Wednesday, February 9, 2011

ವಿಜಯ ಕರ್ನಾಟಕಕ್ಕೊಬ್ಬ ದಲಿತ ಸಂಪಾದಕ?


“I think a qualified journalist with a Dalit background should be made editor of a major newspaper in Karnataka. We may get new perspectives and the issues addressed may be different too. The time is ripe.”

ಹೀಗೆ ಜನಪ್ರಿಯವಲ್ಲದ ಅಭಿಪ್ರಾಯವನ್ನು ನಿರ್ಭಿಡೆಯಿಂದ ಹೇಳಿದವರು ಉದಯ ಟಿವಿಯ ದೀಪಕ್ ತಿಮ್ಮಯ. ತಮ್ಮ ಫೇಸ್‌ಬುಕ್‌ನಲ್ಲಿ ಅವರು ಹೀಗೆ ಬರೆದಿದ್ದನ್ನು ಚುರುಮುರಿ ಪ್ರಕಟಿಸಿ, ಚರ್ಚೆಗೆ ಅವಕಾಶ ಕಲ್ಪಿಸಿತ್ತು. ಪತ್ರಿಕಾರಂಗದಲ್ಲೂ ಮೀಸಲಾತಿನಾ ಎಂದು ಹಲವರು ಬಾಯಿಬಡಿದುಕೊಂಡಿದ್ದರು. ಇನ್ನೂ ಕೆಲವರು ಜಿಗುಪ್ಸೆ ಹುಟ್ಟಿಸುವ ಶೈಲಿಯಲ್ಲಿ ತಮ್ಮ ವಿಕಾರ ಜಾತೀಯತೆಯನ್ನು ಪ್ರದರ್ಶಿಸಿದ್ದರು.

ಆ ವಿಷಯ ಹಾಗಿರಲಿ, ಕನ್ನಡ ಮಾಧ್ಯಮಗಳ ಉನ್ನತ ಹುದ್ದೆಗಳಲ್ಲಿ ಆಗುತ್ತಿರುವ ಮ್ಯೂಸಿಕಲ್ ಚೇರ್ ಸ್ಪರ್ಧೆಯನ್ನು ಗಮನಿಸಿ. ಬ್ರಾಹ್ಮಣ ಸಮುದಾಯದವರೇ ಸ್ಪರ್ಧಾಳುಗಳು, ಎದುರಾಳಿಗಳು. ಇಲ್ಲಿ ಬೇರೆ ಸಮುದಾಯದವರಿಗೆ ಜಾಗವೇ ಇಲ್ಲವೇ? ಬೇರೆ ಸಮುದಾಯಗಳ ಪತ್ರಕರ್ತರಿಗೆ ಮಾಧ್ಯಮ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುವ ಅರ್ಹತೆಯೇ ಇಲ್ಲವೇ? ಈಗ ಸಂಪಾದಕ ಸ್ಥಾನಗಳಲ್ಲಿ ಇರುವ ಬ್ರಾಹ್ಮಣ ಸಮುದಾಯದ ಪತ್ರಕರ್ತರು ಅನರ್ಹರು ಎಂದು ಯಾರೂ ತಪ್ಪಾಗಿ ಭಾವಿಸಬೇಕಿಲ್ಲ. ಆದರೆ ಉಳಿದ ಸಮುದಾಯದವರ ಪಾರ್ಟಿಸಿಪೇಷನ್ ಯಾಕೆ ಇಲ್ಲ? ಎಲ್ಲೋ ದೀಪಕ್ ತಿಮ್ಮಯ ಅಂಥವರು ಇಂಥ ಪ್ರಶ್ನೆಗಳನ್ನು ಅಪರೂಪಕ್ಕೆ ಎತ್ತಿದ್ದನ್ನು ಹೊರತುಪಡಿಸಿದರೆ ಬೇರೆ ಯಾರೂ ಈ ಕುರಿತು ಮಾತನಾಡುತ್ತಿಲ್ಲ?

ಎಲ್ಲ ಪತ್ರಿಕೆಗಳಲ್ಲೂ ಬದಲಾವಣೆಗಳು ನಡೆಯುತ್ತಿವೆ. ಸದ್ಯಕ್ಕೆ ಉಳಿದಿರುವುದು ವಿಜಯ ಕರ್ನಾಟಕ ಮಾತ್ರ. ವಿಶ್ವೇಶ್ವರ ಭಟ್ಟರ ನಿರ್ಗಮನದ ನಂತರ ವಿಜಯ ನೆಕ್ಸ್ಟ್‌ನ ಸಂಪಾದಕರಾಗಿರುವ ಇ.ರಾಘವನ್ ಅವರಿಗೆ ವಿಜಯ ಕರ್ನಾಟಕದ ಹೆಚ್ಚುವರಿ ಹೊಣೆಯನ್ನು ಕನ್ಸಲ್ಟಿಂಗ್ ಎಡಿಟರ್ ಆಗಿ ನೀಡಲಾಗಿತ್ತು. ಈ ತಾತ್ಕಾಲಿಕ ವ್ಯವಸ್ಥೆ ಹೆಚ್ಚು ದಿನಗಳ ಕಾಲ ನಡೆಯುವ ಸಾಧ್ಯತೆ ಕಡಿಮೆ. ಹೀಗಾಗಿ ವಿಜಯ ಕರ್ನಾಟಕದ ಪೂರ್ಣಾವಧಿಯ ಸಂಪಾದಕ ಯಾರಾಗುತ್ತಾರೆ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿಯೇ ಇದೆ.

ಈಗ ದೀಪಕ್ ತಿಮ್ಮಯ ಕೇಳಿದ್ದನ್ನೇ ನಾವೂ ಮತ್ತೆ ಕೇಳುತ್ತಿದ್ದೇವೆ. ಯಾಕೆ ದಲಿತ ಸಮುದಾಯದ ಸಮರ್ಥ ಪತ್ರಕರ್ತರೋರ್ವರನ್ನು ಈ ಸ್ಥಾನಕ್ಕೆ ತರಬಾರದು? ವಿಜಯ ಕರ್ನಾಟಕ ಈ ಕಾರ್ಯಕ್ಕೆ ತಯಾರಾಗಿದೆಯೇ?
ನೀವು ಕೇಳಬಹುದು: ಸದ್ಯಕ್ಕೆ ಆ ಸ್ಥಾನಕ್ಕೆ ಅರ್ಹರಾಗಿರುವ ದಲಿತ ಸಮುದಾಯದ ಹಿನ್ನೆಲೆಯ ಪತ್ರಕರ್ತರು ಇದ್ದಾರೆಯೇ? ನಮ್ಮ ಉತ್ತರ: ಹೌದು, ಇದ್ದಾರೆ. ಅರ್ಹತೆ, ಬದ್ಧತೆ, ಪ್ರಾಮಾಣಿಕತೆ, ಹಿರಿತನ, ತಂಡವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವಿರುವ ದಲಿತ ಸಮುದಾಯಕ್ಕೆ ಸೇರಿದ ಪತ್ರಕರ್ತರು ಇದ್ದಾರೆ. ಗುರುತಿಸುವ ಕೆಲಸ ಆಗಿಲ್ಲ ಅಷ್ಟೆ.

