Sunday, June 12, 2011

ಕನ್ನಡಿಗರೇಕೆ ತಮ್ಮದಲ್ಲದ ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕು?

Dear Sir, 
I have committed big mistake by putting loose comments on Facebook. I never meant any disrespect to language or people but unknowingly I have hurt peoples emotions and feelings. 
I am speaking from the core of my heart that I do not have any disregard towards Karnataka and its heritage i.e. language, people etc. I truly respect Kannadigas and also have so many good friends in Bangalore. 
I know I have committed a huge mistake and I am apologizing from the bottom of my heart. I am ready to do anything which is necessary to show my respect to the people and language of Karnataka. I cannot even express how much I am regretting after making this mistake. I would go myself and learn Kannada in next one year to show how much I respect the people and language. Please...Please...Please forgive me.  
 Thanks,
Chugh Robin


ಕನ್ನಡ ಕಲಿಕೆಯ ಪ್ರಸ್ತಾಪಕ್ಕೆ ಫಕ್ ಆಫ್ ಎಂದು ತಮ್ಮ ಫೇಸ್‌ಬುಕ್ ನಲ್ಲಿ ಬರೆದುಕೊಂಡಿದ್ದ ಸಾಫ್ಟ್‌ವೇರ್ ಇಂಜಿನಿಯರ್ ರಾಬಿನ್ ಚುಗ್ ಸಂಪಾದಕೀಯಕ್ಕೆ ಕಳುಹಿಸಿರುವ ಇ-ಮೇಲ್ ಇದು. ಈಗಾಗಲೇ ರಾಬಿನ್ ಚುಗ್ ತನ್ನೊಂದಿಗೆ ಮಾತನಾಡಿದವರ ಬಳಿಯೂ ತನ್ನ ಅವಹೇಳನಕಾರಿ ನಿಲುವು-ಭಾಷೆಗೆ ಕ್ಷಮೆ ಯಾಚಿಸಿದ್ದಾನೆ. ತನ್ನ ಫೇಸ್‌ಬುಕ್ ನಲ್ಲೂ ಸಹ ಇಂಥದ್ದೇ ಸಾಲುಗಳನ್ನು ಬರೆದಿದ್ದಾನೆ. ಇಷ್ಟಾದ ಮೇಲೂ ವಿಷಯವನ್ನು ಬೆಳೆಸುವುದರಲ್ಲಿ ಯಾವ ಅರ್ಥವೂ ಇಲ್ಲ. ಇದು ನಮ್ಮ ಗೆಳೆಯರನೇಕರ ಅಭಿಪ್ರಾಯ. ನಮ್ಮ ನಿಲುವು ಸಹ ಅದೇ ಆಗಿದೆ.

ರಾಬಿನ್ ಚುಗ್ ಕರ್ನಾಟಕದಲ್ಲೇ ಇರಲಿ, ಇಲ್ಲೇ ತಮ್ಮ ಕೆಲಸ ಮಾಡಿಕೊಂಡು ಇರಲಿ. ಆತನೇ ಹೇಳಿಕೊಂಡಂತೆ ವರ್ಷದೊಳಗೆ ಕನ್ನಡ ಕಲಿಯಲಿ. ಇಲ್ಲಿನ ಜನರೊಂದಿಗೆ ಬೆರೆಯಲಿ. ಇದು ನಮ್ಮ ಆಶಯ.

ಆದರೆ ಬಹುಮುಖ್ಯ ಪ್ರಶ್ನೆ ಹಾಗೇ ಉಳಿದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪರಭಾಷಿಕರಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಿರುವ ವರದಿಯ ಕುರಿತು ಹಲವರು ಪ್ರಶ್ನಿಸುತ್ತಿದ್ದಾರೆ. ಇವರ ಪೈಕಿ ಕನ್ನಡಿಗರೂ ಇದ್ದಾರೆ. ಮೊದಲ ಲೇಖನದಲ್ಲೇ ನಾವು ಭಾಷೆಯನ್ನು ಯಾರ ಮೇಲೂ ಹೇರುವುದು ಸರಿಯಲ್ಲ, ಕಡ್ಡಾಯಗೊಳಿಸುವುದರಿಂದ ಎಲ್ಲ ಸಮಸ್ಯೆಗಳೂ ಬಗೆಹರಿಯುವುದಿಲ್ಲ ಎಂದು ಬರೆದಿದ್ದೆವು.

ಆದರೆ, ಕನ್ನಡ ನಾಡಿನಲ್ಲಿ ಹಿಂದಿ ಕಡ್ಡಾಯವಾಗಿದ್ದು ಹೇಗೆ ಮತ್ತು ಯಾಕೆ ಎಂಬ ಪ್ರಶ್ನೆಗೆ ಯಾರಾದರೂ ದಯವಿಟ್ಟು ಉತ್ತರ ಕೊಡಿ. ಹಿಂದಿಯೂ ಸಹ ಕನ್ನಡದ ಹಾಗೆ ಈ ದೇಶದ ಭಾಷೆಗಳಲ್ಲಿ ಒಂದು. ಅದರ ಹೆಚ್ಚುಗಾರಿಕೆ ಏನೆಂದರೆ ಮೂರ‍್ನಾಲ್ಕು ರಾಜ್ಯಗಳಲ್ಲಿ ಆ ಭಾಷೆ ಅಥವಾ ಅದರ ಉಪಭಾಷೆಗಳು ಚಾಲ್ತಿಯಲ್ಲಿವೆ. ಕರ್ನಾಟಕಕ್ಕೆ ಮತ್ತು ದಕ್ಷಿಣ ಭಾರತಕ್ಕೆ ಈ ಭಾಷೆಯ ಜತೆ ಯಾವ ಸಂಬಂಧವೂ ಇರಲಿಲ್ಲ. ಇಂಥ ಹಿಂದಿಯನ್ನು ಇಲ್ಲಿ ಕಡ್ಡಾಯಗೊಳಿಸಿದ್ದು ಯಾಕೆ? ನಮ್ಮ ಮಕ್ಕಳೆಲ್ಲ ಹಿಂದಿ ಕಲಿಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಯಾಕೆ?

