Wednesday, May 18, 2011

ಈ ಲೋಕೇಶನಿಗೆ ನ್ಯಾಯ ಕೊಡಿಸುವಿರಾ ಮಂತ್ರಿ ಮಹೋದಯರೇ?


ಇದು ಒಬ್ಬ ಲೋಕೇಶನ ಕಥೆಯಲ್ಲ. ಇಂಥ ಲಕ್ಷಾಂತರ ಲೋಕೇಶ್‌ಗಳು ಕರ್ನಾಟಕದಾದ್ಯಂತ ಇದ್ದಾರೆ. ಸದ್ಯಕ್ಕೆ ಕುರ್ಚಿ ಉಳಿಸಿಕೊಳ್ಳುವ ಕಾರ್ಯದಲ್ಲಿ ಬಿಜಿಯಾಗಿರುವ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಸರ್ಕಾರ ಕೆಡವಲು ತುದಿಗಾಲಲ್ಲಿ ನಿಂತಿರುವ ವಿರೋಧಪಕ್ಷದ ನಾಯಕರುಗಳು ಕನಿಷ್ಠ ಈ ಒಬ್ಬ ಲೋಕೇಶನಿಗಾದರೂ ನ್ಯಾಯ ದೊರಕಿಸಿಕೊಡುವರೆ? ಮಾಸ್ಟರ್ ಕಿಶನ್‌ಗಾಗಿ ನಿಯಮಗಳನ್ನು ಸಡಿಲಿಸಬಲ್ಲವರು, ಈ ಅಸಹಾಯಕ ಜನರಿಗೆ ಜಾತಿ ಸರ್ಟಿಫಿಕೇಟ್, ಇತ್ಯಾದಿಗಳಿಗಾಗಿ ಪೀಡಿಸುವುದನ್ನು ನಿಲ್ಲಿಸುತ್ತಾರಾ? ಇದ್ಯಾವುದೂ ಸಾಧ್ಯವಾಗದಿದ್ದರೆ ಬಡವರಿಗೆ ಈ ದೇಶದಲ್ಲಿ ಬದುಕುವ ಹಕ್ಕು ಇಲ್ಲ ಎಂದು ಘೋಷಿಸುವ ಮೂಲಕ ಕಠೋರವಾಸ್ತವವನ್ನು ಒಪ್ಪಿಕೊಳ್ಳಲು ಇವರು ಸಿದ್ಧರಿದ್ದಾರೆಯೇ?

ನಮ್ಮ ಮೀಡಿಯಾಗಳಲ್ಲಿ ನಿಜವಾಗಿಯೂ ಪ್ರಧಾನ ಆದ್ಯತೆಯ ವರದಿಯಾಗಬೇಕಿದ್ದ ಇದು ಯೂ ಟ್ಯೂಬ್‌ನಲ್ಲಿ ಕಾಣಿಸಿಕೊಂಡಿದೆ. ಈ ಮನಕಲಕುವ ಕಿರುಚಿತ್ರ ನಿರ್ಮಿಸಿದವರಿಗೆ ಒಂದು ಥ್ಯಾಂಕ್ಸ್. ಚಿತ್ರವೇ ಎಲ್ಲವನ್ನೂ ಹೇಳುತ್ತಿದೆ. ನಿಮ್ಮ ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.

16 comments:

 1. @Sampadakiya,
  Namma mediagalige sadhyakke sarkarada bhavishyada chinte. Bere vishayagalatta gamana harisalu purusottu illa.

  ReplyDelete
 2. CONCERN : Now this video will go viral in internet

  I am worried about boys safety Considering Boys safety !! :( .. and since i know the place and racial predicaments and aggressive mind set in that place

  Sampadakeeya - now you have greater resposiblity..

