Tuesday, May 10, 2011

ಬದುಕು ಜಟಕಾ ಬಂಡಿಯಲ್ಲಿ ಧರ್ಮದರ್ಶಿ ನರೇಂದ್ರ ಬಾಬು ಶರ್ಮ ಅನಾವರಣ...

 ಸ್ವಲ್ಪ ದಿನ ರಜೆ ತಗೋತೀವಿ ಅಂದಿದ್ವಿ. ಆದರೆ ಈಗ ಬರೀಲೇಬೇಕು. ಬದುಕು ಜಟಕಾ ಬಂಡಿಯಲ್ಲಿ ನರೇಂದ್ರ ಶರ್ಮ ಅವರ ದರ್ಶನವಾಗಿದೆ. ಅದು ನಮಗಾಗಿ ನಡೆದ ಕಾರ್ಯಕ್ರಮ. ನೀವು, ನಾವೆಲ್ಲ ಬರೆದ ನೂರಾರು ಪತ್ರಗಳಿಗೆ ಉತ್ತರವಾಗಿ ನಡೆದ ಕಾರ್ಯಕ್ರಮ. ಹೀಗಾಗಿ ಆ ಕುರಿತು ಬರೆಯಲೇಬೇಕು.

ನಿನ್ನೆ ರಾತ್ರಿ ೯ ಗಂಟೆಗೆ ಪ್ರಸಾರವಾದ ಬದುಕು ಜಟಕಾ ಬಂಡಿಯಲ್ಲಿ ಮಾಳವಿಕಾ ಅವಿನಾಶ್ ಅವರು ನರೇಂದ್ರ ಶರ್ಮ ಜತೆ ಸಂವಾದ ನಡೆಸಿದರು, ಜತೆಗೊಂದಿಷ್ಟು ಮಂದಿ ವೀಕ್ಷಕರು. ಇದು ಅತ್ಯಂತ ವ್ಯವಸ್ಥಿತವಾಗಿ ನರೇಂದ್ರ ಶರ್ಮ ಅವರನ್ನು ಸಮರ್ಥಿಸಲು ನಡೆದ ಕಾರ್ಯಕ್ರಮ. ಆದರೆ, ಇಂಥ ಕಾರ್ಯಕ್ರಮವನ್ನೂ ಸಹ ಜಾಣತನದಿಂದ ಬಳಸಿಕೊಳ್ಳಲು ಶರ್ಮ ವಿಫಲರಾದರು. ಅವರ ಬಾಯಿಹರುಕುತನ ಅವರ ಇನ್ನಷ್ಟು ವಿಕೃತಿಗಳನ್ನು ಅನಾವರಣಗೊಳಿಸಿತು.

ಪ್ರಳಯ ತಪ್ಪಿಸಲು ಐದು ಎಣ್ಣೆಯ ದೀಪಗಳನ್ನು ಹಚ್ಚಲು ಶರ್ಮ ನೀಡಿದ ಕರೆ, ಅದಕ್ಕೆ ಕರ್ನಾಟಕದ ಮುಗ್ಧ ಹೆಣ್ಣುಮಕ್ಕಳು ಪ್ರತಿಸ್ಪಂದಿಸಿದ ರೀತಿಯನ್ನು ಗಮನಿಸಿ, ಗಾಬರಿಯಾಗಿ ನಾವು ಮೊದಲು ಈ ವ್ಯಕ್ತಿಯ ಕುರಿತು ಬರೆದಿದ್ದೆವು. ನಂತರದ ದಿನಗಳಲ್ಲಿ ನರೇಂದ್ರ ಶರ್ಮ ಅವರನ್ನು ನಾವೆಲ್ಲರೂ ಸೇರಿ ಬಯಲುಗೊಳಿಸುತ್ತಾ ಹೋದೆವು, ಕನ್ನಡದ ಬ್ಲಾಗರ್‌ಗಳು ಒಬ್ಬರಾದ ಮೇಲೊಬ್ಬರಂತೆ ಬೃಹತ್ ಬ್ರಹ್ಮಾಂಡದ ಠೊಳ್ಳುತನವನ್ನು ಬಹಿರಂಗಪಡಿಸುತ್ತ ಬಂದರು. ಫೇಸ್‌ಬುಕ್‌ನಲ್ಲೊಂದು ಗುಂಪನ್ನೂ ಸೃಷ್ಟಿಸಿದೆವು. ನೂರಾರು ಪತ್ರಗಳು ಜೀ ಟಿವಿಗೆ ಹೋದ ನಂತರ ಅವರು ಏನನ್ನಾದರೂ ಮಾಡಲೇಬೇಕಿತ್ತು. ಮಾಡಿದ್ದು ಬದುಕು ಜಟಕಾ ಬಂಡಿ. ನರೇಂದ್ರ ಶರ್ಮ ಅವರೇ ಅದರ ಸಾಹೇಬ.

ನಿಜ, ಇದು ಜೀ ಟಿವಿಯವರು ನರೇಂದ್ರ ಶರ್ಮ ವಿರುದ್ಧದ ಎದ್ದಿರುವ ಆಕ್ರೋಶವನ್ನು ತಣ್ಣಗಾಗಿಸಲು ನಡೆಸಿದ ಪ್ರಯತ್ನ. ನಮ್ಮ ಪ್ರಶ್ನೆಗಳಿಗೆ ನರೇಂದ್ರ ಶರ್ಮ ಅವರಿಂದಲೇ ಉತ್ತರ ಕೊಡಿಸಿ ತೇಪೆ ಹಚ್ಚುವ ಯತ್ನ. ಆದರೆ ಬದುಕು ಜಟಕಾ ಬಂಡಿ ನಡೆಸಿಕೊಡುವ ಮಾಳವಿಕಾ ಅವಿನಾಶ್ ನಾವು ಮಾಡಬೇಕು ಎಂದುಕೊಂಡಿದ್ದನ್ನು ತಾವೇ ಮಾಡಿದ್ದಾರೆ. ನರೇಂದ್ರ ಶರ್ಮ ಅವರನ್ನು ಇನ್ನಷ್ಟು ಎಕ್ಸ್‌ಪೋಸ್ ಮಾಡಿದ್ದಾರೆ. ನರೇಂದ್ರ ಶರ್ಮಾ ಮಾತುಗಳನ್ನು ಕೇಳಿ ಮಾಳವಿಕಾ ಎಷ್ಟೋ ಸಲ ಬೆಚ್ಚಿ ಬಿದ್ದರು, ಸಿಟ್ಟಿಗೆದ್ದರು, ಪರಮಾಶ್ಚರ್ಯದ ಉದ್ಘಾರ ಹೊರಡಿಸಿದರು, ಹತಾಶೆಯಿಂದ ಸುಮ್ಮನಾದರು. ಮಾಳವಿಕಾ ಕನ್ನಡದ ಒಬ್ಬ ಸಭ್ಯ, ಸುಸಂಸ್ಕೃತ ಹೆಣ್ಣುಮಗಳಾಗಿ ಪ್ರಶ್ನೆಗಳನ್ನು ಕೇಳಿದರು. ಕೆಲವು ಬಾರಿ ಅನುನಯದಿಂದ, ಮತ್ತೆ ಕೆಲವೊಮ್ಮೆ ಅನುಕಂಪದಿಂದ. ಉತ್ತರಗಳು ಮಾತ್ರ ದುರಹಂಕಾರದ್ದು, ಠೊಳ್ಳುತನದ್ದು, ವಿತಂಡವಾದದ್ದು...

ನಿನ್ನೆ ಈ ಸಂವಾದವನ್ನು ನೋಡಿದವರಿಗೆ ಈ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಯಾಕೆ ವಿರೋಧಿಸಲಾಗುತ್ತಿದೆ ಎಂಬುದು ಬಹಳ ಸ್ಪಷ್ಟವಾಗಿ ಅರ್ಥವಾಗಿರುತ್ತದೆ. ಹೀಗೆ ಅರ್ಥ ಮಾಡಿಸುವ ಕೆಲಸವನ್ನು ಮಾಳವಿಕಾ ತಮಗೇ ಗೊತ್ತಿಲ್ಲದಂತೆ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ.

