ಪ್ರಳಯಾಂತಕ ಜ್ಯೋತಿಷಿ ನರೇಂದ್ರ ಬಾಬು ಶರ್ಮ ಮತ್ತೆ ಜೀ ಟಿವಿಯಲ್ಲಿ ಹಾಜರಾಗಿದ್ದಾರೆ. ಇಷ್ಟು ದಿನಗಳ ಕಾಲ ನರೇಂದ್ರ ಶರ್ಮ ಅವರ ಹಳೆಯ ಎಪಿಸೋಡುಗಳನ್ನೇ ತೋರಿಸಲಾಗುತ್ತಿತ್ತು. ಇವತ್ತು ಮತ್ತೆ ಲೈವ್ ಕಾರ್ಯಕ್ರಮ ಪ್ರಸಾರವಾಗಿದೆ.
ನರೇಂದ್ರ ಶರ್ಮ ಬದಲಾಗಿ ಬನಶಂಕರಿ ದೇಗುಲದ ಅರ್ಚಕ ಆನಂದ್ ಗುರೂಜಿ ಎಂಬುವವರ ಕಾರ್ಯಕ್ರಮ ಪ್ರಸಾರವಾಗುತ್ತದೆ ಎಂಬ ಮಾಹಿತಿಯಿತ್ತು. ಆನಂದ್ ಗುರೂಜಿಯ ಕಾರ್ಯಕ್ರಮ ಭಾನುವಾರಗಳಂದು ಪ್ರಸಾರವಾಗುತ್ತಿದೆ. ಧರ್ಮ ದರ್ಪಣ ಎಂಬ ಈ ಕಾರ್ಯಕ್ರಮದಲ್ಲಿ ಕೈಯಲ್ಲಿ ಪಾದರಸ ಕೊಟ್ಟು ಭವಿಷ್ಯ ಹೇಳುವ ಹೊಸ ಟೆಕ್ನಿಕ್ಕು ಪ್ರಯೋಗಿಸಲಾಗುತ್ತಿದೆ. ಒಟ್ಟಾರೆ ಈಗ ಜೀ ಟಿವಿಯಲ್ಲಿ ಡಬ್ಬಲ್ ಧಮಾಕ. ಅತ್ತ ಆನಂದ ಗುರೂಜಿ, ಇತ್ತ ನರೇಂದ್ರ ಗುರೂಜಿ. ಜೀ ಟಿವಿ ಉದ್ಧಾರವಾಗುವುದಕ್ಕೆ ಇನ್ನೇನು ಬೇಕು?
ಹಾಗೆ ನೋಡಿದರೆ ನರೇಂದ್ರ ಶರ್ಮ ಅವರಷ್ಟೇ ಅಪಾಯಕಾರಿಯಾಗಿ ಇತರ ಚಾನಲ್ ಗಳ ಜ್ಯೋತಿಷಿಗಳೂ ಬೆಳೆಯುತ್ತಿದ್ದಾರೆ. ಮನಸ್ಸಿಗೆ ಬಂದದ್ದನ್ನು ಹೇಳುವ ಇವರಿಗೆ ಲಂಗುಲಗಾಮು ಏನೂ ಇಲ್ಲದಂತಾಗಿದೆ.
ಚಂದ್ರಗ್ರಹಣದ ಕುರಿತಾಗಿ ನಿನ್ನೆ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ, ಸೋಮಯಾಜಿ ಹೇಳಿದ್ದನ್ನು ನೀವು ಕೇಳಿರಬಹುದು. ಚಂದ್ರಗ್ರಹಣದ ಪರಿಣಾಮವಾಗಿ ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತದಂತೆ. ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತವಂತೆ. ಒಬ್ಬ ಪತ್ರಕರ್ತ ಕೊಲೆಯೂ ಆಗುತ್ತಾನಂತೆ. ಅಂದ ಹಾಗೆ ಕೊಲೆಯಾಗುವ ಪತ್ರಕರ್ತ ಯಾರು ಎಂಬುದನ್ನೂ ಈತ ಮೊದಲೇ ಹೇಳಿದರೆ ಆತನ ಸಮಾಧಿಯನ್ನೂ ಈಗಲೇ ನಿರ್ಮಿಸಿಬಿಡಬಹುದಿತ್ತು, ಶ್ರದ್ಧಾಂಜಲಿ ಸಭೆಗಳಿಗೂ ಈಗಲೇ ತಯಾರಿ ನಡೆಸಬಹುದಿತ್ತು. ಇವರು ಜ್ಯೋತಿಷಿಗಳಲ್ಲ, ಸ್ಯಾಡಿಸ್ಟ್‌ಗಳು ಎನಿಸುವುದಿಲ್ಲವೇ ನಿಮಗೆ?
