Wednesday, February 23, 2011

ಟಿವಿ ಚಾನಲ್‌ಗಳಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯೂ ಬೇಡವೇ?


ಜ್ಯೋತಿಷಿ ನರೇಂದ್ರ ಬಾಬು ಶರ್ಮನ ಕುರಿತಾಗಿ ಗಂಭೀರವಾದ ವಿಷಯಗಳನ್ನು ಓದುಗರು ಬರೆದು ಹೇಳುತ್ತಿದ್ದಾರೆ. ಈ ವ್ಕಕ್ತಿ ಲೈವ್ ಕಾರ್ಯಕ್ರಮಗಳಲ್ಲಿ ದೂರವಾಣಿ ಕರೆ ಮಾಡುವ ವೀಕ್ಷಕರ ಜತೆ ತೀರಾ ಕೆಟ್ಟದಾಗಿ, ಕೊಳಕು ಭಾಷೆಯಲ್ಲಿ ಮಾತನಾಡುತ್ತಾನೆ.

ಒಂದೆರಡು ಉದಾಹರಣೆಗಳು ಇಲ್ಲಿವೆ.

ಒಬ್ಬಾಕೆ ಕರೆ ಮಾಡಿ, ತನ್ನ ಗಂಡ ಬೇರೆ ಸ್ತ್ರೀ ಸಹವಾಸ ಮಾಡಿದ್ದಾನೆ. ಇದರಿಂದಾಗಿ ತನ್ನ ಮನಸ್ಥಿತಿ ಕೆಟ್ಟು ಹೋಗಿದೆ. ಏನಾದ್ರೂ ಪರಿಹಾರ ಕೊಡಿ ಎಂದು ಕೋರುತ್ತಾಳೆ. ನರೇಂದ್ರ ಬಾಬು ಶರ್ಮ ಆಕೆಯ ಜನ್ಮದಿನಾಂಕವನ್ನು ಗಮನಿಸಿ ಹೌದೋ, ನಿನ್ನ ಗಂಡ ಕೆಟ್ಟಿದ್ದಾನೋ? ನೀನು ಸರಿಯಾಗಿದ್ದೀಯಾ? ನಿನ್ನ ಜಾತಕ ಹೇಳಲಾ ನಾನು? ನಿನಗೆ ಯಾರೊಂದಿಗೆ ಸಂಬಂಧವಿದೆ ಹೇಳಲಾ? ಎಂದು ಅಬ್ಬರಿಸುತ್ತಾನೆ.

ಅತ್ತ ಗಾಬರಿ, ಆಘಾತದಿಂದ ಕರೆ ಮಾಡಿದಾಕೆ ಸಂಪರ್ಕ ಕಡಿತ ಮಾಡುತ್ತಾಳೆ. ನೋಡಿದ್ರಾ, ಅವಳ ಜಾತಕ ಹೇಳುವಷ್ಟರಲ್ಲಿ ಆಕೆ ಹೇಗೆ ಕರೆ ಕಟ್ ಮಾಡಿದಳು ಎಂದು ನರೇಂದ್ರ ಬಾಬು ಶರ್ಮ ವಿಕೃತವಾಗಿ ನಗುತ್ತಾನೆ. ಆಘಾತಕ್ಕೆ ಒಳಗಾದ ಹೆಣ್ಣುಮಗಳ ಕಥೆ ಏನಾಯ್ತು? ಆಕೆ ಚೇತರಿಸಿಕೊಂಡಳಾ? ಗೊತ್ತಿಲ್ಲ.

ನರೇಂದ್ರ ಶರ್ಮನ  ದೃಷ್ಟಿಯಲ್ಲಿ ಹೆಣ್ಣುಮಕ್ಕಳೆಂದರೆ ಲಕ್ಷಣವಾಗಿ ಸೀರೆ ಉಟ್ಟು, ಕೈ ತುಂಬಾ ಬಳೆ ತೊಟ್ಟು, ಹಣೆಯಲ್ಲಿ ರುಪಾಯಿ ಗಾತ್ರದ ಸಿಂಧೂರ ಧರಿಸಿಕೊಂಡಿರಬೇಕು. ತನ್ನ ಕಾರ್ಯಕ್ರಮದಲ್ಲಿ ಆತ ಹೆಣ್ಣುಮಕ್ಕಳನ್ನು ಆಗಾಗ ಕಿಂಡಲ್ ಮಾಡುತ್ತಲೇ ಇರುತ್ತಾನೆ.

ಈಗಿನ ಕಾಲದ ಹೆಂಗುಸ್ರು, ಅವರ ವೇಷನೋ, ಮುಂಡೇವು ಯಾಕೆ ಹುಟ್ಟಿದ್ವೋ ಅನ್ನಿಸುತ್ತೆ. ಹಣೆಯಲ್ಲಿ ಕುಂಕುಮವಿಲ್ಲ, ಕೈಯಲ್ಲಿ ಬಳೆಯಿಲ್ಲ, ಬೂಬಮ್ಮಗಳ ಹಾಗೆ ಇರತಾವೆ ಎಂದು ಕಮೆಂಟ್ ಮಾಡುತ್ತಾನೆ. ಉದ್ಯೋಗಸ್ಥ ಮಹಿಳೆಯರೆಂದರೆ ಈತನಿಗೆ ಅಲರ್ಜಿ. ಆಗಾಗ ಅವರನ್ನು ಟೀಕಿಸುತ್ತಲೇ ಇರುತ್ತಾನೆ.

ಮುಂಡೇವು, ಅದೇನೋ ನೈಟಿ ಅಂತ ಹಾಕ್ಕೊಳ್ತಾವೆ. ಮನೇಲೂ ನೈಟಿ, ಹೊರಗಡೆನೂ ನೈಟಿ. ದರಿದ್ರ ಬರೋದೇ ಅದಕ್ಕೆ ಎಂದು ತೀರ್ಮಾನ ಕೊಡುತ್ತಾನೆ.

ಬೆಳಿಗ್ಗೆ ಎದ್ದ ಮೇಲೆ ಯಾರ‍್ಯಾರ ಮುಖವನ್ನೋ ನೋಡಬೇಡಿ. ಚಪ್ಪಲಿ, ಪೊರಕೆ ನೋಡಬೇಡಿ. ಅದರಲ್ಲೂ ಮುಂಡೇವು ಎದ್ದ ತಕ್ಷಣ ಹೊರಗೆ ಬಂದು ಬಿಡುತ್ತವೆ. ಅಲ್ಲಿ ಯಾರ‍್ಯಾರೋ ಓಡಾಡ್ತಾ ಇರ‍್ತಾರೆ. ಅದರಲ್ಲೂ ಹಜಾಮರ ಮುಖವನ್ನು ನೋಡಿದರೆ ಅಶುಭವಾಗದೆ ಇನ್ನೇನಾಗುತ್ತದೆ... ಎನ್ನುತ್ತಾನೆ ಈ ಪ್ರಕಾಂಡ ಪಂಡಿತ.

ಸತ್ತಾಗ ನೀವೆಲ್ಲ ಕಣ್ಣುದಾನ ಮಾಡ್ತೀರಾ, ಮುಂದಿನ ಜನ್ಮದಲ್ಲಿ ನೀವೆಲ್ಲ ಕುರುಡರಾಗಿ ಹುಟ್ತೀರಾ... ಇದು ನರೇಂದ್ರ ಬಾಬು ಶರ್ಮನ ಮಹಾನ್ ಸಂಶೋಧನೆ.

ಸವಿತಾ ಸಮಾಜಕ್ಕೆ ಸೇರಿದ ಯುವಕನೋರ್ವ ಕರೆ ಮಾಡುತ್ತಾನೆ. ತಾನು ರಿಯಲ್ ಎಸ್ಟೇಟ್ ವೃತ್ತಿಯನ್ನು ಮಾಡಬೇಕೆಂದಿದ್ದೇನೆ. ಯಶಸ್ವಿಯಾಗ್ತೀನಾ ಹೇಳಿ ಎಂದು ನರೇಂದ್ರ ಶರ್ಮಾನನ್ನು ಕೇಳುತ್ತಾನೆ. ಯಾವ ಜಾತಿ ನೀನು? ಎಂದು ನರೇಂದ್ರ ಶರ್ಮ ಹೇಳುತ್ತಾನೆ. ಯುವಕ ತನ್ನ ಜಾತಿಯನ್ನು ಹೇಳಿಕೊಳ್ಳುತ್ತಾನೆ. ಓಹೋ ನೀವು ಅವರೋ, ನಿಮಗೆ ಕ್ಷೌರದ ಕೆಲಸ ಬಿಟ್ಟು ಬೇರೆ ಯಾವುದೂ ಬರಕತ್ತಾಗಲ್ಲ ಬಿಡು ಎಂದು ವಿಕೃತವಾಗಿ ಕೈಯಲ್ಲಿ ಕತ್ತರಿಯಿಂದ ಕತ್ತರಿಸುವ ಶೈಲಿಯನ್ನು ತೋರಿ ನಗುತ್ತಾನೆ.