ಇನ್ನು ಈ ಸಂವಾದದಲ್ಲಿ ನರೇಂದ್ರ ಶರ್ಮ ಹೇಳಿದ್ದೇನು? ಇಡೀ ಸಂವಾದದಲ್ಲಿ ನಾವು ಜೀ ಟಿವಿ ಮುಖ್ಯಸ್ಥರಿಗೆ ಬರೆದ ಬಹಿರಂಗ ಆಗ್ರಹ ಪತ್ರದ ಪ್ರಶ್ನೆಗಳನ್ನು ಯಥಾವತ್ತಾಗಿ ನರೇಂದ್ರ ಶರ್ಮ ಅವರಿಗೆ ಕೇಳಲಾಗುತ್ತಿತ್ತು. ಮಾಳವಿಕಾ ನಮ್ಮ ಪತ್ರದ ಒಂದು ಪ್ರತಿಯನ್ನು ಕೈಯಲ್ಲಿ ಇಟ್ಟುಕೊಂಡೇ ಕುಳಿತಿದ್ದರು. ನರೇಂದ್ರ ಶರ್ಮ ತನ್ನ ಮಾಮೂಲಿ ಉಡಾಫೆಯ ಶೈಲಿಯಲ್ಲೇ ಉತ್ತರಿಸುತ್ತಾ ಹೋದರು.

ಸಲ್ವಾರ್ ಕಮೀಜ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎಂದು ನಾನು ಹೇಳಿದ್ದು ನಿಜ. ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟ್, ಚೂಡಿದಾರ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ಈ ಡ್ರೆಸ್‌ಗಳನ್ನು ಹಾಕಿಕೊಂಡರೆ ಗಾಳಿಯಾಡೋದಿಲ್ಲ. ಕುಜ ಪ್ರಭಾವ ಬೀರೋದು ಗರ್ಭದ ಮೇಲೆ. ಹೀಗಾಗಿ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎಂದು ನರೇಂದ್ರ ಶರ್ಮ ಯಾವುದೇ ಭಿಡೆ ಇಲ್ಲದೆ ಹೇಳಿದರು.

ಇದರಿಂದ ಗಾಬರಿಗೊಂಡ ಮಾಳವಿಕಾ ನಾನು ೩೦ ವರ್ಷದಿಂದ ಚೂಡಿದಾರ್ ಹಾಕುತ್ತಾ ಬಂದಿದ್ದೇನೆ, ನನಗೆ ಕ್ಯಾನ್ಸರ್ ಬಂದಿಲ್ಲವಲ್ಲ? ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದರು.

ಯಾಕೆ ನೀವು ಮುಂಡೇವಾ ಇತ್ಯಾದಿಯಾಗಿ ಬೈಯುತ್ತೀರಾ, ಅಸಭ್ಯವಾಗಿ ಮಾತನಾಡುತ್ತೀರಾ ಎಂದು ಕೇಳಿದರೆ ನರೇಂದ್ರ ಶರ್ಮ ಅವರದು ಮಾಮೂಲಿ ಒರಟು ಉತ್ತರ. ಅದು ನನ್ನ ಶೈಲಿ, ನಾನು ಇರೋದೇ ಹೀಗೆ ಇತ್ಯಾದಿ. ನೀವು ಇದನ್ನೆಲ್ಲ ಮನೆಯಲ್ಲಿ ಇಟ್ಟುಕೊಳ್ಳಿ, ಸಾರ್ವಜನಿಕ ಟಿವಿ ಕಾರ್ಯಕ್ರಮಗಳಲ್ಲಿ ಹೀಗೆ ಮಾತನಾಡೋದು ಸರೀನಾ ಎನ್ನುತ್ತಾರೆ ಮಾಳವಿಕಾ. ಇಲ್ಲೂ ನಾನು ಹೀಗೇ ಮಾತಾಡೋದು ಎಂಬ ದುರಹಂಕಾರದ ಉತ್ತರ ಶರ್ಮಾ ಅವರದು. ನಿಮ್ಮ ಹತ್ರ ಬೈಸಿಕೊಳ್ಳೋಕೆ ನಮಗೇನು ಹಣೆಬರೆಹ ಎನ್ನುತ್ತಾರೆ ಮಾಳವಿಕಾ. ನೀವ್ಯಾಕೆ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡ್ಕೋತೀರಾ ಎಂದು ಮಾಳವಿಕಾ ಅವರನ್ನೇ ಗದರಿದರು ಸನ್ಮಾನ್ಯ ಶರ್ಮ ಅವರು.

ಸಾರ್ವಜನಿಕ ಜೀವನದಲ್ಲಿ ಕೆಲವು ಶಿಷ್ಟಾಚಾರಗಳನ್ನು ಪಾಲಿಸಬೇಕು. ನಮ್ಮ ಭಾಷೆಯ ಮೇಲೆ ಹತೋಟಿ ಇರಬೇಕು. ಅದು ಸಂಸ್ಕಾರವಲ್ಲವೇ ಎಂದು ಮಾಳವಿಕಾ ಪ್ರಶ್ನಿಸಿದರೆ ನರೇಂದ್ರ ಶರ್ಮ ಏನನ್ನೋ ಮಾತನಾಡಲು ಹೋಗಿ ಗೊಂದಲವೆಬ್ಬಿಸುತ್ತಾರೆ. ಸಹನೆಯಿಂದಲೇ ಮಾತನಾಡುತ್ತಿದ್ದ ಮಾಳವಿಕಾ ತಾಳ್ಮೆ ಕಳೆದುಕೊಂಡಹಾಗೆ ಕಾಣುತ್ತದೆ.

ತಾನು ಮದುವೆಯಾಗಿಲ್ಲ, ಆಗೋದು ಇಲ್ಲ. ಆದರೆ ಬ್ರಹ್ಮಾಚಾರಿಯಲ್ಲ ಎಂದು ನರೇಂದ್ರ ಶರ್ಮ ಹೇಳಿಕೊಳ್ಳುತ್ತಾರೆ. ಯಾಕೆ ಹೀಗೆ ಎಂದರೆ, ಚಿನ್ನದ ಪಂಜರ, ಹಕ್ಕಿ... ಇತ್ಯಾದಿ ಏನನ್ನೋ ಹೇಳಲು ಹೊರಡುತ್ತಾರೆ. ಇತರ ಧರ್ಮಗುರುಗಳನ್ನು ನಿಂದಿಸಲು ಆರಂಭಿಸುತ್ತಾರೆ. ಮಾಳವಿಕಾ ಅದಕ್ಕೆ ಅವಕಾಶ ನೀಡುವುದಿಲ್ಲ. ನಿಮ್ಮ ವಿಷಯ ಮಾತ್ರ ಹೇಳಿ, ಬೇರೆಯವರ ವಿಷಯ ಬೇಡ ಎಂದು ತಾಕೀತು ಮಾಡುತ್ತಾರೆ.

