Friday, January 27, 2012

ವಿವೇಕಾನಂದ, ಅಮೀನ್ ಮಟ್ಟು ಮತ್ತು ಅವಿವೇಕಿಗಳು...


ಬಡಿಗೆ ಕೈಗೆ ಕೊಟ್ಟು ಬಡಿಸಿಕೊಂಡಂತಾಗಿದೆ ಕೆಲವು ಅವಿವೇಕಿಗಳಿಗೆ.

ದಿನೇಶ್ ಅಮೀನ್ ಮಟ್ಟು ಪ್ರಜಾವಾಣಿಯ ತಮ್ಮ ಅನಾವರಣ ಅಂಕಣದಲ್ಲಿ ವಿವೇಕಾನಂದರನ್ನು ಕುರಿತು ಬರೆದ ಲೇಖನಕ್ಕೆ ಕೆಟ್ಟಾಕೊಳಕು ರೀತಿಯಲ್ಲಿ ಪ್ರತಿಕ್ರಿಯಿಸಿದ ಅವಿವೇಕಿಗಳು ಈಗ ಪ್ರಾಯಶ್ಚಿತ್ತ ಅನುಭವಿಸುವಂತಾಗಿದೆ.

ವಿವೇಕಾನಂದರು ಹೇಗೆ ಒಬ್ಬ ಸಾಮಾನ್ಯ ಮನುಷ್ಯರಾಗಿದ್ದುಕೊಂಡೇ ಮಹಾನ್ ಚೇತನವಾಗಲು ಸಾಧ್ಯವಾಯಿತು ಎಂಬುದನ್ನಷ್ಟೇ ಅಮೀನ್ ಮಟ್ಟು ಬರೆದಿದ್ದರು. ತಿಳಿಗೇಡಿಗಳು ಶಿವಮೊಗ್ಗದ ಪ್ರಜಾವಾಣಿ ಕಚೇರಿಯಲ್ಲಿ ಗೂಂಡಾಗಿರಿ ನಡೆಸಿದರು. ಬೆಂಗಳೂರಿನ ಪ್ರಜಾವಾಣಿ ಕಚೇರಿ ಮುಂದೆಯೂ ಕೆಲವರು ಮೌನ ಮೆರವಣಿಗೆ ನಡೆಸಿದರು. ಅಸಹ್ಯವೆಂದರೆ ದಿನೇಶ್ ಅವರ ಮೊಬೈಲ್ ನಂಬರಿಗೆ ಪ್ರಾಣ ಬೆದರಿಕೆಯ ಮೆಸೇಜುಗಳ ರವಾನೆಯಾಯ್ತು, ಕೆಲವರು ಕರೆ ಮಾಡಿಯೂ ಬೆದರಿಕೆಯೊಡ್ಡಿದರು. ಫೇಸ್ ಬುಕ್ ಇತ್ಯಾದಿ ಸಾಮಾಜಿಕ ತಾಣಗಳಲ್ಲಿ ದಿನೇಶ್ ಅವರನ್ನು ನಿಂದಿಸುವ ಬರಹಗಳು ಪ್ರಕಟವಾದವು.

ಇದೆಲ್ಲ ನಡೆಯುವಾಗ ಸ್ವಲ್ಪ ತಡವಾಗಿ ಪ್ರಗತಿಪರ ಸಂಘಟನೆಗಳು ಕಾರ್ಯಾಚರಣೆಗಿಳಿದವು. ದಿನೇಶ್ ಅವರ ಬರಹವನ್ನು ಸಮರ್ಥಿಸಿಕೊಂಡು ಪ್ರಗತಿಪರರೂ ಚಳವಳಿಗೆ ಇಳಿದರು. ಶಿವಮೊಗ್ಗದಲ್ಲಿ ಗೂಂಡಾಗಿರಿ ನಡೆಸಿದ್ದವರನ್ನು ಅಲ್ಲಿನ ಜನರೇ ಮನೆಮನೆಯಿಂದ ಎಳೆತಂದು ಪೊಲೀಸರಿಗೆ ಒಪ್ಪಿಸಿದರು. ಬೆಂಗಳೂರಿನಲ್ಲೂ ವಿವೇಕಾನಂದರ ಅಭಿಮಾನಿಗಳೆಂದು ಹೇಳಿಕೊಂಡವರು ನಡೆಸಿದ ಮೆರವಣಿಗೆಯನ್ನು ಮೀರಿಸುವ ದೊಡ್ಡ ಪ್ರತಿಭಟನೆಯೂ ನಡೆಯಿತು. ವಿವೇಕಾನಂದರ ಕುರಿತು ದಲಿತ ಸಂಘಟನೆಗಳು ಎರಡು ವಿಚಾರ ಸಂಕಿರಣಗಳನ್ನು ನಡೆಸಿದವು. ಪ್ರಜಾವಾಣಿ ಪತ್ರಿಕೆ ಸ್ವಲ್ಪ ತಡವಾಗಿಯಾದರೂ ಶಿವಮೊಗ್ಗ ಘಟನೆಯನ್ನು ಖಂಡಿಸುವ ಕಟುವಾದ ಸಂಪಾದಕೀಯ ಬರೆದು ದಿನೇಶ್ ಅವರ ಬೆನ್ನಿಗೆ ನಿಂತಿತು. ಪ್ರಜಾವಾಣಿಯ ವಾಚಕರ ವಾಣಿಯಲ್ಲೂ ಅವಿವೇಕಿಗಳನ್ನು ಖಂಡಿಸುವ ಪತ್ರಗಳು ಪ್ರಕಟಗೊಂಡವು. ಬ್ಲಾಗು, ಫೇಸ್ ಬುಕ್ ಗಳಲ್ಲಿ ಅಸಲಿ ವಿವೇಕಾನಂದರನ್ನು ಪರಿಚಯಿಸುವ ಅಭಿಯಾನವೂ ನಡೆಯಿತು. ಎಲ್ಲಕ್ಕಿಂತ ಮುಖ್ಯವಾಗಿ ತಮಗೆ ಬೆದರಿಕೆ ಕರೆ, ಎಸ್‌ಎಂಎಸ್‌ಗಳನ್ನು ಹಾಕಿದ್ದವರ ದೂರವಾಣಿ ಸಂಖ್ಯೆಗಳನ್ನೆಲ್ಲ ಪಟ್ಟಿ ಮಾಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಿನೇಶ್ ಅವರು ದೂರೊಂದನ್ನು ದಾಖಲಿಸಿದ್ದಾರೆ ಎಂಬ ಮಾಹಿತಿ ಇದೆ.

ವಿವೇಕಾನಂದರನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದವರಿಗೆ ಈ ಎಲ್ಲ ಬೆಳವಣಿಗೆಗಳು ದೊಡ್ಡ ಸೋಲು. ದಿನೇಶ್ ಅವರ ಲೇಖನದಲ್ಲಿ ಆಕ್ಷೇಪಾರ್ಹವಾದ ಅಂಶಗಳಿದ್ದರೆ ಅದನ್ನು ಪ್ರಶ್ನಿಸುವ, ದಾಖಲೆ ಆಧಾರವಾಗಿಟ್ಟುಕೊಂಡು ಪ್ರತಿವಾದ ಮಾಡುವ ಎಲ್ಲ ಅವಕಾಶವೂ ಇದ್ದರೂ ಕಚೇರಿಗೆ ನುಗ್ಗಿ ಧ್ವಂಸ ಮಾಡುವ, ಬೆದರಿಕೆ ಕರೆ ಮಾಡುವ ಕುಚೇಷ್ಟೆಗೆ ಇಳಿದವರು ತಕ್ಕ ಪಾಠವನ್ನೇ ಕಲಿತಿದ್ದಾರೆ.

ನಿಮಗೆ ನೆನಪಿರಬಹುದು. ಸಂಪಾದಕೀಯದಲ್ಲಿ ಹಿಂದೆ ಧರ್ಮ-ಜಾತಿಯ ಜಿಜ್ಞಾಸೆ ಶುರುವಾಗಿದ್ದಾಗ ವಿವೇಕಾನಂದರ ನುಡಿಗಳನ್ನು ಬಳಸಿ ವಿವೇಕ ಮೂಡಿಸುವ ಪ್ರಯತ್ನವೊಂದನ್ನು ನಡೆಸಿದ್ದೆವು. ವಿವೇಕಾನಂದರು ನಿಸ್ಸಂಶಯವಾಗಿ ಭಾರತಕ್ಕೆ ಬೆಳಕು ಕೊಟ್ಟ ಮಹಾಪುರುಷರು. ಅವರನ್ನು ಕೆಲವರ ಕಪಿಮುಷ್ಠಿಯಿಂದ ಬಿಡಿಸುವ ಕೆಲಸವನ್ನು ಮಾಡಬೇಕಿದೆ. ದಿನೇಶ್ ಅವರು ಆ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸಬೇಕು.

12 comments:

  1. ವಿವೇಕಾನಂದರು ಹುಟ್ಟಿ 149 ವರ್ಷಗಳ ನಂತರ, ಸತ್ತು 110 ವರ್ಷಗಳ ನಂತರ ಅವರ ಜೀವನದ ಮತ್ತೊಂದು ಮುಖವನ್ನು ಅನಾವರಣ ಮಾಡಿರುವ ಶ್ರೀ ದಿನೇಶ್ಅಮೀನ್ಮಟ್ಟುರವರ ಕಳಕಳಿ ಮೊದಲಿನಿಂದಲೂ ಅವರನ್ನು ಬಲ್ಲವರಿಗೆ ಅರ್ಥವಾಗುವಂಥದ್ದೇ.

    ವಿವೇಕಾನಂದರ ಬಾಲ್ಯ ಅಥವಾ ಅವರು ಪ್ರಭುದ್ಧರಾಗುವುದಕ್ಕೆ ಮುಂಚಿನ ಜೀವನಗಾಥೆಯನ್ನೇ ವೈಭವೀಕರಿಸಿ(?) ಬರೆದಿರುವುದರ ಹಿಂದಿನ ಹುನ್ನಾರವೂ ಅರ್ಥವಾಗುವಂತದ್ದೇ. ಭಾರತದ ಇತಿಹಾಸದಲ್ಲಿ ಸಾಧನೆ ಮಾಡಿದ ಸಾಧಕರೂ ಇದ್ದಾರೆ, ಜತೆಗೆ ಅವರ ದೌರ್ಬಲ್ಯಗಳನ್ನೇ(ಇದ್ದರೆ!) ವೈಭವೀಕರಿಸಿ ಪ್ರಚುರಪಡಿಸುವ ಮತ್ತೊಂದು ವರ್ಗವು ಇದ್ದೇಇದೆ. ಇತಿಹಾಸದಲ್ಲಿ ಸಾಧನೆ ಮಾಡಿದ ಬಹುತೇಕರು ಹುಟ್ಟಿನಿಂದಲೇ ಯಾರೂ ವೀರರೂ ಅಲ್ಲ, ಶೂರರೂ ಅಲ್ಲ, ಜ್ಞಾನಿಗಳೂ ಅಲ್ಲ.

    ಜೀವನದ ವಿವಿಧ ಘಟ್ಟಗಳನ್ನು ದಾಟಿ ಸಾಧಕರಾಗಿ ಮೆರೆದವರೇ. ಬೇಟೆ ಮಾಡುತ್ತಿದ್ದ ವಾಲ್ಮೀಕಿ ಇರಬಹುದು, ವೇಶ್ಯೆಯ ಸಂಘ ಮಾಡಿದ ಕಾಳಿದಾಸನಿರಬಹುದು. ಅಷ್ಟೇಕೆ, ಬಾಲ್ಯದಲ್ಲಿ ಕಳ್ಳತನ ಮಾಡಿದ್ದೆ, ಧೂಮಪಾನ ಮಾಡಿದ್ದೆ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡುನಂತರ ಮಹಾತ್ಮನಾದ ಗಾಂಧಿ ಇರಬಹುದು.

