Monday, February 7, 2011

ಕನ್ನಡಪ್ರಭದ ವಿಶ್ವೇಶ್ವರ ಭಟ್ಟರಿಗೆ ಶುಭವಾಗಲಿ...



ಸುದ್ದಿ ಈಗ ಅಧಿಕೃತ. ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಸೇರಿದ್ದಾರೆ. ವಿಜಯ ಕರ್ನಾಟಕದಿಂದ ಹೊರಬಂದ ನಂತರ ಸುಮಾರು ಎರಡು ತಿಂಗಳು ಕಾಲ ಅಳೆದು ಸುರಿದು ಕಡೆಗೂ ಭಟ್ಟರು ತೀರ್ಮಾನಕ್ಕೆ ಬಂದಿದ್ದಾರೆ. ಅಲ್ಲಿಗೆ ಭಟ್ಟರ ಜೀವನದ ಹೊಸ ಆಯಾಮ ಶುರು ಆದಂತಾಗಿದೆ.

ನಿಮಗೆ ಗೊತ್ತಿದೆ, ವಿಶ್ವೇಶ್ವರ ಭಟ್ಟರು ಕನ್ನಡಪ್ರಭಕ್ಕೆ ಸೇರುವ ಸುದ್ದಿಯನ್ನು ಮೊದಲು ಬ್ರೆಕ್ ಮಾಡಿದ್ದು ಸಂಪಾದಕೀಯ. ನಾವು ಇದನ್ನು ಬರೆದಾಗ ಭಟ್ಟರು ಕನ್ನಡಪ್ರಭ ಸೇರಬಹುದು ಎಂಬ ಊಹೆಯನ್ನೂ ಯಾರೂ ಮಾಡಿರಲಿಲ್ಲ. ಯಾಕೆಂದರೆ ಎಚ್.ಆರ್.ರಂಗನಾಥ್ ನಿರ್ಗಮನದ ನಂತರ ಶಿವಸುಬ್ರಹ್ಮಣ್ಯ ಶ್ರದ್ಧೆಯಿಂದ ಪತ್ರಿಕೆಯನ್ನು ಲೀಡ್ ಮಾಡಿದ್ದರು.

ನಾವು ಈ ವಿಷಯವನ್ನು ಹೇಳಿದಾಗ ಬಂದ ಪ್ರತಿಕ್ರಿಯೆಗಳೂ ಸಹ ಸುದ್ದಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದವು. ಇದು ಸಂಪಾದಕೀಯದ ಬ್ಲಂಡರ್ ಎಂದು ಹೇಳಿದ್ದರು ಓದುಗರೊಬ್ಬರು. ಟೆಸ್ಟಿಂಗ್ ಎಂದು ಮಾರ್ಮಿಕವಾಗಿ ಮತ್ತೊಬ್ಬರು ಕಮೆಂಟ್ ಹಾಕಿದ್ದರು. ಸಂಪಾದಕೀಯ ಅನ್ನೋ ಪದಕ್ಕೆ ತಕ್ಕಂತೆ ಬರೀರಿ, ರ‍್ಯೂಮರ್ ಬರೀಬೇಡಿ ಎಂದು ಒಬ್ಬರು ತಾಕೀತು ಮಾಡಿದ್ದರು. ಹೀಗೆ ನಮ್ಮನ್ನು ಹಣಿದವರೆಲ್ಲ ನಮ್ಮ ಓದುಗರು. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ದೂರದಲ್ಲೆಲ್ಲೋ ಒಂದು ಅಂತರ್ಲಿಂಗಿಯೊಂದು ಏನ್ರೀ ಇದು, ಅಸಹ್ಯ ಇಂಥ ಸುದ್ದಿ ಹಬ್ಬಿಸುವ ವ್ಯಕ್ತಿಗಳನ್ನು ಹಿಡಿದು ತದುಕಬೇಕು ಎಂದು ವಿಕಾರವಾಗಿ ಕಿರುಚಿದ್ದೂ ನಮ್ಮ ಗಮನಕ್ಕೆ ಬಂದಿತ್ತು.

ನಂತರ ಈ ಸುದ್ದಿ ಕೆಲ ದಿನಗಳ ನಂತರ ಹಾಯ್ ಬೆಂಗಳೂರಿನಲ್ಲೂ ಪ್ರಕಟವಾದಾಗ ಇರಬಹುದೇನೋ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಇದೀಗ ಸುದ್ದಿ ಅಧಿಕೃತವಾಗಿದೆ. ಇಷ್ಟು ದಿನ ಕಾಯಿಸಿದಕ್ಕೆ ಸಾರಿ, ಸಾರಿ ಅಂಡ್ ಸಾರಿ ಎಂದು ಇಂದು ಬೆಳಿಗ್ಗೆ ತಮ್ಮ ವೆಬ್‌ಸೈಟ್‌ನಲ್ಲಿ ಬರೆಯುವ ಮೂಲಕ ಭಟ್ಟರು ತಮ್ಮ ಹೊಸಮನೆಯ ಗೃಹಪ್ರವೇಶವನ್ನು ಸಾರಿದ್ದರು.

ಮೊದಲೇ ಹೇಳಿದಂತೆ ಭಟ್ಟರ ವೃತ್ತಿ ಬದುಕಿನ ಹೊಸ ಆಯಾಮ. ಹೆಚ್ಚು ಬರೆಯುವ ಸಂಪಾದಕ ಎಂದು ಖ್ಯಾತಿಯಾದವರು ಅವರು. ಬೇರೆ ಬೇರೆ ಕಾರಣಗಳಿಂದಾಗಿ ಭಟ್ಟರು ಆಗಾಗ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಬಹಳಷ್ಟು ಜನರಲ್ಲಿತ್ತು. ವಿಶೇಷವಾಗಿ ಪತ್ರಕರ್ತರು ಈ ಬೆಳವಣಿಗೆಗಳನ್ನು ಎದುರು ನೋಡುತ್ತಿದ್ದರು.

ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಸೇರಿದರು. ಅದರರ್ಥ, ಅವರೊಂದಿಗೆ ತ್ಯಾಗರಾಜ್, ಪ್ರತಾಪ ಸಿಂಹ, ರಾಧಾಕೃಷ್ಣ ಬಡ್ತಿ ಅವರುಗಳೂ ಕನ್ನಡಪ್ರಭ ಸೇರುತ್ತಾರೆ ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ. ವಿಜಯ ಕರ್ನಾಟಕದಿಂದ ಇನ್ನೊಂದಿಷ್ಟು ಮಂದಿ ಹೊರಬಂದು ಭಟ್ಟರ ತೆಕ್ಕೆಗೆ ಸೇರಿದರೂ ಆಶ್ಚರ್ಯವಿಲ್ಲ.

ಏನಾದರೂ ಇರಲಿ. ವಿಶ್ವೇಶ್ವರ ಭಟ್ಟರು ಕನ್ನಡಪ್ರಭವನ್ನು ಜನಮುಖಿಯಾಗಿ ಬೆಳೆಸಲಿ. ಹಿಂದೆ ವಿಜಯಕರ್ನಾಟಕವನ್ನು ಕೋಮುವಾದಿಗಳ ಕೈಯಲ್ಲಿನ ಅಸ್ತ್ರವನ್ನಾಗಿ ಮಾಡಿದಂತೆ ಕನ್ನಡಪ್ರಭವನ್ನೂ ಮಾಡದಿರಲಿ. ಭಟ್ಟರನ್ನು ಬೇರೆ ಬೇರೆ ಕಾರಣಗಳಿಗೆ ಇಷ್ಟಪಡುವವರು ಇದ್ದೇ ಇದ್ದಾರೆ. ಇವರಲ್ಲಿ ಹಿಂದುತ್ವವಾದಿ ಅತಿರೇಕಿಗಳೂ ಇದ್ದಾರೆ, ಪ್ರಗತಿಪರರೂ ಇದ್ದಾರೆ. ಆಯ್ಕೆಯ ಸಂದರ್ಭದಲ್ಲಿ ಅವರ ಒಳಮನಸ್ಸು, ಆತ್ಮಸಾಕ್ಷಿ ಜಾಗೃತವಾಗಲಿ.

ಭಟ್ಟರಿಗೆ ಶುಭಾಶಯಗಳು.

ಭಟ್ಟರ ಕನ್ನಡಪ್ರಭ ಸೇರ್ಪಡೆಯ ಸುದ್ದಿಯ ಜೊತೆಜೊತೆಯಲ್ಲೇ ಶಿವಸುಬ್ರಹ್ಮಣ್ಯ ರಾಜೀನಾಮೆ ನೀಡಿದ ಸುದ್ದಿಯೂ ಹೊರಬರುತ್ತಿದೆ. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹುದ್ದೆಯನ್ನು ನಿಭಾಯಿಸಿದ ಶಿವಸುಬ್ರಹ್ಮಣ್ಯ ಮುಂದೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಹಾಗೆ ನೋಡಿದರೆ, ಅವರು ಅಷ್ಟಾಗಿ ಇದನ್ನು ಮನಸ್ಸಿಗೆ ಹಚ್ಚಿಕೊಳ್ಳಲಾರರು. ಊರಿನಲ್ಲಿ ಇರುವ ಅಡಿಕೆ ತೋಟ, ತಮ್ಮ ಆಸಕ್ತಿಯ ಕ್ಷೇತ್ರವಾದ ವೈಲ್ಡ್ ಲೈಫ್ ಫೋಟೋಗ್ರಫಿ ಅವರನ್ನು ಕ್ರಿಯಾಶೀಲರನ್ನಾಗಿ ಇಡುತ್ತದೆ. ಆದರೆ ಕನ್ನಡ ಪತ್ರಿಕಾರಂಗಕ್ಕೆ ಈ ಪ್ರತಿಭೆ ಬೇಕು, ಹೀಗಾಗಿ ಅವರೂ ಸಹ ಮೇನ್‌ಸ್ಟ್ರೀಮಿನಲ್ಲಿರಲಿ ಎಂಬುದು ಸಂಪಾದಕೀಯದ ಹಾರೈಕೆ.

33 comments:

  1. ಅಂದು ಭಟ್ಟರು ವಿ.ಕ.ಬಿಟ್ಟರು ... ಇಂದು ಭಟ್ಟರು ಕೆ.ಪಿ.ಗೆ ಪಾದ ಇಟ್ಟರು ...

    ReplyDelete
  2. bhatru kannadaprabhadalli vijaya pathake haarisali!