ದಲಿತರೊಬ್ಬರು ಸಂಪಾದಕರಾದರೆ ಮಹಾ, ಏನಾಗಿಬಿಡುತ್ತೆ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳಬಹುದು. ನಿಜ, ಸಮುದಾಯ ಯಾವುದೇ ಇರಲಿ, ಸಂಪಾದಕನಿಗೆ ನಿಜವಾದ ಸಾಮಾಜಿಕ ಬದ್ಧತೆ, ಕಾಳಜಿಗಳಿದ್ದರೆ ಆತ ಪತ್ರಿಕೆಯನ್ನು ಜನಪರವಾಗಿ, ಮಾನವೀಯವಾಗಿ ರೂಪಿಸಬಲ್ಲ. ಅದನ್ನು ಬಹಳಷ್ಟು ಮಂದಿ ಈ ಹಿಂದೆಯೇ ನಿರೂಪಿಸಿದ್ದಾರೆ.

ಆದರೆ, ದಲಿತ ಸಮುದಾಯದ ಹಿನ್ನೆಲೆಯಿಂದ ಬಂದವರು ತಮ್ಮ ಜೀವನದೃಷ್ಟಿಯೊಂದಿಗೆ ಹೊಸತನವನ್ನು ಕೊಡಬಲ್ಲರು. ಸಮಕಾಲೀನ ಜಗತ್ತಿಗೆ ಬೇರೆಯದೇ ಆದ ರೀತಿಯಲ್ಲಿ ಸ್ಪಂದಿಸಬಲ್ಲರು. ಹೊಸ ಸಂವೇದನೆಗಳು, ಹೊಸ ಕಾಣ್ಕೆಗಳು, ಹೊಸ ನಿಲುವುಗಳು ಹುಟ್ಟಿಕೊಳ್ಳಬಹುದು. ಹಿಂದುಳಿದ ಸಮುದಾಯಗಳ ಇನ್ನಷ್ಟು ಮಂದಿ ಪ್ರತಿಭಾವಂತರು ಇದೇ ಸ್ಫೂರ್ತಿಯಲ್ಲಿ ಮಾಧ್ಯಮರಂಗ ಪ್ರವೇಶಿಸಬಹುದು. ಬೇರೆ ಬೇರೆ ಹಿನ್ನೆಲೆಯ ಈ ಸಮೂಹ ತಮ್ಮದೇ ಆದ ವಿಶೇಷ ಜ್ಞಾನ, ಪರಿಣತಿಯನ್ನು ಇಲ್ಲಿ ತೋರಬಹುದು. (ಅಸಲಿಗೆ ಜ್ಞಾನದ ವ್ಯಾಖ್ಯೆಯೇ ಬದಲಾಗಬೇಕಾದ ಸಂದರ್ಭ ಇದು.) ದೇವನೂರು, ಸಿದ್ಧಲಿಂಗಯ್ಯ ಅವರುಗಳು ಬರೆದ ಸಾಹಿತ್ಯವನ್ನು, ಕಟ್ಟಿಕೊಟ್ಟ ಸಂವೇದನೆಗಳನ್ನು ಬೇರೆ ಸಮುದಾಯದವರು ಕೊಡಲು ಸಾಧ್ಯವಿತ್ತೆ?

ಬೇರೆ ಸಮುದಾಯದವರು ಸಂಪಾದಕ ಸ್ಥಾನಕ್ಕೆ ಹೋಗಬಾರದು ಎಂದು ಯಾರಾದರೂ ಕಟ್ಟಿಹಾಕಿಕೊಂಡಿದ್ದಾರಾ? ಅರ್ಹತೆ ಇದ್ದರೆ ದಕ್ಕಿಸಿಕೊಳ್ಳುತ್ತಾರೆ ಬಿಡಿ ಎಂದು ಕೆಲವರು ಗೊಣಗಬಹುದು. ಆದರೆ ಇದು ಅಷ್ಟು ಸರಳವಾದ ವಿಷಯವಲ್ಲ. ಮ್ಯಾನೇಜ್‌ಮೆಂಟುಗಳು ತಮ್ಮ ಭ್ರಮೆಗಳಿಂದ ಕಳಚಿಕೊಳ್ಳದ ಹೊರತು ಈ ಪ್ರಶ್ನೆಗೆ ಉತ್ತರ ಸಿಗದು. ಇವತ್ತಿಗೂ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಜಾತಕವನ್ನು ನೋಡಿಯೇ ಪತ್ರಕರ್ತರಿಗೆ ಕೆಲಸ ಕೊಡಲಾಗುವುದು ಎಂದರೆ ನೀವು ನಂಬಲೇಬೇಕು. ದಲಿತರೆಂಬ ಕಾರಣಕ್ಕೆ ಮಾಧ್ಯಮಸಂಸ್ಥೆಗಳಲ್ಲಿ ಕೆಲಸ ಸಿಕ್ಕದೆ ಒದ್ದಾಡಿದವರೂ ಇಲ್ಲಿದ್ದಾರೆ. ಅಲ್ಲೊಬ್ಬ ಇಲ್ಲೊಬ್ಬರು ಹಿಂದುಳಿದ ಸಮುದಾಯದ ಪತ್ರಕರ್ತರು ಕಾಣಿಸಿಕೊಂಡರೂ ಅವರು ತಮ್ಮ ಪರವಾಗಿ ಲಾಬಿ ನಡೆಸಲಾರರು, ಗುಂಪು ಕಟ್ಟಿಕೊಳ್ಳಲಾರರು, ಒಟ್ಟಾರೆಯಾಗಿ ತಾನು ಸಮರ್ಥ ಆಯ್ಕೆ ಎಂದು ಮ್ಯಾನೇಜ್‌ಮೆಂಟ್‌ಗಳನ್ನು ಒಪ್ಪಿಸಲಾರರು.

