Monday, June 20, 2011

ಸಂಕೇಶ್ವರರ ಹೊಸ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ತಿಮ್ಮಪ್ಪ ಭಟ್ಟರು....


ವಿಜಯ ಸಂಕೇಶ್ವರರ ಹೊಸ ಪತ್ರಿಕೆಯ ಸಾರಥಿ ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಹಿಂದೆಯೇ ಬರೆದಂತೆ ಉದಯವಾಣಿಯ ಮಾಜಿ ಸಂಪಾದಕ ತಿಮ್ಮಪ್ಟ ಭಟ್ಟರು ಸಂಕೇಶ್ವರರ ಭಾವಿ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ನೇಮಕಗೊಂಡಿದ್ದಾರೆ. ಇವತ್ತು ಹುಬ್ಬಳ್ಳಿಯಲ್ಲಿ ತಿಮ್ಮಪ್ಪಭಟ್ಟರು ಹೊಸ ಪತ್ರಿಕೆಯ ಚಾರ್ಜು ತೆಗೆದುಕೊಂಡಿದ್ದಾರೆ. ಹುಬ್ಬಳ್ಳಿಯ ವಿಆರ್‌ಎಲ್ ಕಚೇರಿಯಲ್ಲಿ ಔಪಚಾರಿಕ ಸಭೆಯಲ್ಲಿ ಭಟ್ಟರು ಹೊಸ ಜವಾಬ್ದಾರಿಯನ್ನು ಪಡೆಯುವುದರೊಂದಿಗೆ ಸಂಕೇಶ್ವರರ ಹೊಸ ಸಾಹಸಕ್ಕೆ ಅಧಿಕೃತ ಚಾಲನೆ ದೊರೆತಂತಾಗಿದೆ.

ಈಗ್ಗೆ ಸರಿಸುಮಾರು ಮೂರು ವಾರಗಳ ಹಿಂದೆ ಸಂಕೇಶ್ವರರ ಹೊಸ ಪತ್ರಿಕೆಯ ಸಾರಥಿ ಯಾರು ಎಂಬ ಲೇಖನದಲ್ಲಿ (ಮೇ ೨೭) ತಿಮ್ಮಪ್ಪಭಟ್ಟರು ಪತ್ರಿಕೆಯಲ್ಲಿ ಇರುತ್ತಾರೆ ಎಂಬುದನ್ನು ಖಚಿತಪಡಿಸಿದ್ದೆವು. ಅದರಂತೆಯೇ ಅವರು ಹೊಸ ಪತ್ರಿಕೆ ಸಾರಥ್ಯ ವಹಿಸಿಕೊಂಡಿದ್ದಾರೆ.

ಪತ್ರಿಕೆಯ ಹೆಸರು ಏನು ಎಂಬುದಿನ್ನೂ ಬಹಿರಂಗಗೊಂಡಿಲ್ಲ. ಆನಂದ ಕರ್ನಾಟಕ ಎಂಬ ಹೆಸರು ಹೆಚ್ಚು ಓಡುತ್ತಿರುವುದಂತೂ ನಿಜ. ಈ ಟೈಟಲನ್ನು ರಿಜಿಸ್ಟರ್ ಮಾಡಿಕೊಂಡವರು ಆನಂದ್ ಸಿಂಗ್; ಹೊಸಪೇಟೆಯ ಶಾಸಕ. ಇವರಿಂದ ಈಗಾಗಲೇ ಟೈಟಲ್ ಖರೀದಿಸಲಾಗಿದೆ ಎಂಬ ಮಾತುಗಳೂ ಇವೆ. ಇದು ಆನಂದ ಕರ್ನಾಟಕವಾಗುತ್ತಾ ಅಥವಾ ಸಂಕೇಶ್ವರರು ಹೊಸ ಹೆಸರು ಹುಡುಕುತ್ತಾರಾ ಕಾದು ನೋಡಬೇಕು.

ಸದ್ಯಕ್ಕೆ ಹೊಸ ಪತ್ರಿಕೆ ನೇತೃತ್ವ ವಹಿಸಿರುವ ತಿಮ್ಮಪ್ಪ ಭಟ್ಟರು ಹೊಸತನ್ನು ಕೊಡಲಿ. ಕನ್ನಡ ಪತ್ರಿಕೆಗಳು ಹೆಡ್ಡಿಂಗು ಕೊಡುವುದರಲ್ಲಿ ತೋರುತ್ತಿರುವ ಪೈಪೋಟಿಯನ್ನು ಸುದ್ದಿಯ ಗುಣಮಟ್ಟಕ್ಕೂ ವಿಸ್ತರಿಸಿದೇ ಇರುವುದು ಬೇಸರದ ವಿಷಯ. ಇಂಥ ಸಂದರ್ಭದಲ್ಲಿ ಕನ್ನಡಿಗರ ಒಟ್ಟು ಆಶೋತ್ತರಗಳನ್ನು ಧ್ವನಿಸುವ ಪತ್ರಿಕೆಯನ್ನು ಭಟ್ಟರು ರೂಪಿಸುವಂತಾಗಲಿ. ಹೊಸ ಪತ್ರಿಕೆ ಬಡವರ, ನೊಂದವರ, ನಿರ್ಲಕ್ಷಿತರ ಪರವಾಗಿ ಧ್ವನಿ ಎತ್ತಲಿ. ಇದು ನಮ್ಮ ಆಶಯ.