    ReplyDelete
  3. ಮೊದಲಿಗೆ ಶಿವಸುಬ್ರಹ್ಮಣ್ಯ ಪರ ತಳೆದಿರುವ ಮೃದುಧೋರಣೆಗೆ ತೀರಾ ಖಂಡನೀಯವಾದುದು. ಭಟ್ಟರ ಬಗ್ಗೆ ವಿಶ್ವಾಸವಿದೆ, ಶಿವಸುಬ್ರಹ್ಮಣ್ಯರವರು ಇಷ್ಟು ಕಾಲ ಕನ್ನಡಪ್ರಭವನ್ನು ಅಚ್ಚುಕಟ್ಟಾಗಿ ಮುಂದುವರೆಸಿಕೊಂಡು ಬಂದಿದ್ದರು. ಅವರ ಬಗ್ಗೆ ವಿಶ್ವಾಸವಿಲ್ಲವೇ? "ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹುದ್ದೆಯನ್ನು ನಿಭಾಯಿಸಿದ ಶಿವಸುಬ್ರಹ್ಮಣ್ಯ ಮುಂದೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು" ಅಂತ ಬರೆಯುತ್ತೀರಾ... ಅವರಿಗೆ ಅಡಿಕೆ ತೋಟವಿದೆ ಎಂತೀರಾ.. ಅಲ್ಲ ಸ್ವಾಮಿ ಸಂಪಾದಕರೇ, ಭಟ್ಟರಿಗೆ 4 ಕೋಟಿ ಬೆಲೆ ಬಾಳುವ ಬಂಗಲೆ ಇಲ್ಲವೇ? ಕನ್ನಡ ಪತ್ರಿಕಾರಂಗಕ್ಕೆ ಶಿವಸುಬ್ರಹ್ಮಣ್ಯರಂತ ಪ್ರತಿಭೆ ಬೇಕು ಅಂತೀರಾ. ಇಂತಹ ಪ್ರತಿಭೆ ಬೆಳೆಯುವ ಸಿರಿ ಮೊಳಕೆಯಲ್ಲೇ ಚಿವುಟಿ ಬಿಡುವುದು ನಿಜಕ್ಕೂ ಖಂಡನೀಯ...
    -ಕೆ.ಪಿ.

    ReplyDelete
  4. ಕನ್ನಡ ಪತ್ರಿಕೋದ್ಯಮದ ದುರ೦ತ....

    ಪಪ್ಪು ಯಾದವ್ ಚುನಾವಣೆಯಲ್ಲಿ ಗೆಲ್ಲುವುದು, ರವಿಕಾ೦ತ ಪಾಟೀಲ್ ಇ೦ಡಿಯಿ೦ದ ಗೆಲ್ಲುವುದು, ಎಲ್. ಆರ್. ಶಿವರಾಮೇ ಗೌಡನನ್ನು ದೇವೇಗೌಡರು ಜನತಾದಳ ಸೇರಿಸಿಕೊ೦ಡದ್ದು ಇತ್ಯಾದಿಗಳೆಲ್ಲಾ ಬೇಡಬೇಡ ಅ೦ದರೂ ನೆನಪಾದವು...

    ಬರೆಯಬಲ್ಲವರಾದರೆ(ಸುಳ್ಳು, ಕಮ್ಯೂನಲ್ ಎನಾದರೂ), ಪತ್ರಿಕೆಗಳಿಗೆ ಯಾರಾದರೂ ಆದೀತು....,

    ReplyDelete
  5. Messages in Bhat's website wecloming his joining Kannada Prabha read like how the blind followers of political leaders and cinema stars cheer their icons. Should Bhat and Prapat Simha resign from KP for some reason at some future date, one of those rightwing fans will commit suicide on Queen's Road which will force the BJP Government to rename the Road after the "MARTYR"...God save Kannada, God Save Kannada journalism, God save India

    ReplyDelete
  6. ಎಂಡೋಸಲ್ಫಾನ್, ತೋಟಗಾರಿಕೆ ಫಾರಂಗಳು ಖಾಸಗಿಗೆ, ಬಿಟಿ ಬದನೆ, ನೈಸ್ ರಸ್ತೆ ಅಧ್ವಾನ, ಪುಸ್ತಕ ಖರೀದಿ ನೀತಿಯಲ್ಲಿನ ಹುಳುಕುಗಳ ವಿರುದ್ಧ ಕನ್ನಡಪ್ರಭ ನಡೆಸಿದಂಥ ಹೋರಾಟಗಳು ಪತ್ರಿಕೋದ್ಯಮದ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗುತ್ತವೆ. ಅದೂ ರಂಗನಾಥ್ ಅವರು ಬಿಟ್ಟು ಹೋದ ನಂತರ, ಯಾವುದೇ ತರಹದಲ್ಲೂ ಹಿಂದೆ ಬೀಳದಂತೆ ಕನ್ನಡಪ್ರಭ ಮುಂದುವರಿಸಿದ್ದು ಶಿವಸುಬ್ರಹ್ಮಣ್ಯಂ ಅವರ ಸಾಧನೆ.
    ಆದರೆ ವಿ.ಭಟ್ಟರು ಅಂಥ ಯಾವುದೇ ಜನಪರ ಚಳುವಳಿಗೆ ವಿ.ಕ.ದಿಂದ ಬೆಂಬಲ ನೀಡಿಲ್ಲ ಎಂಬುದು ಸೂರ್ಯನಷ್ಟೇ ಸತ್ಯ. ಜನಪರ ಪತ್ರಿಕೆ ಹೇಗಿರಬೇಕು? ಎಂಬುದಕ್ಕೆ ಕನ್ನಡಪ್ರಭ ಸಾಕ್ಷಿಯಾಗಿತ್ತು. ಸೇಡು ತೀರಿಸಿಕೊಳ್ಳುವ ಬಗೆಯನ್ನು ವಿ.ಕ. ಸಾಬೀತುಪಡಿಸಿತ್ತು. ದುರದೃಷ್ಟವಶಾತ್ ಈಗ ವಿ.ಭಟ್ಟರೇ ಕನ್ನಡ ಪ್ರಭಕ್ಕೆ ಬಂದಿದ್ದಾರೆ. ಶಿವಸುಬ್ರಹ್ಮಣ್ಯ ಅವರು ಹೊರಹೋಗಲು ಕಾರಣವಾಗಿದ್ದಾರೆ.
    ವಿ.ಕೆ.ಗೆ ಆದ ಗತಿಯೇ ಇನ್ನು ಮುಂದೆ ಕ.ಪ್ರಭಕ್ಕೆ ಆಗುತ್ತದೆ. ಇದು ಪತ್ರಿಕೋದ್ಯಮದ ದುರಂತ. ಇನ್ನು ಜನಪರ ಪತ್ರಿಕೆಯಾಗಿ ಕ.ಪ್ರ. ಉಳಿಯುವುದು ಅನುಮಾನ.
    ರಘುಪತಿ ಹೆಗಡೆ
    ಬೆಂಗಳೂರು

