ಮಡೆ ಸ್ನಾನದ ಮಾನಾವಮಾನಗಳ ಚರ್ಚೆ ಕಾಲದೇಶಗಳ ಅಗತ್ಯಕ್ಕೆ ಅನುಸಾರವಾಗಿ ಇನ್ನೂ ಜಾರಿಯಲ್ಲಿರುವಾಗಲೇ, ಕನ್ನಡ ಟಿವಿ ವಾಹಿನಿಯ ಕಾರ್ಯಕ್ರಮವೊಂದು ದೀರ್ಪಾಚನೆಯ ಹೆಸರಿನಲ್ಲಿ ಕನ್ನಡ ಜನರನ್ನು ಗಾಡಾಂಧಕಾರಕ್ಕೆ ತಳ್ಳಿದೆ.
ಒಂದು ದೃಶ್ಯ ಮಾಧ್ಯಮ ಹೇಗೆ ಜನರನ್ನು ಮಂಕುಬೂದಿ ಎರಚಿ, ಹೊಸ ಹೊಸ ಸಂಪ್ರದಾಯ, ಆಚರಣೆಗಳನ್ನು ಜಾರಿಗೆ ತರಬಹುದು ಎನ್ನುವುದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಹೀಗೆ ಹೊಸ ಮೌಢ್ಯಗಳನ್ನು ಸೃಷ್ಟಿಸುವ ಮೂಲಕ ತನ್ನ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಚಾನಲ್‌ಗಳು ಕರ್ನಾಟಕವನ್ನು ಶಿಲಾಯುಗಕ್ಕೆ ಮರಳಿಸಲು ಯತ್ನಿಸುತ್ತಿರುವ ಹಾಗಿದೆ.
ಇದು ನರೇಂದ್ರ ಸ್ವಾಮಿ ಎಂಬ ಜೋತಿಷಿಯ ಬೃಹತ್ ಬ್ರಹ್ಮಾಂಡದ ಫಲ.
೨೦೧೨ರ ಪ್ರಳಯವನ್ನು ತಪ್ಪಿಸಲು, ಮಂಗಳವಾರ ಸಂಜೆ ೭-೦೫ರಿಂದ ಸಂಜೆ ೭-೨೫ರೊಳಗೆ ೨೦ ನಿಮಿಷದಲ್ಲಿ ದೀಪರಾಧನೆಯನ್ನು ದೇವಸ್ಥಾನದಲ್ಲಿ ನಡೆಸಬೇಕೆಂದು ಜೀ ಕನ್ನಡದ ಬೃಹತ್ ಬ್ರಹ್ಮಾಂಡದಲ್ಲಿ ಜ್ಯೊತಿಷಿ ನರೇಂದ್ರಸ್ವಾಮಿ ಅಪ್ಪಣೆ ಕೊಟ್ಟಿದ್ದೇ ತಡ ನಿನ್ನೆ ಸಂಜೆ ಭಕ್ತಸಾಗರವು ಕುಟುಂಬ ಸಮೇತರಾಗಿ ರಾಜ್ಯದ ವಿವಿಧ ದೇವಸ್ಥಾನದಲ್ಲಿ ಹರಿದಿದೆ.
ಐದು ಧಾನ್ಯಗಳ ಎಣ್ಣೆಯಿಂದ ದೀಪ ಬೆಳಗಿಸುವ ಮೂಲಕ ಶಾಸ್ತ್ರೋಕ್ತವಾಗಿ ದೀರ್ಪಾಚನೆಯನ್ನು ನಡೆಸಬೇಕು, ಇದನ್ನು ಕಡ್ಡಾಯವಾಗಿ ಕುಟುಂಬ ಸಮೇತವಾಗಿಯೇ ಮಾಡಬೇಕು ಎಂದು ನರೇಂದ್ರ ಸ್ವಾಮಿ ಆದೇಶ ನೀಡಿದ್ದರಿಂದ ಎಲ್ಲೆಡೆ ದೇವಸ್ಥಾನಗಳಲ್ಲಿ ನಿಲ್ಲಲ್ಲೂ ಜಾಗವಿರಲಿಲ್ಲ.
