Wednesday, June 1, 2011

ಒಬ್ಬ ಕೀಚಕ ತೊಲಗಿದ್ದಾನೆ, ಉಳಿದವರೂ ತೊಲಗಲಿ...

ಬ್ಲಾಗ್ ಜಗತ್ತಿನ ತುಂಬ ಪತ್ರಿಕೋದ್ಯಮದ ವಾಚ್‌ಡಾಗ್‌ಗಳು ತುಂಬಿಕೊಳ್ಳುತ್ತಿದ್ದಾರೆ. ಕೆಲವರು ಹಿಂದೆಮುಂದೆ ನೋಡದೆ ಸ್ವಾರಸ್ಯಕರ ಗಾಸಿಪ್, ಅರೆಬರೆ ಮಾಹಿತಿ, ತಪ್ಪು ಅರ್ಥ ಕೊಡುವ ಸುದ್ದಿಗಳನ್ನೆಲ್ಲ ಪ್ರಕಟಿಸುತ್ತಿದ್ದಾರೆ. ಕೆಲವರು ಚೆನ್ನಾದ ವಿಶ್ಲೇಷಣೆ ನಡೆಸ್ತಿದ್ದರೂ ನಡುನಡುವೆ ಬಕೆಟ್ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. (ಬಕೆಟ್ ಈಗ ಸಖತ್ ಚಾಲ್ತಿಯಲ್ಲಿರುವ ಪದ. ಅದಕ್ಕೆ ಪರ್ಯಾಯ ಸಿಗ್ತಿಲ್ಲ). ಯಾರಿಗೂ ಇದರ ಪರಿಣಾಮದ ಅರಿವು ಇದ್ದ ಹಾಗಿಲ್ಲ. ಪತ್ರಿಕೆ, ವೆಬ್‌ಗಳಲ್ಲಿ ಬರುತ್ತಿರುವ ಸುದ್ದಿಗಳಿಂದಾಗಿ ಜರ್ನಲಿಸಮ್ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಇತ್ತ ತಲೆ ಹಾಕಲು ಹೆದರುವಂಥ ಮಾಹೋಲ್ ನಿರ್ಮಾಣವಾಗ್ತಿದೆ. ಇಷ್ಟು ದಿನ ಜನ ರಾಜಕಾರಣ ಅಂದರೆ ಮೂಗು ಮುರೀತಿದ್ದರು, ಇನ್ನು ಖಚಡಾ ಕೆಲಸಕ್ಕೆಲ್ಲ ಇದೇನು ಜರ್ನಲಿಸಮ್ಮಾ ಅಂತ ಕೇಳುವ ಕಾಲವೂ ಬರಬಹುದು.

ಹೀಗಂತ ಬರೆದಿದ್ದವರು ಲೇಖಕಿ, ಪತ್ರಕರ್ತೆ ಚೇತನಾ ತೀರ್ಥಹಳ್ಳಿ. (ತಸ್ಲೀಮಾ ನಸ್ರೀನ್, ಜೆಪಿ, ಚೇತನಾ ತೀರ್ಥಹಳ್ಳಿ ಮತ್ತು ಒಂದು ವಿವಾದ ಪೋಸ್ಟ್ ನೋಡಿ)

ಮಾಧ್ಯಮರಂಗಕ್ಕೆ ಹೊಸಹುರುಪಿನ ಯುವಕ-ಯುವತಿಯರು ಹೆಚ್ಚುಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂಬುದು ನಮ್ಮ ಬಯಕೆ. ಈ ಯುವಕ-ಯುವತಿಯರಿಗೆ ಜನಪರ ಕಾಳಜಿಗಳಿರಬೇಕು ಎಂಬುದು ನಮ್ಮ ಬೇಡಿಕೆ. ಹೀಗಾಗಿ ಯಾವುದನ್ನೂ ಅತಿರಂಜಿಸದೆ, ಯಾರನ್ನೂ ವೈಯಕ್ತಿಕ ತೇಜೋವಧೆ ಮಾಡದೆ, ಇಶ್ಯೂ ಬೇಸ್ಡ್ ಆಗಿಯೇ ಈ ಬ್ಲಾಗ್ ನಡೆಸಿಕೊಂಡು ಹೋಗುತ್ತಿದ್ದೇವೆ. ನಮ್ಮಿಂದ ತಪ್ಪಾದರೆ, ದಯವಿಟ್ಟು ಹೇಳಿ. ಮಾಧ್ಯಮ ರಂಗವೂ ಚರ್ಚೆ, ಟೀಕೆಗಳಿಂದ ಹೊರತಾಗಿರಬಾರದು ಎಂಬುದಷ್ಟೆ ನಮ್ಮ ಉದ್ದೇಶ. ಒಂದು ವೇಳೆ ಈ ಬ್ಲಾಗ್ ಮಾಧ್ಯಮದ ಒಟ್ಟಾರೆ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ನಿಮಗನ್ನಿಸಿದರೆ ಯಾವುದೇ ಸಂದರ್ಭದಲ್ಲಿ ಇದನ್ನು ನಿಲ್ಲಿಸಿಬಿಡಲೂ ನಾವು ಸಿದ್ಧ.

