ದಿನೇಶ್ ಅಮೀನ್ ಮಟ್ಟು |
-ಸಂಪಾದಕೀಯ
ಪತ್ರಕರ್ತರ ನಡವಳಿಕೆಗಳು ಸಂಶಯಾಸ್ಪದವಾಗುತ್ತಿರುವ ಈ ಕಾಲದಲ್ಲಿ ಆ ವೃತ್ತಿಯ ಘನತೆ ಗೌರವಗಳನ್ನು ಕಾಪಾಡಿಕೊಂಡು ಹೋಗುತ್ತಿರುವ ಬೆರಳೆಣಿಕೆಯ ಕೆಲವೇ ಕೆಲವು ಪತ್ರಕರ್ತರಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ಒಬ್ಬರು. ತಮ್ಮ ಬರೆಹಗಳ ಮೊದಲ ಹಂತದಲ್ಲಿ ಜನರ ಸಂವೇದನೆಗಳಿಗೆ ಸೂಕ್ಷ್ಮವಾಗಿ ಧ್ವನಿಯಾಗುವ ಅವರು, ಎರಡನೇ ಹಂತದಲ್ಲಿ ನಿಧಾನವಾಗಿ ಸಾರ್ವಜನಿಕರ ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯಾಗಿ ಉದೀಯಮಾನರಾಗುತ್ತಾರೆ. ವಿಸ್ತಾರವಾದ ಓದು, ಜನಗಳ ನಡುವಣ ನಿರಂತರ ಒಡನಾಟ, ಕನ್ನಡ ಭಾಷೆಯ ಮೇಲಿನ ಅಪೂರ್ವ ಹಿಡಿತಗಳ ಜೊತೆಗೆ ಅತ್ಯಂತ ಜನಪರವಾದ ಚಿಂತನಾಕ್ರಮಗಳ ಮೂಲಕ ದಿನೇಶ್ ಅವರು ಕರ್ನಾಟಕದ ಜನರ ಸಂವೇದನೆಗಳನ್ನು ಮತ್ತೆ ಮತ್ತೆ ಸೂಕ್ಷ್ಮಗೊಳಿಸುತ್ತಾ ಬಂದಿದ್ದಾರೆ. ಸಹೃದಯ ಸಾಮಾನ್ಯ ಜನತೆಯ ಕಣ್ಣುಗಳ ಮೂಲಕ ಅವರು ನಾಡನ್ನು ನೋಡುವ ಮತ್ತು ವಿವರಿಸುವ ರೀತಿ ಅಸಾಮಾನ್ಯವಾದುದು.
ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟು ಎಂಬ ಪುಟ್ಟ ಊರಿನಿಂದ ಹೊಟ್ಟೆಪಾಡಿಗಾಗಿ, ಮುಂಬೈಗೆ ವಲಸೆ ಹೋದ ತುಳು ಮಾತಾಡುವ ಕುಟುಂಬವೊಂದರಲ್ಲಿ ಮುಂಬೈಯಲ್ಲಿ ಜನಿಸಿದ ದಿನೇಶ್ (ಜನನ: ೧೯೫೯ ) ಅವರು ಮುಂಬೈಯ ಸರಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿವರೆಗೆ ಓದಿ ಆನಂತರದ ವಿದ್ಯಾಭ್ಯಾಸವನ್ನು ಕರಾವಳಿಯ ಕಿನ್ನಿಗೋಳಿ, ಹೆಜಮಾಡಿ ಮತ್ತು ಸುರತ್ಕಲ್ ಗಳಲ್ಲಿ ಮುಗಿಸಿದರು. ಇಲ್ಲಿ ಓದಿದ ವಿದ್ಯೆಗೂ ದಿನೇಶ್ ಮುಂದೆ ಹಿಡಿದ ಹಾದಿಗೂ ಅಂತಹ ಸಂಬಂಧ ಏನೂ ಇಲ್ಲ. ಆದರೆ, ಹಸಿರುಡುಗೆ ಹೊದ್ದ ಕರಾವಳಿಯ ತುಳು ಮಣ್ಣಿನ ಗುಣಗಳಾದ, ಸರಳ, ನೇರ, ಮತ್ತು ಸ್ಪಷ್ಟತೆಗಳು ದಿನೇಶ್ ಅವರ ದೊಡ್ಡ ಶಕ್ತಿಗಳಾಗಿ ಭವಿಷ್ಯದಲ್ಲಿ ನಿರಂತರವಾಗಿ ಅವರ ಬೆಂಬಲಕ್ಕೆ ನಿಂತವು.