    ReplyDelete
  7. ಶಿವ ಶಿವಾ ಸಮರದೊಳೂ.....

    ReplyDelete
  8. This comment has been removed by a blog administrator.

    ReplyDelete
  9. ಕೊನೆಯಲ್ಲಿ ಉನ್ನತ ವ್ಯಾಸಂಗ ಲಭ್ಯವಾಯಿತು - ( ಜನತೆಗೆ) !

    -ಪ.ರಾಮಚಂದ್ರ,
    ರಾಸ್ ಲಫ್ಫಾನ್, ಕತಾರ್.

    ReplyDelete
  10. Kannada Prabha circulation will increase and over take not jsut VK but PV also. Good luck Bhat.
    Good Luck Sivasubramanya kALMADKA ALSO. His hard work and contribution will be counted after one yera and Manoj kumar Sonthalia will remember Shivsubramany after 9 to 12 months...

    ReplyDelete
  11. battaru kp pathrike katali, jathge sha udogigalanu tammm athmiya balagadavranthe nodi kolalli. column suru yayag battre ?

    ReplyDelete
  12. ಇಂದಿನ ಕನ್ನಡಪ್ರಭ ನೋಡಿದಾಗ ಅಚ್ಚರಿ ಆಯಿತು.ವಿ.ಭಟ್ ಪ್ರಧಾನ ಸಂಪಾದಕರಾಗಿ ಸೇರಿದ್ದಕ್ಕೆ ಅಲ್ಲ.ಆದ್ರೆ ಅಲ್ಲೇ ಸಂಪಾದಕರಾಗಿದ್ದ ಶಿವಸುಬ್ರಮಣ್ಯ ಅವರ ಬಗ್ಗೆ ಒಂದು ಮೆಚ್ಚುಗೆಯ ಮಾತು ಕೂಡಾ ಭಟ್ಟರ ನೇಮಕದ ಸುದ್ದಿಯ ಜೊತೆಗೆ ಇರಲಿಲ್ಲ.ಮಾಧ್ಯಮ ವಲಯ ಅದೆಷ್ಟು ಕಮರ್ಷಿಯಲ್ ಆಗಿದೆಯಲ್ಲ ಅಂತ ಬೇಸರವಾಯಿತು.ವಿ.ಭಟ್ಟರು ವಿ.ಕ. ಬಿಟ್ಟಾಗ ಅದು ಸುಳ್ಳೇ ಆಗಿದ್ರೂ ವ್ಯಾಸಂಗಕ್ಕಾಗಿ ವಿದೇಶಕ್ಕೆ ಭಟ್ಟರು ರಾಜೀನಾಮೆ ನೀಡಿದ್ದಾರೆ ಅಂತ ಟೈಮ್ಸ್ ಆಡಳಿತ ವರ್ಗ ಹೇಳಿ ಭಟ್ಟರ ಸೇವೆ ಸ್ಮರಿಸುವ ಉದಾರತೆ ತೋರಿತ್ತು.ಕೆ.ಪಿ. ಆಡಳಿತ ಅದನ್ನೂ ಮಾಡಿಲ್ಲ .ಹೊಸ ನೀರು ಬಂದಾಗ ಹಳೇ ನೀರು ಕೊಚ್ಚಿ ಹೋಯ್ತು ಅನ್ನುವ ಹಾಗೆ ಉತ್ತಮ ಪತ್ರಕರ್ತರೊಬ್ಬರು ಮೂಲೆ ಗುಂಪಾಗುವಂಥ ಬೆಳವಣಿಗೆ ದುರದೃಷ್ಟಕರ.
    ವಿ.ಭಟ್ಟರು ಕೆ.ಪಿ.ಗೆ ಬಂದಿದ್ದು ಮರಳಿ ಮನೆಗೆ ಅಂತ ಅವ್ರಿಗೆ ಅನ್ಸಿದ್ರೆ ಸಹಜ.ಆದ್ರೆ ವಿ.ಕದ ಪ್ರಯೋಗಗಳೆಲ್ಲ ಅವ್ರಿಗೆ ಮೊದಲಿನಂತೆ ಖ್ಯಾತಿ ತರುತ್ತಾ ಅಂತ ಕಾದುನೋಡಬೇಕು.
    ಭಟ್ಟರಿಗೆ ಒಂದು ಕಿವಿಮಾತು:ವ್ಯಕ್ತಿಗಳ ಚಾರಿತ್ರ್ಯ ವಧೆಗೆ ಆದ್ಯತೆ ಬೇಡ.ಬದಲಿಗೆ ವ್ಯವಸ್ಥೆ ಸುಧಾರಣೆಗೆ ಒತ್ತು ಸಿಗುವಂತೆ ಮಾಡಲಿ.