ಯಾಕೆ ಇದೆನ್ನೆಲ್ಲ ಹೇಳಿದೆವೆಂದರೆ ಒಂದು ಆಘಾತಕಾರಿ ಸುದ್ದಿ ಹೊರಬಂದಿದೆ. ಇದನ್ನು ಇಲ್ಲಿ ಹೇಳದೆ ಬೇರೆ ನಿರ್ವಾಹವಿಲ್ಲ. ಪ್ರಮುಖ ಪತ್ರಿಕೆಯೊಂದರ ಬ್ಯೂರೋ ಮುಖ್ಯಸ್ಥರಿಂದ ನಿನ್ನೆ ರಾಜೀನಾಮೆ ಪಡೆದು ಹೊರಹಾಕಲಾಗಿದೆ.  ಆತ ತನ್ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅಶ್ಲೀಲ ಇ-ಮೇಲ್ ಕಳುಹಿಸಿದ್ದು ಇದಕ್ಕೆ ಕಾರಣ. ಈ ಇ-ಮೇಲ್ ಅನ್ನು ನೇರವಾಗಿ ಪತ್ರಿಕೆಯ ಸಂಪಾದಕರಿಗೆ ರವಾನಿಸಿದ ದಿಟ್ಟ ಮಹಿಳೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಸಂಪಾದಕರೂ ಹಿಂದೆಮುಂದೆ ನೋಡದೆ ಬ್ಯೂರೋ ಮುಖ್ಯಸ್ಥರನ್ನು ಸೇವೆಯಿಂದ ಕಿತ್ತು ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕಡೆಗೆ ಬ್ಯೂರೋ ಮುಖ್ಯಸ್ಥನ ಮನವಿಯ ಮೇರೆಗೆ ಆತನಿಂದ ರಾಜೀನಾಮೆ ಪಡೆದು ಸಾಗಹಾಕಲಾಗಿದೆ.

ಈ ಬ್ಯೂರೋ ಮುಖ್ಯಸ್ಥರ ಮೇಲೆ ಆರೋಪಗಳ ಮಹಾಪೂರವೇ ಹಿಂದಿನಿಂದಲೇ ಇದ್ದವು. ಆದರೂ ಆತನನ್ನು ಕಾಣದ ಕೈಗಳು ರಕ್ಷಿಸುತ್ತಲೇ ಬಂದಿದ್ದವು. ಈತನ ವಿರುದ್ಧದ ಆರೋಪಗಳ ಕುರಿತು ಹಿಂದೆ ಸಂಪಾದಕೀಯದಲ್ಲೂ ತಾವು ಓದಿರುತ್ತೀರಿ. ದೂರು ಕೊಟ್ಟ ಮಹಿಳೆಯ ಹೆಸರು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಇಡೀ ಘಟನೆಯ ಸಂಸ್ಥೆ, ವ್ಯಕ್ತಿಗಳ ಹೆಸರನ್ನು ನಾವು ಇಲ್ಲಿ ಕಾಣಿಸುತ್ತಿಲ್ಲ.

ಇದು ಕೇವಲ ಒಂದು ಅಶ್ಲೀಲ ಇ-ಮೇಲ್‌ನಿಂದ ಆಗಿರುವ ರಾದ್ಧಾಂತದಂತೆ ಕಾಣುತ್ತಿಲ್ಲ. ನೊಂದ ಮಹಿಳೆ ಲೈಂಗಿಕ ಕಿರುಕುಳದ ದೂರನ್ನೂ ನೀಡಿದ್ದಾರೆ ಎಂಬ ಮಾಹಿತಿಯಿದೆ. ಇದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಎಲ್ಲ ಸಾಧ್ಯತೆಗಳೂ ಇದ್ದಿದ್ದರಿಂದಾಗಿ ಪತ್ರಿಕಾ ಸಂಸ್ಥೆ ಆತುರಾತುರವಾಗಿ ಕ್ರಮ ಕೈಗೊಂಡಿದೆ. ಪತ್ರಕರ್ತ ದೊಡ್ಡ ಶಿಕ್ಷೆಯಿಂದ ಪಾರಾಗಿ ಚಿಕ್ಕ ಶಿಕ್ಷೆ ಅನುಭವಿಸಿದ್ದಾನೆ.