ಇಷ್ಟೆಲ್ಲ ಹೇಳ್ತೀಯಲ್ಲ, ಗಾಯತ್ರಿ ಮಂತ್ರಕ್ಕೆ ಎಷ್ಟು ಪಾದಗಳಿವೆ ಹೇಳು ಅಂತ ಈತನ ಪತ್ರಿಕಾಗೋಷ್ಠಿಯೊಂದರಲ್ಲಿ ಹಿರಿಯ ಪತ್ರಕರ್ತ ಸ. ಚಂದ್ರಶೇಖರ ರಾವ್ ಗಂಟುಬಿದ್ದಿದ್ದರಂತೆ. ನರೇಂದ್ರ ಬಾಬು ಶರ್ಮ ಕಕ್ಕಾಬಿಕ್ಕಿ. ನಿನಗೆ ಗೊತ್ತಿರೋದೆಲ್ಲ ನೀನು ಹೇಳು, ನಿನಗೆ ಗೊತ್ತಿಲ್ಲದನ್ನು ನಾನು ಹೇಳ್ತೀನಿ ಅಂದ್ರೆ ಶರ್ಮ ಗಪ್‌ಚುಪ್. ಅಶ್ವಮೇಧ ಯಾಗ ಮಾಡ್ತೀನಿ ಅಂತೀಯಲ್ಲ, ಹಿಂದೆ ಕುದುರೆಯನ್ನು ರಾಣಿಯ ಜತೆ ಒಂದು ರಾತ್ರಿ ಮಲಗಿಸುತ್ತಿದ್ದರು. ನೀನು ಯಾರನ್ನು ಮಲಗಿಸುತ್ತೀ? ಯಾಗದ ಹೆಸರಲ್ಲಿ ಎಷ್ಟು ಕೋಟಿ ಕಲೆಕ್ಷನ್ ಮಾಡಿದ್ದೀ. ಎಲ್ಲಿ ಸ್ವಲ್ಪ ಲೆಕ್ಕ ಕೊಡು ಎಂದು ಅವರು ಸಾಲುಸಾಲು ಪ್ರಶ್ನೆ ಕೇಳಿದಾಗ ನರೇಂದ್ರ ಬಾಬು ಶರ್ಮ ಗೋಷ್ಠಿಯನ್ನೇ ಬರಕಾಸ್ತು ಮಾಡಿ ಓಡಿಹೋಗಿದ್ದನಂತೆ.

ಕಸ್ತೂರಿಯಲ್ಲಿ ಈತ ಕಾರ್ಯಕ್ರಮ ನಡೆಸುತ್ತಿದ್ದಾಗ, ಈತನನ್ನು ನೋಡಲು ಹಿಂಡುಗಟ್ಟಲೆ ಜನರು ಕಸ್ತೂರಿ ಕಚೇರಿಯೆದುರೇ ಬಂದು ನಿಲ್ಲುತ್ತಿದ್ದರು. ತೊಲಗ್ರೀ ಮುಂಡೇವಾ ಎಂದು ಈತ ಅವರನ್ನು ಅಕ್ಷರಶಃ ಒದ್ದುಕೊಂಡೇ ಕಚೇರಿಗೆ ಹೋಗುತ್ತಿದ್ದುದನ್ನು ಕಂಡವರಿದ್ದಾರೆ. ಕಚೇರಿಯಲ್ಲಿ ಕುಳಿತ ಪತ್ರಕರ್ತರು ಎದ್ದು ನಿಂತು ಈತನಿಗೆ ನಮಸ್ಕಾರ ಹೇಳದಿದ್ದರೆ, ದುರಹಂಕಾರಿ ಮುಂಡೇವು ಎಂದು ಗೊಣಗಿಕೊಂಡು ಹೋಗುತ್ತಿದ್ದ.

ಎಲ್ಲಾ ಹಾಳಾಗಿ ಹೋಗಲಿ, ಸಲ್ವಾರ್ ಕಮೀಜ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದ್ದನಂತೆ ಈ ಭೂಪ.

ಈತನಿಗೆ ಮೆದುಳಿಗೇ ತಗುಲಿಕೊಂಡಿರುವ ಕ್ಯಾನ್ಸರ್ ವಾಸಿ ಮಾಡೋದು ಯಾರು?

ಅಷ್ಟಕ್ಕೂ ಜೀ ಟಿವಿಯವರು ಯಾಕೆ ಇವನನ್ನು ಇನ್ನೂ ಇಟ್ಟುಕೊಂಡಿದ್ದಾರೆ? ಟಿಆರ್‌ಪಿ, ಹೊಟ್ಟೆಪಾಡು ಇತ್ಯಾದಿ ಸಮರ್ಥನೆಗಳನ್ನು ಅವರು ಕೊಡಬಹುದು. ಅದಷ್ಟೇ ಸಾಕೆ? ಅವರಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯೂ ಇಲ್ಲವೇ? ಇದನ್ನು ಕೇಳುವವರು ಯಾರು?

ನೀವೇನಂತೀರಿ?

28 comments:

  1. ಚರಂಡಿ ಬಾಯಿಯ ಈ ಮನುಷ್ಯನ ವಿಕೃತ ಕ್ರಿಯೆಗಳಲ್ಲಿ ಹಲವಾರು ದುರ್ಬಲ ಮನಸ್ಸಿನ ಜನರ ಜೊತೆಗೇ ವಿದ್ಯಾವಂತ ಮಂದಿಯೂ ಸೇರಿ ಇಂತಹ ಅನಿಷ್ಟಗಳನ್ನು ಆರಾಧಿಸುತ್ತಿರುವುದು ಕಾಲದ ದುರಂತ.. ನೆನ್ನೆ ಬೆಂಗಳೂರಿನ ಮಾಜಿ ಉಪಮಹಾಪೌರ ಲಕ್ಷ್ಮಿನಾರಾಯಣನೇ ಉಚಿತವಾಗಿ ದೀಪ-ಎಣ್ಣೆ ಹಂಚಿ ಆವಲಹಳ್ಳಿಯ ಮಾರಮ್ಮನ ಗುಡಿ ಮುಂದೆ ಬೆಂಕಿ ಹಾಕಿದ್ದು, ಆಧುನಿಕರೆನಿಸಿಕೊಂಡ ಮಂದಿಯೇ ಇಂತಹ ಕುರುಡು ನಂಬಿಕೆಗಳನ್ನು ಉತ್ತೇಜಿಸುತ್ತಿರುವುದು, ಹಿಂದೆಂದಿಗಿಂತಲೂ ಹೆಚ್ಚಾಗಿ ದೇವಾಲಯ,ಹೋಮ-ಹವನ, ವಾಸ್ತು-ಜ್ಯೋತಿಷ್ಯಗಳಲ್ಲಿ ಹೂತು ಹೋಗುತ್ತಿರುವುದು ನಮ್ಮ ನಾಗರೀಕ ಸಮಾಜದ ಅವನತಿಗೆ ಸಾಕ್ಷಿ..