ನಿನ್ನೆಯ ಬದುಕು ಜಟಕಾ ಬಂಡಿ ಕಾರ್ಯಕ್ರಮದಲ್ಲಿ ಡಿವೈನ್ ಹೀಲಿಂಗ್ ಮಾಡುತ್ತೇನೆಂದು ಹೇಳಿಕೊಳ್ಳುವ ಗುರೂಜಿಯೊಬ್ಬನನ್ನು ಪ್ರಮೋಟ್ ಮಾಡುವ ಕಸರತ್ತು ನಡೆಸಲಾಯಿತು. ಹಿಂದೆ ನರೇಂದ್ರ ಶರ್ಮ ಜತೆ ನಡೆಸಿದ ಸಂವಾದದ ಸಂದರ್ಭದಲ್ಲಿ ಉಪಯೋಗಿಸಿದ ತಂತ್ರವನ್ನೇ ನಿನ್ನೆಯ ಕಾರ್ಯಕ್ರಮದಲ್ಲೂ ಹೆಣೆಯಲಾಗಿತ್ತು. ಮೊದಲು ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ಪುತ್ರ ಪಚ್ಚೆಯನ್ನು ಮಾತನಾಡಿಸಿ ಗುರೂಜಿಯ ಠೊಳ್ಳುತನವನ್ನು ಬಹಿರಂಗಪಡಿಸಲಾಯಿತು. ನಂಜುಂಡಸ್ವಾಮಿಯವರ ಕಡೆದಿನಗಳಲ್ಲಿ ಇದೇ ಗುರೂಜಿಯಿಂದ ದೈವಿಕ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಪ್ರೊಫೆಸರ್ ಬದುಕುಳಿಯಲಿಲ್ಲ. ಪಚ್ಚೆ ಖಾರವಾಗಿಯೇ ಮಾತನಾಡಿದರು. ಅಧ್ಯಾತ್ಮ ಪ್ರವಚನ ಮಾಡಿಕೊಂಡಿರಿ, ಚಿಕಿತ್ಸೆ ಮಾಡುತ್ತೇನೆಂದು ನಂಬಿಸಿ ಯಾರನ್ನೂ ಮೋಸ ಮಾಡಬೇಡಿ ಎಂದು ಹೇಳಿದರು.
ಆಮೇಲೆ ಮಾಳವಿಕಾ ಅವರ ರಿಯಲ್ ಶೋ ಆರಂಭವಾಯಿತು. ನಾಲ್ಕೈದು ಮಂದಿಯನ್ನು ಮಾತನಾಡಿಸಿ ಅವರ ಖಾಯಿಲೆಗಳೆಲ್ಲವೂ ಗುಣವಾಗಿದೆ ಎಂದು ಹೇಳಿಸಲಾಯಿತು. ಒಬ್ಬಳಿಗೆ ಬಿದ್ದು ಹೋದ ಕೈ ಕಾಲುಗಳು ಬಂದಿದ್ದವು. ಮತ್ತೊಬ್ಬನಿಗೆ ಡಯಾಬಿಟಿಸ್ ಕಣ್ಮರೆಯಾಗಿತ್ತು. ಕಡೆಗೆ ಮಾಳವಿಕಾ ಕೊಟ್ಟ ಫೈನಲ್ ಜಡ್ಜ್‌ಮೆಂಟ್: ಪೇಶೆಂಟ್ ಸತ್ತೋದ್ರು ಅಂತ ನಾವು ಯಾವುದಾದರೂ ಆಸ್ಪತ್ರೆಗೆ ಹೋಗೋದು ಬಿಡ್ತೀವಾ? ಹಾಗೆ ಇದೂನು.
ಗುರೂಜಿ ಕ್ಯಾನ್ಸರ್, ಎಚ್.ಐ.ವಿ. ಇತ್ಯಾದಿ ಎಲ್ಲಾ ಖಾಯಿಲೆಗಳನ್ನೂ ವಾಸಿ ಮಾಡುತ್ತಾರಂತೆ. ಬೇಕಿದ್ದರೆ ಹತ್ತು ಜನ ರೋಗಿಗಳನ್ನು ನೀವೇ ನನಗೆ ಕೊಡಿ. ಎಪ್ಪತ್ತು ಪರ್ಸೆಂಟ್ ರಿಸಲ್ಟ್ ಕೊಡಲಿಲ್ಲವೆಂದರೆ ಬೀದಿಯಲ್ಲಿ ನಿಲ್ಲಿಸಿ ಕಲ್ಲಿನಲ್ಲಿ ಹೊಡೆದು ನನ್ನನ್ನು ಸಾಯಿಸಿ ಎಂದು ಅವರು ಸವಾಲು ಹಾಕಿದರು. ಹತ್ತು ಲಕ್ಷ ರೂಪಾಯಿ ಬೆಟ್ ಬೇಕಾದರೆ ಕಟ್ಟುತ್ತೇನೆ ಎಂದು ಹೇಳಿಕೊಂಡರು. ಒಟ್ಟಾರೆ ಈ ಗುರೂಜಿಗೆ ಜೀ ಟಿವಿಯಲ್ಲಿ ಫುಲ್ ಜಾಹೀರಾತು. ಜಾಹೀರಾತು ದರ ಎಷ್ಟು ಎಂದು ಮಾತ್ರ ಕೇಳಬೇಡಿ.