    ಎಲ್ಲರೂ ಜೀವನದ ವಿವಿಧ ಮಜಲುಗಳನ್ನು ದಾಟಿ ಸಾಧನೆ ಮಾಡಿದವರೇ. ಇಂತಹ ಸಾಧಕರುಗಳಿಗೆ ಆಯಾ ಸಂದರ್ಭಗಳಲ್ಲಿ ಸಿಕ್ಕ ಪ್ರೇರಣೆ, ಸ್ಪೂತರ್ಿ, ಮಾರ್ಗದರ್ಶನ ಅವರ ಸಾಧನೆಗೆ ಕಾರಣವಿರಬಹುದು. ಇದು ಹಿಂದಿನಿಂದ ಇಂದಿಗೂ ನಡೆದುಕೊಂಡು ಬರುತ್ತಲೇ ಇದೆ.

    ಅದೇ ರೀತಿ ವಿವೇಕಾನಂದರ ಜೀವನದಲ್ಲಿಯೂ ಕೆಲವು ಘಟನೆಗಳು ಆಗಿದ್ದಿರಬಹುದು. ಆದರೆ ಮಹನೀಯರು ಮಾಡಿದ ಸಾಧನೆಗಿಂತ ಅವರುಗಳು ಮಾಡಿದ ಯಾವುದೋ ಕೃತ್ಯಗಳಿಗೆ (ಮಾಡಿದ್ದಾರೋ ಇಲ್ಲವೋ?) ಹೆಚ್ಚು ಪ್ರಚಾರ ಕೊಡುವುದು ಸರಿಯೇ? ಇದು ದಿನೇಶ್ ಅಮೀನ್ಮಟ್ಟುರವರು ಉತ್ತರಿಸಬೇಕಾಗಿರುವ ಮೊದಲನೇ ಪ್ರಶ್ನೆ.

    ಇನ್ನು ವಿವೇಕಾನಂದರ ಬಗ್ಗೆ ಅವರು ಬರೆದಿರುವ ಬಹುತೇಕ ವಾಕ್ಯಗಳು ಅವರ ಮೇಲಿನ ಆರೋಪಗಳಂತೆಯೇ ಇದೆ. ಶೂದ್ರನಾಗಿ ಸನ್ಯಾಸಿಯಾದರೆಂದು ಹೇಳುವ ಅವರು ಶೂದ್ರರು ಸನ್ಯಾಸಿಯಾಗಬಾರದೆ?, ಸನಾತನಿಗಳು ಅವರದ್ದೇ ಆದ ಕಾರಣದಿಂದ ದ್ವೇಷಿಸುತ್ತಾರೆಂಬ ಮಾತ್ರಕ್ಕೆ ಮ್ಲೇಚ್ಚರ ಮನೆಯಲ್ಲಿ ವಿವೇಕಾನಂದರು ಊಟ ಮಾಡಿದ್ದು ದೊಡ್ಡ ಸಂಗತಿಯೇ?, ಹಿಂದೂ ಧರ್ಮದ ಮೂಢನಂಬಿಕೆ, ಢಾಂಬಿಕತನಗಳ ಬಗೆಗೆ ಠೀಕಿಸಿ ಸಮಾಜವನ್ನು ಜಾಗೃತ ಮಾಡಿದ್ದಕ್ಕೆ ಅವರು ಹಿಂದು ವಿರೋಧಿಯೇ?, ಹಸಿದವನಿಗೆ ಬೋಧನೆ ಹಿಡಿಸುವುದಿಲ್ಲ, ಬೌದ್ಧಿಕ ಜ್ಞಾನಾರ್ಜನೆಗೆ ಶಾರೀರಿಕ ಬಲವೂ ಬೇಕು ಎಂದು ಪ್ರತಿಪಾದಿಸಿದ್ದು, ಸಾಮರಸ್ಯದ ಬದುಕಿಗಾಗಿ ಭಂಗಿಗಳ ಜೊತೆ ಕೂತು ಊಟ ಮಾಡಬಲ್ಲೆ ಎಂದು ಮಹಾರಾಜರಿಗೆ ಹೇಳಿದ್ದು, ಕ್ರಿಸ್ತನ ಗುಣಗಳನ್ನು ಗೌರವಿಸಿದ್ದು ದಿನೇಶ್ರವರ ದೃಷ್ಟಿಯಲ್ಲಿ ತಪ್ಪಾಗಿದೆ. ಏಕೆಂದರೆ ವಿವೇಕಾನಂದರು ಹಿಂದೂ ಸನ್ಯಾಸಿ. ವಿವೇಕಾನಂದರು ಹಿಂದೂ ಸನ್ಯಾಸಿಗಳಾಗಿಲ್ಲದಿದ್ದರೆ ಈ ಮಾತು ಅವರಿಂದ ಬರುತ್ತಿತ್ತೇ?.

    ಹಿಂದೂ ಧರ್ಮದ ಬ್ರಾಂಡ್ ಅಂಬಾಸಿಡರ್ ಎಂದು ವಿವೇಕಾನಂದರನ್ನು ಯಾರು ನಾಮಕರಣ ಮಾಡಿದ್ದಾರೆ? ಹಿಂದೂ ಧರ್ಮಕ್ಕೆ ಹಿಂದೂಧರ್ಮವೇ ಅಂಬಾಸಿಡರ್. ಯಾವುದೇ ಒಳಿತಾದ ಬದಲಾವಣೆಯನ್ನು ಸದಾ ಸ್ವೀಕರಿಸುವ ಶಕ್ತಿ ಹಿಂದೂ ಸಮಾಜಕ್ಕಿದೆ.