ದಿನೇಶ್ ಅವರ ಚಿಂತನಾ ಕ್ರಮ ಮತ್ತು ಬರೆಹಗಳಿಗೆ ಉತ್ತಮ ಆರಂಭ ಸಿಕ್ಕಿದ್ದು ಮಂಗಳೂರಿನಲ್ಲಿ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟರು ಆರಂಭಿಸಿದ್ದ ಮುಂಗಾರು ಪತ್ರಿಕೆಯಲ್ಲಿ. ಜನ ಶಕ್ತಿ ಬೆಳೆತೆಗೆವ ಕನಸಿನೊಂದಿಗೆ ಆರಂಭವಾದ ಆ ಪತ್ರಿಕೆಯಲ್ಲಿ ಪಳಗಿದ ಅವರು ೧೯೮೯ ರಲ್ಲಿ ಪ್ರಜಾವಾಣಿ ಪತ್ರಿಕೆ ಸೇರಿದರು. ಮುಂದೆ ಆ ಪತ್ರಿಕೆಯ ಪ್ರಮುಖ ವರದಿಗಾರರಾಗಿ ಬೆಂಗಳೂರು, ಧಾರವಾಡ, ತುಮಕೂರು, ದೆಹಲಿಗಳಲ್ಲಿ ಕೆಲಸ ಮಾಡಿ, ಪ್ರಸ್ತುತ ಪ್ರಜಾವಾಣಿಯ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ, ಹುಬ್ಬಳ್ಳಿ ಮತ್ತು ತುಮಕೂರುಗಳಲ್ಲಿ ಅವರು ಅಲ್ಲಿನ ಸ್ಥಳೀಯ ಸಮಸ್ಯೆ , ಜಿಲ್ಲಾ ಪಂಚಾಯತ್ ಆಡಳಿತ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಸವಿವರ ವರದಿ ಮಾಡಿದರೆ, ದೆಹಲಿಯಿಂದ ಲೋಕಸಭೆ, ರಾಜ್ಯಸಭೆಗಳ ಕಲಾಪ ವರದಿ, ಕಾವೇರಿ-ಕೃಷ್ಣಾ ಜಲಮಂಡಳಿ ಸಭೆಗಳ ವರದಿ, ಸುಪ್ರಿಂ ಕೋರ್ಟಿನಲ್ಲಿ ಕರ್ನಾಟಕದ ಕುರಿತಾದ ಚರ್ಚೆಗಳ ವಿಸ್ತೃತ ವರದಿ ಮಾಡಿದರು. ಚುನಾವಣೆಗಳು ನಡೆದಾಗ, ಜನರ ಬಳಿಗೆ ತೆರಳಿ ನೇರ ವರದಿ ಮಾಡಿದರು. ಉತ್ತರ ಭಾರತಾದ್ಯಂತ ಅವರು ಪ್ರವಾಸ ಮಾಡಿದ್ದಾರೆ. ೨೦೦೨ ರಲ್ಲಿ ನಡೆದ ಗುಜರಾತ್ ಕೋಮುಗಲಭೆಯ ಪ್ರತ್ಯಕ್ಷ ವರದಿ ಮಾಡಿದಾಗ ಕನ್ನಡದ ಓದುಗರು ಬೆಚ್ಚಿ ಬಿದ್ದರು. ಅಧಿಕಾರ ಹಿಡಿದವರ ಅಪಕ್ವ ಗ್ರಹಿಕೆಗಳು, ಆತುರದ ತೀರ್ಮಾನಗಳು, ಹಾಗೂ ಮುನ್ನೋಟವಿಲ್ಲದ ತೀರ್ಮಾನಗಳಿಂದಾಗಿ ದೇಶದಲ್ಲಾಗುವ ಅನಾಹುತಗಳನ್ನು ದಿನೇಶ್ ಅವರು ಪಕ್ಷಾತೀತವಾಗಿ, ಪೂರ್ವಾಗ್ರಹವಿಲ್ಲದೆ ಮಂಡಿಸುತ್ತಾರೆ. ಅವರು ಭಾಷಾಂಧರೂ ಅಲ್ಲ, ದೇಶಾಂಧರೂ ಅಲ್ಲ, ಬದಲು ಭಾರತದ ಒಕ್ಕೂಟ ವ್ಯವಸ್ಥೆಯ ಆಂತರಿಕ ತರ್ಕ ಮತ್ತು ಸಂಬಂಧಗಳನ್ನು ಪತ್ರಕರ್ತನೊಬ್ಬನ ದಿಟ್ಟತನದಲ್ಲಿ ಗ್ರಹಿಸಿ, ವಿಶ್ಲೇಶಿಸಿ ಮಂಡಿಸುವ ಅಸಾಧಾರಣ ಚೈತನ್ಯದ ಲೇಖಕ. ಕನ್ನಡ ಭಾಷೆ ದಿನೇಶ್ ಅವರಲ್ಲಿ ಹೊಸ ಕಸುವು ಕಂಡುಕೊಂಡಿತು. ಇದು ಸರಿಯಾಗಿ ಅರ್ಥವಾಗಲು ನಾವು ದಿನೇಶ್ ಬರೆದ ಕಣ್ಣೆದುರಿನ ತಳಮಳ (೧೯೯೯), ದೆಹಲಿ ನೋ೧ ( ೨೦೦೮) ಮತ್ತು ನಾರಾಯಣ ಗುರು ( ೨೦೦೯) ಕೃತಿಗಳನ್ನು ಓದಬೇಕು.
ಇಂದು ದೇಶದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರೆಂಬ ಖ್ಯಾತಿಗೆ ಒಳಪಟ್ಟಿರುವ, ದಿನೇಶ್ ಅಮೀನ್ ಅವರು ತಮ್ಮ ವೃತ್ತಿಯ ಭಾಗವಾಗಿ ದೇಶ ವಿದೇಶಗಳನ್ನು ಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದುವುಗಳೆಂದರೆ, ೨೦೦೫ ರಲ್ಲಿ ಮಾಡಿದ ಬ್ರೂನೈ ದ್ವೀಪ, ಫಿಲಿಪ್ಪೀನ್ಸ್ ಮತ್ತು ಮಲೇಷಿಯಾಗಳ ಪ್ರವಾಸ, ೨೦೦೬ ರಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಜೊತೆ ಮಾಡಿದ ಕತಾರ್ ಮತ್ತು ಮಸ್ಕತ್ ದೇಶಗಳ ಪ್ರವಾಸ. ೨೦೦೮ರಲ್ಲಿ ಆಗಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರ ಸಮಿತಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಡಾ.ಪುರುಷೋತ್ತಮ ಬಿಳಿಮಲೆ |
ದಿಟ್ಟವಾಗಿ ಬರೆಯುವ ದಿನೇಶ್ ಅವರ ಮೇಲೆ ಎಂತಹ ಒತ್ತಡಗಳಿರಬಹುದೆಂದು ನಾನು ಈಗ ಊಹಿಸಬಲ್ಲೆ. ಈ ಒತ್ತಡಗಳಿಗೆ ಬರಹಗಾರನೊಬ್ಬ ಬಲಿಯಾಗುವುದೆಂದರೆ, ಸುಲಭವಾಗಿ ಆರ್ಥಿಕವಾಗಿ ಭ್ರಷ್ಠನಾಗಿಬಿಡುವುದು, ಇಲ್ಲವೇ ನೈತಿಕ ದಿವಾಳಿತನದಿಂದ ಬರೆಹದ ಮೊನಚನ್ನು ಕಳೆದುಕೊಳ್ಳುವುದು. ದಿನೇಶ್ ಇಂಥ ಅಪಾಯಗಳಿಂದ ಪಾರಗಿ, ಸುರಕ್ಷಿತವಾಗಿ ಇದುವರೆಗೆ ಉಳಿದಿದ್ದಾರೆ. ಈ ಕಾಲದಲ್ಲಿ ಇದೊಂದು ಪವಾಡ ಸದೃಶ ಘಟನೆ. ಅದಕ್ಕಾಗಿ ಅವರನ್ನು ಎಲ್ಲ ಕನ್ನಡಿಗರ ಪರವಾಗಿ ಅಭಿನಂದಿಸುತ್ತೇನೆ.