  ReplyDelete
 3. @ಸಂಪಾದಕೀಯ, ಇದು ಸಂವೇದನೆಗೆ ಸಂಬಂಧಪಟ್ಟ ವಿಷಯ.. ಆದ್ಯತೆ ಸಿಗಬೇಕಾದ ಸುದ್ದಿ ಆದರೆ ವರದಿಗಾರನಿಗೆ ಒಂದು ವೇಳೆ ಇಂತಹ ಸುದ್ದಿಗಳ ಸಂವೇದನೆಯಿದ್ದರೂ ಡೆಸ್ಕ್ ನಲ್ಲಿ ಕುಳಿತ ದಂಡಪಿಂಡಗಳಿಗೆ ಸುದ್ದಿಯ ಪ್ರಾಧಾನ್ಯತೆ ತಿಳಿಯುವುದಿಲ್ಲ. ಮಹತ್ವದ ವಿಚಾರಗಳು ಎಷ್ಟೋ ವೇಳೆ ವರದಿಗಾರ/ಡೆಸ್ಕ್ ನೋಡಿಕೊಳ್ಳುವ ಚೀಫ್ ಅಜ್ಞಾನದಿಂದ ಮಿಸ್ ಆಗುತ್ತವೆ. ಅಂತಹ ಸುದ್ದಿಗಳಲ್ಲಿ ಈ ಲೋಕೇಶನ ವಿಚಾರವೂ ಒಂದು ಆಗಬಹುದು. ಒಂದು ಮಾನವೀಯ ಕಳಕಳೀಯ ದೃಶ್ಯ ವರದಿ ಗಮನಕ್ಕೆ ತಂದುದಕ್ಕೆ ಹ್ಯಾಟ್ಸ್ ಆಫ್.

  ReplyDelete
 4. First, what i would like to suggest you people is to make some alternative arrangements to the boy: Lokesh. He terriblly needs some moral, financial and other such assistances. U extend it by making some campaign in the blog. Dont let it go in vain by just making an all-out effort into just making an eye-opener to the media.
  Secondly, do something and do a great campaign in other popular media. refer this to columnists, electronic media persons for you people might have known all these working persons. Then it will gain a momentum. please do convey us moreover, you give us the account number of the boy there by make us to stand by lokesh. There are lot more Lords to help Mr Kishan because by that they can gain more attention. not extending the same to Lokesh.

  ReplyDelete
 5. ಇಲ್ಲಿ ಕಿಶನ್ನ ವಿಷಯ ಎಳೆದು ತರುವ ಅಗತ್ಯವಿರಲ್ಲಿಲ್ಲ. ಲೋಕೆಶನಿಂದ ಕಿತ್ತು ಕಿಶನ್ಗೆ ಕೊಟ್ಟಿದ್ದಲ್ಲ, ಮೇಲಾಗಿ ಕಿಶನ್ಗೆ ಕೊಟ್ಟಿದ್ದನ್ನು ಕಿತ್ತುಕೊಂಡು ಲೋಕೆಶನಿಗೆ ಕೊಡಬೇಕಾದ ಅಗತ್ಯವಿಲ್ಲವಷ್ಟೇ? ಲೋಕೆಶನಿಗೂ ವಿದ್ಯೆ-ಸವಲತ್ತುಗಳು ಲೋಕೇಶ ಮತ್ತು ಕಿಶನ್ ಇಬ್ಬರಿಗೂ ಸಿಗಬೇಕಾಗಿದ್ದು ನ್ಯಾಯೋಚಿತವಷ್ಟೇ? ಲೋಕೆಶನಂತಹ ಉದಾಹರಣೆಗಳಿಗೆ ವಿದ್ಯೆ ನೀಡಬೇಕಾದುದು ನ್ಯಾಯಯುತವಾಗಿ ನಮ್ಮ ಧರ್ಮ. ಅದು ಆಗದಿರುವುದು ನಮ್ಮ ಕರ್ಮ. ಬಿಡಿ, ಎಷ್ಟಂದರೂ ಈ ಬ್ರಹ್ಮಾಂಡದಲ್ಲಿ ಬಡವರಾಗಿ ಹುಟ್ಟುವುದು ನಮ್ಮ ಪೂರ್ವಜನ್ಮದ ಮಹಾಪಾಪವಲ್ಲವೇ!! ವಿಡಿಯೋ ನಿರ್ಮಿಸಿದವರಿಗೆ ಧನ್ಯವಾದಗಳು.ಸಂಫಾಧಖೀಯ ಈತರಹದ ಸಕಾರಾತ್ಮಕ ವಿಷಯಗಳಿಗೂ ಎ-ಮೇಲ್ ಅಭಿಯಾನ ನಡೆಸಲಿ, ತನ್ಮೂಲಕ ನಿರಾಕರಿಸಲ್ಪಟ್ಟ ನ್ಯಾಯ ಸಕಾಲದಲ್ಲೇ ದೊರೆಯುವಂತಾಗಲಿ.