    ಹಿಂದುವೇ ಅಲ್ಲದ ನಿವೇದಿತಾರನ್ನು, ಹಿಂದುವೇ ಆದ ವಿವೇಕಾನಂದರನ್ನು ಸಮಾಜ ಒಪ್ಪಿಕೊಂಡಿದೆ, ಅಪ್ಪಿಕೊಂಡಿದೆ ಎಂಬ ಸಾಮಾನ್ಯ ಸಂಗತಿ ದಿನೇಶ್ರವರಿಗೆ ಅರಿವಿಲ್ಲದೆ ಇರಬಹುದು. ಇನ್ನು ಬುದ್ಧ, ಬಸವರನ್ನಾಗಲಿ, ವಿವೇಕಾನಂದ, ನಾರಾಯಣ ಗುರುಗಳನ್ನಾಗಲಿ ಅವರ ನಿಜವಾದ ಬದುಕನ್ನು ಅರಿತೇ ಜನತೆ ದೇವರನ್ನಾಗಿ ಮಾಡಿದ್ದಾರೆ. ಅವರ ಚಿಂತನೆಗಳು ಹುದುಗಿಹೋಗಿದ್ದರೆ ಬಸವ ಬುದ್ದರಾಗಲೀ, ವಿವೇಕಾನಂದ ನಾರಾಯಣಗುರುಗಳಾಗಲೀ ಹುಟ್ಟಿ ಹಲವಾರು ವರ್ಷಗಳಾದರೂ, ಸತ್ತು ನೂರಾರು ವರ್ಷಗಳಾದರೂ ಇನ್ನೂ ಅವರ ಹೆಸರು ಭಾರತೀಯ ಜನಮಾನಸದಲ್ಲಿ ಹೇಗೆ ಉಳಿಯುತ್ತಿತ್ತು? ದಿನೇಶ್ರವರೇ ಉತ್ತರಿಸಬೇಕು.

    ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಖಾಸಗಿ ಬದುಕು ಎಂಬುದಿರುತ್ತದೆ. ಅದಕ್ಕೆ ಸಾಕಷ್ಟು ಆಧಾರಗಳಿರಬಹುದು. ಈ ಬದುಕಿನ ಬಗ್ಗೆ ನಿಜ ಸುಳ್ಳುಗಳು ಸೃಷ್ಟಿಯಾಗಿರಬಹುದು ಆದರೆ ಆ ವ್ಯಕ್ತಿಗಳ ಸಾಧನೆಗಿಂತ ಅವರ ಖಾಸಗಿ ಜೀವನಕ್ಕೆ ಅನಗತ್ಯ ಪ್ರಚಾರ ಕೊಡುವುದು ಅವಶ್ಯಕವೇ? ಅಥವಾ ಆ ಮಹಾನ್ ವ್ಯಕ್ತಿಗಳ ಖಾಸಗಿ ಬದುಕಿನ ವೈರುಧ್ಯಗಳ ನಡುವೆಯೂ ಮಾಡಿದ ಸಾಧನೆ ದೊಡ್ಡದಲ್ಲವೇ?. ಈ ಬಗ್ಗೆ ಪ್ರಜ್ಞಾವಂತರು ಚಿಂತಿಸಲೇಬೇಕಾಗಿದೆ.

    ವಿವೇಕಾನಂದರು ಶಾಲಾ ಕಾಲೇಜುಗಳಲ್ಲಿ ಪಡೆದ ಅಂಕಗಳನ್ನು ದಿನೇಶ್ರವರು ಸಂಶೋದನೆ ಮಾಡಿ ಪ್ರಚುರಪಡಿಸಿದ್ದಾರೆ. ಅವರಿಗಿದ್ದ ಖಾಯಿಲೆಯನ್ನು ಕಂಡುಹಿಡಿದು ಅದರ ಮೇಲೆ ಬೆಳಕು ಚೆಲ್ಲಿದ್ದಾರೆ. ದಾಯಾದಿಗಳು ಆಸ್ತಿ ಕಬಳಿಸಿದ ಕಾರಣದಿಂದಾಗಿ ಇಡೀ ಸಂಸಾರದ ಹೊಣೆ ಹೊತ್ತು ಅನೇಕ ದಿನ ಉಪವಾಸ ಇದ್ದುದನ್ನು ಉಲ್ಲೇಖಿಸಿದ್ದಾರೆ.

    ಇದೆಲ್ಲದರ ನಡುವೆ ಹೆತ್ತ ತಾಯಿಗಿಂತ ಸಮಾಜ ಮುಖ್ಯ ಎಂದು ಸಮಾಜ ಸುಧಾರಣೆಗಾಗಿ ಸನ್ಯಾಸತ್ವ ತೆಗೆದುಕೊಂಡ ಬಗೆಗೂ ಬರೆದಿದ್ದಾರೆ. ಇವೆಲ್ಲವುಗಳ ನಡುವೆ ಬೆಳೆದ ನರೇಂದ್ರನಾಥ ವಿವೇಕಾನಂದ ಆಗಿದ್ದನ್ನು ದಿನೇಶ್ರವರು ಒಪ್ಪಿಕೊಂಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಕಡಿಮೆ ಅಂಕ ತೆಗೆದುಕೊಂಡ, ಹುಟ್ಟಿನಿಂದಲೇ ರೋಗಿಯಾಗಿದ್ದ, ಅವರಿವರ ಮನೆಯಲ್ಲಿ ಊಟ ಮಾಡುತಿದ್ದ, ಮೂವತ್ತೊಂದು ರೋಗಗಳಿಂದ ಬಳಲುತ್ತಿದ್ದ ವಿವೇಕಾನಂದರು ಜಗತ್ತಿನ ಎಲ್ಲಾ ಧರ್ಮಗಳನ್ನೂ ಅಧ್ಯಯನ ಮಾಡಿದ್ದರು, ಸಾವಿರಾರು ಶಿಷ್ಯರನ್ನು ಹೊಂದಿದ್ದರು, ರಾಮಕೃಷ್ಣ ಮಿಷನ್ ಸಂಘಟನೆಯನ್ನು ಬೃಹದಾಕಾರವಾಗಿ ಬೆಳೆಸಿದರು ಎಂದು ದಿನೇಶ್ ಒಪ್ಪಿಕೊಂಡಿದ್ದಾರೆ, ಇದೇ ದಿನೇಶ್ರವರು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ಸಂಗತಿ. ಹಾಗೂ ಸಮಾಧಾನದ ಸಂಗತಿಯೂ ಹೌದು.