ವಿಜಯ ಸಂಕೇಶ್ವರರಿಗೂ, ತಿಮ್ಮಪ್ಪ ಭಟ್ಟರಿಗೂ ಹಾರ್ದಿಕ ಅಭಿನಂದನೆಗಳು.

22 comments:

 1. ವಿ ಆರ್ ಎಲ್ ಸಮೂಹದ ಬಹುನಿರೀಕ್ಷಿತ ಕನ್ನಡ ದಿನಪತ್ರಿಕೆ ಸಂಪಾದಕರಾಗಿ ನೇಮಕಗೊಂಡಿರುವ ತಿಮ್ಮಪ್ಪ ಭಟ್ಟರಿಗೆ ಶುಭವಾಗಲಿ. ಹೊಸ ದಿನಪತ್ರಿಕೆ ಈಗಿರುವ ಪತ್ರಿಕೆಗಳಿಗಿಂಥ ಭಿನ್ನವಾಗಿ, ಓದುಗ ಸ್ನೇಹಿ ಪತ್ರಿಕೆಯಾಗಿ ಮೂಡಿಬರಲಿ. ಭ್ರಷ್ಟ ಪತ್ರಕರ್ತರ ತಾಣವಾಗದಿರಲಿ.

  ReplyDelete
 2. idu nijakku tumbaane olle suddi jotege 2vaaragala hinde sampaadakeeya varadi moulyakke eegina vidyamaanavu hechina vastu nisthate & vishvasharhate tandu kottide keep it up sir!

  and nimma jote sampadakragiruva bhat sir goo sankeshwar sawkaarrigoo shubhashayagalu

  vaijanath gurumatkal

  ReplyDelete
 3. sakeshwarara nechina vishweshara bhattaranne yake hakikondilla...?

  ReplyDelete
 4. ಯಾವುದೇ ಇಸಂಗಳಿಗಳಿಗೆ ಬಲಿಯಾಗದಿರಲಿ ಎಂಬುದೇ ನನ್ನ ಹಾರಯಿಕೆ. ಈಗಾಗಲೇ ತಮ್ಮ ತಮ್ಮ ಇಸಂಗಳನ್ನ ಪ್ರಚುರಪಡಿಸಲಿಕ್ಕೆ ಪ್ರತಿ ಪ್ರತ್ರಿಕೆಯವರೂ ಹವಣಿಸುತ್ತಿದ್ದಾರೆ. ಒಂದು ಮಕ್ತ ವಾತಾವರಣದ ಪತ್ರಿಕೆಯನ್ನ ತಿಮ್ಮಪ್ಪ ಭಟ್ಟರು ಕೊಡಲಿ.

  ಶುಭವಾಗಲಿ.

  ಗಣೇಶ್.

  ReplyDelete
 5. Timmappa Bhat Sir, Good Luck…..
  Vastu nistha Baraha prakatisuttiruva hagu idannu prove madida sampadakeeya Balagakke Dhanyavadagalu

  ReplyDelete
 6. There was a grapevine in corporate world about another national level media group (not TOI group, which already has VK)also planning to launch a Kannada daily. They were conducting some market survey on business opportunities. A few senior Kannada journalists also got feelers to lead the Kannada edition. No one clear about the group: Guessing on Dainik Bhaskar or Deccan Chronicle. Will you through more light on this lead? (Deliberately anonymous)

  ReplyDelete
 7. Best of luck to both of them

  ReplyDelete
 8. ಹೊಸ ಪತ್ರಿಕೆ ಚೆನ್ನಾಗಿ ಬರಲಿ... ವಿ.ಕ ದಂತೆ ಈ ಪತ್ರಿಕೆಯೂ ನಂಬರ್​ 1 ಆಗಲಿ. ತಿಮ್ಮಪ್ಪ ಭಟ್ಟರಿಗೆ ಪತ್ರಿಕೆಯನ್ನು ಚೆನ್ನಾಗಿ ರೂಪಿಸುವ ಕಲೆ ಇದೆ, ಅವರಿಗೂ ಕೂಡಾ ಶುಭವಾಗಲಿ

  ReplyDelete
 9. ತಿಮ್ಮಪ್ಪ ಭಟ್ಟರಿಗೆ ಮತ್ತು ಸಂಕೇಶ್ವರ್ ರಿಗೆ ಅಭಿನಂದನೆಗಳು. ಈ ಪತ್ರಿಕೆಯೂ ಕರ್ನಾಟಕದ ನಂ.1 ಪತ್ರಿಕೆಯಾಗಲಿ...