ಆದರೂ ದಿನೇಶ್ ಅಮೀನ್ ಮಟ್ಟು ಸ೦ಪೂರ್ಣ ನಿಷ್ಪಕ್ಷ ಪಾತಿಗಳಲ್ಲ! ಇವರ ಹಲವು ಲೇಖನಗಳಲ್ಲಿ ಬಾಜಪಾ ದ್ವೇಷವನ್ನು ಹಾಗೂ ಕಾ೦ಗ್ರೆಸ್ ಪ್ರೀತಿಯನ್ನು ನಾನು ಗಮನಿಸಿದ್ದೇನೆ!
ReplyDeleteIagree with Dr Bilimale"s views... indeed a rare breed of a writer altogether is Dinesh Amin Mattu... He deserves the laurel very much.
ReplyDeleteಶ್ರೀಯುತ ದಿನೇಶ್ ಅಮೀನ್ ಮಟ್ಟು ಅವರಿಗೆ ಅಭಿನಂದನೆಗಳು. ಅವರ "ನಾರಾಯಣ ಗುರು" ಹೊತ್ತಗೆಯನ್ನು ನಾನು ವಿದ್ಯಾರ್ಥಿ ದೆಸೆಯಲ್ಲೆ ಓದಿದ್ದೇನೆ. ಪ್ರಜಾವಾಣಿಯಲ್ಲಿ ಅವರ ಲೇಖನಗಳು ಹರಿತಗೊಂಡ ಕತ್ತಿಯಂತಿದ್ದೆ. ಸಾಮಾಜಿಕ ಕಳಕಳಿ ಎದ್ದು ಕಾಣ್ಣುತ್ತೆ. ಮತ್ತೊಮ್ಮೆ ಅಭಿನಂದನೆಗಳು.
ReplyDelete-Ashok Kumar Valadur
ಅಮೀನ್ ಮಟ್ಟು ನಮ್ಮೆಲ್ಲರ ಹೇಳಲಾಗದ ಮಾತುಗಳಿಗೆ ಮೊನಚು-ಹರಿತ ತುಂಬಿದ ಪತ್ರಕರ್ತ. ನಿಜಕ್ಕೂ ಅಮೀನ್ ನಮ್ಮ ನಡುವಿನ ಪವಾಡವೇ..
ReplyDelete-Daya Anand
Thanks Bilimale Sir..
ReplyDelete-Harshakumar Kugwe
@k.s.raghavendra navada,
ReplyDeleteMr. Navada if you could see 'pro-Congress and anti-BJP' Amin Mattu in his column, it is nothing but you are 'pro-BJP'. You are comment is basically biased. Many people have common tendency to brand a writer pro-COngress, when he/she criticises the communal BJP.
MOST OF PUBLICATIONS IGNORED THE NEWS OF HIS SELECTION FOR THE AWARD.THAT'S BECAUSE DOESN'T BELONGS PARTICULAR JOURNALIST COMMUNITY.
ReplyDeleteದಿನೇಶ್ ಅಮೀನ್ ಮಟ್ಟು ಅವರು ಕರ್ನಾಟಕದ ಬಹುಮುಖ್ಯ ಪತ್ರಕರ್ತ. ದಿನೇಶ್ ಒಮ್ಮೊಮ್ಮೆ ಪತ್ರಕರ್ತನ ಎಲ್ಲೆಯನ್ನೂ ದಾಟಿ ಒಬ್ಬ ಸಮಾಜ ಶಾಸ್ತ್ರಜ್ಞನ ಕೆಲಸವನ್ನೂ ಮಾಡಿದ್ದಾರೆ. ಅವರ ತೀಕ್ಷ್ಣಮತಿಗೆ ಹೊಳೆಯದ ವಿಷಯಗಳೇ ಇಲ್ಲವೇನೋ ಎಂಬಂತೆ ಸಮಕಾಲೀನ ಎಲ್ಲ ಘಟನಾವಳಿಗಳಿಗೂ ಪ್ರತಿಕ್ರಿಯಿಸುತ್ತ ಬಂದಿದ್ದಾರೆ. ಪ್ರಜಾವಾಣಿ ಬದಲಾವಣೆಯ ಬಿರುಗಾಳಿಗೆ ಒಡ್ಡಿಕೊಂಡಾಗಲೂ ದಿನೇಶ್ ತಮ್ಮ ನೈತಿಕ ಚೌಕಟ್ಟನ್ನು ದಾಟದೆ ತಮ್ಮತನ ಉಳಿಸಿಕೊಂಡಿದ್ದು ಗಮನಾರ್ಹ. ಹೀಗೆ ಉಳಿದುಕೊಳ್ಳುವ ಮೂಲಕವೇ ಅವರು ಪ್ರಜಾವಾಣಿ ಓದುಗರ ಅಂತಃಸಾಕ್ಷಿಯಂತೆ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು.
