ಪತ್ರಕರ್ತನೇ ಚಾನಲ್ ಮಾಲೀಕನಾಗಿರುವ ಪಬ್ಲಿಕ್ ಟಿವಿ ನಿನ್ನೆ ಶುರುವಾಯಿತು. ಮೊನ್ನೆ ಪಬ್ಲಿಕ್ ಟಿವಿಯ ಮೂಲಕ ರಂಗಣ್ಣ ಆಕ್ಟಿವಿಸಂ ಮಾಡ್ತಾರಾ ಎಂಬ ಶೀರ್ಷಿಕೆಯ ಲೇಖನ ಪ್ರಕಟಿಸಿದ್ದನ್ನು ನೀವು ನೋಡಿದ್ದೀರಿ. ಕಾಕತಾಳೀಯ ಎಂಬಂತೆ ನಿನ್ನೆ ಚಾನಲ್ ಆರಂಭಗೊಂಡ ನಿಮಿಷದಲ್ಲೇ ರಂಗನಾಥ್ ಘೋಷಿಸಿದ್ದು ಇದು ಒಂದು ಟಿವಿಯಲ್ಲ, ಚಳವಳಿ ಎಂದು. ಇದು ಯಾರ ಆಸ್ತಿಯೂ ಅಲ್ಲ, ನಿಮ್ಮ ಟಿವಿ ಎಂಬ ಘೋಷವಾಕ್ಯಕ್ಕೆ ರಂಗನಾಥ್ ತುಸು ಹೆಚ್ಚೇ ಒತ್ತು ಕೊಟ್ಟು ಮಾತಾಡಿದ್ದು ಕಾಣಿಸಿತು. ನಾವು ಯಾರಿಗೂ ಜಗ್ಗಲ್ಲ, ಬಗ್ಗಲ್ಲ, ನಿಮಗೆ ಮಾತ್ರ ತಲೆಬಾಗುತ್ತೇವೆ ಎಂದು ರಂಗನಾಥ್ ಆರ್ಭಟಿಸಿದರು. ರಂಗನಾಥ್ ಪ್ರಾಸ್ತಾವನೆಯ ಮಾತುಗಳು ಅತಿ ಆತ್ಮವಿಶ್ವಾಸದಿಂದ ಕೂಡಿದ್ದವು ಅನ್ನುವುದಕ್ಕೆ ಅವರ ಬದಲಾದ ಬಾಡಿ ಲಾಂಗ್ವೇಜ್ ಸಾಕ್ಷಿಯಾಗಿತ್ತು. ಈ ಆತ್ಮವಿಶ್ವಾಸ ಅಹಂಕಾರವಾಗದೇ ಇದ್ದರೆ ಪಬ್ಲಿಕ್ ಟಿವಿಯ ಕನಸುಗಳು ನನಸಾಗಬಹುದೇನೋ?
ನಿನ್ನೆಯ ಕಾರ್ಯಕ್ರಮಗಳನ್ನು ಗಮನಿಸಿದಾಗ ಚಾನಲ್ ಪೂರ್ತಾ ರಂಗಣ್ಣನೇ ತುಂಬಿಹೋದಂತೆ ಕಾಣಿಸಿತು. ಅತಿಥಿ ಗಣ್ಯರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರ ಬಾಯಲ್ಲೂ ರಂಗನಾಥ್ ಗುಣಗಾನವೇ ನಡೆಯಿತು. ತಮಗಿರುವ ಜನಪ್ರಿಯತೆಯನ್ನು ಚಾನಲ್ ಗೆ ಮೂಲಬಂಡವಾಳ ಮಾಡಿಕೊಳ್ಳುವ ಸ್ಪಷ್ಟ ಯತ್ನಕ್ಕೆ ರಂಗನಾಥ್ ಕೈ ಹಾಕಿದ್ದಾರೆ ಅನಿಸಿತು. ಅದರಲ್ಲಿ ಅಂಥ ದೋಷವೇನೂ ಇಲ್ಲ.
