ಐಶ್ವರ್ಯ ರೈ ಬಚ್ಚನ್ ಹೊಟ್ಟೆಯಲ್ಲಿ ಇನ್ನೂ ಹುಟ್ಟದ ಮಗುವಿಗೆ ಸಿಕ್ಕ ಪ್ರಚಾರ ಕೆಜಿಎಫ್‌ನಲ್ಲಿ ಮಲ ಹೊತ್ತು ನೂರಾರು ಖಾಯಿಲೆಗಳಿಂದ ಸತ್ತು ಹೋಗುತ್ತಿರುವ ಜನರಿಗೆ ಸಿಗುವುದಿಲ್ಲ. ಇದು ಕಠೋರ ವಾಸ್ತವ. ನಿನ್ನೆ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ತಾವು ಹೇಳಿದಂತೆಯೇ ಕೆಜಿಎಫ್ ನಗರಕ್ಕೆ ಭೇಟಿ ನೀಡಿದ್ದಾರೆ. ಮಲ ಹೊರುವಿಕೆಗೆ ನಿಷೇಧವಿದ್ದರೂ ಆ ಕಾರ್ಯ ಮಾಡುತ್ತಿರುವವರನ್ನು ಅವರು ಕಣ್ಣಾರೆ ಕಂಡಿದ್ದಾರೆ. ಅವರಿಗೆ ಪುನರ್ವಸತಿಯ ಭರವಸೆಯನ್ನೂ ನೀಡಿದ್ದಾರೆ. ಕ್ರಮ ಕೈಗೊಳ್ಳದ ಅಧಿಕಾರಿಗಳನ್ನೂ ಗದರಿದ್ದಾರೆ. ತಮಾಶೆಯೆಂದರೆ ಸಚಿವರು ಭೇಟಿ ನೀಡುವವರೆಗೆ ಇಲ್ಲಿ ಮಲ ಹೊರುವವರು ಇದ್ದಾರೆ ಎಂಬುದೇ ಜಿಲ್ಲಾಧಿಕಾರಿಗಳಿಗೆ ಗೊತ್ತಿರಲಿಲ್ಲವಂತೆ.
ವಿಶೇಷವೆಂದರೆ ಕೆಜಿಎಫ್‌ಗೆ ಸಚಿವರು ನೀಡಿರುವ ಭೇಟಿ ಪತ್ರಿಕೆಗಳ ಬೆಂಗಳೂರು ಆವೃತ್ತಿಗಳಲ್ಲಿ ಪ್ರಕಟವಾಗೇ ಇಲ್ಲ. ಅದು ಅಷ್ಟು ಮಹತ್ವದ ಸುದ್ದಿ ಎಂದು ಪತ್ರಿಕಾ ಪ್ರಪಂಚಕ್ಕೆ ಅನ್ನಿಸಿರಬಹುದು. ರಾಜಕಾರಣಿಗಳ ಪತ್ರಿಕಾ ಓದುಗರಿಗೆ ಆಣೆ-ಪ್ರಮಾಣದ ಸುದ್ದಿಗಳನ್ನು ಓದುವಷ್ಟು ಆಸಕ್ತಿ ಮಲ ಹೊರುವವರ ಕುರಿತಾದ ಸುದ್ದಿಯ ಬಗ್ಗೆ ಇಲ್ಲದೇ ಇರಬಹುದು, ಇರಲಿ ಬಿಡಿ.
ಟೈಮ್ಸ್ ಆಫ್ ಇಂಡಿಯಾ ಮಾತ್ರ ಈ ಸುದ್ದಿಗೆ ವಿಶೇಷ ಆದ್ಯತೆ ನೀಡಿ, ಮುಖಪುಟದಲ್ಲೇ ವರದಿ ಪ್ರಕಟಿಸಿದೆ. ಟೈಮ್ಸ್ ಆಫ್ ಇಂಡಿಯಾz ವರದಿಯನ್ನು ಓದಲು ಈ ಲಿಂಕನ್ನು ಬಳಸಿ. ಕನ್ನಡಪ್ರಭದ ಸ್ಥಳೀಯ ಆವೃತ್ತಿಯಲ್ಲಿ ಪ್ರಕಟಗೊಂಡ ವರದಿಯನ್ನು ಓದಲು ಈ ಲಿಂಕನ್ನು ಬಳಸಿ.