  ವೀರೇಶ ಹೊಗೆಸೊಪ್ಪಿನವರ.

  ReplyDelete
 10. ಕನ್ನಡ ಪತ್ರಿಕೆಗಳು ಹೆಡ್ಡಿಂಗು ಕೊಡುವುದರಲ್ಲಿ ತೋರುತ್ತಿರುವ ಪೈಪೋಟಿಯನ್ನು ಸುದ್ದಿಯ ಗುಣಮಟ್ಟಕ್ಕೂ ವಿಸ್ತರಿಸಿದೇ ಇರುವುದು ಬೇಸರದ ವಿಷಯ. ಇಂಥ ಸಂದರ್ಭದಲ್ಲಿ ಕನ್ನಡಿಗರ ಒಟ್ಟು ಆಶೋತ್ತರಗಳನ್ನು ಧ್ವನಿಸುವ ಪತ್ರಿಕೆಯನ್ನು ಭಟ್ಟರು ರೂಪಿಸುವಂತಾಗಲಿ. ಹೊಸ ಪತ್ರಿಕೆ ಬಡವರ, ನೊಂದವರ, ನಿರ್ಲಕ್ಷಿತರ ಪರವಾಗಿ ಧ್ವನಿ ಎತ್ತಲಿ. ಇದು ನಮ್ಮ ಆಶಯ. EXACTLY!!

  ReplyDelete
 11. ಮತ್ತೊಂದು ಕನ್ನಡ ಪತ್ರಿಕೆ ಬರುತ್ತಿರುವುದು ಸಂತೋಷದ ವಿಷಯವಾದರೂ,ಅದು ಯಾವ ರೀತಿ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎನ್ನುವುದು ಮುಖ್ಯವಾಗುತ್ತದೆ. ಏನೇ ಆಗಲೀ ಸಂಕೇಶ್ವರರ ಪ್ರಯತ್ನಕ್ಕೆ ಸ್ವಾಗ್ತತ ಮತ್ತು ನಮ್ಮ ಶುಭಾಷಯಗಳು.

  ReplyDelete
 12. ವಿಶ್ವಕನ್ನಡ ಅಥವಾ ವಿಶ್ವಕರ್ನಾಟಕ ಎಂವ ಹೆಸರು ಸೂಕ್ತವೇನೋ?

  ReplyDelete
 13. Majithia aayogada (patrakarta mattu patrakartetarara vethana kuritha) shifarassugalu saakashtu musukina guddaatakke kaaranavaagide. aa bagge 'sampadakeeya' vedikeyalli vichara-vinimaya nadedare olleyadu.
  OBBA PATRAKARTA

  ReplyDelete
 14. ಹೊಸ ಪತ್ರಿಕೆ ಹೊಸ ಸಂಪಾದಕರಿಗೆ ಶುಭವಾಗಲಿ.
  ಪತ್ರಿಕೆಗಳು ಹೆಚ್ಚಾಗುತ್ತಿರುವಕ್ಕೆ ಸಂತೋಷವಾಗುತ್ತಿಲ್ಲ. ಆದರೆ ಕಷ್ಟಪಟ್ಟು ದುಡಿಯುವ ಕೈಗಳಿಗೆ ಕೆಲಸ ಸಿಗುತ್ತದೆ...

  ReplyDelete
 15. http://networkedblogs.com/jrrJh

  ReplyDelete
 16. E PATRIKE YAVAGA AARAMBH AGUTTE

  ReplyDelete
 17. vijay sankeswra avara hosa pathrikeje shubhavagali.matthu thimmappa battara sarathya chennagide

  ReplyDelete
 18. ವಿಜಯ ಪ್ರಭ .....ಹೆಸರು ಮಾಲಿಕರಿಗೂ ಮಾರುಕಟ್ಟೆಗೂ ಸರಿಹೊಂದುವಂತಿದೆ......!!!:)

