Monday, December 27, 2010

ಚಿತ್ರ ವಿಮರ್ಶೆಗಳನ್ನು ನಿಲ್ಲಿಸಿ, ಪ್ಲೀಸ್..

ಆತ ವಿರೋಧ ಪಕ್ಷದ ನಾಯಕ. ಆದರೂ ಆತ ಮುಖ್ಯಮಂತ್ರಿಯ ಹಾಗೆ ಜನತಾ ದರ್ಶನ ಮಾಡುತ್ತಾನೆ. ಜನತಾ ದರ್ಶನದಲ್ಲಿ ಜನರು ಒಬ್ಬ ರೌಡಿಯಿಂದಾಗುತ್ತಿರುವ ಉಪಟಳದ ಬಗ್ಗೆ ದೂರು ಹೇಳುತ್ತಾರೆ. ವಿರೋಧ ಪಕ್ಷದ ನಾಯಕ ಸಿಟ್ಟಿಗೆದ್ದು ಆ ರೌಡಿಯನ್ನು ಒಂದು ದಿನದಲ್ಲೇ ಎನ್‌ಕೌಂಟರ್ ಮಾಡುವುದಾಗಿ ಘೋಷಿಸುತ್ತಾನೆ.

ತದನಂತರ ವಿರೋಧ ಪಕ್ಷದ ನಾಯಕನ ಪ್ರೆಸ್‌ಮೀಟ್. ಹೀರೋ ಎನ್‌ಕೌಂಟರ್ ಬಗ್ಗೆ ಪ್ರಶ್ನೆ ಕೇಳುತ್ತಾನೆ. ನೀವು ಎನ್‌ಕೌಂಟರ್ ಮಾಡೋದು ಗ್ಯಾರೆಂಟಿ ತಾನೇ ಎಂದು ಅನುಮಾನದಿಂದ ಕೇಳುತ್ತಾನೆ. ಖಂಡಿತಾ ಮಾಡಿಸ್ತೀನಿ ಎಂದು ವಿರೋಧಪಕ್ಷದ ನಾಯಕ ಸಮಾಧಾನಿಸುವ ಪ್ರಯತ್ನ ಮಾಡುತ್ತಾನೆ.
ಇದು ಶಿವರಾಜ ಕುಮಾರ್ ಅಭಿನಯದ ಮೈಲಾರಿ ಚಿತ್ರದ ದೃಶ್ಯ.
ನಿರ್ದೇಶಕ ಚಂದ್ರುಗೆ ರಾಜಕಾರಣ ಅಂದ್ರೆ ಏನು ಅಂತ ಗೊತ್ತಿಲ್ಲ, ಪತ್ರಿಕೋದ್ಯಮ ಅಂದ್ರೂನೂ ಏನೇನೂ ಗೊತ್ತಿಲ್ಲ. ಕಾನೂನು, ನ್ಯಾಯಾಲಯಗಳ ಕುರಿತು ಕನಿಷ್ಠ ತಿಳಿವಳಿಕೆಯೂ ಇಲ್ಲ. ಚಿತ್ರವನ್ನು ಯಾರಾದ್ರೂ ಮಾನವಹಕ್ಕು ಹೋರಾಟಗಾರರು ನೋಡಿದರೆ ಥಿಯೇಟರ್‌ನಲ್ಲೇ ತಲೆ ಚೆಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು, ಅವರ ಮಾನವ ಹಕ್ಕು ಹರಣವಾದರೆ ಆಶ್ಚರ್ಯವಲ್ಲ.

ತನ್ನ ವಿರುದ್ಧವಾಗಿ ಬರೆದ ಪತ್ರಕರ್ತನ ಮನೆಗೆ ನುಗ್ಗಿ ವಿರೋಧಪಕ್ಷದ ನಾಯಕನೇ ಆತನನ್ನು ಕೊಲ್ಲುತ್ತಾನೆ. ಮಾತ್ರವಲ್ಲ ಆತನ ಹೆಂಡತಿ ಹಾಗು ಪುಟ್ಟ ಮಗುವನ್ನೂ ಕೊಲ್ಲುತ್ತಾನೆ. ರೊಚ್ಚಿಗೆದ್ದ ಇಬ್ಬೊಬ್ಬ ಪತ್ರಕರ್ತ (ಶಿವರಾಜ ಕುಮಾರ್) ಬೀದಿಯಲ್ಲಿ ಅಟ್ಟಾಡಿಸಿಕೊಂಡು ವಿರೋಧಪಕ್ಷದ ನಾಯಕನನ್ನು ಕೊಲ್ಲುತ್ತಾನೆ. ಪತ್ರಕರ್ತನಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ. ಕಡೆಗೆ ಪತ್ರಕರ್ತ ಬರೆದ ಮಹೋನ್ನತ ಕೃತಿ(!)ಯನ್ನು ಓದಿ ಮೆಚ್ಚುವ ರಾಷ್ಟ್ರಪತಿಗಳು ಆತನ ಗಲ್ಲು ಶಿಕ್ಷೆ ರದ್ದುಗೊಳಿಸುವುದು ಮಾತ್ರವಲ್ಲ, ಸಂಪೂರ್ಣ ಶಿಕ್ಷೆಯನ್ನೇ ರದ್ದುಗೊಳಿಸಿ ಬಿಡುಗಡೆಗೊಳಿಸುತ್ತಾರೆ.

ಈ ಸಿನಿಮಾವನ್ನು ಕಾನೂನು-ಕಟ್ಲೆ ಬಗ್ಗೆ ಪ್ರಾಥಮಿಕ ಜ್ಞಾನವಿರುವ ಸಾಮಾನ್ಯ ನೋಡುಗ ನೋಡಿದರೂ ಗಾಬರಿಬಿದ್ದು ಹೋಗುತ್ತಾರೆ. ಸಿನಿಮಾ ಹೀರೋ ಪತ್ರಕರ್ತ ಎಂಬ ಕಾರಣಕ್ಕೆ ಪತ್ರಕರ್ತರು ನೋಡಿದರೆ ಕೂದಲು ಕಿತ್ತುಕೊಂಡು ಆಚೆಗೆ ಬರಬೇಕು.

ಚಿತ್ರ ಹೀಗಿರುವಾಗ ಪತ್ರಿಕೆಗಳಲ್ಲಿ ಬರುವ ಭಾನುವಾರದ ಚಿತ್ರವಿಮರ್ಶೆಗಳು ಹೇಗಿದ್ದವು? ವಿಜಯ ಕರ್ನಾಟಕ, ಕನ್ನಡಪ್ರಭಗಳಲ್ಲಿ ಮೈಲಾರಿಯನ್ನೂ ಅದರ ಜನಕ ಚಂದ್ರುವನ್ನೂ ಹಾಡಿ ಹೊಗಳಲಾಗಿದೆ. ಅವರ ಪ್ರಕಾರ ಸಿನಿಮಾ ಅದ್ಭುತ, ಅತ್ಯದ್ಭುತ! ಮಾಸ್‌ಗೆ ಇಷ್ಟವಾಗುವ ಕ್ಲಾಸ್ ಚಿತ್ರ!.

ಇದು ಮಾಸೂ ಅಲ್ಲ, ಕ್ಲಾಸೂ ಅಲ್ಲ ಪೂರ್ತಿ ಬೋಗಸ್ಸು ಎಂದು ಬರೆದಿರುವುದು ಪ್ರಜಾವಾಣಿ ಮಾತ್ರ. ನಿರ್ದೇಶಕನ ಬಾಲಿಷತನವನ್ನು ನೇರಾನೇರ ಟೀಕಿಸಿ, ಚಿತ್ರದ ಠೊಳ್ಳುತನವನ್ನು ಪ್ರಜಾವಾಣಿ ಬಿಡಿಸಿಟ್ಟಿದೆ.
ಪ್ರಜಾವಾಣಿ ಹೊರತುಪಡಿಸಿ ಬೇರೆ ಪತ್ರಿಕೆಗಳಲ್ಲಿ ಬರುವ ಚಿತ್ರ ವಿಮರ್ಶೆಯನ್ನು ನೋಡಿ ಸಿನಿಮಾ ಮಂದಿರಕ್ಕೆ ಪ್ರೇಕ್ಷಕರು ಹೋದರೆ ಅವರ ಪಾಡು ಹೇಳತೀರದು. ಹೊಗಳೋದಕ್ಕೆ ಏನಾದ್ರೂ ಒಂದು ಡೈಲಾಗು ಸಿಕ್ಕರೂ ಅದನ್ನು ವಿಜೃಂಭಿಸಲಾಗುತ್ತದೆ. ತಪ್ಪುಗಳನ್ನೆಲ್ಲ ಮುಚ್ಚಿಟ್ಟು ಇಲ್ಲದ ಗುಣಗಳನ್ನು ಹುಡುಕಿ ವೈಭವೀಕರಿಸಲಾಗುತ್ತದೆ. ಇದು ಯಾಕೆ ಅಂದರೆ ಈ ಪತ್ರಿಕೆಗಳಿಗೆ ಸಿನಿಮಾ ವಲಯದಿಂದ ಬರುವ ಜಾಹೀರಾತುಗಳು ಬೇಕು. ಅದಕ್ಕಾಗಿ ಅವರು ನಿರ್ಮಾಪಕರನ್ನು ಎದುರು ಹಾಕಿಕೊಳ್ಳಲಾರವು.
ಈ ಪತ್ರಿಕೆಗಳಲ್ಲಿ ಬಂದ ವಿಮರ್ಶೆಯ ತುಣುಕುಗಳನ್ನು ಜಾಹೀರಾತು ಫಲಕಗಳಲ್ಲಿ ಅಳವಡಿಸಿ ಪ್ರೇಕ್ಷಕರನ್ನು ಸೆಳೆಯುವ ಯತ್ನವೂ ಸಿನಿಮಾ ಮಂದಿಯಿಂದ ನಡೆಯುತ್ತಿದೆ.