ಪ್ರಳಯವೆಲ್ಲ ನಡೆದು, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿಯುತ್ತದೆ ಎಂದು ನಾನೆಲ್ಲೂ ಹೇಳಿಲ್ಲ. ಉತ್ತರ ಭಾಗವೆಲ್ಲ ಮುಳುಗಿ ದಕ್ಷಿಣ ಮಾತ್ರ ಉಳಿಯುತ್ತದೆ ಎಂದು ಮಾತ್ರ ಹೇಳಿದ್ದೇನೆ ಎನ್ನುತ್ತಾರೆ ನರೇಂದ್ರ ಶರ್ಮ. ಆದರೆ ಬೆಳಗಾವಿಯ ಒಂದು ಹಳ್ಳಿ ದೇಶದ ರಾಜಧಾನಿಯಾಗುತ್ತದೆ ಎನ್ನುತ್ತಾರೆ. ಪ್ರಳಯ ನಿಜವಾಗಲೂ ಆಗುತ್ತಾ ಎಂದರೆ ಈಗ ಆಗ್ತಾ ಇರೋದು ಏನು? ಜಪಾನ್‌ನಲ್ಲಿ ಸುನಾಮಿ ಆಗುತ್ತೆ ಎಂದು ನಾನು ಹೇಳಿರಲಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಮಾಳವಿಕಾ ಸಾಕಷ್ಟು ಪ್ರತಿರೋಧದ ಪ್ರಶ್ನೆಗಳನ್ನು ಎಸೆಯುತ್ತಾರೆ. ಜಪಾನ್‌ನಲ್ಲಿ ಹಿಂದೆ ನೂರಾರು ಬಾರಿ ಭೂಕಂಪ ಆಗಿದೆ. ಸುನಾಮಿ ಕೂಡ ಆಗಿದೆ. ನೀವು ಹೇಳಿದ್ದಕ್ಕೆ ಆಗಬೇಕಿಲ್ಲ ಎಂದು ಹೇಳಿದರೂ ಶರ್ಮಾ ಒಪ್ಪುವುದಿಲ್ಲ.

ಸುನಾಮಿ ಅಂದ್ರೆ ಏನು, ಸ್ವಲ್ಪ ವೈಜ್ಞಾನಿಕವಾಗಿ ಹೇಳಿ ಎಂದರೆ ಮೊದಲು ಸುನಾಮಿಗೂ ಭೂಮಿಗೂ ಸಂಬಂಧವೇ ಇಲ್ಲ ಎನ್ನುತ್ತಾರೆ. ನಂತರ ಭೂಮಿ, ಪಾತಾಳ, ಪ್ಲೇಟು, ಸೂರ್ಯ ಕಿರಣ ಇತ್ಯಾದಿ ಏನನ್ನೋ ಹೇಳಿ ಮುಗಿಸುತ್ತಾರೆ. ಇದನ್ನು ಸೈನ್ಸ್ ಹೇಳುತ್ತಾ ಎಂದು ಮಾಳವಿಕಾ ಪ್ರಶ್ನಿಸಿದರೆ, ಸೈನ್ಸ್ ಯಾಕೆ, ನಾನು ಹೇಳ್ತೀನಿ ಎಂಬ ಉದ್ಧಟತನದ ಉತ್ತರ.

ನರೇಂದ್ರ ಶರ್ಮ ತನ್ನನ್ನು ತಾನು ಜ್ಯೋತಿಷಿ ಅಲ್ಲವೆಂದು ಈ ಕಾರ್ಯಕ್ರಮದಲ್ಲಿ ಘೋಷಿಸಿಕೊಂಡರು. ಬದಲಾಗಿ ಧರ್ಮದರ್ಶಿ ಎಂದು ಕರೆದುಕೊಂಡರು. ಅವರ ಪ್ರಕಾರ ಜ್ಯೋತಿಷ್ಯ ನಿಜ, ಜ್ಯೋತಿಷಿ ಸುಳ್ಳು. ಶಾಸ್ತ್ರ ನಿಜ, ಶಾಸ್ತ್ರಿ ಸುಳ್ಳು. ಅವರು ಆಲ್‌ರೌಂಡರ್ ಇದ್ದ ಹಾಗಂತೆ. ತನ್ನನ್ನು ತಾನು ಎಲ್ಲವನ್ನೂ ಬಲ್ಲವನು ಎಂದವರು ಘೋಷಿಸಿಕೊಂಡರು. ಎಂತೆಂಥ ದೊಡ್ಡ ದೊಡ್ಡ ಮಹಾತ್ಮರೂ ಸಹ ತಮ್ಮನ್ನು ತಾವು ಎಲ್ಲ ಬಲ್ಲವರು ಎಂದು ಹೇಳಿಕೊಳ್ಳಲಿಲ್ಲ, ಹಾಗೆ ಘೋಷಿಸಿಕೊಂಡ ಮೊದಲ ವ್ಯಕ್ತಿ ನೀವೇನೇ ಎಂದರು ಮಾಳವಿಕಾ. ನಾನು ದೇವರನ್ನು ನೋಡಿದ್ದೇನೆ ಎಂದು ಹೇಳಿಕೊಂಡರು ಶರ್ಮ. ಹೇಗಿದ್ದರು ದೇವರು ಎಂದರೆ ಮುದುಕಿ ರೂಪದಲ್ಲಿ, ಮಗುವಿನ ರೂಪದಲ್ಲಿ ಎಂಬ ಉತ್ತರ. ದೇವರ ಹಾಗೆ ಕಾಣಿಸೋದು ಬೇರೆ, ದೇವರನ್ನೇ ನೋಡೋದು ಬೇರೆ ಎಂದು ಮಾಳವಿಕಾ ಹೇಳಿದಾಗ, ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನೆ ಎಂದು ಹೇಳಿಕೊಂಡರು ಅವರು.

ಕಾರ್ಯಕ್ರಮದ ಮಧ್ಯೆ ಮಧ್ಯೆ ನರೇಂದ್ರ ಶರ್ಮ ಅವರ ಅನುಯಾಯಿಗಳಿಂದ ಪ್ರತ್ಯೇಕ ಬೈಟ್‌ಗಳು. ಗುರೂಜಿಯಿಂದ ನಮಗೆ ಒಳ್ಳೆಯದಾಗಿದೆ, ಅವರು ನಮ್ಮ ಬಾಳು ಬೆಳಗಿದರು ಇತ್ಯಾದಿ ಪರಾಕುಗಳು. ಕಡೆಗೆ ಮಾಳವಿಕಾ ಸಹ ಶರ್ಮಾ ಅವರನ್ನು ಅಭಿನಂದಿಸಿ ಕಾರ್ಯಕ್ರಮ ಮುಗಿಸುತ್ತಾರೆ.

ಕಡೆಯದಾಗಿ ನರೇಂದ್ರ ಶರ್ಮ, ತನ್ನ ವಿರುದ್ಧ ಟೀಕೆ ಮಾಡುವವರಿಗೆ ಉತ್ತರ ಹೇಳಲು ಯತ್ನಿಸುತ್ತಾರೆ. ನನ್ನಿಂದಲೂ ತಪ್ಪಾಗಿದ್ದರೆ, ಅದನ್ನು ಸರಿಯಾಗಿ ತನ್ನ ಗಮನಕ್ಕೆ ತಂದರೆ ತಿದ್ದಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ಹಿನ್ನೆಲೆ ಧ್ವನಿಯೊಂದು ಕೇಳಿಬರುತ್ತದೆ. ಅಂತರ್ಜಾಲದಲ್ಲಿ ಬೃಹತ್ ಬ್ರಹ್ಮಾಂಡ ಕುರಿತು ನಕಾರಾತ್ಮಾಕ ಆಂದೋಲನ ನಡೆಸುತ್ತಿರುವವರಿಗೆ ಈ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಲಾಗಿತ್ತು. ಯಾರೂ ಬರಲಿಲ್ಲ. ಆದರೂ ಗುರೂಜಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟರು... ಇತ್ಯಾದಿ ಹೇಳುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಏ.೨೭ರಂದು ಈ ಕಾರ್ಯಕ್ರಮದ ಚಿತ್ರೀಕರಣದ ಶೂಟಿಂಗ್ ನಡೆದಿದೆ. ಅಂದು ಮಧ್ಯಾಹ್ನ ೧ ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದು ಬೆಳಿಗ್ಗೆ ೧೧ ಗಂಟೆಗೆ. ಅದೂ ತಮ್ಮ ಪತ್ರದಲ್ಲಿ ಮೊಬೈಲ್ ನಂಬರ್ ದಾಖಲಿಸಿದ ಕೆಲವರಿಗೆ ಮಾತ್ರ. ಕೆಂಗೇರಿ ಬಳಿಯ ಸ್ಟುಡಿಯೋದಲ್ಲಿ ನಡೆದ ಈ ಚಿತ್ರೀಕರಣಕ್ಕೆ ಕನಿಷ್ಠ ಒಂದು ದಿನ ಮೊದಲು ತಿಳಿಸಬಹುದಿತ್ತಲ್ಲವೇ? ಈ ಸತ್ಯ ಗೊತ್ತಿದ್ದೂ ಆಹ್ವಾನ ಕೊಟ್ಟರೂ ಯಾರೂ ಬರಲಿಲ್ಲ ಎಂದು ಹೇಳುವ ಆತ್ಮವಂಚನೆ ಯಾಕೆ? (ಇದನ್ನು ನಾವು ಅಂದೇ ಫೇಸ್‌ಬುಕ್‌ನ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಗುಂಪಿನಲ್ಲಿ ಬರೆದಿದ್ದೆವು.)