    ಇನ್ನು ಅಂಕಗಳನ್ನು ಕಡಿಮೆ ಪಡೆಯುವ, ಹುಟ್ಟು ರೋಗಿಯಾಗಿದ್ದ, ಹಲವು ಖಾಯಿಲೆಗಳು ಇವೆ ಎಂದು ಹೇಳುವ ವಿವೇಕಾನಂದರಿಗೆ ವಿಶಾಲವಾದ ಎದೆ, ಬಲಿಷ್ಟವಾದ ತೋಳುಗಳು, ಕಾಂತಿಯುತವಾದ ಕಣ್ಣುಗಳು ಇದ್ದವು ಎಂಬ ಸಂಗತಿಯ ಬಗ್ಗೆ ಮಾತ್ರ ದಿನೇಶ್ರವರು ಏಕೆ ವ್ಯಂಗವಾಡುತ್ತಾರೆ?

    ReplyDelete
  2. ಬಹುಶಃ ಇನ್ನು ಮುಂದೆ ಅಂಕಣಗಳಲ್ಲಿ ಯಾರು,ಹೇಗೆ ಅಂಕಣಗಳನ್ನು ಓದಿಕೊಳ್ಳಬೇಕು ಮತ್ತು ಗ್ರಹಿಸಬೇಕು ಅನ್ನುವಂಥ disclaimer ಥರದ ಸಾಲುಗಳನ್ನು ಬರೆಯುವ ದಿನ ದೂರವಿಲ್ಲ ಅಂತ ಕಾಣಿಸುತ್ತಿದೆ..ಒಟ್ಟಿನಲ್ಲಿ ಇದೊಂದು ಕೆಟ್ಟ ಬೆಳವಣಿಗೆ.ವಸ್ತುನಿಷ್ಠವಾಗಿ ಬರೆಯುವ ಎಲ್ಲ ಲೇಖನಿಗಳಿಗೆ ತಡೆಹಿಡಿಯುವ ಹುನ್ನಾರವಿದು..ಸತ್ಯವನ್ನು ಸ್ವೀಕರಿಸುವ ಅರಿವು ನಮ್ಮೆಲ್ಲರಲ್ಲೂ ಮೂಡಬೇಕಿದೆ.
    -Raghavendra Joshi

    ReplyDelete
  3. very true..
    -Akshay Gaurav Sharma

    ReplyDelete
  4. for me truth is greater then country : Tagore
    -Abdul Khalak

    ReplyDelete
  5. ಶಿವಮೊಗ್ಗದ ಶೂದ್ರ ವಿದ್ಯಾರ್ಥಿಗಳನ್ನು ಪ್ರಜಾವಾಣಿ ಕಛೇರಿಗೆ ನುಗ್ಗಿಸಿದ ಗುಮ್ಮನಗುಸಕಗಳು ತಾವು ಮಾತ್ರ ಸೇಫಾಗಿದ್ದುಕೊಂಡು ಅಮಾಯಕ ಓದುವ ಮಕ್ಕಳ ಮೇಲೆ ಪೋಲೀಸ್ ದೂರು ದಾಖಲಾಗಲು ಕಾರಣಕರ್ತರಾಗಿದ್ದಾರೆ. (ಆಫ್ ಕೋರ್ಸ್ ಅವರ ಅಧಿಕೃತ ಸಂತಾನಗಳು ಬೆಚ್ಚಗೆ ಬೋರ್ಡಿಂಗ್ ಸ್ಕೂಲುಗಳಲ್ಲಿ ಓದಿಕೊಳ್ಳುತ್ತಿವೆ) ಕಂಡವರ ಮನೆ ಮಕ್ಕಳ ಭವಿಷ್ಯದೊಟ್ಟಿಗೆ ಚೆಲ್ಲಾಟವಾಡಲು ಹೋಗಿ ನೇರ ಮೂತಿಗೇ ಗುದ್ದಿಸಿಕೊಂಡಿರುವ ಪರಿವಾರಿಗಳ ಶೋಚನೀಯ ಸ್ಥಿತಿ ವನ್ಯಜೀವಿಗಳಿಗೂ ಬರಬಾರದು ಬಿಡಿ. ಒಂದೊಳ್ಳೆ ವಿಷಯವೇನಪ್ಪ ಅಂತಂದ್ರೆ, ಈ ಮೂಲಕ ವಿವೇಕಾನಂದರು ಇದ್ದುದು ಪರಿತ್ಯಕ್ತರ ಮತ್ತು ಬಡವರಗದ ಪರವಾಗಿ ಮತ್ತು ಅವರ ಜೀವಮಾನವಿಡೀ ಕಂಡಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದು ಇದೇ ಅವಿವೇಕಿಗಳನ್ನ ಎಂಬುದು ಈ ತಾರಾತಿಗಡಿಯ ನಡುವೆ ಜಗಜ್ಜಾಹೀರಾಗಿ ಹೋಯ್ತು. ಥೋ.. ಅದೆಷ್ಟು ಲಾಲಾರಸ ಪ್ರೋಕ್ಷಣೆಯಾದರೂ ನೀಟಾಗಿ ಮುಖ ಒರೆಸಿಕೊಂಡು ಅದೆಂಗೆ ತಲೆ ಎತ್ತಿಕೊಂಡು ಓಡಾಡ್ತಾರೋ ಈ ಅವಿವೇಕಿಗಳು. ಶೇಮ್ ಶೇಮ್ ಪಪ್ಪಿ ಶೇಮ್. ಅದೆಲ್ಲ ಹಾಳಾಗೋಗ್ಲಿ ಇಷ್ಟು ದಿನ ಯಾವ ಅಮೆಜಾನ್ ಕಾಡಲ್ಲಿ ಮೇಕೆಮರಿ ಮೇಯಿಸ್ತಾ ಇದ್ರು ಸಂಪಾದಕೀಯದೋರು. ಊರೆಲ್ಲ ಈ ಅವಿವೇಕಿಗಳನ್ನ ನಾಲಿಗೆಯಲ್ಲೇ ಬಡಿದು ಬಾರಿಸಿದ ಮೇಲೆ ಇವಾಗ ಬಂದಿದೀರ ದೊಡ್ಡದಾಗಿ. ಇನ್ನೊಂದ್ ಸಲ ಗ್ಯಾಪ್ ಕೊಡಬೇಡಿ. ನಿಮ್ಮಿಂದ ಆದಷ್ಟು ವಿಚಾರಪೂರ್ಣ ಲೇಖಗಳನ್ನು ನಮ್ಮಂಥ ಓದುಗರು ನಿರೀಕ್ಷಿಸುತ್ತಿರುತ್ತಾರೆ ಅನ್ನೋದು ಚೂರಾದ್ರೂ ಗ್ಯಾನ ಬೇಡವಾ ನಿಮಗೆ. ಬಂದ್ರಲ್ಲ. ಅದೇ ಸಂತೋಷ. ಟಿ.ಕೆ. ದಯಾನಂದ