  ReplyDelete
 6. media ge sarkarada chinte, sarkardallirorige kurchi chinte.... bada makkalu beedige bidru yochne illa.... kishan ge kotta relaxation media inda prachara togolakke ade lokesh ge cycle kotre sigutta aa prachara ??????????

  ReplyDelete
 7. ಮಾತು ಹೊರಡುತ್ತಿಲ್ಲ...ಮಾತನಾಡಿದರೂ ಏನಂಥ ಮಾತನಾಡುವುದು ? ದೂಷಿಸುವುದಾದರೂ ಯಾರನ್ನ? ರಕ್ತ ಹೀರುವ ಇಂಥ ವ್ಯವಸ್ಥೆಯ ಭಾಗವಾಗಿ, ಬಹುಪಾಲು ರಾಜಿಯಾಗಿ ಬದುಕುತ್ತಿರುವ ನನ್ನಂಥವರ ಮುಖದ ಮೇಲೆ ಹೊಡೆದಂತಿದೆ ಈ ವೀಡಿಯೋ. ರಾಜ್ಯದ ಅತ್ಯಂತ ಹೇಸಿಗೆ ಮುಖ್ಯಮಂತ್ರಿಯನ್ನು ನೀಡಿದ, ಅದೆಷ್ಟೇ ರೋಗಗ್ರಸ್ಥವಾಗಿದ್ದರೂ ಬಿಜೆಪಿಗೆ ಬೆಂಬಲವಾಗಿ ನಿಂತಿರುವ ಸಮುದಾಯಕ್ಕೆ ಸೇರಿದ ನನಗೀಗ ಲೋಕೇಶನಲ್ಲಿ ಕ್ಷಮೆ ಕೇಳುವ ಅರ್ಹತೆಯೂ ಇಲ್ಲ ಎನಿಸುತ್ತಿದೆ. ಈ ವ್ಯವಸ್ಥೆಯ ರಥದ ಚಕ್ರಕ್ಕೆ ಸಿಲುಕಿ ಇನ್ನೆಷ್ಟು ಚಿಗುರು ಜೀವಗಳು ಬಲಿಯಾಗಬೇಕಾಗಿವೆಯೋ?

  ಆರುಣ್‌ ಕಾಸರಗುಪ್ಪೆ.

  ReplyDelete
 8. ಅರುಣ್.. ನೀವು ಅನುಭವಿಸುತ್ತಿರುವ ವೇದನೆ ಹೃದಯಕ್ಕೆ ಸಂಬಂಧಿಸಿದ್ದು.. ಬಿಜೆಪಿಯ ರೋಗ ನಿಮಗೆ ಅರ್ಥವಾದಷ್ಟು ಅದೆಷ್ಟೋ ಮನಸ್ಸುಗಳಿಗೆ ಅರ್ಥವಾಗುತ್ತಿಲ್ಲ. ಹೌದು.. ಲೋಕೇಶನ ಸ್ಥಿತಿಗೆ ನಾವೇ ಹೊಣೆಗಾರರು.. ಕ್ಷಮೆ ಕೇಳುವುದರಿಂದ ಪ್ರಯೋಜನವಿಲ್ಲ; ಬದಲಾಗಿ ಆ ಚಿಗುರು ಜೀವಗಳನ್ನು ಉಳಿಸಿಕೊಳ್ಳಲು ಟೊಂಕಕಟ್ಟಿ ನಿಲ್ಲುವ ಅನಿವಾರ್ಯತೆ ನಮ್ಮೆಲ್ಲರೆದುರಿಗಿದೆ.