ಇದು ಒಂದು ಘಟನೆ ಮಾತ್ರವಲ್ಲ. ಇಂಥದ್ದು ಅಲ್ಲಲ್ಲಿ, ಆಗಾಗ ನಡೆಯುತ್ತಲೇ ಇವೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಸುದ್ದಿಸಂಪಾದಕರೊಬ್ಬರು ತಮ್ಮ ಅಧೀನ ಮಹಿಳಾ ಸಿಬ್ಬಂದಿಗೆ ಮದುವೆಯಾಗು ಎಂದು ಪೀಡಿಸಿದ ಪರಿಣಾಮ ಇತ್ತೀಚಿಗೆ ಆಕೆ ಪತ್ರಿಕೆಯನ್ನೇ ತೊರೆದುಹೋದರು. ದೊಡ್ಡ ಸ್ಥಾನದಲ್ಲಿ ಕುಳಿತ ಕೆಲ ಕೀಚಕ ಪತ್ರಕರ್ತರು ತಮ್ಮ ಕೈಕೆಳಗಿನ ಮಹಿಳೆಯರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಆದರೆ ಇದ್ಯಾವುದೂ ಸುದ್ದಿಯಾಗುವುದಿಲ್ಲ. ಯಾಕೆಂದರೆ ಸುದ್ದಿ ಮಾಡುವವರೇ ಇಲ್ಲಿ ಆರೋಪಿಗಳು.

ನಿಜ, ಇದು ಕೇವಲ ಮಾಧ್ಯಮರಂಗದ ಸಮಸ್ಯೆ ಮಾತ್ರವಲ್ಲ. ಉದ್ಯೋಗಸ್ಥ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಇಂಥ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಇಂಥ ಕೀಚಕರನ್ನು ಎದುರಿಸುವ ಧೈರ್ಯ, ಸಾಮರ್ಥ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಲೇಬೇಕು. ಈ ಪ್ರಕರಣದಲ್ಲಿ ಆದಂತೆ ಇಂಥವರನ್ನು ಮನೆಗೆ, ಜೈಲಿಗೆ ಅಟ್ಟುವ ಸಾಹಸವನ್ನು ತೋರಬೇಕಿದೆ.

ಹಾಗಂತ ಇಡೀ ಮಾಧ್ಯಮರಂಗದವೇ ಇಂಥ ಕೀಚಕರಿಂದ ತುಂಬಿದೆ ಎಂದು ಯಾರೂ ಭಾವಿಸಬೇಕಿಲ್ಲ. ಕೀಚಕ ಸಂತಾನ ಎಲ್ಲೆಡೆ ಇರುವಂತೆ ಇಲ್ಲೂ ಇವೆ ಎಂಬುದನ್ನಷ್ಟೆ ನಾವಿಲ್ಲಿ ಗ್ರಹಿಸಬೇಕಾಗಿದೆ. ಕನಿಷ್ಠ ಪಕ್ಷ ಇಂಥ ಆರೋಪಗಳನ್ನು ಹೊತ್ತಿರುವ ಪತ್ರಕರ್ತರನ್ನು ಆತನ ಅರ್ಹತೆ, ಅನುಭವ, ಸಾಮರ್ಥ್ಯ ಇತ್ಯಾದಿ ಯಾವುದನ್ನೂ ಪರಿಗಣಿಸದೆ ಇತರ ಸಂಸ್ಥೆಗಳು ಮತ್ತೆ ಕೆಲಸ ಕೊಡಲು ಹೋಗದಿರಲಿ ಎಂಬುದು ನಮ್ಮ ಆಶಯ. ಚೇತನಾ ಅವರು ಹೇಳಿದಂತೆ ಹೆಣ್ಣುಮಕ್ಕಳು ಇತ್ತ ತಲೆಹಾಕದಂತಹ ಮಾಹೋಲ್ ನಿರ್ಮಾಣವಾಗುವುದು ಬೇಡ.