ಪಬ್ಲಿಕ್ ಟಿವಿಯ ಬಗ್ಗೆ ಕೇಳಿಬಂದ ಊಹಾಪೋಹಗಳಿಗೆ ಉತ್ತರಿಸಲು ರಂಗನಾಥ್ ಒಂಚೂರು ಪ್ರಯತ್ನ ಮಾಡಿದಂತೆ ತೋರಿತು. ಪಬ್ಲಿಕ್ ಟಿವಿ ಜನರದ್ದು ಎಂದು ಹೇಳುವ ಭರಾಟೆಯಲ್ಲಿ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುವ ಪ್ರಯತ್ನಗಳು ನಡೆದವು. ಚಾನಲ್ ನ ಕಚೇರಿ, ಬಂಡವಾಳ, ಅಧಿಕಾರಿಗಳು, ಸಿಬ್ಬಂದಿಯ ಬಗ್ಗೆ ವಿವರಣೆಗಳು ಪಾರದರ್ಶಕತೆಯನ್ನು ಬಿಂಬಿಸುವ ಪ್ರಯತ್ನಗಳಾಗಿ ಕಾಣಿಸಿದವು.
ಚಾನಲ್ ನ ಮೊದಲ ಸುದ್ದಿಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಂದ ಓದಿಸುವ ಪ್ರಯತ್ನ ನಡೆಯಿತು. ನಂತರ ಸಂತೋಷ್ ಹೆಗಡೆ ಸುದ್ದಿ ಓದಿದರು. ಇದನ್ನು ಲೈವ್ ಮಾಡಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು.
ಪಬ್ಲಿಕ್ ಟಿವಿ ನೋಡುತ್ತಿದ್ದಂತೆ ಇದು ಹೊಸ ಟಿವಿ ಚಾನಲ್ ಅನಿಸಲಿಲ್ಲ. ಯಾಕೆಂದರೆ ಹಿಂದೆ ಕೇಳಿದ ಧ್ವನಿಗಳೇ ಕೇಳುತ್ತಿದ್ದವು, ಅದೇ ಮುಖಗಳು ಕಾಣಿಸಿಕೊಂಡವು. ಸುದ್ದಿಯ ಪ್ರಸ್ತುತಿಯಲ್ಲೂ ಅಂಥ ಭಿನ್ನತೆಯೇನೂ ಕಾಣಿಸಲಿಲ್ಲ. ರಂಗನಾಥ್ ಮಾತಿಗೆ ಕೂತರೆ ಯಥಾಪ್ರಕಾರ ಮಾತಿನ ಮಲ್ಲ. ಚೆಕ್ಕುಬಂದಿ ಕಾರ್ಯಕ್ರಮದ ಝಲಕ್ ನಿನ್ನೆ ಪ್ರಸಾರವಾಯಿತು. ಮೊದಲ ದಿನವಾದ್ದರಿಂದ ರಂಗನಾಥ್ ತುಸು ಅಂಡರ್ ಪ್ಲೇ ಮಾಡಲು ಯತ್ನಿಸಿದಂತಿತ್ತು. ಬಹುಶಃ ಗಂಭೀರವಾದ ರಾಜಕೀಯ ವಿಶ್ಲೇಷಣೆಗಳನ್ನು ಮುಂದಿನ ದಿನಗಳಲ್ಲಿ ಅವರಿಂದ ನಿರೀಕ್ಷಿಸಬಹುದು.
ಪಬ್ಲಿಕ್ ಟಿವಿಯ ಕುರಿತು ಗಂಭೀರವಾದ ಆಕ್ಷೇಪಣೆಗಳೂ ಇವೆ. ತಪ್ಪಾದರೆ ತಿದ್ದಿ ಎಂದು ರಂಗನಾಥ್ ಮೊದಲ ದಿನವೇ ಹೇಳಿರುವುದರಿಂದ ತಪ್ಪುಗಳನ್ನು ಮುಂದಿಡುವುದು ನಮ್ಮ ಜವಾಬ್ದಾರಿಯೂ ಹೌದು. ಪಬ್ಲಿಕ್ ಟಿವಿಯೂ ಇತರ ಚಾನಲ್ ಗಳಂತೆ ಮನೆಹಾಳು ಜ್ಯೋತಿಷಿಗಳನ್ನು ಮೆರೆಸಲು ಆರಂಭಿಸಿರುವುದು ಅಸಹನೀಯ. ಜೋತಿಷ್ಯ ಸಂಬಂಧಿ ಕಾರ್ಯಕ್ರಮದ ಪ್ರೋಮೋ ಬಗ್ಗೆ ಸಂಪಾದಕೀಯದ ಓದುಗರೊಬ್ಬರು ಗಮನ ಸೆಳೆದಿದ್ದಾರೆ. ಮಕ್ಕಳಾಗಿಲ್ಲವೇ? ಮನೆಯಲ್ಲಿ ಸಮಸ್ಯೆಯೇ? ಹಾಗಿದ್ದರೆ ಈ ಕಾರ್ಯಕ್ರಮ ನೋಡಿ ಎಂಬ ಪ್ರೋಮೋ ಪ್ರಸಾರವಾಗುತ್ತಿದೆಯಂತೆ.
ನಮ್ಮದು ನೇರಾನೇರ ಪ್ರಶ್ನೆ. ಮಕ್ಕಳಾಗದವರಿಗೆ ಮಕ್ಕಳು ಹುಟ್ಟಿಸಲು ಜೋತಿಷಿಗಳಿಗೆ ಶಕ್ತಿಯಿದೆಯೇ? ಅದನ್ನು ನೀವು ನಂಬುತ್ತೀರಾ? ನಂಬುವುದಾದರೆ ಟಿವಿ ಚಾನಲ್ ನಡೆಸುವ ಬದಲು ಜೋತಿಷಿಗಳನ್ನು ಗುಡ್ಡೆ ಹಾಕಿಕೊಂಡು ಮಕ್ಕಳನ್ನು ಹುಟ್ಟಿಸುವ ಸಂಸ್ಥೆಯನ್ನು ಕಟ್ಟಿಬಿಡಿ, ಸಾರ್ವಜನಿಕರಿಗೆ ಚಾನಲ್‌ನಿಂದ ಆಗುವ ಸೇವೆಗಿಂತ ಸಾವಿರ ಪಟ್ಟು ಅನುಕೂಲವಾಗುತ್ತದೆ.
ಜೋತಿಷಿಗಳ ಈ ಬೊಗಳೆಯನ್ನು ನಂಬುವುದಿಲ್ಲವಾದರೆ ಈ ಆತ್ಮವಂಚನೆಯನ್ನು ಕೈಬಿಡಿ. ಭಾರತ ಸಂವಿಧಾನ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಕರ್ತವ್ಯವನ್ನು ಘೋಷಿಸಿದೆ. ಅಂಧಶ್ರದ್ಧೆಗಳನ್ನು ಹರಡುವುದು ಸಂವಿಧಾನ ವಿರೋಧಿ, ಜನವಿರೋಧಿ ಕ್ರಿಯೆ. ಜನರನ್ನು ಜೋತಿಷಿಗಳ ಗುಲಾಮರನ್ನಾಗಿಸುವ ಪ್ರಯತ್ನ ಬೇಡ. ಅದನ್ನು ಮಾಡಿದರೆ ಜನರಿಗಾಗಿ ನಮ್ಮ ಟಿವಿ ಎಂಬ ನಿಮ್ಮ ಘೋಷಣೆಯೇ ಹಸಿಹಸಿ ಸುಳ್ಳಾಗಿಹೋಗುತ್ತದೆ.