  ReplyDelete
 9. ಇದರಲ್ಲಿ ಕಿಶನ್ ನನ್ನು ದೂಷಿಸಿಲ್ಲ. ಆದರೆ ನಮ್ಮ ಶ್ರೀಮಂತರ ಪರವಾದ ವ್ಯವಸ್ಥೆಯ ಹಾಗೂ ಮಂತ್ರಿಗಳ ಹಿಪಾಕ್ರಸಿಯನ್ನು ತಿಳಿಸಲು ಕಿಶನ್ ವಿಷಯದಲ್ಲಿ ಅವರು ತೆಗೆದುಕೊಂಡ ಿನಿಷಿಯೇಟಿವ್ ನ್ನು ಹೋಲಿಸಿರೋದು ಸರಿಯಾಗೇ ಇದೆ. ಲೋಕೇಶ್ ಮಾತ್ರ ವಲ್ಲ ಅದೇ ಸ್ಥತಿಯಲ್ಲಿರುವ ನೂರಾರು ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರ ನೋವೂ ಇದರಲ್ಲಿ ಬಿಂಬಿತವಾಗಿದೆ.. ನೋಡುವಾಗ ಬಹಳ ಹಿಂಸೆಯಾಯ್ತು.. ನಮ್ಮನ್ನೂ ಸೇರಿಸಿಕೊಂಡ ೀ ವ್ಯವಸ್ಥೆಯ ಮೇಲೆ ಸಿಟ್ಟೂ ಬರ್ತಿದೆ... ಈ ವಿಡಿಯೋ ತಯಾರಸಿಸಿರುವವರು ನಿಜಕ್ಕೂ ಅಭಿನಂದನಾರ್ಹರು...ಸಂಪಾದಕೀಯ ಕೂಡಾ ಇದನ್ನು ಪ್ರಕಟಿಸಿದ್ದಕ್ಕೆ ಥ್ಯಾಂಕ್ಸ್..
  ಹರ್ಷ ಕುಗ್ವೆ

  ReplyDelete
 10. ಇದನ್ನು ಮಾದ್ಯಮ ಕ್ರಾಂತಿ ಅನ್ನಿ ಅಥವಾ ಕ್ರಿಯೇಟಿವಿಟಿಯ ಸದ್ವಿನಿಯೋಗ ಅನ್ನಿ. ಒಟ್ಟಿನಲ್ಲಿ ಅನಾಮಿಕ ಹುಡುಗನೊಬ್ಬ ತನ್ನ ಅಳಲನ್ನು ಜನರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇದು ಹೀಗೆ ಮುಂದುವರೆದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆತನನ್ನು ಕರೆಸಿ ಒಂದಿಷ್ಟು ಕಾಸು ಕೊಟ್ಟು ಕಳುಹಿಸಬಹುದು. ಅದು ಆಗಬೇಕಾದ ಕೆಲಸ ಕೂಡ. ಆದರೆ ಇದನ್ನು ಪೋಸ್ಟ್ ಮಾಡಿದವರು ಕೇಳೋ ಪ್ರಶ್ನೆ ಬೇರೆಯೇ ಇದೆ ಅಂತ ಅನ್ನಿಸುತ್ತಿಲ್ಲವಾ?
  ಒಬ್ಬ ಕಿಶನ್ಗೆ ಕಾನೂನು ಸಡಿಲಗೊಳಿಸಿದರೆ ಕಾನೂನಿಗೂ ಒಂದು ಘನತೆ ಇದೆ ಅಲ್ವಾ? ಅದರ ಕತೆ ಏನು? ಹಾಗಾದ್ರೆ sslcಯಲ್ಲಿ ತೊಂಭತ್ತರ ಮೇಲೆ ಅಂಕ ಪಡೆದ ಮಕ್ಕಳೆಲ್ಲ pg ಸೇರ್ಕೋಬಹುದು ಅಂತ ಕಾನೂನು ಮಾಡಿಬಿಡಿ..ಎಲ್ಲ ಗೊಂದಲಕ್ಕೂ ತೆರೆ ಎಳೆದಂತೆ ಆಗುತ್ತೆ..