    ReplyDelete
  2. Nimma barahadindha naadru zee tv avaru yecchettu kondu aa kolaku vyaktiyanna kitthu haakali yendhu aashisutthene !!!

    ReplyDelete
  3. Media is not doing justice for what media is meant for. The days of 'ETHICAL' media is long been dead and buried forever. The present day media is mostly meant to either make money or tarnish the image of one you don't like and these two reasons are the core elements for all the gutter that is doled out as 'NEWS and INFORMATION'. Yes you need money to run a media house but only if you do it with a 'SOCIAL RESPONSIBILITY', it can be justified.

    It is high time Zee Kannada wakes up and stops this Bramhanda nonsense.

    Or else, this is what you ending up doing, Social Injustice!

    ReplyDelete
  4. ಮೂಢ ನಂಬಿಕೆಗಳನ್ನು ನಂಬುವಂತಹ ಜನರು ಇರುವ ತನಕ ಇಂತಹ ಸಮಾಜಘಾತುಕರು ಸುಖವಾಗಿ ಇರುತ್ತಾರೆ, ಜನರಿಗೆ ಜ್ಞಾನ ಬರಬೇಕು ಅಷ್ಟೇ. ಕವಿಸ್ವರ ಹೇಳಿದಂತೆ ಹಲವು ವಿದ್ಯಾವಂತರು ಕೂಡ ಇವನನ್ನು ನಂಬುತ್ತಾ ಇರುವುದು ದುಃಖದ ವಿಷಯ. ಅದಕ್ಕಿಂತಲೂ ವಿದ್ಯಾವಂತರಾದ ಪತ್ರಿಕೋದ್ಯಮಿಗಳೆ ಇದನ್ನ TVಯಲ್ಲಿ ಪ್ರಸಾರ ಮಾಡುತ್ತಾರಲ್ಲ ಅದಕ್ಕೆ ಏನೆಂದು ಕಾಮೆಂಟ್ ಮಾಡಲಿ

    ReplyDelete
  5. ಟಿವಿ ಚಾನಲ್ ನವರ ಹತ್ತಿರ ಈ ರೀತಿಯ ಕಾರ್ಯಕ್ರಮ ಪ್ರಸಾರ ಮಾಡಬೇಡಿ ಎಂದು ಹೇಳೋದಕ್ಕಿಂತ ಆ ಕಾರ್ಯಕ್ರಮವನ್ನು ನೋಡದೇ ಇರೋದೇ ಸೂಕ್ತ. ಎಲ್ಲರೂ ಅದನ್ನ ಬಹಿಷ್ಕಾರ ಹಾಕಿದ್ರೆ ಟಿಆರ್ ಪಿ ಒತ್ತಟ್ಟಿಗಿರಲಿ ಆ ಚಾನಲ್ ನ ನೋಡೋರು ಯಾರಾದ್ರೂ ಸಿಕ್ತಾರೇನಪ್ಪಾ ಅಂತ ಚಾನಲ್ ನವರು ಒದ್ದಾಡಬೇಕು ಹಾಗ್ಮಾಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಅಂಥ ಕಾರ್ಯಕ್ರಮ ನೋಡೋದಕ್ಕಿಂತ ಮನೆ ಕೆಲಸನಾದ್ರೂ ಮಾಡಬಹುದು.

    ReplyDelete
  6. ಮೂಢ ನಂಬಿಕೆಗಳನ್ನು ನಂಬುವಂತಹ ಜನರು ಇರುವ ತನಕ ಇಂತಹ ಸಮಾಜಘಾತುಕರು ಸುಖವಾಗಿ ಇರುತ್ತಾರೆ, ಜನರಿಗೆ ಜ್ಞಾನ ಬರಬೇಕು ಅಷ್ಟೇ. ಕವಿಸ್ವರ ಹೇಳಿದಂತೆ ಹಲವು ವಿದ್ಯಾವಂತರು ಕೂಡ ಇವನನ್ನು ನಂಬುತ್ತಾ ಇರುವುದು ದುಃಖದ ವಿಷಯ. ಅದಕ್ಕಿಂತಲೂ ವಿದ್ಯಾವಂತರಾದ ಪತ್ರಿಕೋದ್ಯಮಿಗಳೆ ಇದನ್ನ TVಯಲ್ಲಿ ಪ್ರಸಾರ ಮಾಡುತ್ತಾರಲ್ಲ ಅದಕ್ಕೆ ಏನೆಂದು ಕಾಮೆಂಟ್ ಮಾಡಲಿ