ಆನಂದ್ ಗುರೂಜಿ |
ಇದನ್ನು ಹೊರತುಪಡಿಸಿ ಜಟಕಾ ಬಂಡಿಯನ್ನು ಓಡಿಸುವುದು ಪ್ರಳಯಾಂತಕ ಜ್ಯೋತಿಷಿಗಳನ್ನಿಟ್ಟುಕೊಂಡು. ನರೇಂದ್ರ ಶರ್ಮ, ಆನಂದ್ ಗುರೂಜಿ ಮತ್ತೀಗ ಡಿವೈನ್ ಹೀಲಿಂಗ್ ಗುರೂಜಿ. ಎಲ್ಲದರಲ್ಲೂ ಅತ್ತಂಗೆ ಮಾಡು, ಹೊಡೆದಂತೆ ಮಾಡುತ್ತೇನೆ ಎಂಬ ವಿಕಾರ ತಂತ್ರಗಳು. ಕಪಟ ಜ್ಯೋತಿಷಿಗಳನ್ನು ಪ್ರಮೋಟ್ ಮಾಡುವುದೊಂದೇ ಕಾರ್ಯಕ್ರಮಗಳ ಗುರಿ.
ಕನ್ನಡ ಚಾನಲ್‌ಗಳು ದುರಾಸೆಗೆ ಬಿದ್ದಿವೆ. ಜನರಿಗೆ ಸುಳ್ಳು ಹೇಳಾದರೂ ಸರಿ, ಭೀತಿ ಹುಟ್ಟಿಸಿಯಾದರೂ ಸರಿ ಹಣ ದೋಚುವುದೊಂದೇ ಅವುಗಳ ಕಾಯಕವಾಗಿದೆ. ಯಾರು ಎಷ್ಟೇ ಏನೇ ಹೇಳಿದರೂ ಈ ಚಾನಲ್‌ಗಳು ಸುಧಾರಿಸುವುದಿಲ್ಲ. ಕೊಳಚೆಯಲ್ಲೇ ಬಿದ್ದು ಸಾಯುತ್ತೇವೆ ಎನ್ನುವ ಹಂದಿಗಳನ್ನು ತಂದು ಬೀದಿಗೆ ಬಿಟ್ಟರೂ ಅವರು ಮತ್ತೆ ಕೊಳಚೆ ಹುಡುಕಿಕೊಂಡೇ ಹೋಗುತ್ತವೆ.
ಈ ಹಂದಿಗಳ ಹಾವಳಿಯನ್ನು ನಿಯಂತ್ರಿಸುವುದು ಹೇಗೆ? ಯಾರು?
ಕರಾಳ ಕಾರ್ಪೋರೆಟ್ ಜಗತ್ತಿನ ಎಂಜಲು ಕಾಸಿಗೆ ನಾಲಗೆ ಚಾಚಿ ಬಡ ಜನರ ಬದುಕನ್ನ ಬದನೆಕಾಯಿ ಹುಳಿ ಮಾಡಿ ನಾಡಿಗೆಲ್ಲ ಹಂಚೋ ಜನರಿ ಇವರು. ಥುತ್ ಇವರ ಜನ್ಮಕಿಷ್ಟು.
ReplyDeleteದೇವರೇ,
ReplyDeleteಊಟ ಮಾಡಿ ಮಧ್ಯಾನ ಯೋಚಿಸುತ ಇದ್ದೇ...ಏನಾಯ್ತು ಎ ವಿಷಯ ಅಂತ.... ಸಮಾಪದಕೀಯ ನ ಫಾಲೊ ಅಪ್ ಮಾಡೋಣ ಅನ್ನೋವಸ್ತರಲ್ಲಿ..
ಇಲ್ಲಿದೆ ನೋಡಿ ನ್ಯೂಸ್...
ನಮ್ಮ ಕರ್ಮ .. ಎಂತ ಜಗತ್ತಿನಲ್ಲಿ ಇದ್ದೀವಿ ನಾವು....