    ReplyDelete
  13. ಸಂಪಾದಕೀಯ ತಂಡಕ್ಕೆ ಶುಭಾಶಯಗಳು. ಭಟ್ಟರು ಕನ್ನಡಪ್ರಭ ಸೇರುವುದನ್ನು ನೀವು ಜ.೧೧ರಂದೇ ಈ ಸುದ್ದಿಯನ್ನು ಬರೆದಿದ್ದಿರಿ. ಹೆಚ್ಚುಕಡಿಮೆ ಒಂದು ತಿಂಗಳ ಹಿಂದೆಯೇ ಈ ಸುದ್ದಿಯನ್ನು ಬರೆದಿದ್ದಿರಿ. ಮೀಡಿಯಾಗಳ ಕುರಿತು ನಿಮಗಿರುವ ಜ್ಞಾನ ಮತ್ತು ಕಾಳಜಿ ಅಭಿನಂದನೀಯ.

    ReplyDelete
  14. ವಿಭಟ್ಟರು ಕಪ್ರದ ಸಂಪಾದಕೀಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕನ್ನಡ ಪತ್ರಿಕಾಕ್ಷೇತ್ರದಲ್ಲಿ ಈಚೆಗೆ ಹಬ್ಬಿರುವ ವೈಯಕ್ತಿಕ ದ್ವೇಷ ಸಾಧನೆಗಾಗಿ ಪತ್ರಿಕೆ ಬಳಸಿಕೊಳ್ಳುವ ಪ್ರವೃತ್ತಿಗೆ ಇನ್ನೊಂದು ಹೆಜ್ಜೆ ಮುಂದೆ ಹೋದಂತಾಗಿದೆ. ಇನ್ನೊಬ್ಬರನ್ನು ಹಣಿಯಲು ಇದುವರೆಗೂ ವಿಕ ವೇದಿಕೆ ಆಗುತ್ತಿತ್ತು. ಇನ್ನು ಕಪ್ರ. ಭಟ್ಟ ಅಧಿಕಾರ ವಹಿಸಿಕೊಂಡ ಮರುದಿನವೇ ಕಪ್ರದ ೨ನೇ ಪುಟದಲ್ಲಿ ಕಂಡುಬಂದಿರುವ ಶೀಷರ್?ಕೆ: ಕಾಮ ಕೇಳಿಗೆ ಧರ್ಮದೇಟು!
    ಪತ್ರಿಕಾ ಭಾಷೆಯ ವ್ಯಾಕರಣ ಬಲ್ಲವರಿಗೆ ಇನ್ವೈಟೆಡ್ ಕಾಮಾದ ಅರ್ಥ ಗೊತ್ತು. ಅದರ ಹಿನ್ನೆಲೆಗಳು ಅರ್ಥ ಆಗುತ್ತವೆ. ಈ ಶೀಷರ್?ಕೆಯಲ್ಲಿ ಇನ್ವೈಟೆಡ್ ಕಾಮಾ ಹಾಕುವುದೇ ಅನಿವಾರ್ಯ ಎಂದಾದರೆ ಕಾಮಕೇಳಿಗೆ ಹಾಕಬಹುದಿತ್ತು. ಈಗ ಬರಿ ಕೇಳಿಗೆ ಮಾತ್ರ ಹಾಕಿರುವುದರ ಉದ್ದೇಶ ಏನು ಎಂದರೆ ಬೆಂಗಳೂರುನ ಕೆಲ ಓದುಗರಾದೂ ಹಾಯ್, ಹಾಯ್ ಎಂದಾರು. ವ್ಯಕ್ತಿತ್ವವನ್ನು ಬದಲಿಸುವುದು ಕಷ್ಟ, ಹೀಗಾಗಿ ವ್ಯಕ್ತಿಯನ್ನು ಬದಲಿಸುವುದೇ ಸರಿ ಎಂಬುದು ಹಿಂದೆಲ್ಲೋ ಓದಿದ ವಾಕ್ಯ. ಕಪ್ರ ಮ್ಯಾನೇಜುಮೆಂಟು ವ್ಯಕ್ತಿಯನ್ನು ಬದಲಿಸಿದೆ. ಅವರ ದ್ವೇಷ ಸಾಧನೆಯ ಸಣ್ಣತನದ ವ್ಯಕ್ತಿತ್ವವು ಬದಲಾದರೆ ಕಪ್ರ ಬೆಳೆಯುತ್ತದೆ. ಆ ಮೂಲಕ ಪತ್ರಿಕಾರಂಗವು ಬೆಳೆದೀತು! ಓದುಗರಿಗೆ ಭಟ್ಟರೋ, ಇನ್ನೊಬ್ಬರೋ ಮುಖ್ಯವಲ್ಲ. ಪತ್ರಿಕೆಯೇ ಮುಖ್ಯ.