ಜೀ ಟಿವಿ ಮುಖ್ಯಸ್ಥರಿಗೆ ಈಗ ಕೇಳಬೇಕಾದ ಹಲವು ಹೊಸ ಪ್ರಶ್ನೆಗಳಿವೆ:
೧. ನಿನ್ನೆ ನಡೆದ ಬದುಕು ಜಟಕಾ ಬಂಡಿ ಕಾರ್ಯಕ್ರಮದ ಹಕೀಕತ್ತೇನು? ಇದರ ನಿಜವಾದ ಉದ್ದೇಶವೇನು?
೨. ನಿನ್ನೆಯ ಕಾರ್ಯಕ್ರಮ ನರೇಂದ್ರ ಶರ್ಮ ಅವರ ಠೊಳ್ಳುತನ, ಬಾಯಿಹರುಕತನ ಇನ್ನಷ್ಟು ಸ್ಪಷ್ಟವಾಗಿ ಬಹಿರಂಗಗೊಳಿಸುತ್ತದೆ. ಇನ್ನಾದರೂ ಈ ಕಾರ್ಯಕ್ರಮ ನಿಲ್ಲಿಸಬಹುದಲ್ಲವೆ?
೩. ನರೇಂದ್ರ ಶರ್ಮ ಅವರಿಂದ ಈ ಬಗೆಯ ಉದ್ಧಟತನದ ಸ್ಪಷ್ಟನೆಗಳನ್ನು ಕೊಡಿಸಿದ ಮಾತ್ರಕ್ಕೆ ಈ ಕಾರ್ಯಕ್ರಮದಿಂದ ಆಗಿರುವ ಅನಾಹುತಗಳನ್ನು ಮರೆಯಬಹುದೇ?
೪. ಇಷ್ಟೆಲ್ಲ ಆದರೂ ಆತ ಜೀನ್ಸ್ ಪ್ಯಾಂಟ್, ಚೂಡಿದಾರ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎನ್ನುತ್ತಾರೆ. ಅದರರ್ಥ ಕರ್ನಾಟಕದ ಅರ್ಧಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಅಂದರೆ ಎರಡು ಕೋಟಿಯಷ್ಟು ಹೆಂಗಸರಿಗೆ, ದೇಶದ ೨೦-೩೦ ಕೋಟಿ ಹೆಣ್ಣುಮಕ್ಕಳಿಗೆ ಆ ಖಾಯಿಲೆ ಬರಬೇಕು. ಹೀಗೆಲ್ಲ ಹೇಳುವ ಅನಾಹುತಕಾರಿ ಏಡ್ಸ್ ರೋಗವನ್ನು ನಿಮ್ಮ ಜತೆ ಇನ್ನೆಷ್ಟು ದಿನ ಇಟ್ಟುಕೊಳ್ಳುತ್ತೀರಿ?

ಜೀ ಟಿವಿ ಮುಖ್ಯಸ್ಥರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಾರರು.

ಒಂದೇ ಒಂದು ಸವಾಲು. ನರೇಂದ್ರ ಶರ್ಮ ನಿನ್ನೆ ಹೇಳಿಕೊಂಡ ಅವರ ಶೈಕ್ಷಣಿಕ ಅರ್ಹತೆಗಳು ನಿಜವೇ. ಎಂಎಸ್‌ಸಿ, ಎಂಎ, ಎರಡು ಪಿಎಚ್‌ಡಿ. ಈ ಎಲ್ಲ ಅರ್ಹತೆಗಳನ್ನು ಆತ ಸಾಬೀತುಪಡಿಸಿದರೆ ನಾವು ಬ್ಲಾಗಿಂಗ್ ಮಾಡುವುದನ್ನೇ ಬಿಟ್ಟುಬಿಡುತ್ತೇವೆ. ಈ ಸವಾಲನ್ನು ನರೇಂದ್ರ ಶರ್ಮ ಸ್ವೀಕರಿಸುತ್ತಾರೆಯೇ?

ನಮ್ಮ ಹೋರಾಟ ಅರ್ಧಕ್ಕೆ ನಿಂತಿದೆ. ಸದ್ಯಕ್ಕಂತೂ ಮೂಗು ಹಿಡಿದು ಬಾಯಿ ಬಿಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ನರೇಂದ್ರ ಶರ್ಮ ತನ್ನ ಕಾರ್ಯಕ್ರಮದಲ್ಲಿ ಈ ಮೊದಲಿನಂತೆ ಮಾತನಾಡುತ್ತಿಲ್ಲ. ಮೇ.೬ನೇ ತಾರೀಕು ಜಗನ್ಮಾತೆ ಬರುತ್ತಾಳೆ. ನಾನೇ ಸ್ವಾಗತಿಸುತ್ತಿದ್ದೇನೆ ಎನ್ನುತ್ತಿದ್ದ ಶರ್ಮ ಆ ಬಗ್ಗೆ ಬಾಯಿಬಿಡುತ್ತಿಲ್ಲ. ಜಗನ್ಮಾತೆಯ ಫ್ಲೈಟ್ ಏನಾದ್ರು ಮಿಸ್ ಆಯ್ತಾ, ಗೊತ್ತಿಲ್ಲ. ಇತ್ತೀಚಿಗೆ ಪ್ರಳಯದ ಪ್ರಸ್ತಾಪವೂ ನಿಂತಿದೆ. ಬಾಯಿಬಡುಕತನವನ್ನು ಕಡಿಮೆ ಮಾಡಿ ಎಂದು ಜೀ ಟಿವಿಯವರು ತಾಕೀತು ಮಾಡಿರಬಹುದು.

ಇಷ್ಟು ಬದಲಾವಣೆಗೆ ಕ್ರಿಯಾಶೀಲ ಅಂತರ್ಜಾಲಿಗರು ಕಾರಣವಾಗಿರುವುದು ಒಂದು ಹೆಮ್ಮೆ. ಇದರಲ್ಲಿ ಸಂಪಾದಕೀಯದ ಪಾಲು ತೀರಾ ಕಡಿಮೆ. ಜೀವಪರವಾಗಿ ಯೋಚಿಸುವ ಸಾವಿರಾರು ಮನಸ್ಸುಗಳಿಗೆ ಒಂದು ವೇದಿಕೆಯಾಗಿ ನಾವಿದ್ದೇವಷ್ಟೆ. ಈ ಎಲ್ಲ ಮನಸ್ಸುಗಳಿಗೂ ಅಭಿನಂದನೆಗಳು, ಕೃತಜ್ಞತೆಗಳು.