    ReplyDelete
  6. ಓಹೋ ಬರ್ತಿ ಒಂದು ತಿಂಗಳ ಮೇಲೆ ಬ್ಲಾಗ್ ನಲ್ಲಿ ಬರೆದಿದ್ದೀರಿ? ಏನು ವಿಷಯ?? ಉದಯವಾಣಿ ಜ ೧ ರಂದು ಕೊಟ್ಟ ಸಲಹೆಯಂತೆ ಅನಾಮಿಕ ಬ್ಲಾಗ್ ಕಡಿಮೆ ಮಾಡಿ ನಿಜವಾದ ಪತ್ರಿಕೆಯಲ್ಲಿ ಬರೆಯುವ ಪ್ರಯತ್ನ ಮಾಡ್ತಾ ಇದ್ರಾ? Just Joking!
    ಸಧ್ಯ ಬಂದ್ರಲ್ಲ ಅಷ್ಟೇ ಸಾಕು. ಇದು ಮೀಡಿಯಾ ಬ್ಲಾಗ್ ಅಲ್ವಾ? ಎಷ್ಟು ದಿನ ಆಯಿತು ಮೀಡಿಯಾ ಬಗ್ಗೆ ಬರೆದು? IRS Q3 ರಿಸಲ್ಟ್ ಬಂದಿದೆ ಸ್ವಲ್ಪ ಕನ್ನಡ ಮೀಡಿಯಾ ಸಾಧನೆ ಹೇಳ್ತೀರಾ? ಹಾಗೆ Times & Hindu ಜಹಿರತಿನಲ್ಲೇ ಬಡಿದಾಡ್ತಿವೆ. ಅದನ್ನು ಸ್ವಲ್ಪ ವಿಶ್ಲೇಷಣೆ ಮಾಡ್ತೀರಾ?

    ReplyDelete
  7. ದಿನೇಶ್ ಕುಕ್ಕುಜಡ್ಕJanuary 28, 2012 at 2:53 PM

    ಕಣ್ಣ ಸಮೀಪದಲ್ಲಿ ಪುಟ್ಟದೊಂದು ಸೂಜಿ ಅಡ್ಡ ಹಿಡಿದರೂ, ದೂರದಲ್ಲಿರುವ ಆನೆಯೂ ಕಾಣಿಸುವುದಿಲ್ಲವಂತೆ! ಮನುಷ್ಯನಿಗೆ ವಿಚಾರಶಕ್ತಿ ಬೆಳೆದಂತೆಲ್ಲಾ ಪೂರ್ವಾಗ್ರಹವೆಂಬ ಈ ಸೂಜಿಯ ಅಂತರ ಹೆಚ್ಚುತ್ತಾ ಹೋಗಿ ಕೊನೆಗೊಮ್ಮೆ ಅದು ಕಾಣದಾಗಬೇಕು.ಆಗ ಆನೆಯೇನು,ಕಣ್ಣ ಮೊನೆಗೆ ಬ್ರಹ್ಮಾಂಡ ಬೆಳಕು ಸ್ಪಷ್ಟವೇದ್ಯ.ಮಟ್ಟು ಅವರ ಮೇಲೆ ದಾಳಿ ಮಾಡಿದ ಅಷ್ಟೂ ಮಂದಿಯ ಮುಖ್ಯ ಸಮಸ್ಯೆಯೇ ಇದು.
    ಬರಿಯ ವಿತಂಡವಾದಗಳಿಂದಲೇ ಯಾವ ಸಮಸ್ಯೆಗಳಿಗೂ ಉತ್ತರ ಸಿಗಲಾರದೆಂದು ಅರ್ಥ ಮಾಡಿಸುವವರಾದರೂ ಯಾರು? ಬುದ್ಧಿಯ ಮೇವಿಗೆ ವಿಶಾಲ ಮೈದಾನ ಬೇಕಲ್ಲದೆ ಬರಿಯ ಕತ್ತಲ ಕೋಣೆಯಲ್ಲಿ ಸಿಗುವುದಾದರೂ ಏನು?
    ಅಂದಹಾಗೆ,ಅರಿವಿನ ಅಡಿಗಟ್ಟೊಂದೇ ಈ ಸೈದ್ಧಾಂತಿಕ ಬಿರುಗಾಳಿಯ ವೇಳೆ ನಮ್ಮ ನಿಲುವುಗಳನ್ನು ರಕ್ಷಿಸಬಲ್ಲುದಷ್ಟೇ! ಈ ಸತ್ಯಗಳನ್ನು ಯಾರು ಯಾರಿಗೆ ಹೇಳೋಣ.....ಕಣ್ಣೆದುರು ಸಾಲು ಸಾಲು ಸೂಜಿಗಳಿರುವಷ್ಟು ಹೊತ್ತು?