    ReplyDelete
  15. ಕಪ್ರ ಮ್ಯಾನೇಜ್‌ಮೆಂಟ್ ಅನ್ನು ದೂಷಿಸುವುದಕ್ಕೆ ಮುನ್ನ ಸ್ವತಃ ಭಟ್ಟರು ಏನು ಮಾಡುತ್ತಿದ್ದರು ಎಂದು ಕೇಳಬೇಕಾಗುತ್ತದೆ. ಅನಿವಾರ್ಯ ಪರಿಸ್ಥಿತಿಯಿಂದ ವಿಕದಿಂದ ಹೊರಬಂದ ಭಟ್ಟರು ತಮ್ಮ ವಶೀಲಿ ಬಳಸಿ ಕಪ್ರ ಸೇರಿಕೊಂಡರು. ಒಂಟೆ ಡೇರೆಯಲ್ಲಿ ನುಗ್ಗಿದಂತೆ, ಶಿವಸುಬ್ರಹ್ಮಣ್ಯ ಹೊರ ಬರುವ ಪ್ರಸಂಗ ಬಂದಿತು. ತಾವೇ ಹೊರದಬ್ಬಿರುವ ಶಿವಸುಬ್ರಹ್ಮಣ್ಯ ಅವರ ಬಗ್ಗೆ ಒಂದು ವಿದಾಯ ಬರೆಯುವ ದೊಡ್ಡತನ ಭಟ್ಟರಲ್ಲಿ ಇರಲಿಲ್ಲ ಎಂಬುದೇ ಬೇಸರದ ಸಂಗತಿ. ಲಂಡನ್ ಪತ್ರಿಕೆಯಲ್ಲಿ ಹೀಗೆ ನಡೆದಿತ್ತು, ಮುಂಬೈ ಕ್ರಾನಿಕಲ್ ಹಾಗೆ ಬರೆದಿತ್ತು, ಗಾಂಧೀಜಿ ಹೀಗೆ ನಡೆದುಕೊಂಡಿದ್ದರು, ಪುಲಿಟ್ಝರ್ ಹಾಗೆ ಬರೆದಿದ್ದರು ಎಂದೆಲ್ಲಾ ಸುದ್ದಿಮನೆ ಕತೆ ಹೆಣೆಯುವ ಭಟ್ಟರು ಕನಿಷ್ಟ ಸೌಜನ್ಯ ತೋರಲಿಲ್ಲವಲ್ಲ. ಇನ್ನು ಸಂಪಾದಕೀಯ ಪುಟದಲ್ಲಿ ಜನಪರ ಕಾಳಜಿಗಳೆಲ್ಲವೂ ಮಾಯವಾಗಿ ಬಲಪಂಥೀಯರ ಬಲ ಪ್ರದರ್ಶನಕ್ಕೆ, ಪ್ರತಾಪ ತೋರಲಿಕ್ಕೆ ಅಣಿಯಾಗುತ್ತದೆ. ಮತ್ತೆ ಸುಳ್ಳುಸುದ್ದಿಮನೆ ಕತೆಯಾಗಿ ಬಿತ್ತರಗೊಳ್ಳುತ್ತದೆ.

    ReplyDelete
  16. sampadakiya olavu vyaktige simit vagirabardu, badalige vyaktitvakke sambhandisiddagirbeku! vish bhatt avrige nimm shubhashayagalu swagatarhve adaru subrahmanya avar bagge talid niluvu khandaniya!vk inda horabandagininda ondilla ondu breaking news galannu koduttale banda bhattaru...kadege shocking news koduttarendu andu kondiralilla:-(...vobbara jaga kasidukondu patrike nadesuva(nindisuva astravannagi balasuva) avashyakte ideye?? namagalldiddaru...ugrabhimanigalige, mattu pratapigaligantu suggiya kala!! innestu divasa?? kadu noduva..............

    ReplyDelete
  17. @ KP, ಕನ್ನಡ ಪತ್ರಿಕಾರಂಗಕ್ಕೆ ಈ ಪ್ರತಿಭೆ ಬೇಕು, ಹೀಗಾಗಿ ಅವರೂ ಸಹ ಮೇನ್‌ಸ್ಟ್ರೀಮಿನಲ್ಲಿರಲಿ ಎಂಬುದು ಸಂಪಾದಕೀಯದ ಹಾರೈಕೆ endu baredirodu kannige kanallava?

    ReplyDelete
  18. @padyana ramachandra
    ಕೊನೆಯಲ್ಲಿ ಉನ್ನತ ವ್ಯಾಸಂಗ ಲಭ್ಯವಾಯಿತು - ( ಜನತೆಗೆ) !
    nimma kutuku super. adbutha punch kottiddeeri

    ReplyDelete
  19. This is the real death of ethics! how can one forcibly occupy the already existing editor's place?perhaps subrahmanya would have been given a chance to continue along with bhat, but as its the preplanned arrival of bhat,more in pipeline! within a week one may expect 'bettale jagattu' to make a come back in the name of 'kattale jagattu' again am sure he will use kannada prabha as his weapon to fire against RB personally!! no doubt my words will come true within a week! bhattare eegaladru nimm shishya vrundavannu personal attacks galinda mukta golisi....we are really fed up of your attacks on RB..all these days on ur website n ugra simha's wall.Pls don't misuse KP in this regard!

