Tuesday, June 21, 2011

ಚಿತ್ರದುರ್ಗದಲ್ಲಿ `ಮಾಧ್ಯಮ ಕರ್ನಾಟಕ' ವಿಚಾರಗೋಷ್ಠಿ....


ಮಾಧ್ಯಮಗಳ ಕುರಿತು ರಾಜಧಾನಿ ಬೆಂಗಳೂರಿನಲ್ಲೇ ಚರ್ಚೆಗಳು ನಡೆಯದೇ ಇರುವಾಗ ಚಿತ್ರದುರ್ಗದಲ್ಲಿ ಎರಡು ದಿನಗಳ ವಿಚಾರಗೋಷ್ಠಿ ನಡೆಯುತ್ತಿದೆ. ಬಯಲು ಸಾಹಿತ್ಯ ವೇದಿಕೆ-ಕೊಟ್ಟೂರು, ಗೆಳೆಯರ ಬಳಗ ಸಂಘಟನೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಿದೆ. ಗೋಷ್ಠಿ ಇರುವುದು ಬರುವ ಜೂನ್ ೨೫, ೨೬ರಂದು.

ಚಿತ್ರದುರ್ಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದರೂ ಬೆಂಗಳೂರಿನ ಹಲವಾರು ಪತ್ರಕರ್ತರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.  ಈ ಕಾರ್ಯಕ್ರಮದಲ್ಲಾದರೂ ಕರ್ನಾಟಕ ಮಾಧ್ಯಮ ರಂಗದ ಆತ್ಮಶೋಧನೆಯ ಮಾತುಗಳು ಕೇಳಿಬರಲಿ ಎಂಬುದು ನಮ್ಮ ಆಶಯ. ಮಾಧ್ಯಮ ವಿದ್ಯಾರ್ಥಿಗಳಿಗೆ, ಹೊಸದಾಗಿ ಕ್ಷೇತ್ರಕ್ಕೆ ಕಾಲಿಟ್ಟವರಿಗೆ ಗೋಷ್ಠಿಯಿಂದ ಅನುಕೂಲ ಆಗಲಿ ಎಂಬುದು ನಿರೀಕ್ಷೆ. ಸಂಪಾದಕೀಯ ಬಳಗ ಹಾಗು ಓದುಗರನ್ನು ಆಹ್ವಾನಿಸಿ ಮೇಲ್ ಕಳುಹಿಸಿದ ಚಿತ್ರದುರ್ಗದ ಗೆಳೆಯರಿಗೆ ಒಂದು ಥ್ಯಾಂಕ್ಸ್.


1 comment: