Thursday, February 24, 2011

ಪತ್ರಕರ್ತರ ಸಂಬಳ ನಿಜಕ್ಕೂ ಎಷ್ಟಿರುತ್ತೆ, ಗೊತ್ತಾ ನಿಮಗೆ?


ಪತ್ರಕರ್ತರು ಎಷ್ಟು ಸಂಬಳ ತಗೋತಾರೆ, ಸ್ವಲ್ಪ ಹೇಳಿ ಎಂದು ಓದುಗರು ಕೇಳ್ತಿದ್ದಾರೆ.

ಹೌದೂ, ಪತ್ರಕರ್ತರು ಎಲ್ಲರ ಸಂಬಳ ಎಷ್ಟು, ಆಸ್ತಿ ವಿವರ ಏನೇನು ಅಂತ ಪ್ರಕಟಿಸ್ತಾ ಇರ‍್ತಾರೆ. ಅವರ ಜೋಳಿಗೆಗೆ ಎಷ್ಟು ಕಾಸು ಬೀಳುತ್ತೆ ಅನ್ನೋದು ಓದುಗರ ಕುತೂಹಲ.

ಹಿಂದೆಲ್ಲ ಪತ್ರಕರ್ತರು ತಗೋತಿದ್ದ ಸಂಬಳ ತುಂಬಾ ಕಡಿಮೆ. ಎಷ್ಟು ಕಡಿಮೆ ಅಂದ್ರೆ ಅದೂ ಒಂದು ವೃತ್ತಿಯೇ ಎಂಬ ಅನುಮಾನ ಮೂಡಿಸುವಷ್ಟು.

ಆದರೆ ಈಗ ಹಾಗಿಲ್ಲ. ಕೈ ತುಂಬಾ ಸಂಬಳ ದಕ್ಕುತ್ತೆ. ಕೈ ತುಂಬಾ ಅಂದರೆ ಎಷ್ಟು ಅಂತ ನೀವು ಮರುಪ್ರಶ್ನೆ ಎಸೆಯಬಹುದು. ಸುಮ್ನೆ ಒಂದು ಅಂದಾಜು ಕೊಡ್ತೀವಿ, ಅರ್ಥ ಮಾಡಿಕೊಳ್ಳೋ ಹಂಗೆ ಇದ್ರೆ ಅರ್ಥ ಮಾಡಿಕೊಳ್ಳಿ.

ಸಂಬಳ, ವಗೈರೆ ಸಂಸ್ಥೆಗಳನ್ನು ಆಧರಿಸಿರುತ್ತದೆ. ಅಂದರೆ ಕೆಲವು ಸಂಸ್ಥೆಗಳು ಕೈ ತುಂಬ ಕೊಡುತ್ತವೆ, ಮತ್ತೆ ಕೆಲವು ಜಿಗುಟು.
ನಮಗೆ ತಿಳಿದ ಪ್ರಕಾರ ಪ್ರಜಾವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕಗಳಲ್ಲಿ ಸಂಬಳ ಚೆನ್ನಾಗಿಯೇ ಕೊಡಲಾಗುತ್ತದೆ. ನ್ಯೂಸ್ ಚಾನಲ್‌ಗಳ ಪತ್ರಕರ್ತರಿಗೆ ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗಿಂತ ಹೆಚ್ಚು ಸಂಬಳವಿರುತ್ತದೆ. ಕೆಲವು ಕಡೆ ಹುದ್ದೆಯನ್ನು ಮಾನದಂಡವಾಗಿಟ್ಟುಕೊಂಡು ಸಂಬಳ ಫಿಕ್ಸ್ ಆಗಿರುತ್ತದೆ, ಮತ್ತೆ ಕೆಲವು ಕಡೆ ಸಿಬ್ಬಂದಿಯ ಅರ್ಹತೆ, ಸಾಮರ್ಥ್ಯವೂ ಪರಿಗಣನೆಗೆ ಬರುತ್ತದೆ. ಕೆಳಹಂತದ ಅಂದರೆ ವರದಿಗಾರ, ಉಪಸಂಪಾದಕರ ಸಂಬಳ ೮,೦೦೦ ರೂಪಾಯಿಗಳಿಂದ ಮೇಲ್ಪಟ್ಟು ೨೦-೨೫ ಸಾವಿರ ರೂಪಾಯಿಗಳವರೆಗೆ ಇರುತ್ತದೆ. ಸಂಪಾದಕರನ್ನು ಹೊರತುಪಡಿಸಿ ಉಳಿದ ಉನ್ನತ ಹುದ್ದೆಯ ಪತ್ರಕರ್ತರು ೩೦ರಿಂದ ೬೦ ಸಾವಿರ ರೂಪಾಯಿಗಳವರೆಗೆ ವೇತನ ಪಡೆಯುತ್ತಾರೆ.