ಇದನ್ನು ಬರೆಯುತ್ತಿರುವ ಈ ಸಂದರ್ಭದಲ್ಲಿ ಮನಸ್ಸಿಗೆ ಕಸಿವಿಸಿ, ವಿಷಾದ. ಇಂಥ ಪ್ರಕರಣಗಳ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳು ಜೀರೋ ಟಾಲರೆನ್ಸ್ ಇಟ್ಟುಕೊಳ್ಳಲಿ. ಇಂಥ ವರದಿಗಳನ್ನು ಬರೆಯುವ ಸಂದರ್ಭ ಮತ್ತೆಂದೂ ನಮಗೆ ಒದಗಿಬರದಿರಲಿ. ಒಬ್ಬ ಕೀಚಕ ತೊಲಗಿದ್ದಾನೆ, ಉಳಿದವರೂ ತೊಲಗಲಿ.

16 comments:

 1. one blog already reported this yesterday

  ReplyDelete
 2. kannada electranic news media history-reacent technology - how to devolp kannada news chanels ? e bagge swalpa tilasi plz

  ReplyDelete
 3. Sir if women journalist face any problem in their working place then with whom they will discuss it? Sir we don't have any women cell in media office to discuss our grievances. Sir we should insist media organisations to form a women cell. A senior lady employee and NGO members should be its part. It is necessary sir. In all incidents we can not give complaint. Because these men are very smart. They will simply call and indirectly approach us. In such incidents we need a cell in our office. It is a basic need for woman in her working place. When woman suffer by such incidents they dnt knw with whom to complaint? as u mentioned buket hidiyuvavaru jasti iruvaga how can believe anybody..........?
  Hudugira swabhimanavanne durahnkara antha bhaviso kshudra jeevigaliruvaga media dalli hudugiru wrk madoke sadhyana......? ide ondu reethiya harassment just because we are girls......

  ReplyDelete
 4. you too protecting this bureau chief without revealing his name.. u would have announced the name of culprit if he is a common man.. i feel something fishy here.. plz to clarify ur stance reveal his name, make it public.. at least try ur best to protect the women

  u know that almost all the newsmen check this blog n if u make his name public, it will indirectly help lots of women whom you shown ur "deep concern" above


  WHAT PREVENTING U? CLARIFY PLZ..

  ReplyDelete
 5. ಧೂರ್ತನ ಹೆಸರನ್ನು ಪ್ರಕಟಿಸಿ

  ReplyDelete
 6. sampadakeeya blog illade hogiddare intha kichak patrakartaru iddare ennuvude tiliyutta irlilla annodu aatishayokti alla

  swastha naagarika samaj kattalu sampaadakeeya intha prayatna contd... maadali

  ReplyDelete
 7. ಇಂಥ ಮಾನಹೀನ ವ್ಯಕ್ತಿಗಳು ಪ್ರತಿಯೊಂದು ಸಂಸ್ಥೆಯಲ್ಲೂ ಇರುತ್ತಾರೆ. ಪತ್ರಿಕೋದ್ಯಮ ಇದಕ್ಕೆ ಹೊರತಲ್ಲ. ಗಾಬರಿಯಾಗುವುದು ಅದಕ್ಕಲ್ಲ. ಮನದ ತುಂಬಾ ಹೇಸಿಗೆಯನ್ನು ತುಂಬಿಕೊಂಡ ವ್ಯಕ್ತಿಯ ಕೈಯಲ್ಲಿ ಲೇಖನಿ ಅದರ ಜೊತೆಗೊಂದಿಷ್ಟು ಸ್ಥಾನ-ಮಾನಗಳು ಸೇರಿಕೊಂಡು ಬಿಟ್ಟರೆ ಗತಿ ಏನು?