ಹಿಂದೆ ದಿನಪತ್ರಿಕೆಯೊಂದನ್ನು ಬ್ರಾಹ್ಮಣೇತರರ ಸಂಪಾದಕತ್ವದಲ್ಲಿ ಮಾಡಿದ್ದ ಉದ್ಯಮಿಯೊಬ್ಬರು ಅದೇ, ಕಣ್ರೀ ನಾನು ಮಾಡಿದ ತಪ್ಪು ಎಂದು ತಮ್ಮ ವೈಫಲ್ಯವನ್ನು ಸಮರ್ಥಿಸಿಕೊಂಡಿದ್ದರು. ಇಂಥ ಭ್ರಮೆ, ಮೌಢ್ಯವನ್ನು ಇಟ್ಟುಕೊಂಡಿರುವ ಮಾಧ್ಯಮ ಸಂಸ್ಥೆಗಳ ಒಡೆಯರಿಂದ ಏನನ್ನು ನಿರೀಕ್ಚಿಸುತ್ತೀರಿ? ಇಂಥ ಮಿಥ್‌ಗಳನ್ನು ಒಡೆದು, ಈ ಮಹತ್ವದ ಪ್ರಶ್ನೆಗಳಿಗೆ ಐತಿಹಾಸಿಕ ಉತ್ತರ ಕಂಡುಕೊಳ್ಳಬಹುದಾಗಿದ್ದ ಜನರು ಮಡೆಸ್ನಾನ ಮಾಡಿಕೊಂಡು, ಕಾಲ-ದೇಶದ ಭ್ರಮೆಯಲ್ಲಿ ಸಿಲುಕಿ ನರಳುತ್ತಿದ್ದಾರೆ.

ಕಾಲ ಬದಲಾಗಿದೆ. ಈಗಲಾದರೂ ನಮ್ಮ ಮಾಧ್ಯಮ ಕ್ಷೇತ್ರ ಇಂಥ ಭ್ರಮೆಗಳಿಂದ ಹೊರಗೆ ಬರುವುದೇ? ಕನ್ನಡದ ನಂ.೧ ಪತ್ರಿಕೆ ವಿಜಯ ಕರ್ನಾಟಕಕ್ಕೆ ಒಬ್ಬ ದಲಿತ ಸಮುದಾಯದ ಸಂಪಾದಕರು ನೇಮಕವಾಗಬಹುದೇ?

ಅಷ್ಟಕ್ಕೂ ನಾವು ಈ ವಿಷಯವನ್ನು ಯಾಕೆ ಚರ್ಚಿಸುತ್ತಿದ್ದೇವೆಂದರೆ ನಮ್ಮ ಆರನೇ ಇಂದ್ರಿಯ ಏನನ್ನೋ ಹೇಳುತ್ತಿದೆ. ಅದು ನಿಜಕ್ಕೂ ನಿಜವಾಗುತ್ತಾ? ಕನ್ನಡ ಮಾಧ್ಯಮ ರಂಗದಲ್ಲೊಂದು ಪವಾಡ ನಡೆದು ಹೋಗುತ್ತಾ? ಕಾದು ನೋಡೋಣ,

***

ಸಂಪಾದಕೀಯಕ್ಕೆ ಬಂದ ಒಂದು ಕಮೆಂಟು ಹೀಗಿತ್ತು: Imagine, 18 years old boy started reading Vijaya Karnataka 12 years back. Now he is totally communal. More over his views on literature, movie, books, everything moulded according to Vijaya Karnataka.

ನಿಜ ಅನ್ನಿಸಲ್ವಾ ನಿಮಗೆ? ವಿಜಯ ಕರ್ನಾಟಕ ನಂ.೧ ಪತ್ರಿಕೆಯಾಗಿ ಮೆರೆದಿದ್ದು ಎಷ್ಟು ನಿಜವೋ, ಆ ಪತ್ರಿಕೆ ಕನ್ನಡದ ಯುವಮನಸ್ಸುಗಳನ್ನು ಮತಾಂಧಗೊಳಿಸಿದ್ದೂ ಅಷ್ಟೇ ನಿಜ.

ಟೈಮ್ಸ್ ಒಡೆಯರಿಗೆ ಪ್ರಾಯಶ್ವಿತ್ತ ಮಾಡಿಕೊಳ್ಳಲು ಇದು ಸಕಾಲವಲ್ಲವೇ?

28 comments:

 1. ನಿಮ್ಮ ಪ್ರಕಾರ ಮತಾಂಧತೆ ಅಂದರೆ ಏನೂ?... ತಮ್ಮ ಧರ್ಮವನ್ನು ಅತಿಯಾಗಿ ಪ್ರೀತಿಸುವುದೇ..? ನಮ್ಮ ಸಂಸ್ಕ್ರತಿಯನ್ನು ಅದರಲ್ಲೂ ಸನಾತನ ಸಂಸ್ಕ್ರತಿಯ ಬಗ್ಗೆ ವಿಪರೀತವಾಗಿ ಹೊಗಳಿ ಬರೆಯುವುದು ಮತಾಂಧತೆಯೇ?

  ReplyDelete
 2. ಕನ್ನಡಪ್ರಭದ ಮಾಜಿ ಸಂಪಾದಕರು (ಶಿವ ಸುಬ್ರಹ್ಮಣ್ಯ) ವಿಜಯ ಕರ್ನಾಟಕದ ಸಂಪಾದಕರಾದರೆ ಆಗದೇ ? ಎಲ್ಲ ದಲಿತರೂ ದೇವನೂರು, ಸಿದ್ಧಲಿಂಗಯ್ಯ ಆಗಲು ಸಾಧ್ಯವೇ ? ನೀವು ' ಅರ್ಹತೆ, ಬದ್ಧತೆ, ಪ್ರಾಮಾಣಿಕತೆ, ಹಿರಿತನ, ತಂಡವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವಿರುವ ದಲಿತ ಸಮುದಾಯಕ್ಕೆ ಸೇರಿದ ಪತ್ರಕರ್ತರು ಇದ್ದಾರೆ. ಗುರುತಿಸುವ ಕೆಲಸ ಆಗಿಲ್ಲ ಅಷ್ಟೆ' ಅಂದ್ರಲ್ಲ. ಅಂತ ಕೆಲವರ ಹೆಸರನ್ನಾದರೂ ಹೇಳಿ ನೋಡೋಣ...