ಮಿಕ್ಕಂತೆ ಪಬ್ಲಿಕ್ ಟಿವಿಗೆ ಇಂಗ್ಲಿಷ್ ಶೀರ್ಷಿಕೆಗಳ ಹುಚ್ಚು ಎಲ್ಲ ಚಾನಲ್ ಗಳಿಗಿಂತ ತುಸು ಹೆಚ್ಚೇ ಇರುವಂತಿದೆ. ಸುವರ್ಣ ನ್ಯೂಸ್‌ನವರು ನವೆಂಬರ್ ನಲ್ಲಿ ಮಾಡಿಕೊಂಡ ಬದಲಾವಣೆಗಳು ಚಾನಲ್ ಗೆ ಹೊಂದಿಕೊಂಡಿರುವುದನ್ನು ರಂಗಣ್ಣ ಗಮನಿಸಿಲ್ಲವೆನಿಸುತ್ತದೆ. ಪ್ರತಿ ಕಾರ್ಯಕ್ರಮಕ್ಕೂ ಇಂಗ್ಲಿಷ್ ಹೆಸರು ಬೇಕಿತ್ತಾ ಎಂಬ ಪ್ರಶ್ನೆಗೆ ರಂಗನಾಥ್ ಉತ್ತರ ಕೊಟ್ಟುಕೊಳ್ಳಬೇಕಿದೆ. ಇಲ್ಲದಿದ್ದರೆ ಚಾನಲ್ ಆರಂಭದ ಸಂದರ್ಭದಲ್ಲಿ ಕನ್ನಡ ನುಡಿ, ನೆಲ, ಜಲದ ಪ್ರಶ್ನೆ ಬಂದಾಗ ಹೋರಾಡುತ್ತೇವೆ ಎಂದು ರಂಗಣ್ಣ ಆಡಿದ ಮಾತುಗಳು ಆಷಾಡಭೂತಿಯದ್ದು ಎಂದು ಅನಿಸಿಬಿಡುತ್ತದೆ.
ಏನೇ ಇರಲಿ, ಪಬ್ಲಿಕ್ ಟಿವಿ ಆರರ ಜತೆ ಏಳನೇ ಚಾನಲ್ ಆಗದೇ ಇರಲಿ. ಜನರಿಗೆ ನಿಜಕ್ಕೂ ಬೇಕಾಗಿರುವ, ಜನರನ್ನು ಜಾಗೃತಿಗೊಳಿಸುವ ಚಾನಲ್ ಇದಾಗಲಿ. ಇಷ್ಟೇ ನಮ್ಮ ಆಶಯ ಮತ್ತು ಹಾರೈಕೆ.
SANDARBOCHITHA BARAHA RANGANATH YOCHISALI
ReplyDeleteಸುವರ್ಣದಲ್ಲಿದ್ದಾಗ ರಂಗನಾಥ್ ಅವರ ಕಾರ್ಯಕ್ರಮಗಳನ್ನು ಗಮನಿಸಿದ್ದೇನೆ. ಅವರಿಗೆ ತುಂಬಾ ತಿಳುವಳಿಕೆಯಿದೆ. ವಿಷಯದ ಆಳಕ್ಕೆ ಹೋಗಿ ಮಾತನಾಡುವ ಶಕ್ತಿಯೂ ಇದೆ. ನಮ್ಮ ಮಾಧ್ಯಮಗಳಿಗೆ ರಂಗನಾಥ್ ತರಹದ ಹಿರಿಯರು ಬೇಕು. ಆದರೆ, ಎಲ್ಲದರಲ್ಲೂ ಮೂಗು ತೂರಿಸುದು ಅವರ ದೊಡ್ಡ ಚಾಳಿ. ಉದಾಹರಣೆಗೆ, ಚರ್ಚೆಗೆಂದು ಗಣ್ಯರನ್ನು ಕರೆಸಿ ಅವರಿಗೆ ಮಾತನಾಡುದಕ್ಕೆ ಅವಕಾಶ ನೀಡದೆ ರಂಗನಾಥ್ ಅವರೇ ಮಾತನಾಡೂದು ತುಂಬಾ ಕಿರಿ ಕಿರಿ ಕೊಡತ್ತೆ. ಮೂರನೆಯ ವ್ಯಕ್ತಿಯಾಗಿದ್ದು, ಬಂದ ಗಣ್ಯರಿಂದ ಮಾತನ್ನು ಹೊರಗೆಳೆಯುವ ಬದಲು,.ತಾವೇ ಮಾತನಾಡತೊದಗಿದರೆ ಹೇಗೆ? ಪತ್ರಕರ್ತ ಹೆಚ್ಚಿನ ಸಂದರ್ಭದಲ್ಲಿ ನಿರ್ಲಿಪ್ತನಾಗಿ, ಸಂಯಮದಿಂದಿರಬೇಕಾಗುತ್ತದೆ. ತನಗೆ ಗೊತ್ತಿದೆ ಎನ್ನುವ ಕಾರಣಕ್ಕಾಗಿ, ಅದನ್ನು ಪ್ರದರ್ಶಿಸಲು ಹೊರಟರೆ, ಕೇಳುಗರು ಚಾನೆಲ್ ಚೇಂಜ್ ಮಾಡ್ತಾರೆ ಅಷ್ಟೇ. ಮೊದಲು ರಂಗನಾಥ್ ವಾಚಾಳಿತನವನ್ನು ಬಿಡಬೇಕು. ತಮ್ಮ ತಿಳುವಳಿಕೆಯನ್ನು ಅರ್ಥಪೂರ್ಣವಾಗಿ, ಸಂದರ್ಭಕ್ಕೆ ತಕ್ಕ ಹಾಗೆ ಬಳಸಿಕೊಳ್ಳಬೇಕು. ಪಬ್ಲಿಕ್ ಟಿವಿ.ಗೆ ಸರ್ವ ರೀತಿಯಲ್ಲೂ ಒಳ್ಳೆಯದಾಗಲಿ ಎಂದು ಹಾರೈಸುವೆ.