ನಿ೦ದಕರಿರಬೇಕಯ್ಯಾ, ಹ೦ದಿಗಳಿದ್ದ೦ತೆ ಎನ್ನುವ ದಾಸವಾಣಿಯನ್ನು ಜೀ ಕನ್ನಡದವರು ಚಾಚೂ ತಪ್ಪದೆ ಪಾಲಿಸಿಕೊ೦ಡು ಬರುತ್ತಿದ್ದಾರೆ. ಯಾರು ಎಷ್ಟೇ ಉಗಿದರೂ ಅವರಿಗೆ ಅದು ತಟ್ಟುತ್ತಿಲ್ಲ. ಹಣ ಮಾಡಲು ಜನರ ನ೦ಬಿಕೆಯನ್ನೇ ಬ೦ಡವಾಳ ಮಾಡಿಕೊಳ್ಳ ಹೊರಟಿರುವ ಈ ಅಯೋಗ್ಯರಿಗೆ ಧಿಕ್ಕಾರವಿರಲಿ. ಮಹಾನ್ ಪ್ರಬುದ್ಧಳ೦ತೆ ಮಾತನಾಡುವ ಮಾಳವಿಕಾ ನಡೆಸಿ ಕೊಡುವ "ಬದುಕು ಜಟಕಾ ಬ೦ಡಿ"ಯ೦ತೂ ನಿಜಕ್ಕೂ ಹೇಸಿಗೆ ಹುಟ್ಟಿಸುತ್ತಿದೆ. ಜನರೇ ಇವರನ್ನು ಬಹಿಷ್ಕರಿಸಬೇಕು, ಜೀ ಟೀವಿಯಲ್ಲಿ ಬರುವ ಈ ರೀತಿಯ ವಿಕಾರ ಕಾರ್ಯಕ್ರಮಗಳನ್ನು ನೋಡುವುದನ್ನು ಬಿಡಬೇಕು. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವೇ? ತಣ್ಣಗಿರುವ ಚ೦ದ್ರನಿಗೆ ಗ್ರಹಣ ಹಿಡಿದಾಗಲೇ ರಸ್ತೆಯಲ್ಲಿ ಜನ ಇರಲಿಲ್ಲ, ಇನ್ನು ಇವರು ಈ ಅಜ್ಞಾನಿ ಧರ್ಮಸಾಮ್ರಾಟರನ್ನು ತಡೆಯುತ್ತಾರೆಯೇ?
ReplyDeleteಈ ದೇಶ ಉದ್ದಾರ ಆದಂಗೇನೇ ಲೆಕ್ಕ. ಒಳ್ಳೆ ಶನಿಗಳ ಕಿರುಕುಳ ಆಯ್ತಲ್ಲ.. ಶನಿ ಹೆಗಲೇರ್ತಾನೆ ಅಂತಾರೆ.. ಆದರೆ ಇಲ್ಲಿ ಈ ಕಳ್ಳ ಸೋಮಾರಿಗಳ ಮೂಲಕ ಟೆಲಿಕಾಸ್ಟ್ ಆಗ್ತಾ ಇದಾನೆ ನೋಡಿ ನಾನಾ ರೂಪದಲ್ಲಿ.
ReplyDeleteಏನೂ ಬೇಜಾರು ಪಡುವ ಅಗತ್ಯವಿಲ್ಲ, ಈ ಶರ್ಮನೆಂಬೋ ಮಾಂಸಪರ್ವತ ಈ ಹಿಂದೆ ಒದರಿದ್ದು ಮತ್ತು ಇನ್ನುಮುಂದೆ ಒದರಲಿರುವ ಮಹಿಳಾ ವಿರೋಧಿ, ಜೀವವಿರೋಧಿ ಕವಡೆಶಾಸ್ತ್ರವನ್ನು ಸಾಕ್ಷಿ ಸಮೇತ ಕೋರ್ಟಿಗೆಳೆಯಲು,ಮತ್ತು ಪ್ರಸಾರಕ್ಕೆ ನಿಷೇಧ ಹೇರಲು, ನ್ಯಾಯಾಲಯವನ್ನು ಪಿಐಎಲ್ ಮೂಲಕ ಒತ್ತಾಯಿಸಲು ಒಂದಷ್ಟು ಗೆಳೆಯರು ಮಾಹಿತಿಯೊಡನೆ ತಯಾರಾಗುತ್ತಿದ್ದಾರೆ. ಸೈತಾನ್ ಕಾ ದೇವಿ ಕೋ ಚಪ್ಪಲ್ ಕಾ ಪೂಜಾ ಆಗಲೇಬೇಕು ಅಂತ ಝೀಟಿವಿ ಆಸೆಯಾಗಿದ್ದರೆ ಯಾರು ತಾನೇ ತಪ್ಪಿಸಲು ಸಾಧ್ಯ.ಇವರ ಬ್ಯಾಕ್ ಟು ಶಿಲಾಯುಗ ರೀತಿಯ ಎಪಿಸೋಡುಗಳಿಗೆ ಇಷ್ಟರಲ್ಲೇ ಶ್ರದ್ಧಾಂಜಲಿಗಳು ಅರ್ಪಣೆಯಾಗುವ ಸಾಧ್ಯತೆಗಳಿವೆ. ಟಿ.ಕೆ. ದಯಾನಂದ
ReplyDeleteಶರ್ಮ ರಂಥವರ ಶೋಗಿಂತ ಮೊದಲು ಮಾಳವಿಕ ಶೋ ನಿಲ್ಲಬೇಕೆನಿಸುತ್ತದೆ. ಬೃಹತ್ ಬ್ರಹ್ಮಾಂಡಕ್ಕಿಂತ ಅದರ ಸಮರ್ಥನೆಯೇ ಬಹಳ ಕಾಟ ಕೊಡುತ್ತಿದೆ.