  - ಓರ್ವ ಬಡ ಪತ್ರಕರ್ತ

  ReplyDelete
 3. ಬ್ರಾಹ್ಮಣೇತರ ಸಂಪಾದಕರು ಎಂದು ಹೇಳಬೇಕೇ ಹೊರತು ದಲಿತ ಸಂಪಾದಕರು ಅಂತಲ್ಲ.ಬ್ರಾಹ್ಮಣರನ್ನು ಬಿಟ್ಟರೆ ಪತ್ರಿಕೋದ್ಮದಲ್ಲಿರುವವರು ಕೇವಲ ದಲಿತರಲ್ಲ. ಹಾಗಂತ ನಾನು ದಲಿತ ವಿರೋಧಿಯಂತೂ ಅಲ್ಲವೇ ಅಲ್ಲ. ಆ ದೀಪಕ್್ ತಿಮ್ಮಯ್ಯ ಬರೆದಿರುವ ಲೇಖನ ಹಾಗೂ ಈಗ ತಮ್ಮ ಲೇಖನ ಎರಡರಲ್ಲೂ ಇದೇ ಅಭಿಪ್ರಾಯವಿದೆ. ಅಷ್ಟಕ್ಕೂ ಬ್ರಾಹ್ಮಣರು ಪತ್ರಿಕೆಗಳಿಗೆ ಬಂಡವಾಳ ಹಾಕುವುದಿಲ್ಲ. ಶೂದ್ರ ಪತ್ರಿಕಾ ಮಾಲೀಕರು ಸಂಪಾದಕ ಸ್ಥಾನವನ್ನು ಬೇರೆಯವರಿಗ ಕೊಡುವುದಿಲ್ಲ.ಿದು ಕನ್ನಡದ ಪರಿಸ್ಥಿತಿ.

  ReplyDelete
 4. this is really disgusting!!! illi jatiya prashne yake huttutte annode artha aglilla?? bhat never tried such silly things in his career! he let grow everyone irrespective of caste...had he invovled in such things pratap simha would not have been enjoying the position of his shishya!!!
  sampadakeeya e vishayavagi baredu eno helalu hortiddare tiliyadantagide!! purvagraha peedita lekhan anisuttide!!!
  Spandana

  ReplyDelete
 5. ಸಂಘ ಪರಿವಾರವನ್ನು ಮತ್ತು ಬ್ರಾಹ್ಮಣರನ್ನು ಟೀಕಿಸುವುದೇ ನಿಜವಾದ ಪತ್ರಿಕಾ ಧರ್ಮ ಎಂದು ಭಾವಿಸಿದಂತಿದೆ. ೧೯೭೫ರಿಂದ ಪ್ರಜಾವಾಣಿಯಲ್ಲಿ ಕೇವಲ ಕಾ೦ಗ್ರೆಸ್ ಪರ ವಿಚಾರ ಓದುತ್ತಿದ್ದ ನಾನು ಎಂಬತ್ತರ ದಶಕದಲ್ಲಿ ಖಾದ್ರಿಯವರ ಕನ್ನಡ ಪ್ರಭದಲ್ಲಿ ಜನತಾ ಪರಿವಾರದ ವಿಚಾರಧಾರೆಗಳನ್ನು ಓದಿರುವೆ. ಈಗ ಕಾಲಕ್ಕೆ ಅನುಗುಣವಾಗಿ ಬಲಪಂತೀಯ ವಿಚಾರಗಳನ್ನು ಬರೆಯುತ್ತಿರುವ ಕೆಲ ಪತ್ರಿಕೆಗಳನ್ನು ಅರಗಿಸಿ ಕೊಳ್ಳುವುದು ಕೆಲವರಿಗೆ ಕಷ್ಟವಾಗುತ್ತಿದೆ. ಈಗ ಪತ್ರಿಕೆ ಸಂಪಾದಕರಲ್ಲೂ ಮೀಸಲಾತಿ, ದಲಿತ ಸಮುದಾಯದ ಸಂಪಾದಕರಿಗೆ ಆಗ್ರಹ. ದೇವರೇ ಕಾಪಾಡಬೇಕು ನಮ್ಮ ದೇಶವನ್ನು.

  ReplyDelete
 6. dalita samudaayadawaru sampaadakaraadare olleyadennuvudeno nija.. but,, Mr.Bhat communal annuwawaru dewaraane huchcharu.. namma samskratiya bagge hemmepaduwudu tappadare.. prapanchadalliruwa ella muslim mattu christiangalu jaatiwaadigale..
  lekhakaru bhat bagge tamma vikratiyannu khaarikondantide!!

  ReplyDelete
 7. What were the secular media doing all these years starting from the time of independence and how has this affected the people for the last 65 years...would you mind analyzing that also?

  ReplyDelete
 8. ದಲಿತರು ಬಂದರು ದಾರಿಬಿಡಿ...ದಲಿತರ ಕೈಗೆ ಪತ್ರಿಕೆ ಕೊಡಿ..

  ಅದಿರಲಿ. ಅರ್ಹತೆ, ಸಾಮರ್ಥ್ಯ ಇದ್ದರೆ ಜಾತಿ ನೋಡುವ ಅವಶ್ಯಕತೆಯೇ ಇಲ್ಲ. ದಲಿತ ಬಲಿತ ಯಾರಿಗಾದರೂ ಕೊಡಲಿ. ಅದಕ್ಕೆ ’ಜಾತಿ’ ಮಾನದಂಡವಾಗುವುದು ಬೇಡ. ಆಗ ಹೀಗೆ ದಲಿತರಿಗೇ ಕೊಡಿ.. ಎಂದು ಆಗ್ರಹಿಸುವುದು ನಿಲ್ಲಲಿ.