    ReplyDelete
  20. ಕಪ್ರಕ್ಕೆ ವಿಪ್ರ ಸಾರಿ ವಿಭರ ಪ್ರವೇಶ ಯಾರಿಗೆ ಬೇಕಿತ್ತೋ ಗೊತ್ತಿಲ್ಲ, ಆದರೆ ವಿಭ ಅವರಿಗೆ ಹೇಗಾದರೂ ಮಾಡಿ ಪತ್ರಿಕೆಯೊಂದರ ಸಂಪಾದಕರಾಗುವ ಜರೂರಿತ್ತು. ಟೀಜೇಎಸ್ ಜಾರ್ಜು, ರಾಜೀವ ಚಂದ್ರಶೇಖರರ ಬೆನ್ನು ಹತ್ತಿ ತಮಗೊಂದು ಖಾಯಂಸ್ಥಾನ ಮಾಡಿಸಿಕೊಂಡರು, ಕಷ್ಟ ಕಾಲದಲ್ಲಿ ಪತ್ರಿಕೆ ಕಟ್ಟಿ ನಿಲ್ಲಿಸಿದ ಕಟ್ಟಾಳುವನ್ನು ಒದ್ದೋಡಿಸಿ. ಅಟ್ ದಿ ಮೋಸ್ಟ್, ಕಪ್ರ ನಂ.೩ ಸ್ಥಾನಕ್ಕೆ ಬರಬಹುದೇ ಹೊರತು, ನಂ.೧, ನಂ.೨ರ ಸ್ಥಾನ ಮುಟ್ಟಿಸುವುದು ಭಟ್ಟರಲ್ಲ, ಅವರ ಮೂರು ಹಿಂಬಾಲಕರಿಂದಲೂ ಸಾಧ್ಯವಿಲ್ಲ. ರಾಘವನ್ ವಿಕಕ್ಕೆ ಒಂದು ಬಗೆಯ ಬ್ಯಾಲೆನ್ಸ್ ನೀಡುತ್ತಿದ್ದಾರೆ. ಇತ್ತ ದಿನೇಶ್-ದಂಡಾವತಿ ಅತ್ತಿತ್ತ ಎಳೆದಾಡುತ್ತಲೇ ಪ್ರವಾ ಅನ್ನು ಬ್ಯಾಲೆನ್ಸ್ ಮಾಡಿಸಿದ್ದಾರೆ. ರವಿ ಹೆಗಡೆ ಉದಯವಾಣಿಯನ್ನು ಮತ್ತಷ್ಟು ಎತ್ತರದ ಟೆಕ್ನಾಲಜಿ ಮೆರುಗು ನೀಡಬಲ್ಲರು. ಹುಣಸವಾಡಿ ರಾಜನ್ ಅವರಿಗೆ ಹುಮ್ಮಸ್ಸಿದೆ. ನಾಲ್ಕರಲ್ಲಿ ಮತ್ತೊಂದಾಗಬಹುದಾದ ಕಪ್ರ ಕನ್ನಡಪರ ನಿಲುವಿನಿಂದ ಹಿಂದೂಪರ ನಿಲುವಿನ ಪತ್ರಿಕೆಯಾಗಬಹುದೆಂಬುದೇ ಆತಂಕ. ವಿಕದಲ್ಲಿ ಆದಂತೆ ವಸೂಲಿದಾರರ ಡೆನ್ ಆಗಬಹುದೆ? ಎಂಬ ಅನುಮಾನವೂ ಕಾಡುತ್ತದೆ. ಹಾಗಾಗದಿರಲಿ, ಪತ್ರಿಕೋದ್ಯಮ ಜಾರಿಯಲ್ಲಿರಲಿ.

    - ರಮೇಶ ಕರಿಗದ್ದೆ, ಸಮೂಹ ಮಾಧ್ಯಮ ವಿದ್ಯಾರ್ಥಿ, ಬೆಂಗಳೂರು ವಿವಿ

    ReplyDelete
  21. This was the expected news no doubt about it and i congratulate sampadakeeya for having an opined guess in this regard!well, the question arises will v bhat be able to stay away from all the controversies? do we people expect the journalist to be corrupt?no doubt v. bhat is an intelligent and skilled editor, what about pratap simha? since bhat supported and encouraged, he considers himself a star and with all arrogance posts on his wall saying v bhat is the man who created a star out of him!!! how pathetic!Blind followers are always there Neithere nityananda nor simha is an exception!!If this is the mindset of people God should save our kannada journalism!waithin a day or two so himself called star simha gonna take a seat as well,let's watch out the mud singling on RB!! As a dumb readers!!however the same is yet to happen on janashree for which still there is a time! as of now KP will be the platform for everything,May suvarna remain unaffected by these people!!!!!

    ReplyDelete
  22. @ramesh, i agree to your opinion but i doubt the crowd's opinion...when we had handfull of examples of corruptions against BJP we expected it's defeat in ZP N TP elections did not we? what was the result?? same with KP!!!!!! now a days journalists are literally competing and overtaking politicians in corruption n politics shame on this condition!!!!!

    Spandana

    ReplyDelete
  23. ಯಾರು ಏನು ಹೇಳಿದರೂ, ವಿಶ್ವೇಶ್ವರ ಭಟ್ಟರ ಸಾಮರ್ಥ್ಯವನ್ನು ಯಾರೂ ಅಲ್ಲಗೆಳೆಯುವುದು ಸಾಧ್ಯವಿಲ್ಲ. ವಿಜಯ ಕರ್ನಾಟಕವನ್ನು ಕಟ್ಟಿ ಬೆಳಸಿ ನಂ.೧ ಪತ್ರಿಕೆ ಮಾಡಿದ್ದು ಅವರ ಸಾಧನೆ. ಕನ್ನಡಪ್ರಭದಲ್ಲೂ ಅವರ ಸಾಧನೆ ಮುಂದುವರೆಯಲಿ
    -ರಾಗಿಣಿ

    ReplyDelete
  24. I wish VBhat all the best in KP and wish KP will soon become No.1 daily in Kannada. Undoubtedly, it was under the leadership of VBhat that VK had achieved the heights and I am looking for similar magic in KP too. As far as I know, people liked VK because of the columns and VBhat gave both face and space to the columnists.

    Pratap Simha is a very talented and brave journalist, who writes with a lot of background study on varieties of subjects that span current affairs, politics, sports, history etc. He has a huge fan following. I am waiting for Bettale Jagattu in KP. I have seen many people (who are jealous of his success in short period?) criticizing him for his so called "rightist" views. I do not care whether his views are leftist/rightist, as long as they are logical, truthful and supported by facts/data.

