ನಿರೀಕ್ಷಿಸಿದಂತೆಯೇ ನಾಲ್ವರು ಪತ್ರಕರ್ತರು ಕನ್ನಡಪ್ರಭ ಸೇರ್ಪಡೆಗೊಂಡಿದ್ದಾರೆ. ಪಿ.ತ್ಯಾಗರಾಜ್, ರಾಧಾಕೃಷ್ಣ ಬಡ್ತಿ, ಪ್ರತಾಪ್ ಸಿಂಹ ಹಾಗು ವಿನಾಯಕ ಭಟ್ ಮೂರೂರು ಹೊಸದಾಗಿ ಸೇರ್ಪಡೆಗೊಂಡವರು.
ಎಲ್ಲರೂ ವಿಜಯ ಕರ್ನಾಟಕದಲ್ಲಿದ್ದವರು, ಎಲ್ಲರೂ ವಿಶ್ವೇಶ್ವರ ಭಟ್ಟರ ನಿರ್ಗಮನದ ನಂತರ ರಾಜೀನಾಮೆ ಕೊಟ್ಟು ಹೊರಬಂದವರು. ಒಂದು ವಿಶೇಷವೆಂದರೆ ಎಲ್ಲರಿಗೂ ಬಡ್ತಿ ದೊರಕಿದೆ. ವಿಜಯ ಕರ್ನಾಟಕದಲ್ಲಿದ್ದಾಗ ತ್ಯಾಗರಾಜ್ ಮುಖ್ಯ ವರದಿಗಾರರಾಗಿದ್ದರು, ಅವರೀಗ ಸಹಾಯಕ ಸಂಪಾದಕ. ಮುಖ್ಯ ಉಪಸಂಪಾದಕರಾಗಿದ್ದ ರಾಧಾಕೃಷ್ಣ ಬಡ್ತಿ ಕೂಡ ಸಹಾಯಕ ಸಂಪಾದಕರಾಗಿದ್ದಾರೆ. ವಿಜಯ ಕರ್ನಾಟಕದಲ್ಲಿ ಮುಖ್ಯ ಉಪಸಂಪಾದಕ ಹುದ್ದೆಯಲ್ಲಿದ್ದ ಪ್ರತಾಪ್ ಸಿಂಹ ಕನ್ನಡಪ್ರಭದಲ್ಲೀಗ ಸುದ್ದಿ ಸಂಪಾದಕರಾಗಿದ್ದಾರೆ. ದೆಹಲಿ ಪ್ರತಿನಿಧಿಯಾಗಿದ್ದ ವಿನಾಯಕ ಭಟ್ ಮೂರೂರು ವಿಶೇಷ ಪ್ರತಿನಿಧಿಯಾಗಿದ್ದಾರೆ.
ಅತ್ತ ಉದಯವಾಣಿಯಲ್ಲೂ ಹೊಸ ಮುಖಗಳು ಕಾಣಿಸಿಕೊಂಡಿವೆ. ಎಲ್ಲರೂ ಸುವರ್ಣ ನ್ಯೂಸ್‌ನಿಂದ ಬಂದವರು. ಎಲ್ಲರಿಗೂ ಪ್ರಮುಖ ಹುದ್ದೆಗಳೇ ದೊರಕಿವೆ. ಇನ್ನೂ ಒಂದೆರಡು ಮಂದಿ ಸೇರಿಕೊಳ್ಳುವ ನಿರೀಕ್ಷೆಯಿದೆ.
ಕನ್ನಡ ಮಾಧ್ಯಮ ರಂಗದಲ್ಲಿ ನಡೆಯುತ್ತಿರುವ ಪಲ್ಲಟಗಳು, ವಲಸೆ ಇತ್ಯಾದಿಗಳೆಲ್ಲ ನಿಧಾನವಾಗಿ ಒಂದು ಹಂತಕ್ಕೆ ತಲುಪಿ ಎಲ್ಲವೂ ಈಗ ನಿಚ್ಚಳವಾಗುತ್ತಿವೆ.
ಉಳಿದಿರುವ ಪ್ರಶ್ನೆ ಯಾರು ಯಾರು ಏನನ್ನು ಸಾಧಿಸಲಿದ್ದಾರೆ ಎಂಬುದಷ್ಟೆ.
ಹೊಸ ಜವಾಬ್ದಾರಿಗಳೊಂದಿಗೆ ಮರಳಿರುವ ಎಲ್ಲರಿಗೂ ಶುಭವಾಗಲಿ
saar ivaradella sambaavane enantha thilikollo ashe ide...gotthaa nimage.?
ReplyDelete@ harini,
ReplyDeleteಹೆಣ್ಣುಮಕ್ಕಳ ವಯಸ್ಸು, ಗಂಡಸರ ಸಂಬಳ ಎಷ್ಟು ಅಂತ ಕೇಳಬಾರದು, ನಿಮಗೆ ಗೊತ್ತಿಲ್ವಾ?
game begins from now.........!!
ReplyDeletenow all the so called "journalists" at one place whether kannada prabha will hav "prabha" anymore?
ReplyDeleteವಿಶ್ವೇಶ್ವರಭಟ್ಟರ ತಂಡಕ್ಕೆ ಅಂತೂ ಒಂದು ನೆಲೆ ಸಿಕ್ಕಿದೆ. ಅತ್ತ, ರವಿ ಬೆಳೆಗೆರೆ ಅವರಿಗೆ ಜನಶ್ರಿಯಂಥ ದೃಶ್ಯಮಾಧ್ಯಮದ ಅಸ್ತ್ರವೂ ದೊರೆತಿದೆ. ರಂಗಕ್ಕಿಳಿದ ಅವರ ಓರೆಯಿಂದ ದ್ವೇಷವೊಂದು ಹೊರಬರದಿದ್ದರೆ ಸಾಕು. ತನ್ನದೇ ಛಾಪು ಮೂಡಿಸಿಕೊಂಡು ಪ್ರಬುದ್ಧ ರೀತಿಯಲ್ಲಿ ಬೆಳೆದ ಕನ್ನಡ ಪ್ರಭಕ್ಕಾಗಲೀ, ಈಗ ತಾನೇ ಕಣ್ಣು ಬಿಡುತ್ತಿರುವ ಜನಶ್ರೀಗಾಗಲೀ ಈ ಮದಗಜಗಳ ಕಾದಟವನ್ನು ಭರಿಸುವ ಶಕ್ತಿಯೂ ಇಲ್ಲ, ವ್ಯವಧಾನವೂ ಇಲ್ಲ. ಈಗ ಅವರೆಲ್ಲರಿಗೂ ತಮ್ಮ ಎದುರಿನ ಸವಾಲುಗಳನ್ನು ಎದುರಿಸಿ ತಮ್ಮ ಸಾಮರ್ಥ್ಯವನ್ನು, ಪ್ರತಿಭೆಯನ್ನು ನವೀಕರಿಸಿಕೊಳ್ಳುವ ಕಾಲ. ಪ್ರತಿಭೆ, ಸಹಿಷ್ಣುತೆಯೆಲ್ಲಾ ಈ ಕೋಳಿ ಜಗಳದಲ್ಲಿ ಪೋಲಾಗದೇ ಇರಲಿ.....
ReplyDelete