ಹಾಗಂತ ಈ ಅಭಿಯಾನವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವ ಹೊಣೆಗಾರಿಕೆಯನ್ನು ನಾವು ಮರೆತಿಲ್ಲ. ಬಹುಶಃ ಇನ್ನಷ್ಟು ದೀರ್ಘವಾಗಬಹುದಾದ ಈ ಆಂದೋಲನದಲ್ಲಿ ನೀವು ಸದಾ ನಮ್ಮ ಜತೆಗಿರುತ್ತೀರಿ ಎಂಬ ನಂಬುಗೆ ಇದೆ.

ಇವತ್ತು ಮಧ್ಯಾಹ್ನ ೨-೩೦ಕ್ಕೆ ಬದುಕು ಜಟಕಾ ಬಂಡಿಯ ಮರುಪ್ರಸಾರ ಇದೆ. ನಿನ್ನೆ ನೋಡದೇ ಇರುವವರು ತಪ್ಪದೆ ನೋಡಿ, ನಿಮಗೇನನ್ನಿಸಿತು ಹೇಳಿ.

33 comments:

 1. Thu Intha kachada arrogant vykthi na nanu node illa :(

  U did a great job by making him naked :P

  ReplyDelete
 2. Obba daddananna ee thara melkurchige ,
  namma jana kudisirodu , idu modalalla bidi ,
  namma deshadalli , eethara janadavarannu support maadthirovru namma rajakiya pakshadavru , Media davru mattu namma moodha anna tammandiru ,

  Ivanige Bookampa andre enu anthane gottilla ,ivenenu pralaya da begge maatdthaane , non sense.

  Namma gurugalu "Dr H N Narasimhahih ( PhD in Physics) " avru helida haage Moodhyatheya paramavadhi namma deshadallide " , namma duradrustavasth adu innu ide .

  Eli eddeli , Moodhyatheya bittu banni ,
  "Kaayakave Kailasa" vendu tiliyiri ,
  Yaaro athava endu kaanada Devaro bandu nimma jeevanavannu badalisaru ,
  nimma jeevanavannu neeve badalisikollabeku . heege badalisikollabeku emba yochane bandare aaga nimmalli devariddanendu artha .

  Namma deshada Yuva jananga intaha karyakramagalige soppu haakadiruvudu ondu dodda khushi .

  ReplyDelete
 3. i think tv9 can do this .if they him call and others so we can blast him once again

  ReplyDelete
 4. ನೆನ್ನೆ ನಾನೂ ಈ ಕಾರ್ಯಕ್ರಮ ವೀಕ್ಷಿಸಿದೆ. ಇಷ್ಟು ದಿನ ಆ ಮನುಷ್ಯನ ಬಗ್ಗೆ ಕೇಳಿ, ಓದಿ , ಅವನ ಮೇಲೆ ಕೋಪ ಬಂದಿತ್ತು.
  ನೆನ್ನೆ ಕಣ್ಣಾರೆ ನೋಡಿದಮೇಲೆ ಆತನ ಬಗ್ಗೆ ಅಸಹ್ಯ ಉಂಟಾಗುತ್ತಿದೆ. ಇಷ್ಟಾದರೂ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರೂ ಅವನ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದುದ್ದು ವಿಪರ್ಯಾಸ.

  ಆತ ವಂಚಿಸುತ್ತಿರುವುದು ಒಬ್ಬಿಬ್ಬರನ್ನಲ್ಲ. ಇಡೀ ಸಮಾಜವನ್ನ. ಕೇವಲ ಒಂದು ಕಾರ್ಯಕ್ರಮದಲ್ಲಿ ಅವನ ಇಂಟರ್ವ್ಯೂ ಮಾಡಿ ಗೆದ್ದೆವು ಎಂದು Zee tv ತಿಳಿದುಕೊಳ್ಳುವುದು ಬೇಡ.
  ಅವನ ಕಾರ್ಯಕ್ರಮ ನಿಲ್ಲಿಸಿದ ದಿನವೇ ನಿಜವಾದ ಗೆಲುವು.

  -- ಮಾಳವಿಕ ಗಣೇಶ್

  ReplyDelete
 5. ಬಿಡುವಿಲ್ಲದ ನಿಮ್ಮ ಸಮಾಜಮುಖಿ ಕಾಳಜಿಗೆ ತುಂಬು ಹೃದಯದ ಧನ್ಯವಾದಗಳು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೇಗೆ ಮಾತನಾಡಬೇಕು ಅನ್ನೋ ಅಲ್ಪ ಶಿಷ್ಟಾಚಾರವು ಗೊತ್ತಿಲ್ಲದ ಮುಂಡೆದಕ್ಕೆ ದಿಕ್ಕಾರವಿರಲಿ, ಇಂತಹ ಸೋಗಲಾಡಿ ಮನಸುಗಳ ವಿಕೃತತೆಗಳನ್ನು ಕಟಿಣ ಶಬ್ದಗಳಲ್ಲಿ ತೆರೆದಿಟ್ಟ ಜೀ.ಟಿ.ವಿ. ವಾಹಿನಿಗೂ ಹಾಗೂ ಮಾಳವಿಕಾ ಅವಿನಾಶ್ ಅವರಿಗೂ ಧನ್ಯವಾದಗಳು.

  ReplyDelete
 6. ಅರೇ ಅರೇ ನಮ್ಮ ಕನ್ನಡ ಚಿತ್ರರಂಗಕ್ಕೆ ಈ ಸ್ವಾಮೀ ಮೇಲೆ ಇನ್ನೂ ಕಣ್ಣು ಬಿದ್ದಿಲ್ಲ.ಇಲ್ಲ ಅಂದ್ರೆ ಇವನನ್ನು ಹಾಕಿಕೊಂಡು ಒಂದು ಕಾಮಿಡಿ ಚಿತ್ರ ಮಾಡಬಹುದು.ಆ ದರಿದ್ರ Zee ಚಾನಲ್ ನ ಕನ್ನಡದಿಂದ ಕಿತ್ತೊಗೆಯದಿದ್ದರೆ ಅವರು ಇಡೀ ಸಮಾಜವನ್ನೇ ಮೌದ್ಯಕ್ಕೆ ತಳ್ಳುತ್ತಾರೆ....

  ReplyDelete
 7. ಆಕಸ್ಮಿಕವಾಗಿ ನಾನು ಈ ನರೇಂದ್ರಶರ್ಮ ಅವರ ಬದುಕಿನ ಜಟಕಾಬಂಡಿಯನ್ನು ನೋಡಿದೆ. ಮಾಳವಿಕ ತಮಗಿರುವ ಮಿತಿಯೊಳಗೆ ತುಂಬಾ ನೇರ ಮತ್ತು ನಿಷ್ಠುರವಾಗಿ ಕಾರ್ಯಕ್ರಮವನ್ನು ನಡೆಸಿದರು. ಶರ್ಮ ಮಾತನಾಡಿದ್ದನ್ನು ನೋಡಿದರೆ ಆತನೊಬ್ಬ ಶತ ಮೂರ್ಖ ಎನ್ನಲಡ್ಡಿಯಿಲ್ಲ. ನನಗಂತು ಆತ ಮಾತನಾಡುತ್ತಿದ್ದುದನ್ನು ನೋಡಿದರೆ ದೊಡ್ಡ ಜೋಕರ್ ಅನ್ನಿಸುತ್ತಿತ್ತು. ಆತನನ್ನು ದೇವದೂತನೆಂದು ಹೇಳುತ್ತಿರುವವರ ಮುಗ್ದತೆ ಕಂಡು ಅವರ ಬಗ್ಗೆ ಕನಿಕರ ಪಟ್ಟೆ. ಎಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂಬ ಅಹಮಿನ ಮಾತೆ ಅತನ ಅಜ್ಞಾನದ ಪರಮಾವದಿ. ಇಂತವನನ್ನು ಜೀಟಿವಿ ಅದ್ಯಾರ ಉದ್ಧಾರಕ್ಕೆ ಇಟ್ಟುಕೊಂಡಿದ್ದಾರೋ ತಿಳಿಯದು.ಮುಂದೊಂದು ದಿನ ಜೀಟಿವಿ ನೋಡುವವರಿಗೆ ಯಾವುದೇ ರೋಗ ಬರುವುದಿಲ್ಲ, ಪ್ರಳಯವೂ ಸಹ ಇವರನ್ನು ಅಲುಗಾಡಿಸಲಾರದು. ಬೇರೆ ಟೀವಿ ನೋಡುವವರು ಪ್ರಳಯಕ್ಕೆ ಸಿಲುಕುತ್ತಾರೆ ಎಂದು ಹೇಳಿದರೆ, ಜೀಟಿವಿ ಟಿ.ಆರ್.ಪಿ ಹೆಚ್ಚಾಗಬಹುದೆಂಬ ದೂರಾಲೋಚನೆ ಜೀಟಿವಿಯವರಿಗಿರಬಹುದೇನೋ. ಈತನ ವಿರುದ್ಧ ಸಂಪಾದಕೀಯದ ಜಾಗ್ರತಿ ಮೆಚ್ಚುವಂತದ್ದು.