  -ಪ್ರಶಾಂತ್

  ReplyDelete
 11. ಮನ ಹಿಂಡುತ್ತದೆ. ಇದು ಸಂಬಧಪಟ್ಟ ಮಂತ್ರಿ-ಮಹೋದರರ ಗಮನಕ್ಕೆ ಬರುತ್ತದೆಯೇ (ಆಶೆ). ಆದರೆ ಗಮನಕ್ಕೆ ಬಂದರೆ ಅವರು ಮಾಡಬಹುದಾದ್ದೇನು (ಖಂಡಿತ ಮಾಡಬಹುದು, ಈ ವ್ಯವಸ್ಥೆಯಲ್ಲಿ ಏನಾಗುತ್ತೆ ಅನ್ನುವ ಸಿನಿಕತನ ಬೇಕಿಲ್ಲ)?

  ೧) ಸಾಮಾನ್ಯವಾಗಿ ಎಲ್ಲ ಸೆನ್ಸೇಷನಲ್ ವರದಿಗಳಿಗೂ ಪ್ರತಿಕ್ರಿಯಿಸುವಂತೆ ಒಂದಷ್ಟು ದುಡ್ಡು ಕೊಟ್ಟು ಕಳಿಸಬಹುದು ಅಥವಾ
  ೨) ಕಿಷನ್ ವಿಷಯದಲ್ಲಿ ಮಾಡಿದಂತೆ ನಿಯಮ ಸಡಿಲಿಸಿ ಜಾತಿಪತ್ರವಿಲ್ಲದೆಯೇ ಸೈಕಲ್ ಕೊಡಿಸಬಹುದು (ಅಥವಾ ವಿದ್ಯುತ್ ಬಿಲ್ ಇಲ್ಲದೆಯೇ ಜಾತಿಪತ್ರ ಕೊಡಿಸಬಹುದು)

  ಆದರೆ ಇವೆರಡರಲ್ಲಿ ಯಾವುದು ಮಾಡಿದರೂ ಅದು ಒಬ್ಬ ಲೋಕೇಶನಿಗೆ ಸಹಾಯವಾಗುತ್ತದೆ, ಆದರೆ ಅಂಥಾ ನೂರಾರು ಲೋಕೇಶರು ಯೂಟ್ಯೂಬಿನಲ್ಲಿ ವರದಿಯಾಗುತ್ತಾರೆಯೇ? ವರದಿಯಾದರೆ ಅದರ ಸೆನ್ಸಿಟಿವಿಟಿ ಉಳಿಯುತ್ತದೆಯೇ?