ReplyDelete"ಬಡಜನರ ಖಾಸಗಿ ಬದುಕು, ಅವರ ನೋವು, ಅವರ ಕುಟುಂಬಗಳ ಒಳಗಿನ ಜಗಳ, ವೈಷಮ್ಯಗಳು ಇವರ ಪಾಲಿಗೆ ಹಣತರುವ ಕಲ್ಪವೃಕ್ಷಗಳು" - UGLY TRUTH.
ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು.. :(
ಶರ್ಮನ೦ತೆ ನೂರಾರು ಖದೀಮರು ಬರಲಿ ,ಪ್ರತಿಭಟನೆಗೆ ಅದರ ನೂರು ಪಟ್ಟು ಹೊಸ ಮನಸ್ಸುಗಳು ಸೆರುತ್ತವೆ ನಿಮ್ಮ ಬರಹ ಇನ್ನು ಹರಿತವಾಗಲಿ .
ReplyDeleteಮೊದಲು ಇಂತಹವರನ್ನು ಹೊರಗೆ ದಬ್ಬಬೇಕು.
ReplyDeleteಇತ್ತೀಚಿಗೆ ಬೆಂಗಳೂರಿನಲ್ಲಿ ಸಾ.ಸಿ.ಮರುಳಯ್ಯ ರವರ ನೇತೃತ್ವ ದಲ್ಲಿ ಚರ್ಚ್ ಗಳಲ್ಲಿ ಕನ್ನಡ ಹಾಗು ಕನ್ನಡಿಗರ ತಾತ್ಸಾರದಬಗ್ಗೆ ಪ್ರತಿಭಟನೆ ನಡೆಸಿದರಲ್ಲ. ತಾವು ಅದರ ಬಗ್ಗೆ ಯಾಕೆ ಬರಿಲಿಲ್ಲ?. ಮುಂಚೆಯಿಂದಲೂ ಪಾದ್ರಿಗಳ ತೊಂದರೆ ಕೊಡುತ್ತಾ ಬಂದಿದ್ದಾರೆ, ಕನ್ನಡದ ದ್ವಜ ಹಾರಿಸಲು ಬಿಡಲಿಲ್ಲ. ಕನ್ನಡದ ಪಾದ್ರಿಗಳನ್ನು ಆಯ್ಕೆ ಮಾಡಿ ಮನ್ನಣೆ ಕೊಡಲ್ಲ. ನೀವ್ಯಾಕೆ ಒಂದು ಹೋರಾಟ ರೂಪಿಸಬಾರದು? ಚಳುವಳಿ ಯಾಕೆ ಪ್ರಾರಂಭ ಮಾಡಬಾರದು?