ಕನ್ನಡ ಕಲಿಕೆ ಕಡ್ಡಾಯಗೊಳಿಸುವುದು ಸಂವಿಧಾನ ವಿರೋಧಿ ಎಂದು ನಮ್ಮ ಗೆಳೆಯರೊಬ್ಬರು ಹೇಳಿದ್ದಾರೆ. ಹಾಗಿದ್ದರೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹಿಂದಿ ಕಲಿಕೆ ಕರ್ನಾಟಕದಲ್ಲಿ ಮತ್ತು ಇನ್ನೂ ಹಲವು ರಾಜ್ಯಗಳಲ್ಲಿ ಜಾರಿಯಾಗಿದ್ದು ಸಂವಿಧಾನಪರವಾದ ನಿರ್ಣಯವೇ? ಯಾವುದೇ ಕೇಂದ್ರ ಸರ್ಕಾರ ಬಂದರೂ ಕೇಂದ್ರ ಸರ್ಕಾರದ ಇಲಾಖೆಗಳು, ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಹಿಂದಿಯನ್ನು ಬಲವಂತವಾಗಿ ತುರುಕಲಾಗುತ್ತದೆ. ಇದು ಸಂವಿಧಾನ ಬಾಹಿರವಲ್ಲವೆ? ಹಿಂದಿಯೇತರ ಸಿಬ್ಬಂದಿಗೆ ಬ್ಯಾಂಕುಗಳಲ್ಲಿ, ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಕಡ್ಡಾಯವಾಗಿ ಹಿಂದಿಯನ್ನು ಕಲಿಸಲಾಗುತ್ತಿಲ್ಲವೇ?

ಹಾಗೆ ನೋಡಿದರೆ, ಕರ್ನಾಟಕದಲ್ಲಿ ಕನ್ನಡೇತರರು ಕನ್ನಡ ಕಲಿಯಲಿ ಎಂದು ಅಪೇಕ್ಷಿಸುವುದು ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವುದಕ್ಕಿಂತ ಹೆಚ್ಚು ಯೋಗ್ಯವಾದ ಕ್ರಮವಲ್ಲವೇ?

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೀಡಿರುವುದು ವರದಿಯಷ್ಟೆ. ಇಂಥ ವರದಿಗಳನ್ನು ಚಂಪಾ, ಬರಗೂರು ಮತ್ತಿನ್ನಿತರರು ನೀಡಿದ್ದರು. ಯಾರ ಶಿಫಾರಸುಗಳೂ ಇನ್ನೂ ಜಾರಿಯಾಗಿಲ್ಲ. ಚಂದ್ರು ಅವರ ಶಿಫಾರಸುಗಳು ಜಾರಿಯಾದೀತೆಂಬ ನಿರೀಕ್ಷೆಗಳೂ ಇಲ್ಲ.

ಆದರೆ ಇಂಥ ಪ್ರಸ್ತಾಪಗಳು ಬಂದಾಗ ಇಂಗ್ಲಿಷ್ ಮೀಡಿಯಾ ಮೈಕೊಡವಿ ಎದ್ದು ನಿಲ್ಲುವುದು, ವಲಸೆ ಬಂದವರು ಬಾಯಿಗೆ ಬಂದಂತೆ ಮಾತನಾಡುವುದು ನಡೆದೇ ಇದೆ.  ಹಿಂದೆ ಇಂಥದ್ದೇ ಒಂದು ಗುಂಪು ಬೆಂಗಳೂರು ಬಿಟ್ಟು ಹೋಗುತ್ತಿದ್ದೇವೆ (ಐ ಆಮ್ ಲೀವಿಂಗ್ ಬ್ಯಾಂಗಲೋರ್) ಎಂಬ ಅಭಿಯಾನ ಆರಂಭಿಸಿತ್ತು.

ಭಾಷೆಯ ಆಧಾರದಲ್ಲಿಯೇ ರಾಜ್ಯಗಳ ವಿಂಗಡಣೆಯಾಗಿದೆ. ಕನ್ನಡಿಗರು ಇರುವ ಪ್ರದೇಶವೇ ಕರ್ನಾಟಕವಾಗಿದೆ. ಭಾರತ ಒಕ್ಕೂಟದ ಭಾಗವಾಗಿ ಕರ್ನಾಟಕ ತನ್ನ ಭಾಷೆ-ಉಪಭಾಷೆಗಳನ್ನು ಉಳಿಸಿಕೊಳ್ಳುವ ಹಕ್ಕು ಹೊಂದಿದೆ. ಅದನ್ನು ಎಲ್ಲರೂ ಅರಿತುಕೊಳ್ಳುವುದು ಒಳ್ಳೆಯದು.

16 comments:

  1. ನಾಡಿನ ಬಹುಸಂಖ್ಯಾತ ಕನ್ನಡ ಜನತೆಯ ನಿರ್ಣಯಕ್ಕೆ ನನ್ನ ಸಹಮತ.