ಜನರನ್ನು ಹೀಗೆ ದಾರಿ ತಪ್ಪಿಸುವ ಬದಲು ಕನಿಷ್ಠ ಪ್ರಾಯೋಜಿತ ವರದಿ ಎಂಬ ಹೆಸರಿನಲ್ಲಾದರೂ ಇಂಥ ವಿಮರ್ಶೆ, ವರದಿಗಳನ್ನು ಮಾಡಬಹುದು. ಆದರೆ ಪತ್ರಿಕೆಗಳ ಜಾಹೀರಾತು ವಿಭಾಗದ ಒತ್ತಡಕ್ಕೆ ಕಟ್ಟುಬಿದ್ದು, ವರದಿಗಾರರಿಂದ ಹಸಿಸುಳ್ಳುಗಳನ್ನು ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿ ಬರೆಸಲಾಗುತ್ತದೆ.

ಒಂದು ಸಲಹೆ: ನಿಜ, ಜಾಹೀರಾತು ಮುಖ್ಯ. ನಿಮ್ಮ ವಿಮರ್ಶೆಗಳಲ್ಲಿ ಯಾವ ಸಿನಿಮಾವನ್ನೂ (ಜಾಹೀರಾತು ತರುವ) ನಿಜವಾದ ಅರ್ಥದಲ್ಲಿ ವಿಮರ್ಶೆ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಆತ್ಮವಂಚನೆ ಏಕೆ? ಭಾನುವಾರದ ಚಿತ್ರ ವಿಮರ್ಶೆಯನ್ನೇ ನಿಲ್ಲಿಸಿಬಿಡಿ. ವರದಿಗಾರರ ಆತ್ಮಗೌರವವೂ ಉಳಿಯುತ್ತದೆ. ಪತ್ರಿಕೆಯ ರೆಪ್ಯುಟೇಷನ್ ಕೂಡ ಉಳಿಯುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಪತ್ರಿಕೆಗಳ ವಿಮರ್ಶೆಗಳನ್ನು ಓದಿ ದಾರಿ ತಪ್ಪಿ ಸಿನಿಮಾ ಮಂದಿರಗಳಿಗೆ ಹೋಗುವ ಪ್ರೇಕ್ಷಕರ ಪರದಾಟವೂ ನಿಲ್ಲುತ್ತದೆ.
ಇದೇ ಸರಿಯಾದ ಮಾರ್ಗವಲ್ಲವೆ?

22 comments:

  1. Vijay Karnataka film review corruption still continued. They take money and write all rubbish. VK & KP should should do some soul searching. Or are they making last minute loot..?!

    ReplyDelete
  2. ಬಹುತೇಕ ಸಿನಿಮಾ ವಿಮರ್ಶೆಗಳು ಬರೋದು ಸಿನಿಮಾ ಮಂದಿ ನೀಡುವ ಭರ್ಜರಿ ಗುಂಡು-ತುಂಡು ಪಾರ್ಟಿಯ ನಂತರವೇ? ಉಂಡ ಮನಗೆ ಎರಡು ಬಗೆಯ ಬಾರದಲ್ಲ ಅದಕ್ಕೆ ಸಿನಿಮಾ ವಿಮರ್ಶೆಗಳನ್ನು ಅಡ ಇಡುತ್ತಾರೆ ಅನಿಸುತ್ತೆ ಅಲ್ವಾ?