    ReplyDelete
  7. ಇಂತಹ ಹಲಾಲ್ ಕೋರರು ಸಮಾಜಕ್ಕೆ ವಿಷ ಬೀಜಗಳು.ಆ ZEE ಕನ್ನಡ ದವರಿಗೆ ಬುದ್ದಿ ನೆಟ್ಟಗೆ ಇಲ್ವಾ ಅಂತ?ಇವನಿಗೆ ನಮಸ್ಕಾರ ಮಾಡೋರು ಇನ್ನೆಂಥ ಬಕ್ರ ಜನಗಳು ಅಂತ.ಇಂಥ ಮಾನಸಿಕ ಅಸ್ವಸ್ತರಿಗೆ ಹುಚ್ಚು ನಾಯಿಗೆ ಹೊಡೆದ ಹಾಗೆ ಹೊಡೆದು ಗಡಿ ಪಾರು ಮಾಡಬೇಕು.ಆಗ ಮಾತ್ರ ಇವನನ್ನು ಅನುಕರಿಸುವ ಇತರ ಜ್ಯೋತಿಷಿ ಎಂದು ಹೇಳಿಕೊಳ್ಳುವ ಕಳ್ಳರು ಬುದ್ದಿ ಕಲಿಯೋದು.ಆಲ್ವಾ

    ReplyDelete
  8. This man dosnt have basic manners how to talk,he says rubbish things he disrespects ladies first let him reduce his weight rather than commenting on others.

    ReplyDelete
  9. I strongly agree with the authors view. So called Narendra Babu Sharma was acting as a side actor in so many movies and now suddenly he has become a scholar who give solution for all the problems, what a joke:)

    ReplyDelete
  10. enta kolaku janara bayali benne matanadiso Zee tvyavarigenu buddi illava, tv ondu samuha madhyama,belligge eddare takshana kolako abhyasa erojanakke buddi illa, ondu reetili namma relative obbaru dina nodi evaranne dyana madthare, munnechharike tagandu maodalu evanige buddi kalisisdre chenda

    ReplyDelete
  11. there is nothing more powerful than yourself, people are getting lazy seeing these kind of TV shows, they think, following whatever he say, fetch money for them, instead believe in yourself, think good and do good, work hard, god will bless you then.

    ReplyDelete
  12. reee..V Bhat wrote about sampadakeeya blog in his website
    :)

    ReplyDelete
  13. Narendra Babu Sharma is an oppurtunist. He is encashing the ignorance of people who regard him as a saviour. He is nothing but an evil genious!

    ReplyDelete
  14. ನರೇಂದ್ರ ಸ್ವಾಮಿಯಂತಹ ಅರ್ಧಂಬರ್ಧ ಪುರೋಹಿತವರ್ಗಗಳಿಗೆ ಪೊರಕೆ ಹಿಡಿದು ಓಡಿಸುವ ಕಾಲ ಹೆಚ್ಚು ದೂರವಿಲ್ಲ. ಇಂತಹ ಪೊಟ್ಟು ಎಂದು ಕರೆಯಬಹುದಾದ ಅರೆಬರೆ ಜ್ಯೊತಿಷ್ಯರು ಉಳಿದ ಬ್ರಾಹ್ಮಣವರ್ಗದ ಹೆಸರನ್ನು ಕುಲ ಗೆಡಿಸುವುದರೊಂದಿಗೆ ಜ್ಯೊತಿಷ್ಯಾಸ್ತ್ರಕ್ಕೆ ಅಪಚಾರಗ್ಯೆಯುವುದರೊಂದಿಗೆ ನಾಡಿನ ಹೆಸರಿಗೂ ಕಳಂಕವನ್ನು ತರುತ್ತಾರೆ. ಆದುದರಿಂದ ಸಂಬಂಧ ಪಟ್ಟ ದೂರದರ್ಶನ ಮಾಧ್ಯಮಗಳು ಇಂತಹವರನ್ನು ಆದಷ್ಟು ದೂರ ವಿಟ್ಟಲ್ಲಿ ದೂರದರ್ಶನ ಮಾಧ್ಯಮಕ್ಕೂ ಕೀರ್ತಿ.
    ಯು.ಆರ್. ಸಭಾಪತಿ, ಮಾಜಿ ಶಾಸಕ, ಉಡುಪಿ.

    ReplyDelete
  15. he is sick......zee kannada instead of giving him renemuration.....plz spend that money on his treatment in Nimhans.....

    ReplyDelete
  16. A guy wanted money, started acting in movies,ironically now preaching everyone. I think this pig got to know weak point in our people, started en-cashing it. First of all mass media esp TV shouldn't encourage these people, if so everybody (media ppl) lose their credibility to speak against these things.

    ReplyDelete
  17. ಸಾಮಾಜಿಕ ಬದ್ಡತೆ ಇಲ್ಲದೆ ಇರೋಂತ ಇಂಥ ವಾಹಿನಿಗಳನ್ನು ನೋಡೊದನ್ನ ಮೊದಲು ಬಿಡಬೇಕು......

    ReplyDelete
  18. This type of MENTALS should be punished in public..!!..

    ReplyDelete
  19. ಸ್ವಾಮಿ ಜ್ಯೋತಿಶ್ಯ ವಿದ್ವಾಂಸರೇ ತಮಗೊಂದು ಪುಟ್ಟ ಪ್ರಶ್ನೆ,, ಊರಲ್ಲಿ ಇರೋರಿಗೆಲ್ಲ ಭವಿಶ್ಯ ಹೇಳ್ತಿರಲ್ಲ ನಿಮ್ಮ ಭವಿಶ್ಯ ಏನು ಅಂತ ನಿಮಗೆ ಗೋತ್ತಿದೆಯಾ? ಆದು ಗೊತ್ತಿದ್ದರೆ ಹೀಗೆಲ್ಲ ಮಾತನಾಡುತ್ತಿದ್ದಿರಾ? ಆಥವಾ ಹೆಣ್ಣು ಎಂದರೆ ಪುರುಷನ ಅಡಿಯಾಳು ಎನ್ನುವ ಮೂರ್ಖ ಭಾವನೆಯಿಂದ ಇನ್ನು ಹೊರಗಡೆ ಬರಲು ನಿಮಗೆಷ್ಟು ದಿನ ಬೇಕು? ನಿಮಗೆ ಅಕ್ಕ ತಂಗಿಯರು ಇಲ್ಲವೆ?(ಇದ್ದರೆ ಪಾಪ ಅವರ ಗತಿ)ಬೇರೆಯವರ ಏಳಿಗೆಯನ್ನು ಸಹಿಸದ ಇಂತಹ ವಿಕೃತ ತೃಪ್ತಿ ನಿಮಗೇಕೆ? ಓಂದು ಪುಟ್ಟ ನೀತಿ ಕಥೆ ಕೇಳಿ ,,, ಓಮ್ಮೆ ಅಕ್ಬರ್ ಯುದ್ದಕ್ಕೆ ಹೊರಟಾಗ ಅಸ್ಥಾನ ಜ್ಯೋತಿಶಿ "ಪ್ರಭು ಈ ಯುದ್ದದಲ್ಲಿ ನಿಮಗೆ ಸೋಲಾಗುತ್ತದೆ" ಎಂದಾಗ ಅಕ್ಬರ್ ಯುದ್ದಕ್ಕೆ ಹೋಗಲು ಅನುಮಾನಿಸಿದನಂತೆ ಆಗ ಬೀರಬಲ್ "ಪಂಡಿತರೆ ಜ್ಯೋತಿಶ್ಯಾಸ್ತ್ರದ ಪ್ರಕಾರ ನಿಮ್ಮ ಆಯಸ್ಸು ಇನ್ನು ಎಷ್ಟು ದಿನ ಇದೆ " ಎಂದು ಕೇಳಿದಾಗ ಆ ಪಂಡಿತ " ಇನ್ನು ಇಪ್ಪತ್ತು ವರ್ಷ" ಎಂದನಂತೆ ಆಗ ಆ ಪಂಡಿತನ ಹಿಂದೆ ಇದ್ದ ಭಟ ಬೀರಬಲ್ ನ ಆಣತಿಯಂತೆ ಆ ಜ್ಯೋತಿಶಿಯ ಕತ್ತನ್ನು ಕತ್ತರಿಸಿದನಂತೆ ,,,,, ಸ್ವಾಮಿ ಅರ್ಥವಾಯಿತೆ ಜ್ಯೊತಿಶ್ಯಾಸ್ತ್ರದ ಸತ್ಯಾಸತ್ಯತೆ? ಭಾರತಿಯ ಸಮಾಜ ಹೆಣ್ಣನ್ನು ಯಾವಗಲೂ ಪೂಜ್ಯ ಭಾವನೆಯಿಂದಲೇ ನೋಡಿಕೊಂಡು ಬಂದಿದೆ. ಯತ್ರ ನಾರ್ಯಸ್ತು ಪೂಜ್ಯಂತೆ ತತ್ತ್ರ ರಮತೇ ದೇವತಾಃ ಎನ್ನುವ ಮನುವಿನ ನುಡಿಯನ್ನು ಬಹುತೇಕರು ಪಾಲಿಸುತ್ತಿರುವಾಗ ಮಹಾ ಪಂಡಿತರಂತೆ ನಟಿಸುವ ತಮಗೆ ಇಷ್ಟೂ ಸಾಮನ್ಯ ಜ್ಯಾನವಿಲ್ಲವೆಂದರೆ ಹೇಗೆ? ಸಾರ್ವಜನಿಕರಿಂದ ಉಡುಗೊರೆ ತಿನ್ನುವ ಮೊದಲು ನಿಮ್ಮ ನಡತೆ ಬದಲಾಗಬಹುದೆಂದು ನಂಬೋಣವೇ?

    ReplyDelete
  20. Tumba chennagide... Narendrababu Sharma avara kathe yelrigu gottirode.. eegagle yeshto saari tvnalli avra bagge olle abhipraya illa anta torsiyagide adru kuda imnnu avara show maatra tvnalli tappade haaktare mattu adnna janru tappade nodtanu idare idakkenu maadbeku heli?

    ReplyDelete
  21. good post, keep writing about these culprits

    ReplyDelete
  22. already some of our media friends beat him nicely but peoples without knowing his background listening to them like kurigalu eetara aadre nam kannadigara gati enu? yochane maadi

    ReplyDelete
  23. ಕೊಳೆತ ಕುಂಬಳಕ್ಕೆ-ಕೆಟ್ಟ ತೆಂಗು ತಕ್ಕ ಜೊತೆ ಅನ್ನೋದನ್ನ ಜಿ ಟಿವಿ ಸಾಬೀತು ಮಾಡುತ್ತಿದೆ ಎಂದರೆ ಅಲ್ಲಿನ ಆಧ್ವಾರ್ಯುಗಳು ಮುನಿಸಿಕೊಳ್ಳಬಾರದು.ಮೂರುಕಾಸಿನ ಜೋತಿಷ್ಯದ ಹೆಸರಲ್ಲಿ ಮೂಢ ನಂಬಿಕೆಯನ್ನ ಬಿತ್ತುತಿರೋದಷ್ಟೇ ಅಲ್ಲ,ಈಗಷ್ಟೇ ಬೀಜ ಒಡಿಸಿಕೊಂಡ ಕಾಡುಕೋಣದಂತಹ ನರೇಂದ್ರಬಾಬು ಶರ್ಮ ಎಂಬ ಈ ಮಾಂಸ ಪರ್ವತದ ವಿಕೃತ ಲೀಲೆಗಳನ್ನೆಲ್ಲ ನೋಡುವ ಕರ್ಮ ಕನ್ನಡಿಗರಿಗಿಲ್ಲ,ತೋರಿಸುವ ಜರೂರತ್ತದೆರೂ ಆ ವಾಹಿನಿಯವರಿಗೇನಿದೆ?

    ReplyDelete
  24. thankx for creating awareness............!!!

    ReplyDelete
  25. entha karma idu........ intha kal nan maklige en madidru papa baralla

    ReplyDelete
  26. ನರೇಂದ್ರ ಬಾಬು ಶರ್ಮ ಒಬ್ಬ ಅರೆಬರೆ ಡೋಂಗಿ ಪಂಡಿತ. ಇಲ್ಲಿಯ ತನಕ ಸಿನಿಮಾಗಳಲ್ಲಿ ಪಾತ್ರ ಮಾಡಿಕೊಂಡು ಇದ್ದವ. ಈಗ ಜ್ಯೋತಿಷ್ಯದಲ್ಲಿ ಕೆಲವೊಮ್ಮೆ M.Sc ಎಂದು ಕೆಲವೊಮ್ಮೆ Ph.D ಪಡೆದಿದ್ದೇನೆ ಅಂತ ಎಲ್ಲರಿಗೂ ಮೋಸ ಮಾಡುತ್ತಿರುವನು. ಜ್ಯೋತಿಷ್ಯದಲ್ಲಿ Ph.D ಯಾವ ವಿಶ್ವವಿದ್ಯಾಲಯ ಇವನಿಗೆ ಕೊಟ್ಟಿತೋ ಆ ದೇವರೇ ಬಲ್ಲ. ಜ್ಯೋತಿಷ್ಯದಲ್ಲಿ ಇವನಿಗೆ ಎಷ್ಟು ಗೊತ್ತೋ ಏನೋ ಆದರೆ ಸಂಸ್ಕೃತದ ಗಂಧಗಾಳಿ ಸಹ ಇಲ್ಲ. ಎಷ್ಟೋ ಬಾರಿ ವಿಭಕ್ತಿ ಪ್ರತ್ಯಯಗಳನ್ನು ಹೆಚ್ಚು ಕಮ್ಮಿ ಮಾಡಿ ಭಾಷೆಯನ್ನೇ ಕೊಲೆ ಮಾಡ್ತಾಯಿರುವ ಈತನಿಗೆ ಕೆಲವು ಶ್ಲೋಕಗಳು ಸ್ತೋತ್ರಗಳು ಬಿಟ್ಟರೆ ಬೇರೆ ಏನು ತಿಳಿದಿಲ್ಲ. ವೇದಗಳ ಬಗ್ಗೆಯಂತು ಏನೂ ತಿಳಿದಿಲ್ಲ. ಕೆಲವೊಮ್ಮೆ ವೇದ ಮಂತ್ರಗಳನ್ನು ತಪ್ಪು ತಪ್ಪು ಸ್ವರಗಳಲ್ಲಿ ಹೇಳುತ್ತಾನೆ. ವೇದಗಳ ಅಧ್ಯಯನ ಮಾಡುವುದಕ್ಕೆ ಗುರುಕುಲಗಳಲ್ಲಿ ವರ್ಷಾನುಗಟ್ಟಲೆ ಅಭ್ಯಾಸ ಮಾಡಬೇಕು. ಅಲ್ಲಿ ಇಲ್ಲಿ ಒಂದಿಷ್ಟು ಕಥೆ ಪುರಾಣಗಳನ್ನು ಓದಿ ಕೊಂಡು ಈಗ ಸುಮ್ಮನೆ ಪ್ರಳಯ ಆಗುತ್ತೆ ಭೂಮಿ ಮುಳುಗಿ ಹೋಗುತ್ತೆ ದೀಪ ಹಚ್ಚಿ ಎಂದೆಲ್ಲ ಎಲ್ಲರನ್ನು ಮುಖ್ಯವಾಗಿ ವಿಶ್ವದ ಆಗು ಹೋಗುಗಳ ಬಗ್ಗೆ ಅಷ್ಟು ಹೆಚ್ಚಾಗಿ ತಿಳಿಯದ ಗೃಹಿಣಿಯಾರನ್ನು ಹೆದರಿಸಿ ಜೀವನ ಸಾಗಿಸುತ್ತಿರುವವ. ಇಂತಹವರಿಂದ ನಮ್ಮ ಸನಾತನ ಹಿಂದೂ ಧರ್ಮ ಉದ್ಧಾರ ಆಗುವ ಬದಲು ಹಾಳಾಗುತ್ತಿದೆ. ಪ್ರಮುಖವಾಗಿ "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ" ಎಲ್ಲಿ ನಾವು ಹೆಣ್ಣನ್ನು ಗೌರವಿಸುತ್ತೆವೋ ಅಲ್ಲಿ ದೇವತೆಗಳು ಇರುತ್ತಾರೆ ಎನ್ನುವ ನಮ್ಮ ಧರ್ಮವನ್ನು ಉದ್ಧಾರ ಮಾಡುತ್ತೇನೆ ಎನ್ನುವ ಈತ ಕನಿಷ್ಠ ಪಕ್ಷ ಎಲ್ಲರಿಗೂ ಮರ್ಯಾದೆ ಕೊಡುವುದನ್ನು ಕಲಿಯಬೇಕು. ಮುಖ್ಯವಾಹಿನಿಯಲ್ಲಿ ಮಾತನಾಡುವಾಗ ಕನಿಷ್ಠ ಸಭ್ಯತೆಯನ್ನು ಗಾಳಿಗೆ ತೂರಿ "ಮುಂಡೇವು ಮುಂಡೇವು" ಎಂದು ಎಲ್ಲರನ್ನು ಸಂಬೋಧಿಸುವ ಈತನನ್ನು ಗುರುಜಿ ಎಂದು ಸಂಬೋಧಿಸುವುದು ಹಾಸ್ಯಾಸ್ಪದ.