    ReplyDelete
  8. http://nimmodanevrbhat.blogspot.com/2012/01/blog-post_23.html

    ReplyDelete
  9. ಅವರ ಲೇಖನಕ್ಕೆ ನನ್ನ ಮೌನ ಧಿಕ್ಕಾರ , ಹೊಗಳುವ ನೆಪದಲ್ಲಿ ವಿವೇಕಾನಂದರ ಬಗೆಗಿನ ಶ್ರದ್ಧೆ ಕೆದುಕುವ ಪ್ರಯತ್ನ ಸಲ್ಲದು . . . . . .. ivella publicity stuntu galu .. make a controversy by writing about a religion, or caste or person.. aamele pugsotte prachaara.. astu itihaas vanna kedaki baryo avashakathe idre .. Bari li Gandhi Family, Quatrochi, Bofors, Vadras assets bagge.. Thut - nimmagala kathene istu... !! - Nachikegedu - ondu samaja, sankula, janate use aago denadru bariri - yaaro photo hidkondu tirugaddidre ivarige problem.. Gandhiji photona obba dadda hidkondu triugadidru gandhiji gandhiji ne.. obba halka politician hidkondu tirugadridru gandhiji gandhiji ne !! adu bittu gandhiji kettovaragidru anta bariyokkagutta - Thut !! Yaakaru Journalismge ilintaro intavru !!

    ReplyDelete
  10. ದಿನೇಶ್ ಅಮೀನ್​ಮಟ್ಟು ಅವರ ಲೇಖನ, ಸಂಪಾದಕೀಯದಲ್ಲಿ ಬರೆದ ಈ ಲೇಖನ ಹಾಗೂ ಇಲ್ಲಿ ಕಿರಣ್​ ಅನ್ನೋರು ಬರೆದಿರುವ ರೆಪ್ಲೇ ನೋಡಿ, ನಾನೂ ಎರಡಕ್ಷರ ಬರೆಯೋಣ ಅಂತ ಶುರುಮಾಡಿದ್ದೇನೆ. ಕಿರಣ್​ ಅವರೇ, ನಿವು ವಿವೇಕಾನಂದರ ಕುರಿತು ಎಷ್ಟು ಓದಿದ್ದೀರಾ? ಏನೇನು ಓದಿದ್ದೀರಾ ಸ್ವಲ್ಪ ಹೇಳಿ. ವಿವೇಕಾನಂದರ ಬಗ್ಗೆ ಅಮೀನ್​ಮಟ್ಟು ಅವರು ಬರೆದಿರುವುದನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದವರು ತಿರಸ್ಕರಿಸಿರುವ ಕುರಿತು ಒಂದೇ ಒಂದು ಸುದ್ದಿಯೂ ಬಂದಿಲ್ಲ. ಅದಿರಲಿ, ನಿಮ್ಮ ಬರವಣಿಗೆಯ ಶೈಲಿ ನೋಡಿದರೆ, ನೀವು ನಂಬಿಕೊಂಡಿರುವ ನಿಲುವುಗಳನ್ನು ವಿರೋಧಿಸುವವರ ನೆತ್ತರು ಹೀರುವ ರೀತಿಯಲ್ಲಿ ಬರೆದಿದ್ದೀರಿ. ಗಾಂಧೀಜಿ, ಅವರ ನಡವಳಿಕೆ, ಬೋಫೋರ್ಸ್ ಹಗರಣ ಇದೆಲ್ಲದರ ಬಗ್ಗೆ ಹತ್ತಾರು ಪತ್ರಿಕೆಗಳು, ನೂರಾರು ಲೇಖನ ಬರೆದಿದ್ದಾವೆ. ಬಹುಶಃ ನೀವು ಅವುಗಳನ್ನು ಓದಿಲ್ಲವೇನೊ? ಒಮ್ಮೆ ಎಲ್ಲವನ್ನೂ ತಿರುವಿ ಹಾಕಿ.. ನನಗೆ ದಿನೇಶ್ ಅಮೀನ್​ಮಟ್ಟು ಅವರ ಪರಿಚಯವಿಲ್ಲ. ಆದರೆ ಅವರ ವ್ಯಕ್ತಿತ್ವದ ಕುರಿತು ತುಂಬಾ ಜನರ ಹತ್ತಿರ ಕೇಳಿ ತಿಳಿದಿದ್ದೇನೆ. ಅವರಿಗೆ ಪ್ರಚಾರದ ಉದ್ದೇಶವಿದ್ದಿದ್ದರೆ, ಇಷ್ಟೊತ್ತಿಗೆ ರಾಜಕಾರಣಕ್ಕೋ, ಸಿನಿಮಾಗೋ ಧುಮುಕಿರುತ್ತಿದ್ದರು. ಯಾರ ಬಗ್ಗೆಯಾದರೂ ಬರೆಯುವ ಮುನ್ನ ತಿಳಿದುಕೊಳ್ಳುವುದು ಒಳಿತು.. ವಿವೇಕಾನಂದರು ಕಾವಿ ತೊಟ್ಟಿದ್ದರೂ ಕ್ರಾಂತಿಕಾರಿಯಾಗಿದ್ದರು ಅನ್ನೋದು ನಿಮಗೆ ಗೊತ್ತಾ? ಬಹಶಃ ಗೊತ್ತಿಲ್ಲ ಅನಿಸುತ್ತೆ. ಸ್ವಲ್ಪ ಬಿಡುವು ಮಾಡಿಕೊಂಡು ವಿವೇಕಾನಂದರ ಜೀವನ ಚರಿತ್ರೆ ಓದಿ, ಅವರನ್ನು ತಿಳಿಯಲು ಪ್ರಯತ್ನ ಪಡಿ. ವಿವೇಕಾನಂದರ ಚಿಕಾಗೋ ಭಾಷಣವನ್ನೊಮ್ಮೆ ಕೇಳಿನೋಡಿ, ಆಗ ಗೊತ್ತಾಗುತ್ತೆ ಪ್ರಜಾವಾಣಿಯ ಲೇಖನ ಸರಿಯೋ? ನಿಮ್ಮ ಅರಿವು ಸರಿಯೋ ಅಂತ... ಪ್ಲೀಸ್​ ಓದಿ... ಆಮೇಲೆ ಚರ್ಚೆ ಮಾಡಿ.... ನಮ್ಮ ಕಡೆ ಒಂದು ಮಾತು ಹೇಳ್ತಾರೆ, ಎಲ್ಲಾ ತಿಳಿದುಕೊಂಡವರ ಹತ್ತಿರ ಚರ್ಚೆ ಮಾಡಬಹುದು. ಏನೂ ಗೊತ್ತಿಲ್ಲದವರನ್ನೂ ನಂಬಿಸಬಹುದು. ಆದರೆ ಅರ್ಧ ತಿಳಿದವರ ಹತ್ತಿರ ವ್ಯವಹರಿಸುವುದು ಸ್ವಲ್ಪ ಕಷ್ಟ ಅಂತ. ನೀವು ಯಾವ ಗುಂಪಿಗೆ ಸೇರಲು ಬಯಸುತ್ತೀರಾ?
    - ನಿತಿನ್