ReplyDelete@ ರಾಘವೇಂದ್ರ ನಾವಡ, ದಯಮಾಡಿ ದಿನೇಶ್ ಅವರು ಕಾಂಗ್ರೆಸ್ ಪಕ್ಷಪಾತಿಯಂತೆ ಬರೆದದ್ದಕ್ಕೆ ಆಧಾರ ಒದಗಿಸುವಿರಾ?
ReplyDelete’ದೆಹಲಿ ನೋಟ’ಬರೆಯುವಾಗಿನ ಕಾಲದಿಂದಲೂ ದಿನೇಶ್ ಮಟ್ಟು ಅವರನ್ನು ಓದುತ್ತ ಬಂದಿರುವ ನನಗೆ ಅವರ ಬರಹಗಳೆಂದರೆ ತುಂಬಾ ಪ್ರಿಯವಾದುವು. ರಾಜ್ಯದ ಸಮಸ್ಯೆಗಳು ಕೇಂದ್ರದಲ್ಲಿ ಹೇಗೆ ಪ್ರತಿನಿಧೀಕರಿಸಲ್ಪಡುತ್ತವೆ ಮತ್ತು ಕೇಂದ್ರದಲ್ಲಿ ರಾಜ್ಯದ ದುರ್ಬಲ ಪ್ರತಿನಿಧೀಕರಣದ ಒಳಚಿತ್ರಣವನ್ನು ರಾಜಧಾನಿ ಕನ್ನಡಿಗರಿಗೆ, ಕರ್ನಾಟಕದ ಜನರಿಗೆ ಅರಿವು ಮೂಡಿಸಿದ್ದೇ ಅವರ ತೀಕ್ಷ್ಣವಾದ ಬರಹಗಳು. ದಿನೇಶ್ ಅಮೀನ್ ಮಟ್ಟು ಅವರಂತೆ ಯಾವ ಹಂಗಿಲ್ಲದಂತೆ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳನ್ನು ನೇರವಾಗಿ, ಸ್ಪಷ್ಟವಾಗಿ ಬರೆಯಬಲ್ಲ ಪತ್ರಕರ್ತರು ಈಗಿನ ಕಾಲಮಾನದಲ್ಲಿ ಬಹಳ ಕಡಿಮೆ. ಅವರಿಗೆ ಸಮಸ್ತ ದೆಹಲಿ ಕನ್ನಡಿಗರ ಪರವಾಗಿ ಅಭಿನಂದನೆಗಳು ಹಾಗೂ ಬಿಳಿಮಲೆ ಅವರಿಗೆ ಧನ್ಯವಾದಗಳು
ReplyDeleteದಿನೇಶ್ ಧಾರವಾಡದಲ್ಲಿ ಪ್ರಜಾವಾಣಿಯ ಪ್ರತಿನಿಧಿಯಾಗಿ ಇದ್ದಾಗ ನಾನು ಅವರನ್ನು ಭೇಟಿಯಾಗುತ್ತಿದ್ದೆ. ಅವರೊಬ್ಬ ಪ್ರಜ್ಞಾವಂತ ಪತ್ರಕರ್ತ.ಅವರ ಗ್ರಹಿಕೆ ಒಳನೋಟಗಳಲ್ಲಿ ಒಂದು ತಾಜಾತನ ಇರುತ್ತದೆ.ಬಜ್ಪೆ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದ ಸಂದರ್ಭದಲ್ಲಿ ಅವರು ಬರೆದ ಲೇಖನ ಬರಿ ಒಂದು ದುರಂತದ ಚಿತ್ರ ಕೊಟ್ಟಿರಲಿಲ್ಲ, ಆ ದುರಂತದ ಸಾಮಾಜಿಕ ಆರ್ಥಿಕ ಮುಖಗಳ ಚಿತ್ರವನ್ನೂ ಕಟ್ಟಿ ಕೊಟ್ಟಿತ್ತು.ಬಿಳಿಮಲೆಯವರು ಮಾಡಿದ ದಿನೇಶ್ ಅಮೀನ್ ಮಟ್ಟೂ ಅವರ ಮೌಲ್ಯೀಕರಣ ಸರಿಯಾಗಿಯೇ ಇದೆ ಅನ್ನಿಸುತ್ತದೆ.