  ReplyDelete
 8. @ anonymous3 & g.s.shrinath,
  ಸಂಪಾದಕೀಯದಲ್ಲಿ ಈ ಸುದ್ದಿ ಪ್ರಕಟವಾಗೋದಕ್ಕೂ ಮುನ್ನ ಇನ್ನೊಂದು ಬ್ಲಾಗ್ ನಲ್ಲಿ ಹೆಸರು ಸಮೇತ ಪ್ರಕಟವಾಗಿದೆ. ಅಲ್ಲದೆ ಸಂಪಾದಕೀಯದ ಫೇಸ್ ಬುಕ್ ನಲ್ಲಿ ಕಾಮೆಂಟಿಸಿದವರೊಬ್ಬರು ಹೆಸರು ಉಲ್ಲೇಖಿಸಿದ್ದಾರೆ. ಇದರಲ್ಲಿ ಅಂಥ ರಹಸ್ಯವೇನೂ ಇಲ್ಲ. ಸಂಪಾದಕೀಯದವರು ತಮ್ಮ ಕೆಲಸ ಮಾಡಿದ್ದಾರೆ. ಉಳಿದಿರುವುದು ಈ ವಿಷಯವನ್ನು ಮಾಧ್ಯಮಗಳು ಹೇಗೆ ಸ್ವೀಕರಿಸುತ್ತಾವೆ, ಪ್ರತಿಕ್ರಿಯಿಸುತ್ತಾವೆ ಅನ್ನುವುದರ ಮೇಲೆ ನಿಂತಿದೆ.

  ReplyDelete
 9. dooru oydu churuku muTTisida aaheNNumagaLige nanna abhinandane. innaadaroo oLagoLage goNagikonDu avamaanisikoLLuva atmavanchaneyinda naavu heNNugaLu horabarabEkide. jagattina ella heNNugaLigoo gottiruva bhashe andare MAUNA (idanna nenna FB yalli geLatiyobbaru haakkonDiddaru) annuva aNakadinda naavu eeche bandu, pratiBhataneya bhashe kaliyabekide. sampaadakeeya mattu itara ella sahrudara sahakaara irali.
  nalme,
  CheT

  ReplyDelete
 10. journalists should learn lessons from history

  why should this blog hide his name who try to harass a female employee? The journalist is none other than who was accused of corruption long ago. This blog has reported about it. Then the bureau chief protected him. funny part of the story is the management has used the same person who protected him to remove the journalist who is facing allegations. there is some fault on the part of management which promoted dubious characters to higher posts. journalists with dubious charectars and unprofessional history are bieng promoted and appointed for the higher posts in the news papers which is a bad development.

  ReplyDelete
 11. ರಾಜಧಾನಿಯ 75 ಬಾಪೂಜಿ ರಸ್ತೆಯಲ್ಲಿರುವ ಪತ್ರಿಕೆಯ ಗುಲ್ಬರ್ಗ 'ವರದಿ'!