  ಆಫ್ ಕೋರ್ಸ್, ಇದು ಕೇವಲ ಒಂದು ವರ್ಗದ ಸಮಸ್ಯೆಯಲ್ಲ. ನನಗೊಂದು ಡ್ರೈವಿಂಗ್ ಲೈಸೆನ್ಸ್ ನವೀಕರಿಸಬೇಕಿತ್ತು, ಆದರೆ ನಾನು ಆಗಲೇ ಮೈಸೂರಿಗೆ ಸ್ಥಳಾಂತರಗೊಂಡಿದ್ದೆ. ನವೀಕರಿಸಬೇಕಾದರೆ ಮೊದಲು ವಿಳಾಸ ಬದಲಿಗೆ ಒಂದು ಅರ್ಜಿ ಕೊಡಿ ಎಂದರು. ಅರ್ಜಿಯ ಜೊತೆ ವಿಳಾಸದ ಸಾಕ್ಷಿ; ಅದಕ್ಕೆ ರೇಶನ್ ಕಾರ್ಡೋ, ಬಿಎಸ್ಸೆನ್ನೆಲ್ ಫೋನ್ ಬಿಲ್ಲೋ! ನನ್ನಲ್ಲಿ ಅದೇನೂ ಇರಲಿಲ್ಲ. ಸರಿ, ಕಾರ್ಪೊರೇಷನ್ನಿನಿಂದ ವಾಸಧೃಡೀಕರಣ ಪತ್ರ ತನ್ನಿ ಅಂದರು. ಲಂಚಕೊಡಲು ಇಶ್ಟವಿಲ್ಲದ ನಾನು ಕಾರ್ಪೊರೇಷನ್ನಿನ ಮೆಟ್ಟಲು ಹತ್ತಿದೆ. ಅಲ್ಲಿ ಅದಕ್ಕೆ ಕೇಳಿದ್ದು ಮತ್ತೆ ಅದೇ ಸಾಕ್ಷಿಗಳನ್ನು. ಅವು ಇಲ್ಲವೆಂದದ್ದಕ್ಕೆ ಕಂದಾಯದ ರಸೀತಿ ಕೇಳಿದರು. ಅದು ಮನೆ ಮಾಲೀಕನಬಳಿ ಇದ್ದು, ಅವರು ಅಮೇರಿಕಾದಲ್ಲೆಲ್ಲೋ ಇದ್ದಾರೆ (ಕಂದಾಯದ ವಿವರ ಕಾರ್ಪೊರೇಷನ್ನಿನ ಬಳಿಯೇ ಇದೆ, ಇಷ್ಟಕ್ಕೂ!). ಇಷ್ಟುಹೇಳಿ ದಬಾಯಿಸಿದ್ದಕ್ಕೆ ಮತ್ತೆ ಕಂದಾಯದ ಪುಸ್ತಕ ತೆರೆದ ಅವರು "ಈ ವರ್ಷದ ಕಂದಾಯ ಇನ್ನೂ ಕಟ್ಟಿಲ್ಲ, ಆದ್ದರಿಂದ ನಿಮಗೆ ವಾಸದ ಪ್ರಮಾಣಪತ್ರ ಕೊಡಲು ಆಗದು ಎಂದರು" ಮಾಲೀಕನು ಕಂದಾಯ ಕಟ್ಟದಿದ್ದುದಕ್ಕೂ, ನಾನು ಆ ಮನೆಯಲ್ಲಿ ವಾಸವಾಗಿದ್ದೇನೆಂದು ಕಾರ್ಪೊರೇಷನ್ನು ಧೃಡೀಕರಿಸುವುದಕ್ಕೂ ಏನು ಸಂಬಂಧವೋ ನನಗೆ ಅರ್ಥವಾಗಲಿಲ್ಲ. ಸರಿ, ಇದರ ಗೊಡವೆಯೇ ಬೇಡವೆಂದು ನವೀಕರಣಕ್ಕೆ ಬೆಂಗಳೂರಿನಲ್ಲೇ ಅರ್ಜಿ ಸಲ್ಲಿಸಿದರೆ, ಅವರು ನವೀಕರಣಗೊಂಡ ಲೈಸೆನ್ಸನ್ನು ನನ್ನ ಬೆಂಗಳೂರಿನ ವಿಳಾಸಕ್ಕೇ ಕಳಿಸುತ್ತೇವೆಂದರು. ನಾನು ಬೆಂಗಳೂರಿನ ಆ ಮನೆಯನ್ನು ಬಿಟ್ಟೇ ಎರಡು ವರ್ಷವಾಗಿದ್ದು, ಆ ಮನೆಯನ್ನೇ ಈಗ ಬೀಳಿಸಿಬಿಟ್ಟಿದ್ದಾರೆ, ಅಲ್ಲೊಂದು ಖಾಲಿ ಸೈಟು. ಈ ವಿಷಯವನ್ನು ಹೇಳಿದರೆ ಆ ಆಸಾಮಿ ಏನೆನ್ನಬೇಕು? "ಅದೆಲ್ಲಾ ಗೊತ್ತಿಲ್ರೀ, ಅದು ಅಲ್ಲಿ ಹೋಗಿ ವಾಪಸ್ ಬರುತ್ತೆ, ಆಮೇಲೆ ಬೇಕಾದರೆ ಬಂದು ತಗೊಳ್ಳಿ, ಎರಡು ತಿಂಗಳು ಬಿಟ್ಟು"!!!