    ReplyDelete
  3. awesome suggetion nonsense reviews and nonsense movies........

    ReplyDelete
  4. ನಿಮ್ಮ ಮಾತು ನಿಜ. ಕೆಲವು ನಿರ್ಮಾಪಕರು ಬಂಗಾರದ ಉಂಗುರವನ್ನೇ ಕೊಟ್ಟು ಬೂಸಾ ಬರೆಸಿಕೊಳ್ಳುತ್ತಾರೆ. ಈ ಪತ್ರಿಕೋದ್ಯಮದ ಮಂದಿಗೆ ನಾಚಿಕೆ ಸ್ವಾಭಿಮಾನ, ಆತ್ಮಗೌರವ ಅನ್ನೋ ವಿಷಯಾನೇ ಗೊತ್ತಿದೆಯೋ ಇಲ್ವೊ. ನನ್ನ ಪತ್ರಿಕೆ ಸೇಲ್ ಆಗ್ಲಿ ಅಂತ ಇಲ್ಲ ಸಲ್ಲದ ಹಸೀ ಸುಳ್ಳು ಬರೆಯೋದು, ಮತ್ತೆ ಮರುದಿನ 'ವಿಷಾದ-ಸಂ' ಅಂತ ಬೇರೆ ಬರೆದುಕೊಳ್ಳೋದು. ಇನ್ನಾದರೂ ಈ ರೀತಿ ಗಿಮಿಕ್ಸ್ ಮಾಡಿ ಓದುಗ ಪ್ರಭುಗಳಿಗೆ ಮೋಸ ಮಾಡದೇ ನಿಷ್ಠೆ ತೋರುವರೆ ನೋಡೋಣ...

    ReplyDelete
  5. Mylari nice movie with content for society and family group of all age groups...one can easily relate themself with the movie.

    ReplyDelete
  6. Nonsensed writing. The same writer will praise a telugu or a tamil movie. Paid Journalism.

    ReplyDelete
  7. Mylari unusual movie,its not run of the mill movie...there is one of the best movies pf sandalwood...it was not expected movie,but still its several notched above recently hyped movies.

    ReplyDelete
  8. Looks like the person who has written the above article has not got the money:D

    ReplyDelete
  9. The author is not in constructive mood, the movie is too good to digest .Mylari is pakka class with lot of class and intellectual elements..sure shot 100 days..it is bad only for destructive minds and saddists.

    ReplyDelete
  10. Senseless article with bad intentions.Thia movie is nice,no exagerrations..its for general and family audiences.

    ReplyDelete
  11. Mylari isa nice movie ,there is no second thoughts in it.

    ReplyDelete
  12. Article is targeted for anti kannada parties.

    ReplyDelete
  13. Well written article.. 100% true. Mylari is worst and crap movie.. Dont know why shivanna always agrees only CRAP movies... For money sake??

    ReplyDelete
  14. The article is targeted for pessimists group of cinegoers.

    ReplyDelete
  15. Mylari is big hit movie having universal appeal.he movie has good story and strong content with very little mass and commercial elements.It is must for all classes of audiences,not to foget some intelltual elements.

    ReplyDelete
  16. Shivarajkumar has no sense for good scripts. I read , only,Prajavani's kannada movie reviews written by Raghunath.I have no trust on others. Bores kannada movie buff

    ReplyDelete
  17. Shivanna is most versatile actor of modern times.His contributions to orginals,variety and universal level movies are unmatchable.This article and thier suporters lack credibility and logic.Shivanna is one and only hope of sandalwood.

    ReplyDelete
  18. rightly said. Shivarajkumar is a good versatile actor, but he is hopeless at choosing scripts. All his recent commercial movies, including mylari suck big time.

    The only good one s are the non-commercial ones(like thamassu), which have a good story line and shivaraj has acted well.

    ReplyDelete
  19. Mylari script is nice with class elements without much unnecassary mass and masala elements.Every parents and kids can easily watch and can easily identify themself with characters.This is sort of social issue based movie and social responsibility role.There are many memorable scenes especialy climax.This is worth state award for acting easily and thammasu for national level award for acting.The movie producer has earned highest profit then all the movies of last year.

    ReplyDelete
  20. Mylari is class,whatever commercial elements we find are situational and little without more and without less proportion.Let us keep accept the movie insteading of having premeditated mindsets.

    ReplyDelete
  21. due to look some money minded scribes some movie might have got reviews.But mylari is universaly good,this article is worst lacking authenticity.

    ReplyDelete