ReplyDeleteನಿಮಗೆ ಪೂರ್ವಗ್ರಹ ಸಿಕ್ಕಾಪಟ್ಟೆ ಇದೆ ಕಣ್ರೀ, ಸುವರ್ಣ ನ್ಯೂಸ್ ಹೆಸರನ್ನು ಕನ್ನಡದಲ್ಲಿ ಇಟ್ಟಿದೆ ಆದ್ರೆ ಅಲ್ಲಿ ಬಳಸುವ ಕನ್ನಡದ ಬಗ್ಗೆ ನಿಮಗೆ ಏನೂ ಅನಿಸಲಿಲ್ವಾ? ಅದು ಒಂದು ಇಂಗ್ಲಿಷ್ ಚಾನಲ್ ನ ಕಾಪಿ ಅಂತಾ ನಿಮಗೆ ಗೊತ್ತಾಗಲಿಲ್ವಾ , ನಾನು ಕನ್ನಡಿಗ ಕನ್ನಡದ ಬಗ್ಗೆ ಹೆಮ್ಮೆ ಇದೆ ಹಾಗಂತಾ ಯಾವಾಗಲೂ ಕನ್ನಡವನ್ನೇ ಬಳಸೋಕ್ಕೆ ಆಗುತ್ತಾ ಹೆಚ್ಚು ಪ್ರಯತ್ನ ಅಂತೂ ಮಾಡ್ತೀನಿ, ಅವರೂ ಅಷ್ಟೇ ಅವರ ಕನ್ನಡ ನಾಡು ನುಡಿ ಅಭಿಮಾನದ ಬಗ್ಗೆ ತಿಳಿ ಬೇಕಾದ್ರೆ ಅವರು ಸಂಪಾದಕರಾಗಿದ್ದಾಗ ಪ್ರಸಾರ ಆದಂತಾ ಸುವರ್ಣ ಕಾರ್ಯಕ್ರಮಗಳನ್ನ ನೋಡಿ, ಈ ರೀತಿ ಪೂರ್ವಾಗ್ರಹ ಪೀಡಿತ ರಾಗಿ ಬರೆಯೋದನ್ನು ಬಿಡಿ
ReplyDeleteಪಬ್ಲಿಕ್ ಟಿವಿ ಯಾವುದೇ ಡಿ.ಟಿ. ಎಚ್. ಪ್ಲಾಟ್ ಫಾರ್ಮಿನಲ್ಲಿ ಲಭ್ಯವಿಲ್ಲದಿರುವುದರಿಂದಾಗಿ ಡಿಶ್ ಡಿ.ಟಿ.ಎಚ್. ಹೊಂದಿರುವ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ನನ್ನಂಥವರಿಗೆ ಪಬ್ಲಿಕ್ ಟಿವಿ ಯನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಬ್ಲಿಕ್ ಟಿವಿ ಹೇಗೆ ಬರುತ್ತಿದೆ ಎಂಬ ಬಗ್ಗೆ ಹೇಳಲು ಸಾಧ್ಯವಾಗುತ್ತಿಲ್ಲ. ಅದರೂ ನೀವು ಹೇಳಿದ ಅಂಶಗಳನ್ನು ನೋಡಿದರೆ ಪಬ್ಲಿಕ್ ಟಿವಿ ಉಳಿದ ವಾಹಿನಿಗಳಿಗಿಂತ ಭಿನ್ನವಾಗೇನೂ ಇಲ್ಲದಂತೆ ಕಾಣುತ್ತದೆ. ನೀವು ಹೇಳಿದಂತೆ ಜ್ಯೋತಿಷ್ಯದಂಥ ಮೂಢ ನಂಬಿಕೆಗಳನ್ನು ಪ್ರಸಾರ ಮಾಡದೇ ಟಿವಿ ವಾಹಿನಿಗಳನ್ನು ನಡೆಸಲು ಸಾಧ್ಯವೇ ಇಲ್ಲವೇ? ಪ್ರಗತಿಪರ ಚಿಂತನೆ ಇಲ್ಲದೆ ಹೋದರೆ ಇದೂ ಹತ್ತರಲ್ಲಿ ಹನ್ನೊಂದು ಆದೀತು ಅಷ್ಟೇ. ಲಂಕೇಶ್ ಅವರು ತಮ್ಮ ಪತ್ರಿಕೆಯನ್ನು ಆರಂಭಿಸಿ ಹೇಗೆ ಕನ್ನಡ ಪತ್ರಿಕೋದ್ಯಮದಲ್ಲಿ ಮಿಂಚಿನ ಸಂಚಾರವನ್ನು ತಂದರೋ ಅಂಥದೇ ಮಿಂಚಿನ ಸಂಚಾರವನ್ನು ಒಂದು ಜನಪರ, ಪ್ರಗತಿಪರ ನಿಲುವಿನ ಟಿವಿ ವಾಹಿನಿ ಇಂದು ಮಾಡಲು ಸಾಧ್ಯವಿದೆ. ಕನ್ನಡ ನೆಲ ಇಂದು ಪ್ರಗತಿಪರ ಮೌಲ್ಯಗಳಿಗಾಗಿ ಹಸಿದಿದೆ. ಮೂಢನಂಬಿಕೆಗಳ ಹಳಸಲು ಪಾಕವನ್ನು ತಿಂದೂ ತಿಂದೂ ಜನ ಕಂಗೆಟ್ಟಿದ್ದಾರೆ. ದಾರಿ ಕಾಣದೆ ದಿಕ್ಕೆಟ್ಟಿದ್ದಾರೆ. ಹೊಸ ಬೆಳಕು ಮೂಡುವುದೇ?- ಆನಂದ ಪ್ರಸಾದ್
ReplyDeleteSir, I had drafted this message to Ranganath, copying here, I agree with your comments.. and here are my thoughts. (do you have his email id? I need to send this to him and his team)
ReplyDeleteDear Ranganath & Editors.