  ವಿಜಯಕರ್ನಾಟಕ ಅಥವಾ ಅದರ ಮಾಜಿ ಸಂಪಾದಕರು ಕೋಮುವಾದಿಗಳು ಅಂತ ಜನರಿಗೆ ಅನ್ನಿಸಿದ್ದರೆ ಆ ಪತ್ರಿಕೆ ಯಾವತ್ತೋ ಜನರಿಂದ ತಿರಸ್ಕರಿಸ್ಕಲ್ಪಡುತ್ತಿತ್ತು. ಅದು ಹೆಮ್ಮೆಂಯಿಂದ ನಮ್ಮ ಧರ್ಮ, ದೇಶ, ಸಂಸ್ಕೃತಿಯ ಬಗ್ಗೆ ನೇರವಾದ ಬರಹಗಳನ್ನು ಧೈರ್ಯದಿಂದ ಪ್ರಕಟಿಸುತ್ತಿದ್ದುದೇ ಅದು ಜನಪ್ರಿಯವಾಗಲು ಕಾರಣ. ಜನರಲ್ಲಿ ಸಾಮಾಜಿಕ, ಧಾರ್ಮಿಕ ಆತ್ಮವಿಶ್ವಾಸ, ಗೌರವ ತುಂಬಲು ಸಹಾಯವಾಗಿದೆ ಇದು.

  ReplyDelete
 9. wow... this is truck load of bullshit!! how do you manage to pile up so much of shit ?? :-P

  ReplyDelete
 10. You should get some treatment for mental instability from good doctors. Get well soon.

  ReplyDelete
 11. vidyesh .......from Doha......February 10, 2011 at 12:08 AM

  nimma thumbha barahagalu....moogina nerakke eddante ede...........
  i have seen first time arguing for reservation in private jobs or fields....
  this is really hope less......no hopes at all...........
  hello sampadakiya..........talent will work.. offcourse nowadays.,. politics is must......

  ReplyDelete
 12. yes. I totally agree with the above comment. mr bhatt rannu communal annuvavaru huchcharu. but who said like that? I did not see any sentence like that! it has been said that, a 18 yrs old boy who has been reading that particular news paper since last 12 yrs, "he" has become communal. Is n t it? why you people have assumed that mr. bhatt is communal? it is not written anywhere in the above article.! so I suggest , don t assume things which is not written! (some times assumptions make us communal)

  ReplyDelete
 13. shit! it is disgusting. sampadakiya really is truck load of bullshit! rather he himself is a communal. he should really get treatment for his mental status. if a Brahmin holds editorialship,it is communal for him. and if a Dalit holds Editorialship , it is not communal for him. what a way of thinking! first he should come out of his closed walls and realize what the word "communal" means to him. he is assuming too many things. some body said assumption make us communal . really true.

  ReplyDelete
 14. ಸ್ವಾಮಿ ಸತ್ಯ ಬರೆದಿದೀನಿ ಬ್ಲಾಗಲ್ಲಿ ಪೋಸ್ಟ್ ಮಾಡಿ.......... ಖಂಡಿತವಾಗಿಯೂ ಸಂಪಾದಕೀಯದಿಂದ ಇಂತಹ ಬರಹವನ್ನು ನಿರೀಕ್ಷಿರಲಿಲ್ಲ.... ಅವರಿಗೆಲ್ಲ ಜಾತಿಯತತೆ ಅಂತ ಹೇಳ್ಬಿಟ್ಟು ನೀವೇನೇ ಜಾತಿಯತೆಯನ್ನ ಪ್ರಚೋದಿಸುತ್ತಿದರಲ್ಲ ಸ್ವಾಮಿ.. ಕೇವಲ ಬ್ರಾಹ್ಮಣ ಎಂದು ಜನ ವಿಜಯ ಕರ್ನಾಟಕವನ್ನು ಬೆಳೆಸಿದ್ದರೆ ಇಷ್ಟೊಂದು ಲಕ್ಷಾಂತರ ಓದುಗರನ್ನು ಸಂಪಾದಿಸುತ್ತಿರಲಿಲ್ಲ. ಯಾಕೆಂದರೆ ಅಷ್ಟೊಂದು ಬ್ರಾಹ್ಮಣ ಸಮುದಾಯವೇ ಕರ್ನಾಟಕದಲ್ಲಿ ಇಲ್ಲ.. ಅವನಿಗೆ ಪ್ರತಿಭೆ ಇತ್ತು, ಪರಿಣಾಮ ಯಾರೂ ದಿನ ಪತ್ರಿಕೆಗಳನ್ನು ಓದದೆ ಇರದೇ ಸಮಯದಲ್ಲಿ ವಿಜಯ ಕರ್ನಾಟಕವನ್ನು ಈ ಮಟ್ಟಕ್ಕೆ ಬೆಳೆಸಿದ ಅನ್ನೋದ್ರಲ್ಲಿ ಯಾವ ಸಂಶಯವೂ ಇಲ್ಲ. ಈಗಿನ ವಿಜಯ ಕರ್ನಾಟಕಕ್ಕೆ ದಲಿತನೆ ಅಗಲಿ ಕ್ರಿಶ್ಚಿಯನ್ ಆಗಲಿ ಮುಸ್ಲಿಂ ಅಗಲಿ ಅಭ್ಯಂತರ ಏನು ಇಲ್ಲ, ಆದರೆ ಅವನೊಬ್ಬ ಉತ್ತಮ ಲೇಖಕ ಆಗಿರಲಿ ಎನ್ನುವುದೊಂದೇ ನಮ್ಮ ಆಶಯ.. ನೀವು ಹೇಳೋ ಬ್ರಾಹ್ಮಣರೊಂದೆ ಪತ್ರಕರ್ತರಲ್ಲಿ ಉನ್ನತಸ್ತಾನಕ್ಕೆ ಇರಬಹುದು ಎನ್ನುವುದಾಗಿದ್ದರೆ TV9 ರೆಹಮಾನ್ ಸುವರ್ಣ ನ್ಯೂಸ್ ಹಮೀದ್ ಪಾಳ್ಯ ಇಷ್ಟೊಂದು ಜನಪ್ರೀಯತೆಯನ್ನು ಗಳಿಸುತ್ತಿರಲಿಲ್ಲ.. ಪ್ರತಿಭೆ ಇದ್ದರೆ ಸ್ವಾಮಿ ಯಾರು ಜಾತಿಯನ್ನು ಕೇಳಲ್ಲ, ಅದು ಹೊರಗೆ ಬಂದೆ ಬರತ್ತೆ.. ಹೇಳೋದಕ್ಕೆ ಹೋದರೆ ತುಂಬಾ ಇದೆ... ಇನ್ನಾದರೂ ದಯವಿಟ್ಟು ಈ ರೀತಿಯ ಲೇಖನ ಬರೆದು ಸಂಪಾದಕೀಯದ ಘನತೆಯನ್ನು ಕಡಿಮೆ ಮಾಡಬೇಡಿ ಅಂತ ತಮ್ಮ ಒಬ್ಬ ಅಭಿಮಾನಿಯ ಕಳಕಳಿಯ ಮನವಿ..