    ReplyDelete
  11. ಬರೀ ಕಿರಣ್​ ಅವರ ರಿಪ್ಲೆ ಓದಿ ಬರೆದಿದ್ದೆ, ಸಾರಿ. ಪ್ರದೀಪ್ ಅವರ ರಿಪ್ಲೆ ಬಗ್ಗೆನೂ ಸ್ವಲ್ಪ ಬರೆಯಬೇಕು ಅನ್ನೋ ಹಂಬಲ... ಪ್ರದೀಪ್​ ಅವರೇ, ಪ್ರತಿ ಲೇಖನದ ಕೆಳಗೂ ದೊಡ್ಡ ಬ್ರ್ಯಾಕೆಟ್​ ಹಾಕಿ ಇದನ್ನು ನೀವು ಹಾಸ್ಯಮಯವಾಗಿ ಓದಿ ಅಥವಾ ತುಂಬ ವ್ಯಗ್ರರಾಗಿ ಓದಿ ಅಥವಾ ಸಮಾಧಾನದಿಂದ ಓದಿ ಅಂತಲೂ ಬರೆಯಬೇಕೇನೋ ಅಲ್ಲವೇ... ಬರವಣಿಗೆಯನ್ನು ಓದುವವರು ಹೇಗೆ ಬೇಕಾದರೂ ಸ್ವೀಕರಿಸಬಹುದು. ಹಿಟ್ಲರ್​ ತುಂಬಾ ಸೀರಿಯಸ್ಸಾಗಿದ್ದಾಗ, ಸಣ್ಣದೊಂದು ಜೋಕ್​ ಹೇಳಿದ್ರೂ ವ್ಯಗ್ರನಾಗುತ್ತಿದ್ದರಂತೆ. ಹೀಗೆ, ವಿವೇಕಾನಂದರು ತಾವೊಬ್ಬ ಹಿಂದೂ ಅಂತ ಗುರುತಿಸಿಕೊಂಡಿದ್ದಂತೆ, ಅದೇ ಧರ್ಮದ ಅಂಧಾಚಾರದ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಅಂತಾರೆ. ನನಗೆ ಯಾವಾತ್ತೂ ಇದರ ಅನುಭವ ಆಗಿಲ್ಲ. ಆದರೆ, ವಿವೇಕಾನಂದರ ಲೇಖನ ಮತ್ತು ಅದರ ನಂತರದ ಬೆಳವಣಿಗೆ ನೋಡಿದ್ರೆ, ಅದು ನಿಜ ಅನಿಸುತ್ತಿದೆ. ಪ್ಲೀಸ್​ ಮತ್ತೆ ವಿವೇಕಾನಂದರ ಜೀವನಚರಿತ್ರೆ ಓದಿ, ಆಮೇಲೆ ದಿನೇಶ್​ ಅಮೀನ್​ಮಟ್ಟು ಅವರ ಲೇಖನ ಓದಿ. ನಾನೇನು ದೊಡ್ಡ ವಿದ್ವಾಂಸನಲ್ಲ. ಆದರೆ, ವಿವೇಕಾನಂದರ ಕುರಿತು ಓದಿಕೊಂಡಿದ್ದೇನೆ... ನೀವೂ ಒಮ್ಮ ಸರಿಯಾಗಿ ಓದಿ... ಪ್ಲೀಸ್‌.
    - ನಿತಿನ್

    ReplyDelete
  12. nitin avare idralli charche maadodenidiri... ? Aa lekhana ondu avahelankari durudeshdinda bariyalagide..even a PUC 1st year ART student can make out that, koneyalli eno tippe saarisi kondiddare, if ever he wanted to write it - That Swmai Vivekannda too was common man but achieved these heights anta bariyokke - nooru daarigalu iddavu !! Nanna prakara idondu anvashayaka lekhana !! considering these contemprory times !! and coming to "Rakta hiruva - partu" nanage hela bekinisddanu helidene - barvanigeya shaily nanage gottillla - obba samnya oduganada nange aa lekhana - astondu bejaaru, rochhu maadide... adu kooda obba odugana reaction , Nanu heliddu nimagu , amin avarigu pathyawaagdirabahudu - aadre eegina vastavikathe avarnnu aa moolege talluttade, nimmgannisirabahudu nannobba pakka RSS athva BJP yavanu anta , adeno antirall Eda bala anta , anta denu illa !! nijavagiu kalakali iddre, inta brand name gala heasralli deshvanna, Artihka, Samajika adhha Patankke dabbutiddralla adara bagge barriri....avaru yaare aagirali - Regards /Kiran

    ReplyDelete