Friday, February 4, 2011

ರವಿ ಬೆಳಗೆರೆ ಹೊಸ ಇನ್ನಿಂಗ್ಸ್ ಶುರು!


ರವಿ ಬೆಳಗೆರೆ ಜನಶ್ರೀ ಚಾನಲ್‌ನ ನೇತೃತ್ವ ವಹಿಸಿಕೊಂಡಿದ್ದಾರೆ. ಇಷ್ಟು ದಿನ ಜನಶ್ರೀಯಲ್ಲಿ ಬೆಳಗೆರೆ ಕೇವಲ ಸಲಹೆಗಾರರಾಗಿ ಇರುತ್ತಾರೆ ಎಂಬ ಮಾತಿತ್ತು. ಆದರೀಗ ಅವರೀಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.

I joined JASHREE news channel today and will be hosting a daily show late evening. Need your support and best wishes. I will also host a morning breakfast programme show which will be unique.

ಹೀಗಂತ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ರವಿ ಬೆಳಗೆರೆ ಕನ್ನಡದ ಅತ್ಯಂತ ಪ್ರತಿಭಾವಂತ ಪತ್ರಕರ್ತ. ಮಾಧ್ಯಮದ ಎಲ್ಲ ರೀತಿಯ ಪ್ರಯೋಗಗಳಿಗೂ ಒಡ್ಡಿಕೊಂಡವರು. ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ, ಟ್ಯಾಬ್ಲ್ಯಾಡ್, ಟಿವಿ, ರೇಡಿಯೋ.. ಎಲ್ಲ ಕಡೆ ಕೈಯಾಡಿಸಿದವರು. ಸಿನಿಮಾಗಳಲ್ಲೂ ಲಕ್ಕು ಕುದುರುತ್ತಾ ನೋಡಿ ವಾಪಾಸು ಬಂದವರು. ಇದೀಗ ಅವರು ಜನಶ್ರೀ ಚಾನೆಲ್ ಹೆಡ್ ಆಗಿ ಕುಳಿತುಕೊಳ್ಳುವುದರೊಂದಿಗೆ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ರವಿ ಬೆಳಗೆರೆ ಅತಿ ಹೆಚ್ಚು ವಿವಾದಗಳಿಗೆ ಗುರಿಯಾದವರು. ಅವರ ಇಡೀ ವೃತ್ತಿ ಜೀವನದ ತುಂಬ ವಿವಾದಗಳೇ ತುಂಬಿಕೊಂಡಿವೆ. ಹಾಯ್ ಬೆಂಗಳೂರು ಮೂಲಕ ಸಾಕಷ್ಟು ಜನರನ್ನು ಎದುರು ಹಾಕಿಕೊಂಡು, ಅದನ್ನು ದಕ್ಕಿಸಿಕೊಂಡ ಬೆಳಗೆರೆ ತಮ್ಮದೇ ಕನಸಿನ ಪ್ರಾರ್ಥನಾ ಸ್ಕೂಲು ಕಟ್ಟಿಕೊಂಡರು. ಅದನ್ನು ಬೆಳೆಸಿದರು.

ಬೆಳಗೆರೆಗೆ ಟಿವಿ ಮಾಧ್ಯಮ ಒಗ್ಗಿ ಬರುತ್ತದಾ ಎಂಬುದು ಸದ್ಯದ ಪ್ರಶ್ನೆ. ಈ ಟಿವಿಯಲ್ಲಿ ಅವರು ನಡೆಸುತ್ತಿದ್ದ ಕ್ರೈಂ ಡೈರಿ ಪಾಪ್ಯುಲರ್ ಕಾರ್ಯಕ್ರಮವಾಗಿತ್ತು. ಈ ಟಿವಿಯಲ್ಲೇ ನಡೆಸಿಕೊಡುವ ಎಂದೂ ಮರೆಯದ ಹಾಡು ಕಾರ್ಯಕ್ರಮದಿಂದಲೂ ಅವರು ಹೆಸರು ಗಳಿಸಿದ್ದರು.

ಈಗ ನ್ಯೂಸ್ ಚಾನಲ್‌ನ ನೇತೃತ್ವ ವಹಿಸಿಕೊಂಡಿದ್ದಾರೆ. ಇಲ್ಲಿ ನೂರು ಸವಾಲುಗಳಿವೆ. ಪ್ರತಿ ದಿನ ಸಂಜೆ ಒಂದು ಶೋ ನಡೆಸುತ್ತೇನೆ, ಬೆಳಿಗ್ಗೆಯೂ ಒಂದು ಶೋ ಇರುತ್ತದೆ ಎನ್ನುತ್ತಿದ್ದಾರೆ ಬೆಳಗೆರೆ. ಅದಕ್ಕೆ ಸಮಯ ಎಲ್ಲಿಂದ ತರುತ್ತಾರೆ? ಈ ನಡುವೆ ಹಾಯ್ ಬೆಂಗಳೂರ್ ಕಥೆ ಏನು?