ದೀಪವು ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು ಎನ್ನುವ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯನ್ನು ಬದಲಿಸಿ, ದೀಪವು ನಿನ್ನದೇ ಗಾಳಿಯೂ ನಿನ್ನದೇ ಆಗದಿರಲಿ ಪ್ರಳಯ ಎಂದು ಹಾಡುತ್ತಾ ಐದು ಧಾನ್ಯಗಳ ಎಣ್ಣೆಗಾಗಿ ಅಂಗಡಿಗಳನ್ನು ಎಡತಾಕಿ ಇದ್ದಬದ್ದ ಎಣ್ಣೆಯನ್ನೆಲ್ಲಾ ಬಳಿದುಕೊಂಡು ಮೂರ್ಖರಾಗಿದ್ದು ಜನಸಾಮಾನ್ಯರು.
ನರೇಂದ್ರ ಸ್ವಾಮಿ ಕಸ್ತೂರಿ ಟಿವಿಯಲ್ಲಿ ಬ್ರಹ್ಮಾಂಡ ಕಾರ್ಯಕ್ರಮ ನಡೆಸುತ್ತಿದ್ದರು. ಯಾಗ ಯಜ್ಞದ ಹೆಸರಲ್ಲಿ ಹಣ ಸಂಗ್ರಹ ಶುರು ಮಾಡಿದಾಗ ಕಸ್ತೂರಿಯಿಂದ ಹೊರಗೆ ಕಳಿಸಲಾಯಿತು. ನಂತರ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ವ್ಯಕ್ತಿ ಸುವರ್ಣ ಟಿವಿಯಲ್ಲಿ ಹಾಜರಾದರು. ಅಲ್ಲೂ ಏನೋ ಜಟಾಪಟಿ ನಡೆದು ಈಗ ಜೀ ಟಿವಿಯಲ್ಲಿ ಪ್ರತಿಷ್ಠಾಪಿತರಾಗಿದ್ದಾರೆ. ಇಲ್ಲಿ ಈತ ನಡೆಸಿಕೊಡುವ ಕಾರ್ಯಕ್ರಮದ ಹೆಸರು ಬೃಹತ್ ಬ್ರಹ್ಮಾಂಡ. ಬೆಳಿಗ್ಗೆ ಎದ್ದು ಮೊದಲು ಕ್ಷೌರಿಕರ ಮುಖ ನೋಡಿದರೆ ಅಶುಭವಾಗುತ್ತದೆ ಎಂದು ಹಿಂದೆ ಈತ ತನ್ನ ಕಾರ್ಯಕ್ರಮದಲ್ಲಿ ಹೇಳಿದ ಪರಿಣಾಮವಾಗಿ ಪ್ರತಿಭಟನೆಗಳು ನಡೆದಿದ್ದವು.
ಕಳೆದ ದಶಕದಲ್ಲಿ ಕರ್ನಾಟಕದಲ್ಲಿ ಜನರ ಮೌಢ್ಯ, ಕಂದಾಚಾರಗಳು ಹೆಚ್ಚಾಗಿದ್ದರೆ ಅದಕ್ಕೆ ಟಿವಿ ಚಾನಲ್‌ಗಳ ಭವಿಷ್ಯ-ಭೂತಪ್ರೇತ ಸಂಬಂಧಿ ಕಾರ್ಯಕ್ರಮಗಳು ಕಾರಣ. ವೈಜ್ಞಾನಿಕ ಯುಗದಲ್ಲಿ ನಾಡನ್ನು ಮುನ್ನಡೆಸಬೇಕಾದ ದೃಶ್ಯ ಮಾಧ್ಯಮಗಳು ಜನರನ್ನು ಭೀತಿಗೆ ತಳ್ಳುತ್ತ, ಅವರೊಳಗಿನ ಮೌಢ್ಯವನ್ನು ಪೋಷಿಸುತ್ತ, ತಮ್ಮ ಜೇಬು ತುಂಬಿಸಿಕೊಳ್ಳುವ ಕೆಳದರ್ಜೆಯ ಕುತಂತ್ರಗಳನ್ನು ನಡೆಸುತ್ತಿವೆ. ಆಶ್ಚರ್ಯವೆಂದರೆ ಇದನ್ನು ಯಾರೂ ಸಹ ಪ್ರತಿಭಟಿಸದೇ ಇರುವುದು!