ReplyDeleteಸಧ್ಯ ದಿನೇಶ್ ಅಮಿನ್ ಮಟ್ಟು ಲಂಕೇಶ್ ನಂತರದ ಒರ್ವ ಉತ್ತಮ ಪತ್ರಕರ್ತ. ಅವರ ವರದಿಗಳಲ್ಲಿರುವ ಸ್ಪಷ್ಟತೆ, ಒಳನೋಟ, ಸಾಮಾಜಿಕ ಕಾಳಜಿಗಾಗಿ ನಾನು ಅವರ ಅಭಿಮಾನಿಯಾಗಿರುವೆ.ಅವರ ಸರಳತೆ, ಪ್ರಾಮಾಣಿಕತೆಯನ್ನು ಯಾರು ಪ್ರಶ್ನೆಮಾಡಲಾರರು.ಅವರಿಗೆ ಖಾದ್ರಿ ಪ್ರಶಸ್ತಿ ಬಂದ್ದದರಿಂದ ಪ್ರಶಸ್ತಿಯ ಮೌಲ್ಯವೇ ಹೆಚ್ಚಾಯಿತು ಎಂದರೂ ತಪ್ಪಾಗಲಾರದು.
ReplyDelete@ ರಾಘವೇಂದ್ರ ನಾವಡ, ದಯಮಾಡಿ ದಿನೇಶ್ ಅವರು ಕಾಂಗ್ರೆಸ್ ಪಕ್ಷಪಾತಿಯಂತೆ ಬರೆದದ್ದಕ್ಕೆ ಆಧಾರ ಒದಗಿಸುವಿರಾ?
ReplyDeleteನಾನು ಇಷ್ಟಪಡುವ/ಕಾಯುವ ಲೇಖನ/ಕರು ದಿನೇಶ್.ನಾವಡರು ಹೇಳಿದಂತೆ ಒಮ್ಮೊಮ್ಮೆ ಹಾಗನಿಸುವುದು ಉಂಟೂ.ತೀರಾ ಕಳೆದ ವಾರ ಒಸಾಮ ಸತ್ತರೆ ನಾವ್ಯಾಕೆ ಕುಣಿಯಬೇಕು ಅಂತ ಬರೆದ ಲೇಖನವೇ ಸಾಕ್ಷಿ.ಅವರ ಲೇಖನಕ್ಕೆ ನನ್ನ ಲೇಖನದಲ್ಲಿ ಉತ್ತರಿಸಿದ್ದೇನೆ.
ReplyDeletehttp://wp.me/p14FzR-At
-Rakesh Shetty
ದಿನೇಶ್ ಅಮೀನ್ ಮಟ್ಟು ಅವರ ಬರವಣಿಗೆಯನ್ನು ಮಂಗಳೂರಿನಲ್ಲಿ 'ಮುಂಗಾರು' ಪತ್ರಿಕೆಯ ಕಾಲದಿಂದಲೂ ಓದಿಕೊಂಡು ಬಂದವನು ನಾನು.ಪತ್ರಕರ್ತನಾಗಿ ಅವರ ಅಧ್ಯಯನಶೀಲತೆ ನಮ್ಮ ಅಕಾಡೆಮಿಕ್ ವಲಯದಲ್ಲಿ ಕಾಣ ಸಿಗಲಾರದಷ್ಟು ವ್ಯಾಪಕ ಮತ್ತು ವೈವಿಧ್ಯಮಯ.'ದೆಹಲಿ ನೋಟ' ಕನ್ನಡ ಪತ್ರಿಕಾ ರಂಗದಲ್ಲಿ ಸೂಕ್ಷ್ಮ ಒಳನೋಟಗಳುಳ್ಳ ಅಪೂರ್ವ ಕೃತಿ.ರಾಜ್ಯಶಾಸ್ತ್ರದ ಸಂಶೋಧಕರಿಗೆ ಮಾರ್ಗದರ್ಶನ ಕೊಡಬಲ್ಲ ಪಕ್ವತೆ ಮತ್ತು ವಿಶ್ಲೇಷಣೆ ಅವರ ಬರವಣಿಗೆಯಲ್ಲಿ ಇದೆ.ಅವರ ಈವರೆಗಿನ ಸಮಗ್ರ ಬರವಣಿಗೆಯನ್ನು ಅವಲೋಕಿಸಿದಾಗ ಕಾಲ ಕಾಲಕ್ಕೆ ಅವರು ಪ್ರಕಟಿಸಿದ ಸಾಮಾಜಿಕ ಕಾಳಜಿ ಮತ್ತು ನಿರ್ಭೀತಿ ಗೋಚರವಾಗುತ್ತದೆ..