I was very happy like thousands of fans and eagerly waiting for the launch of public tv. you and the team had been highly energetic in getting the activities live and going on, I can understand the effort and pressure that will go in this kind of work, inspite of such high challenges & competition, your dedication has paid off. Congratulations and thanks for your effort, we are happy to see public tv, dedicated to our(public) voice. I have been watching public tv programs and I feel I should write this to you.
you may consider this as my feedback, suggestions & request.
1) "yatha raja, thatha praja" similar to this, when a new organisation is formed, the ethical values and the culture in the organisation are derived from the ruler. public tv has marked you as the king, sarathi of this. thus your working culture and values will drive most of the employees & I strongly believe in your values and attitude. I don't have any doubt in your work, but when there are new hires from the open market, you should also make sure that the new hires get the talent from their past experience and not the "culture and values" which might spoil our tv shows.
For example:Other news channels, Create news than report, In the name of reporting news from the remote place, unwanted or biased opinions are expressed. Live shows are the worst presented. We(public) would like to hear from the speaker and not from the reporter.. so that the viewer decides the final opinion. My humble request is to avoid this "culture" ( biased news & creating news ) in our tv news.
The news anchor can report the news, and the on board report show what the local people / ministers say or ask them questions.. we the viewers will make the summary of the news.. you might want to invite people to discuss about the news.. let the summary be public voice instead of reporter's voice.