  ReplyDelete
 15. ಸಧ್ಯ ಪತ್ರಿಕಾ ರಂಗದಲ್ಲಿ ಮೀಸಲಾತಿ ಇಲ್ಲ...ಅಲ್ಲೂ ಮೀಸಲಾತಿ ಬೇಕೂ ಅಂತಾ ಬಯಸ್ತೀರಲ್ಲಾ ಸ್ವಾಮೀ.... ದಲಿತನಿಗೆ ಅಂತಹ ಪ್ರತಿಭೆ ಇದ್ರೆ ಎಡಿಟರ್ ಕುರ್ಚಿಲಿ ಕೂರ್ತಾನೆ... ನೀವ್ಯಾಕೆ ದಲಿತನಿಗೇ ಎಡಿಟರ್ ಪೋಸ್ಟ್ ಕೊಡಿ ಅಂತಾ ಅಷ್ಟೊಂದು ಒತ್ತಿ ಒತ್ತಿ ಬರೀತೀರಾ...

  ReplyDelete
 16. ಈ ಲೇಖನವನ್ನು ಬರೆದ ಲೇಖಕ ಮಹಾಶಯನಿಗೆ ಧಿಕ್ಕಾರ. ಇದನ್ನು ಪ್ರಕಟಿಸಿದ ಸಂಪಾದಕೀಯ ಬ್ಲಾಗ್ ನ ಸಂಪಾದಕರಿಗೆ ನಾಚಿಕೆಯಾಗಬೇಕು. ಈ ಲೇಖನವೇ ಹೇಸಿಗೆ ಬರುವಷ್ಟು ಕೊಮುವಾದಿಯಾಗಿದೆ. ದಲಿತರೇ ಯಾಕೆ ಆಗಬೇಕು, ಲಿಂಗಾಯತರು, ವಕ್ಕಲಿಗರು, ಮುಸಲ್ಮಾನರು, ಕ್ರೈಸ್ತರು ಯಾಕೆ ಸಂಪಾದಕರಾಗಬಾರದು? ನಾನು ಸಂಪಾದಕೀಯ ಬ್ಲಾಗ್ ಒಂದು ಸೀರಿಯಸ್ ವಿಚಾರ ವೇದಿಕೆ ಅಂದುಕೊಂಡಿದ್ದೆ, ಹಾಗು ಇಂಥ ಜಾತೀಯತೆಯನ್ನು ಎತ್ತಿ ಹಿಡಿಯುವ ಲೇಖನಗಳನ್ನು ಪ್ರಕಟಿಸಿರುವುದು ಅನಿರೀಕ್ಷಿತ.

  ಯಾವುದೇ ದಿನಪತ್ರಿಕೆಯ ಸಂಪಾದಕನಾಗುವ ಅರ್ಹತೆ ಅಂದರೆ ಪ್ರತಿಭೆ ಮಾತ್ರ. ಒಬ್ಬ ಪ್ರತಿಭಾವಂತ ಸಂಪಾದಕ ಮಾತ್ರ ಪತ್ರಿಕೆಯನ್ನೂ ನಡೆಸಿಕೊಂಡು ಹೋಗಬಲ್ಲ. ನಾನು ವಿಕವನ್ನು ೬ ವರ್ಷಗಳಿಂದ ಓದುತ್ತಾ ಬಂದಿದ್ದೇನೆ. ನನಗೆ ಯಾವತ್ತೂ ವಿಕ ಕೋಮುವಾದಿ ಅಂತ ಅನ್ನಿಸಿಲ್ಲ. ಅದು ಯಾವುದೇ ಜಾತಿ ಮತ್ತು ಮತವನ್ನು ಪ್ರತಿನಿಧಿಸಿಲ್ಲ. ಈಗಿನ ಕಾಲದ ಹೊಚ್ಚ ಹೊಸ ಟ್ರೆಂಡ್ ಅಂದರೆ, ಹಿಂದುಗಳನ್ನು, ಅದರಲ್ಲೂ ಕೆಲವೇ ಕೊಮುಗಳನ್ನು ಮೂದಲಿಸುವುದು...ಯಾರು ಇದನ್ನು ಮಾಡುತ್ತಾರೋ ಅವನು ಸೆಕ್ಯುಲರ್ ಮತ್ತು ಪ್ರಗತಿವಾದಿ ಅಂತ ಅನ್ನಿಸಿಕೊಳ್ಳುತ್ತಾನೆ. ಯಾರು ನಮ್ಮ ದೇಶದ ಸಂಸ್ಕ್ರುತಿಯನ್ನು ಅಭಿಮಾನದಿಂದ ಎತ್ತಿ ಹಿಡಿದು ಹೇಳುತ್ತಾರೋ, ಅವನು ಕೋಮುವಾದಿ. ಇದು ನಮ್ಮ ದೇಶದ ದುರಂತ.

  ಲೇಖನದ ಕೊನೆಯ ಸಾಲು (೧೮ ವರ್ಷದ ಹುಡುಗ....) ಹಾಸ್ಯಾಸ್ಪದ ಮತ್ತು ಬಾಲಿಶ ತನದ ಪರಮಾವಧಿ.