    ನಿಜವಾಗಲು ಪ್ರೌಢರಾಗಿರುವವರು ಏನಾದರು ಹೇಳಿದರೆ ಅದಕ್ಕೆ ಸರಿಯಾದ ವಿಶ್ಲೇಷಣೆ ನೀಡುತ್ತಾರೆ ಹಾಗು ಅದಕ್ಕೆ ಮೂಲ ಯಾವುದು (ಉದಾ : ಅಧ್ಯಾಯ ಶ್ಲೋಕ ಪಾದ ಭೇದ ಇತ್ಯಾದಿ ) ಎಂದು ಕೂಡ ನಿರೂಪಿಸುತ್ತಾರೆ. ಹೀಗೆ ಸುಮ್ಮನೆ ಕಥೆ ಹೇಳಿ ಎಲ್ಲರನ್ನು ಹೆದರಿಸುವುದಿಲ್ಲ. ಪ್ರಳಯ ಆಗುತ್ತೆ ಆಸ್ಟ್ರೇಲಿಯಾ ಪೂರ ಮುಳುಗಿಹೋಗುತ್ತೆ ಎಂದು ಸೂರ್ಯ ಭೂಮಿಗೆ ಹತ್ತಿರ ಬರುತ್ತೆ ಅದಿಕ್ಕೆ ನಾವು ಸರಿಯಾಗಿ ಬಟ್ಟೆ ಹಾಕದಿರುವುದೇ ಕಾರಣ ಎಂದು ಹೀಗೆ ಯಾವುದಕ್ಕೂ ತಳಹದಿ ಇಲ್ಲದೆ ಸುಮ್ಮನೆ ಬೊಗಳೆ ಬಿಡುವ ಈತನ ಕಾರ್ಯಕ್ರಮವನ್ನು ದಯವಿಟ್ಟು ನೋಡುವುದು ನಿಲ್ಲಿಸಿ. ಜನಗಳು ಸ್ವಲ್ಪ ಸಾಮಾನ್ಯ ಜ್ಞಾನ (commonsense) ಉಪಯೋಗಿಸಿ ಇಂತಹ ಡೋಂಗಿ ಪಂಡಿತರ ಕಾರ್ಯಕ್ರಮಗಳನ್ನು ನೋಡುವುದು ನಿಲ್ಲಿಸಿದರೆ ಅದರ TRP ಕಡಿಮೆ ಆಗಿ ಪ್ರಸಾರ ತನ್ನಿಂದ ತಾನೇ ನಿಲ್ಲುತ್ತದೆ.

    ReplyDelete
  27. ella mudanambike tv chanalnavru sariyadre yella sari hoguthade

    ReplyDelete
  28. kelavu pathrakartharu saha sari illa, avary hellidu ella sariella antha navu helludakke agudilla.

    ReplyDelete