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ReplyDelete
  2. ಹಿಂದಿ ಆಗಲಿ ಕನ್ನಡ ಆಗಲಿ...ನಮ್ಮ ಭಾರತೀಯ ಭಾಷೆಗಳು...ನಮ್ಮದು ಎಂಬ ಅಭಿಮಾನ ಒಳ್ಳೆಯದೇ...ಆಸಕ್ತಿ ಇದ್ದ ಪ್ರತಿಯೊಬ್ಬ ಕನ್ನಡೇತರ ಕನ್ನಡ ಕಲಿಯುವುದಕ್ಕೆ ಯಾವ ಪ್ರಾಧಿಕಾರದ ಅನುಮತಿ ಅಥವಾ ಆದೇಶ ಬೇಡ...ಅದಕ್ಕೊಂದು ಪುಟ್ಟ ಉದಾಹರಣೆ ಕೊಡ ಬಯಸುವೆ...ನನ್ನೂರು ಉತ್ತರ ಕನ್ನಡದ ಮುಂಡಗೋಡ ..ಇಲ್ಲಿ ಟಿಬೆಟಿಯನ್ ನಿರಾಶ್ರಿತರ (?????)ಆಶ್ರಯ ತಾಣವಿದೆ..ಜೊತೆಗೆ ತಿಬೆತಿಯನ್ನರಿಗಾಗಿ ಕೇಂದ್ರೀಯ ವಿದ್ಯಾಲಯ ....ಇಲ್ಲಿ ಬರುವ ಎಲ್ಲಾ ಸಿಬ್ಬಂದಿ ಗಳು ಉತ್ತರ ಭಾರತದವರು..ಹಾಗೆ ಬಂದವರೊಂದಿಗೆ ಬೆರೆತು ಒಳ್ಳೆಯ ಹಿಂದಿ ಯನ್ನು ನಾನು ಕಲಿತೆ..ಅವರು ಒಳ್ಳೆಯ ಕನ್ನಡ ಕಲಿತರು...ಅವರು ಕಲಿಯುವ ಅಗತ್ಯ ವಿರಲಿಲ್ಲ...ಆದರೂ ಕಲಿತರು...ಏಕಂದರೆ ಅವರಿಗೆ ಸಾಮಾನ್ಯರಂತೆ ಬದುಕ ಬೇಕಿತ್ತು...ಕೇವಲ ಮಾತದುವುದಷ್ಟೇ ಅಲ್ಲ ಒಬ್ಬರಂತೂ ಓದು ಬರಹ ಎರಡು ಕಲಿತು..ಬಸ್ ,ಅಂಗಡಿಗಳ ನಾಮ ಫಲಕ ಓದುವುದನ್ನು ರೂಡಿ ಮಾಡುತ್ತ..ಕನ್ನಡ ದಿನ ಪತ್ರಿಕೆ ಓದ ತೊಡಗಿದ್ದು ಆಕೆಗೆ ಕನ್ನಡ ಕಳಿಸಿದ ನನಗೂ ಆಶ್ಚರ್ಯ ಮತ್ತು ಹೆಮ್ಮೆ ಎರಡು ತಂದಿತ್ತು...
    ಜೆರ್ಮನ್ ಕಂಪನಿಯಲ್ಲಿ ಕೆಲಸ ಮಾಡಬೇಕಾದರೆ ೧೦ ತಿಂಗಳ ಕಾಲ ಆ ಭಾಷೆ ಕಲಿಯಲೇ ಬೇಕು..ಕೆಲಸ ಮಾಡುವುದು ಭಾರತದಲ್ಲೇ...ಆದರೂ ಇದು ಕಡ್ಡಾಯ...ಇದಕ್ಕೆ ಯಾರಾದರು ಯಾಕೆ ವಿರೋಧಿಸಲ್ಲ...????ಜಿಲ್ಹಧಿಕಾರಿಯಾಗಿ ಕರ್ನಾಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಲವಾರು ಅಧಿಕಾರಿ ಗಳು.. ಭಾರತದ ಬೇರೆ ಬೇರೆ ರಾಜ್ಯದವರೇ...ಅವರು ಕನ್ನಡ ಕಲಿತಿಲ್ಲವೇ.???ಮುಂಗಾರು ಮಳೆ ಹುಡುಗಿ ಪೂಜಾ ಗಾಂಧೀ ಅದೆಷ್ಟು ಬೇಗ ಕನ್ನಡ ಕಲಿತರು..ಇಷ್ಟವಿದ್ದವರು ಕಲಿತೆ ಕಲಿಯುತ್ತಾರೆ...
    ಹಿಂದಿ ಯನ್ನು ಪರ ಭಾಷೆ ಎಂದು ನೋಡದೆ...ನಮ್ಮ ರಾಷ್ಟ್ರೀಯ ಭಾಷೆ ಎಂದೇಕೆ ನಾವು..ಯೋಚಿಸುತ್ತಿಲ್ಲ???ಹಿಂದಿ ಬೇಡ..ಇಂಗ್ಲೀಷ್ ಮಾಧ್ಯಮದಲ್ಲಿ ಎಲ್ಲವು ಇಂಗ್ಲೀಷ್ ನಲ್ಲೆ ಕಲಿಯಬೇಕಾದ ವ್ಯವಸ್ತೆ ಇದೆ ಅದು ನಮ್ಮ ನಾಡಿನ ಭಾಷೆಯು ಅಲ್ಲ ರಾಷ್ಟ್ರದ ಯಾವ ಭಾಗದ ಭಾಷೆಯು ಅಲ್ಲ ಅದನ್ನು ಕಲಿಯಬಹುದು..ಯಾಕೆ???ಭಾಷೆ ಅದು ಸಂವಹನದ ಮಾಧ್ಯಮ..ಅದರ ಬಗ್ಗೆ ವಾತ್ಸಲ್ಯ ಪ್ರೀತಿ..ನಮ್ಮದು ಎನ್ನುವ ಅಭಿಮಾನ ಇರಲಿ ..ಇರಬೇಕು..ಆದರೆ..ಹಿಂದಿ ಕಲಿಕೆ ಮತ್ತು ಬೇರೆ ಭಾಷೆ ಅದೂ ನಮ್ಮ ರಾಷ್ಟ್ರದ ಇತರ ಭಾಷೆಗಳ ಬಗ್ಗೆ ಈ ನಿಲುವು ಏಕೆ...?