  ReplyDelete
 17. ವಿಚಾರವಾದಿಗಳು ನಮ್ಮ ಧರ್ಮ ,ಸಂಸ್ಕೃತಿಯನ್ನು ಹೀಯಾಳಿಸಿ ಬರೆದಾಗ ಖುಷಿಪಡುವ ಎಲ್ಲರೂ ಹಿಂದುಪರ ವಿಚಾರಗಳನ್ನು ಕೋಮುವಾದ ಎಂದೇ ಕರೆಯುತ್ತಿದ್ದಾರೆ .ನಮ್ಮ ದೇಶದಲ್ಲಿ ಬಹುಸಂಖ್ಯಾತರು ಹಿಂದುಗಲಾಗಿದ್ದರೂ ಅವರ ಪರ ಬರೆದ ಕೂಡಲೇ ಕೋಮುವಾದ ಅಂತ ಹೇಳಿ ಇಡೀ ದೇಶದ ಜನರ ಮನಸ್ಸು ಹಾಳು ಮಾಡಿದ್ದನ್ನು ಮೊದಲು ಗಮನಿಸಿ.ಆಮೇಲೆ ಕಳೆದ ೧೧ ವರ್ಷಗಳಿಂದ ವಿ.ಕೆ. ಓದಿದ ಯುವಕರು ಕೋಮುವಾದಿಯಾಗಿ ನಿಂತಂತೆ ಕಾಣುತ್ತಿದ್ದಾರೆ ಎನ್ನುವುದನ್ನು ಪರಿಶೀಲಿಸಬಹುದು.ಸಂಪಾದಕೀಯಕ್ಕೆ ವಿ.ಕೆ.ಗೆ ಒಬ್ಬ ದಲಿತ ಸಂಪಾದಕನನ್ನು ತರುವ ಉತ್ಸಾಹ ಎಷ್ಟಿದೆ ಅಂತ ಗೊತ್ತಾಗ್ತಿದೆ .ಆಗ ಹಿಂದೂಗಳ ವಿರೋಧವಾಗಿ ಬರೆಯೋದೇ ಪತ್ರಿಕೋದ್ಯಮ ಅನ್ತಾಗೋಲ್ಲ ಎನ್ನುವ ಭರವಸೆ ಸಂಪಾದಕೀಯ ನಡೆಸಿರುವ ಲಾಬಿಗೆ ಬೆಂಬಲ ನೀದಬಹುದೇನೋ

  ReplyDelete
 18. shame on u sampadakeeya.. For editing such brainless, article.. Quite comparable with bullshit..

  ReplyDelete
 19. ಇಲ್ಲಿ ಪ್ರಕಟವಾಗಿರುವ ಕಮೆಂಟುಗಳನ್ನು ನೋಡಿದರೆ ನಿಜವಾಗಿಯೂ ಜಿಗುಪ್ಸೆ ಹುಟ್ಟಿಸುವಂತಿದೆ. ಜಾತಿಯ ಕೊಳಕು ಎಷ್ಟೊಂದು ನಮ್ಮ ಸಮಾಜವನ್ನು ಆವರಿಸಿಕೊಂಡಿದೆ ಎಂಬುದಕ್ಕೆ ಇದು ಸಾಕ್ಷಿ.
  ಲೇಖನದ ಆಶಯ, ಕಾಳಜಿಯನ್ನು ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗದೆ ಪ್ರತಿಕ್ರಿಯಿಸಿರುವವರು ಇಲ್ಲಿದ್ದಾರೆ. ಲೇಖನದಲ್ಲಿ ದಲಿತರಿಗೆ ಮಾಧ್ಯಮರಂಗದಲ್ಲಿ ಮೀಸಲಾತಿ ಕೊಡಿ ಎಂದು ಕೇಳುತ್ತಿಲ್ಲ. (ಹಾಗೆ ಕೇಳಿದರೂ ತಪ್ಪೇನಿಲ್ಲ.) ಅರ್ಹತೆಯ ಆಧಾರದ ಮೇಲೇ ಅವಕಾಶ ಕೊಡಿ ಎಂದು ಕೇಳಲಾಗಿದೆ. ಯಾಕೆ ದಲಿತರು ಇಂಥ ಅವಕಾಶಗಳಿಂದ ವಂಚಿತರಾಗಿದ್ದಾರೆ ಎನ್ನುವುದನ್ನೂ ವಿವರಿಸಿ ಹೇಳಲಾಗಿದೆ. ಮೂರ್ಖರೊಬ್ಬರು ಭಟ್ಟರನ್ನು ಯಾಕೆ ಕೋಮುವಾದಿ ಎಂದಿರಿ ಎಂದು ಪ್ರಶ್ನಿಸಿದ್ದಾರೆ. ಲೇಖನದಲ್ಲಿ ಎಲ್ಲೂ ಭಟ್ಟರನ್ನು ಕೋಮುವಾದಿ ಎಂದು ಬರೆಯಲಾಗಿಲ್ಲ. ವಿಜಯ ಕರ್ನಾಟಕ ಕೋಮುವಾದಿ ಪತ್ರಿಕೆಯಾಗಿದ್ದಕ್ಕೆ ಯಾರೋ ಒಬ್ಬರನ್ನು ದೂಷಿಸುವಂತಿಲ್ಲ. ಮ್ಯಾನೇಜ್‌ಮೆಂಟ್ ಸೇರಿದಂತೆ ಅದರ ಜವಾಬ್ದಾರಿಯನ್ನು ಸಾಕಷ್ಟು ಮಂದಿ ಹೊರಬೇಕಾಗುತ್ತದೆ. ಭಟ್ಟರ ಒಳ್ಳೆಯ ಗುಣಗಳ ಕುರಿತು ಅಗ್ನಿಶ್ರೀಧರ್ ಬರೆದದ್ದನ್ನು ಸಮರ್ಥಿಸಿ ಇದೇ ಸಂಪಾದಕೀಯ ಬರೆದದ್ದನ್ನು ಇವರು ಮರೆತಿದ್ದಾರೆ.
  ಸಮುದಾಯ ಯಾವುದೇ ಇರಲಿ, ಸಂಪಾದಕನಿಗೆ ನಿಜವಾದ ಸಾಮಾಜಿಕ ಬದ್ಧತೆ, ಕಾಳಜಿಗಳಿದ್ದರೆ ಆತ ಪತ್ರಿಕೆಯನ್ನು ಜನಪರವಾಗಿ, ಮಾನವೀಯವಾಗಿ ರೂಪಿಸಬಲ್ಲ. ಅದನ್ನು ಬಹಳಷ್ಟು ಮಂದಿ ಈ ಹಿಂದೆಯೇ ನಿರೂಪಿಸಿದ್ದಾರೆ ಎಂದು ಲೇಖನದಲ್ಲಿ ಬರೆಯಲಾಗಿದೆ. ಇದನ್ನು ಓದಲು ಬಾರದ ಮೂರ್ಖರು ಬರೆದಿರುವುದನ್ನು ನೋಡಿದರೆ ಹೇಸಿಗೆಯಾಗುತ್ತದೆ. ಅಸಲಿಗೆ ಈ ಲೇಖನಕ್ಕೆ ಕಮೆಂಟ್ ಹಾಕಿರುವ ಬಹಳಷ್ಟು ಮಂದಿಗೆ ಲೇಖನದ ಆಶಯವೇ ಅರ್ಥವಾಗಿಲ್ಲ. ಕೆಲವರಿಗೆ ಅರ್ಥವಾದರೂ ಅದನ್ನು ತೋರಿಸಿಕೊಳ್ಳದೆ ಬಾಯಿಗೆ ಬಂದಂತೆ ಹರಟಿದ್ದಾರೆ.
  ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಜಾತಿಯ ಭೂತ ಈ ದೇಶವನ್ನು ಹೇಗೆ ಹಿಂಡಿಹಿಪ್ಪೆ ಮಾಡಿದೆ ಎಂಬುವುದನ್ನು ಇದೆಲ್ಲ ನಿರೂಪಿಸುತ್ತಿದೆ.