ಈ ನಡುವೆ ಬೆಳಗೆರೆ ಕುರಿತಾಗೇ ಒಂದು ನಾಟಕ ತಯಾರಾಗಿದೆಯಂತೆ, ಒಂದು ಸಿನಿಮಾ ತಯಾರಾಗುತ್ತದಂತೆ, ಒಂದು ಪುಸ್ತಕ ಬರೆಯಲಾಗುತ್ತಿದೆಯಂತೆ.

ಅಂದ್ರ ಒಟ್ಟಾರೆಯಾಗಿ ಈಗ ರವಿ ಬೆಳಗೆರೆ ಕಾಲ.

ಬೆಳಗೆರೆಯವರಿಗೆ, ಅವರು ಮುನ್ನಡೆಸುತ್ತಿರುವ ಜನಶ್ರೀ ಚಾನಲ್‌ಗೆ ಒಳ್ಳೆಯದಾಗಲಿ. ಚಾನಲ್ ನಿಷ್ಪಕ್ಷಪಾತವಾಗಿರಲಿ, ಜನಮುಖಿಯಾಗಿರಲಿ ಎಂದು ಹಾರೈಸೋಣ.

ಆಲ್ ದಿ ಬೆಸ್ಟ್ ಬೆಳಗೆರೆ ಅಂಡ್ ಟೀಮ್.

ಕೊನೆ ಕುಟುಕು: ಈ ವಾರದ ಹಾಯ್ ಬೆಂಗಳೂರಿನ ಮೀಡಿಯಾ ಮಸಾಲಾದಲ್ಲಿ ರವಿ ಹೆಗಡೆ ಉದಯವಾಣಿ ಸೇರಿದ್ದನ್ನು, ವಿಶ್ವೇಶ್ವರ ಭಟ್ಟರು ಕನ್ನಡಪ್ರಭ ಸೇರುತ್ತಿರುವುದನ್ನು ಬೆಳಗೆರೆ ಬರೆದಿದ್ದಾರೆ. ಯಾಕೋ ಏನೋ ಸ್ವತಃ ರವಿ ಬೆಳಗೆರೆ ಜನಶ್ರೀ ಸೇರುತ್ತಿರುವುದನ್ನು ಬರೆಯಲು ಮರೆತುಬಿಟ್ಟಿದ್ದಾರೆ.

22 comments:

  1. About chutuku } Adu jaana marevu.anta.belagere yavaru adralli dodda tarabeti maadi, birudu padedidaare !

    ReplyDelete
  2. Ravi Belagere in Janaashree! Perfect choice for them both.! All the best to people of karnataka.!

    ReplyDelete
  3. RB has not proved himself good in visual media. And he is known for pranks and is not a good manager of human resources. I strongly doubt his success in the new venture. As such Reddy Brothers do not carry great fan following, and if the present channel becomes a trumpet of the mining lords, TRP shall crumble. With respect to Hi Bangalore, it would continue in a lackluster manner. Already the tabloid has lost credibility and nothing much can be done to improve it. But RB would continue it to safeguard his writing itch. And also would use it for settling scores.

    Raghupati, Media Advisor

    ReplyDelete
  4. RB has not proved himself good in visual media..
    mR.REGGUPATHI, details please

    ReplyDelete
  5. @ Anonymous. If you consider Crime Story is a great success, I must doubt your exposure to Visual Media. With regard ETV program on old songs, the reference material is provided by NS Sridhara Murthy, and as usual RB adds half-truth Masalas in compering. His appearance on ETV is visually scaring, looks like a bloated pumpkin!

    Raghupati, Media Advisor

    ReplyDelete
  6. @Ragupathi!
    I think look doesnt matter! Its the way how he can host the program is important. I think He might do BEST! What do you Say?
    Mohan

    ReplyDelete
  7. ಮೋಹನ್ ಮಹಾಶಯರಿಗೆ,

    "look doesnt matter! Its the way how he can host the program is important" - ಇದು ಮುದ್ರಣ ಮಾಧ್ಯಮಕ್ಕೆ ಅಥವಾ ರೇಡಿಯೋ ಮಾಧ್ಯಮಕ್ಕೆ ಓಕೆ ಸರ್, ದೃಶ್ಯ ಮಾಧ್ಯಮಕ್ಕೆ ಅಲ್ಲ! ಭೀಕರ ಮುಖ ದರ್ಶನದಿಂದ ವೀಕ್ಷಕರು ಮೂರ್ಚೆ ಹೋದರೆ ಟಿ.ಆರ್.ಪಿ. ಗತಿ ಏನಾಗತ್ತೆ ಅಂತ ಮಾಧ್ಯಮ ಮಿತ್ರರಾದ ನಿಮಗೆ ಚೆನ್ನಾಗಿ ಗೊತ್ತು. ಆರ್.ಬಿ. ಬಗ್ಗೆ ಅಭಿಮಾನವಿರಲಿ, ಆದರೆ ದುರಭಿಮಾನದಿಂದ ವಶೀಲಿ ಮಾಡುವುದು ತರವಲ್ಲ.

    - ರಘುಪತಿ, ಮಾಧ್ಯಮ ಸಲಹೆಗಾರ

    ReplyDelete
  8. sampadakeeya impact
    Janashree announces DATE ...

    ReplyDelete
  9. ರವಿ ಬೆಳಗೆರೆ ದೃಶ್ಯ ಮಾಧ್ಯಮಕ್ಕೆ ಹೊಂದಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾಲ ನಿರ್ಧರಿಸುತ್ತದೆ. ಬೆಳಗೆರೆ ಪರವಾಗಿರುವವರು, ವಿರುದ್ಧವಾಗಿರುವವರು ಸುಮ್ಮನೆ ಜಗಳವಾಡುವುದರಲ್ಲಿ ಅರ್ಥವಿಲ್ಲ

    ReplyDelete
  10. ಸುವರ್ಣದ ರಂಗನಾಥ್‌ಗೆ ಫೈಟ್ ಕೊಡಲು ಸಾಧ್ಯವಿರುವುದು ರವಿ ಬೆಳಗೆರೆಗೆ ಮಾತ್ರ. ಹೀಗಾಗಿ ರವಿ ಜನಶ್ರೀಗೆ ಸೇರಿರುವುದು ಆಸಕ್ತಿ ಮೂಡಿಸಿದೆ. ರವಿ ನನಗೆ ಗೊತ್ತಿರುವ ಹಾಗೆ ಇಂಥ ಸಂದರ್ಭಗಳಲ್ಲಿ ಸೋಲುವವರು ಅಲ್ಲ. ಅವರು ಒಳ್ಳೆಯ ಬರಹಗಾರ ಮಾತ್ರವಲ್ಲ, ಮಾತುಗಾರ ಕೂಡ. ಹೀಗಾಗಿ ಅವರು ಸೋಲೋ ಸಾಧ್ಯತೆಗಳು ಕಡಿಮೆ.

    ReplyDelete
  11. ರವಿ ಬೆಳಗೆರೆ ಏನಾದ್ರು ಮಾಡಿಕೊಳ್ಳಲಿ, ಹಾಯ್ ಬೆಂಗಳೂರು ಮಾತ್ರ ನಿಲ್ಲಿಸುವುದು ಬೇಡ.

    ReplyDelete
  12. "ಅವರು ಸೋಲೋ ಸಾಧ್ಯತೆಗಳು ಕಡಿಮೆ" - ರವಿ ಬೆಳಗೆರೆ ಅವರದು ಏನಿದ್ರೂ Solo ಸಾಧನೆಗಳೇ ಹೊರತು, Team ಸಾಧನೆಗಳಲ್ಲ. ಹೀಗಾಗಿ ಅವರು ತಮ್ಮ ಜತೆಗೆ ಟೀಮ್ ಬಿಲ್ಡ್ ಮಾಡುವ ಸಾಧ್ಯತೆಗಳು ಕಡಿಮೆ. ಹಾಯ್ ಬೆಂಗಳೂರಿನಲ್ಲಿ ಪ್ರತಿಯೊಂದು ಪುಟವನ್ನು ತುಂಬಿಸುವವರು ಅವರೇ. ಬೇರೆಯವರು ಬರೆದದ್ದನ್ನು ಅವರು ಪುನಃ ಬರೆಯುವುದು, ಓದುಗರಾದವರೆಲ್ಲರಿಗೂ ಗೊತ್ತು. ಇಂಥ ಕೆಲಸ ಟೀವಿ ಮಾಧ್ಯಮದಲ್ಲಿ ಸಾಧ್ಯವಿಲ್ಲ. ಎಲ್ಲಾ ಕಾರ್ಯಕ್ರಮಗಳನ್ನು ಅವರು ನಡೆಸಲಾಗದು. ಇನ್ನು ಸುದ್ದಿಯ ವಿಷಯಕ್ಕೆ ಬಂದರೆ, ಹೆಚ್.ಆರ್.ರಂಗನಾಥ ಅವರಿಗಿರುವ ಅನುಭವ ರವಿ ಬೆಳಗೆರೆಗೆ ಖಂಡಿತಾ ಇಲ್ಲ. ಅವರ ಪತ್ರಿಕಾವೃತ್ತಿಯಲ್ಲಿ (ಕಪ್ರ, ಸಂಕ, ಕಸ್ತೂರಿ ಸೇರಿದಂತೆ) ಡೆಸ್ಕ್ ಅನುಭವಷ್ಟೇ ಪಡೆದಿದ್ದರು. ಸುದ್ದಿ ಸಂಗ್ರಹಿಸುವ, ಗ್ರಹಿಸುವ ವಿಶ್ಲೇಷಿಸುವ ಸುದ್ದಿಗಾರನ ಪಾತ್ರ ಅವರೆಂದೂ ವಹಿಸಿಲ್ಲ. ಟ್ಯಾಬ್ಲಾಯ್ಡ್ ಅನುಭವ ಟೀವಿ ಸುದ್ದಿ ಮಾಧ್ಯಮದ ನೆರವಿಗೆ ಬರುವುದಿಲ್ಲ.