    ReplyDelete
  3. ಸಂಧ್ಯಾJune 12, 2011 at 7:44 PM

    @ಅಮಿತ:
    ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ಹಾಗೆಂದು ಸಂವಿಧಾನದಲ್ಲಿ ಎಲ್ಲೂ ಇಲ್ಲ. ಕನ್ನಡದವರಿಗೆ ಹಿಂದಿಯನ್ನ ಕಡ್ಡಾಯವಾಗಿ ಕಲಿಸುವುದು ತಪ್ಪೇತಾನೆ? ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಜನ ತಮ್ಮಿಂತಾವೇ ಭಾಷೆಗಳನ್ನ ಕಲೀತಾರೆ. ಸರ್ಕಾರ ಕಡ್ಡಾಯವಾಗಿ ಕರ್ನಾಟಕದಲ್ಲಿ ಹಿಂದಿ ಕಲಿಸದಿದ್ರೆ, ಇಲ್ಲಿಗೆ ಬರುವವರು ಬೇಗ ಇಲ್ಲಿನ ಕನ್ನಡವನ್ನ ಕಲೀತಾರೆ ಅಲ್ವೆ?

    ReplyDelete
  4. ಸಂವಿಧಾನಬದ್ಧವೇ? ಎಂದು ನೀವು ಎರೆಡೆರಡು ಬಾರಿ ಕೇಳಿದ್ದೀರಾ... ಹಿಂದಿ ಹೇರಿಕೆ ನಡೀತಾ ಇರೋದೆ ಸಂವಿಧಾನದ ಆಶಯದಂತೆ. ನಮ್ಮ ದೇಶದ ಸಂವಿಧಾನವನ್ನು ಬರೆಯುವಾಗಲೇ ಈ ಬುದ್ಧಿವಂತಿಕೆ ತೋರಿದ್ದಾರೆ... ಹಿಂದೀವಾದಿಗಳಾದ ಹುಸಿ ರಾಷ್ಟ್ರೀಯವಾದಿಗಳು.

    ಆನಂದ್

    ReplyDelete
  5. @ಅಮಿತಾ, @ಸಂಪಾದಕೀಯ,

    ಇಲ್ಲಿ ಅಮಿತಾರವರು ಹಿಂದಿ ಆಗಲೀ ಕನ್ನಡವಾಗಲೀ ಭಾರತೀಯ ಭಾಷೆಗಳು ತಾನೆ ಎಂದು ಕೇಳಿದ್ದಾರೆ. ಅದು ನಿಜ. ಯಾರಿಗೂ ಹಿಂದಿ ಬಗ್ಗೆ ದ್ವೇಷ ಇಲ್ಲ. ಆದರೆ ಅದರ ಕಡ್ಡಾಯ ಕಲಿಕೆ ಬಗ್ಗೆ ವಿರೋಧವಿರುವುದು. ಅವರೇ ಹೇಳುವಂತೆ ಇಷ್ಟವಿದ್ದವರೂ ಅಗತ್ಯವಿದ್ದವರೂ ಬೇಕಾದ ಭಾಷೆ ಕಲಿತುಕೊಳ್ಳುತ್ತಾರೆ. ಅಂದಮೇಲೆ ಹಿಂದಿ ಕೂಡ ಹಾಗೇ ಆಗಬೇಕಲ್ಲ. ಅದು ಪ್ರಯೋಜನವಿಲ್ಲದಿದ್ದವರೂ ಕೂಡ ಈಗ ಕಡ್ಡಾಯವಾಗಿ ಕಲಿಯಬೇಕಾಗಿದೆ. ಇದು ಹೇರಿಕೆಯಾಗುತ್ತದೆ.

    ಈಗ ನೋಡಿ, ಸಂವಿಧಾನದಲ್ಲಾಗಲೀ ಎಲ್ಲಿಯೂ ಆಗಲಿ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿಲ್ಲ. ಅಸಲಿಗೆ ನಮ್ಮ ಇಡೀ ದೇಶಕ್ಕೆ ಒಂದೇ ಒಂದು ರಾಷ್ಟ್ರಭಾಷೆ ಎಂಬುದೇ ಇಲ್ಲ. ಭಾರತ ಬಹುಭಾಷಾ ಗಣರಾಜ್ಯ. ಆದರೂ ಕೂಡ ಜನ ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ತಿಳುವಳಿಕೆಯಿಂದ ಅದನ್ನು ತಲೆಮೇಲೆ ಕೂರಿಸಿಕೊಳ್ಳುತ್ತಾರೆ. ಹಿಂದಿಭಾಷಿಕರಿಗೆ ಕೇಂದ್ರ ಸರ್ಕಾರದ ಎಲ್ಲಾ ಪರೀಕ್ಷೆ, ಉದ್ಯೋಗ ಮುಂತಾದ ಕಡೆಗಳಲ್ಲಿ ಅವರದ್ದೇ ಭಾಷೆಯ ಅನುಕೂಲ ಮಾಡಿಕೊಡಲಾಗಿದೆ. ಬೇರೆ ಭಾಷಿಕರಿಗೆ ಇಲ್ಲ. ಅವರು ಎರಡನೇ ದರ್ಜೆ ನಾಗರಿಕರು.