    Similarly, all the best to Bhadthi and Thyagaraj who had created their own mark in VK.

    ReplyDelete
  25. @anonymous jealous(?) of what? why do we readers get jealous....i don't understand...since he has a big fan following since he writes about politics and since he writes about sports and history his mistake is accepted excitingly!!!! what a fan following...i respect the stand of you mr. anonymous, if this is the condition of you, what do you expect your beloved columnist to write? write about how to get a MUDA n BDA sites? how to create fake letters and publish in someone else's name? han? what do you expect?
    A person who himself don't have any ethics what he can preach others?!!
    Spandana

    ReplyDelete
  26. ವಿಶ್ವೇಶ್ವರ ಭಟ್ ಮತ್ತು ಅವರ ಶಿಷ್ಯರ ಪತ್ರಿಕೋದ್ಯಮ ಎ೦ತಾದ್ದು ಅ೦ತ ತಿಳಿದುಕೊಳ್ಳಲು ಹಾಲಪ್ಪ್ಪ ಪ್ರಕರಣ ಒ೦ದು ಸಾಕು. ಅದನ್ನು ಶತಮಾನದ ಸ್ಕೂಪ್ ಅ೦ತ ಅವರು ಬಿ೦ಬಿಸಿದ್ದು ಮತ್ತು ಅವರು ಹೇಳಿದ್ದನ್ನು ವಿಜಯ ಕರ್ನಾಟಕದ ಅಭಿಮಾನಿಗಳು ಸ್ವೀಕರಿಸಿದ್ದು ಕನ್ನಡ ಪತ್ರಿಕೊದ್ಯಮ ಭಟ್ಟರ ನಾಯಕತ್ವದಲ್ಲಿ ಎ೦ತಹಾ ದುರ೦ತದತ್ತ ಸಾಗುತ್ತ್ತಿದೆ ಅನ್ನುವುದಕ್ಕೆ ಸಾಕ್ಷಿ.

    ReplyDelete
  27. Kannada Prabha owners, Sonthalia and Rajiv Chandrashekhar, do not read Kannada for sure..so they might not have a first hand info on what kind of journalism VB and his men had done but at least the letters by former DGP Ajay Kumar Singh and Commissioner Shankar Bidri should have given them some idea of what kind of editors VB was.

    By the way, VB had so many fans even after those letters were leaked says the quality of fans as much as the quality of the editor material that VB is...

    ReplyDelete
  28. Hi Spandana - Getting a 30x40 MUDA site in Mysore in legitimate way for his own stay is a mistake? Pratap Simha has offered a decent and convincing explanation to everybody about this allegation. Other than this, what assets does he own? Many of his opponents tried their best to find something negative about him but could not find anything. So they are trying to project his MUDA site story as if it was a biggest blunder.

    And what do you say for the journalists who amassed crores by writing cheap and crappy stuff, and maligning others and sheer blackmailing?

    There is no doubt about Pratap Simha's ability as journalist and he has come clean so far. Most importantly, his readers are mainly educated youths, who do not follow somebody blindly.

    Good Bye!

    ReplyDelete
  29. @anonymous,he has come clean so far except the MUDA site. If he were so honest,there was no need for him to get the site in G category,never forget,those sites are not for journalists, since someone is popular you can't blindly accept whatever they say...G category sites are for the handicaps,retired solders,and poor people who lead life below the normal wages!!! so called star simha does not come in any of these categories!!! if he is so clean n honest ask him to return the site!!!!
    Spandana

    ReplyDelete
  30. Imagine, 18 years old boy started reading Vijaya Karnataka 12 years back. Now he is totally communal. More over his views on literature, movie, books, everything moulded according to Vijaya Karnataka.

    ReplyDelete
  31. @Spandana. Yes star simha is not handicapped but his wife is. So get your facts right.

    ReplyDelete
  32. @anonymous...I pity you,first you get clarified with the G category facts! handicaps are given site is true,but never forget not every person who meets with an accident can have such sites!! the economical status and a family back ground is taken into considerations.Moreover no journalist's wife come under any of such category!! again you may argue that the site was registered well before marriage,which was actually transferred from simha's name to her. in that case neither simha is poor nor his wife is!! whether all handicaps irrespective of their economic status get the site?? before marriage also she has no reason to have the site as she comes from very well and economically strong family!! don't try to bluff around Mr. anonymous get well soon!!!
    Spandana

    ReplyDelete
  33. ಎಲ್ಲಕ್ಕಿಂತ ನೋವು- ಶಿವ ಸುಬ್ರಹ್ಮಣ್ಯರಂತಹ ವ್ಯಕ್ತಿಯನ್ನು ಉಳಿಸಿಕೊಳ್ಳುವ ಯೋಗ್ಯತೆ ಪತ್ರಿಕಾರಂಗಕ್ಕೆ ಇಲ್ಲವಾಯ್ತಲ್ಲ ಎನ್ನುವುದು. ಅವರು ವಿ.ಕ.ಸೇರಿದರೆ ಬಹುಸಃ ಅದು ನಿಜಾರ್ಥದಲ್ಲಿ ‘ಸಮಸ್ತ ಕನ್ನಡಿಗರ ಹೆಮ್ಮೆ’ಯಾಗಿ ಹೊಮ್ಮುವುದು. ಟೈಮ್ಸ್ ಮ್ಯಾನೇಜ್ಮೆಂಟ್ ಈ ಬಗ್ಗೆ ಸೀರಿಯಸ್ಸಾಗಿ ಯೋಚಿಸುತ್ತದೆಯೋ ನೋಡಬೇಕು. - ಪತ್ರಕರ್ತಾ

    ReplyDelete