ವಿಚಾರವಾದಿಗಳೆನಿಸಿಕೊಂಡ ಬಹುತೇಕರೂ ಸಹ ಬಾಯಿಮುಚ್ಚಿಕೊಂಡಿದ್ದಾರೆ; ಕಾರಣವೇನೆಂದರೆ ಅವರು ಮೀಡಿಯಾಗಳ ವಿರುದ್ಧ ಧ್ವನಿಯೆತ್ತಿ ಅಪಾಯ ತಂದುಕೊಳ್ಳಲಾರರು! ಇದು ಇನ್ನೊಂದು ಬಗೆಯ ಮೌಢ್ಯ!
ವಿಜಯ ಕರ್ನಾಟಕ ಇಂದಿನ ಪತ್ರಿಕೆಯ ಮುಖಪುಟದಲ್ಲೇ ಈ ಅವಾಂತರ ಕುರಿತು ವರದಿ ಮಾಡಿ ಗಮನ ಸೆಳೆದಿದೆ. ಅದೊಂದು ಸಮಾಧಾನ. ಕರ್ನಾಟಕದ ಜನತೆಯನ್ನು ಸದ್ಯಕ್ಕೆ ಮೀಡಿಯಾಗಳಿಂದಲೇ ಕಾಪಾಡುವ ಕೆಲಸ ಆಗಬೇಕಿದೆ.!
this bruhat brahmanda fellow in one of his shows said something like wearing salwaar-kameez will invite uterus cancer... i had seen that episode, by accident... i have heard that he has also made statements like the reason for all the wrongs things in the world is because nature and god are upset with women wearing jeans pant and stuff...
ReplyDeletetrue we need to fight such people and the channels which braodcast such nonsense..
- Samvartha 'Sahil'
ಇವನೊಂಥರ ಭಯೋತ್ಪಾದಕ. ಎಲ್ಲಿ ನೋಡಿದರು ದೀಪಗಳ ಹಾವಳಿ ನಿನ್ನೆ :-). ಅದಕ್ಕಿಂತ ಮೊನ್ನೆ ನನಗೆ ಸಂಬಂಧ ಪಟ್ಟವರರು ಫಂಕ್ಷನ್ ನಡಿಯಿತು ಅಲ್ಲಿಗೆ ಬಂದಿದ್ದ ನಮ್ಮ ದೊಡ್ಡಮ್ಮ ಒಬ್ರು ಆ ದೀಪ ಹಚ್ಚೆ ಎಂದು ಕಾಡಿದ್ರು.. :-)
ReplyDeleteIt is not worth to talk about Narendra swamy..at all. He does not deserve it. What he speaks in his show is not Jyotishya at all.He is not an efficient scholar in his field.! Believing in Jyotishya, or not believing in Jyotishya, is a different issue. Belief and Blind belief is also a different issue. so please do not co relate these with narendra swamy. If you want to attack on Narendra swamy, then attack on him. not on Jyotishya.
ReplyDeleteThis idiot seriously needs to be stopped from coming on the TV. but the bigger problem than him is we, the common people. The fact is that we give him enough TRPs to be popular enough to cause these kind of utter nonsense by his false 'claims'. First we need to change to stop him.
ReplyDeletesir, thats why i wondered. in our lane also in one templee so much rush was there. oh such people should be hanged publicly
ReplyDeletehello Narendra Swamy,
ReplyDeletedeepa vu ninnade..
gaali yu ninnade..
neene namage pralaya..
sumne mane olage irayya..