  ಬಾಯಿರುವವರಿಗೇ ಇದು ಇಷ್ಟು ತಲೆಸುತ್ತು ಬರಿಸುವುದಾದರೆ ಲೋಕೇಶನಂಥ ಪುಟಾಣಿಗಳು ಏನು ಮಾಡಬೇಕು?

  ಇಲ್ಲ, ಸಚಿವರು ಇದನ್ನು ಗಮನಿಸಲೇ ಬೇಕು! ಗಮನಿಸಿದಮೇಲೆ ಕೇವಲ ಹಣ ಕೊಟ್ಟೋ ನಿಯಮ ಸಡಿಲಿಸಿಯೋ ಮಾಡಿ ಅಷ್ಟಕ್ಕೆ ಮರೆಯದೇ (ಮರೆತರೆ ಅದು ಅತಿ ಬೇಜವಾಬ್ದಾರಿಯೇ ಸರಿ)ಕತ್ತೆಯಂತಿರುವ ಸರಕಾರೀ ಕಾನೂನುಗಳಲ್ಲಿ ತುಸು ’ಬುದ್ಧಿ’ ತುಂಬಲು ಬುದ್ಧಿವಂತರ ನಿಯೋಗವನ್ನಾದರೂ ನೇಮಿಸಬೇಕು, ಮತ್ತು ಅದಕ್ಕೊಂದು ನಿಯತ್ತಾದ, ಅರ್ಥವಿರುವ ಟೈಂ ಲಿಮಿಟ್ ಹಾಕಬೇಕು.

  ಸೈಕಲು => ಜಾತಿ => ಪ್ರಮಾಣಪತ್ರ => ಕರೆಂಟುಬಿಲ್ಲು => ಅದಕ್ಕೆ ಕರೆಂಟು ಇರಬೇಕಾದಂಥ ’ಮನೆ’ ಇದು ತಲೆಕೆಟ್ಟ ನಿಯಮ. ನಿಯಮ ಮಾಡುವಾಗ ಎಲ್ಲಾ ಸಂದರ್ಭಗಳನ್ನೂ ಗಮನಿಸಲು ಆಗುವುದಿಲ್ಲ ಸರಿ; ಆದರೆ ಸರಕಾರದ ಸೈಕಲ್ಲು ಕೋರುವ ಕಡುಬಡವನೊಬ್ಬ ಒಂದು ಕರೆಂಟು ಕನೆಕ್ಷನ್ನು, ಅದಕ್ಕೊಂದು ಮನೆ ಹೊಂದಿರಲು ಸಾಧ್ಯವಾ ಎಂದು ಯೋಚಿಸುವ ತಲೆ ಅಥವ ಡೆಸಿಗ್ನೇಷನ್ನು ಸರಕಾರದ ಏಣಿಯಲ್ಲೆಲ್ಲೋ ಇರಬೇಕಾಗುತ್ತದೆ, ಮತ್ತು ಆ ಆಸಾಮಿ ಅರ್ಜಿದಾರನ ಕೈಗೆಟುಕುವಂತಿರಬೇಕಾಗುತ್ತೆ (with a clear understandable address and location).