  ReplyDelete
 20. Most of the comments posted here show who dominates the blogosphere. They are least concerned about inclusive growth. This particular article does not voice for reservation for dalits in press. It has only raised - why can't a dalit editor for VK. Any sensible man should take this debate further and press for representation of all sections of society in media.
  Going by many comments here one can come to a conclusion, these people are either inhuman or lack ability to understand what is required for a ‘developed state’. Dear folks, be human beings first.

  ReplyDelete
 21. Posting unedited comments is appreciable as long as they contribute to a greater good, in this case a genuine discussion about inclusiveness in media. Editing is essential to promote healthy discussion. Comments, however harsh they may be, are always welcome, if only they are constructive.
  I am reminded of a similar discussion at national level many many years ago. I think it was published in thehoot.org I will scout and share the link with the hope that it will positively contribute to our thinking and actions.

  ReplyDelete
 22. http://www.thehoot.org/web/home/searchdetail.php?sid=346&bg=1

  ReplyDelete
 23. In India, electoral politics is actually not ideological, and caste is more important than ideology. This is why Brahmins, who are only 6% of the population, don’t dominate the BJP’s state units

  http://www.livemint.com/articles/2011/02/10204947/BJP8217s-sole-currency-is-i.html

  ReplyDelete
 24. Ri sampadakarige cast certificate kottu guritisodu tamage same annustillave

  ReplyDelete
 25. ಎಲ್ಲೆಡೆಯೂ ಮೀಸಲಾತಿ ಬೇಕೇ ಬೇಕು. ಕೇವಲ ಸಂಪಾದಕ ಸ್ಥಾನಕ್ಕಾಗಿ ಅಂದರೆ ಹೇಗೆ? ಅದೇ ರೀತಿಯಲ್ಲಿ ಕ್ರೀಡೆಗಳಲ್ಲಿ ಮೀಸಲಾತಿ ಏಕಿಲ್ಲ? ಒಲಿಂಪಿಕ್ಸ್ ಕ್ರೀಡೆಗಳಲ್ಲೂ ಪಾಲ್ಗೊಳ್ಳಲು ಖಂಡಿತಾ ಮೀಸಲಾತಿ ಬೇಕು. ದೇಶವನ್ನು ರಕ್ಷಿಸಲು ಮೀಸಲಾತಿ ಏಕಿಲ್ಲ? ಗಡಿ ಕಾಯುವ ಯೋಧರಲ್ಲಿಯೂ ಮೀಸಲಾತಿ ಬೇಕೇ ಬೇಕು. ಇನ್ನು ಮೇಲೆ ಪ್ರಶಸ್ತಿಗಳಲ್ಲೂ ಮೀಸಲಾತಿಯಂತೆಯೇ ನೀಡಿದರೇ ಸೂಕ್ತ. ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲೂ ಮೀಸಲಾತಿಯಂತೆಯೇ ಪ್ರಶಸ್ತಿಗಳನ್ನು ನೀಡಬೇಕು. ಕೇವಲ ಸಂಪಾದಕ ಹುದ್ದೆಗೆ ಮಾತ್ರ ಮೀಸಲಾತಿ ಕೇಳುವುದಷ್ಟೇ ಸರಿಯಲ್ಲ.

  ReplyDelete
 26. ವಿಜಯ ಕರ್ನಾಟಕ ಕೇವಲ ಭಟ್ಟರಿಂದ ಬೆಳೆಯಿತು ಅನ್ನೋದು ತುಂಬಾ ತಪ್ಪು. ಅದರಲ್ಲಿ ಸಂಕೇಶ್ವರ ಅವರ ಬಿಜಿನೆಸ್ ಕೆಲಸ ಮಾಡ್ತು. ಮನೆ ಮನೆಗೆ ಪತ್ರಿಕೆ ತಲುಪಿಸುವ ಕಾರ್ಯ ಆಯ್ತು. ಬಳಿಕ ಒಂದಿಷ್ಟು ಭಟ್ಟರ ಪ್ರಯತ್ನವೂ ಯಶಸ್ವಿಯಾಯಿತೇ ಹೊರತು ಇನ್ನೇನಿಲ್ಲ..

  ReplyDelete
 27. ಸ್ವಾಮಿ ನೀವು ಹೇಳೋದು ಸರಿಯೇ, ಜಾತಿ ಎಲ್ಲ ಕಡೆ ಇದೆ ಆದರೆ ತಿಮ್ಮಯ್ಯ ಅವರು ದಲಿತ ವರಿದಿಗಾರರ ಹೆಸರನ್ನು ಹೇಳಿ ಇವರನ್ನ ಯಾಕೆ ಸಂಪಾದಕರಾಗಿ ಮಾಡಬಾರದು ಅಂತ ಕೇಳಿದ್ರೆ ಅದು ಚರ್ಚೆಗೆ ಸರಿಯಾಗಿ ಇರುತ್ತಿತ್ತು ಅಲ್ಲವೇ?

  ಅಸ್ತಕ್ಕು ನೀವು ಸಹ ಯಾವ ದಲಿತ ಪತ್ರಕತ್ರಣ ಹೆಸರು ಹೇಳಿ ಅವರಬಗ್ಗೆ ವಿವರಣೆ ಕೊಟ್ಟಿಲ್ಲ ನೀವು ಯಾಕೆ ಇ ಕೆಲಸ ಮೊದಲು ಮಾಡಬಾರದು?

  ReplyDelete
 28. asalige 21ne shatamanakke savaleseyuvv pfrsneyagide. idkke sambandisidvaru uttara koduvre????????

  ReplyDelete