    ಅಷ್ಟಕ್ಕೂ ನಾವು ಕನ್ನಡ ಕಲಿಯಲು/ಬಳಸಲು ಕೇಳುತ್ತಿರುವುದು ಕರ್ನಾಟಕದಲ್ಲಿ ಇದ್ದವರನ್ನು ಮಾತ್ರವೇ ಹೊರತು , ಬಿಹಾರದಲ್ಲೋ ದೆಹಲಿಯಲ್ಲೋ ಇದ್ದವರನ್ನಲ್ಲವಲ್ಲ. ಇದು ವಲಸಿಗರು ಮುಖ್ಯವಾಹಿನಿಯಲ್ಲಿ ಬೆರೆಯಲು ಸಹಾಯವಾಗುತ್ತ್ತದೆ. ನಾವು ಉತ್ತರಪ್ರದೇಶಕ್ಕೆ ಹೋಗಿ ಇದ್ದಾಗ ಹಿಂದಿಯನ್ನೇ ಕಲಿತು ವ್ಯವಹರಿಸಬೇಕಾಗುತ್ತದೆ. ಈಗ ಇಂಗ್ಲೆಂಡಿಗೆ ಹೋದವರು ಇಂಗ್ಲೀಷನ್ನೇ ಕಲಿತು ವ್ಯವಹರಿಸುತ್ತಾರೆ, ಹಾಗೇ ಜರ್ಮನಿ, ಜಪಾನ್ ಎಲ್ಲಾ ಕಡೆ ಕೂಡ. ಅಲ್ಲಿನ ನೆಲದ ಭಾಷೆ ಅಲ್ಲಿ ಬಳಸಲ್ಪಡಬೇಕು. ಆದರೆ ಕರ್ನಾಟಕದಲ್ಲಿ ಮಾತ್ರ ಹಾಗಾಗುತ್ತಿಲ್ಲ. ದೇಶದೆಲ್ಲೆಡೆ ಶಿಕ್ಷಣದಲ್ಲಿ ಹಿಂದಿಯನ್ನು ಬಲವಂತದ ಹೇರಿಕೆ ಮಾಡಲಾಗಿದೆ. ಇದನ್ನೇ ಅಡ್ವಾಂಟೇಜ್ ಮಾಡಿಕೊಂಡು ಇಲ್ಲಿ ಬರುವ ಉತ್ತರಭಾರತೀಯರು ಕನ್ನಡಿಗರ ಮೇಲೆ ದರ್ಪ ತೋರುತ್ತಾರೆ. ಇಲ್ಲಿ ಕನ್ನಡ ಕಲಿಯದೇ ನಮ್ಮ ಮೇಲೆ ಹಿಂದಿಯನ್ನು ಹೇರುತ್ತಾರೆ. ಇದಕ್ಕಷ್ಟೇ ವಿರೋಧ.
    ಅಮಿತಾ ಹೇಳಿದಂತೆ ಯಾವುದೋ ಒಂದು ಪೂಜಾಗಾಂಧಿ, ಎಲ್ಲೋ ಒಬ್ಬ ಟಿಬೇಟಿ ಕನ್ನಡ ಕಲಿಯುವ ವಿಷಯ ಅಲ್ಲ ಇದು.

    ಇನ್ನು ಇಂಗ್ಲೀಷ್ ವಿದೇಶಿ ಭಾಷೆ ಅಲ್ಲವೇ ಎಂದು ಕೇಳುವ ಜನರು ಅದು ಇಲ್ಲದೇ ತಾವು ಉದ್ಯೋಗ ಪಡೆಯಲು ಅಥವಾ ಈಗ ತಾವಿರುವ ಸ್ಥಾನದಲ್ಲಿ ಇರಲು ಸಾಧ್ಯವೇ ಎಂದು ಮೊದಲು ತಮ್ಮಲ್ಲಿ ತಾವು ಪ್ರಶ್ನೆ ಕೇಳಿಕೊಳ್ಳಬೇಕು. ಉದ್ಯೋಗ, ಜ್ಞಾನ , ಹೊರಸಂಪರ್ಕ ಮುಂತಾದವಕ್ಕ ಇಂಗ್ಲೀಷ್ ಇರುವಾಗ ಹಿಂದಿ ಎಂಬ ಭಾಷೆ ನಿಜಕ್ಕೂ ಅಪ್ರಯೋಜಕ. ಹೊರೆ. ಬೇಕಾದವರು ಸ್ವಂತವಾಗಿ ಹಿಂದಿಯಾಗಲಿ ಅಥವಾ ಯಾವ ಭಾಷೆಯನ್ನಾದರೂ ಕಲಿಯಬಹುದು. ಅದಕ್ಕೆ ಯಾರ ವಿರೋಧವೂ ಇರುವುದಿಲ್ಲ.

    -----
    ಇಂತಹ ಜನಪರ ವಿಚಾರಗಳನ್ನು ಬರೆಯುವುತ್ತಿರುವುದಕ್ಕೆ ಸಂಪಾದಕೀಯಕ್ಕೆ ಧನ್ಯವಾದಗಳು.