ವಿಶೇಷವೆಂದರೆ ಕೆಜಿಎಫ್‌ಗೆ ಸಚಿವರು ನೀಡಿರುವ ಭೇಟಿ ಪತ್ರಿಕೆಗಳ ಬೆಂಗಳೂರು ಆವೃತ್ತಿಗಳಲ್ಲಿ ಪ್ರಕಟವಾಗೇ ಇಲ್ಲ. ಅದು ಅಷ್ಟು ಮಹತ್ವದ ಸುದ್ದಿ ಎಂದು ಪತ್ರಿಕಾ ಪ್ರಪಂಚಕ್ಕೆ ಅನ್ನಿಸಿರಬಹುದು. ರಾಜಕಾರಣಿಗಳ ಪತ್ರಿಕಾ ಓದುಗರಿಗೆ ಆಣೆ-ಪ್ರಮಾಣದ ಸುದ್ದಿಗಳನ್ನು ಓದುವಷ್ಟು ಆಸಕ್ತಿ ಮಲ ಹೊರುವವರ ಕುರಿತಾದ ಸುದ್ದಿಯ ಬಗ್ಗೆ ಇಲ್ಲದೇ ಇರಬಹುದು, ಇರಲಿ ಬಿಡಿ.
ಟೈಮ್ಸ್ ಆಫ್ ಇಂಡಿಯಾ ಮಾತ್ರ ಈ ಸುದ್ದಿಗೆ ವಿಶೇಷ ಆದ್ಯತೆ ನೀಡಿ, ಮುಖಪುಟದಲ್ಲೇ ವರದಿ ಪ್ರಕಟಿಸಿದೆ. ಟೈಮ್ಸ್ ಆಫ್ ಇಂಡಿಯಾz ವರದಿಯನ್ನು ಓದಲು ಈ ಲಿಂಕನ್ನು ಬಳಸಿ. ಕನ್ನಡಪ್ರಭದ ಸ್ಥಳೀಯ ಆವೃತ್ತಿಯಲ್ಲಿ ಪ್ರಕಟಗೊಂಡ ವರದಿಯನ್ನು ಓದಲು ಈ ಲಿಂಕನ್ನು ಬಳಸಿ.
ಬನ್ನೇರುಘಟ್ಟದಲ್ಲಿ ಕಾಡೆಮ್ಮೆ ಗಬ್ಬ ಆದರೆ ನ್ಯೂಸ್ಗ ಆಗತ್ತೆ ಐಶ್ವರ್ಯ ಬಸುರಾದರೆ ನ್ಯೂಸ್ ಆಗತ್ತೆ. ವ್ತ್ಯಾಸ ಏನೂ ಕಾಣ್ತಿಲ್ಲ. 37 ವರ್ಷದ ಐಶ್ವರ್ಯ ಬಸುರಾಗಿದ್ದಕ್ಕೆ ಸಿಹಿ ಹಂಚಿ ಸಂಭ್ರಮಿಸೋಕೆ ಆಕೆಯೇನು ಸ್ವಾತಂತ್ರ್ಯ ಹೋರಾಟಗಾರ್ತಿಯೇ? ಹಾಕಿರೋ ಮೂರಂಗುಲ ಬಟ್ಟೆನೂ ಬಿಚ್ಚಿಕೊಂಡು ಕುಣಿದದ್ದು, ಹಾಗೆ ಕುಣಿದ ಪ್ರತಿ ಚಿತ್ರಕ್ಕೂ ಕೋಟಿಗಟ್ಟಲೆ ವಸೂಲಿ ಮಾಡಿದ್ದಷ್ಟೇ ಆಕೆಯ ಸಾಧನೆ. ಪತ್ರಿಕೆಗಳಿಗೆ ಅದೇನು ರೋಮಾಂಚನವೋ ನಾ ಕಾಣೆ. ಅವರ ಮನೆಯ ಹಾಲು ಕರೆಯೋ ಹಸುವೇ ಗಬ್ಬವಾದಷ್ಟು ಹೆಮ್ಮೆಯಿಂದ ಸಂಭ್ರಮಿಸಿದ್ದಾರೆ. ಸಾಯೋ ಜನಗಳನ್ನ ಬಿಟ್ಟು ಬಸುರಾದೋಳ ಸುತ್ತ ಬಿದ್ದು ಸಾಯುತ್ತಾ ಇದಾರಲ್ಲ. ಇವರ ಜನ್ಮಕ್ಕಿಷ್ಟು ಬೆಂಕಿ ಹಾಕ.