  ReplyDelete
 12. ಇಂಥ ವಿಷಯವನ್ನು ಗಮನಕ್ಕೆ ತಂದ ಸಂಪಾದಕೀಯಕ್ಕೆ ಧನ್ಯವಾದಗಳು. ಈ ಹುಡುಗ ಹೀಗೆ ಜಾತಿ ಪ್ರಮಾಣ ಪತ್ರಕ್ಕಾಗಿ ಪರಿದಾಡಿದ್ದನ್ನು ಹೇಳುತ್ತಿದ್ದರೆ ಅದನ್ನು ಕೇಳಲು ಸರ್ಕಾರಿ ನೌಕರನಾದ ನನಗೆ ಕರುಳು ಹಿಂಡಿದಂತೆ ಆಗುತ್ತಿದೆ. ಐದು ವರ್ಷಗಳ ಹಿಂದೆ ನನ್ನ ಸೋದರ ಮಾವನು ತಮ್ಮ ಹಳ್ಳಿಯ ತಮ್ಮ ಸ್ವಂತ ಜಮೀನಿನಲ್ಲಿ ಒಂದು ಬೋರ್ ವೆಲ್ ತೆಗೆಸಲು ಸಹಕಾರ ಸಂಘಕ್ಕೆ ಸಾಲಕ್ಕಾಗಿ ಅಲೆದಾಡಿ ಅಲೆದಾಡಿ ಕೊನೆಗೆ ಯಾರದೋ ಬಳಿ ಸಾಲ ಸಾಲ ಮಾಡಿ ಬೋರ್ ವೆಲ್ ಕೊರಸಿದ ಕರುಣಾಜನಕ ಕಥೆ ನೆನಪಾಗುತ್ತಿದೆ. ಇಂಥ ನೋವಿನ ಕಥೆಗಳಿಗೆ ಬಾಯಿಯಾದ ಸಂಪಾದಕೀಯಕ್ಕೆ ಧನ್ಯವಾದಗಳು.

  ReplyDelete
 13. ಸದ್ಯದ ಸ್ಥಿತಿಯಲ್ಲಿ ಇರುವ ಾಳುವ ವರ್ಗಕ್ಕೆ ಯಾವಾಗಲೂ ಖುರ್ಚಿ ಉಳಿಸಿಕೊಳ್ಳುವ ಹಾಗೇಯೇ ಗೆದ್ದೆತ್ತಿನ ಬಾಲ ಹಿಡಿಯುವ ಗುಣ ಇದೆ ಅದಕ್ಕೆ ಈರೀತಿ ಆಗಿದೆ ಸ್ವಾಮಿ
  ಕಿಶನ್ಗೆ ಬೆಂಬಲ ಕೊಟ್ರೆ ಪ್ರಚಾರ ಸಿಗುತ್ತೆ ಆದೆರೆ ಲೋಕೇಶ್ನಂತಹವರಿಗೆ ನ್ಯಾಯ ದೊರಕಿದ್ರೆ ಅವರಿಗೆ ಬೇಕಾದ ಪ್ರಚಾರ ಸಿಗಲ್ಲ ಅಲ್ವ ಈಗಲಾದ್ರು ಬುಡ್ಡಿ ದೀಪದ ಓದಿ ಮೌಂಟ್ ಕಾರ್ಮಲ್ ವಿಧ್ಯಾರ್ಥಿಗಳಿಗೂ ಸ್ಪರ್ಧೆ ಕೊಡುತ್ತಿರುವ ನಮ್ಮ ಲೋಕೇಶ್ನಂತರದವರ ಬಗ್ಗೆ ಗಮನ ಹರಿಸಲಿ ಅಂತ ನೋಡೋಣ

  ReplyDelete
 14. Mr. Arakala googdu jayaram avare desknalli iruvavaru danda pindagalu antha heliddiri. plz heeli, nimanthaha varadigaararu LOKESHnathaha estu suddi kottiddira? bidi... kanista rajakeeya pakshagala inside story aadru kottiddira ? yaddi estu duddu kottu (10 crore plus ministry 15 crore plus nigama mandali adyaksha stana) 10 mla galannu purchase maadidru? iddannu reporter kodabeeke horathu desk na danda pindagalla.
  plz dayavittu idannu prakatisi. reporting antha contect belesicondu brastachara maduva(kshamisi jayaram idu nimagalla) reportergaligella idu anwaya.

  ReplyDelete
 15. mantri mahodayre kurcigagi naataka saaku. lokeshanatta gamanisi

  ReplyDelete
 16. Thanks a lot to Sampadakeeya for bringing this kind of news to us.Can someone get Lokesh contact details, I could help whatever possible for me.

  ReplyDelete