    ReplyDelete
  6. ಹಿಂದಿ ಕಲಿಯಬೇಕು, ಯಾಕೆಂದರೆ -
    ೧) ಒಳ್ಳೆಯ ಹಿಂದಿ ಸಿನೆಮಾ ನೋಡಿ ಆನಂದಿಸಲಿಕ್ಕೆ, ಹಾಡುಗಳನ್ನ ಕೇಳಿ ಹಿಗ್ಗಲಿಕ್ಕೆ
    ೨) North ಇಂಡಿಯಾದಲ್ಲಿ settle ಆಗಬೇಕಾಗಿ ಬಂದರೆ ನೆರೆಹೊರೆಯವರನ್ನು ನಮಗೆ ಬೇಕಾದವರನ್ನಾಗಿಸಲಿಕ್ಕೆ, ಅಂಗಡಿಯಲ್ಲಿ ವ್ಯಾಪಾರ ಮಾಡಲಿಕ್ಕೆ
    ೩) ಹಿಂದಿ ಸುದ್ದಿ ವಾಹಿನಿಗಳಲ್ಲಿ ಬರುವ ಸುದ್ದಿ ಅರ್ಥ ಮಾಡಿಕೊಳ್ಳಲಿಕ್ಕೆ

    :-) :-) :-)

    ReplyDelete
  7. I have a silly/stupid question for Robin Chugh (of course after appreciating his gesture of apologizing):

    Reading his hand-written letter, especially the 6th line in the main paragraph, I am curious to know- "Who are those people who speak Kannada from bottom of Robin Chugh's heart by all means?"

    :-)

    Btw, I am a disciple of Wren and Martin.

    ReplyDelete
  8. ಹಿಂದಿ ಹೇರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದಕ್ಕೆ ಇನ್ನೊಂದು ಉದಾಹರಣೆ ನೋಡಿ.
    http://www.rbi.org.in/scripts/BS_PressReleaseDisplay.aspx?prid=24497
    ರಾಜ್-ಬಾಸಾ ಪ್ರಶಸ್ತಿನ ಆರ್.ಬಿ.ಐ ಅವರು ಬ್ಯಾಂಕುಗಳಲ್ಲಿ ಹಿಂದಿ ಅಳವಡಿಕೆಗೆ ದುಡಿದವರಿಗೆ ಕೊಡುತ್ತಾ ಬಂದಿದೆ.
    ಬ್ಯಾಂಕುಗಳಲ್ಲಿ ಹಿಂದಿ ಬಳಸೋ ಮೂಲಕ ನಾವು ಸಾಮಾನ್ಯ ಜನರನ್ನೂ ತಲುಪಬಹುದು ಅಂತ ಇವರ ಅಂಬೋಣ.
    ಕರ್ನಾಟಕದ ಜನತೆನ ತಲುಪಕ್ಕೆ ಕನ್ನಡ ಬಳಸೋದೇ ಸರಿಯಾದ್ದು ಅಂತ ಇವರ ಗಮನಕ್ಕೆ ಯಾಕೆ ಬರಲ್ಲ?