2) I had almost stopped watching these news channels, they have this "irritating" culture of repeating the same information over again and again and again. The news reader reports
and the onboard reporter repeats.. do you think the on board report's summary was required ? isn't that a repeated information ? isn't it biased ? I feel it's not good. I as a viewer will know what is happening on screen picture speaks more than words ..
In our public TV I hope that the reporters joined from other channels, don't bring this dirty culture and spoil real public voice.
3) I had high expectation when you and the team announced that this is not like other channels and we are here for people and by people. But the very first day when your advertisement on early morning "jotishya" program was telecast, my had the shock, this is not what our tv should show. if you try to telecast exactly the same type of program, same type of information and same crap from which people want a break. our tv is no more public voice., I feel it's a response to TRP.
ReplyDeleteinstead I would like see programs, news reports about great achievements done during the week, in different organisations, govt institutes.. something that will make me proud to start working for rest of the day,. hear to some great efforts by my country men. just imagine starting a day with some good interview or update on how things are improving in the country.
Repeating the same kind of programs like " hegu unte", "Crime story", "big fight", nera nudi, sports, cinema etc etc I feel over a period of time, our tv will become your tv. I mean public tv will become private tv. Please organise and report news which at the end of hearing will make us "responsible" and be motivated. programs which are playing with the emotions of the person may fetch TRP but over period of time, those viewers will shift to "new real public tv" channel which will start..
Programs with people who struggle in life and how they overcome that struggle, event's that change people life, programs that change our life and mindset to be "ethical, dedicated, passionate, and hardworking"
4) This is "karnataka's Public tv" and our tv, we don't want to hear about "new tamil/telugu pictures released, nor have updates about those heros who doesn't matter anything to karnataka/kannada. I wouldn't want to see our tv showing their news and claiming they are great.. I don't have any bad opinion about them, but our channel is for us..
programs which will show how these cinemas change someone's life, how hero or heroin is socially active or inactive in the society. etc ..
I would like to see our tv as a media which will wake the sleeping people, and show them their responsibility by showing the examples of the hardworking people..
Let our channel not be 24X7 sir, we will achieve all that is possible within 6 am to 11pm and let the world rest and sleep in peace waiting for a new morning. that will have good working for employees, viewers will be eager to watch your program and be loyal to watch. if we can't achieve our mission in 6am-11pm, 11pm-6am doesn't help anyway. more over repeated telecast of the same news means, waste of "human effort, current, national waste, and time" let our tv bring a social responsibility and be a role model in demonstrating it.
programs that help students, develop scientific temper, build social responsibility, enrich culture, at the same time be a sword for the crime, minister's politics and real public voice.
Dear Ranganath sir, there are lots of such information I would like to share, I would love to meet you in person and spend some time discussing the ideas. Looking forward to meet talk to you, as you are one of my master for public speaking and questioning the right way.
Lastly as a human I expects a small token of acknowledgement for reading this email. It will make me feel that my time on this email was worth, if you read it and acknowledge with a reply to this message.
Thanks
Naveen Nanjundappa
Dear sir, I was thinking in exactly the same lines as you are and I drafted a letter to Ranganath, but I don't have his email id.
ReplyDeleteI want to share my thought here with you..
Thanks,
Naveen Nanjundappa
nam kade public tvya publiccu illa, publicitynu illa kandri
ReplyDeleterangnna, siddartha, nagkumar,mariya,ckm,
ಸರಿಯಾಗಿ ಹೇಳಿದ್ದೀರಿ ಸಂಪಾದಕೀಯ ಬಂದುಗಳೇ..
ReplyDeleteರಂಗಣ್ಣನ ಚಾನೆಲ್ ಆರರಲ್ಲಿ ಏಳಾಗುವದಕ್ಕಿಂತ ಎಚ್ಚರದಿಂದ ಕಾರ್ಯನಿರ್ವಹಿಸುವುದು ಸೂಕ್ತ.
'ಇದು ಯಾರ ಟಿವಿಯೂ ಅಲ್ಲ, ಇದು ರಂಗಣ್ಣನ ಟಿವಿ !'- ಕಾರಂತ್
ReplyDeletedaari bidi , daari bidi, ranga bartaavne...........
ReplyDelete