ReplyDeleteಕನ್ನಡ ಪ್ರಭದ ಇಂದಿನ ಮುಖಪುಟದಲ್ಲಿ ಮುಖ್ಯ ಶೀರ್ಷಿಕೆ ನೋಡಿ ನಗಬೇಕೋ ಅಳಬೇಕೋ ಗೊತ್ತಾಗ್ಲಿಲ್ಲ. ಕನ್ನಡ ಪ್ರಭದಂಥ ಪತ್ರಿಕೆಗೆ ಈ ಸ್ಥಿತಿ ಬರಬಾರದಿತ್ತು. ಮದುವೆ ಆದ ನಂತರ ಒಂದು ಹೆಣ್ಣಿಗೆ ಮಗು ಹುಟ್ಟುವುದು ಅಸಹಜವಾದುದಲ್ಲ, ಆದರೆ ಐಶ್ವರ್ಯ ರಾಯ್ ಗೆ ಮಗುವಾಗುವ ಸುದ್ದಿಯನ್ನು ಮುಖಪುಟದಲ್ಲಿ ಮುಖ್ಯ ಶೀರ್ಷಿಕೆಯಾಗಿ ಕೊಟ್ಟಿರುವುದು ಪತ್ರಿಕೆ ಮತ್ತು ಅದರ ಸಂಪಾದಕರ ಗುಣಮಟ್ಟವನ್ನು ತೋರಿಸುತ್ತದೆ. ಭಟ್ಟರು ಇನ್ನು ಏನೇನು ಮಾಡ್ತಾರೋ ಗೊತ್ತಿಲ್ಲ ಆದರೆ ನಮ್ಮ ಕನ್ನಡ ಮಾಧ್ಯಮಕ್ಕೂ ಈ ರೀತಿ ಅಂಗ್ಲ ಪತ್ರಿಕೆಗಳ ಕೀಳಮಟ್ಟಕ್ಕೆ ಇಳಿಸುತ್ತಿರುವುದು ಮಾತ್ರ ದುರದೃಷ್ಟಕರ. ಹುಟ್ಟುತ್ತಿರುವುದು ಏಲಿಯನ್ ಅಥವಾ ತಂದೆ ಇಲ್ಲದೆ ಹುಟ್ಟಿದ ಏಸು ಎಂಬಂತೆ ಈ ಸುದ್ದಿಯನ್ನು ಮಹತ್ವ ನೀಡಿರುವ ಇತರ ಮಾಧ್ಯಮಗಳು ಸಹ ತನ್ನ ನೈಜ ಜವಾಬ್ದಾರಿಯನ್ನು ಗಾಳಿಗೆ ತೋರಿರುವ ಹಾಗಿದೆ. ಬಡತನ, ಭೃಷ್ಟಾಚಾರ , ಜನನ ಸಮಯದಲ್ಲಿ ತಾಯಂದಿರ ಸಾವು , ಹೆಣ್ಣು ಶಿಶು ಭ್ರೋಣ ಹತ್ಯೆಯಂತಹ ನೂರಾರು ವಿಷಯಗಳಿರುವಾಗ ಇಂತಹ ಅನಗತ್ಯ ಸುದ್ದಿಗಳನ್ನು ಮುಖ್ಯ ಶೀರ್ಷಿಕೆಯಾಗಿ ಬಳುಸುವುದು ಎಷ್ಟು ಸಮಂಜಸ?
ReplyDeleteಐಶ್ವರ್ಯ ರಾಯ್ ಬಸುರಾದರೆ, ಮಾಧ್ಯಮಗಳ ಸಂಪಾದಕರಿಗೆ ಹಬ್ಬ ಮಾಡಬಹುದಾದ ಖುಷಿ ಯಾಕೋ!!!????????
ReplyDeleteಪತ್ರಿಕೋಧ್ಯಮದ ಸಮಾಜಿಕ ನ್ಯಾಯ ಅಂದರೆ ಇದೇ ಇರಬೇಕು ಅಲ್ಲವೆ.
ಲಜ್ಜೆಗೆಟ್ಟವರ ಬಗ್ಗೆ ಮಾತನಾಡಲು.......
ಇದು ತುಂಬಾ ವಿಷಾದ ತರುವ ಟ್ರೆಂಡ್...
ReplyDeleteಕರ್ನಾಟಕದ ಮುಖವಾಣಿ.. ಫ್ಲ್ಯಾಗ್ ಶಿಪ್, ಮಾಸ್ಟ್ ಲ್ಯಾಂಪ್ ಎಣಿಸಿಕೊಂಡಿರುವ ಪತ್ರಿಕೆಗಳು.. ಇಂತಾ ಸುದ್ದಿಗಳನ್ನ ಮುಖ ಪುಟದಲ್ಲಿ ಹಾಕುವುದು ತಪ್ಪೇ..
ನೆನಪಿದೆ..ನಾನು ವಿಜಯ ಕರ್ನಾಟಕ ಓದುವದನ್ನ ಬಿಟ್ಟ ದಿನ... ಒಬ್ಬ ರಾಜಕಾರಣೀಯ.. ರಾಸ್ ಲೀಲೆಯ ಫೋಟೋಗಲ್ಲನ್ನ.. ಹಾಕಿ ಆ ಪೇಪರ್ನ ೩ರ್ಡ್ ಗ್ರೇಡಿಗೆ
ತಂದಿದ್ದರು..