    ReplyDelete
  9. ಬಹುತೇಕ ಕೇಂದ್ರ ಸರ್ಕಾರದ ಅಧಿಕಾರಿಗಳು ಕನ್ನಡ ಕಲಿತಿರುವುದು ಮೆಚ್ಚುಗೆಯ ಸಂಗತಿ. ಬೇರೆ ಯಾವುದೇ ರಾಜ್ಯ, ರಾಷ್ಟ್ರಗಳಿಂದ ಜನ ಕನ್ನಡನಾಡಿಗೆ ಬಂದು ನೆಲೆಸಲಿ, ನೆಲೆಸುವುದಕ್ಕೆ ಅವರಿಗೊಂದು ಉದ್ದೇಶ ಇರಲೇಬೇಕು. ಅವರ ಉದ್ದೇಶ ಬಹುತೇಕ ಉದ್ಯಮ ಸಂಬಂಧಿತವಾಗಿರುತ್ತದೆಂದು ಭಾವಿಸುತ್ತೇನೆ. ಇವರ ಮೇಲೆ ಕನ್ನಡ ಕಲಿಯಿರಿ ಎಂದು ಕಡ್ಡಾಯ ಮಾಡುವುದಕ್ಕಿಂತ ಅಖಂಡ ಕನ್ನಡ ನಾಡಿನಲ್ಲಿ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಲಿ. ಅಂದರೆ ಸರ್ಕಾರವೇ ತನ್ನ ಸಂಪೂರ್ಣ ಆಡಳಿತವನ್ನು ಕನ್ನಡದಲ್ಲಿ ನಡೆಸಲು ಕಡ್ಡಾಯ ಮಾಡಲಿ.
    ಈಗ ಆಗುತ್ತಿರುವ ಪ್ರಕ್ರಿಯೆ ಇನ್ನೂ ಸಾಲದಾದರೂ, ಮೊದಲಿಗಿಂತ ಸುಮಾರು ಸುಧಾರಣೆ ಆಗಿದೆ. ಉದಾಹರಣೆ, ಬೆಂಗಳೂರು ಮಹಾನಗರ ಸಾರಿಗೆ, ರಾಜ್ಯ ರಸ್ತೆ ಸಾರಿಗೆ, ಸಾರಿಗೆ ಇಲಾಖೆಯಲ್ಲಿ ಕನ್ನಡ ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತಿದೆ. ಕನ್ನಡದ ವೆಬ್`ಸೈಟ್ ಬಳಸಲಾಗುತ್ತಿದೆ. ಕನ್ನಡ ಕಡ್ಡಾಯಗೊಳಿಸಲಾಗಿದೆ. ಇತ್ಯಾದಿ ರೀತಿಯಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆಯನ್ನು ನೀಡುತ್ತಿದೆ ಮತ್ತು ಇತರರಿಗೆ ಕನ್ನಡವನ್ನು ಕಲಿಸುವ ಕೆಲಸವನ್ನು ಮಾಡುತ್ತಿದೆ. ಸರ್ಕಾರದ ಕಾರ್ಯದರ್ಶಿ ಹಂತದಿಂದಲೇ ವಿಧಾನಸೌಧದ ಎಲ್ಲರೂ ಕಡ್ಡಾಯವಾಗಿ ಕನ್ನಡ ಬಳಸಲು, ಕನ್ನಡದಲ್ಲೇ ಅರ್ಜಿಗಳನ್ನು, ಸ್ವೀಕೃತಿಗಳನ್ನು, ಆದೇಶ, ಸೂಚನೆಗಳನ್ನು, ಕರ್ನಾಟಕದ ಎಲ್ಲಾ ಕಡೆ ಇರುವ ಪ್ರತಿಯೊಂದು ಜಾಹಿರಾತು, ನಾಮಫಲಕಗಳನ್ನು ಮೊದಲು ಇತರೆ ಭಾಷೆಗೆ ಸರಿ ಸಮವಾಗಿ ಕನ್ನಡದಲ್ಲೇ ಬಳಸುವಂತೆ ಮಾಡಬೇಕು. ಈಗ ಆಗುತ್ತಿರುವುದು ಏನೇನು ಸಾಲದು. ಕಾರ್ಪೋರೇಟ್ ಉದ್ಯಮಗಳು ಹೆಚ್ಚುಗೊಂಡಿರುವುದು ರಾಬಿನ್`ನಂತಹವರ ಮನಸ್ಥಿತಿಯನ್ನು ಹುಟ್ಟುಹಾಕಲು ಕಾರಣವಾಗುತ್ತಿದೆ. ಈ ಉದ್ಯಮಗಳು ರಾಜ್ಯದಲ್ಲಿ ನೆಲೆಸಿರುವ ಕಾರಣ ರಾಜ್ಯಕ್ಕೆ ಯಾವ ರೀತಿಯ ಅನುಕೂಲವಾಗುತ್ತಿದೆ ಎಂಬುದನ್ನು ಜನರಿಗೆ ಅರಿವು ಮೂಡಿಸಬೇಕಾಗುತ್ತದೆ. ಹೂಡಿಕೆದಾರರು ಎಲ್ಲಿನವರು, ಲಾಭವೆಲ್ಲಾ ಎಲ್ಲಿಗೆ ಹೋಗುತ್ತದೆ? ಸ್ಥಳೀಯರಿಗೆ ಆದ್ಯತೆಯನ್ನು ನೀಡದೇ ಹೋದರೆ ಉದ್ಯಮದಿಂದ ಇಲ್ಲಿಗೆ ಏನು ಪ್ರಯೋಜನ? ಇನ್ನೂ ಹಲವಾರು ಸರ್ಕಾರಿ ಇಲಾಖೆಗಳಲ್ಲಿ ಇಂಗ್ಲೀಷ್ ಬಳಸಲಾಗುತ್ತಿದೆ. ಮಾಲ್`ಗಳು, ಮಾರಾಟ ಮಳಿಗೆ, ಸಂಕೀರ್ಣಗಳು ಮುಂತಾದವು ಕನ್ನಡದ ಘನತೆಯನ್ನು ಪರೋಕ್ಷವಾಗಿ ಕುಗ್ಗಿಸುವಂತಹ ಕೆಲಸ ಮಾಡುತ್ತಿವೆ.
    'ಮೂಗು ಹಿಡಿದುಕೊಂಡರೆ ತಾನಾಗೇ ಬಾಯಿ ಬಿಡುತ್ತಾರೆ' ಎಂಬ ಮಾತಿದೆ. ದಯವಿಟ್ಟು ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಿ, ಎಲ್ಲಾ ಹಂತಗಳಲ್ಲಿಯೂ ಕನ್ನಡವನ್ನು ಜಾರಿಗೊಳಿಸುವ ಕೆಲಸ ಮಾಡಲಿ.
    ಸುರೇಶ್ ಕಾಂತ ಬಿ.

    ReplyDelete
  10. @ಆನಂದ್, well said . ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ.
    ನಮಗೆ ಹಿಂದಿ ಕಲಿಯುವ ಅಗತ್ಯವಾದರೂ ಏನು ನಮ್ಮ ಮೇಲೆ ಹೇರಿದ ಹಿಂದಿಯ ಭಾರವನ್ನು ಹೊತ್ತು ಬಸವಳಿದಿದ್ದೇವೆ. ಎಲ್ಲ ಪರಭಾಷಿಕರಿಗಿಂತ ಈ ಹಿಂದಿ ಜನಕ್ಕೆ ದುರಹಂಕಾರ ಹೆಚ್ಚು, ಕನ್ನಡದ ಬಗ್ಗೆ ತಾತ್ಸಾರ ಮತ್ತು ತಮ್ಮ ಬಗ್ಗೆ ಏನೋ ಒಂದು ಬಗೆಯ ಮೇಲರಿಮೆ. ಹಿಂದಿಯ ಬದಲು ಇಂಗ್ಲಿಷ್ ಉಪಯೋಗಿಸಿದರೆನೆ ಒಳಿತೇನೋ. ಆಗ ಕನ್ನಡಿಗರು ಇನ್ನು ಹೆಚ್ಚು ಅವಕಾಶಗಳನ್ನು ಹೊಂದಬಹುದು. ತಮಿಳರು ಈ ವಿಷಯದಲ್ಲಿ ಒಳ್ಳೆಯ ನಿದರ್ಶನ, ಹಿಂದಿಯ ಹಂಗಿಲ್ಲದೆ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದ್ದಾರೆ. ಈಗಾಗಲೇ ಬೆಂಗಳೂರಿನ ವಿಷಯದಲ್ಲಿ ತಡವಾಗಿದೆ. It's now or ನೆವರ್.