  ReplyDelete
 8. ರೀ , ಅವನು Msc ,MA ,ಎರದೋ ಮೂರೋ PHD ಮಾಡಿರೋಕ್ಕೆ ಸಾದ್ಯವೇ ಇಲ್ಲ .ಅವನು ನಾನು 91 ನಲ್ಲಿ SSLC ಬರದಿದ್ದು .ನಾವಿಬ್ಬರು ಶೇಷಾದ್ರಿಪುರಂ high ಸ್ಕೂಲ್ ನಲ್ಲಿ ಓದಿದ್ದ್ದು .ನಾನು ಬೀ ಸೆಕ್ಷನ್ ನಲ್ಲಿ ಕನ್ನಡ 1st language ಓದಿದ್ದು ,ಅವನು e ಸೆಕ್ಷನ್ ನಲ್ಲಿ ಸಂಸ್ಕೃತ ಓದಿದ್ದ್ದು .ಅವನು ಆಗ ನವರಂಗ್ theatre ಹತ್ತಿರ ಇರೋ ಮರಿಯಪ್ಪನ ಪಾಳ್ಯ ದ ಜ್ಯೋತಿ bakery ಹತ್ತಿರ ಇದ್ದ , BTS ಬಸ್ ನಲ್ಲಿ footboard ಮೇಲೆ ನಿಂತ್ಕೊಂಡ್ ಹೋಗ್ತಾ ಇದ್ದೆವು ಶಾಲೆಗೇ .ಆಗಲು ಹಣೆಗೆ ಕುಂಕುಮ ,ವಿಭೂತಿ ಗಳನ್ನ ದಾರಾಳವಾಗಿ ಹಚ್ಕೊಂಡ್ ಬರ್ತಾ ಇದ್ದ .91 ನಲ್ಲಿ sslc ಮುಗಿಸಿದರು PUC ಮಾಡೋಕ್ಕೆ ೨ ವರ್ಷ ಬೆಕ್ ,ಆಮೇಲೆ ಡಿಗ್ರಿ ಮಾಡೋಕ್ಕೆ ೩ ವರ್ಷ ಬೇಕ್ , ಮಾಸ್ಟರ್ ಡಿಗ್ರಿ ಮಾಡೋಕ್ಕೆ ೨ ವರ್ಷ ಬೇಕು ,ಇನ್ನೊಂದ್ ಡಿಗ್ರಿ ಮಾಡೋಕ್ಕೆ ೨ ವರ್ಷ ಬೇಕು .PHD ಮಾಡೋಕ್ಕೆ ಕಡಿಮೆ ಅಂದ್ರು ಮೂರ್ ರಿಂದ ಐದು ವರ್ಷ ಬೇಕು .ಇಷ್ಟೆಲ್ಲಾ ಮಾಡೋವಷ್ಟು ಬುದ್ಧಿವಂತ ನಲ್ಲ ಅವನು ನಾನ್ ಕಂಡ ಹಾಗೆ . ಸೊ ವೃಥ ಚರ್ಚೆ ಅನಗತ್ಯ ಅಲ್ವ ಅವನ ವಿದ್ಯಾಬ್ಯಾಸಾದ ಬಗ್ಗೆ .

  ReplyDelete
 9. ಬದುಕು ಜಟಕಾ ಬಂಡಿ ಅನ್ನೋ ಕಾರ್ಯಕ್ರಮನ zee ನಲ್ಲಿ ಭಹುಶಹ ಇಂತಹದೆ ತೇಪೆ ಹಚ್ಚುವ ವಿಷಯಗಳಿಗೆ ಮೀಸಲಾಗಿ ಇಟ್ಟಿದ್ದಾರೆ ಅನ್ಸುತ್ತೆ. ನಿತ್ಯಾನಂದನ ಕಾಮ ಪ್ರಕರಣ ಅಡ್ಡಗಾಲು ಇದೆ ರೀತಿಯ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ರು ಮಾಳವಿಕ ಅವರು. ಆ ಕಾರ್ಯಕ್ರಮದಲ್ಲಿ ಹೇಳಿ ಬಿಟ್ರೆ ನಾವು ನಂಬಿ ಬಿಡ್ಬೇಕ...?

  ಆದ್ರೆ ಸಂಪಾದಕೀಯ ದವರು ಬಹಳ ತಪ್ಪು ಮಾಡಿದ್ರಿ ಮೊದಲೇ ಈ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಪ್ರಚಾರ ಕೊಡಬೇಕಿತ್ತು... ನರೇಂದ್ರ ಶರ್ಮ ಅವರ ವಿರುದ್ದದ ಕಾರ್ಯಕ್ರಮ ಕೂಡ ಇಷ್ಟು ತಿ ಅರ್ ಪಿ ತಂದು ಕೊಡುತ್ತೆ ಅಂದ್ರೆ ಅಂತಹದೇ ಕಾರ್ಯಕ್ರಮ ನ ಜಾಸ್ತಿ ಪ್ಲಾನ್ ಮಾಡೋಕೆ zee ನವರಿಗೆ ಅನುಕೂಲ ಆಗೋದು...

  ReplyDelete
 10. hmm he is an extraordinary idiot...............it is just Vittandavada that'll.............Z KAnnada said in the end that `ella prashnege uttara needi gurugalu shreshtate meredaru''' ha ha ha wht is the criteria of `Shrestate' according to the Z Kannada................
  to defend themselves channels will organise such programmes.........it is a response for our mails .......... `Kolu muribardu haavu saybardu' theory.............same happed in Suvarna Pyate hudgeer halli lifu too

  ReplyDelete
 11. hi idiots....

  Those who r watching such shows plz wake up...
  Bec such persons can not be GOD's SON.SO be practical and move on with ur lives

  ReplyDelete
 12. ಒಟ್ಟಾರೆ ಖಂಡಿತವಾಗಿಯೂ ಇಂತಹ ಅಸಂಬದ್ಧ ಕಾರ್ಯಕ್ರಮಗಳ ಪ್ರಸಾರಗಳನ್ನೇ ಪೂರ್ತಿ ನಿಲ್ಲಿಸುವಂತಾಗಬೇಕು. ಯಾರು ಅಲ್ಲದಿದ್ದರೂ ಬಹುತೇಕ ಗ್ರಾಮೀಣ ಜನರು ಇಂತಹ ಪೊಳ್ಳು ಜ್ಯೋತಿಷಿ ಗಳ ಮಾತಿಗೆ ಜೋತು ಬೀಳುತ್ತಾರೆ. ಜ್ಯೋತಿಷಿ ಎಂದುಹೇಳಿಕೊಳ್ಳುವವನು ಆದೇಶಿಸಿದ ಅಪ್ಪಣೆಯನ್ನು ಶಿರಸಾ ವಹಿಸಿಕೊಂಡು ಪಾಲಿಸುತ್ತಾರೆ. ಅದು ಸತ್ಯನಾ, ಸುಳ್ಳಾ, ಮೋಸನಾ ಎಂಬುದನ್ನು ಸತ್ಯದ ಜನರಾದ ಅವರು ಸೋಸಿನೋಡಲು ಹೋಗುವುದಿಲ್ಲ. ಮೊತ್ತದಲ್ಲಿ ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿಯೂ ಬಳಲುವುದು ಸಾಮಾನ್ಯ ಟಿವಿ ವೀಕ್ಷಕ. ಇಂತಹ ಪೊಳ್ಳು ಬಾಯಿಬಡಕರುಗಳನ್ನು ಯಾವುದೇ ಜನಪರ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತಡೆಒಡ್ಡಲು ಏನಾದರೂ ಔಷಧ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ...ಧರ್ಮಕೂಡಾ.