ಅಲ್ಲಾರಿ.. ಮನೆ ಮಂದಿ ಎಲ್ಲ ಹಾಲ್ ನಲ್ಲಿ ಕುಳಿತು.. ಓದುವ ಪೇಪರ್ನ ಮುಖಪುಟ ಏನಿರಬೇಕು.. ಏನುವ.. ಪ್ರಜ್ಞೆ.. ಇರಬೇಡವೇ ?
ಪತ್ರಿಕೆಯ ಓದುಗರು ಯಾರು ಎಂತ ಪತ್ರಿಕೆ ಅದು ಅನ್ನೋದ್ರ ಮೇಲೆ.. ಮುಖಪುಟ ನಿರ್ದಾರ ಆಗ ಬೇಕು....
ಇನ್ನೂ ದಿನ ಬೆಳ್ಲಗ್ಗ್ಗೆ ಮಕ್ಕ್ಳೂ, ಹಿರಿಯರು, ಕಿರಿಯರು , ಹೆಣ್ನ ಮಕ್ಕ್ಳೂ, ಎಲ್ಲರಿಗೂ.. ಮನೆಯಲ್ಲಿ , ವೇಟಿಂಗ್ ರೋಮಲ್ಲಿ, ಕಛೇರಿಗಲ್ಳ್ಲಿ , ಬಸ್ಸು ರೈಲುಗಳಲ್ಲಿ, ಹೊಟ್ಲೂ, ಆಟೋ ಗಳಲ್ಲಿ ತಲುಪುವ.. ಪತ್ರಿಕೆಗೆ ತುಂಬಾ ಜವಾಬ್ದಾರಿ ಬೇಕು....
Both comments are very good.
ReplyDeleteIrshad moodbidri, Dubai, UAE.
ವಿಶ್ವೇಶ್ವರ ಭಟ್ಟರು ಕನ್ನಡ ಪ್ರಭದ ಸಾರಥ್ಯ ವಹಿಸಿಕೊಂಡ ನಂತರ ಕನ್ನಡ ಪ್ರಭದ ಜಾತ್ಯತೀತ ಧೋರಣೆಗಳು ಮಾಯವಾಗುತ್ತಿವೆ ಹಾಗೂ ಕನ್ನಡ ಪ್ರಭ ಪ್ರತಿಗಾಮಿ ಧೋರಣೆಗಳನ್ನು ಎತ್ತಿ ಹಿಡಿಯುವ ಪತ್ರಿಕೆಯಾಗುತ್ತಿದೆ. ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದಲ್ಲಿದ್ದಾಗ ಅಲ್ಲಿಯೂ ಪ್ರತಿಗಾಮಿ ಧೋರಣೆಗಳು ಮೇಲುಗೈ ಪಡೆದಿದ್ದವು. ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದಿಂದ ನಿರ್ಗಮಿಸಿದ ನಂತರ ವಿಜಯ ಕರ್ನಾಟಕ ಪತ್ರಿಕೆಯು ತುಸು ಪ್ರಗತಿಶೀಲ ಧೋರಣೆಗಳನ್ನು ತೋರಿಸುತ್ತಿದೆ.
ReplyDeleteಇದು ಐಶ್ವರ್ಯ ತಪ್ಪಲ್ಲ , ಆದ್ರೆ ಇದನ್ನೇ ದೇಶಕ್ಕೆ ಸ್ವತಂತ್ರ ಬಂದ ಹಾಗೆ ಬಿಂಬಿಸಿ ಬರೆಯುತ್ತರಲ್ಲ ಮೀಡಿಯಾ ದವರು ಇದಕ್ಕೆ ಏನನ್ನಬೇಕು ?ಉತ್ತಮ ಲೇಖನ ಸಂಪಾದಕೀಯ ಟೀಂ ನಿಂದ ...ಇದೆ ಥರ ಬರೆಯಿರಿ ನಮ್ಮ ಬೆಂಬಲ ನಿಮ್ಮ ಮೇಲೆ.
ReplyDeleteಶ್ಯಾಮ್ ಶೆಟ್ಟಿ
kannada patrikegalu antha heltiralla swami, ishwrya pregnent aggiddu kooda jana saamanyarige suddine, haage mala horuvavara paadu kooda suddine. idannu artha madikollade navukottidde suddi annuva ahnkaravannu kannada patrakartaru bittare maatra kannada paper uddara aagalu saadya. namage vijnana, tantrajnana, hanakaasu, bussiness news bareyakke baralla.. adikke beekada jnana voo illa. adakkagi kannada oduganige adu beda anno dicission nave tegedukondu, english paper chennagi aagalu naave karanakartharagiddeve. plz aathamavalokana maadikolli. yavudu agatha yavudu anagathya antha decide maduvavaru odugaru anno jnana irali.
ReplyDeleteThat was really a bad thing which could not happened in kannada news papers....
ReplyDelete