-ಸುಂದರ್
ಕನ್ನಡದ ಟಿವಿ ವಾಹಿನಿಗಳು ವೈಚಾರಿಕವಾಗಿ ತುಂಬಾ ಹಿಂದುಳಿದಿವೆ. ಇದಕ್ಕೆ ಕಾರಣ ಕನ್ನಡ ಜನರ ಧೋರಣೆಯೇ ಆಗಿದೆ. ಕನ್ನಡ ಟಿವಿ ವಾಹಿನಿಗಳನ್ನು ನಿಯಂತ್ರಿಸುವ ಆಯಕಟ್ಟಿನ ಸ್ಥಾನಗಳಲ್ಲಿ ಪುರೋಹಿತಶಾಹಿಗಳು ನೆಲೆಯೂರಿರುವುದರಿಂದಾಗಿ ಇಂಥ ಅಸಂಬದ್ಧ ಕಾರ್ಯಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದನ್ನು ನೋಡಿಕೊಂಡು ಕನ್ನಡದ ಜನ ಸುಮ್ಮನಿರುವುದರಿಂದಾಗಿ ಅವರಿಗೆ ಕುಮ್ಮಕ್ಕು ಕೊಟ್ಟಂತೆ ಆಗಿದೆ. ಕೇರಳದಲ್ಲಿ ವಿಚಾರವಾದಿ ಸಂಘಟನೆಗಳು ಬಲವಾಗಿ ಬೆಳೆದಿರುವುದರಿಂದಾಗಿ ಅಲ್ಲಿ ಇಂಥ ಅಸಂಬದ್ಧ ಕಾರ್ಯಕ್ರಮಗಳ ಪ್ರಸಾರ ಕಮ್ಮಿ. ಕರ್ನಾಟಕದಲ್ಲೂ ವಿಚಾರವಾದಿ ಸಂಘಟನೆಗಳು ಬಲವಾಗಿ ಬೆಳೆಯದೆ ಹೋದರೆ ಮತ್ತು ಜನ ಇಂಥ ಕಾರ್ಯಕ್ರಮಗಳನ್ನು ಪ್ರಶ್ನಿಸದೆ ಕುರಿಗಳಂತೆ ಅವರು ಹೇಳುವುದನ್ನು ಪಾಲಿಸುತ್ತಿದ್ದರೆ ಇಂಥ ಕಾರ್ಯಕ್ರಮಗಳಿಗೆ ಯಾವುದೇ ತಡೆಯೂ ಇರಲಾರದು.
ReplyDeleteದಯಾನಂದರ ನುಡಿಗಳಿಗೆ ಸಹಮತವಿದೆ.. ಈ ಬೆಳವಣಿಗೆಯಿಂದ ಭ್ರಮನಿರಸನಗೊಂಡು ಕೂರುವ ಸಮಯವಲ್ಲವಿದು, ಸಂಪಾದಕೀಯ ತನ್ನ ಆಂದೋಲನ ಸ್ವರೂಪಿ ಹೋರಾಟವನ್ನು ಮುಂದುವರೆಸಬೇಕು.. ಕನ್ನಡದ ಸೂಕ್ಷ್ಮ ಮನಸ್ಸುಗಳು ನಿಮ್ಮೊಂದಿಗಿವೆ.. ತಾತ್ಕಾಲಿಕ ಸೋಲು ಚಳುವಳಿಯ ಮೆಟ್ಟಿಲು.. ಬ್ರಹ್ಮಾಂಡ ಶನಿಯ ಧಾರ್ಷ್ಟ್ಯ ದಮನಕ್ಕೆ ವೇದಿಕೆ ಸಿದ್ಧವಾಗಲಿ.. ತೋರಿಕೆ ಚಿಂತಕಿ ಮಾಳವಿಕಾರಿಂದ ಹಿಡಿದು ಜೀ ಟೀವಿಯ ಕೊಳ್ಳುಬಾಕ ಬಳಗಕ್ಕೆ ಬುದ್ಧಿ ಕಲಿಸುವ ಸುಯೋಗ ನಮ್ಮ ಮುಂದಿದೆ.. ಮತ್ತೊಂದು ಸುತ್ತಿನ ಹೋರಾಟಕ್ಕೆ ಸಂ ಬಳಗ ಸನ್ನದ್ಧ...
ReplyDeleteShameless Politicians, Shameless Media, Shameless People, What can anyone expect?
ReplyDeleteಬಡವರೆನಿಸಿಕೊಂಡವರು (ಅವರೆಲ್ಲಾ ಸ್ಲಂನಿಂದಲೇ ಎದ್ದುಬಂದಂತೆ ಕಾಣುತ್ತೆ) ತಮ್ಮೆಲ್ಲಾ ತಾಪತ್ರಯಗಳನ್ನು ಅರುಹುತ್ತಾ, ಕಣ್ಣೀರು ಸುರಿಸುತ್ತಾ ಕೂತಾಗ ನಿರೂಪಕಿ ಮಾಳವಿಕ ಮುಖವನ್ನು ಮೇಕ್‌ಅಪ್ ಸಹಿತಾ ಹಿಂಡುತ್ತಾ ಕೂತದನ್ನು ನೋಡಿದರೇ ಮೈ ಉರಿಯುತ್ತೆ. ಒಂದು ಕಾಲದಲ್ಲಿ ಓಫ್ರಾ ವಿನ್‌ಫ್ರೀ ಶೋ ಕೂಡ ಬರುತ್ತಿತ್ತು. ಅದೂ ಕೂಡ ಎಷ್ಟೋ ಬಾರಿ ನೊಂದವರಿಗೆ ವೇದಿಕೆಯಾಗುತ್ತಿತ್ತು. ಆದರೆ, ಆ ಶೋ ಹಾಗೂ ಅದರ ನಿರೂಪಕಿ ಓಫ್ರಾ ವಿನ್‌ಫ್ರೀ ತಮ್ಮನ್ನು ಅರಸಿ ಬಂದವರ ಘನತೆಯನ್ನು ಕಾಪಾಡುತ್ತಿದ್ದ ರೀತಿ ನಿಜಕ್ಕೂ ಮನಮುಟ್ಟುವಂತಿತ್ತು. ಮಾಳವಿಕಾ ಅವರ ವರ್ತನೆ ನೋಡುತ್ತಿದ್ದರೆ ಅವರೇನು ಇದನ್ನೂ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಲು ಬಳಸುತ್ತಿದ್ದಾರಾ ಎಂದೆನ್ನಿಸದೇ ಇರದು. ಎದುರು ಕೂತವರ ನೋವು ಅವರ ಹೃದಯಕ್ಕೆ ತಾಗುತ್ತದೆಯೆಂದಾದರೆ, ಅಷ್ಟು ಸಂವೇದನೆ ಅವರಲ್ಲಿ ಇದೆಯೆಂದಾದರೆ ಅವರು ಎಂದೋ ಆ ಸೀಟು ಬಿಟ್ಟು ಮೇಲಕ್ಕೇಳುತ್ತಿದ್ದರು. ಮಾಳವಿಕಾ ಬಗ್ಗೆ ಇರುವ ಗೌರವದಿಂದಲೇ ಈ ಎಲ್ಲಾ ಆಕ್ಷೇಪಣೆಗಳನ್ನೂ ದಾಖಲು ಮಾಡುತ್ತಿದ್ದೇನೆ. ಇನ್ನಾದರೂ ಅವರು ಅಲ್ಲಿಂದ ಹೊರ ಬಂದು, ಕನಿಷ್ಠ ತಮ್ಮ ಘನತೆಯನ್ನಾದರೂ ಉಳಿಸಿಕೊಳ್ಳಲಿ.
ReplyDeletePlease sampadakiya nimm inde nav ideve so please henu tiLide iro muGda janaraNNa ivra anishta karya krama galiNda bidugade Madi please
ReplyDeleteYou know what guys - Some day Malavika will Repent and regret that she did this show ! We cant help her Fate ! forget it.
ReplyDeleteLets get united and fight back.
ಅರೆ.. ಮಾಳವಿಕ ಅವರಿಗ, ಮಾಯಾಮೃಗ, ಮುಕ್ತ ಮುಕ್ತ ಮಾಳವಿಕ ಅಲ್ಲಾರಿ.. ಮಂದಿ ಮಾತು, ಮನಸ್ಸಿನ್ಯಾಗ ಮತ್ಸರ ತುಂಬಿ.. ಮೂಗು ತೋರಿಸೋ ಮಾಳವಿಕ.... ಮ ಕಾರದ ಆರ್ಥಾ ನ ಹಾಳು ಮಾಡ್ಯಾರ ಮೆಡಮ್ !
ReplyDeleteComments bareda ellaralli nannadondu prashne. "swaamygale (sir), yaakaadru aa kaaryakramaana neevu matthu nimma maneyoru nodtheeri?". aa kaaryakrama "namma-nimmanthorige" alla kanri. vyaapaara maaduvavnige irodu "vyaapaara drusti". avanu avana "jeevanopaaya"kkaagi maadthaane kanri.
ReplyDeleteಸಂಪಾದಕೀಯಕ್ಕೆ ನಮಸ್ಕಾರ
ReplyDeleteಕ್ಷಮಿಸಿ. ನಾ ಕಳುಹಿಸಿರುವ ಲಿಂಕ್ ಈ ಅಂಕಣಕ್ಕೆ ಸಂಬಂಧಪಟ್ಟಿದಲ್ಲ. ಆದರೂ ಇದರ ಸತ್ಯಾಸತ್ಯತೆ ಬಗ್ಗೆ ತಮಗೆ ಅಥವಾ ಬೇರೆಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸಿ
http://ishare.rediff.com/video/entertainment/unbelievable-her-eyes-are-human-x-ray-machine-/3781959?invitekey=133631e949e545bbc930069b984fb7d4
ಮಾನಗೇಡಿ ಮಾಧ್ಯಮಗಳ ಮತ್ತೊಂದು ವರಸೆ ಶುರು..!