  ReplyDelete
 13. devare zee TV yavarigenu roga antini.. anta show maado manushyana innodu shownalli promote maadtiddarralla..

  Aa kapta jyothishi baduku elliri jataka bandi.. AC caralli kutgondu tindu tegi..odankondidane...

  First of all Malavika avaru ee show maadlikke oppale baardaagittu....

  Dear Malavika - if you see this post, please understand, from your persona and talent ppl expect much better shows,better TV art, better creative work...

  You really dont have to make these kind of shows..

  I would rather suggest you from your carrier front - do get involved in some Comedy and light hearted shows... rather serious sober nonsense shows... dont be streotyped..Thanks

  Hagu smapadkiya avaare..Ondue Correction - Dharmdarshi anno pada tumaba doddavarige balasuttare... Ede TV avaru " param hansa" Nityananda anta suru ittgondiddvue..

  Ellarigu gottu - " Paramhansa" anta yaarige kareyodu, mattu avarobrige haage kareyabahdu....

  ReplyDelete
 14. ನಾನು ಕೂಡ ನಿನ್ನೆ ರಾತ್ರಿ ಈ ಕಾರ್ಯಕ್ರಮವನ್ನು ನೋಡಿದೆ. ನಾವು ಮಾಡಿದ್ದ ದೂರನ್ನು ನೇರವಾಗಿ ಮಾಳವಿಕ ಅವಿನಾಶ್‍ರವರು ನಮ್ಮ ಪರವಾಗಿ ಕೇಳುತ್ತಿದ್ದುದ್ದು ನೋಡಿ ಖುಷಿಯಾಗಿತ್ತು. ಜೊತೆಗೆ ಈತ ಆ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಾಗದೆ ಮೊಂಡುವಾದವನ್ನು ಮಂಡಿಸುತ್ತಿದ್ದುದ್ದು ಕಂಡು ಆತನ ಮೇಲೆ ಕೋಪ ಬಂದಿತ್ತು. ಅದಕ್ಕಿಂತ ಇವನ ಮೌಡ್ಯವನ್ನು ನಂಬಿದ ಜನರನ್ನು ಕಂಡು ಬೇಸರವೂ ಉಂಟಾಗಿತ್ತು. ಝೀ ವಾಹಿನಿಯವರು ಇದನ್ನು ವ್ಯವಸ್ಥಿತವಾಗಿ ಮಾಡಿರುವುದು ಎದ್ದು ಕಾಣುತ್ತದೆ. ಇಂಥ ಶತಮೂರ್ಖನನ್ನು ತೋರಿಸುವ ಈ ವಾಹಿನಿಯವರು ಕೂಡ ಅದಕ್ಕಿಂತ ದೊಡ್ಡ ಮೂರ್ಖರು ಎನ್ನಿಸುತ್ತದೆ.

  ReplyDelete
 15. I THINK ITS PURELY PREPLANNED SHOW

  ReplyDelete
 16. well said,,, nanu athananna prathama baarige tv yalli nodidagle athanobba kapati endu gottagittu, ittechege suvarna channel jyothishi gala kapatathana bayalu madittu aa nittinalli nimma prayathna shlaghneeya,, inthvrannu samajadinda bahishkarisabeku,,,,,,

  ReplyDelete
 17. ನೆನ್ನೆ ನಾನು ಸಾಧ್ಯವಾದಷ್ಟು ವೀಡಿಯೊ ಚಿತ್ರೀಕರಣ ಮಾಡಿದೆ ಕಡೆಗೆ ಕ್ಯಾಮರಾ ಬ್ಯಾಟರಿ ಕ್ಯೆಕೊಟ್ಟಿತು. ಈ ಲಿಂಕ್ ನೋಡಿ : http://www.facebook.com/video/video.php?v=1715200008280&comments

  ReplyDelete
 18. Besagarahalli NandaMay 11, 2011 at 8:33 AM

  Inthavana program nadesikodo Zee TV swalpa yochne maadi adanna nillisa beku.
  Nanage ella gothu anthane.
  Japan sunaami aguthe antha naanu helidakke ayithu anthane.
  Naanu devaranna nodidini anthane.
  swalpa sariyaagi mathadu andre -- Hutida guna suttidaru hogolla naanu hinge maathadodu anthane.
  En idu naavu elliddivi ithavara program nodade irohaage namma maneyavaru , relatives, friends ellarigu helbeku.
  TRP kammiyaadaga Avare nillisthare.

  ReplyDelete
 19. thumba chennagide... brahat bramanda karyakrama nillabeku.. alliya varege horata nadiyale beku.

  ReplyDelete
 20. Well, I had commented about the 'Baduku Jataka Bandi' program in my previous post to sampadakeeya. I am not talking about Mr.Narendra Sharma's Interview by Mrs.Malavika but so many other episodes where the anchor of the program will be quietly watching the two parties to the program scolding each other by using bad words and sometimes fighting each other by throwing shoes and chappals. Many times I feel that the anchor motivates one of the parties and which leads to this sought of situation. Most of the problems which the anchor tries to counsel are family problems and as per my knowledge these counseling should be an In house proceedings but not in front of the camera. The participants in this program will be normally poor and uneducated people. I think it is the high time to stop this sought of bad tasted programs in the name of TRP. I have a great regards to the anchor of this program, but I think if she really wants to do justice and to sort out some family related problems let her do it privately instead of bringing those problems in front of the camera, and with anchor’s charm and knowledge I think some problems will definitely get sorted out.

  ReplyDelete
 21. but now a days suvarna channel is also telecasting the old programmes of narendra sharma, y i dont know.

  good work sampadakeeya, but i think the show was preplanned,

  in thatskannada also they have said to an article that, they invited all but No one were intrested to come.

  ReplyDelete
 22. @ಸಂಪಾದಕೀಯ,
  ತಾವು ನಿಮಿತ್ತವಾಗಿ ಆರಂಭಿಸಿದ ಕಪಟಜ್ಯೋತಿಷಿ ವಿರುದ್ದದ ಆಂಧೋಲನಕ್ಕೆ ಉತ್ತರಿಸುವ ಧಾಟಿಯಲ್ಲಿ ಝೀ ಕನ್ನಡದವರು ಕಾರ್ಯಕ್ರಮ ಮಾಡಿದ್ದಾರೆ. ಮಾಳವಿಕ ನಮ್ಮ ಪ್ರಶ್ನೆಗಳನ್ನು ಕೇಳುವ ಮೂಲಕ ನಮ್ಮ ಪರ ವಹಿಸಿದ್ದರು ಎಂಬ ಭಾವನೆ ಬೇಕಿಲ್ಲ, ಆಕೆಯದ್ದು ಕಾಲ್ ಶೀಟ್ ಸಂವಾದ,ಸಂಪಾದಕೀಯದ ಆಂಧೋಲನಕ್ಕೆ ಉತ್ತರಿಸುವ ಕ್ರಿಯೆಗೆ ಅವರ ಬಳಕೆಯಾಗಿದೆ ಅಷ್ಟೇ. ಇನ್ನೂ ಈ ನರೇಂದ್ರ ಶರ್ಮನ ಮಾತುಗಳು, ವಿಚಾರಧಾರೆಗಳು ಮೌಡ್ಯವನ್ನೇ ಹೊತ್ತುಕೊಂಡಿರುವ ಜನರಿಗೆ ಸರಿ ಇರಬಹುದೇನೋ, ಒಂದು ಬದಲಾವಣೆಯನ್ನು ತಕ್ಷಣ ನಿರೀಕ್ಷಿಸಲು ಸಾಧ್ಯವಿಲ್ಲ,ಇಂಥ ಅರ್ಥಹೀನ ಕಾರ್ಯಕ್ರಮಗಳಿಗೆ, ಕಪಟ ಜ್ಯೋತಿಷಿಗಳಿಗೆ ಕಡಿವಾಣ ಹಾಕಲು 'ಸಮಯ'ವಿದೆ ಬದಲಾವಣೆಗೆ ಕಾಯುವಿಕೆಯೂ ಮಹತ್ವದ್ದೇ ಅಲ್ಲವೇ??????ದ