ReplyDelete-B A Viveka Rai
ದಿನೇಶ್ ಅಮೀನ್ ಮಟ್ಟು ಮುಂಗಾರು ಪತ್ರಿಕೆಯಲ್ಲಿ ನನ್ನ ಮೊದಲ ಸುದ್ದಿಸಂಪಾದಕರೂ ಹೌದು (೮೮-೮೯). ಬಹಳ ಅಲ್ಪಾವಧಿಯಾದರೂ ಅವರಿಂದ ಕಲಿತದ್ದು ಸಾಕಷ್ಟು. ಅವರು ಅಲ್ಲಿಂದ ಪ್ರಜಾವಾಣಿಗೆ ತೆರಳಿದ ಮೇಲೆ, ನಾನು ಮುಂಗಾರು ಪತ್ರಿಕೆಯಲ್ಲಿದ್ದ ಅಲ್ಪಕಾಲದಲ್ಲಿ ಬಹುತೇಕ ಪ್ರತಿದಿನವೂ ಸುದ್ದಿ ಡೆಸ್ಕ್ ಅವರನ್ನು ನೆನಪಿಸಿಕೊಳ್ಳುತ್ತಿತ್ತು. ಅಂತಹ "ಅಂತರಂಗಕ್ಕೆ ತಟ್ಟಬಲ್ಲ" ಅಪರೂಪದ ಗುರು ಅವರು! (ರಾಜಾರಾಂ ತಲ್ಲೂರು)
ReplyDeleteavru doddvru. nanu kandita sannvnu. dinesh nann muddin barhgar. avrnnu nanu endu miss madikollda oduga. aste saku. munde heldre chennagirll. l. naik, sagar, shimogha
ReplyDeletemost people said dinesh is best and crictical writer.i am wait dinesh colum. thanku sir. one thing lankesh and dines sapereate writer. please did not compere. dinesh line and lenth is most intrestin. thanku blimle sir
ReplyDeletelaxmana sagar
I like some of Dinesh's articles. However I have not seen impartial articles from any of these leftist journalists about Communist party's violence and carnage perpetrated on poor people of Nandigram in West Bengal.
ReplyDeleteHe is/was not a red card holder like Sudheendra kulkarni
ReplyDeleteFrends,
ReplyDeletepls read aminmattu's westbengal loksabha election survey and othe articles on westbengal. Year ago he predicted the fall of 'redfort'
ಒಳ್ಳೆಯ ಪತ್ರಕರ್ತರು ಕನ್ನಡದಲ್ಲೂ ಇದ್ದಾರೆ ಅನ್ನುವುದೇನೋ ನಿಜ. ಆದರೆ ದಿನೇಶ್ ಅಮೀನ್ ಮಟ್ಟು ಅವರ ವಿಶೇಷತೆ ಇರುವುದು, ಅವರೊಬ್ಬ ಕನರ್ಾಟಕದ ಸಾಕ್ಷಿಪ್ರಜ್ಣೆಯೆಂಬಂತೆ ಬರೆಯುತ್ತಿರುವುದು. ಇಷ್ಟೊಂದು ಸೂಕ್ಷ್ಮ ನೋಟಗಳಿರುವ- ಎಲ್ಲಾ ವಿಚಾರಗಳಲ್ಲೂ ಪತ್ರಕರ್ತರ ರೋಲ್ ಮಾಡೆಲ್ ಅನ್ನಿಸಿಕೊಳ್ಳಬಹುದಾದ ದಿನೇಶ್ ನಿಜಕ್ಕೂ ಕನ್ನಡಿಗರ ಹೆಮ್ಮೆ!
ReplyDelete-ದಿನೇಶ್ ಕುಕ್ಕುಜಡ್ಕ
Mr.Rakesh, you missed the point in 'osama..'column. Mr.Mattu rightly exposed the hipocracy of America in war against the terror. To us catching dawood is more important than osama. That is what Mr.Mattu wrote. Now you call him pro BJP?
ReplyDelete