ಈ ಮಹಾನುಭವನ ಮುಖಕ್ಕೆ ಉಗಿತೀರಾ....? ಈತ ಬಳಸುವ ಪದಗಳು ಎಂತವು ಅಂತೀರಾ, ತೀರಾ ಹೇಸಿಗೆ ಹುಟ್ಟಿಸುತ್ತವೆ. ಈತನಿಗೆ ಬುದ್ಧಿ ಸ್ಥಿಮಿತದಲ್ಲಿದೆಯೋ ಇಲ್ಲವೋ ಆ ಭಗವಂತನೇ ಬಲ್ಲ. ಇವನ ಮೂಢನಂಬಿಕೆಗಳನ್ನೂ ಜನರಲ್ಲಿ ಬಿತ್ತುತ್ತಾ ಮೌಡ್ಯಾಚರಣೆಗೆ ಮುಂದಾಗಿದ್ದಾನೆ. ಥೂ! ಇವನ ಜನ್ಮಕ್ಕೆ ಯಾವ ಗ್ರಹ ತಗುಲಿದೆಯೋ....?
ReplyDelete-purushotham
ನಂಬುವವರು ಇರುವವರೆಗೂ ನಂಬಿಸುವವರು ಇರುತ್ತಾರೆ....
ReplyDeleteಜನರನ್ನು ಮೌಢ್ಯತೆಯ ಅಂಧಕಾರಕ್ಕೆ ತಳ್ಳುತ್ತಿರುವ ನರೇಂದ್ರ ಸ್ವಾಮಿಯ ಬ್ರಹ್ಮಾಂಡಕ್ಕೆ ಬ್ರಹ್ಮಾಸ್ತ್ರ ಯಾವಾಗ ?
ReplyDelete3 to 4 years back this B... was acting in kannada movies as junior artist.... M surprised to see him as astrologer in the TV channels...
ReplyDeleteಯಾರದ್ರು ಉಪೇಂದ್ರ ರ ಉಪ್ಪಿ ದಾದಾ ಎಂ.ಬಿ.ಬಿ.ಎಸ್. ನೋಡಿದ್ರೆ ಈ ಮಹಾನುಬಾವ ಅದರಲ್ಲಿ ವಾರ್ಡ್ ಬಾಯ್ ಆಗಿ
ReplyDeleteಕಾಣಿಸಿಕೊಂಡಿದ್ದ. ಎಲ್ಲಿಂದ ಎಲ್ಲಿಗೆ!!!!!!!!
ತಲೆ ಇಲ್ಲದ ಜನ ನೋಡುತ್ತಾರೆ ಟಿ.ಆರ್.ಪಿ. ಬೇಕಾದ ಜನ ಹಾಕುತ್ತಾರೆ. ದೇವ್ರೆ ಕಾಪಾಡಪ್ಪ
E Punyathma Helidda Omee... "Sattag Neevella Kannu Dana Madteerra, Mundeva Mundina Janmadalli Kurudaragi Hut'teera" anta great massage, en karmari namdu?
ReplyDeleteHello sampadakiya,
ReplyDeletecan you bring out the history and biography of this Narendra swamy? and publish it? what is his education !? when did he learn vedas, and jyotishya?! you could give this info to us, instead of blindly blaming jyotishya. Ok now also you can do this. this will help in exposing hypocrites like Narendra swamy.
ಈತನೇ ಒಂದು ಬೃಹತ್ ಬ್ರಹ್ಮಾಂಡ ಇದ್ದಾ ಹಾಗಿದ್ದಾನೆ. ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ವಿರೋಧಿಸ್ಬೇಕು. ನಮ್ಮ ನಾಡಿನ ಸೋ ಕಾಲ್ಡ್ ಬುದ್ಧಿಜೀವಿಗಳು, ವಿಚಾರವಾದಿಗಳು, ಪವಾಡ ಬಯಲು ಮಾಡೋರು ಇಂತವುಗಳನ್ನು ಪ್ರತಿಭಟಿಸಬೇಕು. ಆದರೆ ಇದರಿಂದ ತಮ್ಮ ಟಿಆರ್ ಪಿ ರೇಟ್ ಎಲ್ಲಿ ಕಡಿಮೆಯಾಗುತ್ತೋ ಅಂತ ಅವರೆಲ್ಲರಿಗೂ ಭೀತಿ. ದೇಶ ಹಾಳಾಗೋದು ದುಷ್ಟರಿಂದಲ್ಲ, ದುಷ್ಟತನ ನೋಡಿಯೂ ಸುಮ್ಮನಿರುವ ಬುದ್ಧಿವಂತರಿಂದ ಅಂತ ಎಲ್ಲೋ ಓದಿದ್ದ ನೆನಪು.
ReplyDeleteಈ ಮುಂಡೆ ಗಂಡ ಹೇಳಿದನ್ನು ನಂಬುವವರು ಎಲ್ಲಾ ಹುಚ್ಚರು
ReplyDeleteHeege janarige tamma mele nambike ellada karana e taraha madtate
ReplyDeleteayyo swamy ee hinde kolarada kaivara tata heliddaru 2000 isavige kallu koli kooguttade, kallu basava heddu kooguttade antha adre adu aagale illa... matte 2010kke pralaya aguttade antha helidru adre adu saha aagalilla... adre pralaya aytu adu elli rajya drohigaliruva jaaga bittu bere yello aythu.... higiruvaaga ee pugasatte paper pracharakkagi illasalladannu maatanaaduva ee bikanasi swamy helida matugalu esthu sari heli???????????????????
ReplyDeleteEetha thanna karyakramakke thanna size anne hesaraagi ittidaane aste ("Brahmanda" andare universe antha thilibedi).
ReplyDeleteKaasu kottu kasa thagaLodu, eevayyanatra prashne keLodu eradoo onde.
Jana maruLo! maadhyamada maruLo!!
Tell him.. If he appear at 7:30 AM Show for continuous 3 days he will get AIDS..
ReplyDeleteThe words he speaks shows his culture. Media is giving him an stage to cheat people. He is playing with the sentiments of the people. If the same thing continues... people will lodge a complaint on the TV channel for giving support for a cheater to cheat people.
ReplyDeletehello all, not sure what makes you all speak about a learned man so loosely. the tounge wags too much because it's without a bone. i'm a woman and i along with lot of other woman in our locality and in our own state appreicate and respect a lot about what this guruji speaks because its REALITY. there is a saying, if a person qho scolds and tells us then its definetly for our own good. each one of you who have written all this, did you guys give a thought before even writting all this in such a forum. the knowledge that this guruji carries is so immense. so what if he has acted in movies? and why not?? stop blaming him... reflect on your own consious before you make others realize it for them....what u do so you reap. if guruji is wrong then god will take care of him like the way he is taking care of us. you need not be ready to scold and punish anybody. its the god and people who have encouraged and made guruji popular and so shall it be. if you have anything to let me know please write to ashwini_mc@hotmail.com. i definetly dont want to debate and argue but atleast can understand what you mean. in the end,the way we are speaking comes from what values we carry where we are from and who is in our circle of influence an old saying.. the man is known by the company he keeps). be healthy in your thoughts and it reflects...