    ReplyDelete
  11. ನಮ್ಮಲ್ಲಿ ಈಗ ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಸಲಾಗುತ್ತಿದೆ, ಇದರಿಂದ ತೊಂದರೆಯೇನೂ ಇಲ್ಲ ಎಂದು ನನ್ನ ಭಾವನೆ. ತೃತೀಯ ಭಾಷೆಯಾಗಿ ಹಿಂದಿಯಲ್ಲದಿದ್ದರೆ ಬೇರೆ ಯಾವ ಭಾಷೆ ಕಲಿಸಬೇಕು? ಹೀಗಾಗಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವ ಹಿಂದಿ ಕಲಿತರೆ ನಮಗೆ ಉಪಯೋಗವೇ ಆದೀತು. ಪರಭಾಷಿಕರಿಗೆ ಕನ್ನಡ ಕಡ್ಡಾಯ ಕಲಿಸುವ ಪ್ರಸ್ತಾಪ ಒಳ್ಳೆಯದೇ.

    ReplyDelete
  12. ತನ್ನಿಂದ ತಪ್ಪಾಗಿದೆ ಎಂದು ಗೊತ್ತಾದಾಗ ರಾಬಿನ್ ಚುಗ್ ಅದನ್ನು ಒಪ್ಪಿಕೊಂಡು ಕ್ಷಮೆ ಕೇಳಿರುವ ರೀತಿ ಮೆಚ್ಚುವಂತದ್ದು. ಗೌರವಯುತವಾಗಿ ಕ್ಷಮೆ ಕೇಳಿರುವ ರೀತಿ ಉನ್ನತ ಸಂಸ್ಕಾರವನ್ನು ತೋರಿಸುತ್ತದೆ. ನಮ್ಮಲ್ಲಿ ಇಂಥ ಉನ್ನತ ಸಂಸ್ಕಾರದ ಕೊರತೆ ಇದೆ. ಅಂತರ್ಜಾಲದಲ್ಲಿ ನಮ್ಮ ಜನರು ಕೀಳು ಭಾಷೆಯನ್ನು ಬಳಸುವುದನ್ನು ನೋಡಿದಾಗ ಹಾಗು ತಮ್ಮಿಂದ ತಪ್ಪಾಗಿದೆ ಎಂದು ತಿಳಿದಾಗಲೂ ಮತ್ತೆ ಮತ್ತೆ ತಮ್ಮ ವಾದವನ್ನೇ ವ್ಯಂಗ್ಯವಾಗಿ ಮುಂದುವರಿಸುವ ನಮ್ಮ ಜನರು ಇದರಿಂದ ಕಲಿಯಬೇಕಾದಾದು
    ಇದೆ ಎನಿಸುತ್ತದೆ.

    ReplyDelete
  13. There is nothing wrong, making this rule for outsiders to learn kannada, we are not saying them to learn kannada,and write poem or literature. we just want them to know basic communication ex: numbers ondu eradu. and basic kannada which will be helpfull for daily communication, may be with auto driver, or provision store.

    for example: our BMTC bus drivers are almost kannadigas,
    many doesnt know hindi, properly(from my experience i have seen) when north indian fellow comes and asks ticket, it would confuse lot to conductor, if conductor asks to provide change, this north indians will say, muhje kannada vannnada nahi atha. hindi mye bolo.

    this is where the rule will help. if he knows minimum kannada, the story would be diff.

    I never went to north india, i never saw hindi movies, i dont have hindi friends, but they made me learn hindi till 10th std. why did this rule for us. we learned it for so long years, why cant this people learn just basic kannada.

    if imposing kannada on outsiders is not tolerated by english news papers, and other people.
    they feel like we are taking there freedom to practice any language.

    But why these english newspaper and tv channels are not looking on kannada students who are forced to study hindi.

    ReplyDelete
  14. karnataka bharathadinda pratheka vaguvude sooktha mathu parihara.... okkoota vyavasthege dikkara.... kendra sarakarada malathayee dhorane mathu dayadigala kirukula..........

    ReplyDelete
  15. i agree with ravi bharath. no harm if outsiders learn kannada, but whether we , especially in bangalore allowing them because our veg vendors, conductors and common people and landlords all get "adjusted" and talk in hindi, tamil etc. so no scope for any outsider to learn kannada

    ReplyDelete
  16. My Dear Kannadigare , Think and Act Like Chanakya..Wait for time. I am lonely preparing to build a huge kannada army who will protect our interests. Every day i have felt depressed by seeing the fate / treatment of kannadigas in our own place..I Know kannadigas are not united and no kannadiga will help me or motivate me but i do not mind. My inspiration is Dr. Rajkumar, Sri KrishnaDevaraya and Che Guevera...Collectively i am economically growing to deliver something for all kannadigas.
    In this world people respect who are only aggressive - a spade to spade that should be the mantra then only people will respect and fear us (kannadigas). I have a very very great love to do something to kannadigas in every aspect..We need a more GEEK / CHANAKYA / KANNADIGAS for revolution. I will do it. People like this Robin should not left so easily.

    Suresh Gowda

    ReplyDelete