ಕೆಲವು ಪತ್ರಿಕೆಗಳಲ್ಲಿ ಸಂಪಾದಕ ಹುದ್ದೆಗೆ ವರ್ಷದ ಪ್ಯಾಕೇಜು ಲೆಕ್ಕದಲ್ಲಿ ಸಂಬಳ ಕೊಡಲಾಗುತ್ತದೆ. ಅಂದರೆ ವರ್ಷಕ್ಕೆ ಇಷ್ಟು ಅಂತ.

ಸುಮ್ನೆ ಒಂದು ಅಂದಾಜು ಮಾಡಿದ್ದೇವೆ, ನೋಡಿ. ಈಗ ಒಂದು ಪತ್ರಿಕೆಗೆ ಒಬ್ಬರು ಸಂಪಾದಕರು ನೇಮಕವಾದರು ಅಂತಿಟ್ಟುಕೊಳ್ಳಿ. ನಮ್ಮ ಅಂದಾಜಿನ ಪ್ರಕಾರ ಅವರಿಗೆ ಸರಿಸುಮಾರು ಹದಿನಾಲ್ಕು ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜು ಕೊಡಲಾಗುತ್ತದೆ. ಇದರಲ್ಲಿ ವಸತಿ, ಪೆಟ್ರೋಲು, ಮ್ಯಾಗಜೀನು ಇತ್ಯಾದಿ ಎಲ್ಲವೂ ಅಡಕ. ದೇಶ ಸುತ್ತು, ಕೋಶ ಓದು ಅನ್ನೋದು ಗಾದೆ. ಸಂಪಾದಕರು ದೇಶ ಸುತ್ತುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳುವ ತವಕದಲ್ಲಿರುವವರಾದರೆ ಅವರಿಗೆ ದೇಶದ ಒಳಗಡೆ ಎಕ್ಸಿಕ್ಯೂಟಿವ್ ದರ್ಜೆಯ ವಿಮಾನ ಪ್ರಯಾಣವನ್ನು ಸಂಸ್ಥೆ ಕಲ್ಪಿಸುತ್ತದೆ. ರಾಜ್ಯದ ಒಳಗಡೆ ಓಡಾಡಲು ಅವರಿಗೆ ಹವಾನಿಯಂತ್ರಿತ ಇನೋವಾ ಕಾರನ್ನು ನೀಡಲಾಗುತ್ತದೆ. ರಾಜ್ಯದ ಒಳಗಡೆ ಪ್ರಯಾಣಕ್ಕೆ ಅವರು ರೈಲನ್ನು ಬಳಸುವುದಾದರೆ ಮೊದಲ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಅವರು ಓಡಾಡಬಹುದು. ಇದೆಲ್ಲದರ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತದೆ. ಸಂಪಾದಕರು ಅನಿಯಂತ್ರಿತವಾಗಿ ಸಂಪರ್ಕ ಸಾಧನಗಳನ್ನು ಬಳಸಬೇಕಾಗುತ್ತದೆ. ಅಂದರೆ ಲ್ಯಾಂಡ್ ಲೈನ್ ಫೋನು, ಇಂಟರ್‌ನೆಟ್ ಮತ್ತು ಮೊಬೈಲ್. ಇವುಗಳ ಎಲ್ಲ ಬಿಲ್‌ಗಳನ್ನು ಸಂಸ್ಥೆ ಮರುಪಾವತಿ ಮಾಡುತ್ತದೆ.