  ReplyDelete
 19. ವಿಜಯ ಸಂಕೇಶ್ವರ ಮತ್ತು ತಿಮ್ಮಪ್ಪ ಭಟ್ಟ ಇಬ್ಬರಿಗೂ ಅಭಿನಂದನೆಗಳು, ಶುಭ ಹಾರೈಕೆಗಳು. ಆದ್ರೆ ಒಂದು ಪ್ರಾಮಾಣಿಕ ಅನಿಸಿಕೆ. ವಿಜಯ ಸಂಕೇಶ್ವರ ಮತ್ತು ತಿಮ್ಮಪ್ಪ ಭಟ್ಟ ಇಬ್ಬರ ಜೋಡಿ ಆಗುವುದಿಲ್ಲ. ನೀವು ಯಾವ ರೀತಿ ಲೆಕ್ಕ ಹಾಕಿದರು ಹೊಂದಾಣಿಕೆ ಆಗೋಲ್ಲ. ಅಲ್ಲಿರುವ ನಿರ್ದೇಶಕರಾದ ಆನಂದ್ ಸಂಕೇಶ್ವರ , ಉಮೇಶ್ , ಎಲ್ .ಆರ್.ಭಟ್ ಅವರಿಗೂ ಇವರು ಹೊಂದಾಣಿಕೆ ಆಗೋದು ಕಷ್ಟ ಸಾಧ್ಯ! ಮಲ್ಟಿ ಅಕ್ಷಿಲ್ ವೋಲ್ವೋ ಗಾಡಿಗೆ ಫೋರ್ಡ್ ಗಾಡಿ ಚಾಲಕನಂತಗಿದೆ. ಹಾಗಾಗ ಬಾರದು ಎಂಬುದು ಹಾರೈಕೆ. ತಿಮ್ಮಪ್ಪ ಭಟ್ಟರಿಗೆ ಕಪ್ರ ಮತ್ತು ಈಗ ಉದಯವಾಣಿ ಯಲ್ಲಿ ಅನ್ಯಾಯ ಆಗಿದೆ. ಸೊ ಎಲ್ಲಿ ನ್ಯಾಯ ದೊರೆಯಲಿ.

  ReplyDelete
 20. ಯಾವಾಗ ಬರುತ್ತೆ ಪತ್ರಿಕೆ? ಆದಷ್ಟು ಬೇಗ ಬರಲಿ!

  ReplyDelete
 21. The puzzling aspect of the new venture is that why did Mr Sankeshwar start two kannada papers earlier, sell them later and go in for new paper?

  ReplyDelete
 22. ಸಂಕೇಶ್ವರ ಅವರು ಪತ್ರಿಕೆ ಆರಂಭಿಸುತ್ತಾರೆ ಎಂದರೆ ಎಲ್ಲರೂ ನಂಬುತ್ತಾರೆ... ಆದರೆ ಅವ ಪತ್ರಿಕೆಗೆ ಬೇರೆ ಬೇರೆ ಪತ್ರಿಕೆಗಳಿಂದ ಪತ್ರಕತಱ ಒಂದು ಸಮೂಹವೇ ಹೊರ ಬರುತ್ತದೆ ಎನ್ನುವ ಮಾತು ಮಾಧ್ಯಮದ ವಲಯದಿಂದ ಕೇಳಿ ಬರುತ್ತಿದೆ...ಈ ಮಾತನ್ನು ನಂಬುವುದು ವಿಜಯ ಸಂಕೇಶ್ವರ ಅವರನ್ನು ಬಲ್ಲ ಪತ್ರಕತಱರಿಗೆ ಗೊತ್ತು. ತುತ್ತಿನ ಚೋಲಕ್ಕೆ ಎಲ್ಲೋ ಒಂದು ಹೊತ್ತಿನ ಅನ್ನ ಕಾಣುವ ಭಾಗ್ಯ ಕಂಡುಕೊಂಡಿರುವ ಜನರು ಇವರನ್ನು ನಂಬಿ ಬಂದರೆ 'ಉಷಾ ಕಿರಣ' ದಂತೆ ನಂದಿಹೋಗುವ ಭೀತಿಯೂ ಇದೆ. ಇಂಥ ಭೀತಿ ಇಲ್ಲದೇ ನಮ್ಮೊಂದಿಗೆ ಕೆಲಸ ಮಾಡಲು ಸಾಧ್ಯ ಎಂದು ಹುಟ್ಟದ ಪತ್ರಿಕೆಯ ಮಾಲೀಕ ಸಂಕೇಶ್ವರ ಹಾಗೂ ಅದರ ಸಂಪಾದಕರಾಗಿ ನೇಮಕಗೊಂಡಿರು ಹಿರಿಯ ಮಿತ್ರರಾದ ತಿಮ್ಮಪ್ಪ ಭಟ್ಟರು ಗಟ್ಟಿಯಾಗಿ ಹೇಳಬೇಕಷ್ಟೆ... ಜಿ.ಎಸ್.ಕಮತರ, ಮಾನವಿ

  ReplyDelete