ReplyDeleteಎಲ್ಲಾರಿಗೂ ನನ್ನ ನಮಸ್ಕಾರಗಳು ,ನಾನು ಸಂಪಾದಕರ ಅನಿಸಿಕೆ ಮತ್ತು ಬೇರೆ ಜನಗಳ ಅನಿಸಿಕೆ ಓದಿ ಬೇಸರಗೊಂಡು ನಿಮಗೆ ಕೆಲವೊಂದು ಪ್ರಶ್ನೆ ಗಳನ್ನೂ ಕೇಳಲು ಬಯಸುತ್ತೇನೆ . ಅವರು ಬಯ್ದಿದ್ದು ನಿಮನ್ನ ಅಥವ ನಿಮ್ಮ ಮನೆಯವರನ್ನು ಅಂಥ ಏಕೆ ಅನ್ದುಕೊಲ್ಥಿಒರಿ , ನಿಮನ್ನ ಕಂಡ್ರೆ ಆಗದವರು ಇರ್ತಾರೆ ಹಾಗಂತೆ ನೀವು ಜೀವ ಬಿತ್ಬಿಡೋಕೆ ಆಗುತ್ತ .ರಾಜಕಾರಣಿಗಳು ದುಡ್ಡು ಮಾಡ್ತಾರೆ ಅದ್ನಾ ಕೆಳಕೆ ನಿಮಗೆ ದಂ ಇಲ್ಲ ,may be he an junior artist some days back ,name the ppl i can get his bk history , ನಿಮ್ಮ ಆತ್ಮ ಸಾಕ್ಷಿ ಯಾಗಿ ಹೇಳಿ ನೀವು ಯಾರಿಗೂ ಕೆಟ್ಟದ್ದನ್ನು ಬಯಸಿಲ್ವ .at least he is educating some thing, y u ppl bother about him ,if u cant see him dont see him ,if u dont ant to listen him plz dont,
ReplyDeleteಈ ವ್ಯಕ್ತಿ ನನಗೆ ವೈಯಕ್ತಿಕವಾಗಿ ಗೊತ್ತು.ಇವನೊಡನೆ ಒಂದು ಇಡೀ ದಿನ ಕಳೆಯೋ ಭಾಗ್ಯ ನನ್ನದಾಗಿತ್ತು
ReplyDeleteಕೆಲವೊಂದು ಉದಾಹರಣೆಗೆಳು
ನಿಮಗೆ ಭೂತ ನೋಡಬೇಕೆ ? ಹಳೆ ಬಟ್ಟೆಯಲ್ಲಿ ಸಕ್ಕರೆ ಹಾಕಿ ಮನೆ ಹೊರಗಡೆ ಇಡಿ. ಅದರಲ್ಲಿ ಭೂತ ಬರುತ್ತದೆ
ಕುಡಿತ ಬಿಡಬೇಕೇ ರಂ ಬಾಟಲ್ ತಗೊಂಡು ಹೋಗಿ ಹೊಳೆ ಬದಿಯಲ್ಲಿ ಬಿಟ್ಟು ಬಾ.
ಇನ್ನು ಪ್ರಥಮ ರಾತ್ರಿಯಿಂದ ಹಿಡಿದು toilet ಗೆ ಹೋಗಿ ಸ್ವಚ್ಛವಗುವುದರ ಬಗ್ಗೆ ಇವನ ವರ್ಣನೆ ಕೇಳಲು ಕಿವಿಗಲೆರದು ಸಾಲದು
ಯಾವುದೋ ಚಲನ ಚಿತ್ರ ನಡೆಯದಿರಲು ಕಾರಣ ನಿರ್ಮಾಪಕ ಇವನಿಗೆ ಸಂಭಾವನೆ ನೀಡದಿರುವುದು
ವಿಜಯ ಮಲ್ಯ ಯು ಬಿ ಟವರ್ನಲ್ಲಿ ಇವನಿಗೆ ಒಂದು ಆಫಿಸ್ ಮಾಡಿ ಕೊದೊನಿದ್ದ , ಏನಾಯ್ತಿ ಅಂಥ ಗೊತ್ತಿಲ್ಲ
ಸ್ವಲ್ಪ ವರ್ಷದ ಹಿಂದೆ "ಬಾಡಿ ಬ್ರಹ್ಮಾಂಡ" ಅವ್ರು "weekly holiday ನ sunday ಇಂದ monday ಗೆ ಶಿಫ್ಟ್ ಮಾಡ್ಬೇಕು" ಅಂತ central govt ಗೆ letter ಬರ್ದಿದ್ನಂತೆ :) ಸದ್ಯ ಅವ್ರು ಅದ್ನ ಓದಿಲ್ಲ... ಯಾಕಂದ್ರೆ ಈ ಸ್ವಾಮಿ ಹೇಳೋ ಒತ್ತೆ ಒಂದು ಶಬ್ದ ಬ್ರಹ್ಮಂಗು ಅರ್ಥ ಆಗಲ್ಲ....
ReplyDeleteHe is a idiot fellow if tell people to do all non sense and he non vegetarian daily morning noon and night tats y he is of that size
ReplyDelete