ಇನ್ನು ಸಹಾಯಕ ಸಂಪಾದಕರ ವಿಷಯಕ್ಕೆ ಬನ್ನಿ. ಅವರಿಗೆ ಸಂಸ್ಥೆ ಸುಮಾರು ೬೦,೦೦೦ ರೂಗಳನ್ನು ಕೊಡಮಾಡಬಹುದು. ಒಂದು ವೇಳೆ ಸಹಾಯಕ ಸಂಪಾದಕರು ವರದಿಗಾರಿಕೆಯ ವಿಷಯದಲ್ಲಿ ನಿಪುಣರಾಗಿದ್ದು, ಆ ಕುರಿತು ಅವರು ಆಸಕ್ತಿ ತೋರುವುದಾದರೆ ಅವರ ವರದಿಗಾರಿಕೆಯ ಅಸೈನ್‌ಮೆಂಟುಗಳಿಗೆ ವಿಶೇಷ ಭತ್ಯೆಯನ್ನು ಪಡೆಯುತ್ತಾರೆ.

ಇನ್ನು ಸುದ್ದಿ ಸಂಪಾದಕರ ವಿಷಯಕ್ಕೆ ಬನ್ನಿ. ಸುದ್ದಿ ಸಂಪಾದಕರು ಒಂದು ವೇಳೆ ಅಂಕಣಕಾರರೂ ಆಗಿದ್ದರೆ ತಲಾ ಒಂದು ಲೇಖನಕ್ಕೆ ಅವರು ೧,೦೦೦ದಂತೆ ವಿಶೇಷ ಭತ್ಯೆ ಪಡೆಯಬಹುದು. ಬೇರೆ ಬೇರೆ ಸ್ವರೂಪದ ಇಂಕ್ರಿಮೆಂಟುಗಳೂ ಇವರಿಗೆ ಲಭ್ಯ. ಅಂದಾಜಿಗೆ ಒಂದು ಐದು ಇಂಕ್ರಿಮೆಂಟು ಎಂದು ಭಾವಿಸಿದರೂ ಅವರು ತಿಂಗಳಿಗೆ ಒಟ್ಟು ೬೭,೦೦೦ ರೂ. ಪಡೆಯಬಹುದು.

ಇನ್ನು ವಿಶೇಷ ವರದಿಗಾರರಿಗೆ ಮುಖ್ಯ ವರದಿಗಾರರ ಹುದ್ದೆಗೆ ಸಮನಾಗಿ ಸಂಬಳ ನಿಗದಿಪಡಿಸುವ ಸಾಧ್ಯತೆಗಳಿರುತ್ತದೆ. ಇವರಿಗೂ ಒಂದೆರಡು ವಿಶೇಷ ಇಂಕ್ರಿಮೆಂಟುಗಳು ಲಭ್ಯವಾಗಬಹುದು. ವಿಶೇಷ ವರದಿಗಾರರೂ ಸಹ ಊರೂರು ಸುತ್ತಬೇಕು. ಹೀಗಾಗಿ ಅವರಿಗೆ ತಿಂಗಳಿಗೆ ೫,೫೦೦ ರೂ. ಪ್ರಯಾಣ ಭತ್ಯೆಯನ್ನೂ ನಿಗದಿಪಡಿಸಬಹುದು. ಒಟ್ಟಾರೆ ಅವರ ಸಂಬಳ ೭೦,೦೦೦ ತಲುಪಬಹುದು.