ReplyDeleteಈ ಟಿವಿ ಮಾಧ್ಯಮಗಳು, ಅಲ್ಲಿನ ಜನರು, ಅವರೇನು ಪತ್ರಕರ್ತರಾಗಿರಲಿ, ನಿರೂಪಕರಾಗಿರಲೀ, ನಿರ್ದೇಶನ , ನಿರ್ಮಾಣ ಮಾಡುವವರಾಗಿರಲೀ, ಅಥವಾ ಅವರೇನು ವಾಹಿನಿಯ ಮಾಲಿಕರೇ ಆಗಿರಲಿ ಎಲ್ಲರೂ ಜಿರಳೆಯ ಥರದವರು. ಜಿರಳೆಯ ಗುಣವನ್ನೇ ರೂಢಿಸಿಕೊಂಡವರು. ಯಾರು ಎಂಥಹುದೇ ಸನ್ನಿವೇಶದಲ್ಲಿ ಅವರನ್ನು ನೂಕಿದರೂ , ಅದನ್ನೇ ಬಂಡವಾಳ ಮಾಡಿಕೊಂಡು , ತಮ್ಮ ಅನುಕೂಲಕ್ಕೆ ಬಳಸಿಕೊಂಡು ,ಬದುಕಿ ಉಳಿಯುವವರು. ಸಂಪಾದಕಿಯದವರು ಒತ್ತಡ ತಂದರು. zee ಟಿವಿ ಯವರು ಅದನ್ನೂ ಅನುಕೂಲಸಿಂಧು ವಾಗಿಸಿಕೊಂಡರು. ಬದುಕು ಜಟಕಾ ಬಂಡಿಯ ನರೇಂದ್ರ ಶರ್ಮ ಕುರಿತಾದ ಕಾರ್ಯಕ್ರಮ ಅಸಲಿಗೆ ನರೇಂದ್ರ ಶರ್ಮ ನನ್ನು ಸಮರ್ಥಿಸುವ ಕಾರ್ಯಕ್ರಮ ವೆ ಆಗಿತ್ತು. ಹಾಗೆಯೇ ಸುವರ್ಣ ನ್ಯೂಸ್ ನಲ್ಲಿ ಕೆಲವು ದಿನಗಳ ಹಿಂದೆ ಒಂದು ವಾರ ಸತತವಾಗಿ ಪ್ರಸಾರವಾದ " ಶ್ಹ್ ಭವಿಷ್ಯ ನಕಲಿ ಜ್ಯೋತಿಷಿಗಳ ಹಾವಳಿ " ಎಂಬ ಕಾರ್ಯಕ್ರಮ ಪ್ರಸ್ತುತ ದಲ್ಲಿರುವ ಜ್ಯೋತಿಷಿಗಳಿಗೆ ವರದಾನವೇ ಆಯಿತು. ಆ ವಾಹಿನಿಯಲ್ಲಿ , ಆ ಕಾರ್ಯಕ್ರಮ ದಲ್ಲಿ ಕಾಣಿಸಿಕೊಂಡ ಜ್ಯೋತಿಷಿಗಳನ್ನು ಹೊರತುಪಡಿಸಿ ಉಳಿದವರು ನಕಲಿಗಳು ಎಂಬರ್ಥದ ಸಂದೇಶವನ್ನೇ ಒಂದು ವಾರದ ಆ ಕಾರ್ಯಕ್ರಮ ಸಾರಿತ್ತು.! ಒಂದು ವಾರದ ಆ ಕಾರ್ಯಕ್ರಮ ದಲ್ಲಿ ಕಾಣಿಸಿಕೊಂಡ ಜ್ಯೋತಿಷಿ ಗಳೆಲ್ಲ, ಈಗ ಇನ್ನೂ ಹೆಚ್ಚು ಹೆಚ್ಚಾಗಿ , ಮತ್ತು ಅಧಿಕೃತವಾಗಿ, ನಿರಂತರವಾಗಿ, ಸುವರ್ಣ ನ್ಯೂಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.! ಮತ್ತು ಅವರ ಆತ್ಮ ವಿಶ್ವಾಸ, ಅಹಂ, ಸ್ವ ಸಮರ್ಥನೆ ಗಳು ಹೆಚ್ಚೇ ಆಗಿವೆ. ನಾವೇ ಅಸಲಿ, ಉಳಿದವರು ನಕಲಿ ಎಂಬ ಅವರ ಧೋರಣೆಗೆ ಸುವರ್ಣ ನ್ಯೂಸ್ ನ ಆ ಕಾರ್ಯಕ್ರಮವೇ ಸರ್ಟಿಫಿಕೇಟ್ ಕೊಟ್ಟು ಕೂರಿಸಿದೆ !. ಇನ್ನೇನು ಬೇಕು ಅವರಿಗೆ? ಈಗ ಹೊರಗಡೆ ಅವರಿಗೆ ಆದಾಯ, ಕೂಡ ಇನ್ನು ಚೆನ್ನಾಗಿ ವೃದ್ಧಿಸಿರಬಹುದು. ಸುವರ್ಣ ನ್ಯೂಸ್ ನವರೇ ಇವರಿಗೆ "ಅಸಲಿ" ಸರ್ಟಿಫಿಕೇಟ್ ಕೊಟ್ಟರಲ್ಲ. ಹಾಗಾಗಿ.
ReplyDelete