    - ಕರುಣಾಕರ್, ಸಿರಾ

    ReplyDelete
  13. ವಿಶ್ವೇಶ್ವರ ಭಟ್ಟರನ್ನು .. ಕರೆದು ಕೊಡು ಹೋಗಿ ಸರ್ .. ನಿಮಗೆ ಯಶಸ್ಶು ಕಟ್ಟಿಟ್ಟ ಬುತ್ತಿ ... ದೃಶ್ಯ ಮಾಧ್ಯಮದಲ್ಲಿ ನೀವು ಮಾಡಿದ ಮೊದಲ ಪ್ರಯತ್ನ ಕ್ರೈಂ ಡೈರಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು ಇದು ಸಹ ನಿಮಗೆ ಅದ್ಭುತ ಯಶಸ್ಸು ತರಲಿ ಎಂದು ಹಾರೈಸುವೆ ..

    ReplyDelete
  14. some body said RB is the best competitor for Ranganath H r of suvarna news. Is it a joke? RB is nowhere in front of Mr Ranganath h r. Ranganath H r is such an efficient, knowledgeble person whose experience and calibre are beyond RB s limits. Of course RB is a fantastic writer (of fantasy) Really, literally, "a Fantastic" I must say! but these skills, do not work in news media..Most of the RB s articles start from one topic, and goes somewhere else, and ends in some other topic! He cannot restrict himself into a fixed frame! He is such a nomadic, it reflects in his speech and writings also.

    ReplyDelete
  15. @Raghupathi
    Lets wait and see the new venture!
    Mohan

    ReplyDelete
  16. I think Hai Bangalore sales has come down.

    ReplyDelete
  17. I have Reliance Big TV dish. Please make arrangements to get channel JANASHREE in Big TV

    ReplyDelete
  18. @ - ಕರುಣಾಕರ್, ಸಿರಾ , You are wrong man. First read Ravi then come to a conclusion..

    ReplyDelete
  19. Ravi Belagere du yenidru "Nammuralli maatra naa jaana" anno style. He cannot handle political issues, economic issues, on his own. he cannot deliver them logically and theoretically,with historical background. Most of his writings are either about somebody s book, or his comment on some book..etc..etc.. like his own Swagatha..galu.!

    ReplyDelete
  20. RB is the best competitor for Ranganath ...He is much more than that. U cant compare Ravi with Ranga.

    ReplyDelete
  21. ರೆಡ್ಡಿಗಳ ಅಕ್ರಮಗಳನೆಲ್ಲ ಸಕ್ರಮ ಮಾಡಲು ರವಿ ಬೆಳಗೆರೆ ಸಾರಥ್ಯದಲ್ಲಿ "ಜನಶ್ರೀ". ನಾಳೆ ಕಟ್ಟಾ ನಾಯ್ಡು "ಕೆಟ್ಟ" ಟಿವಿ ಚಾನೆಲ್ ಶುರು ಮಾಡ್ತಾನಂತೆ. ಹಾಗೆಯೆ ಕಾಮುಕ ನಿತ್ಯಾನಂದ "ರಂಜಿತ" tv ಶುರು ಮಾಡ್ತಾನಂತೆ. ಇವೆಲ್ಲವನ್ನೂ ಬೆಪ್ಪ ಕನ್ನಡಿಗರು ನೋಡಬೇಕಂತೆ. ಏನೀ ಅಸಹ್ಯ?

    ReplyDelete