ಇದು ಒಂದು ಅಂದಾಜು ಪಟ್ಟಿ. ತುಂಬಾ ಕನ್‌ಫ್ಯೂಸ್ ಮಾಡಿದೆವು ಅನ್ನಿಸಿತಾ? ಕ್ಷಮಿಸಿ.

ಪತ್ರಕರ್ತರ ಸಂಬಳವನ್ನು ಹೈಪ್ ಮಾಡಿ ಹೇಳುವವರಿದ್ದಾರೆ. ಅವರ ಸಂಬಳ ಎಷ್ಟು ಗೊತ್ತಾ? ತಿಂಗಳಿಗೆ ೪ ಲಕ್ಷ, ೮ ಲಕ್ಷ ಎಂದು ಹೇಳುವವರಿದ್ದಾರೆ. ಹೀಗೆ ಹೇಳುವವರು, ಯಾರ ಕುರಿತು ಮಾತನಾಡುತ್ತಿರುತ್ತಾರೋ ಅವರನ್ನು ವೈಭವೀಕರಿಸಲು ಯತ್ನಿಸುತ್ತಿರುತ್ತಾರೆ ಅಥವಾ ಅವರ ಇಮೇಜು ಹಾಳುಮಾಡಲು ಯತ್ನಿಸುತ್ತಿರುತ್ತಾರೆ.

ಸತ್ಯ ಎಲ್ಲೋ ಮಧ್ಯೆದಲ್ಲಿ ಇರುತ್ತದೆ ಎಂದು ಹೇಳುವುದಕ್ಕೆ ಇಷ್ಟನ್ನು ಬರೆಯಬೇಕಾಯಿತು.

ಕೊನೆಕುಟುಕು: ಪತ್ರಕರ್ತರ ಕುರಿತು ಇರುವ ಒಂದು ಎಸ್‌ಎಂಎಸ್ ಇಲ್ಲಿದೆ, ಓದಿ ಅಭಿಪ್ರಾಯ ಹೇಳಿ.

Promises should be taken before choosing media field.
1. I have already enjoyed my life in childhood.
2. I love tension.
3. I dont want to spend time with my friends and family.
4. I love night duties.
5. I love to work on sundays and holidays.
6. I want to take revange on myself
7. I dont want to get married before 30 years of age.
8. I want to study until my death.
9. I dont want hair on my head.

6 comments:

  1. enri sampadakare

    patrakartaru patrakartaru anta ಸಂಪಾದಕ, ಸಹಾಯಕ ಸಂಪಾದಕ, ಸುದ್ದಿ ಸಂಪಾದಕ, ವಿಶೇಷ ವರದಿಗಾರ hege barita hodri. patrikalayagalalli dalli kelasa mado Vinyasakaru, citrakararu, chaya chitragara hege ivarella patra kartaru annisikololva?

    ReplyDelete
  2. This is all about kannada prabha's v.bhat and team.As i heard janashri was offered 6 lacks(per month) to v.bhat....

    ReplyDelete
  3. alla swamy sampadakeeyada balagave.....
    patrike athava electronic media eeveradaralliyu patrakarthariginta heccu dudiyudu computer opriters, graphic Designers, mattu utavinyasakaru heccu kelasa maaduvudu avara bagge nimageenu bariyabeku annisalillava atava ee namma sarakara mattu ella vevsteyu ee Designersnnu gurutisalee illa neevu saha adee salige seruvanthavara haage kaanuttide. idu yava nyaya swamy sampadakare...

    ReplyDelete
  4. The SMS you mentioned is in circulation among IT professionals about their profession. Someone has changed it for journos.

    -Pavanaja

    ReplyDelete
  5. Kshamsi Idu Khadithavagiyu sullu lekkachar. sampadakru ello bramalokadalli iddarentha kanuthe.-
    Bada Pathrakarth

    ReplyDelete