  ReplyDelete
 23. ಚಿನ್ನಪ್ಪMay 11, 2011 at 10:21 PM

  ಜನರ ದಿಕ್ಕನ್ನು ತಪ್ಪಿಸುತ್ತ ತನ್ನ ಪ್ರಚಾರ ಗಿಟ್ಟಿಸಿಕೊಳ್ಳುವುದೇ ಆಗಿದೆ ನರೇಂದ್ರ ಬಾಬು ಶರ್ಮನ ಈ ತಂತ್ರ. ಟಿ.ವಿ.ಮಾಧ್ಯಮದವರ ಪಾಲೂ ಸಾಕಷ್ಟಿದೆ. ಏನೇ ಆಗಲಿ ನಮ್ಮ ವಿಚಾರ ವಂತರು ಎಚ್ಚೆತ್ತುಕೊಳ್ಳಬೇಕು. ಹೆಚ್ಚು ಬೆಳೆಯಲು ಬಿಡದೆ ಒಕಕೊರಲಿನಿಂದ ಖಂಡಿಸಲೇ ಬೇಕು.

  ReplyDelete
 24. Here is the youtube link to 'baduku jataka bandi' with narendra sharma.
  http://www.youtube.com/user/zeekannada#p/u/16/S5jvL-zuYmU

  ReplyDelete
 25. No Jyotishya has ever taken my challenge of predicting from ten date, time and place of birth whether a person is dead or alive, male or female with90% accuracy. Every time some one says they will take it up they will run away!So much for these charlatans.

  ReplyDelete
 26. Naanu e program na record maadi avaru mathadida onondu pada/vakyakku reply koduva avaru namma janarannu muttalarannu maduva bagge bareyabekendiddhe.. nimma blog aa kelasa madidhe.. nimge dhanyavadagalu.

  nam jana yak istu mugdharoooo :(

  ReplyDelete
 27. Superb!!!

  Nanu hodavarusha Bangalorenalli iddaga.. eee manushyana ondu episode nodi asahya ayithu... gotilla bere yaaradru nodidra ilwa antha.. pitrupaksha episode... Ayiyooooo.... horrible... Lagamyeeee illade mathadthane iva....
  Hats off to all those who have started this... I don't knw if Mrs. Malavika is opposing or not... but an awesome effort to peel off the mask... Please continue this..... I am sure it will come off sooner or later

  Many of us don't even know that there is a group who is against this sick man... I will definitely publicize from my end...

  Great going guys... I will definitely support..

  ReplyDelete
 28. Great post. Keep slapping such people who keep disturbing the society just to make their living. Its high time to bring the revolution in our society

  ReplyDelete
 29. ಚೂಡಿದಾರ್ ಹಾಕುವವರಿಗೆ ಕ್ಯಾನ್ಸರ್ ಬರುವುದಿದ್ದರೆ ವಿದೇಶದಲ್ಲಿರುವ ಮಹಿಳೆಯರ ಪಾಡೇನು ಪಾಪ.ನಿತ್ಯ ಪ್ಯಾಂಟು ಹಾಕುವ ಅವರಿಗೆ ಈ ರೋಗ ಬರಲೇ ಬೇಕಲ್ಲ

  ReplyDelete
 30. guys.. if you really have problem with the guruji.. stop watchin his program, allow othes to watch bcoz we like what he teaches and preaches. guruji opted tv as a media to spread the good things and the truth. people appreciated and they liked.. the TRP went high and channels made money.. and also channel also got recognised.
  its like you need a ladder to climb up and later kick the ladder back..
  i have personall heard lot of other guruji's in India, calling themselves as god's child, that time no body commented.. now what are you'll talking.
  has anybody forced you'll to hear and watch guruji program.
  there is a saying in kannada "madadavara pappa, aada-davara baalalli"
  reflect on your Conscious and move ahead in life.
  learn to appreciate the good things yaar.. this will come back to you'll as well.

  ReplyDelete
 31. guys.. one request.. if you cant apprecite and talk positive about anyone, dont talk negative at least. no body in this world is innocent and will not get cheated so easily.
  lets use such media to spread awarness knowledge and many more..

  ReplyDelete
 32. "Guruji ?? " :-O Oh God..

  " ತನತನಗೆ ಕುಳ್ಳಿರ್ದು, ಮನಸಿಗೆ ಬಂದಂತೆ ಘನಲಿಂಗವಾರ್ತೆಯ ಗಳಹುತಿಪ್ಪರು ನೋಡಾ !
  ಗುರುಕಾರುಣ್ಯವ ಪಡೆಯದೆ, ಸ್ವರಬಿಂದುಗಳ ತಡೆಯದೆ,
  ಹರನ ಶರಣರ ಮುಂದೆ ಹಿರಿದು ಮಾತನಾಡುತ್ತಿದ್ದರು ನೋಡಾ !
  ಇರಿಯದೆ ಮೆರೆವರು; ಅರಿಯದೆ ಉಲಿವರು
  ಕೂಡಲ ಚೆನ್ನಸಂಗಯ್ಯನಲ್ಲಿ ಜನಜಂಗುಳಿಗಳು !"

  ಎಂದು ಚೆನ್ನಬಸವಣ್ಣ ನೊಂದು ನುಡಿದ್ದಾನೆ. ಜನಜಂಗುಳಿ ಅರಿಯದೆ ಪರಮಾತ್ಮನ ವಿಷಯವನ್ನು ಉಲಿಯುತ್ತಲಿದ್ದಿತು. ಭಕ್ತಿಯಂಬುದು ಅನುಭವದ ವಿಷಯ. ಅದನ್ನು ಅರಿತು ಆಚರಿಸಬೇಕು. ಅದು ಗರಗಸದಂತೆ, ಬಾಯಿಬ್ರಹ್ಮರಿಗೆ ನಿಲುಕಲಾರದು ಅದು ಎಂಬುದು ಚೆನ್ನಬಸವಣ್ಣನ ನಿಲುವು.

  " ಅರಿಯದ ಗುರು ಅರಿಯದ ಶಿಷ್ಯಂಗೆ
  ಅನುಗ್ರಹವ ಮಾಡಿದಡೇನಪ್ಪುದೆಲವೋ?
  ಅಂಧಕನ ಕೈ ಅಂಧಕ ಹಿಡಿದಂತೆ
  ಮುಂದೇನಪ್ಪುದು ಹೇಳೆಲೆ ಮರುಳೆ?
  ಬರುಮಾತಿನ ರಂಜನೆಯನಾಡದಿರು
  ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಹುಸಿಯ ಹಸರದವನಲ್ಲ."

  ಮರುಳಾಗ್ಯತಿ ಜಂಗಮನ ನಾರಿಗೆ..

  ReplyDelete
 33. Please watch the interview here... there are two parts and just follow the link

  http://www.youtube.com/watch?v=oq5MugdqYEg

  ReplyDelete