  -ಪ.ರಾಮಚಂದ್ರ
  ರಾಸ್ ಲಫ್ಫಾನ್, ಕತಾರ್

  ReplyDelete
 12. ಮನುಷ್ಯ ಈ ಭೂಮಿ ಮೇಲೆ ಹುಟ್ಟಿದಾಗಿನಿಂದಲೂ ಅವನ /ಅವಳ ಜೀವನದಲ್ಲಿ ಆಸೆ, ಮದ, ಮೋಹ, ಕಾಮ, ಇವೆಲ್ಲ ಇದ್ದವು, ಆದ್ರೆ ಇಂದಿನ ಜೀವನದಲ್ಲಿ ಆಸೆ ಎನ್ನುವುದು ಅತಿಯಾಸೆಯಾಗಿ, ದುರಾಸೆಯಾಗಿ, ಅದು ಮಿತಿ ಮೀರಿ, ಹಣ ಮಾಡು ದುರುದ್ದೇಶ, ಹಾಗು ನಮ್ಮ ಆಧುನಿಕತೆಯ ಕಂಪ್ಯೂಟರ್ , ಇಂಟರ್ನೆಟ್ ಗಳ ಹಾವಳಿಗಳ ಜೊತೆಗೆ ಭಯಂಕರ ಭಸ್ಮಾಸುರ ಮೊಬೈಲ್ ಎಂಬ ರಾಕ್ಷಸ ನಿಂದ , ಸುಳ್ಳುಗಳ, ಸರಮಾಲೆ, ಹೇಗಾದ್ರು ಮಾಡಿಯಾದರೂ ಹಣ ಗಳಿಸಿ, ಮೋಜು ಮಾಡಬೇಕೆನ್ನು ವ ಇಚ್ಚೆಗಳು, ಅತಿಯಾದ ಲೈಂಗಿಕತೆ ಯಾ ದಾಹ (ಬೀದಿ ಬೀದಿಯಲ್ಲಿ ಮಾರಾಟ ವಸ್ತುವಾಗಿ ಬಿಕರಿಯಾಗುತ್ತಿರುವ ಕಾಮ ಕ್ರೀಡೆ)
  ಇವೆಲ್ಲ ಪೂರೈಸಿಕೊಳ್ಳಲು ಏನೆಲ್ಲಾ ಮಾಡಬೇಕೋ ಮಾಡಬಾರದೋ ಅದನ್ನೆಲ್ಲ ಮಾಡುತ್ತಾ ಇಂದು ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಭಾಗಿಗಳಾಗುತ್ತಿದ್ದೇವೆ.
  ಟಿ.ವಿ. ಮಾಧ್ಯಮ ಗಳು ಬಂದ ಮೇಲಂತು ದಿಕ್ಕು ದಿಸೆ ಇಲ್ಲದೆ ಮೇಲೆ ಕಾಣಿಸಿದ ಎಲ್ಲವನ್ನು ಪರೋಕ್ಷವಾಗಿ ಪ್ರೇರೇಪಿಸುತ್ತಿದ್ದಾರೆ.
  ಅದರ ಪರಿಣಾಮ ನಿಮ್ಮ "
  ಒಬ್ಬ ಕೀಚಕ ತೊಲಗಿದ್ದಾನೆ, ಉಳಿದವರೂ ತೊಲಗಲಿ... ಎಂಬುದಕ್ಕೆ ಕಾರಣವು ಆಗುತ್ತದೆ.
  ಒಬ್ಬ ಸಾಮಾನ್ಯ ಮನುಷ್ಯ ತಪ್ಪು ಮಾಡಿದರೆ ದೊಡ್ಡ ಸುಧ್ಧಿ ಮಾಡುವ ಪತ್ರಿಕೋದ್ಯಮ "ಒಬ್ಬ ಮಾಜಿ ಮುಖ್ಯಮಂತ್ರಿ " ರಾಜಾರೋಷವಾಗಿ ಪರಸ್ತ್ರಿಯ ಜೊತೆ, ಮಗುವಿನ ಜೊತೆ ಫೋಟೋ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂಟರ್ನೆಟ್ ನಲ್ಲಿ ಫೋಟೋಗಳು ರಾರಾಜಿಸುತ್ತಿದ್ದಾರು ಸಹ ಅವರ ತಂಟೆಗೆ ಹೋಗುವುದಿಲ್ಲ ನಮ್ಮ ಮಾಧ್ಯಮ ಮಿತ್ರರು http://www.facebook.com/profile.php?id=100001225067997#!/media/set/?set=a.198736523496913.42221.100000816996773
  ಭ್ರಷ್ಟಾಚಾರದ ವಿರುಧ್ಧ ಹೋರಾಟ ಮಾಡಿ ಅಂದರೆ ಯಾರೊಬ್ಬರಿಗೂ ಕಾಳಜಿ ಇಲ್ಲ.
  ಆ ಪತ್ರಕರ್ತರ ಮೇಲೆ ಇವರು ಇವರ ಮೇಲೆ ಅವರು ದೂರುತ್ತಾ ಅವರ ಸ್ವಾರ್ಥಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ನಮ್ಮ ಸಂವಿದಾನದ ೪ನೇ ಅಂಗದ ಪ್ರಮುಖರು. ಇಂದಿನ ದಿನಗಳಲ್ಲಿ ಯಾರಾದರೂ ನಾನು ಮಾಡುತ್ತಿರುವುದು ನನ್ನ ಕಾಯಕ ಧರ್ಮಕ್ಕೆ ನ್ಯಾಯ ಒದಗಿಸುತ್ತಿದ್ದೇನೆ ಎಂದು ಹೇಳಿಕೊಳ್ಳುವ ಒಬ್ಬ ವ್ಯಕ್ತಿ ಇದ್ದಾರಾ ?
  ರಾಜು
  ದಾವಣಗೆರೆ
  rajudavanagere@gmail.com

  ReplyDelete
 13. idondu belaku kanda ghatane ashte. belakige barada inthaha ghatanegalige suddimaneyalli baravilla.

  ReplyDelete
 14. jeevanada moulyagala sandesha saaruvaa films gala dubbing ok,but,,ellaa bedaa.and manaranjanege bhaashe addi baruvudillaa.english pogo nodi makkalu khushi padollva,?english alli cricket comentri bandru summne nodi enjoy maadolvaa..so
  enjoyness ge language importent alla anstte..

  @praveen jain
  gdjainboy@gmail.com

  ReplyDelete
 15. ಈ ಯುವಕ-ಯುವತಿಯರಿಗೆ ಹೇಳಿ...

  ReplyDelete
 16. inta neecharu patrikodyamakke kalanka. intavarannu tolagisida a patrikege thanks

  ReplyDelete