೇ
ಇಲ್ಲ , ಅಂಥವರು ಇದ್ದರು(ಅಣ್ಣಾ) ಅವ್ರಿಗೆ ಯಾರಾದ್ರೂ ಸಪೋರ್ಟ್ ಮಾಡಿದ್ರೂ ಇವರು ಅವರಿಂದ ಹೇಳೆ ಮಾಡಿಸ್ತಿರೋದು ಅನ್ನೋ ದೂರು..
ಹಾಗಾದ್ರೆ ನಿಮ್ಮ ಪ್ರಕಾರ ಯಾವ ವ್ಯಕ್ತಿ ಅತವ ಸಂಸ್ಥೆ ಗೆ ಬ್ರಷ್ಟಾಚಾರ ಡ ಬಗ್ಗೆ ಧ್ವನಿ ಎತ್ತೋ ತಾಕತ್ತು ಇದೆ ಹೇಳಿ ಸ್ವಾಮಿ??
This what i feared long back when i was commenting on Anna Hazaare's moment - delusion, distract, divide & Rule - should we become victims again here.. i am not sure what are the motives of Baba Ram dev - but not having a proper stand and only talks will some day ruin the purpose - Here i am in appreciation with Anna Hazare - as he claims his only goal is - Lok Pal Bill !! But i still request every one who is reading this to be focused on one thing - Eliminating Corruption - It should not matter if one wears Kaadi or other Khaki - These are again un necssory distractors unto with in our argument !! The idea is in improving the quality of our Argument and purpose and not is analysing - who should be a hero or whtso ever !! To be honest there are much un sung heros because them we are having this prosperous life.. So AGAIN - I request everyone dont compromise the main agenda - My India - Corruption free Republic of India
ReplyDeleteಯಾಕೋ ಸಂಪಾದಕೀಯ ಹೋರಾಟದ ಹಾದಿಯನ್ನು ಬದಲಿಸಿದ ಹಾಗಿದೆ. ಇಲ್ಲಿ ಹೋರಾಟ ನಡಿತಿರೋದು ಕಪ್ಪು ಹಣದ ಬಗ್ಗೆ. ಆದರೆ ಸಂಪಾದಕೀಯ ಎತ್ತಿರೋದು "ರಾಮದೇವ್"ಬಗ್ಗೆ. ಹೋರಾಟದ ಸಿದ್ದಾಂತವನ್ನು ಮೊದಲೇ "ರಾಮದೇವ್" ಸ್ಪಷ್ಟ ಪಡಿಸಿದ್ದಾರೆ. ಹಾಗಾಗ್ಯು ಹೋರಾಟವನ್ನು ತಪ್ಪು ದಾರಿ ಎಳಿಯೋದಕ್ಕೆ ನೀವು ಪ್ರಯತ್ನ ಮಾಡ್ತಿದೀರ ಅಂತ ಅನ್ಸುವುದಿಲ್ವಾ? ಹಾಗಂತ ಬಾಬಾ ರಾಮದೇವ್ ಸಾಚಾ ಅಂತ ಹೇಳ್ತಿಲ್ಲ. ಆತನ ಮೇಲು ತನಿಖೆ ಆಗ್ಲಿ. ಆದರೆ ಅದಕ್ಕೂ ಮೊದಲು ಕಪ್ಪು ಹಣ ಭಾರತಕ್ಕೆ ಬರಲಿ. ಅದಕ್ಕೋಸ್ಕರ ಆದರು ನಾವು ಈ ಹೋರಾಟಕ್ಕೆ ಕೈ ಜೋಡಿಸಬೇಕು.
ReplyDeleteOne thing we must understand that Anna Hazare, Justice Santosh Hegde and other eminent leaders also supported Baba Ramdev.
ReplyDeleteಈ ದೇಶದ ಸಂವಿಧಾನ ವಿರೋಧಿ ಎಂದ ಮೇಲೆ ಆತನನ್ನು ಆತನ ಸತ್ಯಾಗ್ರಹವನ್ನು ಬೆಂಬಲಿಸುವ ಮಾತು ಎಲ್ಲಿಂದ ಬಂತು. ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದೆ.
ReplyDeleteರಾಮದೇವ್ ಕಪ್ಪು ಹಣದ ವಿರುದ್ಧ ಸತ್ಯಾಗ್ರಹಕ್ಕಿಳಿದಿರೂದರ ಸ್ಪೂರ್ತಿಯಿಂದ ಇನ್ನೂ ಕೆಲವರು ಸತ್ಯಗ್ರಹಕ್ಕಿಳಿದಿದ್ದಾರೆ.
ReplyDeleteಮುಖ್ಯವಾಗಿ ಲಿಕ್ಕರ್ ವಿರುದ್ಧ ಮಲ್ಯ ಚಳುವಳಿ ನಡೆಸಲಿದ್ದಾರೆ.
ರೈತರ ಪರವಾಗಿ ಖೇಣಿ ಸತ್ಯಾಗ್ರಹ ನಡೆಸುತ್ತಾರಂತೆ.
ಮುಂಬೈ ಸ್ಫೋಟದ ವಿರುದ್ಧ ದಾವೂದ್ ಇಬ್ರಾಹಿಂ ಅಮರಣಾಂತ ಸತ್ಯಾಗ್ರಹ ಮಾಡುತ್ತಾರಂತೆ.
ದಲಿತರ ಹಕ್ಕಿನ ಪರವಾಗಿ ಪೇಜಾವರ ಶ್ರೀ ಸತ್ಯಾಗ್ರಹ ನಡೆಸುತ್ತಾರಂತೆ.
ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ನೀಡುವಂತೆ ಆಗ್ರಹಿಸಿ ನರೇಂದ್ರ ಮೋದಿ ಸತ್ಯಾಗ್ರಹ ಮಾಡುತ್ತಾರಂತೆ.
ನಕಲಿ ನೋಟುಗಳ ತಯಾರಿ ವಿರುದ್ಧ ತೆಲಗಿ ಸತ್ಯಾಗ್ರಹ ಮಾಡುತ್ತಾರಂತೆ.
ಬನ್ನಿ ಅವರ ಒಳ್ಳೆಯ ಕಾರ್ಯವನ್ನು ಬೆಂಬಲಿಸೋಣ. ಚಳುವಳಿ ಮಾಡುವವರು ಯಾರಾದರೇನು, ಅವರ ಉದ್ದೇಶ ಒಳ್ಳೆಯದೇ ಅಲ್ಲವೇ?
B.M.Basheer
Congress / UPA govt has made it clear that they will continue to promote the loot & corruption and they are not afraid of any agitation or movement. They are aware that elections are 3 years away so they have enough time to do whatever they want. Whatever has happened at the midnight on 4th June, has proved that there is no democracy in India. I am not a follower of Baba but I support the cause for which he is fighting.
ReplyDeleteanna hajareyawara horaata olle haadiyalli saagitthu.ha horatavannu budamelu maduwa uddesa kelawarige ide ramdewnannu balasi edakkagi prayathnisuthiddare.hajaare horata maaduwaaga awarottige seruthidalli adakkondu artha itthu.aadare uddhesa bere adhare
ReplyDeleteಸಂಪಾದಕೀಯ ದಲ್ಲಿ ಯೀ ಲೇಖನ ಕಂಡು ಮುಜುಗರ ವಾಗುತ್ತಿದೆ, ಹೋಗಲಿ ಪ್ರಚರಕ್ಕದರು ಕಪ್ಪು ಹಣದ ವಿರುದ್ದ ಮಾತನಾಡು ವವರು ಯಾರಿದ್ದಾರೆ , ಬಾಬಾ ರಾಮದೇವ್ ನೆನ್ನೆ ಮೊನ್ನೆ ಕಪ್ಪು ಹಣದ ವಿರುದ್ದ ಯೆತ್ತಿರುವರಲ್ಲ, ಹಲವು ವರುಷಗಳಿಂದಲೂ ಯೀ ವಿಷಯ ವನ್ನು ಪ್ರಸ್ತಾಪಿಸಿದ್ದಾರೆ, ಸಂಪಾದಕೀಯ ಕಪ್ಪು ಹಣದ ವಿರುದ್ದ ಕಾಯ್ಜೋದಿಸದ್ದಿದ್ದರು, ಪ್ರತಿಭಟಿಸಿದ ಬಾಬಾ ರಮ್ದೆವ್ರನ್ನು ಯಿಲ್ಲ ಸಲ್ಲದ ಯಿಶಯ ಗಳನ್ನೂ ಕೆದಕಿ ಖಂಡಿಸುವುದು ಸಮಂಜಸವಲ್ಲ, ಹಗೆ ನೋಡಿದರೆ ಸೋಮ್ಪದಕೀಯವು ಪ್ರಚಾರಕ್ಕಾಗಿ ಬಾಬಾ ರನ್ನು ಖಂಡಿಸುತ್ತಿರಬಹುದು :)
ReplyDeleteಲಕ್ಷ್ಮೀಶ,
ದುಬೈ
ಮಹೇಶ್ ಭಟ್ಟರೆ ಜಾತ್ಯಾತೀತ ರಾಷ್ಟ್ರದಲ್ಲಿ ಜಾತೀಯ ಕಾಲಂ ಇರುವುದನ್ನು ಪ್ರಶ್ಣಿಸುವ ನೀವು ಭಟ್ಟರನ್ನ ಇನ್ನೂ ಬಿಟ್ಟಿಲ್ಲ. ಬಿಡಿ ಹೋಗಲಿ ಎರಡು ಪದ ಇಡೀ ಒಂದು ಸಮುದಾಯಕ್ಕೆ ಉದ್ಯೋಗ ಮತ್ತು ಅನ್ನ ನೀಡುತ್ತೆ ಅಂದಮೇಲೆ ಹೆಸರಿನ ಜೊತೆ ಸೇರಿಸಿಕೊಳ್ಳುವುದರಲಿ ತಪ್ಪೇನಿಲ್ಲ.
ReplyDelete